ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

೯. ಮಂತ್ರಾಲಯದ ಮಹಾಶಿಲ್ಪಿಗಳು

ಶ್ರೀಮಂತ್ರಾಲಯ ಕ್ಷೇತ್ರದ ಅಭಿವೃದ್ಧಿ, ರಾಯರ ಮಹಿಮಾ ಪ್ರಸಾರಗಳನ್ನು ನೆರವೇರಿಸಿದ ಕೀರ್ತಿ (೧) ಶ್ರೀಸುಶೀಲೇಂದ್ರ- ತೀರ್ಥರು, (೨) ಶ್ರೀಸುವತೀಂದ್ರತೀರ್ಥರು, (೩) ಶ್ರೀಸುಯಮೀಂದ್ರತೀರ್ಥರು ಮತ್ತು ಅವರ ಮರಕುಮಾರಕಾದ (೪) ಶ್ರೀಸುಜಮೀಂದ್ರ ತೀರ್ಥರು ಈ ನಾಲ್ವರು ಮಹನೀಯರಿಗೆ ಸಲ್ಲುವುದು. 

(೨) ಶ್ರೀಸುವ್ರತೀಂದ್ರತೀರ್ಥರು

ಶ್ರೀಸುವ್ರತೀಂದ್ರರ ಪೂರ್ವಿಕರು ಚಿತ್ರದುರ್ಗದ ನಾಯಕರ ಆಸ್ಥಾನದಲ್ಲಿ ಮಹಾಪಂಡಿತರಾಗಿದ್ದವರು. ಪಾಷಿಕವಂಶದ ಹರಿತಸಗೋತ್ರದ ಈ ಮನೆತನದವರು ಶ್ರೀರಾಯರ ಪೂರ್ವಾಶ್ರಮ ದೌಹಿಶ್ರ ಸಂತತಿಯವರು. ಶ್ರೀಹುಲಿಯಾಚಾರರು ಚತುಶಾಸ್ತ್ರ ಪಂಡಿತರಾಗಿದ್ದರು. ಇವರ ಮಕ್ಕಳು ಹನುಮಂತಾಚಾರರು. ಇವರು ತಂದೆಯವರಲ್ಲಿ ಮತ್ತು ಶ್ರೀಸುಜ್ಞಾನೇಂದ್ರರಲ್ಲಿ ನ್ಯಾಯ- ವೇದಾಂತಾದಿಶಾಸ್ತ್ರಗಳನ್ನು ಅಧ್ಯಯನಮಾಡಿ ಮಹಾಪಂಡಿತರಾಗಿದ್ದರು. ಈ ಹುಲಿ ಹನುಮಂತಾಚಾರ್ಯರಿಗೆ ಶ್ರೀಸುಶೀಲೇಂದ್ರತೀರ್ಥರ ಪೂರ್ವಾಶ್ರಮ ಸೋದರತ್ತೆಯವರನ್ನು ಕೊಟ್ಟು ಲಗ್ನವಾಗಿತ್ತು. ಈ ದಂಪತಿಗಳ ಪುತ್ರರೇ ಶ್ರೀಕೃಷ್ಣಚಾರರು. 

ಕೃಷ್ಣಾಚಾರ್ಯರು ತಂದೆಯವರಲ್ಲೂ, ಶ್ರೀಸುಶೀಲೇಂದ್ರರಲ್ಲೂ ನ್ಯಾಯವೇದಾಂತಾದಿಶಾಸ್ತ್ರಗಳನ್ನು ಅಧ್ಯಯನಮಾಡಿ ಶ್ರೀಮಠದ ಅಧಿಕಾರಿಗಳಲ್ಲೊಬ್ಬರಾಗಿದ್ದು ಶ್ರೀಸುಶೀಲೇಂದ್ರರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದರು, ಸದಾಚಾರಸಂಪನ್ನರೂ ಕೃಷ್ಣಾಚಾರರೇ ಮಹಾಸಂಸ್ಥಾನಕ್ಕೆ ಅರ್ಹರೆಂದು ಶ್ರೀಸುಶೀಲೇಂದ್ರರು ಅವರಿಗೆ “ಶ್ರೀಸುವ್ರತೀಂದ್ರತೀರ್ಥರೆಂಬ ಅಭಿಧಾನದಿಂದ ವೇದಾಂತ ಸಾಮ್ರಾಜ್ಯಾಭಿಷೇಕ ಮಾಡಿದರು. 

