|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೯೯. ಸರ್ವಜ್ಞಸಿಂಹಾಸನದ ಹಿತಾಕಾಂಕ್ಷೆ

ಶ್ರೀರಾಘವೇಂದ್ರಗುರುಗಳ ಪೂರ್ವಾಶ್ರಮ ಅಣ್ಣಂದಿರ ಪೌತ್ರರಾದ ವೆಂಕಣ್ಣಾಚಾರ್ಯ, ವಾಸುದೇವಾಚಾರ್ಯ, ಮುದ್ದುವೆಂಕಟಕೃಷ್ಣಾಚಾರ್ಯ, ವಿಜಯೀಂದ್ರಾಚಾರ್ಯರು ಮತ್ತು ಗೋವಿಂದಾಚಾರ್ಯರ ಪುತ್ರರಾದ ರಘುಪತಿ, ಬಿಚ್ಚಾಲೆಯ ಅಪ್ಪಣ್ಣಾಚಾರರು ಶ್ರೀಪಾದಪೌತ್ರ ಪುರುಷೋತ್ತಮಾಚಾರರು, ಅನೇಕ ವಿದ್ಯಾರ್ಥಿಗಳೊಡನೆ ಶ್ರೀಗಳವರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, ಸಾಹಿತ್ಯಾದಿಶಾಸ್ತ್ರಗಳ ವ್ಯಾಸಂಗವನ್ನು ಮುಗಿಸಿ ವೇದಾಂತಶಾಸ್ತ್ರಾಧ್ಯಯನ ಮಾಡಲಾರಂಭಿಸಿದ ವಿಚಾರ ಹಿಂದಿನ ಅಧ್ಯಾಯಗಳಲ್ಲಿ ನಿರೂಪಿಸಲಾಗಿದೆ. ವೆಂಕಣ್ಣಾಚಾರ್ಯಾದಿ ನಾಲ್ಕು ಜನ ಸಹೋದರರು ಮೊದಲು ಶ್ರೀಯವರ ಪ್ರಿಯಶಿಷ್ಯರಾದ, ತಮ್ಮ ತಂದೆಯವರಾದ ವೆಂಕಟನಾರಾಯಣಾಚಾರರಲ್ಲಿಯೂ ಪುರುಷೋತ್ತಮಾಚಾರ್ಯ, ರಘುಪತಿಗಳು ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರರಲ್ಲಿಯೂ ಬಾಲಪಾಠಗಳನ್ನೂ, ಕಾವ್ಯನಾಟಕಲಂಕಾರಾದಿ ಸಾಹಿತ್ಯ ಮತ್ತು ವೇದಾಂತಶಾಸ್ತ್ರದ ಪ್ರಾರಂಭಿಕ ಕೆಲಗ್ರಂಥಗಳನ್ನೂ ಅಧ್ಯಾಯನ ಮಾಡಿದ್ದರು. ಈಗ ಅವರೆಲ್ಲರಿಗೂ ಶ್ರೀಸ್ವಾಮಿಗಳವರು ಶ್ರೀಮನ್ಯಾಯಸುಧಾಪರಿಮಳ, ಚಂದ್ರಿಕಾಪ್ರಕಾಶ, ತರ್ಕತಾಂಡವ ನ್ಯಾಯದೀಪ ಹಾಗೂ ನ್ಯಾಯಮೃತಾಮೋದ ಮುಂತಾದ ಉದ್ಧಂಥಗಳನ್ನು ಪಾಠಹೇಳುತ್ತಿದ್ದರು. ಎಲ್ಲ ವಿದ್ಯಾರ್ಥಿಗಳೂ ಶ್ರದ್ಧಾಭಕ್ತಿಗಳಿಂದ ಅಧ್ಯಯನಮಾಡುತ್ತಿದ್ದರು. ಶ್ರೀಗಳವರು ಅವರೆಲ್ಲರಲ್ಲಿಯೂ ವಿಶೇಷ ಪ್ರೀತಿವಿಶ್ವಾಸ ಮಾಡುತ್ತಿದ್ದರು. ಆದರೆ ಮುದ್ದು ವೆಂಕಟಕೃಷ್ಣಾಚಾರ್ಯರಲ್ಲಿ ಮಾತ್ರ ನಿರತಿಶಯ ಪ್ರೇಮ-ಅಸದೃಶ ವಾತ್ಸಲ್ಯಗಳನ್ನು ತೋರಿ, ಪಾಠಹೇಳುವಾಗ ಅವರನ್ನೇ ಉದ್ದೇಶಿಸಿ ಪ್ರತಿಯೊಂದು ವಿಚಾರವನ್ನೂ ಕೂಲಂಕುಷವಾಗಿ ವಿಮರ್ಶಾತ್ಮಕವಾಗಿ ಪ್ರಮಾಣೋಪ- ಗುಂಭಿತವಾಗಿ ವಿವರವಾಗಿ ಬೋಧಿಸುತ್ತಿದ್ದರು. 

