ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೭. ಶ್ರೀಲಕ್ಷ್ಮೀನಾರಾಯಣಮುನಿಗಳು
ಹಿಂದಿನ ಪ್ರಕರಣವು ಜರುಗಿ ನಾಲ್ಕಾರು ದಿನಗಳಾಗಿವೆ. ಒಂದು ದಿನ ರಾತ್ರಿ ದೀಪಾರಾಧನೆಗಳು ಮುಗಿದು ಗುರು-ಶಿಷ್ಯರು ವಿಶ್ರಾಂತಿಯಲ್ಲಿದ್ದಾಗ ಬ್ರಹ್ಮಣ್ಯತೀರ್ಥರು ಇಂತೆಂದರು -
“ಶ್ರೀಹರಿ-ವಾಯುಗಳ ಪ್ರೇರಣೆಯಂತೆ ನಾವು ನಿಮಗೆ ಕಲಿಸಬಹುದಾದುದನ್ನೆಲ್ಲಾ ಕಲಿಸಿದ್ದೇವೆ. ನೀವೀಗ ಷಡರ್ಶನಗಳನ್ನು, ಮುಖ್ಯವಾಗಿ ದೈತಶಾಸ್ತ್ರದ ಪ್ರೌಢಗ್ರಂಥಗಳ ಅಧ್ಯಯನ ಮಾಡಲು ಅಧಿಕಾರಿಗಳಾಗಿದ್ದೀರಿ, ಅದೊಂದುಕಾರ್ಯ ಸಫಲವಾದರೆ ನಮ್ಮ ಶ್ರಮ ಸಾರ್ಥಕವಾಗಿ ನಮಗೆ ತೃಪ್ತಿ-ಸಂತೋಷಗಳುಂಟಾಗುವುವು.” ಮಾತೃಶ್ರೀಯವರು!'' ಎಂದು ಹೇಳಲು ಶ್ರೀವ್ಯಾಸತೀರ್ಥರು ಸಂತೋಷದಿಂದ "ಪಾಜ್ಯರೇ, ಈ ವಿಚಾರ ನನಗೆ ತಿಳಿದಿರಲಿಲ್ಲ ದಯವಿಟ್ಟು ಪೂಜ್ಯ ಶ್ರೀಲಕ್ಷ್ಮಿ ನಾರಾಯಣ ಯೋಗಿಗಳ ವಿಚಾರ ಸ್ವಲ್ಪ ವಿವರವಾಗಿ ತಿಳಿಸಬೇಕಾಗಿ ಕೋರುತ್ತೇನೆ ಎಂದರು.
ಬ್ರಹ್ಮಣ್ಯತೀರ್ಥರು ಲಕ್ಷ್ಮೀನಾರಾಯಣಮುನಿಗಳ ವಿಚಾರವನ್ನು ಹೀಗೆ ಹೇಳಹತ್ತಿದರು -
“ನಾವು ನಾಲ್ವರು ಅಣ್ಣ-ತಮ್ಮಂದಿರು. ಹಿರಿಯರಾದ ಶ್ರೀಪುರುಷೋತ್ತಮತೀರ್ಥರು ಮತ್ತು ನಾವು ಆ ಮಹಾಸಂಸ್ಥಾನಾಧಿಪತಿಗಳಾದೆವು. ನಮ್ಮ ಎರಡನೆಯ ಅಣ್ಣಂದಿರಾದ ಶ್ರೀಸ್ವರ್ಣವರ್ಣತೀರ್ಥರು ಶ್ರೀಮದಾಚಾರ್ಯರ ಪಟ್ಟದ ಶಿಷ್ಯರಾದ ಶ್ರೀಪದ್ಮನಾಭತೀರ್ಥರು ಸ್ಥಾಪಿಸಿದ ವಿದ್ಯಾಪೀಠದ ಅಧಿಪತಿಗಳಾದರು. ನಮ್ಮೆಲ್ಲರ ಕಿರಿಯ ಸಹೋದರರಾದ ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ಅವರೇ ಪರಮಹಂಸಾಶ್ರಮವಿತ್ತು, ನಾವು ನಿಮಗೆ ಪಾಠಪ್ರವಚನ ಮಾಡಿಸಿದಂತೆ ಲಕ್ಷ್ಮೀನಾರಾಯಣಮುನಿಗಳಿಗೆ ಪಾಠ ಹೇಳಿ, ತಮ್ಮ ಪೀಠದ ಉತ್ತರಾಧಿಕಾರಿಗಳನ್ನಾಗಿ ಮಾಡಿದರು. ಶ್ರೀಸ್ವರ್ಣವರ್ಣತೀರ್ಥರಿಗೆ ಈಗ ನಮಗಿರುವಂತೆಯೇ ತಮ್ಮ ವರಕುಮಾರರಾದ ಲಕ್ಷ್ಮೀನಾರಾಯಣಮುನಿಗಳು ಜಗದ್ವಿಖ್ಯಾತಪಂಡಿತರಾಗಿ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಚೆನ್ನಾಗಿ ಬೆಳೆಸಿಕೊಂಡು ಬರುವಂತಾಗಬೇಕೆಂದು ಬಹಳ ಆಶೆಯಿದ್ದಿತು. ದೈವಾನುಗ್ರಹದಿಂದ ಅವರ ಮನೋರುನೆರವೇರುವ ಯೋಗ ತಾನಾಗಿ ಒದಗಿಬಂದಿತು.”