ಶ್ರೀಸುವ್ರತೀಂದ್ರತೀರ್ಥರು ಪೀಠಾಧಿಪತಿಗಳಾದ ಮೇಲೆ ಸಂಚಾರ ಕೈಗೊಂಡರು. ದಕ್ಷಿಣಭಾರತದಲ್ಲಿ ವೈಭವದ ದಿಗ್ವಿಜಯ ಯಾತ್ರೆ ಸಾಗಿತು. ಶ್ರೀಯವರು ಜಪತಪಾದನುಷ್ಠಾನ ಶ್ರೀಮೂಲರಾಮದೇವರ ಪೂಜಾರಾಧನೆ ತೀರ್ಥಪ್ರಸಾದವಿತರಣ, ಪಾಠಪ್ರವಚನ, ಪರವಾದಿ ದಿಗ್ವಿಜಯ, ದೈತಸಿದ್ಧಾಂತಸ್ಥಾಪನೆಗಳಿಂದ ಮಹಾಸಂಸ್ಥಾನದ ಕೀರ್ತಿಯನ್ನು ಬೆಳಗಿಸುತ್ತಾ ದಕ್ಷಿಣಭಾರತದ ಸಂಸ್ಥಾನೀಕರು ಲೌಕಿಕ ವೈದಿಕವಿದ್ವಜ್ಜನರು, ಧರ್ಮಾಭಿಮಾನಿಗಳ ವಿಶೇಷ ಗೌರವಾದರಗಳಿಗೆ ಪಾತ್ರರಾಗಿ ಸೇವಿತರಾದರು. ಶ್ರೀಗುರುರಾಜರ ಮಹಿಮಾ ಪ್ರಸಾರವೇ ಶ್ರೀಯವರ ದಿಗ್ವಿಜಯದ ಉದ್ದಿಶ್ಯವಾಗಿತ್ತು. ಅದು ಅತ್ಯಂತ ಯಶಸ್ವಿಯಾಗಿ ಜರುಗಹತ್ತಿತ್ತು. ಶ್ರೀಯವರ ಪ್ರಭಾವದಿಂದಾಗಿ ಸಹಸ್ರಾರುಜನರು ಶ್ರೀರಾಯರ ಭಕ್ತರಾದರು. ಶ್ರೀಯವರ ಅಧಿಪತ್ಯದಲ್ಲಿ ಅನೇಕ ಅಸಾಧಾರಣ ಕಾರಗಳು ಜರುಗಿ ಮಹಾಸಂಸ್ಥಾನದ ಮತ್ತು ಶ್ರೀಗಳವರ ಕೀರ್ತಿಯು ಜಗಜ್ಜನಿತವಾಯಿತು. ಇವುಗಳಲ್ಲಿ ಒಂದನ್ನಿಲ್ಲಿನಿರೂಪಿಸುವುದು ಅವಶ್ಯವಾಗಿದೆ. 

ಶ್ರೀಪಾದಂಗಳವರು ಕುಂಭಕೋಣದಲ್ಲಿ ಶ್ರೀವಿಜಯೀಂದ್ರಸ್ವಾಮಿಗಳವರ ಬೃಂದಾವನಸನ್ನಿಧಿಯಲ್ಲಿ ತಮ್ಮ ಗುರುಗಳ ಮಹಾಸಮಾರಾಧನೆಯನ್ನು ಅತಿ ವ್ಯಾಪಕ ರೀತಿಯಿಂದ ನೆರವೇರಿಸಿದರು. ಶ್ರೀಮಠದ ದಿವಾನರೂ ಶ್ರೀಸುಕೃತೀಂದ್ರರ ಪೂರ್ವಾಶ್ರಮಪುತ್ರರೂ ಆದ ಶ್ರೀ ರಾಜಾ. ಶ್ರೀನಿವಾಸಮೂತ್ರ್ರಾಚಾರರು ಶ್ರೀಗುರುಗಳ ಸಮಸ್ತಕಾರಗಳಲ್ಲಿ ಬೆಂಬಲರಾಗಿದ್ದಂತೆ ಈ ಮಹಾಸಮಾರಂಭದ ನಿರ್ವಹಣೆಯಲ್ಲಿಯೂ ಮುಖ್ಯಪಾತ್ರವಹಿಸಿದ್ದರು. ಮಹಾಸಮಾರಾಧನೆ, ಷಡರ್ಶನ ವಿದ್ವನ್ಮಹಾಸಭೆಯ ಸಮಸ್ತವ್ಯವಸ್ಥೆಯನ್ನೂ ಆಚಾರರು ತುಂಬಾ ಉತ್ಸಾಹ ದಕ್ಷತೆಗಳಿಂದ ನೆರವೇರಿಸಿದರು. 

