
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೨೦. ಪ್ರಹ್ಲಾದರಾಜರ ಸ್ತೋತ್ರ
ಪರಮಮಂಗಳಮೂರ್ತಿಯಾದ ಪರಮಾತ್ಮನ ಅಮೃತಮಯಸ್ಪರ್ಶದಿಂದ ಪ್ರಹ್ಲಾದರ ಸಕಲದುರಿತಗಳೂ ಹಾರಿಹೋದವು. ಹರಿಯನುಗ್ರಹದಿಂದ ಕೂಡಲೇ ಪರಮಾತ್ಮನ ಜ್ಞಾನವು ಅಭಿವ್ಯಕ್ತವಾಗಿ ಪರಮಾನಂದತುಂದಿಲರಾದ ಪ್ರಹ್ಲಾದರಾಜರ ಕಣ್ಣುಗಳಿಂದ ಆನಂದಬಾಷ್ಪ ಹರಿಯತೊಡಗಿತು.ಶರೀರವು ರೋಮಾಂಚನ ಪುಳಕಿತವಾಯಿತು. ಆಗ ಪ್ರಹ್ಲಾದರು ಭಕ್ತು ದೇಶದಿಂದ ನೃಸಿಂಹದೇವರ ಪಾದಕಮಲಗಳನ್ನು ಧ್ಯಾನಿಸುತ್ತಾ, ಸ್ವರೂಪಾನಂದವನ್ನು ಅನುಭವಿಸುತ್ತಾ ಪ್ರೇಮ ಗದ್ಗದಕಂಠದಿಂದ ಶ್ರೀಹರಿಯನ್ನು ಏಕಾಗ್ರಚಿತ್ತದಿಂದ ಸ್ತೋತ್ರಮಾಡಲಾರಂಭಿಸಿದರು.75
ಪ್ರಹ್ಲಾದ : ದೇವಾಧಿದೇವ!
ಬ್ರಹ್ಮಾದಯಸ್ಸುರಗಣಾ ಮುನಯೋಥ ಸಿದ್ಧಾಃ ಸಕತಾನ ಮತಯೋ ವಚಸಾಂ ಪ್ರವಾಹೈಃ | ನಾಂತಂ ಪರಸ್ಯ ಪರತೋಗ್ಯಧುನಾಪಿ ಯಾಂತಿ ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ ||
ವಿರಿಂಚ-ಹರಾದ್ಯಮರೋತ್ತಮರೂ, ವಸಿಷ್ಠಾದಿಮಹರ್ಷಿಗಳೂ, ಸಿದ್ಧರೂ, ಶ್ರೀಹರಿಯೊಬ್ಬನೇ ಬಲ-ಜ್ಞಾನ, ಆನಂದಾದ್ಯಭಿವ್ಯಕ್ತಿಯುಳ್ಳವನೇ ಹೊರತು ಮತ್ತೊಬ್ಬರಾರೂ ಅಲ್ಲವೆಂದು ನಿಶ್ಚಿತಮತಿಗಳಾಗಿ ಉತ್ಕೃಷ್ಟ ವೇದವಚನಗಳಿಂದ ವಿಧವಿಧವಾಗಿ ಸ್ತುತಿಸಿದರೂ ಅದ್ಯಾಪಿ ಪ್ರಕೃತ್ಯತೀತನಾದ ಭಗವಂತನ (ನಿನ್ನ) ಮಹಿಮೆಯು ಇಷ್ಟೆಂದು ತಿಳಿಯಲು ಅಸಮರ್ಥರಾಗಿರುವಾಗ, ಉಗ್ರಜಾತಿಯವನಾದ ಅಂದರೆ ಅಸುರಕುಲದಲ್ಲಿ ಜನಿಸಿದ ನಾನು, ಶತ್ರುಸಂಹಾರಕನೂ, ಇಷ್ಟಾರ್ಥದಾಯಕನೂ ಆದ ಶ್ರೀಹರಿಯನ್ನು (ನಿನ್ನನ್ನು ಸ್ತುತಿಸಲು ಶಕ್ತನಾದೇನೇ?
ಮನೇ ಧನಾಭಿಜನರೂಪತಃ ಶ್ರುತೌಜಸ್ತೇಜಃ ಪ್ರಭಾವಬಲಪೌರುಷಬುದ್ಧಿಯೋಗಾಃ |
ನಾರಾಧನಾಯ ಹಿ ಭವಂತಿ ಪರಸ್ಯ ಪುಂ ಭಕ್ತಾ ತುತೋಷ ಭಗವಾನ್ನನು ಯೂಥವಾಯ || ದೇವ! ಸಿರಿಸಂಪತ್ತು, ಸತ್ಕುಲದಲ್ಲಿ ಹುಟ್ಟುವಿಕೆ, ಧಾರಣಶಕ್ತಿ, ಬ್ರಹ್ಮವರ್ಚಸ್ಸು, ಉದಾರವಾದ ಮನಸ್ಸು, ಶಾರೀರಿಕಬಲ, ಸಮರ್ಥವಾಗಲಾರದು! ಸ್ವಾಮಿ, ನೀನು ಭಕ್ತಿಯಿಂದಲೇ ತುಷ್ಟನಾಗುತ್ತೀಯೆ. ಗಜೇಂದ್ರನ ಭಕ್ತಿಯಿಂದಲ್ಲವೇ ನೀನವನಿಗೆ ಪ್ರಸನ್ನನಾಗಿ ಪರಾಕ್ರಮ, ಏಕಾಗ್ರಚಿತ್ತವಿರುವುದು, ಧ್ಯಾನ - ಇವು ಯಾವುದೂ ನಿನ್ನನ್ನು ಒಲಿಸಿಕೊಂಡು ನಿನ್ನ ಅನುಗ್ರಹವನ್ನು ದೊರಕಿಸಿಕೊಡಲು | ಮೋಕ್ಷವನ್ನು ಕರುಣಿಸಿದಿ? ಆದುದರಿಂದ ಶ್ರೀಹರಿಯೇ, ನಿನ್ನನ್ನು ಭಕ್ತಿಯಿಂದ ಒಲಿಸಿಕೊಳ್ಳಬೇಕಲ್ಲದೆ, ಬೇರೆ ಮಾರ್ಗವಿಲ್ಲ ಹಿಂದೆ ಹೇಳಿದಂತೆ ಸಿರಿಸಂಪದಾದಿಗಳೆಲ್ಲವನ್ನೂ ನಿನಗೆ ಭಕ್ತಿಯಿಂದ ಸಮರ್ಪಿಸಿ ನಿನ್ನನ್ನು ಸಂತೋಷಪಡಿಸಬಹುದೆಂದು ನಾನು
ನುಬಿದ್ದೇನೆ.
