Protection of Kayadhu’s Pregnancy

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೪. ಕಯಾದುವಿನ ಗರ್ಭರಕ್ಷಣೆ

ಮಂದರಾಚಲದಲ್ಲಿ ಹಿರಣ್ಯಕಶ್ಯಪನು ಚತುರಾನನರನ್ನು ಒಲಿಸಲು ಘೋರವಾದ ತಪಸ್ಸನ್ನು ಪ್ರಾರಂಭಿಸಿದನು. ಇತ್ತ ದೈತ್ಯಸಾಮ್ರಾಟನು ತಪಸ್ಸಿಗಾಗಿ ತೆರಳಿದ ವಿಚಾರವನ್ನರಿತ ಇಂದ್ರದೇವರು ದೇವತೆಗಳಿಂದೊಡಗೂಡಿ ದೈತ್ಯರಾಜ್ಯವನ್ನು ಆಕ್ರಮಿಸಿ, ದೈತ್ಯರನ್ನು ಅಲ್ಲಿಂದ ಓಡಿಸಿ ದೈತ್ಯಸಾಮ್ರಾಜಿಯಾದ ಕಯಾದುವು ಗರ್ಭಿಣಿಯಾಗಿರುವುದನ್ನು ಅರಿತು ಶತ್ರುಶೇಷವನ್ನು ಉಳಿಸಬಾರದೆಂದು ಕಯಾಧುವಿನ ಗರ್ಭವನ್ನು ನಾಶಪಡಿಸಲಿಚ್ಚಿಸಿ, ದೀನಳೂ, ಅಬಲೆಯೂ ಆದ ಕಯಾದುವನ್ನು ಸೆರೆ ಹಿಡಿದು ಎಳೆದೊಯ್ದನು.

ಅದೇ ವೇಳೆಗೆ ದೈವಯೋಗದಿಂದ ನಾರದರು ಭಗವನ್ನಾಮ ಸಂಕೀರ್ತನ ಮಾಡುತ್ತಾ ಅಲ್ಲಿಗೆ ದಯಮಾಡಿಸಿದನು. ಇಂದ್ರನು ಕಯಾಧುವನ್ನು ಸೆರೆ ಹಿಡಿದಿರುವುದನ್ನರಿತ ನಾರದರು ಇಂದ್ರನಿಗೆ ಬುದ್ದಿ ಹೇಳಿ ಕಯಾಧುವಿನ ಗರ್ಭದಲ್ಲಿ ಸಾಕ್ಷಾತ್ ವಾಗ್ದಾವೇಶಯುಕ್ತನಾದ ಮಹಾಭಾಗವತೋತ್ತಮನಿರುವುದರಿಂದ ಅವನನ್ನು ಸಂಹರಿಸಲು ಜಗತ್ತಿನಲ್ಲಿ ಯಾರೂ ಸಮರ್ಥರಲ್ಲ! ಆ ಶ್ರೀಹರಿಭಕ್ತನಿಂದಲೇ ದೇವತೆಗಳ ಮತ್ತು ಸಮಸ್ತ ಜಗತ್ತಿನ ಕಲ್ಯಾಣವಾಗುವುದು - ಮುಂತಾಗಿ ಉಪದೇಶಿಸಿ ಕಯಾಧುವಿನ ಗರ್ಭಸ್ಥ ಶಿಶುವನ್ನು ರಕ್ಷಿಸಿದರು. ಇಂದ್ರನು ಜ್ಞಾನದೃಷ್ಟಿಯಿಂದ ನಾರದರ ಮಾತಿನ ಸತ್ಯತೆಯನ್ನರಿತು ಕಯಾಧುವಿಗೆ ಪ್ರದಕ್ಷಿಣೆ ಮಾಡಿ ಮನಸಾ ಉದರಸ್ಥ ವಾಯುದೇವರಿಗೆ ನಮಿಸಿ ತೆರಳಿದನು."

