ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೭೨. ಗ್ರಂಥರಚನೆ
ಶ್ರೀವಿದ್ಯಾಲಕ್ಷ್ಮೀಯ ಉಪದೇಶ, ಶ್ರೀವಿಜಯೀಂದ್ರ-ಶ್ರೀಸುಧೀಂದ್ರತೀರ್ಥರ ಗ್ರಂಥರಚನೆ ಮಾಡಬೇಕೆಂಬ ಅಪ್ಪಣೆಗಳನ್ನು ಕಾರ್ಯರೂಪಕ್ಕೆ ತರಲು ಗುರುಗಳು ಮನಸ್ಸು ಮಾಡಿದರು. ಶ್ರೀಗಳವರು ಒಂದು ಶುಭಮುಹೂರ್ತದಲ್ಲಿ ಗ್ರಂಥರಚನೆಯನ್ನು ಪ್ರಾರಂಭಿಸಿದರು. ಮೊದಲು ೧) ಕಥಾಲಕ್ಷಣ, ೨) ಪ್ರಮಾಣಲಕ್ಷಣ, ೩) ತತ್ವಸಂಖ್ಯಾನ, ೪) ತತ್ವವಿವೇಕ, ೫) ಮಾಯಾವಾದಖಂಡನ, ೬) ಪ್ರಪಂಚ ಮಿಥ್ಯಾತ್ವಾನುಮಾನಖಂಡನ, ೨) ಉಪಾಧಿಖಂಡನ, ೮) ತನ್ನೋದ್ಯೋತ, ೯) ವಿಷ್ಣುತತ್ವವಿನಿರ್ಣಯ, ೧೦) ಕರ್ಮನಿರ್ಣಯ - ಹೀಗೆ ಶ್ರೀಮದಾಚಾರರ ದಶಪ್ರಕರಣಗಳಿಗೆ ಶ್ರೀಜಯತೀರ್ಥರು ರಚಿಸಿದ ಟೀಕೆಗಳಿಗೆ ಅಸಾಧಾರಣಗಳಾದ ವಿದ್ದಷ್ಟೂರ್ಣಗಳಾದ 'ಟಿಪ್ಪಣಿ'ಗಳ ರಚನೆಯಲ್ಲಿ ಆಸಕ್ತರಾದರು. ಆನಂತರ ೧) ಈಶಾವಾಸ್ಯ, ೨) ಕೇನ, ೩) ಕಠ, ೪) ಪ್ರಶ್ನ, ೫) ಮುಂಡಕ, ೬) ಮಾಂಡೂಕ್ಯ, ೭) ತೈತ್ತಿರೀಯ, ೮) ಐತರೇಯ, ೯) ಛಾಂದೋಗ್ಯ, ೧೦) ಬೃಹದಾರಣ್ಯಕಗಳೆಂಬ ದಶೋಪನಿಷತ್ತುಗಳಿಗೆ ಶ್ರೀಮದಾಚಾರರ, ಟೀಕಾರಾಯರ ಭಾವವನ್ನನುಸರಿಸಿ “ಖಂಡಾರ್ಥಗಳೆಂಬ ಗ್ರಂಥಗಳನ್ನೂ ತರುವಾಯ ೧) ಪುರುಷಸೂಕ್ತ, ೨) ಶ್ರೀಸೂಕ್ತ, ೩) ಅಂಧ್ರಣೀಸೂಕ್ತ, ೪) ಬಳಿತಾಸೂಕ್ತ, ೫) ಮನ್ಯುಸೂಕ್ತ - ಹೀಗೆ ಪಂಚಸೂಕ್ತಗಳಿಗೆ ಶ್ರೇಷ್ಠ ವ್ಯಾಖ್ಯಾನಗಳನ್ನೂ ರಚಿಸಹತ್ತಿದರು.
ಇದರಂತೆ ಶ್ರೀಮದಾಚಾರರ “ಮಹಾಭಾರತತಾತ್ಪರ್ಯನಿರ್ಣಯ'ವನ್ನು ಸಂಗ್ರಹಿಸಿ ಭಾವಸಂಗ್ರಹ” ಎಂಬ ಉತ ಕಾವ್ಯವನ್ನೂ, ರಾಮಕಥೆ ಬರೆಯಲಾಶಿಸಿ ಶ್ರೀಸಂಗ್ರಹರಾಮಾಯಣ ಕಥೆಯನ್ನು ಸಂಗ್ರಹಿಸಿ “ಶ್ರೀರಾಮಚಾರಿತ್ರಮಂಜರೀ ಮತ್ತು ಭಾಗವತ ದಶಮಸ್ಕಂಧ ಕಥೆಯನ್ನು ಸಂಗ್ರಹಿಸಿ “ಶ್ರೀಕೃಷ್ಣಚಾರಿತ್ರಮಂಜರಿ” ಎಂಬ ಉತ್ತಮ ಕಾವ್ಯಗಳು ಹೀಗೆ ಮೂರು ಸ್ವತಂತ್ರಕಾವ್ಯಗಳನ್ನು ರಚಿಸತೊಡಗಿದರು.
