ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೫೬. ಕಾಕತಾಲೀಯ ವಾಕ್ಯಾರ್ಥ
ಮಾರ್ಗಶಿರ ಬಹುಳ ಬಿದಿಗೆಯಿಂದ ಮೂರುದಿನ ಅರಮನೆಯಲ್ಲಿ ಸುಧೀಂದ್ರರ ಅಧ್ಯಕ್ಷತೆಯಲ್ಲಿ ವಿದ್ದತ್ತಭೆ ನಡೆಯುವುದೆಂದು ತೀರ್ಮಾನವಾಗಿತ್ತು. ಶ್ಯಾಮದೀಕ್ಷಿತರನ್ನು ವಾದದಲ್ಲಿ ಗೆದ್ದು ತಮ್ಮೆಲ್ಲಾ ಆಶೆಯನ್ನು ಮಣ್ಣುಗೂಡಿಸಿದ ವೇಂಕಟನಾಥರನ್ನು ರಾಜ ಅರಮನೆಗೆ ಕರೆಸಿಕೊಂಡು ವಿಶೇಷವಾಗಿ ಸನ್ಮಾನಿಸಿದ್ದು ಕುಹಕಿ ಪಂಡಿತರಿಗೆ ದುಃಖಕ್ಕೆ ಕಾರಣವಾಗಿತ್ತು. ಈಗ ರಾಜನೆದುರಿಗೆ ವೇಂಕಟನಾಥರಿಗೆ ಮುಖಭಂಗವಾಗುವಂತೆ ಮಾಡಿ, ಅದರಿಂದ ಸುಧೀಂದ್ರರ ಕೀರ್ತಿಗೆ ಮಸಿ ಬಳಿಯಲು ಅವರು ದುರಾಲೋಚನೆ ನಡೆಸಿದರು. ಅವರಿಗೆ ಸಹಾಯಕರಾಗಿ ವಿಬುಧಾನಂದ ಭಟ್ಟಾಚಾರರೆಂಬ ಉತ್ತರಭಾರತದ ಪಂಡಿತರೊಬ್ಬರು ದೊರಕಿದ್ದರಿಂದ ಅವರಿಗೆಲ್ಲ ಹೊಸ ಹುರುಪುಂಟಾಯಿತು. ವಿಬುಧಾನಂದರು ಸಾಹಿತ್ಯಶಾಸ್ತ್ರವಿಶಾರದರೆಂದು ರಘುನಾಥಭೂಪಾಲ ಅವರಿಗೆ ಆಸ್ಥಾನಪಂಡಿತ ಪದವಿಯನ್ನು ನೀಡಿದ್ದನು. ವಿಬುಧಾನಂದರಿಗೆ “ಭಟ್ಟಾಚಾರ್ಯ” ಎಂಬ ಶ್ರೇಷ್ಠ ಬಿರುದಿತ್ತು. ಈ ಸಲ ಅಲಂಕಾರಶಾಸ್ತ್ರದಲ್ಲಿ ವೇಂಕಟನಾಥರನ್ನು ವಾದಕ್ಕೆಳದು ಸೋಲಿಸಿ ಸೇಡುತೀರಿಸಿಕೊಳ್ಳಲು ಕುತಂತ್ರ ನಡೆಸಿ ವಿಶ್ಲೇಷಿ ಪಂಡಿತರು ಸಿದ್ಧರಾದರು.
ವಿದ್ಧತ್ತಭೆ ಶ್ರೀಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಪಂಡಿತರು, ಕವಿ-ಗಾಯಕರು, ಪುರಪ್ರಮುಖರಿಂದ ರಾಜಸ್ಥಾನ ತುಂಬಿಹೋಗಿತ್ತು. ವಿಬುಧಾನಂದರು ಅಸೂಯಾಗ್ರಸ್ತ ವಿದ್ವಾಂಸರೊಡನೆ ವೇದಿಕೆಯೇರಿ ಕಳಿತು “ಅಲಂಕಾರಶಾಸ್ತ್ರದಲ್ಲಿ ನನ್ನೊಡನೆ ವಾಕ್ಯಾರ್ಥ ಮಾಡಬಲ್ಲ ಧೀರರಿದ್ದರೆ ಬನ್ನಿ” ಎಂದರು. ಶ್ರೀಗಳವರು ನಸುನಕ್ಕು ವೇಂಕಟನಾಥರತ್ತ ದೃಷ್ಟಿ ಬೀರಿದರು. ಗುರುಗಳ ಭಾವವರಿತ ಆಚಾರರು ವೇದಿಕೆಯೇರಿ ಕುಳಿತರು. ವಿಬುಧಾನಂದರು "ನಾನು ಸೋತರೆ ನನ್ನ ಭಟ್ಟಾಚಾರ ಬಿರುದನ್ನು ತ್ಯಜಿಸುತ್ತೇನೆ” ಎಂದರು. ನಂತರ ವಾದನಿಯಮ-ಮಧ್ಯಸ್ಥರ ನೇಮಕವಾದ ಮೇಲೆ ವಾದ ಪ್ರಾರಂಭವಾಯಿತು.
ವಿಬುಧಾನಂದರು : ಆಚಾರರೇ, ಹಿಂದೆ ನೀವು ಆಸ್ಥಾನದಲ್ಲಿ ಸರಿಯಾದ ಪಂಡಿತರಿಲ್ಲದಿರುವಾಗ ವಿಜಯಗಳಿಸಿದ್ದು ಕಾಕತಾಳೀಯವೆಂದು ನನ್ನ ಅಭಿಮತ.
ವೇಂಕಟನಾಥರು : ನಿಮ್ಮ ಮಾತು ಅಸಂಗತ. ನಿಮ್ಮದು ವಿಷಮದೃಷ್ಟಾಂತ. ಅಂದಿನ ನನ್ನ ವಿಜಯ ಕಾಕತಾಳೀಯವೆಂತಾಯಿತು ಎಂದು ಸಮನ್ವಯಮಾಡಿ ಸಮರ್ಥಿಸಬಲ್ಲಿರಾ ?
