Kaliyugada Kalpataru Sri Vyasa Raja Yati Sarvabhouma Ancestry

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪. ವಂಶಪರಂಪರ

ಸಕಲ ವಿದ್ಯೆಗಳಿಗೆ - ಸದ್ಗುಣಗಳಿಗೆ ಮಾತೃಸ್ಥಾನ ಷಾಷ್ಠಿಕ ಮಶ (ಅರವತ್ತೊಕ್ಕಲು ಮನೆತನ) ಸರಸ್ವತಿಯ ತಮ್‌ಮಮನೆಯೆನಿಸಿದ ಈ ಷಾಷಿಕ ಮನೆತನವು ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದುದು. ಕಲೆ, ಕಲಿತನ, ಜ್ಞಾನ, ಔದಾರ್ಯ, ಸೌಶೀಲ್ಯ, ಪ್ರತಿಭೆಗಳ ಪ್ರಭಾವಳಿಯಿಂದ ಬೆಳಗುತ್ತಾ, ಅತಿ ಪ್ರಾಚೀನಕಾಲದಿಂದಲೂ ಅನಿತರ ಸಾಧಾರಣ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸುಗಳ ಮಿಂಚಿನ ಗೊಂಚಲುಗಳನ್ನು ಎಲ್ಲೆಡೆ ತೂಗಿಬಿಡುತ್ತಾ ಇಂದಿನವರೆವಿಗೂ ತನ್ನ ಧೀಮಂತಿಕೆ - ಶ್ರೀಮಂತಿಕೆಗಳಿಂದ ಜಗನ್ಮಾನ್ಯವಾದ ಮನೆತನವೆನಿಸಿದೆ.

ಈ ಮಹಾಮಶವೆಂಬ ಅಂಬರದಲ್ಲಿ ತಮ್ಮ ಜ್ಞಾನಕಿರಣಗಳಿಂದ, ಅಮೃತಸ್ಯಂದಿವಾಕ್ತಂದ್ರಿಕೆಯ ತಂಗಿರಣಗಳಿಂದ ಜಗತ್ತನ್ನು ಪರವಶಗೊಳಿಸಿದ ಅನೇಕ ಸೂರ್ಯಚಂದ್ರಮರಂತಹ ಕಾಂತಿಸಂಪನ್ನರು ಪ್ರಕಾಶಿಸಿದ್ದಾರೆ. ಈ ವಂಶೋದ್ಯಾನದಲ್ಲಿ ಸಕಲಕಲಾಪಾರೀಣ ಮಯೂರಗಳು ಗರಿಗೆದರಿ ನರ್ತಿಸಿವೆ. ಅಷ್ಟೇ ಏಕೆ, ಈ ಷಾತ್ಮಿಕ ಸಂಶಸಾರಸದಲ್ಲಿ ಜಗತ್ತನ್ನೇ ಪಾವನಗೊಳಿಸಿದ ಅನೇಕ ರಾಜಹಂಸಗಳು (ಪರಮಹಂಸರುಗಳು) ವಿಹರಿಸಿವೆ.

ಷಡರ್ಶನಗಳು ಈ ಮನೆತನದ ಅಂಗಣದಲ್ಲಿ ಅಂಬೆಗಾಲಿಟ್ಟು ನಲಿಯುತ್ತಿದ್ದವು. ವೇದ-ವೇದಾಂಗ-ಷದರ್ಶನ- ಸಂಗೀತ-ಸಾಹಿತ್ಯ ಕಲಾಪಾರಂಗತರಾದ, ಸದಾಚಾರ, ಶೀಲ, ಔದಾರ್ಯ, ಪರಾಕ್ರಮ, ಪ್ರತಿಭೆಗಳಿಂದ ಕಂಗೊಳಿಸುವ ಬ್ರಹ್ಮನಿಷ್ಠ, ಶೂತ್ರೀಯರಾದ, ಯಜನ, ಯಾಜನ ಸಂಪನ್ನರಾದ ಮಹನೀಯರಿಂದ ಬೆಡಗುಗೊಂಡ ಈ ಮನೆತನದ ಹಿರಿಮೆ-ಗರಿಮೆ-ವೈಶಿಷ್ಟ್ಯಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಎನಿಸುವುದು.

