ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೬೨. ವಾಗ್ಗೇವಿಯ ದರ್ಶನ ಉಪದೇಶ
ರಾತ್ರಿಯ ಮೂರುಯಾಮಗಳು ಕಳೆದು ನಾಲ್ಕನೆಯ ಯಾಮಾರ್ಧವೂ ಕಳೆದು ಹೋಯಿತು. ಆದರೂ ವೆಂಕಟನಾಥಾಚಾರ್ಯರ ಚಿಂತೆಗೆ ಕೊನೆಯಿಲ್ಲದಾಯಿತು.
ಆಗ ಇದ್ದಕ್ಕಿದ್ದಂತೆ ಅನೇಕ ಮಿಂಚಿನ ಗೊಂಚಲಗಳು ಮಿನುಗಿದಂತಾಗಿ ಅಭೂತ ಪೂರ್ವ ಸುಂದರ ಬೆಳಕಿನಕಾಂತಿ ಎಲ್ಲೆಡೆ ಹರಡಿತು. ಇದೇನು ಸೋಜಿಗವೆಂದು ಆಚಾರ್ಯರು ಸುತ್ತಲೂ ದೃಷ್ಟಿಹರಿಸಿದರು. ಏನಾಶ್ಚರ್ಯ! ಮಣಿಮಯ ಮೇಖಲೆಯಿಂದ ರಾಜಿಸುವ ಬಿಳಿಯ ರೇಷ್ಮೆಯ ಝಗಝಗಿಸುವ ಪೀತಾಂಬರವನ್ನುಟ್ಟು, ಸರ್ವಾಭರಣಗಳಿಂದಲಂಕೃತಳಾಗಿ, ಶರತ್ಕಾಲೀನ ಕಮಲದಂತೆ ಶೋಭಿಸುವ ನೇತ್ರಗಳು, ಅಸದೃಶ ರೂಪಲಾವಣ್ಯ ಕಾಂತಿಗಳಿಂದ ಬೆಳಗುತ್ತಿರುವ ದೇವತಾಸ್ತ್ರೀಯೊಬ್ಬಳು ಆಚಾರ್ಯರ ಪರ್ಯಂಕದ ತುದಿಯಲ್ಲಿ ಮಂಡಿಸಿದ್ದಾಳೆ! ಅವಳನ್ನು ಆಚಾರ್ಯರು ವಿಸ್ಮಯದಿಂದ ನೋಡಿದರು !369 ಅನರ್ಘಮಣಿಖಚಿತ ಸುವರ್ಣಾಭರಣ ಭೂಷಿತಳೂ, ಚಂದ್ರಮುಖಿಯೂ, ಮನೋಹರ ವೇಷಶೋಭಿತಳೂ, ನಿರ್ದೋಷಳೂ, ಕತ್ತಲೆಯಂತೆ ಬೆಳಗುವ ನಿಬಿಡಕೇಶರಂಜಿತಳೂ, ಸರ್ವಜ್ಞಳೂ, ಸಾಕ್ಷಾತ್ ವಾಗ್ಗೇವಿಯಂತೆ ಕಂಗೊಳಿಸುವ ಈ ದೇವಿಯು ಯಾರಾಗಿರಬಹುದು ? ಎಂದು ಮನದಲ್ಲೇ ವೇಂಕಟನಾಥರು ಯೋಚಿಸಲಾರಂಭಿಸಿದರು.
ಇವಳಾರಾಗಿರಬಹುದು ? ಮಾನವಳೇ, ಕಿನ್ನರಿಯೇ, ನಾಗಕನ್ನಿಕೆಯೇ ಅಥವಾ ದೇವತಾಸ್ತೀಯೇ?, ಹೂಂ, ಆರಾದರೇನು? ನನ್ನ ಬಳಿಗೇಕೆ ಬಂದಿರುವಳು ? ಎಂದು ಚಿಂತಿಸುತ್ತಿರುವ ಆಚಾರ್ಯರ ಮನದ ತುಮುಲವನ್ನರಿತೋ ಎಂಬಂತೆ ಆ ದೇವತಾಸ್ತ್ರೀಯು ಆಚಾರ್ಯರನ್ನು ಕುರಿತು ಮೃದುಮಧುರಧ್ವನಿಯಲ್ಲಿ ಹೇಳಲಾರಂಭಿಸಿದಳು.
“ವಿದ್ದದ್ದರೇಣ್ಯ! ನಾನು ಆಶ್ರಯ ಬಯಸಿ ಬಂದಿದ್ದೇನೆ. ಪಂಡಿತಾಗ್ರಣಿ! ಪಂಡಿತರಿಗೆ ಸುಖ-ಆನಂದಪ್ರದಳಾಗಬೇಕೆಂದು ವೇದವ್ಯಾಸರು ನನಗೆ ಕನ್ಯಾತ್ವವನ್ನು ನೀಡಿದರು. ಆದ್ದರಿಂದ ಆನಂದತೀರ್ಥರಿಗೆ ಪ್ರಿಯಳಾದ ನನ್ನನ್ನು ವಿದ್ಯಾಲಕ್ಷ್ಮಿ ಎಂದು ತಿಳಿ!” ಆ ದೇವಿಯು ಇಂತೆಂದ ಕೂಡಲೇ ಅತಿಪ್ರಶಾಂತ ಬೆಳದಿಂಗಳಿನ ಕಾಂತಿಪುಂಜದಲ್ಲಿನವರತ್ನಮಯ ಕಿರೀಟ, ಕುಂಡಲ, ವಿವಿಧ ಮುತ್ತುರತ್ನಗಳ ಹಾರ, ಕಂಕಣ, ವಡ್ಯಾಣಗಳಿಂದಲಂಕೃತಳಾಗಿ ಸುರುಚಿರ ವೀಣಾಪಾಣಿಯ ಲೋಕಮೋಹನಾಕಾರವು ಆಚಾರ್ಯರ ಕಂಗಳಿಗೆ ಹಬ್ಬವನ್ನುಂಟುಮಾಡಿತು! ಅಭಯಮುದ್ರಾರಂಜಿತಳಾದ ವೀಣಾಪಾಣಿಯು ಮಂದಹಾಸಬೀರುತ್ತಾ ಮುಂದುವರೆದು ಇಂತೆಂದಳು. “ಶ್ರೀಮಧ್ವಾಚಾರ್ಯರು ಶಿಶುವಾಗಿದ್ದ ನನ್ನನ್ನು ಶ್ರೀಬಾದರಾಯಣರ ಬ್ರಹ್ಮಸೂತ್ರವೆಂಬ ಕಾಮಧೇನುವಿನಿಂದ ಸೂತ್ರಭಾಷ್ಯವೆಂಬ ಹಾಲು ಕರೆದೆರೆದು ಪೋಷಿಸಿದರು. ಶ್ರೀಅಕ್ಟೋಭ್ಯ ಶಿಷ್ಯಾಗಗಣ್ಯರಾದ ಶ್ರೀಜಯತೀರ್ಥರಿಂದ ನನಗೆ ತಾರುಣ್ಯವಂಟಾಯಿತು. ಕುಮಾರ, ವೇಂಕಟನಾಥ ! ಯಾರ ಪಾದಸೇವಕನಾದ ಕರ್ನಾಟಕ ಚಕ್ರೇಶನಾದ ಕೃಷ್ಣದೇವರಾಯನಿಂದ ಸಮಸ್ತಭೂಮಿಯೂ 'ರಾಜನ್ದತೀ' ಎಂಬ ಅನ್ವರ್ಥನಾಮದಿಂದ ವಿಖ್ಯಾತವಾಯಿತೋ, ಅಂಥ ಶ್ರೀವ್ಯಾಸರಾಜತೀರ್ಥರ ಕರಪಿಡಿದು ನಾನು ಅಭಿವೃದ್ಧಿಸಿದೆ. ಕಲ್ಪಾಂತರದವರೆಗೆ ಜೀವಿಸಬೇಕೆಂದಾಶಿಸಿ, ತರ್ಕತಾಂಡವದಲ್ಲಿ ಉತ್ಸುಕಳಾಗಿ, ನಾಯಾಮೃತದಿಂದ ಅಭಿವೃದ್ಧಿಸಿದ ಲತಾರೂಪಳಾದ ನನಗೆ ವ್ಯಾಸರಾಜರು ಸುಧಾಸಂಬಂಧಿಯಾದ ಚಂದ್ರಿಕೆಯಲ್ಲಿ ವಾಸವನ್ನೇರ್ಪಡಿಸಿಕೊಟ್ಟರು. ನನಗೊಬ್ಬ ಗೆಳತಿ ಬೇಕಾಗಿತ್ತು ! ಜಗತ್ಪಸಿದ್ಧರಾದ ಶ್ರೀವಿಜಯೀಂದ್ರತೀರ್ಥರೆಂಬ ಪ್ರಾಣಸಖಿ ನನಗೆ ದೊರಕಿದಳು. ನನ್ನ ಸಹಾಯದಿಂದ ಜಗತ್ತಿನಲ್ಲಿ ಪ್ರಶಸ್ತ್ರ ಕೀರ್ತಿ ಗಳಿಸಿ ನ್ಯಾಯಾಮೃತ ವ್ಯಾಖ್ಯಾವ್ಯಾಜದಿಂದ ನ್ಯಾಯಾಮೃತ ಬಳ್ಳಿಯ ರೂಪಳಾದ ನನಗೆ ಆಮೋದವೆಂಬ ಪಾತಿಯನ್ನು ರಚಿಸಿಕೊಟ್ಟು ಉಪಕರಿಸಿದರು.
