
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೫. ಸಂನ್ಯಾಸ-ವೇದಾಂತಸಾಮ್ರಾಜ್ಯಾಭಿಷೇಕ
ಶ್ರೀಶಾಲಿವಾಹನ ಶಕೆ ೧೩೭೫ನೇ ಶ್ರೀಮುಖ ನಾಮ ಸಂವತ್ಸರದ (ಕ್ರಿಸ್ತಶಕ ೧೪೫೫) ಒಂದು ಮಂಗಳಕರವಾದ ದಿವಸ, ಅದ್ಧೂರಿನ ಶ್ರೀಮಠದಲ್ಲಿ ಅಪೂರ್ವ ಸಂಭ್ರಮ. ಷಾತ್ವಿಕ ಕುಲಭೂಷಣನೂ, ತಮ್ಮ ಮಬಂಧುವಾ ಆದ ಯತಿರಾಜನಿಗೆ ಶ್ರೀಬ್ರಹ್ಮಣ್ಯತೀರ್ಥ ಶ್ರೀಪಾದಂಗಳವರು ವೇದಾಂತಸಾಮ್ರಾಜ್ಯಾಭಿಷೇಕ ಮಾಡಲಿರುವ ವಿಚಾರ ತಿಳಿದು ಸಹಸ್ರಾರು ಜನ ಶಿಷ್ಯರು, ಭಕ್ತರು, ಧರ್ಮಾಭಿಮಾನಿಗಳು, ಪಂಡಿತರು ಅಟ್ಟೂರಿಗೆ ಬಂದಿದ್ದಾರೆ. ಶ್ರೀಬ್ರಹ್ಮಣ್ಯತೀರ್ಥರ ವಿಶೇಷ ಆಹ್ವಾನವಂತ ಯತಿರಾಜನ ತಂದೆ ತಾಯಿಗಳಾದ ರಾಮಾಚಾರ್ಯರು-ಲಕ್ಷ್ಮೀದೇವಿ ಮತ್ತು ಬಾಂಧವರೂ ಬಂದು ಪವಿತ್ರ ಸಮಾರಂಭದ ಭಾಗವಹಿಸಿದ್ದಾರೆ.
ಹಿಂದಿನ ದಿನ ಶ್ರೀಬ್ರಹ್ಮಣ್ಯತೀರ್ಥರು ಸರ್ವಜನರ ಸಮಕ್ಷಮ ಯತಿರಾಜನನ್ನು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿ, ಪರಮಹಂಸಾಶ್ರಮ ಸ್ವೀಕರಿಸಲು ಫಲಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದ್ದು, ಶ್ರೀಮಠದ ಪಂಡಿತರು, ಪುರೋಹಿತರು, ವೇದವಿದ್ಯಾವಿಶಾರದರು ಶ್ರೀಗಳವರ ಆಣತಿಯಂತೆ ಸನ್ಯಾಸ ಸ್ವೀಕಾರಾಂಗವಾದ ಎಲ್ಲ ವೈದಿಕ ವಿಧಿಗಳನ್ನೂ ಹವನ-ಹೋಮಾದಿಗಳನ್ನೂ ಯತಿರಾಜನಿಂದ ಪೂರೈಸಿದ್ದಾರೆ.
ಇಂದು ಯತಿರಾಜರು ವೈದಿಕ ವಿಧಿ-ಸಂಪ್ರದಾಯಗಳಂತ ಪರಮಹಂಸಾಶ್ರಮವನ್ನು ಸ್ವೀಕರಿಸಿ, ಕಾಷಾಯವ ದಂಡಕಮಂಡಲುಧಾರಿಯಾಗಿ ಪಾದುಕೆಗಳನ್ನು ಮೆಟ್ಟಿ ಶ್ರೀಮಠದ ಬಿರುದಾವಳಿಗಳು, ಮಂಗಳವಾದ್ಯ, ವೇದಘೋಷಗಳೊಡನೆ ಶ್ರೀಮಠಕ್ಕೆ ದಯಮಾಡಿಸಿದರು. ಬಾಲಸೂರ್ಯನಂತೆ ತೇಜಸ್ವಿಗಳಾದ ಬಾಲಯತಿಗಳನ್ನು ಕಂಡು ಸರ್ವರ ಕಣ್ಮನಗಳು ಪರಮಾನಂದದಿಂದ ತಣಿದವು. ಆಪಂಡಿತ ಪಾಮರರು ನೂತನ ಯತಿಗಳ ಜಯಜಯಕಾರ ಮಾಡಿದರು.
