|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಸರ್ ಥಾಮಸ್ ಮನ್ರೋ

ಶ್ರೀರಾಯರು ಬೃಂದಾವನ ಪ್ರವೇಶಮಾಡಿದ ನೂರೈವತ್ತು ವರ್ಷಗಳಾದ ಮೇಲೆ ಬ್ರಿಟಿಷ್ ಉಚ್ಚ ಅಧಿಕಾರಿಯೊಬ್ಬರಿಗೆ ತೋರಿದ ಮಹಿಮೆಯು ಭಾರತೀಯ ಸಾಧು-ಸಂತರ-ಭಕ್ತರ ಯೋಗಸಿದ್ದರ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದ ಘಟನೆಯಾಗಿದೆ. 

ಕ್ರಿ.ಶ. ೧೮೨೦ರ ಸುಮಾರಿನ ಘಟನೆಯಿದು. ಆಗ ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ಶ್ರೀಸುಬೋಧೇಂದ್ರರು (೧೮೦೭-೧೮೨೫), ಚಿಕ್ಕಪಟ್ಟದಲ್ಲಿ ಶ್ರೀಸುಜನೇಂದ್ರಗುರುಗಳು ವಿರಾಜಿಸಿದ್ದರು. ಶ್ರೀಗಳವರು ಚಿಕ್ಕಪಟ್ಟಿದಲ್ಲಿದ್ದು ಗುರುಗಳ ಸೇವೆಮಾಡಿ ಅನುಗೃಹೀತರಾಗಿದ್ದು, ಗುರುಗಳು ವೃಂದಾನಸ್ಥರಾದಮೇಲೆ ೧೮೨೫ ರಿಂದ ೧೮೩೬ರ ವರೆಗೆ ಮಹಾಸಂಸ್ಥಾನವನ್ನಾಳಿ ಕೀರ್ತಿ ಗಳಿಸಿದರು. ಅವರು ಶ್ರೀಮಠದ ಮೂಲಸ್ಥಳವಾದ ನಂಜನಗೂಡಿನಲ್ಲಿದ್ದರು. ಆ ವೇಳೆಗಾಗಲೇ ಸಮಸ್ತಭಾರತವೂ, ಆಂಗ್ಲರ ಆಳ್ವಿಕೆಗೆ ಒಳಪಟ್ಟಿತ್ತೆಂದು ಹೇಳಬಹುದು. ಈಸ್ಟ ಇಂಡಿಯಾ ಕಂಪೆನಿಯವರು ತಮ್ಮ ತಳ ಭದ್ರವಾದ ಮೇಲೆ, ಹಿಂದಿನ ಆಳರಸರು, ಗುಡಿ, ಮಠ, ಛತ್ರ, ಪಂಡಿತರು ಮುಂತಾಗಿ ಅನೇಕರಿಗೆ ನೀಡಿದ್ದ, ದತ್ತಿ ಬಿಟ್ಟಿದ್ದ ಗ್ರಾಮ-ಭೂಮಿ, ಜಹಗೀರುಗಳನ್ನು ಯಾವ ಉದ್ದಿಶ್ಯದಿಂದ ರಾಜರು ದಾನಮಾಡಿದ್ದರೋ ಅದು ನೆರವೇರುತ್ತಿದೆಯೇ? ಇಲ್ಲವೇ? ಹಿಂದಿನ ರಾಜರಿತ್ತ ದಾನಗಳು ಸರಿಯೇ ಅಲ್ಲವೇ? ಅದನ್ನು ಸಂಸ್ಥೆಗಳು, ಜನರು ಅಧಿಕೃತವಾಗಿ ಅನುಭವಿಸುತ್ತಿರುವರೋ ಇಲ್ಲವೇ? ಅದನ್ನು ತಾವೂ ಮುಂದುವರೆಸಿಕೊಂಡು ಬರಬೇಕೇ ಬೇಡವೇ ? ಎಂಬುದನ್ನು ವಿಮರ್ಶಿಸಿ ಸೂಕ್ತ ಕಾರ್ಯಕ್ರಮ ಕೈಗೊಳ್ಳಲು ಈಸ್ಟ್ ಇಂಡಿಯಾ ಕಂಪೆನಿಯವರುಸರ್ವೆಸೆಟಲ್‌ಮೆಂಟ್, ಇನಾಂಕಮಿಶನ್‌ಗಳನ್ನು ಏರ್ಪಡಿಸಿದ್ದರು. ಕಂಪೆನಿಯ ಅಧಿಕಾರಿಗಳು ದೇಶದಲ್ಲೆಲ್ಲಾ ಈ ಕಾರ್ಯದಲ್ಲಿ ತೊಡಗಿದ್ದರು. ಅವರಲ್ಲಿ ಸರ್ ಥಾಮಸ್ ಮನ್ರಿ ಎಂಬವರು ಮದ್ರಾಸ್ ಅಧಿಪತ್ಯದ ಸರ್ವೆಸಟಲ್ ಮೆಂಟಿನ ಉಚ್ಚ ಅಧಿಕಾರಿಗಳಾಗಿದ್ದರು. 