ಸ್ವಾಮಿ, ಬ್ರಾಹ್ಮಣನು ಸತ್ಯಧರ್ಮಾದಿ ದ್ವಾದಶಗುಣಯುಕ್ತನಾಗಿದ್ದರೂ ಪರಾತ್ಪರನಾದ ನಿನ್ನಲ್ಲಿ ಭಕ್ತಿರಹಿತನಾಗಿದ್ದಲ್ಲಿ ಅಂಥ ಬ್ರಾಹ್ಮಣನಿಗಿಂತಲೂ ತ್ರಿಕರಣಪೂರ್ವಕವಾಗಿ ನಿನ್ನಲ್ಲಿ ಭಕ್ತಿಶ್ರದ್ಧೆಗಳನ್ನಿಟ್ಟಿರುವ ಚಂಡಾಲನೇ ಉತ್ತಮನೆಂದು ನಾ ಭಾವಿಸುವೆನು. ಅಂಥವನು ಅವರ ಕುಲವನ್ನೇ ಪಾವನಗೊಳಿಸುವನು. ಭಕ್ತವತ್ಸಲನಾದ ನೀನು ಭಕ್ತಜನರ ಉದ್ಧಾರಕ್ಕಾಗಿಯೇ ಅವರ ಸೇವೆಯನ್ನು ಸ್ವೀಕರಿಸುವೆಯಲ್ಲದೆ ಅದರಿಂದ ನಿನಗೇನೂ ಆಗಬೇಕಾಗಿಲ್ಲ. ಈಗ ನೀನು ತನ್ನ ಸ್ವಾರ್ಥತೆಯಿಂದ ತ್ರಿಲೋಕೇಶ್ವರನಾದ ನಿನ್ನಲ್ಲಿ ದ್ವೇಷಮಾಡಿ, ಲೋಕಕಂಟಕನಾಗಿದ್ದ ನನ್ನ ತಂದೆಯನ್ನು ಸಂಹರಿಸಿರುವೆ. ಆದ್ದರಿಂದ ದೇವ! ನಿನ್ನ ಕೋಪವನ್ನು ಉಪಸಂಹರಿಸು ಸ್ವಾಮಿ, ದುಷ್ಟಜಂತುಗಳಾದ ಚೇಳು, ಹಾವುಗಳನ್ನು ಕೊಂದರೆ ಆನಂದವಾಗುವಂತೆ ಅಹಿಂಸಾಪ್ರಿಯರಾದರೂ ಸಜ್ಜನರಿಗೆ ಈ ದೈತ್ಯನ ಸಂಹಾರದಿಂದ ಆನಂದವಾಗುವುದು. ಎಲ್ಲ ಸಜ್ಜನರೂ ಹರ್ಷದಿಂದ ತಂತಮ್ಮ ಮನೆಗಳಿಗೆ ಹೋಗಲಿ, ಶ್ರೀನೃಸಿಂಹದೇವ! ನಿನ್ನೀ ರೂಪವನ್ನು ಸಕಲರೂ ಪಾಪಪರಿಹಾರ ಮತ್ತು ಐಶ್ವರ್ಯ ಪ್ರಾಪ್ತಿಗಾಗಿ ಧ್ಯಾನಿಸುವರು.
