Kaliyugada Kalpataru Sri Vyasa Raja Yati Sarvabhouma The Avatar of Sri Yathisaarvabhouma!

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೮. ಶ್ರೀಯತಿಸಾರ್ವಭೌಮನ ಅವತಾರ!

ರಾಮಾಚಾರ್ಯರ ಧರ್ಮಪತ್ನಿಯಾದ ಲಕ್ಷ್ಮೀದೇವಿಯು ಪೂರ್ವಾರ್ಜಿತ ಪುಣ್ಯ, ಶ್ರೀಹರಿಯ ಅನುಗ್ರಹ, ಶ್ರೀಬ್ರಹ್ಮಣ್ಯತೀರ್ಥರ ಆಶೀರ್ವಾದಗಳ ಬಲದಿಂದ ಮತ್ತೆ ಗರ್ಭಿಣಿಯಾದಳು. ಜೀವೋತ್ತಮರಾದ ಶ್ರೀಮುಖ್ಯಪ್ರಾಣದೇವರ ವಿಶೇಷಾವೇಶಯುಕ್ತರಾದ ಶ್ರೀಪ್ರಹ್ಲಾದರಾಜರು ಗರ್ಭಸ್ಥರಾಗಿರಲಾಗಿ ವಾಯುದೇವರ ಶರೀರಭೂತವಾದ ಮಹತ್ತ್ವದ ಮಹಿಮೆಯನ್ನು ಪ್ರಕಟಪಡಿಸಲೋ ಎಂಬಂತೆ ಲಕ್ಷ್ಮೀದೇವಿಯ ಉದರವೂ ಮಹತ್ವವನ್ನು ಹೊಂದಿತು. ಅಂದರೆ ಆ ತಾಯಿ ಪೂರ್ಣಗರ್ಭಿಣಿಯಾದಳೆಂದು ಭಾವ.

ಶ್ರೀಬ್ರಹ್ಮಣ್ಯತೀರ್ಥರು ರಾಮಾಚಾರ್ಯ ದಂಪತಿಗಳಿಗೆ ಪುತ್ರೋತ್ಸವವಾಗುವ ಕಾಲವನ್ನು ಮೊದಲೇ ಅರಿತಿದ್ದರು. ಜ್ಞಾನಿಗಳಾದ ಅವರು ಜನಿಸುವ ಶಿಶುವು ಮಹಾಜ್ಞಾನಿಯೂ, ಭಾಗವತಾಗ್ರಣಿಯಾದ ಪ್ರಹ್ಲಾದರಾಜರ ಅವತಾರವ ಆಗಿರುವುದರಿಂದ ಹಿಂದೆ ಮಾತೃಗರ್ಭದಲ್ಲಿದ್ದ ಪ್ರಹ್ಲಾದರು ಶ್ರೀಹರಿತತ್ವಾಮೃತಪ್ರಾಶನದಿಂದ ವರ್ಧಿಸುವಂತೆ ನಾರದ ಮಹರ್ಷಿಗಳು ಅನುಗ್ರಹಿಸಿದ್ದನ್ನು ಸ್ಮರಿಸಿ, ಬ್ರಹ್ಮಣ್ಯತೀರ್ಥರು ಈಗ ಆ ಮಹನೀಯರೇ ಮತ್ತೆ ಅವತರಿಸುವುದರಿಂದ ಆ ಪವಿತ್ರಾತ್ಮರಿಗೆ ಭೂಸ್ಪರ್ಶವಾಗದಂತೆಯೂ, ಜನಿಸಿದ ಮಗುವು ತಾಯಿಯ ಹಾಲನ್ನು ಕುಡಿಯದೇ ಭಗವದರ್ಪಿತ ಕ್ಷೀರಪ್ರಾಶನದಿಂದಲೇ ಬೆಳೆಯುವಂತೆ ಮಾಡಬೇಕೆಂದು ಹರಿವಾಯುಗಳ ಪ್ರೇರಣೆಯಂತೆ ಸಂಕಲ್ಪಿಸಿದರು ಮತ್ತು ಅತ್ಯಂತ ಭಕ್ತಿಯಿಂದ ಶ್ರೀಮೂಲಗೋಪಾಲಕೃಷ್ಣ-ಪಟ್ಟಾಭಿರಾಮ-ವೇದವ್ಯಾಸದೇವರಿಗೆ ಅರ್ಪಿಸಿದ ಗೋಕ್ಷೀರವನ್ನು ಅಭಿಮಂತ್ರಿಸಿ ಒಂದು ಸುವರ್ಣಪಾತ್ರೆಯಲ್ಲಿ ಹಾಕಿ ಮುಚ್ಚಿ ಕೆಲ ಅವಶ್ಯ ತಿಳುವಳಿಕೆ ರೂಪ ಸಂದೇಶದೊಡನೆ ತಮ್ಮ ಆತ್ಮೀಯರೊಡನೆ ರಾಮಾಚಾರ್ಯರಿಗೆ ಕೊಡಲು ಬನ್ನೂರಿಗೆ ಕಳುಹಿಸಿಕೊಟ್ಟರು.

