|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೭. ಶಿವಾಜಿ ಮಹಾರಾಜರಿಗೆ ಆಶೀರ್ವಾದ

ಶ್ರೀಗಳವರು ಕೊಲ್ಲಾಪುರಕ್ಕೆ ದಿಗ್ವಿಜಯ ಮಾಡಿದಾಗ ಅಲ್ಲಿ ಅವರಿಗೆ ಅಪೂರ್ವ ಸ್ವಾಗತ ದೊರಕಿತು. ಸಹಸ್ರಸಂಖ್ಯೆಯಲ್ಲಿ ಧಾರ್ಮಿಕರು-ಶಿಷ್ಯರು ಗುರುಗಳನ್ನು ಅಭೂತಪೂರ್ವ ರೀತಿಯಲ್ಲಿ ಸ್ವಾಗತಿಸಿ ಒಂದು ವಿಸ್ತಾರವಾದ ಮಂದಿರದಲ್ಲಿ ಬಿಡಾರ ಮಾಡಿಸಿದರು. ಈ ಸ್ವಾಗತದ ಕೇಂದ್ರಶಕ್ತಿ ಮಹಾರಾಷ್ಟ್ರದ ಪ್ರಬಲ ರಾಜಕಾರಣಿ ಗುರುಗಳ ಭಕ್ತನರಸಿಂಗ ಹನುಮಂತ ಪಂತನಾಗಿದ್ದ.

ವಿಜಯನಗರದ ಪತನವಾದಮೇಲೆ ಪ್ರಬಲಿಸಿದ್ದ ಬಹುಮನಿ ಸುಲ್ತಾನರು ಒಂದು ಕಡೆ, ದೆಹಲಿಯ ಮೊಗಲರು ಒಂದು ಕಡೆ, ಹಿಂದೂ ಜನ, ಸಂಸ ತಿ, ಧರ್ಮ ದೇವಾಲಯಗಳ ಮೇಲೆ ಅಸಹ್ಯ ದಬ್ಬಾಳಿಕೆ, ಕೊಲೆ, ಸುಲಿಗೆ ಮಾಡುತ್ತಿದ್ದರು. ಹಿಂದೂ ಜನರು ಬದುಕುವುದೇ ಕಷ್ಟವಾಗಿತ್ತು. ಈ ಕಷ್ಟದಿಂದ ಜನತೆಯನ್ನು ಪಾರುಮಾಡಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನೂದಿ ಜನತೆಯನ್ನು ಜಾಗೃತಗೊಳಿಸಿದ ಮಹನೀಯ ಶಿವಾಜಿ! ಈ ವೀರಪುರುಷನು ಸ್ವಾಭಾವಿಕವಾಗಿ ಹಿಂದೂಧರ್ಮ, ಸಂಸ ಕಟ್ಟಾಭಿಮಾನಿಯಾಗಿದ್ದು ಹುಟ್ಟಿನಿಂದಲೇ ಶೌರ್ಯ, ಪರಾಕ್ರಮ, ಜನಾನುರಾಗ, ಸ್ವಾತಂತ್ರ ಭಾವನೆಗಳು ಅವನಲ್ಲಿ ಪ್ರಜ್ವಲಿಸುತ್ತಿತ್ತು. ಅದಕ್ಕೆ ಒಂದು ಚಾಲನೆ ಬೇಕಾಗಿತ್ತು. ಆವೊಂದು ಚಾಲನೆ ನಾರೊಂಪತ ಹನುಮಂತೇಯವರಿಂದ ಶಿವಾಜಿಗೆ ದೊರೆತುದು ಹಿಂದೂಜನತೆಯ ಸೌಭಾಗ್ಯವೆನ್ನಬಹುದು. ದಕ್ಷಿಣ ಹಿಂದುಸ್ಥಾನದಲ್ಲಿ ಮಾತ್ರವಲ್ಲದೆ ಸಮಗ್ರ ಭಾರತದಲ್ಲಿ ಅಂದು ತಂಜಾವೂರು ಆರ ಸಂಸ 