ಶ್ರೀಮದಾಚಾರ್ಯರ ಎರಡು ಮಹಾಸಂಸ್ಥಾನಗಳಲ್ಲಿ ಒಂದಾದ ದಕ್ಷಿಣಾದಿ ಮಠದ ಶ್ರೀಕವೀಂದ್ರತೀರ್ಥರ ವಿದ್ಯಾ ಸಿಂಹಾಸನಾಧಿಪತಿಗಳೂ, ನಮ್ಮ ಪೂರ್ವಾಶ್ರಮ ವಂಶಬಂಧುಗಳೂ ಆದ ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಚಾರಕ್ರಮದಿಂದ ಶ್ರೀಸ್ವರ್ಣವರ್ಣತೀರ್ಥರಿದ್ದ ಶ್ರೀರಂಗಕ್ಷೇತ್ರಕ್ಕೆ ದಯಮಾಡಿಸಿದರು. ಈ ವಿಚಾರ ತಿಳಿದು ಸ್ವರ್ಣವರ್ಣತೀರ್ಥರಿಗೆ ಪರಮಾನಂದವಾಯಿತು. ಅವರು ಶ್ರೀಮದಾಚಾರ್ಯರ ಮಹಾಸಂಸ್ಥಾನಾಧೀಶರೂ, ತಮ್ಮ ಬಂಧುಗಳೂ ಆದ ಶ್ರೀವಿಬುಧೇಂದ್ರತೀರ್ಥರನ್ನು ಗೌರವಾದರಗಳಿಂದ ಸ್ವಾಗತಿಸಿ ತಮ್ಮ ಮಠದಲ್ಲಿ ಬಿಡಾರ ಮಾಡಿಸಿ ವೈಭವದಿಂದ ಸತ್ಕರಿಸಿದರು ಮತ್ತು ತಮ್ಮ ಮನದಾಶೆಯನ್ನು ಅವರಲ್ಲಿ ನಿವೇದಿಸಿ, ಲಕ್ಷ್ಮೀನಾರಾಯಣಮುನಿಗಳಿಗೆ ಸಕಲಶಾಸ್ತ್ರಪಾಠ ಹೇಳಿ ಅವರು ಶ್ರೇಷ್ಠಪಂಡಿತರಾಗುವಂತೆ ಮಾಡಬೇಕೆಂದು ಕೋರಿ, ಅವರ ಮನವೊಲಿಸಿ, ಒಪ್ಪಿಸಿದರು. ಆ ಶ್ರೀವಿಬುಧೇಂದ್ರತೀರ್ಥರಲ್ಲಿಯೇ ಸಮಸ್ತ ಶಾಸ್ತ್ರಗಳನ್ನೂ, ರೈತಸಿದ್ಧಾಂತವನ್ನೂ ಅಧ್ಯಯನ ಮಾಡಿ, ಅವರ ಅನುಗ್ರಹದಿಂದಲೇ ಶ್ರೀಲಕ್ಷ್ಮೀನಾರಾಯಣಮುನಿಗಳು ಲೋಕವಿಖ್ಯಾತ ಪಂಡಿತರಾದರು.
ಶ್ರೀವ್ಯಾಸ : ಗುರುವರ್ಯ, ಪೂಜ್ಯ ಲಕ್ಷ್ಮೀನಾರಾಯಣಮುನಿಗಳು ಶ್ರೀವಿಬುಧೇಂದ್ರತೀರ್ಥರಲ್ಲಿ ವ್ಯಾಸಂಗಮಾಡಿ ಜಗದ್ವಿಖ್ಯಾತಪಂಡಿತರಾದರೆಂದು ಹೇಳೋಣವಾಯಿತು. ಅಂತಹ ಮಹನೀಯರು ಅಸಾಮಾನರೇ ಆಗಿರಬೇಕು. ಅವರ ವಿಚಾರ ತಿಳಿಯಲು ನನಗೆ ಕುತೂಹಲವಾಗಿದೆ. ದಯವಿಟ್ಟು ತಿಳಿಸಬೇಕು.
ಬ್ರಹ್ಮಣ್ಯ : ಶ್ರೀವಿಬುಧೇಂದ್ರತೀರ್ಥರ ವಿಚಾರವನ್ನು ನಿರೂಪಿಸುತ್ತೇವೆ, ಸಾವಧಾನವಾಗಿ ಕೇಳಿರಿ. ಶ್ರೀಕವೀಂದ್ರತೀರ್ಥರ ತರುವಾಯ ಪೀಠವಾಳಿದವರು, ಅವರ ಸಮೀಪದ ಷಾಷಿಕ ಬಂಧುಗಳಾದ ಶ್ರೀವಾಗೀಶತೀರ್ಥರು. ಅವರು ಶ್ರೀವಿದ್ಯಾಧಿರಾಜರ ಅಣ್ಣಂದಿರ ಪುತ್ರರೂ ಪಾಷಿಕ ಕುಲಾವತಂಸರೂ ಆದ ಶ್ರೀರಾಮಚಂದ್ರತೀರ್ಥರನ್ನು ಮಹಾಸಂಸ್ಥಾನಾಧಿಪತಿಗಳನ್ನಾಗಿ ಮಾಡಿದರು.
ಶ್ರೀರಾಮಚಂದ್ರತೀರ್ಥರು ಮೊದಲು ಶ್ರೀಕವೀಂದ್ರತೀರ್ಥರಲ್ಲಿಯೂ, ಅನಂತರ ಶ್ರೀವಾಗೀಶತೀರ್ಥರಲ್ಲಿಯೂ, ಸಕಲಶಾಸ್ತ್ರ, ಸಮಗ್ರ ದೈತವೇದಾಂತವನ್ನು ಅಧ್ಯಯನ ಮಾಡಿ ಅದ್ವಿತೀಯ ಪಂಡಿತರಾಗಿ ಕೀರ್ತಿ ಗಳಿಸಿದರು. ಶ್ರೀರಾಮಚಂದ್ರತೀರ್ಥರು ತಮ್ಮಲ್ಲಿಯೇ ಸಕಲಶಾಸ್ತ್ರಗಳು ಮತ್ತು ದೈತಸಿದ್ಧಾಂತವನ್ನು ಶ್ರೀಮದಾಚಾರ್ಯ ಪರಂಪರಾಗತ ಪಾಠಪ್ರವಚನ ಸಂಪ್ರದಾಯದಂತೆ ಅಧ್ಯಯನ ಮಾಡಿದ. ತಮ್ಮ ಸೋದರಳಿಯಂದಿರೂ, ಷಾಷಿಕ ಕುಲಭೂಷಣರೂ ಆದ ರಘುನಾಥಭಟ್ಟರಿಗೆ ಪರಮಹಂಸಾಶ್ರಮವಿತ್ತು “ಶ್ರೀವಿಬುಧೇಂದ್ರತೀರ್ಥ'ರೆಂಬ ಅಭಿಧಾನದಿಂದ ಅವರನ್ನು ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯರಲ್ಲಿ ಮಂಡಿಸಿ ಪಟ್ಟಾಭಿಷೇಕ ಮಾಡಿ ಅವರಿಗೆ ಸಮಸ್ತ ಬಿರುದಾವಳಿ - ವೈಭವಗಳೊಡನೆ ಶ್ರೀಮದಾಚಾರ್ಯರ ಮಹಾಸಂಸ್ಥಾನವನ್ನು ಒಪ್ಪಿಸಿಕೊಟ್ಟು ಕೃತಾರ್ಥರಾಗಿ, ತಾವು ಕೇವಲ ಜಪತಪಾದನುಷಾನ, ಶ್ರೀಹರಿತತ್ವಚಿಂತನ-ಧ್ಯಾನಾದಿಗಳಲ್ಲಿ ಕಾಲಕಳೆಯಹತ್ತಿದರು.