ವಿಜಯೀಂದ್ರತೀರ್ಥರು ನೂತನವೂ ವಿಸ್ತಾರವೂ ಆದ, ಸೂರಚಂದ್ರರಿರುವವರೆಗೆ ಬಾಳುವ ಕಂಟಕೋದಾರರೂಪವಾದ ಬೆಳ್ಳನೆಯ ರೇಷ್ಮೆಯ ಪೀತಾಂಬರವನ್ನು ನನಗೆ ಉಡುಸಿದರು. ವೇಂಕಟನಾಥ! ನಾನು ಉಟ್ಟಿರುವ ಪೀತಾಂಬರವೇ ಅವರು ನನಗಿತ್ತ ಪೀತಾಂಬರ! ಅವರು ನನ್ನ ಆಭರಣಲಂಕಾರ ವಸ್ತುಗಳನ್ನು ಭದ್ರವಾಗಿಟ್ಟುಕೊಳ್ಳಲು ತತ್ವಮಾಣಿಕೃಪೇಟಿಕಾ' ಎಂಬ ಸುಂದರ ಮಣಿಮಯ ಪೆಟ್ಟಿಗೆಯನ್ನು ನೀಡಿದರು. ಅವರ “ನ್ಯಾಯಮೌಕ್ತಿಕಮಾಲಾ” ಗ್ರಂಥವು ನನಗೆ ಮುಕ್ತಾಹಾರವೆಂಬ ಅಲಂಕಾರವಾಯಿತು. ಜಗತ್ತಿನಲ್ಲಿ ಒರ್ವ ವಧುವಿಗೆ ಏನೇನು ಆಭರಣಗಳು ಬೇಕೋ ಅವೆಲ್ಲವನ್ನೂ ತಮ್ಮ ನೂರಾನಾಲ್ಕು ಗ್ರಂಥರೂಪವಾಗಿ ಉಡಗೊರೆಯಾಗಿತ್ತರು. ರಾಜಸಭೆಗಳಲ್ಲಿ ತಮಗೆ ದೊರೆತ ವಾದಿವಿಜಯಸಂಪತ್ತು ನನ್ನ ದಯದಿಂದ ದೊರಕಿತೆಂದು ನಿನ್ನ ಗುರುಗಳಾದ ಶ್ರೀಸುಧೀಂದ್ರತೀರ್ಥರು ಶ್ರೀವ್ಯಾಸರಾಜರ 'ತರ್ಕತಾಂಡವಕ್ಕೆ ರಚಿಸಿದ “ಸದುಕ್ತಿರತ್ನಾಕರ ಎಂಬ ಪ್ರೌಢವ್ಯಾಖ್ಯಾನವು ನನಗೆ ರಂಗಸ್ಥಳವಾಯಿತು. ಶ್ರೀವೇದವ್ಯಾಸರ ಭಾಗವತದ ದ್ವೀತಿಯ ಹಾಗೂ ಏಕಾದಶ ಸ್ಕಂದಗಳಿಗೆ ಅವರು ರಚಿಸಿದ ವಿಸ್ತಾರವಾದ ವ್ಯಾಖ್ಯಾನವು ನನ್ನ ಕಿರೀಟದ ಮೇಲ್ಬಾಗದ ಮುಕ್ತಾಮಣಿಯಾಯಿತು. ಸುಧೀಂದ್ರರು ಚಿತ್ರವಿಚಿತ್ರ ಚೂರ್ಣಿಕೆಗಳಿಂದ ಅಲಂಕೃತವಾದ 'ಸುಭದ್ರಾಪರಿಣಯ' ಎಂಬ ನಾಟಕವನ್ನು ರಚಿಸಿ ನನಗೆ ವಿಹಾರಮಾಡಲು ಒಂದು ಸುಂದರ ಉಪವನವನ್ನು ಏರ್ಪಡಿಸಿಕೊಟ್ಟರು! ವತ್ಸ, ವೇಂಕಟನಾಥ! ನನ್ನ ಜೀವನಾಡಿಯಾಗಿರುವ ಚಂದ್ರಿಕಾಸಹಿತವಾದ ನ್ಯಾಯಸುಧಾರೂಪ ಬಳ್ಳಿಯೇ ಈಗ ಭಿನ್ನ ಭಿನ್ನ (ಒಣಗಿಹೋಗುತ್ತಿರುವಾಗ) ವಾಗುತ್ತಿರುವಾಗ ಈ ಆಭರಣಗಳಿಂದ ಪ್ರಯೋಜನವೇನು ? ಆದ್ದರಿಂದ ಕುಮಾರ, ನನ್ನ ಪ್ರಾಣನಾಡಿಯಂತಿರುವ ಚಂದ್ರಿಕಾ ಹಾಗೂ ನ್ಯಾಯಸುಧಾಗ್ರಂಥಗಳಿಗೆ ಶ್ರೇಷ್ಠ ವ್ಯಾಖ್ಯಾನಗಳನ್ನು ರಚಿಸಿ ನನ್ನನ್ನು ರೂಢಮೂಲಗಳನ್ನಾಗಿ ಮಾಡಿದಲ್ಲಿ ಆಗ ನೀನು ಪುಣ್ಯಶಾಲಿ ಎನಿಸುವೆ! ಹಾಗಲ್ಲದಿದಲ್ಲಿ ಧರ್ಮದೃಷ್ಟಿಯೇ ಎಲ್ಲೂ ಕಾಣಲಾರದು ! ನೀನು ಧರ್ಮಿಷ್ಠನಾಗಿದ್ದೀಯೇ, ಸಕಲ ಪ್ರಾಣಿಹಿತರತನಾಗಿದ್ದಿಯೇ. ನೀನು ನನ್ನಂಥ ಓರ್ವ ಅಬಲೆಗೆ ಜೀವದಾನ ಮಾಡದಿದ್ದರೆ ಧರ್ಮವಂತನೆಂಬ ವ್ಯವಹಾರವೆಂತು ಉಂಟಾದೀತು?” ಹೀಗೆ ಹೇಳಿದ ವಾಗ್ಗೇವಿಯು ಮತ್ತೆ ನಸುನಗುತ್ತಾ - “ಕುಮಾರ! 'ಅಲಕ್ಷ್ಮಿ'ಯೆಂದು ಖ್ಯಾತಳಾದ ದರಿದ್ರಲಕ್ಷ್ಮಿಯು ಸ್ವಪ್ನದಲ್ಲಿ ಆಶ್ರಯ ಕೋರಿದಾಗ ಉದಾರಹೃದಯನಾದ ನೀನು ಅವಳಿಗೂ ಆಶ್ರಯ ನೀಡಿದೆ. ಅಂದಮೇಲೆ “ವಿದ್ಯಾಲಕ್ಷ್ಮಿ”ಯೆಂದು ಖ್ಯಾತಳಾದ ನಾನು ಪ್ರತಕ್ಷಳಾಗಿ ಆಶ್ರಯ ಬೇಡುತ್ತಿರುವಾಗ ನನಗಾಶ್ರಯ ನೀಡದಿರುವೆಯಾ?” ಎಂದು ಕೇಳಿದಳು.
ವೇಂಕಟ : ಅಮ್ಮ, ಜೀವದಾನ ಮಾಡು, ಆಶ್ರಯ ನೀಡು, ಎಂದು ಕೇಳುತ್ತಿದ್ದೀಯೆ. ದೇವಿ! ಈಗ ಜ್ಞಾನಿನಾಯಕರೂ, ನನ್ನ ಗುರುಗಳೂ ಆದ ಶ್ರೀಸುಧೀಂದ್ರತೀರ್ಥರ ಆಶ್ರಯದಲ್ಲಿ ನೀನಿದ್ದಿಯೇ! ಅವರು ಕಾಪಾಡಲು ಸಮರ್ಥರಾಗಿರುವಾಗ ನನ್ನಾಶ್ರಯವೇಕೆ ಅಪೇಕ್ಷಿಸುತ್ತಿರುವೆ ?