ಕುಂಭಕೋಣದಲ್ಲಿ ಶ್ರೀಸುವ್ರತೀಂದ್ರತೀರ್ಥರು ನೆರವೇರಿಸಿದ ಈ ಷದರ್ಶನ ವಿದ್ವನ್ಮಹಾಸಭೆಯು ಈ ಶತಮಾನದ ಅತ್ಯಂತ ವೈಭವದ, ಮಹತ್ವಪೂರ್ಣಘಟನೆಯಾಗಿದ್ದು ಶ್ರೀಮದಾಚಾರರ ಮಹಾಸಂಸ್ಥಾನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಟ್ಟಂತಹುದು. ೧೯೩೦ರ ಸುಮಾರಿನಲ್ಲಿ ದಕ್ಷಿಣಭಾರತದಲ್ಲಿ ಪ್ರಸಿದ್ಧರಾಗಿದ್ದ ಎಲ್ಲಾದಿಗ್ಧಂತಿತ್ರಿಮತಸ್ಥ ಪಂಡಿತರೂ ಈ ಮಾಹಾಧಿವೇಶನದಲ್ಲಿ ಪಾಲ್ಗೊಂಡಿದ್ದರು. ಭಾರತದಲ್ಲೇ ನಾಯಶಾಸ್ತ್ರದ ಉದ್ಘಾಮಪಂಡಿತರೆಂದು ಖ್ಯಾತರಾಗಿದ್ದ ಎಲತ್ತೂರು ಕೃಷ್ಣಚಾರರು. ಕಪಿಸ್ಥಲಂ ದೇಶಿಕಾಚಾರರು, ವಿರೂಪಾಕ್ಷಶಾಸ್ತಿಗಳು (ಇವರು ಮುಂದೆ ಕೂಡ್ಲಿ ಶೃಂಗೇರಿ ಮಠಾಧೀಶರಾದರು). ಅಪ್ಪಯ್ಯ ದೀಕ್ಷಿತರ ವಂಶೀಕರಾದ ಅತವಿದಾಚಾರರು, ಅಭಿನವಬಾಣಭಟ್ಟರೆಂದು ಖ್ಯಾತರಾದ ಆರ್.ವಿ. ಕೃಷ್ಣಮಾಚಾರರು, ಮಿಮಾಂಸಾಶಾಸ್ತ್ರಕೋವಿದರಾದ ವೈದ್ಯನಾಥಶಾಸ್ತ್ರಿಗಳು, ಚಕ್ರವರ್ತೃಂಗಾರರು, ದೊಡ್ಡಬಳ್ಳಾಪುರ ವಾಸುದೇವಾಚಾರರು ಅಷ್ಟಪತ್ರಿ (ತಿರುವಾದಿ) ಎನ್. ವಿಜಯಿಂದ್ರಾಚಾರರು. ವೇದಾಂತವಿಚಕ್ಷಣ ಕಟ್ಟೆ ಗುರುರಾಜಾಚಾರರು, ಆಚಾರ ವೆಂಕೋಬಾಚಾರ್ಯರು, ದುರ್ಗ೦ ಭೀಮಾಚಾರರು, ಕುಂಜಂಬೇಡು ಶ್ಯಾಮಾಚಾರ್ಯರು, ಧಡೇಸೂಗೂರು ವೆಂಕೋಬಾಚಾರ್ಯರು, ಮಧುರೆ ವೇದವ್ಯಾಸಾಚಾರರೇ ಮೊದಲಾದ ವಿದ್ವತ್‌ ಶ್ರೇಷ್ಠರೆಲ್ಲರೂ ಸಭೆಯನ್ನು ಅಲಂಕರಿಸಿದ್ದರು, ಇದರಂತೆ ನ್ಯಾಯ, ಮೀಮಾಂಸಾ, ವ್ಯಾಕರಣ, ಧರ್ಮಶಾಸ್ತ್ರ, ದೈತಾದೈತ, ವಿಶಿಷ್ಟಾತ, ಸಾಹಿತ್ಯಶಾಸ್ತ್ರವಿಶಾರದಾದ ನೂರಾರುಜನ ಪಂಡಿತರೂ - ವಿದ್ಯಾರ್ಥಿಗಳೂ, ಕವಿ-ಸಾಹಿತಿ-ಹರಿದಾಸರೂ, ಕಲೆಗಾರರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದು ಇಪ್ಪತ್ತನೆಯ ಶತಮಾನದ ಅಭೂತಪೂರ್ವ ಮಹಾಸಭೆಯೆನಿಸಿದ್ದಿತು. ಐದಾರು ಸಹಸ್ರಜನ ವೈದಿಕ-ಲೌಕಿಕ-ಧರ್ಮಾಭಿಮಾನಿಗಳು ಕೃತಾರ್ಥರಾದರು. ಸಭೆಯು ಶ್ರೀಪಾದಪುತ್ರ ದಿವಾನ್‌ ರಾಜಾ ಶ್ರೀನಿವಾಸಮೂತ್ರ್ರಾಚಾರ, ಶ್ರೀದುರ್ಗ೦ ಭೀಮಾಚಾರರ ಮೇಲ್ವಿಚಾರಣೆಯಲ್ಲಿ ಅದ್ಧೂರಿಯಿಂದ ಜರುಗಹತ್ತಿತ್ತು. 

