
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೧೯. ಬ್ರಹ್ಮಾದಿದೇವತೆಗಳ ಸ್ತೋತ್ರ
ಅಪ್ಸರಸ್ತ್ರೀಯರು-ಚಾರಣ-ಯಕ್ಷ-ಕಿಂಪುರುಷ-ವೇತಾಳ-ಕಿನ್ನರರು ಹಾಗೂ ವಿಷ್ಣುಪಾರ್ಶದರಾದ ಸುನಂದ ಕುಮುದಾದಿಗಳು ಆಗ ಬ್ರಹ್ಮ-ರುದ್ರೇಂದ್ರಾದಿದೇವತೆಗಳು ಋಷಿ-ಪಿತೃ-ಸಿದ್ಧ-ವಿದ್ಯಾಧರ-ಮಹೋರಗ-ಮನು-ಪ್ರಜಾಪತಿ-ಗಂಧರ್ವ-
ಶ್ರೀನರಹರಿಯನ್ನು ಬೇರೆ ಬೇರೆಯಾಗಿ ಸ್ತೋತ್ರಮಾಡಹತ್ತಿದರು.
ಬ್ರಹ್ಮದೇವರು : ನತೋಸ್ಟನಂತಾಯ ದುರಂತಶಕ್ತಯೇ | ವಿಚಿತ್ರವೀರ್ಯಾಯ ಪವಿತ್ರಕರ್ಮಣೇ 1 ವಿಶ್ವಸ್ಮ ಸರ್ಗಸ್ಥಿತಿ ಸಂಯಮಾನುಣ್ಣೆಃ | ಸಲೀಲಯಾ ಸಂದಧತೇಽವ್ಯಯಾತ್ಮನೇ ||
ಶ್ರೀನರಸಿಂಹದೇವ, ನೀನು ದುರಂತಜ್ಞಾನಬಲಾದಿ ಶಕ್ತಿಯುಳ್ಳವನು, ವಿಚಿತ್ರವೀರ್ಯನು, ಸುಜನವೃಂದವನ್ನು ಪಾವನಗೊಳಿಸುವವನು. ಆಯಾಸವಿಲ್ಲದೆ ಜಗತ್ತಿಗೆ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ತಂದುಕೊಡುವವನು. ನಿತ್ಯವಾದ ಜ್ಞಾನಾನು ಶರೀರನಾಗಿರುವೆ. ನಿನಗೆ ನಾನು ಸದಾ ಪ್ರಣತನಾಗಿದ್ದೇನೆ.
ರುದ್ರದೇವರು : ಕೋಪಕಾಲೋ ಯುಗಾಂತಸೇ | ಹತೋಯ ಸುರೋಲ್ಪಕಃ | ತತ್ಸುತಂ ಪಾಕ್ಕುವತಂ | ಭಕ್ತಂ ತೇ ಭಕ್ತವತ್ಸಲಪ್ರಭು! ಸಹಸ್ರಯುಗಾಂತಕಾಲದ ಪ್ರಳಯಕಾಲದಲ್ಲಿ ನೀನಿಂತು ಕೋಪಗೊಳ್ಳುವುದು ಯುಕ್ತವಾಗಿದೆ. ಅಲ್ಪನೂ, ಕ್ಷುದ್ರನೂ ಆದ ದೈತ್ಯನನ್ನು ವಧಿಸಲು ಇಷ್ಟು ಕೋಪವು ತರವೇ ಪರಾತ್ಪರ? ಈಗ ಆ ದೈತ್ಯನೂ ನಿನ್ನಿಂದ ಮೃತನಾಗಿದ್ದಾನೆ. ಭಕ್ತವತ್ತರಿ, ನಿನ್ನ ಈ ಕೋಪವನ್ನು ಉಪಶಮಿಸಿ ನಿನಗೆ ಶರಣಾಗತನಾಗಿರುವ ಏಕಾಂತಭಕ್ತನಾದ ಪ್ರಹ್ಲಾದನನ್ನು ಕಾಪಾಡು.