ವಿಬುಧ : ( ಉಪಹಾಸದಿಂದ ) ಅದಂತಿರಲಿ ಕಾಕತಾಳೀಯವೆಂದರೇನು ? ನಿಮಗೆ ಗೊತ್ತೆ ?
ವೆಂಕಟ : ಅಲಂಕಾರಶಾಸ್ತ್ರದಲ್ಲಿ ವಾದಮಾಡುವ ನಿಮಗದು ತಿಳಿಯದೆ ?
ವಿಭುಧ : ನೀವು ಅಲಂಕಾರಶಾಸ್ತ್ರದಲ್ಲಿ ವಾದಮಾಡಲು ಸಮರ್ಥರೇ ?
ವೇಂಕಟ : ವಾಗಾಡಂಬರ ಬೇಡ, ವಾದ ಪ್ರಾರಂಭಿಸಿರಿ.
ವಿಬುಧ : ಈಗ ಹೇಳಿ, ಕಾಕತಾಳೀಯಶಬ್ದ ಎಲ್ಲಿ ಬಂದಿದೆ ?
ವೇಂಕಟ : ಲುಪೋಪಮಾಲಂಕಾರಗಳ ಉದಾಹರಣೆಯಲ್ಲಿ ಬಂದಿದೆ.
ವಿಬುಧ : ಸರಿ, ಸ್ವಲ್ಪ ವಿವರಿಸಿ ಹೇಳಿ,
ವೇಂಕಟ : ಲುಪೋಪಮಾಲಂಕಾರವು ಉಪಮಾಲಂಕಾರಗಳಲ್ಲಿನ ಪ್ರಭೇದವಷ್ಟೇ ? ಅವುಗಳಿಗೆ ಮೂಲಭೂತವಾಗಿ ಪೂರ್ಣೋಪಮಾಲಂಕಾರವು ಪ್ರಸಿದ್ಧವಾಗಿದೆ. ಅದಕ್ಕೆ ಪ್ರಾಥಮ್ಯವನ್ನೀಯುವುದು ಎಲ್ಲ ಅಲಂಕಾರಿಕರಿಗೂ ಸಮ್ಮತವಾದುದು. ಅಲಂಕಾರಗಳಲ್ಲಿ ಔಪಮ್ಯ ಮೂಲಕ, ನ್ಯಾಯ ಮೂಲಕ, ವಚನಮೂಲಕವಾಗಿ ಅಲಂಕಾರಗಳನ್ನು ನಿರೂಪಿಸುವರು. ಉಪಮಾಲಂಕಾರವನ್ನೇ ಪ್ರಧಾನವಾಗಿ ಮೊದಲು ನಿರೂಪಿಸಲು ಕಾರಣವೇನು ?
ವಿಬುಧ : ಆಚಾರರೇ, ನಿಮ್ಮ ವೇದಾಂತದರ್ಶನದಲ್ಲಿ ಸೂತ್ರಪದಕ್ಕೆ ಪ್ರಧಾನವಾದ ಬ್ರಹ್ಮ ಸೂತ್ರವೆಂತಲೂ, ಆಚಾರಪದಕ್ಕೆ ಪ್ರಧಾನರಾದ ಮಧ್ವಾಚಾರರೆಂತಲೂ ಅರ್ಥಮಾಡಿ ಪ್ರಥಮಸ್ಥಾನ ಕೊಡುವಂತೆ, ಅಲಂಕಾರಶಾಸ್ತ್ರದಲ್ಲೂ ಅಲಂಕಾರ ಶಬ್ದದಿಂದ ಸರ್ವಾಲಂಕಾರಗಳಿಗೂ ಮೂಲಭೂತವಾದ ಉಪಮಾಲಂಕಾರವನ್ನೇ ಪ್ರಥಮತಃ ನಿರೂಪಿಸುವುದು ಯುಕ್ತವೇ ಆಗಿದೆ.
ವೇಂಕಟ : ಯಥಾಖಲು ಏಕಮೇವ ಜಾತರೂಪಸ್ವರೂಪಂ ತಾನಿ ತಾನ್ಯವಸ್ಥಾಂತರಾಣ್ಯಶುವಾನಾಂ ಕುಂಡಲ-ಕಿರೀಟ- ಕಂಕಣ-ಕೇಯೂರ-ಕಿಂಕಿಣೀನೂಪುರಾದನೇಕಾಲಂಕಾರಾನುಸೂತು ಉಪಲಭ್ಯತೇ, ತಥಾ ಏಕಮೇವ ಪುನರುಪಮಾಶರೀರಮಪಿ ಚಂದ್ರ ಇವ ಮುಖಮಿತ್ಯಾದಿ ಸಾದೃಶ್ಯವರ್ಣನಂ ತತ್ತದುಕ್ತಿಭಂಗಿಭೇದಾನವಗಾಹಮಾನ ರೂಪಕ ದೃಷ್ಟಾಂತ-ದೀಪಕಾದ್ಯ- ನೇಕಾಲಂಕಾರಾನುಸೂತಮನುಭೂಯತೇ!
ನಿಜ, ಭಟ್ಟಾಚಾರರೇ, ಜಾತರೂಪನೆಂಬ ಬಂಗಾರದ ಸ್ವರೂಪವು ಒಂದೇ, ಅದು ಸ್ವರ್ಣಕಾರರ ಕುಶಲತೆಯಿಂದ ಬೇರೆ ಬೇರೆ ಅವಸ್ಥೆಯನ್ನು ಪಡೆದು, ಕುಂಡಲ, ಕಿರೀಟಾದಿ ವಿವಿಧ ರೂಪಗಳನ್ನು ತಾಳಿ ಆಭರಣಗಳಾಗಿ ಕಾಣಿಸುವಂತೆ, ಉಪಮಾ ಶರೀರವೂ ಒಂದೇ ಆಗಿದ್ದು, ಚಂದ್ರನಂತೆ ಮುಖವಿದೆ ಮುಂತಾಗಿ ಹೋಲಿಕೆಯ ವರ್ಣನೆಯ ಕುಶಲತೆಯಿಂದ ರೂಪಕ-ದೃಷ್ಟಾಂತ ದೀಪಕ ಮುಂತಾದ ಅಲಂಕಾರ ಪ್ರಭೇದಗಳಾಗಿ ಬೆಡಗುಗೊಂಡಿದೆ. ಅಲ್ಲವೇ ?