ನಾಹಂ ಬಿಭೇಮ್ಯಜಿತ ತೇSತಿಭಯಾನಕಸ್ಯ ಜಿಹ್ವಾಗಿನೇತ್ರಭಕುಟೀರಭಸೋಗ್ರದಂಷ್ಟಾತ್ |
ಆಂತಪ್ರಜಃ ಕೃತಜಕೇಸರ ಶಂಕುಕರ್ಣಾತ್ ನಿಹ್ರ್ರಾದಭೀತದಿಗಿಭಾದರಿಭಿನ್ನಖಾಗ್ರಾತ್ || 15 ||
ಹೇ ಅಜಿತ, ನಿನ್ನ ಈ ಭಯಂಕರ ರೂಪವನ್ನು ಕಂಡು ನಾನು ಭೀತನಾಗಿಲ್ಲ. ಸ್ವಾಮಿ! ಕೆಂಡವನ್ನು ಕಾರುವ ಕಣ್ಣುಗಳು, ನಿನ್ನ ಭ್ರುಕುಟಿ, ಉಗ್ರದಂಷ್ಟ್ರಗಳು, ಕೊರಳಲ್ಲಿರುವ ಕರುಳುಮಾಲೆಗಳು, ರಕ್ತದಿಂದ ಕೆಂಪಾಗಿ ನಿಗರಿ ನಿಂತಿರುವ ಕಿವಿಗಳು, ಅಷ್ಟದಿಗ್ಗಜಗಳನ್ನೂ ಹೆದರಿಸಿದ ಹೂಂಕಾರ, ಶತ್ರುವನ್ನು ಸೀಳುವ ಈ ತೀಕ್ಷ್ಯನಖಗಳು, ಇವೆಲ್ಲವನ್ನೂ ನೋಡಿ ನಾನು ಹೆದರಿಲ್ಲ. ಆದರೆ, ದೀನರಕ್ಷಕನಾದ ಪ್ರಭು! ಉಗ್ರವಾದ ಸಂಸಾರವೆಂಬ ಸುಳಿಯಲ್ಲಿ ಸಿಲುಕಿ ಅಲ್ಲಿನ ಕಷ್ಟಗಳೊಡನೆ ಕಾದಾಡಿ, ಹೋರಾಡಿ ನಿರ್ವಿಯ್ರನಾಗಿದ್ದೇನೆ. ನಾವು, ನಮ್ಮ ಕರ್ಮದಿಂದ ಬದ್ಧರಾಗಿ ಜನನ - ಮರಣರೂಪವಾದ ಸಂಸಾರವೆಂಬ ಅನರ್ಥಕ್ಕೆ ಭಾಗಿಗಳಾಗುತ್ತೇವೆ. ಹೇ ಉಶತ್ತಮ! ಈ ಜನನ - ಮರಣಗಳಿಂದ ಹೆದರಿದವರಿಗೆ ಶರಣ್ಯನಾದ ನಿನ್ನ ಪಾದಕಮಲದೆಡೆಗೆ
ನಾನೆಂದು ಬಂದು ಸೇರುವೆನು ?
ದೇವ, ಪ್ರಿಯವಿಯೋಗ ಅಪ್ರಿಯ ಸಂಯೋಗಗಳಿಂದುಂಟಾದ ಶೋಕಾಗ್ನಿಯಿಂದ ಎಲ್ಲ ಯೋನಿಗಳಲ್ಲಿ ಬಳಲುತ್ತ ದುಃಖನಿವಾರಕೋಪಾಯವಾ ದುಃಖರೂಪವೇ ಆದ್ದರಿಂದ ಅದರ ಪರಿಹಾರ ಮಾರ್ಗವರಿಯದೆ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ತಿರುಗುತ್ತಿದ್ದೇನೆ. ಸರ್ವಗುಣಪೂರ್ಣನಾದ ಹೇ ನೃಸಿಂಹದೇವ, ನಿನ್ನ ದಾಸನಾಗುವ ಉಪಾಯವನ್ನು ಅನುಗ್ರಹಿಸಿ ತಿಳಿಸು.
ನೀನು ನಿರ್ವಾಜ್ಯ ಪ್ರೇಮಮಯನೂ, ಅನಿಮಿತ್ತ ಬಂಧುವೂ ಆದ ಸರ್ವೋತ್ತಮ ದೇವನು. ನಿನ್ನ ಅದ್ಭುತ ಅವತಾರ ಲೀಲೆಗಳನ್ನು ಬ್ರಹ್ಮದೇವರು ಗಾನಮಾಡಿ ಸ್ತುತಿಸುತ್ತಿದ್ದಾರೆ. ಅದನ್ನು ನಾನು ಗಾನಮಾಡಿ, ಸಂಸಾರಬಂಧಮುಕ್ತರಾಗಿ ನಿನ್ನ ಪಾದವನ್ನೇ ಆಶ್ರಯಿಸಿಕೊಂಡಿರುವ ಪರಮಹಂಸರ ಸೇವೆಯಿಂದ ನಿನ್ನ ವಿಷಯಕವಾದ ತತ್ವಜ್ಞಾನವನ್ನು ಪಡೆದು ನರಕಾದನರ್ಥಗಳು ಮತ್ತು ಪತ್ನಿಸುತಾದಿ ವಿಷಯಸಂಗರೂಪ ಸಮುದ್ರವನ್ನು ದಾಟುವೆನು.79
ಸ್ವಾಮಿ, ಪುಟ್ಟ ಬಾಲಕರಿಗೆ ಮಾತಾಪಿತೃಗಳು ಸಂರಕ್ಷಕರು, ರೋಗಾರ್ತರಿಗೆ ಔಷಧವು ಹಿತಕರ, ಸಮುದ್ರದಲ್ಲಿ ಮುಳುಗೇಳುವವರಿಗೆ ದೋಣಿಯು ತಾರಕವು. ಬಿಸಿಲಿನ ತಾಪದಿಂದ ಬಳಲಿದವರಿಗೆ ನೀರಿನಿಂದ ತಾಪ ಶಮನವಾಗುವುದು. ಇವೆಲ್ಲ ಪ್ರಪಂಚದಲ್ಲಿ ಅಪೇಕ್ಷಣೀಯವು. ಇದರಂತೆ ಜನನ-ಮರಣರೂಪ ಸಂಸಾರದಿಂದ ತಪ್ತರಾದ ನಿನ್ನ ಉಪಾಸಕರನ್ನು ನೀನು ಭವಬಂಧನದಿಂದ ಬಿಡಿಸಿ ಆನಂದವನ್ನು ಕರುಣಿಸುತ್ತೀಯೆ.8
ಹೀಗೆ ಶ್ರೀನರಸಿಂಹದೇವರನ್ನು ವಿವಿಧ ರೀತಿಯಿಂದ ಸ್ತುತಿಸಿದ ಪ್ರಹ್ಲಾದರಾಜರು ಮುಂದುವರೆದು ಹೀಗೆ ಸ್ತೋತ್ರಮಾಡಹತ್ತಿದರು.
