Unusual Talent

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೧೬. ಅಶ್ರುತಪ್ರತಿಭೆ

ಒಂದು ದಿನ ಮಧ್ಯಾಹ್ನ ಗುರು-ಶಿಷ್ಯರು ಪಾಠ ಮುಗಿದ ಮೇಲೆ ಶ್ರೀಮಠದ ಪಂಡಿತರು, ವಿದ್ಯಾರ್ಥಿಗಳೊಡನೆ ಅಂದಿನ ಪಾಠದ ವಿಚಾರವಾಗಿ ಮಾತನಾಡುತ್ತಾ ಕುಳಿತಿದ್ದಾರೆ. ಆಗ ಶ್ರೀಮಠದ ಪಂಡಿತರೊಬ್ಬರು “ಮಹಾಸ್ವಾಮಿ, ನಮ್ಮದೈತಸಿದ್ಧಾಂತವ ಜ್ಞಾನಿನಾಯಕರಾದ ಶ್ರೀಪದ್ಮನಾಭತೀರ್ಥರೇ ಮೊದಲಾದವರಿಂದ ಬೆಳೆದು, ಇಂದ್ರಾಂಶರಾದ ಶ್ರೀಟೀಕಾಕೃತ್ಪಾದರ ಟೀಕೆಗಳಿಂದ ಚೆನ್ನಾಗಿ ಸುಮರ್ಧಿಸಲ್ಪಟ್ಟು, ಶ್ರೀರಾಜೇಂದ್ರ-ಶ್ರೀಕವೀಂದ್ರ-ಶ್ರೀರಾಮಚಂದ್ರತೀರ್ಥರಿಂದ ಪ್ರಸಾರಗೊಂಡು ಈಗ ಮಹನೀಯರಾದ ಶ್ರೀವಿಬುಧೇಂದ್ರತೀರ್ಥ-ಶ್ರೀಲಕ್ಷ್ಮೀನಾರಾಯಣಮುನಿವರ್ಯರಿಂದ ಪರಮತ ನಿರಾಕರಣವಾರ್ವಕವಾಗಿ ಬೆಡಗುಗೊಂಡು ಎಲ್ಲೆಡೆ ಮೆರೆಯುವಂತಾಗಿದೆ. ಇದು ನಮ್ಮ ಸುದೈವ” ಎಂದು ಬ್ರಹ್ಮಣ್ಯತೀರ್ಥರಲ್ಲಿ ವಿಜ್ಞಾಪಿಸಿದರು.

ಬ್ರಹ್ಮಣ್ಯತೀರ್ಥರು “ನಿಜ, ಪಂಡಿತರೇ, ಆದರೆ ಇಂತಹ ಜ್ಞಾನಿಗಳೆಲ್ಲರೂ ನಮ್ಮ ಸಿದಾಂತವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅವರಲ್ಲಿ ಯಾರಾದರೂ ನಮ್ಮ ಪರಮಸಿದ್ಧಾಂತ ಪ್ರಮೇಯವನ್ನು ಒಂದೆಡೆ ಸೇರಿಸಿ ನಿರೂಪಿಸುವ ಸಾಹಿತ್ಯ ರಚಿಸಿದ್ದರೆ ಸಜ್ಜನರಿಗೆ ಬಹಳ ಉಪಕಾರವಾಗುತ್ತಿತ್ತು. ಆವೊಂದು ಕಾರ್ಯ ಯಾವ ಮಹನೀಯರು ಮಾಡುವರೋ ತಿಳಿಯದು ಹಾಗದಲ್ಲಿ ಅದರಿಂದ ದೈತಸಿದ್ಧಾಂತ ಪ್ರಮೇಯಗಳು ತತ್‌ಕ್ಷಣವೇ ಸಾಮಾನ್ಯ ರೀತಿಯಲ್ಲಾದರೂ ಆಪಂಡಿತಪಾಮರರಿಗೂ ತಿಳಿಯುವಂತಾಗಿ ಮಹೋಪಕಾರವಾಗುವುದು. ಮಾತ್ರವಲ್ಲ, ಅಂತಹ ಸಾಹಿತ್ಯವು ಸಾರ್ವಕಲಿಕವಾಗಿ ರಾಜಿಸಿ, ಜನರಿಗೆ ಸಿದ್ಧಾಂತ ಪ್ರಮೇಯಗಳನ್ನು ತಿಳಿಸಿಕೊಟ್ಟು, ಸಿದ್ಧಾಂತವು ಹೆಚ್ಚು ಪ್ರಸಾರವಾಗುವುದು” ಎಂದರು.

ಅದುವರೆಗೆ ಸುಮ್ಮನೆ ಕುಳಿತಿದ್ದ ಶ್ರೀವ್ಯಾಸರಾಜರು ಉತ್ಸಾಹಿತರಾಗಿ ಗುರುಗಳಿಗೆ ನಮಸ್ಕರಿಸಿ “ಪೂಜ್ಯ ಗುರುವರ್ಯರೇ ! ತಮ್ಮ ವಚನವನ್ನಾಲಿಸಿ ನನಗೆ ಸ್ಫೂರ್ತಿ ಬಂದಂತಾಗಿದೆ. ನೀವು ಹೇಳಿದ ಸಾಹಿತ್ಯ ರಚನೆ ಮಾಡುವಂತೆ ಪ್ರೇರಣೆಯಾಗುತ್ತಿದೆ. ಅಪ್ಪಣೆಯಾದರೆ ವಿಜ್ಞಾಪಿಸುತ್ತೇನೆ” ಎಂದರು.

ಬಾಲಯತಿಗಳ ಮಾತು ಕೇಳಿ ಶ್ರೀಗಳವರು ಪಂಡಿತರು ಅಚ್ಚರಿಗೊಂಡರು. ಬ್ರಹ್ಮಣ್ಯತೀರ್ಥರು ಅವರ ಮುಖವನ್ನು ನೋಡಿದರು. ಅಲ್ಲಿ ಅವರಿಗೆ ವಿಲಕ್ಷಣ ತೇಜಸ್ಸು, ಕಾಂತಿಗಳು ಬೆಳಗುತ್ತಿರುವುದು ಗೋಚರಿಸಿತು. ಮನದಲ್ಲಿ ಏನೋ ಹೊಳೆದಂತಾಯಿತು. ಸಂತೋಷದಿಂದ ನಗುತ್ತಾ “ಪ್ರಿಯ ಶಿಷ್ಯರೇ, ಸಂತೋಷ” ಎಂದರು. ಆಗ ೮ ವಯಸ್ಸಿನ ಬಾಲಯತಿಗಳ ಮುಖಾರವಿಂದದಿಂದ ದೈತಸಿದ್ಧಾಂತ ಪ್ರಮೇಯಸಾರಭೂತವಾದ ಅಪೂರ್ವ ಶ್ಲೋಕವೊಂದು ಹೊರಹೊಮ್ಮಿತು!

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತೋ

ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚಭಾವಂಗತಾಃ | ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಮ್ ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮಾಯ್ಕೆಕವೇದ್ಯೋ ಹರಿಃ ||

ಬಾಲಯತಿಗಳ ಮುಖದಿಂದ ಹೊರಹೊರಟ, ದೈತಸಿದ್ಧಾಂತ ಪ್ರಮೇಯ ನವರತ್ನಮಾಲಾ ರೂಪವಾದ ಆಶುಕವಿತೆಯನ್ನು ಆಲಿಸಿ, ಶ್ರೀಪಾದಂಗಳವರು, ಪಂಡಿತರು ಅಶ್ರುತಪ್ರತಿಭೆಯನ್ನು ತೋರಿದ ಶ್ರೀವ್ಯಾಸತೀರ್ಥರು ದೇವಾಂಶಸಂಭೂತರಾದ ಮಹನೀಯರೆಂದು ಸಂತೋಷಿಸಿ ಅವರನ್ನು ಶ್ಲಾಘಿಸಿದರು.

ಶ್ರೀವ್ಯಾಸತೀರ್ಥರ ನಡೆ-ನುಡಿ, ಆಚಾರ, ಭಗವದ್ಭಕ್ತಿ, ಸತ್ತತ್ವನಿಷ್ಠೆ, ಭಾವುಕತನ, ಧೈರ್ಯ, ಶೀಲಾದಿಗಳನ್ನು ಕಂಡಾಗ ಅನೇಕ ವೇಳೆ ಬ್ರಹ್ಮಣ್ಯತೀರ್ಥರಿಗೆ ಶ್ರೀಪ್ರಹ್ಲಾದರಾಜರನ್ನು ನೆನಪಿಗೆ ತರುತ್ತಿದ್ದವು. ಈಗ ಅವರು ತೋರಿದ ಅಶ್ರುತಾರ್ವ ಪ್ರತಿಭೆಯನ್ನು ಕಂಡು ಶ್ರೀವೇದವ್ಯಾಸದೇವರು ಅಪ್ಪಣೆ ಕೊಡಿಸಿದ್ದಂತೆ ಇವರು ಶ್ರೀಪ್ರಹ್ಲಾದರಾಜರ ಅವತಾರಿಗಳೇ ಎಂಬುದು ಮತ್ತಷ್ಟು ದೃಢವಾಗಿ ಪರಮಾನಂದವಾಯಿತು.

