
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೨೧. ಶ್ರೀಹರಿಯ ಭಕ್ತವಾತ್ಸಲ್ಯ ಮತ್ತು ವರಪ್ರದಾನ
ಸಾಷ್ಟಾಂಗವೆರಗಿ ಭಕ್ತಿಪರವಶನಾಗಿ ತನ್ನ ಪಾದಮೂಲದಲ್ಲಿ ಬಿದ್ದಿರುವ ಪ್ರಹ್ಲಾದನನ್ನು ಶ್ರೀಪ್ರಭು ನೋಡಿದ. ತನ್ನ ಮಹಿಮೆಯನ್ನು ಭತಿಶಯದಿಂದ ನಾನಾ ವಿಧವಾಗಿ ವರ್ಣಿಸಿ ಸ್ತೋತ್ರಮಾಡಿ, ಸರ್ವಸ್ವವನ್ನೂ ತನ್ನ ಪದತಲದಲ್ಲಿರ್ಪಿಸಿ ತಾ ಪ್ರಸಾದಕ್ಕಾಗಿ ಹಾತೊರೆದು ಮೈಮರೆತು ಬಿದ್ದಿರುವ ಬಾಲಪ್ರಹ್ಲಾದನನ್ನು ಕಂಡ ಭಕ್ತಬಂಧು ಶ್ರೀನರಸಿಂಹದೇವರ ಹೃದಯ ಕರುಣಾಪೂರ್ಣವಾಯಿತು. ಪ್ರೇಮದಿಂದ ದೇವನು ಕರುಣಾದ್ರ್ರ ದೃಷ್ಟಿಯಿಂದೀಕ್ಷಿಸಿ, ಮೆಲ್ಲನೇ ತನ್ನ ಭಕ್ತವಾತ್ಸಲ್ಯವನ್ನು ಪ್ರಕಟಿಸಲು ಪ್ರಹ್ಲಾದನನ್ನು ಮೇಲೆತ್ತಿ ತಾಯಿಯು ಬಾಡಿ ಬಳಲಿದ ತನ್ನ ಕಂದಮ್ಮನನ್ನು ಹೇಗೆ ಮೇಲೆತ್ತಿ ಮಡಿಲಿನಲ್ಲಿ ಕೂಡಿಸಿಕೊಂಡು ರಮಿಸುವಳೋ, ಅದರಂತೆಯೇ ಮುದ್ದು ಮಗು, ಭಕ್ತ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಅಮೃತಮಯವಾದ ತನ್ನೆರಡೂ ಕರಗಳಿಂದ ಮೆಲ್ಲನೆ ಮೈದಡವಿ ಮತ್ತೆ ಮತ್ತೆ ಆಲಿಂಗಿಸಿಕೊಂಡು ಬಾಲಭಕ್ತನ ಶಿರಸ್ಸನ್ನಾಘ್ರಾಣಿಸಿ, ತನ್ನ ಕರಕಮಲವ ಪ್ರಹ್ಲಾದನ ಶಿರಸ್ಸಿನ ಮೇಲಿಟ್ಟು ಅತ್ಯಂತ ಪ್ರೀತಿಯಿಂದ ಮಾತನಾಡಿದನು.
ಶ್ರೀನೃಸಿಂಹ : ವತ್ಸ! ಪ್ರಹ್ಲಾದ, ನನಗಾಗಿ ನೀನೆಷ್ಟು ಕಷ್ಟಗಳನ್ನು ಅನುಭವಿಸಿದೆಯಪ್ಪಾ, ಬಾಲಕನಾದ ನೀನು ದುಷ್ಟನಾದ ಹಿರಣ್ಯಕಶ್ಯಪನು ನೀಡಿದ ಭೀಷಣ ಶಿಕ್ಷೆಗಳ ಯಾತನೆಯನ್ನು ಅದೆಂತು ಸಹಿಸಿದೆಯೋ ಕಂದ! ಕೋಮಲವಾದ ನಿನ್ನ ಶರೀರವು ಅದೆಷ್ಟು ಘಾಸಿ ಹೊಂದಿತೋ, ನನ್ನಲ್ಲಿ ನಿನಗೆಷ್ಟು ಪ್ರೀತಿ, ಭಕ್ತಿ! ಅಹಹ, ಕುಮಾರ! ನನ್ನ ಸರ್ವೋತ್ತಮತ್ವ, ಸರ್ವಸ್ವಾಮಿತ್ವ, ಸರ್ವವ್ಯಾಪ್ತಿತ್ವಗಳನ್ನು ಸಾರಲು ಎಷ್ಟು ಶ್ರಮಿಸಿದೆಯಪ್ಪಾ ಭಕ್ತರಾಜ! ನಾನು ಬರಲು ತಡವಾಯಿತೆಂದು ನೊಂದೆಯಾ ಮಗು ?
