
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
1. ಹಿನ್ನೆಲೆ
ಮುಮುಕ್ಷುಗಳಿಂದ ಅಪೇಕ್ಷಣೀಯವಾದ, ಪರಮಮಂಗಳಮೂರ್ತಿಯಾದ ಶ್ರೀಮನ್ನಾರಾಯಣನ ಆನಂದಧಾಮವೆಂದು ಹದಿನಾಲ್ಕು ಲೋಕಗಳಲ್ಲಿ ಪ್ರಸಿದ್ಧವಾದ ಶ್ರೀವೈಕುಂಠವು ಮುಕ್ತ - ಅಮುಕ್ತ ಎಂದು ಎರಡು ವಿಧ. ಅಮುಕ್ತಸ್ಥಾನದ ದ್ವಾರಪಾಲಕರಾದ ಜಯ-ವಿಜಯರು ಸತತ ಶ್ರೀಹರಿಯ ಸನ್ನಿಧಿಯಲ್ಲಿ ಭಗವಂತನ ಪ್ರೀತಿಪಾತ್ರರಾದ ತಮಗೆ ಸರಿಸಾಟಿ ಜಗತ್ತಿನಲ್ಲಿ ಮತ್ತಾರೂ ಇಲ್ಲ. ತಾವೇ ಶ್ರೇಷ್ಠರು ಎಂಬ ದುರಭಿಮಾನದಿಂದ ಗರ್ವಿಷ್ಠರಾಗಿರಲು ಶ್ರೀಹರಿಯ ಪ್ರೇರಣೆಯಂತೆ ದೇವದೇವನ ದರ್ಶನಾಕಾಂಕ್ಷಿಗಳಾದ ಶ್ರೀಬ್ರಹ್ಮ ಮಾನಸಪುತ್ರರೂ, ಜ್ಞಾನಿನಾಯಕರೂ ಆದ ಸನಕ - ಸನಂದನಾದಿಗಳು ಬಂದಾಗ ಗರ್ವದಿಂದ ಯುಕ್ತಾಯುಕ್ತ ಜ್ಞಾನಹೀನರಾದ ಜಯ-ವಿಜಯರು ಮಹನೀಯರಾದ ಆ ಜ್ಞಾನಿಗಳನ್ನು ದ್ವಾರದಲ್ಲಿ ನಿರೋಧಿಸಿ ಭಗವದ್ದರ್ಶನಕ್ಕೆ ಅಡ್ಡಿಪಡಿಸಲು ಅದರಿಂದ ಕುಪಿತರಾದ ಸನಕಾದಿಗಳ ನಿಗ್ರಹಕ್ಕೆ ಪಾತ್ರರಾಗಿ “ಪರಮಮಂಗಳಕರವಾದ ಸಾತ್ವಿಕವಾದ ವೈಕುಂಠದಲ್ಲಿರಲು ನೀವು ಅರ್ಹರಲ್ಲ ವೈಕುಂಠದಿಂದ ಭ್ರಷ್ಟರಾಗಿರಿ”, “ಅಸುರೀಂ ಯೋನಿಂ ಯಾತ - ದೈತ್ಯರಾಗಿರಿ” ಎಂಬ ಶಾಪಕ್ಕೆ ಗುರಿಯಾಗಿದೈತ್ಯರಾಗಿ ಜನಿಸಿದರು.'
ಭಗವಂತನ ಅಪ್ಪಣೆಯಂತೆ ಮೂರು ಜನ್ಮ ಶ್ರೀಹರಿ ದ್ವೇಷಿಗಳಾಗಿದ್ದು, ಶಾಪವನ್ನು ಅನುಭವಿಸುವುದಾಗಿ ವಿನಂತಿಸಿದ ಜಯ-ವಿಜಯರು ಹಿರಣ್ಯಕಶ್ಯಪು-ಹಿರಣ್ಯಾಕ್ಷರೆಂಬ ಅಭಿದಾನದಿಂದ ದೈತ್ಯಸಾಮ್ರಾಜ್ಯಕ್ಕೆ ಚಕ್ರವರ್ತಿ-ಯುವರಾಜರಾದರು. ದೈತ್ಯರಾಗಿ ಜನಿಸಿದ್ದರಿಂದ ಸ್ವಾಭಾವಿಕವಾಗಿ ಅವರು ಶ್ರೀಹರಿದ್ವೇಷಿಗಳೂ, ಸುರದ್ವೇಷಿಗಳೂ ಆಗಿ ಲೋಕಕಂಟಕರಾಗಿ ಸಜ್ಜನರಿಗೆ ಹಿಂಸೆ ಕೊಡಲಾರಂಭಿಸಿದರು.