ತಿಗೆ ಆಶ್ರಯವಿತ್ತು ನಿಂತಿತೆನ್ನಬಹುದು. ಅದನ್ನು ಬೆಳೆಸಿ ಇನ್ನೊಂದು ಹಿಂದು ಸಾಮ್ರಾಜ್ಯ ಕಟ್ಟಲು ತನ್ನ ಮಗ ಶಿವಾಜಿಗೆ ಅಣಿಮಾಡಿಕೊಟ್ಟವನು ಶಹಜಿ ಭೌನ್ಸ್. ಇವನು ನಾರೋಪಂತ ಹನುಮಂತೇ ಎಂಬ ಮಾಧ್ವ ರಾಜಕಾರಣಿಯ ಸಹಾಯ-ಸಲಹೆಯಿಂದ ತಸ್ವೀಕಾರದಲ್ಲಿ ಮತ್ತಷ್ಟು ಯಶಸ್ಸು ಸಂಪಾದಿಸಿದ ಮತ್ತು ನನ್ನ ಆಪ್ತನಾದ ನಾರೋಪಂತ ಹನುಮಂತೆಯನ್ನು ಶಿವಾಜಿಗೆ ಸಹಾಯಕನಾಗಿ ಮಾರ್ಗದರ್ಶನ ಮಾಡಲು ಕಳಿಸಿದನು. 

ಮಾಧಬ್ರಾಹ್ಮಣರಾದ ಹನುಮಂತೆಯವರು ಅತ್ಯಂತ ವಿದ್ಯಾವಂತರೂ ರಾಜತಂತ್ರನಿಪುಣರೂ ಧೈಯ್ಯದಾರಾದಿ ಗುಣಪಂಡಿತರೂ, ಕುಶಾಗ್ರಮತಿಗಳೂ ಆಗಿದ್ದರು. ಅವರು ಶಿವಾಜಿಯು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಚೋದನೆ ನೀಡಿ ಅವನಿಗೆ ಬಲಗೈಯಂತಿದ್ದು ಮತ್ತೊಮ್ಮೆ ಸುಭದ್ರ ಹಿಂದೂ ರಾಜ್ಯದ ಸ್ಥಾಪನೆಗೆ ಕಾರಣರಾದರು. ಶಿವಾಜಿ ಮಹಾರಾಜರು ಹಿಂದೂಗಳಲ್ಲಿ ಸ್ವಾತಂತ್ರ್ಯದ ಕಿಚ್ಚುಹಬ್ಬಿಸಿ, ನಾರೋಪಂತೆ ಹನುಮಂತೆ ಮುಂತಾದ ಅನೇಕ ಆತ್ಮೀಯರ ಸಹಾಯ-ಸಹಕಾರಗಳಿಂದ ವೀರರಾದ ತರುಣರ ತಂಡವನ್ನು ಕಟ್ಟಿಕೊಂಡು ಯವನರಿಗೆ ಕಿರುಕುಳ ಕೊಡುತ್ತಾ ಬಂದರು. ಸಮರತಂತ್ರ ನಿಪುಣರಾದ ಅವರು ಬಹುಮನಿಸುಲ್ತಾನರು ಹಾಗೂ ದೆಹಲಿಯ ಬಾದಷಹರಿಗೆ ಭಾರತೀಯ ವೀರರ ಸಾಹಸದ ಪರಿಚಯಮಾಡಿಕೊಟ್ಟು, ಅನೇಕ ಕೋಟೆ ಕೊತ್ತಲುಗಳನ್ನು ಸ್ವಾಧೀನಪಡಿಸಿಕೊಂಡು ವಿಜಯಪರಂಪರೆಯನ್ನು ಸಾಧಿಸಿದರು.416 ಯವನರಿಗೆ ಶಿವಾಜಿಯೆಂದರೆ ಸಿಂಹಸ್ವಪ್ನವಾಯಿತು. ಶಿವಾಜಿಮಹಾರಾಜರ ಕಾರ ಕ್ಷೇತ್ರವಾಗಿತ್ತು ಕೊಲ್ಲಾಪುರ. ಶ್ರೀರಾಘವೇಂದ್ರಗುರುಗಳು ಇಂಥ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವಾಗಿದ್ದ ಕೊಲ್ಲಾಪುರಕ್ಕೆ ಚಿತೈಸಿದ್ದರು. 

