|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಶ್ರೀಜಗನ್ನಾಥದಾಸರು

ದಾಸದೀಕ್ಷೆಯನ್ನು ಪಡೆಯುವ ಮೊದಲು ಶ್ರೀಜಗನ್ನಾಥದಾಸರು ಶ್ರೀನಿವಾಸಚಾರರೆಂಬ ಹೆಸರಿನಿಂದ ಪ್ರಖ್ಯಾತರಾಗಿದ್ದರು. ಇವರು ಪಾಷಿಕವಂಶಾವತಂಸರಾದ ಬ್ಯಾಗವಾಟದ ಶ್ರೀನರಸಿಂಹಾಚಾರರ (ನರಸಪ್ಪನವರು) ಪುತ್ರರು. ದಾಸರ ಕಾಲ ಕ್ರಿ.ಶ. ೧೭೨೭ ರಿಂದ ೧೮೦೯ರವರೆಗೆ, ಶ್ರೀಗುರುರಾಜರು ಅಲಂಕರಿಸಿದ್ದ ಶ್ರೀಮಧ್ವಾಚಾರರ ಮಹಾಸಂಸ್ಥಾನದಲ್ಲಿ ಒಬ್ಬರಾದ ಮೇಲೊಬ್ಬರಂತೆ ವಿರಾಜಿಸಿದಶ್ರೀವಾದೀಂದ್ರತೀರ್ಥರು, ಶ್ರೀವಸುಧೇಂದ್ರತೀರ್ಥರು, ಶ್ರೀವರದೇಂದ್ರತೀರ್ಥರು, ಶ್ರೀಧೀರೇಂದ್ರತೀರ್ಥರು (೧೭೮೫), ಶ್ರೀಭುವನೇಂದ್ರತೀರ್ಥರು (೧೭೮೫-೧೭೯೯), ಶ್ರೀಸುಭೋಧೇಂದ್ರತೀರ್ಥರು (೧೭೯೯-೧೮೩೫) - ಹೀಗೆ ಐದು ಜನ ಮಹಾಸಂಸ್ಥಾನಾದಿಪತಿಗಳಾದ ಕುಲಗುರುಗಳನ್ನು ಕಂಡು ಸೇವಿಸಿ, ಅನುಗೃಹೀತರಾದ ಮಹನೀಯರು ಜಗನ್ನಾಥ ದಾಸರೆಂದಮೇಲೆ ಇವರ ಭಾಗ್ಯವದೆಷ್ಟು ದೊಡ್ಡದೆಂಬುದು ವ್ಯಕ್ತವಾಗದಿರದು ! 

ಶ್ರೀನಿವಾಸಾಚಾರರ (ದಾಸರಾಯರು) ತಂದೆ ಶ್ರೀನರಸಿಂಹಾಚಾರರು ಶ್ರೀವಸುಧೇಂದ್ರ-ಶ್ರೀವರದೇಂದ್ರತೀರ್ಥರ ಪ್ರೀತ್ಯಾಸ್ಪದ ಶಿಷ್ಯರಾಗಿದಂತೆ ಶ್ರೇಷ್ಠ ಹರಿದಾಸರೂ ಆಗಿದ್ದರು ಅವರ ಸಾಹಿತ್ಯವು “ಶ್ರೀನೃಸಿಂಹವಿಠಲ” ಎಂಬ ಅಂಕಿತದಿಂದ ಪ್ರಖ್ಯಾತವಾಗಿದೆ. 

ಶ್ರೀನಿವಾಸಾಚಾರರು ಕುಲಗುರುಗಳಾದ ವಸುಧೇಂದ್ರ-ವರದೇಂದ್ರದಲ್ಲಿ ಅಧ್ಯಯನಮಾಡಿದ ಪುಣ್ಯವಂತರು. ಆಚಾರರು ಬಾಲ್ಯದಿಂದಲೂ ಬಹುಮೇಧಾವಿಗಳೂ ಪ್ರತಿಭಾಶಾಲಿಗಳೂ ಆಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರಿಗೂ ವಿಶೇಷ ಮಮತೆ ಇದ್ದಿತು. ಒಮ್ಮೆ ತಂದೆ ನರಸಪ್ಪ - ತಾಯಿ ಲಕ್ಷ್ಮಕ್ಕರೊಡನೆ ಬಾಲಕ ಶ್ರೀನಿವಾಸಾಚಾರರು ಶ್ರೀಮಠಕ್ಕೆ ಬಂದಾಗ ಅವರು ತೋರಿದ ಪ್ರತಿಭಾದಿಗಳಿಂದ ಹರ್ಷಿತರಾದ ವಸುಧೇಂದ್ರರು ಅವರನ್ನು ತಮ್ಮ ವಿದ್ಯಾಶಿಷ್ಯರನ್ನಾಗಿ ಸ್ವೀಕರಿಸಿದರು. ತಂದೆ-ತಾಯಿಗಳು ಗುರುಗಳ ಅನುಗ್ರಹದಿಂದ ಪುಳಕಿತರಾಗಿ ಮಗನ ವಿದ್ಯಾಭ್ಯಾಸದ ಹೊಣೆಯನ್ನು ಗುರುಗಳಿಗೊಪ್ಪಿಸಿ ಕೃತಾರ್ಥರಾದರು. ಶ್ರೀನಿವಾಸಾಚಾರ್ಯರು ಶ್ರೀಮಠದಲ್ಲೇ ಇದ್ದು ವಸುಧೇಂದ್ರರ ಪೂರ್ವಾಶ್ರಮ ಸಹೋದರರಾದ (ಭಾವಿ ವರದೇಂದ್ರರು) ಶ್ರೀಬಲರಾಮಾಚಾರ್ಯರಲ್ಲಿ ತರ್ಕ-ವ್ಯಾಕರಣ-ಮೀಮಾಂಸಾದಿ ಶಾಸ್ತ್ರಗಳನ್ನೂ, ಜತೆಗೆ ಶ್ರೀವಸುಧೇಂದ್ರರಲ್ಲಿ ವೇದಾಂತ ಶಾಸ್ತ್ರಾಧ್ಯಯನವನ್ನು ಮಾಡುತ್ತಾ ಪ್ರತಿಭಾನ್ವಿತ ವಿದ್ಯಾರ್ಥಿಯೆಂದು ಕೀರ್ತಿಗಳಿಸಿದರು. 