ಗುರುಗಳ ಅಪ್ಪಣೆಯಂತೆ ಹೊರಟ ಮಠದ ಆತ್ಮೀಯರು, ಶಿಶುವು ಜನಿಸಲಿರುವ ದಿನವೇ ಪ್ರಾತಃಕಾಲ ಬನ್ನೂರಿಗೆ ಬಂದು ಸೇರಿದರು ಮತ್ತು ಏಕಾಂತದಲ್ಲಿ ರಾಮಾಚಾರ್ಯ ದಂಪತಿಗಳಿಗೆ ಗುರುಗಳು ಕಳಿಸಿದ ಕ್ಷೀರಯುಕ್ತ ಸುವರ್ಣಪಾತ್ರೆಯನ್ನು ಕೊಟ್ಟು “ಪೂಜ್ಯ ಆಚಾರ್ಯರೇ, ಗುರುವರ್ಯರು ಭಗವದರ್ಪಿತ, ಮಂತ್ರಪೂತವಾದ ಕ್ಷೀರವನ್ನು ನಿಮಗೆ ಕಳಿಸಿದ್ದಾರೆ. ನಿಮಗೆ ಹುಟ್ಟುವ ಶಿಶುವು ಜ್ಞಾನಿಯಾದ ದೇವಾಂಶಸಂಭೂತನಾಗಿರುವುದರಿಂದ ಆ ಶಿಶುವು ಭೂಸ್ಪರ್ಶವಿಲ್ಲದೇ ಸುವರ್ಣ ಹರಿವಾಣದಲ್ಲಿ ಜನಿಸುವಂತೆ ಮಾಡಲು ಆಜ್ಞಾಪಿಸಿರುವುದು ಸರಿಯಷ್ಟೆ? ಹುಟ್ಟುವ ಶಿಶುವು ಮಹಾತ್ಮನಾಗಲಿರುವುದರಿಂದ ಅವನ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಪರಮಾತ್ಮನಿಗೆ ಸಮರ್ಪಿತವಾದ ಈ ಹಾಲನ್ನೇ ದಿನಕ್ಕೆ ನಾಲ್ಕಾರು ಉದ್ಧರಣೆಯಷ್ಟು ಪ್ರಾಶನ ಮಾಡಿಸಬೇಕು. ಇದು ಹತ್ತು-ಹದಿನೈದು ದಿನಗಳಿಗೆ ಸಾಕಾಗುವುದು. ಮಾತ್ರವಲ್ಲ, ಹಾಲು ಇಂದಿನಂತೆಯೇ ಶುದ್ಧವಾಗಿಯೇ ಇರುತ್ತದೆ. ಇದರಿಂದ ಶಿಶುವು ಆರೋಗ್ಯಪೂರ್ಣವಾಗಿ, ದೃಷ್ಟಪುಷ್ಟಾಂಗವಾಗಿ, ಪವಿತ್ರವಾಗಿ ಬೆಳೆಯುವುದು. ಈ ಬಗ್ಗೆ ಯೋಚಿಸಬೇಕಾಗಿಲ್ಲ. ಎಲ್ಲವೂ ಭಗವಂತನ ಪ್ರೇರಣೆಯಂತೆ ಈ ವ್ಯವಸ್ಥೆ ಮಾಡಲಾಗಿದೆ. ಮಗುವು ಜನಿಸಿದ ಹನ್ನೊಂದನೆಯ ದಿನ ಮಂಗಳಸ್ನಾನಾನಂತರ ಪುಣ್ಯಾಹಾದ್ಯಾಚರಣೆಗಳನ್ನು ನೆರವೇರಿಸಿಕೊಂಡು ಅಟ್ಟೂರಿಗೆ ನೀವೆಲ್ಲರೂ ಮಗುವಿನೊಡನೆ ಬಂದು ಅಲ್ಲಿಯೇ ಶ್ರೀಗಳವರ ನೇತೃತ್ವದಲ್ಲಿ ಜಾತಕರ್ಮ-ನಾಮಕರಣ ಮಹೋತ್ಸವನ್ನು ನೆರವೇರಿಸಬೇಕು - ಎಂದು ಗುರುಗಳು ಅಪ್ಪಣೆ ಮಾಡಿದ್ದಾರೆ” ಎಂದು ನಿವೇದಿಸಿದರು. ಅವರ ಮಾತು ಕೇಳಿ ಮೊದಲು ಸ್ವಲ್ಪ ಚಿಂತೆಯಾದರೂ ಅನಂತರ ರಾಮಾಚಾರ್ಯ ದಂಪತಿಗಳು ಜ್ಞಾನಿಗಳಾದ ಗುರುಗಳ ಆಣತಿಯಂತೆ ವರ್ತಿಸುವುದು ಶ್ರೇಯಸ್ಕರವೆಂದು