ಮಹಾಸಭೆಯಲ್ಲಿ ಎಲ್ಲಾ ಶಾಸ್ತ್ರಗಳಲ್ಲಿಯೂ ವಾಕ್ಯಾರ್ಥಗಳಾಗುತ್ತಿತ್ತು. ಷಡ್ಡರ್ಶನಗಳಲ್ಲಿ ಪ್ರಕಾಂಡ ಪಂಡಿತರ ವಾಕ್ಯಾರ್ಥವಾಗುತ್ತಿದ್ದುರಿಂದ ಶ್ರೀಸುವ್ರತೀಂದ್ರತೀರ್ಥರೇ ವಾಕ್ಯಾರ್ಥದ ಮಧ್ಯಸ್ಥರಾಗಬೇಕೆಂಬ ಪಂಡಿತರ ಪ್ರಾರ್ಥನೆಯಂತೆ ಶ್ರೀಯವರು ಮಧ್ಯಸ್ಥರಾದರು. ಮೂರುದಿನಗಳ ಕಾಲ ಏಕಪ್ರಕಾರವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನ್ಯಾಯಶಾಸ್ತ್ರದ ಮೇಲೆ ವಿಶೇಷ ಚರ್ಚೆ ವಾಕ್ಯಾರ್ಥಗಳಾದವು. ವ್ಯುತ್ಪತ್ತಿವಾದದಲ್ಲಿ "ಪಶುನಾ ಯಜೇತ” ಎಂಬುದೇ ವಾಕ್ಯಾರ್ಥ ವಿಷಯವಾಯಿತು. ಅದರಲ್ಲಿ ಭಾಗವಹಿಸಿದ್ದ ಉಭಯಪಕ್ಷದವರು ಪ್ರಕಾಂಡಪಂಡಿತರೂ, ವಾದಕೋವಿದರೂ, ಪ್ರತಿಭಾನ್ವಿತರೂ ಆಗಿದ್ದರಿಂದ ವಾಕ್ಯಾರ್ಥವು ಅತಿರಭಸದಿಂದ ನೆರವೇರಲಾರಂಭಿಸಿತು. ವಾಕ್ಯಾರ್ಥವು ವಿಕೋಪಕ್ಕೆ ಹೋಗುವ ಸಂದರ್ಭ ಉಂಟಾದಾಗ ಶ್ರೀಸುವ್ರತೀಂದ್ರತೀರ್ಥಶ್ರೀಪಾದಂಗಳವರು ಮಧ್ಯೆ ಪ್ರವೇಶಿಸಿ, ಉಭಯಪಕ್ಷಗಳ ಆವರೆಗಿನ ವಾದವನ್ನು ಸಮಗ್ರವಾಗಿ ಸಮಂಜಸವಾಗಿ ಅನುವಾದಮಾಡಿ, ಉಭಯ ಪಕ್ಷದ ಪಂಡಿತರಿಗೂ ಸಮ್ಮತವಾಗುವಂತೆ ನಿರ್ಣಯವನ್ನು ನೀಡಿದರು. ಹತ್ತು ನಿಮಿಷಗಳ ಕಾಲ ಪಂಡಿತಮಂಡಲಿ, ಸಭಾಸದರೆಲ್ಲರೂ ಕರತಾಡನ, ಹರ್ಷಧ್ವನಿಗಳಿಂದ ಶ್ರೀಯವರ ಪಾಂಡಿತ್ಯಾತಿಶಯವನ್ನು ಕೊಂಡಾಡಿದರು. 

ಶ್ರೀಯವರ ನ್ಯಾಯಶಾಸ್ತ್ರದಲ್ಲಿನ ಅಪಾರಪಾಂಡಿತ್ಯ, ಅಸಾಧಾರಣ ಅನುವಾದ ಕ್ರಮ, ವಿದ್ದತ್ತೂರ್ಣ ವಾಗೈಖರಿಗಳನ್ನು ಕಂಡು ಪಂಡಿತಮಂಡಲಿ ಆಶ್ಚರ್ಯಾನಂದಭರಿತವಾಯಿತು. ಕಪಿಸ್ಥಲಂ ದೇಶಿಕಾಚಾರರು ಆನಂದಬಾಷ್ಪ ಸುರಿಸುತ್ತಾ ಮೈಮರೆತು ತಲೆದೂಗಿದರು. ಶ್ರೀವೈಷ್ಣವರಲ್ಲಿ ಸ್ವಯಂ ಆಚಾರರಾದ ದೇಶಿಕಾಚಾರರು ಮೇಲೆದ್ದು ಟೊಂಕಕ್ಕೆ ವಸ್ತ್ರ ಸುತ್ತಿ ಶ್ರೀಪಾದಂಗಳವರಿಗೆ ದೀರ್ಘದಂಡ ನಮಸ್ಕಾರ ಮಾಡಿ ತಮ್ಮ ಆನಂದವನ್ನು ಹತ್ತಿಕ್ಕಲಾಗದೆ - 

“ಸೋಮಾತ್ಸಮನಿಸರತಾಂಸುರಗುರೋ‌ದಾರಮಂಭೋನಿಧೇಃ | 

ಗಾಂಭೀರಂ ಮರುತಾಂ ಗುರೋಶ್ಚತುರತಾಂ ಸೈರಂ ಹಿಮಾದ್ರೇರಪಿ || ಸಾರೋದ್ಧಾರನಯೇನ ಸಾರಸಭುವಾ ಸಂಗ್ರಹ ಸಂಮೋದತಃ | ಸೃಷ್ಟೋಯಂ ಜಗತೀತಲೇ ವಿಜಯತೇ ಶ್ರೀಸುವ್ರತೀಂದ್ರಗುರುಃ ||” 

ಎಂಬ ಆಶುಕವಿತೆಯನ್ನು ರಚಿಸಿ ಶ್ರೀಸುವ್ರತೀಂದ್ರತೀರ್ಥಶ್ರೀಪಾದಂಗಳವರನ್ನು ಸ್ತುತಿಸಿ ಅಭಿವಂದಿಸಿದರು. ಅದನ್ನು ಕೇಳಿ ಸಮಗ್ರಸಭೆ ಜಯ ಜಯಕಾರ ಮಾಡಿ ತನ್ನ ಆನಂದವನ್ನು ವ್ಯಕ್ತಪಡಿಸಿತು. 