ಅನಂತಹ ಸಂಪ್ರದಾಯಾನುಸಾರವಾಗಿ ಬಾಲಯತಿಗಳು ಶ್ರೀಬ್ರಹ್ಮಣ್ಯತೀರ್ಥರಿಗೆ ಗುರುಪಾದಪೂಜೆ ಮಾಡಿ ನಮಸ್ಕರಿಸಿದರು. ಶ್ರೀಬ್ರಹ್ಮಣ್ಯಮುನಿಗಳು ಅವರಿಗೆ ಮಂತ್ರಮುದ್ರಾಧಾರಣೆ, ಗುರೂಪದೇಶ, ಪ್ರಣವ, ಹಂಸಮಂತ್ರಗಳು ಮತ್ತು ಸಕಲ ಮಹಾಮಂತ್ರಗಳನ್ನೂ ಉಪದೇಶ ಮಾಡಿ, ಮೊದಲೇ ಸಿದ್ಧಪಡಿಸಲಾಗಿದ್ದ ಅಲಂಕೃತ ಭದ್ರಾಸನದಲ್ಲಿನೂತನ ಯತಿಗಳನ್ನು ಮಂಡಿಸಿ, ಅವರ ಶಿರದ ಮೇಲೆ ಬಂಗಾರದ ತಟ್ಟೆಯಲ್ಲಿ ಶಾಲಿಗ್ರಾಮ, ಶ್ರೀರಾಮ-ಕೃಷ್ಣ-ವೇದವ್ಯಾಸ ಪ್ರತಿಮೆಗಳನ್ನಿಟ್ಟು ಪಂಚಾಮೃತಾಭಿಷೇಕ ಮಾಡಿ, ತರುವಾಯ ಪವಿತ್ರ ತೀರ್ಥಗಳಿಂದ ತರಿಸಿದ ಶುದ್ಧೋದಕ, ಮುತ್ತು-ನವರತ್ನಗಳನ್ನು ಶಂಖಗಳಲ್ಲಿ ತುಂಬಿ, ಮಂಗಳವಾದ್ಯಗಳು ಭೋರ್ಗರೆಯುತ್ತಿರಲು, ವೇದಘೋಷವಾಗುತ್ತಿರಲು, ಸಕಲ ಸಜ್ಜನರ ಹರ್ಷಧ್ವನಿಗೈಯ್ಯುತ್ತಿರಲು ಶಾಲಿವಾಹನ ಶಕೆ ೧೩೭೫ನೇ ಶ್ರೀಮುಖ ಸಂವತ್ತರದ ಶುಭದಿನದಂದು ಶ್ರೀಬ್ರಹ್ಮಣ್ಯತೀರ್ಥರು ತಮ್ಮ ಪ್ರಿಯಶಿಷ್ಯರಿಗೆ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕವನ್ನು ನೆರವೇರಿಸಿ, ಅವರಿಗೆ ಶ್ರೀವೇದವ್ಯಾಸದೇವರು ತಮ್ಮ ಹೆಸರನ್ನೇ ಇಡಬೇಕೆಂದು ಆಜ್ಞಾಪಿಸಿದ್ದಂತೆ ಶ್ರೀವೇದವ್ಯಾಸದೇವರೇ ಪ್ರಭವಾಗುಳ್ಳವ (ಶ್ರೀವ್ಯಾಸ ಏವ ರಾಜೋ ಯಸ್ಯಸ - ಶ್ರೀವ್ಯಾಸರಾಜ) ಎಂಬರ್ಥ ಸೂಚಕವಾದ “ಶ್ರೀವ್ಯಾಸರಾಜತೀರ್ಥರು” ಎಂದು ನಾಮಕರಣ ಮಾಡಿ ಆಶೀರ್ವದಿಸಿದರು.