ವಾಗ್ರೇವಿ : (ನಿಟ್ಟಿಸಿರುಬಿಟ್ಟು) ವೇಂಕಟನಾಥ ! ನಿನ್ನ ಗುರುಗಳಾದ ಶ್ರೀಸುಧೀಂದ್ರತೀರ್ಥರಲ್ಲಿ ನಾನಿನ್ನು ಕೇವಲ ಎರಡು ವರ್ಷಗಳು ಮಾತ್ರ ವಾಸಿಸುವೆನು. ಅನಂತರ ಅನಾಥಳಾಗುತ್ತೇನೆ ! (ದರಹಾಸಬೀರಿ) ಕಂಡಕಂಡವರನ್ನು ಹುಡುಕಿಕೊಂಡು ಹೋಗಿ ಆಶ್ರಯಪಡೆಯುವುದಕ್ಕಿಂತ ಒಮ್ಮೆ ಕರಪಿಡಿದವರಲ್ಲೇ ಆಶ್ರಯ ಪಡೆಯುವುದು, ಬಾಳುವುದು ಗರತಿಯ ಲಕ್ಷಣವಲ್ಲವೇ ? ಹಿಂದೆ ನಾನು ಜಗದ್ವಿಖ್ಯಾತರಾದ ಶ್ರೀವ್ಯಾಸರಾಜಯತೀಂದ್ರರ ಕರಪಿಡಿದು ಅವರ ಆಶ್ರಯದಲ್ಲಿ ಜಗದ್ವಿಖ್ಯಾತಳಾಗಿ ಮೆರೆದಿದ್ದೆ! ವೇಂಕಟನಾಥ ! ನೀನು ಅವರ ತದ್ರೂಪನಾಗಿದ್ದೀಯೇ! ಅದೇ ಸುರಸೌಂದರ್ಯ, ಅದೇ ಮಂದಹಾಸರಂಜಿತವಾದ ಮುಖ! ಅದೇ ತೇಜಸ್ಸು ಸರ್ವವಿಧದಿಂದ ಆ ನನ್ನ ವ್ಯಾಸರಾಜರಂತೆಯೇ ಕಂಗೊಳಿಸುತ್ತಿರುವೆಯೆಂದೇ ನಿನ್ನನ್ನು ಅರಸಿ ಬಂದಿರುವೆನಪ್ಪ! ನನಗಾಶ್ರಯವೀಯಲಾರೆಯಾ ವತ್ಸ? ಜಗತ್ತಿನಲ್ಲಿ ಪಂಡಿತಮಂಡಲಿಯಲ್ಲಿ ನನ್ನ ಜೀವನಾಡಿಯಂತಿರುವ 'ಚಂದ್ರಿಕಾ' ಮತ್ತು 'ಶ್ರೀಮನ್ನಾ ಯಸುಧಾ' ಗ್ರಂಥಗಳಿಗೆ ವ್ಯಾಖ್ಯಾನ ಮಾಡಲು ಸಮರ್ಥರಾದ ಕುಶಲರು ನಿನ್ನನ್ನು ಬಿಟ್ಟು ಬೇರೊಬ್ಬರಿಲ್ಲ ! ಅಷ್ಟೇ ಅಲ್ಲ ! ಮುಂದೆ ಹುಟ್ಟುವವರಲ್ಲೂ ನಿನಗೆ ಸರಿಸಮಾನರಾಗುವವರು ಮತ್ಯಾರೂ ಇಲ್ಲ ಆದ್ದರಿಂದ ನನ್ನ ಜೀವನಾಡಿಯಂತಿರುವ 'ಚಂದ್ರಿಕಾ-ಸುಧಾ' ಗ್ರಂಥಗಳಿಗೆ ವ್ಯಾಖ್ಯಾನಮಾಡಿ ಸಲಹಬೇಕಪ್ಪ !!
ದೇವಿಯ ದರ್ಶನದಿಂದ ವೇಂಕಟನಾಥರು ತಾವು ಮಹಾಭಾಗ್ಯಶಾಲಿಗಳೆಂದು ಭಾವಿಸಿದರು. ಈಗ ವೀಣಾಪಾಣಿಯ ವಚನಾಮೃತಪಾನದಿಂದ ಅವರ ಮೈ ಪುಳಕಿಸಿತು. ನರನರಗಳಲ್ಲಿಯೂ ವಿದ್ಯುತ್ತಂಚಾರವಾದಂತಾಯಿತು. ಪರವಶರಾಗಿ “ದೇವಿ. ವಿದ್ಯಾಲಕ್ಷ್ಮಿ! ನನ್ನ ಆಶ್ರಯವರಸಿ ಬಂದ ನಿನಗೆ ಆಶ್ರಯವೀಯುವೆನಮ್ಮ ! ಗ್ರಹಸ್ಥಾಶ್ರಮಿಯಾದ ನಾನು ನಿನ್ನೆಲ್ಲ ಆಸೆಯನ್ನೂ ಪೂರೈಸಲು ಗ್ರಂಥರಚನೆಮಾಡಿ ಸೇವಿಸುತ್ತೇನೆ” ಎಂದರು.
ವಾಗ್ರೇವಿ : ವಿದ್ವತ್ಕುಲತಿಲಕ! ನೀನು ಗ್ರಹಸ್ಥಾಶ್ರಮಿಯಾಗಿದ್ದೇ ನನಗೆ ಆಶ್ರಯಕೊಡುವಂತಿಲ್ಲಪ್ಪ !
ವೇಂಕಟ : (ವಿಸ್ಮಿತರಾಗಿ) ಅದೇಕೆ ತಾಯಿ ?
ವಾಗ್ರೇವಿ : ಕೇಳು ವೇಂಕಟನಾಥ, ಚತುರ್ಯುಗಮೂರ್ತಿಯೂ, ಚತುರ್ವಿಧ ಪುರುಷಾರ್ಥ ಪ್ರದನೂ ಆದ ಶ್ರೀಮೂಲರಾಮಚಂದ್ರನು ಪೂಜೆಗೊಂಬಲ್ಲಿ ನಾನು ವಾಸಮಾಡಬೇಕೆಂದು ನನ್ನ ತಂದೆ ಶ್ರೀವೇದವ್ಯಾಸರು ಆಜ್ಞಾಪಿಸಿದ್ದಾರೆ ! ಶ್ರೀಮೂಲರಾಮನು ಪರಮಹಂಸರಿಂದಲೇ ಪೂಜೆಗೊಳ್ಳಬೇಕೆಂಬ ನಿಯಮವೂ ಇದೆಯಪ್ಪ, ನಾನು ಆ ಯತಿವರರಲ್ಲಿ ಸರ್ವದಾ ವಾಸಮಾಡುತ್ತೇನೆ, ಆದ್ದರಿಂದ ನೀನು ಮೊದಲು ಸನ್ಯಾಸಿಯಾಗಲೇಬೇಕು, ವೇಂಕಟನಾಥ! ನೀನು ಕರ್ಮಂದಿಯಾಗಿ ವೇದಾಂತವಿದ್ಯಾಸಾಮ್ರಾಜ್ಯಲಕ್ಷ್ಮಿಗೆ ಪ್ರಭುವಾಗು!
ವೇಂಕಟ : (ಸ್ವಗತ) ಸನ್ಯಾಸ, ಸನ್ಯಾಸ ! ಏನಾಶ್ಚರ್ಯ ? ಎಲ್ಲರೂ ಸನ್ಯಾಸಿಯಾಗೆಂದೇ ನನಗೆ ಉಪದೇಶಿಸುತ್ತಿರುವರಲ್ಲ (ಪ್ರಕಾಶವಾಗಿ ದೇವಿ! ಮೊದಲು ಶ್ರೀಮೂಲರಾಮ-ವೇದವ್ಯಾಸದೇವರು, ತರುವಾಯ ಶ್ರೀಶ್ರೀಮದಾಚಾರರು, ಮತ್ತೆ ಶ್ರೀವಿಜಯೀಂದ್ರಗುರುಗಳು ಸ್ವಪ್ನದಲ್ಲಿ ನನಗೆ ಸನ್ಯಾಸ ಕೊಡಲು ಶ್ರೀಸುಧೀಂದ್ರರಿಗೆ ಆದೇಶ ನೀಡಿದರಂತೆ! ಈಗ ನೋಡಿದರೆ ಸಾಕ್ಷಾತ್ ವಾಗ್ಗೇವಿಯಾದ ನೀನೂ ದರ್ಶನವಿತ್ತು ಪರಮಹಂಸನಾಗೆಂದು ಉಪದೇಶಿಸುತ್ತಿದ್ದೀಯ! ನೀವೆಲ್ಲರೂ ಸೇರಿ ಏಕೆ ನನ್ನನ್ನು ಸನ್ಯಾಸಿಯಾನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಿರಿ ?
ವಾಗ್ದವಿ : (ಕಿಲಕಿಲನೆ ನಕ್ಕು ಏಕೆಂದರೆ-ನೀನು ಜನಿಸಿರುವುದೇ ಸನ್ಯಾಸಿಯಾಗಲು, ಕುಮಾರ !
ವೇಂಕಟ : (ಅಚ್ಚರಿಯಿಂದ) ಹಾಗೆಂದರೇನಮ್ಮ ?
ವಾಗ್ದವಿ : ಕುಮಾರ ! ನೀನ್ಯಾರೆಂದು ಮರೆತಿರುವೆ. ಶ್ರೀಹರಿಯ ಮಾಯೆಯೆಂಬ ಮರೆವಿನ ಮಂಜಿನಮುಸುಕು ನಿನಗೆ ಕವಿದಿದೆ. ಅದೀಗ ಅಪಸರಣವಾಗುವಕಾಲ ಸನ್ನಿಹಿತವಾಗಿದೆ. ನಿನ್ನ ಮೋಹ ಮರವುಗಳನ್ನು ಕಳೆಯಲೆಂದೇ ನಾನು ಬಂದಿರುವೆ. ಹಿಂದೆ ನೀನು ನಾನು ಎಲ್ಲವನ್ನೂ ಮರೆತು ಕುಳಿತಾಗ ನನ್ನನ್ನು ಎಚ್ಚರಿಸಬೇಕು' ಎಂದು ನನ್ನನ್ನು ಪ್ರಾರ್ಥಿಸಿದ್ದೆ. ವೆಂಕಟನಾಥ! ಎದ್ದೇಳು ! ನೀನಾರೆಂಬುದನ್ನರಿತು ಕರ್ತವ್ಯಪರನಾಗು !
