.webp)
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೯. ಜಾತಕರ್ಮ-ನಾಮಕರಣ
ಅಟ್ಟೂರಿಗೆ ಆಗಮಿಸಿದ ರಾಮಾಚಾರ್ಯ ದಂಪತಿಗಳು ಮತ್ತು ಬಂಧುಗಳಿಗೆ ಒಳ್ಳೆಯ ಸ್ವಾಗತ ದೊರಕಿತು. ಗುರುಗಳು ರಾಮಾಚಾರ್ಯ ದಂಪತಿಗಳಿಗೆ ಯೋಗಕ್ಷೇಮ ವಿಚಾರಿಸಿದರು. ದಂಪತಿಗಳು ಶ್ರೀಗಳವರಿಗೆ ಸಾಷ್ಟಾಂಗವೆರಗಿ ಸುವರ್ಣ ಹರಿವಾಣದಲ್ಲಿರಾಜಿಸುವ ಶಿಶುವನ್ನು ಸ್ವಾಮಿಗಳ ಮುಂದಿಟ್ಟು ಕರಜೋಡಿಸಿ, “ಗುರುದೇವ! ಇಕೋ ತಮ್ಮ ಅನುಗ್ರಹದಿಂದ ಜನಿಸಿದ ಬಾಲಕನಿವನು. ನಿಮ್ಮ ಅಪ್ಪಣೆಯಂತೆಯೇ ವರ್ತಿಸಿ ಮಗುವಿನೊಡನೆ ಬಂದಿದ್ದೇವೆ. ಮುಂದಿನ ಕರ್ತವ್ಯವನ್ನು ತಿಳಿಸಬೇಕು” ಎಂದರು.
ಶ್ರೀಪಾದಂಗಳವರಿಗೆ ಅವರ ಮಾತಿನಿಂದ ಸಮಾಧಾನವಾಯಿತು. ಸುವರ್ಣ ಹರಿವಾಣದಲ್ಲಿ ಸುವರ್ಣಚ್ಛವಿಯಿಂದ ಮಗುವು ಸಕಲರ ಮನಸ್ಸನ್ನು ತನ್ನತ್ತ ಆಕರ್ಷಿಸುತ್ತಾ ಕಿಲಕಿಲನೆ ನಗುತ್ತಾ ವಿಲಕ್ಷಣ ತೇಜಸ್ಸು, ಲಾವಣ್ಯಗಳಿಂದ ಕಂಗೊಳಿಸುತ್ತಿತ್ತು. ಶಿಶುವನ್ನು ಕಂಡು ಬ್ರಹ್ಮಣ್ಯತೀರ್ಥರ ಹೃದಯ ತುಂಬಿ ಬಂದಿತು. ಆನಂದಪರವಶರಾದ ಮುನಿವರ್ಯರು ಮೈಮರೆತು ಮಗುವನ್ನು ಮಾತೆಯಂತೆ ಎತ್ತಿ ಮಡಿಲಲ್ಲಿ ಮಲಗಿಸಿಕೊಂಡು ತಬ್ಬಿ ಮುದ್ದಾಡಿ “ಬಂದೆಯಾ, ಭಕ್ತವರ! ಜಗತ್ತಿನ ಅಜ್ಞಾನಾಂಧಕಾರವನ್ನು ಕಳೆದು ಜ್ಞಾನಜ್ಯೋತಿಯನ್ನು ಬೆಳಗಿಸಿ, ಕಾರುಣ್ಯದಿಂದ ಜಗತ್ತನ್ನು ಪೊರೆಯಲು ಬಂದೆಯಾ?” ಎಂದು ಬಡಬಡಿಸಿದರು. ರಾಮಾಚಾರ್ಯ ದಂಪತಿಗಳು ಗುರುಗಳ ಪರವಶತೆಯನ್ನು ಕಂಡು ವಿಸ್ಮಿತರಾದರು. ಅವರು ಸ್ವಲ್ಪ ಹೊತ್ತಾದ ಮೇಲೆ ಮಗವನ್ನು ಮತ್ತೆ ಹರಿವಾಣದಲ್ಲಿ ಮಲಗಿಸಿ `ರಾಮಾಚಾರ್ಯ! ನಾಳೆ ಜಾತಕರ್ಮ ನಾಮಕರಣ ಸಮಾರಂಭಕ್ಕೆ ಪ್ರಶಸ್ತವಾಗಿದೆ. ನಾಳೆ ಆ ಮಂಗಳಕಾರ್ಯವನ್ನು ನೆರವೇರಿಸೋಣ” ಎಂದಾಜ್ಞಾಪಿಸಿ, ದೇವತಾರ್ಚನೆ ಮಾಡಲು ಸ್ನಾನಕ್ಕೆ ತೆರಳಿದರು.
