The Coronation of King Prahlada

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೨೨. ಶ್ರೀಪ್ರಹ್ಲಾದರಾಜರ ಪಟ್ಟಾಭಿಷೇಕ

ದೇವತೆಗಳ ಗುರುಗಳಾದ ಬೃಹಸ್ಪತ್ಯಾಚಾರ್ಯರು ನಿಷ್ಕರ್ಷಿಸಿದ ಉತ್ತಮ ಮುಹೂರ್ತದಲ್ಲಿ ದೈತ್ಯಸಾಮ್ರಾಜ್ಯದಲ್ಲಿ ಪ್ರಹ್ಲಾದರಾಜರಿಗೆ ಶ್ರೀಬ್ರಹ್ಮದೇವರ ಆಜ್ಞಾನುಸಾರವಾಗಿ ಪಟ್ಟಾಭಿಷೇಕವನ್ನು ನೆರವೇರಿಸಲು ನಿಶ್ಚಯಿಸಲಾಯಿತು. ಈ ಸಂತೋಷ ಸಮಾಚಾರವನ್ನಾಲಿಸಿ ದೇಶದೇಶಗಳಿಂದ ಋಷಿ-ಮುನಿಗಳು, ಪ್ರಜರು, ಧರ್ಮಶೀಲರು, ಭಗವದ್ಭಕ್ತರುಗಳು ರಾಜಧಾನಿಗೆ ಬಂದು ಸೇರಹತ್ತಿದರು. ದೈತ್ಯರಾಜನ ಸಂಹಾರಕಾಲದಲ್ಲಿ ಬಂದಿದ್ದ ಶಚೀಪುರಂದರಾದಿ ಸಕಲದೇವತೆಗಳೂ, ಗಂಧರ್ವರೂ, ಅಪ್ಪರರು, ಯಕ್ಷ, ಕಿನ್ನರ, ಕಿಂಪುರುಷರು, ರಾಕ್ಷಸರು, ದಾನವರು ಎಲ್ಲರೂ ಪ್ರಹ್ಲಾದರಾಜರ ಪಟ್ಟಾಭಿಷೇಕವನ್ನು ನಿರೀಕ್ಷಿಸಲು ಕಾತರರಾದರು. ದೈತ್ಯ ರಾಜಧಾನಿಯಲ್ಲಿ ಸಂಭ್ರಮ ಹೇಳತೀರದು. ರಾಜಧಾನಿಯನ್ನು ಸುಂದರವಾಗಿ ತಳಿರುತೋರಣ, ಧ್ವಜಪತಾಕೆ, ರಂಭಾಸ್ತಂಭಾದಿಗಳಿಂದ ಅಲಂಕರಿಸಲಾಗಿದೆ. ಅರಮನೆಯಲ್ಲಿನ ವೈಭವವಂತೂ ಅವರ್ಣನೀಯ.

ಮಂಗಳವಾದ್ಯ, ವೇದಘೋಷಗಳಾಗುತ್ತಿರಲು, ಗಂಧರ್ವರು ಗಾನಮಾಡುತ್ತಿರಲು, ಅಪ್ಸರಸ್ತ್ರೀಯರು ಸುಂದರವಾಗಿ

ಹಾವಭಾವವಿಲಾಸಗಳಿಂದ ಶ್ರೀಹರಿಯ ನಾನಾ ಅವತಾರ ಲೀಲೆಗಳನ್ನು ನಿರೂಪಿಸುತ್ತಾ ನರ್ತಿಸಹತ್ತಿದರು.

ಆಗ ಸರ್ವಾಲಂಕಾರಭೂಷಿತರಾದ ಪ್ರಹ್ಲಾದರಾಜರು ಸಹ್ಲಾದ, ಅನುಹ್ಲಾದ, ಫ್ಲಾದರೆಂಬ ಪ್ರಿಯ ಸಹೋದರರೊಡನೆ | ಶ್ರೀಹರಿಯ ವಿಶೇಷ ಸನ್ನಿಧಾನ, ಅನುಗ್ರಹಗಳಿಗೆ ಪಾತ್ರರಾದ ಶ್ರೀವಾಣೀ ಕಮಲಾಸನರು, ಶ್ರೀಭಾರತೀ ಪವಮಾನರೂ, ಶ್ರೀಸೌಪರ್ಣಿ | ಗರುಡದೇವರು, ಶ್ರೀವಾರುಣೀ ಶೇಷದೇವರು, ಶ್ರೀಉಮಾಮಹೇಶ್ವರರು, ಶ್ರೀಶಚೀ ಪುರಂದರಾದಿ ದೇವತೆಗಳಿಗೆ ವಿಧಿಪೂರ್ವಕವಾಗಿ ಪೂಜೆ ಮಾಡಿ, ಸ್ತುತಿಸಿ, ಅವರಿಂದ ಆಶೀರ್ವಾದ ಪಡೆದರು.