ಆಗ ಅಲ್ಲಿ ಉಪಸ್ಥಿತರಾಗಿದ್ದ ಶ್ರೀಮಠದ ಹಿರಿಯ ಪಂಡಿತರೊಬ್ಬರು ಗುರುದೇವ! ಪೂಜ್ಯಕಿರಿಯ ಶ್ರೀಪಾದಂಗಳವರ ಈ ಅಪೂರ್ವ ಕವಿತೆಯು ಅಸಾಧಾರಣವಾಗಿದೆ. ಶ್ರೀಯವರು ಅಭಿಪ್ರಾಯಪಟ್ಟಂತೆ ಶ್ರೀಮಧ್ವಮತದ ಪರಮ ಪ್ರಮೇಯಗಳ ಸಾರವೇ ಇದಾಗಿದೆ. ಇದಕ್ಕೆ ನನಗೆ ತೋರಿದ ಅರ್ಥವನ್ನು ನಾನು ಉಭಯ ಗುರುಗಳ ಮುಂದೆ ವಿಜ್ಞಾಪಿಸಲು ಆಶಿಸಿದ್ದೇನೆ, ಆ ಭಾಗ್ಯವನ್ನು ನನಗೆ ದಯಪಾಲಿಸಬೇಕಾಗಿ ಕಿರಿಯ ಶ್ರೀಪಾದಂಗಳವರನ್ನು ಪ್ರಾರ್ಥಿಸುತ್ತೇನೆ” ಎಂದರು.

ಶ್ರೀವ್ಯಾಸತೀರ್ಥರು ಮಂದಹಾಸ ಬೀರುತ್ತಾ “ಸಂತೋಷ, ಆಗಬಹುದು" ಎಂದು ಹೇಳಲು ಹಿರಿಯ ಪಂಡಿತರ ಉತ್ಸಾಹದಿಂದ ಶ್ಲೋಕಾಭಿಪ್ರಾಯವನ್ನು ಹೀಗೆ ವಿವರಿಸಲಾರಂಭಿಸಿದರು :

ಗುರುವರ್ಯರೇ, ಈ ಪದ್ಯದಲ್ಲಿ ಶ್ರೀಮಧ್ವಮತದ ಮುಖ್ಯ ಪ್ರಮೇಯಸಾರವಡಗಿದೆ. “ಶ್ರೀಮನ್ಮಧ್ವಮತೇ” ಎಂಬಲಿ ಶ್ರೀಮತ್ತ ವಿಶೇಷಣವು ವೈಶಿಷ್ಟಪೂರ್ಣವಾಗಿದೆ. ವೇದಪ್ರತಿಪಾದ್ಯ ಮಹಿಮೋಪೇತತ್ವವೇ ಶ್ರೀಮತ್ತವು! ಇತರ ಮತಗಳಿಗಿಂತ ಮಧ್ವಮತವೇ ಶ್ರೇಷ್ಠವೆಂದು ಸಮರ್ಥಿಸಲು ಇಲ್ಲಿ ಕಿರಿಯ ಗುರುಗಳು ಶ್ರೀಮತ್ತ ವಿಶೇಷಣವನ್ನು ಕೊಟ್ಟಿದ್ದಾರೆ. ಈ ಶ್ರೀಮತ್ತು ಮಧ್ವಾಚಾರ್ಯರಲ್ಲಿಯೂ, ಅವರ ಮತದಲ್ಲಿಯೂ ವಿವಕ್ಷಿತವಾಗಿದೆ. ಆಚಾರ್ಯ ರಾಯರು ವೇದಪ್ರತಿಪಾದ್ಯ ಮಹಿಮೋಪೇತ ಪವಮಾನಾಂಶಸಂಭೂತರಾದ್ದರಿಂದ ಅವರು ಶ್ರೀಮತ್ವವುಳ್ಳವರಾಗಿದ್ದಾರೆ. “ಮಧ್ಯೆ ವೋ ನಾಮಮಾರುತಂ ಯಜಾ", “ವಿಷ್ಟೋ ಪದೇ ಪರಮೇ ಮದ್ದ ಉತ್ತಃ”, “ತೃತೀಯಮಸ್ಯ ಋಷಭಸ್ಯ ದೋಹಸೇ ದರಪ್ರಮತಿಂ ಜನಯಂತ ಯೋಷಣ ಮುಂತಾದ ಶ್ರುತಿಗಳು ಅವರು ವಾಯುದೇವರೆಂದು ಸಾರುವುದರಿಂದ ಶ್ರೀಮತ್ವ ವಿಶೇಷಣವು ಸಾರ್ಥಕವಾಗಿದೆ.

ಶ್ರೀಮದಾಚಾರ್ಯರು ಪ್ರತಿಪಾದಿಸಿದ ಮತವೇ (ದೈತಸಿದ್ಧಾಂತವೇ) ವೇದಪ್ರತಿಪಾದ್ಯವಾದ ಸತ್ತಿದ್ದಾಂತವೆಂದು ಅದೇ ಶ್ರೀಮತ್ತವು ನಿರೂಪಿಸುವುದು. ಶ್ರೀಮಧ್ವಾಚಾರ್ಯರು ಬ್ರಹ್ಮಮೀಮಾಂಸಾಶಾಸ್ತ್ರಪ್ರಣೇತೃಗಳಾದ, ಶ್ರೀಮನ್ನಾರಾಯಣಾ- ಭಿನ್ನರಾದ, ಶ್ರೀವೇದವ್ಯಾಸದೇವರಿಂದಲೇ ಸಾಕ್ಷಾತ್ತಾಗಿ ಉಪದೇಶ ಪಡೆದು “ಕುರುಸೂತ್ರಭಾಷ್ಯಮವಿಲಂಬಿತಂ ವ್ರಜೇ” ಎಂದು ಶ್ರೀಬಾದರಾಯಣರ ಆಜ್ಞೆಯಂತೆ ಸೂತ್ರಭಾಷ್ಯಾದಿ ಸಚ್ಛಾಸ್ತ್ರಗಳನ್ನು ರಚಿಸಿರುವುದರಿಂದ ಶ್ರೀವೇದವ್ಯಾಸದೇವರಿಗೆ ಸಮ್ಮತವಾದ ಭಾಷ್ಯವೇ ಶ್ರೀಮದಭಾಷ್ಯವಾದ್ದರಿಂದ ಸೂತ್ರಗಳ ನಿಜವಾದ ಭಾವವನ್ನು ಶ್ರೀಸರ್ವಜ್ಞರ ಭಾಷ್ಯವೊಂದೇ ತಿಳಿಸುವುದರಿಂದ ಸನಾತನವಾ, ವೈದಿಕವಾ ಆದ ದೈತಸಿದ್ಧಾಂತವೇ ಸರ್ವಶ್ರೇಷ್ಠವಾದುದೆಂದು “ಶ್ರೀಮನ್ಮಧ್ವಮತೇ” ಎಂಬುದರಿಂದ ಕಿರಿಯ ಶ್ರೀಪಾದಂಗಳವರು ಸಾಧಿಸಿದ್ದಾರೆ!