ದೇವ! ಈ ಸಂಸಾರವು ಶಾಶ್ವತವಲ್ಲ, ಕ್ಷಣಿಕವೆಂದು ಅರಿತಿರುವೆನು, ಅನಿತ್ಯವಾದ ದೇಹಯುಕ್ತರಾದ ಜೀವರು ಇಂದ್ರಿಯಭೋಗ, ಬ್ರಹ್ಮಾದಿಪರ್ಯಂತ ಆಯುಷ್ಯ, ಸಂಪತ್ತು, ಧನಕನಕಾದಿಗಳನ್ನು ಅಪೇಕ್ಷಿಬಾರದು. ಕಾಲರೂಪಿಯಾದ ನಿನ್ನಿಂದ ಅವೆಲ್ಲವೂ ನಾಶವಾಗುವುವು. ಅಂತೆಯೇ ನಾನು ಅವನ್ನು ಬಯಸುವುದಿಲ್ಲ. ಸ್ವಾಮಿ, ನಿನ್ನ ಸೇವಕರಾದ ಮುಕ್ತ ಜನರ ಗುಂಪಿಗೆ ನನ್ನನ್ನು ಸೇರಿಸಿ ಕಾಪಾಡು.
ಕ್ವಾಹಂ ರಜಃಪ್ರಭವ ಈಶ ತಮೋSಧಿಕೇಸ್ಮಿನ್ ಜಾತಸ್ಸುರೇತರಕುಲೇ ಕೈ ತವಾನುಕಂಪಾ |
ನ ಬ್ರಹ್ಮಣೋ ನ ತು ಭವಸ್ಯ ನ ವೈ ರಮಾಯಾ ಯನ್ನೇSರ್ಪಿತಃ ಶಿರಸಿ ಪದ್ಮಕರಪ್ರಸಾದಃ || ೨೬ ||
ಪರಮಾತ್ಮ ! ಅಜ್ಞಾನ ಪ್ರಚುರವಾದ ಅಸುರಕುಲದಲ್ಲಿ ಜನಿಸಿದ ನಾನೆಲ್ಲಿ? ಭಕ್ತಾನುಗ್ರಹಕಾರಕವಾದ ನಿನ್ನ ಅನುಕಂಪ (ಅನುಗ್ರಹ)ವೆಲ್ಲಿ? ಇವೆರಡೂ ಪರಸ್ಪರ ವಿರುದ್ಧವಾದವು. ಸತ್ವಪ್ರಧಾನವಾದ ಶ್ರೀಹರಿತತ್ವಜ್ಞಾನಯುಕ್ತರು ನಿನ್ನ ಅನುಗ್ರಹಕ್ಕೆ ಪಾತ್ರರು. ಹೀಗಿದ್ದರೂ ನೀನು ನನ್ನಲ್ಲಿ ಅನುಗ್ರಹ ಮಾಡಿರುವುದು ಆಶ್ಚರ್ಯಕರ! ನಿನ್ನ ಪ್ರಸಾದವೂ ಅನ್ಯಾದೃಶ. ಕಮಲದಂತೆ ಆಹ್ಲಾದಕರವಾದ ನಿನ್ನ ಅಮೃತಹಸ್ತವನ್ನು ನನ್ನ ಶಿರದ ಮೇಲಿಟ್ಟು ರಮಾ-ಬ್ರಹ್ಮ ರುದ್ರಾದಿಗಳಿಗಿಂತ ವೈಶಿಷ್ಟ್ಯಪೂರ್ಣ ವಾತ್ಸಲ್ಯವನ್ನು ನನ್ನಲ್ಲಿ ತೋರಿದ್ದೀಯೆ. ದೇವ, ಅಸುರಕುಲದಲ್ಲಿ ಜನಿಸಿದ್ದರೂ, ನನ್ನ ಭಕ್ತಿಯ ಹಿರಿಮೆ-ಮಹಿಮೆಗಳನ್ನು ತೋರಲು ನಿನ್ನ ಕರಕಮಲವನ್ನು ನನ್ನ ತಲೆಯ ಮೇಲಿರಿಸಿ ಅನುಗ್ರಹಿಸಿದ್ದೀಯೇ.
ಲೋಕದಲ್ಲಿ ಸಾಮಾನ್ಯವಾಗಿ ಇವರು ತಮ್ಮವರು, ಅವರು ಬೇರೆ ಎಂದು ಪ್ರೀತಿ-ದ್ವೇಷಗಳನ್ನು ಮಾಡುವುದು ಕಂಡುಬಂದಿದೆ. ಆದರೆ ನೀನು ಲೋಕವಿಲಕ್ಷಣಮಹಿಮನೂ, ಅನಿಮಿತ್ತ ಬಂಧುವೂ ಆಗಿರುವೆ. ನಿನ್ನ ಪ್ರಸಾದವು ಸೇವಾನುಗುಣವಾಗಿದ್ದು ಮಾಡುವ ಭಕ್ತಿ, ಯೋಗ್ಯತೆಗೆ ತಕ್ಕಂತೆ ನಿನ್ನನ್ನಾರಾಧಿಸಿ ಜನರು ಅದಕ್ಕೆ ತಕ್ಕ ಫಲವನ್ನು ಹೊಂದುವರು. ಲಕ್ಷ್ಮೀದೇವಿಯೂ ತಾನು ಮಾಡುವ ನಿರವಧಿಕ ಭಕ್ತಿಯಿಂದಲೇ ನಿನ್ನ ಅತ್ಯಂತವಾದ ಅಧಿಕವಾದ ಪ್ರಸಾದಕ್ಕೆ ಪಾತ್ರಳಾಗಿದ್ದಾಳೆ. ಶ್ರೀಹರಿ! ನೀನು ಮಾಡಿದ ಸೇವೆಗನುಗುಣವಾಗಿ ಕುಲ-ಜಾತಿಗಳನ್ನು ನೋಡದೆ ಕಲ್ಪವೃಕ್ಷದಂತೆ ಸೇವಿಪರಿಗೆ ಫಲಪ್ರದನಾಗಿದ್ದೀಯೆ.