ಮುಂದೆ ಶ್ರೀವಸುಧೇಂದ್ರರ ತರುವಾಯ ಮಹಾಸಂಸ್ಥಾನಾಧಿಪತಿಗಳಾದ ಶ್ರೀವರದೇಂದ್ರತೀರ್ಥರಲ್ಲಿ ಶ್ರೀನಿವಾಸಾಚಾರರು ನ್ಯಾಯ-ಮೀಮಾಂಸಾ-ವ್ಯಾಕರಣ-ಸಾಹಿತ್ಯ ಮತ್ತು ವೇದಾಂತಶಾಸ್ತ್ರಗಳ ಉದ್ಘಂಥಗಳನ್ನು ಸಾದ್ಯಂತವಾಗಿ ವ್ಯಾಸಂಗಮಾಡಿ ಐದುಶಾಸ್ತ್ರಗಳಲ್ಲಿ ಪ್ರಕಾಂಡಪಂಡಿತರಾಗಿ ಗುರುಗಳ ವಿಶೇಷಪ್ರೀತಿಗೆ ಪಾತ್ರರಾಗಿ, ವಿದ್ವಜ್ಜನರ ಗೌರವಾದರಗಳನ್ನು ಪಡೆದು ಖ್ಯಾತರಾದರು. ಅವರು ಬಾಲ್ಯದಲ್ಲಿಯೇ ರಚಿಸಿದ “ಶ್ರೀವರದೇಂದ್ರಪಂಚರತ್ನ” ಎಂಬ ಕವಿತೆಯು ಪಂಡಿತರ, ಕವಿಗಳ ಮನ್ನಣೆಗೆ ಪಾತ್ರವಾಯಿತು. ಗುರುಗಳ ಅಪ್ಪಣೆ ಆಶೀರ್ವಾದಗಳನ್ನು ಪಡೆದು ಆಚಾರರು ಬ್ಯಾಗವಾಟಕ್ಕೆ ಬಂದು ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಪಾಠ-ಪ್ರವಚನಗಳಲ್ಲಿ ಆಸಕ್ತರಾಗಿ ಕಾಲಯಾಪನೆ ಮಾಡುತ್ತಿದ್ದರು. ಅವರಲ್ಲಿ ನೂರಾರು ಜನ ಶಿಷ್ಯರು ವಿವಿಧ ಶಾಸ್ತ್ರಗಳನ್ನೋದುತ್ತಿದ್ದರು. ಸದಾಚಾರಸಂಪನ್ನರೂ, ಪಾಠಪ್ರವಚನಾಸಕ್ತರೂ, ಧರ್ಮಬೋಧಕರೂ, ಆಗಿದ್ದ ಆಚಾರರನ್ನು ಸಮಸ್ತರೂ ಭಯಭಕ್ತಿಗಳಿಂದ ಗೌರವಿಸುತ್ತಿದ್ದರು. 

ಒಮ್ಮೆ ಪ್ರಾರಬ್ಧಕರ್ಮವಶದಿಂದ ವಿಜಯದಾರಸನ್ನು ನಿಂದಿಸಿದ ಫಲವಾಗಿ ಉದರವ್ಯಾಧಿಗೆ ತುತ್ತಾದರು. ಬಳಲಿ ಬೆಂಡಾದ ಆಚಾರರಿಗೆ ಜೀವನವೇ ಕಹಿಯಾಯಿತು. ಪರಿಹಾರ ಕಾಣದೆ ಅವರು ಮೊದಲು ಘಟಿಕಾಚಲದಲ್ಲೂ, ಅನಂತರ ಮಂತ್ರಾಲಯದಲ್ಲೂ ಸೇವೆ ಮಾಡಿದರು. 

