Kaliyugada Kalpataru Sri Vyasa Raja Yati Sarvabhouma The Abode of Vedavyasa Deva

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨. ಶ್ರೀವೇದವ್ಯಾಸದೇವರ ಅಭಯ

ಜಗತ್ತಿಗೇ ಪರಮಪಾವನವೆನಿಸಿದ ತತ್ವಜ್ಞಾನಕ್ಕೆ ಮಾತೃಸ್ಥಾನವಾದ, ಸಂಸತಿಗಳ ಸುಮನೋಹರ ಉದ್ಯಾನವನಿಸಿದ, ಸನಾತನಧರ್ಮ, ವಿದ್ಯೆ, ಕಲೆ, ಸಭ್ಯತೆಗಳ ಮಂಗಳಧಾಮವಾದ, ಸಾತ್ವಿಕತೆಯ ಮೂರ್ತಸ್ವರೂಪವಾದ ಬದರಿಕಾಶ್ರಮದ ಸುಕೃತನೆಲೆಯಲ್ಲಿ ಹಿಮಾಲಯ ನಿವಾಸಿಗಳಾದ ಕೆಲ ತಾಪಸರು ಪಯಣ ಮಾಡುತ್ತಿದ್ದಾರೆ. ಪವಿತ್ರಾತ್ಮರಾದ ಅವರು ತಮ್ಮ ಕಾಂತಿಯಿಂದ ದಿಗಂತವನ್ನು ಬೆಳಗಿಸುತ್ತಾ, ತಮ್ಮ ತಪಃಪ್ರಭಾವದಿಂದ ಚತುರ್ದಶಲೋಕಗಳನ್ನು ಕರತಲಾಮಲಕ ಮಾಡಿಕೊಂಡ ಮಾಹಾತ್ಮ ಉಳ್ಳವರಂತೆ ಕಂಗೊಳಿಸುತ್ತಿದ್ದಾರೆ. ಬದರಿಯಾತ್ರೆಯನ್ನು ಕೈಗೊಂಡಿರುವ ಅವರು ಅಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಂಡು ಪರಮಾತ್ಮನ ಸೃಷ್ಟಿವೈಚಿತ್ರದ ವೈವಿಧ್ಯವನ್ನು ಕೊಂಡಾಡುತ್ತಾ ಬರುತ್ತಿರುವಾಗ ಅಲ್ಲಿ ಒಂದು ಸರೋವರವನ್ನು ಕಂಡರು.

ಸಕಲ ಲೋಕಗಳನ್ನೂ ಪಾವನಗೊಳಿಸಲು ಸಮರ್ಥವಾಗಿದ್ದು, ಅಮೃತಸರಸ್ಸಿನಂತಿರುವ ಆ ಸರೋವರದ ಹೆಸರು “ಅಮೃತಧಾರಾ” ಎಂದು. ಅದರ ಗಾಂಭೀರ್ಯ ಅವರ್ಣನೀಯ. ಆ ಸರೋವರವು ಭೂದೇವಿಯ ನಾಭಿಕಮಲದಂತೆಯೂ! ಆರ್ಯಾವರ್ತದ ತಿಲಕಮಣಿಯಂತೆಯೂ, ವನದೇವಿಯ ನೆಲಗನ್ನಡಿಯಂತೆಯೂ ಶೋಭಿಸುತ್ತಿತ್ತು. ಅದು ವನಶ್ರೇಣೀವಿರಾಜಿತವಾಗಿರುವುದರಿಂದ ವನಮಾಲಾಧಾರಿಯಾದ ವಾಸುದೇವನಂತೆಯೂ, ಕನ್ನೈದಿಲೆ ಪುಷ್ಪಗಳಿಂದ ರಂಜಿತವಾಗಿದ್ದುದರಿಂದ ಭೂಭಾರವನ್ನು ಧರಿಸಿದ ಆದಿಶೇಷನಂತೆಯೂ, ರಾರಾಜಿಸುತ್ತಿತ್ತು. ಆ ಸರಸ್ಸಿನಲ್ಲಿರುವ ಕಮಲಗಳಲ್ಲಿ ಕುಳಿತಿರುವ ಹಂಸಪಕ್ಷಿಗಳನ್ನು ಅವಲೋಕಿಸಿದರೆ ಪದ್ಮಾಸನಾಸೀನಾದ ಪರಮಹಂಸ ಸಮೂಹದಿಂದ ರಾಜಿಸುವ ಕಮಲಾಸನಾದ ಬ್ರಹ್ಮದೇವರ ಸಭೆಯಂತೆ ಕಾಣುತ್ತಿತ್ತು.

