|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

೫೮. ತಪ್ತಮುದ್ರಾಂಕನದ ವಾಕ್ಯಾರ್ಥ-ವಿಜಯ !

ಮರುದಿನ ವಿದ್ವತ್ಸಭೆಯ ಸಮಾರೋಪಸಮಾರಂಭವು ಪ್ರಾರಂಭವಾಯಿತು. ಜನರು ಸಭೆಯಲ್ಲಿ ಕಿಕ್ಕಿರಿದು ತುಂಬಿದ್ದರು. ತಾವು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ವೇಂಕಟನಾಥರು ಹಿಂದಿನ ದಿನ ಅಪೂರ್ವವಿಜಯ ಸಾಧಿಸಿದ್ದರಿಂದ ಮಾತ್ತರಾವಿಷ್ಟ ಹೃದಯರಾದ ಮೂವರು ಪಂಡಿತರು ಹೇಗಾದರೂ ವೆಂಕಟನಾಥರು ತಲೆಯೆತ್ತದಂತೆ ಮಾಡಬೇಕೆಂಬ ಹಟದಿಂದ ಮೃತ್ಯುಂಜಯಶಾಸ್ತ್ರಿಗಳೆಂಬ ಆಸ್ಥಾನಕ್ಕೆ ಹೊಸಬರಾದ ಓರ್ವ ಪಂಡಿತರನ್ನು ಮುಂದೆ ಮಾಡಿಕೊಂಡು ವೇದಿಕೆಯತ್ತ ಬಂದು “ವೈಷ್ಣವರು ತಪ್ತಮುದ್ರಾಂಕನವನ್ನು ಮಾಡಿಕೊಳ್ಳುವರು, ಅದು ಶಾಸ್ತ್ರನಿಷಿದ್ಧ, ನಾವು ಅದನ್ನು ವಾದದಿಂದ ಸಿದ್ಧಪಡಿಸಲು ಸಿದ್ಧರಾಗಿದ್ದೇವೆ. ವಿಜಯಗರ್ವದಿಂದ ಬೀಗುತ್ತಿರುವ ವೆಂಕಟನಾಥಾಚಾರರಿಗೆ ಧೈರ್ಯವಿದ್ದಲ್ಲಿ ಮುಂದೆ ಬರಲಿ” ಎಂದು ಸವಾಲೊಡ್ಡಿದರು. ಶ್ರೀಸುಧೀಂದ್ರ ಗುರುಗಳು “ಇದೊಂದು ದೈವ ಘಟನೆ ! ವೆಂಕಟನಾಥರ ವಿಜಯ್‌ ಕಿರೀಟಕ್ಕೆ ಶಿರೋಮಣಿ ಅವಶ್ಯವಿತ್ತು. ಅದು ತಾನಾಗಿ ದೊರಕಲಿರುವಂತಿದೆ. ಆಚಾರರು ಈ ಪಂಡಿತರ ಸವಾಲನ್ನು ಸ್ವೀಕರಿಸುತ್ತಾರೆ. ಹೂ, ವಾದ ಪ್ರಾರಂಭವಾಗಲಿ” ಎಂದು ಆಜ್ಞಾಪಿಸಿ ಆಚಾರರತ್ತ ಕೃಪಾದೃಷ್ಟಿ ಬೀರಿದರು. ಆಚಾರರು ಶ್ರೀಯವರಿಗೆ ನಮಿಸಿ “ಅಂತ್ಯವಿಜಯಕ್ಕಾಗಿ ವೇದಿಕೆಯನ್ನೇರಿ ಕುಳಿತರು. 

ಮೃತ್ಯುಂಜಯಶಾಸ್ತ್ರಿಗಳು ವಾದ ಪ್ರಾರಂಭಿಸಿ ಹೀಗೆ ಹೇಳಿದರು - “ರಾಮಾರ್ಚನಚಂದ್ರಿಕಾ ಗ್ರಂಥದಲ್ಲಿ ಯದ್ರಪಿ ತಪ್ತಮುದ್ರಾಂಕನ ವಿಚಾರ ಬಂದರೂ, ಅದನ್ನು ನಿಷೇಧಿಸುವ ಅನೇಕ ಪ್ರಮಾಣಗಳಿವೆ. ಆದ್ದರಿಂದ ತಪ್ತಮುದ್ರಾಂಕನವು ಅವೈದಿಕವಾದದು !” 

ವೇಂಕಟನಾಥರು : “ನಿಮ್ಮ ವಾದವು ಸರಿಯಲ್ಲ. ತಪ್ತ ಮುದ್ರಾಂಕನವನ್ನು ವಿಧಿಸುವ ಹೇರಳ ಪ್ರಮಾಣಗಳಿವೆ. ಯಾವ ಯಾವ ಕಾಲದಲ್ಲಿ ಯಾರು ಯಾರು ಮುದ್ರಾಂಕನಮಾಡಿಕೊಳ್ಳಬೇಕೆಂದು ಅವು ಸ್ಪಷ್ಟಪಡಿಸುವವು. 

ಮೃತ್ಯು : ಅದೇನು ಪ್ರಮಾಣ ? ಹೇಳಿರಿ. 

ವೇಂಕಟ : ಮೊದಲು ಕಾಲವಿಚಾರ ಹೇಳುತ್ತೇನೆ. ಜಾತಕರ್ಮ, ಚೌಲ, ಉಪನಯನ, ಮಂತ್ರೋಪದೇಶಕಾಲಗಳಲ್ಲಿ ತಪ್ತಮುದ್ರಾಂಕನವನ್ನು ಮಾಡಿಕೊಳ್ಳಬೇಕು. “ಚಕ್ರಸ್ಯ ಧಾರಣೇ ಕಾಲಂ ಬ್ರಾಹ್ಮಣಾನಾಂ ವಿದುರ್ಬುಧಾಃ | ಜಾತಕ ರ್ಮಣಿ ವೈ ಕುರ್ಯಾಚೌಲೋಪನಯನೇsಪಿ ವಾ || ಮಂತ್ರಗ್ರಹಣ ಕಾಲೇ ವಾ ಚಕ್ರಂ ಧಾರ್ಯ೦ ವಿಧಾನತಃ ||” ಎಂದು ವಾಸಿಷ್ಠಸ್ಕೃತಿ ನಿರೂಪಿಸುವುದು. “ವೃದ್ಧ ಮನುರಪಿ - “ಉದ್ವಾಹಸಮಯೇ ಸೀಣಾಂ ಪುಂಸಾಂ ಚೈವೋಪನಾಯನೇ | ಚಕ್ರಸ್ಯ ಧಾರಣಂ ಪ್ರೋಕ್ತಂ ಮಂತ್ರಃ ಪಂಚಾಯುಧಾನಿ ಚ ||” ಎಂದು “ವೃದ್ಧ ಮನುಸ್ಮೃತಿ' ಯಲ್ಲಿ ಸ್ತ್ರೀಯರಿಗೆ ವಿವಾಹ, ಪುರುಷರಿಗೆ ಉಪನಯನಕಾಲಗಳಲ್ಲಿ ಚಕ್ರಧಾರಣ ಮತ್ತು ಮಂತ್ರೋಕ್ತವಾಗಿ ಪಂಚಮುದ್ರೆಗಳನ್ನು ಧರಿಸಬೇಕೆಂದು ಉಕ್ತವಾಗಿದೆ. ಅದರಲ್ಲೂ ಮೊದಲು ಸರ್ವಕರ್ಮಾಂಗಭೂತವಾಗಿ ಚಕ್ರಾದಿ ತಪಮುದ್ರಾಂಕನ ಅವಶ್ಯವೆಂದು “ಪದ್ಮಪುರಾಣ'ದಲ್ಲಿ ಹೇಳಿದಾರೆ- ಪ್ರತಪ್ತ ಬಿಭ್ರಯಾಚಕ್ರಂ ಶಂಖಂ ಚ ಭುಜಮೂಲಯೋ: | ಶೌತಸ್ಮಾರ್ತಾದಿಸಿದ್ಧರ್ಥಂ ಚಕ್ರಂ ಧಾರಂ ವಿಧಾನತಃ” ಎರಡು ಭುಜಗಳಲ್ಲಿ ಪ್ರತಪ್ತಚಕ್ರ-ಶಂಖಗಳನ್ನು ಶೌತಸ್ಮಾರ್ತಕರ್ಮಾನುಷ್ಠಾನಯೋಗ್ಯತಾಸಿದ್ಧಿಗಾಗಿ ವಿಧಿಪೂರ್ವಕವಾಗಿ ಧರಿಸಬೇಕು. ಈ ವಿಷಯದಲ್ಲಿ ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ, ಆಗಮಗಳ ಪ್ರಮಾಣಗಳು ಹೀಗಿವೆ. ಈಗ ಮೊದಲು ಶ್ರುತಿಪ್ರಮಾಣವನ್ನು ತೆಗೆದುಕೊಳ್ಳೋಣ. 

“ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರೇಷಿ ವಿಶ್ವತಃ | ಅತಪ್ತತನೂಃ ನ ತದಾಮೋ ಅನ್ನುತೇ ಶ್ರುತಾಸ ಇದ್ದಹಂತಸ್ತತಮಾಸತೇ ” ಎಂಬ ಋಗ್ವದದ ತೈತ್ತಿರೀಯಶ್ರುತಿಯು ತಪ್ತ ಮುದ್ರಾಂಕನಕ್ಕೆ ಪ್ರಮಾಣವಾಗಿದೆ. ಇದರ ಅರ್ಥ- ಬ್ರಹ್ಮಣಃ- ಚತುಮುಖಬ್ರಹ್ಮದೇವರಿಗೆ, ಪತೇ-ಪಾಲಕನಾದ ಹೇ ವಿಷ್ಣುವೇ, ತಂ-ನೀನು, ಪ್ರಭುಃ-ಸಮರ್ಥನು. ವಿಶ್ವತಃ-ಜಗತ್ತಿನ, ಸರ್ವೆಷಾಂ ಎಲ್ಲರ, ಗಾತ್ರಾಣಿ-ಶರೀರಗಳನ್ನು ಪರೇಷಿ-ವ್ಯಾಪಿಸಿಕೊಂಡಿದ್ದೀಯೆ, ಅಂತರ್ಯಾಮಿ ರೂಪದಿಂದಿದ್ದೀಯೆ-ಎಂದು ಭಾವ, ಅಂತಹ ತೇ-ನಿನ್ನ, ಪವಿತ್ರಂ-ಸುದರ್ಶನವು, ವಿತತು-ಪ್ರಪಂಚಗಳಲ್ಲಿ ವ್ಯಾಪ್ತವಾದದ್ದು, ಅಥವಾ ಭುವನೇಷು-ವಿಷ್ಣುಭಕ್ತರಲ್ಲಿ ವ್ಯಾಪ್ತವಾದದ್ದು (ಅಶಿಷ್ಟ ಭಕ್ತರಲ್ಲಿ ಅಲ್ಲ- ಇಂತು ಅಗ್ನಿತಪ್ತವಾದ ಚಕ್ರದಿಂದ ಅತಪ್ತತನುಃ-ತಪ್ತವಾಗದಶರೀರಿಯಲ್ಲದವನು, ಆಮಃ-ಪಾಪನಾಶವಿಲ್ಲದವನಾಗಿ, ತತ್ -ಪ್ರಸಿದ್ಧಮೋಕ್ಷವಿಶೇಷವನ್ನು (ಅಥವಾ ವಿಷ್ಣುಸಾಯುಜ್ಯವನ್ನು) ನಾಶ್ನುತೇ - ಹೊಂದುವುದಿಲ್ಲ.

ಮ : ಏನು ಸ್ವಾಮಿ ! 'ಪವಿತ್ರ' ಎಂಬುದಕ್ಕೆ ಸುದರ್ಶನ ಚಕ್ರ ಎಂದು ಹೇಗೆ ಅರ್ಥಮಾಡುವಿರಿ ?

ವೇಂ : ಪವಿತ್ರ ಶಬ್ದವು ಸುದರ್ಶನದಲ್ಲಿ, ಪ್ರೋಕ್ಷಣೀಯ ಶಬ್ದವು ಜಲದಲ್ಲಿ ಹೇಗೋ ಹಾಗೆ ರೂಢಿ ! ಪವಿತ್ರಶಬ್ದವು ಸುದರ್ಶನದಲ್ಲಿ ರೂಢಿ ಎಂಬುದಕ್ಕೆ ಇಕೋ ಕೇಳಿ, ಪ್ರಮಾಣವನ್ನು - ೧) “ಸುದರ್ಶನೇ ಚ ದರ್ಭೆ ಚ ಪವಿತ್ರಂ ಶಣಸೂತ್ರಕೇ ।” ಎಂದು ವೇದನಿಘಂಟಿನಲ್ಲಿ ಹೇಳಿದೆ. ೨) “ಸುದರ್ಶನಂ ಸಹಸ್ರಾರು ಪವಿತ್ರಂ ಚರಣಂ ಪವಿಃ” ಎಂದು ನಿಘಂಟುವಿನಲ್ಲಿ. ೩) “ಪವಿತ್ರಂ ಚರಣಂ ಚಕ್ರಂ ಲೋಕದ್ವಾರಂ ಸುದರ್ಶನಂ | ಪರಾಯವಾಚಕಾ ಹೇತೇ ಚಕ್ರಸ್ಯ ಪರಮಾತ್ಮನಃ ” ಎಂದು ಶ್ರೀಶಾಸ್ತ್ರದಲ್ಲಿದೆ. ೪) “ಪವಿತ್ರಂ ಚರಣಂ ನೇಮಿಃ ಅರಿಶ್ಚಕ್ರಂ ಸುದರ್ಶನಂ | ಸಹಸ್ರಾರು ಪ್ರಕೃತಘ್ನಂ ಲೋಕದ್ವಾರಂ ಮಹೌಜಸಂ || ನಾಮಾನಿ ವಿಷ್ಣು ಚಕ್ರಸ್ಯ ಪರಾಯೇಣ ನಿಬೋಧಮೇ ||” ಇತ್ಯಾದಿ ಬಹುಲಪ್ರಯೋಗದರ್ಶನಾತ್. ಇನ್ನು ಯೋಗದಿಂದಲೂ ಪವಿತ್ರಶಬ್ದಕ್ಕೆ ಚಕ್ರ ಎಂದರ್ಥ. ಪ್ರಮಾಣ - “ಪವಿಃ ವಜ್ರಂ”, “ಕುಲಿಶಂ ಬಿದುರಂ ಪವಿಃ ಇತ್ಯಾಭಿಧಾನತ್. ತದಪಿ ತ್ರಾಯತ ಇತಿವಾ, ತಸ್ಮಾತ್ತಾಯತ ಇತಿವಾ, “ಅಪ್ಪಕ್ಷರಸಾಮ್ಯಾನ್ನಬ್ರೂಯಾತ್” ಎಂಬ ನ್ಯಾಯದಿಂದಲೂ, ಪಾಲಕೇನ ವಿಷ್ಣುನಾ, ತ್ರಾಯತ ಇತ್ಯಾದನೇಕಾರ್ಥಾನುಸ್ಮೃತೇ | ಏವಂಚ.......