ಪ್ರಹ್ಲಾದ : ದೇವ! ಜಗನ್ನಾಥ! ಕಮಲಾಕಾಂತ! ನಿನ್ನ ಚರಣಕಮಲ ಮಕರಂದಾಸ್ವಾದನಮತ್ತ ಮಧುಕರನಂತಾದ ನನಗೆ, ಅದೂ ಸದಾ ಪೊರೆಯುವ ಪ್ರಭು ನೀನಿರಲೆನಗೆ ನೋವೆಂದರೇನು ಸ್ವಾಮಿ? ನಿನ್ನ ಭಕ್ತರಿಗೆ ವಿಪತ್ತೆಲ್ಲಿಯದು ? ಶ್ರೀನೃಸಿಂಹ :
ಪ್ರಹ್ಲಾದ ಭದ್ರ! ಭದ್ರಂ ತೇ ಪ್ರೀತೋSಹಂ ತೇ ಸುರೋತ್ತಮ |
ವರಂ ವೃಣೀಸ್ವಾಭಿಮತಂ ಕಾಮಪುರೋಹಂ ನೃಣಾಮ್ || 52 ||
ಮಾಮಪ್ರಣೀತ ಆಯುಷ್ಮನ್ ದರ್ಶನಂ ದುರ್ಲಭಂ ಹಿ ಮೇ |
ದೃಷ್ಟಾ ಮಾಂ ನ ಪುನರ್ಜಂತುರಾತ್ಮಾನಂ ತಪ್ಪು ಮರ್ಹತಿ || 53 ||
ಪ್ರೀಣಂತಿ ಹೃಥ ಮಾಂ ಧೀರಾಃ ಸರ್ವಭಾವೇನ ಮಾಧವಂ |
ಶ್ರೇಯಸ್ಮಾಮಾ ಮಹಾಭಾಗಾಃ ಸರ್ವೆಷಾಮಾಶಿಷಾಂ ಪತಿಮ್ || 54 ||
ಮಂಗಳಕರನಾದ ಹೇ ಪ್ರಹ್ಲಾದ! ವತ್ಸ, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನಗೆ ಮಂಗಳವಾಗಲಿ, ಹೇ ಅಸುರಶ್ರೇಷ್ಠ! ನಿನಗೆ ಬೇಕಾದ ವರವನ್ನು ಕೇಳಿಕೋ. ಭಕ್ತರ ವಾಂಛಿತಗಳನ್ನು ನಾನು ಪೂರ್ಣಮಾಡುವವನಾಗಿದ್ದೇನೆ; ಭಕ್ತಿಯಿಂದ ಪ್ರೀತಿಗೊಳಿಸದೆ ನನ್ನ ದರ್ಶನವು ದೊರೆಯಲಾರದು, ದುರ್ಲಭನಾದ ನನ್ನನ್ನು ಸಾಕ್ಷಾತ್ಕಾರಪಡಿಸಿಕೊಂಡ ಮಾನವನಿಗೆ ಸಂಸಾರ ತಾಪವುಂಟಾಗಲಾರದು. ಲಕ್ಷ್ಮೀಪತಿಯಾದ ನನ್ನನ್ನು ಪ್ರೀತಿಯಿಂದ ಮೆಚ್ಚಿಸಿಕೊಳ್ಳಬಲ್ಲವರು ಸಾಮಾನ್ಯರಲ್ಲ, ಧೀರರು ಮತ್ತು ಮಹಾಸತ್ವಶಾಲಿಗಳು.
ಶ್ರೀನರಹರಿಯ ಮಾತನ್ನಾಲಿಸಿ, ಏಕಾಂತಭಕ್ತನಾದ ಪ್ರಹ್ಲಾದನ ಮನಸ್ಸು ಪ್ರಲೋಭನಗೊಳಿಸುವ ವರಗಳನ್ನು ಬೇಡಲು ಒಪ್ಪಲಿಲ್ಲ. ಭಗವಂತನು ಪರೀಕ್ಷಿಸಲು ಮಾಡಿದ ಪ್ರಲೋಭನಗಳಿಗೆ ಅವನು ಸೋಲಲಿಲ್ಲ! ಷಡ್ಗುಣೈಶ್ವರ್ಯಸಂಪನ್ನನಾದ ಶ್ರೀಹರಿಯಿಂದ ಪ್ರಹ್ಲಾದನು ಯಾವ ವರಗಳನ್ನು ಪಡೆಯಲೂ ಬಯಸಲಿಲ್ಲ. ಏಕೆಂದರೆ ವರಗಳ ಉಪಭೋಗದಿಂದ ಏಕಾಂತಭಕ್ತರ ಭಕ್ತಿಯೋಗಕ್ಕೆ ಅಂತರಾಯವುಂಟಾಗುವುದು. ಅಂತೆಯೇ ಪ್ರಹ್ಲಾದರಾಜನು ಕಾಮವರ್ಧಕ ವಿಷಯೋಪಭೋಗಕ್ಕೆ ಬಲಿಯಾಗಲಿಲ್ಲ.
ಪ್ರಹ್ಲಾದರಾಜನು ಶ್ರೀನೃಸಿಂಹದೇವರು ತನ್ನ ಯೋಗ್ಯತೆಯನ್ನು ತಿಳಿದಿದ್ದರೂ ತೋರಿಕೆಗಾಗಿ ಪ್ರಲೋಭನವನ್ನು ಮಾಡುವರೆಂದು ತೋರಿಸಲು ನಸುನಗುತ್ತಾ ಇಂತೆಂದನು; “ದೇವ, ಜನ್ಮಾರಭ್ಯ ವಿಷಯಗಳಲ್ಲಿ ನಾನು ಆಸಕ್ತಿ ತಾಳದೆ ಸಂಸಾರಭಯದಿಂದ ನಿರ್ವೇದವನ್ನು ಹೊಂದಿ ಮೋಕ್ಷವನ್ನು ಅಪೇಕ್ಷಿಸಿ ನಿನ್ನನ್ನು ಆಶ್ರಯಿಸಿದ್ದೇನೆ. ನಾನು ನಿನ್ನ ಸೇವಕನು. ನೀನು ನನ್ನ ಸ್ವಾಮಿ. ನಾನು ನಿನ್ನಿಂದ ಏನನ್ನೂ ಬೇಡದೆ ನಿನ್ನನ್ನು ನಿರ್ವ್ಯಾಜವಾಗಿ ಸೇವಿಸುವ ಭಕ್ತನು. ನೀನು ಅನಿಮಿತ್ತ ಭಕ್ತವಾತ್ಸಲ್ಯವುಳ್ಳ ಪ್ರಭುವು, ಜಗತ್ತಿನಲ್ಲಿ ರಾಜನು (ಪ್ರಭುವು ನೃತ್ಯರಿಂದ ತನ್ನ ಆಜ್ಞಾಪಾಲನರೂಪವಾದ ಪ್ರತಿಫಲವನ್ನೂ, ನೃತ್ಯರು ವೇತನಾದಿಗಳನ್ನೂ ಅಪೇಕ್ಷಿಸಿ ಸ್ವಾಮಿನೃತ್ಯಭಾವವನ್ನು ನಡೆಸಿಕೊಂಡು ಬರುವುದು ಕಂಡಿದೆಯಾದರೂ ನಾವು ಆ ರೀತಿಯ ಸ್ವಾಮಿನೃತ್ಯರಲ್ಲ! ಆದರೆ ನಮ್ಮಿಬ್ಬರಲ್ಲಿ ಅನಿಮಿತ್ತವಾದ ಅನಪಾಶ್ರಯವಾದ ಸೇವ್ಯ-ಸೇವಕ ಭಾವ ಸಂಬಂಧವಿದೆ.