ಇಂಥ ಸರೋವರದ ಪ್ರದೇಶವೊಂದರಲ್ಲಿ ಸನ್ಯಾಸಿಗಳು ಅವಗಾಹನ (ಸ್ನಾನ) ಮಾಡುತ್ತಿರುವಾಗ ಮೊಗ್ಗಿನಂತೆ ನೀರ್ಗುಳ್ಳೆಗಳು ಮೇಲೇಳುತ್ತಿರುವುದು ಸಂಚಿತ ಪಾಪ ಪರಂಪರೆಯಂತೆ ತೋರುತ್ತಿತ್ತು. ಋಷಿ-ಮುನಿಗಳ ಮೃತ್ತಿಕಾಸ್ನಾನದಿಂದ ನೀರು ಕದಡಿ ಕೆಸರಾಗಿತ್ತು. ಅಲ್ಲಿನ ಪಕ್ಷಿಗಳ ಕಲಕಲ ನಿನಾದವು ಆ ಸರೋವರದ ಮೋಕ್ಷಪ್ರದಾನದಕ್ಷಬಿರುದಾವಳಿಯ ಘೋಷದಂತಿತ್ತು. ಇಂತು ಎಲ್ಲೆ ಮೀರಿದ ಅಪರಿಮಿತ ಮಹಿಮೋಪೇತವಾದ ಆ ಅಮೃತಧಾರಾ ಸರೋವರವನ್ನು ತಾಪಸರು ಆನಂದದಿಂದೀಕ್ಷಿಸುತ್ತಾ, ಅದು ಉತ್ತರಭಾಗದಲ್ಲಿರುವ, ಧರೆಗಿಳಿದು ಬಂದ ಬ್ರಹ್ಮದೇವನ ಆವಾಸಸ್ಥಾನದಂತಿರುವ ಒಂದು ಮಹಾಶ್ರಮವನ್ನು ನೋಡಿದರು.

ಆ ಆಶ್ರಮದಲ್ಲಿ ಸಹಜದ್ದೇಷಾದಿಗಳು ಪ್ರಾಣಿಗಳಿಗಿರಲಿಲ್ಲ, ಅಲ್ಲಿನ ಮೃಗ-ಪಶು-ಪಕ್ಷಿಗಳ ಸ್ನೇಹವು ಸರ್ವರನ್ನೂ ಬೆರಗುಗೊಳಿಸುತ್ತಿತ್ತು. ಆ ಆಶ್ರಮವು ನಿಸರ್ಗ ರಮಣೀಯವಾದ, ತನ್ನ ಸಹಜ ಸೌಂದರ್ಯದಿಂದ ಸಪ್ತಷಿ೪ಗಳ ಆವಾಸಸ್ಥಾನವಾದ ಮೇರುಪರ್ವತವನ್ನು ಧಿಕ್ಕರಿಸುತ್ತಿತ್ತು. ಅಲ್ಲಿ ಮೃದುವಾದ ದರ್ಭಾಸನದಲ್ಲಿ ಕುಳಿತು ಋಷಿಕುಮಾರರು ವೇದಪಾರಾಯಣ ಮಾಡುತ್ತಿದ್ದರು. ಅವರ ವೇದಾಧ್ಯಯನ ಕಲರವವು ದಿಂಡಲವನ್ನೇ ಗಡಚಿಕ್ಕಿದಂತಿತ್ತು. ಇಂತಹ ತಾಪಸರಿಂದ ಅಲ೦ಕೃತವಾದ ಆ ಆಶ್ರಮವು ಮನೋಹರವಾಗಿದ್ದಿತು. ಅಲ್ಲಿ ಅನೇಕ ಗೃಹಸ್ಥರು ಪರ್ಣಗಕುಟಿಗಳಲ್ಲಿ ವಾಸಿಸುತ್ತಾ ವೇದಾಧ್ಯಯನ, ಅನ್ನು ಪಾಸನೆ, ದೇವಪೂಾಜಾ, ವೈಶ್ವದೇವ, ಬಲಿಹರಣಾದಿ ದೇವತಾಕಾರ್ಯಗಳನ್ನು ಪೂರೈಸಿ, ಅಭ್ಯಾಗತರನ್ನು ಸತ್ಕರಿಸಿ ಆಶೀರ್ವಾದ ಪಡೆಯಲು ಅವರನ್ನು ನಿರೀಕ್ಷಿಸುತ್ತಾ ನಿಂತಿದ್ದರು. ಅಲ್ಲಿ ಅನೇಕ ಕಡೆ ಪುರಾಣ, ಹರಿಕಥಾ ಕಾಲಕ್ಷೇಪ ನಡೆದಿದ್ದು, ಬಹುಜನರು ಕೇಳುತ್ತಾ ಕುಳಿತಿದ್ದರು. ಆ ಆಶ್ರಮವು ದರ್ಶನಮಾತ್ರದಿಂದ ಪಾಪಪರಿಹಾರಕವಾಗಿದ್ದಿತು. ಹೆಚ್ಚು ಹೇಳುವುದೇನಿದೆ? ಅನನ್ಯ ಸಾಧಾರಣವಾದ ತನ್ನ ಅಪರಿಮಿತಾಶ್ಚರ್ಯ ಗುಣಗಳಿಂದ ಚತುರ್ಮುಖನನ್ನೂ ವಿಸ್ಮಯಗೊಳಿಸುತ್ತಾ ಆಶ್ರಮವೇ ಅದಾಗಿತ್ತು.