ಬಳ್ಳಾರಿಯಲ್ಲಿ ಬಿಡಾರಹೂಡಿದ್ದ ಮನ್ನೋ ಸಾಹೇಬರು ಬಳ್ಳಾರಿ ಜಿಲ್ಲೆಯ ಮಂತ್ರಾಲಯಗ್ರಾಮ ವಿಚಾರವಾಗಿ ತನಿಖೆ ಮಾಡಲು ಆಪ್ತಕಾರದರ್ಶಿ, ಶಿರಸ್ತೇದಾರ್, ಗುಮಾಸ್ತ, ಮುಂತಾದವರೊಡನೆ ಮಂತ್ರಾಲಯಕ್ಕೆ ಬಂದು ಬಿಡಾರ ಮಾಡಿದರು. ಆಂಗ್ಲ ಅಧಿಕಾರಿಗಳು ಮಂತ್ರಾಲಯವನ್ನು ಸ್ವಾಧೀನಪಡಿಸಿಕೊಳ್ಳಲು ಬಂದಿರುವರೆಂದರಿತು ಜನರು ಹೌಹಾರಿದರು. ಮಠಾಧೀಶರು ನಂಜನಗೂಡಿನಲ್ಲಿದ್ದರು. ಮಂತ್ರಾಲಯಕ್ಕೆ ಸಂಬಂಧಿಸಿದ ಕಾಗದಪತ್ರಗಳು ಮಠದಲ್ಲಿದ್ದವು. ಆಗ ಮಂತ್ರಾಲಯದಲ್ಲಿ ಶ್ರೀಮಠದ ಪ್ರತಿನಿಧಿಯೊಬ್ಬರಿದ್ದು ರಾಯರ ಪೂಜಾರಾಧನೆಯ ಮೇಲ್ವಿಚಾರಣೆ ನೋಡುತ್ತಾ ಅಧಿಕಾರಿಗಳಾಗಿದ್ದರು. ಗ್ರಾಮಕ್ಕೆ ಸಂಬಂಧಿಕಾಗದ ಪತ್ರಗಳನ್ನು ನಂಜನಗೂಡಿನಿಂದ ತರಿಸಲು ಕಾಲಾವಕಾಶವೂ ಇರಲಿಲ್ಲ. ಏಕೆಂದರೆ ಅಧಿಕಾರಿಗಳು ಆಗಲೇ ಗ್ರಾಮಕ್ಕೆ ಬಂದುಬಿಟ್ಟಿದ್ದರು. ಮುಂದೇನು ಮಾಡಲೂ ತೋಚನೆ ಮಠದ ಅಧಿಕಾರಿಗಳು, ಗೌಡ, ಕುಲಕರ್ಣಿ ಮತ್ತು ಗ್ರಾಮಸ್ಥರೊಡನೆ ಸಮಾಲೋಚಿಸಿ ಮನ್ರಿ ಜತೆ ಬಂದಿದ್ದ ದೇಶಿಯ-ಅಧಿಕಾರಿಗಳು ಪರಿಸ್ಥಿತಿಯನ್ನು ನಿವೇದಿಸಿದರು. 

ಸರ್ವೆಸೆಟಲ್‌ ಮೆಂಟ್ ಇಲಾಖೆಯಲ್ಲಿ ಅನೇಕ ದೇಶೀಯ ಅಧಿಕಾರಿಗಳೂ ಇದ್ದರು. ಮನೋಜತೆ ಬಂದವರೆಲ್ಲ ಭಾರತಿಯರೇ ಆಗಿದ್ದು ಅವರಿಗೆ ಶ್ರೀಮಠಕ್ಕೆ ಗ್ರಾಮವನ್ನು ಉಳಿಸಿಕೊಡಬೇಕೆಂಬ ಹಂಬಲವಿದ್ದರೂ ಬ್ರಿಟಿಷ್ ಅಧಿಕಾರಿಯ ಮುಂದೆನಿಂತು ವಾದಿಸುವ ಧೈರ್ಯವಿರಲಿಲ್ಲ. ಮಠದ ಅಧಿಕಾರಿ, ಗೌಡ, ಕುಲಕರ್ಣಿ ಗ್ರಾಮಸ್ಥರು ದೇಶೀಯ ಅಧಿಕಾರಿಗಳಿಗೆ ಶ್ರೀರಾಯರ ಮಹಿಮೆ, ಅದ್ಯಾಪಿ ಅವರು ಸಶರೀರರಾಗಿ ಬೃಂದಾವನದಲ್ಲಿರುವ ವಿಚಾರವನ್ನು ಹೇಳಿ, ಹೇಗಾದರೂ ಗ್ರಾಮವನ್ನು ಉಳಿಸಿಕೊಡಬೇಕೆಂದು ದುಂಬಾಲು ಬಿದ್ದರು. ಶ್ರೀರಾಯರ ಮಹಿಮೆಗಳನ್ನು ಕೇಳಿ ತಿಳಿದಿದ್ದ ಶಿರಸ್ತೇದಾರ್, ಗುಮಾಸ್ತೆ, ಮುಂತಾದವರು ಮಂತ್ರಾಲಯವು ಜಪ್ತಾಗದಂತೆ ಮಾಡಬೇಕೆಂದು ಸಂಕಲ್ಪಿಸಿ ಧೈರ್ಯವಹಿಸಿ ಮನ್ನೋ ಸಾಹೇಬರಲ್ಲಿ ಎಲ್ಲ ವಿಚಾರವನ್ನೂ ಅರುಹಿದರು. 