ಹಿರಣ್ಯಕಶಿಪು-ಹಿರಣ್ಯಾಕ್ಷರು ಬಾಹುಬಲದ, ಅಪ್ರತಿಹತ ಪರಾಕ್ರಮದ ಗರ್ವದಿಂದ ಮೇರೆಮೀರಿ ವರ್ತಿಸತೊಡಗಿ ಭಗವದ್ಭಕ್ತರನ್ನು ಹಿಂಸಿಸಹತ್ತಿದರು. ಶ್ರೀಹರಿಗೆ ಮತ್ತು ದೇವತೆಗಳಿಗೆ ಪ್ರಿಯವಾದ ಕಾರ್ಯಗಳಿಗೆ ಅಡ್ಡಿಯೊಡ್ಡತೊಡಗಿದರು. ಶ್ರೀಹರಿ ಮತ್ತು ದೇವತೆಗಳು ಬಲಶಾಲಿಗಳಾಗಲು ಋಷಿ-ಮುನಿಗಳಾಚರಿಸುವ ಯಜ್ಞಯಾಗಾದಿಗಳೇ ಕಾರಣವೆಂದು ತರ್ಕಿಸಿದ ಆ ದೈತ್ಯರು ಋಷಿ-ಮುನಿಗಳಾಚರಿಸುವ ಯಜ್ಞಯಾಗಾದಿಗಳಿಗೆ ವಿಘ್ನ ಮಾಡಲಾರಂಭಿಸಿದರು. ದೈತ್ಯರ ಉಪಟಳದಿಂದ ಶ್ರಮವಾದರೂ ಋಷಿಮುನಿಗಳು ತಮ್ಮ ಕರ್ತವ್ಯವನ್ನು ಬಿಡದೆ ಯಜ್ಞಗಳನ್ನಾಚರಿಸುತ್ತಲೇ ಇದ್ದರು.
ದೈತ್ಯರಾಜನ ಸಹೋದರನಾದ ಹಿರಣ್ಯಾಕ್ಷನು ಇದರಿಂದ ಕ್ರುದ್ಧನಾದನು. “ಈ ಭೂಮಿಯು ಇದ್ದರೆ ತಾನೇ ಈ ಋಷಿಮುನಿಗಳು ಯಜ್ಞವನ್ನಾಚರಿಸುವರು ? ಭೂಮಿಯೇ ಇಲ್ಲದಂತೆ ಮಾಡಿಬಿಟ್ಟರೆ ಕ್ಲಾಅದೇ ಸರಿ! ಭೂಮಿಯನ್ನೇ ಸ್ಥಳಪಲ್ಲಟ ಮಾಡಿಬಿಡುವೆನು! ಆಗ ಈ ಬಡ ಬೈರಾಗಿಗಳು ಅದೆಂತು ಯಾಗಗಳನ್ನೆಸಗುವರೋ ನೋಡುವೇನು!” ಎಂದು ಮನದಲ್ಲಿ ಯೋಚಿಸಿ ಮಹಾಬಲಶಾಲಿಯಾದ ಅವನು ಭೂಮಂಡಲವನ್ನೇ ತನ್ನ ಬಾಹುಗಳಲ್ಲಿ ಎತ್ತಿಕೊಂಡು ಅಗಾಧ ಜಲರಾಶಿಯಿಂದ
ಬೆಡಗುಗೊಂಡ ಸಮುದ್ರತಳವನ್ನು ಸೇರಿ ಭೂಮಿಯನ್ನು ಅಲ್ಲಿ ಬಚ್ಚಿಟ್ಟು ಕುಳಿತನು !
