
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೭. ಶ್ರೀಬ್ರಹ್ಮಣ್ಯತೀರ್ಥರ ಅನುಗ್ರಹ
ಬದರಿಕಾಶ್ರಮದಲ್ಲಿ ಶ್ರೀನರ-ನಾರಾಯಣರನ್ನು ಸೇವಿಸಿ ಅವರಿಂದ “ಶ್ರೇಷ್ಠ ಶಿಷ್ಯನನ್ನು ಅನುಗ್ರಹಿಸುವೆವು” ಎಂದು ವರವನ್ನು ಪಡೆದು ಅಟ್ಟೂರಿಗೆ ಹಿಂದಿರುಗಿದ ಕೆಲಕಾಲಾನಂತರ ಶ್ರೀಹರಿಯ ಪ್ರೇರಣೆಯಂತೆ ಸಂಚಾರ ಹೊರಟ ಶ್ರೀಬ್ರಹ್ಮಣ್ಯತೀರ್ಥರು ಬನ್ನೂರು ಪ್ರಾಂತ್ಯಕ್ಕೆ ಆಕಸ್ಮಿಕವಾಗಿ ದಯಮಾಡಿಸಿದರು. ಬನ್ನೂರಿಗೆ ಸೇರಿದಂತಿರುವ ಕಾವೇರಿ ನದಿಯನ್ನು ಕಂಡು ಹರ್ಷಿಸಿ ಅಲ್ಲಿ ಸ್ನಾನ ಮಾಡಬಯಸಿದರು.
ಅಮೃತರಸದಂತಿರುವ ಪುಣ್ಯತಮ ಜಲಗಳಿಂದ ಪರಿಶೋಭಿಸುವ ಆ ಪರಮಪವಿತ್ರವಾದ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಶ್ರೀಬ್ರಹ್ಮಣ್ಯತೀರ್ಥರು ಮಧ್ಯಾಹ್ನದ ಆಕ, ಜಪ-ತಪಾನುಷ್ಠಾನಗಳನ್ನು ಪೂರೈಸಿ ಶಿಷ್ಯಮಂಡಲಿಯೊಡನೆ ಕಾವೇರೀ ನದಿಯ ಉತ್ತರಪ್ರದೇಶದಲ್ಲಿರುವ ಬನ್ನೂರು ಅಗ್ರಹಾರಕ್ಕೆ ದಯಮಾಡಿಸಿದರು.
ಬನ್ನೂರು ಅಗ್ರಹಾರವು ವಿವಿಧ ವಿದ್ಯಾಕೋವಿದರು, ವೇದವೇದಾಂತ ಪಾರಂಗತರೂ, ಯಜನಯಾಜನ ಧುರೀಣರೂ, ಕರ್ಮಠರೂ ಆದ ದ್ವಿಜಗಣಮಂಡಿತವಾಗಿದ್ದಿತು. ಆ ಅಗ್ರಹಾರದ ಗೃಹಸ್ಥರು ಪಾಷಂಡಮತಖಂಡನೆಗಾಗಿ ಭೂಮಂಡಲದಲ್ಲಿ ಅವತರಿಸಲಿರುವ ಭಾವಿಬ್ರಹ್ಮರಾದ ಮುಖ್ಯಪ್ರಾಣದೇವರ ಆವೇಶಾವತಾರವಾದ ಮಹನೀಯರ ಪರಿಚಯ ಮಾಡಿಸಲೋಸುಗ ಮತ್ತು ಅವರ ಸೇವೆಯನ್ನು ಮಾಡಲು ಪೂರ್ವಭಾವಿಯಾಗಿಯೇ ಧಾತಲದಲ್ಲಿ ಅವತರಿಸಿದ ಸತಲೋಕದ ಕುಟುಂಬಿಗಳಂತೆ ಸಾತ್ವಿಕಗುಣಸಂಪನ್ನರಾಗಿ, ಉತ್ತಮ ಧರ್ಮಾಚರಣರತರಾಗಿ ಕಂಗೊಳಿಸುತ್ತಿದ್ದರು.