ಅಲ್ಲೊಂದು ದೊಡ್ಡ ಆಲದಮರವಿತ್ತು. ಸೊಂಪಾಗಿ ಬೆಳೆದು ವಿಸ್ತಾರವಾದ ಎಲೆಗಳಿಂದ ಕೂಡಿ ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿದ್ದ ಅದು ಪ್ರೇಕ್ಷಣೀಯವಾಗಿತ್ತು. ಆ ವೃಕ್ಷದ ಅಡಿಯಲ್ಲಿ ಮನೋಹರ ಚಂದ್ರಚೂಡನಂತೆ ಸೇವಿಸಲ್ಪಡುತ್ತಿರುವ ತೇಜೋಮೂರ್ತಿಯನ್ನು ಯಾತ್ರಾರ್ಥಿಗಳು ನೋಡಿದರು.

ವಿಸ್ತಾರವಾದ ಆ ವೃಕ್ಷದ ಬುಡದಲ್ಲಿ ಗೋಮಯಲಿಪ್ತವಾಗಿರುವುದರಿಂದ ಶ್ಯಾಮಲವರ್ಣೋಪೇತವಾದ ಗಿಳಿಮರಿಗಳಂತಿರುವ ಮೃದುವಾದ, ಪಚ್ಚೆರತ್ನ ನಿರ್ಮಿತವಾದಂತೆ ಕಂಗೊಳಿಸುವ ಮೂಲವೇದಿಕೆಯಲ್ಲಿ ನೂರಾರು ಚಿರತೆ, ಸಾರಂಗ, ಕೃಷ್ಣಮೃಗಗಳ ಚರ್ಮಗಳನ್ನು ಹಾಸಿದ್ದು, ಮೆತ್ತನೆಯ ದರ್ಭಾಸನದಲ್ಲಿ ಅತ್ಯಂತ ತೇಜಸ್ವಿಗಳಾದ ಮಹಾನುಭಾವ- ರೊಬ್ಬರು ಕುಳಿತಿದ್ದರು.

ಶುಭಮತಿಗಳಾದ ಅವರು ತಮ್ಮ ಕರದಲ್ಲಿ ತೆರೆದ ಪುಟಗಳುಳ್ಳ ತಾಲಾ ಓಲೆಯ ಗ್ರಂಥವನ್ನು ಹಿಡಿದಿದ್ದರು. ಮುಖಕಮಲದಲ್ಲಿ ವಿಹರಿಸುವ ದುಂಬಿಗಳಂತೆ ಅವರ ನೇತ್ರಗಳು ಹೊಳೆಯುತ್ತಿದ್ದವು. ಅವು ಉಪನಿಷನ್ಮಥಿತಾರ್ಥ ನಿಶ್ಚಯವನ್ನು ಸಮರ್ಥಿಸುತ್ತಿದ್ದು, ಸೂರ್ಯನಂತೆ ಅವರು ಬೆಳಗುತ್ತಿದ್ದರು. ಮುಖದಲ್ಲಿ ಮನೆಮಾಡಿದ ಜ್ಞಾನದೀಪಿಕೆಯ ಜ್ವಾಲೆಯಂತೆ, ಮಾಗಿದ ಕರವೀರಪತ್ರದಂತೆ ಹೊಂಬಣ್ಣದ ಅವರ ನಾಸಿಕವು ಪರಿಶೋಭಿಸುತ್ತಿತ್ತು. ಜಟೆಯೆಂಬ ಲತಾಗುಲಕ್ಕೆ ಮೂಲದುತಿರುವ ಕಮಲಸೌಂದರ್ಯಲಕ್ಷ್ಮಿಗೆ ಬಂಗಾರದ ತೂಗುಯ್ಯಾಲೆಯಂತೆ ಇರುವ, ಯೋಗಶಾಸ್ತ್ರವೆಂಬ ಸಂಪಿಗೆಗೆ ಎಳೆ ಮಗ್ಗಿನಂತಿರುವ ತೆಳುವಾದ ಗೋಪಿಚಂದನರಸಕಾಂತಿಯಿಂದ ಪ್ರಕಾಶಮಾನವಾದ ಊರ್ಧ್ವಪುಂಡ್ರದಿಂದ ಸಿಂಗರಿಸಲ್ಪಟ್ಟ ಅವರ ಫಾಲ ಪ್ರದೇಶವು ಶೋಭಾಯಮಾನವಾಗಿದ್ದಿತು.