ಹೀಗೆ ಸರಸ್ವತೀದೇವಿಯು ಹೇಳುತ್ತಿರುವಂತೆಯೇ ದೇವಿಯ ಅಭಯಹಸ್ತದಿಂದ ಒಂದು ಮಿಂಚಿನಬಳ್ಳಿಯಂತಹ ಬೆಳಕು ಹೊರಟು ವೇಂಕಟನಾಥರ ಹೃದಯವನ್ನು ಪ್ರವೇಶಿಸಿತು ! ಆಚಾರರ ಶರೀರದಲ್ಲಿ ವಿದ್ಯುತ್ತೂರ್ಣವಾದ ಆವುದೋ ಒಂದು ಮಹಾಶಕ್ತಿಯು ಪ್ರವಹಿಸಿದಂತಾಯಿತು ! ಆಚಾರರು ಕಣ್ಣುಮುಚ್ಚಿ ಧ್ಯಾನಾಸಕ್ತರಾದರು.
ಆಶ್ಚರ್ಯ! ಆಚಾರರಿಗೆ ಮನಃಪಟಲದಲ್ಲಿ ಸ್ವರೂಪದರ್ಶನವಾಯಿತು! ಅವರ ಮನದಲ್ಲಿ ಕವಿದಿದ್ದ ಕತ್ತಲು ಮೆಲ್ಲಮೆಲ್ಲನೆ ಸರಿದು ದಿವ್ಯಪ್ರಕಾಶ ರಂಜಿಸಿತು, ಆ ದಿವ್ಯ ಬೆಳಕಿನ ಕಾಂತಿಯಲ್ಲಿ ಆಚಾರರಿಗೆ ತಾವು ಸತ್ಯಲೋಕದಲ್ಲಿ ಬ್ರಹ್ಮ-ವಾಣಿಯರಿಗೆ ಪ್ರೀತ್ಯಾಸ್ಪದರಾಗಿದ್ದ ಮೂಲರೂಪದ ಶಂಕುಕರ್ಣರೆಂಬ ಅರಿವಾಯಿತು. ಆನಂತರ ಬ್ರಹ್ಮದೇವರ ಶಾಪ, ಪ್ರಹ್ಲಾದಾವತಾರ, ನಾರದರ ಉಪದೇಶ, ಹರಿಭಕ್ತಿ, ತಂದೆ ಮಕ್ಕಳಲ್ಲಿ ಸೆಣೆಸಾಟ, ತಂದೆ ನೀಡಿದ ಹಿಂಸೆ, ಶ್ರೀನರಹರಿಯ ಪ್ರಾದುರ್ಭಾವ, ದೈತ್ಯ ಸಂಹಾರ, ತಾವು ಮಾಡಿದ ಸ್ತುತಿ, ಭಗವಂತನ ವಾತ್ಸಲ್ಯ ವರಪ್ರಸಾದ, ಮುಂತಾದ ವಿಚಾರಗಳೂ ದ್ವಾಪರದಲ್ಲಿ ಬಾಹ್ಲಿಕನಾಗಿ ಶ್ರೀಕೃಷ್ಣಸೇವಾರತರಾಗಿ ಕುರುಕ್ಷೇತ್ರ ಯುದ್ಧದಲ್ಲಿ ಭೀಮಸೇನದೇವರ ಗದಾಪ್ರಹಾರದಿಂದ ಮರಣ, ಅಕಾಲದಲ್ಲಿ ಕಲಿಯುಗದಲ್ಲಿ ಶ್ರೀಮಧ್ವರಾಗಿ ಅವತರಿಸುವ ಶ್ರೀವಾಯುದೇವರ ಸೇವೆಮಾಡಲು ಭೀಮಸೇನನಿಂದ ವರಪ್ರಾಪ್ತಿ, ಕಲಿಯುಗದಲ್ಲಿ ಶ್ರೀವ್ಯಾಸತೀರ್ಥರಾಗಿ ಅವತರಿಸಿ, ನಾಡು ನುಡಿ, ತತ್ವಶಾಸ್ತ್ರ ಹರಿದಾಸ ಸಾಹಿತ್ಯಗಳಿಗೆ ಮಾಡಿದ ಅಪಾರ ಉಪಕಾರ, ದೈತಸಿದ್ಧಾಂತದ ಸ್ಥಾಪಕಗಳಾದ ಅಸಾಧರಣ ಗ್ರಂಥಗಳ ರಚನೆ, ಜಗನ್ಮಾನ್ಯತೆ, ಮತ್ತೆ ಈಗ ತಂದೆ ತಾಯಿಗಳ ತಪಸ್ಸಿನಿಂದ ಸುಪ್ರೀತನಾದ ಶ್ರೀವೆಂಕಟೇಶನ ಅನುಗ್ರಹದಿಂದ ದೈತಸಿದ್ಧಾಂತ ಸ್ಥಾಪನೆ ಜಗತ್ತಿನ ಜನತೆಯ ಉದ್ಧಾರ, ಲೋಕ ಕಲ್ಯಾಣಾದಿ ಅಸಾಧಾರಣ ಕಾರನಿರ್ವಹಣೆಗಳಿಗಾಗಿ ಶ್ರೀಹರಿಯ ವಿಶೇಷ ವರದಿಂದ ಅವತರಿಸಿರುವುದೇ ಮೊದಲಾದ ವಿಚಾರಗಳೆಲ್ಲವೂ ಒಂದಾದ ಮೇಲೊಂದರಂತೆ ಆಚಾರರ ಮನಃಪಟಲದಲ್ಲಿ ಪ್ರತಿಬಿಂಬಿಸಿದವು !
ವೇಂಕಟನಾಥರು ಕರೆದರು, ಶ್ರೀಸರಸ್ವತಿದೇವಿ ನಸುನಕ್ಕಳು, ಸ್ವರೂಪದರ್ಶನವಾದ ಕೂಡಲೇ ಆಚಾರ್ಯರಲ್ಲಿ ಹುದಗಿದ್ದ ಎಲ್ಲ-ಮೋಹಗಳೂ ನಷ್ಟವಾದವು. ಮನಸ್ಸು ಸ್ಥಿರವಾಯಿತು. ಅವತಾರ ಪ್ರಜ್ಞೆ ಪ್ರಜ್ವಲಿಸಿತು. ಅವರ ಕಣ್ಣುಗಳಿಂದ ಆನಂದಾಶ್ರು ಹರಿಯತೊಡಗಿತು. ಕರ್ತವ್ಯದ ಅರಿವಾಯಿತು! ವಿದ್ಯಾದೇವಿಗೆ ಸಾಷ್ಟಾಂಗವೆರಗಿ “ದೇವಿ! ಅನುಗೃಹೀತನಾದೆ ! ನಿನ್ನ ದಯದಿಂದ ನನ್ನ ಸಂದೇಹಗಳೆಲ್ಲವೂ ಪರಿಹಾರವಾದವು, ನಿನ್ನ ಅಣತಿಯಂತೆ ನಡೆಯಲು ಸಿದ್ಧನಾಗಿದ್ದೇನೆ” ಎಂದು ವಿಜ್ಞಾಪಿಸಿದರು.
ವಾಗ್ರೇವಿ : (ಮಂದಹಾಸ ಬೀರಿ) ಅಂತೂ ನಿನ್ನ ಮನಸ್ಸು ಬದಲಿಸಿ, ಕರ್ತವ್ಯಪರನಾಗುವಂತೆ ಮಾಡಲು ನಾನೇ ಬರುವಂತೆ ಮಾಡಿದೆಯಲ್ಲ! ವತ್ತ, ನೀನು ತುರಾಶ್ರಮವನ್ನು ಸ್ವೀಕರಿಸಲು ಒಪ್ಪಿದ್ದೀಯೆ, ಒಂದು ವೇಳೆ ನೀನೊಪ್ಪದೇ,
ಪರಮಹಂಸನಾಗದೇ ಇದ್ದರೆ ಎಂಥ ಅನರ್ಥವಾಗುವುದು ಬಲ್ಲೆಯಾ?
ವೇಂಕಟ : ಹೇಳು ತಾಯಿ.