ಶ್ರೀವಿಬುಧೇಂದ್ರತೀರ್ಥರು ಮಹಾಸಂಸ್ಥಾನಾಧಿಪತ್ಯವನ್ನು ವಹಿಸಿಕೊಂಡು ಒಂದೆರಡು ವರ್ಷ ಗುರುಗಳ ಸನ್ನಿಧಿಯಲ್ಲಿಯೇ ಇದ್ದು ಭಕ್ತಿ-ಶ್ರದ್ಧಾದಿಗಳಿಂದ ಗುರುಸೇವಾರತರಾಗಿ ಗುರುಗಳ ಪರಮಾನುಗ್ರಹಪಾತ್ರರಾದರು. ಅದೇ ಸಮಯದಲ್ಲಿ ಪರಮತೀಯ ಪಂಡಿತರು ಪ್ರಬಲಿಸಿ, ನ್ಯಾಯಮೀಮಾಂಸಾಶಾಸ್ತ್ರಗಳ ಬಲದಿಂದ ದೈತಸಿದ್ಧಾಂತದ ಮೇಲೆ ಕುತ್ತಿತ ದೋಷಾಭಾಸಗಳನ್ನು ಹೇರಿ ದೈತಮತದ ಸಿದ್ಧಾಂತ ತತ್ವಗಳನ್ನು ಅಲ್ಲಗಳೆಯಲಾರಂಭಿಸಿದರು. ಈ ವಿಚಾರವರಿತ ಶ್ರೀರಾಮಚಂದ್ರತೀರ್ಥರು ಪರಮತನಿರಾಕರಣಪೂರ್ವಕವಾಗಿ ದೈತಸಿದ್ಧಾಂತ ಪ್ರತಿಷ್ಠಾಪನ, ಪ್ರಸಾರಕಾರ್ಯ ಮಾಡಿ, ಬಂದೊದಗಿರುವ ವಿಪತ್ತಿನಿಂದ ಸಿದ್ಧಾಂತವನ್ನು ಸಂರಕ್ಷಿಸಲು ಶ್ರೀವಿಬುಧೇಂದ್ರತೀರ್ಥರು ದಿಗ್ವಿಜಯ ಯಾತ್ರೆ ಕೈಗೊಂಡು ಹೊರಡಬೇಕೆಂದು ಆಜ್ಞಾಪಿಸಿದರು. ಶ್ರೀವಿಬುಧೇಂದ್ರತೀರ್ಥರು ಗುರುವರ್ಯರ ಅಪ್ಪಣೆಯಂತೆ ದಿಗ್ವಿಜಯಯಾತ್ರೆಯನ್ನು ಕೈಗೊಂಡು ಹೊರಟರು.
ಶ್ರೀವಿಬುಧೇಂದ್ರತೀರ್ಥರು ಸಾಮಾನ್ಯರಲ್ಲ. ಇಂದು ಜಗತ್ತಿನಲ್ಲಿದೈತಸಿದ್ಧಾಂತವು ಉಳಿದು, ಬೆಳೆದು ಬರಲು ಆ ಮಹನೀಯರೇ ಕಾರಣರಾಗಿದ್ದಾರೆ. ಅವರು ಜಗಚೇತಾರರಾದ ವಾದಮಲ್ಲರಾಗಿದ್ದು, ಷಡರ್ಶನಾಚಾರ್ಯ ಸಾರ್ವಭೌಮರೆಂದು ಅಖಂಡ ವಿದ್ವನ್ಮಂಡಲಿಯಿಂದ ಗೇಗೀಯಮಾನರಾಗಿದ್ದಾರೆ. ಶ್ರೀಮದಾಚಾರ್ಯರ ದೈತಸಿದ್ಧಾಂತ ತತ್ವವಿಜಯವಾಹಿನಿಯ ಸೇನಾನಾಯಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಮೆರೆಯುತ್ತಿರುವ ಮಹಾಮೇಧಾವಿ ಜ್ಞಾನಿಗಳವರು. ಶ್ರೀಮದಾಚಾರ್ಯ ಪರಂಪರಾಪ್ರಾಪ್ತ ಸಚ್ಛಾಸ್ತ್ರಪಾಠಪ್ರವಚನ ಸಂಪ್ರದಾಯ ವಿಚಕ್ಷಣರೂ, ಶೈವಾದೈತಮತ ನಿರಾಕರಣ ಧುರಂಧರರೂ, ದೈತಸಿದ್ಧಾಂತ ಸಂಸ್ಥಾಪಕ ಸಾರ್ವಭೌಮರೂ ಎಂದು ವಿಶ್ವದ ವಿದ್ವನ್ಮಂಡಲಿಯಿಂದ ಸ್ತುತರಾಗಿ ವಿಖ್ಯಾತ ಕೀರ್ತಿಯಿಂದ ರಾರಾಜಿಸುತ್ತಿರುವ ಅವರ ಮಹಿಮೆ ಅನಿತರಸಾಧಾರಣವಾದುದು.
ಶ್ರೀಮದಾಚಾರ್ಯರ ಸಿದ್ದಾಂಥಗ್ರಂಥಗಳ ಪಾಠಪ್ರವಚನ ಸಂಪ್ರದಾಯವು ಶ್ರೀಪದ್ಮನಾಭ-ನರಹರಿ-ಮಾಧವ- ಅಕ್ಟೋಭ್ಯ-ಜಯತೀರ್ಥ- ವಿದ್ಯಾಧಿರಾಜರವರೆಗೆ ಅವಿಚ್ಛಿನ್ನವಾಗಿ ನಡೆದುಬಂದು ಮುಂದೆ ಶ್ರೀರಾಜೇಂದ್ರ-ಕವೀಂದ್ರ- ವಾಗೀಶತೀರ್ಥರು ಆ ಪರಿಶುದ್ಧ ಪರಂಪರೆಯನ್ನು ಚೆನ್ನಾಗಿ ಬೆಳೆಸಿಕೊಂಡು ಬಂದರು. ಆ ಪಾಠಪ್ರವಚನ ಸಂಪ್ರದಾಯವು ಶ್ರೀವಾಗೀಶರಿಂದ ಶ್ರೀರಾಮಚಂದ್ರರಿಗೂ ಅವರಿಂದ ವಿಬುಧೇಂದ್ರತೀರ್ಥರಿಗೆ ಲಭಿಸಿ ಆ ಸಂಪ್ರದಾಯ ಪಾಠಪ್ರವಚನಕ್ಕೆ ವಿಬುಧೇ೦ದ್ರರೇ ಏಕೈಕ ಧುರೀಣರಾಗಿದ್ದು, ಸಂಪ್ರದಾಯಾರ್ಥಕೋವಿದರೆಂದು ಅವರು ಸರ್ವಮಾಧ್ಯಮ೦ಡಲಿಯಿಂದ ಮಾನ್ಯರಾದರು.
