|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೫. ಪಾತ್ಮಿಕ ಮಹಾಪುರುಷರು

ಈ ಅರವತ್ತೊಕ್ಕಲು ಮನೆತನದಲ್ಲಿ ಅನೇಕ ಮಹಾಪುರುಷರು ಅವತರಿಸಿ ವಿಶ್ವವಿಖ್ಯಾತರಾಗಿದ್ದಾರೆ. ದೈತಸಿದ್ಧಾಂತ ಸ್ಥಾಪಕರಾದ ಶ್ರೀಮದಾಚಾರ್ಯರು, ಅವರ ಪಟ್ಟದ ಶಿಷ್ಯರೂ ಶ್ರೀಮದಾಚಾರ್ಯರ ದಾಂತಸಾಮ್ರಾಜ್ಯವನ್ನಾಳಿದವರೂ ಆದ ಶ್ರೀಪದ್ಮನಾಭತೀರ್ಥ, ಶ್ರೀನರಹರಿತೀರ್ಥ, ಶ್ರೀಮಾಧವತೀರ್ಥ, ಶ್ರೀಅಕ್ಟೋಭ್ಯತೀರ್ಥ, ಶ್ರೀಜಯತೀರ್ಥ, ಶ್ರೀವಿದ್ಯಾಧಿರಾಜತೀರ್ಥ, ಶ್ರೀರಾಜೇಂದ್ರತೀರ್ಥ, ಶ್ರೀಕವೀಂದ್ರತೀರ್ಥ, ಶ್ರೀಜಯದ್ಧಜತೀರ್ಥ, ಶ್ರೀವಾಗೀಶತೀರ್ಥ, ಶ್ರೀರಾಮಚಂದ್ರತೀರ್ಥ, ಶ್ರೀವಿಬುಧೇಂದ್ರತೀರ್ಥ, ಶ್ರೀಜಿತಾಮಿತ್ರತೀರ್ಥ, ಶ್ರೀರಘುನಂದನತೀರ್ಥ, ಶ್ರೀಸುರೇಂದ್ರತೀರ್ಥ, ಶ್ರೀಪುರುಷೋತ್ತಮತೀರ್ಥ, ಶ್ರೀಸ್ವರ್ಣವರ್ಣತೀರ್ಥ, ಶ್ರೀಬ್ರಹ್ಮಣ್ಯತೀರ್ಥ, ಶ್ರೀಲಕ್ಷ್ಮೀನಾರಾಯಣಮುನಿ, ಶ್ರೀವ್ಯಾಸರಾಜ, ಶ್ರೀವಿಜಯೀಂದ್ರತೀರ್ಥ, ಶ್ರೀನಾರಾಯಣಯತಿ, ಶ್ರೀಸುಧೀಂದ್ರತೀರ್ಥ, ಶ್ರೀರಾಘವೇಂದ್ರತೀರ್ಥ, ಶ್ರೀಸುಮತೀಂದ್ರತೀರ್ಥರಂತಹ ಜಗನ್ಮಾನ್ಯ ಮಹಾಮಹಿಮರೆಲ್ಲರೂ ಮತ್ತು ಅಪರೋಕ್ಷಜ್ಞಾನಿಗಳಾದ ಕನ್ನಡನಾಡಿನ ಹರಿದಾಸರಾದ ಶ್ರೀಪುರಂದರದಾಸ, ಶ್ರೀವಿಜಯದಾಸ, ಶ್ರೀಗೋಪಾಲದಾಸ, ಶ್ರೀಜಗನ್ನಾಥದಾಸರುಗಳೂ ಸಹ ಈ ಷಾಷಿಕಮಶಭೂಷಣರೆಂದ ಮೇಲೆ ಈ ಪವಿತ್ರ ಮಹಾಮಶದ ಬಗ್ಗೆ ಇನ್ನು ಹೆಚ್ಚು ವಿವರಣೆ ಬೇಕಿಲ್ಲವೆನಿಸುವುದು.

ಈ ಷಾಷಿಕರಲ್ಲಿ ದೈತ, ಅದ್ರೆತ, ಭಾಗವತ ಸಂಪ್ರದಾಯದವರೂ ಇದ್ದಾರೆ. ಶ್ರೀವಿಷ್ಣು ಸರ್ವೋತ್ತಮವತ್ವವನ್ನು ಒಪ್ಪಿದವರು ಶ್ರೀಮಧ್ವಾಚಾರ್ಯರ ಕಾಲದಲ್ಲಿ ಅವರ ಶಿಷ್ಯತ್ವ ವಹಿಸಿ ಮಾಧ್ಯರಾದರು. ಶಿವಸರ್ವೋತ್ತಮತ್ತವಾದಿಗಳಾಗಿದ್ದು ಶ್ರೀಶಂಕರಾಚಾರ್ಯರ ಅನುಯಾಯಿಗಳಾದ ಆತಿ ಬ್ರಾಹ್ಮಣರು ಹಾಗೂ ಭಾಗವತ ಸಂಪ್ರದಾಯದವರೂ ಈ ಷಾಷಿಕರೇ ಆಗಿ ಪ್ರಖ್ಯಾತರಾಗಿದ್ದಾರೆ. ಅವೈತಮತಾನುಯಾಯಿಗಳು ಶತಶತಮಾನಗಳಿಂದ ವಿಭಿನ್ನ ತಮ್ಮೋಪಾಸಕರಾಗಿದ್ದರೂ ತಾವು ಷಾತ್ಮಿಕ ಮನೆತನದವರೆಂದು ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುವುದು ಕಂಡುಬಂದಿದೆ. ಇಂದು ಅಂತಾರಾಷ್ಟ್ರೀಯವಾಗಿ ಖ್ಯಾತವಾಗಿರುವ ಶ್ರೀಕಂಚಿ ಕಾಮಕೋಟಿ ಪೀಠಾಧೀಶ್ವರರಾದ ಹಿರಿಯ ಸ್ವಾಮಿಗಳು ಕನ್ನಡಿಗರಾಗಿದ್ದು, ಅವರು ತಾವು ಷಾಷಿಕ ಮನೆತನದವರೆಂದು ಹೇಳಿಕೊಳ್ಳುವುದು ಗಮನಾರ್ಹವಾಗಿದೆ.

ಇದರಂತೆ ಇತಿಹಾಸ ಪ್ರಸಿದ್ಧವಾದ ಅನೇಕ ಮಹನೀಯರು ಈ ವಂಶದವರಾಗಿದ್ದಾರೆ. ವಿಷ್ಣುವರ್ಧನನ ಪೌತ್ರನಾದ ವೀರಬಲ್ಲಾಳನು ಕ್ರಿ.ಶ. ೧೧೭೩ ರಿಂದ ೧೨೨೦ ರವರೆಗೆ ದ್ವಾರಸಮುದ್ರದಲ್ಲಿ ರಾಜ್ಯವಾಳುತ್ತಿದ್ದಾಗ ಷಾಷ್ಠಿಕ ವಂಶದ ರುದ್ರಭಟ್ಟನು ವೀರಬಲ್ಲಾಳನ ಮಂತ್ರಿಯಾಗಿದ್ದು, “ಜಗನ್ನಾಥವಿಜಯ” ಮಹಾಕಾವ್ಯವನ್ನು ರಚಿಸಿ ಜೈನಕವಿಗಳಿಂದಲೇ “ಕೃತಿಶಾರದಾಭ್ರಚುದ್ರಾತಪರುದ್ರ" ಎಂಬ ಪ್ರಶಂಸೆ ಗಳಿಸಿದ್ದನು. ಬಹಮನಿ ರಾಜ್ಯ ಸ್ಥಾಪಕನಾದ ಗಂಗಾಧರಭಟ್ಟನೂ ಸಾತ್ವಿಕನು. ಇದರಂತೆ ಇನ್ನೂ ಅನೇಕರು ಪ್ರಖ್ಯಾತರಾಗಿದ್ದಾರೆ.