ಪ್ರಭು ! ಸಂಸಾರಸರ್ಪವಿಷದೂಷಿತ ಗರ್ತದಲ್ಲಿ ಬಿದ್ದು ವಿಷಯಲೋಲುಪರಾದ ದೈತ್ಯಜನರಲ್ಲಿ ಹುಟ್ಟಿ, ಅವರ ಸಂಗದಿಂದ ಅನುಗ್ರಹ ಮಾಡಿದರು. ಷಡ್ಗುಣೈಶ್ಚರ್ಯಸಂಪನ್ನನಾದ ಪ್ರಭುವೇ! ಸೇವಕತನದ ರುಚಿಯನ್ನು ಕಂಡಿರುವ ನಾನು ನಿನ್ನ ಸೇವಕನಾಗಿಯೇ ಇರಬಯಸುತ್ತೇನೆ. ನಿನ್ನನ್ನು ಸೇವಿಸುವುದನ್ನು ಹೇಗೆ ಬಿಡಲಿ? ಖಂಡಿತ ಬಿಡಲಾರೆ.
ಮತಾಣರಕ್ಷಣಮನಂತಪಿತುರ್ವಧಂ ಚ ಮನ್ನೇ ಸ್ವಭ್ರತ್ಯಋಷಿವಾಕ್ಯಮೃತಂ ವಿಧಾತುಂ |
ಖಡ್ಗಂ ಪ್ರಗ್ರಹ ಯದವೋಚದಸದ್ದಿಧಿತ್ತು: ಸ್ವಾಮೀಶ್ವರೋ ಮದದರೋವತು ಕಂ ಹರಾಮಿ || 29 ||
ಹೇ ಅನಂತ! ಶ್ರೀಹರಿಯು ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿದ್ದು ಭಕ್ತರನ್ನು ರಕ್ಷಿಸುತ್ತಾನೆ ಎಂದು ನಾರದ ಮಹರ್ಷಿಗಳು ನನಗೆ ಉಪದೇಶಿಸಿದ್ದರು. ಅದನ್ನು ನಾನು ನನ್ನ ತಂದೆಗೆ ಎತ್ತಿಹೇಳಿ “ತಾತ! ನೀನು ಜಗದೀಶ್ವರನನ್ನು ನಿನಗಿಂತ ಭಿನ್ನನಾದ ಸರ್ವೋತ್ತಮನಾದ ಜಗದೀಶ್ವರನು ಬೇರೊಬ್ಬನಿದ್ದಾನೆ” ಎಂದು ಹೇಳಿದಾಗ ಅವನು ನಾರದರ ಮತ್ತು ನನ್ನ ವಾಕ್ಯವನ್ನು ಅಸತ್ಯಗೊಳಿಸಲು “ಪ್ರಹ್ಲಾದ! ಇಕೋ, ಈ ಖಡ್ಗದಿಂದ ನಿನ್ನ ಶಿರಸ್ಸನ್ನು ಕತ್ತರಿಸುವೆನು. ನೀನು ಹೇಳಿದ ಸರ್ವತ್ರವ್ಯಾಪ್ತನಾದ ಆ ವಿಷ್ಣುವು ಬಂದು ನಿನ್ನನ್ನು ರಕ್ಷಿಸಲಿ” ಎಂದು ಆರ್ಭಟಿಸಿದನು. ಆಗ ನೀನು ನನ್ನ ಪ್ರಾಣರಕ್ಷಣೆ, ನಿನ್ನ ಭಕ್ತರಾದ ವಾಕ್ಯವನ್ನು ಸತ್ಯಮಾಡಲು ಮತ್ತು ಹಿರಣ್ಯಕಶ್ಯಪನ ಸಂಹಾರ ಮಾಡುವ ಉದ್ದೇಶದಿಂದ ಸ್ತಂಭದಿಂದ ಹೊರಬಂದು ನಾರ- ಮಹರ್ಷಿಗಳ, ನನ್ನ ವಚನಗಳನ್ನು ಸತ್ಯಮಾಡಿ, ದುಷ್ಟನಾದ ಹಿರಣ್ಯಕಶ್ಯಪುವನ್ನು ಸಂಹರಿಸಿ ನನ್ನನ್ನು ಸಂರಕ್ಷಣೆ ಮಾಡಿದ್ದೀಯೇ.