ವಿಬುಧ : ಭಲೇ, ಪರವಾಗಿಲ್ಲ. ಅಸದೃಶದೃಷ್ಟಾಂತ ಕೊಟ್ಟಿದ್ದೀರಿ. ಈಗ ನನ್ನ ಪ್ರಶ್ನೆ ಕೇಳಿರಿ- 'ಆತಪ ಇವ ದೀಪೋ ಭಾತಿ'. ಬಿಸಿಲಿನಂತೆ ದೀಪವಿದೆ ಎಂಬಲ್ಲಿ ಪೂರ್ಣೋಪಮಾಲಂಕಾರವೇಕಾಗಬಾರದು ?
ವೇಂಕಟ : ನಿಮ್ಮ ಉದಾಹರಣೆ ಸಮಂಜಸವಲ್ಲ ! ಸಾದೃಶ್ಯವು 'ಸಹೃದಯ ಹೃದಯಾಹ್ಲಾದಕತೈಸತಿ ಚಮತ ತಿಜನಕತಾವಚ್ಛೇದಕತಾವಚ್ಛೇದಕ ವಾಗಿರಬೇಕು ಅಲ್ಲವೇ ? 'ಆತಪ ಇವ ದೀಪೋ ಭಾತಿ' ಎಂದು ನೀವು ನಿರೂಪಿಸಿದ ಉದಾಹರಣೆಯಲ್ಲಿ ಸಹೃದಯಹೃದಯಾಹ್ಲಾದಕತ್ವವೂ ಬರುವುದಿಲ್ಲ. ಚಮತ ತಿಜನಕವೂ ಆಗಿಲ್ಲ ! ಇದು ವಿಷಮ ದೃಷ್ಟಾಂತವೆನಿಸುತ್ತದೆ ! ಮತ್ತು ಉಪಮಾನವು ಅಧಿಕದೇಶವೃತ್ತಿಯಾಗಿಯೂ, ಉಪಮೇಯವು ನ್ಯೂನದೇಶವೃತ್ತಿಯಾಗಿಯೂ ಇರಬೇಕೆಂಬುದು ಅಲಂಕಾರಿಕರ ಸಿದ್ದಾಂತ ! ನಿಮ್ಮ ಉದಾಹರಣೆಯು ಅದಕ್ಕೆ ವಿರುದ್ಧವಾಗಿದೆ.
ವಿಬುಧ : (ಅಸಮಾಧಾನದಿಂದ) ಅದು ಹೇಗೆ ?
ವೇಂಕಟ : (ನಕ್ಕು) ನೀವು ಕೊಟ್ಟ ಉದಾಹರಣೆಯನ್ನು 'ಪ್ರತೀಪಾಲಂಕಾರ'ಕ್ಕೆ ಅನ್ವಯಿಸಬಹುದು. ಅದರದು 'ಪೂರ್ಣೋಪಮಾಲಂಕಾರ' ಕ್ಕೆ ಸಲ್ಲದು !
ವಿಬುಧ : (ಖಿನ್ನರಾಗಿ) ಅಹುದು, ನಾನಿಲ್ಲಿ ಸ್ವಲ್ಪ ಜಾರಿದೆ. ಅದು ಹೋಗಲಿ, “ಸದ್ಯೋ ಮುಂಡಿತಮತ್ತ ಹೂಣಚಿಬುಕ ಪ್ರಸ್ಪರ್ಧಿನಾರಂಗಕಂ” ಇದನ್ನು ಪೂರ್ಣೋಪಮಾಲಂಕಾರಕ್ಕೆ ಏಕೆ ಅನ್ವಯಿಸಬಾರದು ?
ವೆಂಕಟ : (ನಗುತ್ತಾ) ಓಹೋ, ಚಿತ್ರಮೀಮಾಂಸಾಕಾರರ ಅಭಿಪ್ರಾಯವನ್ನು ಹೇಳುತ್ತಿರುವಿರಾ ?
ವಿಬುಧ : (ಗಹಿಗಹಿಸಿ ನಕ್ಕು) ನಿಜ, ನಿಮ್ಮ ವಿಜಯೀಂದ್ರಗುರುಗಳ ಪ್ರತಿಸ್ಪರ್ಧಿಗಳಾದ ಶ್ರೀಅಪ್ಪಯ್ಯ ದೀಕ್ಷಿತರ ಗ್ರಂಥ ಹಿಡಿದು ವಾದಿಸಿದರೆ ತಾನೆ ವಾದಕ್ಕೆ ಕಳೆ ಬರುವುದು !
ವೇಂಕಟ : (ನಸುನಕ್ಕು) ಇದು ಕವಿಕಲ್ಪಿತೋಪಮಾಲಂಕಾರ. ಇದರಲ್ಲೂ ಚಮತ ತಿಜನಕತಾ ಧರ್ಮವಿಲ್ಲ. ಕವಿಸಮಯದಲ್ಲಿ ರೂಢಿಯಲ್ಲಿಲ್ಲ. ಆದ್ದರಿಂದ ಈ ಉದಾಹರಣೆಯೂ ಸರಿಯಲ್ಲ !
ವಿಬುಧ : (ಕೋಪದಿಂದ) ಹೂಂ, ಹಾಗಾದರೆ ನೀವೇ ಸರ್ವಸಮ್ಮತವಾದ ಒಂದು ಉದಾಹರಣೆಯನ್ನು ಕೊಡಿ, ನೋಡೋಣ.