ಸದಾ ಪ್ರವಹಿಸುವ ಕಾರುಣ್ಯ ಝರಿಯ ಹೊನಲಂತೆ ತಮ್ಮಿಂದ ಅಭಿನ್ನರಾದ ರಾಮ-ಕೃಷ್ಣಾದನೇಕಾವತಾರರೂಪ ಮೂಲಕಾರಣವುಳ್ಳ, ಹರಿಸ್ಮರಣ ನಿರ್ಣಾಯಕ ಸಾಂದ್ರನೋಟ ಮತ್ತು ಒತ್ತಿಹೇಳುವಿಕೆಯಿಂದ ಅರುಣೀಕೃತಗಳಾದ, ವಿಷಯಸನ್ಯಾಸದಿಂದ ಸ್ವೀಕೃತ ಕಾಷಾಯವಸನಗಳಂತಿರುವ ಕಣ್ಣುಗಳಿಂದ ಅವರು ಅತ್ತಿತ್ತ ನೋಡುತ್ತಿದ್ದರು. ಕಿಕ್ಕಿರಿದು ನೆರೆದ ಸುಜನರಿಗವರು ಶಾಸ್ರೋಪದೇಶ ಮಾಡುತ್ತಿದ್ದರು. ಅವರು ಧರಿಸಿದ್ದಯಜ್ಯೋಪವೀತವು ಹೃದಯಭಾಗದಲ್ಲಿ ಶೋಧಿಸುತ್ತಿತ್ತು. ತೇಜಃಪುಂಜ ಯದ್ಯೋಪವೀತ ಸಂತತಿಗಳಿಂದ ವಿಭಾಗಿಸಲ್ಪಟ್ಟ ಆ ಮಹನೀಯರ ವಕ್ಷಸ್ಥಳದ ಸೊಬಗು ವರ್ಣಿಸಲಸದಳ, ಆಚ್ಛಾದಿತ ಕೃಷ್ಣಾಜಿನ ಕಾಂತಿಯಿಂದ ಅವರ ಕಟಿ ಪ್ರದೇಶವು ರಮಣೀಯವಾಗಿದ್ದಿತು. ಅವರ ಪಾರ್ಶ್ವದಲ್ಲಿ ಜಲಪೂರ್ಣ ಕಮಂಡಲು ಕಂಗೊಳಿಸುತ್ತಿತ್ತು. ಮಹಾತಪಸ್ತಿಗಳಾದ ಅವರು ಸದಾ ಶುಕಗಳಿಂದ ಸೇವಿತವಾದ ದಾಳಿಂಬೆ ತೋಟದಂತೆ ಶುಕಮುನಿಗಳಿಂದ ಸೇವಿತರಾಗಿದ್ದರು.

ಅವರು ಪ್ರಕೃಷ್ಟಕಾಂತಿಯಿಂದ ಮನೋಹರರಾಗಿದ್ದರು. ಅರಳಿದ ಕಮಲಸದೃಶ ಕಣ್ಣುಗಳು, ಮೇಲೆದ್ದು ಕಾಣುವ ನಾಸಾಪುಟಗಳು ಮತ್ತು ಪ್ರಕಟಗೊಳ್ಳುವ ಮುಖಪ್ರಸಾದದಿಂದ ಮಧುರರಾದ, ಷಡ್ಗುಣೈಶ್ವರ್ಯ ಸಂಪನ್ನರಾದ ಶ್ರೀವೇದವ್ಯಾಸದೇವರನ್ನು ಕಂಡು ನಮ್ರರಾದ ಯಾತ್ರಾರ್ಥಿ ಋಷಿಮುನಿಗಳೆಲ್ಲರೂ ಏಕಕಾಲದಲ್ಲಿ ಭಕ್ತಿ-ಶ್ರದ್ಧಾದಿಗಳಿಂದ

ನಮಸ್ಕರಿಸಿದರು.

ಆ ತಾಪಸರಿಗೆ ಶ್ರೀಬಾದರಾಯಣರ ಶಿಷ್ಯಜನರು ಆಸನಾದಿಗಳನ್ನಿತ್ತು ಸತ್ಕರಿಸಿದರು. ಅದರಿಂದ ಸಂತುಷ್ಟರಾದ ಆ ತಾಪಸರು ಮೇಲೆದ್ದು ನಿಂತರು. ಅವರನ್ನು ಕರುಣಾಮೃತ ಸಂತತಿಯಂತಿರುವ ತಮ್ಮ ಅಪಾಂಗವೀಕ್ಷಣಗಳಿಂದ ಪವಿತ್ರಗೊಳಿಸುತ್ತಾ, ಶ್ರೀವೇದವ್ಯಾಸಮುನಿಗಳು ಮಧುರಸ್ಕಂದಿವಚನಗಳಿಂದ ಮಾತನಾಡಿದರು.