ಕೋನ್ನತ್ರ ತೇSಖಿಲಗುರೋ ಭಗವನ್ ಪ್ರಯಾಸ ಉತ್ತಾರಣೇಸ್ಯ ಭವಸಂಭವಲೋಪಹೇತೋಃ |
ಮೂಡೇಷು ವೈ ಮಹದನುಗ್ರಹ ಆರ್ತಬಂಧೋ ಕಿಂ ತೇನ ತೇ ಪ್ರಿಯಜನಾನನುಸೇವಮಾನಃ || ೪೨ ||
ಹೇ ಅಖಿಲಲೋಕಗುರುವಾದ ಶ್ರೀಪತಿ! ಸೃಷ್ಟಿಸ್ಥಿತ್ಯಾದಿ ಕಾರ್ಯಕರಣ ಸಮರ್ಥನಾದ ನಿನಗೆ ಈ ಸಂಸಾರವೆಂಬ ವೈತರಣಿಯಿಂದ ನನ್ನನ್ನು ಪಾರುಮಾಡಲು ಸ್ವಲ್ಪವೂ ಶ್ರಮವಿಲ್ಲ. ಆಪ್ತಕಾಮನಾದ ನಿನಗೆ ಭಕ್ತರನ್ನು ಕಾಪಾಡುವುದು ಸ್ವಭಾವವಾಗಿದೆ. ತಿರ್ಯಗೋನಿಯಲ್ಲಿ ಜನಿಸಿದ ಗಜೇಂದ್ರನಂತೆ, ಅಸುರಕುಲದಲ್ಲಿ ಜನಿಸಿದ ನಮ್ಮಲ್ಲಿ ನೀನು ಅನುಗ್ರಹ ಮಾಡಬೇಕು. ಆರ್ತ ಪ್ರಾಣರಕ್ಷಣಪಾರಾಯಣ! ಭಕ್ತವತ್ಸಲ, ನನ್ನನ್ನು ಈ ಭವಬಂಧನದಿಂದ ರಕ್ಷಿಸು. ಆಪ್ತಕಾಮನಾದ ನಿನಗೆ ಅದರಿಂದಾಗ ಪ್ರಯೋಜನವಿಲ್ಲವಾದರೂ, ಅದು ನನ್ನಲ್ಲಿ ಮಹದನುಗ್ರಹವೇ ಆಗುವುದು.
ನೈವೋದ್ವಿಜೇ ಭವದುರತ್ಯಯವೈತರಣ್ಯಾತೀರ್ಥಗಾಯನಮಹಾಮೃತಮತಚಿತ್ತ |
ಶೋಚೇ ನು ತೇ ವಿಮುಖಚೇತಸ ಇಂದ್ರಿಯಾರ್ಥಮಾಯಾಸುಖಾಯ ಭರಮುದ್ದಹತೋ ವಿಮೂಢಾನ್8 || ೪೩ || ಸ್ವಾಮಿ, ನೀನು ಸರ್ವೋತ್ತಮ, ಸರ್ವತಂತ್ರಸ್ವತಂತ್ರ, ವೇದೈಕವೇದ್ಯ, ಜೀವರು ನಿನ್ನ ಪ್ರತಿಬಿಂಬರು, ಅಧೀನರು, ಭಕ್ತಿಯಿಂದ ಪ್ರಸನ್ನನಾಗಿ ನೀನು ಅವರವರ ತಾರತಮೋಪೇತ ಸಾಧನೆಗೆ ತಕ್ಕಂತೆ ಮೋಕ್ಷವನ್ನು ದಯಪಾಲಿಸುವಿ ಎಂದು ಹೇಳುವ ವೈದಿಕ ವೈಷ್ಣವ ದೈತಸಿದ್ಧಾಂತವನ್ನು ಪ್ರತಿಪಾದಿಸುವ ವೇದಾಂತಶಾಸ್ತ್ರವನ್ನು ಶ್ರವಣ-ಮನನ ಮಾಡಿ, ಗಾಯನದಿಂದ ಆ ಮಹಾತಾಮೃತಪಾನ ಮಾಡಿ, ಆನಂದತುಂದಿಲನಾದ ನನಗೆ ಈ ಸಂಸಾರವೆಂಬ ವೈತರಣಿಯ ಭಯವಿಲ್ಲ! ಆದರೆ, ಪ್ರಭು! ಶಾಸ್ತ್ರಶ್ರವಣವಿಲ್ಲದಲೇ ನಿನಗೆ ವಿಮುಖರಾಗಿ ಇಂದ್ರಿಯವಿಷಯಸಂಗದಿಂದ ಬರುವ ನಶ್ವರವಾದ ಐಹಿಕ ಸುಖೋಪಭೋಗಗಳಿಗಾಗಿ ಕುಟುಂಬಭರಣ ಮಾಡುತ್ತಿರುವ ಅಜ್ಜಜನರು ಈ ಸಂಸಾರಚಕ್ರದಿಂದ ಪಾರಾಗುವುದೆಂತೆಂದು ನಾನು ಚಿಂತಿಸುತ್ತಿದ್ದೇನೆ.