ಶ್ರೀಮದಾಚಾರ್ಯರು ಪರಮಮಂಗಳಕರವಾದ ಭಾಷ್ಯದಲ್ಲಿ ವೈದಿಕ ಸತ್ತತ್ವಗಳನ್ನು ಹೃದಯಂಗಮವಾಗಿ ನಿರೂಪಿಸಿ ಮುಮುಕ್ಷುಗಳಿಗೆ ಮಹೋಪಕಾರ ಮಾಡಿದ್ದಾರೆ. “ವ್ಯಾಸದೇವಹೃದಯಾತಿವಲ್ಲಭಂ ವಾಸುದೇವಮಗಣೇಯಸದ್ಗುಣಂ | ಸಾಧಯತ್ನಕಲದೋಷವರ್ಜಿತಂ ಜ್ಞಾನಭಕ್ತಿದಮನಂತಸೌಖ್ಯದಮ್ ” ಎಂದು ಶ್ರೀಸುಮಧ್ವವಿಜಯದಲ್ಲಿ ವರ್ಣಿಸಿರುವಂತೆ ಶ್ರೀಮಧ್ವಾಚಾರ್ಯರು ಸೂತ್ರಭಾಷ್ಯದಲ್ಲಿ - ಶ್ರೀಮನ್ನಾರಾಯಣನು ಅನಂತಕಲ್ಯಾಣಗುಣಪೂರ್ಣನೆಂದೂ, ಈ ಪರಮತತ್ವವೇ ಸಕಲ ಶಾಸ್ತ್ರಗಳ ಸಾರಭೂತವೆಂದೂ ನಿರೂಪಿಸಿರುವುದರಿಂದ, ಯಾವ ದೋಷವೂ ಇಲ್ಲದಿರುವ ಆಚಾರ್ಯರ ಭಾಷವ ಭೂತ-ಭಾವಿ-ವರ್ತಮಾನ ಜನರಿಂದ ದೂಷಿಸಲು ಅಶಕ್ಯವಾಗಿರುವುದರಿಂದ ಜ್ಞಾನ-ಭಕ್ತಿಗಳನ್ನು ಕರುಣಿಸಿ, ನಿತ್ಯಸುಖವಾದ ಮೋಕ್ಷವನ್ನು ಕೊಡಿಸಲು ಸಮರ್ಥವಾಗಿರುವುದು - ಮುಂತಾದ ವಿಚಾರಗಳು ಶ್ರೀಮತ್ವ ವಿಶೇಷಣದಿಂದ ಸಿದ್ಧವಾಗುವುದು. ಶ್ರೀಮದಾಚಾರ್ಯರು ವಾಯ್ಲೆಂಶಸಂಭೂತರಾದ್ದರಿಂದ ಅವರು ನಮಗೆ ಪರಮ ಆಪ್ತರು. ವೇದಮೂಲಕವಾ, ಯುಕ್ತಿಗರ್ಭಿತವು ಆದ ಆಚಾರ್ಯರ ಭಾಷ್ಯವು ಶ್ರೇಷ್ಠವಾ, ಆಪ್ತಿ, ಶ್ರುತಿ, ಯುಕ್ತಿಮೂಲವಾದರಿಂದ ಪ್ರಮಾಣತಮವಾಗಿರುವುದರಿಂದ ಅದು ಜಗನ್ಮಾನ್ಯವಾಗಿ ಮುಮುಕ್ಷುಗಳೆಂದ ಸೇವವಾಗಿದೆ - ಮುಂತಾದ ವಿಚಾರವನ್ನು ಶ್ರೀಮತ್ತ ವಿಶೇಷಣದಿಂದ ಸಾಧಿಸಿದ್ದಾರೆಂದು ನಿವೇದಿಸಲು ನನಗೆ ಅತೀವ ಹರ್ಷವಾಗುತ್ತಿದೆ.

ಶ್ರೀಮದಾನಂದತೀರ್ಥಭಗವತ್ಪಾದರು ದೈತಸಿದ್ಧಾಂತದಲ್ಲಿ ಪ್ರತಿಪಾದಿಸುವ ಪ್ರಮುಖ ನವಪ್ರಮೇಯಗಳನ್ನು ಇಲ್ಲಿ ವರ್ಣಿಸಿರುವುದು ಹೃದಯಂಗಮವಾಗಿದೆ. ಆಚಾರ್ಯರು ಸಿದ್ಧಾಂತದಲ್ಲಿ ಶ್ರೀಹರಿಯೇ ಪರರವನೆಂದು ಪ್ರಥಮ ಪ್ರಮೇಯವಾಗಿ ನಿರೂಪಿಸಿರುವುದನ್ನು ಇಲ್ಲಿ “ಹರಿಪರತರಃ” ಎಂಬುದರಿಂದ ವಿವರಿಸಲಾಗಿದೆ. ಅನೇಕ ಉತ್ತಮ ದೇವತೆಗಳಿರುವುದರಿಂದ ಅವರನ್ನು ಬಿಟ್ಟು ಶ್ರೀಹರಿಯನ್ನೇ ಪರಾತ್ಪರನೆಂದು ಏಕೆ ಒಪ್ಪಬೇಕು ? ಅದಕ್ಕೆ ಪ್ರಮಾಣವೇನು ಎಂಬ ಶಂಕೆ ಬಂದರೆ ಶ್ರೀಹರಿ ಸರ್ವೋತ್ತಮತ್ವವನ್ನು ಆಚಾರ್ಯರು ತಮ್ಮ ಭಾಷ್ಯದಲ್ಲಿ ಅನೇಕ ಪ್ರಮಾಣಗಳಿಂದ ಸಾಧಿಸಿರುವುದನ್ನು ಸ್ಪಷ್ಟಪಡಿಸಲು ಇಲ್ಲಿ “ಹರಿಃಪರತರಃ” ಎಂಬುದಾಗಿ ಹೇಳಿದ್ದಾರೆ.

“ಯತೋ ವಾ ಇಮಾನಿ ಭೂತಾನಿ ಜಾಯಂತೆ”, “ತ, ತದ್ವಿಜಿಜ್ಞಾಸ” ಎಂಬ ಶ್ರುತಿಯು ಒಬ್ಬ ಪರಬ್ರಹ್ಮನನ್ನು ಜಿಜ್ಞಾಸನೆಂದು ಪ್ರತಿಪಾದಿಸಿದೆ. ಆ ಪರಬ್ರಹ್ಮನೇ ಶ್ರೀನಾರಾಯಣನೆಂದು ಆಚಾರ್ಯರು ಸಾಧಿಸಿದ್ದಾರೆ. “ಅಥ ಕಸ್ಮಾದುಚ್ಯತೇ ಬ್ರಹ್ಮತಿ' ಇತ್ಯಾದಿ ವೇದಪ್ರತಿಪಾದ್ಯ ಬ್ರಹ್ಮಶಬ್ದಾರ್ಥವೂ, ಶ್ರೀನಾರಾಯಣಶಬ್ದಾರ್ಥವು ಒಂದೇ ಆದುದರಿಂದ ಶ್ರೀಮನ್ನಾರಾಯಣನು ಜಿಜ್ಞಾಸನು. ಇದಕ್ಕೆ ಪುಷ್ಟಿಯಾಗಿ ಸೂತ್ರಕಾರರು, ಇದಕ್ಕೆ ಪೂರ್ವಸೂತ್ರಗಳಾದ “ಸ ವಿಷ್ಣುರಾಹ ಹಿ” “ತಂ ಬ್ರಹ್ಮತ್ಯಾಚಕ್ಷತೇ” ಎಂಬ ದೈವೀಮೀಮಾಂಸೆಯ ಕೊನೆಯ ಸೂತ್ರಗಳಿಂದ ಬ್ರಹ್ಮನೇ ನಾರಾಯಣನು ಎಂದು ಹೇಳಿರುವ ಪ್ರಮಾಣವಿರುವುದರಿಂದಲೂ ತದೇವ ಬ್ರಹ್ಮ ಪರಮಂ ಕವೀನಾಂ” ಎಂಬ ಶ್ರುತಿಯು ಸಮುದ್ರಶಾಯಿಯಾದವನು ಬ್ರಹ್ಮನೆಂದು ಸಾರುವುದರಿಂದ, “ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ | ಅಯನಂ ತನ್ನ ತಾ ಪೂರ್ವಂ ತಸ್ಮಾನ್ನಾರಾಯಣಃ ಸ್ಮೃತಃ ||”, “ಮಮಯೋನಿರಪ್ಪಂತಮುದ್ರೆ ” - ಮುಂತಾದ ವೇದವಾಕ್ಯಗಳಿಂದ ನಾರಾಯಣನೇ ಅಂಥ ಸಮುದ್ರಶಾಯಿಯೆಂದು ವ್ಯಕ್ತವಾಗುವುದರಿಂದ ಬ್ರಹ್ಮಶಬ್ದವಾಚ್ಯನು ಶ್ರೀನಾರಾಯಣನಾದುದರಿಂದ ಅವನೇ ಜಿಜ್ಞಾಸನು ಮತ್ತು ಸರ್ವೋತ್ತಮನು. ಸಕಲ ವೇದಪ್ರತಿಪಾದ್ಯವಾದ ವಸ್ತುವೇ ಸರ್ವೋತ್ತಮವಾದುದರಿಂದ “ನಾಮಾನಿ ಸರ್ವಾಣಿ ಯಮಾವಿಶಂತಿ", “ವೇದ್ಯಶ್ಚ ಸರ್ವೈರಹಮೇವ ವೇದ್ಯ” ಇತ್ಯಾದಿ ಪ್ರಮಾಣಗಳಿಂದ ನಾರಾಯಣನೇ ಸರ್ವವೇದಪ್ರತಿಪಾದ್ಯನೆಂದು ತಿಳಿಯುವುದರಿಂದಲೂ “ಸ್ವಾಮಿಮ ಪುರುಷ ಲೋಕೇ ಕ್ಷರಶಾಕ್ಷರ ಏವ ಚ” ಎಂದು ಭಗವಾನ್ ಶ್ರೀಕೃಷ್ಣನು ಕಂಠರವೇಣ ತಾನೇ ಸರ್ವೋತ್ತಮನೆಂದು ಗೀತೆಯಲ್ಲಿ ಹೇಳಿರುವುದರಿಂದಲೂ ಸಹ ಶ್ರೀಹರಿಯೇ ಸರ್ವೋತ್ತಮನೆಂದು ಆಚಾರ್ಯರು ತಮ್ಮ ಸಿದ್ದಾಂತದ ಪ್ರಥಮ ಪ್ರಮೇಯವನ್ನು ಭಾಷ್ಯದಲ್ಲಿ ವೇದ-ಗೀತಾವಾಕ್ಯಗಳಿಂದ ಸಾಧಿಸಿರುವುದರಿಂದ ಸಕಲ ವೇದಾದಿಶಾಸ್ತ್ರಗಳಿಂದ ಹೇಗೀಯಮಾನ ಮಹಾಮಹಿಮ- ನಾದ ಶ್ರೀಮನ್ನಾರಾಯಣನೇ ಸರ್ವೋತ್ತಮನೆಂದು ಸಿದ್ಧಿಸಿದೆ ಎಂದು ಇಲ್ಲಿ ಹರಿಃ ಪರತರಃ” ಎಂಬುದರಿಂದ ಸ್ಪಷ್ಟಪಡಿಸಲಾಗಿದೆ.