ಶ್ರೀಮಧ್ವಾಚಾರ್ಯರ ವೇದಾಂತಸಾಮ್ರಾಜ್ಯ ವಿದ್ಯಾಸಿಂಹಾಸನದಲ್ಲಿ ವಿರಾಜಿಸಿದ ಘಟ್ಟದ ಮೇಲಿನ ಬಹುಶಃ ಎಲ್ಲ ಪೀಠಾಧೀಶರೂ ಈ ಷಾಷ್ಠಿಕ ವಂಶದೀಪಕರೆಂದು ಹೇಳಬಹುದು. ಶ್ರೀಮದಾಚಾರ್ಯರ ಪಟ್ಟದ ಶಿಷ್ಯರಾದ ಶ್ರೀಪದ್ಮನಾಭತೀರ್ಥರಿಂದ ಆರಂಭಿಸಿ ಶ್ರೀಜಯತೀರ್ಥರ ಶಿಷ್ಯರಾದ ಶ್ರೀವಿದ್ಯಾಧಿರಾಜತೀರ್ಥರವರೆಗೆ ಅವಿಚ್ಛಿನ್ನವಾಗಿ ನಡೆದುಬಂದ ಶ್ರೀಮದಾಚಾರ್ಯರ ಮಹಾಸಂಸ್ಥಾನವು ಶ್ರೀವಿದ್ಯಾಧಿರಾಜರ ಕಾಲದಲ್ಲಿ, ಶ್ರೀಸರ್ವಜ್ಞರ ಸಂಕಲ್ಪದಂತೆ, ಅವರಿಂದ ಆಶ್ರಮ ಪಡೆದ ಶ್ರೀರಾಜೇಂದ್ರತೀರ್ಥರು ಮತ್ತು ಶ್ರೀಕವೀಂದ್ರತೀರ್ಥರಿಂದ ಎರಡು ಮಹಾಸಂಸ್ಥಾನಗಳಾಗಿ ನಡೆದುಬಂದಿತು.

ಶ್ರೀರಾಜೇಂದ್ರತೀರ್ಥರು ವಿರಾಜಿಸಿದ ಮಹಾಸಂಸ್ಥಾನವು ಪೂರ್ವಾದಿಮರ ಅಥವಾ ಶ್ರೀರಾಜೇಂದ್ರತೀರ್ಥರ ಮಹಾಸಂಸ್ಥಾನವೆಂದು ಖ್ಯಾತವಾಯಿತು. ಈ ಮಹಾಸಂಸ್ಥಾನದಲ್ಲಿ ಮುಂದೆ ಜಗದ್ವಿಖ್ಯಾತರಾದ, ಕಥಾನಾಯಕರಾದ ಶ್ರೀವ್ಯಾಸರಾಜಗುರುಸಾರ್ವಭೌಮರವರು ವಿರಾಜಿಸಿದ್ದರಿಂದ ಅಂದಿನಿಂದ ಇದು ಶ್ರೀವ್ಯಾಸರಾಜಮಠವೆಂದು ಹೆಸರು ಪಡೆಯಿತು. ಈ ಮಹಾಸಂಸ್ಥಾನದಲ್ಲಿ ಶ್ರೀಭಾಷ್ಯದೀಪಿಕಾಚಾರ್ಯರವರೆಗೆ ರಾಜಿಸಿದ ಎಲ್ಲ ಪೀಠಾಧೀಶ್ವರರೂ ಷಾಕ ಮನೆತನದವರೇ ಆಗಿದ್ದು, ಮುಂದೆ ಕಾರಣಾಂತರದಿಂದ ಈ ಸಂಪ್ರದಾಯ ತಪ್ಪಿಹೋಯಿತು.

ಶ್ರೀಕವೀಂದ್ರತೀರ್ಥರ “ದಕ್ಷಿಣಾದಿಮಠ” ಅಥವಾ “ಶ್ರೀವಿಬುಧೇಂದ್ರಮಠ ವಿದ್ಯಾಮತ” ಮುಂತಾಗಿ ಖ್ಯಾತವಾದ ಶ್ರೀಮದಾಚಾರ್ಯರ ಇನ್ನೊಂದು ಮುಖ್ಯ ಮಹಾಸಂಸ್ಥಾನದಲ್ಲಿ ಶ್ರೀಪದ್ಮನಾಭತೀರ್ಥರಿಂದಾರಂಭಿಸಿ ಈವರೆವಿಗೂ ಸಹ ಷಾಷಿಕವಂಶೀಕರೇ ಪೀಠಾಧಿಪತಿಗಳಾಗಿ ಬರುತ್ತಿರುವುದು ಈ ಮಹಾಸಂಸ್ಥಾನದ ವೈಶಿಷ್ಟವಾ ಅರವತ್ತೊಕ್ಕಲು ಮನೆತನ ಮಹತ್ವದ್ಯೋತಕವಾ ಆಗಿರುತ್ತದೆ.

ಶ್ರೀಮದಾಚಾರ್ಯರ ಮಹಾಸಂಸ್ಥಾನಾಧೀಶ್ವರರಾಗಿದ್ದ ಶ್ರೀಪದ್ಮನಾಭತೀರ್ಥರೂ, ಶ್ರೀಮಾಧವತೀರ್ಥರೂ ಮತ್ತು ಶ್ರೀಮದಭ್ಯತೀರ್ಥರುಗಳೂ ಸ್ಥಾಪಿಸಿದ, ಅವರ ಹೆಸರುಗಳಿಂದಲೇ ಖ್ಯಾತವಾದ ಶ್ರೀಪದ್ಮನಾಭತೀರ್ಥ ಸತ್ಪರಂಪರೆಯ ಶ್ರೀಪಾದರಾಜಮಠ, ಶ್ರೀಮಾಧವತೀರ್ಥ ಸತ್ಪರಂಪರೆಯ ಶ್ರೀಮಾಧವತೀರ್ಥರ ಮಠ ಅಥವಾ ಮಜ್ಜಿಗೆಹಳ್ಳಿ ಮಠ, ಶ್ರೀಮದಭ್ಯತೀರ್ಥರಿಂದ ಸ್ಥಾಪಿತವಾದ ಆ ಸತರಂಪರೆಯ ಶ್ರೀಅಕ್ಟೋಭ್ಯತೀರ್ಥ ಮಠಗಳ ಹಾಗೂ ಶ್ರೀಮಾಧವತೀರ್ಥರ ಮರದಲ್ಲೂ ಷಾಷಿಕರೇ ಪೀಠಾಧಿಪತಿಗಳಾಗಿ ಬರುತ್ತಿದ್ದು ಇತ್ತೀಚೆಗೆ ಅಲ್ಲಿಯೂ ಷಾಷ್ಠಿಕ ವಂಶೀಕರು ಪೀಠಾಧಿಪತಿಗಳಾಗುವ ಸಂಪ್ರದಾಯವು ತಪ್ಪಿಹೋಗಿರುತ್ತದೆ ಎಂದು ತಿಳಿದುಬರುತ್ತದೆ.