ವಿಶ್ವಸಾರಸ್ವತ ಭವ್ಯ ಭಂಡಾರಕ್ಕೆ, ಧರ್ಮ, ಸಂಸತಿ, ಸಭ್ಯತೆಗಳಿಗೆ ಈ ಮನೆತನದವರ ಕೊಡುಗೆ ಅಪಾರವಾದುದು. ಪ್ರಪಂಚ ಪ್ರಸಿದ್ಧ ಪರಾಕ್ರಮ. ಇತಿಹಾಸದಲ್ಲಿಯೂ ಈ ಮನೆತನದ ಮಹನೀಯರ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದೆಂದರೆ ತಪ್ಪಾಗಲಾರದು. ದೊರಕುವ ಅಲ್ಪಸ್ವಲ್ಪ ಆಧಾರಗಳಿಂದ ವಿವೇಚಿಸಿದಾಗ ಈ ಷಾತ್ವಿಕವಶವ ಸುಮಾರು ಮೂರು-ನಾಲ್ಕನೆಯ ಶತಮಾನಗಳಿಂದಲೂ ಭಾರತದೇಶದಲ್ಲಿ ಅತ್ಯಂತ ಪ್ರಖ್ಯಾತವಾದ ಮನೆತನವಾಗಿತ್ತೆಂದು ವ್ಯಕ್ತವಾಗುವುದು.

ಕರ್ನಾಟಕದ ಕದಂಬ ಸಾಮ್ರಾಜ್ಯ ಸ್ಥಾಪಕನಾದ ಮಯೂರವರ್ಮ (ಶರ್ಮನು ಆ ವೇಳೆಗೆ ಉತ್ತರ ಭಾರತದ ಪಂಜಾಬ್ ಪ್ರಾಂತ್ಯದ ಅಹಿಚ್ಛತ್ರದಲ್ಲಿ ವಾಸವಾಗಿದ್ದ ಈ ಷಾಷ್ಠಿಕ ವಂಶೀಕರನ್ನು ದಕ್ಷಿಣಾಪಥಕ್ಕೆ ಕರೆತಂದು ಅವರಿಗೆ ಅನೇಕ ಅಗ್ರಹಾರಗಳು, ಭೂಸ್ವಾಸ್ತಿ, ವೃತ್ತಿಗಳನ್ನು ದಾನವಾಗಿತ್ತು. ಅವರು ಈಗಿನ ಷಿಕಾರಿಪುರದ ತಾಳಗುಂದ ಗ್ರಾಮದಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿದನು. ಕರ್ಣಪಾರ್ಯನು ರಚಿಸಿದ ಕದಂಬರಾಜವಿಜಯದ ಆಧಾರದಂತೆ ಕ್ರಿಸ್ತಶಕ ನಾಲ್ಕನೆಯ ಶತಮಾನದಲ್ಲಿ ಈ ಷಾಷಿಕರನ್ನು ತಾನು ಮಾಡಲಿರುವ ಅಶ್ವಮೇಧಯಾಗಕ್ಕಾಗಿ ಅಹಿಚ್ಛತ್ರದಿಂದ ಕದಂಬ ಸಾಮ್ರಾಜ್ಯದ ತ್ರಿನೇತ್ರ ಕದಂಬನು ಕರೆಯಿಸಿಕೊಂಡು ಷಿಕಾರಿಪುರದ ತಾಳಗುಂದ ಗ್ರಾಮದಲ್ಲಿ ಅಗ್ರಹಾರ, ವೃತ್ತಿಗಳನ್ನು ಕಲ್ಪಿಸಿಕೊಟ್ಟು ಅವರು ಅಲ್ಲಿ ನೆಲೆಸಿ ಸಾಮ್ರಾಜ್ಯದ ಹಿತಚಿಂತನೆ ಮಾಡುತ್ತಾ ಸಹಾಯಕರಾಗಿರಲು ವ್ಯವಸ್ಥೆ ಮಾಡಿದನೆಂದು ತಿಳಿದುಬರುವುದು.