ವೇಂಕಟ : ಆಗಬಹುದು, ಪೂರ್ಣೋಪಮಾಲಾಂಕಾರಕ್ಕೆ ಉದಾಹರಣೆ ಕೊಡುವಾಗ ಪ್ರಾಸಂಗಿಕವಾಗಿ ಪೂರ್ಣೋಪಮಾಲಂಕಾರದ ಲಕ್ಷಣ, ಅದರಲ್ಲಿ ಘಟಕವಾದ ವಿಶೇಷಣಗಳಿಗೆ ಪ್ರಯೋಜನಗಳನ್ನು ವಿವರಿಸಿ, ಉದಾಹರಣೆ ಕೊಡುವುದು ಉಚಿತವಾಗಿದೆ, ಪೂರ್ಣೋಪಮಾಲಂಕಾರವೆಂದರೆ - 'ತತ್ರ ಅನನ್ಯಪರಂ ಸಾದೃಶ್ಯವರ್ಣನಮುಪಮಾ ಉಪಮೇಯ-ಉಪಮಾನ ಇವುಗಳಿಗೆ ಅನ್ಯಪರವಲ್ಲದ ಸಾದೃಶ್ಯವನ್ನು ವರ್ಣಿಸುವುದೆ ಆಗಿದೆ ! ಈ ಲಕ್ಷಣದಲ್ಲಿ ಸಾದೃಶ್ಯವರ್ಣನು ಎಂದಿಷ್ಟೇ ಹೇಳಿದ್ದರೆ ಸಾಕಾಗಿತ್ತು. 'ಅನನೃಪರು' ಎಂದು ವಿಶೇಷಣ ಕೊಟ್ಟಿದ್ದರ ಪ್ರಯೋಜನವೇನೆಂದರೆ ಉಪಮೇಯೋಪಮಾನ-ಸ್ವಯಾಲಂಕಾರಗಳಲ್ಲಿ ಅತಿವ್ಯಾಪ್ತಿ ಬರುತ್ತದೆ, ಅಲ್ಲಿಯೂ ಸಾದೃಶ್ಯವರ್ಣನ ಮಾಡಲಾಗಿದೆ. ಆದರೆ ಅಲ್ಲಿ ಅನನ್ಯ ಸದೃಶವಾಗಿರುವ ವಸ್ತುವನ್ನು ವ್ಯವಚ್ಛೇದಗೊಳಿಸುವುದಕ್ಕಾಗಿ “ಅನನೃಪರು” ಎಂಬ ವಿಶೇಷಣ ಕೊಟ್ಟಿದ್ದಾರೆ. ಉಪಮಾಲಂಕಾರದಲ್ಲಿ ಪೂರ್ಣಾ, ಲುಪ್ತಾ ಎಂದು ಎರಡು ವಿಧ. ಉಪಮಾನ, ಉಪಮೇಯ, ಸಾಧಾರಣ ಧರ್ಮ, ಮತ್ತು ವಾಚಕ- ಈ ನಾಲ್ಕು ಪ್ರಯೋಗವಿದ್ದಲ್ಲಿ ಪೂರ್ಣೋಪಮಾ ಆಗುವುದು, ಒಂದು, ಎರಡು, ಮೂರು ಹೀಗೆ ಎಲ್ಲಿ ಕ್ರಮಾಗಿ ಲುಪ್ತವಾಗುವುದೋ ಅದನ್ನು ಲುಪೋಪಮಾಲಂಕಾರವೆನ್ನುತ್ತಾರೆ. ಪೂರ್ಣೋಪಮಾ ಮತ್ತೆ ಎರಡು ಬಗೆಯಾಗಿದೆ. ಶೃತಿ ಮತ್ತು ಆರ್ಥಿ ಎಂದು. ಸಾದೃಶ್ಯವಾಚಕಗಳಾದ ಇವಾದಿ ಶಬ್ದಗಳ ಪ್ರಯೋಗವಿದ್ದಲ್ಲಿ ಶೃತಿ ಆಗುತ್ತದೆ. ಸಾದೃಶ್ಯ ವಿಶಿಷ್ಟ ಧರ್ಮಿವಾಚಕಗಳಾದ ತುಲ್ಯಾದಿ ಪದಪ್ರಯೋಗವಿದ್ದಲ್ಲಿ ಆರ್ಥಿ ಆಗುತ್ತದೆ. ಈ ಎರಡು ವಿಧಾಲಂಕಾರಗಳೂ ಪ್ರತ್ಯೇಕವಾಗಿ ವಾಕ್ಯದಲ್ಲಿ, ಸಮಾಸದಲ್ಲಿ, ತದ್ದಿತದಲ್ಲಿ ಎಂದು ಮೂರು ವಿಧವಾಗುತ್ತದೆ. ಹೀಗೆ ಪೂರ್ಣೋಪಮಾಲಂಕಾರವು ಆರು ವಿಧವಾಗಿದೆ.
ವಿಬುಧ : ಆಚಾರರೇ, ಚೆನ್ನಾಗಿ ನಿರೂಪಿಸಿದಿರಿ. ಇದಕ್ಕೆ ಪ್ರತ್ಯೇಕವಾಗಿ ಉದಾಹರಣೆ ಕೊಡಬಲ್ಲಿರಾ ?