ಆದರೆ ಸ್ವಾಮಿ, ನೀನು ಬೇಕಾದ ಬೇಕಾದ ವರವನ್ನು ಬೇಡು' ಎಂದು ನನಗೆ ಅರ್ಪಣೆ ಮಾಡಿಯೆ ಅದನ್ನು ಮಿರುವು ಯುಕ್ತವಲ್ಲ, ಆದಕಾರಣ ಹೇ ಸ್ವಾಮಿ, ನರಸಿಂಹ! ನನ್ನ ವಾಂಛಿತವನ್ನು ನೀನು ಪೂರ್ಣಮಾಡುವಂತಿದ್ದರೆ, ನನ್ನ ಹೃದಯದಲ್ಲಿ ಮನಸ್ಸಿನಲ್ಲಿ ಮೋಕ್ಷಮಾರ್ಗ ಪ್ರತಿಬಂಧಕವಾದ ಕಾಮವಾಸನೆಯು ಸರ್ವಥಾ ಜಪಿಸದಂತೆ ಮಾಡು, ನಿನ್ನಲ್ಲಿ ಅಚಲವಾದ ಭಕ್ತಿಯನ್ನು ಕೊಡು, ನಿನ್ನ ಕೃಪಾಕಟಾಕ್ಷದಿಂದ ಅಧಿಕಾರಿ ಜೀವನು ಜನನ-ಮರಣರೂಪವಾದ ಈ ಸಂಸಾರದಿಂದ ಪಾರಾ ಶಾಶ್ವತವೂ, ಸ್ವರೂಪಾನಂದಾವಿರ್ಭಾವರೂಪವೂ ಆದ ಮೋಕ್ಷವನ್ನು ಪಡೆಯುವನು. ಹೇ ಪುಂಡರೀಕಾಕ್ಷ! ನಾರದಮಹರ್ಷಿಗಳು
ನನಗೆ ಉಪದೇಶಿಸಿದ ಮಂತ್ರದಿಂದ ನಿದರ್ಶನವಾಯಿತು!
ಓಂ ನಮೋ ಭಗವತೇ ತುಭಂ ಪುರುಷಾಯ ಮಹಾತ್ಮನೇ |
ಹರಯೇದ್ದುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ ||
ಷಡ್ಗುಣೈಶ್ವರ್ಯ ಸಂಪನ್ನನಾದ, ಅತ್ಯಂತ ಆಶ್ಚರ್ಯಕರ ಸಿಂಹರೂಪವನ್ನು ಧರಿಸಿದ, ಸರ್ವಾಂತರ್ಯಾಮಿಯೂ, ಸರ್ವಗುಣ ಪರಿಪೂರ್ಣ ದೇಹಾಂತರ್ಗತಪುರುಷನೂ, ಮಹಾತ್ಮನೂ ಆದ ಶ್ರೀಹರಿಯೇ, ನಿನಗೆ ನಮಸ್ಕಾರ ಎಂದು ವಿಧಿಪೂರ್ವಕವಾಗಿ ಮಂತ್ರವನ್ನು ಜಪಿಸಿ ಭಕ್ತಿಪೂರ್ವಕ ವಂದಿಸಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುವುದು. ಹೀಗೆ ನನ್ನಲ್ಲಿ ಕೃಪೆಮಾಡಿ ದರ್ಶನವಿತ್ತ ಶ್ರೀನೃಸಿಂಹದೇವ! ನಿನಗೆ ಅನಂತ ಪ್ರಮಾಣಗಳು.
ಶ್ರೀನೃಸಿಂಹ : ಭಕ್ತರಾಜ, ಪ್ರಹ್ಲಾದ! ನಾನೊಡ್ಡಿದ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾದೆ! ವತ್ಸ, ನಿನ್ನ ನಿಷ್ಕಾಮವಾದ ಭಕ್ತಿಯಿಂದ ನಾನು ಸಂತುಷ್ಟನಾಗಿದ್ದೇನೆ. ನೀನು ಏನಾದರೊಂದು ವರವನ್ನು ಕೇಳಪ್ಪಾ, ಕೊಡಲು ಸಿದ್ಧನಾಗಿದ್ದೇನೆ.