ಈ ಅರವತ್ತೊಕ್ಕಲು ಮನೆತನದವರು ಮೂಲತಃ ಅಚ್ಚಕನ್ನಡಿಗರು, ಕನ್ನಡನಾಡಿನಿಂದ ಅನೇಕ ಕನ್ನಡ ಕಲಿಗಳು ಭಾರತದ ವಿವಿಧ ಭಾಗಗಳಿಗೆ ವಲಸೆ ಹೋಗಿ ಅಲ್ಲಿ ತಮ್ಮ ಶೌರ್ಯೌದಾರ್ಯ ಪರಾಕ್ರಮಗಳಿಂದ ವಿಖ್ಯಾತರಾಗಿ, ರಾಜ್ಯಗಳನ್ನು ಕಟ್ಟಿ ಅಥವಾ ರಾಜರುಗಳಿಗೆ ಬೆಂಬಲರಾಗಿದ್ದು, ಸ್ವತಃ ವಿವಿಧ ರಾಜ್ಯಗಳನ್ನಾಗಿ ಕನ್ನಡಿಗರ ಪ್ರತಾಪವನ್ನು ತೋರಿಸಿಕೊಟ್ಟು ಕೀತಿ ಗಳಿಸಿದ ವಿಚಾರ ಇತಿಹಾಸದ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಅದರಂತೆ ಮೂಲತಃ ಅಚ್ಚಕನ್ನಡಿಗರಾದ ಈ ಅರವತ್ತೊಕ್ಕಲು ಮನೆತನದವರು ಕನ್ನಡನಾಡಿನಿಂದ ವಲಸೆಹೋಗಿ ಮೂರು-ನಾಲ್ಕನೆಯ ಶತಮಾನದ ಸುಮಾರಿಗೆ ಅಹಿಚ್ಛತ್ರದಲ್ಲಿ ನೆಲೆಸಿ ವಿವಿಧ ರಂಗಗಳಲ್ಲಿ ಪ್ರಖ್ಯಾತರಾಗಿದ್ದರು.

ಇದನ್ನು ಅರಿತೇ ಕದಂಬ ಸಾಮ್ರಾಟನು ಸ್ವತಃ ಶೋತ್ರಿಯ ಬ್ರಾಹ್ಮಣನಾಗಿದ್ದುದರಿಂದ ಆ ಅಭಿಮಾನದಿಂದ ಪ್ರಖ್ಯಾತರಾಗಿದ ಈ ಮನೆತನದವರನ್ನು ಕರೆತಂದು ತನ್ನ ಸಾಮ್ರಾಜ್ಯದಲ್ಲಿ ಷಿಕಾರಿಪುರದ ತಾಳಗುಂದ ಗ್ರಾಮದಲ್ಲಿ ಅವರಿಗೆ ಸಮಸ್ಯೆ ಸೌಕರ್ಯಗಳನ್ನೇರ್ಪಡಿಸಿಕೊಟ್ಟು ನೆಲೆಗೊಳಿಸಿದನು.

ಮೂಲತಃ ಈ ಷಾಷಿಕರ ಅರವತ್ನಾಲ್ಕು (೬೪) ಮನೆತನಗಳಿದ್ದು, ಮೂರು ಮನೆತನದವರು ಸಾಮ್ರಾಟನಿಗೆ ಯುದ್ದದಲ್ಲಿ ಸಹಾಯಮಾಡಿ ಪೌರುಷದಿಂದ ಹೋರಾಡಿ ಸಂಗ್ರಾಮದಲ್ಲಿ ವೀರಸ್ವರ್ಗವನ್ನು ಪಡೆದರಾದ್ದರಿಂದಲೂ, ಒಂದು ಮನೆತನದ ಸಂತತಿಯು ನಷ್ಟವಾದ್ದರಿಂದಲೂ ಅರವತ್ತು ಮನೆತನ ಮಾತ್ರ ಉಳಿದು ಅರವತ್ತೊಕ್ಕಲು ಅಥವಾ ಷಾಷಿಕರು ಎಂದು ಈ ಅರವತ್ತು ಮನೆತನವು ಪ್ರಖ್ಯಾತವಾಯಿತು. ಅಂದಿನಿಂದ ಈ ಗುಂಪಿನವರನ್ನು ಷಾಷಿಕ ಮರೀಕರೆಂದು ಗೌರವದಿಂದ ಸಂಬೋಧಿಸುವ ಕ್ರಮ ಬಂದಿತು.

