
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧. ಹಿನ್ನೆಲೆ
ಭಾರತಯುದ್ದವು ಮುಗಿದು ಧರ್ಮರಾಜನ ಪಟ್ಟಾಭಿಷೇಕವಾಗಿ, ಅವನು ಅಖಂಡ ಭರತವರ್ಷದ ಸಾರ್ವಭೌಮನಾಗಿ ಧರ್ಮದಿಂದ ರಾಜ್ಯಪರಿಪಾಲನೆ ಮಾಡುವಂತೆ ಅನುಗ್ರಹಿಸಿದ ಶ್ರೀಕೃಷ್ಣದ್ವಾರಕೆಗೆ ಹಿಂದಿರುಗಿದ್ದಾನೆ. ಕುರುಕ್ಷೇತ್ರ ಯುದ್ಧದಲ್ಲಿ ಭೀಮಸೇನದೇವರ ಗದಾಪ್ರಹಾರದಿಂದ ಅಸುನೀಗಿದ ಬಾಹ್ಲೀಕರಾಜರರು ಹರಿವರ್ಷಖಂಡದಲ್ಲಿ ಪ್ರಹ್ಲಾದ ರೂಪದಿಂದ ರಾರಾಜಿಸಿದ್ದಾರೆ. ಕಾಲಚಕ್ರ ಉರುಳಿತು.
ಪ್ರಹ್ಲಾದರಾಜರು ಪ್ರತಿದಿವಸವಾ ಲಕ್ಷ್ಮೀಪತಿಯ ಮಂಗಳಕರವಾದ ನಸುಗೆಂಪು ಬಣ್ಣದ ಚಿಗುರಿನಂತೆ ಶೋಭಿಸುವ ಪಾದಪಲ್ಲವವನ್ನು ತಮ್ಮ ಚಿತ್ತದಲ್ಲಿ ನೆಲೆಗೊಳಿಸಿ ವೇದೋಕ್ತ ರೀತಿಯಲ್ಲಿ ಜ್ಞಾನ-ಭಕ್ತಿಪೂರ್ವಕವಾಗಿ, ಸಂಸಾರದ ಸಮಸ್ತ ಆಶೆಗಳನ್ನೂ ಕಿತ್ತೊಗೆದು, ತ್ರಿನೇತ್ರನಾದ ನೃಕಂಠೀರವನನ್ನು ಪೂಜಿಸುತ್ತಾ ಶ್ರೀಹರಿಯ ಮಹಿಮಾತಿಶಯಗಳನ್ನು ಚಿಂತಿಸುತ್ತಾ ಪರಮಾನುದದಿಂದ ಕಾಲಕಳೆಯುತ್ತಿದ್ದಾರೆ.'
ಹೀಗಿರಲೊಂದು ದಿನ ನಾರದಮಹರ್ಷಿಗಳು ಹರಿವರ್ಷ ಖಂಡಕ್ಕೆ ಚಿತ್ತೈಸಿದರು. ಆಗ ಪ್ರಹ್ಲಾದರು ಸಂತೋಷದಿಂದ ಗುರುಗಳ ಪಾದಗಳಿಗೆರಗಿ ನಿಂತು ಕರಮುಗಿದು “ಕಾಪಾಡಿ, ಕಾಪಾಡಿ ಗುರುದೇವ” ಎಂದು ವಾಕ್ಯಗಳಿಂದಲೂ ಒಂದೊಂದು ಅವರ ಗುಣಗಳನ್ನು ಕೊಂಡಾಡಿ “ಸ್ವಾಮಿ, ನಿಮ್ಮ ದರ್ಶನವಿಂದು ನನಗಾದುದು ಪುಣ್ಯವಿಶೇಷ. ಗುರುವರ್ಯ ! ತಾವೀಗ ಎಲ್ಲಿಂದ ದಯಮಾಡಿಸಿದಿರಿ ಆ ವಿಚಾರವನ್ನು ಹೇಳಿರಿ” ಎಂದು ಪ್ರಾರ್ಥಿಸಿದರು.