ಇದು ಮಹಾಸಂಸ್ಥಾನದ ಅವಿಸ್ಮರಣೀಯ ದಿಗ್ವಿಜಯವಾಯಿತು. ಶ್ರೀಯವರ ಯಶಶ್ಚಂದ್ರಿಕೆ ದಕ್ಷಿಣಭಾರತದಲೆಲ್ಲಾ ಹರಡಿತು. ಈ ದಿಗ್ವಿಜಯವನ್ನು ಸ್ವಗುರು ಶ್ರೀಸುಶಿಲೇಂದ್ರತೀರ್ಥ-ಶ್ರೀರಾಘವೇಂದ್ರತೀರ್ಥ-ಶ್ರೀವಿಜಯೀಂದ್ರತೀರ್ಥಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮೂಲರಾಮಚಂದ್ರದೇವರಿಗೆ ಸಮರ್ಪಿಸಿದ ಶ್ರೀಗಳವರು ವಿದ್ವಾಂಸರು ವಿದ್ಯಾರ್ಥಿಗಳು-ಕವಿ-ಸಾಹಿತಿಗಳು ನೂರಾರು ಜನರಿಗೆ ಸುವರ್ಣ, ರಜತ, ಪಾತ್ರೆಗಳು, ಪೀತಾಂಬರ, ಶಾಲು, ವಸ್ತ್ರಉದಾರ ಸಂಭಾವನೆಗಳನ್ನು ಅನುಗ್ರಹಿಸಿ ಸಂತೋಷಪಡಿಸಿದರು. 

ಗುರುರಾಜರು ಸ್ವಪ್ನದಲ್ಲಿ ಸೂಚಿಸಿದಂತೆ ಸಂಚಾರಕ್ರಮದಿಂದ ಮಂತ್ರಾಲಯಕ್ಕೆ ಬಂದ ಶ್ರೀಗಳವರಿಗೆ ದೇಹಾಲಸ್ಯವಾಯಿತು, ಬಹು ಬಗೆಯ ಔಷಧೋಪಚಾರಗಳಾದರೂ ಪ್ರಯೋಜನವಾಗಲಿಲ್ಲ. ಶ್ರೀಗುರುರಾಜರು ತಮ್ಮನ್ನು ಪವಿತ್ರ ಸನ್ನಿಧಿಯಲ್ಲಿ ಯಾರಿಗೂ ದೊರಕದ ಸ್ಥಾನವಿತ್ತು ಅನುಗ್ರಹಿಸಲೆಂದೇ ತಮ್ಮನ್ನು ಕರೆಯಿಸಿಕೊಂಡಾಡಿದ್ದಾರೆಂದು ನಂಬಿದ ಶ್ರೀಗಳವರು ಮಹಾಸಂಸ್ಥಾನದ ಪೂಜಾರಾಧನೆಗಳಿಗೆ ವ್ಯತ್ಯಯ ಬರಬಾರದೆಂದು ಭಾವಿಸಿ ತಮ್ಮ ಉತ್ತರಾಧಿಕಾರಿಗಳನ್ನು ನಿಯಮಿಸಲು ನಿಶ್ಚಯಿಸಿದರು. ಶ್ರೀರಾಯರ ಪೂರ್ವಾಶ್ರಮವಂಶಸಂಜಾತರೂ, ಶ್ರೀಗುರುರಾಜರ ವರಬಲದಿಂದ ಜನಿಸಿದವರೂ, ತಮ್ಮ ಪರಮಗುರುಗಳಾದ ಶ್ರೀಸುಕೃತೀಂದ್ರತೀರ್ಥರ ಪೂರ್ವಾಶ್ರಮ ಪುತ್ರರೂ, ಶ್ರೇಷ್ಠಪಂಡಿತರೂ, ಶ್ರೀಗುರುರಾಜರ ಪರಮಭಕ್ತರೂ, ಆಡಳಿತವಿಚಕ್ಷಣರೂ, ಜನಪ್ರಿಯರೂ ಆದ ಶ್ರೀ ರಾಜಾ, ಶ್ರೀನಿವಾಸಮೂರ್ತ್ಯಾಚಾರರಿಗೆ, ಶ್ರೀಮುಖ ಸಂವತ್ಸರದ ವೈಶಾಖ ಶುಕ್ಲ ಚತುರ್ಥಿ (ಕ್ರಿ.ಸ. ೧೯೩೩) ದಿವಸ ಸಕಲ ವೈದಿಕ - ಲೌಕಿಕ ವಿದ್ವಜ್ಜನರ ಸಮಕ್ಷ ಪರಮಹಂಸಾಶ್ರಮ ಸ್ವೀಕಾರಕ್ಕೆ ಫಲಮಂತ್ರಾಕ್ಷತೆ ದಯಪಾಲಿಸಿ ಅವರನ್ನು ತಮ್ಮ ಉತ್ತರಾಧಿಕಾರಿಗಳೆಂದು ಘೋಷಿಸಿ ಅನುಗ್ರಹಿಸಿದರು. 