ಆಗ ಪ್ರಹ್ಲಾದನು.... “ದೇವ! ಜನ್ಮಾಂತರೇಶ್ವಪಿ | ದಾಸವಾಹಂ ಭೂಯಾಸಂ ಗರುತ್ಮಾನಿವ ಭಕ್ತಿಮಾನ್ ” ಎಂದು ಭಗವಂತನಿಗೆ ನಮಸ್ಕರಿಸಿ - “ಪ್ರಭು! ಯಾವ ನಿನ್ನೀ ನಿತ್ಯನೂತನ ಸುಂದರರೂಪವನ್ನು ಕಾಣಲು ಕಾಡುಮೇಡುಗಳಲ್ಲಿ ಅನ್ನಾಹಾರಗಳನ್ನು ತ್ಯಜಿಸಿ ಘೋರವಾದ ತಪಸ್ಸನ್ನಾಚರಿಸಿದರೂ ಮಹಾತ್ಮರಾದ ಋಷಿಮುನಿಗಳಿಗೆ ಗೋಚರನಾದ ನೀನು ಏನೂ ಅರಿಯದ ಬಾಲಕನಾದ ನನ್ನ ಬಾ, ಶ್ರೀಹರಿ' ಎಂಬ ಕೂಗಿಗೆ ಓಗೊಟ್ಟು ಓಡಿಬಂದು ನಿನ್ನ ಪರಮಮಂಗಳರೂಪ ದರ್ಶನವಿತ್ತು ಅನುಗ್ರಹಿಸಿರುವಾಗ ಬೇರೆ ಮತ್ತೇನು ವರವನ್ನು ಬೇಡಲಿ ಗೋವಿಂದ? ಆದರೆ ಸ್ವಾಮಿ, ನನಗೊಂದಾಶೆಯಿದೆ, ಇದೇ ನಾನು ನಿನ್ನಲ್ಲಿ ಪ್ರಾರ್ಥಿಸುವ ವರ!” ನಾನು ಜನ್ಮಾಂತರಗಳಲ್ಲಿಯೂ ಗರುಡದೇವರಂತೆ ನಿನ್ನ ದಾಸನಾಗಬೇಕು. ನಿನ್ನ ಭಜಕನಾಗಬೇಕು. ಇಷ್ಟನ್ನು ಮಾತ್ರ ಅನುಗ್ರಹಿಸು.
ಶ್ರೀನೃಸಿಂಹ : ಆಹಾ, ಭಕ್ತಶಿಖಾಮಣಿ! ನನಗೆಂಥ ಸಂಕಟವನ್ನು ತಂದೊಡ್ಡಿದೆಯಪ್ಪಾ. “ಅಹಂ ತವಾತ್ಮದಾನೇಚ್ಛು ತಂ ತು ಧೃತೃತ್ವಮಿಚ್ಛಿಸಿ ” ಕುಮಾರ! ನೀನು ನನ್ನ ಸಂಬಂಧಿಯಾದ ಅಸದೃಶತತ್ವಗಳನ್ನು ಸಾರಿ, ತಂದೆ ನೀಡಿದ ಹಿಂಸೆಗಳನ್ನೆಲ್ಲಾ ಸಹಿಸಿ ನಾನು ಸರ್ವೋತ್ತಮ, ಜಗಜ್ಜನ್ಮಾದಿಕಾರಣ, ರಮಾಬ್ರಹ್ಮ, ರುದ್ರೇಂದ್ರಾದಿಗಳಿಗೂ ನಿಯಾಮಕ-ಸರ್ವತ್ರವ್ಯಾಪ್ತ ಎಂದು ಇನ್ನೇನಾದರೂ ವರವನ್ನು ಕೇಳು ಪ್ರಹ್ಲಾದ! ಸಿದ್ಧಮಾಡಿ ತೋರಿಸಿದ್ದೀಯೇ! ಇಂಥ ನಿನಗೆ ನನ್ನನ್ನೇ ಅರ್ಪಿಸಿಕೊಂಡುಬಿಡಲು ಆಶಿಸುತ್ತಿದ್ದರೆ ನೀನು ನನ್ನ ದಾಸನಾಗಬಯಸುವಿಯಲ್ಲ!
ಪ್ರಹ್ಲಾದ : (ವಿನೀತನಾಗಿ) “ಪ್ರಸೀದ ಸಾಸ್ತು ಮೇ ನಾಥ! ತದಕಿಸ್ಸಾತ್ವಿಕೀ ಸ್ಥಿರಾ ||” ಕರುಣಾಸಾಗರ, ಶ್ರೀಹರಿ! ನನಗೆ ಮತ್ತೇನೂ ಬೇಡ, ಸ್ವಾಮಿ, ನಿನ್ನಲ್ಲಿ ಅಚಲವಾದ ಸಾತ್ವಿಕವಾದ ಭಕ್ತಿಯು ಸರ್ವದಾ ಇರುವಂತೆ ಅನುಗ್ರಹಿಸು ಅದೊಂದೇ ನನಗೆ ಸಾಕು!!
ಶ್ರೀನೃಸಿಂಹ : ತಥಾಸ್ತು! ವತ್ಸ, ನಿನ್ನಿಚ್ಚೆಯಂತೇ ಆಗಲಿ! ನಿನ್ನಂಥ ಏಕಾಂತಭಕ್ತರು ಐಹಿಕಾಮುಸ್ಮಿಕಗಳಲ್ಲಿಯೂ ವಿಷಯೋಪಭೋಗಗಳನ್ನೂ ಇಚ್ಛಿಸುವುದಿಲ್ಲ! ನಿಜ, ಆದರೂ ನೀನು ನನ್ನ ಆಜ್ಞೆಯಂತೆ ಒಂದು ಮನ್ವಂತರಕಾಲ ಈ ದೈತ್ಯಸಾಮ್ರಾಜ್ಯವನ್ನು ಪರಿಪಾಲಿಸು, ಅನಂತರ ಮೋಕ್ಷದಲ್ಲಿ ಆನಂದಾತಿಶಯಕ್ಕೆ ಕಾರಣವಾದ ಅಧಿಕಪುಣ್ಯವನ್ನು ಸಂಪಾದಿಸಿ ನನ್ನ ವಿಶೇಷಪ್ರಸಾದಕ್ಕೆ ಪಾತ್ರನಾಗು!
ಪ್ರಹ್ಲಾದ : ದೇವ! ನಿನ್ನನ್ನು ಕಂಡಮೇಲೂ ಮತ್ತೆ ಈ ರಾಜ್ಯಭಾರ ಐಹಿಕಸುಖಗಳಲ್ಲಿ ನನ್ನನ್ನು ತಳ್ಳುವೆಯಾ? ಸ್ವಾಮಿ, ನಿನ್ನ ಚರಣಸನ್ನಿಧಿಗೆ ನಾನೆಂದು ಬರುವೆನು ?