ಶ್ರೀಗುರುರಾಜರಿಗೆ ಶರಣುಹೋದ ಆಚಾರರಿಗೆ ಫಲದೊರಕದಿದ್ದುದರಿಂದ ಜೀವನದಲ್ಲಿ ಜಿಗುಪ್ಪೆಯುಂಟಾಗಿ, ಮರುದಿನ ತುಂಗಭದ್ರಾನದಿಯಲ್ಲಿ ದೇಹತ್ಯಾಗ ಮಾಡಲು ನಿರ್ಧರಿಸಿ, ಕಾಪಾಡಲು ರಾಯರನ್ನು ಮೊರೆಯಿಟ್ಟರು. ಕರುಣಾಳುಗಳಾದ ರಾಯರು ರಾತ್ರಿ ಸ್ವಪ್ನದಲ್ಲಿ ದರ್ಶನವಿತ್ತು "ಶ್ರೀನಿವಾಸ ! ಜ್ಞಾನಿಗಳಾದ ವಿಜಯದಾಸರಿಂದ ನಿನ್ನ ರೋಗ ನಿವಾರಣೆ- ಯಾಗಬೇಕೆಂಬುದು ಶ್ರೀಹರಿಸಂಕಲ್ಪ ! ಅವರಿಗೆ ಶರಣಾಗು. ನಿನ್ನ ರೋಗ ಪರಿಹಾರವಾಗುವುದು” ಎಂದಾಜ್ಞಾಪಿಸಿದರು. ಶ್ರೀನಿವಾಸಾಚಾರ್ಯರು ದುಃಖದಿಂದ ಬಳಲುತ್ತಾ ಚೀಕಲಪರವಿಗೆ ಬಂದು ವಿಜಯದಾಸರ ಮೊರೆಹೊಕ್ಕರು. ದಾಸರು ರಾಯರ ಭಾವವರಿತು ಕನಿಕರದಿಂದ ಆಚಾರರಲ್ಲಿ ಅನುಗ್ರಹ ಮಾಡಿ ಅವರನ್ನು ಗೋಪಾಲದಾಸರ ಬಳಿಗೆ ಕಳಿಸಿದರು. ಗೋಪಾಲದಾಸರು ರಾಯರ ಮತ್ತು ತಮ್ಮ ಗುರುಗಳ ಅನುಗ್ರಹ ಸಂಪಾದಿಸಿ ಬಂದಿರುವ ಆಚಾರರಲ್ಲಿ ಕೃಪೆಮಾಡಿ ಒಂದು ರೊಟ್ಟಿಯನ್ನು ಅಭಿಮಂತ್ರಿಸಿಕೊಟ್ಟರು. ಅದನ್ನು ತಿಂದ ಆಚಾರರಿಗೆ ಉದರವ್ಯಾಧಿ ಪರಿಹಾರವಾಯಿತು! ಆನಂತರ ಶ್ರೀನಿವಾಸಾಚಾರರು ಶ್ರೀಗೋಪಾಲದಾಸರೊಡನೆ ತಿರುಪತಿಗೆ ಬಂದರು. ದೇಹಾಲಸ್ಯ-ರೋಗಾದಿಗಳಿಂದ ಜರ್ಝರಿತ ಶರೀರರಾಗಿದ್ದ ಆಚಾರರು ತಿರುಪತಿಯಲ್ಲಿ ಮೃತರಾದರು. ಆಗ ವಿಜಯದಾಸರು ಸೂಕ್ಷ್ಮರೂಪದಿಂದ ಅಲ್ಲಿಗೆ ಬಂದು “ಶ್ರೀನಿವಾಸಾಚಾರರಿಗೆ ನಲವತ್ತು ವರ್ಷ ನಿಮ್ಮ ಆಯುಷ್ಯವನ್ನು ದಾನಮಾಡಿರಿ” ಎಂದು ಗೋಪಾಲದಾಸರಿಗೆ ಅಪ್ಪಣೆಮಾಡಿದರು. ಗುಲ್ವಾಜ್ಞೆಯಂತೆ ದಾಸರು ತಮ್ಮ ಆಯುಷ್ಯದಲ್ಲಿ ನಲವತ್ತು ವರ್ಷ ಶ್ರೀನಿವಾಸಚಾರರಿಗೆ ದಾನಮಾಡಿದರು! ಶ್ರೀಹರಿವಾಯು-ಗುರುರಾಜರ ಅನುಗ್ರಹ, ದಾಸರ ಕಾರುಣ್ಯದಿಂದ ಶ್ರೀನಿವಾಸಾಚಾರ್ಯರು ಮತ್ತೆ ಜೀವಿಸಿದರು ! 

ಶ್ರೀನಿವಾಸಾಚಾರ್ಯರಿಗೆ ಹರಿದಾಸರ ಮಹಿಮೆ ಅರಿವಾಯಿತು. ತಾವೂ ದಾಸರಾಗಬಯಸಿದ ಅವರು ದಾಸದೀಕ್ಷೆ ನೀಡುವಂತೆ ಗೋಪಾಲದಾಸರನ್ನು ಬೇಡಿದರು. ದಾಸರು “ಶ್ರೀಹರಿಯೇ ನಿಮಗೆ ಅಂಕಿತ ದೀಕ್ಷೆ ನೀಡುವನು” ಎಂದು ಹೇಳಿ ಆಚಾರರನ್ನು ಪಂಢರಪುರಕ್ಕೆ ಕಳಿಸಿದರು. ಆಚಾರರು ಅಲ್ಲಿ ಭೀಮರಥಿನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಅವರಿಗೆ “ಶ್ರೀಜಗನ್ನಾಥವಿಠಲ' ಎಂಬ ಅಂಕಿತವಿದ್ದ ಶಿಲೆಯೊಂದು ದೊರಕಿತು. ಆಚಾರರು ಅಂದಿನಿಂದ ಜಗನ್ನಾಥದಾಸರಾದರು. ದಾಸರಾದ ಕೂಡಲೇ ಶ್ರೀವಿಠಲ ಅವರಲ್ಲಿ ವಿಶೇಷಾನುಗ್ರಹಮಾಡಿ, ಪ್ರತಕ್ಷನಾಗಿ ಔತಣವನ್ನೇರ್ಪಡಿಸಿ ಪೊರೆದ! ಮತ್ತೆ ತಿರುಪತಿಯ ಶ್ರೀನಿವಾಸದೇವರು ಗೋಪಾಲದಾಸರ ವೇಷದಲ್ಲಿ ಅವರಿಗೆ ಔತಣಮಾಡಿಸಿ ಅನುಗ್ರಹಿಸಿದರು ! ಹೀಗೆ ಪಂಢರೀನಾಥ-ಶ್ರೀನಿವಾಸ ದೇವರ ಕರುಣೆ-ಪ್ರೀತಿಗಳಿಗೆ ಪಾತ್ರರಾದ ಜಗನ್ನಾಥದಾಸರು “ರಂಗ ಒಲಿದ ದಾಸರೆಂದು ಜಗತ್ತಿನಲ್ಲಿ ಪ್ರಖ್ಯಾತರಾದರು. 