ಶ್ರೀವೇದವ್ಯಾಸರು : ಎಲೈ ತಪೋನಿಧಿಗಳೇ, ಬಹುಕಾಲದ ಮೇಲೆ ಬಂದಿರುವಿರಿ. ನಿಮಗೆ ಸ್ವಾಗತ, ಕುರಲದಿಂದಿರುವಿರಾ? ನಿಮ್ಮ ನಿಯಮ ಕರ್ಮಗಳು ನಿರ್ವಿಘ್ನವಾಗಿ ನೆರವೇರುತ್ತಿರುವುದಷ್ಟೆ? ನಿಮ್ಮ ಆಶ್ರಮಗಳಲ್ಲಿ ತಪಸಮೂಹಗಳಿಂದುಂಟಾಗಬಹುದಾದ ದಾವಾಗ್ನಿಯು (ಕಾಡುಗಿಚ್ಚು) ನಿಮ್ಮ ತಪೋಭೂಮಿಯನ್ನು ಪೀಡಿಸುತ್ತಿಲ್ಲವಷ್ಟೇ? ಅತಿಥಿ ಅಭ್ಯಾಗತರ ಸೇವೆ ಸರಿಯಾಗಿ ಜರುಗಿ, ಅವರು ಸಂತುಷ್ಟರಾಗುತ್ತಿರುವರೇ? ನಿಮ್ಮಲ್ಲಿ ವಿಷ್ಣುಭಕ್ತಿಯು ದೃಢವಾಗಿ ವರ್ಧಿಸುತ್ತಿರುವುದೇ?

ಋಷಿಮುನಿಗಳು : ಹೇ ಗುಣಪೂರ್ಣನಾದ ಪರಮಾತ್ಮಾ, ನಿಮ್ಮ ದಯಾತರಂಗಿಣಿ ಪೋಷಿತ ಕೇದಾರಗಳಂತಿರುವ ನಮಗೆಲ್ಲಿಯ ಅಮಂಗಳವು? ಆದರೆ, ಸ್ವಾಮಿ, ಭಾಗವತಾಗ್ರಣಿಗಳಾದ ಪೂಜ್ಯ ನಾರದರು “ಪ್ರಪಂಚವು ಪಾಪಿಷ್ಠರಿಂದ ಭೂಯಿಷ್ಟವಾಗಿದೆ” ಎಂದು ಇತ್ತೀಚೆಗೆ ಅವರ ದರ್ಶನವಾದಾಗ ಹೇಳಿದರು. ಇದರಿಂದ ಮನಸ್ಸಿಗೆ ವ್ಯಾಕುಲವಾಗಿದೆ. ದೇವದೇವ! ಸರ್ವಜ್ಞರಾದ ತಮಗೆ ತಿಳಿದಿರುವುದನ್ನೇ ನಾವು ವಿಜ್ಞಾಪಿಸುತ್ತಿದ್ದೇವೆ. ಮಹಾಪ್ರಭು, ಹಿಂದೊಮ್ಮೆ ಕೆಲ ತಪಸ್ವಿಗಳು ತಮ್ಮನ್ನು ಯುಗಧರ್ಮಗಳ ವಿಚಾರವಾಗಿ ಪ್ರಶ್ನಿಸಿದಾಗ “ಕಲಿಯುಗದ ಪ್ರಥಮ ಪಾದದಲ್ಲಿಯೇ ಪಾಷಂಡಿಗಳು ಪ್ರಪಂಚದ ಧರ್ಮಸಾಗರವನ್ನು ಬಿರುಗಾಳಿಯಂತೆ ವಿಶ್ವಾಸಯೋಗ್ಯ ವೇಷ ಧರಿಸಿ ಕಲಕುತ್ತಾರೆ” ಎಂದು ಭವಿಷ್ಯ ನುಡಿದಿದ್ದಿರಿ. ಮಹಾಮಹಿಮರೇ, ಆದರೂ ಈಗಲೇ ಎಳೆವಾಗರದ ವಿಷದಂತೆ, ಅನೇಕ ಸಾಯಂಕಾಲೀನ ತಮಸ್ಸಿನಂತೆ, ಪ್ರಳಯಾಗ್ನಿಯ ಧೂಮದಂತೆ, ಅಧಾರ್ಮಿಕ ಅತಾತ್ವಿಕವಾದವು ಪ್ರಬಲಿಸಿ ವಿಜೃಂಭಿಸಲು ಕಾರಣವೇನು? ಇದು ಯಾವಾಗ ಶಾಂತವಾಗುವುದು? ಅಪ್ಪಣೆ ಕೊಡಿಸಬೇಕೆಂದು ಪ್ರಾರ್ಥಿಸುವವು.