ಆಗ ನಾರದರು ಪ್ರಹ್ಲಾದರ ಮಾತು ಕೇಳಿ 'ಹಾ ಹಾ ಕೃಷ್ಣಾ' ಎನ್ನುತ್ತ ಕೃಷ್ಣನನ್ನು ನೆನೆದು ಅವನ ಮಹಿಮೆ ಎಷ್ಟು ಚಂದ ಎಂದು ಮೈಮರೆತರು. ತಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ ಎಂಬುದೂ ಮರೆತುಹೋಯಿತವರಿಗೆ! ಏನು ಮಾಡುತ್ತಿದ್ದೇವೆ ಎಂಬುದೂ ಮರೆತುಹೋಯಿತವರಿಗೆ! ಶ್ರೀಕೃಷ್ಣನ ಮಂಗಳ ಸ್ವರೂಪವೇ ಅವರ ಚಿತ್ರದಲ್ಲಿ ನೆಲೆನಿಂತುಬಿಟ್ಟಿತು. ಆ ಪುರುಷೋತ್ತಮನ ಅನಂತಕಲ್ಯಾಣಗುಣಗಳು, ಶ್ರೀಕೃಷ್ಣಾವತಾರ ಲೀಲಾವಿಲಾಸಗಳು, ಅವರ ನೆನಪಿನ ಸುಳಿಯಲ್ಲಿ ನಲಿಯಹತ್ತಿದವು. ಅದರಿಂದ ಕೃಷ್ಣಗ್ರಹಗೃಹೀತಾತ್ಮರಾದ ನಾರದರು ದಿಕ್ಕುಗಳನ್ನೇ ಮರೆತು ಭಕ್ತು ದ್ರೇಕದಿಂದ ಮನಬಂದಂತೆ ಕುಣಿದಾಡಹತ್ತಿದರು. ಅವರ ಕಣ್ಣುಗಳಲ್ಲಿ ಭಕ್ತಿಪಾರವದಿಂದ ಆನಂದಾಶ್ರು ನಕ್ಷತ್ರಗಳಂತೆ ಹೊಳೆಯುತ್ತಾನೆಂದು ಬಿಂ ಹರಿಯತೊಡಗಿತು. ಮಕ್ಕಳಂತೆ ಜಿಗಿದಾಡುತ್ತಾ ಕಿಲಕಿಲನೆ ನಗುತ್ತಾ ಪ್ರಹ್ಲಾದವನ್ನು ಆಲಿಂಗಿಸಿ ಶ್ರೀಕೃಷ್ಣನು ಹೇಳಿದ ರಹಸ್ಯವಾರ್ತೆಯನ್ನರುಹುತ್ತಾ “ಪ್ರಹ್ಲಾದ! ನಾವೆಷ್ಟು ಧನ್ಯರೋ! ವತ್ಸ, ಕೇಳೋ ಶ್ರೀಕೃಷ್ಣನು ಹೇಳಿದ ಮಾತನ್ನು ನ ಗೊತ್ತೆ? ಶ್ರೀಹರಿಯು ಜ್ಞಾನಕಾರ್ಯಕ್ಕಾಗಿ ಜಗತ್ರಾಣವನ್ನು ಭೂಮಿಯಲ್ಲವತರಿಸಲು ಕಳುಹುವನಂತೆ! ಆ ವಾಯುದೇ ಸೇವೆಗೆ ನಾನು ನೀನು ಇಬ್ಬರೂ ಅವತರಿಸಬೇಕಂತೆ! ಇದರಕ್ಕಿಂತ ಆನಂದ ಬೇರಾವುದಿದೆ ಪ್ರಹ್ಲಾದ? ನಿಜವಾಗಿ ನಾನ ಭಾಗ್ಯಶಾಲಿಗಳಲ್ಲವೇನಪ್ಪಾ! ಶ್ರೀಕೃಷ್ಣನೇ ನಾವಿಬ್ಬರೂ ಅವತರಿಸಿ ತನ್ನ ಮತ್ತು ವಾಯುದೇವನ ಸೇವೆ ಮಾಡಬೇಕೆಂದ ಆಜ್ಞಾಪಿಸಿದ್ದಾನೆ! ಆ ಪ್ರಭುವಿಗೆ ಭಕ್ತರಲ್ಲಿ ಅದೆಷ್ಟು ವಾತ್ಸಲ್ಯ, ತಮ್ಮವರಲ್ಲಿ ಅದೇನು ಕಾರುಣ್ಯವಾ ಆನಂದ-ಉತ್ಸಾಹಗಳಿಂದ ಬಡಬಡನೆ ಹೇಳಿಬಿಟ್ಟರು.