ಶ್ರೀಮುಖ ಸಂವತ್ತರ ವೈಶಾಖ ಶುದ್ಧ ಪಂಚಮಿ ದಿವಸ ಮಹಾಸಂಸ್ಥಾನ ಪದ್ಧತಿಯಂತೆ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಬಂದು ಪಾದಪೂಜೆ ಮಾಡಿ ನಮಸ್ಕರಿಸಿದ ನೂತನ ಯತಿಗಳಿಗೆ ಮುದ್ರಾಧಾರಣ, ಗುರೂಪದೇಶಾದಿಗಳನ್ನು ಮಾಡಿ ಶ್ರೀಮದಾಚಾರರ ವೇದಾಂತಸಾಮ್ರಾಜ್ಯದಿಗ್ವಿಜಯವಿದ್ಯಾಸಿಂಹಾಸನದಲ್ಲಿ ಮಂಡಿಸಿ ಸ್ವಹಸ್ತದಿಂದ “ಶ್ರೀಸುಯಮೀಂದ್ರತೀರ್ಥರು” ಎಂಬ ಹೆಸರಿನಿಂದ ಸಾಮ್ರಾಜ್ಯಪಟ್ಟಾಭಿಷೇಕ ಮಾಡಿ ಆಶೀರ್ವದಿಸಿದರು.

ಶ್ರೀಯವರು ಶಿಷ್ಯರಿಗೆ ನಾಮಕರಣಮಾಡಿದ್ದೂ ಶ್ರೀರಾಯರ ಮಹಿಮೆಗೆ ದ್ಯೋತಕವಾಗಿದೆ! ಶಿಷ್ಯರಿಗೆ ಯಾವ ಹೆಸರಿಡ ಬೇಕೆಂಬುದನ್ನು ಯೋಚಿಸುತ್ತಿರಲು ಪಂಚಮೀ ದಿವಸ ಬೆಳಿಗ್ಗೆ ಸುಶೀಲೇಂದ್ರತೀರ್ಥರ ಪೂರ್ವಾಶ್ರಮ ಅಳಿಯಂದಿರೂ ಶ್ರೀಯವರ ವಿದ್ಯಾಶಿಷ್ಯರೂ ಆದ ವಿದ್ವಾನ್ ಶ್ರೀ ದುರ್ಗದ ಗುಂಡಾಚಾರ್ಯರು ಬಂದು ಶ್ರೀಯವರಿಗೆ ನಮಸ್ಕರಿಸಿ, ಹಿಂದಿನ ರಾತ್ರಿ ಶ್ರೀರಾಯರು ಸ್ವಪ್ನದಲ್ಲಿ ದರ್ಶನವಿತ್ತು ಜಗನ್ನಾಥದಾಸರು ನಮ್ಮ ಮೇಲೆ ರಚಿಸಿರುವ 'ನಿನ್ನ ನಂಬಿದೆ' ಎಂಬ ಪದದ ಪಲ್ಲವಿಯ ಕೊನೆಯಲ್ಲಿರುವ ಹೆಸರನ್ನು ನಮ್ಮ ಪ್ರೀತ್ಯಾಸ್ಪದರಾದ ನೂತನ ಯತಿಗಳಿಗೆ ಇಡಬೇಕು” ಎಂದು ಅಜ್ಞಾಪಿಸಿದ ವಿಚಾರವನ್ನರುಹಿ ಶ್ರೀಜಗನ್ನಾಥದಾಸರ ಪದಗಳ ಪುಸ್ತಕವನ್ನು ಗುರುಗಳ ಮುಂದಿಟ್ಟರು. ಶ್ರೀಪಾಂಗಳವರು “ನಿನ್ನ ನಂಬಿದೆ” ಎಂಬ ಪದವನ್ನು ಹುಡುಕಿ ಅವಲೋಕಿಸಿ ಪರಮಾಶ್ಚರ-ಆನಂದಭರಿತರಾಗಿ ತಮ್ಮ ಶಿಷ್ಯರಲ್ಲಿ ರಾಯರಿಗಿರುವ ಅಪಾರ ವಾತ್ಸಲ್ಯಾಭಿಮಾನಗಳನ್ನು ಗುರುಗಳ ಕಾರುಣ್ಯವನ್ನು ಕೊಂಡಾಡಿದರು. ಶ್ರೀಜಗನ್ನಾಥದಾಸರ ಪದವು ಹೀಗಿದೆ - 

ನಿನ್ನ ನಂಬಿದೆ ರಾಘವೇಂದ್ರ | 

ನೀ ಎನ್ನ ಸಲಹಯ್ಯ ಸುಯಮೀಂದ್ರ ! 