ಮೀಮಾಂಸಾಶಾಸ್ತ್ರವು ದೈತಸಿದ್ಧಾಂತಕ್ಕೆ ಸಹಾಯಕವಾದ್ದರಿಂದ ಪಾಠಪ್ರವಚನ, ವಾಕ್ಯಾರ್ಥಗಳಿಗೆ ಸಿದ್ಧಾಂತಕ್ಕೆ ಅನುಕೂಲ ವಾಗಬೇಕೆಂಬ ಆಕಾಂಕ್ಷೆಯಿಂದ ಭಾಟ್ನಮೀಮಾಂಸಾಶಾಸ್ತ್ರದ ಮೇಲೆ ಒಂದು ಅನಿತರ ಸಾಧಾರಣವೂ ಜಗನ್ಮಾನವೂ ಆದ “ಭಾಟ್ಟಸಂಗ್ರಹ” ಎಂಬ ಗ್ರಂಥರಚನೆ ಮಾಡಿ ವಿದ್ವನ್ಮಂಡಲಿಗೆ ಮಹೋಪಕಾರ ಮಾಡಿದರು.
ಇದೇ ಸಂದರ್ಭದಲ್ಲಿ ದಕ್ಷಿಣಭಾರತದ ರಾಜಕೀಯರಂಗದಲ್ಲಿ ಏರುಪೇರುಗಳಾಗಿ ತಂಜಾಪುರರಾಜ್ಯವು ಘೋರಯುದ್ಧದಲ್ಲಿ ಪಾಲ್ಗೊಂಡು ಬಹುಕಷ್ಟನಷ್ಟಗಳಿಗೆ ಭಾಗಿಯಾಗಬೇಕಾಯಿತು. ಚವ್ವಪ್ಪನಾಯಕ, ರಘುನಾಥಭೂಪಾಲರು, ರಾಜಗುರುಗಳೂ ಮಹಾಮಹಿಮರೂ ಆದ ವಿಜಯೀಂದ್ರ-ಸುಧೀಂದ್ರ ಗುರುಗಳ ಮಾರ್ಗದರ್ಶನ, ಉಪದೇಶಗಳಂತೆ ನಡೆದು ಶ್ರೇಷ್ಠರಾಜರೆಂದೂ ಪ್ರಜಾರಂಜಕರೆಂದೂ ಖ್ಯಾತಿಗಳಿಸಿದ್ದರು. ಅವರ ತರುವಾಯ ರಾಜನಾದ ರಘುನಾಥಭೂಪಾಲನ ಪುತ್ರ ವಿಜಯರಾಘವ ಭೂಪಾಲನು ತನ್ನ ಭುಜಬಲವನ್ನೇನಂಬಿ, ಮಿತ್ರರಾಜ್ಯಗಳೊಡನೆ ಸರಿಯಾಗಿ ವರ್ತಿಸದಿದ್ದುದರಿಂದ ಅದು ಕೊನೆಗೆ ಯುದ್ಧದಲ್ಲಿ ಪರ್ಯವಸಾನವಾಯಿತು. ವೆಲ್ಲೂರಿನ ಕನ್ನಡ ಸಾಮ್ರಾಟರು, ಮಧುರೆಯ ನಾಯಕರು, ಮೈಸೂರಿನ ಒಡೆಯರು, ಹಾಗೂ ವಿಜಾಪುರದವರೊಂದಿಗೆ ವೈಮನಸ್ಯ ಕಟ್ಟಿಕೊಂಡ ವಿಜಯರಾಘವ ನಾಯಕನು ಇವರೆಲ್ಲರನ್ನೂ ಏಕಕಾಲದಲ್ಲಿ ಎದುರಿಸಿ ಯುದ್ಧ ಮಾಡಬೇಕಾಗಿಬಂದಿತು. ಕ್ರಿ.ಶ. ೧೬೪೧-೪೨ ರ ಹಾಗೆ ಜರುಗಿದ ಈ ಮಹಾಸಂಗ್ರಾಮದಲ್ಲಿ ವಿಜಯರಾಘವಭೂಪಾಲನು ಭಾರೀ ಸೋಲನ್ನು ಅನುಭವಿಸಿ, ಅವನ ಜೀವವುಳಿಯುವುದೇ ದುಸ್ತರವಾಗಿದ್ದು, ದೈವಯೋಗದಿಂದ ಶ್ರೀರಾಘವೇಂದ್ರಗುರುಗಳ ಸಕಾಲಿಕ ಪ್ರಯತ್ನದ ಫಲವಾಗಿ ಸೋತ ವಿಜಯರಾಘವನಿಗೂ, ಜಯಶಾಲಿಗಳಾದ ರಾಜ್ಯಗಳಿಗೂ ಸಂಧಿಯೇರ್ಪಟ್ಟು ಒಂದು ರೀತಿಯಿಂದ ಯುದ್ಧವು ಮುಕ್ತಾಯವಾಯಿತು. ಆದರೆ ತಂಜಾಪುರ ರಾಜ್ಯದ ದವಸ-ಧಾನ್ಯಗಳು, ಸಿರಿಸಂಪತ್ತೆಲ್ಲವೂ ಲೂಟಿಯಾಗಿಹೋಯಿತು. ಅದೇ ವೇಳೆಗೆ ದೈವಿಕ ವಿಕೋಪವೂ ಉಂಟಾಗಿ ಮಳೆಯಿಲ್ಲದೆ ಬೆಳೆಗಳೆಲ್ಲವೂ ನಾಶವಾಗಿ ತಂಜಾಪುರದೇಶವು ಘೋರ ದುರ್ಭಿಕ್ಷೆಗೀಡಾಯಿತು.