
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೪, ಶ್ರೀಬ್ರಹ್ಮಣ್ಯತೀರ್ಥರ ಉಪದೇಶ-ಸನ್ಯಾಸಕ್ಕೆ ಕರೆ
ಪೂಜ್ಯರಾದ ಶ್ರೀಬ್ರಹ್ಮಣ್ಯಮುನಿಗಳು ವಟುವಾದ ಯತಿರಾಜನ ನಿರ್ದುಷ್ಟ ವಿದ್ಯಾವೈಭವ, ಪ್ರತಿಭೆ, ಸಾಕ್ಷಾತ್ ವಿದ್ಯಾದೇವಿಯನ್ನು ಅನುಕರಿಸುವ ವಾಸ್ಪಟುತ್ವ, ಅಸ್ಕಲಿತ ಬ್ರಹ್ಮಚರ್ಯ, ತೇಜಃಪುಂಜ ಮುಖಮುದ್ರೆ, ಶಮ-ದಮ-ಶೀಲಾದಿ ಸಂಪತ್ತು, ಸದಾಚಾರ, ಗುರುವಿಧೇಯಚಾರಿತ್ರ್ಯ, ಸೌಂದರ್ಯಪೂರ್ಣ ಆಕರ್ಷಕ ಶರೀರ, ವಿನಯಗಾಂಭೀರ್ಯಾದಿ ಸದ್ಗುಣಗಳೇ ಮೊದಲಾದ ಲಕ್ಷಣಗಳನ್ನೂ ಕಂಡು ಹಿಗ್ಗುತ್ತಿದ್ದರು.
“ಯತಿರಾಜನು ವಯಸ್ಸಿಗೆ ಮೀರಿದ ಬುದ್ಧಿಶಕ್ತಿ-ಜ್ಞಾನ-ಪ್ರತಿಭಾನ್ವಿತನಾಗಿದ್ದಾನೆ. ವೇದವ್ಯಾಸರ ವರಪ್ರಸಾದಜನ್ಯನಾದ ಅವನ ಅವತಾರದ ಯಶಸ್ಸಿಗೆ, ಅಭ್ಯುದಯಗಳಿಗೆ ಭೂಮಿಕೆಯನ್ನು ರಚಿಸಿ, ಆವೊಂದು ವರ್ತಲದಲ್ಲಿ ಅವನು ಸರ್ವಾಂಗೀಣ ಪ್ರಗತಿ ಸಾಧಿಸಲು ಇದೀಗ ಸರಿಯಾದ ಸಮಯವಾಗಿದೆ. ನಾವೀಗ ಯತಿರಾಜನಿಗೆ ನಮ್ಮ ಮನದಳಲನ್ನು ನಿವೇದಿಸಿ ಆ ಮಹತ್ಕಾರ್ಯಕ್ಕೆ ಅವನನ್ನು ಸಿದ್ಧಗೊಳಿಸಬೇಕು” ಎಂದು ಯೋಚಿಸಿದ ಬ್ರಹ್ಮಣ್ಯತೀರ್ಥರು ಆ ಕಾರ್ಯದಲ್ಲಿ ಪ್ರವೃತ್ತರಾದರು.
ಒಂದು ದಿನ ಯತಿರಾಜನೊಡನೆ ಮಾತನಾಡುತ್ತಿರುವಾಗ ಬ್ರಹ್ಮಣ್ಯಮುನಿಗಳು ತಮ್ಮ ಪೀಠದ ಮಹತ್ವವನ್ನು ವಿವರಿಸುತ್ತಾ, ಶ್ರೀಹಂಸನಾಮಕ ಪರಮಾತ್ಮನಿಂದ ಪ್ರವೃತ್ತವಾದ ಜ್ಞಾನಪರಂಪರೆಯಲ್ಲಿ ಆಗಿಹೋದ ಜ್ಞಾನಿಗಳು, ಅವರ ವೈಶಿಷ್ಟ್ಯ, ಭಗವತ್ನಸಾದ ಪಡೆದು, ಮೋಕ್ಷಸುಖವನ್ನು ಪಡೆಯಲು ಏಕೈಕ ಸಾಧನವಾದ ಜ್ಞಾನ, ಭಕ್ತಿಗಳ ಪಾತ್ರ, ಆ ಜ್ಞಾನಸಾಧನೆಗೆ ಸಹಾಯಕವೂ, ಶ್ರೇಷ್ಠವೂ ಆದ ಪರಮಹಂಸಾಶ್ರಮದ ಮಹತ್ವ, ಹಂಸಪರಂಪರೆಯಲ್ಲಿ ಬಂದ ತಮ್ಮ ಪೂರ್ವಿಕರು ಎಂತು ಯತ್ಯಾಶ್ರಮದಲ್ಲಿ ಧರ್ಮಾನುಷ್ಠಾನಪೂರ್ವಕವಾದ ಉಪಾಸನೆಯಿಂದ ಪರಮಾತ್ಮನ ವಿಶೇಷಾನುಗ್ರಹಕ್ಕೆ ಪಾತ್ರರಾಗಿ ಕೀರ್ತಿ ಗಳಿಸಿದರು. ಮುಂತಾದ ವಿಚಾರಗಳನ್ನೂ, ಪರಮಹಂಸಾಶ್ರಮ ಹಾಗೂ ಅದರ ಧರ್ಮಗಳನ್ನೂ ವಿಸ್ತಾರವಾಗಿ ನಿರೂಪಿಸಿದರು. ಗುರುಗಳ ವಿವರಣೆಯನ್ನಾಲಿಸಿ, ಯತಿರಾಜ ಬಹುವಾಗಿ ಪ್ರಭಾವಿತನಾದ. ಅದನ್ನು ಕಂಡು ಗುರುಗಳು ಮನದಲ್ಲಿ ಹಿಗ್ಗಿದರು.
ಒಂದು ದಿನ ಮಧ್ಯಾಹ್ನ ಹತ್ತಿರ ಕೂಡಿಸಿಕೊಂಡು ಗುರುಗಳು ಹೀಗೆ ಹೇಳಿದರು - “ಯತಿರಾಜ! ಅನಾದಿಕಾಲದಿಂದ ನಡೆದುಬಂದಿರುವ ನಮ್ಮ ವೈದಿಕ ಸದೈಷ್ಣವ ದೈತಸಿದ್ಧಾಂತವೇ ಸಕಲ ವೇದ, ಉಪನಿಷತ್ತುಗಳು, ಸೂತ್ರ, ಗೀತಾ, ಪುರಾಣ, ಭಾರತಾದಿಶಾಸ್ತ್ರ ಪ್ರತಿಪಾದ್ಯವಾದ ಸತ್ತಿದ್ಧಾಂತವಾಗಿದೆ. ಇಂತಹ ಪವಿತ್ರ ಸಿದ್ಧಾಂತಕ್ಕೀಗ ಗಂಡಾಂತರ ಬಂದಿದೆ. ನ್ಯಾಯ-ಮೀಮಾಂಸಾದಿಶಾಸ್ತ್ರಗಳ ಬಲದಿಂದ ಪರಮತದ ಪಂಡಿತರು ಹೊಸದೊಂದು ಬಗೆಯಲ್ಲಿ ತಮ್ಮ ತತ್ವಗಳನ್ನು ಪ್ರತಿಪಾದಿಸುತ್ತಾ ನಮ್ಮ ಸಿದ್ಧಾಂತದ ಮೇಲೆ ಕುತ ದೋಷಾಭಾಸಗಳನ್ನು ಹೇರಿ, ಗ್ರಂಥರಚನೆ ಮಾಡಿ ಮೋಕ್ಷಯೋಗ್ಯ ಸಜ್ಜನರ ಮನಸ್ಸನ್ನು ವಿಭ್ರಮಗೊಳಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಪರಮಸಿದ್ದಾಂತವು ನಾಮಾವೇಷವಾಗುವುದೇನೋ ಎಂಬ ಭಯವು ನಮಗುಂಟಾಗಿದೆ.
ಆದ್ದರಿಂದ ಕುಮಾರ! ಪ್ರಬಲರಾದ ಪರಮತೀಯರ ಈ ಆಕ್ರಮಣವನ್ನೆದುರಿಸಿ, ಅವರೊಡನೆ ವಾದಮಾಡಿ ಜಯಿಸಿ, ಸಿದ್ಧಾಂತ ರಕ್ಷಕಗಳಾದ ಅಸದೃಶ ಗ್ರಂಥರಚನೆ-ಪಾಠಪ್ರವಚನಗಳಿಂದ ಬಂದಿರುವ ವಿಪತ್ತನ್ನು ಪರಿಹರಿಸಿ, ಮತ್ತೆ ನಮ್ಮ ಸಿದ್ಧಾಂತವು ನಿರ್ಬಾಧವಾಗಿ ಬೆಳಗುವಂತೆ ಮಾಡಬಲ್ಲದೇವಾಂಶಸಂಭೂತನಾದ ಮಹನೀಯನ ಅವಶ್ಯಕತೆ ಈಗ ಉಂಟಾಗಿದೆ. ನಾವು ಹೇಳಿದ ದೇವಾಂಶಸಂಭೂತನಾದ ಆ ಮಹನೀಯ ನೀನೇ ಆಗಿದ್ದೀಯೇ! ಈ ವಿಚಾರವನ್ನು ನಿನಗೆ ತಿಳಿಸಿ ತತ್ಕಾರ್ಯಾಸಕ್ತನಾಗುವಂತೆ ಮಾಡಬೇಕೆಂಬ ಹಂಬಲ ನಮಗೆ ಬಹುದಿನಗಳಿಂದಲೂ ಇದ್ದಿತು. ಇಂದು ನಮ್ಮ ಮನದಾಸೆಯನ್ನು ನಿನಗೆ ತಿಳಿಸಿದ್ದೇವೆ. ವತ್ತ, ನಮ್ಮ ಮನೋರಥವನ್ನು ನೀನು ಪೂರ್ಣಗೊಳಿಸಿ ಆನಂದಗೊಳಿಸಬೇಕು ಕಂಡೆಯಾ” ಎಂದು ಹೇಳಿದನು.