ಮೃ : ಪ್ಲಾ ಸ್ನಾ, ಸ್ವಲ್ಪ ನಿಧಾನಿಸಿ, ಇಲ್ಲಿ ಅತಪ್ತತನುಃ” ಎಂಬ ಪ್ರಯೋಗವಿದೆ. ಅದಕ್ಕೆ ನೀವು ತಪ್ತಮುದ್ರಾಂಕನಕ್ಕೆ 'ದಾಹಾ' ಎಂಬ ಅರ್ಥವನ್ನು ಹೇಳುತ್ತಿದ್ದೀರಿ. ಅದು ಯುಕ್ತವಲ್ಲ, ಯಾಕೆಂದರೆ- ಅತಪ್ತತನುಃ ಎಂಬುದಕ್ಕೆ ಕೃಚ್ಛ, ಚಾಂದ್ರಾಯಣಾದಿ ವ್ರತಗಳಿ೦ದ ದೇಹಶೋಷಣೆ ಮಾಡಿಕೊಳ್ಳದೇ ಇರುವವನೆಂದರ್ಥ. 

ವೇಂ : ನೀವು ಭ್ರಾಂತರಾಗಿದ್ದೀರಿ. ಅತಪ್ತವೆಂಬುದರಿಂದ ಪ್ರಕೃತಿಭೂತವಾದ ತಾಪಶಬ್ದಕ್ಕೆ ದಾಹ ಎಂಬರ್ಥವೇ ಇದೆ. ಚಾಂದ್ರಾಯಣಾದಿಗಳು ಇದರಿಂದ ಉಪಪನ್ನವಾಗಿಲ್ಲ, ಅದೇ ಶ್ರುತಿಯಲ್ಲೇ “ಶ್ರುತಾಸಹ” ಎಂಬ ಪದದ ಸಂಬಂಧದಿಂದ ನಿರ್ದೆಶನಮಾಡಲಾಗಿದೆ, ಆದ್ದರಿಂದಲೇ 'ಆಮಃ' ಎಂದರೆ ತಪಮುದ್ರಾಧಾರಣಾದಿಗಳಿಂದ ದಗ್ಧವಾಗದ ಪಾಪವುಳ್ಳವನು ಎಂದರ್ಥ ಮಾಡಿದ್ದಾರೆ. 

ಮೃ : ಸರಿ ಸರಿ, ನೀವು ಇಲ್ಲಿ ತತ್ ಎಂಬ ಪದಕ್ಕೆ ಮೋಕ್ಷ-ವಿಷ್ಣು ಎಂದರ್ಥ ಮಾಡುತ್ತಿದ್ದೀರಿ. ಇದು ಸರ್ವನಾಮಪದ, ಮತ್ತು ಪಾವೋಕ್ತಬುದಿಸಪರಾಮರ್ಶಕವಲ್ಲವೇ ? 

ವೇಂ : ಪ್ರಮಾಣವಿಲ್ಲದೆ ನಾನು ಏನೂ ಹೇಳುವುದಿಲ್ಲ. ಸ್ವಾಮಿ, ತತ್ ಶಬ್ದವು ವಿಷ್ಣುವಾಚಕವೆನ್ನಲು ಪ್ರಮಾಣ ಕೇಳಿ- “ತದಿತಿ ವಾ ಏತಸ್ಯ ಮಹತೋ ಭೂತಸ್ಯ ನಾಮ ಭವತಿ” ಎಂದು ಶ್ರುತಿಯು ಸಾರುವುದು. ಇಲ್ಲಿ ಮಹದ್ದೂತವು ವಿಷ್ಣುವೇ ಆಗಿದ್ದಾನೆ. “ಏಕೋ ವಿಷ್ಣುರ್ಮಹತಂ ಪೃಥಕ್ ಭೂತಾನ್ಯನೇಕಶಃ|' ಎಂಬ ಭಗವದ್ಗೀತೆಯಿಂದ ಇದು ಸ್ಪಷ್ಟವಾಗುವುದು. ಮತ್ತು 'ಶ್ರುತಾಸಹ' ಎಂದರೆ ವನಿತಪ್ತವಾದ ಚಕ್ರದಿಂದ ತಪ್ತರು ಎಂದರ್ಥ. ಕೇವಲ ಒಂದು ಬಾರಿ ಮಾತ್ರ ತಪ್ತರೆಂದರಲ್ಲ ; ಮತ್ತೆ ವಹಂತಃ ಇತ್” ಎಂದರೆ ಗೋಪೀಚಂದನಾದಿಗಳಿಂದ ನಿತ್ಯವೂ ಧರಿಸತಕ್ಕವರು ಎಂದುಭಾವ. ಮತ್ತು 'ಸಮಾಶತೇ' ಎಂದರೆ ಸುಖರೂಪವಾದ ಮೋಕ್ಷವನ್ನು, ಸರ್ವೋತ್ತಮನಾದ ವಿಷ್ಣುವನ್ನು ಪಡೆಯುವರು ಎಂದು ಅರ್ಥ. 

ಮೃ : ಆಚಾರ್ಯರೇ, ನಿಮ್ಮ ವಾದವು ವಿಚಿತ್ರವಾಗಿದೆ. ನೀವೀಗ ಉದಾಹರಿಸಿದ ಶ್ರುತಿಯು ತಪ್ತಮುದ್ರಾಧಾರಣೆಗೆ ಪ್ರಮಾಣವಲ್ಲ. ಅರ್ಥಾಂತರಪರವಾಗಿದೆ. ಅದು ಹೇಗೆಂದರೆ-ಚತುರ್ಮುಖ ಬ್ರಹ್ಮದೇವರಿಗೆ ಪಾಲಕನಾದ ಹೇ ವಿಷ್ಣುವೇ ! ನೀನು ಪ್ರಭುವಾಗಿದ್ದು ಪ್ರಪಂಚದ ಎಲ್ಲರ ಶರೀರಗಳಲ್ಲಿಯೂ ವ್ಯಾಪಿಸಿಕೊಂಡಿದ್ದೀಯೆ. ಅಂಥ ನಿನ್ನ ಪರಿಶುದ್ಧವೂ, ವಿಸ್ತಾರವಾ ಆದ ಮೋಕ್ಷರೂಪ ಸುಖವನ್ನು ಕೃಚ್ಛ, ಚಾಂದ್ರಾಯಣಾದಿ ವ್ರತಗಳಿಂದ ಶರೀರ ಶುದ್ಧಿಮಾಡಿಕೊಳ್ಳದ ದೇಹವುಳ್ಳವನು ಪಾತಕಿಯಾಗಿದ್ದು ಮೋಕ್ಷರೂಪಸುಖವನ್ನು ಹೊಂದುವುದಿಲ್ಲ. ಅಂತಹ ತಪಸ್ಸನ್ನು ಆಚರಿಸುತ್ತಲೇ ಇರುವವನಾಗಿ ಪಾಪಗಳನ್ನು ಕಳೆದುಕೊಂಡು ಮೋಕ್ಷವನ್ನು ಹೊಂದುತ್ತಾನೆ - ಎಂದು ಇದಕ್ಕೆ ಒಂದು ರೀತಿಯ ಅರ್ಥ ಶಾಸ್ತ್ರಿಗಳ ವಿವರಣೆಯನ್ನು ಕೇಳಿ ವೆಂಕಟನಾಥರು ಮಂದಹಾಸದಿಂದ ಶಿರಃ ಕಂಪನಮಾಡುತ್ತಿರಲು, ತಮ್ಮ ವಾದವನ್ನು ಒಪ್ಪಿ ಆಚಾರರು ತಲೆದೂಗುತ್ತಿದ್ದಾರೆಂದು ಭ್ರಮಿಸಿದ ಶಾಸ್ತ್ರಿಗಳು ಇನ್ನೇನು ತಮಗೆ ಜಯಸಿದ್ಧವೆಂದು ಉತ್ಸಾಹದಿಂದ ವಾದವನ್ನು ಮು೦ದುವರಿಸಿ ಇಂತೆಂದರು - 