ಶ್ರೀಅಕ್ಟೋಭ್ಯತೀರ್ಥರು ಸ್ಥಾಪಿಸಿದ ಆ ಪರಂಪರೆಯು ಪ್ರಥಮ ಪೀಠಾಧೀಶರಾದ ಶ್ರೀಲೋಕ್ಯಭೂಷಣರ ಪ್ರಶಿಷ್ಯರಾದ ಶ್ರೀಲೋಕಪೂಜ್ಯರ ಕಾಲದಲ್ಲಿ ಇಬ್ಬಾಗವಾದ ಆ ಪೀಠದ ಒಂದು ಮಠದಲ್ಲಿ ಶ್ರೀಪುಣ್ಯಕೀರ್ತಿಗಳೆಂಬುವವರೂ, ಮತ್ತೊಂದು ಮಠದಲ್ಲಿ ಶ್ರೀರಘುಪುಂಗವರೂ ಪೀಠಾಧಿಪತಿಗಳಾದರು. ಶ್ರೀಪುಣ್ಯಕೀರ್ತಿಗಳ ಪರಂಪರೆಯೇ ಇಂದು ಶ್ರೀಅಕ್ಟೋಭ್ಯತೀರ್ಥರ ಮೂಲಸಂಸ್ಥಾನವಾದ ಬಾಳಗಾರು ಮಠವೆಂದು ಖ್ಯಾತಿ ಗಳಿಸಿದೆ. ಶ್ರೀರಘುಪುಂಗವರು ವಿರಾಜಿಸಿದ ಮಠವು ಶ್ರೀ ಕೂಡ್ಲಿಗಿ ಆರ್ಯ ಅಕ್ಟೋಭ್ಯತೀರ್ಥರ ಮಠವೆಂದು ಹೆಸರು ಪಡೆದಿದೆ.

ಈ ಮಠಗಳಲ್ಲಿ ಕೂಡ್ಲಿಗಿ ಶ್ರೀಅಕ್ಟೋಭ್ಯತೀರ್ಥರ ಮಠದಲ್ಲಿ ಈಗ ಐದಾರು ದಶಕಗಳವರೆವಿಗೂ ಷಾಷ್ಠಿಕ ವಂಶೀಯರೇ ಅದರಲ್ಲೂ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಶಿಷ್ಯರುಗಳೇ ಪೀಠಾಧಿಪತಿಗಳಾಗುತ್ತಾ ಬರುತ್ತಿದ್ದರು. ಕಾರಣಾಂತರದಿಂದ ಮತ್ತು ಕೆಲವರ ಹಸ್ತಕ್ಷೇಪದಿಂದ ಆ ಪೀಠದಲ್ಲಿ ಷಾಷಿಕರು ಪೀಠಾಧಿಪತಿಗಳಾಗುವ ಸಂಪ್ರದಾಯವು ನಿಂತುಹೋಗಿರುತ್ತದೆ. ಇನ್ನು ಶ್ರೀಬಾಳಗಾರು ಮಠದಲ್ಲಿಯೂ ಹಿಂದೆ ಕೆಲಕಾಲ ಷಾಷಿಕರು ಮತ್ತೆ ಕೆಲಕಾಲ ಇತರರು ಪೀಠಾಧಿಪತಿಗಳಾಗುತ್ತ ಬಂದಿರುವುದು ಕಂಡುಬಂದಿದೆ. ಈಗಿನ ಪೀಠಾಧೀಶರಾದ ಶ್ರೀರಘುಮಾನ್ಯತೀರ್ಥರು ಷಾಷ್ಠಿಕ ವಂಶದ ದೌಹಿತರಾಗಿದ್ದಾರೆ.

ಶ್ರೀಪದ್ಮನಾಭತೀರ್ಥ ಸತ್ಪರಂಪರೆಯ ಶ್ರೀಪಾದರಾಜಮಠದಲ್ಲಿ ಅಂದಿನಿಂದ ಇಂದಿನವರೆವಿಗೂ ಷಾತ್ಮಿಕ ಮರದವ ಪೀಠಾಧಿಪತಿಗಳಾಗುತ್ತಿದ್ದಾರೆ.

ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ದಕ್ಷಿಣಾದಿಮಠ ಎಂದರೆ ಶ್ರೀಕವೀಂದ್ರ, ಶ್ರೀವಿಬುಧೇಂದ್ರ ಅಥವಾ ಶ್ರೀರಾಘವೇಂದ್ರತೀರ್ಥರ ಮಠವೆಂದು ಖ್ಯಾತಿ ಗಳಿಸಿರುವ ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ಪ್ರಾರಂಭದಿಂದಲೂ ಇಂದಿನವರೆಗೂ ಷಾಷಿಕ ಮನೆತನದವರೇ ಪೀಠಾಧಿಪತಿಗಳಾಗುತ್ತಿರುವುದರ ಜೊತೆಗೆ ಶ್ರೀರಾಘವೇಂದ್ರಸ್ವಾಮಿಗಳ ಕಾಲದಿಂದ ಪಾಕ ಮನೆತನದ “ಬೀಗಮುದ್ರೆ”, “ಗೌತಮ್” ಗೋತ್ರದವರೇ ಪೀಠಾಧಿಪತಿಗಳಾಗುತ್ತಿರುವುದೂ, ಶ್ರೀಶ್ರೀಪಾದರಾಜಮಠದ ಅವರ ಕಾಲದಿಂದ ವಿಶ್ವಾಮಿತ್ರಗೋತ್ರ ಹಾಗೂ ಗೌತಮಗೋತ್ರದ 'ಬೀಗಮುದ್ರೆ' ಮನೆತನದವರು ಪೀಠಾಧಿಪತಿ- ಗಳಾಗುತ್ತಿರುವುದು ರೈತಸಿದ್ಧಾಂತದಲ್ಲಿ ಒಂದು ಮಹತ್ವಪೂರ್ಣ ವಿಷಯವಾಗಿರುತ್ತದೆ.

