ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

೯. ಮಂತ್ರಾಲಯದ ಮಹಾಶಿಲ್ಪಿಗಳು

(೩) ಶ್ರೀಸುಯಮೀಂದ್ರತೀರ್ಥರು (ಮಂತ್ರಾಲಯದ ಮಹಾಶಿಲ್ಪಿಗಳು) 

ಶ್ರೀಶಾಲಿವಾಹನಶಕೆ ೧೮೫೫ನೇ ಶ್ರೀಮುಖ ಸಂ| ವೈಶಾಖ ಶುಕ್ಲ ಪಂಚಮೀ ದಿವಸ (ಕ್ರಿ.ಶ. ೧೯೩೩) ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳಾದ ಪೂಜ್ಯ ಶ್ರೀಸುಯಮೀಂದ್ರತೀರ್ಥರು ಶಾಲೀವಾನಶಕೆ ೧೮೮೯ನೇ ಪರಾಭವಸಂ।। ಪುಷ್ಪ ಶುಕ್ಲ ಬಿದಿಗೆವರೆಗೆ ಮೂವತ್ತೂರುವರ್ಷಗಳ ಕಾಲ ವಿರಾಜಿಸಿದ್ದರು.477 ಶ್ರೀಗುರುಸಾರ್ವಭೌಮರ ಮಹಿಮೆ, ಕಾರುಣ್ಯ, ಭಕ್ತವಾತ್ಸಲ್ಯ, ಲೋಕಕಲ್ಯಾಣ ದೀಕ್ಷೆ, ಶ್ರೀಹರಿವಾಯುಗಳಲ್ಲಿನ ಭಕ್ತಿ ಮುಂತಾದ ಸದ್ಗುಣಗಳನ್ನರಿಯಬೇಕಾದರೆ ಸುಯಮೀಂದ್ರರ ಜೀವನವನ್ನು ವಿವೇಚಿಸಬೇಕು. ಅವರ ಜೀವನದುದ್ದಕ್ಕೂ ರಾಯರ ಮೇಲ್ಕಂಡ ಸದ್ಗುಣಗಳೆಲ್ಲವಾ ಶ್ರೀಯವರ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆರೆತು ಜಗತ್ತಿಗೆ ಪ್ರಕಟವಾದುದನ್ನು ಅರಿಯಬಹುದಾಗಿದೆ. ಬಹುಶಃ ರಾಯರು ತಮ್ಮ ಹಿಂದಿನ ಎಲ್ಲ ಅವತಾರಗಳಲ್ಲಿಯೂ ಶ್ರೀರಮಾರಮಣನ ಚರಣಸರೋಜಪರಿಸೇವನದಿಂದ ಗಳಿಸಿದ ಅಖಂಡ-ಅಕ್ಷಯ್-ಅಮರಸಂಪತ್ತು-ಪುಣ್ಯರಾಶಿಗಳನ್ನು ಶ್ರೀಸುಯಮೀಂದ್ರರ ಕಾಲದಲ್ಲಿಯೇ ಹೆಚ್ಚಾಗಿ ಭಕುತರಿಗೀಡಾಗಲು ಪ್ರಾರಂಭಿಸಲು ಸಂಕಲ್ಪಿಸಿದ್ದರೆಂದು ತೋರುತ್ತದೆ. ಅಂತೆಯೇ ಆ ಕಾರ್ಯನಿರ್ವಹಣೆಗಾಗಿ ವರಪ್ರಹಾನದ್ವಾರಾ ಸುಯಮೀಂದ್ರರ ಅವತಾರಕ್ಕೆ ಕಾರಣರಾದರು. ಸರಿ, ಪ್ರಾರಂಭವಾಯಿತು: ರಾಯರ ಮಹಿಮಾ ಪ್ರದರ್ಶನ-ಭಕ್ತವಾತ್ಸಲ್ಯ, ಕಾರುಣ್ಯ ಸರಣಿ! ಹಿಂದೆಂದೂ ತೋರದ ಮಹಾಮಹಿಮೆಯನ್ನು ಸುಯಮೀಂದ್ರರ ಆಧಿಪತ್ಯಕಾಲದಲ್ಲೇ ಪ್ರಕಟಿಸಿ, ಕೋಟ್ಯಂತರ ದೀನ-ದಲಿತ-ಆಪಂಡಿತಪಾಮರ ಭಕ್ತಜನರನ್ನು ಉದ್ದರಿಸಹತ್ತಿದರು. 

ಶ್ರೀ ರಾಜಾ. ವೇಣುಗೋಪಾಲಚಾರ್ಯರು (ಶ್ರೀಸುಕೃತೀಂದ್ರತೀರ್ಥರು) ಆದಾವ ಮಹತ್ಕಾರಕ್ಕಾಗಿ ಶ್ರೀರಾಯರ ವರದಿಂದ ಸತ್ಪುತ್ರರನ್ನು ಪಡೆದರೋ ಆ ಕಾರ್ಯನಿರ್ವಹಣೆಗಾಗಿ ಪುತ್ರರಿಗೆ ಬಾಲ್ಯದಿಂದಲೂ ತರಬೇತಿ ನೀಡಿದರು. ಮುಂದೆ ಶ್ರೀಸುಶಿಲೇಂದ್ರತೀರ್ಥರು ಅವರಿಗೆ ಶ್ರೀರಾಯರ ಹುಚ್ಚು ಹಿಡಿಸಿ ಅವರಿಗೆ ಸಕಲ ಶಿಕ್ಷಣ ನೀಡಿ ರಾಯರ ಏಕಾಂತಭಕ್ತರನ್ನಾಗಿ ಮಾಡಿದರು. ಶ್ರೀಸುವ್ರತೀಂದ್ರತೀರ್ಥರು ಇವರ ಗುರುರಾಜಭಕ್ತಿಲತೆಗೆ ನೀರೆರೆದು ಅದು ಬಹುವಿಧವಾಗಿ ಪಲ್ಲವಿಸಿ ಕುಸುಮಿತವಾಗುವಂತೆ ಮಾಡಿದರು. ಹೀಗೆ ಮುನಿಯರ ಕೃಪಾಶ್ರಯದಲ್ಲಿ ತಯಾರಾದ ಶ್ರೀಸುಯಮೀಂದ್ರತೀರ್ಥರು ಗುರುಭಕ್ತಿ ಮೂಸೆಯಲ್ಲಿ ಪುಟವಿಟ್ಟ ಚೊಕ್ಕ ಬಂಗಾರದಂತೆ ತೇಜಸ್ವಿಗಳಾಗಿ, ಆ ಮುನಿತ್ರಯರ ಉಪದೇಶ, ಶಿಕ್ಷಣ, ಅನುಗ್ರಹಗಳಿಂದ ಅದ್ವಿತೀಯ ವ್ಯಕ್ತಿತ್ವದಿಂದ ಶೋಭಿಸಿ ಶ್ರೀರಾಯರ ಮಹಿಮಾ ಪ್ರಸಾರಕ ಶಿರೋಮಣಿಗಳಾಗಿ ರೂಪುಗೊಂಡರು! ಶಾಸ್ತ್ರಾರ್ಥಸಾರವನ್ನು ಜೀವನದಲ್ಲಿ ಆಚರಣೆಯಲ್ಲಿ ತಂದು ರಾಯರ ಉಭಯವಂಶದೀಪಕರಾಗಿ, ಶ್ರೇಷ್ಠಗುರುಗಳಾಗಿ, ಸರ್ವರ ಮಾನ್ಯತೆಗೆ ಪಾತ್ರರಾದರು. ಮುನಿತ್ರಯರಿಂದ ಬಿತ್ತಲ್ಪಟ್ಟು, ಪಲ್ಲವಿಸಿ, ಕುಸುಮಿತವಾದ ಗುರುಭಕ್ತಿಕಲ್ಪವೃಕ್ಷವು ಶ್ರೀಯವರ ಅಸದೃಶಸೇವೆ, ತಪಸ್ತುಗಳಿಂದ ಫಲಭರಿತವಾಗಿ, ಇಂದು ಜಗತ್ತಿನ ಜನತೆಯು ಅದರ ಸ್ವಾದಾಸ್ವಾದನರತವಾಗಿ ಸುಖಿಸುತ್ತಿರುವುದು ಎಲ್ಲರ ಅನುಭವಿಸಿದ್ದ ವಿಚಾರವಾಗಿದೆ.

477 ಬೃಂದಾವನಸ್ಥರಾದ ತಾ. ೧೨-೧-೧೯೬೭

ಶ್ರೀಪ್ರಹ್ಲಾದಾವತಾರರಾದ ರಾಯರು “ಕೃಷ್ಣಗ್ರಹಗೃಹೀತಾತ್ಮರಾದರೆ, ಸುಯಮೀಂದ್ರರು “ರಾಘವೇಂದ್ರಗ್ರಹಗೃಹೀತಾತ್ಮ” ರಾದರು. ರಾಯರು “ಹರಿಪಾದಪದ್ಮ ನಿಷೇವಣಾಲ್ಲಬ ಸಮಸ್ತಸಂಪದರಾದರೆ, ಇವರು “ಗುರುರಾಜಚರಣ ಕಮಲಾರಾಧನೆಯಿಂದ ಸಕಲವಿದ ಸಂಪತ್ತನ್ನುಗಳಿಸಿ ೩೩ ವರ್ಷಕಾಲ-ಶಿಷ್ಯ-ಭಕ್ತ-ಪಂಡಿತ-ಪಾಮರ-ಸ್ವಜನ-ಪರಜನರ ಕಲ್ಯಾಣಕ್ಕಾಗಿ ಆ ಸಂಪತ್ತನ್ನು ವಿನಿಯೋಗಿಸಿದರು! 

