ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೭. ಪ್ರತೀತವ್ರತರು
“ಸ್ವವರ್ಣಾಶ್ರಮೋಚಿತವಾದ, ನಿತ್ಯನೈಮಿತ್ತಿಕ ಕಾಮ್ಯಗಳೆಂಬ ಮೂರುವಿಧವಾದ ಕರ್ಮಗಳನ್ನು ಭಗವತ್ಯರ್ಥವಾಗಿ, ಪರಮಾತ್ಮನ ಪೂಜೆಯನ್ನು, ಸರ್ವಜೀವಾಂತರ್ಯಾಮಿಗಳಾಗಿದ್ದು, ನಿಯಾಮಕರಾಗಿರುವ ಶ್ರೀಮುಖ್ಯಪ್ರಾಣದೇವರ ಅಂತರ್ಗತನಾದ ಪರಮಾತ್ಮನೇ ಮಾಡಿ-ಮಾಡಿಸುತ್ತಾನೆಂಬ ಅನುಸಂಧಾನಪೂರ್ವಕವಾಗಿ, ಶ್ರೀವಾಯುದೇವರೇ ಪ್ರೇರಣೆಮಾಡಿ, ಸಕಲಜೀವರಿಂದ ಮಾಡಿಸುವರೆಂಬ ದೃಢನಂಬಿಕೆ-ಅನುಸಂಧಾನಗಳಿಂದ ಪ್ರತಿಯೊಂದು ಕರ್ಮಗಳನ್ನೂ ನಿಷ್ಕಾಮನೆಯಿಂದ ಶ್ರೀಹರಿವಾಯುಗಳ ಪ್ರೀತರ್ಥವಾಗಿ ನಾವು ಮಾಡುತ್ತೇವೆ, ಮತ್ತು ನಮ್ಮ ಅಜ್ಞಾಧಾರಕರಾದ ಸರ್ವಜನರಿಂದ ಮಾಡಿಸುತ್ತೇವೆ” ಎಂದು ಸಂಕಲ್ಪಪೂರ್ವಕ ಪ್ರತಿಜ್ಞಾಬದ್ದರಾಗಿ ಅದರಂತೆ ಆಚರಿಸುವ ಜ್ಞಾನಿಗಳನ್ನು “ಪ್ರತೀತವತರು” ಎಂದು ಗೌರವಿಸುವುದು ವಿದ್ವಜ್ಜನರ-ಸಜ್ಜನರ ಗುಂಪಿನಲ್ಲಿ ಕಂಡುಬಂದಿದೆ. ಹೀಗೆ ಪ್ರತಿಜ್ಞಾಬದ್ಧರಾದ “ಪ್ರತೀತವ್ರತ'ರಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರು ಅಗ್ರಗಣ್ಯರಾಗಿದ್ದಾರೆ. ಇಲ್ಲಿ ನಾವು ಸ್ವಲ್ಪ ವಿಚಾರವನ್ನು ವಿವೇಚಿಸುವುದು ಅವಶ್ಯವಾಗಿದೆ.
ಆನ್ನೋದ್ಧಾರಕ್ಕಾಗಿ ಮಾಡಿಕೊಳ್ಳಬೇಕಾದ ಸಾಧನೆಯ ಪ್ರಕಾರಗಳು ವೇದಾದಿ ಶಾಸ್ತ್ರಗಳಲ್ಲಿ ನಿರೂಪಿತವಾಗಿದೆ. ಅನಾದಿಕಾಲದಿಂದ ಜನರು ತ್ರಿವಿಧರಾಗಿದ್ದಾರೆ. ಆದ್ದರಿಂದಲೇ ಶ್ರೀಹರಿಯು ಗುಣಕರ್ಮವಿಭಾಗಪೂರ್ವಕವಾಗಿ ತ್ರಿವಿಧಜೀವರನ್ನು ಬ್ರಹ್ಮ-ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ್ಣಗಳಾಗಿ ವಿಂಗಡಿಸಿ ಸೃಷ್ಟಿಸಿದ್ದಾನೆ. “ಚಾತುರ್ವಣ್ಯ್ರಂ ಮಯಾ ಸ್ಪಷ್ಟಂ ಗುಣಕರ್ಮವಿಭಾಗಶಃ| ತಸ್ಯ ಕರ್ತಾರಮಪಿ ಮಾಂ ವಿಧಕರ್ತಾರಮವ್ಯಯಮ್ || (ಗೀತಾ, ೪-೧೩ ) ಬ್ರಾಹ್ಮಣ ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ್ಣಗಳೂ ಸತ್ವರಜಸ್ತಮೋಗುಣ, ಕರ್ಮವಿಭಾಗನಿಮಿತ್ತಮಾಡಿ ಆಯಾಯ ವರ್ಣೋಚಿತ ವಿಭಾಗಪೂರ್ವಕವಾಗಿ ನನ್ನಿಂದ ಸೃಷ್ಟಿಸಲ್ಪಟ್ಟವೆಂದು ತಿಳಿ” - ಎಂದು ಶ್ರೀಕೃಷ್ಣ ಉದೇಶಿಸಿದ್ದಾನೆ.
ಭೂಲೋಕ-ಸ್ವರ್ಗಲೋಕಾದಿಗಳಲ್ಲಿರುವ ಮನುಷ್ಯ-ದೇವತೆಗಳೇ ಆದಿಯಾಗಿ ಜೀವವರ್ಗದಲ್ಲಿರುವ ಯಾವ ಜೀವನೂ ಜಡಪ್ರಕೃತಿಯಿಂದ ಉತ್ಪನ್ನವಾದ ಸತ್ವ-ರಜಸ್ತಮೋಗುಣಗಳಿಗೆ ಸಿಲುಕದಿರಲು ಸಾಧ್ಯವೇ ಇಲ್ಲ! ಸರ್ವಜೀವರೂ ತ್ರಿಗುಣ ಬದರು. ಆದರೆ ಹಿಂದೆ ಹೇಳಿದಂತೆ ಜೀವರ ಸ್ವರೂಪವು ಮಾತ್ರ ಪ್ರಾಕೃತಗುಣ ಮಯವಲ್ಲ, ಅದು ಅಪ್ರಾಕೃತವಾದುದು. ಆದರೂ ಈ ಗುಣತ್ರಯವು ಜೀವರ ಸ್ವರೂಪವನ್ನಾವರಿಸಿ ಪ್ರಕೃತಿಬಂಧಕ್ಕೀಡುಮಾಡಿ ಸ್ವರೂಪವ್ಯಂಜಕವಾಗುವುದು. ಜೀವನ ಬಾಹೇಂದ್ರಿಯಾದಿಗಳು ಗುಣತ್ರಯವಿಕಾರಗಳಾಗಿವೆ. ಎಲ್ಲರ ದೇಹದಲ್ಲಿಯೂ ಗುಣತ್ರಯವು ಒಂದೇ ಪರಿಣಾಮದಿಂದ ಸೇರಿರುವುದಿಲ್ಲ. ಅವುಗಳಲ್ಲಿ ಹೆಚ್ಚು ಕಡಿಮೆ ಭಾಗಗಳಿರುತ್ತವೆ. ಹಾಗೆ ಮಿಳಿತವಾಗಿರುವ ಸತ್ವಾದಿಗುಣಗಳ ತಾರತಮ್ಯದಿಂದ ಜೀವರು ಸಾತ್ವಿಕ-ರಾಜಸ-ತಾಮಸರೆಂದು ಮೂರು ವಿಧವಾಗಿರುವರು. ಅದರಲ್ಲಿಯೂ ಸಾತ್ವಿಕಸಾತ್ವಿಕ, ಸಾತ್ವಿಕರಾಜಸ, ಸಾತ್ವಿಕತಾಮಾಸಾದಿ ಬಹು ಪ್ರಭೇದಗಳಿವೆ.
ಇಂತು ಗುಣಕರ್ಮವಿಭಾಗಪೂರ್ವಕವಾಗಿ ಸೃಷ್ಟರಾದ ನಾಲ್ಕು ವರ್ಣಗಳ ಜೀವರು ಸ್ವಾಶ್ರಮೋಚಿತಕರ್ಮಗಳನ್ನು ಅವಶ್ಯವಾಗಿ ಆಚರಿಸುತ್ತಾ ಸಾಧನೆಮಾಡಿಕೊಳ್ಳಬೇಕಾದ್ದರಿಂದ ನಾಲ್ಕು ವರ್ಣದವರಿಗೆ ವಿಹಿತವಾದ ಕರ್ಮಗಳು ಭಗವದ್ಗೀತೆಯಲ್ಲಿ ನಿರೂಪಿತವಾಗಿದೆ.
ಭಗವಂತನು, ಸಾಧನಮಾಡಿಕೊಂಡು ಉದ್ಧತರಾಗಲೆಂದು ಕಾರುಣ್ಯದಿಂದ ಸೃಷ್ಟಿಸಿರುವ ಬ್ರಾಹ್ಮಣಾದಿಚಾತುರ್ವಣ್ಯ್ರದ ಸುಜೀವಿಗಳನ್ನು ತತ್ವಜ್ಞಾನ-ಧರ್ಮಾದ್ರುಪದೇಶಗಳಿಂದ ಸನ್ಮಾರ್ಗಗಾಮಿಗಳನ್ನಾಗಿಮಾಡಿ, ಅವರವರಿಗೆ ವಿಹಿತವಾದ ಆಚರಣೆ, ನಿತ್ಯನೈಮಿತ್ತಿಕಕಾವ್ಯಗಳೆಂಬ ತ್ರಿವಿಧಕರ್ಮಗಳನ್ನು ಫಲಾಪೇಕ್ಷೆಯಿಲ್ಲದೇ, ನಿಷ್ಕಾಮಭಾವನೆಯಿಂದ ಅವರಿಂದ ಮಾಡಿಸುವುದೊಂದು ಪರಮಪವಿತ್ರವಾದ ಮಹತ್ಕಾರ್ಯವಾಗಿದೆ. ಅದು ಭಗವತ್ತೂಜಾರೂಪವಾದುದು, ಇವೆಲ್ಲವೂ ಪರಮಾತ್ಮನನ್ನು ಪ್ರೀತಿಪಡಿಸಿ, ಅವನ ಪ್ರಸಾದವನ್ನು ಪಡೆಯಲು ಮಾಡಲೇಬೇಕಾದ ಸತ್ಕರ್ಮಗಳು. ಇವನ್ನು ಭಗವನ್ಮಾಹಾತ್ಮಜ್ಞಾನಪೂರ್ವಕವಾಗಿ ಭಕ್ತಿಯಿಂದ ಮಾಡಬೇಕು. ಪರಮಾತ್ಮನ ಅಚಿಂತ್ಯಾದ್ಭುತಶಕ್ತಿ, ಅನಂತಗುಣಗಳು, ಅಪ್ರತಿಹತಮಹಿಮೆಗಳು, ಲೀಲಾವಿಲಾಸಗಳು ಇವೆಲ್ಲವನ್ನೂ ಅರಿತು ಭಕ್ತಿಯಿಂದ ಆ ಪ್ರಭುವನ್ನು ಸೇವಿಸಬೇಕು. ಇಂಥ ಭಗವಂತನ ಮಹಿಮಾದಿಗಳನ್ನು ವೇದಾದಿಶಾಸ್ತ್ರಗಳಿಂದಲೇ ತಿಳಿಯಬೇಕಾಗಿದೆ. ಅದನ್ನು ಅಂದರೆ ಜ್ಞಾನವನ್ನು ಉಪದೇಶಿಸುವವರು, ಜ್ಞಾನಿಗಳಾದ ಸದ್ಗುರುಗಳು, ಇಂಥ ಗುರುಗಳಲ್ಲಿ ಪರಮಶ್ರೇಷ್ಠರು ಶ್ರೀಮುಖ್ಯಪ್ರಾಣದೇವರ ಅವತಾರರಾದ ಶ್ರೀಮನ್ಮಧ್ವಾಚಾರ್ಯರು. ಅವರ ಜೀವೋತ್ತಮರು, ಸಕಲಜೀವನಿಯಾಮಕರು, ಜಗತ್ಪಾಣರು, ಭಕ್ತರ ಉದ್ಧಾರದಲ್ಲಿ ಅವರಿಗೆ ಬಹಳ ಆದರ, ಅವರು ಸರ್ವಜ್ಞರು, ಭಗವದ್ ಜ್ಞಾನವನ್ನು ಯಥಾವತ್ತಾಗಿ ತಿಳಿದು ಎಲ್ಲ ಜ್ಞಾನಿಗಳಿಗೂ ನಾಯಕರಾಗಿದ್ದು ಭಗವಂತನನ್ನು ಸರ್ವದಾ ಸೇವಿಸುತ್ತಾ ಶ್ರೀಹರಿಪರಮಾತ್ಮನ ಪರಮಾನುಗ್ರಹಕ್ಕೆ ಶ್ರೀಲಕ್ಷ್ಮೀದೇವಿಯರ ತರುವಾಯ ಮುಖ್ಯಪಾತ್ರರಾಗಿದ್ದಾರೆ.