ಶ್ರೀಜಯಧ್ವಜತೀರ್ಥರ ಅನುಗ್ರಹದಿಂದ ಮೇಧಾವಿಗಳಾದ ಆರು ಜನ ಪುತ್ರರನ್ನು ಪಡೆದರು. ಅವರಲ್ಲಿ ನಾನು ಕೊನೆಯವನು ದೈವಾನುಗ್ರಹ, ತಮ್ಮ ಆಶೀರ್ವಾದದ ಬಲದಿಂದ ನನಗೆ ಸಕಲ ವೈಭವಗಳಿದ್ದರೂ ಮಕ್ಕಳಿಲ್ಲದೆ, ಸುಂಟರಗಾಳಿಗೆ ಹುಲ್ಲಿನಂತೆ ಕಳವಳ ಪಡುತ್ತಿದ್ದೆ. ನನ್ನ ಪತ್ನಿಯಾದ ಲಕ್ಷ್ಮೀದೇವಿಯು ಸಂತಾನಾರ್ಥವಾಗಿ, ಬಲಾತ್ಕಾರವಾಗಿ ಅಕ್ಕಮ್ಮನೆ ಈ ಮತ್ತೊಬ್ಬ ವಧುವನ್ನು ತಂದು ತಾನೇ ನಿಂತು ನನಗೆ ವಿವಾಹ ಮಾಡಿಸಿದಳು. ಆದರೆ ದುರ್ದೈವಿಯಾದ ನನ ಅವಳಲ್ಲಿಯೂ ವಂಶೋದ್ಧಾರಕ ಸಂತಾನವಾಗಲಿಲ್ಲ. ಆದುದರಿಂದ ನಾವು ದುಃಖಿಗಳಾಗಿದ್ದೇವೆ. ಮಹಾನುಭಾವರಾದ, ದಯಾಳುಗಳಾದ ತಾವೇ ತಮ್ಮ ಮನೋರಥವನ್ನು ಪೂರ್ಣಗೊಳಿಸಿ ಅನುಗ್ರಹಿಸಬೇಕು.
ರಾಮಾಚಾರ್ಯರ ಮಾತು ಕೇಳಿ ಬ್ರಹ್ಮಣ್ಯತೀರ್ಥರು ಕ್ಷಣಕಾಲ ಧ್ಯಾನಸ್ಥರಾದರು. ಅವರಿಗೆ ಬದರಿಯಲ್ಲಿ ಶ್ರೀಹರಿಯು ನೀಡಿದ ವರ ಸ್ಮರಣೆಗೆ ಬಂದಿತು. ಶ್ರೀಹರಿಯು ಅಪ್ಪಣೆ ಕೊಡಿಸಿದ ತಮಗೆ ಲಭಿಸಲಿರುವ ಶಿಷ್ಯನು ಈ ರಾಮಾಚಾರ್ಯರ ದಂಪತಿಗಳಿಗೆ ಜನಿಸಲಿರುವ ಪುತ್ರನೇ ಎಂಬುದು ಸ್ಪಷ್ಟವಾಗಿ ಗೋಚರಿಸಿತು! ತಮ್ಮ ತಪಸ್ಸು ಫಲಿಸಿತೆಂಬ ಆನಂದದಿಂದ ಗುರುಗಳು ಇಂತೆಂದರು -
ಬ್ರಹ್ಮಣ್ಯ : ರಾಮಾಚಾರ್ಯ! ನೀನು ಮಹಾಭಾಗ್ಯಶಾಲಿ! ನಿನಗೆ ಕ್ಷಿಪ್ರವಾಗಿ ಭಾಗವತಾಗ್ರೇಸರನಾದ ಸತ್ಪುತ್ತನ್ನು ಜನಿಸಲಿರುವನು! ಅದಕ್ಕೆ ಅವಶ್ಯವಾಗಿ ಮಾಡಬೇಕಾದ ಕೆಲ ಹವನಾದಿಗಳನ್ನು ನಾಳೆಯೇ ನಾವು ಖುದ್ದು ನಿಂತು ನಿನ್ನಿಂದ ಮಾಡಿಸುತ್ತೇವೆ. ಇದರಿಂದ ನಮ್ಮ ಮನೋರಥವೂ ಪೂರ್ಣವಾಗುವುದು.