ಇನ್ನು ಈ ಶ್ರುತಿಗೆ ಎರಡನೆಯ ಅರ್ಥವು ಹೀಗೆ-“ಸ್ವಾಮಿ, ಸೋಮ ! ನೀನು ಔಷಧಿ-ವನಸ್ಪತಿಗಳಿಗೆ ಪ್ರಭುವು. ನಿನಗಾಗಿ ಪಾವನಕ್ಕಾಗಿ ಈ ದಶಾ ಪವಿತ್ರವು ವಿಸ್ತ್ರತವಾಗಿದೆ. ನೀನು ಪ್ರಭುವಾಗಿದ್ದು ಶರೀರಗಳನ್ನು ವ್ಯಾಪಿಸಿ ಕೊಂಡಿದ್ದೀಯೆ. ಪವನನಿಂದ ಸ್ವರೂಪವನ್ನು ಮರೆಮಾಡುವ ವಿಷಯದಲ್ಲಿ ಗೆಲ್ಲುವ ಬಯಕೆಯನ್ನು ತಪ್ಪಿಸುವುದರಲ್ಲಿ ನೀನು ಪ್ರಭುವಾಗಿದ್ದು ಈಶ್ವರಸ್ವರೂಪವಲ್ಲದ್ದು ಹೋಮ ಸಾಧನದಾಗಲಾರದು. ಆಮ ವಸ್ತುವು ಹೋಮಸಾಧನವಲ್ಲವೆಂದು ಶ್ರುತಿಯು ನಿಷೇಧಿಸಿದೆ. ನಿನ್ನಲ್ಲಿ ಆಮವನ್ನು ಹೋಮಿಸಬಾರದು. ನಾವೂ ಕೂಡ ಸೋಮನ ಪವನಾದಿ ಸಂಸ್ಕಾರಗಳಿಂದಲೇ ಸಂಸ ತರಾಗಿ ಯಜ್ಞಾದಿಕರ್ಮಗಳು ನಿಮ್ಮಾಪಣಮಾಡುವುದರಲ್ಲಿ ನಿರತರಾಗಿ ಅದರ ಹೋಮಸಾಧನತ್ವವನ್ನು ಹೊಂದೋಣ ಎಂದು ಇದರ ಅರ್ಥವಾದ್ದರಿಂದ ಇದು ತಪ್ತಮುದ್ರಾಂಕನಕ್ಕೆ ಪ್ರಮಾಣವಲ್ಲ. 

ವೇಂ : ಅದು ಸರಿ ಪಂಡಿತರೇ, ನೀವು ಎರಡನೆಯ ಅರ್ಥಹೇಳುವಾಗ ತಪ್ಪಿದಿರಿ, ಶ್ರುತ ಶಬ್ದವು ಅಗ್ನಿಪಕ್ಷದಲ್ಲಿ ಪ್ರಯೋಗವಿರುವುದರಿಂದ ಪವನಾದಿ ಸಂಸ್ಕಾರಕ್ಕೆ ಅದಕ್ಕೆ ಹೇಗೆ ಅರ್ಹತೆ ಬರುತ್ತದೆ ? ಹೇಳಿ ನೋಡೋಣ. 

ಮೃ : ಇಲ್ಲಿ ಕೇಳಿ - 'ಸತ್ತುಭಿಃ ಶ್ರುಣೋತಿ” ಇತ್ಯಾದಿಗಳಲ್ಲಿ ಶ್ರುತಶಬ್ದವು ಸಂಸ್ಕರಿಸಲ್ಪಟ್ಟ ವಸ್ತುಮಾತ್ರದಲ್ಲಿ ಪ್ರಯೋಗ ಕಂಡಿದೆ. ಎರಡು ಅರ್ಥದಲ್ಲಿಯೂ ಪ್ರಯೋಗವು ಯುಕ್ತವೇ ಆಗಿದೆ. ತಪಸ್ಸೆಂದರೆ ಮೋಕ್ಷಸಾಧನ. ಈ ಅರ್ಥದಲ್ಲಿ ತಮೇವ ಬ್ರಹ್ಮಣಾ ವಿವಿದಿಷಂತಿ” ಇತ್ಯಾದಿಶ್ರುತಿಗಳಿಂದ ವಿವಿದಿಷ-ಇದರಮೂಲಕ ಮತ್ತು ವೇದನಾದ್ವಾರಾ ನಿರ್ಣಯಿಸಲ್ಪಟ್ಟಿದೆ. ಆದ್ದರಿಂದ ಮೋಕ್ಷಸಾಧನಾರ್ಥ ಹಾಗೂ ಪವನಸಂಸ್ಕಾರಾರ್ಥದಲ್ಲಿಯೂ ಇದು ಪ್ರಯೋಗವಿದೆ. ಇದೂ ಅಲ್ಲದೆ- ಯಾಗದಲ್ಲಿ ಯಜಮಾನನು ಉದ್ಧಾತೃವಿನ ದೊನ್ನೆಯಲ್ಲಿರುವ ದರ್ಭೆಯಮೇಲೆ ವಿತಮಾನ ಪವಿತ್ರ ಅನುಮಂತ್ರಣ ಮಾಡಬೇಕೆಂದು ಮೇಲಿನ ಅರ್ಥದಲ್ಲಿಯೂ ತಸ್ಮಿನ್ ಉದೀಚೀನದಶಂ ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ” ಎಂಬ ಮಂತ್ರಕ್ಕೆ ವಿನಿಯೋಗವು ಕಂಡುಬರುತ್ತದೆಯಲ್ಲ. ಆಚಾರರೇ. 

ವೇಂ : ಅದು ಸರಿಯಲ್ಲ, ನೀವು ಕಲ್ಪಸೂತ್ರವಿನಿಯೋಗಾನುಸಾರಿಯಾಗಿ ಅನುಮಂತ್ರಣದಲ್ಲಿ ಅರ್ಥವಿದೆಯೆಂದಿರಿ, ಅದಕ್ಕೆ ಪಂಚರಾತ್ರಾದಿ ವಿನಿಯೋಗಾನುಸಾರವಾಗಿ ಸುದರ್ಶನ ಪರತ್ವವೂಾ ಉಂಟು ! ಇದು ನ್ಯಾಯಪ್ರಾಪ್ತವೆಂಬುದು ನಿಮಗೆ ಗೊತ್ತಿಲ್ಲವೇ? 

ಮೃ : (ಆಧ್ಯತೆಯಿಂದ) ದಶಾಪವಿತ್ರಾನುಮಂತ್ರಣದಲ್ಲಿ ವಿನಿಯುಕ್ತವಾದ್ದು ಸುದರ್ಶನಪರತ್ವವಾದಲ್ಲಿ ವಿನಿಯುಕ್ತ ವಿನಿಯೋಗ ವಿರೋಧದೋಷವು ಬರುತ್ತದಲ್ಲವೇ ? 