ಶ್ರೀಪಾದಂಗಳವರು ಕೊಲ್ಲಾಪುರದಲ್ಲಿ ಚಾತುರ್ಮಾಸ್ಯಸಂಕಲ್ಪಕ್ಕೆ ಕುಳಿತರು. ಪ್ರತಿದಿನ ಮಹಾಲಕ್ಷ್ಮಿಯದರ್ಶನ, ಪಾಠಪ್ರವಚನ, ದೇವತಾರ್ಚನ, ಪಂಡಿತರ ಪ್ರವಚನ, ಗುರುಗಳ ಉಪದೇಶಗಳಾಗುತ್ತಿದ್ದು ಸಹಸ್ರಾರು ಭಕ್ತ-ಶಿಷ್ಯ-ಧರ್ಮಾಭಿಮಾನಿಗಳು ಕೃತಾರ್ಥರಾಗಹತ್ತಿದರು. ನಾರೋಪಂತಹನುಮಂತೆಯವರು ಪ್ರತಿದಿನ ಗುರುಗಳದರ್ಶನಮಾಡಿ ಭಕ್ತಿಸಲ್ಲಿಸುತ್ತಿದ್ದರು. ಒಂದು ದಿನ ಸಂಜೆ ಗುರುಗಳದರ್ಶನಕ್ಕೆ ಬಂದ ನಾರೋಪಂತರು ಏಕಾಂತದಲ್ಲಿ ಶಿವಾಜಿ ಮಹಾರಾಜರು ಕೊಲ್ಲಾಪುರಕ್ಕೆ ಬಂದಿರುವ ವಿಚಾರಹೇಳಿ ಗುರುಗಳು ಅವರಿಗೆ ದರ್ಶನವಿತ್ತು ಆಶೀರ್ವದಿಸಬೇಕೆಂದು ಪ್ರಾರ್ಥಿಸಿ ಗುರುಗಳನ್ನು ರಾಜಮಂದಿರಕ್ಕೆ ಕರೆದೊಯ್ದರು. ರಾಜದ್ವಾರದ ಬಳಿ ಜೀಜಾಬಾಯಿ, ಸಾಂಬಾಜಿ, ಪತ್ನಿಯರೊಡಗೂಡಿ ಶಿವಾಜಿ ಮಹಾರಾಜರು ಗುರುಗಳನ್ನು ಸ್ವಾಗತಿಸಿ ಭದ್ರಾಸನದಲ್ಲಿ ಕೂಡಿಸಿ ನಮಸ್ಕರಿಸಿದರು. ಕುಶಲಪ್ರಶ್ನೆಯಾದ ಮೇಲೆ ಪತ್ರೀಸಹಿತರಾಗಿ ಶಿವಾಜಿ ಗುರುಗಳಿಗೆ ಪಾದಪೂಜೆಮಾಡಿ ಧನಕನಕಾಭರಣಗಳನ್ನರ್ಪಿಸಿ ನಮಸ್ಕರಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಆ ತರುವಾಯ ಏಕಾಂತದಲ್ಲಿ ಗುರುಮಹಾರಾಜ್, ತಮ್ಮ ಪಾಂಡಿತ್ಯ, ಮಹಿಮಾದಿಗಳನ್ನು ಶ್ರೀಪಂತರಿಂದ ತಿಳಿದು ಪರಮಾನಂದವಾಯಿತು. ತಮ್ಮ ದರ್ಶನ ಸೇವನದಿಂದ ಪುನೀತನಾದೆ. ಹಿಂದೂಧರ್ಮರಕ್ಷಣೆಗಾಗಿ ನಾನು ಕೈಗೊಂಡಿರುವ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಆಶೀರ್ವಾದ ಬೇಡುತ್ತೇನೆ” ಎಂದು ವಿಜ್ಞಾಪಿಸಿದರು.

By the time that the last traces of Vijayanagar Empire were disappearing, Shahaji by his conquests, and by the aid of his principal minister, Naropanth Hanumanthe, a Madhava scholar and financier trained in the school of Mallikamber connected Tanjore in thought and outlook with Maharastra and with the neighbourhood of Bangalore in Mysore state. Shivaji then came in to Prominence and Raghavendra Tirtha......remained for long time in Kolhapur in the centre of Maharastra thought and influence. 