ಗುರುವರರ ವಚನವನ್ನಾಲಿಸಿ ರಾಮಾಚಾರ್ಯ ದಂಪತಿಗಳಿಗೆ ಅಪಾರ ಆನಂದವಾಯಿತು. ಅವರು “ಅನುಗೃಹೀತವಾದು ಎಂದು ಗುರುಗಳಿಗೆ ನಮಸ್ಕರಿಸಿದರು. ಬ್ರಹ್ಮಣ್ಯತೀರ್ಥರು ಮಾಡಬೇಕಾದ ಕರ್ತವ್ಯಕರ್ಮವನ್ನು ವಿವರಿಸಿ, 'ನಾಳೆ ಪುನಃ ಬರುವುದಾಗಿ' ಹೇಳಿ ರಾಮದೇವರ ಗುಡಿಗೆ ದಯಮಾಡಿಸಿದರು. ಅಂದು ರಾತ್ರಿ ಕಳೆಯಿತು.
ಮರುದಿನ ಸೂರ್ಯದೇವನು ಉದಯಿಸುತ್ತಿರಲು ಸಮಸ್ತ ವಸ್ತುಗಳನ್ನೂ ಸಂಗ್ರಹಿಸಿ, ಸಿದ್ಧಪಡಿಸಿ ರಾಮಾಚಾರ್ಯರು ಶ್ರೀಬ್ರಹ್ಮಣ್ಯತೀರ್ಥರನ್ನು ವಾದ್ಯ-ವೈಭವಗಳೊಡನೆ ಮನೆಗೆ ಕರೆತಂದರು. ಆಚಾರ್ಯರ ಮನೆಯನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಯಲ್ಲಿ ದಿವ್ಯಪೀಠದಲ್ಲಿ ಗುರುಗಳನ್ನು ಕೂಡಿಸಿ ರಾಮಾಚಾರ್ಯರು ನಮಸ್ಕರಿಸಿದರು.
ಅನಂತರ ಗುರುಗಳ ನೇತೃತ್ವದಲ್ಲಿ ವೇದಪಾರಂಗತರಾದ ಶಿಷ್ಯರು ಪುರೋಹಿತಾದಿಗಳು ಸ್ವಾಹಾಸಮೇತನಾದ ಯಜೇಶ್ವರನನ್ನು ಆಧಾನಗೊಳಿಸಿ ಯಜ್ಞಕುಂಡವನ್ನು ಹಸಿರುಹಸಿರಾದ ದರ್ಭೆಗಳಿಂದಲೂ ಪುಷ್ಪವಸ್ತಾದಿಗಳಿಂದಲೂ ಅಲಂಕರಿಸಿ ಪವಿತ್ರಮೂರ್ತಿಯೂ, ತ್ರಿಲೋಕಪೂಜ್ಯನೂ ಆದ ಶ್ರೀಯಜೇಶ್ವರನನ್ನು ಕುಡಿಯಿಂದ ಕೂಡಿರುವ ಗೋಕರ್ಣ ಪರಿಮಾಣದ ಅನೇಕ ವಿಧ ಸಮಿತ್ತು, ಆಜ್ಯ, ಅರಳು, ಸಕ್ಕರೆ, ಒದ್ದೆಯಾದ ತಿಲಗಳೇ ಮುಂತಾದವುಗಳಿಂದ ವಿಧ್ಯುಕ್ತವಾಗಿ ಪೂಜಿಸಿ ಸಂತೋಷಗೊಳಿಸಿದರು.