ವೇಂ : ಕೋ ನಾಮ ವಿನಿಯುಕ್ತ ವಿನಿಯೋಗ ವಿರೋಧೋನಾಮ ? ವಿನಿಯುಕ್ತ ವಿನಿಯೋಗ ವಿರೋಧವೆಂದರೇನು ? ಒಂದು ಮಂತ್ರವು ಒಂದೇ ಅರ್ಥವುಳ್ಳದ್ದಾಗಿ, ಒಂದೇ ಕ್ರಿಯೆಯಲ್ಲಿ ವಿನಿಯೋಗವಾಗಬೇಕೆಂದು ನಿಮ್ಮ ಅಭಿಪ್ರಾಯವೋ ? ಅದು ಹಾಗಲ್ಲ. ಒಂದು ಮಂತ್ರಕ್ಕೆ ಒಂದೇ ಅರ್ಥವಿದ್ದು ಬೇರೆ ಕಡೆ ವಿನಿಯೋಗಿಸುವುದು ವಿರೋಧವೇನೂ ಆಗುವುದಿಲ್ಲ. ಉದಾಹರಣ : “ಪಸಂಯಾಜ” ಎಂಬ ಯಾಗದಲ್ಲಿ ಆಪ್ರಾಯಸ್ಥ ಸಮೇತು ತೇ” ಎಂಬ ಮಂತ್ರವು ವಿನಿಯುಕ್ತವಾಗುತ್ತದಷ್ಟೇ ? ಅದೇ ಮಂತ್ರವನ್ನೇ “ಸೋಮಾವ್ಯಾಯನ” ಎಂಬ ಕ್ರಿಯೆಯಲ್ಲಿಯೂ ಕೂಡ ವಿನಿಯೋಗಿಸುವುದು ಕಂಡುಬಂದಿದೆ. ಆದ್ದರಿಂದ ವಿರೋಧ ದೋಷವಾಗುವುದಿಲ್ಲ. 

ಮೃ : (ಅಸಮಾಧಾನದಿಂದ) ಸ್ವಾಮಿ, ಅದು ಪರಸ್ಪರ ಶ್ರುತಿಗಳಲ್ಲಾಗುವುದಾದರೆ ವಿರೋಧವಿಲ್ಲ, ಒಪ್ಪುತ್ತೇನೆ. ಆದರೆ ಶ್ರುತಿಗಿಂತ ಸ್ಮೃತಿಯು ದುರ್ಬಲವಾದ್ದರಿಂದ ಶ್ರುತಿಯಲ್ಲಿ ಒಂದು ಕಡೆ ವಿನಿಯೋಗಿಸಿದ್ದನ್ನು ಸ್ಮೃತಿಯಿಂದ ಮತ್ತೊಂದು ಕಡೆ ವಿನಿಯೋಗಿಸಿದರೆ ಮೇಲಿನ ದೋಷಬರುವುದೆಂದು ಅಭಿಪ್ರಾಯ ವೇಂ : ಶಾಸ್ತ್ರಿಗಳೇ, ನಿಮ್ಮಿವಾದಯುಕ್ತವಲ್ಲ, ನಾಪಿ ಶ್ರುತ್ಯಾ ವಿನಿಯುಕ್ತಸ್ಯ ಅನ್ಯತರ ಸ್ಮೃತ್ಯಾ ವಿನಿಯೋಗೋ ವಿರುದ್ಧ ಶ್ರುತಿಯಿಂದ ವಿನಿಯುಕ್ತವಾದುದಕ್ಕೆ ಬೇರೆ ಸ್ಮತಿಯಿಂದ ವಿನಿಯೋಗಕಂಡುಬರುವುದು ವಿರುದ್ಧವಲ್ಲ ! ವಾತಪ್ರೇಣೋ ಪತಿಷ್ಠತ ಏತೇನ ವೈ ವತ್ತಪ್ರೀ” ಎಂಬ ಶ್ರುತಿಯು “ಚಯನದಲ್ಲಿ ವಿನಿಯುಕ್ತವಾಗುತ್ತದೆ. ವಾತಪ್ರಸಜಾತಂ ವಾತ್ಸ ಪ್ರೇಣಾಭಿವೃಷೇತ್” ಎಂಬ ಗೃಹಸ್ಕೃತಿಯಿಂದ ಜಾತಕರ್ಮದಲ್ಲಿ 'ವಾತಪ್ರೇಣೈವ ಸಾಯಂ ಪ್ರಾತರುಪತಿಷ್ಠತ ಇತ್ಯೇಕ” ಎಂಬ ಸ್ಮೃತಿಯಿಂದ ಅಗ್ನಿಹೋತ್ರದಲ್ಲಿಯೂ ವಿನಿಯೋಗವು ಕಂಡುಬಂದಿದೆ. ಅದೂ ಅಲ್ಲದೆ “ಇಷೇತ್ತೇ ಬರ್ಹಿರಾದತ್ತ' ಎಂದು ಪಶುಯಾಗದ ಬರ್ಹಿಗಳ ಆಧಾನದಲ್ಲಿ ಈ ಶ್ರುತಿಯು ವಿನಿಯುಕ್ತವಾಗಿದೆ. ಮತ್ತು ಇಷೇತೈತಿ ಶಾಖಾಮಾಚ್ಛಿನ ಎಂಬ ಕಲ್ಪಸೂತ್ರದಿಂದ ಶಾಖಾಛೇದನದಲ್ಲಿಯೂ ಕೂಡ ವಿನಿಯೋಗವಾಗಿರುವುದು ಕಂಡುಬಂದಿದೆ. 

ಮೃ : (ಕೋಪದಿಂದ) ಒಂದರ್ಥವುಳ್ಳ ಶ್ರುತಿಗೆ ಬೇರೊಂದರ್ಥ ಹೇಳುವುದು ವಿರುದ್ಧಸ್ವಾಮಿ, ವಿರುದ್ಧ! ವೆಂ : (ದರಹಾಸಬೀರಿ) ಶಾಂತಿ, ಶಾಸ್ತ್ರಿಗಳೇ ಶಾಂತಿ ! ಸಮಾಧಾನದಿಂದ ವಿಚಾರಮಾಡಿದರೆ ಆಗ ನಿಮ್ಮ ತಪ್ಪು ನಿಮಗರ್ಥವಾಗುತ್ತದೆ. ನೀವು ಹೇಳಿದ್ದನ್ನು ಒಪ್ಪಿದರೆ ಆಗ ನಾನಾರ್ಥಶಬ್ದಗಳು ಕೋಶದಿಂದ ಅಳಿಸಿಹೋಗಬೇಕಾದೀತು ! 

ಸಭಿಕರು ನಕ್ಕು ಆಚಾರರ ವಾದಶೈಲಿಗೆ ಮೆಚ್ಚಿ ಕರತಾಡನಮಾಡುತ್ತಿರಲು ಉದ್ರಿಕ್ತರಾದ ಶಾಸ್ತ್ರಿಗಳು ಕೋಪದಿಂದ “ಆಚಾರರೇ, ಪಂಚರಾತ್ರವು ಕೆಲವಡೆ ವೇದವಿಸಂವಾದಿಯಾದ್ದರಿಂದ ಅದು ಪ್ರಮಾಣವಲ್ಲ!” ಎಂದರು. 