ಆಗ ಕಯಾಧುವು ಹರ್ಷಭರಿತಳಾಗಿ “ಸ್ವಾಮಿ, ಕರುಣಾಳುಗಳಾದ ನೀವು ಸಕಾಲದಲ್ಲಿ ಬಂದು ನನ್ನನ್ನೂ, ನನ್ನ ಗರ್ಭಸ್ಥ ಶಿಶುವನ್ನೂ ಕಾಪಾಡಿದಿರಿ. ಇಕೋ ನಿಮಗೆ ನನ್ನ ಅನಂತ ವಂದನೆಗಳು” ಎಂದು ನಮಸ್ಕರಿಸಿದಳು. ನಾರದರು “ಪುತ್ರಿ! ನಿನ್ನ ವಿಪತ್ತು ದೂರಾಯಿತು. ಚಿಂತಿಸಬೇಡ. ನಿನ್ನ ಪತಿಯು ತಪಸ್ಸಿನಿಂದ ಹಿಂದಿರುಗುವವರೆಗೂ ನೀನು ನನ್ನ ಆಶ್ರಮದಲ್ಲಿ ಪ್ರಸನ್ನಚಿತ್ತಳಾಗಿ, ಭಗವಂತನ ಮಾಡುತ್ತಾ ಕಾಲಾಪನೆ ಮಾಡಮ್ಮಾ” ಎಂದು ಹೇಳಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು.