ಶ್ರೀವಾಯುದೇವರ ಮಹಿಮೆ ಆಗಾಧವಾದುದು. ಪಾಪಲೇಶವೂ ಇಲ್ಲದವರು ಅವರು. ದೈತ್ಯರು ಅವರನ್ನು ಸ್ಪರ್ಶಿಸಲೂ ಅಸಮರ್ಥರು. ಶ್ರೀವಿಷ್ಣುಭಕ್ತಿ ಮುಂತಾದ ಸಕಲ ಸದ್ಗುಣಪರಿಪಾರ್ಣರಾದ ಅವರಿಗೆ ದುಃಖ-ಅಜ್ಞಾನಾದಿ ದೋಷಗಳು ಯಾವಾಗಲೂ ಇಲ್ಲ! ಸಕಲ ವೇದಗಳು ಪರಮಮುಖ್ಯವೃತ್ತಿಯಿಂದ ಶ್ರೀಹರಿಯನ್ನೇ ಪ್ರತಿಪಾದಿಸುವುವು. ಅವನ ಮಹಿಮೆ (ಸ ಗುಣ) ಗಳನ್ನೇ ವರ್ಣಿಸುವವು. ಆ ವೇದಗಳು ನಾರಾಯಣನ ನಂತರ ಮುಖ್ಯವೃತ್ತಿಯಿಮದ ಶ್ರೀರಮಾದೇವಿಯನ್ನು ಪ್ರತಿಪಾದಿಸುವುವು. 39'ರಮಾ-ನಾರಾಯಣರನ್ನು ಬಿಟ್ಟರೆ, ಶ್ರೀಹರಿಯಲ್ಲಿಯೇ ಪ್ರಸಿದ್ಧವಾದ ಕೆಲ ವಿಶಿಷ್ಟಶಬ್ದಗಳ ವಿನಃ ಸಕಲ ವೇದಗಳಿಂದಲೂ ಮುಖ್ಯಪ್ರಾಣದೇವರು ಪ್ರತಿಪಾದ್ಯರಾಗಿದ್ದಾರೆ. ಕೆಲ ವೇದಭಾಗಗಳಿಂದ ಮಾತ್ರ ಪ್ರತಿಪಾದ್ಯರಾದ ಅಗ್ನಿ ಮುಂತಾದ ನಾನಾದೇವತೆಗಳಲ್ಲಿ ಶ್ರೀವಾರ
ಯುದೇವರು ಮುಖ್ಯತಮರಾಗಿದ್ದಾರೆ. ವೇದಪ್ರತಿಪಾದ್ಯರಾದ ದೇವತೆಗಳಿಂದ ಸಹಿತರಾದ ಅನಂತಜೀವರಿಗೂ ಇವರು ನಿಯಮಾಕರು. ಅವರು ಮಾಡಿ ಮಾಡಿಸದ ಯಾವ ಕ್ರಿಯೆಯನ್ನೂ ಯಾವ ಜೀವನು ಮಾಡಲಾರ. ಅನಂತ ಜೀವರನ್ನು ನಿಯಮಿಸುವ, ವಾಯುದೇವರು ಅನಂತರೂಪಗಳಿಂದ ಶೋಭಿಸುತ್ತಿದ್ದಾರೆ, ಚೇತನಾಚೇತನಾತ್ಮಕವಾದ ಜಗತ್ತಿಗೆ ಸಂಬಂಧಿಸಿದ ಸೃಷ್ಟಾದಿ ಶ್ರೀಹರಿಯ ಸರ್ವಕಾರ್ಯಗಳಲ್ಲಿ ಭಾಗಿಗಳಾಗಿ ಶ್ರೀಹರಿಯನ್ನು ಸೇವಿಸುವ ಪ್ರಧಾನ ಸಚಿವರೇ ಶ್ರೀಮುಖ್ಯಪ್ರಾಣದೇವರು! ಇಂತು ಅಪಾರ ಮಹಿಮಾನ್ವಿತರಾದ ಸರ್ವಜೀವರನ್ನೂ ಸಕಲವಿಧದಿಂದ ನಿಯಮನಮಾಡುವ, ಅಪ್ರತಿಹತ ಅಧಿಕಾರ ಯುಕ್ತರಾದ ಇವರು ಪರಮದಯಾಳುಗಳು, ಕ್ಷಮಾಸಮುದ್ರರು, ನಿರ್ವ್ಯಾಜ ಭಕ್ತಪೇಮಿಗಳು, ಭಕ್ತರ ಅಪರಾಧಗಳನ್ನು ಕ್ಷಮಿಸಿ, ಸನ್ಮಾರ್ಗಗಾಮಿಗಳನ್ನಾಗಿ ಮಾಡಿ ಉದ್ಧಾರಮಾಡುವ ಮಹಾನುಭಾವರು. ಇಂತಹ ಶ್ರೀಮುಖ್ಯಪ್ರಾಣದೇವರ ಮೂರನೆಯ ಅವತಾರರೇ ಶ್ರೀಮಧ್ವಾಚಾರ್ಯರು! ಆದ್ದರಿಂದ ಸಕಲಜೀವರಿಗೆ ಸದ್ ಜ್ಞಾನಪ್ರದಾದ್ದರಿಂದಲೇ ಇವರು ಅನ್ವರ್ಥಕ ಜಗದ್ಗುರುಗಳೆಂದು ಗೇಗಿಯ ಮಾನರಾಗಿದ್ದಾರೆ. ಅಂತೆಯೇ ಈ ಮಹಾನುಭಾವರು ಅನ್ವರ್ಥಕ 'ಪ್ರತೀತವ್ರತ'ರಾಗಿದ್ದಾರೆ!
ಅಂದಮೇಲೆ ಜೀವೋತ್ತಮರೂ, ಜೀವನಿಯಾಮಕರೂ ಸರ್ವಜ್ಞರೂ ಆದ ಶ್ರೀಭಾರತೀರಮಣಮುಖ್ಯಪ್ರಾಣದೇವರು ಶ್ರೀಭಗವತೇವೆಯನ್ನು ಸತ್ಕರ್ಮಗಳನ್ನು ಸ್ವತಃ ಮಾಡಿ, ಸರ್ವಸುಜೀವಿಗಳಿಂದ ಮಾಡಿಸಲು ಸಮರ್ಥರು. ಈ ಮಹನೀಯರು ಮಾಡುವ ಕಾರ್ಯಗಳನ್ನು “ನಾನು ಮಾಡುತ್ತೇನೆ. ನನ್ನ ಆಜ್ಞಾಕಾರಿಗಳಿಂದಲೂ ಮಾಡಿಸುತ್ತೇನೆ” ಎಂದು ಸಂಕಲ್ಪಿಸಿ ಪ್ರಮಾಣಬದ್ಧರಾಗಿ “ಪ್ರತೀತವ್ರತರೆನಿಸಲು ಶ್ರೀರಾಘವೇಂದ್ರತೀರ್ಥರಿಗೆ ಅಧಿಕಾರವಿದೆಯೇ? ಎಂಬ ಸಂಶಯವು ಕೆಲವರಲ್ಲಿ ಮೂಡುವುದು ಸ್ವಾಭಾವಿಕವಾದುದರಿಂದ ಈ ವಿಚಾರವನ್ನಿಲ್ಲಿ ಸ್ವಲ್ಪ ವಿವೇಚಿಸುವುದು ಅಪ್ರಕೃತವಾಗಲಾರದು.
ಮೊದಲನೆಯದಾಗಿ ಶ್ರೀರಾಘವೇಂದ್ರಸ್ವಾಮಿಗಳವರು ಪರಮಹಂಸಚಕ್ರವರ್ತಿಗಳು, ದೇವಾಂಶಸಂಭೂತರು. ಪರಮಾತ್ಮನ ವಿಶೇಷಾನುಗ್ರಹವನ್ನು ಪಡೆದು, ಶ್ರೀರಾಮ, ನರಹರಿ, ಕೃಷ್ಣ, ವೇದವ್ಯಾಸ, ನಾರಾಯಣರೆಂಬ ಪಂಚರೂಪದ ಹರಿಯ ವಿಶೇಷ ಸನ್ನಿಧಾನ ಪಾತ್ರರು! ಆಜನ್ಮ ವೈಷ್ಣವರು, ಶ್ರೀವಿಷ್ಣುಭಕ್ತಾಗ್ರಗಣ್ಯರು, ಭಾಗವತೋತ್ತಮರು. ಭಾಗವತಧರ್ಮ ಪ್ರಸಾರಬದಾದರರು. ಇದರ ಮೇಲೆ ಶ್ರೀವಾಯುದೇವರ ಸತತಸನ್ನಿಧಾನ(ಆವೇಶ)ದಿಂದ ಕಂಗೊಳಿಸುವ ಜಗನ್ಮಂಗಳಮೂರ್ತಿಗಳು. ಆದ್ದರಿಂದ ಶ್ರೀರಾಘವೇಂದ್ರಗುರುಸಾರ್ವಭೌಮರು ಹಾಗೆ ಸಂಕಲ್ಪಿಸಿ ಪ್ರತಿಜ್ಞಾಬದಾದುದು ಅತ್ಯಂತ ಸಮಂಜವೇ ಆಗಿದೆ! ಶ್ರೀಪ್ರಹ್ಲಾದಾವತಾರಿ- ಗಳಾದ ಶ್ರೀಗುರುರಾಜರು ಭಗವದಾಜ್ಞೆ-ಸಂಕಲ್ಪಾನುಸಾರವಾಗಿ “ಶ್ರೀಹರಿಯ ಸೇವೆಯನ್ನು ನಾನು ಮಾಡುವುದಲ್ಲದೆ, ನಿನ್ನವರಾದವರಿಂದ (ಶ್ರೀಹರಿಭಕ್ತರಾದ ಸರ್ವರಿಂದಲೂ) ನೀನೇ (ಶ್ರೀಹರಿಯೇ) ಸರ್ವಾಂತರ್ಯಾಮಿಯಾಗಿ ನಿಂತು ಮಾಡುವವನು ಮಾಡಿಸುವವನು - ಎಂಬ ಅನುಸಂಧಾನಪಾರ್ವಕವಾಗಿ ನಿನ್ನ ಸೇವಾರೂಪವಾದ ಮೂರು ವಿಧಗಳಾದ ಕರ್ಮಗಳನ್ನು ಮಾಡಿಸುತ್ತೇನೆ! ಮತ್ತು ಜೀವನಿಯಾಮಕರಾದ ಶ್ರೀವಾಯುದೇವರೇ ಜೀವರಲ್ಲಿ ನಿಯಾಮಕರಾಗಿದ್ದು ನಿನ್ನ (ಶ್ರೀಹರಿಯ) ಸೇವೆಯನ್ನು ಮಾಡಿ, ಮಾಡಿಸುವರೆಂದು ನಾನು ತಿಳಿದಿದ್ದೇನೆ. ಅದರಂತೆಯೇ ಆ ತ್ರಿವಿಧಾತ್ಮಕಕರ್ಮಗಳನ್ನು ಸುಜನರಿಂದ ಮಾಡಿಸುತ್ತೇನೆ!” ಎಂದು ಶ್ರೀಗುರುರಾಜರು ಪ್ರಮಾಣಬದ್ಧರಾಗಿದ್ದಾರೆ.
