 and Boon of Sri Brahmanya Tirtha.jpg)
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩. ಶ್ರೀಬ್ರಹ್ಮಣ್ಯತೀರ್ಥರ ತಪಸ್ಸು - ವರಪ್ರಾಪ್ತಿ
ಬದರಿಕಾಶ್ರಮದಲ್ಲಿ ಋಷಿ-ಮುನಿಗಳಿಗೆ ಶ್ರೀಬಾದರಾಯಣರು ಅಭಯ ಪ್ರದಾನ ಮಾಡಿದ ಮೇಲೆ ಕೆಲವರ್ಷಗಳು ಕಳೆದಿವೆ. ಶ್ರೀಹಂಸನಾಮಕ ಪರಮಾತ್ಮನಿಂದ ಪ್ರವೃತ್ತವಾದ ಜ್ಞಾನಪರಂಪರೆಯಲ್ಲಿ ಅನೇಕ ಜ್ಞಾನಿಗಳು ಬಂದು ಅನಾದಿಸಿದವಾದ ವೈದಿಕ ಸದೈಷ್ಣವ ತತ್ವಗಳನ್ನು ಪ್ರಸಾರಮಾಡಿ, ಆ ಮಹಾತತ್ವಗಳ ಉಪಾಸನೆಯಿಂದಲೇ ಸರ್ವಜೀವರ ಉದ್ಧಾರವೆಂದು ಉಪದೇಶಿಸುತ್ತಾ ಬಂದಿದ್ದರು.
ಇಂಥ ಸಾಕ್ಷಾತ್ ಹಂಸನಾಮಕ ಶ್ರೀಹರಿಯ ಜ್ಞಾನಪರಂಪರೆಯಲ್ಲಿ ವಿಖ್ಯಾತವಾದ ಶ್ರೀಮನ್ಮಧ್ವಾಚಾರ್ಯರ ವೇದಾಂತಸಾಮ್ರಾಜ್ಯ ವಿದ್ಯಾಸಿಂಹಾಸನದಲ್ಲಿ ಶ್ರೀಮದಾಚಾರ್ಯರ ಪಟ್ಟದ ಶಿಷ್ಯರಾದ ಶ್ರೀಪದ್ಮನಾಭತೀರ್ಥ-ನರಹರಿತೀರ್ಥ- ಮಾಧವತೀರ್ಥ-ಅಕ್ಟೋಭ್ಯತೀರ್ಥ-ಜಯತೀರ್ಥ-ವಿದ್ಯಾರಾಜತೀರ್ಥರೆಂಬ ಜ್ಞಾನಿನಾಯಕರು ವಿರಾಜಿಸಿ, ಶ್ರೀವಿದ್ಯಾಧಿರಾಜರ ಕಾಲದಲ್ಲಿ ಆ ಮಹಾಸಂಸ್ಥಾನವು ಇಬ್ಬಾಗವಾಗಿ ಒಂದು ಮಹಾಪೀಠದಲ್ಲಿ ಶ್ರೀರಾಜೇಂದ್ರತೀರ್ಥರೂ, ಮತ್ತೊಂದು ಮಹಾಸಂಸ್ಥಾನದಲ್ಲಿ ಶ್ರೀಕವೀಂದ್ರತೀರ್ಥರೂ ವಿರಾಜಿಸಿ ಇವೆರಡೂ ಮಹಾಪೀಠಗಳು ಪೂರ್ವಾದಿಮಠ, ದಕ್ಷಿಣಾದಿಮಠಗಳೆಂದು ಪ್ರಖ್ಯಾತವಾದವು. ಈ ಕಥಾನಕವು ನಡೆಯುವ ವೇಳೆಗೆ ಶ್ರೀರಾಜೇಂದ್ರತೀರ್ಥರು ಅಲಂಕರಿಸಿದ್ದ ಪೀಠದಲ್ಲಿ ಶ್ರೀಬ್ರಹ್ಮಣ್ಯತೀರ್ಥರೆಂಬ ಶ್ರೇಷ್ಠಜ್ಞಾನಿಗಳೂ, ಶ್ರೀಕವೀಂದ್ರತೀರ್ಥರು ಅಲಂಕರಿಸಿದ್ದ ಪೀಠದಲ್ಲಿ ಶ್ರೀವಿಬುಧೇಂದ್ರತೀರ್ಥರೆಂಬ ಜ್ಞಾನಿಗಳೂ ವಿರಾಜಿಸಿ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯವನ್ನಾಳುತ್ತಿದ್ದರು.