ಶ್ರೀವೆಂಕಟನಾರಾಯಣಾಚಾರ್ಯರ ಮೂರನೆಯ ಪುತ್ರರಾದ ಮುದ್ದುವೆಂಕಟಕೃಷ್ಣಾಚಾರ್ಯರು ಮಹಾಮೇಧಾವಿಗಳು, ಪ್ರತಿಭಾಶಾಲಿಗಳು, ಏಕಸಂಧಿಗ್ರಾಹಿಗಳೂ ವಿಲಕ್ಷಣ ಕಲ್ಪನಾಸಾಮರ್ಥ್ಯ ವಿರಾಜಿತರೂ ಆಗಿದ್ದರು. ಅಂತೆಯೇ ಅವರು ಅನೇಕ ಕಠಿಣವಾದ ಶಾಸ್ತ್ರೀಯಘಟ್ಟಗಳನ್ನು ಸುಲಭವಾಗಿ ಗ್ರಹಿಸಿ, ತಮ್ಮ ನ್ಯಾಯಶಾಸ್ತ್ರಬಲದಿಂದ ಶಾಬ್ದಬೋಧಕ್ರಮ, ಅನುಗಮಾದಿಗಳಲ್ಲಿ ಅತ್ಯಂತ ಸ್ಫೂರ್ತಿ, ಪ್ರತಿಭೆಗಳನ್ನು ಪದೇ ಪದೇ ಪ್ರಕಟಿಸುತ್ತಾ ಗುರುಗಳು ಮತ್ತು ಹಿರಿಯಪಂಡಿತರನ್ನೂ ಚಕಿತಗೊಳಿಸುತ್ತಿದ್ದರು. ಶ್ರೀಯವರು ಮುದ್ದು ವೆಂಕಟಕೃಷ್ಣಾಚಾರ್ಯರಲ್ಲಿ ಪ್ರತ್ಯೇಕ ಪ್ರೀತಿವಿಶ್ವಾಸಗಳನ್ನು ತೋರಲು ಇದೇ ಕಾರಣವಾಗಿರಬಹುದಾಗಿದ್ದರೂ ನೋಡುವವರಿಗೆ ಅದು ಒಂದು ವಿಚಿತ್ರವಾ, ಸಮಾಸ್ಯಾತ್ಮಕವೂ ಆಗಿ ಕಂಡುಬರುತ್ತಿತ್ತು. ಇದನ್ನು ಮೊದಲಿನಿಂದಲೂ ಗಮನಿಸುತ್ತಿದ್ದ ಶ್ರೀಗುರುಗಳ ಸೋದರಳಿಯಂದಿರಾದ ನಾರಾಯಣಾಚಾರ್ಯರು ಅದರ ರಹಸ್ಯವರಿಯಬೇಕೆಂದು ತವಕಿಸುತ್ತಿದ್ದರು.

ಒಂದು ದಿನ ರಾತ್ರಿ ಗುರುಪಾದರಿಗೆ ಪಾದಸಂವಹನ ಸೇವೆಮಾಡುತ್ತಿದ್ದ ನಾರಾಯಣಾಚಾರ್ಯರು “ಮಹಾಸ್ವಾಮಿ, ಒಂದು ವಿಚಾರ ಅರಿಕೆ ಮಾಡಬಯಸಿದ್ದೇನೆ” ಎಂದು ವಿಜ್ಞಾಪಿಸಿದರು. 

ಶ್ರೀಗಳವರು : (ನಕ್ಕು ಅದೇನು. ಹೇಳು ನಾರಾಯರಣ. 

ನಾರಾಯಣ : ಗುರುವರ್ಯ, ತಾವು ಪಾಠಹೇಳುವಾಗ ಚಿರಂಜೀವಿ ಮುದ್ದು ವೆಂಕಟಕೃಷ್ಣನನ್ನೇ ಉದ್ದೇಶಿಸಿ ಪಾಠಹೇಳುತ್ತಿರುವಂತೆ ನನಗೆ ಭಾಸವಾಗುತ್ತಿದೆ. ವೆಂಕಣ್ಣಾದಿ ನಾಲ್ವರೂ ತಮಗೆ ಪೌತ್ರರೂ ಶಿಷ್ಯರೂ ಆಗಿರುವಾಗ ಮುದ್ದು ವೆಂಕಟಕೃಷ್ಣನಲ್ಲಿ ಮಾತ್ರ ತಾವೇಕೆ ಅಸಾಧಾರಣ ಪ್ರೇಮವನ್ನು ತೋರುತ್ತಿರುವಿರಿ? ಅನುಗ್ರಹಿಸಿ ತಿಳಿಸಬೇಕು! 

ಶ್ರೀಗಳವರು : (ಕಿರುನಗೆಬೀರಿ) ನಾರಾಯಣ ! ನೀನು ಬಹು ಚಾಣಾಕ್ಷ! ಬಹು ಗಂಭೀರವಾದ ಪ್ರಶ್ನೆಯನ್ನೇ ಕೇಳುತ್ತಿರುವೆ. ನೀನು ನಮ್ಮ ಪ್ರೀತಿಯ ಶಿಷ್ಯ ನಮ್ಮ ಅಂತರಂಗಕ್ಕೆ ಸೇರಿದ ಆತ್ಮೀಯ. ಮೊದಲಿನಿಂದಲೂ ನಮ್ಮ ಹೃದಯಭಾವವನ್ನು ಅರಿಯುತ್ತಿದ್ದ ನೀನು ಈ ವಿಚಾರವನ್ನೇಕೆ ತಿಳಿಯದಾದೆ ? 