ಇಂಥ ಶ್ರೀವಾಯುದೇವರ ಸತತ ಸನ್ನಿಧಾನಯುಕ್ತರಾಗಿರುವುದರಿಂದಲೇ ಶ್ರೀರಾಘವೇಂದ್ರಸ್ವಾಮಿಗಳು ಇಂಥ ಅಸದೃಶಕಾರ್ಯಮಾಡಲೂ, ಮಾಡಿಸಲೂ ಶ್ರೀ ಹರಿ-ವಾಯುಗಳ, ಅನುಗ್ರಹವಿಶೇಷದಿಂದ ಸಮರ್ಥರಾಗಿರುವರು. ಅವರು ಈ ಅವತಾರದಲ್ಲಿ ಮಾತ್ರವಲ್ಲ; ಹಿಂದಿನ ಎಲ್ಲ ಅವತಾರಗಳಲ್ಲೂ ಪ್ರತೀತವ್ರತರಾಗಿದ್ದವರು. ಇದು ಭಾಗವತಾದಿಗಳಿಂದ ವ್ಯಕ್ತವಾಗುವುದು. ಪ್ರಹ್ಲಾದರಾಜರಾಗಿದ್ದಾಗ ಸ್ವತಃ ನವವಿಧಭಕ್ತಿಯಿಂದ ನಾರಾಯಣನನ್ನು ಪೂಜಿಸಿ, ಒಲಿಸಿಕೊಂಡಿದ್ದರು. ಮಾತ್ರವಲ್ಲ; ತಮ್ಮನ್ನು ಆಶ್ರಯಿಸಿದ, ಸಾಧನಮಾರ್ಗ ತಿಳಿಯದ ಬಾಲಕರಿಗೆ ಜ್ಞಾನೋಪದೇಶಮಾಡಿ, ಅವರಿಂದಲೂ ಭಗವತ್ತೇವೆಮಾಡಿಸಿ ಪ್ರತೀತವ್ರತರೆಂದು ಖ್ಯಾತರಾದರು. ಇನ್ನು ಶ್ರೀವ್ಯಾಸರಾಜರು ಪ್ರತೀತವ್ರತರಾಗಿದ್ದರೆಂಬುದನ್ನು ಅವರ ಅಮರಚರಿತ್ರೆ ಸಾರುತ್ತಿದೆ.
ಶ್ರೀಹರಿಯ ಪ್ರಸಾದವಾಗಬೇಕಾದರೆ ಪರಮಾತ್ಮನ ಮಹಾತ್ಮ ಜ್ಞಾನಪೂರ್ವಕವಾಗಿ ಭಕ್ತಿಮಾಡಬೇಕು. ಅಂಥ ಶ್ರೀಪರಮಾತ್ಮ ಸತ್ತ-ಪ್ರಮೇಯ-ಲೀಲಾವಿಲಾಸ ಮಹಿಮಾದಿಗಳನ್ನು ತಿಳಿಸುವ ವೇದಾದಿಶಾಸ್ತ್ರಗಳ ಸಾರಸರ್ವಸ್ವವನ್ನೇ ತಮ್ಮ “ಪ್ರಾತಃಸಂಕಲ್ಪಗದ”ವೆಂಬ ಪುಟ್ಟಗ್ರಂಥದಲ್ಲಿ ಉಪದೇಶಿಸಿದ್ದಾರೆ. ಶ್ರೀಗುರುರಾಜರು ಜ್ಞಾನೇಚ್ಚುಗಳಿಗೆ ಶಾಸ್ತ್ರಪಾಠಪ್ರವಚನ ಮಾಡಿಸಿ ಅದರಿಂದ ಅವರು ಶ್ರೀಹರಿಯನ್ನು ಒಲಿಸಿಕೊಳ್ಳಲು ಶಕ್ತರಾಗುವಂತೆ ಮಾಡಿದ್ದಾರೆ. ಆದರೆ ಸಂಸ ತದಲ್ಲಿರುವ ಸಕಲಶಾಸ್ತ್ರಗಳನ್ನು ಓದಿ ಅರ್ಥಮಾಡಿಕೊಂಡು ಅದರಂತೆ ಆಚರಿಸಲು ಯೋಗ್ಯತೆಯಿಲ್ಲದ ಕೋಟ್ಯಂತರ ಸಜ್ಜನರೂ ಉದ್ಧತರಾಗಬೇಕೆಂಬ ಕಾರುಣ್ಯದಿಂದ ಆಪಂಡಿತ ಪಾಮರರಿಗೂ ಸಾಧನೆಗೆ ಸಹಾಯಕವೂ, ಭಗವದನುಗ್ರಹಕೊಡಿಸಲು ಸಮರ್ಥವೂ ಆದ ಪ್ರಾತಃಸಂಕಲ್ಪಗದ್ಯವನ್ನು ರಚಿಸಿ ಶ್ರೀಹರಿ-ರಮಾ-ವಾಯುದೇವರುಗಳ ಸತ್ವಗಳು ಸಕಲಶಾಸ್ತ್ರಗಳ ಉಪದೇಶಸಾರಗಳನ್ನೂ ಬಹು ಹೃದಯಂಗಮವಾಗಿ ನಿರೂಪಿಸಿ, ಶ್ರೀಹರಿ-ವಾಯುಗಳ ಅನುಗ್ರಹದಿಂದ ಸಮಸ್ತ ಸಜ್ಜನರಿಂದಲೂ ಶ್ರೀಹರಿವಾಯುಗಳ ಸೇವೆಮಾಡಿಸುವುದಾಗಿ ಸಂಕಲ್ಪಪೂರ್ವಕ ಪ್ರತಿಜ್ಞೆ ಮಾಡಿದ್ದಾರೆ. ಅದನ್ನು ಪ್ರಾತಃಸಂಕಲ್ಪಗದ್ಯದಲ್ಲಿ ಹೀಗೆ ವಿವರಿಸಿದ್ದಾರೆ :
ಆತ ಏವ ಅಶೇಷನಿಃಸಂಖ್ಯಾನಾದಿಕಾಲೀನ ಧರ್ಮಾಧರ್ಮದಷ್ಟು ಸ್ಟೇಚ್ಛೆಯೋದ್ಧೋಧಕೇನ, ತದ್ವಾಚಕಪಿಲೋಪಾಸಕೇನ- ರಮಾವತಿರಿಕ್ತ ಪೂರ್ವ ಪ್ರಸಿದ್ಧ ವ್ಯತಿರಿಕ್ತಾನಂತ ವೇದಪ್ರತಿಪಾದ್ಯ ಮುಖ್ಯತಮೇನ..... ತಚಿತ್ತಾನುಸಾರಚಿತೇನ ತತ್ಪರಮಾನುಗ್ರಹ ಪಾತ್ರಭೂತೇನ, ಮದ್ಯೋಗತಾಭಿಜೇನ ಶ್ರೀಭಾರತೀರಮಣೇನ, ರುದ್ರಾದಶೇಷತಾತ್ವಿಕ ದೇವತೋಪಾಸಿತಚರಣೀನ, ಮಮ ಸರ್ವಾಸು ಅವಸ್ಥಾಸು ಚಿತ್ರಧಾ ವಿಚಿತ್ರಧಾ ತದುಪಾಸಕೇನ ಶ್ರೀಮುಖ್ಯಪ್ರಾಣೇನ ಪ್ರೇರಿತಸ್ಸನ್, ತತ್ತಂಸ್ಕೃತಿಪೂರ್ವಕಂ ಶಯನಾತ್ತಮುತ್ಥಾಯಾದತನ ಸ್ವವರ್ಣಾಶ್ರಮೋಚಿತು, ದೇಶಕಾಲವಾಸ್ಫೋಚಿತಂ, ನಿತ್ಯ-ನೈಮಿತ್ತಿಕ-ಕಾವ್ಯಭೇದೇನ ತ್ರಿವಿಧಂ ತತ್ತೂಜಾತ್ಮಕಂ ಕರ್ಮ, ಯಥಾಶಕ್ತಿ, ಯಥಾಜಪ್ತಿ, ಯಥಾವೈಭವಂ ಕರಿಷ್ಯ ! ಮದಾಗ್ತಾಕಾರಿಭಿಃ ವಿದ್ಯಾಸಂಬಂಧಿಭಿಃ ದೇಹಸಂಬಂಧಿಭಿಶ್ಚ ತದಿಯೆರಶೇಷ್ಯರ್ಜನ್ಯ: ತತ್ಸರ್ವ ಕರ್ತೃತ್ವ ಕಾರಯಿತ್ವಾದನುಸಂಧಾನಪೂರ್ವಕಂ ಕಾರಯಿಷ್ಟೇ ಚ ।।”
ಶ್ರೀಮನ್ನಾರಾಯಣನು ಸಕಲಜೀವರ ಸಮಸ್ತ ಕರ್ಮಗಳನ್ನೂ ಮಾಡುವ ಕರ್ತನು. ಅವನು ಮಾಡದ ಕರ್ಮವನ್ನೂ ಯಾರೂ ಮಾಡಲಾರರು ! ಭಗವಂತನು ಗುಣ - ರೂಪ - ಕ್ರಿಯೆಗಳಿಂದ ಅತ್ಯಂತ ಅಭಿನ್ನನು. ಎಲ್ಲಾ ಕ್ರಿಯೆಗಳು ಅವನಲ್ಲಿ ಶಕ್ತಾತ್ಮನಾ ಇದ್ದು ಸಕಾಲದಲ್ಲಿ ಮತ್ತು ಉತ್ತಮ ಅಧಿಷ್ಠಾನದಲ್ಲಿಯೂ ಕೂಡ ವಕ್ತಗೊಳಿಸಲ್ಪಡುವವು. ಬ್ರಹ್ಮಾದಿ ಜೀವಕರ್ಮಗಳ ಸ್ವತಂತ್ರಕರ್ತನಾದ ಶ್ರೀಹರಿಪರಮಾತ್ಮನ ಕ್ರಿಯೆಗಳನ್ನು ಮಾಡುವ, ಕ್ರಿಯಾತ್ಮಕಗಳಾದ ರೂಪಗಳು ಅಸಂಖ್ಯವಾಗಿವೆ. ಈ ರೂಪಗಳನ್ನು ಚಿಂತಿಸಿ ಆಯಾ ಕರ್ಮಗಳನ್ನು ಸ್ವತಃ ಮಾಡಿ, ಬೇರೆಯವರಿಂದಲೂ ಮಾಡಿಸುವುದರಲ್ಲಿ ಶ್ರೀಮುಖ್ಯಪ್ರಾಣದೇವರು ಅತ್ಯಂತ ಶಕ್ತರಾಗಿದ್ದಾರೆ. ಶ್ರೀರಮಾಜಾನಿಯ ಅನುಗ್ರಹದಿಂದ ಸಕಲಜೀವರ ಸಂಚಿತಕರ್ಮಾರಾಶಿಗಳನ್ನು ತಿಳಿದವನಾಗಿ, ತನ್ನ ಇಷ್ಟಾನುಸಾರವಾಗಿ, ಅವು ಫಲೋನ್ಮುಖವಾಗುವಂತೆ ಮಾಡುವ ಹಾಗೂ ಅದಕ್ಕೆ ಉಪಯುಕ್ತವಾದ ಕರ್ಮಗಳಲ್ಲಿ ಪ್ರೇರಣೆಮಾಡಿ ಆ ಕರ್ಮಗಳನ್ನು ಮಾಡಿಸುವರಲ್ಲಿ ವಾಯುದೇವರು ಸರ್ವಜ್ಞರಾಗಿದ್ದಾರೆ. ಜಗದ್ರಕ್ಷಕರಾಗಿ ತಾವು ಈ ಕಾರ್ಯವನ್ನೆಸಗಲು ತಮ್ಮಲ್ಲಿ ಪರಮಾನುಗ್ರಹಮಾಡುತ್ತಿರುವ ಕಪಿಲನಾಮಕನಾದ ಶ್ರೀಹರಿಪರಮಾತ್ಮನನ್ನು ಅವರು ಸರ್ವದಾ ಉಪಾಸಿಸುತ್ತಾರೆ.