ಪರಿಪಕ್ವ ಮನಸ್ಸು, ಪರಿಶುದ್ಧ ಹೃದಯ, ಅಪಾರ ಕಾರುಣ್ಯ, ಸ್ವಾಭಾವಿಕ ವಾತ್ಸಲ್ಯ, ಇವೆಲ್ಲಕ್ಕೂ ಕಳಶವಿಟ್ಟಂತೆ ಅನೇಕ ಜನ್ಮಾರ್ಜಿತ ಪರಮಾತ್ಮ ವಿಷಯಕ ನಿಷ್ಕೃಷ್ಟಜ್ಞಾನ, ಸುದೃಢಭಕ್ತಿ, ವೈರಾಗ್ಯ, ತಪಸ್ಸು, ಶ್ರೀವಾಯುದೇವರು ಗುರುರಾಜರಲ್ಲಿ ಅಸಾಧಾರಣ ಭಕ್ತಿ, ಈ ಮನೋವೃತ್ತಿಯು ಇವರನ್ನು ಅಹಂಕಾರ ಮಮಕಾರ, ದಂಭಾದಿಗಳಿಗೆ ಕಾರಣವಾದ ನಿರರ್ಥಕ ಕೀರ್ತಿಕಾಮನೆಯಿಂದ ದೂರವಿರಿಸಿ, ಶ್ರೀನರಸಿಂಹದೇವರು ಹೇಳಿದ “ಮದ್ದಕ್ತಾಸ್ಥಾಮನುವ್ರತಾಃ” ಎಂಬ ದಿವ್ಯಮಂತ್ರ ಜಪದಲ್ಲೇ ಆಸಕ್ತರಾಗಿರುವಂತೆ ಮಾಡಿ ಶ್ರೀಹರಿವಾಯ-ಗುರುರಾಜರ ಅನುಗ್ರಹ ಪಡೆದು ಲೋಕಮಾನ್ಯತೆ ಗಳಿಸುವಂತೆ ಮಾಡಿತು. 

ಶ್ರೀರಾಯರಲ್ಲಿ ಸುಯಮೀಂದ್ರರಿಗಿದ್ದ ಭಕ್ತಿ ಅಸಾಧಾರಣ, ಅಚಲ, ಎದ್ದರೆ ಕುಳಿತರೆ ರಾಯರದೇ ಧ್ಯಾನವಾಯಿತವರಿಗೆ, ಸಕಲೇಂದ್ರಿಯಗಳೂ ಗುರುಸೇವೆಯಲ್ಲಿರತವಾದವು. ಶ್ರೀಯವರ ಉಸಿರು ಶ್ರೀರಾಯರ ಸ್ತೋತ್ರವಾಯಿತು. ರಾಯರ ಅಗತ್ಯಮಹಿಮೆ ಸದ್ಗುಣಗಳನ್ನೆಷ್ಟು ಉಪದೇಶಿಸಿದರೂ ಇವರಿಗೆ ತೃಪ್ತಿಯೇ ಇಲ್ಲ. ಆದ್ದರಿಂದಲೇ ಮಂತ್ರಾಲಯವನ್ನು ಬಿಟ್ಟಗಲಲು ಕಾಲೇ ಬರುತ್ತಿರಲಿಲ್ಲ. ಎಷ್ಟೋ ಸಲ ರಾಯರ ಬೃಂದಾವನದ ಮುಂದೆ ನಿಂತು ತದ್ಭಕ್ತಿಭಾವಭರಿತರಾಗಿ ಆನಂದಬಾಷ್ಪ ಸುರಿಸುತ್ತಾ ಪ್ರಾರ್ಥಿಸುತ್ತಿದ್ದ ದೃಶ್ಯವನ್ನು ಕಂಡು ವಿಸ್ಮಿತರಾದ ನೂರಾರು ಜನರು ಇಂದಿಗೂ ಇದ್ದಾರೆ. ರಾಯರಲ್ಲಿ ಭಕ್ತಿಮಾಡುವುದನ್ನು ಕಲಿಯಬೇಕು ಶ್ರೀಸುಯಮೀಂದ್ರರಿಂದ ಎಂಬುದು ನಾಣ್ಣುಡಿಯಾಗಿಬಿಟ್ಟಿದೆ. 

“ಯತ್ಪಾದಕರಸಾ ಪರಿಭೂಷಿತಾಂಗಾಃ ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ | 

ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ ತದರ್ಶನಂ ದುರಿತಕಾನನದಾವಭೂತಮ್ ||” 

ಯಾರು ಗುರುರಾಜರ ಪಾದಧೂಳಿನಿಂದ ಅಲಂಕೃತ ಶರೀರರಾಗಿರುವರೋ ರಾಯರ ಪಾದಕಮಲಮಕರಂದಾಸಕ್ತ ದುಂಬಿಯಂತೆ ಯಾರ ಮನಸ್ಸಿರುವುದೋ. ಯಾರ ಪ್ರತಿಯೊಂದು ನುಡಿಯೂ (ವಾಕ್ಕು) ಮಂತ್ರಾಲಯಪ್ರಭುಗಳ ಚರಣಸರೋಜ ಮಹಿಮಾತಿಶಯ ಗಾನದಲ್ಲಿಯೇ ಮಗ್ನವಾಗಿ ಪರಮಪಾವನವಾಗಿದೆಯೋ, ಅಂಥ ಲಕ್ಷಣವುಳ್ಳವರೇ ರಾಯರ ಅಂತರಂಗ ಭಕ್ತರೆಂದರಿಯಬೇಕು. ಇಂಥ ರಾಯರ ಭಕ್ತರ ದರ್ಶನವು ಪಾಪವೆಂಬ ಅರಣ್ಯಕ್ಕೆ ಕಾಡಗಿಚ್ಚಿನಂತಾಗುವುದು! ಅಂದರೆ ಅಂಥವರ ದರ್ಶನ ಮಾತ್ರದಿಂದ ಪಾಪಸಮೂಹವು ಛತ್ಮೀಭೂತವಾಗುವುದೆಂದು ಭಾವ. ಶ್ರೀಅಪ್ಪಣಾಚಾರರು ನಿರೂಪಿಸಿದ ಗುರುಭಕ್ತರ ಲಕ್ಷಣ ಲಕ್ಷಿತರಾದವರು ಅನೇಕ ಮಹನೀಯರಾಗಿ ಹೋಗಿದ್ದಾರೆ. ಈ ಇಪ್ಪತ್ತನೆಯ ಶತಮಾನದಲ್ಲಿ ಈ ಲಕ್ಷಣದಿಂದ ಶೋಭಿಸಿದ ಮಹನೀಯರು ಶ್ರೀಸುಯಮೀಂದ್ರತೀರ್ಥರೆಂದು ಘಂಟಾಘೋಷವಾಗಿ ಹೇಳಬಹುದು. 

ಶ್ರೀಸುಯಮೀಂದ್ರರು ತಾವೊಬ್ಬರು ಮಾತ್ರ ರಾಯರ ಭಕ್ತರಾಗಿ ಆ ಗುರುಭಕ್ತಿ ಸಾಮ್ರಾಜ್ಯದಲ್ಲಿ ಆನಂದಿಸುವುರಲ್ಲೇ ತೃಪ್ತರಾಗಲಿಲ್ಲ. ತಮ್ಮಂತೆ ಸಕಲರೂ ರಾಯರ ಭಕ್ತರಾಗಿ ಆ ಗುರುಭಕ್ತಿ ಸಾಮ್ರಾಜ್ಯದಲ್ಲಿ ವಿಹರಿಸಬೇಕೆಂದು ಬಯಸಿದರು. ಶ್ರೀಯವರ ಮನಸ್ಸು ಪ್ರಫುಲ್ಲಿತವಾಯಿತು. ಕಲಿಮಲಕಲುಷಿತ ಜಗತ್ತು ಅವರ ಕಣ್ಣಿಗೆ ಕಟ್ಟಿತ್ತು. ಭಾರತೀಯ ಭವ್ಯ ಪರಂಪರೆಯನ್ನು ಮರೆತು ಧರ್ಮಭ್ರಷ್ಟರಾಗಿ, ಭಗವಂತನಲ್ಲಿ ಔದಾಶೀನ್ಯತಾಳಿ ಅಧಃಪತನದತ್ತ ಸಾಗಿರುವ ಜನರ ರುದ್ರಭೀಕರ ದೃಶ್ಯವು ಅವರ ಮನಃಪಟಲದಲ್ಲಿ ಪ್ರತಿಬಿಂಬಿಸಿ ಮಾನವ ಜನಾಂಗದ ಉದ್ದಾರಕ್ಕಾಗಿ ಅವರು ಚಿಂತಿಸಿದರು. ಕಲಿಯುಗದಲ್ಲಿ ಬಹು ಕಷ್ಟಕಾಲದಲ್ಲಿ ಸುಜನರನ್ನುದರಿಸಿ ಜನತೆಯ ಸರ್ವಾಂಗೀಣ ಅಭ್ಯುದಯ ಕಲ್ಯಾಣಗಳನ್ನೆಸಗಿ ಕಾಪಾಡಲು ಪ್ರಹ್ಲಾದಾವತಾರಿ ಶ್ರೀರಾಯರೊಬ್ಬರೇ ಶಕ್ತರು, ಅವರಿಗೆ ಶರಣುಹೋಗುವುದೇ ಈ ಕಷ್ಟಪರಿಹಾರ ನಿದಾನ, ಇಂದಿನ ಧರ್ಮಗ್ಲಾನಿಗೆ ರಾಯರೇ ಕಾಯಕಲ್ಪ-ಎಂದು ಶ್ರೀಯವರು ದೃಢವಾಗಿ ಮನಗಂಡರು. ಜಗತ್ತಿನ ಜನರು ಶ್ರೀರಾಯರನ್ನನುಸರಿಸುವಂತೆ ಅವರ ಭಕ್ತರಾಗುವಂತೆ ಮಾಡಿದರೆ ಆಹಾ! ಹಾಗಾದಲ್ಲಿ, ರಾಯರ ಭಕ್ತರು ಸ್ವಾಭಾವಿಕವಾಗಿ ಆಸ್ತಿಕರಾಗುವರು. ಅದರಿಂದ ಅವರ ಉದ್ಧಾರವಾಗುವುದು. ಆದ್ದರಿಂದ ಜನರು ರಾಯರ ಭಕ್ತರಾಗುವಂತೆ ಮಾಡಿದರೆ ಸಾಕು! ಲೋಕಕಲ್ಯಾಣವಾಗುವುದು. ಈ ಮಹಾತ್ಕಾರ ಸಫಲವಾಗಬೇಕಾದರೆ ಜನರು ಮೊದಲು ಇವರ ಭಕ್ತರಾಗಬೇಕು. ಆದಾಗ ಬೇಕಾದರೆ ಶ್ರೀಗುರುರಾಜರ ಮಹಿಮೆ ಜಗತ್ತಿನಲ್ಲೆಲ್ಲಾ ಪ್ರಸಾರವಾಗಬೇಕು. ಈ ಒಂದು ಮಹತ್ಕಾರ ನಮ್ಮಿಂದಾಗುವಂತಾದರೆ... ಜೀವನ ಸಾರ್ಥಕವಾಗುವುದು. ಇನ್ನು ಮುಂದೆ ಇದೇ ನಮ್ಮ ಜೀವನದ ಗುರಿ! ಹೀಗೆ ಸುಯಮೀಂದ್ರರು ನಿರ್ಧರಿಸಿದರು. ಸರಿ, ಮಂತ್ರಾಲಯದಲ್ಲಿ ಅಂದಿನಿಂದಲೇ ಪ್ರಾರಂಭವಾಯಿತು. ಶ್ರೀ ಶ್ರೀಯವರ ತಪಸ್ಸು ! ಶ್ರೀಯವರು ಸಕಲ ಸ್ವಾರ್ಥ, ಕೀರ್ತಿ, ಪ್ರತಿಷ್ಠೆಗಳನ್ನೂ ದೂರ ತಳ್ಳಿ, ಶ್ರೀರಾಯರಸೇವೆ, ಮಹಿಮಾ ಪ್ರಸಾರಗಳಲ್ಲಿ ಮಗ್ನರಾದರು. 