ಇಲ್ಲಿ ಆಚಾರ್ಯರು ಹೇಳಿರುವ ಎರಡನೆಯ ಪ್ರಮೇಯವನ್ನು “ಸತ್ಯಂ ಜಗತ್” ಎಂದು ತಿಳಿಸಿದ್ದಾರೆ.

ಜಗತ್ತು ಮಿಥೆಯಾದ್ದರಿಂದ ಬ್ರಹ್ಮಭಿನ್ನವಾದ (ಹರಿಯಿಂದ ಭಿನ್ನವಾದ) ವಸ್ತುವೇ ಇಲ್ಲದಿರುವಾಗ ಹರಿಯು ಪರತವನೆಂದು ಹೇಳಿದ್ದು ಅಸಂಗತವೆಂಬ ಶಂಕೆಗೆ ಉತ್ತರವಾಗಿ ಹೇಳಿರುವ “ಸತ್ಯಂ ಜಗತ್” ಎಂದು ಇಲ್ಲಿ ಎರಡನೆಯ ಪ್ರಮೇಯವನ್ನಾಗಿ ನಿರೂಪಿಸಿದ್ದಾರೆ.

ಜಗತ್ತು ಮಿಥ್ಯ (ಸುಳ್ಳು) ಎಂದು ಹೇಳುವ ಪರವಾದಿಗಳ ಆಶಯವಿಂತಿದೆ. ಮಿಧ್ಯೆಯೆಂದರೆ, ವ್ಯಾಮಹಾರಿಕ ಸತ್ತವುಳ್ಳದ್ದೆಂದು ಅರ್ಥ. ಪರಬ್ರಹ್ಮನು ಪಾರಮಾರ್ಥಿಕ ಸತ್ಯನು, ಕಪ್ಪೆಚಿಪ್ಪಿನಲ್ಲಿ ತೋರುವ ಬೆಳ್ಳಿಯು (ಇದು ರಜತಮಿತ್ರ ಇದುತ್ವಾಧಿಷಾನೇ ಶುಕ್ತ ಭಾಸಮಾನರಜತತ್ವನಿಶ್ಚಯಃ ಪ್ರಾತಿಭಾಸಿಕ) ಪ್ರಾತಿಭಾಸಿಕ ಸತ್ಯವು, ತಪ್ಪಿನ್ನವಾದ ಪ್ರಪಂಚವು ವ್ಯಾವಹಾರಿಕ ಸತ್ಯ (ಮಿಥ್ಯ) ಎಂದೆನಿಸುವುದು ಎಂದು ಪರವಾದಿಗಳ ಅಭಿಪ್ರಾಯ.

ಶ್ರೀಮದಾಚಾರ್ಯರು ಇದನ್ನು ಒಪ್ಪುವುದಿಲ್ಲ. ಆಚಾರ್ಯರು ಪರಬ್ರಹ್ಮನಂತೆ ಜಗತ್ತು ಪಾರಮಾರ್ಥಿಕ ಸತ್ಯವು. ಪ್ರತಕ್ಷ, ಅನುಮಾನ, ಆಗಮಗಳೇ ಇದಕ್ಕೆ ಪ್ರಮಾಣಗಳು. “ಘಟಸ್ಕನ್”, “ಪಟಸ್ತನ್” ಮುಂತಾದ ಪ್ರತ್ಯಕ್ಷವು ಅರ್ಥಕ್ರಿಯಾಕಾರಿಯಾದುದರಿಂದ ಘಟಾದಿಗಳು ಸತ್ಯವೆಂಬ ಯುಕ್ತಿಗಳು, “ವಿಶ್ವಂ ಸತ್ಯಂ ಮಘವಾ ನಾಯವೋ” “ಯಾಘಾತಥ್ಯತೋರ್ಥಾನ್ ವೃದಧಾಚ್ಛಾಶ್ವತೀಭ್ಯಃ ಸಮಾಭ್ಯ” ಇತ್ಯಾದಿ ಆಗಮ ಪ್ರಮಾಣಗಳಿಂದ ಜಗತ್ತು ಪಾರಮಾರ್ಥಿಕ ಸತ್ಯವೆಂದು ಆಚಾರ್ಯರು ಸಾಧಿಸುವರು.

ಜಗತ್ತು ಮಿಥೈಯೆಂದರೆ ಅಸತ್ತು ಎಂದಾಯಿತು. ಜಗತ್ತು ಅಸತ್ತಲ್ಲವಾದುದರಿಂದ ಸತ್ಯವೆಂದು ಹೇಳಬೇಕು. ಪರ ವ್ಯಾವಹಾರಿಕ ಸತ್ಯವನ್ನು ಒಪ್ಪಿರುವರಲ್ಲ? ಅದಕ್ಕೆ ಏನು ಹೇಳಬೇಕು? ಎಂಬ ಶಂಕೆ ಬರಬಹುದು. ವ್ಯಾವಹಾರಿಕ ಸತ್ತವೆಂದ ಮಿಥೈಯೆಂದರೂ ಒಂದೇ ಆಗಿರುವುದರಿಂದ ಜಗತ್ತಿಗೆ ಅಸತ್ವವು ಪ್ರಮಾಣತ್ರಯ ಬಾಧಿತವಾದಕಾರಣ ಜಗತ್ತು ಮಿಥೈ ಎಂದು ಹೇಳಬಾರದು. ಏತೇನ ಜಗತ್ತು ಸತ್ಯವೆಂಬ ಆಚಾರ್ಯರು ಹೇಳಿರುವ ಎರಡನೆಯ ಪ್ರಮೇಯುವು ವೇದಾದಿಶಾಸ್ತ್ರಸಿದ್ಧವಾಗಿದೆಯೆಂದು ನಿರೂಪಿಸಲು ಇಲ್ಲಿ “ಸತ್ಯಂ ಜಗತ್” ಎಂದು ಹೇಳಿರುವುದು ಯುಕ್ತವಾಗಿದೆ!