ವಾಗ್ಗೇವಿ : ಆಚಾರ! ನೀನು ಸನ್ಯಾಸಿಯಾಗದಿದ್ದರೆ ಲೋಕದಲ್ಲಿ ವೇದವಿಮರ್ಶಾ ಸಹಿತವಾದ ವೇದಾಂತಶಾಸ್ತ್ರವೂ, ಅನಾದವನ್ನ ಪರಂಪರಾಪ್ರಾಪ್ತ ವೈದಿಕ ಸದೈಷ್ಣವ ಸಿದ್ಧಾಂತವೂ ಹೇಳಹೆಸರಿಲ್ಲದಂತಾಗುವುದು. ವೇದಾಂತಗ್ರಂಥಗಳು ನಷ್ಟಸೂತ್ರವುಳ್ಳದ್ದಾಗಿ ಮೂಷಕಗಳಿಗಾಹಾರವಾಗಿ ಮಾಯಾವಾದಿಗಳು ಹೇಳುವ ನಿರ್ಗುಣ ಬ್ರಹ್ಮನಂತಾಗುವವು! ಮೀಮಾಂಸಶಾಸ್ತ್ರದಲ್ಲಿಯೇ ವಿಮರ್ಶೆ ನಡೆದು, ಕರ್ಮನಿರ್ಣಯವಾಗಬೇಕಾಗುವುದು. ಬ್ರಹ್ಮಸೂತ್ರ, ನ್ಯಾಯಸುಧಾದಿ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ವೈಯಾಕರಣಿಗಳೇ ಮಾಡಬೇಕಾಗುವುದು. ಈವರೆಗೆ ಶ್ರೀಪಾದರಾಜ, ವ್ಯಾಸರಾಜ, ವಿಜಯೀಂದ್ರ, ವಾದಿರಾಜ, ಸುಧೀಂದ್ರತೀರ್ಥರುಗಳು ರಾಜಾಧಿರಾಜರ ಸಭೆಗಳಲ್ಲಿ ಶ್ರೀವಿಷ್ಣುಸರ್ವೋತ್ತಮತ್ವ ಸಿದ್ಧಾಂತವನ್ನು ಸ್ಥಾಪಿಸಿ ಶ್ರೀಹರಿತತ್ವ ಕಥಾ ಪ್ರವಚನವನ್ನು ನಡೆಸಿಕೊಂಡು ಬಂದಿದ್ದಾರೆ. ನೀನು ತುರಾಶ್ರಮಿಯಾಗಿ ಆ ಕಾರ ಮಾಡದಿದ್ದರೆ-ಮುಂದೆ ರಾಜಸಭೆಗಳಲ್ಲಿ ಶಕ್ತಿ, ಸೂರ, ಸುಬ್ರಹ್ಮಣ್ಯ, ವಿನಾಯಕ, ಇಂದ್ರ ಮತ್ತು ರುದ್ರದೇವರ ಸರ್ವೋತ್ತಮತ್ವ ಪ್ರತಿಪಾದನೆಯೇ ನೆರವೇರುವಂತಾಗುವುದು. ಇದಕ್ಕಿಂತ ದುಃಖಾಸ್ಪದ ವಿಚಾರ ಬೇರಾವುದಿದೆ ? ಈಗ ಎಲ್ಲೆಡೆ ಮಠ ಮಂದಿರಗಳು ವೇದಘೋಷಗಳಿಂದ ಶೋಭಿಸುತ್ತಿವೆ. ಮುಂದೆ ಆ ಮಠಮಂದಿರಗಳು ನರಿಗಳ ಕಾರಾಗಾರವಾಗುವವು. ಪರಿಶುದ್ಧ ಪಾಠಗಳಿಂದ ಶೋಭಿಸುವ ವೇದಾಂತ ಗ್ರಂಥಗಳು ಅಸ್ತವ್ಯಸ್ತಪತ್ರಗಳಾಗಿ ಕ್ರಿಮಿಕೀಟಗಳಿಂದ ನುಸಿಹಿಡಿದು ನಾಶವಾಗುವವು. ಆಚಾರ, ನೀನು ಯತಿಯಾಗದಿದ್ದರೆ, ಈವರೆಗೆ ಕರ್ಮಶೀಲರೂ, ಆಚಾರರೂ ಆದ ಗುರುಗಳ ಮಠಗಳಲ್ಲಿರುವ ವೇದಿಕೆಗಳು ಜನಸಂಚಾರರಹಿತವಾಗಿ ಪಕ್ಷಿಗಳ ಆವಾಸಸ್ಥಾನವಾಗಿ ಅವುಗಳ ಕಿರುಚಾಟವೇ ಸತ್ಯತ್ವ-ಮಿಥ್ಯಾತ್ವ ವಿಚಾರವಾದವೆಂದು ತಿಳಿಯಬೇಕಾಗಿಬರುವುದು. ಗುರುಗಳು ಅರ್ಚಿಸುವ ದೇವತಾಮಂದಿರಗಳು ಈಗ ದೀಪಗಳ ಜ್ವಾಲೆಯಿಂದ ಬೆಳಗುತ್ತಿವೆ, ಮುಂದೆ ಅವು ಗೂಬೆಗಳ ವಾಸಸ್ಥಾನವಾಗಿ ಸೂರಪ್ರಕಾಶರಹಿತವಾಗಿ ಪಂಡಿತರ ದರ್ಶನಕ್ಕೆ ಅನರ್ಹವಾಗುವವು. ಈಗ ಗುರುಗಳ ಪೂಜಾಮಂದಿರಗಳು ದಶಾಂಗಧೂಪಗಳಿಂದ, ಬೆಳಗುವ ದೀಪಗಳ ಕಾಂತಿಯಿಂದ ಶೋಭಿಸುತ್ತಿವೆ. ನೀನು ಸನ್ಯಾಸಿಯಾಗಿ ಅವುಗಳನ್ನು ಮುಂದುವರೆಸಿಕೊಂಡು ಹೋಗದಿದ್ದರೆ ಅದು ಅಗ್ನಿಮುಖ (ಕೊಳ್ಳಿದೆವ್ವ)ಗಳ ದೀಪದಿಂದಲೇ ಪ್ರಕಾಶಿಸಬೇಕಾಗುವುದು ! ಈಗ ದೇವ ಮಂದಿರದ ವಿತಾನಗಳಲ್ಲಿ ಕಟ್ಟಿರುವ ಕೇತಕೀಕುಸುಮಗಳ ಧೂಳೀವೃಂದದಿಂದ ಬೆಳ್ಳಗೆ ಪ್ರಕಾಶಿಸುವ ಆ ಮಂದಿರಗಳು ಮುಂದೆ ಬೀದಿಯ ಕರಿಯ-ಕೆಂಧೂಳುಗಳಿಂದ ತುಂಬಿ ಶೋಚನೀಯ ಸ್ಥಿತಿಗಿಳಿಯಬೇಕಾಗುವುದು.
ವೇಂಕಟನಾಥ ! ನೀನು ಪರಮಹಂಸನಾದರೆ ನನಗಾಗುವಷ್ಟು ಸಂತೋಷ, ನೀನು ಗೃಹಸ್ಥಾಶ್ರಮಿಯಾಗಿದ್ದಲ್ಲಿ ಉಂಟಾಗುವುದಿಲ್ಲ! ಆದ್ದರಿಂದ ನೀನು ತುರಾಶ್ರಮ ಸ್ವೀಕರಿಸಿ ಬರಲಿರುವ ಈ ಎಲ್ಲ ಅನರ್ಥಗಳನ್ನೂ ತಪ್ಪಿಸಿ ತತ್ವಜ್ಞಾನಪ್ರಸಾರ, ದೇವತಾರ್ಚನ, ಗ್ರಂಥರಚನೆ, ಲೋಕಕಲ್ಯಾಣಾದಿ ಮಹತ್ಕಾರ ಮಾಡುತ್ತಾಕೀರ್ತಿಶಾಲಿಯಾಗಿ ಬಾಳು, ವತ್ಸ, ವೆಂಕಟನಾಥ! ನೀನು ಪರಮಹಂಸಾಶ್ರಮವನ್ನು ಸ್ವೀಕರಿಸಿ, ಮಾಡಬೇಕಾದ ಕಾರಗಳು ಅಗಾಧವಾಗಿವೆ. ನಿನ್ನಿಂದ ಜಗತ್ತಿನ ಜನತೆಯ ಸರ್ವಾಂಗೀಣ ಉನ್ನತಿಯಾಗಬೇಕಾಗಿದೆ. ವೈಷ್ಣವ ಸಿದ್ಧಾಂತವು ನಿಷ್ಕಂಟಕವಾಗಿ ಆಚಂದ್ರಾರ್ಕಸ್ಥಾಯಿಯಾಗಿ ನೆಲೆಗೊಳ್ಳಬೇಕಾಗಿದೆ. ಅದಕ್ಕಾಗಿ ಅಸಾಧಾರಣಗಳಾದ ವಿದ್ದತ್ತೂರ್ಣ ಗ್ರಂಥಗಳ ರಚನೆಯಾಗಬೇಕಾಗಿದೆ. ನೀನು ವೇದಗಳಿಗೆ ದೈತಸಿದ್ಧಾಂತಪರವಾದ ಭಾಷ್ಯಗಳನ್ನು ರಚಿಸಬೇಕು. ಚಂದ್ರಿಕಾ, ತರ್ಕತಾಂಡವ, ನ್ಯಾಯಸುಧಾದಿ ಗ್ರಂಥಗಳಿಗೆ ಜಗನ್ಮಾನ್ಯ ವ್ಯಾಖ್ಯಾನಗಳನ್ನು ರಚಿಸಬೇಕಾಗಿದೆ. ಅದರಂತೆ ಶ್ರೀಮದಾಚಾರ್ಯರ ಭಾಷ್ಯ-ಟೀಕೆಗಳಿಗೂ, ಇತರ ವೈದಿಕ ವಾಹ್ಮಯಗಳಿಗೂ ವಿವರಣಾತ್ಮಕ ಪ್ರಬಂಧಗಳನ್ನು ರಚಿಸಿ ಸಿದ್ಧಾಂತವನ್ನು ಪೋಷಿಸಬೇಕಾಗಿದೆ. ಈ ಎಲ್ಲ ಕಾರಮಾಡಲು ನಿನ್ನ ವಿನಃ ಸಮರ್ಥರು ಬೇರಾರೂ ಇಲ್ಲ, ಮುಂದೂ ಹುಟ್ಟಲಾರರು. ಆದ್ದರಿಂದ ನೀನು ಸದ್ಬಂಥ ರಚನೆಮಾಡಿ ವೇದಾಂತವಿದ್ಯಾಲಕ್ಷ್ಮಿಯಾದ ನನ್ನನ್ನು ಸಂರಕ್ಷಿಸದಿದ್ದರೆ ಸರ್ವಸ್ವವೂ ನಷ್ಟವಾಗುವುದು.