ಈ ಸಮಯದಲ್ಲಿಯೇ ಪರಮತೀಯ ಪಂಡಿತರು ಪ್ರಬಲಿಸಿ ದೈತಸಿದ್ಧಾಂತದ ಮೇಲೆ ನಾಲ್ಕೂ ನಿಟ್ಟಿನಿಂದ ಧಾಳಿ ಮಾಡಲಾರಂಭಿಸಿದರು. ಮಧ್ವಸಿದ್ಧಾಂತಕ್ಕೆ ಅದೊಂದು ವಿಪತ್ಕಾಲವಾಗಿತ್ತು. ಅದರ ಅಳಿವು-ಉಳಿವಿನ ಪ್ರಶ್ನೆ ಬೃಹದಾಕಾರ ತಾಳಿ ಎಲ್ಲ ಪೀಠಾಧೀಶರನ್ನು ಚಿಂತೆಗೀಡುಮಾಡಿತ್ತು. ಇಂಥ ಒಂದು ಸಂಕ್ರಾಂತಿ ಕಾಲದಲ್ಲೇ ಪರಿಸ್ಥಿತಿಯನ್ನರಿತು ಪ್ರಾಣಿಗಳಾದ ಶ್ರೀರಾಮಚಂದ್ರತೀರ್ಥರು ತಮ್ಮ ಪಟ್ಟದ ಶಿಷ್ಯರಾದ ಶ್ರೀವಿಬುಧೇಂದ್ರತೀರ್ಥರನ್ನು ಆ ಕಾರ್ಯದಲ್ಲಿ ನಿಯೋಜಿಸಿ ಸನ ನಿರಾಕರಣಪೂರ್ವಕವಾಗಿ ಅನಾದೆ ವಿಚ್ಛಿನ್ನವಾಗಿ ಬೆಳೆದು ಬಂದ ವೈದಿಕ ಸದೃವಸಿದ್ಧಾಂತವನ್ನು ಸ್ವಾಮಿ, ಅದಕ್ಕೆ ಒಂದುವ ಕಂಟಕವನ್ನು ಪರಿಹರಿಸಿ ಸಂರಕ್ಷಿಸಲು ದಿಗ್ವಿಜಯಯಾತ್ರೆಗೆ ಕೊಟ್ಟು ಕಳಹಿಸಿದರು.
ಶ್ರೀವಿಬುಧೇಂದ್ರತೀರ್ಥರು ಗುರುಗಳ ಅಪ್ಪಣೆಯನ್ನು ಶಿರಸಾಧರಿಸಿ ವಿಜಯಯಾತ್ರೆಗೆ ಹೊರಟರು. ಹೋದದ ಅವರು ಪಡರ್ಶನಗಳಲ್ಲಿ ಪ್ರಬಲರೂ, ವಾದಕೋವಿದರೂ ಆದ ನೂರಾರು ಜನ ಪಂಡಿತಾಗಗಣಿಗಳನ್ನು ಎದುರಿಸಬೇಕಾಗಿ ಬಂದಿತು. ಶ್ರೀಹರಿ-ವಾಯುಗಳ ಪರಮಾನುಗ್ರಹಕ್ಕೆ ಮುಖ್ಯಪಾತ್ರರಾಗಿದ್ದ ವಿಬುಧೇಂದ್ರ ಗುರುಗಳು ಧೈರ್ಯದಿಂದ ನ್ಯಾಯ ವ್ಯಾಕರಣ, ಮೀಮಾಂಸಾದಿಶಾಸ್ತ್ರಕೋವಿದರೊಡನೆ ವಾಖ್ಯಾರ್ಥಕ್ಕಿಳಿದರು. ಶ್ರೀವಿಬುಧೇಂದ್ರರ ಸರ್ವತಂತ್ರಸ್ವಾತಂತ್ರ ವಾದಕ ಶಲ, ಪ್ರತಿಭೆ, ತೇಜಸ್ಸು, ವಾಗ್ಲೆ ಹಿರಿಯ ಮುಂದೆ ಅಗ್ನಿಗೆ ಆಹುತಿಯಾಗುವ ಪತಂಗಗಳಂತೆ ಸರವಾದಿಗಳ ಬೀಳಹತ್ತಿದರು. ನಿರುತ್ತರರಾಗಹತ್ತಿದರು. ಶ್ರೀಯವರು ಮುಖ್ಯವಾಗಿ ಶೈವಾದ್ರೆ ತವಾದಿಗಳ ಎಲ್ಲ ದುರ್ವಾದಗಳನ್ನೂ ಶತಶಃ ಖಂಡಿಸಿ, ವೇದೋಕ್ತ ತತ್ವಜ್ಞಾನ ಮತವನ್ನು ಎತ್ತಿಹಿಡಿದು, ನೂರಾರು ಪರವಾದಿಗಳನ್ನು ಜಯಿಸಿ, ಸಿದ್ಧಾಂತವ ಸಾಪಿಸುತ್ತಾ ಭಾರತದ ಉದ್ದಗಲಗಳಲ್ಲಿಯೂ ರೈತವಿಜಯದುಂದುಭಿಯನ್ನು ಮೊಳಗಿಸುತ್ತಾ ತಮ್ಮ ಅಪ್ರತಿಹತ ತೇಜಸ್ಸಿನಿಂದ ಬೆಳಗುತ್ತಾ ಜಗತಾರರೆಂದು ಅಖಂಡ ಕೀರ್ತಿ ಗಳಿಸಿ ಸರ್ವಮಾನ್ಯರಾದರು.
ಶ್ರೀವಿಬುಧೇ೦ದ್ರರು ನೂರಾರು ಜನ ಪ್ರಬಲ ಪಂಡಿತರನ್ನು ಗೆದ್ದು ಅವರು ಬರೆದುಕೊಟ್ಟ 'ಜಯಪತ್ರಿಕೆಗಳನ್ನು ನೂರೆಂಟು ಸುವರ್ಣಕಮಲಗಳಲ್ಲಿ ಕೆತ್ತಿಸಿ, ಆ ಅಪೂರ್ವ ಕನಕಕಮಲವಿಜಯಮಾಲಿಕೆಯನ್ನು ತಮ್ಮ ಕುಲದೇವನಾದ ತಿರುಪತಿಯ ಶ್ರೀನಿವಾಸದೇವನಿಗೆ ಸಮರ್ಪಿಸಿ ರೈತಸಿದ್ಧಾಂತ ಸ್ಥಾಪನಾಚಾರ್ಯ ಸಾರ್ವಭೌಮರೆಂಬ ತಮ್ಮ ಬಿಡುವನ್ನು ಸಾರ್ಥಕಗೊಳಿಸಿದರು.