ಆಗ ಅಗ್ನಿಕುಂಡದಲ್ಲಿ ಪ್ರದಕ್ಷಿಣಾಕಾರವಾಗಿ ಜ್ವಾಲೆಗಳಿಂದ ಅಗ್ನಿದೇವನು ಕಂಗೊಳಿಸಿದನು. ಅದು ಅನುಗ್ರಹಸೂಚಕ ಹವಿಸ್ಸಿನ ಮಾಧುರ್ಯವನ್ನು ಯಜೇಶ್ವರನು ಶ್ಲಾಘಿಸುತ್ತಿರುವಂತೆ ಕಂಡುಬರುತ್ತಿತ್ತು. ಅಂತಹ ಯಕ್ಷೇಶ್ವರನ ಸನ್ನಿಧಿಯಲ್ಲಿಯೇ ಸ್ಥಾಲೀಪಾಕಪಾತ್ರೆಯಲ್ಲಿ ಉಳಿದಿರುವ (ಅಭ್ಯಗ್ರವಾದ) ಹವಿಶೇಷಪ್ರಸಾದವನ್ನು ಬ್ರಹ್ಮಣ್ಯಮುನಿಗಳು ತಾವೇ ಕರದಲ್ಲಿ ತೆಗೆದುಕೊಂಡು ಮೂರು ಭಾಗವಾಗಿ ವಿಭಾಗಿಸಿ ಬಹಳಕಾಲ ಅದನ್ನು ಅಭಿಮಂತ್ರಿಸಿ ರಾಮಾಚಾರ್ಯರ ಹಸ್ತದಲ್ಲಿಟ್ಟು “ವತ್ತ! ಇದನ್ನು ಸ್ವೀಕರಿಸುವುದರಿಂದ ಪ್ರಕಾಶಮಾನವಾದ ಅರಣಿಯಲ್ಲಿ ಆವಿರ್ಭವಿಸುವ ತ್ರೇತಾಗ್ನಿಗಳಂತೆ ಅತಿಶೀಘ್ರವಾಗಿ ನಿನಗೆ ಮೂರು ಮಕ್ಕಳು ಜನಿಸುವರು. ನಿನಗೆ ಪುಣ್ಯಪ್ರಾಪ್ತಿಗಾಗಿಯೂ, ಅತ್ಯಂತ ಯಶಸ್ಸಿಗೋಸ್ಕರವೂ, ವಿಪುಲ ಸಂಪತ್ಪಾಪ್ತಿಗಾಗಿಯೂ ಸಹ ಪುರಾಣಪುರುಷನಾದ ಶ್ರೀಮನ್ನಾರಾಯಣನ ಪ್ರೀತ್ಯರ್ಥವಾಗಿ, ನಿನಗೆ ಜನಿಸುವ ಮೂವರು ಮಕ್ಕಳಲ್ಲಿ ಕಿರಿಯ ಪುತ್ರನನ್ನು ಸಪಕನಾದ ನೀನು ನಮಗೆ, ನಮ್ಮ ಸಂಸ್ಥಾನಕ್ಕೆ ದಾನಮಾಡಿ ಶ್ರೇಯೋವಂತನಾಗಿ ಬಾಳು? ಎಂದಾಜ್ಞಾಪಿಸಿದರು.
ಶ್ರೀಬ್ರಹ್ಮಣ್ಯತೀರ್ಥರು ಹೀಗೆ ಹೇಳುತ್ತಲೂ ರಾಮಾಚಾರ್ಯ ದಂಪತಿಗಳ ಮೈ ಪುಳಕಿಸಿತು. ಆನಂದಶರಧಿಯುಕ್ಕೇರಿತು. ಗುರುಗಳ ಆಜ್ಞೆಯನ್ನು ಶಿರಸಾಧರಿಸಿದ ರಾಮಾಚಾರ್ಯರು ಲಕ್ಷ್ಮೀದೇವಿಯ ಮುಖವನ್ನವಲೋಕಿಸಿ ಸ್ವಪ್ನದಲ್ಲಿ ವೇದವ್ಯಾಸದೇವರು “ಬ್ರಹ್ಮಣ್ಯತೀರ್ಥರು ಹೇಳಿದಂತೆ ವರ್ತಿಸು” ಎಂದಾಜ್ಞಾಪಿಸಿದ್ದನ್ನು ಸ್ಮರಿಸಿ ಶ್ರೀವೇದವ್ಯಾಸದೇವರ ಅಪ್ಪಣೆಯನ್ನು ನೆರವೇರಿಸಲು ನಿಶ್ಚಯಿಸಿ, “ಗುರುದೇವ! ತಮ್ಮ ಆಣತಿಯನ್ನು ಶಿರಸಾಧರಿಸಿದ್ದೇವೆ. ತಮ್ಮ ಆಜ್ಞೆಯಂತೆ ನಡೆಯುತ್ತೇವೆ”21 ಎಂದು ಪತ್ರೀಸಹಿತರಾಗಿ, ಪ್ರಮಾಣಪೂರ್ವಕವಾಗಿ ವಚನಬದ್ದರಾದರು.