ವೆಂ : ಶಾಸ್ತ್ರಿಗಳೇ, ನನ್ನ ಮೇಲಿನ ಕೋಪವನ್ನು ಪಂಚರಾತ್ರಾಗಮದ ಮೇಲೇಕೆ ತೋರುವಿರಿ ? ನಾನು ಅಥವಾ ನೀವು ಅದು ಅಪ್ರಾಮಾಣವೆಂದು ಹೇಳಿದ ಮಾತ್ರದಿಂದ ಪಂಚರಾತ್ರದ ಪ್ರಮಾಣಕ್ಕೆ ಕುಂದುಂಟಾದೀತೆ ? ಸಕಲಶಾಸ್ತ್ರಕಾರೂ “ಋಗ್ ಯಜುಸ್ಸಾಮಾಥರ್ವಾಶ್ಚ ಭಾರತಂ ಪಂಚರಾತ್ರು ಮೂಲರಾಮಾಯಣಂ ಚೈವ ಶಾಸ್ತ್ರಮಿತ್ಯಭಿಧೀಯತೇ ” ಎಂದು ಪಂಚರಾತ್ರಕ್ಕೆ ಶಾಸ್ತ್ರತ್ವವನ್ನು ಅಂಗೀಕರಿಸಿರುವುದರಿಂದ ನಿಮ್ಮಿಮಾತು ಯುಕ್ತವೆಂದಾರು ಒಪ್ಪಲಾರರು ! ಕೇಳಿ “ಪಂಚರಾತ್ರಸ್ಯ ಕೃಷ್ಣಸ್ಥ ವಕ್ತಾ ನಾರಾಯಣ ಸ್ವಯಂ' ಮುಂತಾದ ಪ್ರಮಾಣದಂತೆ ಪಂಚರಾತ್ರವು ಸರ್ವಜ್ಞರಾದ ನಾರಾಯಣದೇವರಿಂದಲೇ ಪ್ರಣೀತವಾಗಿರುವುದರಿಂದ ಅದಕ್ಕೆ ಅವಶ್ಯ ತಲೆಬಾಗಿ ಪ್ರಾಮಾಣ್ಯವನ್ನು ಒಪ್ಪಲೇಬೇಕು ! 

ಕೆಲವೆಡೆ ಪಂಚರಾತ್ರವು ವೇದವಿಸಂವಾದಿಯಾಗಿ ಕಂಡುಬರುವುದಕ್ಕೆ ಮನನ ಯೋಗ್ಯತೆಯಿಲ್ಲದಿರುವುದು ಕಾರಣವೇ ವಿನಃ ಅದು ಅಪ್ರಾಮಾಣ್ಯವಾದ್ದರಿಂದಲ್ಲ. ಒಂದು ವೇಳೆ ಅದು ವೇದವಿಸಂವಾದಿಯೆಂದು ಅಪ್ರಾಮಾಣ್ಯ ಹೇಳುವುದಾದರೆ ಕಾರೀರಾದಿಯಾಗವನ್ನು ವಿಧಿಸುವ ಶ್ರುತಿಗಳೂ ಕೂಡ ಅಪ್ರಾಮಾಣ್ಯವಾಗಬೇಕಾದೀತು ! ಆದ್ದರಿಂದ ಶ್ರುತಿಗಳೂ ಕೂಡ ಅಪ್ರಮಾಣ್ಯವಾಗಬೇಕಾದೀತು ! ಅದ್ದರಿಂದ ಪುರುಷನ ಬುದ್ಧಿವೈಗುಣ್ಯದಿಂದ ವಿಸಂವಾದಿಯಾಗಿ ಕಂಡು ಬರುವುದಾದರೂ ಅದು ಅಪ್ರಾಮಾಣ್ಯವೇನಲ್ಲ. ಉದಾಹರಣೆಗೆ ಹೇಳುವುದಾದರೆ “ಕಾರೀರ್ಯಾ ಯಜೇತ ವೃಷ್ಟಿ ಕಾಮ:” ಮಳೆಯನ್ನು ಅಪೇಕ್ಷಿಸುವವರು ಕಾರೀರಿ ಯಾಗವನ್ನಾಚರಿಸಬೇಕೆಂದು ಶ್ರುತಿಯು ಹೇಳುವುದು. ಅದರಿಂದ ವೃಷ್ಟಿಯಾಗಲಿಲ್ಲ ! ಆಗ ಶ್ರುತಿಯು ಅಪ್ರಾಮಾಣವೆಂದು ಹೇಳಲಾದೀತೆ ? ಆಗ ಕೆಲವಾರು ವೈಗುಣ್ಯ ನಿಮಿತ್ತವಾದ ಪ್ರತಿಬಂಧಕಗಳನ್ನು ಒಪ್ಪಬೇಕಾಗುತ್ತದೆ. ಕರ್ತೃ, ಕರ್ಮ, ಕಾಲ, ಮಂತ್ರ, ಹವಿಃಪ್ರದಾನಗಳಲ್ಲಿ ಏನೋ ತಪ್ಪಾಗಿದ್ದು, ಯಾಗವು ಸಕ್ರಮವಾಗಿ ನೆರವೇರಲಿಲ್ಲವಾದ್ದರಿಂದ ಮಳೆಯು ಬರಲಿಲ್ಲವೆಂದು ಹೇಳಿ ಶ್ರುತಿಗೆ ಪ್ರಾಮಾಣ್ಯವನ್ನು ಸಮರ್ಥಿಸುವಂತೆ, ಇಲ್ಲಿಯೂ ಪಂಚರಾತ್ರಕ್ಕೂ ಪ್ರಾಮಾಣ್ಯವನ್ನು ಒಪ್ಪಲೇಬೇಕು. ಅಂತೂ ವಿನಿಯುಕ್ತವಿನಿಯೋಗವು ವಿರುದ್ಧವಲ್ಲವೆಂದೂ, ಅಂತೆಯೇ ತಪ್ತ ಮುದ್ರಾಂಕನವೂ ಶ್ರುತಿಸಿದ್ಧವಾದಂತಾಯಿತು. 

ವಾದಮಧ್ಯಸ್ಥರು, ಪಂಡಿತರು, ಸಭಾಸದರು ಆಚಾರ್ಯರ ವಾದವೈಖರಿಗೆ ತಲೆದೂಗಿ ಕರತಾಡನ ಮಾಡುತ್ತಿರಲು ಮೃತ್ಯುಂಜಯಶಾಸ್ತ್ರಿಗಳು ಏನು ಹೇಳಲೂ ತೋರದೆ ನಿರುತ್ತರರಾಗಿ ಕುಳಿತರು. ವಾದವನ್ನು ಮುಂದುವರೆಸಿ ಶಾಸ್ತ್ರಿಗಳೇ ತಪ್ತಮುದ್ರಾಂಕನಕ್ಕೆ ಇನ್ನೊಂದು ಶ್ರುತಿಯ ಪ್ರಮಾಣವನ್ನು ಹೇಳುತ್ತೇನೆ. ಕೇಳಿ-

“ಚಕ್ರಂ ಬಿಭರ್ತಿ ವಪುಷಾ ತಂ ಬಲಂ ದೇವಾನಾಂ ಅಮೃತಸ್ಯ ಎಷ್ಟೋ ! ಸ ಏತಿ ನಾಕಂ ದುರಿತಾವಿಧೂಯ ವಿಶಂತಿ ಯದ್ವತಯೋ ವೀತರಾಗಾಃ ||” – ಅಥರ್ವಣಶ್ರುತಿ