ಅವರ ಮಾತು ಕೇಳಿ ಮಕ್ರೋಸಾಹೇಬರು ನಕ್ಕು “ನನಗೂ ದೇವರು, ಸಾಧುಗಳಲ್ಲಿ ನಂಬಿಕೆಯಿದೆ. ಆದರೆ ೧೫೦ ವರ್ಷಗಳ ಹಿಂದೆ ಸಶರೀರವಾಗಿ ಸಮಾಧಿಯಾದ ಒಬ್ಬ ಯೋಗಿಗಳು ಇನ್ನೂ ಜೀವಂತವಾಗಿರುವರೆಂದು ನೀವು ಹೇಳುತ್ತಿರುವುದು ವಿಚಿತ್ರವಾಗಿದೆ! ಅದನ್ನು ನಂಬಲು ಸಾಧ್ಯವಿಲ್ಲ. ಈ ಬಗೆಯ ಕಲ್ಪನೆಯೇ ಹಾಸ್ಯಾಸ್ಪದ, ಮತ್ತು ಮೂಢನಂಬಿಕೆ! ಭಾರತೀಯರಾದ ನೀವು ಏನನ್ನು ಬೇಕಾದರೂ ನಂಬುತ್ತೀರಿ. ಪ್ರತ್ಯಕ್ಷ ಪ್ರಮಾಣ, ಅಥವಾ ಸರಿಯಾದ ಕಾಗದ ಪತ್ರಗಳಿದ್ದಲ್ಲಿ ಅದನ್ನು ವಿವೇಚಿಸಿ ನಿರ್ಣಯ ನೀಡುತ್ತೇನೆ, ಇಲ್ಲದಿದ್ದರೆ ಆಂಗ್ಲಪ್ರಭುತ್ವದವರ ಆಜ್ಞೆಯಂತೆ ಗ್ರಾಮವನ್ನು ಜಪ್ತಿಮಾಡದೆ ವಿಧಿಯಿಲ್ಲ ! ನೀವಿಷ್ಣು ಹೇಳಿರುವುದರಿಂದ ನಾನೂ ಒಮ್ಮೆ ಪ್ರತ್ಯಕ್ಷವಾಗಿ ನಿಮ್ಮ ಗುರುಗಳ ಸಮಾಧಿಯನ್ನು ಸಂದರ್ಶಿಸಿ ಆನಂತರ ತೀರ್ಮಾನಮಾಡುತ್ತೇನೆ” ಎಂದು ಹೇಳಿದರು. ಈ ವಿಚಾರ ತಿಳಿದ ಮಠದ ಅಧಿಕಾರಿ, ಗ್ರಾಮಸ್ಥರು ಖಿನ್ನರಾಗಿ, ಶ್ರೀರಾಯರೇ ಆಂಗ್ಲ ಅಧಿಕಾರಿಯ ಮೇಲೆ ಪ್ರಭಾವಬೀರಿ, ಪ್ರೇರಣೆಮಾಡಿ, ತಮ್ಮ ಗ್ರಾಮವನ್ನು ಉಳಿಸಿಕೊಳ್ಳಬೇಕೆಂದು ಗುರುರಾಜರಿಗೆ ಮೊರೆಹೋಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿಯೇ ಶ್ರೀರಾಯರು ತಮ್ಮ ಯೋಗಶಕ್ತಿಯ ಮಹತ್ವವನ್ನು ಬೀರಿ ಆಂಗ್ಲನಾದ ಸರ್ ಥಾಮಸ್ ಮನೋವನ್ನು ವಿಸ್ಮಯಗೊಳಿಸಿದರು. ಅದು ಹೀಗೆ ನಡೆಯಿತು.

ಮಂತ್ರಾಲಯದಲ್ಲಿ ಬಿಡಾರಮಾಡಿದ್ದ ಮನೋ, ಮರುದಿನ ಪ್ರಾತಃಕಾಲ ಗ್ರಾಮದ ಸಂದುಗೊಂದುಗಳನ್ನು ಬಳಸಿ ದಿಡ್ಡಿಯಿಂದಿಳಿದು ಬರುತ್ತಿದ್ದಾನೆ. ಮಠದ ಅಧಿಕಾರಿಗಳು ಮಂತ್ರಾಲಯ ಗ್ರಾಮಸ್ಥರು ನೂರಾರುಜನ ಆತನನ್ನು ಹಿಂಬಾಲಿಸಿದ್ದಾರೆ. ಯಾರ ಮುಖದಲ್ಲೂ ತೇಜಸ್ಸಿಲ್ಲ, ಏನೋ ಕಳವಳ, ಆದರೂ ರಾಯರು ತಮ್ಮ ಗ್ರಾಮ ಉಳಿಸಿಕೊಳ್ಳುವರೆಂಬ ನಂಬಿಕೆ, ಅದಕ್ಕಾಗಿ ಮನಸ್ಸಿನಲ್ಲಿ ಪ್ರಾರ್ಥನೆ ಹೀಗೆ ವಿವಿಧಭಾವನೆಗಳಿಗೊಳಗಾಗಿದ್ದಾರೆ. ದಿಡ್ಡಿಯನ್ನಿಳಿದು ಬರುತ್ತಿದ್ದ ಮನ್ನಿಗೆ ಬೆಳಗಿನ ಸೂರ್ಯನ ಹೊಂಗಿರಣಗಳಿಂದ ತಳತಳನೆ ಹೊಳೆಯುತ್ತಾ, ಸಳಸಳನೆ ಹರಿಯುತ್ತಿರುವ ತುಂಗಭದ್ರೆಯ ದರ್ಶನವಾಯಿತು. ಆಗ ಮನ್ನೋ ಸಾಹೇಬನ ಶರೀರದಲ್ಲಿ ಅದಾವುದೋ ಒಂದು ಶಕ್ತಿ ಹರಿದಂತೆ ಭಾಸವಾಯಿತು. ಪರಮಪಾವನೆಯಾದ ವರಾಹನಂದಿನಿಯ ದರ್ಶನಮಾತ್ರದಿಂದ ಅವನ ತನುಮನಗಳನ್ನು ತೊಳೆದುಬಿಟ್ಟಳೋ ಏನೋ! ಮನೋಸಾಹೇಬ ಭರಭರನೆ ತುಂಗೆಯುತ್ತ ಧಾವಿಸಿ, ತುಂಗೆಯನ್ನು ಸ್ಪರ್ಶಿಸಿ, ನಿರ್ಮಲ ಶೀತಲ ಜಲದಿಂದ ಕೈ-ಕಾಲು-ಮುಖಗಳನ್ನು ತೊಳೆದನು. ಹಿಂದೆಂದೂ ಮನೋನಲ್ಲಿ ಕಾಣದ ಈ ವರ್ತನೆಯಿಂದ ಅವನ ಕಾರ್ಯದರ್ಶಿ, ಅಧಿಕಾರವರ್ಗದವರು ಚಕಿತರಾದರು. ಆಪ್ತಕಾರ್ಯದರ್ಶಿಯತ್ತ ತಿರುಗಿ ಮನೆ ಆ ಗುರುಗಳ ಸಮಾಧಿಯಲ್ಲಿದೆ?” ಎಂದು ಪ್ರಶ್ನಿಸಿದನು. ಕಾರ್ಯದರ್ಶಿಯು ಗುರುಗಳ ಆಲಯದತ್ತ ಕೈ ತೋರಿಸಿದ. ಗೌಡ, ಕುಲಕರ್ಣಿಗಳು ಮುಂದೆ ಬಂದು ಮಾರ್ಗಪ್ರದರ್ಶನಮಾಡಹತ್ತಿದರು. ಗುಂಡುಕಲ್ಲು, ಮುಳ್ಳುಗಳಿಂದ ಆವೃತವಾದ ಕಿರುವಾದ ದಾರಿಯಲ್ಲಿ ನಡೆದು ಮನೋಸಾಹೇಬ ಟೊಂಕದೆತ್ತರದ ಪ್ರಾಕಾರಗೋಡೆಯಿಂದಾವೃತವಾಗಿದ್ದ ಗುರುಗಳ ಆಲಯದ ಸಮೀಪಕ್ಕೆ ಬಂದನು. 