ಇಂತು ವಿಖ್ಯಾತವಾದ ಷಾಷ್ಟಿಕ ಮನೆತನದಲ್ಲಿ ಕಾಶ್ಯಪಗೋತ್ರ ಸಂಜಾತರಾದ ವಲ್ಲಭದೇವ ಎಂಬುವರು ಕರ್ನಾಟಕದ ಈಗಿನ ತಿರುಮಕೂಡ್ಲು ತಾಲ್ಲೂಕಿಗೆ ಸೇರಿದ ವಟ್ಟಪುರ ಅಥವಾ ಬನ್ನೂರು ಪ್ರಾಂತದ ರಾಜಪ್ರತಿನಿಧಿಗಳಾಗಿ ಅಧಿಕಾರದಲ್ಲಿದ್ದರು. ಇವರು ಜಮಖಂಡಿಯ ಮಾಂಡಲಿಕರಾಗಿದ್ದ ಧುಂಡಿರಾಜರ ಅಳಿಯಂದಿರು. ಇವರಿಗೆ ನರಸಿಂಹರಾಮದೇವ ಎಂಬ ಪತ್ರ, ಭಾರತೀ ಎಂಬ ಪುತ್ರಿಯೂ ಜನಿಸಿದರು. ವಲ್ಲಭದೇವನ ಮಗನಾದ ನರಸಿಂಹರಾಮದೇವನಿಗೆ ರುಕ್ಕಾಂಬೆ ಎಂಬ ಪತ್ನಿಯಿದ್ದಳು. ಇವರಿಗೆ ಶ್ರೀರಾಜೇಂದ್ರತೀರ್ಥರ ಸೋದರರಾದ ಶ್ರೀಜಯಧ್ವಜತೀರ್ಥರ ಅನುಗ್ರಹದಿಂದ ಆರು ಜನ ಪುತ್ರರಾದರು. ಅವರಲ್ಲಿ ಕಿರಿಯರಾದ ರಾಮಾಚಾರ್ಯರು ರಾಜಕೀಯ ವಲಯದಲ್ಲಿ ವಲ್ಲಭಸುಮತಿ ಅಥವಾ ಬಲಣಸುಮತಿ ಎಂಬ ಹೆಸರಿನಿಂದ ಖ್ಯಾತರಾಗಿದ್ದರು. ೧೫ನೆಯ ಶತಮಾನದಲ್ಲಿ ತಲಕಾಡು ಮಂಡಲಕ್ಕೆ ಸೇರಿದ್ದ ಬನ್ನೂರು ಎಂಬ ಪಾಳೆಯಪಟ್ಟನ್ನು ವೆಂಕಟಗಿರಿನಾಯಕನೆಂಬ ರಾಜನು ಆಳುತ್ತಿದ್ದನು. ಅವನಿಗೆ ಮಂತ್ರಿಗಳೂ, ರಾಜಪುರೋಹಿತರೂ, ಆತ್ಮೀಯರೂ ಆಗಿದ್ದ ನರಸಿಂಹರಾಮದೇವನೇ ಬಲ್ಬಣಸುಮತಿಯೆಂದು ಪ್ರಖ್ಯಾತರಾದ ರಾಮಾಚಾರ್ಯರ ತಂದೆಗಳು, ರಾಮಾಚಾರ್ಯರ ತಂದೆ ನರಸಿಂಹರಾಮದೇವನ ತರುವಾಯ ಬನ್ನೂರು ಪ್ರಾಂತದ ವೆಂಕಟಗಿರಿನಾಯಕನ ಮಂತ್ರಿಗಳಾಗಿ ರಾಜ್ಯಾಡಳಿತದ ಹೊಣೆ ಹೊತ್ತು ಅಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದರು. ಈ ಅರವತ್ತೊಕ್ಕಲು ಮನೆತನದ ಈ ವಂಶವು ಬಹುವೈಶಿಷ್ಟಪೂರ್ಣವಾದುದು, ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರೂ, ಆಚಾರ್ಯರ ವೇದಾಂತಸಾಮ್ರಾಜ್ಯಾಧೀಶರೂ ಆದ ಶ್ರೀಅಭ್ಯತೀರ್ಥರು, ಶ್ರೀಜಯತೀರ್ಥರು, ಶ್ರೀವಿದ್ಯಾಧಿರಾಜರು, ಶ್ರೀರಾಜೇಂದ್ರ-ಕವೀಂದ್ರ-ಜಯಧ್ವಜ-ಪುರುಷೋತ್ತಮ-ಸ್ವರ್ಣವರ್ಣ-ಬ್ರಹ್ಮಣ್ಯ- ಲಕ್ಷ್ಮೀನಾರಾಯಣಮುನಿಗಳೂ, ಅವರ ಸಮೀಪಬಂಧುಗಳಾದ ಶ್ರೀಸುರೇಂದ್ರತೀರ್ಥ-ವಿಜಯೀಂದ್ರ-ಸುಧೀಂದ್ರತೀರ್ಥರುಗಳು ರಾಮಾಚಾರ್ಯರ (ಬಲ್ಬಣಸುಮತಿಗಳ) ಬಾಂಧವರಾಗಿದ್ದ ಇವರೆಲ್ಲರೂ ಷಾಷಿಕ ಕುಲಾವತಂಸರೆ ಆಗಿರುವುದರಿಂದ ಈ ಮನೆತನದ ಬಗ್ಗೆ ಸ್ವಲ್ಪ ವಿವರಿಸುವುದು ಅವಶ್ಯವೆಂದು ಭಾವಿಸುವೆವು.

ಈ ಷಾಷಿಕ ಮನೆತನಕ್ಕೆ ಹದಿನಾಲ್ಕು ಗೋತ್ರಗಳಿವೆ. ಅವು ಹೀಗಿವೆ - ೧) ಕಾಶ್ಯಪಗೋತ್ರ, ೨) ಆತ್ರೇಯಸಗೋತ್ರ, ೩) ಭಾರದ್ವಾಜಗೋತ್ರ, ೪) ವಿಶ್ವಾಮಿತ್ರಗೋತ್ರ, ೫) ಗೌತಮಗೋತ್ರ, ೬) ಜಾಮದಗ್ನಿಗೋತ್ರ, ೭) ವಸಿಷಗೋತ್ರ, ೮) ಶಾಂಡಿಲ್ಯಗೋತ್ರ, ೯) ಅಗಸ್ಯ ಗೋತ್ರ, ೧೦) ಹರಿತಸಗೋತ್ರ, ೧೧) ಬಾದರಾಯಣಗೋತ್ರ, ೧೨) ಕೌಂಡಿಣಗೋತ್ರ, ೧೩) ಕೌಶಿಕಗೋತ್ರ, ೧೪) ಶ್ರೀವತ್ಸಗೋತ್ರ, ಈ ಹದಿನಾಲ್ಕು ಗೋತ್ರಗಳಿಗೆ ಅರವತ್ನಾಲ್ಕು ಮನೆತನಗಳಿದ್ದು ಮನೆತನದವರು ಯುದ್ಧದಲ್ಲಿ ವೀರಸ್ವರ್ಗ ಹೊಂದಿದ್ದರಿಂದಲೂ, ಭಾರತ ಮನೆತನವು ಸಂತಾನವಿಲ್ಲದೆಯೂ ೬೪ ಮನೆತನಗಳಲ್ಲಿ ೪ ಮನೆತನವು ನಷ್ಟವಾಗಿ ಅರವತ್ತು ಮನೆತನಗಳು ಮಾತ್ರ ಉಳಿದು, ಬೆಳೆದು ಬಂದಿತು. ಆದ್ದರಿಂದಲೇ ಇವರು ಅರವತ್ತೊಕ್ಕಲು ಅಥವಾ ಷಾಷಿಕರೆಂದು ಪ್ರಖ್ಯಾತರಾದರು.

ಈ ಷಾಷಿಕವಂಶದ ಭಾರದ್ವಾಜಗೋತ್ರದ “ಸ್ವರ್ಣಭಂಡಾರಿ” ಅಥವಾ ಚಿನ್ನಭಂಡಾರಿ ಮನೆತನವು ವಿದ್ಯೆ, ಆಚಾರ-ಕಲಿತನಗಳಿಗೆ ಹೆಸರಾದುದು. ಈ ವಂಶದಲ್ಲಿ ಕೇಶವಭಟ್ಟ - ಧುಂಡಿರಾಜರೆಂಬ ಅಣ್ಣ-ತಮ್ಮಂದಿರಿದ್ದರು. ಹಿರಿಯರಾದ ಕೇಶವಭಟ್ಟರಿಗೆ ಗೋವಿಂದಭಟ್ಟರೆಂಬ ಪುತ್ರರಾದರು. ಈ ವಂಶದ ಪೂರ್ವಿಕರು ಕದಂಬ ಸಾಮ್ರಾಜ್ಯದ ಉನ್ನತಿಯ ಕಾಲದಲ್ಲಿ ಸಾಮ್ರಾಜ್ಯದ ಕೋಶಾಧ್ಯಕ್ಷ ಪದವಿಯಲ್ಲಿದ್ದರು. ಅಂತೆಯೇ ಅವರಿಗೆ “ಸ್ವರ್ಣಭಂಡಾರಿ” ಅಥವಾ ಚಿನ್ನಭಂಡಾರಿಗಳೆಂದು ಹೆಸರಾಯಿತು. ಇವರ ಪೂರ್ವಜರ ವಿದ್ಯೆ, ಆಚಾರ, ಪ್ರತಿಭೆ, ಶೀಲ, ಶೌರ್ಯಾದಿಗುಣಗಳು ಹಾಗೂ ಸಾಮ್ರಾಜ್ಯ ನಿಷ್ಠೆಗಳಿಂದ ಸುಪ್ರೀತನಾದ ತ್ರಿನೇತ್ರ ಕದಂಬನು ಇವರಿಗೆ ಈಗಿನ ಶಿವಮೊಗ್ಗ ಜಿಲ್ಲೆಗೆ ಸಮೀಪದಲ್ಲಿರುವ ಭಂಡಾರಕೇರಿ ಪ್ರಾಂತ್ಯವನ್ನು ಜಹಗೀರಾಗಿ ಕೊಟ್ಟು ಗೌರವಿಸಿದ್ದನು. ಈ ಮನೆತನದವರನ್ನು ಭಟ್ಟರು, ನಾಯಕರು, ಸ್ವರ್ಣಭಂಡಾರಿಗಳೆಂದು ಜನರು ಗೌರವಿಸುತ್ತಿದ್ದರು.