ಮಹಾತಪಸ್ವಿಗಳೂ, ವೈರಾಗ್ಯನಿಧಿಗಳೂ ಆದ ಶ್ರೀಬ್ರಹ್ಮಣ್ಯತೀರ್ಥರು ತೀರ್ಥಕ್ಷೇತ್ರಯಾತ್ರೆಯನ್ನು ಕೈಗೊಂಡು ಭಾರತಾದ್ಯಂತವಾಗಿ ಸಂಚರಿಸುತ್ತಾ ಶ್ರೀ ಬದರೀಕ್ಷೇತ್ರಕ್ಕೆ ದಯಮಾಡಿಸಿದರು. ಅಲ್ಲಿ ಶ್ರೀಬದರೀನಾರಾಯಣನ ದರ್ಶನದಿಂದ ಪ್ರಹೃಷ್ಟಾಂತಃಕರಣವಾಗಿ ದೇವರ ದರ್ಶನ-ಸೇವಾದಿಗಳನ್ನು ನೆರವೇರಿಸುತ್ತಾ ಕೆಲಕಾಲ ವಾಸಮಾಡಿದರು. ಒಂದು ದಿನ ಬದರೀನಾಥನ ದರ್ಶನಕ್ಕೆ ಹೋದಾಗ ಅಲ್ಲಿ ಶೈವಪಂಡಿತರೊಬ್ಬರು ಶಿವೋತ ಷತ್ವವನ್ನು ಪ್ರತಿಪಾದಿಸುತ್ತಾ ಇದ್ದುದನ್ನು ಕಂಡು ಬ್ರಹ್ಮಣ್ಯತೀರ್ಥರು ಆ ಪಂಡಿತರ ವಾದಸರಣಿಯ ಅವೈದಿಕತೆಯನ್ನು ಎತ್ತಿತೋರಿಸಿದಾಗ, ಅವರಿಬ್ಬರಲ್ಲಿ ದೊಡ್ಡ ವಾಖ್ಯಾರ್ಥವೇ ಪ್ರಾರಂಭವಾಯಿತು. ಬಿರುಸಿನಿಂದ ಜರುಗಿದ ವಾಖ್ಯಾರ್ಥದಲ್ಲಿ ಶೈವಪಂಡಿತರು ನಿರುತ್ತರರಾದರು.
ಬ್ರಹ್ಮಣ್ಯತೀರ್ಥರು ಶ್ರೀಹರಿಸರ್ವೋತ್ತಮತ್ತ ಪ್ರತಿಪಾದಕವಾದ ಅನಾದ್ಯವಚ್ಛಿನ್ನ ಪರಂಪರಾಪ್ರಾಪ್ತ ವೈದಿಕ ವೈಷ್ಣವ ಸಿದ್ಧಾಂತವನ್ನು ಪ್ರತಿಷ್ಠಾಪಿಸಿ ಸರ್ವರನ್ನೂ ಆನಂದಗೊಳಿಸಿದರು. ಅಲ್ಲಿ ನೆರೆದಿದ್ದ ಸಜ್ಜನರು ಗುರುಗಳ ತೇಜಸ್ಸು, ಪಾಂಡಿತ್ಯ
ವಾದಿದಿಗ್ವಿಜಯಾದಿಗಳನ್ನು ಕಂಡು ವಿಸ್ಮಿತರಾಗಿ ಶ್ರೀಗಳವರ ಗುಣಗಾನ ಮಾಡಿದರು.
ಬ್ರಹ್ಮಣ್ಯಮುನಿಗಳು ಶ್ರೀಮದಾಚಾರ್ಯರ ಸತ್ತಿದ್ದಾಂತವನ್ನು ಸ್ಥಾಪಿಸಿ, ಅದನ್ನು ವಿಶೇಷಾಕಾರವಾಗಿ ಪ್ರಸಾರಮಾಡಲು ಸಮರ್ಥನಾದ ಸತ್ಪುತ್ರ (ಶಿಷ್ಯನನ್ನು ಶ್ರೀನರ-ನಾರಾಯಣರ ಅನುಗ್ರಹದಿಂದ ಸಂಪಾದಿಸಲೆಂದೇ ಬದರೀಕ್ಷೇತ್ರಕ್ಕೆ ಬಂದಿದ್ದರು. ಅದಕ್ಕೆ ಅಂದಿನ ವಾದಿವಿಜಯವು ಶುಭಸೂಚಕವೆಂದು ಭಾವಿಸಿದ ಅವರು ಮರುದಿನದಿಂದ ಕ್ಷೀರವ್ರತಾನುಷ್ಠಾನಪಾರ್ವಕವಾಗಿ ಶ್ರೀನರ-ನಾರಾಯಣರನ್ನು ಬಹು ಭಕ್ತಿ-ಶ್ರದ್ಧೆಗಳಿಂದ ಸೇವಿಸುತ್ತಾ ಜಗನ್ಮಾನ್ಯ ಶಿಷ್ಯನಿಗಾಗಿ ಶ್ರೀಹರಿಯನ್ನು ಕುರಿತು ತಪೋನಿರತರಾದರು.
