ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
೫೯. ಅಣುಮಧ್ವವಿಜಯ ವ್ಯಾಖ್ಯಾನ
ಶ್ರೀಸುಧೀಂದ್ರತೀರ್ಥರು ಕುಂಭಕೋಣಕ್ಕೆ ಬಂದು ಐದಾರುದಿನಗಳಾಗಿತ್ತು. ದುರ್ಮತಿ ಸಂವತ್ಸರದ ಮಾಘಶುಕ್ಲ ಪಾಡ್ಯದ ದಿನ ಆನ್ನೀಕದಲ್ಲಿ ಆಸಕ್ತರಾಗಿದ್ದ ಗುರುಗಳೆಡೆಗೆ ಬಂದ ವೆಂಕಟನಾಥಾಚಾರ್ಯರು ತಾವು ತಂದಿದ್ದ ತಾಳಾಓಲೆ ಗ್ರಂಥವೊಂದನ್ನು ಸಮರ್ಪಿಸಿ ಗುರುವರ್ಯ, ಶ್ರೀಮದಾಚಾರ್ಯರ ಪ್ರೇರಣೆಯಂತೆ ಶ್ರೀನಾರಾಯಣಪಂಡಿತಾಚಾರ್ಯರ “ಪ್ರಮೇಯ ನವಮಾಲಿಕಾ'ಕ್ಕೆ (ಅಣುಮಧ್ವ ವಿಜಯ) ನನ್ನ ಯೋಗ್ಯತಾನುಸಾರವಾಗಿ ಗೂಢಭಾವಪ್ರಕಾಶ'ವೆಂಬ ವ್ಯಾಖ್ಯಾನವನ್ನು ರಚಿಸಿದ್ದೇನೆ ಇದನ್ನವಲೋಕಿಸಿ ಆಶೀರ್ವದಿಸಿಬೇಕು” ಎಂದು ವಿಜ್ಞಾಪಿಸಿದರು. ಶ್ರೀಗಳವರಿಗೆ ಬಹಳ ಸಂತೋಷವಾಯಿತು. “ಧನ್ಯ, ಆಚಾರ್ಯ, ಆದಿಗುರುಗಳಾದ ಶ್ರೀಮದಾಚಾರ್ಯರ ವಿಜಯದ ವಿವರಣೆಯಿಂದಲೇ ನಿಮ್ಮ ಗ್ರಂಥರಚನಾಕಾರ್ಯ ಪ್ರಾರಂಭವಾಗಿರುವುದು ಶುಭಸೂಚನೆ ಮತ್ತು ಮಂಗಳಪ್ರದ. ನಿಮ್ಮಲ್ಲಿಆ ವಿಶ್ವ ಗುರುಗಳ ಕಾರುಣ್ಯವಿರುವುದರಿಂದ ಅವರು ನಿಮ್ಮಿಂದ ದೈತಸಿದ್ಧಾಂತಕ್ಕೆ ಅಪಾರ ಕೊಡಿಗೆಯನ್ನು ಕೊಡಿಸಿ ಅನುಗ್ರಹಿಸುವುದರಲ್ಲಿ ಸಂದೇಹವಿಲ್ಲ ಅಂದಹಾಗೆ ಇಂದಿನಿಂದ ಶ್ರೀಮಧ್ವನವಮಿಯವರೆಗೆ ಸುಮಧ್ವವಿಜಯ ಅನುವಾದವಾಗುವುದು ನಿಮಗೆ ತಿಳಿದೇ ಇದೆ. ಈ ದಿನದಿಂದ ನಿಮ್ಮ ವ್ಯಾಖ್ಯಾನುಸಾರವಾಗಿ “ಅಣುಮಧ್ವವಿಜಯ'ವನ್ನು ನೀವೇ ಅನುವಾದಮಾಡಿರಿ. ಅದರಿಂದ ನಿಮ್ಮ ವ್ಯಾಖ್ಯಾನದ ಪ್ರಸಾರವೂ ಆಗುವುದು. ಸಜ್ಜನರು ಮುದಿಸುವರು, ನಮಗೂ ತೃಪ್ತಿಯಾಗುವುದು” ಎಂದಾಜ್ಞಾಪಸಿದರು.