ಜಗತ್ತು ಸತ್ಯವೆಂದು ಹೇಳಿದ್ದು ಅಸಂಗತ, “ತತ್ವಮಸಿ” ಎಂಬ ವಾಕ್ಯವು ಜೀವ-ಬ್ರಹ್ಮರಿಗೆ ಐಕ್ಯವನ್ನು ಹೇಳುವುದು, ಸರ್ವಜ್ಞ ಮತ್ತು ಅಲ್ಪಜ್ಞರಾದ ಬ್ರಹ್ಮ-ಜೀವರಿಗೆ ಐಕ್ಯ ಕೊಡುವುದಿಲ್ಲವಾದ್ದರಿಂದ “ತತ್ವಮಸಿ” ಎಂಬ ವಾಕ್ಯವ ಅಪ್ರಮಾಣವಾಗಬೇಕಾದೀತು ಎಂಬ ಶಂಕೆ ಬಂದರೆ, ಮೂರನೆಯ ಪ್ರಮೇಯವಾದ “ತತ್ವತೋ ಭೇದ:” ಎಂಬುದಾಗಿ ಆಚಾರ್ಯರು ಹೇಳಿದ್ದಾರೆ. ಐಕ್ಯವಾದಿಗಳು ಜೀವ-ಬ್ರಹ್ಮರಿಗೆ ವ್ಯಾವಹಾರಿಕ ಭೇದವನ್ನು ಒಪ್ಪಿರುವುದರಿಂದ ತ ಲಕ್ಷಣಕ್ಕಾಗಿ “ತತ್ವತಃ” ಎಂದು ಹೇಳಿರುವರು. ಇದರಿಂದ ಜೀವೇಶ್ವರರಿಗೆ ಪಾರಮಾರ್ಥಿಕಭೇದವೆಂದು ಹೇಳಿದಂತಾಯಿತು.

೧) ಜೀವೇಶ್ವರರಿಗೆ, ೨) ಜಡೇಶ್ವರರಿಗೆ, ೩) ಜೀವಜಡಗಳಿಗೆ, ೪) ಜೀವರಿಗೆ, ೫) ಜಡಜೀವಗಳಿಗೆ ಭೇದವೆಂದು ಆಚಾರ್ಯರು ಸಿದ್ಧಾಂತದಲ್ಲಿ ಪಂಚಭೇದಗಳನ್ನು ಹೇಳಿದ್ದಾರೆ. ಈ ಭೇದಗಳನ್ನು ಹೀಗೆ ಸಾಧಿಸಬಹುದು -

ಚೈತ್ರನಿಂದ ಮೈತ್ರ ಬೇರೆಯಾಗಿದ್ದಾನೆ, ದೇವದತ್ತ ಮೃತ್ರನಿಂದ ಭಿನ್ನನಾಗಿದ್ದಾನೆ, ಯಜ್ಞದತ್ತ ದೇವದತ್ತನಿಂದ ಭಿನ್ನನಾಗಿದ್ದಾನೆ. ಈ ಪ್ರತ್ಯಕ್ಷಗಳೇ ಪ್ರಮಾಣವಾಗಿವೆ. ಇದರಂತೆ ಜಗತ್ತಿನಲ್ಲಿ ಒಬ್ಬ ಶ್ರೀಮಂತ, ಮತ್ತೊಬ್ಬ ಕುರೂಪಿ, ಒಬ್ಬ ಭೋಗಿ ಮತ್ತು ರೋಗಿಗಳಾಗಿರುವುದು ಕಂಡುಬಂದಿದೆ. ಐಕ್ಯವಿದ್ದಲ್ಲಿ ಎಲ್ಲರೂ ಒಂದೇ ರೀತಿ ಇರಬೇಕಾಗಿತ್ತು. ವಸ್ತುತಃ ಹಾಗಿಲ್ಲದಿರುವುದು ಪ್ರತ್ಯಕ್ಷ ಸಿದ್ಧವಾಗಿದೆ. ಮೇಲಾಗಿ ಒಬ್ಬನ ಸುಖಾನುಸಂಧಾನವು ಮತ್ತೊಬ್ಬನಿಗಿಲ್ಲದಿರುವುದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಇದರ ಮೇಲೆ ಭಿನ್ನಶ್ಚಿಂತೋ ಪರಮೋ ಜೀವಸಂಘಾತ್”, “ನಿತ್ಯೋ ನಿತ್ಯಾನಾಂ ಚೇತನಶ್ವೇತನಾನಾಂ” ಇವೇ ಮುಂತಾದ ಶ್ರುತಿಗಳು ಭೇದಕ್ಕೆ ಪ್ರಮಾಣವಾಗಿವೆ. ಭೇದವನ್ನು ಒಪ್ಪದಿದ್ದಲ್ಲಿ ಸುರಾ - ಪಯಸ್ಸು, ಅನ್ನ-ಅನನ್ನ, ತಾಯಿ-ಹೆಂಡತಿ, ಇವರಿಗೆ ಭೇದವೇ ಇಲ್ಲದೇ ಹೋದೀತಾದ್ದರಿಂದ ಭೇದವನ್ನು ಒಪ್ಪಲೇಬೇಕು.

ಕೆಲವು ಶ್ರುತಿಗಳು ಐಕ್ಯವನ್ನು ಬೋಧಿಸುವುದು. ಕೆಲವು ಶ್ರುತಿಗಳು ಭೇದವನ್ನು ತಿಳಿಸುವುವು. ಹೀಗೆ ವೇದಗಳು ಐಕ್ಯ-ಭೇದಗಳನ್ನು ನಿರೂಪಿಸಿರುವುದರಿಂದ ಯಾವುದು ಗ್ರಾಹ್ಯ? ಎಂಬ ಸಂದೇಹ ಉಂಟಾಗುವುದು ಸಹಜ. ಅಂತಹ ಸಂದೇಹ ಕಾಲದಲ್ಲಿಯೂ ಭೇದೋಪಾಸನೆಯೇ ಶ್ರೇಯಸ್ಕರವಾದುದರಿಂದ ಭೇದವನ್ನು ಒಪ್ಪುವುದೇ ತಾರಕವಾಗಿದೆ.

ಹಾಗಾದರೆ “ತತ್ವಮಸಿ” ಎಂಬ ಶ್ರುತಿವಾಕ್ಯವು ಅಪ್ರಮಾಣವಾಗಬೇಕಾದೀತೆಂಬ ಆಕ್ಷೇಪಕ್ಕೆ ಗತಿಯೇನು? ಎಂಬ ಪ್ರಶ್ನೆ ಉದ್ಭವಿಸುವುದರಿಂದ ಅದಕ್ಕೆ ಸಮಾಧಾನ ಹೇಳಲೇಬೇಕಾಗಿದೆ. ಸಾವಕಾಶ-ನಿರವಕಾಶ ವಾಕ್ಯಗಳಲ್ಲಿ ನಿರವಕಾಶ ವಾಕ್ಯವೇ ಪ್ರಬಲವೆಂಬುದನ್ನು ಸಕಲಶಾಸ್ತ್ರಕಾರರೂ ಅಂಗೀಕರಿಸಿರುವರು. “ತತ್ವಮಸಿ” ಎಂಬ ಶ್ರುತಿಗೆ ಭೇದಪರವಾಗಿಯೂ ಅರ್ಥಮಾಡಬಹುದಾಗಿದೆ. “ಬ್ರಾಹ್ಮಣೋಸ್ಯ ಮುಖಮಾಸೀತ್” ಎಂಬು ಭಗವಂತನ ಮುಖದಿಂದ ಹುಟ್ಟಿದ ಬ್ರಾಹ್ಮಣರಲ್ಲಿ “ಮುಖಂ” ಎಂದು ಪ್ರಯೋಗವಿರುವುದರಿಂದ “ತತ್ವಮಸಿ” ಎಂಬಲ್ಲಿಯೂ ತಂ-ನೀನುತತ್-ಆ ಪರಬ್ರಹ್ಮನಿಂದ ಹುಟ್ಟಿದವನು, ಅಸಿ-ಇರುತ್ತೀಯ ಎಂದು ಅರ್ಥ ಹೇಳಬಹುದು. ಈ “ತತ್ವಮಸಿ” ವಾಕ್ಯದ ಹಿಂದುಮುಂದಿನ ವಾಕ್ಯಗಳು, ಪ್ರಕರಣ, ಸಂದರ್ಭಗಳನ್ನು ವಿವೇಚಿಸಿದರೆ - ವಿದ್ಯಾಮದದಿಂದ ಗರ್ವಿತನಾಗಿರುವ ಮಗನಾದ ಶ್ವೇತಕೇತುವಿನ ಗರ್ವ ಪರಿಹಾರ ಮಾಡಿ ಸತ್ತತ್ವವನ್ನು ಉಪದೇಶಿಸಲು ಹೇಳಿದ ಮಾತಿದಾದ್ದರಿಂದ ತಂದೆಯಾದ ಉದ್ದಾಲಕರು ಮೊದಲೇ ಗರ್ವಿಷ್ಠನಾದ ಶ್ವೇತಕೇತುವಿಗೆ “ತತ್ವಮಸಿ” - ನೀನೇ ಪರಬ್ರಹ್ಮನೆಂದು ಹೇಳುವುದು ಸರಿಯೆನಿಸಲಾರದು ಮತ್ತು “ತೇನತ್ತಮಸಿ” “ತಸ್ಮಾತ್‌ತ್ವಮಸಿ ಮುಂತಾಗಿ “ತತ್ವಮಸಿ” ವಾಕ್ಯಕ್ಕೆ ಅರ್ಥಮಾಡುವುದೇ ಯುಕ್ತವಾಗಿದೆ. ಅದೇ ಉದ್ದಾಲಕರ ಅಭಿಪ್ರಾಯವಾ ಆಗಿದೆ. ಮೇಲಾಗಿ ಸಾವಕಾಶವಾದ ಅಭೇದವಾಕ್ಯಕ್ಕಿಂತ ನಿರವಕಾಶವಾದ ಭೇದವಾಕ್ಯವು ಪ್ರಬಲವಾದ ಕಾರಣ ಭೇದವು ಪಾರಮಾರ್ಥಿಕವೆಂದು ಅಂಗೀಕರಿಸಲೇಬೇಕು.