ಶ್ರೀನೃಸಿಂಹ : ವತ್ಸ! ಮುವತ್ತಾರು ಸಹಸ್ರ ವರ್ಷ ನೀನು ರಾಜ್ಯಭಾರ ಮಾಡಲೇಬೇಕು. ನೀನು ನಾನು ಹೇಳುವಂತೆ ರಾಜ್ಯಭಾರ ಮಾಡು. ಅದು ನಿನಗೆ ಬಂಧಕವಾಗುವುದಿಲ್ಲ.
ಪ್ರಹ್ಲಾದ! ಭಕ್ತು ದೇಕಗೊಳಿಸುವ ಮಂಗಲಕರವಾದ ನನ್ನ ಎಲ್ಲ ಅವತಾರ ಕಥೆಗಳನ್ನು ಶ್ರವಣ ಮಾಡುತ್ತಾ ಪ್ರಕೃತ್ಯಾದಿ ಸಕಲ ಪ್ರಪಂಚಕ್ಕೂ ಸತ್ತಾಪ್ರದನಾದ ನನ್ನನ್ನು ಯಾವಾಗಲೂ ಧ್ಯಾನ ಮಾಡುತ್ತಾ, ಧ್ಯಾನಯೋಗದಿಂದ ಪ್ರತಿಬಂಧಕ ಕರ್ಮಗಳನ್ನು ಉಪಮರ್ದನ ಮಾಡಿ, ಸರ್ವಭೂತಗಳಲ್ಲಿಯೂ ಇದ್ದು, ಮುಖ್ಯ ಯಜ್ಞಭೋಕ್ತವಾದ ನನ್ನನ್ನು ಸರ್ವೋತ್ತಮ-ಸರ್ವಸ್ವತಂತ್ರನೆಂದು ಆರಾಧಿಸು! ನಿನ್ನ ಆಧಿಪತ್ಯದಲ್ಲಿ ಭೋಗ ಮುಂತಾದವು ಬಂದೇ ಬರುವುದರಿಂದ ಅದು ಮೋಕ್ಷಕ್ಕೆ ಪ್ರತಿಬಂಧಕವೆಂದು ಚಿಂತಿಸಬೇಡ. 95
ಭೋಗೇನ ಪುಣ್ಯಂ ಕುಶಲೇನ ಪಾಪಂ ಕಲೇವರಂ ಕಾಲಜೀವೇನ ಹಿತ್ವಾ |
ಕೀರ್ತಿ೦ ವಿಶುದ್ಧಾಂ ಸುರಲೋಕಗೀತಾಂ ವಿತಾಯ ಮಾಮೇಸಿ ಮುಕ್ತಬಂಧಃ || 14 ||
ಮೋಕ್ಷಕ್ಕೆ ಅಭಿಮತವಲ್ಲದ ಪುಣ್ಯವನ್ನು ಭೋಗದಿಂದ ಕಳೆದುಕೊಳ್ಳಬೇಕು. ಪ್ರಾಯಶ್ಚಿತ್ತಾದಿ ಕುಶಲಕರ್ಮದಿಂದ ಪಾಪವನ್ನು ನಿರ್ಮೂಲ ಮಾಡಬೇಕು - ಹೀಗೆ ಮಾಡಿ ದೇವಲೋಕಗಳಲ್ಲಿಯೂ ಗಾನಮಾಡುವ ನಿರ್ಮಲ ಕೀರ್ತಿಯನ್ನು ವಿಸ್ತಾರಗೊಳಿಸಿ; ಅನಿಷ್ಟ ನಿವೃತ್ತಿಯಾದ ಮೇಲೆ ನೀನು ನನ್ನ ಸನ್ನಿಧಿಗೆ ಬಂದು ಸೇರುತ್ತೀಯೆ.
ಪ್ರಹ್ಲಾದ : ಅನುಗೃಹೀತೋSಸ್ಮಿ, ಸ್ವಾಮಿ, ಮತ್ತೊಂದು ಅನುಗ್ರಹವನ್ನು ಯಾಚಿಸುತ್ತೇನೆ. ನನ್ನ ತಂದೆಯು, ಪ್ರಭುವಾದ ನೀನು ತನ್ನ ಸೋದರನನ್ನು ಸಂಹರಿಸಿದೆ ಎಂದು ನಿನ್ನ ಮೇಲೆ ದ್ವೇಷ ಮಾಡಿದನು. ಸರ್ವಲೋಕ ಗುರುವಾದ ನಿನ್ನನ್ನು ಮನಬಂದಂತೆ ಅಜ್ಞಾನದಿಂದ ನಿಂದಿಸಿ ಪಾಪಿಯಾದನು. ನಿನ್ನ ಭಕ್ತನೆಂದು ನನಗೆ ದ್ರೋಹ ಮಾಡಿದನು. ಅವನೆಸಗಿದ ಮಹತ್ತರವಾದ ಪಾಪಮೋಚನೆಯಾಗುವುದೆಂತು ? ಅದು ನಿನ್ನ ಅನುಗ್ರಹವಿಲ್ಲದೆ ಸಾಧ್ಯವಿಲ್ಲ. ಆದ್ದರಿಂದ ಪ್ರಭು! “ಪಿತಾ ಮೇ ಪೂಯೇತ ಭಕ್ತವತ್ಸಲ, ಅವನನ್ನು ಪಾಪಮುಕ್ತನನ್ನಾಗಿ ಮಾಡಿ ನಿನ್ನ ಕರುಣಾಕಟಾಕ್ಷದಿಂದ ಅವನನ್ನು ಪವಿತ್ರಗೊಳಿಸಿ ಸದ್ಧತಿಯನ್ನು ದಯಪಾಲಿಸು! ಇಷ್ಟೇ ನನ್ನ ಪ್ರಾರ್ಥನೆ.