ಇದರ ಅರ್ಥ : ಅಗ್ನಿಯಿಂದ ತಪ್ತವಾದ, ದೇವತೆಗಳಿಗೆ ಬಲಪ್ರದವಾದ, ಅಸುರಾದಿ ಸಂಹಾರದ್ವಾರಾ ಮರಣರಹಿತವಾದ, ವಿಷ್ಣುವಿನ ಸಂಬಂಧಿಯಾದ ಚಕ್ರವನ್ನು (ಇಲ್ಲಿ ಚಕ್ರ ಎಂಬ ಪದದಿಂದ ಶಂಖಾದಿಗಳನ್ನೂ ಎಂಬರ್ಥವು ಉಪಲಕ್ಷಣಾ ಮರ್ಯಾದೆಯಿಂದ ಬರುತ್ತದಾದ್ದರಿಂದ ಇಂಥ ಚಕ್ರ-ಶಂಖಾದಿಗಳನ್ನು ಎಂದರ್ಥ). ಯಾವ ಪುರುಷನು ಶರೀರದಲ್ಲಿ ಧರಿಸುವನೋ ಅವನು ದುರಿತಗಳನ್ನು ಪರಿಹರಿಸಿಕೊಂಡು (ದುರಿತ ಪದದಿಂದ ಪುಣ್ಯವನ್ನು ಎಂಬರ್ಥವೂ ಉಪಲಕ್ಷಣದಿಂದ ಬರುತ್ತದೆ) ಅಂದರೆ ಮೋಕ್ಷಕ್ಕೆ ಪ್ರತಿಬಂಧಕವಾದ ಪುಣ್ಯವನ್ನು ಕಳೆದುಕೊಂಡು - ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ” ಎಂಬಂತೆ ಪುಣ್ಯಪಾಪಗಳನ್ನು ಕಳೆದುಕೊಂಡು, 'ವೀತ ರಾಗಾ' ವಿಷಯ ಸುಖಾದಿಗಳಲ್ಲಿ ದೋಷವನ್ನು ಕಂಡು ಐಹಿಕಾಮುಷ್ಠಿಕ ಭೋಗಗಳಲ್ಲಿ ವಿರಕ್ತರಾದ ಯೋಗಿಗಳು ದುಃಖರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಇಲ್ಲಿ ನಾಕ' ಪದಕ್ಕೆ ಸ್ವರ್ಗವೆಂದರ್ಥೈಸಬಾರದು. ಅಲ್ಲಿ ದುಃಖಾದಿಗಳ ಸಂಭವವುಂಟು. ವೀತರಾಗಾದಿಗಳು ಅಲ್ಲಿ ಸಂಭವಿಸುವುದಿಲ್ಲ. ಆದುದರಿಂದ ನಾಕ ಪದಕ್ಕೆ ಮೋಕ್ಷವೆಂದೇ ಅರ್ಥ, ಇಂಥ ಮೋಕ್ಷವನ್ನು ಪಡೆಯುತ್ತಾರೆ - ಎಂದು ಈ ಶ್ರುತಿಯು ಸಾರುತ್ತಿದೆ. ಅಂತೂ ಮೋಕ್ಷಸಾಧನವನ್ನೂ, ಪಾಪಪರಿಹಾರವನ್ನೂ ಬಯಸುವವರು ತಪ್ತಚಕ್ರಾದಿಗಳನ್ನು ಭುಜಗಳಲ್ಲಿ ಧರಿಸಬೇಕೆಂಬ ನನ್ನ ವಾಕ್ಯಾರ್ಥವು ಸಿದ್ಧಿಸಿತು. 

ಇದೂ ಅಲ್ಲದೆ ಚರಣಂ ಪವಿತ್ರಂ ವಿತತಂ ಪುರಾಣಂ ಯೇನ ಪೂತಸ್ವರತಿ ದುಷ್ಕೃತಾನಿ | ತೇನ ಪವಿತ್ರೇಣ ಶುದೇನ ಪೂತಾ ಅತಿಪಾತ್ಮಾನಮರಾತಿಂ ತರೇಮ ||” ಎಂಬ ತೈತ್ತಿರೀಯಶ್ರುತಿ ಮತ್ತು ಲೋಕಸ್ಯ ದ್ವಾರಮರ್ಚಿಮತ್ ಪವಿತ್ರಂ ಜ್ಯೋತಿಷ್ಟದ್ದಾ ಜಮಾನಂ ಮಹತ್ವದಮೃತಸ್ಯ ಧಾರಾ | ಬಹುದಾ ದೋಹಮಾನಂ ಚರಣಂ ನೋ ಲೋಕೇ ಸಧಿತಾಂ ದಧಾತು ॥” ಎಂಬ ಕಾರಕಶ್ರುತಿಗಳು ತಪ್ತ ಮುದ್ರಾಧಾರಣೆಗೆ ಪ್ರಮಾಣವಾಗಿವೆ. ವೇಂಕಟನಾಥಾಚಾರರು ಹೀಗೆ ವಿದ್ದತ್ತೂರ್ಣವಾಗಿ ಧೀರಗಂಭೀರವಾಣಿಯಿಂದ ತಪ್ತಮುದ್ರಾಧಾರಣವು ಅವಶ್ಯ ಅನುಷೇಯವೆಂದು ಸಿದ್ಧಮಾಡಿ ತೋರಿಸಿದ್ದರಿಂದ ವಿದ್ವನ್ಮಂಡಲಿ, ಸಭಾಸದರು ಕರತಾಡನದಿಂದ ಹರ್ಷವನ್ನು ವ್ಯಕ್ತಪಡಿಸಿ ಆಚಾರರ ವಾಕ್ಯಾರ್ಥಶೈಲಿಯನ್ನು ಮೆಚ್ಚುತ್ತಿರಲು ದೀಕ್ಷಿತರು, ರಘುನಾಥಭೂಪಾಲರ ಮುಖದಲ್ಲಿ ತೃಪ್ತಿಯ, ಮೆಚ್ಚುಕೆಯ ಮಂದಹಾಸ ಲಾಸ್ಯವಾಡಿತು. 

“ಪಂಡಿತರೇ, ನೀವು ಇನ್ನೂ ಪ್ರಮಾಣಗಳನ್ನು ಬಯಸುವುದಾದರೆ ನಾನು ಹೇರಳ ಪ್ರಮಾಣಗಳನ್ನು ನಿರೂಪಿಸಲು ಸಿದ್ಧನಾಗಿದ್ದೇನೆ. ಇಲ್ಲಿ ಕೇಳಿ - “ವಾಜಸನೇಯ, ಭಾಸ್ಕರಸಂಹಿತಾ, ಅಥರ್ವಣ, ಮಹೋಪನಿಷತ್ತು, ಶಥಪಥಬ್ರಾಹ್ಮಣ, ನವಖಂಡ, ಆಪಸ್ತಂಭ, ಮಂತ್ರಬ್ರಾಹ್ಮಣ, ಹಾರೀತ, ಮಾತೃ, ವಾಸಿಷ್ಠ, ಶಾಂಡಿಲ್ಯ, ವೃದ್ಧಮನು, ಶಂಖ, ವ್ಯಾಸ, ಪಾರಾಶರ” ಮುಂತಾದ ಸ್ಮೃತಿಗಳೂ;” ಮಹಾಭಾರತ ಇತಿಹಾಸ, ಪಾದ್ಮ, ಆಗ್ನಿಯ, ಮಾತ್ಯ, ಆದಿತ್ಯ, ಮಾರ್ಕಂಡೇಯ, ಬ್ರಹಾಂಡ ಸ್ಕಾಂದ, ವಾಮನ, ಲಿಂಗ, ಕೂರ್ಮ, ಪರಾಶರ, ವಿಷ್ಣು' - ಮುಂತಾದ ಪುರಾಣಗಳೂ; ವಾಸಿಷ್ಠ, ವಿಹಗೇಶ್ವರ, ಪಾರಾಶರ,” ಮುಂತಾದ ಸಂಹಿತೆಗಳೂ-ತಪ್ತಮುದ್ರಾಂಕನ ವಿಷಯಕ್ಕೆ ಪ್ರಮಾಣಗಳಾಗಿರುವುದರಿಂದ........ 