ಪಾರಮಾರ್ಥಿಕ ಭೇದವನ್ನು ಒಪ್ಪಿದಲ್ಲಿ ಅನೇಕ ಸ್ವತಂತ್ರ ವಸ್ತುಗಳನ್ನು ಒಪ್ಪಬೇಕಾಗುವುದೆಂಬ ಶಂಕೆಗೆ ಉತ್ತರವಾಗಿ “ಜೀವಗಣಾ ಹರೇರನುಚರಾಃ” ಎಂದು ಸಮಸ್ತ ಜೀವರೂ ಹರಿಯ ಕಿಂಕರರು ಎಂದು ಆಚಾರ್ಯರು ಹೇಳಿರುವ ನಾಲ್ಕನೆಯ ಪ್ರಮೇಯವನ್ನು ಇಲ್ಲಿ ನಿರೂಪಿಸಿದ್ದಾರೆ.

ಅನೇಕ ಸ್ವತಂತ್ರ ವಸ್ತುಗಳನ್ನು ಒಪ್ಪಿದಲ್ಲಿ ನಿತ್ಯಸುಖಿಯು ಒಬ್ಬನಾಗದೆ ಸಕಲರೂ ಪಾರ್ಣಶಕ್ತಿಯುಳ್ಳವರಾದ್ದರಿಂದ ಪರಬ್ರಹ್ಮನಂತೆ ಎಲ್ಲರೂ ನಿತ್ಯಸುಖಿಗಳಾಗಬೇಕಾದೀತು. ಪ್ರತ್ಯಕ್ಷವಾಗಿ ದುಃಖಾದಿಗಳ ಅನುಭವವು ಕಂಡುಬರುತ್ತಿರುವುದರಿಂದ ಒಂದೇ ವಸ್ತುವು ಸ್ವತಂತ್ರವಾಗಿರಬೇಕೆಂಬುದು ಯುಕ್ತವಾಗಿದೆ. ಇದನ್ನೇ ಶ್ರೀಮದಾಚಾರ್ಯರು 'ದ್ವಾದಶ ಸ್ತೋತ್ರ'ದಲ್ಲಿ “ಯದಿ ನಾಮ ನ ತಸ್ಯ ವಶೇ ಸಕಲಂ ಕಥಮೇವ ತು ನಿತ್ಯಸುಖಂ ನ ಭವೇತ್ ?” - ಸ್ವತಂತ್ರನಾದ ಪರಬ್ರಹ್ಮನ ವಶದಲ್ಲಿ ತಪ್ಪಿನ್ನವಾದ ಸಕಲವೂ ಅಧೀನವಾಗಿಲ್ಲದಿದ್ದ ಪಕ್ಷದಲ್ಲಿ ಎಲ್ಲರಿಗೂ ಏಕೆ ನಿತ್ಯಸುಖವು ದೊರಕುವುದಿಲ್ಲ? ಎಂದೂ; ತತ್ತ್ವಸಂಖ್ಯಾನ"ದಲ್ಲಿ "ಸ್ವತಂತ್ರಮಸ್ವತಂತ್ರಂ ಚ ದ್ವಿವಿಧಂ ತತ್ತ್ವಮಿಷ್ಯತೇ | ಸ್ವತಂತ್ರೋ ಭಗವಾನ್ ವಿಷ್ಣು !” ಸ್ವತಂತ್ರ, ಅಸ್ವತಂತ್ರ ಭೇದದಿಂದ ತತ್ವಗಳು ಎರಡು ವಿಧ, ಅವುಗಳಲ್ಲಿ ಷಡ್ಗುಣೈಶ್ವರ್ಯ ಸಂಪನ್ನನಾದ ಶ್ರೀಹರಿಯು ಸ್ವತಂತ್ರನು ಎಂದು ಹೇಳಿದ್ದಾರೆ. ಆದ್ದರಿಂದ ಶ್ರೀಹರಿಯೊಬ್ಬನೇ ಸ್ವತಂತ್ರನು. ಉಳಿದ ಸಕಲಜೀವರೂ ಅವನ ಕಿಂಕರರು ಎಂದು ಒಪ್ಪಲೇಬೇಕು. “ಹರೇರನುಚರಾಃ” ಎಂದರೆ ಜೀವರು ಪರಮಾತ್ಮಾಧೀನ ಕರ್ತೃತ್ವವುಳ್ಳವರೆಂದು ತಾತ್ಪರ್ಯ. “ಸಾಧನಾನಾಂ ಸಾಧನತ್ವಂ ಯದಾತ್ಮಾಧೀನಮಿತೇ” ಮುಂತಾದ ವಾಕ್ಯಗಳು ಜೀವರು ಶ್ರೀಹರಿಯ ಅನುಚರರೆಂದು ಹೇಳಲು ಪ್ರಮಾಣವಾಗಿರುವುದರಿಂದ ಪರಮಾತ್ಮನಿಂದ ಭಿನ್ನರಾದ ಸಕಲಜೀವರೂ ಭಗವಂತನ ಸೇವಕರು ಎಂಬುದು “ಹರೇರನುಚರಾಃ” ಎ೦ಬುದರಿಂದ ಸಿದ್ಧವಾಗುವುದು.

“ಹರೇರನುಚರಾಃ” ಎಂದು ಹೇಳಿರುವುದರಿಂದ ಎಲ್ಲಾ ಜೀವರಿಗೂ ಒಂದೇ ರೀತಿಯ ಆನಂದವನ್ನೊಪ್ಪುವಿರಾ? ಎಂಬ ಶಂಕೆಗೆ ಉತ್ತರವಾಗಿ ಜೀವರೆಲ್ಲರೂ ತಾರತಮ್ಮೋಪೇತರು ಎಂದು ಆಚಾರ್ಯರು ಹೇಳಿದ ಐದನೆಯ ಪ್ರಮೇಯವನ್ನು ತಿಳಿಸಲು “ನೀಚೋಚ್ಚಭಾವಂಗತಾ” ಎಂದು ಹೇಳಿರುವುದು ಯುಕ್ತವಾಗಿದೆ.

ಆನಂದದಲ್ಲಿ ತಾರತಮ್ಯವಿಲ್ಲವೆಂದು ವಿಶಿಷ್ಟಾದ್ವತವಾದಿಗಳು ಹೇಳುವರು. ಅವರ ಆಶಯ ಹೀಗಿದೆ : “ನಿರಂಜನಃ ಪರಮಂಸಾಮ್ಯಮುತಿ” ಎಂಬ ಶ್ರುತಿಯು ಆನಂದ ತಾರತಮ್ಯವಿಲ್ಲವೆಂದು ಸಾರುವುದರಿಂದಲೇ ೩ ಮತ್ತು ಒಬ್ಬರ ಆನಂದಕ್ಕಿಂತ ಮತ್ತೊಬ್ಬರ ಆನಂದವು ಅಧಿಕವಾಗುವಂತಿದ್ದರೆ - ಸ್ವರ್ಗಸುಖದಂತೆ ಮೋಕ್ಷಸುಖವಾ ಅನಿತ್ಯವಾಗಬೇಕಾಗುವುದರಿಂದಲೂ ಮತ್ತು ಅಲ್ಲಿ ದ್ವೇಷಾಸೂಯಾದಿಗಳು ಬರುವುದರಿಂದ ಸಕಲರ ಆನಂದವೂ ಒಂದೇ ಎಂದು ಹೇಳುವರು.

ಶ್ರೀಮದಾಚಾರ್ಯರು ಸ್ವತಂತ್ರನೂ ಆನಂದಮಯನೂ ಸರ್ವೋತ್ತಮನೂ ಆದ ಪರಮಾತ್ಮನ ಆನಂದವೂ ಅವನ ಅನುಚರರಾದ ಜೀವರ ಆನಂದವಾ ಒಂದೇ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. ಆನಂದದಲ್ಲಿ ತಾರತಮ್ಯವಿದೆಯೆಂದು ಹೇಳಿರುವ ಪ್ರಮೇಯವನ್ನು ಎತ್ತಿಹಿಡಿಯಲು ಇಲ್ಲಿ “ನೀಚೋಚ್ಚಭಾವಂಗತಾ” ಎಂದು ಹೇಳಿದ್ದಾರೆ.