ಮಂತ್ರಸಿದ್ದಿಕ್ಷೇತ್ರವಾಗಿದ್ದ ಮಂತ್ರಾಲಯ ಶ್ರೀರಾಯರ ಸನ್ನಿಧಾನದಿಂದ ಅಭೀಷ್ಟಸಿದ್ಧಿ ಕ್ಷೇತ್ರವಾಗಿ, ಯಾತ್ರಾಸ್ಥಳವಾಗಿ ಪರಿಣಮಿಸಿತ್ತು. ಸುಯಾಮಿಂದ್ರರ ತಪಸ್ಸಿನಿಂದ, ಸೇವೆಯಿಂದ ಸುಪ್ರಸನ್ನರಾದ ಗುರುರಾಜರು ಶ್ರೀಯವರ ಸದಾಶಯವನ್ನು ಪೂರೈಸಿ ಸುಯಮೀಂದ್ರರಿಗೆ ಕೀರ್ತಿಕೊಡಲು ಮಂತ್ರಾಲಯವನ್ನು ಭಕ್ತಿ ಮಂದಿರ” ವನ್ನಾಗಿಮಾಡಿದರು. ಮಂತ್ರಾಲಯ ಸುರಪನಾಲಯವಾಯಿತು. ಅಲ್ಲಿನ ತರುಲತೆಗಳು ಕಲ್ಪತರುಗಳಾದವು. ಪಶುಪಕ್ಷಿಗಳೇ ಕಾಮಧೇನುಗಳಾದವು ತುಂಗೆಯೇ ದೇವಗಂಗೆಯಾದಳು, ತುಂಗೆಯ ಮಂಗಳ ತರಂಗಗಳಿಂದ ಕಂಗೊಳಿಸುವ ವಿಶಾಲ ಬಂಡೆಗಳು ಚಿಂತಾಮಣಿಗಳಾದವು, ಸಾಕ್ಷಾತ್ ರಾಘವೇಂದ್ರರೇ ಇಂದ್ರರಾದರು. ಶ್ರೀಮೂಲರಾಮ ಉಪೇಂದ್ರನಾದ, ವಾದೀಂದ್ರಾದಿಗಳು ಋಷಿಮುನಿಗಳಾದರು. ಮಂತ್ರಾಲಯಕ್ಕೆ ಬರುವ ಭೂಸುರ-ಭಕ್ತ-ಜನರು ಸುರರಾದರು. ಹರಿದಾಸರು ವಂದಿಮಾಗಧರಾದರು. ಸುಯಮೀಂದ್ರರ ಗುರುಮಹಿಮೋಪದೇಶವೇ ಅಮೃತವಾಯಿತು ! ಹೀಗೆ ಶ್ರೀಸುಯಮೀಂದ್ರರ ಸತತ ಸೇವೆ, ತಪಃ ಪ್ರಭಾವದಿಂದ ದೇವತೆಗಳ ಸ್ವರ್ಗ ಧರೆಗಿಳಿದು ಬಂದಿತು!. 

ದಿನದಿನಕಿಲ್ಲಿ ನೂತನ ಉತ್ಸವಗಳಾಗುವವು! ದಿನದಿನಕಿಲ್ಲಿ ನೂತನ ಮಹಿಮೆಗಳಾಗುವವು | ದಿನದಿನಕಿಲ್ಲಿನೂತನ ವಾರ್ತೆಗಳಾಗುವವು ” ಎಂಬ ಅಪರೋಕ್ಷಜ್ಞಾನಿಗಳ ಭವಿಷ್ಯ ನಿತ್ಯನಿತವಾಯಿತು. ಸುಮಾರು ಇಪ್ಪತೈದು ವರ್ಷ ಕಾಲ ಅವಿಚ್ಛಿನ್ನವಾಗಿ ಸುಯಮೀಂದ್ರರು ಗುರುರಾಜರನ್ನು ಸ್ವಹಸ್ತದಿಂದ ಸೇವಿಸುತ್ತಾ ಜಗತ್ತಿನ ಉದ್ದಾರ, ಕಲ್ಯಾಣಗಳಿಗಾಗಿ ಪ್ರಾರ್ಥಿಸುತ್ತಾ ತಪೋನಿರತರಾದರು. ಅದರ ಫಲವಾಗಿ ಅವರ ಅವತಾರಕಾರ್ಯ ಸಫಲವಾಯಿತು. ಮಂತ್ರಾಲಯ ಮಹಾಯಾತ್ರಾಕ್ಷೇತ್ರವಾಗಿ ಲಕ್ಷಾಂತರ ಜನರನ್ನು ಆಕರ್ಷಿಸಿತು. ಪ್ರತಿದಿನ ಸಹಸ್ರಾರು ಜನ ರಾಯರಿಗೆ ಶರಣಾಗಿ ಬಂದು ಸೇವಿಸಹತ್ತಿದರು. ಬರುವ ಭಕ್ತರ ಸಂಖ್ಯೆ ಮೇರೆಮೀರಿತು. ಯಾತ್ರಿಕರಿಗೆ ವಸತಿ, ಭೋಜನಗಳ ಸೌಕಯ್ಯ ಮಾಡಬೇಕಾಯಿತು. ಅದಕ್ಕಾಗಿ ಅನೇಕ ಶಿಲಾಮಂಟಪ, ಕಟ್ಟಡಗಳಾದವು. ಸಹಸ್ರಾರು ಜನರಿಗೆ ಪ್ರತಿದಿನ ಭೋಜನ ವ್ಯವಸ್ಥೆಯಾಯಿತು. ವಿವಿಧ ಪಕ್ವಾನ್ನಗಳನ್ನು ಮಾಡಿಸಿ ಶ್ರೀಮೂಲರಾಮ-ವಾಯು-ರಾಯರಿಗೆ ಸಮರ್ಪಿಸಿ ಸಾವಿರಾರು ಜನರನ್ನು ಒತ್ತಟ್ಟಿಗೆ ಕೂಡಿಸಿ ಭೋಜನಮಾಡಿಸುವುದೊಂದು ಶ್ರೀಯವರ ನಿತ್ಯ ನಿಯಮವಾಯಿತು. ಆ ಭಕ್ತಸಂದೋಹ ಆ ಸಂಭ್ರಮಗಳನ್ನು ನೋಡಿ ಆನಂದಿಸುತ್ತಾ ಏಕತ್ರ ಕುಳಿತು ಗುರುಪ್ರಸಾದವನ್ನು ಸ್ವೀಕರಿಸುವ ಭಕ್ತಾನೀಕವನ್ನು ಕಂಡು ಗುರುಗಳು ಪುಳಕಿತಗಾತ್ರರಾಗಿ ರಾಯರ ಮಹಿಮೆಯನ್ನು ಕೊಂಡಾಡುತ್ತಿದ್ದರು. 

ಇಂದಿನ ಮಹಾಮಂತ್ರಾಲಯದ ನಿರ್ಮಾಣಕ್ಕೆ ಸುಯಮೀಂದ್ರರು ಸ್ವಯಂ ಯೋಜಿತ ಕ್ರಮದಲ್ಲಿ ಸುಭದ್ರ ಬುನಾದಿಯನ್ನು ಹಾಕಿ, ಹಂತಹಂತವಾಗಿ ಅದನ್ನು ಕಾರ್ಯರೂಪಕ್ಕೆ ತರಲಾರಂಭಿಸಿದರು ರಾಯರ ಸೇವಾಸೂತ್ರಗಳು ಸಕ್ರಮವಾಗಿ ಜರುಗಿ, ಪೂಜಾರಾಧನೆಗಳು ಸಾಂಗವಾಗಿ ನಡೆಯಲು ಶ್ರೀಗಳವರು ಶ್ರೀರಾಯರ ಬೃಂದಾವನ ಸನ್ನಿಧಿಯ ಕಛೇರಿಯನ್ನು ಪ್ರಪಥಮವಾಗಿ ಸ್ಥಾಪಿಸಿದನು. ಚೈತ್ರದಿಂದ ಫಾಲ್ಗುಣದವರೆಗೆ ನಿತ್ಯ, ನೈಮಿತ್ತಿಕ ಉತ್ಸವ, ಹಬ್ಬ-ಹರಿದಿನ. ಗುರುಪರ್ವಗಳು ವ್ಯವಸ್ಥಿತ ರೀತಿಯಿಂದ ನೇರವೇರುವ ಕ್ರಮವನ್ನೇರ್ಪಡಿಸಿದರು. ಮೂರು ದಿನ ನಡೆಯುತ್ತಿದ್ದ ರಾಯರ ಆರಾಧನೆಯನ್ನು “ಸಪ್ತರಾತ್ರೋತ್ಸವ” ಎಂಬ ಹೆಸರಿನಿಂದ ವಿಸ್ತರಿಸಿ, ಏಳು ದಿನಗಳು ವಿವಿಧ ಉತ್ಸವಗಳನ್ನು ವಿಜೃಂಭಣೆಯ ಕಾರ್ಯಕ್ರಮಗಳೊಡನೆ ಜರುಗಿಸಹತ್ತಿದರು. ಸದ್ದಿದ್ಯಾಪ್ರಸಾಕರಕ್ಕಾಗಿ, ಶ್ರೀಸುಶಿಲೇಂದ್ರರು ಸ್ಥಾಪಿಸಿದ್ದಸಂಸ ತಪಾಠಶಾಲೆಯನ್ನು 'ಶ್ರೀಗುರುಸಾರ್ವಭೌಮ ಸಂಸ ತಕಲಾಶಾಲೆ ಯನ್ನಾಗಿ ಮಾರ್ಪಡಿಸಿ, ವೇದ, ವೇದಾಂತ, ನ್ಯಾಯ-ಮಿಮಾಂಸಾ-ವ್ಯಾಕರಣ-ಧರ್ಮಶಾಸ್ತ್ರ-ಸಾಹಿತ್ಯ ಶಾಸ್ತ್ರಗಳ ವ್ಯಾಸಂಗ ಮಾಡುವ ನೂರಾರು ವಿದ್ಯಾರ್ಥಿಗಳಿಗೆ ಸಕಲಸೌಕರವೇರ್ಪಡಿಸಿಕೊಟ್ಟು ಆಧ್ಯಾತ್ಮ ಪ್ರಗತಿಗೆ ಕಾರಣರಾದರು. ಶ್ರೀರಾಯರ ಆರಾಧನಾಕಾಲದಲ್ಲಿ ಶ್ರೀಮತ್ಸಮೀರಸಮಯಸಂವರ್ಧಿನೀವಿದ್ವತ್ಸಭೆ'ಯನ್ನು ವಿಶೇಷ ರೀತಿಯಿಂದ ವ್ಯಾಪಕವಾಗಿ ನೆರವೇರಿಸುತ್ತಾ ದೇಶ-ವಿದೇಶಗಳಿಂದ ಬರುತ್ತಿದ್ದ ಪಂಡಿತ ಶ್ರೇಷ್ಠರು ವಿದ್ಯಾರ್ಥಿಗಳು ಕವಿ-ಸಾಹಿತಿಗಳು, ಕಲೆಗಾರರಿಗೆ, ಉದಾರ ಸಂಭಾವನಾ ಪ್ರದಾನದಿಂದ ಸಂತೋಷಪಡಿಸಿ, ಪ್ರಕಾಂಡಪಂಡಿತರನ್ನು ಗುರುತಿಸಿ ಅವರಿಗೆ ಸುವರ್ಣಪದಕಸಹಿತ ಹಾರ, ಜರೀಶಾಲುಜೋಡಿ, ಸಂಭಾವನೆಗಳೊಡನೆ ವಿವಿಧ ವಿದ್ಯಾಪ್ರಶಸ್ತಿಗಳನ್ನಿತ್ತು ಗೌರವಿಸುತ್ತಿದ್ದರು. ಇದರಂತೆ ಜನಸಾಮಾನ್ಯರ ಸಂತೋಷಕ್ಕಾಗಿ ಪಂಡಿತರ ಉಪನ್ಯಾಸ, ಹರಿಕಥೆ, ಸಂಗೀತ, ಭಜನೆ ಮುಂತಾದ ಸಾಂಸ ತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಪ್ರತಿನಿತ್ಯ ಸಭೆಯಲ್ಲಿ ವಿವಿಧ ಶಾಸ್ತ್ರಗಳಲ್ಲಿ ವಾಕ್ಯಾರ್ಥ, ವಿಚಾರಗೋಷ್ಠಿ, ವಿದ್ಯಾರ್ಥಿಗಳ ಪರೀಕ್ಷೆಗಳೂ ಜರಗುತ್ತಿದ್ದು, ಹತ್ತಾರು ಸಹಸ್ರ ಜನರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೃತಾರ್ಥರಾಗಹತ್ತಿದರು. 