ಗುರುಗಳ ಮಾತನ್ನು ಕೇಳಿ ಪ್ರಹ್ಲಾದರಾಜರಿಗೆ ಮೈಪುಳಕಿಸಿತು. ಆನಂದತುಂದಿಲರಾಗಿ ಪ್ರಹ್ಲಾದರು ನಾರದರಲ್ಲಿ ವಿಜ್ಞಾಪಿಸಿದರು - “ಏನೆಂದಿರಿ ಗುರುದೇವ! ಶ್ರೀಹರಿಯ ಸೇವೆಗೆ ಕಲಿಯುಗದಲ್ಲಿ ನಾನೂ ನೀವಾ ಅವತರಿಸಬೇಕೆ? ಶ್ರೀಕೃಷ್ಣನೇ ಹೀಗೆ ಅಪ್ಪಣೆ ಕೊಡಿಸಿದನೆ? ಆಹಾ ಸ್ವಾಮಿ, ನಾವೆಂಥ ಪುಣ್ಯಶಾಲಿಗಳು! ಆ ಮಹಾಮಹಿಮನನ್ನು ಮತ್ತೆ ಸೇವಿಸುವ ಭಾಗ್ಯ ನಮಗೆ ದೊರಕುವುದೇ? ಇಂತಹ ಪರಮಸಂತೋಷಕರ ವಾರ್ತೆಯನ್ನರುಹಿದ ನಿಮಗೆ ಇಕೋ, ನನ್ನ ಅನಂತ ವಂದನೆಗಳು!” ಎಂದು ಗುರುಗಳಿಗೆ ನಮಸ್ಕರಿಸಿದರು.
ಆಗ ನಾರದ ಮುನಿಗಳು ಕಿಲಕಿಲನೆ ನಕ್ಕು ಆನಂದಪರವಶರಾಗಿ “ಪ್ರಹ್ಲಾದ, ಇನ್ನೊಂದು ವಿನೋದ-ಸ್ವಾರಸ್ಯಕರ ವಿಚಾರವನ್ನು ಶ್ರೀಕೃಷ್ಣ ಹೇಳಿದ್ದಾನೆ. ಅದೇನು ಗೊತ್ತೆ? ಕಲಿಯುಗದಲ್ಲಿ ನಾನು ನಿನ್ನ ಶಿಷ್ಯನಾಗಿ ಜನಿಸಬೇಕಂತೆ! ವತ್ತ! ಶ್ರೀಹರಿಯ ಸಂಕಲ್ಪ, ಲೀಲಾವಿಲಾಸಗಳಷ್ಟು ವೈಚಿತ್ರ ಪೂರ್ಣ ನೋಡಿದೆಯಾ?" ಎನಲು ಪ್ರಹ್ಲಾದರು ಆಶ್ಚರ್ಯಚಕಿತರಾಗಿ “ಗುರುದೇವ! ಇದೇನು ಹೇಳುತ್ತಿರುವಿರಿ? ನಿಮ್ಮ ಅನುಗ್ರಹೋಪಜೀವಿಯೂ, ಶಿಷ್ಯನೂ ಆದ ನನಗೆ ನೀವು ಶಿಷ್ಯರಾಗುವುದೇ? ಇದೆಂದಿಗೂ ಆಗದ ಮಾತು ಸ್ವಾಮಿ” ಎಂದು ಹೇಳಿದರು.