ವೇಂಕಟ : ನಿಮ್ಮ ಅಭಿನಂದನೆಗೆ ಧನ್ಯವಾದ. ಮೊದಲು 'ಶೌತ್ರಿ'ಯಲ್ಲಿನ ಮೂರು ವಿಧ ಪೂರ್ಣೋಪಮೆಯನ್ನು ನಿರೂಪಿಸುವೆನು. ಕೇಳಿ - ಕಾಳಿದಾಸನ ರಘುವಂಶದಲ್ಲಿ ಯಥಾ ಪ್ರಹ್ಲಾದನಾಚಂದ್ರಃ ಪ್ರತಾಪಾತಪನೋ ಯಥಾ | ತಥೈವ ಸೋಭೂದನ್ವರ್ಥೋ ರಾಜಾ ಪ್ರಕೃತಿ ರಂಜನಾತ್ ” ಎಂದಿದೆ. ಇಲ್ಲಿ ಉಪಮಾನವಾದ ಚಂದ್ರಾದಿಗಳಿಗೆ ಉಪಮೇಯವಾದ ರಾಜನಿಗೆ ಅನ್ವರ್ಥ ಶಬ್ದವೆಂಬುವ ಸಾಧಾರಣಧರ್ಮದ ಪ್ರಯೋಗವಿರುವುದರಿಂದ ವಾಕ್ಯದಲ್ಲಿ ಪೂರ್ಣೋಪಮಾ ಎನಿಸಿದೆ. ಸಮಾಸದಲ್ಲಿ ಹೇಗೆಂದರೆ-ಭಾಸ್ವಾನಿವ ಶ್ರೀರಘುನಾಥನೇತುಃ” ಇತ್ಯಾದಿಗಳು ಉದಾಹರಣೆಯಾಗಿವೆ. ಇಲ್ಲಿ 'ಭಾಸ್ವಾನ್ ಇವ ಎಂದು ಸಮಾಸ. ಇವೇನ ನಿತ್ಯಸಮಾಸೋ ವಿಭಕ್ಷ್ಯಲೋಪಚ್ಚ' ಎಂಬ ಪಾಣಿನಿಯ ಸೂತ್ರಸ್ಮರಣೆಯಂತೆ ನಿತ್ಯಸಮಾಸವಾಗಿದೆ. ಇನ್ನು ತದ್ದಿತದಲ್ಲಿ - “ಧರಣೀರಮಣಸ್ಯಾಸ್ಯ ಖರದೂಷಣ ಹಾರಿಣಃ ! ಚತುರ್ದಶಸು ಲೋಕೇಷು ರಾಜತೇ ರಾಮವಶಃ ||” ಇಲ್ಲಿ ಅಸೇವ' ಎಂಬರ್ಥದಲ್ಲಿ 'ವತಿ' ಪ್ರತ್ಯಯದ ಅನುಶಾಸನವು ಕಂಡುಬರುವುದರಿಂದ, ತದ್ದಿತದಲ್ಲಿ ಶ್ರತಿ ಆಯಿತು. ಇನ್ನು ಆರ್ಥಿ ಪೂರ್ಣೋಪಮಾ ವಿಚಾರ : ಭುವತದಿತದಲ್ಲಿ ಶ್ರತಿ ಆಯಿತು. ಇನ್ನು ಆರ್ಥಿ ಪೂರ್ಣೋಪಮಾ ವಿಚಾರ : “ಭುವನಾದ್ಭುತ ವಿಕೃತಮತೇ ಭುಜದಂಡೋಯಂ ಮಹಾಭಾಗಃ ಸಕಲಧರಿತ್ರೀಧರಣಿ ಸದೃಶಃ ಪ್ರತಿಭಾತಿ ಭುಜಂಗರಾಜೇನ ।” (ಪಾಠಾಂತರ - ಭುಜಗೇಶ್ವರ ಸನ್ನಿಭೋಭಾತಿ !) ಇಲ್ಲಿ ಸದೃಶಪದ ಪ್ರಯೋಗವಿರುವುದರಿಂದ ವಾಕ್ಯದಲ್ಲಿ ಆರ್ಥಿಪೂರ್ಣೋಪಮಾ ಇದೇ ಪದ್ಯದ 'ಭುಜಗೇಶ್ವರ ಸನ್ನಿಭೋಭಾತಿ' ಎಂಬ ಪಾಠಾಂತರವಿಟ್ಟುಕೊಂಡರೆ ಸಮಾಸದಲ್ಲಿಯೂ ಆರ್ಥಿಪಾರ್ಣೋಪಮಾ ಆಗುವುದು.
ತದ್ಧಿತದಲ್ಲಿ ಆರ್ಥಿ ಹೇಗೆಂದರೆ : “ಚಕಾಸ್ತಿಕೀರ್ತಿ ಬಕೋಪಿ ಕೋಪಿ | ರಾಕಾನಿಶಾಕಾಮುಕ ವತ್ನಸನ್ನ ಇಲ್ಲಿ 'ತೇನ ತುಲ್ಯಂ ಕ್ರಿಯಾಚೇದ್ದತಿಃ' ಎಂಬ ಸೂತ್ರದಿಂದ ತುಲ್ಯಾರ್ಥದಲ್ಲಿ 'ವತಿ' ಪ್ರತ್ಯಯವನ್ನು ವಿಧಾನ ಮಾಡಿರುವುದರಿಂದ ತದ್ಧಿತದಲ್ಲಿ ಆರ್ಥಿಪಾರ್ಣೋಪಮಾ ಆಯಿತು. ಹೀಗೆ ಆರು ವಿಧಗಳನ್ನು ವಿವರಿಸಿದ್ದೇನೆ, ಸಂತೋಷವಾಯಿತೇ ಭಟ್ಟಾಚಾರರೇ ?
ಮನಸ್ಸಿನಲ್ಲಾದ ಅಸಮಾಧಾನವನ್ನು ಹತ್ತಿಕ್ಕಿಕೊಂಡು ಹುಸಿನಗೆ ಬೀರುತ್ತಾ ವಿಬುಧಾನಂದರು- “ಸಂತೋಷವೇನೋ ಆದಂತಾಯಿತು, ಇನ್ನೂ ತೃಪ್ತಿಯಾಗಿಲ್ಲ ! ಎಲ್ಲಿ ಸ್ವಲ್ಪ ಲುಪಮಾಲಂಕಾರಗಳನ್ನೂ ವಿವಿರಿಸಿ ನೋಡೋಣ !” ಎಂದರು. ವೇಂಕಟ : (ಮಂದಹಾಸದಿಂದ) ನಿಮ್ಮ ಆಕೂತವು ಅರ್ಥವಾಯಿತು ! “ಸಾಹಿತ್ಯ ಗಂಧ ವಿಧುರಾಃ ಮಾಧ್ವಾ” ಎಂಬುದು ತಾನೆ ನಿಮ್ಮ ಮನದಲ್ಲಡಗಿರುವ ಭಾವ ?