ಪ್ರಾಯೋಣ ದೇವಮುನಯೋ ಸ್ವವಿಮುಕ್ತಿಕಾಮಾ ಮೌನಂ ಚರಂತಿ ವಿಜನೇ ನ ಪರಾರ್ಥನಿಷ್ಠಾಃ |
ನೈತಾನ್ವಹಾಯ ಕೃಷಣಾನ್ ಎಮುಮುಕ್ಷ ಏಕೋ ನಾನಂ ತ್ವದಸ್ಯ ಶರಣಂ ಭ್ರಮತೋನು || ೪೪ ||
ಸ್ವಾಮಿ, ತಾತ್ವಿಕ ದೇವತೆಗಳು ಮತ್ತು ಋಷಿಗಳು ಸ್ವಾಶ್ರಿತರಾದ ಪರರಿಗೆ ಮೋಕ್ಷವಾಗಬೇಕೆಂದು ಏಕಾಂತದಲ್ಲಿ ಕಾಷ್ಠಮೌನವ್ರತವನ್ನು ಆಚರಿಸುವರು. ಅವರ ಸಹಾಯದಿಂದಲೇ ನಾನು ಕೃಪಣರಾದ ಅಜ್ಞಜನರಿಗೆ ಮೋಕ್ಷವನ್ನು ಅಪೇಕ್ಷಿಸುವೆನಾದ್ದರಿಂದ ಆ ತತ್ವಾಭಿಮಾನಿ ದೇವತೆಗಳ ವಿಶೇಷಾನುಗ್ರಹವನ್ನು ಸಂಪಾದಿಸಬಯಸುತ್ತೇನೆ, ಅದಕ್ಕೆ ನಿನ್ನ ಹೊರತು ಬೇರಾರು ನನಗೆ ಗತಿಯಿಲ್ಲ, ಆದ್ದರಿಂದ ಅನುಗ್ರಹಿಸು ದೇವ! ದೇವತೆಗಳು ತಮ್ಮನ್ನು ಆಶ್ರಯಿಸಿದವರಲ್ಲಿದಯೆಮಾಡುವಂತೆ ನಾನೂ ಸಹ ನನ್ನನ್ನು ಆಶ್ರಯಿಸಿರುವ ದೈತ್ಯಬಾಲಕರಲ್ಲಿ ಕಾರುಣ್ಯವುಳ್ಳವನಾಗಿದ್ದೇನೆ. ಅವರನ್ನು ಬಿಟ್ಟು ನಾನೊಬ್ಬನೇ ಮೋಕ್ಷವನ್ನು ಬಯಸುವುದಿಲ್ಲ! “ನನ್ನ ಪ್ರಸಾದದಿಂದ ನಿನಗೆ ಮೋಕ್ಷವಾಗಲಿ, ಉಳಿದ ದೈತ್ಯಬಾಲಕರು ತಮತಮಗೆ ಯೋಗ್ಯವಾದ ಮಾರ್ಗದಿಂದ ಮುಕ್ತರಾಗಲಿ” ಎಂದು ನೀನು ಆಜ್ಞಾಪಿಸಬಹುದು. ಆದರೆ ಪ್ರಭು! ಅವರಿಗೆ ನಿನ್ನ ಹೊರತು ಬೇರಾರೂ ಗತಿಯಿಲ್ಲ. ಆದುದರಿಂದ ಅವರಿಗೆ ನೀನೇ ಮೋಕ್ಷಮಾರ್ಗವನ್ನು ತೋರಿಸಬೇಕು.
ತ್ವಂ ವಾಯುರಗಿರವನಿರ್ವಿಯದಂದುಮಾತ್ರಾಃ ಪ್ರಾಣೇಂದ್ರಿಯಾಣಿ ಹೃದಯಂ ಚಿದನುಗ್ರಹಶ್ಚ |
ಸರ್ವಂ ತ್ವಮೇವ ಸಗುಣೋ ವಿಗುಣಶ್ಚ ಭೂಮನ್ ನಾನತ್ ತ್ವದಸ್ಯಪಿ ಮನೋವಚಸಾ ನಿರುಕ್ತಮ್7 || ೪೮ ||
ಶ್ರೀಹರಿಯೇ! ವಾಯು, ಅಗ್ನಿ, ಪೃಥ್ವಿ, ಆಕಾಶ, ಜಲಾದಿ ಪಂಚಮಹಾಭೂತಗಳು, ಮಾತ್ರಾಗಳು, ಪಂಚಜ್ಞಾನೇಂದ್ರಿಯಗಳು, ಹೃದಯ, ಸಾತ್ವಿಕ ಸಂಸಾರಿ ಮುಕ್ತಜೀವರು, ಶೌಕ್ಲಾದಿಗುಣವಿಶಿಷ್ಟ ವಸ್ತುಗಳು, ಉತ್ಪನ್ನಾನಂತರ ರಕ್ಷಣಾವನ್ನ ನಿರ್ಗುಣವಸ್ತು, ಮನೋವಾಗ್ಗೋಚರ ಪ್ರಕೃತಿ ಮುಂತಾದ ಸರ್ವವಸ್ತುವೂ ನೀನೇ ಆಗಿದ್ದೀಯೇ, ನಿನ್ನ ವಿನಃ ಅವಕ್ಕೆ ಪ್ರವೃತ್ತಿ ಮುಂತಾದ ಸತ್ತೆಗಳು ಕೂಡುವುದಿಲ್ಲವಾದ್ದರಿಂದ ಅವೆಲ್ಲವೂ ನಿನ್ನ ಅಧೀನವಾಗಿವೆ. ಎಲೈ, ಭೂಮನ್ ಸರ್ವಗುಣಪರಿಪೂರ್ಣ, ನೀನು ಪ್ರಕೃತ್ಯಾದಿ ಪ್ರಪಂಚದಿಂದ ಅತ್ಯಂತ ಭಿನ್ನನಾಗಿದ್ದು ಅದರ ಅಂತರ್ಯಾಮಿಯಾಗಿದ್ದೀಯೇ.