ಅನಂತರ ಇಂದ್ರಾದಿದೇವತೆಗಳೆಲ್ಲರೂ ಶ್ರೀನರಹರಿಯನ್ನು ವಿವಿಧ ರೀತಿಯಿಂದ ಸ್ತೋತ್ರ ಮಾಡಿದರು. ಆದರೂ ಜಗದೀ ಕೋಪವು ಇಳಿಯಲಿಲ್ಲ. ಆಗ ದೇವತೆಗಳು ಭಗವಂತನ ಕೋಪ ಶಮನ ಮಾಡುವಂತೆ ಶ್ರೀಲಕ್ಷ್ಮೀದೇವಿಯನ್ನು ಪ್ರಾರ್ಥಿಸಿದರು.
ರಮಾದೇವಿಯು ಹರಿ ನೂತನ ರೂಪವನ್ನು ಕಂಡು ಹೆದರಿದವಳಂತೆ ನಟಿಸಿದಳು. ಸರ್ವಜ್ಞಳಾದ ಆ ಲೋಕಮಾತೆಯು ಭಗವಂತನ ಕೋಪ ಶಮನ ಮಾಡಿದ ಕೀರ್ತಿಯು ಪ್ರಹ್ಲಾದನಿಗೆ ಬರಬೇಕೆಂದು ಬಯಸಿ ಸುಮ್ಮನೇ ನಿಂತಳು.
ಆಗ ಬ್ರಹ್ಮದೇವರು ಪ್ರಹ್ಲಾದನನ್ನು ಕರೆದು “ವತ್ಸ! ನಿನ್ನ ತಂದೆಯ ಸಂಹಾರಕ್ಕಾಗಿ ತಳೆದ ಕೋಪ-ಉಗ್ರಸ್ವರೂಪವನ್ನು ಶಾಂತಗೊಳಿಸಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸು” ಎಂದಾಜ್ಞಾಪಿಸಿದರು. ಭಗವಂತನ ಭಕ್ತವಾತ್ಸಲ್ಯ ಜಗತ್ತಿಗೆ ಪ್ರಕಟವಾಗಬೇಕೆಂಬುದೇ ಶ್ರೀಹರಿ-ಲಕ್ಷ್ಮೀದೇವಿಯ ಇಚ್ಛೆಯೆಂದರಿತಿದ್ದ ಬ್ರಹ್ಮದೇವರು ಭಾಗವತಾಗ್ರಣಿ ಪ್ರಹ್ಲಾದರನ್ನು ಮುಂದೆ ಮಾಡಿದರು. ಬ್ರಹ್ಮದೇವರ ಅಪ್ಪಣೆಯಂತೆ ಪ್ರಹ್ಲಾದರು ಮೆಲ್ಲನೆ ಶ್ರೀನರಹರಿಯ ಬಳಿಗೆ ಬಂದು ಶ್ರೀಹರಿಗೆ ದಂಡಪ್ರಣಾಮ ಮಾಡಿದರು.
ಶ್ರೀನೃಸಿಂಹದೇವರು ತಮ್ಮ ಪಾದಕಮಲದಡಿಯಲ್ಲಿ ಭಕೃತಿಶಯದಿಂದ ನಮಸ್ಕರಿಸಿ ಬಿದ್ದಿರುವ ಪ್ರಹ್ಲಾದನನ್ನು ಕಾರುಣ್ಯದಿಂದ ಮೇಲೆಬ್ಬಿಸಿ ತೊಡೆಯ ಮೇಲೆ ಕೂಡಿಸಿಕೊಂಡು ಪ್ರೇಮದಿಂದ ಅವನ ಮೇಲೆ ಕೈಯಾಡಿಸಿ ತಾಯಿಯಂತೆ ಆಲಂಗಿಸಿ ಶಿರಸ್ಸನ್ನಾಘ್ರಾಣಿಸಿ, ನಂತರ ಅವನ ಶಿರದಲ್ಲಿ ಅಭಯಪ್ರದ ಅಮೃತಕರವನ್ನಿರಿಸಿದರು.