ಗುರುಗಳ ಮಾತು ಕೇಳಿ ಯತಿರಾಜನಿಗೆ ಸಂತೋಷ, ಸಂಭ್ರಮಾಶ್ಚರ್ಯಗಳುಂಟಾದವು. ದೇಹ ರೋಮಾಂಚಿತ- ವಾಯಿತು. ವಿನಯದಿಂದ ಕರಜೋಡಿಸಿ ಯತಿರಾಜನು, “ಗುರುದೇವ! ಇದೇನು ಹೀಗೆ ಹೇಳುತ್ತಿರುವಿರಿ? ನನ್ನನ್ನು ಸಾಕಿ, ಸಲಹಿ, ಬೆಳೆಸಿ, ವಿದ್ಯಾದಾನ ಮಾಡಿ ಅನುಗ್ರಹಿಸುತ್ತಿರುವ ನಿಮಗೆ, ಶಿಷ್ಯನಾದ ನನ್ನಲ್ಲಿ ಸಂಕೋಚವೇಕೆ ಸ್ವಾಮಿ ? ನನ್ನ ಮೇಲೆ ಸರ್ವವಿಧವಾದ ಅಧಿಕಾರವೂ ಇದೆ, ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳೋಣವಾಗಲಿ. ತಮ್ಮ ಆಜ್ಞೆಯಂತೆ ವರ್ತಿಸಿ ನಿಮ್ಮ ಮನಸ್ಸಿಗೆ ಸಂತೋಷವಾಗುವಂತೆ ಮಾಡುವುದಕ್ಕಿಂತ ಹೆಚ್ಚಿನ ಸೌಬಾಗ್ಯ ಬೇರಾವುದಿದೆ?” ಎಂದು ವಿಜ್ಞಾಪಿಸಿದನು.
ಯತಿರಾಜನ ವಿನಯಪೂರ್ಣವಾದ ನುಡಿಗಳನ್ನಾಲಿಸಿ ಹರಷಗೊಂಡ ಶ್ರೀಬ್ರಹ್ಮಣ್ಯತೀರ್ಥರು ಹಿಂದೆ ತಾವು ಜನರಿಯ ಮಾಡಿದ ತಪಸ್ಸು, ಭಗವಂತನ ವರಪ್ರದಾನದಿಂದಾರಂಭಿಸಿ ಈವರೆಗಿನ ಸಮಸ್ತ ವಿಚಾರಗಳನ್ನೂ ವಿವರಿಸಿದರು.
ಅನಂತರ ಬ್ರಹ್ಮಣ್ಯತೀರ್ಥರು “ಯತಿರಾಜ, ನಮ್ಮ ಸಿದ್ಧಾಂತವನ್ನು ಸಕಲ ವಿಧದಿಂದ ಸಂರಕ್ಷಿಸಿ, ಪೋಷಿಸಿಕೊಂಡ ಬರಲು ನಿನೊಬ್ಬನೇ ಸಮರ್ಥನೆಂದು ನಾವು ನಂಬಿದ್ದೇವೆ. ಈ ಪರಮ ಪವಿತ್ರ ಕಾರ್ಯವನ್ನು ನೆರವೇರಿಸಲು ಪರಮಮಸಾಶ್ರವಿದ ಶ್ರೇಷ್ಠ ಅಧಿಕಾರಿ! ಆದುದರಿಂದ ನೀನು ಮೊದಲು ನಮ್ಮಿಂದ ಆಶ್ರಮ ಸ್ವೀಕರಿಸಿ ಸನ್ಯಾಸಿಯಾಗಿ ನಮ್ಮ ಶಿಷ್ಯನಾಗಬೇಕ ತರುವಾಯ ಷಡರ್ಶನಗಳಲ್ಲಿ, ಮುಖ್ಯವಾಗಿ ದೈತವೇದಾಂತಶಾಸ್ತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಪ್ರಕಾರ ಪಂಡಿತನಾಗಬೇಕು. ಆಗ ನೀನು ಈ ಮಹತ್ವಪೂರ್ಣ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಮರ್ಥನಾಗುತ್ತಿದೆ. ಮಂದ ನಿನು ಶಿಷ್ಯನಾಗಿ ಶ್ರೀಮದಾಚಾರ್ಯರ ಮಹಾಸಂಸಾನಕ್ಕೆ ಉತ್ತರಾಧಿಕಾರಿಯಾಗಬೇಕು' ಎಂದು ಕಳಕ ಅದುವರೆಗೆ ಗುರುಗಳು ಹೇಳುತ್ತಿದ್ದ ವಿಚಾರವನ್ನು ಆಸಕ್ತಿಯಿಂದ ಕೇಳುತ್ತಿದ್ದ ಯತಿರಾಜನಿಗೆ ಗುರುಗಳು “ಸನ್ಯಾಸವನ್ನು ಸ್ವೀಕರಿಸಿ ನಮ್ಮ ಶಿಷ್ಯನಾಗಬೇಕು” ಎಂದು ಹೇಳಿದೊಡನೆಯೇ ಅವನ ಉತ್ಸಾಹವೆಲ್ಲವಾ ಮಾಯವಾಯಿತು. ದೊಡ್ಡ ಆಘಾತವಾದಂತಾಯಿತು. ಮನದಲ್ಲಿ ಒಂದು ಬಗೆಯ ಹೆದರಿಕೆ, ತಳಮಳ ಪ್ರಾರಂಭವಾಯಿತು. ಗುರುಗಳಿಗೆ ಏನೂ ಉತ್ತರ ಕೊಡದೆ ಗಂಭೀರ ಮುಖಮುದ್ರೆಯಿಂದ ಚಿಂತಾಪರನಾಗಿ ತಲೆತಗ್ಗಿಸಿ ಕುಳಿತುಬಿಟ್ಟನು. ಯತಿರಾಜನಾದ ಮಾರ್ಪಾಟು ಗಮನಿಸಿದ ಬ್ರಹ್ಮಣ್ಯತೀರ್ಥರು “ಮತ್ತೆ, ಸಾವಧಾನವಾಗಿ ವಿಚಾರಮಾಡಿ ನಿನ್ನ ಅಭಿಪ್ರಾಯವನ್ನು ತಿಳಿಸು” ಎಂದು ಹೆಣೆ ಅಂದ ತೆರಳಿದ
ಗುರುಗಳು ಅತ್ತ ತೆರಳಿದ ಮೇಲೆ ಯತಿರಾಜನ ಮನಸ್ಸಿನಲ್ಲಿ ವಿಚಾರತರಂಗವೆದ್ದಿತು. “ಸನ್ಯಾಸಿಯಾಗಬೇಕು” ಗುರುಗಳ ಮನದಿಂದ ಅವನು ಅಧೀನನಾದನು.ಅಲ್ಲಿಯವರೆಗೆ ಅವನಲ್ಲಿದ್ದ ಶ್ಚರ್ಯ, ಉತ್ಸಾಹಗಳೆಲ್ಲವಾ ಉಡುಗಿಹೋಯಿತು. ಒಂದು ಬಗೆಯ ಭೀತಿಯುಂಟಾಗಿ ಹೃದಯವು ಕಂಪಿಸಿತು. ಅವ್ಯಕ್ತ ವೇದನೆ, ಮಾನಸಿಕ ತಳಮಳಗಳಿಂದ ಯತಿವಾಜಿನ ಮನಶಾಂತಿಯೇ ಮಡಿರುತ್ತಾಯಿತು.
ಇಲ್ಲಿದ್ದರೆ ಗುರುಗಳ ಮಾತನ್ನು ನೆರವೇರಿಸಬೇಕಾಗುತ್ತದೆ. ಆದ್ದರಿಂದ ತಾನು ಅದಷ್ಟು ಬೇಗ ಶ್ರೀಮತದಿಂದ ಹೊರಟು ಕೊದು ಅವನು ಬಯಸಿದನು.ಹಿಗೆ ನಿರ್ಧರಿಸಿದ ಯತಿರಾಜನ ಹೃದಯ ಏಕಾಂತವನ್ನು ಆಶಿಸಿತು. ಮಾನಸಿಕ ತುಮುಲದಿ೦ದ ಅಸಹಾಯನಾದ ಅವನು ಏನೂ ಮಾಡಲು ತೋಚದೆ, ಸದಸದ್ವಿವೇಕ ಬುದ್ದಿಯುಳ್ಳವನಾಗಿದ್ದರೂ ವಾಲ್ಯಚಾಪಲ್ಯದಿಂದ, ಮನಶಾಂತಿಗಾಗಿ ಯಾರಿಗೂ ತಿಳಿಸದೇ ಮತವನ್ನು ಬಿಟ್ಟು ಹೊರಟುಬಿಟ್ಟನು
ವಿಚಾರಪರವಶನಾದ ಯತಿರಾಜನಿಗೆ ತಾನೆ ಹೋಗುತ್ತಿರುವೆನೆಂಬ ಪರಿವೇ ಇರಲಿಲ್ಲ. ಏನನ್ನೂ ಗಮನಿಸದೆ ತಲೆತಗ್ಗಿಸಿಕೊಂಡು ಭರದಿಂದ ಸಾಗಿದ್ದಾನೆ ಯತಿರಾಜ ಚಿಂತಾಕ್ರಾಂತನಾದ ಆತ ಮರದಿಂದ ಬಹುದೂರ ಬಂದುಬಿಟ್ಟಿದ್ದಾನೆ. ಮಾನಸಿಕ ತಳಮಳ, ಪ್ರಯಾಣದ ಬಳಲಿಕೆಗಳಿಂದ ಅವನು ಆಯಾಸಗೊಂಡಿದ್ದಾನೆ. ಆಗ ಇದ್ದಕ್ಕಿದ್ದಂತೆ ನಿಂತು ತಾತ್ತ ಬಂದಿರುವೆನೆಂದು ಒಮ್ಮೆ ಸುತ್ತಲೂ ನಿರೀಕ್ಷಿಸಿದ. ಅವನ ದೃಷ್ಟಿಗೆ ಬಿದ್ದ ದೃಶ್ಯ ಬಹು ರಮಣೀಯವಾಗಿತ್ತು.