ಅಂದಿನಿಂದಲೇ ಶ್ರೀಜಗನ್ನಾಥದಾಸರು ಅನೇಕ ಪದ-ಪದ್ಯಗಳನ್ನು “ಶ್ರೀಜಗನ್ನಾಥವಿಠಲ' ಎಂಬ ಅಂಕಿತದಿಂದ ರಚಿಸಲಾರಂಭಿಸಿದರು. ಸಂಸ ತ-ಕನ್ನಡ ಭಾಷೆಗಳಲ್ಲಿ ಮತ್ತು ಚತುಶಾಸ್ತ್ರಗಳಲ್ಲಿ ಪಾರತರಾದದಾಸರು ಹರಿದಾಸವಾಹ್ಮಯದಲ್ಲಿಯೂ ಅದ್ವಿತೀಯ ಪ್ರತಿಭೆಯನ್ನು ಬೀರಿ ಕೀರ್ತಿಗಳಿಸಿದರು. ದೈತಸಿದ್ಧಾಂತದಲ್ಲಿ ಶ್ರೀಗುರುರಾಜರಿಗೆ ಅದಾವ ಒಂದು ಮಹತ್ವ ಸ್ಥಾನಮಾನಗಳಿವೆಯೋ, ಜಗನ್ನಾಥದಾಸರಿಗೂ ಹರಿದಾಸಪಂಥದಲ್ಲಿ ಅಂತಹುದೇ ವಿಶಿಷ್ಟ ಸ್ಥಾನಮಾನಗಳಿವೆ. ಕನ್ನಡ ಹರಿದಾಸಪಂಥದ ಉನ್ನತಿಯ ಕಾಲದಲ್ಲಿದ್ದು, ಹರಿದಾಸಸಾಹಿತ್ಯವನ್ನು ನಿರ್ಮಿಸಿದವರಲ್ಲಿ ಜಗನ್ನಾಥದಾಸರ ಪಾತ್ರವು ಅತ್ಯಂತ ಹಿರಿದಾದುದು, ದಾಸರು ನೂರಾರು ಪದ-ಪದ್ಯ, ಸುಳಾದಿಗಳನ್ನೂ, “ಹರಿಕಥಾಮೃತಸಾರ, ತತ್ತ್ವಸುವ್ವಾಲಿ” ಮುಂತಾದ ಶ್ರೇಷ್ಠ ಪ್ರಮೇಯ ಗ್ರಂಥಗಳನ್ನು ರಚಿಸಿ ಮಹೋಪಕಾರಮಾಡಿದ್ದಾರೆ. ದಾಸರ ಗ್ರಂಥಗಳಲ್ಲಿ ಹರಿಕಥಾಮೃತಸಾರ'ವು ಅತ್ಯುತ್ತಮ ಪ್ರೌಢಗ್ರಂಥವಾಗಿದೆ. ಇದರಲ್ಲಿ ಉಪನಿಷತ್ತು, ಪುರಾಣ, ಪಾಂಚರಾತ್ರಾಗಮ, ಪ್ರಕಾಶಸಂಹಿತೆ ಮುಂತಾದ ಅನೇಕ ಸಂಸ ತಸಾಹಿತ್ಯದಲ್ಲಿ ಅಡಗಿರುವ ಶಾಸ್ತ್ರಾರ್ಥಸಾರವೆಲ್ಲಾ ಸಂಗ್ರಹಿಸಲ್ಪಟ್ಟಿವೆ. ಇಂಥ ವ್ಯಾಪಕವಾದ ಕೃತಿಯು ಹಿಂದೆ ಹರಿದಾಸಸಾಹಿತ್ಯದಲ್ಲಿ ರಚಿತವಾಗಿರಲಿಲ್ಲ; ಮುಂದೂ ರಚಿತವಾಗಲಿಲ್ಲ! ಮಧ್ವಮತದ ಅತ್ಯಂತ ಗಡುಚಾದ ಪ್ರಮೇಯಗಳೆಲ್ಲವನ್ನೂ ಈ ಗ್ರಂಥದಲ್ಲಿ ಸುಲಭಶೈಲಿಯಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾರೆ. ಈ ಗ್ರಂಥದ ಮೇಲೆ ನಾಲ್ಕು ಕನ್ನಡ, ಒಂದು ಸಂಸ ತ-ಹೀಗೆ ಐದು ವ್ಯಾಖ್ಯಾನಗಳು ರಚಿತವಾಗಿದೆ- ಯೆಂದ ಮೇಲೆ ಇದರ ಮಹತ್ವವೆಂಥಹುದೆಂಬುದು ಸ್ಪಷ್ಟವಾಗುವುದು. 

ಶ್ರೀಜಗನ್ನಾಥದಾಸರಿಗೆ ಶ್ರೀರಾಯರಲ್ಲಿ ಅಪಾರಭಕ್ತಿ, ದೈತಶಾಸ್ತ್ರದ ಮೇಲೆ ರಾಯರು ರಚಿಸಿದ ಟಿಪ್ಪಣಿಗಳೊಡನೆ ಪಾಠ-ಪ್ರವಚನ ಮಾಡುತ್ತಾ ಅವುಗಳ ಮಹತ್ವ ವರಿತಿದ್ದರಿಂದ, ದೈತಸಿದ್ಧಾಂತಕ್ಕೆ, ವೈದಿಕಮತಕ್ಕೆ ಅವರ ಗ್ರಂಥಗಳಿಂದಾಗಿರುವ ಉಪಕಾರವನ್ನು ಮನಗಂಡಿದ್ದ ಅವರಿಗೆ ರಾಯರಲ್ಲಿ ಮೊದಲಿನಿಂದಲೂ ಅಧಿಕ ಭಕ್ತಿ-ಶ್ರದ್ಧೆಗಳಿದ್ದವು. ದಾಸದೀಕ್ಷೆ ಸ್ವೀಕರಿಸಿ ಭಗವದನುಗ್ರಹಕ್ಕೆ ಪಾತ್ರರಾಗಿ ಅಪರೋಕ್ಷಜ್ಞಾನಿಗಳಾದ ಮೇಲೆ ಮೇರೆಗೆ ಭೂತಭವಿಷ್ಯದರ್ತಮಾನಗಳು ಕರತಲಾಮಲಕವಾಗಿದ್ದಿತು. ರಾಯರ ಅವತಾರ ರಹಸ್ಯ, ಅವರಿಂದಾಗುತ್ತಿರುವ, ಮುಂದೆ ವಿಶೇಷವಾಗಿ ಜರುಗಲಿರುವ ಲೋಕಕಲ್ಯಾಣಾದಿ ವಿಚಾರಗಳನ್ನು ಅವರರಿತಿದ್ದರು. ಅಂತೆಯೇ ಅವರು ರಾಯರಚರಿತ್ರೆ, ಮಹಿಮೆ, ವೈಶಿಷ್ಟಾದಿಗಳನ್ನು ತಮ್ಮ ಅನೇಕ ಪದಗಳಲ್ಲಿ ಹೃದಯಂಗಮವಾಗಿ ಭಾವುಕರಿಗೆ ಭಕ್ತುದ್ರೇಕವಾಗುವಂತೆ ಬಣ್ಣಿಸಿ, ರಾಯರನ್ನು ಕೊಂಡಾಡಿದ್ದಾರೆ. 