ನಾರಾಯಣ : ತಮ್ಮ ವಿಶೇಷಾನುಗ್ರಹ, ಪ್ರೀತಿ, ಸಲಿಗೆಯೇ ನನ್ನ ಸರ್ವಸ್ವ ! ಮಹಾನುಭಾವರಾದ ತಮ್ಮ ಅಂತರಂಗವನ್ನು ಅರಿಯುವ ಯೋಗ್ಯತೆ ನನಗಿದೆಯೆ ! ಕೃಪೆಮಾಡಿ ತಿಳಿಸಬೇಕು. 

ಶ್ರೀಗಳವರು : ನಾರಾಯಣ ! ನಾವು ವಿರಾಜಿಸಿರುವ ಈ ಪೀಠವು ಪರಮ ಪವಿತ್ರವಾದುದು. ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಜ್ಞಾನಪ್ರಸಾರ ಲೋಕಕಲ್ಯಾಣಗಳಿಗಾಗಿ ಪ್ರವರ್ತಿಸಲ್ಪಟ್ಟ ಸತ್ಪರಂಪರೆಯ ಜ್ಞಾನಪೀಠ ! ಈ ಪೀಠದಲ್ಲಿ ದೇವತೆಗಳು, ಪರಮಭಗವದ್ಭಕ್ತರಾದ ಜ್ಞಾನಿಗಳೂ ವಿರಾಜಿಸಿದ್ದಾರೆ. ಶ್ರೀವಾಯುದೇವರು ಶ್ರೀಹರಿಯ ಆಜ್ಞೆಯಂತೆ ಶ್ರೀಮಧ್ವಾಭಿಧಾನದಿಂದ ಅವತರಿಸಿ ಈ ಮಹಾಪೀಠವನ್ನಲಂಕರಿಸಿ, ಇದರ ಮುಖ್ಯಕಾರ್ಯವಾದ ಸದ್ ಜ್ಞಾನಪ್ರಸಾರಕರಾಗಿ ಅನಾದವಚ್ಛಿನ್ನ ಪರಂಪರಾಗತ ಶ್ರೀಮದೈಷ್ಣವಸಿದ್ಧಾಂತ ಪ್ರತಿಷ್ಠಾಪಕರೆನಿಸಿ ತತ್ವವಾದ ಮತವನ್ನು ಸ್ಥಾಪಿಸಿದರು. ಶ್ರೀಮದಾಚಾರ್ಯರು ಅನೇಕರಿಗೆ ಆಶ್ರಮವಿತ್ತು ಶಿಷ್ಯರನ್ನಾಗಿ ಮಾಡಿಕೊಂಡರು. ಶ್ರೀಹಂಸನಾಮಕ ಪರಮಾತ್ಮನ ಈ ಜ್ಞಾನ ಪರಂಪರೆಯಲ್ಲಿ ಮೊಟ್ಟಮೊದಲಿಗೆ ಮಠಗಳನ್ನು ತಮ್ಮ ಮಹಾಸಂಸ್ಥಾನವನ್ನೂ ಏರ್ಪಡಿಸಿ ಈ ಮಹಾಪರಂಪರೆಗೆ ಒಂದು ಸ್ವರೂಪವನ್ನಿತ್ತರು! ಅನೇಕ ಮಠಗಳನ್ನು ಸ್ಥಾಪಿಸಿದ ಆಚಾರ್ಯರು ಶ್ರೀಹಂಸನಾಮಕ ಪರಮಾತ್ಮನ ಪರಂಪರೆಯು ಅವ್ಯಾಹತವಾಗಿ ಮುಂದುವರೆದು, ತಾವು ಪ್ರತಿಷ್ಠಾಪಿಸಿದ ರೈತಸಿದ್ಧಾಂತವು ಯಶಸ್ವಿಯಾಗಿ ಮುಂದುವರೆಯಲೂ, ತಮ್ಮ ಸಿದ್ಧಾಂತ ತತ್ವಗಳ ಸಾರಪ್ರವಚನ ಪರಂಪರೆಯು ನಿರ್ಭಾಧವಾಗಿ ನಡೆದುಬರಲೂ ತಮ್ಮ ಮಹಾಸಂಸ್ಥಾನವೊಂದು ಅವ್ಯಾಹತವಾಗಿ ನಡೆದುಬರಬೇಕೆಂದು ಸಂಕಲ್ಪಿಸಿದರು. ಅಂತೆಯೇ ಶ್ರೀಸರ್ವಜ್ಞರು ತಮ್ಮ ಮಹಾಸಂಸ್ಥಾನವನ್ನಾಳಲು ಯೋಗ್ಯರೂ, ಅಧಿಕಾರಿಗಳೂ, ತಮ್ಮ ಶಿಷ್ಯರೂ ಮಹಾಪಂಡಿತರೂ ಆದ ನಾಲ್ವರನ್ನು ಆರಿಸಿ ಅವರಿಗೆ ಪರಮಹಂಸಾಶ್ರಮವಿತ್ತು, ಶ್ರೀಪದ್ಮನಾಭತೀರ್ಥ, ಶ್ರೀನರಹರಿತೀರ್ಥ, ಶ್ರೀಮಾಧವತೀರ್ಥ, ಶ್ರೀಅಕ್ಟೋಭ್ಯತೀರ್ಥರೆಂಬ ಹೆಸರಿನಿಂದ ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕಮಾಡಿ, ಕ್ರಮವಾಗಿ ಶ್ರೀಪದ್ಮನಾಭಾದಿತೀರ್ಥರುಗಳು ಒಬ್ಬರಾದ ಮೇಲೊಬ್ಬರಂತೆ ತಮ್ಮ ಮಹಾಸಂಸ್ಥಾನವನ್ನು ಪಾಲಿಸಿಕೊಂಡು ಬರಬೇಕೆಂದು ಆಜ್ಞಾಪಿಸಿದರು. ಅದಕ್ಕೆ ಬಲವತ್ತರವಾದ ಮತ್ತೊಂದು ಕಾರಣವೂ ಇತ್ತು! 