ಶ್ರೀವಿಬುಧೇಂದ್ರತೀರ್ಥರು ಶ್ರೀಸ್ವರ್ಣವರ್ಣತೀರ್ಥರ ಕೋರಿಕೆಯಂತೆ ಶ್ರೀಲಕ್ಷ್ಮೀನಾರಾಯಣಮುನಿಗಳನ್ನು ತಮ್ಮ ವಿದ್ಯಾಶಿಷ್ಯನನ್ನಾಗಿ ಸ್ವೀಕರಿಸಿ, ತಮ್ಮ ಪ್ರಿಯವರಕುಮಾರಕದ ಜೊತೆಗೆ ಲಕ್ಷ್ಮೀನಾರಾಯಣಯೋಗಿಗಳಿಗೆ ಪದರ್ಶನಗಳು, ಮುಖ್ಯವಾಗಿ ಆಚಾರ್ಯರ ವೇದಾಂತದರ್ಶನ ಗ್ರಂಥಗಳನ್ನು ಪಾಠ ಹೇಳುತ್ತಾಶ್ರೀರಂಗದಲ್ಲಿ ಬಹುಕಾಲ ವಾಸಮಾಡಿ.
ನಮ್ಮ ಲಕ್ಷ್ಮೀನಾರಾಯಣಮುನಿಗಳು ವಿಬುಧೆಂದ್ರರಲ್ಲಿ ವ್ಯಾಸಂಗ ಮಾಡಲು ಪ್ರಾರಂಭಿಸುವ ಹೊತ್ತಿಗಾಗಲೇ ಶ್ರೀಸರ್ವಜ್ಞಸಿದಂತೆ ಪಾಠಪ್ರವಚನ, ಸಂಪ್ರದಾಯದಲ್ಲಿ ಏರುಪೇರುಗಳಾಗಹತ್ತಿದ್ದು, ಸಿದ್ಧಾಂತದಲ್ಲಿ ಸಂಪ್ರದಾಯಭೇದಗಳು ತಲೆದೋರಲಾರಂಭಿಸಿದ್ದವು. ಇದರಿಂದ ಅವಿಚ್ಛಿನ್ನವಾಗಿ ನಡೆದುಬಂದಿದ್ದ ಪಾಠಕ್ರಮದಲ್ಲಿ ವ್ಯತ್ಯಾಸವಾಗಿ ಶ್ರೀಮದಾಚಾರ್ಯ- ಟೀಕಾರಾಯರುಗಳ ಗ್ರಂಥಭಾವವು ಮರೆಯಾಗಲಾರಂಭಿಸಿತ್ತು. ಆದುದರಿಂದ ಶ್ರೀಸರ್ವಜ್ಞ-ಟೀಕಾಕೃತ್ತಾದ ಗ್ರಂಥಗಳ ಪಾಠಪ್ರವಚನ ಸಂಪ್ರದಾಯವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಬಂದು ಆ ಮಹನೀಯರ ಗ್ರಂಥಭಾವವನ್ನು ಯಶಸ್ವಿಯಾಗಿ ಉಪದೇಶಿಸುತ್ತಾ ದೈತಸಿದ್ಧಾಂತವು ತಮ್ಮ ತರುವಾಯ ಅಜರಾಮರವಾಗಿ ಬೆಳಗುವಂತೆ ಮಾಡಬ ಅತ್ಯಂತ ಸಮರ್ಥರಾದ, ಜ್ಞಾನಿಗಳ ಅವಶ್ಯಕತೆ ಅಂದು ಬಹಳವಾಗಿರುವುದನ್ನು ಮನಗಂಡ ವಿಬುಧೇಂದ್ರತೀರ್ಥರು - ಮಹತ್ಕಾರ್ಯಕ್ಕಾಗಿ ತಮ್ಮ ವರಕುಮಾರಕವಾದ ಶ್ರೀಜಿತಾಮಿತ್ರರನ್ನು ತಯಾರುಮಾಡುತ್ತಾ, ಮತ್ತೊಬ್ಬ ಮಹಾಪ್ರಾಜ್ಞಾಶಾಲಿಗಳು ಶಿಷ್ಯರಿಗಾಗಿ ಅರಸುತ್ತಿದ್ದರು. ಅದೇ ಸಮಯದಲ್ಲಿ ಶ್ರೀಲಕ್ಷ್ಮೀನಾರಾಯಣಮುನಿಗಳು ಅವರಿಗೆ ದೊರಕಿದು ಅವರ ಸಂತೋಷಕ್ಕೆ ಕಾರಣವಾಯಿತು.
ಮೊದಲು ನೋಟದಲ್ಲಿಯೇ ತಾವು ಅಪೇಕ್ಷಿಸಿದ ಶಿಷ್ಯರಿವರೇ ಎಂದು ಅವರು ಅರಿತರು. ಲಕ್ಷ್ಮೀನಾರಾಯಣಮುನಿಗಳ ಪ್ರತಿಭೆ, ಅಸಾಧಾರಣ ಗ್ರಹಣಶಕ್ತಿ, ಮುಖದಲ್ಲಿ ರಾಜಿಸುವ ಅಪೂರ್ವ ತೇಜಸ್ಸುಗಳನ್ನು ಕಂಡು ಮಾರುಹೋಗಿದ್ದ ವಿಬುಧೇಂದ್ರತೀರ್ಥರು, ಲಕ್ಷ್ಮೀನಾರಾಯಣಮುನಿಗಳು ವಿದ್ಯಾಶಿಷ್ಯರಾಗಿ ದೊರಕಿದ್ದರಿಂದ ಆನಂದನಿರ್ಭರರಾಗಿ, ಶ್ರೀಮದಾಚಾರ್ಯ-ಪದ್ಮನಾಭ-ಟೀಕಾಕೃತ್ಪಾದರೇ ಈ ಒಂದು ಸುಸಂದರ್ಭವನ್ನು ಒದಗಿಸಿಕೊಟ್ಟರೆಂದು ಭಾವಿಸಿ, ಶ್ರೀರಂಗ ಕ್ಷೇತ್ರದಲ್ಲಿದ್ದಾಗ ಮತ್ತೆ ಸಂಚಾರಕಾಲದಲ್ಲಿಯೂ ಸಹ ಹನ್ನರೆಡು ವರ್ಷಗಳ ಕಾಲ ಲಕ್ಷ್ಮೀನಾರಾಯಣಮುನಿಗಳನ್ನು ಎಡಬಿಡದೆ ಅತ್ಯಂತ ಆದರಾಭಿಮಾನ, ಪ್ರೀತಿ-ವಿಶ್ವಾಸಗಳಿಂದ ಸಕಲಶಾಸ್ತ್ರಗಳನ್ನು ಪಾಠ ಹೇಳಿ, ತಮ್ಮ ಸಮಸ್ತ ಪಾಂಡಿತ್ಯ, ವಾದವಿದ್ಯಾನಿಪುಣತೆ, ಪರವಾದಿ ದಿಗ್ವಿಜಯಚಾತುರ್ಯ, ಗ್ರಂಥರಚನಾಕೌಶಲ, ಸಿದ್ಧಾಂತಸ್ಥಾಪನ, ವಿಚಕ್ಷಣತೆಗಳೆಲ್ಲವನ್ನೂ ಲಕ್ಷ್ಮೀನಾರಾಯಣಮುನಿಗಳಿಗೆ ಹೃತ್ತೂರ್ವಕವಾಗಿ ಧಾರೆಯೆರೆದು ಶ್ರೀಮದಾಚಾರ್ಯಸಿದ್ಧಾಂತ, ಪಾಠಪ್ರವಚನ, ಸತ್ತಂಪ್ರದಾಯ ರಹಸ್ಯಗಳೆಲ್ಲವನ್ನೂ ಅವರಿಗೆ ಅರೆದು ಕುಡಿಸಿ, ಅವರು ಅನಿತರಸಾಧಾರಣ ಪಂಡಿತಾಗಗಣಿಗಳಾಗಿ, ಜಗಜೇತಾರರಾಗುವಂತೆ ಮಾಡಿ ಪರಮಾನುಗ್ರಹ ಮಾಡಿದರು.