ಜಗನ್ನಾಥದಾಸರು ಸಾಮಾನ್ಯರಲ್ಲ. ಸಾಕ್ಷಾತ್ ಪ್ರಹ್ಲಾದರ ಸಹೋದರರಾದ ಸಹ್ಲಾದರಾಜರೆಂದು ಜ್ಞಾನಿಗಳವರನ್ನು ಸ್ತುತಿಸಿದ್ದಾರೆ! ಜ್ಞಾನಿಗಳಾದ ದಾಸರು ಕೃತಯುಗದಲ್ಲಿ ತಮ್ಮ ಅಣ್ಣಂದಿರಾಗಿದ್ದ ಪ್ರಹ್ಲಾದರಾಜರೇ ಶ್ರೀವ್ಯಾಸರಾಜರಾಗಿ, ಮತ್ತೆ ಈಗ ಶ್ರೀರಾಘವೇಂದ್ರಸ್ವಾಮಿಗಳಾಗಿ ಅವತರಿಸಿದ್ದಾರೆಂದು ತಿಳಿದಿದ್ದರು. ಶ್ರೀಪ್ರಹ್ಲಾದರ ಒಡನಾಡಿಗಳೂ, ಪ್ರೀತಿಗೆ ಪಾತ್ರರೂ ಆಗಿ, ಅವರ ಮಹಿಮೆಯನ್ನು ಬಲ್ಲವರಾದರಿಂದಲೇ ಅವರು ರಾಯರ ಅಗಮ್ಯ ಮಹಿಮೆಗಳನ್ನು ತಮ್ಮ ಒಂದೊಂದು ಕೃತಿಯಲ್ಲಿಯೂ, ಸಜ್ಜನರ ಮೇಲಿನ ಕೃಪೆಯಿಂದ ಮನಮುಟ್ಟುವಂತೆ ಹಾಡಿ ನಲಿದಿದ್ದಾರೆ. 

ಹಿಂದೆ ಸಹ್ಲಾದರಾಗಿದ್ದ ಜಗನ್ನಾಥದಾಸರು ರಾಯರ ಬೃಂದಾವನದ ಮುಂದೆ ನಿಂತಾಗ ಆ ಹಿಂದಿನ ಸಮಸ್ತ ಉದಂತಗಳೂ ಒಂದೊಂದಾಗಿ ಸ್ಮೃತಿಪಥಕ್ಕೆ ಬಂದು ಪ್ರಹ್ಲಾದಾವತಾರಿಗಳಾದ ರಾಯರ ಅನನ್ಯ ಸಾಧಾರಣ ಸದ್ಗುಣಗಳನ್ನು ನೆನೆನೆನೆದು ಭಕ್ತಿಯಿಂದ ಮೈಯುಬ್ಬಿ ಗುರುಗಳನ್ನು ಬಣ್ಣಿಸಿ ಕೊಂಡಾಡಿರುವುದು ಅಚ್ಚರಿಯೇನಲ್ಲ. ರಾಯರ ಅಂತರಂಗ ಭಕ್ತರಾದ ದಾಸರು ಪ್ರತಿದಿನವೂ ಬೃಂದಾವನದಲ್ಲಿ ವಿರಾಜಿಸುವ ರಾಯರೊಡನೆ ಸಂಭಾಷಣೆಮಾಡುತ್ತಿದ್ದರು. ಗುರುರಾಜರು ದಾಸರಿಗೆ ಪ್ರತಕ್ಷ ದರ್ಶನವಿತ್ತು ಮಾತನಾಡುತ್ತಿದ್ದರು! ದಾಸರು ಬೃಂದಾವನದ ಮುಂದೆ ನಿಂತರೆ ಅವರಿಗೆ ಕಾಷಾಯಾಂಬರ, ದಂಡಮಂಡಲುಧಾರಿ- ಗಳಾಗಿ ಊರ್ಧ್ವಪುಂಡ್ರ ಗಂಧಾಕ್ಷತೆ, ತುಳಸೀಮಾಲಾಲಂಕೃತರಾದ ಗುರುರಾಜರ ಭವ್ಯಸ್ವರೂಪದರ್ಶನವೇ ಆಗುತ್ತಿತ್ತು!

ಈ ಅಪೂರ್ವ ಸಹೋದರರಲ್ಲಿ ಆಗಾಗ್ಗೆ ಭಗವತ್ತತ್ವ, ಹರಿವಾಯುಗಳ ಮಹಿಮೆ, ಭಗವದ್ಭಕ್ತರ ವೈಶಿಷ್ಟ್ಯ-ಶ್ರೀಹರಿಯ ಲೀಲಾವಿಲಾಸಗಳ ಬಗೆಗೆ ಸರಸ ಸಂಭಾಷಣೆಗಳಾಗುತ್ತಿದ್ದವು! ಈ ವಿಚಾರ ಬಹುಕಾಲ ರಹಸ್ಯವಾಗುಳಿಯಲಿಲ್ಲ. ಇತರ ಭಕ್ತಜನರಿಗೂ ಅದು ತಿಳಿದುಹೋಯಿತು. ಭಕ್ತರು ತಮ್ಮ ಅಭೀಷ್ಟ ಸಿದ್ಧಿರೋಗ ಪರಿಹಾರಾದಿ ವಿಚಾರಗಳನ್ನು ಶ್ರೀರಾಯರಲ್ಲಿ ಪ್ರಾರ್ಥಿಸಿ ತಮ್ಮ ಅಭಿಲಾಷೆವಾಗಿ ಅಂದಿನಿಂದ ದಾಸರಿಗೂ ರಾಯರ ದರ್ಶನ ದೊರಕದಂತಾಯಿತು, ಇನ್ನು ಸಂಭಾಷಣಾದಿಗಳಲ್ಲಿ ಬಂತು? 