ಅನಂತವೇದಗಳು ಪರಮಮುಖ್ಯವೃತ್ತಿಯಿಂದ ಶ್ರೀಮನ್ನಾರಾಯಣನನ್ನೇ ಪ್ರತಿಪಾದಿಸುವುವು. ಶ್ರೀಹರಿಯಲ್ಲಿ ಮಾತ್ರ ಪ್ರಸಿದ್ಧವಿರುವ ಶಬ್ದಗಳನ್ನು ಬಿಟ್ಟು, ಸರ್ವವೇದಗಳೂ ಶ್ರೀಲಕ್ಷ್ಮೀದೇವಿಯನ್ನು ಪ್ರತಿಪಾದಿಸುತ್ತವೆ. ಶ್ರೀಲಕ್ಷ್ಮೀದೇವಿಯನ್ನು ಬಿಟ್ಟರೆ-ವೇದಪ್ರತಿಪಾದರಾದ ಅಗ್ನಿ ಮುಂತಾದ ಇತರ ದೇವತೆಗಳ ಮಧ್ಯದಲ್ಲಿ, ಶ್ರೀನಾರಾಯಣ-ಲಕ್ಷ್ಮಿಯವರ ಅನುಗ್ರಹಕ್ಕೆ ಮುಖ್ಯಾಪಾತ್ರರಾದ ಶ್ರೀಮುಖ್ಯಪ್ರಾಣದೇವರು (ವಾಯುದೇವರು) ಮುಖ್ಯತಮರಾಗಿದ್ದಾರೆ. ಎಲ್ಲ ದೇವತೆಗಳಲ್ಲಿ ತಾರತಮ್ಯದಲ್ಲಿ ಅಗ್ನಿಯು ಅವಮನು, ಶ್ರೀಹರಿಯ ಪರಮನು,393 ಶ್ರೀಹರಿ-ಲಕ್ಷ್ಮೀದೇವಿಯರು ಈಶಕೋಟಿ ಪ್ರವಿಷ್ಟರು. ಬ್ರಹ್ಮವಾಯು ಮುಂತಾದವರಿಂದಾರಂಭಿಸಿ ಅಗ್ನಿಯವರಿಗೆ ಎಲ್ಲರೂ ಜೀವರು. ಈ ಎಲ್ಲ ಜೀವರಲ್ಲೂ ಶ್ರೀವಾಯುದೇವರು (ಶ್ರೀಬ್ರಹ್ಮ-ವಾಯುಗಳು ತಾರತಮ್ಯದಲ್ಲಿ ಸಮರಾದ್ದರಿಂದ) ಉತ್ತಮರಾದ್ದರಿಂದ (ಮುಖ್ಯತವರಾದರಿಂದ) ಶ್ರೀರಮಾನಾರಾಯಣರಲ್ಲಿಯೇ ಪ್ರಸಿದ್ಧವಾದ ಕೆಲವು ಶಬ್ದಗಳನ್ನು ಬಿಟ್ಟು (ಹೊರತು) ಸಕಲವೇದಪ್ರತಿಪಾದ್ಯರು ಶ್ರೀವಾಯುದೇವರು, ಅಂತೆಯೇ ಅವರು ಸರ್ವಗುಣಪೂರ್ಣರಾಗಿದ್ದಾರೆ. ಅಂದರೆ ಜೀವಯೋಗ್ಯ ಸದ್ಗುಣಗಳಾದ, ಜ್ಞಾನ-ಭಕ್ತಿ ಮುಂತಾದ ಸಕಲಗುಣಗಳಿಂದ ಪೂರ್ಣರಾಗಿದ್ದಾರೆ. (ಈಶ ಕೋಟಿ ಪ್ರವಿಷ್ಟರಾದ ಶ್ರೀಲಕ್ಷ್ಮೀನಾರಾಯಣರಲ್ಲಿರುವ ವಿಲಕ್ಷಣ ಗುಣಗಳನ್ನಾಗಲೀ, ಅನಂತ ಗುಣಗಳನ್ನಾಗಲೀ ಅವರು ಹೊಂದಿಲ್ಲ. ಆದರೆ ಆ ರಮಾನಾರಾಯಣರನ್ನು ಬಿಟ್ಟರೆ ಶ್ರೀವಾಯುದೇವರೇ ಸಮಸ್ತ ಗುಣಪೂರ್ಣರೆಂದು ತಿಳಿಯಬೇಕು). ಶ್ರೀಭಾರತೀರಮಣರು ದುಃಖ-ಅಜ್ಞಾನಾದಿ ನಿಖಿಲದೋಷ ದೂರರಾಗಿದ್ದಾರೆ. ಅಮುಕ್ತ ಜೀವರಾಶಿಯಲ್ಲಿ ಶ್ರೀವಾಯುದೇವರಂತೆ ದೋಷದೂರರು ಮತ್ತಾರೂ ಇಲ್ಲ! ಶ್ರೀರುದ್ರಾದಿಗಳಲ್ಲಿ ಅಲ್ಲದೋಷಗಳಿಗೆ ಅವಕಾಶವಿದೆ. ಇವರಲ್ಲಿ ಮಾತ್ರ ಅದಾವುದೂ ಇಲ್ಲ.
ಹೇ ಶ್ರೀಮೂಲರಾಮಚುದ್ರದೇವ ! ಆಯಾಕಾಲದಲ್ಲಿ ನಿನ್ನ ಸಂಕಲ್ಪಗಳನ್ನರಿತು ನಿನ್ನ ಇಚ್ಛೆಯಂತೆ ವರ್ತಿಸುವ ಚಿತ್ತವುಳ್ಳವರೂ, ನಿನ್ನ ಪರಮಾನುಗ್ರಹಕ್ಕೆ ಪಾತ್ರರೂ, ಶ್ರೀಭಾರತೀರಮಣರೂ, ಶ್ರೀರುದ್ರದೇವರೇ ಮೊದಲಾದ ಸಮಸ್ತ ಸಾತ್ವಿಕದೇವತೆಗಳಿಂದ ಸಂಸೇವ್ಯಚರಣಕಮಲರೂ. ನನ್ನ ಜಾಗೃತ್ -ಸ್ವಪ್ನ-ಸುಷುಪ್ತಿ ಮುಂತಾದ ಸಕಲ ಅವಸ್ಥೆಗಳ ನಿಯಾಮಕರಾಗಿ, ನನ್ನಲ್ಲಿದ್ದು ಚಿತ್ರ-ವಿಚಿತ್ರ ರೀತಿಯಲ್ಲಿ ನಿನ್ನನ್ನು ಉಪಸನಮಾಡುವ ಶ್ರೀಮುಖ್ಯಪ್ರಾಣದೇವರಿಂದ ನಾನು ಪ್ರೇರಿತನಾಗಿ, ಪ್ರಭು, ಶ್ರೀಮೂಲರಾಮಚಂದ್ರ, ನಾನು ಪ್ರತಿದಿನವೂ ಎಚ್ಚರಗೊಂಡೊಡನೆ ನಿನ್ನ ಸ್ಮರಣೆಮಾಡುತ್ತಲೇ ಹಾಸಿಗೆಯಿಂದ ಮೇಲೆದ್ದು, ಆ ಕ್ಷಣ ಮೊದಲ್ಗೊಂಡು ಇಂದಿನ ದಿನವೆಲ್ಲಾ ನನ್ನ ವರ್ಣಾಶ್ರಮಗಳಿಗೆ ಉಚಿತವಾದ ವೇದವಿಹಿತವಾದ ಸತ್ಕರ್ಮಗಳನ್ನು ಯಥೋಚಿತವಾಗಿ ಮಾಡುತ್ತೇನೆ. ಹೀಗೆ ಮಾಡುವ ಕರ್ಮಗಳನ್ನು ದೇಶ-ಕಾಲ ಮತ್ತು ಅವಸ್ಥೆಗಳನ್ನು ಅನುಲಕ್ಷಿಸಿ ಶ್ರೀಮುಖ್ಯಪ್ರಾಣದೇವರಿಂದ ಪ್ರೇರಿತನಾಗಿ ಯಥಾಯೋಗ್ಯವಾಗಿ ಆಚರಿಸುತ್ತೇನೆ.