ವಿಬುಧ : (ಹುಸಿನಗೆಯಿಂದ) ಅಹಹಹ್ ! ಹಾಗೇನೂ ಇಲ್ಲ. ಪ್ರತಿಭಾಶಾಲಿಗಳಾದ್ದರಿಂದ......ಅಲಂಕಾರಶಾಸ್ತ್ರದಲ್ಲಿ ತಮ್ಮ ಪ್ರಭುತ್ವ ಹೇಗಿದೆ ನೋಡೋಣ..... ಎಂದು ಆಶೆ ಅಷ್ಟೆ !
ವೇಂಕಟ : ನಿಮ್ಮನ್ನು ನಿರಾಶೆಗೊಳಿಸಬಾರದಲ್ಲವೆ ? ಆಗಲಿ, ಕೇಳಿ - ಲುಪೋಪಮಾಲಂಕಾರವು ೧) ಧರ್ಮಲುಪ್ತಾ, ೨) ವಾಚಕಲುಪ್ತಾ, ೩) ಉಪಮಾನಲುಪ್ತಾ, ೪) ಧರ್ಮವಾಚಕಲುಪ್ತಾ, ೫) ಧರ್ಮೋಪವಾನುಪ್ತಾ, ೬) ವಾಚೋಪಮೇಯಲುಪ್ತಾ, ಮತ್ತು ೭) ಧರ್ಮೋಪಮಾನಲುಪ್ತಾ, ಎಂದು ಪ್ರಥಮತಃ ಏಳು ವಿಧವಾಗಿದೆ. ಅವುಗಳಲ್ಲಿ ಧರ್ಮಲುಪೆಯು ಮೊದಲಿನಲ್ಲಿ ಶ್ರತಿ, ಆರ್ಥಿ ಎಂದು ಎರಡು ಬಗೆಯಾಗಿದೆ. ಆದರೆ ಧರ್ಮಲುಪೈಯು ಶೌತಿ-ತದ್ಧಿತದಲ್ಲಿ ಸಂಭವಿಸುವುದಿಲ್ಲವಾದ್ದರಿಂದ ಅದು ಐದೇ ವಿಧವಾಗುವುದು. ಆ ಐದು ವಿಧ ಉದಾಹರಣೆಗಳನ್ನೂ ನಮ್ಮ ಪೂಜ್ಯ ಗುರುಪಾದರ ಕೃತಿಯನ್ನು ಅವಲಂಬಿಸಿ ನಿರೂಪಿಸುತ್ತೇನೆ.
ಅದನ್ನಾಲಿಸಿ ಶ್ರೀಸುಧೀಂದ್ರರು, ಯಜ್ಞನಾರಾಯಣದೀಕ್ಷಿತರು, ರಘುನಾಥಭೂಪಾಲರು ಆನಂದದಿಂದ ದರಹಾಸಬೀರಿದರು. ಪಂಡಿತರು ಬೆರಗಾಗಿ ಉತ್ಸಾಹದಿಂದ ಮುಂದಿನ ವಾದವನ್ನಾಲಿಸಹತ್ತಿದರು.
ವೇಂ : “ವಂ ಯಥಾ ಹಿಮರುಚಿರ್ನವ ಚಂದ್ರಿಕೇವ | ಹಾಸಪ್ರಭಾಕುವಲಯೇನ ಸಮೇ ಚ ನೇತ್ರ | ತಸ್ಯಾ ಮನೋಹರಲತಾಸದೃಶೌ ಚ ಬಾಹೂ ವಾಚಸ್ಸುಧಾಬೈಲಹರೀ ನಿಕುರುಂಬಕಲ್ಪಾ ”
ಇಲ್ಲಿ ಕ್ರಮವಾಗಿ ಉಪಮಾವಾಚಕ ಪದಗಳಾದ ಯಥಾ, ಇವ, ಸಮಾ, ಸದೃಶ, ಕಲ್ಪಾ ಎಂಬ ಐದುಪದಗಳನ್ನು ಪ್ರಯೋಗಿಸಿದರುವುದರಿಂದ ಐದುವಿಧ ಧರ್ಮಲುಪ್ತಾ ಉಪಮಾಲಂಕಾರಗಳನ್ನು ಇಲ್ಲಿ ಸಮನ್ವಯಗೊಳಿಸಬಹುದು. ವಾಚಕಲುಪ್ತವಾದರೋ-ಕರ್ಮಾರ್ಥದ 'ಣಮುಲ್' ಪ್ರತ್ಯಯ, ಕತ್ರ್ರಥ್ರದ 'ಣಮುಲ್' ಪ್ರತ್ಯಯ, ಕರ್ಮಾರ್ಥದ ಕೃಚ್” ಪ್ರತ್ಯಯ, ಅಧಿಕರಣಾರ್ಥದ 'ಕೃಚ್' ಪ್ರತ್ಯಯ, ಕೃ' ಪ್ರತ್ಯಯ, “ಣಿನ್ ಪ್ರತ್ಯಯ ಮತ್ತು ಸಮಾಸದಲ್ಲಿ ಹೀಗೆ ಏಳು ವಿಧವಾಗಿದೆ.
ಎ : ಏನು ಸ್ವಾಮಿ, ಹೀಗೆ ಹೇಳುತ್ತಿರುವಿರಿ ? ಏನಾದರೂ ಪ್ರಮಾಣ ಕೊಡಬಲ್ಲಿರಾ ?