ಶ್ರೀನೃಸಿಂಹ : ಪ್ರಹ್ಲಾದ! ವಂಶೋದ್ಧಾರಕನಾದ ನಿನ್ನಂಥ ಸತ್ಪುತ್ತನು ಜನಿಸಿದ ಇಪ್ಪತ್ತೊಂದು ಕುಲದ ಪಿತೃಗಳೇ ಪಾವನರಾಗುವರೆಂದಮೇಲೆ ನಿನ್ನ ತಂದೆಯು ಪೂತನಾಗಿ ಸದ್ಗತಿ ಪಡೆಯುವದರಲ್ಲಿ ಸಂದೇಹವೇನಿದೆ ? ನಿನ್ನ ಪಿತನು ನನ್ನ ಭಕ್ತನೇ ಆಗಿದ್ದು ವಿಪ್ರಶಾಪದಿಂದ ದೈತ್ಯನಾಗಿ ಅಸುರ ಸಂಬಂಧದಿಂದ ನನ್ನ ದ್ವೇಷಿಯಾಗಿದ್ದನು. ಈಗ ಅವನು ನನ್ನ ಅನುಗ್ರಹದಿಂದ ಉತ್ತಮ ಗತಿಯನ್ನೇ ಹೊಂದಿರುವನು. ಸರ್ವಪ್ರಾಣಿಗಳಲ್ಲಿ ಸಮದರ್ಶಿಗಳೂ ಪ್ರಶಾಂತರೂ, ಅಹಿಂಸಕರೂ ಆದ ನನ್ನ ಭಕ್ತರು ಸಂಚರಿಸಿದ ಕೀಟಕಾದಿಗಳಿಂದ ಯುಕ್ತವಾದ ಪಾಪದೇಶಗಳೂ ಪವಿತ್ರವಾಗುವುದೆಂದಮೇಲೆ ನಿನ್ನಂಥ ಪರಮಭಕ್ತನು ಜನಿಸಿದ್ದರಿಂದ ಹಿರಣ್ಯಕಶ್ಯಪನೇ ಮೊದಲಾಗಿ ಇಪ್ಪತ್ತೊಂದು ಜನ್ಮಾಂತರದ ಪಿತೃಗಳೂ ಪಾಪಮುಕ್ತರಾಗುವುದರಲ್ಲಿ ಆಶ್ಚರ್ಯವೇನಿದೆ. ಹೀಗೆ ಹೇಳಿ ಭಗವಾನ್ ಶ್ರೀನರಸಿಂಹದೇವನು ಮಂದಹಾಸ ಬೀರುತ್ತಾ ಮತ್ತೆ ಅಪ್ಪಣೆ ಕೊಡಿಸಿದನು - ಶ್ರೀನೃಸಿಂಹ : ವತ್ಸ, ಪ್ರಹ್ಲಾದ! ನೀನು ಯಾವ ವರವನ್ನೂ ಕೇಳಲಿಲ್ಲ. ಆದರೂ ನಿನ್ನಲ್ಲಿ ಸುಪ್ರೀತನಾಗಿ ನಿನಗೆ ಎರಡು
ಅನನ್ಯ ಸಾಧಾರಣ ವರಗಳನ್ನು ಕರುಣಿಸುತ್ತೇನೆ - ಕೇಳು, ಭಕ್ತರಾಜ!
ಯ ಏತರ್ತಯನ್ನಂ ತ್ವಯಾ ಗೀತಮಿದಂ ನರಃ |
ತ್ವಾಂ ಚ ಮಾಂ ಚ ಸ್ಮರನ್ ಕಾಲೇ ಕರ್ಮಬಂಧಾತ್ಮಮುಚ್ಯತೇ ||
ಪ್ರಾತಃಕಾಲಾದಿ ಕಾಲಗಳಲ್ಲಿ ಮೊದಲು ನಿನ್ನನ್ನೂ ನಂತರ ನನ್ನನ್ನೂ ಸ್ಮರಿಸುವರೋ ಅಂಥವರು ಅನಾಯಾಸವಾಗಿ ಈ ಪ್ರಹ್ಲಾದ! ನನ್ನನ್ನು ನೀನು ಭಕ್ತಿಯಿಂದ ಸ್ತುತಿಸಿದ ಈ ಪರಮಶುಭಕರವಾದ ಸ್ತೋತ್ರವನ್ನು ಯಾರು ಗಾನಮಾಡಿ ಪ್ರತಿ
ಸಂಸಾರರೂಪಬಂಧನದಿಂದ ಬಿಡುಗಡೆ ಹೊಂದಿ ನನ್ನ ಅನುಗ್ರಹದಿಂದ ಮೋಕ್ಷವನ್ನು ಪಡೆಯುವರು!!98
ಭವಂತಿ ಪೂರುಷಾ ಲೋಕೇ ಮದ್ದಕ್ತಾಸ್ವಾಮನುವ್ರತಾಃ |