ಅದೊಂದು ಸಂದಾವನ, ಪರಿಸರವಾಹ ಸರಾವತ-ಲಾ-ವ್ಯಕ್ತಿಗಳಿಂದ ಶೋಭಿಸುತ್ತಿದೆ. ಪ್ರಶಾಂತ ವಾತಾವ ಸೂರ್ಯನು ಅಸ್ತಂಗತನಾಗಲು ಇನ್ನೂ ಬಹಳ ಕಾಲವಿದೆ. ಸೂರ್ಯನ ಹೊಂಗಿರಣಗಳ ಪ್ರಕಾಶದಿಂದ ವನವು ಮನೋಹರವಾಗಿ ಕಂಗೊಳಿಸುತ್ತಿದೆ. ಅಲ್ಲೊಂದು ಜಲಭರಿತವಾದ, ವಿಶಾಲವಾದ ಸರೋವರವು ಯತಿರಾಜನಿಗೆ ಗೋಚರಿಸಿತು. ಆ ಪರಿಸರ ಅವನಿಗೆ ಪ್ರಶಾಂತವೆನಿಸಿತು. ಮನಸ್ಸಿಗೆ ಸ್ವಲ್ಪ ಶಾಂತಿಯೇರ್ಪಟ್ಟಿತು. ಯತಿರಾಜ ಆ ದಿವ್ಯ ಸರೋವರದತ್ತ ನಡೆದು ಅದರ ಸ್ವಚ್ಛವಾದ ಜಲರಾಶಿಯನ್ನು ಕಂಡು ಸರಸ್ಸಿನಲ್ಲಿಳಿದು ಕೈಕಾಲುಗಳನ್ನು ತೊಳೆದುಕೊಂಡು, ಅನಂತರ ಸಾಯಂಸಂಧ್ಯಾವಂದನೆ - ಜಪಾದಿಗಳನ್ನು ಪೂರೈಸಿ, ನೀರು ಕುಡಿದು, ಮೇಲೆ ಬಂದು ಸುತ್ತ ನೋಡಿದ ಸರೋವರಕ್ಕೆ ಹೊಂದಿಕೊಂಡು ಶಾಖೋಪಶಾಖೆಗಳಿಂದ ವಿಸ್ತಾರವಾಗಿ ಹರಡಿದ್ದ ಒಂದು ಆಲದಮರವನ್ನು ಕಂಡು ಅತ್ತ ಬಂದ ಯತಿರಾಜನು ಅದರ ಬುಡಭಾಗದಲ್ಲಿ ದೇಹಾಯಾಸವನ್ನು ಪರಿಹರಿಸಿಕೊಳ್ಳಲು ಮರದ ಬುಡಕ್ಕೊರಗಿ ಕುಳಿತ. ಬಹುದೂರ ಪ್ರಯಾಣ ಮಾಡಿದ ಆಯಾಸದಿಂದ ಕಣ್ಣುಗಳು ಮಂಪರು ಮಂಪರಾದಂತಾಯಿತು. ಕನಸೂ ಅಲ್ಲ, ನನಗೂ ಅಲ್ಲ, ಅಂತಹ ಒಂದು ಅವಸ್ಥೆಯಲ್ಲಿದ್ದಾನೆ ಯತಿರಾಜ. ಆಗ ಅವನ ಮುಂದೆ ಮಿಂಚೊಂದು ಮಿನುಗಿದಂತಾಗಿ ದಿವ್ಯಪ್ರಕಾಶವುಂಟಾಯಿತು! ಆ ಪ್ರಶಾಂತಕಾಂತಿಪುಂಜವನ್ನು ಭೇದಿಸಿಕೊಂಡು ಮೇಲೆದ್ದು ನಿಂತ ತೇಜೋಮೂರ್ತಿಗಳಾದ ಮಹನೀಯರೊಬ್ಬರು ಯತಿರಾಜನ ದೃಷ್ಟಿಗೆ ಗೋಚರಿಸಿದರು!
ದರ್ಶನಮಾತ್ರದಿಂದ ಪೂಜ್ಯಭಾವವನ್ನು ಹುಟ್ಟಿಸಿದ ಆ ತೇಜೋಮೂರ್ತಿಗಳನ್ನು ಕಂಡು ಯತಿರಾಜನ ಮೈ ಪುಳಕಿಸಿತು. ಭವ್ಯಾಕಾರ, ತಲೆಯ ಮೇಲೆ ಜಟೆ, ಕಪೋಲ-ಗದ್ದಗಳಲ್ಲಿ ಅದಭ್ರಶುಭ್ರವಾದ ಕೇಶರಾಶಿ, ವಿಸ್ತಾರವಾದ ಮುಖದಲ್ಲಿ ಮಿಂಚಿನಂತೆ ಮಿನುಗುವ ನೇತ್ರಗಳು, ಸುಂದರವಾದ ನೀಲನೀರದ ಕಾಂತಿಯಿಂದ ಬೆಳಗುವ ಶರೀರ, ಫಾಲಪ್ರದೇಶದಲ್ಲಿ ವಿರಾಜಿಸುವ ಊರ್ಧ್ವಪುಂಡ್ರ ಗಂಧಾಕ್ಷತೆ, ದ್ವಾದಶನಾಮಗಳು, ಕೊರಳಲ್ಲಿ ಶೋಭಿಸುವ ಯಜ್ಯೋಪವೀತ, ಕಮಲಾಕ್ಷ ತುಳಸೀಮಾಲೆಗಳು, ತರುಣಾರುಣವರ್ಣದ ಕಾಷಾಯಾಂಬರ, ಕರಗಳಲ್ಲಿ ಹಿಡಿದಿರುವ ದಂಡಕಮಂಡಲುಗಳು, ಟೊಂಕಕ್ಕೆ ಬಿಗಿದಿರುವ ಬಂಗಾರವರ್ಣದ ಮೌಂಜಿ - ಇಂತು ವೇಷಭೂಷಣಗಳಿಂದ ರಾಜಿಸುವ ಆ ಮಹನೀಯರ ಮುಖಮುದ್ರೆಯು ಅತ್ಯಂತ ಪ್ರಶಾಂತವಾಗಿದೆ. ಹೊಳೆಯುವ ಕಣ್ಣುಗಳು ಕರುಣಾರಸಪೂರ್ಣವಾಗಿದೆ. ಆಗ ಯತಿರಾಜ ನೋಡುತ್ತಿರುವಂತೆಯೇ ಗರುಡಾರೂಢನಾದ, ಶ್ರೀಲಕ್ಷ್ಮೀಸಹಿತನಾದ, ದೇವತೆಗಳಿಂದ ಸ್ತುತ್ಯನಾದ ಶ್ರೀಮನ್ನಾರಾಯಣನು ದರ್ಶನವಿತ್ತಂತಾಯಿತು. ಮರುಕ್ಷಣವೇ ಮೊದಲಿನಂತೆ ಜಟಾಜೂಟ ಪರಿಶೋಧಿತರಾದ ತೇಜೋಮೂರ್ತಿಗಳು ಅಭಯಹಸ್ತದಿಂದ ಮಂದಹಾಸ ಬೀರುತ್ತ ನಿಂತಿರುವುದನ್ನು ಕಂಡನು. ತನ್ನ ಮುಂದೆ ನಿಂತಿರುವ ಆ ಮಹನೀಯರೇ ಮಧ್ವವಿಜಯದಲ್ಲಿ ವರ್ಣಿಸಿರುವಂತೆ ಬದರಿಯಲ್ಲಿ ಶ್ರೀಮಧ್ವಾಚಾರ್ಯರಿಗೆ ದರ್ಶನವಿತ್ತ ಸಾಕ್ಷಾತ್ ಲಕ್ಷ್ಮೀಕಾಂತನಾರಾಯಣಾಭಿನ್ನರಾದ ಶ್ರೀವೇದವ್ಯಾಸದೇವರೆಂದು ಯತಿರಾಜನಿಗೆ ಅರಿವಾಯಿತು.
-ಅವರ ದರ್ಶನಮಾತ್ರದಿಂದ ಯತಿರಾಜನನ್ನು ಆವರಿಸಿದ್ದ ಚಿಂತೆ, ಕಳವಳ, ಆಯಾಸ ಎಲ್ಲವಾ ಸೂರ್ಯಪ್ರಕಾಶದಿಂದ ಮಂಜುಕರಗುವಂತೆ ಕರಗಿಹೋಯಿತು. ಅದಾವುದೋ ಒಂದು ದಿವ್ಯಶಕ್ತಿ ಅವನ ನರನಾಡಿಗಳಲ್ಲಿ ಹರಿದಂತಾಯಿತು. ರೋಮಹರ್ಷಣದಿಂದ ದೇಹ ಕಂಪಿಸಿತು. ಯತಿರಾಜನ ಹೃದಯದಲ್ಲಿ ಭಕ್ತಿಯೊರತೆ ಪುಟಿದೆದ್ದಿತು. ತನಗರಿವಾಗದಂತೆಯೇ ಯತಿರಾಜ ಭಗವಾನ್ ಶ್ರೀವೇದವ್ಯಾಸದೇವರಿಗೆ ಸಾಷ್ಟಾಂಗವೆರಗಿ ಕರಜೋಡಿಸಿ ನಿಂತನು.