ಅನಂತರ ಸುಮುಹೂರ್ತದಲ್ಲಿ ಮಂಗಳವಾದ್ಯ, ವೇದಘೋಷಗಳಾಗುತ್ತಿರಲು, ಸಕಲದೇವತೆಗಳು, ಋಷಿಮುನಿಗಳು, ಮುಂದೆ ಮಾಡಿಕೊಂಡು ಸ್ವಹಸ್ತದಿಂದ ಶ್ರೀಪ್ರಹ್ಲಾದರಾಜರನ್ನು ಸಿಂಹಾಸನದಲ್ಲಿ ಮಂಡಿಸಿ ರತ್ನಖಚಿತ ಕಿರೀಟವನ್ನು ಪ್ರಹ್ಲಾದರ | ದೈತ್ಯದಾನವರೇ ಮೊದಲಾದ ಸರ್ವರ ಸಮಕ್ಷಮವಾಗಿ ಶ್ರೀಬ್ರಹ್ಮದೇವರು ಬೃಹಸ್ಪತ್ಯಾಚಾರ್ಯ, ದೈತ್ಯಗುರು ಶುಕ್ರಾಚಾರ್ಯರನ್ನು ತಲೆಯ ಮೇಲಿರಿಸಿ, ರತ್ನಖಚಿತ ಖಡ್ಗವನ್ನು ಕೊಟ್ಟು, ಸಕಲತೀರ್ಥಗಳಿಂದ ಬಂದಿದ್ದ ಪವಿತ್ರಜಲಗಳಿಂದ ಪ್ರೋಕ್ಷಣ ಮಾಡಿ | ಅನರ್ಘನವರತ್ನಗಳಿಂದ ಪ್ರಹ್ಲಾದರಾಜರಿಗೆ ಅಭಿಷೇಕಮಾಡಿ ವಿಜೃಂಭಣೆಯಿಂದ ದೈತ್ಯದಾನವರ ಸಾರ್ವಭೌಮನೆಂದು | ಸಾಮ್ರಾಜ್ಯಾಭಿಷೇಕವನ್ನು ನೆರವೇರಿಸಿ ಆಶೀರ್ವದಿಸಿದರು.105 ಸುಮಂಗಲೆಯರು ಕದಲಾರತಿ, ಮುತ್ತಿನಾರತಿ, ರತ್ನದಾರು, ದೀಪಾರತಿಗಳನ್ನೆತ್ತಿದರು. ಆಗ ಶ್ರೀಹರಿ ಭಕ್ತಾಗ್ರಣಿಗಳಾದ ಪ್ರಹ್ಲಾದರಾಜರ ಪಟ್ಟಾಭಿಷೇಕದಿಂದ ಹರ್ಷನಿರ್ಭರವಾರ ದೇವದುಂದುಭಿಗಳು ಮೊಳಗಿದವು. ದೇವತೆಗಳು ಪುಷ್ಪವೃಷ್ಟಿ ಮಾಡಿದರು. ನೆರದ ಸಜ್ಜನರು “ಜಯ ಜಯ ಪ್ರಹ್ಲಾದರಾಜ, ದೈತ್ಯಕುಲಸಾರ್ವಭೌಮ, ಶ್ರೀಹರಿಭಕ್ತಾಗ್ರೇಸರ, ಸದ್ಧರ್ಮಸಂಸ್ಥಾಪನಾಚಾರ್ಯ, ಜಯ ಜಯ” ಎಂದು ಗಗನವೇ ಭೇದಿಸುವಂತೆ

ಹರ್ಷಧ್ವನಿ ಮಾಡಿದರು.

ಆಗ ದೇವತೆಗಳು, ದೈತ್ಯರು ಮೊದಲಾಗಿ ಸರ್ವರೂ ಪ್ರಹ್ಲಾದರಾಜರಿಗೆ ಅಪೂರ್ವ ಉಡುಗೊರೆಗಳನ್ನರ್ಪಿಸಿದರು. ಪ್ರಹ್ಲಾದರಾಜರು ಎಲ್ಲವೂ ಶ್ರೀಹರಿಚಿತ್ತವೆಂದು ನುಡಿಯುತ್ತಾ ಪೂಜ್ಯರೂ, ಹಿರಿಯರೂ ಆದ ಸರ್ವರಿಗೂ ವಂದಿಸಿ ಎಲ್ಲರ ಆಶೀರ್ವಾದ ಪಡೆದು, ಅವರವರ ಯೋಗ್ಯತೆಗೆ ತಕ್ಕಂತೆ ಮಾನಮರ್ಯಾದೆ ಮಾಡಿ, ಉಡುಗೊರೆ ನೀಡಿದರು. ಹೀಗೆ ಶ್ರೀಪ್ರಹ್ಲಾದರಾಜರ ಪಟ್ಟಾಭಿಷೇಕೋತ್ಸವವು ವಿಜೃಂಭಣೆಯಿಂದ ಸಾಂಗವಾದ ಮೇಲೆ ಬ್ರಹ್ಮಾದಿದೇವತೆಗಳೆಲ್ಲರೂ, ಋಷಿಮುನಿಗಳೂ ಪ್ರಹ್ಲಾದರನ್ನು ಅಭನಂದಿಸಿ, ಆಶೀರ್ವದಿಸಿ ತಮ್ಮ ತಮ್ಮ ಲೋಕ-ಆಶ್ರಮಗಳಿಗೆ ತೆರಳಿದರು.