ಹೀಗಾದ್ದರಿಂದ ದಾಸರಿಗೆ ಅಪಾರ ವ್ಯಥೆಯಾಯಿತು. ರಾಯರ ದರ್ಶನ ಅಲಭ್ಯವಾದ್ದರಿಂದ ಖಿನ್ನರಾದ ದಾಸರು ದೀನರಾಗಿ ಕಣ್ಣೀರು ಸುರಿಸುತ್ತಾಬೃಂದಾವನದ ಮುಂದೆನಿಂತು “ಪ್ರಭು, ಗುರುಸಾರ್ವಭೌಮ! ಏಕಿಂತು ಉದಾಶೀನರಾದಿರಿ? ದಾಸನಲ್ಲಿಂತು ಅವಕೃಪೆ ತರವೇ? ಕರುಣಾಳುಗಳಾದ ನಿಮಗಿದು ಭೂಷಣವೇ ? ಇದರಿಂದ ಭಕ್ತಾಧೀನರೆಂಬ ನಿಮ್ಮ ಬಿರುದಿಗೆ ಕುಂದುಬಾರದೇ ? ಕರುಣೆದೋರಿ ಗುರುದೇವ' ಎಂದು ಪ್ರಾರ್ಥಿಸಿದರು. ಆದರೂ ಗುರುಗಳ ದರ್ಶನ ಲಭಿಸಲಿಲ್ಲ. ದಾಸರಾಯರು ದುಃಖಾರ್ತರಾಗಿ ಅನ್ನಾಹಾರಾದಿಗಳನ್ನು ತೊರೆದು ದಿನವೂ ಪ್ರಾರ್ಥಿಸುತ್ತಲೇ ಇದ್ದರು. ತಮ್ಮನ ಮೇಲಿನ ಪ್ರೇಮಾತಿಶಯದಿಂದ ಮನಕರಗಿ ರಾಯರು ಹಿಂದಿನಂತೆ ದರ್ಶನವಿತ್ತರು! ಗುರುಗಳ ದಿವ್ಯದರ್ಶನದಿಂದರೋಮಾಂಚನಗೊಂಡ ದಾಸರಾಯರು ಸಾಷ್ಟಾಂಗಪ್ರಣಾಮಮಾಡಿ ಪ್ರಾರ್ಥಿಸಲಾರಂಭಿಸಿದರು - “ಶ್ರೀಗುರುಸಾರ್ವಭೌಮ, ವಾದಿಗಜಸಿಂಹ! ನಿಮ್ಮನ್ನು ಸ್ಮರಿಸಿ ಬೇಡುವೆನು. ಎಂದಿನಂತೆ ನನ್ನನ್ನು ಸದಾ ಕಾಪಾಡಬೇಕು. ದೈತ್ಯರಾಜ ಹಿರಣ್ಯಕಶ್ಯಪನ ಮಗನೆನಸಿ, ದೇವರ್ಷಿನಾರದರಿಂದ ಉಪದೇಶಪಡೆದು, ಹರಿಯಮಹಿಮೆಯನ್ನು ತಂದೆಗೆ ತಿಳಿಸಿದಾಗ “ನಿನ್ನ ದೇವರನ್ನು ತೋರಿಸು” ಎಂದು ದೈತ್ಯರಾಜ ಗರ್ಜಿಸಿದಾಗ, ಸ್ತಂಭದಲ್ಲಿ ಶ್ರೀನರಹರಿಯನ್ನು ಕರೆದು ತೋರಿದ ಶ್ರೀಪ್ರಹ್ಲಾದರಾಜರೇ ನೀವಲ್ಲವೇ ? ಏಳನೆಯ ವಯಸ್ಸಿನಲ್ಲಿ ಯತಾಶ್ರಮವನ್ನು ಸ್ವೀಕರಿಸಿ, ವಿಜಯನಗರದ ಕೃಷ್ಣದೇವರಾಯನಿಗೆ ಬಂದಿದ್ದ ಕುಹಯೋಗ'ವನ್ನು ಪರಿಹರಿಸಿ, ಮಾಯಾವಾದಿಗಳನ್ನು ಗೆದ್ದು ಚಂದ್ರಿಕಾದಿ ಗ್ರಂಥಗಳನ್ನು ರಚಿಸಿ, ಸಿಂಹಾಸನವೇರಿ ಮೆರೆದ ಶ್ರೀವ್ಯಾಸರಾಜರು ನೀವಲ್ಲವೇ ಸ್ವಾಮಿ! 'ಕಾಮಾರಿಪಿತ ಮೂಲರಾಮನ ಚರಣಕುಮುದ ಚಂದ್ರಮರು ನೀವು! ಬಂಗಾರದ ಕಾಂತಿಯಿಂದ ಪರಿಶೋಭಿಸುವ ದಿವ್ಯದೇಹವುಳ್ಳ ಪಾವನ ಚರಿತ್ರರು ನೀವಹುದು, ಮೂಕರಾಗಿ, ಕಿವುಡರಾಗಿ ಕುರುಡರಾಗಿ ದುಃಖಿಸುವವರನ್ನು ಉದ್ದರಿಸಬಲ್ಲ ಮಹಾಮಹಿಮರು ನೀವೊಬ್ಬರೇ ! ಶ್ರೀಜಗನ್ನಾವಿಥಠಲನ ಚರಣಾರವಿಂದ ಮಧುಕರರಾದ ನೀವು ಅಭೀಷ್ಟ ಸಂದೋಹವಿತ್ತು ನನ್ನನ್ನು ಕಾಪಾಡಿರಿ”. 

