|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೯೧. ಟೀಕಾಕಾರರು

ಆ ಕಾಲದಲ್ಲಿ ಕೃಷ್ಣಾನದೀತೀರದ ಸೀತಿಮನಿಯ ಸನಿಹದ ಆಲೂರು ನಿಷ್ಠಾವಂತ, ಪಂಡಿತರ, ಬ್ರಾಹ್ಮಣರ ನೆಲೆವೀಡಾಗಿತ್ತು. ಗುರುಗಳು ಆಲೂರಿಗೆ ಬಂದಾಗ ಧಾರ್ಮಿಕವೃಂದ ಅವರಿಗೆ ಸ್ವಾಗತ ನೀಡಿತು. ಪ್ರಶಾಂತವಾದ, ಕೃಷ್ಣಾನದಿಯಿಂದ ಪಾವನವೆನಿಸಿದ್ದ ಆ ಸ್ಥಳ ಗ್ರಂಥರಚನೆಗೆ ಪ್ರಶಸ್ತವೆಂದು ಭಾವಿಸಿ ಗುರುರಾಜರು ಕೆಲಕಾಲ ವಾಸಮಾಡಿದರು. ಶ್ರೀಶ್ರೀಗಳವರು ಪ್ರತಿದಿನ ಕೃಷ್ಣಾಸ್ನಾನ, ಆಕ, ಜಪತಪಾದ್ಯನುಷ್ಠಾನ ದೇವಪೂಜಾದಿಗಳನ್ನು ಪೂರೈಸಿ ಗ್ರಂಥರಚನೆಯಲ್ಲಿ ಆಸಕ್ತರಾಗುತ್ತಿದ್ದರು. 

ಶ್ರೀ ಗುರುರಾಜರು ಸೂತ್ರಭಾಷ್ಯಕ್ಕೆ, ಶ್ರೀಜಯತೀರ್ಥರು ರಚಿಸಿದ ತತ್ವಪ್ರಕಾಶಿಕಾಕ್ಕೆ ಭಾವದೀಪ” ಎಂಬ ಅತ್ಯುತ ಪ್ರವಾ, ವಿಸ್ತಾರವೂ ಆದ ಶ್ರೀಟೀಕಾರಾಯರ ಹೃದಯವನ್ನೇ ಬಿಚ್ಚಿತೋರುವ ವಿದ್ದತ್ತೂರ್ಣವಾದ ಟಿಪ್ಪಣಿಯನ್ನು ರಚಿಸಿದರು. ಇದರಂತೆ ಶ್ರೀಜಯತೀರ್ಥಗುರುಚರಣರ ಅಪ್ಪಣೆಯಂತೆ “ಅಣುಭಾಷ್ಯ'ಕ್ಕೆ ಟೀಕೆಯನ್ನು ರಚಿಸಿದರು.121 