ಉದಯಕಾಲೀನನಾದ, ಹೊಂಗಿರಣಗಳಿಂದ ಕಂಗೊಳಿಸುವ ಸೂರ್ಯನಂತೆ ವಿಲಕ್ಷಣ ತೇಜಸ್ವಿಗಳಾಗಿ ಅಪೂರ್ವ ಕಾಂತಿಯಿಂದ ಬೆಳಗುತ್ತಿರುವ ವಿದ್ಯಾಸಿಂಹಾಸನಸ್ಥರಾದ ಶ್ರೀವ್ಯಾಸತೀರ್ಥರನ್ನು ಕಂಡು ಸಹಸ್ರಾರು ಜನ ಧರ್ಮಾಭಿಮಾನಿಗಳು ಹರ್ಷಪುಳಕಿತಗಾತ್ರರಾಗಿ “ಶ್ರೀವ್ಯಾಸತೀರ್ಥರಿಗೆ ಜಯವಾಗಲಿ, ಶ್ರೀಮದಾಚಾರ್ಯ ಮಹಾಸಂಸ್ವಾನಾಧೀಶರಿಗೆ ಜಯವಾಗಲಿ” ಎಂದು ಜಯಘೋಷ ಮಾಡಿದರು.
ಶ್ರೀಬ್ರಹ್ಮಣ್ಯತೀರ್ಥರು ಶ್ರೀವ್ಯಾಸತೀರ್ಥರಿಗೆ ವೇದಾಂತಸಾಮ್ರಾಜ್ಯಾಧಿಪತಿತ್ತದ್ಯೋತಕವಾದ ಛತ್ರ, ಚಾಮರ, ಉದೋಳಿಕಾ, ಶಾಸ್ತ್ರಗ್ರಂಥಗಳು, ಮತ್ತಿತರ ಬಿರುದಾವಳಿಗಳು, ತಾಳಸ್ತುತಿ ಪಾಠಕರು, ವಾದ್ಯವೈಭವಾದಿಗಳನ್ನು ಕೊಟ್ಟು ಆಶೀರ್ವದಿಸಿದರು. ಆಗ ಶ್ರೀಮಠದ ವಂದಿ-ಮಾಗಧರು ಮಹಾಸಂಸ್ಥಾನದ ಬಿರುದಾವಳಿಗಳನ್ನು ಘೋಷಿಸಿ, ಪರಾಕು ಹೇಳಿದರು. ತರುವಾಯ ವಿಶೇಷ ಆಹ್ವಾನದಿಂದ ಆಗಮಿಸಿದ್ದ ಆಚಾರ್ಯರ ವಿವಿಧ ಮತಗಳ ಪ್ರತಿನಿಧಿಗಳು, ಶ್ರೀಮಠದ ಪ್ರಮುಖ ಶಿಷ್ಯರು, ಆತ್ಮೀಯರು, ಅಭಿಮಾನಿಗಳು, ಭಕ್ತರು, ಧಾರ್ಮಿಕಮಗಳು ನೂತನ ಜಗದ್ಗುರುಗಳಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ಆ ಸಂಭ್ರಮ, ವೈಭವ, ಜನರ ಸಂತೋಷ ಅವರ್ಣನೀಯ! ಆ ಪರಮಪಾವನಕರ ದೃಶ್ಯವನ್ನು ನೋಡಿ ಆನಂದಿಸಿದ ಸುಜನರೇ ಭಾಗ್ಯಶಾಲಿಗಳು.