“ಶ್ರೀರಾಘವೇಂದ್ರ ನಿಮ್ಮ ಚಾರುಚರಣಗಳಿಗೆ ಶರಣಾಗಿ ಬಂದು ಸೇರಿದ್ದೇನೆ. ಶರಣಜನಮಂದಾರರಾದ ನೀವು ಕರುಣೆ ತೋರಬೇಕು-ನನ್ನದೆಲ್ಲಾ ನಿಮ್ಮ ಅಧೀನವಾಗಿದೆ. ಸ್ವಾಮಿ, ಮನುಜನಾದ ನನ್ನನ್ನು ಪ್ರತಿದಿನ ದಣಿಸುವುದು ಘನವೇ? ಮೂಲರಾಮರ ಪಾದಪಂಕಜಭ್ರಂಗ! ಈ ಬಾಲಕನ ಬಿನ್ನಪ ಲಾಲಿಸೋ ಮುನಿಪ! - ನಿನ್ನ ನಂಬಿರುವೆ ರಾಘವೇಂದ್ರ, ನೀ ಎನ್ನ ಸಲಹಯ್ಯ ಸುಯಮೀಂದ್ರ!” 

“ರಾಘವೇಂದ್ರಗುರುರಾಯ ನನ್ನ ಘೋರಪಾಪ ಸಮುದಾಯವನ್ನು ಗಣನೆಗೆ ತಾರದೆ, ಬಿಡದೆ ಪಾಲಿಸಬೇಕು, ಸ್ವಾಮಿ, ನೀವು ಕರುಣಾಸಮುದ್ರರು. ಭಕ್ತರಲ್ಲಿ ನಿಮಗೆ ಅಪಾರಮಮತೆ, ಇದನ್ನು ನಿಮ್ಮ ದಿವ್ಯಚರಿತ್ರೆಯೇ ಸಾರುತ್ತಿದೆ, ಮುಕುತಿಯನ್ನು ಬೇಡಿದ ವೆಂಕಣ್ಣನಿಗೆ ಮೋಕ್ಷಕೊಡಿಸಿದಿರಿ, ಯವನ ಭೂಪತಿಯು, ನಿಮ್ಮನ್ನು ಪರೀಕ್ಷಿಸಿದೆನಲ್ಲಾ ಎಂದು ದುಃಖಾರ್ತನಾದಾಗ ಅವನಿಂದ ಮಂತ್ರಾಲಯವನ್ನು ಸ್ವೀಕರಿಸಿ ನಿಮ್ಮ ಭಕ್ತನನ್ನಾಗಿ ಮಾಡಿಕೊಂಡಿರಿ, ಪತಿತನನ್ನು ಉದ್ದರಿಸಿದಿರಿ, ಹನ್ನೆರಡು ವರ್ಷಕಾಲ ತಂಜಾಪುರದೇಶದಲ್ಲಿ ಬಂದಿದ್ದ ಕ್ಷಾಮವನ್ನು ಪರಿಹರಿಸಿ ಪ್ರಜರನ್ನು ಅನ್ನದಾನ ಮಾಡಿ ಸಲಹಿದಿರಿ. ಒನಕೆಯನ್ನು ಚಿಗುರಿಸಿ ವಿಪರ, ವೇದಮಂತ್ರ ಮಂತ್ರಗಳ ಮಹಿಮೆಯನ್ನು ನಾಸ್ತಿಕನಾದ ಶಿರಸಂಗಿಯ ದೇಶಾಯಿಗೆ ತೋರಿ ಕೊಟ್ಟಿರಿ. ಅರಣ್ಯಮಾರ್ಗದಲ್ಲಿ ಸೂರ್ಯನ ತಾಪದಿಂದ ಬಳಲಿದ ನಿಮ್ಮ ಸೇವಕನ ಮಡದಿಯು ಪ್ರಸವಿರಲು ಶಿಶು-ಜನನಿಯರನನ್ನು ಕಾಪಾಡಿದಿರಿ. ನೀರಿಲ್ಲದ ಕಾಡಿನಲ್ಲಿ ಗತಪ್ರಾಣನಾಗಿ ಬಿದ್ದಿದ್ದ ಬ್ರಾಹ್ಮಣನನ್ನು ದಂಡದಿಂದ ಜಲನಿರ್ಮಾಣಮಾಡಿ ಜೀವಿತಗೊಳಿಸಿದರಿ, ವಿಜಯ ರಾಘವನಾಯಕನು ಅರ್ಪಿಸಿದ, ರತ್ನ ಮಾಲಿಕೆಯನ್ನು ಅಗ್ನಿಗೆ (ಅಗ್ನಂತರ್ಗತ ಪರಶುರಾಮನಿಗೆ) ಸಮರ್ಪಿಸಿ, ಅದನ್ನು ಮತ್ತೆ ದೇವನಿಂದ ಪಡೆದು ರಾಜನಿಗೆ ತೋರಿ ಮಹಿಮೆ ಬೀರಿದಿರಿ. ನಿಮ್ಮ ಸೇವಕನ ಅಪಮೃತ್ಯು ಪರಿಹರಿಸಿದಿರಿ, ಮಾವಿನ ಹಣ್ಣಿನ ರಸಾಯನದಲ್ಲಿ ಬಿದ್ದು ಮೃತನಾದ ವೆಂಕಟ ದೇಸಾಯಿಯ ಮಗನನ್ನು ಬದುಕಿಸಿ ಅವನ ವಂಶವನ್ನು ಬೆಳಗಿಸಿದಿರಿ. ಹಸ್ತೋದಕ ಪಾದೋದಕ ಮಹಿಮೆಗಳನ್ನು ಪ್ರತಿದಿನವು ತೋರಿಸುತ್ತಿರುವಿರಿ. ನಿಮ್ಮ ಮಹಿಮೆಗೆ ಸಾಟಿಯಿಲ್ಲ. ಅನುಗ್ರಹಕ್ಕೆ ಅಡೆ-ತಡೆಯಿಲ್ಲ. ನಿಮ್ಮ ಮೂಲಕ ಜಗನ್ನಾಥ ವಿಠಲನು ಲೋಕದ ಜನತೆಯನ್ನು ಪೊರೆದು ನಿಮ್ಮ ಕೀರ್ತಿಯನ್ನು ಜಗತ್ತಿನಲ್ಲಿ ಬೆಳಗಿಸುತ್ತಿದ್ದಾನೆ! ಸ್ವಾಮಿ, ಲೋಕಗುರುಗಳೇ, ನಿಮಗೆ ಆನಂತ ನಮಸ್ಕಾರ...” ಹೀಗೆ ದಾಸರಾಯರ ಮುಖದಿಂದ ಅನೇಕ ಪದಗಳ ರೂಪವಾಗಿ ಶ್ರೀಗುರುಮಹಿಮ ತರಂಗಿಣಿಯು ಹೊರಹೊಮ್ಮಿ ಕೇಳಿದವರ ಮೈಮನಗಳನ್ನು ಪವಿತ್ರಗೊಳಿಸಿತು. 