ಕದಂಬ ಸಾಮ್ರಾಜ್ಯದ ವಿಖ್ಯಾತ ಚಕ್ರವರ್ತಿಯಾದ ಮಯೂರವರ್ಮನ ಕಾಲದಲ್ಲಿ ಅಶ್ವಮೇಧಯಾಗಕ್ಕೆ ಸಂಬಂಧಿಸಿದ ಒಂದು ಮುಖ್ಯಧಾರ್ಮಿಕ ಪ್ರಶ್ನೆಯಿಂದ ಸಾಮ್ರಾಟನಿಗೂ ಷಾಷಿಕರಿಗೂ ಭಿನ್ನಾಭಿಪ್ರಾಯವೇರ್ಪಟ್ಟು ಈ ಷಾಕ ಮನೆತನದವರೆಲ್ಲಾ ಕದಂಬ ಸಾಮ್ರಾಜ್ಯವನ್ನೇ ತ್ಯಜಿಸಿ ತಮ್ಮ ಇತರ ಷಾಷಿಕ ಬಂಧುಗಳೊಡನೆ ಚಾಲುಕ್ಯ ರಾಜಧಾನಿಯಾಗಿದ್ದ ದೇವಗಿರಿಗೆ ಹೋಗಿ ನೆಲೆಸಿದರು. ಈ ಷಾಷಿಕರಿಗೆ ತಮ್ಮ ಸ್ಥಾನ, ಪದವಿ, ಸಂಪತ್ತುಗಳಿಗಿಂತ ಧಾರ್ಮಿಕ, ತಾತ್ವಿಕ ಭಾವನೆಗಳೇ ಹಿರಿದಾಗಿದ್ದು, ತಮ್ಮ ಧರ್ಮ ಸಂರಕ್ಷಣೆಯ ಹೊಣೆಗಾರಿಕೆಗೆ ವ್ಯತ್ಯಯ ಬರುವುದೆಂದು ತಮ್ಮ ಸ್ಥಾನ - ಪದವಿಗಳನ್ನೂ ಧಿಕ್ಕರಿಸಿ ಹೊರಟ ಧೀಮಂತರೆಂದು ಸರ್ವರಿಂದ ಶ್ಲಾಘನೆಗೆ ಪಾತ್ರರಾದ ಇವರ ಧರ್ಮನಿಷ್ಠೆ ಅಪೂರ್ವವಾದುದು.

ಹೀಗೆ ಕದಂಬ ಸಾಮ್ರಾಜ್ಯವನ್ನು ತ್ಯಜಿಸಿದ ಷಾಷಿಕ ಮನೆತನದವರಲ್ಲಿ ಒಂದು ಪೀಳಿಗೆಯು ದಕ್ಷಿಣ ಕನ್ನಡ ಪ್ರಾಂತಕ್ಕೂ ಮತ್ತೊಂದು ಪೀಳಿಗೆಯು ಕಳಿಂಗ ದೇಶಕ್ಕೂ, ಇನ್ನೊಂದು ಪೀಳಿಗೆಯು ಈಗಿನ ಮಹಾರಾಷ್ಟ್ರ ಪ್ರಾಂತಕ್ಕೂ, ಮತ್ತೊಂದು ಪೀಳಿಗೆಯು ಶೃಂಗಗಿರಿಯ ಪ್ರಾಂತ್ಯಕ್ಕೂ, ಉಳಿದವರು ದೇವಗಿರಿಗೂ ಹೋಗಿ ನೆಲೆಸಿದರು.

ದಕ್ಷಿಣ ಕನ್ನಡ ಜಿಲ್ಲೆ ಹೋಗಿ ನೆಲೆಸಿದ ಷಾಷಿಕ ಮನೆತನದಲ್ಲಿ ಮುಂದೆ ಶ್ರೀಮಧ್ಯಗೇಹಭಟ್ಟರು, ಅವರ ಪುತ್ರರಾದ ಶ್ರೀಮಧ್ವಾಚಾರ್ಯರು ಲೋಕವಿಖ್ಯಾತರಾದವರು, ಕಳಿಂಗದೇಶಕ್ಕೆ ಹೋದ ಷಾಷಿಕರಲ್ಲಿ ಶ್ರೀಶೋಭನಭಟ್ಟ (ಶ್ರೀಪದ್ಮನಾಭತೀರ್ಥರು), ಶ್ರೀಶಾಮಶಾಸ್ತ್ರಿ (ಶ್ರೀನರಹರಿತೀರ್ಥರುಗಳು ಮುಂದೆ ಪ್ರಖ್ಯಾತರಾದರು. ಮಹಾರಾಷ್ಟ್ರ ಪ್ರಾಂತ ಹೋಗಿ ನೆಲೆಸಿದ ಷಾಷಿಕರೇ ಮುಂದೆ 'ಚಿತ್ಪಾವನ'ರೆಂದು ವಿಖ್ಯಾತರಾದರು. ಈ ವಂಶದವರೇ ಮಹಾರಾಷ್ಟ್ರವನ್ನಾದ ಪೇಶ್ನೆಗಳು ಮತ್ತಿತರ ಪ್ರಖ್ಯಾತರು. ಶೃಂಗಗಿರಿಯತ್ತ ಹೋದ ಷಾಷಿಕರೇ ಅದೈತ ವಿದ್ಯಾಚಾರ್ಯರೆನಿಸಿದ ಶ್ರೀವಿದ್ಯಾರಣ್ಯ ಸಹೋದರರ ವಂಶೀಕರು,

ದೇವಗಿರಿಗೆ ಹೋಗಿ ನೆಲೆಸಿದ ಈ ಷಾಷಿಕ ಮನೆತನದ 'ಸ್ವರ್ಣಭಂಡಾರಿ' ವಂಶೀಕರ ವಿದ್ಯಾ-ಪ್ರತಿಭಾ- ಶೌರ್ಯ-ಸಾಹಸಾದಿಗಳನ್ನು ಕಂಡು ಚಾಲುಕ್ಯರಾಜರು ಈ ಮನೆತನದವರನ್ನು ತಮ್ಮ ಅಧಿಪತ್ಯಕ್ಕೆ ಸೇರಿದ್ದ ಜಮಖಂಡಿಯ ಮಾಂಡಲಿಕರನ್ನಾಗಿ ಮಾಡಿ ಗೌರವಿಸಿದರು. ಇದರಂತೆ ಇತರ ಷಾಷಿಕರಿಗೆ ಚಾಲುಕ್ಯ ರಾಜ್ಯದಲ್ಲಿ ಗ್ರಾಮ-ಭೂಮಿಗಳನ್ನಿತ್ತು, ಸಾಮ್ರಾಜ್ಯದ ವಿವಿಧ ಉನ್ನತ ಹುದ್ದೆಗಳನ್ನಿತ್ತು ಗೌರವಿಸಿದರು.