ತಾವು ಬದರಿಕಾಶ್ರಮಕ್ಕೆ ತೆರಳಿದ ಮೇಲೆ ತಮ್ಮ ಸಿದ್ದಾಂತವನ್ನು ಪಾಠ-ಪ್ರವಚನ ಮೂಲಕ ವರ್ಧಿಸಿಕೊಂಡು ಬರಲು ಆ ನಾಲ್ವರು ಶಿಷ್ಯರೇ ಸಮರ್ಥರೆಂದು ತಿಳಿದಿದ್ದ ಆಚಾರರು ತಮ್ಮ ಎಲ್ಲಾ ಗ್ರಂಥಗಳನ್ನೂ ಅವರಿಗೆ ಪಾಠಹೇಳಿ ಆ ಕಾರಮಾಡಲು ಅತ್ಯಂತ ಸಮರ್ಥರಾಗುವಂತೆ ಮಾಡಿ ಅನುಗ್ರಹಿಸಿ ತಮ್ಮ ತರುವಾಯ ಒಬ್ಬರಾದ ಮೇಲೊಬ್ಬರಂತೆ ತಮ್ಮ ಮಹಾಸಂಸ್ಥಾನವನ್ನಾಳಬೇಕೆಂದು ಕಟ್ಟಳೆ ಮಾಡಿದರು. ಶ್ರೀಮದಾಚಾರರ ಅಪ್ಪಣೆಯಂತೆ ಶ್ರೀಪದ್ಮನಾಭಾದಿ ನಾಲ್ವರು ಯತೀಶ್ವರರು ಶ್ರೀಮದಾಚಾರರ ಮಹಾಸಂಸ್ಥಾನಾಧಿಪತಿಗಳಾಗಿ ನಂತರ ಅಕ್ಟೋಭ್ಯತೀರ್ಥರು ಸರ್ವಜ್ಞರ ಆದೇಶದಂತೆ ಶ್ರೀಜಯತೀರ್ಥರಿಗೆ ಆಶ್ರಮವಿತ್ತು ಸಮಗ್ರಮಧ್ವಶಾಸ್ತ್ರವನ್ನು ಪಾಠಹೇಳಿದರು. ಮುಂದೆ ಜಯಮುನಿಗಳು ಆಚಾರರಾಯರ ಸರ್ವಮೂಲಗ್ರಂಥಗಳಿಗೆ ಟೀಕೆಗಳನ್ನು ರಚಿಸಿ ಸಿದ್ಧಾಂತವನ್ನು ಸ್ಥಿರಗೊಳಿಸಿದರು. ಅವರ ಸೇವಾಫಲವಾಗಿಯೇ ಇಂದು ದೈತಸಿದ್ಧಾಂತವು ಸುಭದ್ರವಾಗಿ ನೆಲೆನಿಲ್ಲಲು ಕಾರಣವಾಯಿತು. ಅವರ ಶಿಷ್ಯರಾದ ಶ್ರೀವಿದ್ಯಾಧಿರಾಜರು ಆಚಾರರ ಸಿದ್ದಾಂತದ ಪ್ರಸಾರಕಾರವು ವ್ಯಾಪಕವಾಗಿ ಜರಗುವಂತೆ ಮಾಡಲು ಶ್ರೇಷ್ಠರಾದ ಈರ್ವರು ಮಹಾಪಂಡಿತರಿಗೆ ತುರಾಶ್ರಮವಿತ್ತು ಶ್ರೀರಾಜೇಂದ್ರತೀರ್ಥರು-ಕವೀಂದ್ರತೀರ್ಥರೆಂಬ ಹೆಸರಿನಿಂದ ಸಾಮ್ರಾಜ್ಯಾಭಿಷೇಕವಾಡಿ ಈರ್ವರೂ ಶ್ರೀಮದಾಚಾರರಮಹಾಸಂಸ್ಥಾನಾಧೀಶ್ವರರಾಗಿ ಸಿದ್ಧಾಂತಪ್ರಸಾರಮಾಡಬೇಕೆಂದು ಆಜ್ಞಾಪಿಸಿದರು. ಗುರುಗಳ ಅಣತಿಯಂತೆ ಶ್ರೀರಾಜೇಂದ್ರ-ಕವೀಂದ್ರರು ಸರ್ವವಿಧದಿಂದ ತತ್ವವಾದ ಮತವನ್ನು ಬೆಳಗಿಸಿ ಕೀರ್ತಿಗಳಿಸಿದರು. ಶ್ರೀರಾಜೇಂದ್ರರ ಪರಂಪರೆಯಲ್ಲಿ ಶ್ರೀವ್ಯಾಸರಾಜರು ವಿರಾಜಿಸಿದರು. ಶ್ರೀಕವೀಂದ್ರರ ಮಹಾಪೀಠದಲ್ಲಿ ಇಂದು ನಾವು ವಿರಾಜಿಸಿದ್ದೇವೆ. 