ವಿದ್ಯಾಮಠದಲ್ಲಿ ಶ್ರೀಸುಧೀಂದ್ರರ ಸನ್ನಿಧಿಯಲ್ಲಿ ವೇಂಕಟನಾಥಾಚಾರ್ಯರು ತಾವು ರಚಿಸಿದ 'ಅಣುಮಧ್ವವಿಜಯ' ವ್ಯಾಖ್ಯಾನದ ಅನುವಾದವನ್ನು ಪ್ರಾರಂಭಿಸಿದರು.
ಮೊದಲು ವೇಂಕಟನಾಥರು ತಮ್ಮ ವ್ಯಾಖ್ಯಾನದ ಮಂಗಳಾಚರಣವನ್ನೋದಿ ಹೀಗೆ ಅನುವಾದ ಪ್ರಾರಂಭಿಸಿದರು :
ವ್ಯಾಖ್ಯಾನಂ
ಇಂದಿರಾಪತಿಮಾನಮ್ಮ ಪೂರ್ಣಬೋಧಾನ್ ಗುರೂನಪಿ |
ವ್ಯಾಖ್ಯಾಸ್ವಾಮಿ ಯಥಾಬೋಧಂ ಪ್ರಮೇಯ ನವಮಾಲಿಕಾಮ್ | ಇಹಾನ್ವಯಮುಖೇನೈವ ಶ್ಲೋಕಾರ್ಥ್Sಪಿ ನಿರೂಪ್ಯತೇ | ಗೂಢಭಾವಪ್ರಕಾಶಶ್ಚ ಕ್ರಿಯತೇ ಪ್ರೀತಿಯೇ ಹರೇಃ ||
ಇಹ ಖಲು ಸಂಸಾರಕಾಂತಾರೇ ಸಂಚಾರೋದರ್ಕದುಃಖಾನಲಸಂತಪ್ತ ನಿಜಜನ ಕುಮುದ ಬೃಂದಾನ್ಯನುಜಿಘ್ರಕ್ಷು ನಾರಾಯಣಪಂಡಿತಾಚಾರ: ನಿಖಿಲಸಂತಾಪ ಶಾಮಕ ಭಗವತ್ಪಸಾದೋಲಕ ತದ್ಭಕ್ತಿ ನಿದಾನಾಖ್ಯ ಗುರುವಾಯುಭಕ್ತಿಜನಕ ತದವತಾರ ಲೀಲಾನುಸಂಧಾನಾಯ ತಲ್ಲೀಲಾ ಸಂಜಿಫ್ಟ್ಕ್ಷು: ಆದೌ ಹನುಮದವತಾರಲೀಲಾಂ ಸಂಘಣ್ಣಾತಿ-ಶ್ರೀಶೇತಿ ||
ಅಣುಮಧ್ವವಿಜಯ
ಶ್ರೀಶಃ ಪ್ರೀತ್ಸೆ ಪ್ರಜಾತಃಸುಮಹಿತಮಹಿಮಾ ಶ್ರೀಹನುಮಾನ್ನಿದೇಶಾತ್ ರಾಮಸ್ಕೋಲ್ಲಂಘಿತಾಬ್ಬಿ ಸ ಹರಿರಥ ಗತಃ ಸೇತುನಾ ಪಿಷ್ಟ ದುಷ್ಟಃ
ಭೂಭರಾವಣಾರಿಂ ಪುರಗಮುರುದಯಂ ಪೂಜಯಿತ್ವಾ ಸಸೀತಂ ಪಶ್ಯನ್ ಕಿಂಪೂರುವೇ ತಂ ಸತತಮಪಿ ಮಹಾಪ್ರಾಣಮುಖ್ವತಾನೇ
110 11