ಭವ್ಯ ಶಿಲಾಮಂಟಪದಿಂದ ಶೋಭಿಸುವ ಎರಡು ಬೃಂದಾವನಗಳ ಗರ್ಭಾಲಯಗಳೂ, ಎದುರಿಗಿದ್ದಶ್ರೀವಾಯುದೇವರ ಮಂಟಪವೂ ಮನೋಸಾಹೇನ ದೃಷ್ಟಿಗೆ ಗೋಚರಿಸಿದೆವು. ಆಲಯ ಸಮೀಪಕ್ಕೆ ಬಂದೊಡನೆಯೇ ಅವನಿಗೆ ಹಿಂದೆಂದೂ ಅನುಭವಿಸದ ಮನಶ್ಯಾಂತಿ, ಸಮಾಧಾನ, ತೃಪ್ತಿಗಳುಂಟಾದವು ! ಮೈಪುಳಕಿಸಿತು. ಕೂಡಲೇ ಧರಿಸಿದ್ದಪಾದರಕ್ಷೆಗಳು, ಟೊಪ್ಪಿಗೆಗಳನ್ನು ನಿಂತಲ್ಲಿಯೇ ಕಳಚಿ ಚಪ್ರಾಚಿ (ಜಪಾನ)ಯ ಕೈಗಿತ್ತು ಮುನ್ನಡೆದನು. 

ಮೇಷಮಸ್ತಕವಿರುವ ಸಣ್ಣ ಮಹಾದ್ವಾರದ ಬಳಿ ಬಂದು ನಿಂತಾಗ ಹತ್ತಿರವಿದ್ದವರು “ಎದುರಿಗೆ ಕಾಣುವುದೇ ಶ್ರೀರಾಘವೇಂದ್ರಗುರುಗಳ ಬೃಂದಾವನ, ಮಗ್ಗಲಿನಲ್ಲಿರುವುದು ಶ್ರೀವಾದೀಂದ್ರತೀರ್ಥರೆಂಬ ಮತ್ತೊಬ್ಬ ಮಹನೀಯರ ಬೃಂದಾವನ” ಎಂದು ಹೇಳಿದರು. ರಾಯರ ಗರ್ಭಾಂಗಣದ ಕಟಾಂಜನದ ಬಾಗಿಲು ಹಾಕಿದ್ದಿತು. ಮನೋ ಸಾಹೇಬ “ಗುರುಗಳ ಸಮಾಧಿಯನ್ನು ನಾನು ನೋಡಬಯಸುತ್ತೇನೆ” ಎಂದಾಗ ಮಠದ ಅಧಿಕಾರಿಗಳ ಅಪ್ಪಣೆಯಂತೆ ಅರ್ಚಕರು ಕಟಾಂಜನದ ಬಾಗಿಲು ತೆರೆದು ದೂರಸರಿದು ನಿಂತರು. 

ಇಂದ್ರನೀಲಮಣಿಕಾಂತಿಯಿಂದ, ನಾಮಮುದ್ರೆ-ತುಳಸೀಹಾರಗಳಿಂದ ಅಲಂಕೃತವಾದ ರಾಯರ ಭವ್ಯವೃಂದಾವನ, ಎರಡೂ ಪಾರ್ಶ್ವಗಳಲ್ಲಿ “ಇಲ್ಲಿ ಶರಣಾಗತರಾಗಿ ಬಂದರೆ ಅಜ್ಞಾನದ ಕತ್ತಲನ್ನು ಕಳೆದು ಜ್ಞಾನದ ಬೆಳಕನ್ನು ಈ ಜ್ಞಾನಿನಾಯಕರು ಕರುಣಿಸುವರು” ಎಂದು ಸಾರುತ್ತಿವೆಯೋ ಎಂಬಂತಿರುವ ಎರಡು ನಂದಾದೀಪಗಳು ಮಿನುಗುತ್ತಿದ್ದವು! ರಾಯರ ಬೃಂದಾವನದ ದರ್ಶನದಿಂದ ಹರ್ಷಿತರಾದ ಜನರು “ರಾಜಾಧಿರಾಜ ಗುರುಸಾರ್ವಭೌಮ ಗೋವಿಂದಾ ಗೋವಿಂದಾ ಎಂದು ಜಯಘೋಷ ಮಾಡಿ ನಮಿಸಿ ಕರಜೋಡಿಸಿ ನಿಂತರು. 

ಅದೇನಾಯಿತೋ, ಇದ್ದಕ್ಕಿದಂತೆ ಮನೋಸಾಹೇಬನು ಸೈನ್ಯಪದ್ಧತಿಯಂತೆ ಕಾಲುಜೋಡಿಸಿ, ಎದೆಯುಬ್ಬಿಸಿ ವದನೆಸಲ್ಲಿಸಿ, ಕರೆಜೋಡಿಸಿ ಹಿಂದೂಜನರಂತೆ ವಿನೀತನಾಗಿ ನಿಂತನು! ಅದನ್ನು ಕಂಡು ಸುತ್ತಲಿದ್ದವರು ಅಚ್ಚರಿಗೊಂಡರು. ವಿಮತೀಯನೂ, ವಿಧರ್ಮಿಯನೂ, ವಿದೇಶೀಯನೂ ಆದ ಆಂಗ್ಲ ಪ್ರಭುತ್ವದ ದೊಡ್ಡ ಅಧಿಕಾರಿಯೊಬ್ಬನು ಭಾರತದ ಸಂತರ ಬೃಂದಾವನಕ್ಕೆ ಗೌರವಸಲ್ಲಿಸುವುದೂ ಒಂದು ಅತಿಶಯವಷ್ಟೆ! 