ಶ್ರೀಹರಿಯ ಅನುಗ್ರಹಕಾಲ ಪ್ರಾಪ್ತವಾಯಿತು. ಒಂದು ದಿನ ಶ್ರೀಹರಿಯು ಅವರ ತಪಸ್ಸಿಗೆ ಮೆಚ್ಚಿ ಪ್ರಸನ್ನನಾಗಿ ನಿದ್ರೆಯೂ ಅಲ್ಲ, ಜಾಗೃದವಸ್ಥೆಯೂ ಅಲ್ಲ, ಇಂತಹ ಅವಸ್ಥೆಯಲ್ಲಿ ಶ್ರೀಬ್ರಹ್ಮಣ್ಯತೀರ್ಥರಿಗೆ ದರ್ಶನವಿತ್ತನು! ಜಗಮ್ಮೋಹನಾಕಾರನೂ, ಕೋಟಿಸೂರ್ಯಪ್ರಕಾಶನೂ, ಮಂದಹಾಸವದನಾರವಿಂದನೂ ಆದ ಜಗದೊಡೆಯನು ಪ್ರಸನ್ನನಾಗಿ ಮೈದೋರಿದ್ದನ್ನು ಕಂಡು ಆನಂದಪುಳಕಿತಗಾತ್ರರಾಗಿ ಶ್ರೀನರ-ನಾರಾಯಣರಿಗೆ ಸಾಷ್ಟಾಂಗವೆರಗಿ ಭಕ್ತಿಯಿಂದ ಪ್ರಾರ್ಥಿಸಿದರು.
ಬ್ರಹ್ಮಣ್ಯ: ದೇವಾಧಿದೇವ! ಜಗನ್ನಾಥ! ರಮಾಬ್ರಹ್ಮರುದ್ರೇಂದ್ರಾದಿ ವೃಂದಾರಕವೃಂದವದ್ಯಪಾದಾರವಿಂದ! ಹಂಸನಾಮಕ ಪರಮಾತ್ಮಾ! ಮತ್ಕುಲಸ್ವಾಮಿನ್, ನಮೋ ನಮಃ ಪ್ರಭು! ಅಕಿಂಚನವಾದ ಈ ದಾಸನ ತಪಸ್ಸಿಗೆ ಮೆಚ್ಚಿ ದರ್ಶನವಿತ್ತೆಯಾ, ರಮಾಕಾಂತ? ಭಕ್ತರಲ್ಲಿ ನಿನಗೆಷ್ಟು ಕಾರುಣ್ಯ ಸ್ವಾಮಿ, ದಾಸನ ಮನೋರಥವನ್ನು ಈಡೇರಿಸಿ ಅನುಗ್ರಹಿಸು ತಂದೆ.