ನಾನು ಮಾಡುವ ನಿತ್ಯ-ನೈಮಿತ್ತಿಕ-ಕಾಮ್ಯಗಳೆಂಬ ತ್ರಿವಿಧಕರ್ಮಗಳನ್ನು ನಿನ್ನ ಪೂಜೆಯೆಂದು ಭಾವಿಸಿಯೇ ಆಚರಿಸುತ್ತೇನೆ. ನಿನ್ನ ಅನುಗ್ರಹದಿಂದ ನನ್ನ ಶಕ್ತಿ, ಜ್ಞಾನ ಹಾಗೂ ವೈಭವ ಸಂಪತ್ತುಗಳಿಗೆ ಅನುಗುಣವಾದ ರೀತಿಯಲ್ಲಿ ಆಚರಿಸುತ್ತೇನೆ. ನಾನು ಆಚರಿಸುವುದು ಮಾತ್ರವಲ್ಲ; ನನ್ನ ಆಜ್ಞೆಯಂತೆ ವರ್ತಿಸುವ ಶಿಷ್ಯರು, ಭಕ್ತರು, ಧರ್ಮಾಭಿಮಾನಿಗಳಿಂದಲೂ, ಪರಮಹಂಸ ಶಿಷ್ಯ-ಪ್ರಶಿಷ್ಯ ಪರಂಪರೆಯಿಂದಲೂ, ನನ್ನಲ್ಲಿ ವ್ಯಾಸಂಗಮಾಡಿದ, ನನ್ನ ಗ್ರಂಥಗಳನ್ನು ಪ್ರತಿನಿತ್ಯ ಪಾಠ ಪ್ರವಚನಮಾಡುತ್ತಾ, ನನ್ನ ವಿದ್ಯಾಸಂಬಂಧಿಗಳಾದ ಶಿಷ್ಯ-ಪ್ರಶಿಷ್ಯ ಪರಂಪರೆಯಿಂದಲೂ, ನನ್ನ ಆಜ್ಞಾನುವರ್ತಿಗಳೂ, ಶಿಷ್ಯರೂ, ನನ್ನ ಗ್ರಂಥಗಳ ಪಾಠ ಪ್ರವಚನಾಸಕ್ತರೂ ಆದ ನನ್ನ ಪೂರ್ವಾಶ್ರಮ ವಂಶದ ಪುತ್ರ, ಪೌತ್ರ ಪ್ರಪೌತ್ರಾದಿಗಳಿಂದಲೂ ಸಹ ಸಮಸ್ತವನ್ನೂ ನೀನೇ ಸ್ವತಂತ್ರನಾಗಿ ಮಾಡಿ, ಮಾಡಿಸುತ್ತಿಯೇ ಎಂಬ ಸದ್ಭಾವನೆ, ಅನುಸಂಧಾನಪೂರ್ವಕವಾಗಿ ಆಚರಿಸುವಂತೆ ಮಾಡುತ್ತೇನೆ !”
ಹೀಗೆ ಶ್ರೀರಾಘವೇಂದ್ರಸ್ವಾಮಿಗಳು ತಮ್ಮ ಪ್ರಾತಃಸಂಕಲ್ಪಗದದಲ್ಲಿ ಸಂಕಲ್ಪಪೂರ್ವಕವಾಗಿ ಪ್ರತಿಜ್ಞಾಬದ್ದರಾಗಿ, ಅದರಂತೆ ಅಂದಿಗೂ, ಇಂದಿಗೂ, ಆಚರಿಸುತ್ತಾ ಪ್ರತೀತವ್ರತರೆಂಬ ತಮ್ಮ ಕೀರ್ತಿಯಿಂದ ಜಗನ್ಮಾನ್ಯರಾಗಿದ್ದಾರೆ. ಇಂತು ಸರ್ವಲೋಕೋದ್ದಾರ, ಆಶ್ರಿತಜನರ, ಭಕ್ತರ, ಶಿಷ್ಟರ, ಸಮಸ್ತ ಆಸ್ತಿಕರ ಕಲ್ಯಾಣಗಳಲ್ಲಿ ಅವರಿಗಿರುವ ಕಾತರ, ಆಸಕ್ತಿ, ಇಚ್ಛೆಗಳು ಇದರಿಂದ ಅಭಿವ್ಯಕ್ತವಾಗುವುದು, ಇಂತಹ ಸದ್ಗುರುಗಳನ್ನು ಪಡೆದ ಭಾರತೀಯರೇ ಪರಮಧನ್ಯರು!
ಶ್ರೀಗುರುರಾಜರ ಅಮರಚರಿತೆಯ ಮುಂದಿನ ಅನೇಕ ಅಧ್ಯಾಯಗಳಲ್ಲಿ ಶ್ರೀಪ್ರಹ್ಲಾದ, ಶ್ರೀವ್ಯಾಸರಾಜ, ಶ್ರೀರಾಘವೇಂದ್ರ ಚರಿತೆಯ ಅಧ್ಯಾಯಗಳಲ್ಲಿ 'ಪ್ರತೀತವ್ರತರಾದ ಆ ಮಹಾನುಭಾವರು ತಮ್ಮ ಪ್ರತಿಜ್ಞೆಯನ್ನು ನೆರವೇರಿಸಿದ ಬಗೆಯನ್ನು ಕಾಣಬಹುದಾಗಿದೆ. ಪ್ರಕೃತ ಶ್ರೀರಾಘವೇಂದ್ರಗುರುಸಾರ್ವಭೌಮರು `ವ್ರತಸ್ವೀಕಾರ ಮಾಡಿ ಸಾಧಿಸಿದ ಕಥಾಭಾವವನ್ನೋದಿ ಧನ್ಯರಾಗೋಣ.
ಸರಸ್ವತಮ್ಮನ ಕರ್ಮಗಳೆಲ್ಲಾ ಸಾಂಗವಾಗಿ, ಶುಭಸ್ವೀಕಾರವಾದಮೇಲೆ ಲಕ್ಷ್ಮೀನರಸಿಂಹಾಚಾರ-ಗುರುರಾಜಾಚಾರ ದಂಪತಿಗಳು, ಲಕ್ಷ್ಮೀನಾರಾಯಣಾದಿಗಳೊಡನೆ ಶ್ರೀಮಠಕ್ಕೆ ಬಂದರು. ದ್ವಾರಪಾಲಕ ಅವರನ್ನು ಕಿರಿಯ ಗುರುಗಳಲ್ಲಿಗೆ ಕರೆತಂದನು. ಎಲ್ಲರೂ ನಮಸ್ಕರಿಸಿ ಕುಳಿತರು. ಶ್ರೀಯವರು ಅವಲೋಕಿಸುತ್ತಿದ್ದ ಗ್ರಂಥವನ್ನು ವ್ಯಾಸಪೀಠದ ಮೇಲಿಟ್ಟು ಎಲ್ಲರತ್ತ ದೃಷ್ಟಿಹರಿಸಿದರು. ಎಲ್ಲರ ಕಣ್ಣುಗಳಿಂದಲೂ ದುಃಖಾಶ್ರು ಹರಿಯುತ್ತಿದೆ. ನಿಶ್ಚಲಚಿತ್ತರಾದ ಶ್ರೀಪಾದಂಗಳವರು ಸುತ್ತಲೂ ಒಮ್ಮೆ ನೋಡಿ “ಏಕಿಂತು ದುಃಖಿಸುವಿರಿ? ಸತ್ತರೆ ಮೃತರಾದವರು ಮರಳಿ ಬರುವರೇ?” ಎಂದರು. ಯಾರೂ ಉತ್ತರಿಸದೆ ಮೌನವಹಿಸಿದರು. ವೆಂಕಟಾಂಬಾದೇವಿ ದುಃಖವನ್ನು ತಡೆಯಲಾಗದೆ ಕಣ್ಣೀರಿಡುತ್ತಾ “ನೀವೀಗ ಪರಮಹಂಸರು ! ಜಿತೇಂದ್ರಿಯರು. ಯಾವ ಆಘಾತವೂ ನಿಮ್ಮ ಮನವನ್ನು ಚಲಿಸಲಾರದು! ನಾವು ಸಾಮಾನ್ಯ ಮಾನವರು. ನಿಮ್ಮ ದಾರ್ಥ್ ನಮಗೆಲ್ಲಿದೆ ಸ್ವಾಮಿ ? ಈಗ ನಮಗಿರುವುದು ಕಣ್ಣೀರಿಡುವುದೊಂದೇ ದಾರಿ!” ಎಂದರು. ಶ್ರೀಲಕ್ಷ್ಮೀನರಸಿಂಹಾಚಾರೈರು ಹಾಗೆಲ್ಲ ಮಾತನಾಡಬಾರದು ಎಂದು ಗದರಿಸಿದರು. ಶ್ರೀಯವರು ಒಮ್ಮೆ ಹುಸಿ ನಗೆ ನಕ್ಕು “ಮಾತನಾಡಲಿ ಬಿಡಿ, ಅದರಿಂದಾದರೂ ಅವಳ ದುಃಖ ಶಮನವಾದರೆ ಸಾಕು-ಹಿಂದಿನ ಸಲಿಗೆ-ಅವಳಲ್ಲದೆ ಮತ್ತಾರನ್ನಬೇಕು?” ಎಂದರು. ವೆಂಕಟಾಂಬಾ “ಸ್ವಾಮಿ, ತಾವೀಗ ಜಗದ್ಗುರುಗಳೆಂಬುದನ್ನು ಮರೆತುಬಿಟ್ಟಿದ್ದೆ. ನಾವು ಸರಸ್ವತಿಗಾಗಿ ಕೇವಲ ಅಳುತ್ತಿದ್ದೇವೆ. ಆದರೆ ತಾವು ಅವಳ ಪ್ರೇತಜನ್ಮವನ್ನು ಕಳೆದು ಸದ್ಗತಿಯನ್ನು ಅನುಗ್ರಹಿಸಿದ್ದೀರಿ! ತಮ್ಮ ಈ ಕಾರುಣ್ಯವನ್ನು ಮರೆತು ಹಿಂದಿನ 'ತಮ್ಮ' ಎಂಬ ಸಲಿಗೆಯಿಂದ ಏನೇನೋ ಬಡಬಡಿಸಿಬಿಟ್ಟೆ. ಅಪರಾಧವಾಯಿತು. ಮನ್ನಿಸಿರಿ” ಎಂದರು.