“ಸೈಪಾನಂದಸ್ಯ ಮೀಮಾಂಸಾ ಭವತಿ | ತೇ ಯೇ ಶತಂ ಮಾನುಷ ಆನಂದಾ, ಸ ಏಕೋ ಮನುಷ್ಯ- ಗಂಧರ್ವಾಣಾಮಾನಂದಃ, ಪ್ರೋತ್ರಿಯಸ್ಯಚಾಕಾಮಹತಸ್ಯ ” ಇತ್ಯಾದಿ ತೈತ್ತಿರೀಯ ಶ್ರುತಿ ಮತ್ತು ವಾಜಸನೇಯ ಶ್ರುತಿಗಳು, “ಪಾದಾ ಶತಧೃತಂತಾ, ಮುಕ್ತಿಗಾ ಉತ್ತರೋತ್ತರಂ | ರ್ಸಗುಜೈ: ಶತಗುಣಾ ಮೋದಂತೇ ಇತಿ ಹಿ ಶ್ರುತಿಃ |' ಎಂಬ ಶ್ರುತಿಯೂ, “ಓಂ ವೃದ್ಧಿಹಾಸ ಭಾಗ್ಯಾಮಂತರ್ಭಾವಾದುಭಯ ಸಾಮಂಜಾದೇವಂ ಓಂ" ಎಂಬ ಸೂತ್ರವಾ ಜೀವರಿಗೆ ಪರಸ್ಪರ ಆನಂದತಾರತಮ್ಯವಿದೆಯೆಂದು ಸಾರುತ್ತಿದೆ. ಮುಕ್ತಿಯಲ್ಲಿ ಅಪರೋಕ್ಷಜ್ಞಾನಿಗಳಾದ ಸಜೀವರಿಗೆ ದ್ವೇಷಾಸೂಯಾದಿ ಪ್ರಸಕ್ತಿಯಿಲ್ಲವಾದ್ದರಿಂದ ಪರರು ಹೇಳುವ ದೋಷವು ಬರುವುದಿಲ್ಲ, ಮೋಕ್ಷದಲ್ಲಿ ಆನಂದತಾರತಮ್ಯವನ್ನು ಹೇಳಿದ್ದರಿಂದ ಬಾಧಕವಿಲ್ಲವೆಂದು ಸಾಧಿಸುತ್ತಾರೆ.

ಹಿಂದೆ ಹೇಳಿದ ಐದು ಪ್ರಮೇಯ ಜ್ಞಾನದಿಂದ ಉಂಟಾಗುವ ಫಲವೇ ಸರ್ವಸುಜೀವರ ನಿಜಗುರಿಯಾದ ಮೋಕ್ಷವೆಂದೂ, ಅದು ಜೀವರ ಸ್ವರೂಪಾನಂದಾವಿರ್ಭಾವರೂಪವೆಂದೂ ಆಚಾರ್ಯರು ಹೇಳಿದ ಆರನೆಯ ಪ್ರಮೇಯವನ್ನು ತಿಳಿಸಲು ಇಲ್ಲಿ “ಮುಕ್ತಿರ್ನೈಜ ಸುಖಾನುಭೂತಿ” ಎಂದು ಹೇಳಲಾಗಿದೆ.

ಅನೇಕ ದಾರ್ಶನಿಕರು ಅನೇಕ ವಿಧವಾಗಿ ಮುಕ್ತಿಯನ್ನು ನಿರೂಪಿಸುವರು. ಸಿದ್ಧಾಂತರೀತ್ಯಾ ಮೋಕ್ಷಸ್ತರೂಪವು ಹೀಗಿದೆ : ಮುಕ್ತಿಯೆಂದರೆ, “ಮುಕ್ತಿರ್ಹಿತ್ವಾನಥಾಜ್ಞಾನಂ ಸ್ವರೂಪೇಣ ವ್ಯವಸ್ಥಿತಿ:” ಎಂಬ ಪ್ರಮಾಣಾನುಸಾರವಾಗಿ ವಿರಿಜಾನವಿ ಸ್ನಾನದಿಂದ ಲಿಂಗದೇಹ ಭಂಗವಾದ ಮೇಲೆ ಆಗತಕ್ಕ ಜೀವನ ಸ್ವರೂಪಾನಂದಾನುಭವವೇ ಮೋಕ್ಷವೆಂದು ಆಚಾರ್ಯರು ಅಪ್ಪಣೆ ಕೊಡಿಸಿರುವುದನ್ನೂ ಅದೇ ಸಕಲಜೀವರ ಗುರಿಯೆಂದೂ ಸ್ಪಷ್ಟಪಡಿಸಲು ಇಲ್ಲಿ “ಮುಕ್ತಿರ್ನೈಜ ಸುಖಾನುಭೂತಿ.” ಎಂದು ತಿಳಿಸಲಾಗಿದೆ.

“ಯಸ್ಕ ಪ್ರಸಾದಾತರಮಾರ್ತಿ ರೂಪಾದಸ್ಮಾತ್ಸಂಸಾರಾನುಚ್ಯತೇ ನಾಪರೇಣ |' ಅಂದರೆ ಪರಮಾತ್ಮನ ಪ್ರಸಾದದಿಂದಲೇ ಮೋಕ್ಷವಾಗುತ್ತದೆ. ಬೇರೆ ಯಾವುದರಿಂದಲೂ ಸಾಧ್ಯವಿಲ್ಲವೆಂದು ಮೇಲಿನ ಶ್ರುತಿಯು ಸಾರುತ್ತದೆ. “ಏನು ಮೋಚಯಾಮಿ” ಎಂಬ ಭಗವಂತನ ಇಚ್ಛಾರೂಪ ಪ್ರಸಾದದಿಂದಲೇ ಮೋಕ್ಷವೆಂದು ಈ ಪ್ರಮಾಣವು ಹೇಳುವುದು. “ನಾನ ಪಂಥಾ ಅಯನಾಯ ವಿದ್ಯತೇ” - ಭಗವದಪರೋಕ್ಷಜ್ಞಾನವಾಗದ ವಿನಃ ಮೋಕ್ಷಕ್ಕೆ ಬೇರೆ ದಾರಿಯಿಲ್ಲವೆಂದು ಮೇಲಿನ ಶ್ರುತಿಯು ನಿರೂಪಿಸುವುದು. “ಮಾಹಾತ್ಮಜ್ಞಾನಪೂರ್ವಸ್ತು ಸುದೃಢಸ್ಸರ್ವತೋಧಿಕಃ | ಸ್ನೇಹೋ ಭಕ್ತಿರಿತಿ ಪ್ರೋಕ ತಯಾಮುಕ್ತಿರ್ನಚಾನ್ಯಥಾ ||” ಅಂದರೆ ಪರಮಾತ್ಮನಲ್ಲಿ ಮಾಡುವ ಭಕ್ತಿಯಿಂದಲೇ ಮೋಕ್ಷವೆಂದು ಈ ಪ್ರಮಾಣದಿಂದ ವಿದಿತವಾಗುವುದು. ಮೋಕ್ಷಕ್ಕೆ ಪರಮಾತ್ಮ ಪ್ರಸಾದವೂ, ಭಗವದಪರೋಕ್ಷಜ್ಞಾನ ಮತ್ತು ಭಕ್ತಿಗಳು ಕಾರಣವೆಂದು ಅನೇಕ ಪ್ರಮಾಣಗಳು ಜಾಗರೂಕವಾಗಿರುವುದರಿಂದ, ಭಗವತ್ಪಸಾದವು ಮಹಾತ್ಮ ಜ್ಞಾನಸಹಕೃತವಾದ, ನವವಿಧ ದ್ವೇಷರಹಿತವಾದ ನವವಿಧ ಭಕ್ತಿಯಿಂದ ಮಾತ್ರ ಸಾಧ್ಯವೆಂದು ಶ್ರೀಮದಾಚಾರ್ಯರು ಹೇಳಿರುವ ಏಳನೆಯ ಪ್ರಮೇಯವನ್ನು ತಿಳಿಸಲು ಇಲ್ಲಿ “ಅಮಲಾ ಭಕ್ತಿಶ್ಚ ತತ್ಸಾಧನಂ” ಎಂದು ಸಿದ್ಧಾಂತದ ಏಳನೆಯ ಪ್ರಮೇಯವನ್ನು ನಿರೂಪಿಸಿದ್ದಾರೆ.