ಭಗವಾನ್ ವೇದವ್ಯಾಸರು ಹತ್ತಿರ ಬಂದು ಯತಿರಾಜನ ಶಿರದ ಮೇಲೆ ತಮ್ಮ ಅಮೃತಹಸ್ತವನ್ನಿರಿಸಿದರು. ಕೂಡಲೇ ಯತಿರಾಜನ ದೇಹದಲ್ಲಿ ವಿದ್ಯುತ್ತಂಚಾರವಾದಂತಾಯಿತು. ತದೇಕದೃಷ್ಟಿಯಿಂದ ಭಗವಾನರನ್ನು ನೋಡುತ್ತಿರುವಂತೆಯೇ ಚಂದ್ರಿಕೆಯ ಬೆಡಗನ್ನು ನಾಚಿಸುವ ಮಂದಹಾಸ ಬೀರುತ್ತಾ ಅವರು ಮೃದು ಮಧುರ ವಚನಗಳಿಂದ ಇಂತೆಂದರು.
“ಮಗು! ಇದೇನು ನಿನ್ನ ಚಿಂತೆ? ಧೀರನಾದ ನಿನಗೆ ಈ ಕಳವಳವು ಶೋಧಿಸುವುದೇ? ಕುಮಾರ, ನಮ್ಮ ಜ್ಞಾನಕಾರ್ಯವು ನೆರವೇರಿಸಲು ನಾವೇ ನಿನ್ನನ್ನು ಈ ಧರೆಗೆ ಕಳಿಸಿದ್ದೇವೆ. ಪಾಷಂಡಿಗಳು ನಾವು ಉಪದೇಶಿಸಿದ ಅನಾದಿಯಾದ ವೈಧಿಕ ಸವೈಷ್ಣವ ಸಿದ್ಧಾಂತವನ್ನು ಅಪಲಾಪ ಮಾಡಿ ಅಪಸಿದ್ದಾಂತವನ್ನು ಪ್ರಸಾರ ಮಾಡುತ್ತಿರುವರು. ಹಿಂದೊಮ್ಮೆ ಇಂದ ಪರಿಸ್ಥಿತಿಯೊದಗಿದ್ದಾಗ ದೇವತೆಗಳ ಪ್ರಾರ್ಥನೆಯಂತೆ ನಮಗೆ ಅತ್ಯಂತ ಪ್ರಿಯನೂ, ಜಗತ್ಪಾಣನೂ ಆದ ವಾಯುದೇವನನ್ನು ನಮ್ಮ ಸಿದ್ಧಾಂತ ತತ್ವಗಳನ್ನು ಹಿಡಿದೆತ್ತಿ ಮುಕ್ತಿಯೋಗ್ಯ ಜನರಿಗೆ ಸನ್ಮಾರ್ಗ ಪ್ರದರ್ಶನ ಮಾಡಲು ಕಳುಹಿಸಿದ್ದೆವು. ಭಾರತೀರಮಣರ ಮುಖ್ಯಪ್ರಾಣನು ನಮ್ಮ ಆದೇಶದಂತೆ ಮಧ್ಯಾಭಿಧಾನದಿಂದ ಅವತರಿಸಿ, ನಮಗೆ ಪರಮಸಮ್ಮತವಾದ ರೀತಿಯಲ್ಲಿ ಬ್ರಹ್ಮ ಸೂತ್ರಗಳಿಗೆ ಭಾಷ್ಯಗಳನ್ನು ರಚಿಸಿ, ವೈಷ್ಣವಸಿದ್ಧಾಂತವನ್ನು ಪ್ರತಿಷ್ಠಾಪಿಸಿ ಸುಜನರಿಗೆ ಮಹೋಪಕಾರ ಮಾಡಿದನು.
ವತ್ಸ, ನಮ್ಮ ಪ್ರಿಯರಾದ ಆನಂದತೀರ್ಥರು ಸ್ಥಾಪಿಸಿದ ಪರಮಸಿದ್ಧಾಂತದ ಮೇಲೆ ಈಗ ಮತ್ತೆ ದಾಳಿ ಮಾಡಿ ವೈದಿಕ ಸತ್ತಿದ್ಧಾಂತವನ್ನು ಅಪಭ್ರಂಶಗೊಳಿಸಿ ಪರವಾದಿಗಳು ವೈದಿಕೋಪದೇಶಗಳನ್ನು ಅಲ್ಲಗಳೆಯುತ್ತಿದ್ದಾರೆ. ಕಲಿಯುಗದ ಸಜ್ಜನರ ಉದ್ಧಾರಕ್ಕಾಗಿ ಮತ್ತೆ ಆ ಸತ್ತಿದ್ಧಾಂತವನ್ನು ಮೇಲೆತ್ತಿ ಹಿಡಿದು ನಮ್ಮ ಉಪದೇಶವನ್ನು ಪ್ರಸಾರ ಮಾಡಲೆಂದೇ ನಮ್ಮ ಪರಮಭಕ್ತಾದ ನಿನ್ನನ್ನು ಬ್ರಹ್ಮಣ್ಯತೀರ್ಥರ ತಪಸ್ಸಿಗೆ ಮೆಚ್ಚಿ ವರರೂಪವಾಗಿ ಕರುಣಿಸಿದ್ದೇವೆ.
ಯತಿರಾಜ! ಈಗ ನಿನ್ನ ಅವತಾರದ ಉದ್ದೇಶ ನೆರವೇರುವ ಕಾಲ ಸನ್ನಿಹಿತವಾಗಿದೆ! ಇವೆಲ್ಲವೂ ನಮ್ಮ ಸಂಕಲ್ಪ, ಇಚ್ಛೆಗಳಿಂದಲೇ ಜರುಗಿವೆ. ಮಗು, ನೀನು ಸನ್ಯಾಸಿಯಾಗಿ, ಪಾಷಂಡಿಗಳನ್ನು ಖಂಡಿಸಿ, ನಮ್ಮ ಪರಮಸಿದ್ಧಾಂತವನ್ನು ಎಲ್ಲ ಕಂಟಕಗಳಿಂದ ದೂರ ಮಾಡಿ ರಕ್ಷಿಸಿ, ವಾದಿದಿಗ್ವಿಜಯ, ಗ್ರಂಥರಚನೆ, ಪಾಠಪ್ರವಚನ, ತತ್ತ-ಧರ್ಮಪ್ರಸಾರ, ಸಜ್ಜನೋದ್ದಾರ, ಲೋಕಕಲ್ಯಾಣಗಳನ್ನು ಮಾಡಬೇಕಪ್ಪಾ, ಜಾಗೃತನಾಗು, ನೀನಾರೆಂಬುದನ್ನು ಅರಿತುಕೋ ಕುಮಾರ, ನೀನೀಗ ಬ್ರಹ್ಮಣ್ಯತೀರ್ಥರ ಆಶಯದಂತೆ ಪರಮಹಂಸಾಶ್ರಮವನ್ನು ಸ್ವೀಕರಿಸು, ನಿನ್ನ ಅವತಾರಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸು! ನಾವು ಸದಾ ನಿನ್ನಲ್ಲಿ ಸನ್ನಿಹಿತರಾಗಿದ್ದು ಈ ಮಹತ್ಕಾರ್ಯವನ್ನು ಮಾಡಿಸಿ, ನಿನಗೆ ಅಜರಾಮರ ಕೀರ್ತಿಯನ್ನು ತಂದೀಯುತ್ತೇವೆ. ನಿನ್ನಿಂದ ಭಾಗವತಧರ್ಮ ಪ್ರಸಾರವು ಅಖಂಡವಾಗಿ ನಡೆದು, ಭರತವರ್ಷದಲ್ಲಿ ಮತ್ತೊಮ್ಮೆ ಆಸ್ತಿಕಮತವು ನೆಲೆ ನಿಲ್ಲಬೇಕಾಗಿದೆ. ಕೇಳು, ಕುಮಾರ! ಈ ಕಾರ್ಯನಿರ್ವಹಣೆಯು ಯಶಸ್ವಿಯಾಗಲು ನಿನಗೆ ನಮ್ಮ ಹೆಸರನ್ನೇ ಇಡಲು ಬ್ರಹ್ಮಣ್ಯತೀರ್ಥರಿಗೆ ಪ್ರೇರಣೆ ಮಾಡಿದ್ದೇವೆ. ನಮ್ಮ ಹೆಸರಿನಿಂದ ಲೋಕಕಲ್ಯಾಣ ಮಾಡಿ, ಸುಜೀವಿಗಳನ್ನು ಉದ್ದರಿಸು. ಬ್ರಹ್ಮಣ್ಯತೀರ್ಥರ ಅಪ್ಪಣೆಯಂತ ವರ್ತಿಸು, ಮತ್ತೆ, ನಿನಗೆ ಜಯವಾಗಲಿ” ಎಂದು ಉಪದೇಶಿಸಿ ಭಗವಾನ್ ವೇದವ್ಯಾಸದೇವರು ಕಣ್ಮರೆಯಾದರು.