ಅಭಯ ಮುದ್ರಾಂಕಿತನಾದ ಬದರೀನಾಥ ನಸುನಗುತ್ತಾ ಕಾರುಣ್ಯಪೂರ್ಣನಾಗಿ ಇಂತು ಮಾತನಾಡಿದನು -
ಬದರೀನಾಥ : ಯತಿಶ್ರೇಷ್ಠ! ನಿನ್ನ ಭಕ್ತಿಯಿಂದ ತುಷ್ಟನಾಗಿ ವರವೀಯಲೆಂದೇ ಬಂದಿರುವೆನು. ನಿನ್ನ ಮನೋರಥವು ಶೀಘ್ರವಾಗಿ ಕೈಗೂಡುವುದು. ನಾನು ನಿನಗೆ ಜಗತ್ತನ್ನೇ ಉದ್ದರಿಸಬಲ್ಲ ಮಹಾಮಹಿಮೋಪೇತನೂ ನನ್ನ ಭಕ್ತರಲ್ಲಿ ಅಗ್ರಗಣ್ಯನೂ, ವಾಯುದೇವನ ವಿಶೇಷಾವೇಶ ವಿರಾಜಿತನೂ ಆದ ಪ್ರಹ್ಲಾದರಾಜನನ್ನೇ ಶಿಷ್ಯನನ್ನಾಗಿ ಅನುಗ್ರಹಿಸಿದ್ದೇನೆ! ತಪೋಧನ, ಚಿಂತಿಸದಿರು. ಪ್ರಹ್ಲಾದರಾಜನು ಅವತರಿಸಿ ನಿನಗೆ ಶಿಷ್ಯನಾಗಿ ನಿನ್ನ ಆಶೋತ್ತರಗಳನ್ನೆಲ್ಲಾ ಪೂರ್ಣಮಾಡುವನು. ಮಾತ್ರವಲ್ಲ ರೈತಸಿದ್ಧಾಂತವು ಚಂದ್ರಸೂರ್ಯರಿರುವವರೆಗೆ ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿ, ಸಕಲ ದುರ್ವಾದಿನಿಕರವನ್ನು ನಿರಾಕರಿಸಿ, ಜಗನ್ಮಾನ ಗ್ರಂಥಗಳನ್ನು ರಚಿಸಿ, ಲೋಕಮದ್ಯನಾಗಿ, ಎಲ್ಲ ಜ್ಞಾನಿಗಳಿಗೂ ನಾಯಕನಾಗಿ, ಭಾರತದೇಶದ ತತ್ವ-ಧರ್ಮ-ಸಂಸತಿಗಳ ರಕ್ಷಕನೆನಿಸಿ, ಜಗತ್ತಿನ ಜನತೆಯಿಂದ ಮಾನ್ಯನಾಗುವನು. ಅವನಿಂದ ಭಾರತಾವನಿಗೆ ಅಪೂರ್ವ ಕೀರ್ತಿ ದೊರಕುವುದು, ರಾಜಾಧಿರಾಜರು ಅವನ ಆಜ್ಞೆಯನ್ನು ಶಿರಸಾಧರಿಸಿ ನೆರವೇರಿಸಲು ಟೊಂಕಕಟ್ಟಿ ನಿಲ್ಲುವರು. ಅವನಿಂದ ಸಮಸ್ತ ಜನರ ಕಲ್ಯಾಣವಾಗುವುದು. ಆ ಮಹನೀಯನ ಹೆಸರಿನ ಜೊತೆಗೆ ನಿನ್ನ ಹೆಸರೂ ಅಜರಾಮರವಾಗಿ ವಿರಾಜಿಸುವುದು. ನೀನಿನ್ನು ಇಲ್ಲಿಂದ ಹೊರಡು, ನನಗೆ ಮಂಗಳವಾಗಲಿ.
ಜಾಗೃತರಾದ ಬ್ರಹ್ಮಣ್ಯತೀರ್ಥರು ಶ್ರೀಹರಿಯ ವರವನ್ನು ಸ್ಮರಿಸಿ ಆನಂದಪಳಕಿತರಾಗಿ, ಹರಿಯನ್ನು ಪರಿಪರಿಯಾಗಿ ಸ್ತುತಿಸಿ, ಸ್ನಾನಾತ್ಮಿಕಾದಿಗಳನ್ನು ನೆರವೇರಿಸಿ ಶ್ರೀಬದರೀನಾಥನ ಸೇವೆಯನ್ನು ಪೂರೈಸಿ, ಶಿಷ್ಯಮಂಡಲಿಯೊಡನೆ ಇಷ್ಟಾರ್ಥಸಿದಿಯಾದುದರಿಂದ ಆನಂದದಿಂದ ಬದರಿಯಿಂದ ಪ್ರಯಾಣ ಬೆಳೆಸಿ, ಕರ್ನಾಟಕ ದೇಶದಲ್ಲಿ ಪವಿತ್ರಕ್ಷೇತ್ರವಾದ ಅಟ್ಟೂರು ಎಂಬ ಗ್ರಾಮಕ್ಕೆ ದಯಮಾಡಿಸಿ, ಶ್ರೀಬದರೀನಾಥನ ವರವು ಎಂದು - ಯಾವ ರೀತಿ ಫಲಿಸುವುದೋ ಎಂದು, ಆ ಸುದಿನವನ್ನು ನಿರೀಕ್ಷಿಸುತ್ತಾ ಕಾಲಕಳೆಯಹತ್ತಿದರು.