ಶ್ರೀರಾಯರ ಪಂಚಾಮೃತ, ಮೂಲರಾಮರ ಪೂಜಾರಾಧನೆ, ಆಲಂಕಾರ, ರಾಯರ ಪೂಜಾ, ಅರ್ಚನೆ, ದೀಪಾರಾಧನೆ, ವಿವಿಧ ವಾಹನೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ಶ್ರೇಯಃಪ್ರಾರ್ಥನೆ ಫಲಮಂತ್ರಾಕ್ಷತಾ ಪ್ರದಾನಗಳು ಸುಗಮವಾಗಿ ಜರಗಲು ಸ್ವಯಂಸೇವಕರ ವ್ಯವಸ್ಥೆ ಮಾಡಿ, ಇವೆಲ್ಲವೂ ಸುಗಮವಾಗಿ ಹತ್ತಾರು ಸಾವಿರ ಜನರ ಭೋಜನಗಳೂ ವ್ಯವಸ್ಥಿತ ರೀತಿಯಿಂದಾಗುವಂತೆ ಮಾಡಿದರು. 

ಸುಯಮೀಂದ್ರರ ಕಾಲದಲ್ಲಿ ಮಂತ್ರಾಲಯದ ಸರ್ವತೋಮುಖ ಅಭಿವೃದ್ಧಿಯಾಯಿತು. ಶಿಲಾಮಂಟಪಗಳು, ಭೋಜನಶಾಲಾ, ಕಟ್ಟಡಗಳು, ವಿದ್ಯುದ್ದೀಪ, ಜಲಪಾರಣ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಆರಾಧನಾಕಾಲದಲ್ಲಿ ಪದಾರ್ಥ ಭದ್ರತಾ ಕೊಠಡಿ, ಹಣ ಭದ್ರತಾ ಶಾಖೆ, ಆಸ್ಪತ್ರೆ, ಸ್ವಚ್ಛತಾ ವ್ಯವಸ್ಥೆ, ಸಣ್ಣಮಕ್ಕಳಿಗೆ ಬೆಳಗ್ಗೆ ಭೋಜನ ವ್ಯವಸ್ಥೆ, ದೇವರ ಪೂಜಾದರ್ಶನ, ಪಂಚಾಮೃತ, ಅರ್ಚನೆ, ರಾಯರ ದರ್ಶನ, ತೀರ್ಥಪ್ರಸಾದ, ಭೋಜನ, ಉತ್ಸವ'ಗಳನ್ನು ಸರ್ವರೂ ನೋಡಿ, ಭಾಗವಹಿಸಿ ಆನಂದಿಸಲು ಸ್ವಯಂಸೇವಕಪಡೆ, ಅದರ ಮೇಲ್ವಿಚಾರಣಾವ್ಯವಸ್ಥೆ ಇತ್ಯಾದಿ ಅನುಕೂಲಗಳು, ಸಂಗೀತ, ಉಪನ್ಯಾಸ, ಹರಿಕಥೆ, ವಿಚಾರಗೋಷ್ಠಿ, ಭಜನೆ, ವಾಕ್ಯಾರ್ಥಗಳನ್ನು ಸರ್ವರೂ ಕೇಳಾನಂದಿಸಲು ಧ್ವನಿವರ್ಧಕಗಳ ವ್ಯವಸ್ಥೆಗಳಾದವು. ಶ್ರೀಯವರ ಅಂತರಂಗ ಶಿಷ್ಯರೂ, ಭಕ್ತರೂ ಆದ ಶ್ರೀನವಲಿ ಗೋಪಾಲರಾವ್, ಶ್ರೀಬುರ್ಲಿ ಬಿಂದುಮಾಧವ, ಶ್ರೀ ವಿ.ಬಿ.ನಾಯಕ್, ಶ್ರೀ ಎಚ್.ಆರ್. ಪುರೋಹಿತ್, ಶ್ರೀ ಜಿ.ಜಿ. ಢಣಕ್ ಶಿರೂರ್, ಶ್ರೀ ಮೊಹರೆ ಹನುಮಂತರಾವ್, ಶ್ರೀನರಸಿಂಗರಾವ್ ಮಾನವಿ, ಶ್ರೀನರಸಿಂಗರಾವ್ ಗಂಗಾವತಿ, ಡಾ|| ರಾಘವೇಂದ್ರ ಗೌಡ, ಶ್ರೀ ಸಿ.ಆರ್. ವ್ಯಾಸರಾವ್, ಗುಂಜೇಹಳ್ಳಿ ಶ್ರೀವಾಸುದೇವಾಚಾರ್, ಮಾಸ್ತ‌ ಶ್ರೀಕೃಷ್ಣಮೂರ್ತಿರಾವ್ ಮುಂತಾದವರು "ಮಂತ್ರಾಲಯ ಯಾತ್ರಿಕರ ಸಂಘ, ಗುರುಸೇವಾಸಮಿತಿ, ಮಂತ್ರಾಲಯ ಸ್ವಯಂಸೇವಕರ ಸಂಘ”, ಮುಂತಾದ ಸ್ವಯಂಸೇವಕ ಸಂಘ, ಸಂಸ್ಥೆಗಳನ್ನು ಶ್ರೀಯವರ ಅಪ್ಪಣೆಯಂತೆ ಪ್ರಾರಂಭಿಸಿ ಮೇಲ್ಕಂಡವರು ಎಲ್ಲ ಕಾರ್ಯಕ್ರಮಗಳು ಸುವ್ಯವಸ್ಥಿತರೀತಿಯಿಂದ ಜರುಗುವಂತೆ ಮಾಡಿ ಹತ್ತಾರು ಸಹಸ್ರ ಜನರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀರಾಯರ ಅನುಗ್ರಹಕ್ಕೆ ಪಾತ್ರರಾಗುವಂತೆ ಮಾಡುತ್ತಿದ್ದರು. 

ಶ್ರೀಯವರು ಇದರಂತೆ ಪ್ರಹ್ಲಾದರಾಜರ ಕುಲದೇವತೆಯಾದ ಶ್ರೀಮಂತ್ರಾಲಯಾಂಬಿಕೆಗೆ ಸುಂದರ ಮಂದಿರವನ್ನು ನಿರ್ಮಿಸಿ ಪ್ರತಿದಿನ ಪೂಜಾರಾಧನೆ, ಶುಕ್ರವಾರ ಮಂಗಳವಾರಗಳಲ್ಲಿ ವಿಶೇಷ ಉತ್ಸವ, ಪ್ರತಿನಿತ್ಯ, ಸೇವಿಸುವವರ ಅನುಕೂಲಕ್ಕಾಗಿ ಅಮ್ಮನವರಿಗೆ ಕ್ಷೀರಾಭಿಷೇಕ, ಪಂಚಾಮೃತ, ಕುಂಕುಮಾರ್ಚನೆ, ಪುಷ್ಪಾರ್ಚನೆಗಳ ವ್ಯವಸ್ಥೆಮಾಡಿ ಪ್ರತಿದಿವಸ ಶ್ರೀಯವರು ಮೊದಲು ಸಂಜೆ ಸ್ವತಃ ಅಮ್ಮನವರ ದೀಪಾರಾಧನೆಗೆ ಹೋಗಿ ನೆರವೇರಿಸಿ ನಂತರ ಶ್ರೀರಾಯರ ದೀಪಾರಾಧನೆಗೆ ಚಿತ್ತೆಸುತ್ತಿದ್ದುದರಿಂದ ಭಕ್ತಾದಿಗಳೂ ಮೊದಲು ಅಮ್ಮನವರನ್ನು ಸೇವಿಸಿ, ನಂತರ ರಾಯರನ್ನು ಸೇವಿರುವ ಸಂಪ್ರದಾಯ ನಡೆದುಬಂದು ಇಂದು ಸಾವಿರಾರು ಜನರು ಅಮ್ಮನವರ ಸೇವಾದಿಗಳಿಂದ ಇಷ್ಟಾರ್ಥ ಪಡೆಯುವಂತಾಗಿರುತ್ತದೆ. 