ಶ್ರೀವೇದವ್ಯಾಸದೇವರ ಭವ್ಯಸ್ವರೂಪದರ್ಶನಜನಿತಾನಂದಮಗ್ನನಾಗಿದ್ದ ಯತಿರಾಜನಿಗೆ ಭಗವಾನರು ಅದೃಶ್ಯರಾದೊಡನ ಅದಾವುದೋ ಒಂದು ಲೋಕದಿಂದ ಧರೆಗಿಳಿದು ಬಂದಂತಾಯಿತು. ಪಕ್ಕನೆ ಕಣ್ಣು ತೆರೆದು ಇದೇನು ಕನಸೋ, ನನಸೋ ಎಂದು ಅಚ್ಚರಿಗೊಂಡನು. ಆಗವನು “ಓಹ್, ನಾನಂಥ ಭಾಗ್ಯಶಾಲಿ! ಷದ್ಗುಣೈಶ್ವರ್ಯಸಂಪನ್ನರಾದ ಸಾಕ್ಷಾತ್ ವೇದವ್ಯಾಸದೇವ ದರ್ಶನವಿತ್ತು ನನ್ನ ಅವತಾರರಹಸ್ಯವನ್ನೂ, ಕರ್ತವ್ಯವನ್ನೂ ಬೋಧಿಸಿದರಲ್ಲ! ತಮ್ಮ ಭಕ್ತರಲ್ಲಿ ಆ ಮಹನೀಯರಿಗೆ ಅದೆಷ್ಟು ವಾತ್ಸಲ್ಯ! ತಮ್ಮ ಪರಮಸಿದ್ಧಾಂತವನ್ನು ಧರೆಯೊಳಗೆ ಸುಭದ್ರಗೊಳಿಸುವ ಗುರುತರ ಹೊಣೆಯನ್ನು ನನಗೆ ವಹಿಸಿಕೊಟ್ಟರಲ್ಲ!! ನಾನೇ ಧನ್ಯ” ಎಂದು ಉದ್ಗರಿಸಿದನು.
ಯತಿರಾಜನಿಗೆ ಅದುವರೆಗೆ ಕವಿದಿದ್ದ ಕತ್ತಲು ಪರಿಹಾರವಾಗಿ ದಿವ್ಯಪ್ರಕಾಶವು ಕಂಡುಬಂದು ಮನಸ್ಸು ನಿಚ್ಚಳವಾಯಿತು. ಭಗವಾನ್ ವೇದವ್ಯಾಸದೇವರ ಪವಿತ್ರಕರಸ್ಪರ್ಶದಿಂದ ತನ್ನ ಸ್ವರೂಪದ ಮೇಲೆ ಮುಸುಕಿದ್ದ ಮಾಯೆಯ ತೆರೆಯು ಸರಿದು ಸ್ವರೂಪದರ್ಶನವಾಯಿತು! ಬ್ರಹ್ಮ ದೇವರ ಶಾಪ, ಪ್ರಹ್ಲಾದಾವತಾರಾದಿ ಸಮಸ್ತ ಘಟನೆಗಳೂ ಒಂದಾದ ಮೇಲೊಂದರಂತೆ ಸಮಸ್ತ ವಿಚಾರಗಳೂ ಅವನ ಹೃದಯಪಟಲದಲ್ಲಿ ಸ್ಪಷ್ಟವಾಗಿ ಒಡಮೂಡಿ ಯವಾದಂತಾಯಿತು!
ಯತಿರಾಜನ ಚಿಂತೆ-ಕಳವಳಗಳೆಲ್ಲವೂ ದೂರವಾಯಿತು. ಮನದಲ್ಲಿ ಆನಂದದ ಹೊನಲು ಹರಿಯಹತ್ತಿತು. ಅವನ ನರನಾಡಿಗಳಲ್ಲಿ ಅದಾವುದೋ ಒಂದು ಮಹಾಶಕ್ತಿ ಪ್ರವಹಿಸಿದಂತಾಗಿ ನೂತನೋತ್ತಾಹವುಂಟಾಯಿತು. ಶ್ರೀವೇದವ್ಯಾಸದೇವರ ಆಜ್ಞೆಯಂತೆ ಗುರುಗಳ ಮನೋಕಾಮನೆಗಳನ್ನು ಪೂರ್ಣಮಾಡಿ ಶ್ರೀಹರಿಸೇವೆ ಮಾಡಲು ಯತಿರಾಜನು ಕೃತಸಂಕಲ್ಪವಾಗಿ, ಸಂತೋಷ - ಸಡಗರದಿಂದ ತಾನು ಹಿಂದೆ ಬಂದ ದಾರಿಯಲ್ಲಿಯೇ ಹಿಂದಿರುಗಿ ಅಟ್ಟೂರಿನ ಮಠಕ್ಕೆ ಕಾರ್ಯಾಂತರದಿಂದ ಹೊರಗೆ ಹೋಗಿಬಂದವನಂತೆ ಬಂದು ಸೇರಿದನು.
ಇತ್ತ ಬ್ರಹ್ಮಣ್ಯತೀರ್ಥರು ಚಿಂತಾಕ್ರಾಂತನಾಗಿದ್ದಯತಿರಾಜನನ್ನು ಕಾಣದೆ ಚಿಂತೆಯಿಂದ ಚಡಪಡಿಸಹತ್ತಿದರು. ಮಠದಲ್ಲೆಲ್ಲಾ ಹುಡುಕಿಸಿದರು. ಊರಿನಲ್ಲಿ ಹುಡುಕಿ ಕರೆತರಲು ಸೇವಕರನ್ನು ಅಟ್ಟಿದರು. ಮಠದ ಸೇವಕರು ಅಟ್ಟೂರಿನಲ್ಲಿ ಎಲ್ಲ ಕಡೆ ಹುಡುಕಿ ಯತಿರಾಜನನ್ನು ಎಲ್ಲಿಯೂ ಕಾಣದೆ ಆ ವಿಚಾರವನ್ನು ಗುರುಗಳಿಗೆ ತಿಳಿಸಿದರು. ಯತಿರಾಜನು ಎಲ್ಲಿಗೆ ಹೋದನೆಂದು ತಿಳಿಯದೆ ಬ್ರಹ್ಮಣ್ಯತೀರ್ಥರು ವ್ಯಾಕುಲಗೊಂಡು ಅತ್ತಿಂದಿತ್ತ ಶತಪಥ ತಿರುಗಹತ್ತಿದರು.
ಅದೇ ಸಮಯದಲ್ಲಿ ಮಠದ ವಿದ್ಯಾರ್ಥಿಯೊಬ್ಬನು ಧಾವಿಸಿ ಬಂದು “ಮಹಾಸ್ವಾಮಿ, ಯತಿರಾಜ ಬರುತ್ತಿದ್ದಾನೆ" ಎಂದು ಶ್ರೀಗಳವರಲ್ಲಿ ಅರಿಕೆ ಮಾಡಿದ. ಅದನ್ನು ಕೇಳಿ ಗುರುಗಳಿಗೆ ಅಮೃತಪ್ರಾಶನ ಮಾಡಿದಂತಾಯಿತು. ಪ್ರಿಯಶಿಷ್ಯನನ್ನು ಕಾಣಲು ತವಕಗೊಂಡು ಹೊರಗೆ ಧಾವಿಸಿ, ಬರುತ್ತಿರುವ ಯತಿರಾಜನನ್ನು ಅವಲೋಕಿಸಿದರು. ಯತಿರಾಜನ ಮುಖವು ಅಲೌಕಿಕ ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಹರ್ಷಭರಿತನಾಗಿದ್ದಾನೆ. ನಗೆಮುಖದಿಂದ, ಉತ್ಸಾಹದಿಂದ ತಮ್ಮತ್ತಲೇ ಧಾವಿಸಿ ಬರುತ್ತಿರುವ ಯತಿರಾಜನನ್ನು ಬ್ರಹ್ಮಣ್ಯತೀರ್ಥರು ಭರದಿಂದಪ್ಪಿ ತಲೆಯನ್ನು ನೆರವೇರಿಸುತ್ತಾ, “ಮಗು, ಎಲ್ಲಿಗೆ ಹೊರಟುಹೋದೆಯಪ್ಪಾ? ನಿನ್ನನ್ನು ಕಾಣದೆ ನಾವೆಷ್ಟು ಕಳವಳಗೊಂಡಿದ್ದೆವೋ ಗೊತ್ತೆ? ಬಾ ಯತಿರಾಜ” ಎಂದು ಅವನನ್ನು ಮತ್ತೆ ಅಪ್ಪಿದರು.
ಯತಿರಾಜನು ಗುರುಗಳು ತನ್ನಲ್ಲಿಟ್ಟಿರುವ ಪ್ರೀತಿ, ವಾತ್ಸಲ್ಯ, ತಾನು ಕಾಣದಾದಾಗ ಅವರು ಅನುಭವಿಸಿದ ದುಃಖವನ್ನು ಊಹಿಸಿದಾಗ ಅವನ ಕಣ್ಣಿನಲ್ಲಿಯೂ ನೀರು ಮಿಡಿಯಿತು. “ಕ್ಷಮಿಸಿ ಗುರುದೇವ' ಎಂದು ಹೇಳಿ ಅವರೊಡನೆ ಶ್ರೀಮಠಕ್ಕೆ ಬಂದನು. ಬ್ರಹ್ಮಣ್ಯತೀರ್ಥರು ತಮ್ಮ ಏಕಾಂತ ಮಂದಿರದಲ್ಲಿ ಅವನೊಡನೆ ಕುಳಿತು “ಕುಮಾರ! ನಾವು ಮಧ್ಯಾಹ್ನ ನಿನಗೆ ಹೇಳಿದ ವಿಚಾರದಿಂದ ನಿನ್ನ ಮನಸ್ಸಿಗೆ ನೋವಾಯಿತೇ? ಬೇಜಾರಾಯಿತೇನಪ್ಪಾ?” ಎಂದು ಪ್ರಶ್ನಿಸಿದರು.