ಪ್ರಕೃತ ವಿಷಯಕ್ಕೆ ಬರೋಣ. ನಾರಾಯಣ, ಶ್ರೀವಾಗೇವಿಯ ಆಜ್ಞೆ, ಗುರುಪಾದರ ಆದೇಶದಂತೆ ನಾವು ಶ್ರೀಮದಾಚಾರ್ಯರ ಸಮಗ್ರ ಭಾಷ್ಯಗಳು ಮತ್ತು ಟೀಕೆಗಳು ಟಿಪ್ಪಣಿಗಳನ್ನೂ ಸಿದ್ಧಾಂತಕ್ಕೆ ಸಹಾಯಕವಾಗುವಂತೆ ವೇದಗಳಿಗೆ ಭಾಷ್ಯಗಳನ್ನೂ, ಇನ್ನಿತರ ಉಪಯುಕ್ತ ಗ್ರಂಥಗಳನ್ನೂ ರಚಿಸಿ ನಮ್ಮ ಯೋಗ್ಯತಾನುಸಾರವಾಗಿ ಶ್ರೀಮದಾಚಾರರ, ಶ್ರೀಹರಿಪರಮಾತ್ಮನ ಸೇವೆಮಾಡಿರುವುದು ನಿಮಗೆ ತಿಳಿದ ವಿಷಯವೇ ಆಗಿರುತ್ತದೆ. ಶ್ರೀಮದಾಚಾರರು ವ್ಯವಸ್ಥೆ ಮಾಡಿದಂತೆ ಈಗ ನಾವೂ ಸಹ ಶ್ರೀಹರಿವಾಯುಗುರುಪಾದರ ವಿಶೇಷ ಪ್ರೇರಣೆಯಂತೆ ನಾಲ್ವರು ಉತ್ತಮಾಧಿಕಾರಿಗಳನ್ನು ಆರಿಸಿ ಅವರೂ ಒಬ್ಬರಾದ ಮೇಲೊಬ್ಬರು ನಮ್ಮಿ ಮಹಾ ದುಂದುಭಿಯನ್ನು ಮೊಳಗಿಸಿ ಕೀರ್ತಿಶಾಲಿಗಳಾಗಿ ಶ್ರೀಮದಾಚಾರರ ಮಹಾಸಂಸ್ಥಾನವನ್ನು ಮುಂದುವರೆಸಿಕೊಂಡು ಬರುವಂತೆ ವ್ಯವಸ್ಥೆಮಾಡಲು ಸಂಕಲ್ಪಿಸಿದ್ದೇವೆ. ನಾವು ರಚಿಸಿರುವ ಗ್ರಂಥಗಳ ಸಹಾಯದಿಂದ ಸಿದ್ಧಾಂತಗ್ರಂಥಗಳ ಪಾಠಪ್ರವಚನ ದ್ವಾರಾ ಆಚಾರರ ದರ್ಶನವನ್ನು ರೂಢಮೂಲಗೊಳಿಸಿ ಪ್ರಸಾರಮಾಡುವ ಅರ್ಹತೆ, ದಕ್ಷತೆಗಳಿಗಿರುವ ನಾಲ್ವರನ್ನು ಆರಿಸಿದ್ದೇವೆ. 

ನಾರಾ : ಮಹದಾನಂದವಾಯಿತು ಮಹಾಸ್ವಾಮಿ, ಆ ಭಾಗ್ಯಶಾಲಿಗಳಾರು? 