ಶ್ರೀಯವರು ಶ್ರೀರಾಯರ ಮೂಲಬೃಂದಾವನಕ್ಕೆ ಬಂಗಾರದ ತೆನೆಗಳು, ರಜತಮಯ ಪಂಚೆ, ಉತ್ಸವ ರಾಯರಿಗೆ ಬಂಗಾರದ ಕವಚ, ಪಂಚೆ, ಕಿರೀಟ, ಕರ್ಣಕುಂಡಲಗಳು, ಹಸ್ತ, ಪಾದಗಳು, ನವರತ್ನಮಯ “ಶ್ರೀಗುರುಸಾರ್ವಭೌಮಮುಡಿ” ವಿವಿಧಾಭರಣಗಳನ್ನು ಮಾಡಿಸಿ ರಾಯರು ವೈಭವದಿಂದ ಭಕ್ತರಿಗೆ ದರ್ಶನವಿತ್ತು ಅನುಗ್ರಹಿಸುವಂತೆ ಮಾಡಿದರು. ಶ್ರೀಯವರ ಕಾಲದಲ್ಲಿ ರಾಯರಿಗೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ರಜತರಥ ನಿರ್ಮಾಣವಾಯಿತು. ರಾಯರ ಉತ್ಸವಕ್ಕಾಗಿ ರಜತಪೀಠ ಪ್ರಭಾವಳಿ, ವಿಶಾಲವಾದ ಛತ್ರಿ, ಚಾಮರಗಳು, ರಜತ ದಂಡಗಳು, ವಾಹನಗಳ ನಿರ್ಮಾಣವಾದವು. 

ಶ್ರೀಯವರ ಶಾಸ್ತ್ರಪ್ರಸಾರ ಯೋಜನೆಯೂ ಸಫಲವಾಯಿತು, “ಗುರುಸಾರ್ವಭೌಮ ಸಂಸ ತ ಕಲಾಶಾಲೆ'ಯಲ್ಲಿ ವಿವಿಧಶಾಸ್ತ್ರಗಳನ್ನು ಅಧ್ಯಯನ ಮಾಡಿ ಅನೇಕ ವಿದ್ಯಾರ್ಥಿಗಳು ಮದ್ರಾಸ್ ವಿಶ್ವವಿದ್ಯಾನಿಲಯದ 'ಶಿರೋಮಣಿ' ವಿದ್ವತ್ಪರೀಕ್ಷೆಗಳು, ಮೈಸೂರಿನ ವಿವಿಧಶಾಸ್ತ್ರಗಳಲ್ಲಿ ವಿದ್ವತ್ ಪರೀಕ್ಷೆಗಳಿಗೆ ಕುಳಿತು ಉತ್ತಮ ತರಗತಿಯಲ್ಲಿ ಉತ್ತೀರ್ಣರಾಗಹತ್ತಿದರು. ಹೀಗೆ ಜ್ಞಾನಪ್ರಸಾರ ಅವ್ಯಾಹತವಾಗಿ ನೆರವೇರಲಾರಂಭಿಸಿತು. ಇವೆಲ್ಲದರಿಂದ ಮಂತ್ರಾಲಯವು ಜಗತ್ತಿನ ಜನತೆಯನ್ನಾಕರ್ಷಿಸು- ವಂತಾಯಿತು. ಇಂದು ಇಡೀ ಭಾರತದಲ್ಲಿ ಅಷ್ಟೇ ಏಕೆ, ವಿದೇಶಗಳಲ್ಲೂ ಶ್ರೀರಾಯರ ಮಹಿಮೆ ಪ್ರಸಾರವಾಗಿ ಕೋಟ್ಯಂತರ ಭಕ್ತರು ರಾಯರನ್ನು ಸೇವಿಸಿ ಇಷ್ಟಾರ್ಥಗಳನ್ನು ಪಡೆಯುವಂತಾಯಿತು. ಇದು ಶ್ರೀಸುಯಮೀಂದ್ರತೀರ್ಥರ ಸತತ ಪ್ರಯತ್ನ, ತಪಸ್ಸುಗಳ ಸೇವಾಫಲವೆಂದು ಘಂಟಾಘೋಷವಾಗಿ ಹೇಳಬಹುದು. ಆದ್ದರಿಂದಲೇ ಸುಜನರು ಸುಯಮೀಂದ್ರರನ್ನು “ಮಂತ್ರಾಲಯದ ಮಹಾಶಿಲ್ಪಿ'ಗಳೆಂದು ಗೌರವಿಸುವರು. 

ಶ್ರೀಯವರು ೨೫ ವರ್ಷಗಳ ಕಾಲ ಮಂತ್ರಾಲಯದಲ್ಲೇ ಇದ್ದು ಹಗಲಿರುಳು ರಾಯರ ಮಹಿಮಾ ಪ್ರಸಾರ ಮಾಡುತ್ತಾ ಬಂದ ಯಾತ್ರಿಕರ ಯೋಗಕ್ಷೇಮ - ಅನುಕೂಲಗಳ ಬಗ್ಗೆ ವಿಶೇಷ ಲಕ್ಷವಿತ್ತು ಸೌಕರ್ಯಗಳನ್ನೇರ್ಪಡಿಸಿ ನಿರಾಲೋಚನೆಯಿಂದ ಭಕ್ತರು ಶ್ರೀರಾಯರ ಸೇವೆಮಾಡಲು ಅವಕಾಶಮಾಡಿಕೊಡುತ್ತಿದ್ದುದರಿಂದ ಶ್ರೀಗುರುರಾಜರ ಮಹಿಮೆ ದೇಶದಲ್ಲೆಲ್ಲಾ ಪ್ರಸಾರವಾಗಿ ದೇಶದೇಶಗಳಿಂದ ವಿವಿಧ ರೋಗಾದು ಪದವಪೀಡಿತರಾಗಿ, ಜೀವನದಲ್ಲಿದುಃಖ-ನೋವುಗಳಿಂದ ಸಹಸ್ರಾರು ಜನರು ಮಂತ್ರಾಲಯಕ್ಕೆ ಬಂದು ರಾಯರ ಸೇವೆಮಾಡಿ ಕರುಣಾಳುಗಳಾದ ಗುರುಸಾರ್ವಭೌಮರ ಅನುಗ್ರಹದಿಂದ ತಮ್ಮೆಲ್ಲ, ರೋಗ-ರುಜಿನಗಳಿಂದ ಮುಕ್ತರಾಗಿ ತಮ್ಮ ಮನೋಭಿಷ್ಟಗಳನ್ನು ಪಡೆದು ಭಕ್ತಿಯಿಂದ ನಲಿದು ಕುಣಿದಾಡುವಂತಾಯಿತು. ಈ ಅಪೂರ್ವ ದೃಶ್ಯವು ಇಂದು ಮಂತ್ರಾಲಯದಲ್ಲಿ ನಿತ್ಯವೂ ಕಾಣಸಿಗುವ ಮಂಗಳಕರ ದೃಶ್ಯವಾಗಿದೆ. ಇದಕ್ಕೆ ಕಾರಣರು ಸುಯಮೀಂದ್ರತೀರ್ಥರು! 

ಸುಯಮೀಂದ್ರತೀರ್ಥರ ಕಾಲದಲ್ಲಿ ಮಂತ್ರಾಲಯವು ಅಭಿವೃದ್ಧಿಸಿ ಅಲ್ಲಿನ ಉತ್ಪತ್ತಿ ಅನೇಕ ಲಕ್ಷರೂಪಾಯಿಗಳಿ- ಗೇರುವಂತಾಯಿತು! ಮಹಾಸಂಸ್ಥಾನಾಭಿವೃದ್ಧಿಯೂ ಅಪಾರವಾಗಿ ಜರುಗಿತು. ಶ್ರೀಮಠದ ಉತ್ಪತ್ತಿ ನಲವತೈವತ್ತು ಸಾವಿರವಿದ್ದುದು ಅವರ ಕಾಲದಲ್ಲಿ ಹತ್ತಿಪ್ಪತ್ತು ಲಕ್ಷಗಳಿಗೇರಿತು. ಮಠದ ಕೈಬಿಟ್ಟುಹೋಗಿದ್ದ, ಪರಾಧೀನವಾಗಿದ್ದ ಕೋಟ್ಯಂತರ ರೂಪಾಯಿಗಳ ಗ್ರಾಮ, ಭೂಮಿ, ಕಟ್ಟಡಗಳು, ಪೂನಾ ಮುಂತಾದ ಆಸ್ತಿಗಳು ಮತ್ತೆ ಮಠದ ಸ್ವಾಧೀನಕ್ಕೆ ಬಂದಿತು. ಹೊಸದಾಗಿ ಇಂದು ಕೋಟ್ಯಂತರ ರೂಪಾಯಿಬಾಳುವ ಶಾಶ್ವತವಾದ ಆಸ್ತಿ-ಪಾಸ್ತಿ, ಕಟ್ಟಡಗಳಾದವು. ಅನೇಕ ಕಡೆ ಶ್ರೀಯವರು ಶ್ರೀಹರಿವಾಯುಗಳು ಮತ್ತು ಶ್ರೀರಾಯರ ಬೃಂದಾವನಗಳನ್ನು ಪ್ರತಿಷ್ಠಿಸಿದರು. ಶ್ರೀರಂಗ, ಕುಂಭಕೋಣ, ಚಿತ್ರದುರ, ಬೆಂಗಳೂರು, ಮೈಸೂರು, ಮದರಾಸು, ಪೂನಾ, ಮುಂತಾದ ಕಡೆ ಹತ್ತಿಪ್ಪತ್ತು ಲಕ್ಷರೂಗಳ ವರಮಾನ ಬರುವಂತೆ ಶ್ರೀಮಠದ ಆಸ್ತಿಗಳ ಅಭಿವೃದ್ಧಿಗಳಾದವು. 