ನಿರ್ಧರಿಸಿದರು.

ಕೆಲದಿನಗಳ ಹಿಂದೆ ಶ್ರೀಬ್ರಹ್ಮಣ್ಯತೀರ್ಥರು ರಾಮಾಚಾರ್ಯರ ಪತ್ನಿಯು ತುಂಬಿದ ಗರ್ಭಿಣಿಯಾಗಿರುವುದನ್ನು ತಿಳಿದು, ಜ್ಯೋತಿಷ್ಯರಿಂದ ಪ್ರಸವಕಾಲಾದಿಗಳನ್ನು ಮೊದಲೇ ಅರಿತಿದ್ದರು. ಭಾಗವತಾಗಣಿಯೂ, ಜ್ಞಾನಿಶ್ರೇಷ್ಠನೂ ಆದ ಪ್ರಹ್ಲಾದರಾಜನೇ ಜನಿಸುವನೆಂದು ಶ್ರೀವೇದವ್ಯಾಸರ ವರದಿಂದ ತಿಳಿದಿದ್ದರು. ಆದ್ದರಿಂದಲೇ ಆ ಮಹಾನುಭಾವನಿಗೆ ಭೂಸ್ಪರ್ಶವಾಗದೆ ಜನಿಸುವಂತೆ ವ್ಯವಸ್ಥೆ ಮಾಡಲು ಶ್ರೀಹರಿವಾಯುಗಳ ಪ್ರೇರಣೆಯಿಂದ ನಿಶ್ಚಯಿಸಿ ಅದಕ್ಕಾಗಿ ಒಂದು ದೊಡ್ಡ ಚಿನ್ನದ ಹರಿವಾಣವನ್ನು ಆತ್ಮೀಯರೊಡನೆ ರಾಮಾಚಾರ್ಯರಿಗೆ ಕಳುಹಿಸಿಕೊಟ್ಟು ಅದರಲ್ಲಿಯೇ ಶಿಶುವಿನ ಜನನವಾಗುವಂತೆ ವ್ಯವಸ್ಥೆ ಮಾಡಲು ಶ್ರೀಹರಿವಾಯುಗಳ ಪ್ರೇರಣೆಯಿಂದ ನಿಶ್ಚಯಿಸಿ ಅದಕ್ಕಾಗಿ ಒಂದು ದೊಡ್ಡ ಚಿನ್ನದ ಹರಿವಾಣವನ್ನು ಆತ್ಮೀಯರೊಡನೆ ರಾಮಾಚಾರ್ಯರಿಗೆ ಕಳುಹಿಸಿಕೊಟ್ಟು ಅದರಲ್ಲಿಯೇ ಶಿಶುವಿನ ಜನನವಾಗುವಂತೆ ವ್ಯವಸ್ಥೆ ಮಾಡಿದ್ದರು.