ಶ್ರೀಗಳವರು : ಆ ಅರ್ಹತೆಯುಳ್ಳವರೇ ನಮ್ಮ ವೆಂಕಣ್ಣ, ವಾಸುದೇವ, ಮುದುವೆಂಟಕೃಷ್ಣ ಮತ್ತು ವಿಜಯೀಂದ್ರ ಎ೦ಬ ನಮ್ಮ ಪ್ರಿಯಶಿಷ್ಯರು ! ಅಂತೆಯೇ ನಾವು ಎಲ್ಲ ಗ್ರಂಥಗಳನ್ನೂ ಅವರಿಗೆ ಸಕ್ರಮವಾಗಿ ಪಾಠಹೇಳಿ ಸಿದ್ಧಪಡಿಸುತ್ತಿದ್ದೇವೆ! ನಾರಾಯಣ! ಈ ನಾಲ್ವರನ್ನು ನಮ್ಮ ಮುಂದಿನ ಉತ್ತರಾಧಿಕಾರಿಗಳೆಂದು ನಿರ್ಧರಿಸಿರುವುದು ಮಾತ್ರವಲ್ಲ: ಅವರಿಗೆ ಕ್ರಮವಾಗಿ ಶ್ರೀಯೋಗೀಂದ್ರತೀರ್ಥ, ಶ್ರೀಸೂರೀಂದ್ರತೀರ್ಥ, ಶ್ರೀಸುಮತೀಂದ್ರತೀರ್ಥ ಮತ್ತು ಶ್ರೀಉಪೇಂದ್ರತೀರ್ಥ ಎಂಬ ಆಶ್ರಮನಾಮಗಳನ್ನೂ ನಿಶ್ಚಯಿಸಿದ್ದೇವೇ ! ಇನ್ನು ಮುಂದೆ ಶ್ರೀಹಂಸನಾಮಕ ಪರಮಾತ್ಮನ ಸತ್ಪರಂಪರೆಯ ಶ್ರೀಮದಾಚಾರರ ಮಹಾಸಂಸ್ಥಾನವನ್ನು ನಮ್ಮ ಪೂರ್ವಾಶ್ರಮ ವಂಶಿಕರೇ ಪರಂಪರೆಯಿಂದ ಆಳಬೇಕೆಂಬುದು ಶ್ರೀಮೂಲರಾಮ ಹಾಗೂ ಶ್ರೀಮದಾಚಾರ್ಯರ ಸಂಕಲ್ಪವಾಗಿದೆ ! ಅಂತೆಯೇ ಮಹಾಸಂಸ್ಥಾನದ ಹಿತದೃಷ್ಟಿಯಿಂದ ವ್ಯವಸ್ಥೆಮಾಡಲು ಸಂಕಲ್ಪಿಸಿದ್ದೇವೆ. ಆದರೆ ಶ್ರೀಮದಾಚಾರ್ಯರಂತೆ ನಾವು ಈ ನಾಲ್ವರಿಗೆ ಒಟ್ಟಿಗೇ ಪರಮಹಂಸಾಶ್ರಮವನ್ನು ನೀಡುವುದಿಲ್ಲ. ವೆಂಕಣ್ಣನಿಗೆ ಮಾತ್ರ ಆಶ್ರಮವಿತ್ತು ಶ್ರೀಯೋಗೀಂದ್ರತೀರ್ಥರೆಂಬ ಹೆಸರಿನಿಂದ ನಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇವೆ. ಮುಂದೆ ನಾವು ಹೇಳಿದಂತೆ ಕ್ರಮವಾಗಿ ವಾಸುದೇವ, ಮುದ್ದು ವೆಂಕಟಕೃಷ್ಣ ಮತ್ತು ವಿಜಯೀಂದ್ರ ಇವರು ಶ್ರೀಸೂರೀಂದ್ರ ತೀರ್ಥ, ಶ್ರೀಸುಮತೀಂದ್ರತೀರ್ಥ, ಶ್ರೀಉಪೇಂದ್ರತೀರ್ಥರೆಂಬ ಹೆಸರಿನಿಂದ ಶ್ರೀಯೋಗೀಂದ್ರತೀರ್ಥರ ತರುವಾಯ ಒಬ್ಬರಾದ ಮೇಲೊಬ್ಬರು ಮಹಾಸಂಸ್ಥಾನಾಧಿಪತಿ- ಗಳಾಗಬೇಕೆಂದು ಕಟ್ಟಳೆ ಮಾಡುತ್ತೇವೆ. 

ನಾವು ಆರಿಸಿರುವ ಈ ನಾಲ್ವರಲ್ಲಿ ನಮ್ಮ ಮುದ್ದುವೆಂಕಟಕೃಷ್ಣನು 133 ಶ್ರೀಹರಿವಾಯುಗಳ ವಿಶೇಷಾನುಗ್ರಹಪಾತ್ರನಾದ ಮಹಾಭಾಗ್ಯಶಾಲಿ, ಅವನು ಅನಿತರ ಸಾಧಾರಣಕೀರ್ತಿಗಳಿಸುತ್ತಾನೆ, ಪರವಾದಿ ದಿಗ್ವಿಜಯ ಸಿದ್ಧಾಂತಸ್ಥಾಪನೆ, ಪಾಠಪ್ರವಚನ ಅದ್ವಿತೀಯ ಪ್ರೌಢಗ್ರಂಥರಚನೆ, ರಾಜಾಧಿರಾಜಮಾನ್ಯತೆ ಗಳಿಸುವಲ್ಲಿ ಅವನಿಗೆ ಸರಿಸಾಟಿಯಾದವರಾರೂ ಇಲ್ಲವಾಗುತ್ತಾರೆ.

ಅವನು ದೈತವಿಜಯದುಂದುಭಿಯನ್ನು ವಿಶೇಷಾಕಾರವಾಗಿ ಮೊಳಗಿಸುತ್ತಾನೆ. ಅವನ ಕಾಲದಲ್ಲಿ ನಮ್ಮ ಗ್ರಂಥಗಳ ಪಾಠ-ಪ್ರಚನಗಳು ಅಸದೃಶರೀತಿಯಿಂದ ಜರುಗಿ ಮಹಾಸಂಸ್ಥಾನದ ಹೆಸರು ಅಜರಾಮರವಾಗಿ ಅವನ ಕೀರ್ತಿ ದಿಗಂತ ವಿಶ್ರಾಂತವಾಗುತ್ತದೆ. ಮಾತ್ರವಲ್ಲ, ಅವನು ಶಕಪುರುಷನೆನಸಿ ಲೋಕಮಾನ್ಯನಾಗುತ್ತಾನೆ. ಶ್ರೀಮಹಾಸಂಸ್ಥಾನವು ಅವನ ಹೆಸರಿನಿಂದಲೂ ವಿಖ್ಯಾತವಾಗುತ್ತದೆ. ಇನ್ನೊಂದು ರಹಸ್ಯವನ್ನು ಹೇಳುತ್ತೇವೆ ಕೇಳು ನಾವು ಉಡುಪಿಯಲ್ಲಿ ಗ್ರಂಥಗಳನ್ನು ರಚಿಸಿದ್ದು ನಿನಗೆ ತಿಳಿದಿದೆಯಷ್ಟೆ? 