ಇಷ್ಟು ಮಾತ್ರವಲ್ಲ: ಕೇಳು ಕುಮಾರ! ಈವರೆಗೂ ಶ್ರೀಹಂಸನಾಮಕ ಪರಮಾತ್ಮನ ಜ್ಞಾನಪರಂಪರೆ, ತತ್ವ-ಧರ್ಮ- ಸಂಸ ತಿಗಳನ್ನು ಶ್ರೀಮದಾಚಾರರಿಂದ ಆರಂಭಿಸಿ ನಿನ್ನ ಗುರು ಶ್ರೀಸುಧೀಂದ್ರರವರೆಗಿನ ಜ್ಞಾನಿಗಳು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಶತಶತಮಾನಗಳ ನಂತರದ ಈ ಭಾರತದ ಶೋಚನೀಯಸ್ಥಿತಿಯನ್ನು ನೆನೆದರೆ ನನ್ನ ಹೃದಯ ಕಂಪಿಸುವುದು. ಬರಬರುತ್ತಾ ಜ್ಞಾನದಮಟ್ಟ ಇಳಿದು ಮತ್ತೊಮ್ಮೆ ಬೇರೆ ರೂಪಗಳಿಂದ ಚಾರ್ವಾಕ, ಬೌದ್ಧ, ಜೈನಾದಿ ನಾಸ್ತಿಕರು ತಲೆಯೆತ್ತಿ ಭಾರತದ ಭವ್ಯವೈದಿಕ ಪರಂಪರೆಯ ಅಸ್ತಿಭಾರವನ್ನೇ ಅಲುಗಾಡಿಸುವರು. ಜನರು ಸ್ವಾರ್ಥಿಗಳಾಗಿ, ಪರಸ್ಪರ ದ್ವೇಷಾಸೂಯೆಗಳಿಂದ ಮದಿಸಿ ಉದರಂಭರಣವೇ ಜೀವಿತದ ಗುರಿಯೆಂದು ಭ್ರಮಿಸಿ, ಅದರಲ್ಲೇ ತೊಳಲುತ್ತಾ, ದೇವರು ಧರ್ಮಾದಿ ಅತೀಂದ್ರಿಯ ವಸ್ತುಗಳಲ್ಲಿನ ನಂಬಿಕೆ ಮಾಯವಾಗಿ ಎಲ್ಲೆಡೆ ಅನಾಚಾರ, ಅತ್ಯಾಚಾರ, ಅಧರ್ಮ, ಅನ್ಯಾಯಗಳೇ ತಾಂಡವಿಸುವಂತಾಗುವುದು. ಅಂಥ ದುಃಸ್ಥಿತಿಯಲ್ಲೂ ಜನತೆಯನ್ನು ಸನ್ಮಾರ್ಗದತ್ತ ನಡೆಸುವ ಹೊಣೆಹೊತ್ತು ನೀನು ಭಾರತೀಯರನ್ನು ಸಲಹಬೇಕಾಗುವುದು. ವೇಂಕಟನಾಥ ! ನೀನು ಅಗಾಧಮಹಿಮಾಪ್ರದರ್ಶನದಿಂದ ಭಗವಂತನ, ಧರ್ಮಾದಿ ಅತೀಂದ್ರಿಯ ವಸ್ತುಗಳ ಅಸ್ತಿತ್ವವನ್ನು ಸ್ಥಾಪಿಸಿ, ಭಾರತೀಯ ತತ್ವ, ಧರ್ಮ ಸಂಸ ತಿಗಳ ರಕ್ಷಣೆಮಾಡಿ ನಮ್ಮ ಭವ್ಯಪರಂಪರೆಯನ್ನು ಬೆಳಗಿಸಬೇಕಪ್ಪ ! ಉದಾರದ ದಾರಿಗಾಣದೆ ಬಳಲುವ ಜನರನ್ನು ಉದ್ಧರಿಸಿ, ಶಾಂತಿ ಸಮಾಧಾನಗಳನ್ನಿತ್ತು ಇಷ್ಟಾರ್ಥಪ್ರದಾನಪೂರ್ವಕವಾಗಿ ಎಲ್ಲ ಸಜ್ಜನರಿಗೂ ಸನ್ಮಂಗಳಗಳನ್ನು ಕರುಣಿಸಬೇಕಾಗಿದೆ, ಹೆಚ್ಚೇನು ಕುಮಾರ ! ಮನುಕುಲವಸರ್ವಾಂಗೀಣ ಅಭ್ಯುದಯ ಕಲ್ಯಾಣ ನಿನ್ನಿಂದಲೇ ನೆರವೇರಬೇಕಾಗಿದೆ, ಅದಕ್ಕಾಗಿಯೇ ನೀನು ಅವತರಿಸಿದ್ದೀಯೇ! ವೆಂಕಟನಾಥ, ಸನ್ಯಾಸಿಯಾಗುವುದು ನಿನ್ನ ಹಣೆಯಲ್ಲಿ ಬರೆದಿದೆ. ಅದರಂತೆ ನಿನ್ನ ಆಶ್ರಯದಲ್ಲಿ ನಿನಗೆ ವಶಳಾಗಿರುವುದು ನನ್ನ ಹಣೆಯಲ್ಲಿ ಬರೆದಿದೆ! ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ375 ಕುಮಾರ! ಶ್ರೀಹರಿಯ ಭಕ್ತಾಗ್ರಣಿಯೂ, ಜ್ಞಾನಿಯೂ, ವಿಶ್ವಬಂಧುವೂ ಆದ ನೀನು ತಡಮಾಡದೆ ಪರಮಹಂಸಾಶ್ರಮಿಯಾಗಿ ವಿದ್ಯಾಸಾಮ್ರಾಜ್ಯಲಕ್ಷ್ಮಿಗೆ ಒಡೆಯನಾಗು!
ಶ್ರೀಸರಸ್ವತಿದೇವಿಯ ಉಪದೇಶದಿಂದ ಪುಲಕಿತಾಂತಃಕರಣರಾದ ವೆಂಕಟನಾಥರು “ದೇವಿ! ನಿನ್ನ ಅಪ್ಪಣೆಯಂತೆ ವರ್ತಿಸುತ್ತೇನೆ. ಆದರೆ ನನಗೊಂದು ಸಂದೇಹವಿದೆಯಮ್ಮ” ಎಂದರು. ವಾಗ್ಗೇವಿಯು ನಕ್ಕು, “ಅದೇನು ನಿನ್ನ ಸಂದೇಹ?” ಎಂದು ಪ್ರಶ್ನಿಸಿದಳು.
ವೇಂಕಟ : (ನಕ್ಕು) ನಿನ್ನ ಕಾರ್ಯಸಾಧನೆಗಾಗಿ ನನ್ನನ್ನು ಸನ್ಯಾಸಿಯನ್ನಾಗಿ ಮಾಡಲು, 'ಸನ್ಯಾಸಿಯಾಗುವುದು ನಿನ್ನ ಹಣೆಯಲ್ಲಿ ಬರೆದಿದೆ, ನಿನ್ನ ವಶದಲ್ಲಿರುವುದು ನನ್ನ ಹಣೆಯಲ್ಲಿ ಬರೆದಿದೆ' ಎಂದು ಹೇಳುತ್ತಿರುವೆ, ನಿನ್ನ ಮಾತು ನಂಬಿ ಸನ್ಯಾಸಿಯಾದ ಮೇಲೆ ನೀನು ಬೇರೊಬ್ಬರಲ್ಲಿ ಆಸಕ್ತಳಾಗಿ ಅವರಲ್ಲಿ ಆಶ್ರಯವನ್ನರಸಿ, ನನ್ನ ಕೈಬಿಟ್ಟರೆ ಗತಿಯೇನು ತಾಯಿ?
ವಾಗ್ಲೆವಿ : ವೇಂಕಟನಾಥ, ನೀನು ಬಲು ಚಾಣಾಕ್ಷ! ನನ್ನಿಂದ ಪ್ರತಿಜ್ಞೆ ಮಾಡಿಸಬೇಕೆಂದಲ್ಲವೇ, ಇಂತು ನುಡಿಯುತ್ತಿದಿಯೇ ? ಆಗಲಿ, ಕೇಳು, ವತ್ಸ! ಆಶ್ರಯ ಪಡೆದು ನಿನ್ನಲ್ಲಿ ನೆಲೆಸಿ ನಿನ್ನ ವಶಳಾದ ಮೇಲೆ ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆ! ಮತ್ತು ಸ್ವಪ್ನದಲ್ಲಿಯೂ ಬೇರೊಬ್ಬ ಸನ್ಯಾಸಿಗಳನ್ನು ನೆನಸುವುದೂ ಇಲ್ಲ! ಈಗ ಸಂತೋಷವಾಯಿತೆ ?