ವೇಂ : ಪಂಡಿತರೇ, ನೀವು ಸಾರ್ವಭೌಮನ ಚಿಂತಾಮಣಿಯನ್ನು ಅವಲೋಕಿಸಿಲ್ಲವೆಂದು ಭಾಸವಾಗುವುದು ! ಪ್ರಮಾಣಕ್ಕೇನೂ ಕೊರತೆಯಿಲ್ಲ. ಕೇಳಿ, “ಚಿಂತಾಮಣಿ'ಯಲ್ಲಿ ಇವಾದಿಧರ್ಮಲುಪ್ತಾದ್ವಿವಿಧೇ, ಣಮುಲ್‌ಚಿ ಚ ಕೃಮ್ | ತಥಾ ಣಿನೌ ಸಮಾಸೇ ಚ ಸಷಾ ಪ್ರಕೀರ್ತಿತಾ ||” ಎಂದು ನಿರೂಪಿಸಿದ್ದಾರೆ. ಇಷ್ಟೇ ಅಲ್ಲ; ಇದಕ್ಕೆ ಪಾಣಿನಿಯಶಾಸನಗಳನ್ನೂ ಕೊಡುತ್ತೇವೆ ! “ಉಪಮಾನೇ ಕರ್ಮಣಿ ಚ, ಕರ್ತೃಕರ್ಮಣೋರುಪಪದಯೋ” ಎಂದು ವಿಹಿತವಾದ ದ್ವಿವಿಧ ಣಮುಲ್ ಪ್ರತ್ಯಯಗಳಲ್ಲಿ ಮತ್ತು “ಉಪಮಾನಾದಾಚಾರೇ, ಅಧಿಕಾರಣಾಚೇತಿ ವಕ್ತವ್ಯಂ” ಎಂದು ಕರ್ಮಾರ್ಥದಲ್ಲಿ ವಾರ್ತಿಕ'ದಲ್ಲಿ ಅಧಿಕರಣಾರ್ಥದಲ್ಲಿಯೂ ವಿಹಿತವಾದ ಎರಡುವಿಧ 'ಕೃಚ್' ಪ್ರತ್ಯಯಗಳಲ್ಲಿ, ಅಲ್ಲದೆ “ಕರ್ತೃಜ್ ಸಲೋಪಶ್ಚ” ಎಂದು ವಿಹಿತವಾದ 'ಕಬ್' ಪ್ರತ್ಯಯದಲ್ಲಿ ಮತ್ತು “ಕರ್ತರುಪಮಾನೇ” ಎಂದು ವಿಹಿತವಾದ 'ಣಿನಿ' ಪ್ರತ್ಯಯದಲ್ಲೂ ಹಾಗೂ “ಉಪಮಾನಾದಿ ಸಾಮಾನ್ಯ ವಚನೈ” ಎಂತಲೂ, ಸಮಾಸದಲ್ಲಿಯೂ ಸಹ ವಾಚಕಲೋಪವು ಏಳು ವಿಧವಾಗಿದೆ.
ಆಗ ಸಭಾಸದರು ಪ್ರಚಂಡ ಕರತಾಡನದಿಂದ ಆಚಾರರನ್ನು ಅಭಿನಂದಿಸಿದರು. ಮುಂದುವರೆದು ವೆಂಕಟನಾಥರು 'ವಾಚಕಲುಪೆಯ ಈ ಏಳುವಿಧಗಳನ್ನೂ ಒಂದೇ ಪದ್ಯದಲ್ಲಿ ನಮ್ಮ ಗುರುವರ್ಯರು “ಸಾಹಿತ್ಯಸಾಮ್ರಾಜ್ಯ'ದಲ್ಲಿ ಹೀಗೆ ನಿರೂಪಿಸಿದ್ದಾರೆ -
“ಯಂ ಪರ್ಶ ದೀಪದರ್ಶ೦ ಸಹದಿ ಮನಸಿಜಃ ಕೀಟನಾಶಂ ಸನಷ್ಟ:
ಸ್ವಾಂತೇ ಯೋಂತಃಪುರೀಯಂ ನಿಜಭವನಕೃತಸ್ತಂ ಕುಮಾರೀಯತಿ ದ್ರಾಕ್ || ಮೂಲಸ್ತಂಭಾಯತೇ ಯಸ್ತಿಭುವನ ಭವನೇ ಕೋಕಲಾಲಾಪಿನೀ ಸಾ |
ವಾಮಾಂಗೇ ಕಲ್ಪವಲ್ಲೀ ಶ್ರಯತಿ ಕುವಲಯಶ್ಯಾಮಲಾ ತಂ ಭಜಾಮಿ ”
ಎಲ್ಲಿ, ಭಟ್ಟಾಚಾರರೇ, ಈಗ ತಾವು ಇಲ್ಲಿ ಏಳು ವಿಧವಾಚಕಲುಪ್ತಾಲಂಕಾರಗಳನ್ನೂ ಸ್ವಲ್ಪ ಸಮನ್ವಯಗೊಳಿಸಿರಿ, ನೋಡೋಣ ! (ಸಭಿಕರ ಹರ್ಷಧ್ವನಿ).
ವಿಬುಧಾನಂದರು ವೆಂಕಟನಾಥರ ಅಪ್ರತಿಹತ ಪ್ರತಿಭೆ, ಅನುವಾದನಗಳನ್ನಾಲಿಸಿ ಮೂಕವಿಸ್ಮಿತರಾಗಿ ಮುಗಿಲತ್ತ ನೋಡುತ್ತಾ ಸುಮ್ಮನೆ ಕುಳಿತರು. ಆಗ ದರ್ಬಾರಿನ ಒಬ್ಬ ಪಂಡಿತರು “ಸ್ವಾಮಿ, ಆಚಾರ್ಯರೇ, ಅಷ್ಟಾವಧಾನ ಮಾಡಲಾಗದವರನ್ನು ಶತಾವಧಾನ ಮಾಡೆಂದಂತಾಯಿತು, ತಮ್ಮ ಮಾತು ! ದಯವಿಟ್ಟು ನೀವೇ ಸಮನ್ವಯಗೊಳಿಸಿ ನಮ್ಮನ್ನು ಆನಂದಪಡಿಸಿರಿ” ಎಂದರು. ಪಂಡಿತರ ಮಾತುಕೇಳಿ ಕೋಪ ಅಸಮಾಧಾನಗಳಿಂದ ಕಂಪಿಸಿದ ವಿಬುಧಾನಂದರು “ನಾನು ಮೌನವಹಿಸಿದ್ದು ಯೋಗ್ಯತೆ ಇಲ್ಲವೆಂದಲ್ಲ. ಆಚಾರ್ಯರು ಹುರುಪಿನಿಂದಿದ್ದಾರೆ. ಆ ಕೀರ್ತಿಯು ಅವರಿಗೆ ಲಭಿಸಲಿ ಎಂಬ ಔದಾರ್ಯದಿಂದ !” ಎಂದರು. ಸಭಾಸದರು ನಗಹತ್ತಿದರು.