ನಾರಾ : ಗೊತ್ತಿದೆ ಮಹಾಸ್ವಾಮಿ, ನ್ಯಾಯಮುಕ್ತಾವಳಿ, ತಂತ್ರದೀಪಿಕಾ, ಚಂದ್ರಿಕಾಪ್ರಕಾಶ, ನ್ಯಾಯಸುಧಾ ಪರಿಮಳಗಳನ್ನು ಉಡುಪಿಯಲ್ಲಿಯೇ ರಚಿಸೋಣವಾಯಿತು. 

ಶ್ರೀಗಳವರು : ನಾರಾಯಣ ! ನಾವು ಆ ಗ್ರಂಥಗಳನ್ನು ನಮ್ಮ ಮುದ್ದುವೆಂಕಟಕೃಷ್ಣನಿಗಾಗಿಯೇ ಅಂದರೆ ಭಾವಿ ಸುಮತೀಂದ್ರನಿಗೆ ಸಹಾಯಕವಾಗಲೆಂದೇ ರಚಿಸಿದ್ದೇವೆ ! 434 ನಾವು ಅವನಲ್ಲಿ ಇಷ್ಟೇಕೆ ಪ್ರೀತ್ಯಾದರಗಳನ್ನು ಮಾಡುತ್ತಿದ್ದೇವೆ ಎಂಬ ನಿನ್ನ ಪ್ರಶ್ನೆಗೆ ಈ ಉತ್ತರ ದೊರಕಿ ನಿನ್ನ ಸಂಶಯವು ಪರಿಹಾರವಾಗಿರಬಹುದಲ್ಲವೇ ? 

ನಾರಾಯಣಾಚಾರರು ಗುರುಗಳ ಒಂದೊಂದು ಮಾತಿನಿಂದ ಮುದ್ದುವೆಂಕಟಕೃಷ್ಣಾಚಾರರಲ್ಲಿ ಶ್ರೀಯವರೇಕಿಷ್ಟು ಪ್ರೇಮಮಾಡುವರೆಂಬ ವಿಚಾರವರಿತು ಹರ್ಷನಿರ್ಭರರಾಗಿ “ಮಹಾಸ್ವಾಮಿ, ತಾವು ಮಹಾಮಹಿಮರು, ಮಹಾಸಂಸ್ಥಾನದಲ್ಲಿ ತಮಗಿರುವ ದೀಕ್ಷೆ, ತಮ್ಮ ದೂರದೃಷ್ಟಿ, ತಾವು ಕೈಗೊಂಡಿರುವ ಕ್ರಮ, ಮಾಡಲಿರುವ ವ್ಯವಸ್ಥೆ - ಇವೆಲ್ಲವೂ ಭೂತಭವಿಷ್ಯದ್ವರ್ತಮಾನಕಾಲ ವಿಷಯಗಳಲ್ಲಿರುವ ತಮ್ಮ ಅಪಾರ ಜ್ಞಾನಗಳನ್ನು ಸ್ಪಷ್ಟಪಡಿಸುತ್ತಿವೆ. ನಮ್ಮ ಮುದ್ದುವೆಂಕಟಕೃಷ್ಣ ಮಹಾ ಭಾಗ್ಯಶಾಲಿ” ಎಂದು ಆನಂದಬಾಷ್ಪ ಸುರಿಸುತ್ತಾ ನಿವೇದಿಸಿದರು. 

ಶ್ರೀಪಾದಂಗಳವರು ನಸುನಗುತ್ತಾ 'ನಾರಾಯಣ, ನಿನ್ನಲ್ಲಿ ಬಾಲ್ಯದಿಂದಲೂ ನಮಗಿರುವ ಪ್ರೀತಿ-ವಾತ್ಸಲ್ಯ, ಆತ್ಮೀಯತೆಯಿಂದ ಈ ರಹಸ್ಯವನ್ನು ತಿಳಿಸಿದ್ದೇವೆ, ಇದು ಗುಪ್ತವಾಗಿರಲಿ” ಎಂದಾಜ್ಞಾಪಿಸಿದರು. 

ಇಲ್ಲಿ ಕೆಲ ವಿಚಾರಗಳನ್ನು ಗುರುರಾಜರ ಭಕ್ತರಾದ ವಾಚಕರಲ್ಲಿ ಸ್ಪಷ್ಟಪಡಿಸುವುದು ಅವಶ್ಯವೆನಿಸುವುದು. 