ಶ್ರೀಲಕ್ಷ್ಮೀನಾರಾಯಣಮುನಿಗಳಂತೆ ಅನೇಕ ಪೀಠಾಧಿಪತಿಗಳು, ಗೃಹಸ್ಥಾಶ್ರಮಿಗಳು, ನೂರಾರು ಜನ ಶ್ರೀವಿಬುಧೇಂದ್ರದಲ್ಲಿ ವ್ಯಾಸಂಗಮಾಡಿ ಪ್ರಕಾಂಡ ಪಂಡಿತರಾದರು. ಈ ಎಲ್ಲ ವಿದ್ಯಾಶಿಷ್ಯರಲ್ಲಿ ಶ್ರೀಲಕ್ಷ್ಮೀನಾರಾಯಣಮುನಿಗಳು ಸರ್ವವಿಧದಲ್ಲೂ ಶ್ರೀವಿಬುದೇಂದ್ರರ ಪ್ರತಿರೂಪವೆನಿಸಿ ಖ್ಯಾತರಾದರು.
ಶ್ರೀವಿಬುಧೇಂದ್ರತೀರ್ಥರ ಈ ಅನುಗ್ರಹ, ಸತತ ಪರಿಶ್ರಮಗಳ ಫಲವಾಗಿಯೇ ನಮ್ಮ ಶ್ರೀಲಕ್ಷ್ಮೀನಾರಾಯಣಮುನಿಗಳು ಷದರ್ಶನಾಚಾರ್ಯರೆಂದೂ, ದೈತಸಿದ್ಧಾಂತ ಪಾಠಪ್ರವಚನ-ತತ್ವಪ್ರಸಾರಗಳ ಏಕೈಕ ನಾಯಕರೆಂದೂ ವಿಖ್ಯಾತಿ ಗಳಿಸಿ ಸಂಪ್ರದಾಯಾರ್ಥ ವಿಶಾರದರೆಂದು ಸಕಲ ಪಂಡಿತರು, ರಾಜಮಹಾರಾಜರು, ಸಜ್ಜನರು, ಧರ್ಮಾಭಿಮಾನಿಗಳ ಅಗಾಧ ಗೌರವ, ಮನ್ನಣೆ ಹಾಗೂ ಭಕ್ತಿ-ಶ್ರದ್ಧೆಗಳಿಗೆ ಮುಖ್ಯಪಾತ್ರರಾಗಿ ಇಂದು ದಿಗಂತ ವಿಶ್ರಾಂತ ಕೀರ್ತಿ ಗಳಿಸಿ, ರಾಜ ಸನ್ಮಾನಿತರಾಗಿ ಕಂಗೊಳಿಸುತ್ತಿದ್ದಾರೆ!
ಪ್ರಿಯಶಿಷ್ಯರೇ! ಈ ಮಹನೀಯರೇ ನಿಮಗೆ ಪಾಠ ಹೇಳಿ ಸಕಲಶಾಸ್ತ್ರಪಾರಂಗತರನ್ನಾಗಿ ಮಾಡಲು ಸಮರ್ಥರೆಂದು ನಾವು ಭಾವಿಸಿದ್ದೇವೆ.
ಗುರುಗಳ ಮಾತು ಕೇಳಿ ಶ್ರೀವ್ಯಾಸತೀರ್ಥರ ಹೃದಯವರಳಿತು. ಮೈರೋಮಾಂಚನೊಂದಿತು. ಆನಂದಪರವಶರಾಗಿ “ಗುರುದೇವ! ಮಹಾಮಹಿಮರಾದ ಶ್ರೀಲಕ್ಷ್ಮೀನಾರಾಯಣಯೋಗಿಗಳಲ್ಲಿ ವ್ಯಾಸಂಗ ಮಾಡುವುದು ನನ್ನ ಭಾಗವೆಂದು ಭಾವಿಸಿದ್ದೇನೆ. ಧನ್ಯನಾದೆ ಸ್ವಾಮಿ, ಶ್ರೀರಂಗದಲ್ಲಿದ್ದ ಗುರುಗಳು ಮುಳಬಾಗಿಲಿಗೆ ಹೇಗೆ ಬಂದು ನೆಲೆಸಿದರು? ಕೃಪೆಯಿಂದ ತಿಳಿಸಬೇಕಾಗಿ ಪ್ರಾರ್ಥಿಸುತ್ತೇನೆ” ಎಂದರು.
ಬ್ರಹ್ಮಣ್ಯ: ಲಕ್ಷ್ಮೀನಾರಾಯಣಮುನಿಗಳನ್ನು ಮುಳಬಾಗಿಲಿಗೆ ಕರೆತಂದು ಮುಳಬಾಗಿಲು-ಪೆನಗೊಂದ ಮಂದಲಗಳ ರಾಜ್ಯಪಾಲನೂ, ಮಾಂಡಲೀಕನೂ ಚಂದ್ರಗಿರಿಯ ರಾಜನೂ ಆದ ಸಾಳುವ ನರಸಿಂಹನು !