ಅಂದು ಶ್ರೀಬ್ರಹ್ಮಣ್ಯತೀರ್ಥರ ಅಪ್ಪಣೆಯಂತೆ ಅವರ ಮಾರ್ಗದರ್ಶನದಲ್ಲಿ ಶ್ರೀಸರ್ವಜರ ಮಹಾಸಂಸ್ಥಾನವಾದ ಶ್ರೀರಾಜೇಂದ್ರತೀರ್ಥರ ವಿದ್ಯಾಮಠದ ಆರಾಧ್ಯ ಪ್ರತಿಮೆಗಳಾದ ಶ್ರೀಪಟ್ಟಾಭಿರಾಮ, ಶ್ರೀಮೂಲಗೋಪಾಲಕೃಷ್ಣ ವೇದವ್ಯಾಸದೇವರ (ವ್ಯಾಸಮುಷ್ಟಿ) ಪಾಜಾರಾಧನೆಯನ್ನು ನೂತನ ಪೀಠಾಧೀಶರಾದ ಶ್ರೀವ್ಯಾಸರಾಜಯತಿವರರೇ ಬಹುವರ್ಷಗಳಿಂದ ಪಾಜೆ ಮಾಡಿ ಪರಿಣತರಾದವರಂತೆ ಭಕ್ತಿ-ಶ್ರದ್ಧೆಗಳಿಂದ ವೈಭವಪೂರ್ವಕವಾಗಿ ನೆರವೇರಿಸಿದರು. ಆ ವೈಭವವನ್ನು ಕಂಡು ಸಹಸ್ರಾರು ಜನ ಧರ್ಮಾಭಿಮಾನಿಗಳು ವಿಸ್ಮಯಾನಂದತುಂದಿಲರಾಗಿ ನೂತನ ಗುರುವರರನ್ನು ಕೊಂಡಾಡಿದರು.
ಮಧ್ಯಾಹ್ನ ಸಾವಿರಾರು ಜನ ಬ್ರಾಹ್ಮಣ - ಸುವಾಸಿನಿಯರಿಗೆ ಗುರುಗಳು ತೀರ್ಥ ಪ್ರಸಾದಗಳನ್ನು ಕರುಣಿಸಿದ ಮೇಲೆ ಮೃಷ್ಟಾನ್ನ ಭೋಜನವು, ರಾತ್ರಿ ದೀಪಾರಾಧನೆ, ಫಲಮಂತ್ರಾಕ್ಷತಾ ಪ್ರದಾನ, ಪಂಡಿತರ ಉಪವಾಸ, ಉಭಯ ಗುರುಗಳ ಉಪದೇಶ, ಭಾಷಣಗಳಾಗಿ ವೇದಾಂತಸಾಮ್ರಾಜ್ಯಾಭಿಷೇಕ ಮಹೋತ್ಸವವು ವೈಭವ, ಸಂಭ್ರಮಗಳೊಡನೆ ಪಾರ್ಣವಾಯಿತು. ಈ ಎಲ್ಲ ಸಮಾರಂಭಗಳಲ್ಲಿ ಪಾಲ್ಗೊಂಡು ನೂತನ ಯತಿಗಳ ಪಾರ್ವಾಶ್ರಮ ತಂದೆ-ತಾಯಿಗಳಾದ ರಾಮಾಚಾರ್ಯ-ಲಕ್ಷ್ಮೀದೇವಿ, ಬಂಧು-ಬಾಂಧವರು ಹರ್ಷಪುಳಕಿತಗಾತ್ರರಾಗಿ ಆ ಅಭೂತಪೂರ್ವ ಚಾರಿತ್ರಿಕ ಸಮಾರಂಭದಲ್ಲಿ ಭಾಗವಹಿಸಿದ ತಮ್ಮ ಜೀವವು ಸಾರ್ಥಕವಾಯಿತೆಂದು ಭಾವಿಸಿದರು.
ಮಾರನೆಯ ದಿನದಿಂದ ಶ್ರೀಬ್ರಹ್ಮಣ್ಯತೀರ್ಥರ ಮಾರ್ಗದರ್ಶನದಲ್ಲಿ ಶ್ರೀವ್ಯಾಸತೀರ್ಥರು ಯತ್ಯಾಶ್ರಮ ಧರ್ಮಗಳನ್ನು ಶ್ರವಾದರಗಳಿಂದ ನೆರವೇರಿಸಹತ್ತಿದರು. ಬ್ರಹ್ಮಣ್ಯತೀರ್ಥರು ಪ್ರಿಯ ವರಕುಮಾರಕರಿಗೆ ಪ್ರತಿದಿವಸ ವೇದಾಂತಾದಿ ಶಾಸ್ತ್ರಗ್ರಂಥಗಳ ಪಾಠವನ್ನು ಪ್ರಾರಂಭಿಸಿದರು.