ಶ್ರೀವೇಂಕಟನಾಥಾಚಾರರು ಅಣುಮಧ್ವವಿಜಯವನ್ನು ವಿವರಿಸುತ್ತಾ ಅನೇಕ ಶ್ರುತಿ, ಪುರಾಣ, ರಾಮಾಯಣ, ಭಾರತಾದಿ ಗ್ರಂಥಗಳ ಆಧಾರದಿಂದ ವಿಶೇಷಾರ್ಥಗಳನ್ನು ನಿರೂಪಿಸುತ್ತಾ ಶ್ರೀವಾಯುದೇವರ ಅವತಾರಗಳಾದ ಶ್ರೀಹನುಮ, ಭೀಮ ಮಧ್ವಾವತಾರಗಳ ವೈಶಿಷ್ಟ, ಮಹತ್ವ, ಮಹಿಮಾತಿಶಯಗಳನ್ನು ಹೃದಯಂಗಮವಾಗಿ ಗ್ರಂಥಕಾರರ ಗೂಢಭಾವ ಪ್ರಕಾಶನಪೂರ್ವಕ ವಾಗಿ ಗಂಗಾಪ್ರವಾಹದಂತೆ ನಿರೂಪಿಸಿ ಮಂಗಳಕರವಾದ ತಮ್ಮ ವಾಗ್ಗಂಗೆಯ ಪವಿತ್ರ ತರಂಗಗಳಿಂದ ಸಮಸ್ತ ಜನರನ್ನೂ ಪಾವನಗೊಳಿಸಹತ್ತಿದ್ದರು. ಶ್ರೀಸುಧೀಂದ್ರರು, ವಿದ್ವಜ್ಜನರು, ಧಾರ್ಮಿಕ ಸುಜನರ ಆಚಾರರ ಅನುವಾದದಿಂದ ಪರಮಾನಂದಭರಿತ ರಾದರು. ಹೀಗೆ ಮಧ್ವನವಮಿಯವರೆಗೆ ವಿಸ್ತಾರವಾಗಿ ಅನುವಾದ ಮಾಡಿ ಮಂಗಳವನ್ನು ನೆರವೇರಿಸಿದರು.
ವಿದ್ವಜ್ಜನರು, ವೇಂಕಟನಾಥರ ಗ್ರಂಥರಚನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಶ್ರೀಯವರ ಅಪ್ಪಣೆಯಂತೆ ರಾಮಚಂದ್ರಾಚಾರರು ಆಚಾರರನ್ನು ಸತ್ಕರಿಸಿ ಶ್ರೀಯವರು ದಯಪಾಲಿಸಿದ ವಸ್ತ್ರ-ಶಾಲು, ಸೀರೆ ಖಣ, ಸುವರ್ಣನಾಣ್ಯಗಳನ್ನೂ ಫಲಪುಷ್ಪಗಳನ್ನೂ ಅರ್ಪಿಸಿ ಸನ್ಮಾನಿಸಿದರು. ಆ ತರುವಾಯ ವಾದ್ಯ ವೈಭವದೊಡನೆ ಸರ್ವಮೂಲಗ್ರಂಥಗಳ ಮೆರವಣಿಗೆಯಾಗಿ, ಮಹಾಸಂಸ್ಥಾನ ಪೂಜಾ, ತೀರ್ಥಪ್ರಸಾದ, ಬ್ರಾಹ್ಮಣ ಸುವಾಸಿನಿಯರ ಸಂತರ್ಪಣೆ, ರಾತ್ರಿ ಉಪನ್ಯಾಸ ಗುರುಗಳ ಉಪದೇಶದೊಡನೆ ಶ್ರೀಮಧ್ವನವಮೀ ಮಹೋತ್ಸವವು ಸಾಂಗವಾಯಿತು.