ಶ್ರೀನಾರಾಯಣಾಚಾರರು ಶ್ರೀರಾಘವೇಂದ್ರವಿಜಯವೆಂಬ ಮಹಾಕಾವ್ಯವನ್ನು ಬರೆದು ಮಹೋಪಕಾರ ಮಾಡಿದ್ದಾರೆ. ಶ್ರೀರಾಘವೇಂದ್ರವಿಜಯದಲ್ಲಿ ಶ್ರೀಗುರುರಾಜರು ಶ್ರೀಸುಮತೀಂದ್ರತೀರ್ಥರಿಗಾಗಿ ತಂತ್ರದೀಪಿಕಾ, ನ್ಯಾಯಮುಕ್ತಾವಳೀ, ಚಂದ್ರಕಾಪ್ರಕಾಶ ಮತ್ತು ಪರಿಮಳ ಗ್ರಂಥಗಳನ್ನು ರಚಿಸಿದರು. ಎಂದು ವರ್ಣಿಸಿದ್ದಾರೆ. ಗ್ರಂಥರಚನೆಯಾಗಿ ೩೨ ವರ್ಷಗಳು ಗತಿಸಿದ ಮೇಲೆ ಪೀಠಾಧಿಪತಿಗಳಾದ “ಸುಮತೀಂದ್ರತೀರ್ಥರಿಗಾಗಿ ಗ್ರಂಥಗಳನ್ನು ಶ್ರೀರಾಯರುರಚಿಸಿದರು” ಎಂದು ನಾರಾಯಣಾಚಾರರು ರಾಘವೇಂದ್ರ ವಿಜಯದಲ್ಲಿ ಸುಮತೀಂದ್ರರೆಂಬ ನಾಮನಿರ್ದೇಶನ ಪೂರ್ವಕವಾಗಿ ೩೨ ವರ್ಷಗಳ ಮುಂಚೆಯೇ ಬರೆಯಲು ಹೇಗೆ ಸಾಧ್ಯ? ಎಂದು ಕಾವ್ಯವನ್ನು ಓದಿದವರಿಗೆ ಸಂದೇಹಬರಬಹುದು, ಈ ಸಂದೇಹಪರಿಹಾರವನ್ನು ಹೀಗೆ ನಿವಾರಿಸಬಹುದಾಗಿದೆ. ಶ್ರೀನಾರಾಯಣಾಚಾರರು ಶ್ರೀಗುರುರಾಜರ ಸೋದರಳಿಯಂದಿರು. ಅವರಿಗೆ ಶ್ರೀಗುರುರಾಜರು ಏರ್ಪಡಿಸಿದ್ದ ಮೇಲಿನ ಅಧ್ಯಾಯದಲ್ಲಿ ವಿವರಿಸಿದ ಸಮಸ್ತ ವಿಷಯವೂ ತಿಳಿದಿತ್ತು. ಆದ್ದರಿಂದಲೇ ಅವರು ಶ್ರೀರಾಘವೇಂದ್ರವಿಜಯ ಕಾವ್ಯದಲ್ಲಿ ಉಡುಪಿಯಲ್ಲಿ ಶ್ರೀಯವರು ಶ್ರೀಸುಮತೀಂದ್ರರಿಗೆ ಸಹಾಯಕವಾಗಲೆಂದು ಗ್ರಂಥರಚನೆ ಮಾಡಿದರು” ಎಂದು, ಮುಂದೆ ೩೨ ವರ್ಷಗಳಾದ ಮೇಲೆ ಪೀಠಾಧಿಪತಿಗಳಾಗಲಿರುವ ಶ್ರೀಸುಮತೀಂದ್ರರು ಎಂದು ನಾಮನಿರ್ದೇಶನ ಮಾಡಿ ವರ್ಣಿಸಿದರೆಂದು ಸ್ಪಷ್ಟವಾಗುವುದು. ನಾರಾಯಣಾಚಾರರು ರಾಘವೇಂದ್ರವಿಜಯದಲ್ಲಿ ಸುಮತೀಂದ್ರರಿಗೆ ಸಹಾಯಕವಾಗಲೆಂದು ಗ್ರಂಥವನ್ನು ಬರೆದರು” ಎಂದು ವರ್ಣಿಸುವುದರ ಮೂಲಕ ಶ್ರೀಗುರುರಾಜರಿಗೆ ಭೂತಭವಿಷ್ಯದ್ವರ್ತಮಾನ ವಿಚಾರಗಳಲ್ಲಿರುವ ಅಗಾಧ ಜ್ಞಾನವನ್ನೂ ಅವರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀಸುಮತೀಂದ್ರರ ಮಹತ್ವವನ್ನೂ, ಆ ಮಹತ್ವಪೂರ್ಣ ವಿಚಾರಗಳು ಶ್ರೀಗುರುರಾಜರ ಪರಮಕೃಪಾಪಾತ್ರರಾಗಿರುವ ತಮಗೆ ಪಾರ್ವಭಾವಿಯಾಗಿಯೇ ಗೊತ್ತಿತ್ತು ಎಂಬುದನ್ನೂ ಸೂಚಿಸಿರುವರೆಂದೂ ವ್ಯಕ್ತವಾಗುವುದು. ಶ್ರೀಗುರುರಾಜರ ಅಂತರಂಗವನ್ನು ತಿಳಿದಿದ್ದ ಶ್ರೀನಾರಾಯಣಾಚಾರ್ಯರು ಮಹಾಭಾಗ್ಯಶಾಲಿಗಳು, ಮತ್ತು ಧನ್ಯಜೀವಿಗಳೆಂದು ತಿಳಿಯಬೇಕೆಂದು ಶ್ರೀಗುರುಭಕ್ತರಲ್ಲಿ ವಿಜ್ಞಾಪಿಸಲು ಹರುಷವಾಗುವುದು.