ಯತಿರಾಜನು “ನನ್ನನ್ನು ಕ್ಷಮಿಸಿ ಗುರುವರ್ಯ, ತಮ್ಮ ವಚನವನ್ನಾಲಿಸಿ ಕಳವಳಗೊಂಡು ಬಾಲ್ಯಚಾಪಲ್ಯದಿಂದ ಹೆದರಿ ಏಕಾಂತವನ್ನರಸಿ ಹೊರಟುಬಿಟ್ಟೆನು. ಈಗ ನನ್ನ ಮನಸ್ಸು ಸಿಮಿತಕ್ಕೆ ಬಂದಿದೆ. ತಮ್ಮ ಆಜ್ಞೆಯಂತೆ ವರ್ತಿಸುತ್ತೇನೆ” ಎಂದು ವಿಜ್ಞಾಪಿಸಿ, ತಾನು ಹೊರಟಲಾಗಾಯಿತು ನಡೆದ ಸಮಸ್ತ ವೃತ್ತಾಂತವನ್ನೂ ನಿವೇದಿಸಿದನು.
ಯತಿರಾಜನ ಮಾತನ್ನು ಕೇಳಿ ಬ್ರಹ್ಮಣ್ಯತೀರ್ಥರಿಗೆ ಆಶ್ಚರ್ಯ, ಆನಂದಗಳು ಏಕಕಾಲದಲ್ಲಿ ಉಂಟಾದವು. ಅವರ ಕಣ್ಣಿನಿಂದ ಆನಂದಾಶ್ರು ಹರಿಯಿತು. ಗದ್ಗದ ಕಂಠದಿಂದ “ಕುಮಾರ, ಭಗವಾನ್ ವೇದವ್ಯಾಸರ ದರ್ಶನ ಪಡೆದ ನೀನು ಪರಮಧನ್ಯ, ಭಾಗ್ಯಶಾಲಿ! ನಿನಗೆ ಕರ್ತವ್ಯವನ್ನು ಬೋಧಿಸಿ, ನಮ್ಮ ಮನೋರಥವು ಸಫಲವಾಗುವಂತೆ ಮಾಡಿದ್ದಾರೆ. ನಿಜವಾಗಿ ನಾವಿಬ್ಬರೂ ಪುಣ್ಯಶಾಲಿಗಳು!” ಎಂದು ಹೇಳಿದರು.
ಅಂದು ಸಾಯಂದೀಪಾರಾಧನಾದಿಗಳು ಮುಗಿದ ಮೇಲೆ ಯತಿರಾಜನೊಡನೆ ಅನೇಕ ವಿಷಯಗಳನ್ನು ಚರ್ಚಿಸಿ, “ವತ್ಸ, ನಮಗೀಗ ಪರಮಾನಂದವಾಗಿದೆ. ನಮ್ಮ ಬಹುದಿನದ ತಪಸ್ಸು ಇಂದಿಗೆ ಫಲಿಸಿದಂತಾಯಿತು. ಆದಷ್ಟು ಬೇಗ ನಿನಗೆ ಯತ್ನಾಶ್ರಮವನ್ನು ಕೊಟ್ಟು, ನಮ್ಮ ಕರ್ತವ್ಯವನ್ನು ಪೂರೈಸುತ್ತೇವೆ” ಎಂದು ಹೇಳಲು ಯತಿರಾಜನು ವಿನೀತನಾ “ಮಹಾಜ್ಞಾ” ಎಂದು ನಿವೇದಿಸಿದನು. ಅನಂತರ ಗುರು-ಶಿಷ್ಯರು ವಿಶ್ರಾಂತಿಗೆ ತೆರಳಿದರು.
ಇಲ್ಲಿ ಕೆಲ ವಿಚಾರಗಳನ್ನು ವಿವೇಚಿಸುವುದು ಉಚಿತವೆಂದು ಭಾವಿಸುತ್ತೇವೆ.
ಯತಿರಾಜನು ಶ್ರೀವೇದವ್ಯಾಸದೇವರ ಅನುಗ್ರಹದಿಂದ ಜ್ಞಾನಪ್ರಸಾರ, ಲೋಕಕಲ್ಯಾಣಗಳಿಗಾಗಿಯೇ ಅವತರಿ ಸಾಕ್ಷಾತ್ ಪ್ರಹ್ಲಾದರಾಜ! ಶ್ರೀವಾಯುದೇವರು ಸದಾ ಅವನಲ್ಲಿ ವಿಶೇಷ ಸನ್ನಿಧಾನದಿಂದ ರಾಜಿಸುತ್ತಿರುವುದರಿಂದ ಅವು ಯುಗಯುಗಗಳಿಂದ ಮಹಾಜ್ಞಾನಿಯಾಗಿದ್ದಾನೆ. ಶ್ರೀಬ್ರಹ್ಮಣ್ಯತೀರ್ಥರ ಲಾಲನೆ-ಪೋಷಣೆಯಲ್ಲಿ, ಪವಿತ್ರ ವಾತಾವರಣದಲ್ಲಿ ಬೆಳೆದ ಮಹಾನುಭಾವ. ಇಂಥವನು ಶೋಕ-ಮೋಹ-ಭಯ-ಚಿಂತಾಕುಲಿತನಾಗಿ ಸಾಮಾನ್ಯ ಮಾನವನಂತೆ ಗುರುಗಳಿಗೂ ತಿಳಿಸದೆ ಮಠವನ್ನು ತ್ಯಜಿಸಿ ಹೊರಟುಹೋದುದು. ಸನ್ಯಾಸಿಯಾಗಲು ಹೆದರಿದ್ದು ಸಮಂಜಸವೇ? ಭಾವಿ ಜಗದ್ಗುರುವಾಗಿ ಲೋಕಕಲ್ಯಾಣ ಮಾಡಲಿರುವ ಯತಿರಾಜನ ಭವ್ಯಜೀವನದಲ್ಲಿ ಈ ಪ್ರಕರಣವೊಂದು ಕಳಂಕವಾಗಿ ಉಳಿಯುವುದಿಲ್ಲವೇ? ಎಂಬ ಸಂದೇಹವುಂಟಾಗುವುದು ಸ್ವಾಭಾವಿಕವಾಗಿದೆ. ಆದುದರಿಂದ ಈ ವಿಚಾರವನ್ನು ಇಲ್ಲಿ ಸ್ವಲ್ಪ ವಿವೇಚಿಸುವುದು ಅಪ್ರಕೃತವಾಗಲಾರದು.
“ಮಾನುಷಂ ಮಾನುಷೋ ಧರ್ಮೋ ದೇವಾ ಅಪಿ ಹಿ ಮಾನುವೇ 1 ಮನುಷ್ಯವತ್ಸವರ್ತಂತೇ ನೈವೇಶ್ವರ್ಯ ಪ್ರಕಾಶನಃ ||” - ದೇವತೆಗಳು ಭೂಮಿಯಲ್ಲಿ ಮನುಷ್ಯರಾಗಿ ಅವತರಿಸಿದಾಗ ಮಾನವರಂತೆಯೇ ವರ್ತಿಸುವರು. ತಮ್ಮ ಧೀಮಂತಿಕೆ, ಶ್ರೀಮಂತಿಕೆ ಮುಂತಾದುವನ್ನು ಪ್ರಕಟಗೊಳಿಸುವುದಿಲ್ಲ - ಎಂದು ಪ್ರಮಾಣವಿದೆ.
“ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ | ತಥಾ ಪ್ರವರ್ತನಂ ಭವೇದಿ ವೌಕಸಾಂ ಸಮುದ್ಧವೇ 11' - ದೇವತೆಗಳು ಭೂಮಿಯಲ್ಲಿ ಅವತರಿಸಿದಾಗ, ಯಾವ ಯುಗ, ಯಾವ ರೂಪ, ಯಾವ ವಯಸ್ಸು, ಯಾವ ಕುಲದಲ್ಲಿ ಜನಿಸುತ್ತಾರೋ ಅದಕ್ಕೆ ತಕ್ಕಂತೆ ಆಯಾ ಕುಲ, ಯುಗ, ವಯಸ್ಸುಗಳಿಗೆ ಅನುರೂಪವಾಗಿ ನಡೆಯುವುದು ಅವರಿಗೆ ಸ್ವಧರ್ಮವೆಂದೂ, ಅದೇ ತನಗೆ ಪ್ರೀತಿಕರವಾದ ಧರ್ಮವೆಂದೂ ಪರಮಾತ್ಮನ ಅನುಶಾಸನವಿದೆ. ಅಂತೆಯೇ ಲೋಕಶಿಕ್ಷಾರ್ಥವಾಗಿ, ಯಾವ ವಿಧಿ-ನಿಯಮಗಳಿಗೆ ಬದನಲ್ಲದೆ, ಸರ್ವಸ್ವತಂತ್ರನೂ, ಸರ್ವೋತ್ತಮನೂ ಆಗಿದ್ದರೂ ಶ್ರೀಜನಾರ್ದನನು ಅಧರ್ಮ ಕರ್ಮಗಳನ್ನು ದಹಿಸುವ ಅಗ್ನಿಯಾಗಿದ್ದರೂ, ಯಾದವಕುಲದಲ್ಲಿ ಶ್ರೀಕೃಷ್ಣರೂಪದಿಂದ ಅವತರಿಸಿದಾಗ ಅದಕ್ಕೆ ತಕ್ಕಂತೆ ನಟನೆ ಮಾಡಿ ದೇವತೆಗಳಿಗೆ ಮಾರ್ಗದರ್ಶನ ಮಾಡಿದ್ದಾನೆ - ಎಂದು ಶ್ರೀಮಧ್ವಾಚಾರ್ಯರು ಶ್ರೀಮಹಾಭಾರತತಾತ್ಪರ್ಯನಿರ್ಣಯದಲ್ಲಿ ಅಪ್ಪಣೆ ಕೊಡಿಸಿದ್ದಾರೆ.