ಭವಾನ್ ಮೇ ಖಲು ಭಕ್ತಾನಾಂ ಸರ್ವೆಷಾಂ ಪ್ರತಿರೂಪದ್ರಕ್
11 33 11
ಕುಮಾರ! ಈ ಪ್ರಪಂಚದಲ್ಲಿ ನನ್ನ ಭಕ್ತ ಗುಂಪಿನಲ್ಲಿಯೂ ನಿನಗೆ ವೈಶಿಷ್ಟ್ಯಪೂರ್ಣ ಮಾಹಾತ್ಮವುಂಟಾಗಿ ನಿನ್ನ ಕೀರ್ತಿಯ ಸರ್ವತ್ರ ಹರಡುವುದು. ನನ್ನ ಭಕ್ತರಾದ ಅವರೆಲ್ಲರೂ ನಿನ್ನನ್ನು ಅನುಸರಿಸಿ ಆಜ್ಞಾನುವರ್ತಿಗಳಾಗುವರು ಅಥವಾ ಯಾರು ಅನುಸರಿಸಿ, ನಿನ್ನ ಭಕ್ತರಾಗುವರೋ ಅವರೇ ನನ್ನ ಭಕ್ತರಾಗಲು ಅರ್ಹರಾಗುವರು! ಅಂದರೆ ಪ್ರಹ್ಲಾದ, ನಿನ್ನ ಭಕ್ತರಾಗಿ ಅನುಸರಿಸಿದವರನ್ನೇ ನಾನು ಭಕ್ತರೆಂದು ಸ್ವೀಕರಿಸುವೆನು. ಏಕೆ ಗೊತ್ತೆ? ವತ್ಸ! ನೀನು ನನ್ನ ಎಲ್ಲ ಭಕ್ತರಿಗೂ ಉದಾಹರಣೆಯಾಗಿದ್ದು ಎಲ್ಲರಿಗೂ ಆಶ್ರಯನಾಗಿದ್ದೀಯೇ!100
ಪ್ರಹ್ಲಾದ : ಮಹಾಪ್ರಭು! ನಿನ್ನ ಅಣತಿಯನ್ನು ಮತ್ತು ಅನುಗ್ರಹಿಸಿ ನೀನು ಕರುಣಿಸಿದ ವರಗಳನ್ನು ಶಿರಸಾ ಧರಿಸಿದ್ದೇನೆ. ದೇವ! ನಿನ್ನ ಭಕ್ತವಾತ್ಸಲ್ಯಕ್ಕೆ ಎಣೆಯೇ ಇಲ್ಲ! ಸ್ವಾಮಿ, ನಿನಗೆ ನಮಸ್ಕಾರ!
ಆಗ ಪ್ರಹ್ಲಾದರಾಜನು ಹರಿದ್ವೇಷಿಯಾದ ತಂದೆಯ ಅಂತ್ಯಕ್ರಿಯಾದಿಗಳನ್ನು ಹೇಗೆ ಮಾಡುವುದೆಂದು ಚಿಂತಿಸುತ್ತಿರುವುದನ್ನು ಕಂಡು ಶ್ರೀನರಸಿಂಹಸ್ವಾಮಿಯು “ಪ್ರಹ್ಲಾದ! ನಿನ್ನ ತಂದೆಯ ಪ್ರೇತಕಾರ್ಯಾದಿಗಳನ್ನು ಹೇಗೆ ಮಾಡುವುದೆಂದು ಯೋಚಿಸಬೇಡ ಅವನು ನನ್ನ ಸ್ವಾಭಾವಿಕ ಭಕ್ತನಾದ ಜಯನು.101 ವಿಪ್ರಶಾಪದಿಂದ ಅಸುರನಾಗಿ ಜನಿಸಿದ್ದನು. ಯುದ್ಧದಲ್ಲಿ ನನ್ನ ಅಂಗಸ್ಪರ್ಶದಿಂದಲೂ, ನಿನ್ನ ಪ್ರಾರ್ಥನೆಯಂತೆ ನಾನು ಅವನ ದೇಹವನ್ನು ಕೃಪಾಕಟಾಕ್ಷದಿಂದ ಈಕ್ಷಿಸಿಸಿದ್ದರಿಂದಲೂ ಅದು ಪವಿತ್ರವಾಗಿದೆ. ನನ್ನ ಆಜ್ಞೆಯಂತೆ ನೀನು ನಿನ್ನ ತಂದೆಯ ರಾಜ್ಯದಲ್ಲಿ ಮಂಡಿಸಿ ನನ್ನ ಧ್ಯಾನಾಸಕ್ತನಾಗಿ ಬ್ರಹ್ಮಜ್ಞಾನಿಗಳ ಉಪದೇಶದಂತೆ ರಾಜ್ಯಭಾರ ಮಾಡುತ್ತಾ ವಿಹಿತ ಕರ್ಮಾನುಷ್ಠಾನರತನಾಗಿ ಬಾಳು'10” ಎಂದರು.