ಶ್ರೀಜಗನ್ನಾಥದಾಸರ ಭಕ್ತಿಯಸ್ತುತಿಯಿಂದ ಮುದಗೊಂಡ ಮಂತ್ರಾಲಯದ ಮುನೀಂದ್ರರು ಮಂದಹಾಸಬೀರಿ “ವತ್ಸ, ನಿನ್ನ ಭಕ್ತಿಗೆ ಮೆಚ್ಚಿಹೆವು, ಇನ್ನು ಮುಂದೆ ಹರಿದಾಸಪಂಥವು ನಿನ್ನಿಂದ ಸರ್ವತೋಮುಖವಾಗಿ ಅಭಿವೃದಿಸುವುದು. ನಿನ್ನ ಕೃತಿಗಳು ಶ್ರೀಹರಿಯನ್ನು ಒಲಿಸಿಕೊಳ್ಳಲು ಸಾಧನವಾಗಿ, ಸುಜನರಿಗೆ ದಾರಿದೀಪವಾಗಿ ಬೆಳಗುವವು. ನಿನ್ನ ಸಾಹಿತ್ಯ ಆಚಂದ್ರಾರ್ಕವಾಗಿ ಕಂಗೊಳಿಸುವುದು. ನಿನ್ನ ಹೆಸರು ಕೀರ್ತಿ ಅಜರಾಮರವಾಗುವುದು. ನೀನು ಭಾಗವತಧರ್ಮಪ್ರಸಾರಕನಾಗಿ ಚಿರಕಾಲ ಬಾಳು. ತಮ್ಮ ! ಇನ್ನು ಮುಂದೆ ನಿನ್ನ ಸಂದೇಹಗಳಿಗೆಲ್ಲ ಸ್ವಪ್ನದಲ್ಲಿ ದರ್ಶನವಿತ್ತು ಸಮಾಧಾನ ನೀಡುವೆವು. ನಮ್ಮಿಂದ ಮತ್ತೇನನ್ನು ಅಪೇಕ್ಷಿಸುವೆ ಸಹೋದರ! ನಿನಗೆ ಮಂಗಳವಾಗಲಿ” ಎಂದು ವರವಿತ್ತು ಆಶೀರ್ವದಿಸಿ ಅದೃಶ್ಯರಾದರು. 

ದಾಸರು ಬೃಂದಾವನಕ್ಕೆ ನಮಸ್ಕರಿಸಿ ಧನ್ಯನಾದೆ, ಗುರುಸಾರ್ವಭೌಮ, ನಿಮಗೆ ನಮೋ ನಮಃ” ಎಂದು ಹೇಳಿ ಶ್ರೀಜಗನ್ನಾಥದಾಸರು ರಾಯರು ತಮ್ಮಲ್ಲಿ ಮಾಡಿದ ಮಹಾನುಗ್ರಹದಿಂದ ಆನಂದತುಂದಿಲರಾದರು. ಅಂದಿನಿಂದ ಗುರುರಾಜರು ದಾಸರಿಗೆ ಸ್ವಪ್ನದಲ್ಲಿ ದರ್ಶನವಿತ್ತು ಅನುಗ್ರಹಿಸುತ್ತಿದ್ದರು. 

ಶ್ರೀಜಗನ್ನಾಥದಾಸರಲ್ಲಿ ಶ್ರೀರಾಯರು ಮಾಡಿದ ಈ ಅನುಗ್ರಹವು ಅವರ ಆಶ್ರಿತಜನ ವಾತ್ಸಲ್ಯ ಮತ್ತು ಅಗಾಧ ಮಹಿಮೆಗಳಿಗೆ ಉದಾಹರಣೆಯಾಗಿದೆ. ಹೀಗೆ ರಾಯರು ಅರ್ಹರಾದ ಸುಜೀವಿಗಳಿಗೆ ಅವರ ಸ್ವರೂಪಯೋಗ್ಯತೆಯರಿತು, ಪ್ರತ್ಯಕ್ಷ ದರ್ಶನವಿತ್ತು ಸಂಭಾಷಿಸಿದ ದೃಷ್ಟಾಂತಗಳು ಹೇರಳವಾಗಿವೆ. ಅವೆಲ್ಲವೂ ರಾಯರು ದೇವಾಂಶಸಂಭೂತರು, ಶ್ರೀಹರಿವಾಯುಗಳ ವಿಶೇಷಾನುಗ್ರಹ- ಸನ್ನಿಧಾನಪಾತ್ರರು, ಯೋಗಸಿದರು. ಭಕ್ತಬಂಧುಗಳು, ಮಾನವೀಯತೆಯ ಸಾಕಾರಮೂರ್ತಿಗಳು ಎಂಬುದನ್ನು ಸಿದ್ಧಪಡಿಸು- ವುದಲ್ಲದೆ, ಆ ಮಹಾನುಭಾವರು ಬೃಂದಾವನದಲ್ಲಿ ಸಶರೀರರಾಗಿದ್ದು, ಲೋಕಕಲ್ಯಾಣಕ್ಕಾಗಿ ಶ್ರೀಹರಿಯನ್ನು ತಪಸ್ಸಿನಿಂದ ಒಲಿಸಿಕೊಂಡು, ಗಾನಲೋಲನಾದ ವೇದೈಕವೇದ್ಯನಾದ ಪುರುಷೋತ್ತಮನನ್ನು ಕುಣಿಸುತ್ತಿದ್ದಾರೆ-ಎಂಬ ಸತ್ಯಸಂಗತಿಯನ್ನು ನಿತ್ಯವೂ ನೆನಪಿಗೆ ತರುತ್ತಿವೆ!