ಮೊರೆಯಿಟ್ಟಳು. ಕರುಣಾಸಾಗರನಾದ ಶ್ರೀಮನ್ನಾರಾಯಣನು ಶ್ರೀವರಾಹಾವತಾರವನ್ನು ತಾಳಿ ಸಮುದ್ರತಳವನ್ನು ಸೇರಿ ಖಳನಾದ ದೈತ್ಯರಾಜನ ಈ ವಿಪರೀತ ಕಾರ್ಯದಿಂದ ಕಳವಳಗೊಂಡ ಭೂಮಾತೆಯು ಆರ್ತಳಾಗಿ ತನ್ನನ್ನು ರಕ್ಷಿಸುವಂತೆ ಶ್ರೀಹರಿಯಲ್ಲಿ ಹಿರಣ್ಯಾಕ್ಷನನ್ನು ಸಂಹರಿಸಿ ತನ್ನ ಕೋರೆಹಲ್ಲುಗಳಿಂದ ಭೂಮಿಯನ್ನು ಮೇಲೆತ್ತಿ ತಂದು ಮತ್ತೆ ಯಥಾಸ್ಥಾನದಲ್ಲಿ ಪ್ರತಿಷ್ಠಾಪಿಸಿದನು! ದೇವತೆಗಳು ಶ್ರೀವರಾಹರೂಪಿ ಶ್ರೀಹರಿಯ ಮೇಲೆ ಪುಷ್ಪವೃಷ್ಟಿಗೈದರು, ಋಷಿಮುನಿಗಳು ಪರಮಾತ್ಮನನ್ನು ಭಕ್ತಿಯಿಂದ ಸ್ತುತಿಸಿದರು.
ಶ್ರೀಹರಿಯು ವರಾಹರೂಪದಿಂದ ತನ್ನ ಪ್ರೀತಿಯ ಸಹೋದರನಾದ ಹಿರಣ್ಯಾಕ್ಷನನ್ನು ಸಂಹರಿಸಿದ ವಿಚಾರವರಿತು ಹಿರಣ್ಯಕಶ್ಯಪನು ತಳಮಳಗೊಂಡನು. ತಮ್ಮನ ಮರಣದಿಂದ ಅತ್ಯಂತ ದುಃಖಿತನಾದನು. ದುಃಖಸಮುದ್ರದಲ್ಲಿ ಮುಳುಗಿದ್ದ ತಾಯಿ, ಸಹೋದರನ ಪತ್ನಿ, ಪುತ್ರರುಗಳಿಗೆ ಅನೇಕ ಬಗೆಯಿಂದ ಸಮಾಧಾನ ಹೇಳಿ ಸಾಂತ್ವನಗೊಳಿಸಿ ತಮ್ಮನ ಅಂತ್ಯಕ್ರಿಯಾದಿಗಳನ್ನು ನೆರವೇರಿಸಿದನು. ಹಿರಣ್ಯಾಕ್ಷನ ಮರಣದಿಂದ ಕಡುನೊಂದ ಆ ದೈತ್ಯನು ತನ್ನ ಸಹೋದರನನ್ನು ಸಂಹರಿಸಿದ ಶ್ರೀಹರಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞಾಬದ್ಧನಾದನು. ಅದರ ಮೊದಲನೆಯ ಹೆಜ್ಜೆಯಾಗಿ ತನ್ನ ಅಸಹಾಯಶೂರರಾದ ನಮುಚಿ ಇಲ್ಲ, ಪಾಕ, ವಿಪ್ರಚಿತ್ತಿ, ಹಯಗ್ರೀವ ಮೊದಲಾದ ದೈತ್ಯವೀರರನ್ನು ಕರೆದು “ದೈತ್ಯವೀರರೇ! ಮಾಯಾವಿಯೂ, ಸುರಪಕ್ಷಪಾತಿಯೂ ಆದ ಹರಿಯು ನಮ್ಮ ಕುಲವೈರಿಯು, ನನ್ನ ಪ್ರಿಯ ಸಹೋದರನನ್ನು ಸಂಹರಿಸಿದ ಪಾತಕಿಯು, ಇನ್ನು ಮುಂದೆ ಆ ಹರಿಯ ಅಸ್ತಿತ್ವವು ನಮ್ಮ ರಾಜ್ಯದಲ್ಲಿ ಯಾವುದೇ ರೂಪದಿಂದಲೂ ಇರಕೂಡದು. ಆ ಕಾರ್ಯವನ್ನು ನೀವು ಮಾಡಿರಿ” ಎಂದು ಆಜ್ಞಾಪಿಸಿದನು.