ಶ್ರೀಶಾಲಿವಾಹನ ಶಕೆ ೧೩೬೯ನೇ ಪ್ರಭವ ಸಂವತ್ಸರದ ಅಧಿಕ ವೈಶಾಖ ಶುಕ್ಲ ಸಪ್ತಮೀ ಭಾನುವಾರ, ಬನ್ನೂರಿನಲ್ಲಿ ಮಹಾಸಂಭ್ರಮ, ನರಕಾಂತಕನಾದ ನಾರಾಯಣನ ನಾಭಿಕಮಲವು ವೇದಗಳಿಗೆ ಆಶ್ರಯನಾದ ಬ್ರಹ್ಮದೇವರನ್ನು ಪ್ರಸವಿಸಿದಂತೆ ರಾಮಾಚಾರ್ಯರ ಪತ್ನಿ ಲಕ್ಷ್ಮೀದೇವಿಯು ಪರಿಶುದ್ಧವಾದ, ಸಕಲ ಗ್ರಹಗಳ ಶುಭವೀಕ್ಷಣದಿಂದ ಕೂಡಿ, ಮಹಿಮಾನ್ವಿತ, ಸಂಪದ್ಯುಕ್ತ ಶುಭಲಗ್ನದಲ್ಲಿ ಭೂಸ್ಪರ್ಶವಿಲ್ಲದಲೇ ಬಂಗಾರದ ಹರಿವಾಣದಲ್ಲಿ ಅನಾಯಾಸವಾಗಿ ಪುತ್ರರತ್ನವನ್ನು ಪ್ರಸವಿಸಿದಳು! ಶ್ರೀವೇದವ್ಯಾಸರ ಅಭಯವಚನದಂತೆ ಭಾಗವತ ಶಿರೋಮಣಿಗಳಾದ ಪ್ರಹ್ಲಾದರಾಜರು ಶ್ರೀಹರಿ ಸೇವೆಗಾಗಿ ಮತ್ತೆ ಜನಿಸಿದರು! ಲೋಕಕಲ್ಯಾಣಭಾಗ್ಯರವಿಯ ಅವತಾರವಾಯಿತು!!

ಅಖಂಡ ಬ್ರಹ್ಮಾಂಡವನ್ನು ಶಿರದಲ್ಲಿ ಹೊತ್ತು ರಕ್ಷಿಸುವ ಶ್ರೀಹರಿತಲ್ವರೂಪನಾದ ಸಾಕ್ಷಾತ್ ಶೇಷಾಂಶಸಂಭೂತನಾದ ಪ್ರಹ್ಲಾದರಾಜನು ಹಿಂದೆ ನರಸಿಂಹದೇವರಲ್ಲಿ ತನ್ನ ಮುಂದಿನ ಮೂರು ಜನ್ಮಗಳಲ್ಲಿ ಹರಿಯ ದಾಸನಾಗಿ ಸೇವಿಸುವಂತೆ ಇಚ್ಛಿಸಿ ವರವನ್ನು ಪಡೆದಿದ್ದಂತೆ.* ಶ್ರೀರಾಮಾಚಾರ್ಯರ ಧರ್ಮಪತ್ನಿಯಾದ ಲಕ್ಷ್ಮೀದೇವಿಯಲ್ಲಿ ಶ್ರೀಬ್ರಹ್ಮಣ್ಯತೀರ್ಥಮುನಿಗಳ ಕಾರುಣ್ಯದಿಂದ ಶೇಷಾಂಶ ಶೋಭಿತನಾಗಿ ಶ್ರೀಶಾಲೀವಾಹನ ಶಕೆ ೧೩೬೯ನೇ ಪ್ರಭವ ಸಂವತ್ಸರದ ಅಧಿಕ ವೈಶಾಖ ಶುಕ್ಲ ಸಪ್ತಮೀ ಭಾನುವಾರದಂದು ಅವತರಿಸಿದನು.