ಶ್ರೀ : ಸದ್ಧತಿಯಿತ್ತವರು ನಾವಲ್ಲ, ಶ್ರೀಹರಿವಾಯುಗಳು! ಅಂಬಾ, ನಿನ್ನ ಈ ದುಃಖ ತರವಲ್ಲ, ಸರಸ್ವತಿ ಮೃತಳಾದವಳೆಂದಲ್ಲವೇ ನಿಮಗೀ ದುಃಖ? ಅವಳು (ಆತ್ಮ) ನಾಶವಾದಳೋ ಅಥವಾ ಅವಳ ದೇಹ ನಾಶವಾಯಿತೋ ? - ನ ಜಾಯತೇ ಪ್ರಿಯತೇ ವಾ ಕದಾಚಿತ್ | ನಾಯಂ ಭೂತ್ವಾ ಭವಿತಾ ವಾ ನ ಭೂಯಃ || ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ | ನ ಹನ್ಯತೇ ಹನ್ಯಮಾನೇ ಶರೀರೇ 1' 394 ಎಂದು ಭಗರ್ವಾ ಶ್ರೀಕೃಷ್ಣ ಹೇಳಿದ್ದಾನೆ. ಜೀವೇಶ್ವರರ ಸ್ವರೂಪವು ಅನಾದಿನಿತ್ಯವಾದದು. ಆದರೆ ಜೀವರ ಶರೀರಕ್ಕೆ ಉತ್ಪತ್ತಿನಾಶಗಳುಂಟು. ಅಂತೆಯೇ ಜೀವರು ಪರಾಧೀನರಾಗಿದ್ದಾರೆ. ಈಶ್ವರನ ದೇಹವು ಉತ್ಪತ್ತಿ ನಾಶರಹಿತವಾದುದು. ಅವನಿಗೆ ನಾಶವಿಲ್ಲದಿದ್ದರಿಂದ ಅವನು ಸ್ವತಂತ್ರನಾಗಿದ್ದಾನೆ. ಜೀವನು ಹುಟ್ಟು-ಸಾವುಗಳಿಲ್ಲದೆ ಶಶ್ವದೇಕಪ್ರಕನಾಗಿರುವ ಪರಮೇಶ್ವರನ ಪ್ರತಿಬಿಂಬನಾದ್ದರಿಂದ ಜೀವನು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಅವನು ಅನಾದಿನಿತನು ಸರ್ವವಿಧದಿಂದ ಇದ್ದೂ ಹುಟ್ಟುವನು-ಸಾಯುವನು' ಎಂಬ ವ್ಯವಹಾರಕ್ಕೆ ವಿಷಯನೂ ಆಗಲಾರ. ಹಾಗಾದರೆ ಜೀವನು 'ಹುಟ್ಟಿದ-ಸತ್ತ' ಎಂಬ ವ್ಯವಹಾರವು ಹೇಗೆ ? ಎಂದರೆ - “ವಾಸಾಂಸಿ ಜೀರ್ಣಾನಿ ಯಥಾ ವಿಹಾಯ | ನವಾನಿ ಗೃಹಾತಿ ನರೋಽಪರಾಣಿ ” 395 ಮನುಷ್ಯನು ಹಳೆಯ ಹರಿದ ವಸ್ತ್ರವನ್ನು ಬಿಟ್ಟು ಹೊಸವಸ್ತ್ರವನ್ನು ಧರಿಸುವಂತೆ ಜೀವನೂ ಶಿಥಿಲವಾದ ಮುದಿದೇಹವನ್ನು ಬಿಟ್ಟು ಬೇರೆ ನೂತನವಾದ ಬಾಲದೇಹವನ್ನು ಹೊಂದುವನು.396 ಹೀಗೆ ಜೀವನು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಹೊಂದುತ್ತಲೇ ಇರುತ್ತಾನೆ, ಅವನಿಗೆ ಶರೀರತ್ಯಾಗವೇ ನಾಶ (ಸಾವು), ಹೊಸ ಶರೀರ ಹೊಂದುವುದೇ ಹುಟ್ಟು, ಅದೇ ಅವನು 'ಹುಟ್ಟಿದ-ಮೃತನಾದ' ಎಂಬ ವ್ಯವಹಾರಕ್ಕೆ ವಿಷಯನಾಗಿರಲು ಕಾರಣ. ಹೀಗೆ ಜೀವನದೇಹವು ನಷ್ಟವಾದರೂ ಅವನ ಸ್ವರೂಪವು ಮಾತ್ರ ನಾಶವಾಗುವುದಿಲ್ಲ.
ಅದೂ ಅಲ್ಲದೆ-“ಜಾತಸ್ಯ ಹಿ ಧ್ರುವೋ ಮೃತ್ಯುಃ | ಧ್ರುವಂ ಜನ್ಮ ಮೃತಸ್ಯ ಚ | ತಸ್ಮಾದಪರಿಹಾರೋSರ್ಥ । ನ ತಂ ಶೋಚಿತುಮರ್ಹಸಿ”
ಆತ್ಮಸ್ವರೂಪವೂ ನಿತ್ಯವಾದರೂ ದೇಹವಿರುವುದೆಂಬ ಜನ್ಮವೂ, ದೇಹನಾಶವೆಂಬ ಸಾವೂ, ಸತ್ತವರಿಗೆ ಮತ್ತೆ ಜನನವೂ ಮೋಕ್ಷಪರಂತವಾಗಿ ತಪ್ಪದೇ ಬರುವುದು. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಹೀಗೆ ಅಪರಿಹಾರ್ಯವಾದ ಬಂಧ-ಮರಣಕ್ಕಾಗಿ ಶೋಕಿಸುವುದು ತರವಲ್ಲ. ಅಪರಿಹಾರವೆಂದರೆ, ಆ ವಿಷ್ಣುವಿನ ಪ್ರಸಾದದಿಂದಲೇ ಜನನ ಮರಣ ಪರಿಹಾರವಾಗುವುದು ಎಂದು ಭಾವ. ಇಂತು ಭಗವಂತನಿಂದಲೇ ಸಾಧ್ಯವಾದ ವಿಷಯದಲ್ಲಿ ದುಃಖಿಸುವುದು ಯುಕ್ತವಲ್ಲವೆಂದು ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದ್ದಾನೆ. ಆದ್ದರಿಂದ ಸರಸ್ವತಿಯು ಪಾಂಚಭೌತಿಕ ಶರೀರತ್ಯಾಗ ಮಾಡಿರುವಳೇ ವಿನಃ ಅವಳ ಆತ್ಮಕ್ಕೆ ನಾಶವಿಲ್ಲ. ಭಗವದನುಗ್ರಹದಿಂದ ಅವಳು ಜನನ-ಮರಣರೂಪ ಸಂಸಾರಚಕ್ರದಿಂದ ಮುಕ್ತಳಾಗಿ ಸದ್ಗತಿಪಡೆದು ಸ್ವರೂಪಾನಂದಾನುಭವಕ್ಕೆ ಅಧಿಕಾರಿಣಿಯಾಗಿ ಭಗವತ್ತನ್ನಿಧಿಯಲ್ಲಿದ್ದಾಳೆ. ಆದ್ದರಿಂದ ಅವಳು ಮೃತಳಾದಳೆಂದು ದುಃಖಿಸುವುದು ಯುಕ್ತವಲ್ಲ” ಎಂದು ಉಪದೇಶಿಸಿದರು.
ಎಲ್ಲರೂ ಮಂತ್ರಮುಗ್ಧರಂತೆ ಶ್ರೀಯವರ ಉಪದೇಶಾಮೃತವನ್ನು ಮೆಲುಕು ಹಾಕುತ್ತಾ ಮೌನವಾಗಿ ಕುಳಿತರು. ಆದರೆ ಪಾಪ ಲಕ್ಷ್ಮೀನಾರಾಯಣನು ಮಾತೃವಿಯೋಗ ದುಃಖತಪ್ತನಾಗಿದ್ದುದರಿಂದ ಶ್ರೀಗಳವರ ಉಪದೇಶಾರ್ಥವನ್ನು ಗ್ರಹಿಸಲಾಗದೇ ಗುರುಗಳ ಚರಣಗಳ ಮೇಲೆ ಶಿರವಿರಿಸಿ ಗಳಗಳನೆ ಅತ್ತುಬಿಟ್ಟನು. ಶ್ರೀಯವರು ಅವನ ತಲೆಯನ್ನು ನೇವರಿಸಿ “ಲಕ್ಷ್ಮೀನಾರಾಯಣ! ಅಳಬೇಡಪ್ಪ, ನಿನಗೆ ಸಮಾಧಾನ ಹೇಳಲು ನಾವೀಗ ನಿನ್ನ ತಂದೆಯಲ್ಲ, ಗುರುಗಳು!” ಎಂದರು.
ಅದೇ ವೇಳೆಗೆ ಒಳಗೆ ಬಂದ ಶ್ರೀಸುಧೀಂದ್ರರನ್ನು ಕಂಡು ಎಲ್ಲರೂ ಮೇಲೆದ್ದರು. ಸುಧೀಂದ್ರರು ಶಿಷ್ಯರ ಹತ್ತಿರ ಕುಳಿತ ಮೇಲೆ ನಮಸ್ಕರಿಸಿ ಕುಳಿತರು. ಸುಧೀಂದ್ರರು ಲಕ್ಷ್ಮೀನಾರಾಯಣನನ್ನು ಹತ್ತಿರ ಕೂಡಿಸಿಕೊಂಡು ಕುಮಾರ, ಅವರು ನಿನಗೆ ತಂದೆಯಲ್ಲ, ಗುರುಗಳು ನಿಜ. ಅವರು ಒಂದು ಸಣ್ಣ ಸಂಸಾರವನ್ನು ತ್ಯಜಿಸಿ ಈಗ ದೊಡ್ಡ ಜಗತ್ತಂಸಾರಿಗಳಾಗಿದ್ದಾರೆ! ಈಗವರು ನಿನಗೊಬ್ಬನಿಗೆ ಮಾತ್ರ ಗುರುಗಳೂ ತಂದೆಗಳೂ ಅಲ್ಲ, ಕೋಟ್ಯಾಂತರ ಸಜ್ಜನರ ತಂದೆ-ಗುರುಗಳಾಗಿದ್ದಾರೆ. ಜಗತ್ತಿನ ಸಮಸ್ತ ಜನರೂ ನಮ್ಮ, ಅವರ, ಮಕ್ಕಳು, ಅವರ ರಕ್ಷಣೆ, ಅಭ್ಯುದಯದ ಹೊಣೆ ನಮಗೆ ಸೇರಿದೆ. 'ಸರ್ವಜನಾ ಸುಖಿನೋ ಭವಂತು' ಎಂಬುದು ನಮ್ಮ ಧೈಯ. 'ಸರ್ವ'ದಲ್ಲಿ ಪೂರ್ವಾಶ್ರಮ ಪುತ್ರನು ಸೇರಿದ್ದಾನೆ. ಮಗನೂ ಶಿಷ್ಯನೇ, ಅವನ ರಕ್ಷಣೆಯ ಭಾರ ಈ ಜಗತ್ತಿನ ತಂದೆ-ತಾಯಿ-ಗುರು-ಸರ್ವವೂ ಆಗಿರುವ ಪರಮಾತ್ಮನ ದಾಸರಾದ, ಪ್ರತಿನಿಧಿಗಳಾದ ನಮಗೆ ಅಂದರೆ ಗುರುಗಳಿಗೆ ಸೇರಿದ್ದಲ್ಲವೇ ? ಪತ್ನಿಪುತ್ರಾದಿಗಳಲ್ಲಿನ ಮಮತೆ-ಮೋಹ-ಅಭಿಮಾನಗಳನ್ನು ತ್ಯಾಗಮಾಡುವುದೇ ಸನ್ಯಾಸ! ನಿಜ. ಅಂದಮಾತ್ರಕ್ಕೆ ಅವರಲ್ಲಿ ಅನುಗ್ರಹಿಸಬಾರದೆಂದರ್ಥವಲ್ಲ. ಗೃಹಸ್ಥರಾಗಿದ್ದಾಗ ನಮ್ಮದು ಒಂದು ಸಣ್ಣ ವರ್ತುಲವಾಗಿತ್ತು. ನಾವು ಮನೆ-ಮಡದಿ-ಮಗ-ಆ ಸಂಸಾರದಲ್ಲಿನ ಮೋಹವನ್ನು ತ್ಯಾಗಮಾಡಿ ನಾಲ್ಕು ಸಮುದ್ರ ಮಧ್ಯದ ವಿಶಾಲವರ್ತುಲದಲ್ಲಿ ಜಗತ್ತಂಸಾರಿಗಳಾಗಿದ್ದೇವೆ. ಇಲ್ಲಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ಭೇದವೆಣಿಸದೆ, ಜಾತಿ-ಮತ-ಪಂಥ-ಭಾಷೆ-ದೇಶಗಳ ಗಡಿದಾಟಿ ವರ್ಣಾಶ್ರಮೋಚಿತ ಧರ್ಮವನ್ನನುಸರಿಸಿ ಸಕಲರ ಉದ್ಧಾರ-ಅಭ್ಯುದಯಗಳಾಗುವಂತೆ ಮಾಡುವ ಹೊಣೆ ನಮ್ಮದಾಗಿದೆ, ಅಂತೆಯೇ ನಮ್ಮದು ಜಗದ್ಗುರುಪೀಠವಾಗಿದೆ. ತಾರತಮ್ಯಾನುಸಾರವಾಗಿ ಅವರವರ ಯೋಗ್ಯತೆಗನುಗುಣವಾಗಿ ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಾ ಸರ್ವರನ್ನೂ ಕಾಪಾಡುವುದು ನಮ್ಮ ಕರ್ತವ್ಯ! ಶಿಷ್ಯಕೋಟಿಪ್ರವಿಷ್ಟನಾದ ನೀನು ನಮ್ಮ ಶಿಷ್ಯನೂ ಅಹುದು, ಮಗನು ಅಹುದು. ನಿನ್ನ ರಕ್ಷಣೆಯ ಭಾರವೂ ನಮಗೆ ಸೇರಿದೆ. ಅದಕ್ಕೆ ಶ್ರೀಮೂಲರಾಮ ಸಮರ್ಥನಾಗಿದ್ದಾನೆ! ನೀನು ಚಿಂತಿಸಬೇಡ” ಎಂದುಪದೇಶಿಸಿದರು.