ಶ್ರೀಸುವತೀಂದ್ರರು ಗುರುಸಾರ್ವಭೌಮರು ತಮ್ಮ ಹೆಸರನ್ನೇ ಶಿಷ್ಯರಿಗಿಡಲು ಸೂಚಿಸಿದ್ದಾರೆ! ಎಂದಾನಂದಿಸಿ “ಶ್ರೀಸುಯಮೀಂದ್ರತೀರ್ಥಶ್ರೀಪಾದಂಗಳವರು” ಎಂದು ಶಿಷ್ಯರಿಗೆ ನಾಮಕರಣಮಾಡಿದರು! ಪೀಠಕ್ಕೆ ಕೂರಿಸುವಾಗಲೇ ಹೆಸರಿನಿಂದಾರಂಭಿಸಿ ಗುರುರಾಜರು ಸುಯಮೀಂದ್ರರಲ್ಲಿ ತಮಗಿರುವ ಅಪಾರ ವಾತ್ಸಲ್ಯ, ಕಾರುಣ್ಯ ಅನುಗ್ರಹಗಳನ್ನು ಪ್ರಕಟಿಸಿದರು! ಇದರಿಂದ ಸುಯಮೀಂದ್ರರ ಭಾಗ್ಯವೆಂತಹುದೆಂಬುದು ಅರಿವಾಗುವುದು. 

ಸಾಮ್ರಾಜ್ಯಾಭಿಷೇಕಮಾಡಿ ಸುಪ್ರಸನ್ನಚಿತ್ತರಾಗಿ ಆನಂದಬಾಷ್ಪಹರಿಸುತ್ತಾ ಮಹಾಸಭೆಯಲ್ಲಿ ಶ್ರೀಸುವ್ರತೀಂದ್ರತೀರ್ಥರು ಹೀಗೆ ಅಪ್ಪಣೆಕೊಡಿಸಿದರು - 

“ಪ್ರಿಯ ವರಕುಮಾರಕರೇ! ನೀವು ಶ್ರೀಗುರುರಾಜರ ವರದಿಂದ ಶ್ರೀಮೂಲರಾಮನ ಆರಾಧಕರಾಗಿ ಮಹಾಸಂಸ್ಥಾನ- ಮಂತ್ರಾಲಯಗಳನ್ನು ಅಭಿವೃದ್ಧಿಪಡಿಸಿ ವಿಶೇಷವಾಗಿ ಶ್ರೀರಾಯರ ಸೇವೆ ಮಾಡಿ, ರಾಯರ ಮಹಿಮೆಯನ್ನು ಜಗತ್ತಿನಲ್ಲಿ ಚೆನ್ನಾಗಿ ಪ್ರಸಾರಮಾಡಿ ಮಂತ್ರಾಲಯ ಕ್ಷೇತ್ರವು ಜಗದ್ವಿಖ್ಯಾತ ಭಕ್ತಿಕೇಂದ್ರವಾಗುವಂತೆ ಮಾಡಲೆಂದೇ ಅವತರಿಸಿದ ಭಾಗ್ಯಶಾಲಿಗಳು! ಗುರುರಾಜರೇ ಸ್ವಪ್ನದಲ್ಲಿ ಸೂಚಿಸಿ ನಿಮ್ಮ ಆಶ್ರಮನಾಮವನ್ನು ನಿರ್ಧರಿಸಿರುವುದನ್ನು ವಿವೇಚಿಸಿದಾಗ ಅವರು ಮತ್ತಾರಲ್ಲೂ ಮಾಡದ ಅನುಗ್ರಹ ನಿಮ್ಮಲ್ಲಿ ಮಾಡಿ ನಿಮ್ಮಿಂದ ಅನಿತರಸಾಧಾರಣವಾಗಿ ಸೇವೆ ಸ್ವೀಕರಿಸುವರೆಂಬುದು ಸ್ಪಷ್ಟವಾಗಿದೆ. ನಮ್ಮ ಗುರುಗಳಾದ ಶ್ರೀಸುಶೀಲೇಂದ್ರರು ಮಂತ್ರಾಲಯದ ವಿಶೇಷಾಭಿವೃದ್ಧಿಕಾರ್ಯವನ್ನು ಪ್ರಾರಂಭಿಸಿದರು. ನಾವು ನಮ್ಮ ಕೈಲಾದ ಸೇವೆಮಾಡಿದೆವು. ಈಗ ಆ ಮಹತ್ಕಾರ್ಯವು ನಿಮ್ಮಿಂದಲೆ ಪೂರ್ಣವಾಗಬೇಕೆಂಬುದು ಶ್ರೀರಾಯರ ಚಿತ್ತ. ಆದ್ದರಿಂದ ನೀವು ಮಂತ್ರಾಲಯದಲ್ಲಿದ್ದು ಇಲ್ಲಿನ ನಿತ್ಯನೈಮಿತ್ತಿಕಪೂಜಾರಾಧನೆ-ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿ ಶ್ರೀರಾಯರ ಮಹಿಮೆಯು ಜಗತ್ತಿನಲ್ಲೆಲ್ಲಾ ವ್ಯಾಪಿಸಿ ಲಕ್ಷಾಂತರ ಜನರು ರಾಯರನ್ನು ಸೇವಿಸಿ ಅನುಗ್ರಹೀತರಾಗುವಂತೆ ಮಾಡಬೇಕು. ಇದಕ್ಕಿಂತ ಉತ್ತಮವಾದ ಸೇವೆ ಬೇರೊಂದಿಲ್ಲ. ಈ ಹೊಣೆಯನ್ನು ನಾವು ನಿಮಗೆ ಹೊರಿಸುತ್ತಿದ್ದೇವೆ. ನೀವು ಶ್ರೀಗುರುರಾಜರ ಈ ಸೇವೆಯನ್ನು ಯಶಸ್ವಿಯಾಗಿ ನೆರವೇರಿಸಿ ಮಹಾಸಂಸ್ಥಾನ - ಮಂತ್ರಾಲಯಗಳ ಈ ಸೇವೆಯನ್ನು ಯಶಸ್ವಿಯಾಗಿ ನೆರವೇರಿಸಿ ಮಹಾಸಂಸ್ಥಾನ ಮಂತ್ರಾಲಯಗಳ ಕೀರ್ತಿ ಪ್ರತಿಷ್ಠೆಗಳನ್ನು ಬೆಳಗಿಸುವ ಸಾಮರ್ಥ್ಯವನ್ನು ಅವರೇ ನಿಮಗೆ ದಯಪಾಲಿಸುತ್ತಾರೆಂದು ನಂಬಿದ್ದೇವೆ. ನಿಮಗೆ ಹೆಚ್ಚೇನು ಹೇಳುವುದು, ಶ್ರೀಗುರುರಾಜರೇ ನಿಮ್ಮ ಉಸಿರಾಗಲಿ ! ನಿಮಗೆ ಮಂಗಳವಾಗಲಿ!” 