ಇವೆಲ್ಲ ಮಹತ್ಕಾರ್ಯಗಳಾಗಿದ್ದು, ಶ್ರೀಮಠದ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿದ್ದು, ಪ್ರತಿಕೂಲ ವಾತಾವರಣ, ತೊಂದರೆ-ತೊಡಕುಗಳ ಸಂಕ್ರಾಂತಿ ಕಾಲದಲ್ಲಿ, ಎಲ್ಲ ಅನುಕೂಲಗಳಿದ್ದು, ಆರ್ಥಿಕ ಪರಿಸ್ಥಿತಿಯು ಅತ್ಯಂತ ಮೇಲ್ಮಟ್ಟದಲ್ಲಿದ್ದು, ವಾತಾವರಣವು ಹಿತಕರವೂ, ಅನುಕೂಲಕರವೂ ಆಗಿದ್ದಾಗ ಅಭಿವೃದ್ಧಿಮಾಡುವುದೊಂದು ಮಹತ್ಕಾರವಾಗಲಾರದು! ಏನೂ ಇಲ್ಲದ ಕಾಲದಲ್ಲಿ ಅನಾನುಕೂಲ ಪರಿಸ್ಥಿತಿಯಲ್ಲಿ ಅಭಿವೃದ್ಧಿಮಾಡುವುದೇ ಒಂದು ಮಹತ್ಸಾಧನೆ! ಅದನ್ನು ಮಾಡಿದವರು ಶ್ರೀಗಳವರು, ಹೀಗೆ ಇವೆಲ್ಲ ಮಹತ್ಕಾರಗಳು ತಮ್ಮ ಪರಿಶ್ರಮ; ಸತತ ಪ್ರಯತ್ನ, ತಪಸ್ಸುಗಳಿಂದಾಗಿದ್ದರೂ, ಸುಯಮೀಂದ್ರರು ಒಂದು ದಿನವೂ ಇವೆಲ್ಲಾನನ್ನಿಂದಾಯಿತೆಂದು ಹೇಳಿದ್ದನ್ನು ಯಾರೂ ಕೇಳಿಲ್ಲ! ಕೆಲವರು “ಸ್ವಾಮಿ, ಮಂತ್ರಾಲಯವು ಇಂತು ಅಭಿವೃದ್ಧಿಸಲು ತಾವೇ ಕಾರಣರು” ಎಂದು ಹೇಳಿದಾಗಲೆಲ್ಲ ಶ್ರೀಯವರು ಕಣ್ಣೀರು ಸುರಿಸುತ್ತಾ “ಛೇಛೇ, ಎಂತಹ ಮಾತಾಡುತ್ತಿರುವಿರಿ. ಇವೆಲ್ಲ ಕೇವಲ ಗುರುರಾಜರ ಮಹಿಮೆಯಿಂದ, ನಮ್ಮ ಗುರುಪಾದರ ಆಶೀರ್ವಾದಗಳಿಂದ ನೇರವೇರಿವೆ, ನಮ್ಮ ಅಲ್ಪ ಸೇವೆಗೆ ಸುಪ್ರಿತರಾಗಿ ರಾಯರು ತಮ್ಮ ಆಗಾಧಮಹಿಮೆಯನ್ನು ಪ್ರಕಟಿಸಿ ಇವೆಲ್ಲ ಕಾರ್ಯವನ್ನೂ ನೆರವೇರಿಸಿರುವರೇ ವಿನಃ ಇದರಲ್ಲಿ ನಮ್ಮ ಪ್ರಭಾವವೇನೂ ಇಲ್ಲ ! ಶ್ರೀರಾಯರು ಲಕ್ಷಾಂತರ ಭಕ್ತರಲ್ಲಿ ಅನುಗ್ರಹಮಾಡಿ ಹೀಗೆ ಕನಕನಿಧಿ ಸುರಿಸುತ್ತಿದ್ದಾರೆ! ನಾವು ವೈಯಕ್ತಿಕವಾಗಿ ದುಡಿದು ಇದನ್ನು ಸಂಪಾದಿಸಿ ಮಾಡಿಲ್ಲ! ಜನರು ಬರುವುದು ರಾಯರಿಗಾಗಿ! ಅಪಾರ ಧನ- ಸಂಪತ್ತುಗಳನ್ನರ್ಪಿಸುವುದೂ ರಾಯರಿಗಾಗಿ! ನಮಗಾಗಿ ಯಾರೂ ಬರುವುದಿಲ್ಲ! ನಮ್ಮಿಂದಾವುದೂ ಜರುಗಿಲ್ಲ. ಅದು ಸಾಧ್ಯವೂ ಇಲ್ಲ. ಕೇವಲ ಮಹಾಮಹಿಮರಾದ ಶ್ರೀರಾಯರಿಂದಲೇ ಇವೆಲ್ಲವೂ ಜರುಗುತ್ತಿದೆಯೇ ಹೊರತು ನಮ್ಮಿಂದಲ್ಲ!” ಎಂದು ಹೇಳುತ್ತಿದ್ದರು. ಶ್ರೀರಾಯರ ಮಹಾಮಹಿಮೆಯನ್ನು ಬಲ್ಲವರಾಗಿ, ಅವರನ್ನು ನಿಷ್ಕಾಮಭಾವನೆಯಿಂದ ಆರಾಧಿಸುತ್ತಾ ಆತ್ರೋದ್ಧಾರ- ಜಗತ್ತಿನ ಉದ್ಧಾರ-ಕಲ್ಯಾಣಗಳಿಗಾಗಿಯೇ ಅಹರ್ನಿಶಿಸಾತ್ವಿಕಭಾವನೆಯಿಂದ ಅದೊಂದು ತಪ್ಪಸ್ಸಿನಂತೆ ಆಚರಿಸುತ್ತಿದ್ದ ಶ್ರೀಗಳವರು 'ಎಲ್ಲವೂ ಶ್ರೀರಾಯರಿಂದ' ಎಂಬ ಸತ್ಯಸಂಗತಿಯನ್ನೇ ಬಿಚ್ಚುಮನದಿಂದ ಒಪ್ಪಿ ಯಾವ ಅಹಂಭಾವವೂ ಇಲ್ಲದೆ ಹೇಳುತ್ತಿದ್ದರು. ಅಂತೆಯೇ ಅವರು “ಶ್ರೀರಾಯರ ಕರುಣೆಯ ಕಂದರೆಂದು ಸುಜನರಿಂದ ಸ್ತುತ್ಯರಾದರು. 

ಶ್ರೀಸುಯಮೀಂದ್ರರು ಅಜಾತಶತ್ರುಗಳು, ಬೆಣ್ಣೆಯಂತೆ ಮೃದುವಾದ ಹೃದಯ, ದುಃಖಿಗಳಾದವರ ಕಷ್ಟವನ್ನವರೆಂದೂ ಸಹಿಸುತ್ತಿರಲಿಲ್ಲ. ಕಡುವೈರಿಯಾಗಿದ್ದರೂ, ಅಂಥವರ ಶ್ರೇಯಸ್ಸಾಗಬೇಕೆಂದು ಬಯಸಿ ಕೂಡಲೇ ಪರಿಹಾರ ಒದಗಿಸುತ್ತಿದ್ದರು. ತಮಗೆಷ್ಟೇ ದ್ರೋಹಬಗೆದಿರಲಿ; ಬಂದು ನಮಸ್ಕರಿಸಿದರೆ, ಹಿಂದಿನದೆಲ್ಲವೆನ್ನೂ ಮರೆತು, ಪ್ರೇಮದಿಂದ ಮಾತನಾಡಿಸಿ ಅನುಗ್ರಹಿಸಿ ಕಳಿಸುತ್ತಿದ್ದ ಕರುಣಾಳುಗಳವರು, ಅವರ ಶ್ರೇಯಸ್ಸಿಗಾಗಿ ಶ್ರೀರಾಯರಲ್ಲಿ ಪ್ರಾರ್ಥಿಸುವಂಥ ಮಾನವೀಯತೆ ಅವರದು! ಬಹುಶಃ ಇದು ಶ್ರೀಪ್ರಹ್ಲಾದಾವತಾರಿಗಳಾದ ಶ್ರೀರಾಯರ ವಂಶೀಕರಾದ ಶ್ರೀಯವರಿಗೆ ರಾಯರ ವರಪ್ರಸಾದದಿಂದಲೇ ಹುಟ್ಟಿನಿಂದಲೇ ಲಬವಾದ ಸಂಪತ್ತೆಂದು ಹೇಳಬಹುದು. 

ಶ್ರೀಯವರ ಜೀವನ ಅವರ ಆಚರಣೆಗಳು, ಬಹುಮುಖ ವ್ಯಕ್ತಿತ್ವ, ಅಸಾಧಾರಣ ಚರಿತೆಯನ್ನು ನಿರೂಪಿಸುವುದು ನಮ್ಮ ಅಭಿಲಾಷೆಯಲ್ಲ, ಅದಕ್ಕಾಗಿ ಬೇರೊಂದು ಗ್ರಂಥದೇ ನಿರ್ಮಿಸುವ ಹಂಬಲವಿದೆ. ಇಲ್ಲಿ ಶ್ರೀಯವರು ಕೈಗೊಂಡ ಕಾರ್ಯಗಳು, ಅದೆಂತು ಶ್ರೀರಾಯರ ಮಹಿಮಾಪ್ರಸಾರಕವಾಗಿ ಕೋಟ್ಯಂತರವಂತಾಯಿತು; ಮಂತ್ರಾಲಯವಿಂದು ಹೇಗೆ ಜಗತ್ತಿಗೆ ಅದ್ವಿತೀಯ ಕ್ಷೇತ್ರವಾಗಿ ಪರಿಣಮಿಸುವಂತಾಯಿತೆಂಬುದಷ್ಟನ್ನು ಮಾತ್ರ; ಈ ವಿಚಾರವನ್ನು ತಿಳಿಯದ ಆಧುನಿಕ ಯುವಕ ಭಕ್ತರಿಗೆ ತಿಳಿಸಿಕೊಡಲು, ಅದೂ ಶ್ರೀರಾಯರ ಮಹಿಮಾದ್ಯೋತಕವಾದ್ದರಿಂದ ನಿರೂಪಿಸುತ್ತಿದ್ದೇವೆ. 

ಶ್ರೀಮದಾಚಾರ್ಯರ ಮಹಾಪೀಠವನ್ನು ಮೂವತ್ತೂರು ವರ್ಷಕಾಲ ವಿಚಕ್ಷಣತೆಯಿಂದ ಪಾಲಿಸಿ, ಆದರ್ಶ ಪೀಠಾಧೀಶರು, ಜ್ಞಾನ, ವೈರಾಗ್ಯ, ಭಕ್ತಿಪೂರ್ಣರಾದ ತಪಸ್ವಿಗಳೆಂದು ಸರ್ವರಿಂದ ಸ್ತುತರಾಗಿ ಆಪಂಡಿತಪಾಮರರ ಮನ್ನಣೆಗೆ ಪಾತ್ರರಾಗಲು ಶ್ರೀಯವರ ಸೌಶೀಲ್ಯಾದಿ ಸದ್ಗುಣಗಳು, ಸ್ವಗುರು ಶ್ರೀಸುವತೀಂದ್ರತೀರ್ಥರ ಪೂರ್ಣಾನುಗ್ರಹ, ಶ್ರೀಹರಿ-ವಾಯು-ಗುರುರಾಜರಲ್ಲಿನ ಸಾತ್ವಿಕ ಭಕ್ತಿಗಳೇ ಕಾರಣವೆಂದರೆ ಅಚ್ಚರಿಯಲ್ಲ. 