ಮೇಲೆ ಹೇಳಿದ 'ಸ್ವರ್ಣಭಂಡಾರಿ' ವಂಶದಲ್ಲಿಯೇ ಕೇಶವಭಟ್ಟ-ಧುಂಡಿರಾಜರು ಖ್ಯಾತರಾಗಿ ಜಮಖಂಡ ಪ್ರಾಂತ್ಯವನ್ನಾಳುತ್ತಿದ್ದರು. ಕೇಶವಭಟ್ಟರಿಗೆ ಕ್ರಿ.ಶ. ೧೨೮೨ರಲ್ಲಿ ಗೋವಿಂದಭಟ್ಟರು ಜನಿಸಿದರು. ಇವರು ಮಹಾದಿಗಂತಿ ಪಂಡಿತರಾಗಿದ್ದರು. ಕೇಶವಭಟ್ಟರ ತರುವಾಯ ಜಮಖಂಡಿ ಪ್ರಾಂತ್ಯವನ್ನು ಗೋವಿಂದಭಟ್ಟರು ಆಳುತ್ತಿದ್ದರು. ಆ ಕಾಲದಲ್ಲಿಯೇ ಅವರಿಗೆ ಶ್ರೀಮನ್ಮಧ್ವಾಚಾರ್ಯರ ಸಂದರ್ಶನವಾಗಿ ದರ್ಶನಮಾತ್ರದಿಂದಲೇ ಆಚಾರ್ಯರಲ್ಲಿ ಅಸದೃಶ ಭಕ್ತಿ-ಗೌರವಯುಕ್ತವಾದ ಗೋವಿಂದಭಟ್ಟರು ಶ್ರೀಮಧ್ವಾಚಾರ್ಯರ ಮತಾನುಯಾಯಿಗಳಾದರು. ಮುಂದೆ ಇವರು ವಿರಕ್ತರಾಗಿ ಕ್ರಿ.ಶ. ೧೩೧೨ರ ಹಾಗೆ ತಮ್ಮ ಚಿಕ್ಕಪ್ಪಂದಿರಾದ ಧುಂಡಿರಾಜರಿಗೆ ಪ್ರಾಂತ್ಯಾಧಿಪತ್ಯ ವಹಿಸಿ ಶ್ರೀಮಧ್ವಾಚಾರ್ಯರಿಂದ ಪರಮಹಂಸಾಶ್ರಮವನ್ನು ಸ್ವೀಕರಿಸಿ ಶ್ರೀಅಕ್ಟೋಭ್ಯತೀರ್ಥರೆಂಬ ಹೆಸರಿನಿಂದ ಮಧ್ವಾಚಾರ್ಯರ ಶಿಷ್ಯರಾದರು. ಶ್ರೀಮಧ್ವಾಚಾರ್ಯರು ಕೊನೆಯ ಬಾರಿ ಅದೃಶ್ಯರಾಗಿ ಬದರಿಕಾಶ್ರಮಕ್ಕೆ ತೆರಳುವ ಮೊದಲೇ ವ್ಯವಸ್ಥೆ ಮಾಡಿದ್ದಂತೆ ಶ್ರೀಮಧ್ವಾಚಾರ್ಯರ ವೇದಾಂತಸಾಮ್ರಾಜ್ಯಕ್ಕೆ, ಅವರ ಪಟ್ಟದ ಶಿಷ್ಯರುಗಳಾದ ಶ್ರೀಪದ್ಮನಾಭತೀರ್ಥ-ಶ್ರೀನರಹರಿತೀರ್ಥ-ಶ್ರೀಮಾಧವತೀಥರು ಮತ್ತು ಕಿರಿಯವರಾದ ಶ್ರೀಅಕ್ಟೋಭ್ಯತೀರ್ಥರುಗಳು ಕ್ರಮವಾಗಿ ಒಬ್ಬರಾದ ಮೇಲೆ ಒಬ್ಬರು ಮಹಾಸಂಸ್ಥಾನಾಧಿಪತಿಗಳಾಗಿ ದೈತಸಾಮ್ರಾಜ್ಯವನ್ನು ಪರಿಪಾಲಿಸಿದ ವಿಚಾರ ಇತಿಹಾಸ ಪ್ರಸಿದ್ಧವಾಗಿದೆ.

ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಶ್ರೀವಿದ್ಯಾರಣ್ಯರು ಮತ್ತು ಶ್ರೀಅಕ್ಟೋಭ್ಯತೀರ್ಥರು ಪೂರ್ವಾಶ್ರಮದಲ್ಲಿ ಸಹಾಧ್ಯಾಯಿಗಳಾಗಿ, ಮಿತ್ರರೂ ಆಗಿದ್ದ ಷಾಷಿಕ ಕುಲದೀಪಕರು, ಒಬ್ಬರು ಅವೈತಮತ ಸ್ಥಾಪಕರಾದರೆ ಮತ್ತೊಬ್ಬರು ದೈತಸಿದ್ಧಾಂತ ಸ್ಥಾಪಕರು. ತಾತ್ವಿಕ ಭಿನ್ನಾಭಿಪ್ರಾಯವಿದ್ದರೂ ಈರ್ವರೂ ಮಿತ್ರರಾಗಿಯೇ ಇದ್ದುದು ಗಮನಾರ್ಹವಾಗಿದೆ. ಅಂತೆಯೇ ಶ್ರೀಆಕ್ಟೋಭ್ಯತೀರ್ಥರು ಕೆಲಕಾಲ ಅಭಿವೃದ್ಧಿಯ ಶೈಶವಾವಸ್ಥೆಯಲ್ಲಿದ್ದ ವಿಜಯನಗರದಲ್ಲಿದ್ದು ಮುಂದೆ ಸಾಮ್ರಾಟನ ಅಳಿಯ ಸೋಮಶೇಖರನ ಅಧರ್ಮ ವ್ಯಾಪಾರದಿಂದ ಕಡುನೊಂದು ವಿಜಯನಗರವನ್ನೇ ತ್ಯಜಿಸಿ ಮಾನ್ಯಖೇಟದಲ್ಲಿ ವಾಸಮಾಡಹತ್ತಿದರು. ಕೆಲಕಾಲನಂತರ ಮುಳಬಾಗಿಲಿನಲ್ಲಿ ವಿದ್ಯಾರಣ್ಯ-ಅಕ್ಟೋಭ್ಯತೀರ್ಥರಿಗೆ ದೈತಾತ ವಾಖ್ಯಾರ್ಥವಾಗಿ ಶ್ರೀಅಕ್ಟೋಭ್ಯತೀರ್ಥರು 'ತತ್ತ್ವಮಸಿ' ವಾಖ್ಯಾರ್ಥದಲ್ಲಿ ವಿದ್ಯಾರಣ್ಯರನ್ನು ಜಯಿಸಿ 'ವಿಜಯಸ್ತಂಭ'ವನ್ನು ಸ್ಥಾಪಿಸಿದ ವಿಚಾರ ಇತಿಹಾಸ ಪ್ರಸಿದ್ಧವಾಗಿದೆ.

ಜಮಖಂಡಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಧುಂಡಿರಾಜರಿಗೆ (೧) ನರಹರಿನಾಯಕ, (೨) ಕೃಷ್ಣಪ್ಪನಾಯಕ, (೩) ರಘುನಾಥನಾಯಕ ಎಂಬ ಪುತ್ರರೂ, ಈರ್ವರು ಪುತ್ರಿಯರೂ ಜನಿಸಿ ಅಭಿವೃದ್ಧಿಸಿದರು. ಧುಂಡಿರಾಜರು ತಮ್ಮ ಜೇಷ್ಠಪುತ್ರಿಯನ್ನು 'ಭಾರತ' ಮನೆತನದ ಸರ್ವೋತ್ತಮದೇವನಿಗೆ ಕೊಟ್ಟು ಮದುವೆ ಮಾಡಿದರು. ಎರಡನೆಯ ಮಗಳನ್ನು ಗಂಗರಾಜರ ಆಳ್ವಿಕೆಗೆ ಸೇರಿದ್ದ ಬನ್ನೂರು ಪ್ರಾಂತ್ಯವನ್ನಾಳುತ್ತಿದ್ದ ಷಾಷಿಕವಂಶದ ಕಾಶ್ಯಪಗೋತ್ರದ ವಲ್ಲಭದೇವನಿಗೆ ಕೊಟ್ಟು ವಿವಾಹವಾಗಿದ್ದಿತು. ಇದೇ ಸಮಯದಲ್ಲಿ ಬಹುಮನಿ ರಾಜ್ಯದ ಅಲ್ಲಾವುದ್ದೀನನಿಗೂ ದೇವಗಿರಿಯವರಿಗೂ ವಿರೋಧ ಬೆಳೆದು ಯುದ್ಧವಾಯಿತು. ದೇವಗಿರಿಯ ಯಾದವರ ಮಾಂಡಲೀಕರಾಗಿದ್ದ ಜಮಖಂಡಿಯ ಧುಂಡಿರಾಜರು ಮತ್ತು ಅವಳ ಅಳಿಯ ಸರ್ವೋತ್ತಮದೇವ ಮತ್ತು ಧುಂಡಿರಾಜರ ಕಿರಿಯ ಪುತ್ರ ರಘುನಾಥನಾಯಕ ಇವರು ಸೈನ್ಯದೊಡನೆ ಹೊರಟು ದೇವಗಿರಿಯವರ ಪಕ್ಷ ವಹಿಸಿ ಅಲ್ಲಾವುದ್ದೀನನೊಡನೆ ಯುದ್ಧ ಮಾಡಿದರು. ದುರ್ದೈವದಿಂದ ಯುದ್ಧದಲ್ಲಿ ಧುಂಡಿರಾಜರಿಗೆ ಬಹು ಗಾಯಗಳಾಗಿ ಸರ್ವೋತ್ತಮದೇವನು ಮಡಿದು ವೀರಸ್ವರ್ಗ ಪಡೆದನು. ಮತ್ತೊಂದು ಕಡೆ ಯುದ್ಧ ಮಾಡುತ್ತಿದ್ದರಘುನಾಥನಾಯಕರಿಗೆ ಈ ವಿಚಾರ ತಿಳಿದು ಸಹಾಯಕ್ಕೆ ಬರುವಷ್ಟರಲ್ಲಿ ಅನಾಹುತ ನಡೆದುಹೋಗಿದ್ದಿತು. ಯುದ್ಧದಲ್ಲಿ ಬಹುಮನಿಯವರು ಜಯಿಸಿ ಜಮಖಂಡಿ ಪ್ರಾಂತ್ಯವು ಅವರ ವಶವಾಯಿತು. ಆದರೆ ಧುಂಡಿರಾಜರ ದೂರದ ಬಂಧುವೂ (ಷಾತ್ವಿಕ) ಬಹುಮನಿ ರಾಜ್ಯ ಸ್ಥಾಪಕನೂ, ಮಹಾಮಂತ್ರಿಯೂ ಅಲ್ಲಾವುದ್ದೀನನ ಪಾಲಕನೂ ಆದ ಗಂಗಾಧರಭಟ್ಟನ ಆಜ್ಞೆಯಂತೆ ಅಲ್ಲಾವುದ್ದೀನನು ಧುಂಡಿರಾಜರು ವೃದ್ಧರಾಗಿದ್ದರಿಂದ ಅವರ ಪುತ್ರರಾದ ರಘುನಾಥನಾಯಕರಿಗೆ ಮತ್ತೆ ಜಮಖಂಡಿ ಪ್ರಾಂತ್ಯದ ಅಧಿಕಾರವನ್ನು ವಹಿಸಿಕೊಟ್ಟು ಗೌರವಿಸಿದನು.

ರಘುನಾಥನಾಯಕರು ವೈರಾಗ್ಯ ತಾಳಿ ಆಸ್ತಿಯನ್ನು ನಾಲ್ಕು ಭಾಗ ಮಾಡಿ ಹಿರಿಯ ಸಹೋದರ ನರಹರಿನಾಯಕ, ಎರಡನೆಯ ಕಿರಿಯ ಸಹೋದರ ಕೃಷ್ಣಪ್ಪನಾಯಕರಿಗೆ ಮಾನವೀ ಪ್ರಾಂತ್ಯ, ಈಗಿನ ಶಿವಮೊಗ್ಗಾ ಜಿಲ್ಲೆಗೆ ಸೇರಿದ್ದ ಪುರಂದರ (ಪುರ)ಗಡದ ಕೆಲಭಾಗ ಹೀಗೆ ೨ ಭಾಗವನ್ನು ಕೊಟ್ಟು ಉಳಿದ ಎರಡು ಭಾಗವನ್ನು ಪಂಡಿತರ ಪೋಷಣೆ, ಯಾತ್ರಿಕರಿಗೆ ಅನ್ನದಾನಗಳಿಗಾಗಿ ವಿಶ್ವಸ್ಥ ಸಮಿತಿಗೆ ಒಪ್ಪಿಸಿಕೊಟ್ಟು ತಮ್ಮ ದೊಡ್ಡಪ್ಪನ ಪುತ್ರರೂ, ಆಚಾರ್ಯ ಮಹಾಸಂಸ್ಥಾನಾಧೀಶರೂ ಆದ ಶ್ರೀಅಕ್ಟೋಭ್ಯತೀರ್ಥರಿಂದ ಪರಮಹಂಸಾಶ್ರಮ ಪಡೆದು ಕ್ರಿ.ಶ. ೧೩೬೩-೬೫ ರ ಹಾಗೆ 'ಶ್ರೀಜಯತೀರ್ಥ'ರೆಂಬ ಹೆಸರಿನಿಂದ ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಿಗೆ ವಿಖ್ಯಾತ ಟೀಕೆಗಳನ್ನು ರಚಿಸಿ 'ಟೀಕಾಚಾರ್ಯ'ರೆಂದು ಜಗತ್ತಿನಲ್ಲಿ ವಿಖ್ಯಾತರಾಗಿ ಕೀರ್ತಿ ಗಳಿಸಿದರು.

ಷಾಷ್ಟಿಕ ವಂಶದ 'ಭಾರತ' ಮನೆತನದ ಸರ್ವೋತ್ತಮದೇವ (ಧುಂಡಿರಾಜರ ಹಿರಿಯ ಅಳಿಯ) ಯುದ್ಧಕಾಲದಲ್ಲಿ ಮಡಿದಾಗ ಅವನಿಗೆ ಸಣ್ಣವಯಸ್ಸಿನ ರಾಜದೇವ ಮತ್ತು ಜಯದೇವ ಎಂಬ ಇಬ್ಬರು ಪುತ್ರರಿದ್ದರು. ಹಿರಿಯನಾದ ರಾಜದೇವನೇ ಮುಂದೆ ಶ್ರೀರಾಜೇಂದ್ರರಾದರು. ಅವರ ತಮ್ಮ ಜಯದೇವನೇ ಶ್ರೀಜಯಧ್ವಜತೀರ್ಥರಾದರು. ಶ್ರೀವಿದ್ಯಾಧಿರಾಜರು ಆಶ್ರಮ ನೀಡಿದ ಹಿರಿಯರೇ ಶ್ರೀರಾಜೇಂದ್ರತೀರ್ಥರು. ಶ್ರೀವಾಗೀಶತೀರ್ಥರ ಅಣ್ಣನ ಪುತ್ರರೇ ಕಿರಿಯರಾದ ಶ್ರೀಕವೀಂದ್ರತೀರ್ಥರು. ಇವರಿಬ್ಬರೂ ಶ್ರೀವಿದ್ಯಾಧಿರಾಜರ ಶಿಷ್ಯರಾಗಿ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳಾದರು. ಶ್ರೀರಾಜೇಂದ್ರರ ತರುವಾಯ ಅವರ ಪೂರ್ವಾಶ್ರಮ ಸಹೋದರರಾದ ಜಯದೇವ, ಶ್ರೀರಾಜೇಂದ್ರರ ನಂತರ ಆ ಮಹಾಪೀಠದಲ್ಲಿ ಶ್ರೀಜಯಧ್ವಜತೀರ್ಥರೆಂಬ ಹೆಸರಿನಿಂದ ವಿರಾಜಿಸಿದರು.