ಗುರುಗಳ ವಾಕ್ಯಗಳನ್ನು ತದೇಕಚಿತ್ತರಾಗಿ ಕೇಳುತ್ತಿದ್ದ ಶ್ರೀರಾಘವೇಂದ್ರಗುರುಗಳು ಮಂದಹಾಸಮುಕುಳಿತಮುಖರಾಗಿ ಕರಜೋಡಿಸಿ ವಿಜ್ಞಾಪಿಸಿದರು -
“ಗುರುದೇವ! ಈ ಉದಾತ್ತತತ್ವ ಭಾವನೆಗಳನ್ನು ತಮ್ಮ ಮುಖದಿಂದ ಕೇಳಬೇಕೆಂದೇ ನಾವು ಹಾಗೆ ವರ್ತಿಸಿದೆವು! ಗುರುಗಳು ಕ್ಷಮಿಸಬೇಕು. ನಾವೇ ಈ ಉದಾತ್ತ ವಿಚಾರಗಳನ್ನು ಹೇಳಿದ್ದ ಪಕ್ಷದಲ್ಲಿ, ಲೋಕದ ಜನರು ನಾವು, ಪೂರ್ವಾಶ್ರಮ ಪುತ್ರನ ಮೆಲಿನ ಮೋಹದಿಂದ ಅಭಿಮಾನದಿಂದ ಹೀಗೆ ಹೇಳಿದೆವೆಂದು ಶಂಕಿಸಲು ಅವಕಾಶವಾಗುತ್ತಿತ್ತು. ನಮ್ಮ ಹಾದ್ರ್ರವನ್ನೇ ತಾವು ಹೇಳೋಣವಾಯಿತು. ನಮ್ಮದು ಜ್ಞಾನಪೀಠ, ಜಗತ್ತಿನ ಸಕಲ ಜನರನ್ನು ಪಾರಮಾರ್ಥಿಕ ಸುಖಸಾಧನೆಯ ಮಾರ್ಗದಲ್ಲಿ ನಡೆಸಿಕೊಂಡೈದು, ಸರ್ವ ಐಹಿಕ ಪಾರತ್ರಿಕ ಸುಖಾಭ್ಯುದಯಗಳಿಗಾಗಿ ಶ್ರಮಿಸುವುದು ಈ ಮಹಾಪೀಠದ ಕರ್ತವ್ಯ. ಆದ್ದರಿಂದ ಭಗವತ್ಯರ್ಥವಾಗಿ ನಿರುಪಾಧಿಕವಾಗಿ ಕರ್ತವ್ಯರತರಾಗಿ ಸರ್ವರ ಹಿತಸಾಧನೆ ಮಾಡಬೇಕು. ಅದೇ ಭಗವಂತನಿಗೆ ಅತಿ ಪ್ರಿಯವಾದುದು. ನಾವು ಪರಮಹಂಸಾಶ್ರಮವನ್ನು ಸ್ವೀಕರಿಸುವಾಗ “ಅಭಯಂ ಸರ್ವಭೂತೇಭ್ಯಃ” ಎಂದು ಪ್ರಮಾಣ ಪುರಸ್ಪರವಾಗಿ ಸಕಲಭೂತಗಳಿಗೂ ಅಭಯದಾನ ಮಾಡಿದ್ದೇವೆ. ನಾವು ಶ್ರೀಹರಿವಾಯುಗಳ ಪ್ರೀತರ್ಥವಾಗಿ ಮನಸ್ಸು, ಮಾತು-ಕ್ರಿಯೆ ಈ ಮೂರು ವಿಧದಿಂದಲೂ ಸತ್ಯವಾಗಿ ನಡೆದು ಜಗತ್ತಿನ ಜನತೆಯ ಅಭ್ಯುಯ ಕಲ್ಯಾಣಗಳನ್ನು ಶ್ರೀಹರಿಸೇವಾರೂಪವಾಗಿ ಮಾಡಬಯಸಿದ್ದೇವೆ.
ಇನ್ನೊಂದು ವಿಚಾರ - ನಮಗೆ ತಾವು ಸಾಮ್ರಾಜ್ಯಾಭಿಷೇಕ ಮಾಡುತ್ತಿರುವಾಗ ಶ್ರೀಹರಿ-ವಾಯುಗಳು ಪ್ರೇರಣೆಮಾಡಿ, ನಮ್ಮಲ್ಲಿ ನಿಂತು ಒಂದು ಸಣ್ಣ ಗ್ರಂಥವನ್ನು ರಚನೆಮಾಡಿಸಿದ್ದಾರೆ. ಅದನ್ನು ತಾವು ಪರಿಶೀಲಿಸಿ, ಆ ಗ್ರಂಥದಲ್ಲಿ ನಾವು ಪ್ರತಿಜ್ಞಾಬದ್ಧರಾಗಿರುವಂತೆ ಕಾರ ನೆರವೇರಿಸಲು ಯೋಗ್ಯತೆಯುಂಟಾಗುವಂತೆ ತಾವೂ ಆಶೀರ್ವದಿಸಬೇಕಾಗಿ ಪ್ರಾರ್ಥಿಸುತ್ತೇವೆ” ಎಂದು ವಿಜ್ಞಾಪಿಸಿ ವ್ಯಾಸಪೀಠದ ಮೇಲಿಟ್ಟಿದ್ದ ಒಂದು ಪುಟ್ಟ ತಾಳಾಓಲೆಯ ಗ್ರಂಥವನ್ನು ಗುರು ಸುಧೀಂದ್ರರ ಮುಂದಿಟ್ಟು ನಮಸ್ಕರಿಸಿದರು.
ಶ್ರೀಸುಧೀಂದ್ರರು ಗ್ರಂಥವನ್ನು ಓದಹತ್ತಿದರು. ಓದಿ ಮುಗಿಸಿದ ಮೇಲೆ ಪರಮಾನಂದ ಪುಳಕಿತಗಾತ್ರರಾಗಿ “ಆಹಾ ಎಂತಹ ತಾತ್ವಿಕವಿವೇಚನೆ! ಹರಿವಾಯುಗಳಲ್ಲಿ ನಿಮಗೆಂಥಾ ಭಕ್ತಿ! ಶ್ರೀಹರಿವಾಯುಸತ್ತತ್ತಪ್ರಮೇಯ ಮಹಿಮಾಪುಂಜವಾದ ನಿಮ್ಮ ಈ “ಪ್ರಾತಸ್ತಂಕಲ್ಪ ಗದ್ಯಮ್' ಗ್ರಂಥವು ಮುಮುಕ್ಷುಗಳ ಸಾಧನೆಗೆ ಅತ್ಯುಪಕಾರಕವಾಗಿದೆ! ಪ್ರತಿದಿನವೂ ಎದ್ದೊಡನೆ ಸಮಸ್ತವೂ ಶ್ರೀಹರಿಪೂಜೆಯೆಂದು ತಿಳಿದು ಆ ಶ್ರೀಹರಿಪೂಜಾಸಂಕಲ್ಪರೂಪವಾಗಿರುವ ಈ ಮಹಾಗ್ರಂಥವು ಜಗನ್ಮಾನ್ಯವಾಗಿ, ಸರ್ವರ ಸಾಧನೆಗೆ ಅತ್ಯುಪಕಾರವಾಗುವುದರಲ್ಲಿ ಸಂದೇಹವಿಲ್ಲ' ಎಂದು ಉದ್ಧರಿಸಿದರು. ಆಗ ಶ್ರೀರಾಘವೇಂದ್ರ ಗುರುಗಳು ವಿನೀತರಾಗಿ “ಅನುಗ್ರಹೀತನಾದೆ, ಸ್ವಾಮಿ. ಶ್ರೀಹರಿಪ್ರಸಾದಸಿದ್ಧಿಗಾಗಿ, ಅವನಿಗೆ ಪ್ರೀತಿಯಾಗಲೆಂದು ಪ್ರಾತಃಕಾಲದಿಂದಾರಂಭಿಸಿ ರಾತ್ರಿಯವರೆಗೆ ಸ್ವವರ್ಣಾಶ್ರಮೋಚಿತವಾದ ನಿತ್ಯನೈಮಿತ್ತಿಕ ಕಾಮ್ಯಭೇದದಿಂದ ಮೂರುವಿಧವಾದ ಪರಮಾತ್ಮನ ಪೂಜೆಯನ್ನು ನಮ್ಮಲ್ಲಿ ಅಂತರ್ಗತರಾದ ಶ್ರೀವಾಯುದೇವರಲ್ಲಿ ಅಂತರ್ಗತನಾಗಿ ನಿಂತು, ಶ್ರೀಹರಿಯೇ ಮಾಡಿಸುವನೆಂಬ ಅನುಸಂಧಾನದಿಂದ ಮಾಡುತ್ತೇವೆ ಮತ್ತು ನಮ್ಮ ಆಜ್ಞಾಧಾರಕರಾದ ಶಿಷ್ಯರು, ಭಕ್ತರು, ವಿದ್ಯಾಸಂಬಂಧಿಗಳು ಹಾಗೂ ನಮ್ಮ ಪೂರ್ವಾಶ್ರಮದ ಪುತ್ರ-ಪೌತ್ರ-ಬಂಧು-ಬಾಂಧವರಿಂದಲೂ ಮಾಡಿಸುತ್ತೇವೆ ಎಂದು ನಾವು ಸಂಕಲ್ಪಪೂರ್ವಕವಾಗಿ ಪ್ರತಿಜ್ಞಾಬದ್ಧರಾಗಿದ್ದೇವೆ. ಭಗವತ್ತೂಜಾರೂಪವೂ, ಶ್ರೀಹರಿಗೆ ಪ್ರಿಯವೂ ಆದ ಈ ಕಾರ್ಯವನ್ನು ನಮ್ಮ ಪೂರ್ವಾಶ್ರಮ ಸಂಬಂಧಿಗಳೂ, ಬಂಧುಗಳೂ.