ವ್ಯಾಸತೀರ್ಥರಿಗೆ ಮಧ್ವಸಿದ್ಧಾಂತಸಾರವನ್ನು ಪರಿಚಯ ಮಾಡಿಸಿಕೊಡುವ ಆಶಯದಿಂದ ಶ್ರೀಬ್ರಹ್ಮಣ್ಯತೀರ್ಥರು ಅವರಿಗೆ ಪ್ರಕರಣಗಳು, ಸೂತ್ರಭಾಷ್ಯ, ಉಪನಿಷದ್ಭಾಷ್ಯಗಳ ಪಾಠವನ್ನು ಪ್ರಾರಂಭಿಸಿದರು. ಅವ್ಯಾಹತವಾಗಿ ವ್ಯಾಸತೀರ್ಥರ ಅಧ್ಯಯನ ಸಾಗಿತು. ಇದರಿಂದ ಶ್ರೀವ್ಯಾಸತೀರ್ಥರಿಗೆ ದೈತಸಿದ್ಧಾಂತದ ಪ್ರಮುಖ ತತ್ವಗಳು, ಅದರ ರೂಪರೇಷೆಗಳ ಪರಿಚಯವಾದಂತಾಯಿತ ಬ್ರಹ್ಮಣ್ಯತೀರ್ಥರು ಶಿಷ್ಯರಿಗೆ ವಿದ್ಯಾರ್ಜನೆಯಲ್ಲಿರುವ ಶ್ರದ್ಧೆ, ಗ್ರಹಣಶಕ್ತಿ, ಪ್ರತಿಭೆಗಳನ್ನು ಕಂಡು ಶ್ರೀವ್ಯಾಸತೀರ್ಥರಿಗೆ ಸಮಗ್ರ ವೇದಾಂತದ ಶಾಸ್ತ್ರಗಳನ್ನು ಸಕ್ರಮವಾಗಿ ಅಧ್ಯಯನ ಮಾಡಲು ಸಮರ್ಥರಾಗಿದ್ದಾರೆಂದು ಅರಿತು ಆನಂದಿಸಿದರು.
ಇಂತು ಒಂದೆರಡು ವರ್ಷಗಳ ಕಾಲ ಶ್ರೀವ್ಯಾಸತೀರ್ಥರು ಪ್ರತಿದಿನ ಸ್ನಾನ, ಆತ್ಮಿಕ, ಜಪತಪಾದನುಷ್ಠಾನ, ಪಾಜಾರಾವ್, ಗುರುಶುಶೂಷಾ, ಸತತಾಧ್ಯಯನ, ಚಿಂತನ, ಬರುವ ಶಿಷ್ಯ-ಭಕ್ತರೊಡನೆ ಮಾತುಕಥೆ, ಪಂಡಿತವರ್ಗದೊಡನೆ ತಾತ್ವಿಕ ವಿಚಾರವಿನಿಮಯಗಳನ್ನು ಮಾಡುತ್ತಾ, ಗುರುಗಳಿಂದ - ಅನೂಚಾನಾಗತ ಮಹಾಸಂಸ್ಥಾನದ ಸಂಪ್ರದಾಯ, ಪದ್ದತಿಗಳ ಉಪದೇಶ ಪಡೆಯುತ್ತಾ ತಮ್ಮ ಚಟುವಟಿಕೆ, ಕಾರ್ಯದಕ್ಷತೆ, ವಿದ್ಯೆ, ಪ್ರತಿಭೆ, ತೇಜಸ್ಸು, ಕಾಂತಿಗಳಿಂದ ಸರ್ವರ ಗೌರವಾದರಗಳಿಗೂ ಗುರುಗಳ ವಿಶೇಷಾನುಗ್ರಹಕ್ಕೂ ಪಾತ್ರರಾದರು.