ಸಾಳುವ ನರಸಿಂಹನು ಮಹಾಪರಾಕ್ರಮಿಯೂ, ಸಾಮ್ರಾಜ್ಯ ಹಿತಚಿಂತಕನೂ, ದೈವದ್ಧಿಜಪೂಜಕನ ಧರ್ಮಾಭಿಮಾನಿಯೂ, ವಿದ್ಯಾಪಕ್ಷಪಾತಿಯೂ ಆಗಿದ್ದಂತೆ ಪ್ರಜಾವತ್ಸಲನಾದ ಅಧಿಕಾರಿಯೆಂದು ಹೆಸರು ಗಳಿಸಿದ್ದನು. ರಾಜಕಾರಣ ವಿಚಕ್ಷಣನೂ, ಪ್ರಜಾಹಿತಚಿಂತಕನೂ ಆದ ಸಾಳುವ ನರಸಿಂಹರಾಜನು ಸಾಮ್ರಾಜ್ಯಹಿತಕ್ಕಾಗಿ ಅನೇಕ ಯುದ್ಧಗಳಲ್ಲಿ ನಾಯಕನಾಗಿದ್ದು ಶತ್ರುಭಯಂಕರನೆನಿಸಿ ವಿಜಯ ಗಳಿಸಿದ್ದನು. ಪ್ರಜರು ಅವನನ್ನು ಮಹಾಮಂಡಲೇಶ್ವರ, ಮಹಾರಾಜ, ಪೃಥ್ವಿವಲ್ಲಭ ಮುಂತ ಬಿರುದುಗಳಿಂದ ಗೌರವಿಸುತ್ತಿದ್ದರು. ನರಸಿಂಹನು ರಾಜಕಾರಣ ನಿಮಿತ್ತವಾಗಿ ಅನೇಕ ಬಾರಿ ಶ್ರೀರಂಗಕ್ಕೆ ಹೋಗಿಬರುತ್ತಿದ್ದನು. ಶ್ರೀರಂಗಕ್ಕೆ ಅವನು ಅನೇಕ ಸಲ ಬರುತ್ತಿದ್ದುದಕ್ಕೆ ಕಾರಣವೂ ಇತ್ತು. ನರಸಿಂಹ ಭೂಪಾಲನು ತಿರುಪತಿ ಶ್ರೀನಿವಾಸದೇವ ಅವಿಚ್ಛಿನ್ನ ಭಕ್ತನಾಗಿದ್ದನು. ಅಂತೆಯೇ ಅವನು ವಿಷ್ಣುಕ್ಷೇತ್ರವಾದ ಶ್ರೀರಂಗಕ್ಕೆ ಬಂದು ಶ್ರೀರಂಗನಾಥನ ದರ್ಶನ ಮಾಡಿ ಅನುಗೃಹೀತನಾಗುತ್ತಿದ್ದನು.
ಸಾಳುವ ನರಸಿಂಹನು ಶ್ರೀರಂಗಕ್ಕೆ ಬಂದಾಗಲೆಲ್ಲಾ ಅಲ್ಲಿ ಪ್ರಕಾಂಡ ಪಂಡಿತರೆಂದೂ ಜ್ಞಾನ-ಭಕ್ತಿ-ವೈರಾಗ್ಯ ಸಂಪನ್ನರಾದ ಮಹಾಮಹಿಮಾಶಾಲಿಗಳೆಂದೂ ಪ್ರಖ್ಯಾತರಾಗಿದ್ದ ನಮ್ಮ ಶ್ರೀಲಕ್ಷ್ಮೀನಾರಾಯಣಮುನಿಗಳ ವಿಚಾರವರಿತು ಅಚ್ಚಕನ್ನಡಿಗರೆಂದು ವಿಶೇಷ ವಿಶ್ವಾಸದಿಂದ ಅವರ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಿದ್ದನು. ಪ್ರಥಮ ದರ್ಶನದಲ್ಲಿಯೇ ಗುರುಗಳಲ್ಲಿ ಅವನಿಗೆ ವಿಶೇಷ ಭಕ್ತಿ, ಶ್ರದ್ಧೆಗಳುಂಟಾದವು. ಸ್ವತಃ ಭಗವದ್ಭಕ್ತನಾದ ಅವನು ಭಾಗವತಾಗ್ರಗಣಿಗಳೂ, ಜ್ಞಾನಿನಾಯಕರೂ ಆದ ಶ್ರೀಲಕ್ಷ್ಮೀನಾರಯಣಮುನಿಗಳು ಕರ್ನಾಟಕ ಸಾಮ್ರಾಜ್ಯದಲ್ಲಿ ಅದರಲ್ಲಿಯೂ ತನ್ನ ರಾಜ್ಯದಲ್ಲಿದ್ದರೆ, ಸಾಮ್ರಾಜ್ಯದ ಕಲ್ಯಾಣ, ಧರ್ಮಪ್ರಸಾರಗಳಾಗುವುದರ ಜೊತೆಗೆ ತನಗೊಬ್ಬ ಶ್ರೇಷ್ಠ ಗುರುಗಳ ಉಪದೇಶವು ಪದೇ ಪದೇ ಲಭಿಸುವುದೆಂದು ಅವನು ಯೋಚಿಸಿದನು. ಇದರ ಜೊತೆಗೆ ಕರ್ನಾಟಕದಲ್ಲಿ ಒಂದು ಶ್ರೇಷ್ಠ ವಿದ್ಯಾಪೀಠವನ್ನು ಸ್ಥಾಪಿಸಿ, ಶ್ರೀಲಕ್ಷ್ಮೀನಾರಾಯಣ- ಮುನಿಗಳನ್ನು ಅದರ ಕುಲಪತಿಗಳನ್ನಾಗಿ ಮಾಡಿದರೆ ಭಾರತೀಯ ವಿದ್ಯೆಗಳ ಪಾಠಪ್ರವಚನವು ಸುವ್ಯವಸ್ಥಿತ ರೀತಿಯಲ್ಲಿ ನೆರವೇರಿ, ಕರ್ನಾಟಕವ ಸಕಲ ವಿದ್ಯೆಗಳಿಗೆ ತೌರೂರೆನಿಸಿ ಕರ್ನಾಟಕ ರಾಜ್ಯಕ್ಕೆ ಜಗತ್ತಿನಲ್ಲಿ ಕೀರ್ತಿಯುಂಟಾಗುವುದೆಂದು ಭಾವಿಸಿದ ಆ ವಿದ್ಯಾಪಕ್ಷಪಾತಿಯು ಈಗ್ಗೆ ಹತ್ತಾರು ವರ್ಷಗಳ ಹಿಂದೆ ಒಮ್ಮೆ ಶ್ರೀರಂಗಕ್ಕೆ ಹೋದಾಗ ಶ್ರೀಲಕ್ಷ್ಮೀನಾರಾಯಣಮುನಿಗಳಲ್ಲಿ ತನ್ನ ಮನದಾಸೆಯನ್ನು ನಿವೇದಿಸಿ ಅವರ ಮನವೊಲಿಸಿ ಸಕಲ ರಾಜಗೌರವಗಳೊಡನೆ ಅವರನ್ನು ಮುಳಬಾಗಿಲಿಗೆ ಕರೆತಂದನು ಮತ್ತು ಅಲ್ಲಿ ಶ್ರೀಗಳವರಿಗೆ ಗ್ರಾಮ, ಭೂಸ್ವಾಸ್ಟಿ, ಮಾಶಾಸನ, ತಸ್ತೀಕು, ವಸತಿ ಸೌಕರ್ಯ, ವಿದ್ಯಾಪೀಠಕ್ಕೆ ಕಟ್ಟಡಗಳೇ ಮುಂತಾದುವುಗಳನ್ನು ಏರ್ಪಡಿಸಿಕೊಟ್ಟು ವಿದ್ಯಾಪೀಠದ ನಿರ್ವಹಣೆಗೆ ಬೇಕಾದ ಧನಕನಕಾದಿ ಸೌಕರ್ಯಗಳನ್ನು ಮಾಡಿಕೊಟ್ಟನು.