ವೇಂಕಟನಾಥರು “ಪರಮಾನಂದವಾಯಿತು, ಜನನೀ! ಧನ್ಯನಾದೆ. ನಿನ್ನಾಣತಿಯಂತೆ ನಡೆಯುತ್ತೇನೆ” ಎಂದು ಬಿನ್ನವಿಸಿ ದೇವಿಗೆ ಸಾಷ್ಟಾಂಗವೆರಗಿದರು. ಶ್ರೀಸರಸ್ವತಿದೇವಿಯು ಪುತ್ರವಾತ್ಸಲ್ಯದಿಂದ ವೆಂಕಟನಾಥನನ್ನೆಬ್ಬಿಸಿ, ಪಂಡಿತಾಗ್ರಣಿ! ವತ್ಸ, ನಾನು ಸರ್ವದಾ ನಿನ್ನಲ್ಲಿ ನೆಲೆಸಿ ನಿನಗೆ ಅಸಾಧಾರಣ ವಿಜಯಕೀರ್ತಿಯನ್ನಿತ್ತು ಸಲಹುವೆನು! ನಿನಗೆ ಮಂಗಳವಾಗಲಿ” ಎಂದು ಹೇಳಿ ವೇಂಕಟನಾಥರಿಗೆ ತನ್ನ ಮಂತ್ರವನ್ನು ಉಪದೇಶಮಾಡಿ ಆಶೀರ್ವದಿಸಿ ನೋಡುತ್ತಿರುವಂತೆಯೇ ವಿದ್ಯಾದೇವಿಯು ಅದೃಶ್ಯಳಾದಳು!
ವಿದ್ಯಾಭಿಮಾನಿನಿಯಾದ ಸಾಕ್ಷಾತ್ ಸರಸ್ವತಿದೇವಿಯ ಪ್ರತ್ಯಕ್ಷದರ್ಶನ-ಉಪದೇಶಾದಿಗಳಿಂದ ರೋಮಾಂಚಿತರಾದ ಆಚಾರ್ಯರ ಆವರೆಗಿನ ಮನೋದೌರ್ಬಲ್ಯ ಮಾಯವಾಗಿ, ಕತ್ತಲುಕಳೆದು, ದಿವ್ಯಪ್ರಕಾಶದ ಹೊಂಬೆಳಕಿನಲ್ಲಿ ಮುಂದಿನ ಮಾರ್ಗ ಗೋಚರಿಸಿತು. ಆನಂದಬಾಷ್ಪ ಸುರಿಸುತ್ತಾ ವೆಂಕಟನಾಥರು “ದೇವಿ, ಅನುಗೃಹೀತನಾದೆ, ನಿನ್ನಾಜ್ಞೆಯಂತೆ ವರ್ತಿಸುತ್ತೇನೆ” ಎಂದು ಮತ್ತೊಮ್ಮೆ ಮನದಲ್ಲೇ ವಿಜ್ಞಾಪಿಸಿದರು. ಇಷ್ಟಾಗುವುದರೊಳಗಾಗಿ ಅರುಣೋದಯವಾಯಿತು. ಭಾರತದ ಭಾಗ್ಯರವಿ ಇನ್ನೇನು ಉದಯಿಸಲಿರುವನೆಂದು ತಿಳಿಸಲೋ ಎಂಬಂತೆ ಭಗವಾನ್ ದಿನಮಣಿಯ ಹೊಂಗಿರಣಗಳು ಜಗತ್ತಿನಮೇಲೆ ಬಿದ್ದು ಸರ್ವರಿಗೂ ಆನಂದವನ್ನು ತಂದೀಯಿತು!
ಆಚಾರ್ಯರು ಮಂಚದಿಂದಿಳಿದು ಹೊರಟರು. ಸ್ವಾಭಾವಿಕವಾಗಿ ಅವರ ದೃಷ್ಟಿ ಸರಸ್ವತಮ್ಮನವರು ಹರಿಯಿತು. ಪಾಪ, ಮೈಮರೆತು ಮಲಗಿದ್ದಾರೆ. ಪತ್ನಿಯ ಮುಖವನ್ನು ನೋಡಿ ಆಚಾರ್ಯರ ಹೃದಯ ಕರಗಿ ನೀರಾಯಿತು. ಆಕೆಯ ಭವಿಷ್ಯವನ್ನು ನೆನೆದು ಅಪಾರಕಾರುಣ್ಯವುಂಟಾಯಿತು. ಮನದಲ್ಲಿಯೇ “ಭಗವತ್ಸಂಕಲ್ಪ ವಾಗೇವಿಯ ಆಜ್ಞೆ ಕರ್ತವ್ಯದ ಕರೆಗಳಿಂದಾಗಿ, ಜಗತ್ತಿನ ಕಲ್ಯಾಣಕ್ಕಾಗಿ ನಿನ್ನ ತ್ಯಾಗ ಅನಿವಾರ್ಯವಾಗಿದೆ! ಕ್ಷಮಿಸು-ಸರಸ್ವತಿ!” ಎಂದುಕೊಂಡು ಹೊರನಡೆದರು. ಸ್ನಾನ-ಸಂಧ್ಯಾದಿ(ದೇವತಾರ್ಚನಾದಿ)ಗಳಲ್ಲಿ ಮಗ್ನರಾದರು. ಸರಸ್ವತಮ್ಮ ಇದಕ್ಕಿದ್ದಂತೆ ಎಚ್ಚರಗೊಂಡರು. ಮಂಚದಕಡೆ ದೃಷ್ಟಿಹರಿಸಿದರು. ಪತಿಗಳು ಶಯ್ಕೆಯಲ್ಲಿಲ್ಲ. ದಡಬಡಿಸಿ ಮೇಲೆದ್ದರು. “ಪತಿದೇವರಾಗಲೇ ಎದ್ದು ಬಿಟ್ಟಿದ್ದಾರೆ. ಪ್ರತಿ ದಿನ ಅವರೇಳುವ ಮೊದಲೇ ಎಚ್ಚರಗೊಳ್ಳುತ್ತಿದ್ದ ನನಗೆ ಇಂದು ಹೀಗೇಕಾಯಿತು? ಎಂತಹ ಅಪರಾಧವಾಯಿತು!” ಎಂದು ನೊಂದು, ಮೈತೊಳೆದು ಮಡಿಯುಟ್ಟು ದೇವಗೃಹದತ್ತ ಬಂದರು. ಆಚಾರರು ಆಕವನ್ನು ಮುಗಿಸಿ ದೇವರಿಗೆ ನಮಿಸಿ ಹೊರಬಂದರು. ಸರಸ್ವತಮ್ಮ ಪತಿಗೆ ನಮಿಸಿ “ಸ್ವಾಮಿ, ಇಂದು ತಿಳಿಯದಲೇ ನಿದ್ರೆಯಲ್ಲಿ ಮೈಮರೆತು ಅಪರಾಧಮಾಡಿದ್ದೇನೆ. ಕ್ಷಮಿಸಿ” ಎಂದು ಪ್ರಾರ್ಥಿಸಿದರು. ವೆಂಕಟನಾಥರು ಮಂದಹಾಸಬೀರಿ “ಸರಸ್ವತಿ, ಒಂದು ದಿನ ತಡವಾಗಿ ಎಚ್ಚರವಾಯಿತೆಂದು ಏಕಿಂತು ಕಳವಳಪಡುವೆ? ನಾನು ಶ್ರೀಮಠಕ್ಕೆ ಹೋಗಿಬರುತ್ತೇನೆ” ಎಂದು ಹೇಳಿ ಹೊರಟರು. ಇಂದು ಹಿಂದಿನ ದಿನದ ದುಗುಡವನ್ನು ಪತಿಯ ಮುಖದಲ್ಲಿ ಕಾಣದೆ ಸರಸ್ವತಮ್ಮ ಸಮಾಧಾನದ ನಿಟ್ಟುಸಿರುಬಿಟ್ಟು ಮನೆಗೆಲಸದಲ್ಲಿ ತಲ್ಲೀನರಾದರು.
ವಿದ್ಯಾಮಠದಲ್ಲಿ ಪ್ರಾತರಾಕವನ್ನು ಮುಗಿಸಿ ಗ್ರಂಥಾವಲೋಕನಮಾಡುತ್ತಿದ್ದ ಶ್ರೀಸುಧೀಂದ್ರತೀರ್ಥರಲ್ಲಿಗೆ ಬಂದು ವೆಂಕಟನಾಥರು ನಮಸ್ಕರಿಸಿ “ಗುರುವರ, ನೆನ್ನೆ ತಮ್ಮ ಆಜ್ಞೆಮೀರಿ, ಉಪದೇಶವನ್ನು ನಿರ್ಲಕ್ಷಿಸಿ ಮನೆಗೆ ಹೊರಟುಹೋದೆ. ನಿಮಗೆ ತುಂಬಾ ನೋವುಂಟುಮಾಡಿದೆ, ಕ್ಷಮಿಸಬೇಕು” ಎಂದು ಪ್ರಾರ್ಥಿಸಿದರು.