ಬ್ರಹ್ಮಣ್ಯತೀರ್ಥರ ಮಠದ ಸಮೀಪದ ವಿಸ್ತಾರವಾದ ಒಂದು ಮಂದಿರದಲ್ಲಂದು ಬಹುಸಂಭ್ರಮ. ಮಂದಿರವನ್ನು ತಳಿರುತೋರಣ ರಂಭಾಸ್ತಂಭಗಳಿಂದ ಅಲಂಕರಿಸಲಾಗಿದೆ. ಮಂಗಳವಾದ್ಯಗಳು ಮೊಳಗುತ್ತಿವೆ. ಮಠದ ಪಂಡಿತರು ವಿದ್ಯಾರ್ಥಿಗಳು ಸುಸ್ವರವಾಗಿ ವೇದಪಾರಾಯಣ ಮಾಡುತ್ತಿದ್ದಾರೆ. ಮಠದ ಪುರೋಹಿತರುಗಳು ವಿಧು ಕರೀತಿಯಲ್ಲಿ ಪುಣ್ಯಾಹ, ನಾಂದಿ, ನವಗ್ರಹಪೂಜೆ, ಜಾತಕರ್ಮಾಂಗ, ಹವನಹೋಮಾದಿಗಳನ್ನು ಶ್ರೀಪಾದಂಗಳವರ ಸಮಕ್ಷಮ ನೆರವೇರಿಸಿದರು. ಜಾತಕರ್ಮವು ಸಕ್ರಮವಾಗಿ ನೆರವೇರಿತು.
ರಾಮಾಚಾರ್ಯರು ಶಿಶುವಿಗೆ ಏನು ಹೆಸರಿಡಬೇಕು ಎಂದು ಶ್ರೀಯವರನ್ನು ಕೇಳಿದರು. ಶ್ರೀಗಳವರು “ಆಚಾರ್ಯ! ಈ ಶಿಶುವು ಮುಂದೆ ಶ್ರೀಹಂಸನಾಮಕ ಪರಮಾತ್ಮನ ಜ್ಞಾನಪೀಠದಲ್ಲಿ ಮಂಡಿಸಿ ಯತಿಚಕ್ರವರ್ತಿಯಾಗಿ ಲೋಕಮಾನ್ಯವಾಗುವುದು! ಈ ಮಗವು ಚಂದ್ರನಂತೆ ನಮ್ಮೆಲ್ಲರಿಗೂ ಆನಂದಪ್ರದವಾಗಿದೆ. ಆದುದರಿಂದ ಶ್ರೀಹರಿವಾಯುಗಳು ಇ ಶಿಶುವಿಗೆ “ಯತಿರಾಜ'ನೆಂದು ನಾಮಕರಣ ಮಾಡುವಂತೆ ನಮಗೆ ಪ್ರೇರಣೆ ಮಾಡಿದ್ದಾರೆ. “ಯತಿರಾಜ ದೇ ನಮ
ಮುಂದುವರೆದು ಶ್ರೀಬ್ರಹ್ಮಣ್ಯತೀರ್ಥರು “ರಾಮಾಚಾರ್ಯರೇ, ನಿಮ್ಮ ಸಹಧರ್ಮಿಣಿಯ ಸ್ವಪ್ನದಲ್ಲಿ ಭಗವ ಶ್ರೀವೇದವ್ಯಾಸರು ದರ್ಶನವಿತ್ತು ಬಂಗಾರದ ತಟ್ಟೆಯಲ್ಲಿ ಚಂದ್ರರಿಸಿ ದಯಪಾಲಿಸಿದ್ದು ಸರಿಯಷ್ಟೇ? ಬ್ರಹ್ಮಾ ಹೊಳೆಯುವ ಸುವರ್ಣಪಾತ್ರೆಯಲ್ಲಿ ಚಂದ್ರನಟ್ಟು