ಅನಂತರ ಸಂತುಷ್ಟರಾದ ಶ್ರೀಗಳವರು ಆಶೀರ್ವಾದಪೂರ್ವಕವಾಗಿ ಅನುಗ್ರಹಿಸಿದ ಹವಿಃಶೇಷ ಪ್ರಸಾದವನ್ನು ಮೂರು ತುತ್ತಾಗಿ ಪತ್ನಿಯರು ಭುಂಜಿಸಿ ಗುರುಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ಗುರುವರ್ಯರಿಗೆ ವಿಶೇಷ ಭಿಕ್ಷಾದಿಗಳನ್ನೂ ಪಾದಪೂಜೆ ಮುಂತಾದ ಗುರುಸೇವೆಯನ್ನೂ ಮಾಡಿ ಕೃತಾರ್ಥರಾದರು.
ಇದಾದ ಮೇಲೆ ಒಂದೆರಡು ದಿನ ರಾಮಾಚಾರ್ಯ ದಂಪತಿಗಳು ಭಕ್ತಿಪೂರ್ವಕವಾಗಿ ಸಮರ್ಪಿಸಿದ ಆತಿಥ್ಯ-ಸೇವೆಗಳನ್ನು ಸ್ವೀಕರಿಸಿದ ಶ್ರೀಬ್ರಹ್ಮಣ್ಯತೀರ್ಥರು ಬನ್ನೂರಿನ ಸಮಸ್ತ ಶಿಷ್ಯ-ಭಕ್ತಮಂಡಲಿಯಿಂದ ಬೀಳ್ಕೊಂಡು ಅಟ್ಟೂರಿಗೆ ದಯಮಾಡಿಸಿದರು.
ಶ್ರೀಹರಿವಾಯುಗಳ ಅನುಗ್ರಹ ಮತ್ತು ಬ್ರಹ್ಮಣ್ಯತೀರ್ಥರ ಆಶೀರ್ವಾದ ಬಲದಿಂದ ಲಕ್ಷ್ಮೀದೇವಿಯು ಗರ್ಭ ಧರಿಸಿದಳು. ರಾಮಾಚಾರ್ಯರಿಗೆ, ಅವರ ಷಾಷಿಕ ಬಂಧು-ಬಾಂಧವರಿಗೆ ಮಹದಾನಂದವಾಯಿತು ಕಾಲಕ್ರಮದಲ್ಲಿ ರಾಮಾಚಾರ್ಯರ ಪತ್ನಿಯಾದ ಲಕ್ಷ್ಮೀದೇವಿಯು, ಸಮುದ್ರವು ಶ್ರೀಲಕ್ಷ್ಮೀದೇವಿ ಮತ್ತು ಐರಾವತವನ್ನು ಪಡೆದಂತೆ ಭೀಮಕ್ಕ'ನೆಂಬ ಓರ್ವ ಕನ್ಯಾಮಣಿಯನ್ನೂ, ಕಾಂತಿಸಂಪನ್ನನೂ, ಪ್ರತಿವಾದಿ ಭಯಂಕರನೂ ಆದ 'ಮದ್ದಪತಿ' ಎಂಬ ಪುತ್ರನನ್ನೂ ಪ್ರಸವಿಸಿದಳು. ರಾಮಾಚಾರ್ಯರು ಮತ್ತು ಬಂಧುಜನರು ಲಕ್ಷ್ಮೀದೇವಿಗೆ ಸಂತಾನ ಪ್ರಾಪ್ತಿಯಾದುದರಿಂದ ಪರಮಾನಂದತುಂದಿಲರಾದರು.