ಕದಂಬ ಸಾಮ್ರಾಜ್ಯದಲ್ಲಿ ಈ ಷಾಷಿಕ ಮನೆತನದವರು ಆಸ್ಥಾನ ಸಚಿವರಾಗಿ, ಗೃಹಮಂತ್ರಿಗಳಾಗಿ, ಆರ್ಥಿಕ ಸಚಿವಾಗಿ, ಸೈನ್ಯದ ಸರದಾರರುಗಳಾಗಿ, ಅಶ್ವದಳಾಧಿಪತಿಗಳಾಗಿ, ನ್ಯಾಯಮಂಡಲಿಯ ಮುಖ್ಯಸ್ಥರಾಗಿ, ರಾಜಭಂಡಾರದ ಮುಖ್ಯಾಧಿಕಾರಿ ಗಳಾಗಿ, ರಾಜ್ಯದ ವಿವಿಧ ಉನ್ನತ ಪದವಿಗಳಲ್ಲಿದ್ದು, ಪುರೋಹಿತರಾಗಿ, ಕವಿಗಳಾಗಿ, ಮಹಾಪಂಡಿತರುಗಳಾಗಿ, ಕಲೆಗಾರರಾಗಿ, ನರ್ಮಸಚಿವರಾಗಿ ಕನ್ನಡ ಸಾಮ್ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮುಂದೆ ಈ ಮನೆತನದವರು ರಾಷ್ಟ್ರಕೂಟ, ಜಾಳುಕ್ಯ, ಕಳಿಂಗ, ದೇವಗಿರಿ, ವಿಜಯನಗರ, ಮಧುರೆ, ತಂಜಾವೂರು, ಮೈಸೂರು ಮುಂತಾದ ರಾಜ್ಯಗಳಲ್ಲಿ ವಿವಿಧ ಪದವಿ ಅಧಿಕಾರಗಳಲ್ಲಿದ್ದು, ನಾಡು-ನುಡಿಗಳಿಗೆ ಅಪಾರ ಸೇವೆ ಸಲ್ಲಿಸಿ ಖ್ಯಾತಿಗಳಿಸಿದರು.

ಶ್ರೀವ್ಯಾಸರಾಜಗುರುಸಾರ್ವಭೌಮರ ಷಾಷ್ಠಿಕ ಮುಕ್ತಾಕಲಾಪ”, “ಷಾಷಿಕ ಮಂಗಳಾಷಕ", ಶ್ರೀವಿಜಯೀಂದ್ರತೀರ್ಥರ “ಶ್ರೀವ್ಯಾಸರಾಜಾಭ್ಯುದಯ, ಶ್ರೀಸುಧೀಂದ್ರತೀರ್ಥರ “ಶ್ರೀವ್ಯಾಸರಾಜವಿಜಯ” ಅಥವಾ “ಗುರುಗುಣರತ್ನಮಾಲಾ', ಮರಾಠಿಭಾಷೆಯ ಗಂಗಾಧರ ವಿರಚಿತ “ಷಾತ್ವಿಕ ವಂಶಾವಳಿ”, ರುದ್ರಭಟ್ಟ ವಿರಚಿತ “ಆರಾಧ್ಯ ವಂಶಾವಳಿ”, ಗಜಾನನ ಕವಿಯ “ಪಲ್ಲವರಾಜಮಿತ್ರ, ಕರ್ಣಪಾರ್ಯ ಕವಿಯ “ಕದಂಬರಾಜವಿಜಯ”, ಶ್ರೀಸುಮತೀಂದ್ರತೀರ್ಥರ ಪೂರ್ವಾಶ್ರಮ ಸಹೋದರರಾದ ಗರುಡವಾಹನ ಲಕ್ಷ್ಮೀನಾರಾಯಣ ವಿರಚಿತ “ಶ್ರೀವಿಬುಧೇಂದ್ರವಿಜಯ", ಶ್ರೀ ಎನ್.ಜಿ. ಚಾಪೇಕ‌ರವರ ಮರಾಠಿ ಭಾಷೆಯ “ಚಿತ್ಪಾವನ”, ರಾಘವೇಂದ್ರಪ್ಪ ಕವಿಯ “ಸಾರಸ್ವತ ಪರಿಣಯ, ಬೆಟ್ಟದ ಶ್ರೀಅನಂತಾಚಾರ್ಯರ “ಷಾಷ್ಠಿಕ ನಾಮಾವಳಿ” ಮತ್ತು “ಷಾಷ್ಠಿಕ ಮಹಾಪುರುಷರು”, ಶಿಲಾಶಾಸನಗಳೇ ಮೊದಲಾದ ಆಧಾರಗಳಿಂದ ಷಾಷಿಕ ಮನೆತನ ಮತ್ತು ಆ ವಂಶೀಯರ ವೈಶಿಷ್ಟಾದಿಗಳು ಸ್ಪಷ್ಟವಾಗಿ ವ್ಯಕ್ತವಾಗುವುದು.