ಶ್ರೀಯವರು ಮಾಧ್ವಸಮಾಜಕ್ಕೆ ಮಾಡಿದ ಮತ್ತೊಂದು ಮಹೋಪಕಾರವೆಂದರೆ ತಮ್ಮ ಆರೋಗ್ಯ ಸರಿಯಿಲ್ಲದಾದಾಗ ಶ್ರೀಮೂಲರಾಮರ ಪೂಜಾರಾಧನೆಗೆ ವಿಘ್ನವಾಗಬಾರದೆಂದು - ಆತ್ಮೀಯರು, ಪ್ರಮುಖ ಶಿಷ್ಯರು ಬೇಡವೆಂದರೂ ಕೇಳದೆ ತಮ್ಮ ಉತ್ತರಾಧಿಕಾರಿಗಳನ್ನು ಸ್ವೀಕರಿಸಿದ್ದು ! ದಿನಾಂಕ ೦೪-೧೧-೧೯೬೩ ರಂದು ರಾಯರ ಪೂರ್ವಾಶ್ರಮವಂಶೀಕರೂ ತಮ್ಮ ಪೂರ್ವಾಶ್ರಮ ಚಿಕ್ಕಪ್ಪಂದಿರಾದ ಶ್ರೀ ರಾಜಾ. ಸುಜ್ಞಾನೇಂದ್ರಾಚಾರ್ಯರ ದ್ವಿತೀಯಪುತ್ರರೂ, ಸಹೋದರರೂ, ಚತುಃಶಾಸ್ತ್ರಪಂಡಿತರೂ, ಆದಶ್ರೀರಾಜಾ ವೆಂಕಟರಾಘವೇಂದ್ರಾಚಾರ್ಯರಿಗೆ ಸಾವಿರಾರು ಜನ ಶಿಷ್ಯ, ಆತ್ಮೀಯ, ನಂಜನಗೂಡಿನ ಪ್ರಮುಖ ವೈದಿಕ-ಲೌಕಿಕ ವಿದ್ವಜ್ಜನರ, ಸರಕಾರಿ ಅಧಿಕಾರಿಗಳ ಸಮಕ್ಷ ಆಶ್ರಮಸ್ವೀಕಾರಕ್ಕೆ ಫಲಮಂತ್ರಾಕ್ಷತೆಯನ್ನನುಗ್ರಹಿಸಿ ಮರುದಿನ ೦೫-೧೧-೧೯೬೩ರಂದು ಸನಸರಾಗಿ ಬಂದ ಅವರಿಂದ ಗುರುಪಾದಪೂಜಾದಿಗಳನ್ನು ಸ್ವೀಕರಿಸಿ ಮಂತ್ರಮುದ್ರಾಧಾರಣ, ಗುರೂಪದೇಶ, ಮಹಾಮಂತ್ರೋಪದೇಶಗಳನ್ನು ಮಾಡಿ ಅವರನ್ನು ಮಹಾಚಾರ್ಯರ ವೇದಾಂತಸಾಮ್ರಾಜ್ಯ ವಿದ್ಯಾಪೀಠದಲ್ಲಿ ಮಂಡಿಸಿ 'ಸುಜಯಿಂದ್ರತೀರ್ಥಶ್ರೀಪಾದಂಗಳವರು' ಎಂಬ ಅಭಿಧಾನದಿಂದ ಸಾಮ್ರಾಜ್ಯಾಭಿಷೇಕಮಾಡಿದರು ಮತ್ತು ಸುಪ್ರಸನ್ನಚಿತ್ತರಾಗಿ ಶಿಷ್ಯರನ್ನು ಆಶೀರ್ವದಿಸಿ ಮಹಾಸಂಸ್ಥಾನ, ಮಂತ್ರಾಲಯಗಳ ಅಭಿವೃದ್ಧಿಗೆ ತಾವು ಹಾಕಿದ್ದ ಯೋಜನೆಗಳನ್ನು ಪೂರ್ಣಮಾಡಲು ಆಜ್ಞಾಪಿಸಿ ಚಿಕ್ಕಪಟ್ಟಿದೊಡನೆ ಮಂತ್ರಾಲಯಕ್ಕೆ ಕಳುಹಿಸಿ ಕೊಟ್ಟರು. ಅಂದು ಸುಯಮೀಂದ್ರರು ಸುಜಯೀಂದ್ರರಲ್ಲಿ ಮಾಡಿದ ಅನುಗ್ರಹದ ಫಲವನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ! 

ಶ್ರೀಸುಯಮೀಂದ್ರತೀರ್ಥರು ಮಹಾಸಂಸ್ಥಾನ, ಶ್ರೀಗುರುರಾಜರಿಗೆ ತಾವು ಮಾಡಬೇಕಾಗಿದ್ದ ಸೇವೆ ಪೂರ್ಣವಾಯಿತೆಂದು ಭಾವಿಸಿ ಸಮಾಧಾನಚಿತ್ತದಿಂದ ಆಮುಷ್ಟಿಕ ಸಾಧನೆಯಲ್ಲಿ ಮಗ್ನರಾದರು. ಬೆಂಗಳೂರಿನಲ್ಲಿ ಹರಿತತ್ವ-ಗುರುಮಹಿಮೆಗಳ ಉಪದೇಶ, ಜಪತಪಾದನುಷ್ಠಾನತತ್ಪರರಾಗಿ ಬೆಂಗಳೂರಿನ ಜನತೆಯನ್ನು ಪೊರೆಯುತ್ತಾ ತಾವೇ ಪ್ರತಿಷ್ಠಾಪನೆ ಮಾಡಿಸಿದ್ದ ಸೀತಾಪತಿ ಅಗ್ರಹಾರದ ಶ್ರೀರಾಯರ ಬೃಂದಾವನ ಸನ್ನಿಧಿಯಲ್ಲಿ ಹರಿ-ವಾಯು-ಗುರುರಾಜರ ವಿಶೇಷ ಪ್ರಾರ್ಥನಾಸಕ್ತರಾಗಿ ತಮ್ಮ ಅವತಾರ ಪರಿಸಮಾಪ್ತಿ ಕಾಲವನ್ನು ನಿರೀಕ್ಷಿಸುತ್ತಾ ಕಾಲಕಳೆಯಹತ್ತಿದರು. 

ಶ್ರೀಶಾಲಿವಾಹನ ಶಕೆ ೧೮೮೯ನೇ ಪರಾಭವಸಂ|| ಶುಕ್ಲ ಪಾಡ್ಯ (೧೧ನೇ ಜನವರಿ ೧೯೬೭) ಶ್ರೀಜಿತಾಮಿತ್ರರಾಯರ ಪುಣ್ಯದಿನ. ಅಂದು ಬೆಳಗಿನ ಝಾವ ಶ್ರೀಯವರ ಸ್ವಪ್ನದಲ್ಲಿ ಶ್ರೀರಾಯರು ದರ್ಶನವಿತ್ತು ಒಂದು ಬೆಳ್ಳಿಯ ತಟ್ಟೆಯ ತುಂಬಾ ಮಂತ್ರಾಕ್ಷತೆ, ಫಲಗಳು, ಪುಷ್ಪಾಹಾರಗಳನ್ನು ಶ್ರೀಸುಯಮೀಂದ್ರರಿಗೆ ನೀಡಿ “ಕೂಡಲೇ ಮಂತ್ರಾಲಯಕ್ಕೆ ಬರಬೇಕು” ಎಂದು ಆಜ್ಞಾಪಿಸಿದರು. ಎಚ್ಚರಗೊಂಡ ಶ್ರೀಗಳವರು ಸ್ವಪ್ನಾರ್ಥವನ್ನರಿತು ಆನಂದತುಂದಿಲರಾದರು. ಆನಂದದ ಕಣ್ಣೀರು ಸುರಿಸುತ್ತಾ ರಾಯರ ಪರಮಾನುಗ್ರಹವನ್ನು ಸ್ತುತಿಸುತ್ತಾ ಧ್ಯಾನಮಗ್ನರಾದರು. 