ದೈತ್ಯರಾಜನು ಮುಂದುವರೆದು ಕೋಪಸಂತಾಪಗಳಿಂದ ಕಿಡಿಕಿಡಿಯಾಗಿ ಗರ್ಜಿಸಿ 'ದೈತ್ಯವೀರರೇ! ನಮ್ಮ ಪ್ರಮುಖ ಶತ್ರುವಾದ ವಿಷ್ಣುವು ನಾಮಾವಶೇಷವಾಗಬೇಕಾದರೆ, ಹತನಾಗಬೇಕಾದರೆ ಆ ಹರಿಯನ್ನು ಪೋಷಿಸುವ, ಅವನಿಗೆ ಬಲಪ್ರದವಾದ ಅಮರರು, ದೇವ-ಪಿತೃ-ಭೂತಗಳು ಮತ್ತು ವರ್ಣಾಶ್ರಮರಕ್ಷಕರೂ, ಯಜ್ಞಯಾಗ-ಸ್ವಾಧ್ಯಾಯ-ತಪಸ್ಸು- ನಿಯಮಗಳನ್ನು ಮಾಡಿಕೊಂಡಿರುವ ಭೂಸುರರು ಒಬ್ಬರೂ ಉಳಿಯದಂತಾಗಬೇಕು. ಆದುದರಿಂದ ನೀವು ಮೊದಲು ಗೋ-ಬ್ರಾಹ್ಮಣರು, ವೇದ, ವರ್ಣಾಶ್ರಮಧರ್ಮಗಳು ಪ್ರಚಾರದಲ್ಲಿರುವ ಪ್ರದೇಶಗಳನ್ನೆಲ್ಲಾಧ್ವಂಸ ಮಾಡಿಬಿಡಿರಿ” ಎಂದು ಅಪ್ಪಣೆ ಮಾಡಿದನು.
ದೈತ್ಯರಾಜನಾದ ಹಿರಣ್ಯಕಶ್ಯಪನ ಅಣತಿಯಂತೆ ಕ್ರೂರಿಗಳಾದ ದೈತ್ಯರು, ಗೋಶಾಲೆಗಳು, ಋಷ್ಯಾಶ್ರಮಗಳು, ಯಾಗಶಾಲೆಗಳು, ನಗರ-ಪಟ್ಟಣ-ಗ್ರಾಮಗಳು ಹಾಗೂ ನಾಟ್ಯಸ್ಥಾನಗಳು - ಹೀಗೆ ಎಲ್ಲವನ್ನೂ ನಾಶಪಡಿಸಿದರು.
ಹೀಗೆ ಸಮಸ್ತ ರಾಜ್ಯದಲ್ಲಿ ದೈತ್ಯವೀರರು ಹಾಹಾಕಾರವನ್ನುಂಟುಮಾಡಿ ಸಕಲ ಪ್ರಜರಿಗೆ ಪೀಡೆಯನ್ನಿತ್ತು ಸಂತೋಷಿಸಿದರು. ತನ್ನ ರಾಜ್ಯದಲ್ಲಿ ನಡೆದ ಹತ್ಯಾಕಾಂಡವನ್ನು ಕೇಳಿ ಹಿರಣ್ಯಕಶ್ಯಪನು ಪರಮಹರ್ಷಿತನಾದನು.
ಆನಂತರ ಅವನು ವಿಲಾಸಮಗ್ನನಾಗಿ ಕ್ರೌರ್ಯ, ಹಿಂಸೆ, ಅಹಂಕಾರಗಳ ಸಾಕಾರಮೂರ್ತಿಯೆನಿಸಿ ಋಷಿಮುನಿಗಳಿಗೆ ಹೆಚ್ಚು ಹೆಚ್ಚು ಸಂಕಟಗಳನ್ನು ತಂದೊಡ್ಡುತ್ತಾ, ದೇವತಾರಾಧನೆ ಮುಂತಾದ ಸತ್ಕಾರ್ಯಗಳಿಗೆ ವಿಘ್ನ ಮಾಡುತ್ತಾ ಲೋಕಕಂಟಕನಾಗಿ ಮೆರೆಯಹತ್ತಿದನು.