ಭಗವಾನ್ ಶ್ರೀವೇದವ್ಯಾಸರು ಚೆಂದುಟಿಯಲ್ಲಿ ಕಿರುನಗೆಯನ್ನು ಹೊರಸೂಸುತ್ತಾ ಹೀಗೆ ಅಪ್ಪಣೆ ಕೊಡಿಸಿದರು : “ಮುನಿಪುಂಗವರೇ, ಪರಮಮಂಗಳಕರವಾದ ನಮ್ಮ ಚರಿತ್ರೆಯನ್ನು ಪಾಷಂಡಿಗಳು ಕಾಂತಿಗೆಡಿಸುವರೆಂದು ಭಯಾರ್ತರಾದ ನೀವು ಸಮಯೋಚಿತ ಪ್ರಶ್ನೆಯನ್ನೇ ಕೇಳಿರುವಿರಿ, ಯೋಚಿಸದಿರಿ. ಹಿಂದೊಮ್ಮೆ, ಪ್ರಾಣಾಪಹಾರಕ ದೈತ್ಯಾಧಿಪತಿಯಾದ ಮಣಿಮಂತನು ವಾಯುಪುತ್ರರಾದ ಭೀಮಸೇನದೇವರೊಡನೆ ಸೆಣಸಿ, ಯುದ್ಧದಲ್ಲಿ ಪರಾಜಿತನಾದನು. ಅದರಿಂದ ನೊಂದ ಮಣಿಮಂತನು ಜಗದ್ಗುರುಗಳಾದ ಶ್ರೀರುದ್ರದೇವರನ್ನು ಕುರಿತು ಉಗ್ರತಪಸ್ಸು ಮಾಡಿ, ಪ್ರತಕ್ಷರಾದ ಉಮಾಪತಿಗಳನ್ನು ಪೂಜಿಸಿ ಸಂತೋಷಪಡಿಸಿದನು. ಸುಪ್ರೀತರಾದ ಚುದ್ರಶೇಖರ ದೈತಮ! ನಿನ್ನ ತಪಸ್ಸಿನಿಂದ ಹರ್ಷಿತವಾಗಿದ್ದೇವೆ. ನಿನು ವಬೇಕೋ ಪ್ರಾರ್ಥಿಸು, ಅನುಗ್ರಹಿಸುವೆವು' ಎಂದರು. ಆಗ ಆ ದೈತ್ಯನು ಅಮಿತಬಲನೂ, ಜಗತ್ಪಾಣನೂ, ವಾಯುದೇವನ ಅವತಾರನೂ ಆದ ಭೀಮಸೇನರನ್ನು ಜಯಿಸಲಿಚ್ಚಿಸಿ “ಭೀಮಸೇನದೇವರನ್ನು ಜಯಿಸುವಂತೆ ನನಗೆ ವರವನ್ನು ಅನುಗ್ರಹಿಸಿರಿ” ಎಂದು ಬೇಡಿದನು.

ಹೀಗೆ ಕೊಡಲಶಕ್ಯವಾದ ವರವನ್ನು ಬೇಡುತ್ತಿರುವ, ಅತ್ಯಂತ ಮಾನಿಯಾದ ಆ ದೈತನ ಪ್ರಾರ್ಥನೆಯನ್ನಾಲಿಸಿ ಮಂದಹಾಸದಿಂದ ಚಂಡಿಕಾಪತಿಯಾದ ರುದ್ರದೇವನು “ದೈಶ್ರೇಷ್ಠ! ಅಸಾಧ್ಯವರವನ್ನು ಯಾಚಿಸುತ್ತಿರುವ.

ಷಡ್ಗುಣೈಶ್ವರ್ಯ ಸಂಪನ್ನರೂ, ಸಪ್ತಲೋಕಗಳಿಗೂ ಅಧಿಪತಿಗಳಾದ, ಶ್ರೀಮುರಾರಿಯ ಭಕ್ತಾಗ್ರಗಣ್ಯರಾದ ಮುಖ್ಯಪ್ರಾಣದೇವರನ್ನು ಜಯಿಸಲು ಸಾಧ್ಯವೇ? ಆದರೆ ನೀನು ಶ್ರದ್ಧಾಭಕ್ತಿಗಳಿಂದ ತಪವೆಸಗಿ ನನ್ನನ್ನು ಮೆಚ್ಚಿಸಿರುವೆ. ವರಕೊಡುವುದಾಗಿ ನಾನು ವಚನವಿತ್ತಿದ್ದೇನೆ. ಆದರೆ ಬಲದಿಂದ ಆ ಮಹಾಮಹಿಮರನ್ನು ಜಯಿಸಲು ಯಾರಿಂದಲೂ ಸಾಧ್ಯವಿಲ್ಲ! ಉಪಾಯಾಂತರದಿಂದ ಅವರ ಪ್ರತಿಭೆಯನ್ನು ಕೆಲಕಾಲ ಮಾತ್ರ ಮರೆಮಾಡಲು ಯತ್ನಿಸಲು ಅನುಕೂಲವಾಗುವಂತೆ ವರವನ್ನು ಕೊಡುತ್ತೇನೆ. ನನ್ನ ವರದಿಂದ ನೀನು ಹೊಸದೊಂದು ಮಾಯಾಮತವನ್ನು ಆರಂಭಿಸಿ, ಕೆಲವು ಕಾಲ ಮಾತ್ರ ಆ ವಾಯುದೇವರ ತತ್ವಗಳನ್ನು ಮರೆಮಾಡುವ ಕಾರ್ಯದಿಂದ ತತ್ವಜ್ಞಾನವನ್ನು ಶಿಥಿಲಗೊಳಿಸು! ಇಷ್ಟು ಮಾತ್ರ ಮಾಡಲು ಅನುಕೂಲಿಸುವಂತೆ ವರಕೊಡಲು ನಾನು ಸಮರ್ಥ. ಇದರಿಂದಲೇ ತುಷ್ಟನಾಗು” ಎಂದಾಜ್ಞಾಪಿಸಿ ವರವಿತ್ತರು.