ನಾರದರ ಆಶ್ರಮದಲ್ಲಿ ಮಹಾರಾಣಿ ಕಯಾಧುದೇವಿಯು ಸುಪ್ರಸನ್ನಳಾಗಿ ಕಾಲಯಾಪನೆ ಮಾಡತೊಡಗಿದಳು. ಆಶ್ರಮವಾಸಿಗಳಾದ ಋಷಿಪತ್ನಿಯರ ಸಹವಾಸದಲ್ಲಿ ಅವಳ ಮನಸ್ಸು ಬರುಬರುತ್ತಾ ವಿಶುದ್ಧವಾಗಹತ್ತಿತು. ಪಂಚ ಪಂಚ ಉಷಃಕಾಲದಲ್ಲಿ ಎದ್ದು ಋಷಿಪತ್ನಿಯರೊಡನೆ ನದಿಯಲ್ಲಿ ಮಿಂದು ಭಗವದ್ದಾನಪರಳಾದಳೆಂದರೆ ಅವಳಿಗೆ ಇಹಲೋಕದ ಸ್ಮೃತಿಯೇ ತಪ್ಪಿದಂತಾಗುವುದು. ಋಷಿಪತ್ನಿಯರು ಬೇಡಬೇಡವೆಂದು ತಡೆದರೂ ಅವಳು ಸ್ವತಃ ನಾರದರ ಆಹಿಕ-ದೇವಪೂಜಾದಿಗಳಿಗೆ ಬೇಕಾದ ಸಮಸ್ತ ಸಾಧನಗಳನ್ನೂ ಅಣಿಮಾಡುವಳು. ಸ್ವಲ್ಪವೂ ಬೇಸರವಿಲ್ಲದೆ ಶ್ರೀಹರಿಯ ಸೇವೆಯಲ್ಲಿ ಭಾಗಿಯಾಗಿ ಪುಣ್ಯಸಾಧನೆ ಮಾಡಿಕೊಳ್ಳುವಳು. ಗುರುಹಿರಿಯರ ಸೇವೆಯಲ್ಲಿ ಬಹಳ ಆದರ, ಸ್ವಲ್ಪವೂ ಉದಾಸೀನವಿಲ್ಲ. ವ್ರತ, ನಿಯಮ, ಉಪವಾಸಗಳಿಂದ ದೇಹವನ್ನು ದಂಡಿಸಿ ಸರ್ವದಾ ಸತ್ಕಾಲಕ್ಷೇಪನಿರತಳಾಗಿದ್ದಕಯಾದುವು ಓರ್ವ ಯೋಗಿನಿಯಂತೆ, ತಪಸ್ವಿನಿಯಂತೆ ಕಾಣುತ್ತಿದ್ದಳು. ನಿಜ, ಜಗನ್ಮಾನ್ಯ ಭಾಗವತಶಿರೋಮಣಿಯನ್ನು ಉದರದಲ್ಲಿ ಧರಿಸಿದ್ದ ಆ ಮಹಾತಾಯಿಯು ಸಾಕ್ಷಾದ್ದಾಯ್ತಾವೇಶಯುಕ್ತನಾದ, ಲೋಕಕಲ್ಯಾಣಕಾರಕನಾದ ಶ್ರೀಹರಿಭಕ್ತಾಗ್ರಣಿಯನ್ನು ಪಡೆಯಲಿರುವ ಆಕೆಯು ಒಂದು ತಪಸ್ಸನ್ನೇ ಆಚರಿಸಬೇಕಾಗಿತ್ತಲ್ಲವೇ? ಶ್ರೀಹರಿಯೇ ಆವೊಂದು ಅವಕಾಶವನ್ನವಳಿಗೆ ತಂದಿತ್ತು ಈ ವಿಧವಾದ ಪವಿತ್ರಾಚರಣೆಯಲ್ಲಿ ಅವಳು ತೊಡಗುವಂತೆ ಮಾಡಿದ್ದಾನೆಂದು ಹೇಳಬಹುದು. ಜಗತ್ಪಾಣನಾದ ಸಮೀರಣನ ಪರಮಾವೇಶಯುಕ್ತನಾದ ಶಂಕುಕರ್ಣ ದೇವತೆಗೆ ಜನ್ಮವೀಯುವ ಆ ತಾಯಿಯ ಆಚಾರ-ವಿಚಾರ, ನಡೆನುಡಿಗಳೆಲ್ಲ ಉತ್ಕೃಷ್ಟವಾಗಿರಬೇಕಾದುದು ಸಹಜವಷ್ಟೆ! ಕಯಾಧುದೇವಿಯ ಈ ಬಗೆಯ ಸಾತ್ವಿಕ ಆಚರಣೆ, ಅವಳ ವಿನಯ-ಭಕ್ತಿ-ಶ್ರದ್ಧೆ-ಗಾಂಭೀರ್ಯಾದಿ ಸದ್ಗುಣಗಳನ್ನು ಕಂಡು ಋಷಿಪತ್ನಿಯರೂ ವಿಸ್ಮಿತರಾಗುತ್ತಿದ್ದರು. ಅವಳ ನಿರ್ಮಲವಾದ ಮನಸ್ಸು ಶ್ರದ್ಧಾ-ಭಕ್ತಿ-ಸೇವೆಗಳನ್ನು ಕಂಡು ಸ್ವಯಂ ನಾರದ ಮಹರ್ಷಿಗಳೂ ಮುಗ್ಧರಾಗುತ್ತಿದ್ದರು. ಅವಳ ಸದ್ಗುಣ-ಸೇವೆಗಳಿಂದ ಸುಪ್ರೀತರಾದ ದೇವರ್ಷಿಗಳು ಅವಳಲ್ಲಿ ಪಿತೃವಮ-ವಾತ್ಸಲ್ಯಗಳನ್ನು ತೋರುತ್ತಿದ್ದರು. ಕಯಾಧುವಿಗೆ ಪುರಾಣಾದಿಗಳಲ್ಲಿ ಉಕ್ತವಾದ ಪರಮಾತ್ಮನ ಅಮರಚರಿತೆ, ಮಹಾಮಹಿಮ, ಲೀಲಾವಿಲಾಸಗಳನ್ನು, ಶ್ರೀಹರಿತತ್ವಗಳನ್ನೂ ಶ್ರವಣ ಮಾಡಿಸುತ್ತಿದ್ದರು. ಹೀಗೆ ಕಯಾಧುದೇವಿಯು ನಾರದರ

ಆಶ್ರಮದಲ್ಲಿ ಸದಾಚಾರ ಸದ್ಭಾವನಾಭರಿತಳಾಗಿ ಕಾಲಕಳೆಯಹತ್ತಿದಳು.