Mythic Society Journal - Oct 1924

ಶ್ರೀಯವರು ನಸುನಕ್ಕು “ಧರ್ಮವೀರರೇ ! ನೀವು ಕೈಗೊಂಡಿರುವ ಮಹಾತ್ಕಾರವನ್ನು ನಾವು ಬಹುದಿನದಿಂದ ಕೇಳಿ ಆನಂದಿಸುತ್ತಿದ್ದೆವು. ನಿಮ್ಮನ್ನು ಕಂಡು ನಮಗೆ ಅತೀವ ಸಂತೋಷವಾಗಿದೆ. ಭಾರತವು ಸನಾತನಧರ್ಮ, ಸಂಸ ತಿಗಳಿಗೆ ತವರುಮನೆ, ಪುಣ್ಯಭೂಮಿ. ಭಾರತೀಯರಿಂದು ವಿಧರ್ಮಿಯರ ಪಾದಾಘಾತಕ್ಕೆ ಸಿಲುಕಿ ಬಳಿಲುತ್ತಿರಲು ಅವರು ಧರ್ಮ, ದೇವರು, ಸತ್ಯ, ತ್ಯಾಗಗಳನ್ನು ಉದಾಸೀನ ಮಾಡಿದ್ದೇ ಕಾರಣವಾಗಿದೆ. “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತದಾನಂ ಸೃಜಾಮ್ಯಹಂ" ಎಂದು ಶ್ರೀಕೃಷ್ಣ ಅಪ್ಪಣೆ ಕೊಡಿಸಿದ್ದಾನೆ. ತಾನು ಅವತಾರಮಾಡದಿರುವಾಗ ಭಗವಂತನು ತನ್ನ ಭಕ್ತರಿಗೆ ಶಕ್ತಿ ನೀಡಿ ಅವರಿಂದ ಆ ಕಾರ ಮಾಡಿಸುತ್ತಾನೆ. ಈ ಹಿಂದೂಜನರ, ಧರ್ಮದ, ಜನತೆಯ ರಕ್ಷಣೆ ನಿಮ್ಮಿಂದಾಗಬೇಕೆಂಬುದು ಶ್ರೀಹರಿಯ ಸಂಕಲ್ಪ! ಆ ಪವಿತ್ರ ಕಾವ್ಯದಲ್ಲಿ ನೀವು ದೀಕ್ಷಾಬದ್ಧರಾಗಿರುವುದು ಸಂತಸದ ಸಂಗತಿಯಾಗಿದೆ. “ಯತೋ ಧರ: ತತೋ ಜಯಃ” ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವು ನಿಶ್ಚಿತ, “ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ” ಧರ್ಮವನ್ನು ನಾಶಪಡಿಸಿದರೆ ಅದು ನಾಶ ಪಡಿಸಿದವರನ್ನು ನಾಶಪಡಿಸುವುದು, ರಕ್ಷಿಸಿದವರನ್ನು ರಕ್ಷಿಸುವುದು ! ನೀವು ಈ ಒಂದು ಉಪದೇಶವನ್ನು ಸದಾ ನೆನಪಿನಲ್ಲಿಟ್ಟು ಪ್ರವರ್ತಿಸಿರಿ. ನಿಮಗೆ ಪರಮಾತ್ಮನು ವಿಜಯಪರಂಪರೆಯನ್ನಿತ್ತು ಕಾಪಾಡುವನು. ನೀವು ನಿರ್ಭಯರಾಗಿ ಮುನ್ನುಗ್ಗಿರಿ, ಹಿಂದೂ ಸುತ್ರಾಣರೆಂದು ಕೀರ್ತಿಗಳಿಸಿರಿ. ನಿಮಗೆ ಸರ್ವದಾ ವಿಜಯ್-ಮಂಗಳಗಳು ದೊರಕುವಂತೆ ಶ್ರೀಮೂಲರಾಮನಲ್ಲಿ ಪ್ರಾರ್ಥಿಸಿದ್ದೇವೆ. ನಮ್ಮ ಆಶೀರ್ವಾದವು ನಿಮಗೆ ಸದಾ ಇದೆ ಮುಂತಾಗಿ ಹೇಳಿ ಶಿವರಾಯರಲ್ಲಿ ಧರ್ಮಪ್ರಜ್ಞೆಯನ್ನು ಪ್ರಜ್ವಲಿಸಿದರು.