ದೇವ! ಸತ್ವ ರಜಸ್ತಮೋಗುಣಾಭಿಮಾನಿ ದೇವತೆಗಳು, ಮಹತ್ವಾಭಿಮಾನಿಗಳಾದ ಬ್ರಹ್ಮಾದಿ ದೇವತೆಗಳು, ಮನಸ್ತತ್ವಾಭಿಮಾನಿಗಳಾದ ರುದ್ರಚಂದ್ರಾದಿದೇವತೆಗಳು, ತಪ್ಪೇಶವ್ಯತಿರಿಕ್ತದೇವತೆಗಳು, ಮನುಷೋತ್ತಮರು, ಋಷಿಗಳು - ಇವರೆಲ್ಲರೂ ಉತ್ಪತ್ತಿ ಮತ್ತು ವಿನಾಶಗಳುಳ್ಳ ದೇಹವುಳ್ಳವರಾಗಿದ್ದಾರೆ. ಶ್ರೇಷ್ಠಜ್ಞಾನಿಗಳೂ ಸಹ ಯಕ್ಕಾದಿಗಳಿಂದ ನಿನ್ನನ್ನು ಸಾಕಲೇನ ತಿಳಿಯಲಾರರು. ನಿನ್ನ ಮಹಿಮೆಯನ್ನು ವೇದಗಳ ಸಮೂಹದಿಂದಲೇ ಗುರೂಪದೇಶದ್ವಾರಾ, ಶ್ರವಣಮನನಾದಿಗಳಿಂದ ತಿಳಿದು ನಿನ್ನನ್ನು ಸಾಕ್ಷಾತ್ಕರಿಸಿಕೊಂಡು ಮುಕ್ತರಾಗುವರು.
ತತ್ವಮನೋದರ್ಶನೇದ್ರಗಪಿಸ್ತುತ್ ಚ ವಾಕ್ಯರ್ಮಣಿ ಹಪಿ ಕರೌ ಶ್ರವಣಂ ಕಥಾಯಾಮ್ |
ಸಂಸೇವೆಯಾ ತ್ವಯಿ ವಿನೇತಿ ಷಡಂಗಯಾ ಕಿಂ ಭಕ್ತಿಂ ಜನಃ ಪರಮಹಂಸಗತ್ ಲಭೇತ್89 || ೫೦ ||
ದೇವದೇವ! ಯೋಗಿಗಳು ನಿನ್ನನ್ನು ಷಡಂಗಸೇವೆಯಿಂದ ಒಲಿಸಿಕೊಂಡು ನಿನ್ನ ಅತ್ಯರ್ಥಪ್ರಸಾದವನ್ನು ಪಡೆಯಬೇಕೇ ಕಣ್ಣುಗಳು ನಿನ್ನ ಮಂಗಳಕರಮೂರ್ತಿ ದರ್ಶನರತವಾಗಬೇಕು. ನಾಲಿಗೆಯು ನಿನ್ನ ಗುಣ ಮತ್ತು ಮಹಿಮಾದಿಗಳನ್ನು ಸ್ತುತಿಸುತ್ತಿರಬೇಕು. ವಿನಃ ಬೇರೆ ಮಾರ್ಗವಿಲ್ಲ. ಷಡಂಗಗಳಿಂದ ಸೇವಿಸುವುದೆಂದರೆ - ಪ್ರಭು ! ಸರ್ವದಾ ಮನಸ್ಸು ನಿನ್ನ ರೂಪವನ್ನು ಚಿಂತಿಸುತ್ತಿರಬೇಕು. ಕರಗಳು ನಿನ್ನ ಕೈಂಕರ್ಯ ಮಾಡಬೇಕು. ಚರಣಗಳು ನಿನ್ನ ಪಾವನವಾದ ಕ್ಷೇತ್ರಯಾತ್ರೆ ಮಾಡಬೇಕು. ಕರ್ಣಗಳು ನಿನ್ನ ಅಮರಚರಿತ್ರೆ | ಲೀಲಾವಿಲಾಸಕಥೆಗಳನ್ನು ಆಲಿಸುತ್ತಿರಬೇಕು, ಹೀಗೆ ಯೋಗಿಗಳು ಷಡಂಗಯುಕ್ತವಾದ ನಿನ್ನ ಸೇವೆಯಿಂದ ಪರಮಹಂಸ ಪ್ರಾಪ್ಯನಾದ ನಿನ್ನಲ್ಲಿ ಭಕ್ತಿಮಾಡಿ ಒಲಿಸಿಕೊಂಡು ನಿನ್ನ ಅತ್ಯರ್ಥಪ್ರಸಾದವನ್ನು ಪಡೆಯುವರು. ಹಾಗಿಲ್ಲದೆ ನಿನ್ನ ಅತ್ಯರ್ಥಪ್ರಸಾದಕ್ಕೆ ಬೇರೆ ಮಾರ್ಗವಿಲ್ಲ.
ಹೀಗೆ ಪ್ರಹ್ಲಾದರಾಜನು ತನ್ನ ಯೋಗ್ಯತಾನುಸಾರವಾಗಿ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಶ್ರೀನರಸಿಂಹದೇವರನ್ನು ಸ್ತೋತ್ರಮಾಡಿರು ಮತ್ತು ಪರಮಾತ್ಮನ ಚರಣಕಮಲಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದನು.
ಇಂತು ಪ್ರಹ್ಲಾದರಾಜನು ಸ್ತೋತ್ರಮಾಡಲು ನಿರ್ಗುಣನಾದ (ಅಂದರೆ ಪ್ರಾಕೃತ ಸತ್ವಾದಿಗುಣಹೀನನಾದ) ಶ್ರೀನೃಸಿಂಹದೇವು ಬಾಲಭಕ್ತನ ಸ್ತುತಿಯಿಂದ ಸುಪ್ರಸನ್ನನಾಗಿ ಕೋಪವನ್ನು ತ್ಯಜಿಸಿ ಶಾಂತನಾದನು.