ಅನಂತರ ಬ್ರಹ್ಮ ದೇವರು ಶ್ರೀಹರಿಯು ಅನುಗ್ರಹೋನ್ಮುಖರಾಗಿರುವುದನ್ನು ಕಂಡು ಶ್ರೀನೃಸಿಂಹದೇವರನ್ನು ಸ್ತುತಿಸಿದರು. ಶ್ರೀಬ್ರಹ್ಮ : ಪರಾತ್ಮರ; ನಿಖಿಲಜಗತ್ತಿಗೆ ಸಾಕ್ಷೀಭೂತನಾದ ಪರಮಾತ್ಮ, ಪರಮಚೇತನ! ಆದಿಭೂತನೇ, ನೀನು ಜಗತ್ತಿಗೆ ಸಂತಾಪಪ್ರದನಾಗಿದ್ದಹಿರಣ್ಯಕಶ್ಯಪುವನ್ನು ಸಂಹರಿಸಿ ಲೋಕಕಲ್ಯಾಣ ಮಾಡಿದ್ದೀಯೇ, ನನ್ನ ವರಪ್ರಭಾವ, ಚಾಂದ್ರಾಯಣಾದಿ ವ್ರತಗಳಿಂದಲೂ, ಶರೀರ ಬಲದಿಂದಲೂ ಉದ್ಧಟನಾಗಿ ಸ್ವರ್ಗದ ಅಮರಾವತಿ ಮುಂತಾದ ನಗರಗಳನ್ನು ನಾಶಪಡಿಸಿದ್ದನು. ಅವನನ್ನು ಸಂಹರಿಸಿ ಅವನ ಮಗನಾದ ಬಾಲ ಪ್ರಹ್ಲಾದನನ್ನು ನೀನು ಈಗ ಮೃತ್ಯುವಿನಿಂದ ಪಾರು ಮಾಡಿದ್ದೀಯೆ. ಇದರಿಂದ ಸಮಸ್ತ ಸುರರು, ಋಷಿಗಳು, ನರರು ಹೀಗೆ ಎಲ್ಲ ಸಜ್ಜನರಿಗೂ ಪರಮಾನಂದವಾಗಿದೆ. ದೇವ! ಮಂಗಳಕರನಾದ ನೀನು ಧ್ಯಾನಿಸುವ ಭಕ್ತರನ್ನು ಸಕಲಕುಟಕಸಂಕಟಗಳಿಂದಲೂ ಮೃತ್ಯುವಿನಿಂದಲೂ ರಕ್ಷಿಸುತ್ತೀಯೆ. ಆಗ ಶ್ರೀನೃಸಿಂಹದೇವರು “ಕಮಲಸಂಭವ! ಕ್ರೂರಿಗಳಾದ ಅಸುರರಿಗೆ ಇನ್ನು ಮುಂದೆ ಇಂಥ ವರಗಳನ್ನು ಕೊಡಬೇಡ. ಈಗ ನನ್ನ ಪ್ರೇರಣೆಯಿಂದಲೇ ಹಿರಣ್ಯಕಶ್ಯಪನಿಗೆ ವರಕೊಟ್ಟಿದ್ದು ನನಗೆ ಸಮ್ಮತವಾಗಿತ್ತು. ಮುಂದೆ ಇಂಥ ವರಗಳನ್ನು ಕೊಡಬೇಡ” ಎಂದು ಬ್ರಹ್ಮದೇವರಿಗೆ ಆಜ್ಞಾಪಿಸಿದರು. ಬ್ರಹ್ಮದೇವರು ಮಹಾಪ್ರಭುವಿನ ಆಜ್ಞೆಯನ್ನು ಶಿರಸಾ ಧರಿಸಿರುವುದಾಗಿ ವಿಜ್ಞಾಪಿಸಿದರು.
ಪ್ರಹ್ಲಾದರು “ಮಹಾಪ್ರಭು! ನಿನ್ನ ಆಜ್ಞೆಯಂತೆ ವರ್ತಿಸುತ್ತೇನೆ. ಆದರೆ ನಿನ್ನ ಸನ್ನಿಧಿಗೆ ಯಾವಾಗ ಬರುವುದು ?” ಎಂದು ಕೇಳಿದಾಗ ಶ್ರೀನರಸಿಂಹದೇವರು ಮಂದಹಾಸಮುಖಾರವಿಂದರಾಗಿ “ವತ್ಸ! ಪ್ರಹ್ಲಾದ, 'ಯಚ್ಚಾಂತಿಮೇಚಾಂತಿಮೇ!' ನೀನು ನನ್ನಲ್ಲಿ ಮುಂದಿನ ಮೂರು ಜನ್ಮಗಳಲ್ಲಿಯೂ ನನ್ನ ಭಕ್ತನಾಗಿ, ದಾಸನಾಗಿ ಸೇವಿಸುವಂತೆ ಅನುಗ್ರಹಿಸುವಂತೆ ಪ್ರಾರ್ಥಿಸಿರುವಿಯಲ್ಲವೆ? ನಿನ್ನ ಅಭಿಲಾಷೆಯಂತೆ ನಿನ್ನ ಮುಂದಿನ ಮೂರುಜನ್ಮಗಳಲ್ಲಿಯೂ ನೀನು ನನ್ನನ್ನು ವಿಶೇಷಾಕಾರವಾಗಿ ಸೇವಿಸಿ, ನಿನ್ನ ಕೊನೆಯ ಜನ್ಮದಲ್ಲಿ ಕಲಿಯುಗದ ಕಲ್ಮಷದಿಂದ ಅಜ್ಞಾನಾಂಧಕಾರದಲ್ಲಿ ಮುಳುಗಿ ಉದ್ಧಾರದ ದಾರಿಗಾಣದೆ ಬಳಲುವ ಸುಜನರಿಗೆ ಜ್ಞಾನದ ಬೆಳಕನ್ನು ನೀಡಿ, ದೀನ-ದಲಿತರು, ಸಕಲ ಸಜ್ಜನರುಗಳ ಮನೋಭೀಷ್ಟಗಳನ್ನು ಪೂರ್ಣಮಾಡಿ, ನಿನ್ನನ್ನು ಆಶ್ರಯಿಸಿರುವ ಸಮಸ್ತ ಭಕ್ತಜನರೊಡನೆ ನನ್ನ ಸನ್ನಿಧಿಗೆ ಬಂದು ಸೇರಿ ಸುಖಿಸುವೆ. ವತ್ಸ! ನಿನಗೆ ಮಂಗಳವಾಗಲಿ” ಎಂದು ಹೇಳಿ ಎಲ್ಲರೂ ನೋಡುತ್ತಿರುವಂತೆ ಅಂತರ್ಧಾನನಾದನು.
ಭಗವಂತನು ಅದೃಶ್ಯನಾದ ಮೇಲೆ ಕುಲಪುರೋಹಿತರಾದ ಶುಕ್ರಾಚಾರ್ಯರು ಪ್ರಹ್ಲಾದನಿಂದ ಹಿರಣ್ಯಕಶ್ಯಪನ ಅಂತ್ರಕ್ರಿಯಾದಿಗಳನ್ನು ಸಾಂಗವಾಗಿ ನೆರವೇರಿಸಿದರು. ಪ್ರಹ್ಲಾದರಾಜನು ಸಹ್ಲಾದಾದಿ ಸಹೋದರರೊಡನೆ ಮಂಗಳಸ್ನಾನ ಮಾಡಿ ಪರಿಶುದ್ಧನಾದನು.