ಇದೂ ಅಲ್ಲದೆ - “ಧರ್ಮೋಹಿ ಸರ್ವವಿರುಷಾಮಪಿ ದೇವತಾನಾಂ | ಪ್ರಾಪ್ತ ನರೇಶು ಜನನೇ ನರವತವೃತ್ತಿ: 1 ಎಂಬ ಪ್ರಮಾಣವು ಜ್ಞಾನಿಗಳಾಗಿ ಎಲ್ಲವನ್ನೂ ಬಲ್ಲವರಾಗಿದ್ದರೂ ದೇವತೆಗಳು ನರಜನ್ಮದಲ್ಲಿ ಜನಿಸಿದಾಗ ಮಾನವರಂತೆಯೇ ನಡೆಯಬೇಕು - ಎಂದು ನಿರೂಪಿಸುವುದು, ಆದುದರಿಂದ ಭಗವಂತನ ಆಜ್ಞೆ ಮಾರ್ಗದರ್ಶನ ಮತ್ತು ಮೇಲಿನ ಪ್ರಮಾಣಗಳೂ ಇದನ್ನೇ ಸಮರ್ಥಿಸುವುವು. ಯದ್ಯಪಿ ಯತಿರಾಜನು ಜ್ಞಾನ-ಭಕ್ತಿ-ವೈರಾಗ್ಯಪೂರ್ಣನಾದ ಪ್ರಹ್ಲಾದನ ಅವತಾರಿಯೇ ಆಗಿದ್ದರೂ, ತಾನು ಯತಿಯಾಗಿ ಜ್ಞಾನಪ್ರಸಾರದ್ವಾರಾ ಭಗವಂತನನ್ನು ಸೇವಿಸಲೆಂದೇ ಜನಿಸಿದ್ದರೂ, ಜ್ಞಾನಿಯಾದ ಅವನಿಗೆ ಶೋಕ-ಮೋಹ-ಚಿಂತೆ-ಭಯಾದಿಗಳಿಲ್ಲದಿದ್ದರೂ ಈಗ ಮಾನವನಾಗಿ ಜನಿಸಿರುವುದರಿಂದ ಇನ್ನೂ ಬಾಲ್ಯಾವಸ್ಥೆ ಯಲ್ಲಿರುವುದರಿಂದ ಸಾಮಾನ್ಯ ಮಾನವನಂತೆ ವರ್ತಿಸುವುದೇ ಶ್ರೀಹರಿಗೆ ಪ್ರೀತಿಕರವಾದ ಧರ್ಮವೆಂದು ತಿಳಿದು ಸಾಮಾನ್ಯ ಮಾನವ ಬಾಲಕನು ಆ ಸಂದರ್ಭದಲ್ಲಿ ಹೇಗೆ ನಡೆಯಬೇಕಾಗಿದ್ದಿತೋ ಅದರಂತೆ ನಡೆದಿದ್ದಾನೆ. ಆದಕಾರಣ, ಮುಂದೆ ಶ್ರೀವ್ಯಾಸರಾಜರಾಗಿ ಜಗನ್ಮಾನ್ಯನಾಗಲಿರುವ ಯತಿರಾಜನು ಸರಿಯಾಗಿಯೇ ವರ್ತಿಸಿರುವುದರಿಂದ ಅವನ ಭವ್ಯಜೀವನದಲ್ಲಿ ಯಾವುದೇ ಬಗೆಯಾದ ಕಳಂಕಾದಿಗಳಿಗೆ ಅವಕಾಶವಿಲ್ಲವೆಂದು ತಿಳಿಯಬೇಕು.
ಶ್ರೀವ್ಯಾಸರಾಜರಾಗಲಿರುವ ಯತಿರಾಜ ಮತ್ತು ಅವರ ಮುಂದಿನ ಅವತಾರವಾದ ಶ್ರೀರಾಘವೇಂದ್ರಸ್ವಾಮಿಗಳವರ ಪೂರ್ವಾಶ್ರಮದ ವೆಂಕಟನಾಥರ ಜೀವನದಲ್ಲಿ ಒಂದೇ ಬಗೆಯಾದ ಅನೇಕ ಪ್ರಕರಣಗಳು ಜರುಗಿರುವುದನ್ನು ನಾವು ಮನಗಾಣಬಹುದಾಗಿದೆ. ಪ್ರಕೃತ ಸಂದರ್ಭಕ್ಕೆ ಸಂಬಂಧಿಸಿದಂತೆ ಒಂದೇ ಬಗೆಯಾಗಿ ಜರುಗಿದ ಪ್ರಕರಣವೊಂದನ್ನು ಇಲ್ಲಿ ನಿರೂಪಿಸುವುದು ಯುಕ್ತವಾಗಿದೆ.
ನಮ್ಮಲ್ಲಿ ಸನ್ಯಾಸ ಸ್ವೀಕರಿಸಲು ಪೂಜ್ಯರಾದವರು, ದೊಡ್ಡವರು ಅಪ್ಪಣೆ ಮಾಡಬೇಕು. ಪಾಜ್ಯರಾದವರ ಆಜ್ಞೆ ಪಡೆದು ಪರಮಹಂಸಾಶ್ರಮವನ್ನು ಸ್ವೀಕರಿಸಬೇಕೆಂಬ ಪದ್ದತಿ, ಸಂಪ್ರದಾಯಗಳಿವೆ.
ಶ್ರೀಬ್ರಹ್ಮಣ್ಯತೀರ್ಥರು “ಯತಿರಾಜ, ನೀನು ಪರಮಹಂಸಾಶ್ರಮವನ್ನು ಸ್ವೀಕರಿಸಿ, ನನ್ನ ಶಿಷ್ಯನಾಗಿ ಮಹಾಸಂಸ್ಥಾನಾಧಿಪತಿಯಾಗಬೇಕು” ಎಂದು ಅಪ್ಪಣೆ ಮಾಡಿದರು. ಯತಿರಾಜನಿಗೆ ಕಳವಳವಾಯಿತು. “ಇಲ್ಲಿದ್ದರೆ ಗುರುಗಳು ಸನ್ಯಾಸ ಕೊಡುತ್ತಾರೆ. ನಾನು ಸನ್ಯಾಸಿಯಾಗಲಿಚ್ಛಿಸುವುದಿಲ್ಲ. ಆದ್ದರಿಂದ ಇಲ್ಲಿಂದ ಹೊರಟುಬಿಡಬೇಕು” ಎಂದು ಯತಿರಾಜನು ಮಠದಿಂದ ಹೊರಟುಬಿಟ್ಟಂತೆ ಭಾಸವಾಗುತ್ತದೆ.
ಬ್ರಹ್ಮಣ್ಯತೀರ್ಥರು ಜ್ಞಾನಿಗಳು, ಪಾಜ್ಯರು, ಅವರು ಸನ್ಯಾಸವನ್ನು ಸ್ವೀಕರಿಸುವಂತೆ ಯತಿರಾಜನಿಗೆ ಆಜ್ಞಾಪಿಸಿದರು. ಅದು ಯುಕ್ತವೇ ಆಗಿದೆ. ಹೀಗಿದ್ದರೂ, ಯತಿರಾಜ ಏಕೆ ಅವರ ಮಾತಿನಂತೆ ನಡೆಯದೆ ಮಠವನ್ನು ತ್ಯಜಿಸಿ ಹೊರಟ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ. ಅದಕ್ಕೆ ಸಮಾಧಾನವನ್ನು ಹೇಳುವುದು ಅವಶ್ಯಕವಾಗಿದೆ.