ಅನುಗ್ರಹಿಸಿರುವುದು ಸುವರ್ಣಕೈದಿಯಂತೆ ಬ್ರಹ್ಮಾಂಡಾವ ಕೀರ್ತಿಕಿರಣಗಳಿಂದ ಚಂದ್ರನಂತಿರುವ ಈ ಮಗುವು ವಿಖ್ಯಾತವಾಗುವುದೆಂಬುದನ್ನು ಸೂಚಿಸುವುದು. ಅದನ್ನು ನೀವು ಶ್ರೀವೇದವ್ಯಾಸರು, ಸಕಲಯತಿಗಳಿಗೆ ಪ್ರಭುಗಳವರು. ಆದ್ದರಿಂದ ಅವರು ಯತಿಗಳು, ಚಂದ್ರನಿಗೆ ರಾಜನೆಂಬ ಹೆಸರ ಹೀಗೆ “ಯತಿಗಳಿಂದ (ವೇದವ್ಯಾಸರಿಂದ) ವರರೂಪವಾಗಿ ಕೊಡಲ್ಪಟ್ಟ ರಾಜ' (ಚಂದ್ರ) ಈ ಮಗುವಾದದ ಆ ಅರ್ಥವನ್ನು ಸೂಚಿಸುವ ಮಹಿಮೋಪೇತವಾದ “ಯತಿರಾಜ ನಂದೇ ಈ ಮಗುವಿಗೆ ಹೆಸರಿಡುವುದು ಅತ್ಯಂತ ಸಮಂಜಸವಾಗಿದೆ. ಈ ಶಿಶುವಿಗೆ "ಯತಿರಾಜನೆಂದೇ ನಾಮಕರಣ ಮಾಡಿರಿ" ಎಂದು ನಸುನಗುತ್ತಾ ಉಜ್ಜಾಡಿದರು
ಶ್ರೀಯವರ ಮಾತನ್ನಾಲಿಸಿ ಸಜ್ಜನರು ಅಶ್ವರ್ಯಾನಂದಪುಳಕಿತಗಾತ್ರರಾದರು. ಶ್ರೀಯವರ ಆಣತಿಯಂತೆ ಮಗುವಿಗೆ *ಯತಿರಾಜ'ನೆಂದು ನಾಮಕರಣವಾಯಿತು. ಅರತಕ್ಷತೆಯು ವೈಭವದಿಂದ ಜರುಗಿತು. ನಂತರ ಸರ್ವರಿಗೂ ಗುರ ಪುಷ್ಪ, ಫಲ-ತಾಂಬೂಲ, ದಕ್ಷಿಣಾಪ್ರದಾನ ಮಾಡಿ ರಾಮಾಚಾರ್ಯರು ಸರ್ವರನ್ನೂ ಸಂತೋಷಗೊಳಿಸಿದರು.
ಅಂದು ಮಧ್ಯಾಹ್ನ ಶ್ರೀಯವರು ಶ್ರೀಮೂಲಗೋಪಾಲಕೃಷ್ಣದೇವರ ಪೂಜಾರಾಧನೆಯನ್ನು ನೆರವೇರಿಸಿ ಸರ್ವರಿಗೂ ತೀರ್ಥ-ಪ್ರಸಾದವನ್ನು ಅನುಗ್ರಹಿಸಿದ ತರುವಾಯ ಸಕಲ ಬ್ರಾಹ್ಮಣ ಸುವಾಸಿನಿಯರಿಗೆ ಭೂರಿಭೋಜನ-ದಕ್ಷಿಣಾಪ್ರದಾನಳಾದ ಮೇಲೆ ಸಮಾರಂಭವು ಯಶಸ್ವಿಯಾಗಿ ಪರಿಪೂರ್ಣವಾಯಿತು.