ಆದ ಚಿರಂಜೀವಿ ಲಕ್ಷ್ಮೀನಾರಾಯಣ, ವೆಂಕಟನಾರಾಯಣ, ನಾರಾಯಣ ಮತ್ತು ರಾಮಚಂದ್ರಾಚಾರ್ಯರ ಪುತ್ರ ಕೃಷ್ಣ, ತಮ್ಮ ಬಂಧುಗಳಾದ ನರಸಿಂಹಾಚಾರ್ಯರ ಪುತ್ರ ರಘುಪತಿ ಇವರ ದ್ವಾರವೇ ಪ್ರಾರಂಭಿಸಲು ಆಶಿಸಿದ್ದೇವೆ. ಇವರಿಗೆ ಶಾಸ್ತ್ರಪಾಠ ಹೇಳಬೇಕೆಂದು ಅವರು ಬಹುದಿನದಿಂದ ಹೇಳುತ್ತಿದ್ದರು. ಈಗ ಅವರ ಅಪೇಕ್ಷೆಯಂತೆ ಈ ಐದು ಜನ ಶಿಷ್ಯರಿಗೆ ಸಕಲಶಾಸ್ತ್ರಗಳನ್ನು ಪಾಠ ಹೇಳಿ ಅವರಿಂದ ಭಗವತ್ತೂಜಾತ್ಮಕವಾದ ನಿತ್ಯನೈಮಿತ್ತಿಕ ಕಾವ್ಯಾದಿ ಸವರ್ಣಾಶ್ರಮೋಚಿತ ಕರ್ಮಗಳನ್ನು ನಿಷ್ಕಾಮಭಾವನೆಯಿಂದ ಮಾಡಿಸುವುದಲ್ಲದೆ, ಅದರಂತೆ ನೂರಾರು ಜನ ಶಿಷ್ಯಭಕ್ತರಿಂದಲೂ ಮಾಡಿಸಬಯಸಿದ್ದೇವೆ. ಇದರಂತೆ ನಮ್ಮ ಆಜ್ಞಾಧಾರಕರಾದ ಸಮಸ್ತ ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ-ಮುಂತಾದ ಸುಜೀವಿಗಳಿಂದಲೂ ಅವರವರ ಧರ್ಮಗಳಿಗುಚಿತವಾದ ರೀತಿಯಲ್ಲಿ ಅವರವರ ಯೋಗ್ಯತಾನುಸಾರವಾಗಿ ಶ್ರೀಭಗವತೇವೆಯನ್ನು ಮಾಡಿಸಿ, ಎಲ್ಲ ಸಜ್ಜನರೂ ಉತ್ಕೃತರಾಗಿ ಭಗವದನುಗ್ರಹದಿಂದ ತಂತಮ್ಮ ಯೋಗ್ಯತೆಗೆ ತಕ್ಕಂತೆ ಶ್ರೀಹರಿಪ್ರಸಾದದಿಂದ ಸದ್ಧತಿ ಸಾಧನೆ ಮಾಡಿಕೊಂಡು ಶ್ರೇಯೋವಂತರಾಗಬೇಕೆಂದು ನಮ್ಮ ಸಂಕಲ್ಪವಾಗಿದೆ” ಎಂದು ಅರಿಕೆ ಮಾಡಿದರು.
ಶ್ರೀರಾಘವೇಂದ್ರಗುರುಗಳ ಉದಾರ ಅಂತಃಕರಣ, ವಿಶಾಲಭಾವನೆ, ಸರ್ವಜನ ಕಲ್ಯಾಣದಲ್ಲಿರುವ ಕಾತುರತೆ, ಕಾರುಣ್ಯ, ದೀಕ್ಷೆಗಳನ್ನು, ಕಂಡು ಶ್ರೀಸುಧೀಂದ್ರ ಗುರುಗಳು ಮತ್ತು ಸಕಲರೂ ಆನಂದತುಂದಿಲರಾದರು. ಆವರೆಗೆ ಅವರ ಮನದಲ್ಲಿದ್ದ ಭಯವು ಪರಿಹಾರವಾಯಿತು. ವೆಂಕಟಾಂಬಾ-ಕಮಲಾದೇವಿಯರ ಮುಖದಲ್ಲಿ ಸಾತ್ವಿಕಾನಂದ ಸೂಚಕ ಮುಗುಳುನಗೆಯು ಅರಳಿತು!
ಶ್ರೀಸುಧೀಂದ್ರರ ಅಪ್ಪಣೆಯಂತೆ ಶ್ರೀರಾಘವೇಂದ್ರ ಗುರುಗಳು ನಾರಾಯಣ, ವೆಂಕಟನಾರಾಯಣ, ಲಕ್ಷ್ಮೀನಾರಾಯಣ, ಕೃಷ್ಣ ಮತ್ತು ಸುಧೀಂದ್ರರ ಬಂಧು ನರಸಿಂಹಾಚಾರರ ಪುತ್ರ ರಘುಪತಿಗಳಲ್ಲದೆ, ಕುಂಭಕೋಣದ ವಿದ್ವಾಂಸರ, ಮನೆತನಸ್ಥರ ಉಪನೀತಪುತ್ರರು ಹೀಗೆ ೩೦-೩೫ ಜನರಿಗೆ ನ್ಯಾಯ, ವೇದಾಂತಾದಿಶಾಸ್ತ್ರಪಾಠಹೇಳುತ್ತಿದ್ದರು. ಎಲ್ಲ ಶಿಷ್ಯರೂ ಶ್ರೀಯವರಲ್ಲಿ ಭಕ್ತಿಶ್ರದ್ಧೆಗಳಿಂದ ವ್ಯಾಸಂಗಮಾಡುತ್ತಿದ್ದರು. ಇದರ ಜೊತೆಗೆ ಹಿಂದಿನಿಂದಲೂ ಅಧ್ಯಯನಮಾಡುತ್ತಿದ್ದ ಇಪ್ಪತ್ತು ಮೂವತ್ತು ಜನ ಪ್ರೌಢವಿದ್ಯಾರ್ಥಿಗಳೂ ಓದುತ್ತಿದ್ದರು. ಆ ಪಾಠಪ್ರವಚನದ ವೈಭವವನ್ನು ನೋಡಿ ಆನಂದಿಸಲೆಂದೇ ಅನೇಕ ಲೌಕಿಕ-ವೈದಿಕ-ವಿದ್ವಜ್ಜನರು ಪಾಠಕಾಲದಲ್ಲಿ ಬಂದು ಕುಳಿತಿರುತ್ತಿದ್ದರು.
ಶ್ರೀಗಳವರು ಸರಳಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಬುದ್ದಿಸವಾಗುವಂತೆ ಅನುವಾದ ಮಾಡಿ ಪಾಠಹೇಳುತ್ತಿರುವಾಗ ಅದು ಶಿಷ್ಯರ ಚಿತ್ತಭಿತ್ತಿಯಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಿತ್ತು. ಈ ಬಗೆಯ ನೂತನ ಪಾಠಕ್ರಮದಿಂದ ವಿದ್ಯಾರ್ಥಿಗಳು ಸುಲಭವಾಗಿ ವಿಷಯಗಳನ್ನು ಗ್ರಹಿಸಿ, ಚಿಂತನೆಮಾಡಿಮುಂದುವರೆಯಲು ಸಹಾಯಕವಾಗುತ್ತಿತ್ತು. ಮರುದಿನ ಪಾಠಪ್ರಾರಂಭಕ್ಕೆ ಮೊದಲು ಪ್ರತಿಯೊಬ್ಬರಿಂದಲೂ ಹಿಂದಿನದಿನದಪಾಠ ಭಾಗವನ್ನು ಅನುವಾದ ಮಾಡಿಸಿ, ತಪ್ಪಿದಲ್ಲಿ ತಿದ್ದಿ ಮತ್ತೆ ಅನುವಾದ ಮಾಡಿಸುತ್ತಿದ್ದರು. ಇದರಿಂದ ಮೂರು ನಾಲ್ಕು ಬಾರಿ ವಿಷಯಗಳನ್ನು ಗ್ರಹಿಸಿ ನಿರ್ಣಾಯಕವಾಗಿ ವಿವೇಚನಾತ್ಮಕವಾಗಿ ಅನುವಾದಮಾಡಲು ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತಿತ್ತು. ಇದರಿಂದ ಪ್ರತಿವಿದ್ಯಾರ್ಥಿಯೂ ಕಾಲಕಾಲಕ್ಕೆ ತನ್ನ ವ್ಯಾಸಂಗ ವಿಷಯದಲ್ಲಿ, ಪೂರ್ವಾವಲೋಕನ ಚಿಂತನಾದಿಗಳಿಂದ ಸಿದ್ದರಾಗಿ ಮುಂದಿನ ಪಾಠಕ್ಕೆ ತಯಾರಾಗಿರುತ್ತಿದ್ದರು, ಹೀಗೆ ಶ್ರೀಗಳವರ ಪಾಠಪ್ರವಚನವು ಅವ್ಯಾಹತವಾಗಿ ನೆರವೇರಹತ್ತಿತು.
ಕುಂಭಕೋಣದ ಚಾತುರ್ವಣ್ಯದ ಆಸ್ತಿಕರಾದ ಧರ್ಮಾಭಿಮಾನಿಗಳು ಶ್ರೀಯವರ ಸನ್ನಿಧಿಗೆ ಬಂದು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡು, ತಮ ತಮಗೆ ವಿಹಿತವಾದ ಧರ್ಮಗಳು ಅವುಗಳ ಅವಶ್ಯಕತೆಯನ್ನು ಅರಿತು, ಭಗವತತ್ವ, ಮಹಾತ್ಮ, ಧರ್ಮ, ಸದಾಚಾರಾದಿ ರಹಸ್ಯಗಳನ್ನೂ ತಿಳಿದು ಅದರಂತೆ ಆಚರಿಸುತ್ತಾ ಆನಂದಿಸುತ್ತಿದ್ದರು. ಹೀಗೆ ಪ್ರತೀತವ್ರತ'ರೆಂಬ ಬಿರುದಿಗೆ ಪಾತ್ರರಾಗಿದ್ದ ಗುರುರಾಜರು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ಆಚರಣೆಗೆ ತರುತ್ತಾ ಸರ್ವಮಾನ್ಯರಾಗಿ ಕಂಗೊಳಿಸುತ್ತಿದ್ದರು.