ಯದ್ಧಪಿ ಶ್ರೀಬ್ರಹ್ಮಣ್ಯತೀರ್ಥರು ರಾಜ್ಯರು, ಸೂರ್ಯಾಂಶಸಂಭೂತರಾದ ಜ್ಞಾನಿಗಳು. ದೊಡ್ಡಮಾದ ಅವರ ಆಜ್ಞೆಯನ್ನು ಮೀರಿ ಯತಿರಾಜನು ಮಠವನ್ನು ಬಿಟ್ಟುಹೋದುದು ಸರಿಯಲ್ಲವೆಂದು ಮೇಲ್ನೋಟಕ್ಕೆ ಕಂಡುಬಂದರೂ ಯತಿರಾಜನು ಮಠವನ್ನು ಬಿಟ್ಟುಹೋದುದಕ್ಕೆ ಕಾರಣವಿಲ್ಲದಿಲ್ಲ. ಬ್ರಹ್ಮಣ್ಯತೀರ್ಥರು ಸೂರ್ಯಾಂಶಸಂಭೂತರಾದ ಪೂಜ್ಯರಾದರೂ, ಪ್ರಹ್ಲಾದಾಂಶನಾದ ಯತಿರಾಜನಲ್ಲಿ ಸರ್ವದಾ ಸಾಕ್ಷಾತ್ ವಾಯುದೇವರು ವಿರಾಜಿಸಿರುವುದರಿಂದ ಅವನಿಗೆ ಸನ್ಯಾಸವನ್ನು ಸ್ವೀಕರಿಸುವಂತೆ ಶ್ರೀವಾಯುದೇವರಿಗಿಂತ ಶ್ರೇಷ್ಠರಾದವರೇ ಆಜ್ಞೆ ಮಾಡಬೇಕಲ್ಲವೇ? ಸನ್ಯಾಸಿಯಾಗಲೆಂದೇ ಅವತರಿಸಿದ್ದ ಯತಿರಾಜನು ಇದನ್ನು ಬಲ್ಲವನಾದ್ದರಿಂದ ಅವನು ಮೇಲ್ನೋಟಕ್ಕೆ ಸಾಮಾನ್ಯ ಮಾನವನಂತೆ ಸನ್ಯಾಸಕ್ಕೆ ಹೆದರಿ ಮಠ ಬಿಟ್ಟು ಹೊರಟಂತೆ ಕಂಡುಬಂದರೂ ಅವನು ಸನ್ಯಾಸಕ್ಕೆ ಭಗವಂತನ ಆಜ್ಞೆಯನ್ನು ಪಡೆಯಲೆಂದೇ ಮಠವನ್ನು ಬಿಟ್ಟು ಹೋದನೆಂದು ತಿಳಿಯುವುದೇ ಯುಕ್ತವಾಗಿದೆ. ಮುಂದಿನ ಘಟನೆಯೂ ಇದನ್ನು ಸಮರ್ಥಿಸುವುದು. ಯತಿರಾಜನು ಮಠ ಬಿಟ್ಟು ಹೊರಟ ಮೇಲೆ ವಿಶ್ರಾಂತಿಗಾಗಿ ಮರದ ಬುಡದಲ್ಲಿ ಕುಳಿತಾಗ ಶ್ರೀನಾರಾಯಣಾಮಾರಿಗಳಾದ ಪರಮಹಂಸ ಕುಲಸೇವರಾದ ಶ್ರೀವೇದವ್ಯಾಸರು ಅವನಿಗೆ ಮೈದೋರಿ ಅವನ ಅವತಾರ ರಹಸ್ಯವನ್ನು ತಿಳಿಸಿ ಪರಮಹಂಸಾಶ್ರಮ- ವನ್ನು ಸ್ವೀಕರಿಸುವಂತೆ ಆಜ್ಞಾಪಿಸಿದರು. ತಾನು ಮಠದಿಂದ ಹೊರಟ ಉದ್ದಿಶ್ಯ ಸಫಲವಾದ್ದರಿಂದ ಯತಿರಾಜನು ಶ್ರೀಮಠಕ್ಕೆ ಮರಳಿ ಬಂದು ಶ್ರೀಬ್ರಹ್ಮಣ್ಯತೀರ್ಥರಲ್ಲಿ ಸನ್ಯಾಸ ಸ್ವೀಕರಿಸಲು ತನ್ನ ಸಮ್ಮತಿಯನ್ನು ತಿಳಿಸಿದನು. ಈ ಪ್ರಕರಣದ ಎಲ್ಲ ಸಂದೇಹಗಳು ಮೇಲಿನ ವಿವರಣೆಯಿಂದ ಪರಿಹಾರವಾಗುವುದೆಂದು ಧೈರ್ಯವಾಗಿ ಹೇಳಬಹುದು.
ಇಂತಹುದೇ ಒಂದು ಪ್ರಕರಣವು ಶ್ರೀರಾಘವೇಂದ್ರಸ್ವಾಮಿಗಳ ಜೀವನದಲ್ಲಿಯೂ ಕಂಡುಬರುತ್ತದೆ.
ಜ್ಞಾನಿನಾಯಕರಾದ ಶ್ರೀಸುಧೀಂದ್ರತೀರ್ಥರು ಶ್ರೀಮೂಲರಾಮ-ಶ್ರೀವೇದವ್ಯಾಸದೇವರು ಮತ್ತು ಶ್ರೀಮದಾಚಾರ್ಯರು ಸ್ವಪ್ನದಲ್ಲಿ ವೆಂಕಟನಾಥನಿಗೆ ಆಶ್ರಮವಿತ್ತು, ಶ್ರೀರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಬೇಕು'' ಎಂದು ಆಜ್ಞಾಪಿಸಿದ್ದಂತೆ ವೆಂಕಟನಾಥಾಚಾರ್ಯರಿಗೆ ಸನ್ಯಾಸ ಸ್ವೀಕರಿಸಿ ನಮ್ಮ ಶಿಷ್ಯರಾಗಬೇಕು ಎಂದು ಆಜ್ಞಾಪಿಸಿದಾಗ ವೆಂಕಟನಾಥರು “ಬಾಲಾ ಭಾರ್ಯಾ ಬಾಲಕೋ ನೋಪನೀತಃ | ಬಾಲತ್ಥಾಹಂ ನಾತ್ರಮ ಮೇಸ್ತಿ ವಾಂಛಾ .... ನಿರ್ಬಂಧರ್ಗಮಿಸ್ವಾಮಿ ನೂನಂ" - ನನ್ನ ಪತ್ನಿ ಇನ್ನೂ ಸಣ್ಣವಳು, ಮುನ್ನ ಉಪನಯನ ಮಾಡಿಲ್ಲ ನಾನಿನ್ನೂ ಬಾಲಕನಾಗಿದ್ದೇನೆ, ನನಗೆ ಸನ್ಯಾಸದಲ್ಲಿ ಇಚ್ಛೆ ಇಲ್ಲ..... ನೀವು ಬಲಾತ್ಕರಿಸಿದರೆ ಕುಡಿತವ ಮಠವನ್ನು ತ್ಯಜಿಸಿ ಹೊರಟುಹೋಗುತ್ತೇನೆ" ಎಂದು ಸಾಮಾನ್ಯ ಮಾನವರಂತೆ ಹೇಳಿ ಮನೆಗೆ ಹೊರಟುಹೋಗುತ್ತಾರೆ. ಮನೆಗೆ ಹೋದಮೇಲೆ ಅವರಲ್ಲಿ ವೈಚಾರಿಕ ಕ್ರಾಂತಿಯುಂಟಾಗುತ್ತದೆ. ಗುರುಗಳು ಹೇಳಿದ ವಿಚಾರವನ್ನೇ ಯೋಚಿಸುತ್ತಾ ಚಿಂತಾಕ್ರಾಂತರಾಗಿ ಕುಳಿತಿದ್ದಾಗ ಬೆಳಗಿನ ಝಾವ ಸಾಕ್ಷಾತ್ ವಿದ್ಯಾಲಕ್ಷ್ಮಿಯು ಪ್ರತಕ್ಷಳಾಗಿ ವೆಂಕಟನಾಥರಿಗೆ ಅವರ ಅಮಾನ ರಹಸ್ಯವನ್ನು ಉಪದೇಶಿಸಿ, ಪರಮಹುಸಾಶ್ರಮವನ್ನು ಸ್ವೀಕರಿಸಬೇಕೆಂದು ಆಜ್ಞಾಪಿಸಿ, ತನ್ನ ಮಂತ್ರವನ್ನು ಉಪದೇಶಿಸಿ ಅಂತ ಹೊಂದುತ್ತಾಳೆ, ಕೂಡಲೇ ವೆಂಕಟನಾಥರ ವರ್ತನೆಯೇ ಬದಲಾಗುತ್ತದೆ. ಅದುವರೆಗೂ ಸನ್ಯಾಸ ಬೇಡವೆಂದು ಹೇಳುತ್ತಿದ್ದ ವೆಂಕಟನಾಥರು ವಿದ್ಯಾದೇವಿಯ ಉಪದೇಶವಾದ ಕೂಡಲೇ ತಾವಾಗಿ ಶ್ರೀಸುಧೀಂದ್ರತೀರ್ಥ- ರಲ್ಲಿಗೆ ಬಂದು ವಾಗೇವಿಯ ಉಪದೇಶಾದಿಗಳನ್ನು ಅರುಹಿ ಸನ್ಯಾಸವನ್ನು ಸ್ವೀಕರಿಸಲು ಸಮ್ಮತಿ ನೀಡುತ್ತಾರೆ!
ಯತಿರಾಜ-ವೆಂಕಟನಾಥರಿಬ್ಬರೂ ಮೊದಲು ಸನ್ಯಾಸಿಗಳಾಗಲು ಸಮ್ಮತಿಸದೆ ನಂತರ ಶ್ರೀವೇದವ್ಯಾಸದೇವರ ಉಪದೇಶದಿಂದ ಯತಿರಾಜನೂ, ವಿದ್ಯಾಲಕ್ಷ್ಮಿಯ ಉಪದೇಶದಿಂದ ವೆಂಕಟನಾಥರೂ ಪರಮಹಂಸಾಶ್ರಮವನ್ನು ಸ್ವೀಕರಿಸಲು ಒಪ್ಪಿ ಶ್ರೀವ್ಯಾಸತೀರ್ಥ-ಶ್ರೀರಾಘವೇಂದ್ರತೀರ್ಥರಾಗಿ ವೇದಾಂತಸಾಮ್ರಾಜ್ಯವನ್ನಾಳಿದ್ದು ಅವರವರ ಚರಿತ್ರೆಗಳಿಂದ ಸಷ್ಟವಾಗುವುದು. ಹೀಗೆ ಶ್ರೀವ್ಯಾಸರಾಜ-ರಾಘವೇಂದ್ರ ಅವತಾರಗಳಲ್ಲಿ ಒಂದೇ ಬಗೆಯಾದ ಆನೇಕ ಘಟನೆಗಳು ನಡೆದಿರುವುದು ಚರಿತ್ರೆಗಳಿಂದ ತಿಳಿದುಬರುತ್ತದೆ. ಈ ಒಂದು ಸಂದರ್ಭವು ಇವರಿಬ್ಬರೂ ಶ್ರೀವಾಯುದೇವರ ಸತತ ಸನ್ನಿಧಾನೋಪೇತವಾದ ಭಾಗಮಾಗ್ರೇಸರವಾದ ಶ್ರೀಪ್ರಹ್ಲಾದರಾಜರ ಅವತಾರವೆಂಬುವುದು ದೃಢವಾಗುತ್ತದೆ. ಇದನ್ನು ವಿಚಾರ ಮಾಡಿದಂತೆಲ್ಲಾ ಸಜ್ಜನರಿಗೆ ಪರಮಾನಂದುಂಟಾಗುವುದು ಅಚ್ಚರಿಯೇನಲ್ಲ.