ಅರವತ್ತೊಕ್ಕಲು ಮನೆತನದ ೧೪ ಗೋತ್ರಗಳಲ್ಲಿ ವಿಶ್ವಾಮಿತ್ರ ಗೋತ್ರವಾ ಒಂದು. ಈ ಗೋತ್ರಕ್ಕೆ ಆರು ಮನೆತನಗಳಿದ್ದು ಅದರಲ್ಲಿ 'ಬೆಟ್ಟ'ದ ಮನೆತನವು ವಿಖ್ಯಾತವಾದುದು. ಈ ಮನೆತನದಲ್ಲಿ ತಿಮ್ಮಣ್ಣಭಟ್ಟರೆಂಬುವರು ಪಂಡಿತ ಪ್ರಕಾಂಡರೂ, ತೇಜಸ್ವಿಗಳೂ ಆಗಿದ್ದರು. ಇವರು ಚಂದ್ರಗಿರಿಯ ರಾಜನಾಗಿದ್ದ ನರಹರಿವರ್ಮನೆಂಬ ರಾಜನಿಂದ ತಿರುಪತಿ ಶ್ರೀನಿವಾಸದೇವರ ದೇವಾಲಯದ ಆಡಳಿತ-ಧಾರ್ಮಿಕ ವಿಚಾರಾದಿ ಅಧಿಕಾರಿಗಳನ್ನು ಪಡೆದಿದ್ದರು. ಆದ್ದರಿಂದಲೇ ತಿಮ್ಮಣ್ಣಭಟ್ಟರನ್ನು ಜನರು ಬೆಟ್ಟದ ಆಚಾರ್ಯರೆಂದು ಗೌರವಿಸುತ್ತಿದ್ದರು.

ಈ ಮನೆತನದಲ್ಲಿ ಶೇಷಗಿರಿಶರ್ಮ ಮತ್ತು ಭೀಮಶರ್ಮ ಎಂಬ ಇಬ್ಬರು ಸಹೋದರರು ಹೆಸರು ಗಳಿಸಿದರು. ಹಿರಿಯರಾದ ಶೇಷಗಿರಿಶರ್ಮರಿಗೆ ಬನ್ನೂರಿನ ವಲ್ಲಭದೇವನ ಪುತ್ರಿಯಾದ ಭಾರತೀದೇವಿಯನ್ನು ಕೊಟ್ಟು ವಿವಾಹವಾಗಿದಿತು. ಈ ಶೇಷಗಿರಿಸರ್ಮ ಮತ್ತು ಭಾರತೀದೇವಿಯರಿಗೆ ಅನೇಕ ಪುತ್ರರಾದರು. ಅವರೇ ವಿಖ್ಯಾತರಾದ ಶ್ರೀಪುರುಷೋತ್ತಮತೀರ್ಥರು, ಶ್ರೀಸ್ವರ್ಣವರ್ಣತೀರ್ಥರು, ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀಲಕ್ಷ್ಮೀನಾರಾಯಣಮುನಿಗಳು ಅಂದರೆ ಶ್ರೀಪಾದರಾಜತೀರ್ಥರು,

ಶ್ರೀಪುರುಷೋತ್ತಮತೀರ್ಥರು, ಶ್ರೀರಾಜೇಂದ್ರತೀರ್ಥರ ಶಿಷ್ಯರಾದ ಶ್ರೀಜಯಧ್ವಜತೀರ್ಥರಿಂದ ಆಶ್ರಮ ಪಡೆದ ಆ ಮಹಾಸಂಸ್ಥಾನಕ್ಕೆ ಅಧಿಪತಿಗಳಾದರು. ಅವರ ತರುವಾಯ ಪೀಠಕ್ಕೆ ಬಂದ ಮಹನೀಯರೇ ಶ್ರೀಬ್ರಹ್ಮಣ್ಯತೀರ್ಥರು, ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀಲಕ್ಷ್ಮೀನಾರಾಯಣಮುನಿಗಳು ಶ್ರೀಪದ್ಮನಾಭತೀರ್ಥರಿಂದ ಸ್ಥಾಪಿತವಾಗಿ ಅವರ ಹೆಸರಿನಿಂದಲೇ ಖ್ಯಾತವಾದ ಶ್ರೀಪದ್ಮನಾಭತೀರ್ಥರ ಮಠದ ಅಧಿಪತಿಗಳಾದರು.

ಈ ಮಹನೀಯರ ವಂಶಬಂಧುಗಳೇ ಕಾಶ್ಯಪಗೋತ್ರದ ಸುರೇಂದ್ರತೀರ್ಥರು, ಚಿನ್ನಭಂಡಾರಿಯ ಮನೆತನದ ಶ್ರೀವಿಜಯೀಂದ್ರತೀರ್ಥರು ಹಾಗೂ ಶ್ರೀಸುಧೀಂದ್ರತೀರ್ಥರುಗಳು. ಈ ಮೂವರೂ ಶ್ರೀಕವೀಂದ್ರತೀರ್ಥರ ಸತ್ಪರಂಪರೆಯ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳಾಗಿ ಅಖಂಡ ಕೀರ್ತಿ ಗಳಿಸಿದರು. ಇವರ ಬಂಧುಗಳೇ ಕಾಶ್ಯಪ ಗೋತ್ರದ ಲಕ್ಷ್ಮೀನರಸಿಂಹಾಚಾರ್ಯರು. ಇವರು ಜಗನ್ಮಾನ್ಯರಾದ ಶ್ರೀರಾಘವೇಂದ್ರಸ್ವಾಮಿಗಳ ಪೂರ್ವಾಶ್ರಮ ಅಕ್ಕ ವೆಂಕಟಾಂಬಾದೇವಿಯ ಪತಿಗಳು.

ಶ್ರೀಜಯತೀರ್ಥರ ಪೂರ್ವಾಶ್ರಮ ತಮ್ಮಂದಿರಾದ ಭಾರದ್ವಾಜ ಗೋತ್ರದ ನರಹರಿನಾಯಕರ ಪುತ್ರರ ಪ್ರಪತ್ರರೇ ಶ್ರೀವಿಜಯೀಂದ್ರತೀರ್ಥರು ಮತ್ತು ಅವರ ತಮ್ಮಂದಿರಾದ ಗುರುಪ್ರಸಾದರು. ನರಹರಿನಾಯಕರ ತಮ್ಮಂದಿರಾದ ಕೃಷ್ಣಪ್ಪನಾಯಕರ ಮರಿಮಕ್ಕಳ ಪುತ್ರರಾದ ವರದಪ್ಪನಾಯಕರ ಪುತ್ರರೇ ಶ್ರೀನಿವಾಸನಾಯಕರು. ಇವರೇ ಶ್ರೀವಾಸಕುಲ- ಮುಕುಟಮಣಿಗಳಾದ ಶ್ರೀಪುರಂದರದಾಸರು. ಶ್ರೀಲಕ್ಷ್ಮೀನಾರಾಯಣಮುನಿಗಳ (ಶ್ರೀಪಾದರಾಜರು) ವಂಶಬಂಧುಗಳೇ ಗೌತಮ ಗೋತ್ರದ 'ಬೀಗಮುದ್ರೆ' ಮನೆತನದ ಶ್ರೀಕೃಷ್ಣಭಟ್ಟರು ಅಂದರೆ ಶ್ರೀರಾಘವೇಂದ್ರಸ್ವಾಮಿಗಳವರ ಮುತ್ತಾತಂದಿರು, ಹೀಗೆ ವಿಖ್ಯಾತವಾದ ಷಾಷಿಕರ ವಂಶದಲ್ಲಿ ನಮ್ಮ ಈ ಕಥಾನಕವು ಪ್ರಾರಂಭವಾಗುವ ಕಾಲದಲ್ಲಿ ಶ್ರೀರಾಜೇಂದ್ರರು ಅಲಂಕರಿಸಿದ್ದ ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ತಪೋನಿಧಿಗಳಾದ ಶ್ರೀಬ್ರಹ್ಮಣ್ಯತೀರ್ಥರು ಅಲಂಕರಿಸಿದ್ದರು.