ಧನುರ್ಮಾಸವಾದ್ದರಿಂದ ಅದು ಶ್ರೀಜಿತಾಮಿತ್ರರಾಯರ ಆರಾಧನೆಯನ್ನು ಬಹುವೈಭವದಿಂದ ನೆರವೇರಿಸಿದರು. ಅವರು ಅಂದು ಆಚರಿಸಿದ ಮೂಲರಾಮರ ಪೂಜೆ ಅದ್ಭುತರಮ್ಯವಾಗಿತ್ತು. ದೇವರ ಪೂಜೆಯಲ್ಲಿ ತಲ್ಲೀನರಾದ್ದ ಆ ಮಹನೀಯರ ಮುಖವು ಸಾತ್ವಿಕತೇಜಸ್ಸಿನಿಂದ ಬೆಳಗುತ್ತಿತ್ತು. ಅಂದು ಗುರುಗಳು ಎಲ್ಲರೊಡನೆ ನಗುನಗುತ್ತಾ ಮಾತನಾಡಿ ಎಲ್ಲರನ್ನೂ ಆಶೀರ್ವದಿಸಿದರು. ಅದು ಊರಿಗೆ ಹೊರಡುವ ಹಿರಿಯರು ಕುಟುಂಬದವರೊಂದಿಗೆ ಬೀಳ್ಕೊಡುವುದನ್ನು ನೆನಪಿಗೆ ತರುತ್ತಿತ್ತು! ಅಂದು ಸಂಜೆ ದೀಪಾರಾಧನೆ-ಮಾಲಕೀಮಂಗಳಾರತಿ, ಫಲಮಂತ್ರಾಕ್ಷತಾಪ್ರದಾನವಾದ ಮೇಲೆ ಶ್ರೀಯವರಿಗೆ ವಿಶೇಷ ಆಯಾಸ ತಲೆದೋರಿತು. ವೈದ್ಯರು ಬಂದು ಪರೀಕ್ಷಿಸಿ 'ಶ್ರೀಗಳವರು ಇನ್ನು ಹೆಚ್ಚು ಕಾಲ ಜೀವಿಸಲಾರರು !' ಎಂದಾಗ ಸರ್ವರೂ ಹೌಹಾರಿದರು, ಮುಂದೇನು ಮಾಡುವುದೆಂದು ತಿಳಿಯದೇ ಭಯಗೊಂಡು ದುಃಖಪರಿತಪ್ತರಾದರು. ಆಗ ಶ್ರೀಯವರು ಪ್ರಸನ್ನಚಿತ್ತರಾಗಿ ತಮಗೆ ರಾಯರಿಂದ ಕರೆಬಂದಿರುವುದನ್ನು ತಿಳಿಸಿ ಯಾರೂ ದುಃಖಿಸಬಾರದೆಂದು ಹೇಳಿ “ನಾವು ಈಗಲೇ ಮಂತ್ರಾಲಯಕ್ಕೆ ಹೊರಡಬೇಕು. ಶ್ರೀರಾಯರ ಆಜ್ಞೆ! ಪ್ರಯಾಣಕ್ಕೆ ಎಲ್ಲ ವ್ಯವಸ್ಥೆ ಮಾಡಿರಿ” ಎಂದು ಆತ್ಮೀಯರಿಗೆ ಹೇಳಿದರು. ಆಗ ಶ್ರೀಪಾದಪುತ್ರರು, ಆತ್ಮೀಯರು “ಮಹಾಸ್ವಾಮಿ, ಒಂದೆರಡು ದಿನ ಸುಧಾರಿಸಿಕೊಂಡು ಹೊರಡಬಹುದಲ್ಲ” ಎಂದಾಗ ಶ್ರೀಯವರು ನಸುನಕ್ಕು “ನಾಳೆ ಶ್ರೀಮೂಲರಾಮ ಮಂತ್ರಾಲಯಲ್ಲೇ ಪೂಜೆಗೊಳ್ಳುತ್ತಾನೆ ! ನಾವು ಹೊರಡಲು ಕೂಡಲೇ ವ್ಯವಸ್ಥೆ ಮಾಡಿರಿ” ಎಂದು ಆಜ್ಞಾಪಿಸಿದರು.

ಶ್ರೀಯವರ ಅಪ್ಪಣೆಗೆ ಎದುರುಹೇಳುವ ಧೈರ್ಯವಿಲ್ಲದೆ ಮಠದವರು ಅಂದು ರಾತ್ರೆ ೧೧ ಗಂಟೆಗೆ ಎರಡು ಕಾರುಗಳನ್ನು ವ್ಯವಸ್ಥೆ ಮಾಡಿದರು. ಶ್ರೀಯವರು ದೇವರಪೆಟ್ಟಿಗೆ, ಆತ್ಮೀಯರು, ಶ್ರೀಪಾದಪುತ್ರರು, ಅವಶ್ಯ ಪರಿವಾರದೊಡನೆ ಬೆಂಗಳೂರಿನಿಂದ ಹೊರಟರು. ಶ್ರೀಹರಿ-ವಾಯು-ಗುರುರಾಜರ ಧ್ಯಾನದಲ್ಲಿಯೇ ಮಗ್ನರಾಗಿದ್ದ ಶ್ರೀಸುಯಮೀಂದ್ರತೀರ್ಥರು ಮಂತ್ರಾಲಯ ಸೀಮೆಯನ್ನು ತಲುಪಿದ ಕೂಡಲೇ, ಮಹಾದ್ವಾರದ ಬಳಿಯ ತುಂಗೆಯ ಹಳ್ಳದಲ್ಲಿ ಮುಖಮಾರ್ಜನ ಮಾಡಿಕೊಂಡು ಅಲ್ಲಿಂದಲೇ ರಾಯರಿಗೆ ಸಾಷ್ಟಂಗವೆರಗಿ ವಾಹನದಲ್ಲಿ ಮತ್ತೆ ಕುಳಿತು ಧ್ಯಾನಾಸಕ್ತರಾಗಿದ್ದ ಶ್ರೀಗಳವರು ಮಂತ್ರಾಲಯವನ್ನು ಸೇರುವಷ್ಟರಲ್ಲಿ “ನಾರಾಯಣ ನಾರಾಯಣ” ಎಂದು ಉಚ್ಚರಿಸಿದ್ದು ಮಾತ್ರ ಜೊತೆಯಲ್ಲಿದ್ದವರಿಗೆ ಕೇಳಿಸಿತು. 

ಆದರೆ ಸುಯಮೀಂದ್ರತೀರ್ಥರು ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿ ಹರಿಮಂದಿರಕ್ಕೆ ಚಿತ್ರೆಸಿಬಿಟ್ಟರು! ಗುರುರಾಜರ ವರದಿಂದ ಅವತರಿಸಿದ ಮಹಾನುಭಾವರು ಗುರುರಾಜರ ಸನ್ನಿಧಿಗೆ ಬಂದು ಇಹಲೋಕ ವ್ಯಾಪಾರವನ್ನು ಮುಗಿಸಿ ನಾರಾಯಣ ಧ್ಯಾನಪರರಾದರು! ಮಂತ್ರಾಲಯದಿಂದ ಹೊರಹೊಮ್ಮಿ ಬಂದಿದ್ದ ಜ್ಯೋತಿ ಮಂತ್ರಾಲಯದಲ್ಲಿಯೇ ಲೀನವಾಗಿ ಅಮರವಾಯಿತು ! 

ಅಂದು ನಾಲ್ಕಾರು ಸಹಸ್ರ ಆಸ್ತಿಕ ಜನರು, ಪಂಡಿತರು, ವಿದ್ಯಾರ್ಥಿಗಳು ಶಿಷ್ಯರು, ಭಕ್ತರು, ಹೆಂಗಸರು, ಮಕ್ಕಳುಗಳೂ ಸುಯಮೀಂದ್ರ ಗುರುಗಳ ಚರಮ ದರ್ಶನಪಡೆದು ಅವರ ಸದ್ಗುಣಗಳನ್ನು ಕೊಂಡಾಡಿ ಭಕ್ತಿಪ್ರಣಾಮಗಳನ್ನು ಸಮರ್ಪಿಸಿ ಕೃತಾರ್ಥರಾದರು. 

ಶ್ರೀಸುಯಮೀಂದ್ರತೀರ್ಥರ ವರಕುಮಾರರಾದ ಪೂಜ್ಯ ಶ್ರೀಸುಜಯೊಂದ್ರತೀರ್ಥ ಶ್ರೀಪಾದಂಗಳವರು ಶಾಲಿವಾಹನಶಕೆ ೧೮೮೯ನೇ ಪರಾಭವ ಸಂ || ಪುಷ್ಪ ಶುಕ್ಲ ಬಿದಿಗೆ ದಿನಾಂಕ ೧೨-೦೧-೧೯೬೭ ರಂದು ಶ್ರೀಸುಯಮೀಂದ್ರ ಗುರುಗಳ ಬೃಂದಾವನ ಪ್ರತಿಷ್ಠಾಮಹೋತ್ಸವವನ್ನೂ ಮಹಾಸಮಾರಾಧನೆಯನ್ನೂ ವೈಭವದಿಂದ, ಭಕ್ತಿ ಶ್ರದಾದಿಗಳಿಂದ ನೆರವೇರಿಸಿದರು, ಶ್ರೀಮೂಲರಾಮರ ಪೂಜೆಯನ್ನು ನೆರವೇರಿಸಿ ಶ್ರೀಸುಜಯೀಂದ್ರರು ಸುಯಮೀಂದ್ರರ ಬೃಂದಾವನದ ಮೇಲೆ ಶ್ರೀಮೂಲರಾಮ- ದಿಗ್ವಿಜಯರಾಮ್‌-ಜಯರಾಮ-ಸಂತಾನಗೋಪಾಲಕೃಷ್ಣದೇವರನ್ನು ಮಂಡಿಸಿ ಕನಕಾಭಿಷೇಕಮಾಡಿ, ಮಹಾಮಂಗಳಾರತಿಮಾಡಿ ಆನಂದಬಾಷ್ಪಸಿಕ್ತನಯನರಾಗಿ ಭಕ್ತಿಯಿಂದ ಗುರುಗಳ ಮೇಲೆ ಚರಮಶ್ಲೋಕವನ್ನು ರಚಿಸಿ ಹೇಳಿ ಸಮರ್ಪಿಸಿದರು. 

“ಸುಖತೀರ್ಥಮತಾಬೀಂದುಂ ಸುಧೀಂದ್ರಸುತಸೇವಕಮ್ | ಸುಧಾಪರಿಮಳಾಸಕ್ತಂ ಸುಯಮೀಂದ್ರಗುರುಂ ಭಜೇ ||” 

ಇಂತು ಮೂವತ್ತೂರು ವರ್ಷಗಳ ಕಾಲ ಮಹಾಸಂಸ್ಥಾನವನ್ನಾಳಿ, ಅನೇಕ ಮಹತ್ವಪೂರ್ಣಕಾರಗಳನ್ನೆಸಗಿ, ತಮ್ಮ ಜೀವನದ ಗುರಿಯನ್ನು ಸಾಧಿಸಿ ಶ್ರೀಗುರುರಾಜರ ಮಹಿಮಾಪ್ರಸಾರವನ್ನು ಮಾಡಿ, ಮಹಾಮಂತ್ರಾಲಯದ ಅಭಿವೃದ್ಧಿಯನ್ನೆಸಗಿ ರಾಯರ ಪರಮಾನುಗ್ರಹಕ್ಕೆ ಪಾತ್ರರಾಗಿ 'ಶ್ರೀರಾಯರ ಕರುಣೆಯ ಕಂದ, ಮಂತ್ರಾಲಯ ಮಹಾಶಿಲ್ಪಿ'ಗಳೆಂದು ಖ್ಯಾತರಾದ ಶ್ರೀಸುಯಮೀಂದ್ರತೀರ್ಥರು ಶ್ರೀರಾಯರ ಸನ್ನಿಧಿಯಲ್ಲಿ ಸ್ವಗುರು-ಸುವ್ರತೀಂದ್ರತೀರ್ಥರು ಹಾಗೂ ದೂರ್ವಾಸಾಂಶರೂ, ಮಹಾಮಹಿಮರೂ ಆದ ಶ್ರೀಸುಧರ್ಮೇಂದ್ರತೀರ್ಥರ ಸನಿಹದಲ್ಲಿ ಬೃಂದಾವನಸ್ಥರಾಗಿರುವುದೇ ಸುಯಮೀಂದ್ರತೀರ್ಥರ ಮಹಿಮೆಗೆ ಸಾಕ್ಷಿಯಾಗಿದೆ.