ಮನೋ ಸಾಹೇಬನ ಮುಖದಲ್ಲಿ ಏನೋ ಪರಮಾದ್ಭುತವನ್ನು ಕಂಡು ಅಚ್ಚರಿಗೊಂಡ ಭಾವ ಕಂಡುಬರುತ್ತಿದೆ! ಮನೋ ಏನೇನೋ ಅಸ್ಪಷ್ಟವಾಗಿ ಬಡಬಡಿಸುತ್ತಿದ್ದಾನೆ! ಅದೊಂದೂ ಅಲ್ಲಿದ್ದವರಿಗೆ ಸರಿಯಾಗಿ ಕೇಳಿಸುತ್ತಿಲ್ಲ. ಆದರೂ ಅವನು ಮಾತನಾಡುತ್ತಿರುವನೆಂಬುದಷ್ಟು ಗೊತ್ತಾಗುತ್ತಿದೆ. ಆಗ ಮನೋ ಪಕ್ಕದಲ್ಲಿದ್ದ ಆಪ್ತ ಕಾರ್ಯದರ್ಶಿ, ಶಿರಸ್ತೇದಾರರನ್ನೇನೋ ಪ್ರಶ್ನಿಸಿದ. ಅವರು ವಿಸ್ಮಿತರಾಗಿ ಒಮ್ಮೆ ಬೃಂದಾವನದತ್ತ, ಮತ್ತೊಮ್ಮೆ ಮನೋಸಾಹೇಬನತ್ತ ನೋಡುತ್ತಾ ನಕಾರಾತ್ಮಕವಾಗಿ ತಲೆಯಾಡಿಸಿದರು. 

ಮನ್ನೋ ಸಾಹೇಬನ ಈ ವರ್ತನೆ, ಪ್ರಶ್ನೆಗಳಿಗೆ ಕಾರಣವಿಲ್ಲದಿರಲಿಲ್ಲ. ಅವನು ತನ್ನ ಜೀವನದಲ್ಲಿ ಹಿಂದೆಂದೂ, ಕೇಳಿ ಕಂಡರಿಯದ ಮಹಾಪವಾಡವನ್ನೇ ಕಾಣುತ್ತಿದ್ದಾನೆ! “ಏನಾಶ್ಚರ್ಯ! ನಾನು ನೋಡುತ್ತಿರುವುದು ಮತ್ತಾರಿಗೂ ಕಾಣುತ್ತಿಲ್ಲವಲ್ಲ. ನಾನು ನೋಡುತ್ತಿರುವುದು ಸತ್ಯವೇ, ಭ್ರಮೆಯೇ?” ಎಂದು ಕಣ್ಣುಜ್ಜಿಕೊಂಡು ಮತ್ತೆ ಬೃಂದಾವನದತ್ತ ನೋಡುತ್ತಾ ಆಶ್ಚರ್ಯಾಂಬುಧಿಯಲ್ಲಿ ಮುಳುಗೇಳುತ್ತಿದ್ದಾನೆ ಮನ್ನೋ ಮಹಾಶಯ. ಅವನಲ್ಲಿ ಕಂಡಿದ್ದೇನು ? ಆತನ ದೃಷ್ಟಿಗೆ ಗೋಚರಿಸಿದ ದೃಶ್ಯವಿದು - 

ಮನೋ ಮಹಾಶಯ ತದೇಕದೃಷ್ಟಿಯಿಂದ ಬೃಂದಾವನವನ್ನು ನೋಡುತ್ತಿರುವಂತೆಯೇ ಮಿಂಚಿನ ಗೊಂಚಲು ಮಿನುಗಿದಂತಾಗಿ ಶ್ರೀರಾಯರ ಬೃಂದಾವನ ಇಬ್ಬಾಗವಾಯಿತು! ಪ್ರಖರ ತೇಜಷ್ಟೊಂದು ಕಣ್ಣು ಕೋರೈಸುವಂತೆ ಬೆಳಗುತ್ತಿದೆ. ಆ ಕಾಂತಿಪುಂಜದಲ್ಲಿ ಮತ್ತೇನೂ ಕಾಣದಂತಾಗಿದೆ. ಅದನ್ನು ಅಚ್ಚರಿಯಿಂದ ಮನೋ ನೋಡುತ್ತಿರುವಂತೆ ಆ ಪ್ರಖರತೇಜಸ್ಸು ಬರಬರುತ್ತಾ ಸೌಮ್ಯವಾಯಿತು. ಆ ಭವ್ಯ ಕಾಂತಿಪ್ರಭೆಯ ಮಧ್ಯದಲ್ಲಿ ಶ್ರೀಗುರುಸಾರ್ವಭೌಮರ ದಿವ್ಯಮಂಗಳ ಸ್ವರೂಪವು ಗೋಚರಿಸಿತು! ಮನ್ನೋ ಸಾಹೇಬನಿಗೆ ಗುರುರಾಜರನ್ನು ಕಂಡು ಭಕ್ತಿಗೌರವಗಳುಂಟಾದವು. ಕಂಪಿತಶರೀರನಾಗಿ ಮನ್ಸೂ ಶ್ರೀರಾಯರ ಅಲಭ್ಯದರ್ಶನದಿಂದ ಪುನೀತನಾದ, ಅವನ ಮನದ ಕಲ್ಮಶಗಳೆಲ್ಲವೂ ತೊಳೆದುಹೋದವು. ನಿರ್ಮಲ ಭಾವುಕತೆ ಅವನ ಶರೀರದಲ್ಲಿ ಪುಟಿದೆದ್ದಿತು. ಆಶ್ಚರ್ಯ-ಆನಂದ, ಭಕ್ತಿಗಳಿಂದ ರೋಮಾಂಚಿತನಾದ ಅವನ ಮನದಲ್ಲಿ ಅನಿರ್ವಚನೀಯ ಭಾವನಾತರಂಗಗಳು ಹೊರಹೊಮ್ಮಿದವು. 