ಅಣುಭಾಷ್ಯಕ್ಕೆ ಟೀಕೆಯನ್ನು ರಚಿಸಲು ಟೀಕಾರಾಯರೇ ಪ್ರೇರೇಪಿಸಿದ ವಿಚಾರ ಸ್ವಾರಸ್ಯಕರವಾಗಿದೆ. ತತ್ವಪ್ರಕಾಶಿಕಾ ಭಾವದೀಪವನ್ನು ರಚಿಸಿ ಶ್ರೀಹರಿವಾಯುಗಳು ಹಾಗೂ ಶ್ರೀಜಯಮುನಿಗಳಿಗೆ ಸಮರ್ಪಿಸಿದ ದಿನ ರಾತ್ರಿ ಶ್ರೀಗುರುರಾಜರಿಗೆ ಶ್ರೀಜಯತೀರ್ಥಗುರುವರ್ಯರು ಸ್ವಪ್ನದಲ್ಲಿ ದರ್ಶನವಿತ್ತರು. “ಶಿಷೋತ್ತಮ! ನಿನ್ನ ಅಸಾಧಾರಣ ಗ್ರಂಥರಚನಾರೂಪ ಸೇವೆಯಿಂದ ಹರಿವಾಯುಗಳ ಪರಮಾನುಗ್ರಹಕ್ಕೆ ಪಾತ್ರನಾಗಿರುವೆ! ನಿನ್ನ ಭಾವದೀಪ'ವು ನಮ್ಮ ಭಾವವನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸುತ್ತದೆ, ವಿದ್ವನ್ಮಂಡಲಿಗೆ, ದೈತಸಿದ್ಧಾಂತ ಸ್ಥಾಪನೆಗೆ ಅತ್ಯುಪಕಾರಕವಾಗಿದೆ. ಶ್ರೀಹರಿಸಂಕಲ್ಪದಂತೆ ಸದಾ ನಿನ್ನಲ್ಲಿ ನೆಲೆಸಿ ಪೊರೆಯುತ್ತಿರುವ ಪಾವನ ಪವನಾಂಶರಾದ ಶ್ರೀಸರ್ವಜ್ಞರು ನಿನಗೆ “ಭಾಷ್ಯಕಾರರೆಂಬ ಪ್ರಶಸ್ತಿ ಬರುವಂತೆ ಅನುಗ್ರಹಿಸಲಿರುವರು! ಅದಕ್ಕೂ ಮೊದಲು ನಾವು ನಿನಗೆ ಟೀಕಾಕಾರ”ನೆಂಬ ಗೌರವವನ್ನು ಶ್ರೀಹರಿಯ ಇಚ್ಛೆಯಂತೆ ಕರುಣಿಲಾಶಿಸಿದ್ದೇವೆ. ವತ್ಸ! ನಾವು ಅಣುಭಾಷ್ಯಕ್ಕೆ ಟೀಕೆ ರಚಿಸದಿರಲು ಇದೇ ಕಾರಣ! ನೀನು ಅಣುಭಾಷಕ್ಕೆ ಟೀಕೆಯನ್ನು ರಚಿಸಿ 'ಟೀಕಾಕಾರನೆಂದು ಜಗನ್ಮಾನನಾಗು ! ನಿನ್ನಿಂದ ನಮ್ಮ ದೈತಸಿದ್ಧಾಂತವು ನಿಷ್ಕಂಟಕವಾಗಿ ಬೆಳಗುವುದು. ನಿನಗೆ ಮಂಗಳವಾಗಲಿ” ಎಂದು ಆಶೀರ್ವದಿಸಿ ಅದೃಶ್ಯರಾದರು! ತಟ್ಟನೆ ಎಚ್ಚರಗೊಂಡ ಗುರುರಾಜರು ಸ್ವಪ್ನಾರ್ಥವರಿತು ಪರಮಾನಂದ ಹೊಂದಿದರು. ಟೀಕಾರಾಯರ ವಿಶೇಷಾನುಗ್ರಹವಾದುದರಿಂದ ಅವರು ಅತ್ಯಂತ ಸುಪ್ರಸನ್ನರಾದರು. 

ಅ೦ದಿನಿಂದಲೇ ಗುರುಗಳು ಟೀಕಾರಾಯರ ಅಣತಿಯಂತೆ ಆಚಾರರ ಅಣುಭಾಷಕ್ಕೆ ವಿಸ್ತಾರವೂ, ಜಗದುಪಕಾರವೂ ಆದ ತತ್ವಮಂಜರಿ” ಎಂಬ ಟೀಕೆಯನ್ನು ರಚಿಸಲಾರಂಭಿಸಿ ಕೆಲದಿನಗಳಲ್ಲೇ ಪೂರ್ಣಗೊಳಿಸಿ ಶ್ರೀಹರಿವಾಯು-ಟೀಕಾಚಾರರಿಗೆ ಸಮರ್ಪಿಸಿ ಕೃತಾರ್ಥರಾದರು. 

ಶ್ರೀಗಳವರು ಆಲೂರಿನಿಂದ ಹೊರಟು ತಮ್ಮ ಪಾದರಜದಿಂದ ಜಗತ್ತನ್ನು ಪಾವನಗೊಳಿಸುತ್ತಾ ಶ್ರೀಶೈಲಕ್ಕೆ ದಯಮಾಡಿಸಿದರು. ಅಲ್ಲಿ ಕೆಲಕಾಲ ವಾಸಮಾಡಿ ಶ್ರೀರುದ್ರದೇವರ ದರ್ಶನ, ಸೇವೆ-ನಮಸ್ಕಾರಾದಿಗಳಿಂದ ಕೃತಾರ್ಥರಾಗಿ ಅಲ್ಲಿಂದ ತಮ್ಮ ಕುಲಸ್ವಾಮಿಯಾದ ತಿರುಪತಿಯ ಶ್ರೀವೆಂಕಟೇಶ್ವರನ ದರ್ಶನಕಾಂಕ್ಷಿಗಳಾಗಿ ತಿರುಪತಿಗೆ ಬಿಜಯಂಗೈದರು.