ಮುಳಬಾಗಿಲು ಮೊದಲಿನಿಂದಲೂ ಪಂಡಿತರುಗಳ ಮತ್ತು ಷಾಷ್ಠಿಕ ವಂಶೀಕರ ನೆಲೆವೀಡಾಗಿದ್ದುದರಿಂದ ಇದೆಲ್ಲವನ್ನೂ ಪರಿಶೀಲಿಸಿ ತಾವು ಸ್ಥಿರವಾಗಿ ವಾಸಿಸಲು ಮುಳಬಾಗಿಲು ಉತ್ತಮ ಸ್ಥಳವೆಂದು ನಿರ್ಧರಿಸಿ ಶ್ರೀಲಕ್ಷ್ಮೀನಾರಾಯಣಮುನಿಗಳು ಸಾಳುವ ನರಸಿಂಹರಾಯನ ಪ್ರಾರ್ಥನೆಯಂತೆ ಮುಳಬಾಗಿಲಿನಲ್ಲಿ ನೆಲೆಸಿ, ಅಲ್ಲಿ ಶ್ರೇಷ್ಠ ವಿದ್ಯಾಪೀಠವನ್ನು ಪ್ರಾರಂಭಿಸಿ, ತಾವೇ ಅದರ ಕುಲಪತಿಗಳಾಗಿದ್ದು ನೂರಾರು ಜನ ವಿದ್ಯಾರ್ಥಿಗಳಿಗೆ ಸಕಲಶಾಸ್ತ್ರಪಾಠಪ್ರವಚನವನ್ನು ಮಾಡಿಸುತ್ತಾ, ಸ್ವಲ್ಪಕಾಲದಲ್ಲಿಯೇ ಅದೊಂದು ವಿಖ್ಯಾತ ವಿದ್ಯಾಕೇಂದ್ರವಾಗುವಂತೆ ಮಾಡಿದರು. ಈ ವಿದ್ಯಾಪೀಠವು ಸರ್ವವಿಧದಿಂದ ಪ್ರವರ್ಧಮಾನಕ್ಕೇರಲು ನರಸಿಂಹನು ಸಮಸ್ತ ಸೌಕರ್ಯಗಳನ್ನು ಏರ್ಪಡಿಸಿಕೊಡುತ್ತಾ ಆಗಿಂದಾಗ್ಗೆ ಮುಳಬಾಗಿಲಿಗೆ ಬಂದು ಗುರುಗಳಿಂದ ಆಧ್ಯಾತ್ಮ ತತ್ವ-ಧರ್ಮೋಪದೇಶಗಳನ್ನು ಪಡೆಯುತ್ತಾ, ಅವರ ಉಪದೇಶ-ಸಲಹೆಗಳಂತೆ ರಾಜ್ಯಭಾರ ಮಾಡುತ್ತಾ ಪ್ರಜಾರಂಜಕ ರಾಜನೆಂದು ಖ್ಯಾತಿಗಳಿಸಿದನು.
ಹೀಗೆ ವಿದ್ಯಾಪಕ್ಷಪಾತಿಯೂ, ಭಗವದ್ಭಕ್ತನೂ ಆದ ಸಾಳುವ ನರಸಿಂಹರಾಯನ ಪ್ರಯತ್ನದ ಪರಿಣಾಮವಾಗಿ ನಮ್ಮ ಲಕ್ಷ್ಮೀನಾರಾಯಣಮುನಿಗಳು ಮುಳಬಾಗಿಲಿನಲ್ಲಿ ನೆಲೆಸಿ ದೈತಸಿದ್ಧಾಂತ ಪ್ರಸಾರಕರಾಗಿ, ನೂರಾರು ಜನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತ ಸಾಳುವ ನರಸಿಂಹ ಭೂಪಾಲನ ಉಪದೇಶಕ ಗುರುಗಳಾಗಿದ್ದು ಪ್ರಖ್ಯಾತರಾಗಲು ಕಾರಣವಾಯಿತು.
ಗುರುಗಳು ಹೇಳಿದ ವಿಚಾರ ಕೇಳಿ ಆನಂದಪರವಶರಾದ ಶ್ರೀವ್ಯಾಸತೀರ್ಥರು “ಪರಮಾನಂದವಾಯಿತು ಗುರುವರ್ಯ, ಮುಳಬಾಗಿಲಿಗೆ ಹೋಗಿ ಶ್ರೀಲಕ್ಷ್ಮೀನಾರಾಯಣಯೋಗಿಗಳಲ್ಲಿ ವ್ಯಾಸಂಗ ಮಾಡಲು ಅಪ್ಪಣೆ ಕೊಟ್ಟರೆ ನಾನು ಹೊರಡಲು ಸಿದ್ಧನಾಗಿದ್ದೇನೆ' ಎಂದು ವಿಜ್ಞಾಪಿಸಿದರು.
ಶ್ರೀಬ್ರಹ್ಮಣ್ಯತೀರ್ಥರು “ಪ್ರೀತ್ಯಾಸದರೇ, ಇದೊಂದು ಪರಮಪವಿತ್ರವಾದ ಕಾರ್ಯವಾಗಿದೆ. ಆದ್ದರಿಂದಲೇ, ನಾವೇ ನಿಮ್ಮನ್ನು ಮುಳಬಾಗಿಲಿಗೆ ಕರೆದುಕೊಂಡು ಹೋಗಿ ನಿಮ್ಮನ್ನು ಲಕ್ಷ್ಮೀನಾರಾಯಣಮುನಿಗಳಿಗೆ ಒಪ್ಪಿಸಿ ನಿಮ್ಮ ವಿದ್ಯಾಭ್ಯಾಸದ ಭಾರವನ್ನು ವಹಿಸಿಕೊಟ್ಟು ಬರುತ್ತೇವೆ. ನಾಲ್ಕಾರು ದಿನಗಳಲ್ಲಿ ಮುಳಬಾಗಿಲಿಗೆ ಹೊರಡಲು ವ್ಯವಸ್ಥೆ ಮಾಡುತ್ತೇವೆ” ಎಂದು ಹೇಳಿದರು.