ಶ್ರೀಯವರ ಉಪದೇಶದಿಂದ ಶಿವಾಜಿಮಹಾರಾಜರಿಗೆ ಪರಮಾನಂದದಾಯಿತು. ಗುರುಗಳಿಗೆ ನಮಸ್ಕರಿಸಿ “ಗುರುದೇವ! ಧನ್ಯನಾದೆ, ತಮ್ಮ ಅಮೃತಹಸ್ತವನ್ನು ನನ್ನ ತಲೆಯ ಮೇಲಿಟ್ಟು ಆಶೀರ್ವದಿಸಿರಿ” ಎಂದು ಪ್ರಾರ್ಥಿಸಿದರು. ಗುರುಗಳು ಮನಃ ಪೂರ್ವಕವಾಗಿ ಹಿಂದೂಧರ್ಮಸುತ್ರಾಣರಾದ ಶಿವರಾಯರಿಗೆ ಶ್ರೇಯಸ್ಸು ವಿಜಯಗಳಾಗಲೆಂದು ಅವರ ಶಿರದಮೇಲೆ ಕರವಿರಿಸಿ ಹರಸಿದರು. ಆಗ ಶಿವಾಜಿಮಹಾರಾಜರ ಶರೀರದಲ್ಲಿ ಒಂದು ವಿಚಿತ್ರಶಕ್ತಿ ಪ್ರವಹಿಸಿದಂತಾಗಿ ಮೈಪುಳುಕಿತು. ಗುರು ಮಹಾರಾಜರ ಸಂಪೂರ್ಣ ಅನುಗ್ರಹದೊರಕಿತೆಂದು ಉಲ್ಲಸಿತರಾದ ಅವರು ಖಡ್ಗವನ್ನು ಹಿಡಿದು ಮೊಳಕಾಲೂರಿ ಶ್ರೀರಾಘವೇಂದ್ರಗುರುಗಳ ಮುಂದೆಕುಳಿತು “ಧನ್ಯ ನಾದೆ ಗುರುದೇವ ! ಇಕೋ ಈ ಭವಾನಿಯನ್ನು ಹಿಡಿದು ತಮ್ಮ ಪಾದಸಾಕ್ಷಿಯಾಗಿ ಪ್ರಮಾಣಮಾಡುತ್ತೇನೆ. ಪೂರ್ಣ ಸ್ವಾತಂತ್ರ್ಯವನ್ನು ಗಳಿಸಿ, ಹಿಂದೂರಾಜ್ಯವನ್ನು ಕಟ್ಟಿ, ಹಿಂದೂಧರ್ಮ, ಪೂಜ್ಯಮಂದಿರಗಳು, ಜನತೆಯ ರಕ್ಷಣೆಗಾಗಿಯೇ ನನ್ನ ದೇಹವನ್ನು ಮುಡುಪಾಗಿಡುತ್ತೇನೆ. ತಮ್ಮ ಆಶೀರ್ವಾದಬಲದಿಂದ ಅದನ್ನು ಸಾಧಿಸುತ್ತೇನೆ” ಎಂದು ಪ್ರಮಾಣಮಾಡಿದರು. ಗುರುಗಳು ಹರ್ಷದಿಂದ ಅಭಯಹಸ ಪ್ರದರ್ಶಿಸಿ 'ತಥಾಸ್ತು' ಎಂದು ಅಪ್ಪಣೆಮಾಡಿ ರಾಜಯೋಗ್ಯರೀತಿಯಲ್ಲಿ ಶಿವಾಜಿ ಮಹಾರಾಜರು, ತಾಯಿ ಜೀಜಾಬಾಯಿ, ಪತ್ನಿ, ಪುತ್ರ, ಸಾಂಬಾಜಿಗಳಿಗೆ ಗೌರವ ಮಾಡಿ ಫಲಮಂತ್ರಾಕ್ಷತೆ ಅನುಗ್ರಹಿಸಿ ಶಿವಪ್ರಭುಗಳಿಂದ ಬೀಳ್ಕೊಂಡು ಬಿಡಾರಕ್ಕೆ ದಯಮಾಡಿಸಿದರು.

ಶ್ರೀಗಳವರು ಚಾತುರ್ಮಾಸ್ಯಸಂಕಲ್ಪವನ್ನು ಮುಗಿಸಿ, ಶ್ರೀಲಕ್ಷ್ಮೀದೇವಿಗೆ ಸೇವೆ ಸಲ್ಲಿಸಿ, ದೇವಿಯ ದರ್ಶನಮಾಡಿ ನಮಸ್ಕರಿಸಿ ಮಠಕ್ಕೆ ಬಂದು ಪ್ರಮುಖ ವಿದ್ವಜ್ಜನ-ಧಾರ್ಮಿಕರು ಮತ್ತು ಪ್ರಿಯಶಿಷ್ಯರಾದ ನಾರೋಪಂತ ಹನುಮಂತೆಯವರನ್ನು ಸಂಭಾವಿಸಿ ಫಲಮಂತ್ರಾಕ್ಷತೆ ಕರುಣಿಸಿ ನಾಸಿಕದ ಕಡೆ ಸಂಚಾರ ಹೊರಟರು.

ಶಿವಾಜಿ ಮಹಾರಾಜರು ಶ್ರೀರಾಘವೇಂದ್ರಸ್ವಾಮಿಗಳವರ ಆಶೀರ್ವಾದ ಪಡೆದು ಗುರುಗಳನ್ನು ಗೌರವಿಸಿ, ಸೇವಿಸಿದ ವಿಚಾರ ಪರಂಪರೆಯಿಂದ ತಿಳಿದುಬಂದಿರುವುದಲ್ಲದೆ, ಶ್ರೀರಾಘವೇಂದ್ರಸ್ವಾಮಿಗಳವರ ಮಠದ 'ಷಹಾಮಲ್‌ 'ನಿಂದಲೂ ತಿಳಿದುಬರುತ್ತದೆ.