ಶಿಶುವು ಬ೦ಗಾರದ ಹರಿವಾಣದಲ್ಲಿ ಜನಿಸಿದ ಕೂಡಲೇ ಆ ಪ್ರಸೂತಿಕಾಗ್ರಹವು ಪ್ರಖರ ಕಾಂತಿಯಿಂದ ಬೆಳಗಿತ ಮೇರುಪರ್ವತದ ಶೃಂಗಾಗ್ರದಲ್ಲಿ ಉದಯಿಸುತ್ತಿರುವ ದಿನಮಣಿಯ ಕಾಂತಿಯು ಹೇಗೆ ಕುಂಜೀಕೃತವಾಗಿ ಸರ್ವತ್ರ ವ್ಯಾಪ್ತಿ ಕಂಗೊಳಿಸುವುದೋ, ಅದರಂತೆಯೇ, ಜನಿಸಿದ ಈ ಶಿಶುವಾ ಸಹ ಎಲ್ಲೆಡೆ ಹರಡಿದ ತನ್ನ ಸಾಂದ್ರವಾದ ಕಾಂತಿ ಸಂತತಿಗೆ ಅತ್ಯಂತ ತೇಜಸ್ಸಿನಿಂದ ಆ ಪ್ರಸೂತಿಕಾ ಗೃಹವನ್ನು ಬೆಳಗಿಸಿ ತನ್ನ ಸ್ವಾಭಾವಿಕ “ಹಿರಣ್ಯಗರ್ಭತ್ವವನ್ನು ಪ್ರಕಟಿಸಿತು ಶ್ರೀಹರಿಯ ಪರಮಾನುಗ್ರಹಕ್ಕೆ ಪಾತ್ರರಾದ, ವೇದಪ್ರತಿಪಾದ್ಯ ಮಹಿಮೋಪೇತರೂ, ಜೀವೋತ್ತಮರೂ, ತ್ಯಾ ಆದ ಶ್ರೀವಾಯುದೇವರ ವಿಶೇಷಾವೇಶಾವತಾರರಾದ ಶ್ರೀಪ್ರಹ್ಲಾದರಾಜರು ಶ್ರೀಹರಿಯ ಸಂಕಲ್ಪದಂತೆ ವೈದಿಕ ಸಾ ಸಿದ್ಧಾಂತ ಸ್ಥಾಪನೆ, ಜಗತ್ಕಲ್ಯಾಣ - ಶ್ರೀಕೃಷ್ಣಸೇವಾದಿಗಳಿಗಾಗಿ ಅವತರಿಸಿದ ಕೂಡಲೇ ದೇವದುಂದುಭಿಗಳು ಮೊಳಗಿದ್ದು ದೇವತೆಗಳು ಹರ್ಷನಿರ್ಭರರಾಗಿ ಪುಷ್ಪವೃಷ್ಟಿ ಮಾಡಿದರು. ಗಂಧರ್ವರು ಗಾನ ಮಾಡಿದರು. ಅಪ್ತರ ಸ್ತ್ರೀಯರು ನರ್ತಿಸಿದರು. ರಾಮಾಚಾರ್ಯರ ಗೃಹದಲ್ಲಿ ಮಂಗಳವಾದ್ಯಗಳು ಭೋರ್ಗರೆದವು ಮಧ್ವಮತಾಬಿಚಂದ್ರಮನ ಉದಯದಿಂದ ಸ ಕುಮುದಗಳು ಅರಳಿದವು. ಲೋಕಕಲ್ಯಾಣ ಮಂಗಳಗೀತೆಯು ತನ್ನ ಸುಮಧುರ ನಾದಲಹರಿಯಿಂದ ಜಗತ್ತಿನಲ್ಲಾ! ಸಹೃದಯ ಸುಜನರ ಮನಸ್ಸನ್ನು ಪರಮಾನಂದಗೊಳಿಸಿತು! ಜ್ಞಾನಿಗಳು ಈ ಅದ್ಭುತ ವ್ಯಾಪಾರವನ್ನು ಕಣ್ಣಾರೆ ಕಂಡ ಸಾಮಾನ್ಯ ಮಾನವರು ರಾಮಾಚಾರ್ಯರ ಮನೆಯಲ್ಲಿ ಘೋಷಿಸಿದ ಮಂಗಳ ವಾದ್ಯಗಳನ್ನು ಮಾತ್ರ ಕೇಳಿ ಮುದಿಸಿದರು.