ಶ್ರೀಸುವ್ರತೀಂದ್ರರು ಅದಾವ ಒಂದು ಶುಭಗಳಿಗೆಯಲ್ಲಿ ಸುಪ್ರಸನ್ನಚಿತ್ತದಿಂದ ಶ್ರೀಸುಯಮೀಂದ್ರರಿಗೆ ಈ ಮಹತ್ಕಾರ್ಯ ನಿರ್ವಹಣೆಗೆ ಆದೇಶವಿತ್ತು ಆಶೀರ್ವದಿಸಿದರೋ, ಅದು ಮುಂದೆ ಸತ್ಯವಾಗಿ ಪರಿಣಮಿಸಿದ್ದನ್ನು ಸರ್ವರೂ ಮನಗಂಡರು. ಶ್ರೀಸುಯಮೀಂದ್ರರು ಆನಂದನಿರ್ಭರರಾಗಿ ಗುರುಗಳ ಪಾದಗಳ ಮೇಲೆ ಶಿರವಿರಿಸಿ ಗುರುವರ್ಯ, ತಮ್ಮ ಆಜ್ಞೆಯನ್ನು ಶಿರಸಾಧರಿಸಿದ್ದೇವೆ, ನಮ್ಮ ಯೋಗ್ಯತಾನುಸಾರವಾಗಿ ತಮ್ಮಾಜ್ಞೆಯನ್ನು ಪರಿಪಾಲಿಸಲು ಯತ್ನಿಸುತ್ತೇವೆ” ಎಂದು ಭಿನ್ನವಿಸಿದರು. ಅ೦ದಿನಿಂದ ನಾಲ್ಕಾರು ದಿನ ಗುರುಸೇವಾತತ್ಪರರಾಗಿ ಅವರ ಸಂಪೂರ್ಣಾನುಗ್ರಹಾಶೀರ್ವಾದಗಳಿಗೆ ಪಾತ್ರರಾದರು. 

ಶ್ರೀಸುವ್ರತೀಂದ್ರತೀರ್ಥರು ಕ್ರಿ.ಶ. ೧೯೨೬ ರಿಂದ ೧೯೩೩ ರವರೆಗೆ ಮಹಾಸಂಸ್ಥಾನಾಧಿಪತಿಗಳಾಗಿದ್ದು ಶ್ರೀಮುಖ ಸಂವತ್ತರದ ವೈಶಾಖ ಶುಕ್ಲ ಏಕಾದಶೀ ಶ್ರೀಹರಿದಿನದಂದು ಇಹಲೋಕವ್ಯಾಪಾರವನ್ನು ಮುಗಿಸಿ ಶ್ರೀಮನ್ನಾರಾಯಣಧ್ಯಾನತವಾದರು. “ಸುಶೀಲೇಂದ್ರಕರಾಜ್ಯೋತಂ ಸುಶಾಂತ್ಯಾದಿಗುಣಾರ್ಣವಮ್ | ಸುಧಾಪ್ರವಚನಾಸಕ್ತಂ ಸುವ್ರತೀಂದ್ರಗುರುಂ ಭಜೇ।।