ಅನಂತರ ಅನೇಕ ಮಾಯಾವಿದ್ಯೆಗಳಿಂದ ಪರಿಪೂರ್ಣನಾದ ಮಣಿಮಂತನು ತ್ರಿಪುರಾಂತಕನಿಂದ ಪಡೆದ ವರಬಲದಿಂದ ತನ್ನ ಕಾರ್ಯವನ್ನು ಸಾಧಿಸಲು ವಿಪ್ರಕುಲದಲ್ಲಿ ಜನ್ಮತಾಳಿದನು. ಆ ಮಣಿಮಂತನೇ ಮಾಯಾವಾದ ರೂಪವಾದ, ವೈದಿಕತ ವಿರುದ್ಧವಾದ ನೂತನ ಮತವನ್ನು ಪ್ರಾರಂಭಿಸಿದನು. ಅವನಿಂದಲೇ ವೇದಮಾರ್ಗವು ಖಂಡಿಸಲ್ಪಟ್ಟಿತು. ಅದರಿಂದ ಮುಕ್ತಿಯೋಗ ಜನರು ಬಳಲತೊಡಗಿದರು.

ಪರಿಸ್ಥಿತಿ ಹೀಗಾದ್ದರಿಂದ, ಆ ಮಣಿಮಂತನ ಮಾಯಾವೈಖರಿಯನ್ನು ದಮನ ಮಾಡಲೋಸುಗ ವಾಯುದೇವ ಅವತರಿಸಬೇಕಾಯಿತು!

ಪೂರ್ವದಲ್ಲಿ ಅತ್ಯಂತ ಗರ್ವಿಷ್ಠನಾದ ರಾಕ್ಷಸಸಾರ್ವಭೌಮನಾದ ದಶಕಂಠನ ಕುಲನಾಶಕ ಸಮರ್ಥನೂ, ಶ್ರೀರಾಮಚಂದ್ರನ ಸೇವಕನೂ ಆಗಿ ಆಂಜನೇಯನೆಂಬ ಹೆಸರಿನಿಂದ ಅವತಾರವನ್ನೂ, ಅದಾದ ಮೇಲೆ ನೂರು ಜನ ಧೃತರಾಷ್ಟ್ರ ಪುತ್ರರನ್ನು ಸಂಹರಿಸುವ ದ್ವಾರಾ ಸುವರ್ಣಪಟ್ಟಿ ವಿಶೋಭಿತ ಮಹಾಭಯಂಕರ ಗದೆಯ ಮುಖವೆಂಬ ಪಾಯಸದಿಂದ ಪಾರಣೆ ಮಾಡಿಸಿ ಶ್ರೀಕೃಷ್ಣಪರಮಾತ್ಮನನ್ನು ಸಂತೋಷಗೊಳಿಸಿದ ಕುಂತೀಪುತ್ರ ಭೀಮಸೇನನ ರೂಪವನ್ನು ತಾಳಿದ್ದ ; ಕಡೆಯಲ್ಲಿ ವೇದೋಕ್ತ ಆಚರಣವಿಧಾನದಲ್ಲಿ ಬಾದರವುಳ್ಳ ಶ್ರೀಮಧ್ವಮುನಿ ನಾಮಶೋಭಿತನಾದ, ಸಕಲ ಪ್ರಪಂಚಕ್ಕೂ ಶಕ್ತಿರೂಪನಾದ, ಶ್ರೀಮುಖ್ಯಪ್ರಾಣದೇವನು ನಮ್ಮ ಅಪ್ಪಣೆಯಂತೆ ಯಾವಾಗಲೂ ಇತರರಿಂದ ದೂಷಿಸಲು ಸಾಧ್ಯವಾಗದ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದನು.

ಮುನಿಗಳೇ, ಈವರೆವಿಗೂ ವಿಷತ್ಪಯೋಜಕವಾದ, ಮಾನ್ಯವಾದ ತ್ರಿಪುರಾರಿಯ ವರದಿಂದ ಮಾಯಾಮತವೆಂಬ ಭಯಂಕರ ರಾಹುವಿನಿಂದ ಕಣ್ಮರೆಯಲು ಅಸಾಧ್ಯವಾಗುವಂಥ ಆ ಬ್ರಹ್ಮಸೂತ್ರಭಾಷ್ಯವೆಂಬ ಪ್ರಚಂಡ ಸೂರ್ಯಮಂಡಲವ ಆಚ್ಛಾದಿತವಾಗಿತ್ತು.