ಆಚಾರ್ಯರ ಮನ ಪರಿವರ್ತನೆಯನ್ನು ಕಂಡು ಶ್ರೀಸುಧೀಂದ್ರರಿಗೆ ವಿಸ್ಮಯವಾಯಿತು. ಶ್ರೀಯವರು “ಆಚಾರ್ಯ, ನೀವಾವ ತಪ್ಪ ಮಾಡಿಲ್ಲ. ತಾರುಣ್ಯದಲ್ಲಿ, ಅನುಕೂಲವಾದ ಸತಿಸುತರನ್ನು ಪಡೆದವರು ಸಂತಸದ ಜೀವನ ಮಾಡುತ್ತಿರುವವರೆಲ್ಲರಂತೆಯೇ ನೀವೂ ವರ್ತಿಸಿದ್ದೀರಿ. ವೇದಾಂತಸಾಮ್ರಾಜ್ಯಾಧಿಪತ್ಯದಂಥ ಮಹಾ ಪ್ರಲೋಭವೂ ನಿಮ್ಮ ಮನಸ್ಸನ್ನು ಚಲಿಸಲಿಲ್ಲ ! ನಿಜವಾಗಿ ಹೇಳುವುದಾದರೆ ನೀವು ಧೀರರು! ಪ್ರಾಮಾಣಿಕರು! ನಿಸ್ಪೃಹರು. ನಮಗೇನೋ ಮನಸ್ಸಿನಲ್ಲಿ ಶ್ರೀಮೂಲರಾಮನ ಆಜ್ಞೆ ನೆರವೇರಿಸಲಾಗಲಿಲ್ಲವಲ್ಲಾ ಎಂದು ನೋವಾಯಿತು. ಶ್ರೀಹರಿವಾಯುಗಳ ಚಿತ್ತಕ್ಕೆ ವಿರುದ್ಧವಾಗಿ ಯಾರೇನು ಮಾಡಲು ಸಾಧ್ಯ ಹೇಳಿ ?” ಎಂದರು.
ಆಗ ವೇಂಕಟನಾಥರು "ನಿಜ, ಮಹಾಸ್ವಾಮಿ, ಭಗವತ್ತಂಕಲ್ಪಕ್ಕೆ ವಿರುದ್ಧವಾಗಿ ಏನೂ ನಡೆಯಲಾರದು. ಸನ್ಯಾಸಿಯಾಗುವುದಿಲ್ಲವೆಂದು ಹಟಹಿಡಿದ ನನ್ನನ್ನು ಶ್ರೀಹರಿಚಿತ್ತ ಒಂದೇ ರಾತ್ರಿಯಲ್ಲಿ ಬದಲಿಸಿಬಿಟ್ಟಿದೆ! ಈಗ ನಾನು ತಮ್ಮ ಪ್ಪಣೆಯಂತೆ ತುರಾಶ್ರಮ ಸ್ವೀಕರಿಸಲು ಸಿದ್ಧನಾಗಿದ್ದೇನೆ” ಎಂದಾಗ ಆಶ್ಚರ್ಯಾನಂದತುಂದಿಲರಾಗಿ ಶ್ರೀಸುಧೀಂದ್ರರು “ಆಶ್ಚರ್ಯ, ನೀವೇನು ಹೇಳುತ್ತಿರುವಿರಿ? ಈ ಪರಿವರ್ತನೆ ಹೇಗಾಯಿತು ?” ಎಂದು ಪ್ರಶ್ನಿಸಿದರು. ಆಗ ವೆಂಕಟನಾಥಾಚಾರ್ಯರು ಹಿಂದಿನ ದಿನ ಮಠದಿಂದ ಹೊರಟಲಾಗಾಯಿತು. ತಾವು ಚಿಂತಾಕ್ರಾಂತರಾಗಿ ಊಟ, ನಿದ್ರೆಗಳಿಲ್ಲದೆ ಕುಳಿತಿರುವಾಗ ಬೆಳಗಿನಝಾವ ನಡೆದು ಅದ್ಭುತಘಟನೆ, ಶ್ರೀಸರಸ್ವತೀ ದೇವಿ ಪ್ರತ್ಯಕ್ಷಳಾಗಿ ಆಶ್ರಯಬೇಡಿ, ಸನ್ಯಾಸಿಯಾಗಲು ಉಪದೇಶಿಸಿ ಮಂತ್ರೋಪದೇಶ ಮಾಡಿ ಕಣ್ಮರೆಯಾಗುವವರೆಗಿನ ಎಲ್ಲ ವಿಚಾರಗಳನ್ನೂ ಗುರುಗಳಿಗೆ ನಿವೇದಿಸಿದರು, ಆಚಾರರ ಮಾತುಕೇಳಿ ರೋಮಾಂಚಿತರಾಗಿ, ಆಶ್ಚರ್ಯಾನಂದಭರಿತರಾದ ಶ್ರೀಗಳವರು ದಿಗ್ಗನೆ ಮೇಲೆದ್ದು ವೆಂಕಟನಾಥರನ್ನು ಆಲಿಂಗಿಸಿ “ಆಹಾ, ನೀವೆಂಥ ಅದೃಷ್ಟಶಾಲಿಗಳು! ಸಾಕ್ಷಾತ್ ಭಾರತೀದೇವಿಯನ್ನು ಕಣ್ಣಾರೆ ಕಂಡ ಪುಣ್ಯವಂತರು. ಧನ್ಯ ಆಚಾರ್ಯ, ನೀವಿಂತಹ ಯೋಗ್ಯತೆಯುಳ್ಳವರೆಂದು ತಿಳಿದು ಶ್ರೀಮೂಲರಾಮ-ವೇದನ್ಯಾಸ-ಸರ್ವಜ್ಞರುಗಳು, ಗುರುಪಾದರೂ ನೀವೇ ಈ ಮಹಾಪೀಠಕ್ಕೆ ಅರ್ಹರೆಂದು ಆಜ್ಞಾಪಿಸಿದ್ದು ಅಚ್ಚರಿಯೇನಲ್ಲ! ಸಂತೋಷ, ಪರಮಸಂತೋಷ, ಇಂದಿಗೆ ನಮ್ಮ ಚಿಂತೆ ಪರಿಹಾರವಾಯಿತು. ಆಚಾರ್ಯ! ತಂಜಾಪುರದಲ್ಲಿ ರಘುನಾಥಭೂಪಾಲನ ಆಸ್ಥಾನದಲ್ಲಿ ವೈಭವದಿಂದ ಪರಮಹಂಸಾಶ್ರಮಪ್ರದಾನ ಮಾಡುತ್ತೇವೆ. ಅದಕ್ಕೆ ಮೊದಲು ಚಿರಂಜೀವಿ ಲಕ್ಷ್ಮೀನಾರಾಯಣನಿಗೆ ನೀವು ಉಪನಯನವನ್ನು ನೆರವೇರಿಸಿರಿ, ಉಪನಯನದ ಸಮಸ್ತ ವ್ಯವಸ್ಥೆಯನ್ನು ಶ್ರೀಮಠದಿಂದ ಮಾಡಿಸುತ್ತೇವೆ. ಆಶ್ರಮದ ವಿಚಾರ ರಹಸ್ಯವಾಗಿರಲಿ, ನೀವು ಉಪನಯನಮಾಡಿ ತಂಜಾವೂರಿಗೆ ಹೊರಡುವವರೆಗೂ ಪತ್ನಿಪುತ್ರಾದಿಗಳೊಡನೆ ಮನೆಯಲ್ಲೇ ಆನಂದದಿಂದ ಕಾಲಕಳೆಯಿರಿ” ಎಂದಾಜ್ಞಾಪಿಸಿ ಆಚಾರ್ಯರನ್ನು ಕಳುಹಿಸಿಕೊಟ್ಟರು.
ಮನೆಗೆ ಬಂದ ಆಚಾರ್ಯರ ಮುಖ ಉಲ್ಲಸಿತವಾಗಿತ್ತು. ಹಿಂದಿನ ದಿನದ ತಳಮಳ, ಚಿಂತೆ, ನೋವುಗಳಾವುದೂ ಅವರ ಮುಖದಲ್ಲಿ ಕಂಡುಬರಲಿಲ್ಲ. ನಸುನಗುತ್ತಾ ಬಂದ ಪತಿಯನ್ನು ಕಂಡು ಸರಸ್ವತಮ್ಮನ ಹೃದಯವರಳಿತು. ಆಚಾರರು ಬಂದವರೇ “ಸರಸ್ವತಿ, ಒಂದು ಸಂತೋಷದ ಸಂಗತಿ” ಎಂದಾಗ ಸರಸ್ವತಮ್ಮ “ಅದೇನು ಸ್ವಾಮಿ, ಅಂಥ ಸಂತಸದ ಸಮಾಚಾರ?' ಎಂದು ಪ್ರಶ್ನಿಸಿದರು. ಆಚಾರ್ಯರು “ಕುಮಾರ ಲಕ್ಷ್ಮೀನಾರಾಯಣನಿಗೆ ಉಪನಯನ ಮಾಡುವಂತೆ ಗುರುಗಳು ಆಜ್ಞಾಪಿಸಿದ್ದಾರೆ!” ಎಂದರು, ಸರಸ್ವತಮ್ಮ ಸಂತೋಷದಿಂದ “ನಿಜ, ಅನೇಕ ವೇಳೆ ನಾನೂ ವಿಜ್ಞಾಪಿಸಿದ್ದೆ. ಈ ಮಂಗಳಕಾರ್ಯವನ್ನು ವೈಭವದಿಂದಾಚರಿಸಬೇಕು. ಸ್ವಾಮಿ, ನಮಗಿರುವವನೇ ಒಬ್ಬ ಮಗ ಅಲ್ಲವೇ?” ಎಂದರು. ಆನಂತರ ಪತಿ-ಪತ್ನಿಯರು ಅದೇ ವಿಚಾರ ಮಾತನಾಡುತ್ತಿದ್ದರು. ಸರಸ್ವತಮ್ಮ ಸಡಗರದಿಂದ ಮನೆಗೆಲಸದಲ್ಲಿ ತೊಡಗಿದರು.