“ಭಾರತದ ಶ್ರೇಷ್ಠ ಯೋಗಿಗಳವರು. ನೂರೈವತ್ತು ವರ್ಷಗಳ ಹಿಂದೆ ಸಮಾಧಿಯನ್ನು ಪ್ರವೇಶಿಸಿದ ಇವರು ಇನ್ನೂ ಜೀವಂತವಾಗಿರುವವರಲ್ಲ! ಮಾನವರ ಬುದ್ಧಿಶಕ್ತಿ, ಸಾಹಸಗಳೂ ಮೀರಿದ ಆವುದೋ ಒಂದು ಅದ್ಭುತಶಕ್ತಿ ಇವರಲ್ಲಿ ಮನೆಮಾಡಿರಬೇಕು ! ನಮ್ಮ ಪೂಜ್ಯ ಬೈಬಲ್‌ ಗ್ರಂಥವೂ ಇಂಥ ಅಮಾನುಷಶಕ್ತಿ ಸಂಪನ್ನರಾದ ಮಹಾತ್ಮರ, ವೀರರ ಗಾಥೆಗಳನ್ನು ಬಣ್ಣಿಸುವುದಿಲ್ಲವೆ? ನಿಜ, ದೇವರ ದಾಸರಿಗೆ ಆದಾವುದುತಾನೆ ಅಸಾಧ್ಯ? ಪ್ರಪಂಚವೇ ತಮ್ಮದೆಂದು ತಿಳಿದು ವಿಶ್ವದ ಕಲ್ಯಾಣಕ್ಕಾಗಿ. ಯೋಗ-ತಪೋನಿರತರಾದ ಇಂಥ ಮಹಾತ್ಮರಿಂದಲೇ ಜಗತ್ತಿನ ಉದ್ಧಾರ ಸಾಧ್ಯ. ಮಾನವನು ಅಪೂರ್ಣವೂ, ಅಲ್ಪವೂ ಆದ, ತನ್ನ ಶಕ್ತಿ ಸಾಹಸಗಳನ್ನೇ ನಂಬಿ ದ್ವೇಷ, ಪ್ರತಿಹಿಂಸೆ, ಆಕ್ರಮಣ ಭಾವನೆ. ಸ್ವಾರ್ಥಗಳಿಂದ ಮೈಮರೆತು ಸರ್ವಶಕ್ತನಾದ ದೇವರಿಂದ ದೂರವಾಗುತ್ತಿದ್ದಾನೆ. ಮತ್ತು ತನ್ನ ಜಗತ್ತಿನ ನಾಶದ ಹಾದಿಯಲ್ಲಿ ಮುನ್ನೆಡೆದಿದ್ದಾನೆ. ಇದರಿಂದ ಜಗತ್ತಿನ ಕಲ್ಯಾಣವಾಗದು. ಈ ಭಾರತೀಯರು ದೇವರನ್ನು ನಂಬಿ, ಅವನ ಆಶ್ರಯದಲ್ಲಿ ಸುಖಿಗಳಾಗಿದ್ದಾರೆ, ಜಗತ್ತೇ ಭಗವಂತನದೆಂದು ನಂಬಿರುವುದರಿಂದಲೇ ಭಾರತೀಯರು ತಮ್ಮ ಮತ್ತು ಭಾರತದ ಮೇಲೆ ಯಾರೇ ಧಾಳಿಮಾಡಲಿ, ಆಕ್ರಮಿಸಿ ಆಳಲಿ, ಅದು ದೇವರ ಸಂಕಲ್ಪದಂತೆ ಜರುಗಿದೆಯೆಂದು ತಿಳಿದು ದೇವರ ರಾಜ್ಯದಲ್ಲೇ ತಾವಿರುವುದಾಗಿ ಭಾವಿಸಿ, ಶಾಂತಿಯಿಂದ ಸುಖವಾಗಿ ಜೀವಿಸುತ್ತಿದ್ದಾರೆ. ಅನೇಕ ಆಘಾತಗಳು ರಾಷ್ಟ್ರದಮೇಲಾದರೂ ಅವೆಲ್ಲವನ್ನೂ ಆತ್ಮಶಕ್ತಿಯಿಂದ ಎದುರಿಸಿ, ಇಂದಿಗೂ ವಿಶ್ವಕ್ಕೆ ಒಳಿತನ್ನು ಬೋಧಿಸುತ್ತಾ, ಜ್ಞಾನದ ಬೆಳಕನ್ನು ನೀಡುತ್ತಿರುವ ಇಂಥ ಮಹನೀಯರಿಂದಲೇ ಈ ದೇಶವು ವಿಶ್ವವಿಖ್ಯಾತವಾಗಿದೆ. ಈ ರಾಷ್ಟ್ರವು ಇಂಥ ಮಹಾತ್ಮರನ್ನು ಪಡೆದಿರುವುದರಿಂದಲೇ ಇಂದಿಗೂ ಜಗತ್ತಿಗೆ ಶಾಂತಿ, ಸ್ನೇಹ, ಭಗವನ್ಮಹಿಮೆಗಳ ಮಹತ್ವವನ್ನು ಉಪದೇಶಿಸುತ್ತಾ ಜಗತ್ತಿನ ಶ್ರೇಷ್ಠ ಅಧ್ಯಾತ್ಮಪರ ರಾಷ್ಟ್ರವೆನಿಸಿ ಮಾನ್ಯವಾಗಿದೆ”. 

ಹೀಗೆ ಭಾವನೆಗಳ ಗುಂಗಿನಲ್ಲಿ ಮೈಮರೆತಿದ್ದ ಮನೋ ಎಚ್ಚೆತ್ತು ಗುರುಗಳಿಗೆ ಮತ್ತೊಮ್ಮೆ ವಂದಿಸಿ ನಿಂತರು. ಗುರುರಾಜರು ಅವನ ಜೊತೆಗೆ ಮಾತನಾಡಿ “ಯತೋ ಧರ್ಮಸ್ತತೋ ಜಯಃ” ಎಂಬ ದಿವ್ಯಮಂತ್ರವನ್ನು ಪದೇಶಿಸಿ ಫಲಮಂತ್ರಾಕ್ಷತೆಯನಿತ್ತು ಆಶೀರ್ವದಿಸಿ ಅವನು ನೋಡುತ್ತಿರುವಂತೆಯೇ ಅದೃಶ್ಯರಾದರು!