ಎಂದು ಆಚಾರ್ಯರು ಹೇಳುತ್ತಿರುವಂತೆಯೇ ಸಭಿಕರು ಹರ್ಷಾತಿರೇಕದಿಂದ “ಶ್ರುತಂ ಶೋತವಂ” ಎಂದು ಅಭಿನಂದಿಸುತ್ತಿರುವಾಗ ಮೃತ್ಯುಂಜಯಶಾಸ್ತ್ರಿಗಳು ಆಚಾರ್ಯರ ಆಳವಾದ ಜ್ಞಾನ, ಉಪಪಾದನಾ ಶೈಲಿಯಿಂದ ನಿಬ್ಬೆರಗಾಗಿ.... ಅರ್ಧೋಕ್ತಿಯಲ್ಲಿಯೇ “ಆಚಾರ್ಯ! ಅಲಮತಿವಿಸ್ತರೇಣ! ಸ್ವಾಮಿ ಸಾಕು, ಸಾಕು. ಇನ್ನು ಹೆಚ್ಚು ಹೇಳಬೇಕಾಗಿಲ್ಲ! ನೀವು ಶ್ರುತಿ-ಸ್ಮೃತಿ-ಪುರಾಣ-ಸಂಹಿತೆ ಮುಂತಾದ ಪ್ರಮಾಣಗಳಿಗೆ ಸಮುದ್ರದಂತಿದ್ದೀರಿ!!” ಎಂದು ಉದ್ದರಿಸಿದರು. 

ಆಗ ಯಜ್ಞನಾರಾಯಣ ದೀಕ್ಷಿತರೇ ಮೊದಲಾದ ಮಧ್ಯಸ್ಥರು ನಸುನಗುತ್ತಾ 'ಶಾಸ್ತ್ರಿಗಳೇ, ಇದರಮೇಲೂ ವಾದಿಸುವ ಇಚ್ಛೆಯುಂಟೆ?” ಎಂದು ಪ್ರಶ್ನಿಸಲು ಶಾಸ್ತ್ರಿಗಳು ಅಪಮಾನ-ಲಜ್ಜೆ-ಪಶ್ಚಾತ್ತಾಪಗಳಿಂದ ತಲೆತಗ್ಗಿಸಿ ಕುಳಿತಿದ್ದನ್ನು ಕಂಡು ಶ್ರೀವೆಂಕಟನಾಥಾಚಾರ್ಯರು ವಾಕ್ಯಾರ್ಥದಲ್ಲಿ ಜಯಶಾಲಿಗಳಾದರು !” ಎಂದು ಘೋಷಿಸಿದರು. ಆಗ ಶಾಸ್ತ್ರಿಗಳನ್ನು ಪ್ರೋತ್ಸಾಹಿಸಿ ವಾದಕ್ಕೆ ಮುಂದೆ ತಳಿದ್ದ ಅಸೂಯಾಪರ ಪಂಡಿತರು ನಿಸ್ತೇಜರಾಗಿ ಒಬ್ಬೊಬ್ಬರಾಗಿ ಮೆಲ್ಲನೆ ವೇದಿಕೆಯಿಂದ ಜಾರಿಹೋದರು ! 

ಆಚಾರ್ಯರು ವಿನಯದಿಂದ ಸಭೆಗೆ ಕರಮುಗಿದು ಶ್ರೀಸುಧೀಂದ್ರತೀರ್ಥರ ಸನ್ನಿಧಿಗೆ ನಡೆತಂದರು. ಶ್ರೀಸುಧೀಂದ್ರರು “ವೆಂಕಟನಾಥಾಚಾರ ಧನ್ಯ ! ಶ್ರೀಮದಾಚಾರ್ಯರ ಪರಮಸೇವೆ ಮಾಡಿದ್ದೀರಿ. ಮಹಾಸಂಸ್ಥಾನದ ಗೌರವವನ್ನು ಕಾಪಾಡಿದ್ದೀರಿ. ಶ್ರೀಮೂಲರಘುಪತಿ ವೇದವ್ಯಾಸದೇವರು ನಿಮಗೆ ಸನ್ಮಂಗಳಗಳನ್ನು ಕರುಣಿಸಲಿ” ಎಂದು ಮನದುಂಬಿ ಹರಿಸಿದರು. 

ಯಜ್ಞನಾರಾಯಣದೀಕ್ಷಿತರು ಇದೊಂದು ಅಪೂರ್ವ ಸಂದರ್ಭ. ರಾಜಗುರುಗಳ ಪ್ರಿಯಶಿಷ್ಯರಾದ ನಮ್ಮ ಶ್ರೀವೆಂಕಟನಾಥಾಚಾರ್ಯರು ಸಕಲಶಾಸ್ತ್ರಗಳಲ್ಲಿ ಅನಿತರಸಾಧಾರಣ ಪಾಂಡಿತ್ಯವನ್ನು ಪ್ರದರ್ಶಿಸಿ ನಮ್ಮ ತಂಡಾಪುರದ ಆಸ್ಥಾನಕ್ಕೆ ಅಪಾರ ಕೀರ್ತಿ ತಂದಿದ್ದಾರೆ ! ತಪ್ತಮುದ್ರಾಂಕನ ಸಮರ್ಥನ ವಿಷಯದಲ್ಲಿ ಇವರು ಮಹಾಪ್ರೌಢರೂ, ಅತ್ಯಂತ ಚತುರರೂ ಆಗಿದ್ದಾರೆ. ಇವರಿಗೆ ಸಮಾನರಾದ ಪಂಡಿತರು ಬೇರೊಬ್ಬರಿಲ್ಲವೆಂದು ನಾನು ಹೃತ್ತೂರ್ವಕವಾಗಿ ಘೋಷಿಸಿ ನನ್ನ ಧನ್ಯವಾದಗಳನ್ನರ್ಪಿಸುತ್ತೇನೆ” 357 ಎಂದು ಹೇಳಿದರು. ಆಗ ರಘುನಾಥಭೂಪಾಲನು ಆಚಾರರಿಗೆ ಸ್ವರ್ಣಹಾರ, ಜೋಡಿಶಾಲು- ಗಳನ್ನಿತ್ತು ಸನ್ಮಾನಿಸಿದನು. 

ಆನಂತರ ಅತೃಪೂರ್ವರೀತಿಯಲ್ಲಿ ಶ್ರೀಸುಧೀಂದ್ರಗುರುಗಳು ಸಮಾರೋಪಭಾಷಣ ಮಾಡಿದಮೇಲೆ ಮಹಾರಾಜನು ಸಮಸ್ತ ಪಂಡಿತರಿಗೂ ಗುರುಗಳಹಸ್ತದಿಂದ ಸಂಭಾವನಾ ಪ್ರದಾನಮಾಡಿಸಿ ಕೃತಾರ್ಥನಾದನು. ಹೀಗೆ ಆ ಮಹಾವಿದ್ವತ್ಸಭೆಯು ವೆಂಕಟನಾಥರ ವಿಜಯದೊಂದಿಗೆ ಮುಕ್ತಾಯವಾಯಿತು. ಮುಂದೆ ಒಂದೆರಡುದಿನಗಳಾದ ಮೇಲೆ ಶ್ರೀಗಳವರು ರಾಜನಿಂದ ಬೀಳ್ಕೊಂಡು ಕುಂಭಕೋಣಕ್ಕೆ ದಯಮಾಡಿಸಿದರು.