ನಾರದರು ನಸುನಕ್ಕು “ಮತ್ತ! ಶ್ರೀಹರಿಯ ಸಂಕಲ್ಪ, ಇಚ್ಛೆಗಳಿಗೆ ವಿರುದ್ಧವಾಗಿ ವರ್ತಿಸಲು ನಾವು ಸಮರ್ಥರೆ? ಅವನ ಇಚ್ಛೆಯಂತೆ ನಡೆಯುವುದೊಂದೇ ನಮ್ಮ ಧರ್ಮ, ಕರ್ತವ್ಯ! ಕೇಳು ಪ್ರಹ್ಲಾದ! ಕುರುಕ್ಷೇತ್ರಯುದ್ಧದಲ್ಲಿ ವೃಕೋದರನ ಗದಾಪ್ರಹಾರದಿಂದ ಅಸುನೀಗುವಾಗ ಅವರಲ್ಲಿ ನೀನು ಬೇಡಿದ ವರವು ನೆನಪಿದೆಯ? ವೈದಿಕ ಮಾರ್ಗವನ್ನು ಅನುಸರಿಸಿ ಭಗವಂತನಿಗೆ ಪ್ರಿಯವಾದ ಜ್ಞಾನಕಾರ್ಯದಲ್ಲಿ ಸೇವೆ ಸಲ್ಲಿಸಲು ಕಲಿಯುಗದಲ್ಲಿ ಅವತರಿಸುವ ಶ್ರೀವಾಯುದೇವರ ಮತಾನುಯಾಯಿಯಾಗಿ, ಅವರ ಭಕ್ತನಾಗಿ, ಪ್ರಾಜಕನಾಗಿ ಸೇವೆ ಮಾಡುವ ಭಾಗ್ಯವನ್ನು ಕರುಣಿಸಬೇಕೆಂದು ನೀನು ಬೇಡಿದೆಯಲ್ಲವೇ? ಆಗ ಭೀಮಸೇನದೇವರು ನಿನ್ನ ಭಕ್ತಿಗೆ ಮೆಚ್ಚಿ ಅದರಂತೆ ವರವನ್ನು ಅನುಗ್ರಹಿಸಿದ್ದನ್ನು ಜ್ಞಾಪಿಸಿಕೊ ಪ್ರಹ್ಲಾದ! ಈಗ ನಾವಿಬ್ಬರೂ ಕಲಿಯುಗದಲ್ಲಿ ಭಾರತಾವನಿಯಲ್ಲಿ ಅವತರಿಸಿ ಶ್ರೀಹರಿ-ವಾಯುಗಳ ಸೇವೆ ಮಾಡುವ ಕಾಲ ಸನ್ನಿಹಿತವಾಗಿದೆ. ಶ್ರೀಕೃಷ್ಣನ ಆಣತಿಯನ್ನೂ, ಈ ವಿಚಾರವನ್ನೂ ನಿನಗೆ ತಿಳಿಸಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ಕುಮಾರ! ನಿನ್ನ ಮುಂದಿನ ಅವತಾರಕ್ಕೆ ಸಿದ್ಧನಾಗು! ಪ್ರಹ್ಲಾದ, ನಿನಗೆ ಮಂಗಳವಾಗಲಿ, ಮತ್ತೆ ಭೂಲೋಕದಲ್ಲಿ ಗುರು-ಶಿಷ್ಯರಾಗಿ (ನಸುನಕ್ಕು) ಈ ಬಾರಿ ನೀನು ಗುರುವಾಗಿ ನಾನು ಶಿಷ್ಯನಾಗಿ ಸೇರೋಣ” ಎಂದು ಹೇಳಿ ಪ್ರಹ್ಲಾದರನ್ನು ಆಶೀರ್ವದಿಸಿ ಹರಿವರ್ಷಖಂಡದಿಂದ ನಾರದರು ತೆರಳಿದರು.
ಶ್ರೀಪ್ರಹ್ಲಾದರಾಜರು ನಾರದರ ವಚನ, ಭೀಮಸೇನದೇವರ, ಶ್ರೀಕೃಷ್ಣನ ಆಜ್ಞೆಗಳನ್ನು ಮತ್ತೆ ಮತ್ತೆ ಸ್ಮರಿಸುತ್ತಾ ಹಿರಿಹಿರಿ ಹಿಗುತ್ತಾ ತಮ್ಮ ಅವತಾರಕಾಲವನ್ನು ಪ್ರತೀಕ್ಷಿಸುತ್ತಾಹರಿವರ್ಷಖಂಡದಲ್ಲಿ ವಿರಾಜಿಸಿದರು.