ಇದಾವುದೂ ಹತ್ತಿರವಿದ್ದವರಿಗೆ ತಿಳಿಯಲಿಲ್ಲ. ಆದರೆ ಮನೆ ಸಾಹೇಬನ ಕರದಲ್ಲಿದ್ದ ಮಂತ್ರಾಕ್ಷತೆಯನ್ನು ಮಾತ್ರ ಸಕಲರೂ ಕಂಡು ವಿಸ್ಮಿತರಾದರು. ತಮ್ಮ ಗ್ರಾಮವನ್ನು ಉಳಿಸಿಕೊಳ್ಳಲು ರಾಯರು ಐರೋಪ್ಯ ಅಧಿಕಾರಿಗೆ ದರ್ಶನವಿತ್ತು ಅನುಗ್ರಹಿಸಿದರೆಂದು ಗ್ರಹಿಸಿ ಗುರುರಾಜರ ಜಯಧ್ವನಿಮಾಡಿ ಕೊಂಡಾಡಿದರು. ಮನ್ನೊ ಸಾಹೇಬನ ಮುಖದಲ್ಲಿ ತೃಪ್ತಿ- ಸಂತೋಷಗಳು, ಕಿರುನಗೆಯೊಡೆನೆ ತಾಂಡವಿಸುತ್ತಿತ್ತು. ಶಿರಸ್ತೇದಾರನಿಗೆ ಮಂತ್ರಾಕ್ಷತೆ ತೋರಿ “ಗುರುಗಳು ದರ್ಶನವಿತ್ತು ಮಾತನಾಡಿ ಇದನ್ನು ನೀಡಿದರು. ಇದನ್ನೇನು ಮಾಡಬೇಕು ?” ಎಂದು ಪ್ರಶ್ನಿಸಿದನು. ಸಮೀಪದಲ್ಲಿದ್ದವರು “ಸ್ವಾಮಿ, ಇದು ಗುರುಗಳ ಅನುಗ್ರಹದ್ಯೋತಕವಾದ ಮಂತ್ರಾಕ್ಷತೆ, ಪವಿತ್ರವಾದುದು ಇದು ಯಾರಿಗೂ ದೊರೆಯುವುದಿಲ್ಲ. ನೀವು ಭಾಗ್ಯಶಾಲಿಗಳು ನಿಮಗೆ ದೊರಕಿದೆ! ಇದನ್ನು ಶಿರದಲ್ಲಿ ಧರಿಸಬೇಕು. ಭದ್ರವಾಗಿ ಇಟ್ಟುಕೊಂಡಿರಿ. ನಿಮ್ಮ ಮನೋರಥಗಳೆಲ್ಲ 'ಸಿದ್ಧಿಸಿ ಮಂಗಳವಾಗುವುದು” ಎಂದು ಹೇಳಿದರು. ಮನ್ಸೂ ಆನಂದದಿಂದ ಮಂತ್ರಾಕ್ಷತೆ ಶಿರದಲ್ಲಿ ಧರಿಸಿ, ಅರ್ಧಭಾಗ ಅಂದಿನ ತನ್ನ ಭೋಜನಕ್ಕೆ ಉಪಯೋಗಿಸಲು ಹೇಳಿ ಆಪ್ತಕಾರದರ್ಶಿಗೆ ಕೊಟ್ಟು ಉಳಿದ ಅರ್ಧ ಮಂತ್ರಾಕ್ಷತೆಯನ್ನು ತನ್ನ ಕರವಸ್ತ್ರದಲ್ಲಿ ಕಟ್ಟಿ ಕಿಸೆಗೆ ಸೇರಿಸಿದನು. ಆನಂತರ ರಾಯರ ಬೃಂದಾವನಕ್ಕೆ ಕರಮುಗಿದು ಎಲ್ಲರೊಡನೆ ಬಿಡಾರಕ್ಕೆ ತೆರಳಿದನು.476 

ಅಂದು ಗುರುಗಳಿತ್ತ ಮಂತ್ರಾಕ್ಷತೆಯಿಂದ ತಯಾರಿಸಿದ್ದ ಭೋಜನವನ್ನು ಸ್ವೀಕರಿಸಿ ತೃಪ್ತನಾಗಿ ಮನೋ ಸಾಹೇಬನು ಅಲ್ಲಿಯೇ ಮಂತ್ರಾಲಯ ಗ್ರಾಮವು ಶ್ರೀರಾಘವೇಂದ್ರಸ್ವಾಮಿಗಳವರ ಮಠಕ್ಕೆ ಶಾಶ್ವತವಾಗಿ ನಡೆದುಬರುವಂತೆ ಲಿಖಿತ ಮೂಲಕವಾಗಿ ಅಪ್ಪಣೆಮಾಡಿ ಅದರ ಒಂದು ಪ್ರತಿಯನ್ನು ಶ್ರೀಮಠದ ಅಧಿಕಾರಿಗಳಿಗೆ ಕೊಟ್ಟು ಬಳ್ಳಾರಿಗೆ ಪ್ರಯಾಣ ಬೆಳೆಸಿದನು. ಮುಂದೆ ಕೆಲದಿನಗಳಾದ ಮೇಲೆ ಈ ಎಲ್ಲಾ ವಿಚಾರಗಳನ್ನು ಶ್ರೀಮಠದ ಅಧಿಕಾರಿಯಿಂದ ತಿಳಿದ ಪೀಠಾಧಿಪತಿಗಳು ಆನಂದಭರಿತರಾಗಿ ಶ್ರೀರಾಯರ ಮಹಿಮೆಯನ್ನು ಕೊಂಡಾಡಿದರು. 