ಅತಿಶೀಘ್ರವಾಗಿ ಮುಂದೆ ಕಾವೇರೀನದೀತೀರದಲ್ಲಿರುವ ಬನ್ನೂರು ಎಂಬ ಗ್ರಾಮದಲ್ಲಿ ವಾಸಿಸುತ್ತಿರುವ, ನನ್ನ ಉಪಾಸನೆಯಲ್ಲಿ ನಿರತರಾಗಿರುವ, ಭಾಗವತಶ್ರೇಷ್ಠರಾದ ಅಪರ ಅರುಂಧತಿ-ವಸಿಷರಂತಿರುವ, ಪುತ್ರಾಪೇಕ್ಷಿಗಳಾಗಿರುವ ಲಕ್ಷ್ಮೀದೇವಿ-ರಾಮಾಚಾರ್ಯ (ಬಲ್ಬಣಸುಮತಿ) ಎಂಬ ಹೆಸರಿನ ದಂಪತಿಗಳಿಗೆ ನಮ್ಮ ಉಪಾಸನೆಯ ಮಹಿಮೆಯಿಂದ ಅತಿಪವಿತ್ರ ಚರಿತ್ರೆಯಿಂದ ಸರ್ವರಿಗೂ ಮೀರಿದ ಜ್ಞಾನವಿಶೇಷದಿಂದ ಪರಿಶೋಭಿತನಾದ ಓರ್ವ ಕುಮಾರನು ಉದಯಿಸುವನು!

ಆ ಕುಮಾರನಲ್ಲಿಯೇ ನಮ್ಮ ಆಜ್ಞೆಯನ್ನು ಚೂಡಾಮಣಿಯಂತೆ ಶಿರಸಾಧರಿಸಿರುವ ಆ ಶ್ರೀಮುಖ್ಯಪ್ರಾಣದೇವ ಮತ್ತೆ ಆವೇಶರೂಪ ಅವತಾರದಿಂದ ಪರಿಶೋಭಿಸುತ್ತಾರೆ!

ಇಂತಹ ಮುಖ್ಯಪ್ರಾಣದೇವರ ಆವೇಶಭರಿತನಾದ ಕುಮಾರನು ಮನುಷ್ಯನಂತೆ ನಟಿಸುತ್ತಾ, ಶ್ರೀಬ್ರಹ್ಮಣ್ಯತೀರ್ಥರ ಮನೋರಥವನ್ನು ಪಾರೈಸುತ್ತಾ, ಅನೇಕಾನೇಕ ವಿಸ್ಮಯಕಾರಕ ಚರಿತ್ರೆಗಳಿಂದ ಸಕಲ ಪ್ರಪಂಚವನ್ನೂ ಆಶ್ಚರ್ಯಗೊಳಿಸುತ್ತಾ ಹಾವಾಡಿಗನಂತೆ ಮಂತ್ರದಿಂದ ಸರ್ಪವೇಗವನ್ನೂ, ಸೂರ್ಯನಂತೆ ಕಿರಣದಿಂದ ಕತ್ತಲೆಯ ಪ್ರಾಚುರ್ಯವನ್ನೂ, ಕಾಲಮೇಘದಂತೆ ವೃಷ್ಟಿಯಿಂದ ಬಿಸಿಲಿನ ತಾಪವನ್ನೂ, ವೈದ್ಯನಂತೆ ಔಷಧಿಯಿಂದ ರೋಗವನ್ನೂ, ಪೂರ್ವಜ್ಞಾನವಾದ ತನ್ನ ಭಾಷ್ಯದಿಂದ ಮಾಯಾಮತ ಪ್ರಚೋದಿತ ದುರ್ಮತವನ್ನೂ ಸಮೂಲ ನಾಶಮಾಡಿ, ಸರ್ವಧರ್ಮವನ್ನೂ ಪ್ರತಿಷ್ಠಾಪಿಸುವನು! ಆದುದರಿಂದ ನೀವು ಭಯಪಡಬೇಕಾಗಿಲ್ಲ, ಶೀಘ್ರವಾಗಿ ಸನ್ಮತ ಪ್ರಚಾರವಾಗಿ, ಸಜ್ಜನರ ಉದ್ಧಾರವಾ ಧಾರ್ಮಿಕನಿಗೆ ಮಂಗಳಗಳೂ ಉಂಟಾಗುವುವು” ಎಂದು ಶ್ರೀವೇದವ್ಯಾಸದೇವರು ಆ ತಾಪಸರನ್ನು ನಿಮಿತ್ತಮಾಡಿಕೊಂಡು ಸಮಸ್ತ ವೈದಿಕತತ್ವಾಭಿಮಾನಿಗಳಿಗೆ ಅಭಯ ಪ್ರದಾನ ಮಾಡಿದರು.

ಇಂತು ಅಭಯವಚನಗಳಿಂದ ಅನುಗ್ರಹಿಸಿದ ಭಗವಾನ್ ಶ್ರೀವೇದವ್ಯಾಸದೇವರಿಗೆ ನಮಸ್ಕಾರ ಮಾಡಿ ಆ ತಾಪಸರು ಸಂತೋಷದಿಂದ ಶ್ರೀವೇದವ್ಯಾಸರ ಅಪ್ಪಣೆ - ಆಶೀರ್ವಾದಗಳನ್ನು ಪಡೆದು ಸಫಲ ಮನೋರಥರಾಗಿ ತಮ್ಮ ತಮ್ಮ ಆಶ್ರಮಗಳಿಗೆ ಪ್ರಯಾಣ ಬೆಳೆಸಿದರು.