ಸೂರ್ಯೋದಯದ ಕಾಂತಿಯಿಂದ ದಶದಿಕ್ಕುಗಳು ಪ್ರಸನ್ನವಾಗುವಂತೆ ಸಮಸ್ತ ಜನರ ಮನಸ್ತುಗಳು ಆ ತಿರುವಿ ಕಾಂತಿಯಿಂದ ಪ್ರಸನ್ನಗೊಂಡವು. ಮಂಗಳಸೂಚಕ ಶಂಖಧ್ವನಿಯನ್ನು ಅನುಸರಿಸಿ ಜನರ ಪ್ರೀತಿಯೂ ಹೊರಹೊಮ್ಮಿತು! ದೇವವೃಕ್ಷಗಳ ಪುಷ್ಪವೃಷ್ಟಿಯಂತೆ ವಾತೆಯಾದ ಲಕ್ಷ್ಮೀದೇವಿಯ ಆನುದಾನ್ನೋದಕಗಳು ಸಿಕ್ತವಾದವು. ಕಾರವಕುಲಶ್ರೇಷ್ಠವಾದ ಆ ಶಿಶುವು ಮರುಗದ ಎಳೆಯ ಚಿಗುರುಗಳಂತೆ ಸುಖಸ್ಪರ್ಶಿಯಾಗಿ ಸಕಲಜನವನ್ನು ಆನಂದಗೊಳಿಸಿತು. ಸರ್ವಾ೦ಡುಂದು ನಾದ ಆ ಅಪೂರ್ವ ಪುತ್ರನ ಮುಖಕಮಲವನ್ನು ಕಂಡು ರಾಮಾಚಾರ್ಯರು ಆನಂದಾಂಬುಧಿಯಲ್ಲಿ ನಡೆದಾಡಿದರು.

ಹತ್ತು ದಿನಗಳು ಸಂತೋಷದಿಂದ ಕಳೆದವು, ಹನ್ನೊಂದನೆಯ ದಿವಸ ಲಕ್ಷ್ಮೀದೇವಿಯು ಮಗುವಿನೊಂದಿಗೆ ಮಂಗಳಾಭ್ಯಂಜನವನ್ನು ಮುಗಿಸಿದ ಮೇಲೆ ಮಂಗಳಸ್ನಾನ ಮಾಡಿ ಶುಚಿರ್ಭೂತರಾದ ರಾಮಾಚಾರ್ಯರು ವೈದಿಕ ವಿಧಿಪೂರ್ವಕವಾಗಿ ಪತ್ನಿ ಪುತ್ರರೊಡನೆ ಹಸೆಮಣೆಯ ಮೇಲೆ ಕುಳಿತು ಮಂಗಳವಾದ್ಯ ಘೋಷವಾಗುತ್ತಿರಲು ಪಾತ್ವಿಕವಾಗತ ಕ್ರಮದಂತೆ ಪುಣ್ಯಾಹ, ನವಗ್ರಹ ಪೂಜಾದಿಗಳನ್ನು ಶ್ರದೆಯಿಂದಾಚರಿಸಿದರು. ವೃದ ಸುಮಂಗಲಿಯರು ರತ್ನದಾರತಿ, ಕದಲಾರತಿಗಳನ್ನು ಬೆಳಗಿದರು. ಭೂಸುರವೃಂದವು ವೇದಯಕ್ಕುಗಳನ್ನು ಪರಿಸುತ್ತಾ ಶುಭಾಶೀರ್ವಾದಗಳನ್ನು ಮಾಡಿದರು.

ಅಂದು ಮಧ್ಯಾಹ್ನ ದೇವತಾರ್ಚನೆ, ನಿವೇದನಾದಿಗಳನ್ನು ಸಂಪ್ರದಾಯದಂತೆ ನೆರವೇರಿಸಿ ಬ್ರಾಹ್ಮಣ-ಸುವಾಸಿನಿಯರಿಗೆ ಮೃಷ್ಟಾನ್ನ ಭೋಜನ ಮಾಡಿಸಿ, ಉದಾರವಾಗಿ ದಕ್ಷಿಣೆ, ಸಂಭಾವನೆಗಳನ್ನಿತ್ತು ಸಕಲರನ್ನೂ ಮುದಗೊಳಿಸಿ, ಬ್ರಾಹ್ಮಣರ ಅಪ್ಪಣೆ ಪಡೆದು ರಾಮಾಚಾರ್ಯ ದಂಪತಿಗಳು ಭೋಜನ ಮಾಡಿ ಪೂಜ್ಯರಾದ ಶ್ರೀಬ್ರಹ್ಮಣ್ಯ ಗುರುಗಳ ಆದೇಶದಂತ ಜೋಡೀ ಕುದುರೆಯ ಗಾಡಿಯಲ್ಲಿ ಸಂಸಾರ ಸಹಿತರಾಗಿ ಬನ್ನೂರಿನಿಂದ ಪ್ರಯಾಣ ಬೆಳೆಸಿ ಸುಖವಾಗಿ ಅಟ್ಟೂರಿಗೆ

ಬಂದು ಸೇರಿದರು.