ಶ್ರೀರಾಯರ ಕೃಪೆಗೆ ಪಾತ್ರರಾದ ಮಕ್ರೋಸಾಹೇಬರು ಮುಂದೆ ಬ್ರಿಟಿಷ್ ಸರಕಾರದಿಂದ “ಸರ್” (ನೈಟ್‌ ಹುಡ್) ಪ್ರಶಸ್ತಿಯನ್ನೂ ಮದ್ರಾಸ್‌ ಪ್ರಾಂತ್ಯದ ರಾಜ್ಯಪಾಲ ಪದವಿಯನ್ನೂ ಪಡೆದು ಸರ್ ಥಾಮಸ್ ಮನ್ರಿ ಎಂದು ವಿಖ್ಯಾತರಾದರು. ಶ್ರೀಗುರುರಾಜರ ಈ ಅದ್ಭುತಪವಾಡ ವಿಚಾರವು “ಬಳ್ಳಾರಿಯ ಗೆಝಟಿಯರ್'ನಲ್ಲಿ ನಮೂದಾಗಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಇದಲ್ಲದೆ ಕೃಷ್ಣ ಸ್ವಾಮಿರಾವ್ ಎಂಬುವವರು ಬರೆದಿರುವ “ಸರ್ ಥಾಮಸ್ ಮನ್ನೋ” ಎಂಬ ಗ್ರಂಥದಲ್ಲಿ “ಮನ್ನೋ ಸಾಹೇಬರು ಮಂತ್ರಾಲಯದಲ್ಲಿ ೧೫೦ ವರ್ಷಗಳ ಹಿಂದೆ ಸಶರೀರರಾಗಿ ಸಮಾಧಿಸ್ಥರಾದ ಶ್ರೀರಾಘವೇಂದ್ರಸ್ವಾಮಿಗಳೆಂಬ ಯೋಗಿಗಳು ತಮಗೆ ದರ್ಶವಿತ್ತು ಮಾತಾಡಿ ಮಂತ್ರಾಕ್ಷತೆ ಕೊಟ್ಟು ಆಶೀರ್ವಸಿದ ವಿಚಾರವನ್ನು ಲಂಡನ್ನಿನಲ್ಲಿದ್ದ ತಮ್ಮ ಮಗಳಿಗೆ ಬರೆದ ಪತ್ರದಲ್ಲಿ ನಮೂದಿಸಿರುವುದಾಗಿ ಬರೆದಿರುವುದು ಕಂಡುಬಂದಿದೆ. 

ಭಾರತೀಯರು ದೇವರು, ಧರ್ಮಗಳನ್ನು ನಂಬಿರುವ ಆಸ್ತಿಕರು. ಆದ್ದರಿಂದ ಅವು ರಾಯರ ಮಹಿಮೆಯನ್ನು ಕೊಂಡಾಡುವುದು ಸ್ವಾಭಾವಿಕ. ಆದರೆ ನಮ್ಮವನಲ್ಲದ, ವಿದೇಶಿಯನೂ, ವಿಧರ್ಮಿಯನೂ, ಬ್ರಿಟಿಷ್ ಸಾಮ್ರಾಜ್ಯದ ಓರ್ವ ಉಚ್ಚ ಅಧಿಕಾರಿಯಾದ ಸರ್ ಥಾಮಸ್ ಮನ್ರಿ ಸಾಹೇಬನಂಥವರು ಶ್ರೀರಾಯರು ೧೫೦ ವರ್ಷಗಳ ನಂತರವೂ ಜೀವಂತವಾಗಿದ್ದು ತನಗೆ ದರ್ಶನವಿತ್ತು ಮಾತಾಡಿ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರೆಂದು ಹೇಳಿ ಬರೆದಿರುವುದು. ನಿಜವಾಗಿ ಭಾರತೀಯರು ಮುಖ್ಯವಾಗಿ ಶ್ರೀರಾಯರ ಮಹಿಮೆಯನ್ನು ಎತ್ತಿತೋರುವ ಮಹಾಪ್ರಮಾಣವಾಗಿದೆ. ಈ ದೃಷ್ಟಿಯಿಂದ ವಿಚಾರಮಾಡಿದಾಗ ಶ್ರೀಗುರುರಾಜರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಎರಡನೆಯ ಶತಮಾನದ ಮಧ್ಯಭಾಗದಲ್ಲಿ ಮನೋಸಾಹೇಬರಿಗೆ ತೋರಿದ ಈ ಮಹಿಮೆಯು ಅತ್ಯಂತ ಮಹತ್ವಪೂರ್ಣ ಘಟನೆಯೆಂದು ಧಾರಾಳವಾಗಿ ಹೇಳಬಹುದು.

476 ಮನ್ನೋ ಸಾಹೇಬನು ವಿಧರ್ಮಿಯಾನಾಗಿ - ವಿದೇಶಿಯನಾಗಿದ್ದರೂ, ಅವನು ಸ್ವರೂಪತಃ ಯೋಗ್ಯಜೀವಿ ಎಂಬುದನ್ನು ಮಹಾತ್ಮರಾದ ಶ್ರೀರಾಯರು ಅರಿತಿದ್ದರಿಂದಲೇ ಅವನಿಗೆ ಬೇರೊಬ್ಬರಿಗೆ ಅಲಭ್ಯವಾದ ತಮ್ಮ ದರ್ಶನವಿತ್ತು ಮಾತಾಡಿ ಮಂತ್ರಾಕ್ಷತೆಯಿತ್ತು ಅನುಗ್ರಹಿಸಿದರೆಂದು ತಿಳಿಯಬೇಕು.

Extract From :- 

MADRAS DISTRICT GAZETTEERS 

By W. FRANCIS, Esq. I.C.S. 

VOLUME No. 1., BELLARY 

Reprint 1915 by the Superintendent 

Govt. Press, Madras. 

Chapter XV-Adoni Taluk-Page No. 213 

Mantasala (Mantralaya) :- A Shortriem village with a population of 1212 on the Bank of the Taluk. The village is widely known as containing the tomb of the Madhva saint Sri Raghavendra swami the annual festival in August connected with, which is attended by large numbers of pilgrims, including even Lingayats, from Bombay, the Nizam's Domin- ions and even Mysore. The tomb itself is not afchitectural interest. The grant of the landed endowments attached to it, is said one of the Mackenzie MSS. To have been made by Venkanna Pant, the well known Dewan of Sidi Massud Khan, Governor of Adoni form 1662 to 1687. 

A quaint story of Sri Thomas Munro is told about the palce. The endowmnet being threatended with resumption, Munro it is said, came to make enquiries. After removing his boots and taking off his hat he approached the grave. The saint therupon emerged from his tomb and met him. They conversed together for sometime regarding the resumption; but though the saint was visible and audible to munro-who was himself the people de- clare, semi-devine none of the others who were there could either see him or hear what he said. The discussionended, munro returned to his tent and quashed the proposal to resume the endowment. Being offered some concerted rice, he accepted it and ordered it to be used in the preparation of his meals for that day. 

- Madras Review- VII. 280