ಹಿಂದೆ ನಿರೂಪಿಸಿದ ಪ್ರಮುಖ ಪ್ರಮೇಯಗಳನ್ನು ಸಾಧಿಸುವ ಪ್ರಮಾಣಗಳಾವುವು ? ಎಂದು ಶಿಷ್ಟರಿಗೆ ತಿಳಿಸಲು ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೇ ಆ ಪ್ರಮಾಣಗಳೆಂದೂ, ಈ ಮೂರು ಪ್ರಮಾಣಗಳಲ್ಲಿಯೇ ಪರರು ಹೇಳುವ ಎಲ್ಲಾ ಪ್ರಮಾಣಗಳೂ ಅಡಕವಾಗಿವೆ ಎಂದು ಆಚಾರ್ಯರು ಅಪ್ಪಣೆ ಕೊಡಿಸಿರುವುದನ್ನು ಅಕ್ಷಾದಿ ತ್ರಿತಯಂ ಪ್ರಮಾಣಂ” ಎಂದು ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಶ್ರೀಹರಿಯು ಸರ್ವೋತ್ತಮನೆಂದು ಹೇಳಿದ್ದು ಸರಿಯಲ್ಲ; “ಏಕೋ ರುದ್ರೋ ನ ದ್ವಿತೀಯೋವತಸ್ಸೇ” ಮುಂತಾದ

ಪ್ರಮಾಣಗಳಿಂದ ರುದ್ರ-ಬ್ರಹ್ಮಾದಿಗಳು ಸರ್ವೋತ್ತಮರೆಂದು ವ್ಯಕ್ತವಾಗುವುದರಿಂದ ಶ್ರೀಹರಿಯೇ ಸರ್ವೋತ್ತಮನೆಂದು ಹೇಗೆ ಹೇಳುವಿರಿ ? ಮುಂತಾಗಿ ಪರಮತೀಯರು ಶಂಕೆ ಮಾಡುತ್ತಾರೆ. ಅದಕ್ಕೆ ಉತ್ತರ ಕೊಟ್ಟು ಸಕಲ ವೇದಗಳಿಂದ ಶ್ರೀಹರಿಯೊಬ್ಬನೇ ವೇದನೆಂದು ಶ್ರೀಮದಾಚಾರ್ಯರು ಸಾಧಿಸಿದ್ದಾರೆ. ವೇದಗಳಲ್ಲಿ ಅಲ್ಲಲ್ಲಿ ಪ್ರತಿಪಾದ್ಯವಾದ ರುದ್ರ-ಬ್ರಹ್ಮಾದಿ ಶಬ್ದಗಳಿಂದ ಪರಮಮುಖ್ಯವೃತ್ತಿಯಿಂದ ಶ್ರೀಹರಿಯೇ ಪ್ರತಿಪಾದ್ಯನು. “ನಾಮಾನಿ ಸರ್ವಾಣಿ ಯಮಾವಿಶಂತಿ ತಂ ವೈ ವಿಷ್ಣು ಪರಮಮುದಾಹರಂ ” ಇತ್ಯಾದಿ ಪ್ರಮಾಣಗಳು ಎಲ್ಲಾನಾಮಗಳೂ ಪರಮಾತ್ಮವಾಚಕಗಳೆಂದು ಹೇಳುವುದರಿಂದ ಶ್ರೀಹರಿಯೇ ಸರ್ವೋತ್ತಮನೆಂದು ಶ್ರೀಮದಾಚಾರ್ಯರು ಹೇಳಿರುವುದು ಸಮಂಜಸವೆಂದು ತಿಳಿಸಲು ಇಲ್ಲಿ ಅಖಿಲಾಮಾಯಕ ವೇದ್ಯೋ ಹರಿ:” ಎಂಬ ಶ್ರೀಸರ್ವಜ್ಞಸಿದ್ದಾಂತದ ಪರಮಪ್ರಮೇಯನಾದ ಶ್ರೀಹರಿಯ ಸರ್ವೋತ್ತಮತ್ತವನ್ನು ಘೋಷಿಸಲಾಗಿದೆ.

ಹೀಗೆ ಶ್ರೀಮದಾಚಾರ್ಯರ ದೈತಸಿದ್ಧಾಂತದ ಪ್ರಮೇಯಗಳನ್ನು ಈ ಒಂದೇ ಪದ್ಯದಲ್ಲಿ ಅಡಗಿಸಿ ಪ್ರಮಾಣಪೂರ್ವಕವಾಗಿ ರೂಪಿಸಿ ಕಿರಿಯ ಶ್ರೀಪಾದಂಗಳವರು ಸುಜನವೃಂದಕ್ಕೆ ಮಹೋಪಕಾರ ಮಾಡಿದ್ದಾರೆ. ನನ್ನ ಯೋಗ್ಯತಾನುಸಾರವಾಗಿ ಈ ಪದ್ಯದ ಭಾವವನ್ನು ವಿಜ್ಞಾಪಿಸಿದ್ದೇನೆ - ಎಂದು ಶ್ರೀಮಠದ ಪಂಡಿತರು ಹೇಳಿದರು. ಸಕಲರೂ ಪರಮಾನಂದಭರಿತರಾದರು.

ಶ್ರೀಬ್ರಹ್ಮಣ್ಯತೀರ್ಥರಿಗೆ ಬಹು ಸಂತೋಷವಾಗಿತ್ತು. ಅವರು ಶ್ರೀವ್ಯಾಸತೀರ್ಥರನ್ನು ಭರದಿಂದ ಆಲಿಂಗಿಸಿ, “ಪ್ರೀತ್ಯಾಸದ ಶಿಷ್ಯರೇ! ನೀವು ಅಸದೃಶ ಪ್ರತಿಭಾಸಂಪನ್ನರು, ಸಾಹಿತ್ಯಶಾಸ್ತ್ರದಲ್ಲಿ ಅದರಲ್ಲೂ ಕವನರಚನೆಯಲ್ಲಿ ನೀವು ಇಂದು ಅಶ್ರುತ ಪ್ರತಿಭೆಯನ್ನು ತೋರಿದ್ದೀರಿ. ನಮ್ಮ ಮನದಾಸೆಯನ್ನು ನಿಮ್ಮಿ ಕವಿತೆಯು ಪೂರ್ಣಮಾಡಿದೆ. ಇದು ನಿಮ್ಮಲ್ಲಿ ಶ್ರೀಹರಿ-ವಾಯುಗಳಿಗಿರುವ ಅನುಗ್ರಹ ದ್ಯೋತಕವಾಗಿದೆ. ಶ್ರೀಮದಾಚಾರ್ಯರ ಪರಮಸಿದ್ಧಾಂತಸಾರವನ್ನು ಒಂದೇ ಪದ್ಯದಿಂದ ನಿರೂಪಿಸಿರುತ್ತೀರಿ. ಇದು ಮಾತ್ರವಲ್ಲ, ಸೂರ್ಯ-ಚಂದ್ರರಿರುವವರೆಗೆ ಶಾಶ್ವತವಾಗಿ ಉಳಿದು ಸಿದ್ಧಾಂತವನ್ನು ಉಪನ್ಯಾಸ ಮಾಡುವ ಪಂಡಿತರಿಗೆ, ಸುಜನರಿಗೆ ಮಹೋಪಕಾರವಾಗಿ ನಿಮ್ಮ ಕೀರ್ತಿ ಬೆಳಗುವುದು” ಎಂದು ಹೇಳಿದರು. ಪಂಡಿತರತ್ತ ತಿರುಗಿ “ವಿದ್ವನ್ಮಣಿಗಳೇ! ನಮ್ಮ ವ್ಯಾಸತೀರ್ಥರ ಕವಿತೆಯ ಭಾವವನ್ನು ನೀವು ಪ್ರಮಾಣ ಪುರಸ್ತರವಾಗಿ, ಬಹುಸುಂದರವಾಗಿ ನಿರೂಪಿಸಿ ನಮಗೆ ಆನಂದವನ್ನುಂಟು ಮಾಡಿದ್ದೀರಿ. ಇದಕ್ಕಾಗಿ ನಿಮ್ಮನ್ನು ನಾವು ಹೃತ್ತೂರ್ವಕವಾಗಿ ಅಭಿನಂದಿಸುತ್ತೇವೆ” ಎಂದು ಹೇಳಿ ಆನಂತರ ಶ್ರೀವ್ಯಾಸತೀರ್ಥರೊಡನೆ ಸಾಯಂದೀಪಾರಾಧನೆಗೆ ದಯಮಾಡಿಸಿದರು.