ವೆಂ : ಸಭಿಕರ ಕೋರಿಕೆಯನ್ನು ಪೂರೈಸುವುದು ನನ್ನ ಕರ್ತವ್ಯ ! ಇಲ್ಲಿ “ದೀಪಮಿವ ಪಶ್ಯನ್” ಎಂಬರ್ಥದಲ್ಲಿ “ದೀಪದರ್ಶಂ” ಎಂಬುದು ಕರ್ಮಾರ್ಥದಲ್ಲಿ 'ಣಮುಲ್' ಪ್ರತ್ಯಯ. “ಕೀಟ ಇವ ನಷ್ಟ:” ಎಂಬರ್ಥದಲ್ಲಿ ಕೀಟನಾಶಂ ಸನಷ್ಟಃ” ಎಂದು ಕರ್ತೃಥ್ರದಲ್ಲಿ 'ಣಮುಲ್' ಪ್ರತ್ಯಯವು. ಸ್ವಾಂತೇಂತಃ ಪುರ ಇವ ಆಚರತಿ” ಎಂಬರ್ಥದಲ್ಲಿ ಅಂತಃ ಪುರೀಯತಿ” ಎಂದು ಅಧಿಕರಣಾರ್ಥದಲ್ಲಿ ಕೃಚ್” ಪ್ರತ್ಯಯವು. “ಕುಮಾರ ಸ್ಕಂಧಮಿವ ಆಚರತಿ” ಎಂಬರ್ಥದಲ್ಲಿ “ಕುಮಾರೀಯತಿ” ಎಂದು ಕರ್ಮಾರ್ಥದಲ್ಲಿ “ಚ್' ಪ್ರತ್ಯಯವು, “ತ್ರಿಭುವನ ಭವನೇ ಮೂಲಸ್ತಂಭ ಇವ ಆಚರತೀ ಎಂಬರ್ಥದಲ್ಲಿ 'ಸಪ್ತಮ್ಯಧಿಕರಣೇ' ಎಂದಿರುವುದರಿಂದ ಅಧಿಕರಣಾರ್ಥದಲ್ಲಿ ಮೂಲಸ್ತಂಭಾಯತೇ” ಎಂದು 'ಕ್ಯೂಬ್' ಪ್ರತ್ಯಯವು. “ಕೋಕಿಲ ಇವ ಆಲಪತಿ” ಎಂಬ ಅರ್ಥದಲ್ಲಿ ಕೋಕಿಲಾಲಾಪಿನೀ” ಎಂದು “ಣಿನಿ” ಪ್ರತ್ಯಯವು. “ಕುವಲಯ ಇವ ಶ್ಯಾಮಲಾ” ಎಂಬ ಅರ್ಥದಲ್ಲಿ ಕುವಲಯಶ್ಯಾಮಲಾ” ಎಂದು ಸಮಾಸದಲ್ಲೂ ಹೀಗೆ ಕ್ರಮವಾಗಿ ಸಪ್ತವಿಧ ವಾಚಕಲುಪ್ತಾಂಕಾರವು ಈ ಪದ್ಯದಲ್ಲಿ ಸೊಬಗಿನಿಂದ ರಾಜಿಸುತ್ತಿವೆ !
ಪರಮಾನಂದದಿಂದ ಭೂಪಾಲ, ದೀಕ್ಷಿತರು ಕರತಾಡನಮಾಡಿ ತಲೆದೂಗಿದರು. ವೆಂಕಟನಾಥರು ಉತ್ಸಾಹದಿಂದ
ಮು೦ದುವರೆದು ಹೇಳಿದರು -
ವೇಂ : ಇಷ್ಟೇ ಅಲ್ಲದೆ. ಉಪಮಾನಲುಪ್ತವೂ ವಾಕ್ಯ, ಸಮಾಸಗಳಲ್ಲಿ ಎರಡು ವಿಧ. ಉದಾ : ''ದಯಾದಿ ಗುಣಸಂಪನ್ನ ವಿತರಣೇ ರಣೇ | ತತ್ರಾಪಿ ಧರಣೀಪಾಲ !* ತವ ತುಲ್ಲೋ ನ ವಿದ್ಯತೇ ” (*ಪಾಠಾಂತರ - ತತ್ತಮಾನೋ ನ ದೃಶ್ಯತೇ ) ಎಂಬಲ್ಲಿ ವಾಕ್ಯದಲ್ಲಿ ಲುಪೋಪಮಾಲಂಕಾರವಾಯಿತು. “ತತ್ತಮಾನೋ ನ ದೃಶ್ಯತೇ” ಎಂಬ ಪಾಠದಲ್ಲಿ ಸಮಾಸದಲ್ಲೂ ಉಪಮಾಲುಪ್ತವಿದೆಯೆಂದು ತಿಳಿಯಬೇಕು. ಧರ್ಮವಾಚಕಲುಷ್ಠೆಯೂ ಕೂಡ ಕ್ಲಿಪ್' ಪ್ರತ್ಯಯ ಮತ್ತು ಸಮಾಸದಲ್ಲಿ ಎರಡು ವಿಧ. “ಧರ್ಮೋಪಮಾನಯೋರ್ಲೋಪೇ ವಾಕ್ಯಗಾ ಚ ಸಮಾಸಗಾ || - ಇತಿದ್ದೀರಾ”, ಧರ್ಮೋಪಮಾನಲುದ್ರೆಯು ಎರಡು ವಿಧ. “ಇವಾದೇರುಪಮೇಯಸ್ಯ ದ್ವಯೋರ್ಲೋಪೋ ಭವೇತ್ಮಚಿತ್ |' ಎಂದು ಹೇಳಿರುವುದರಿಂದ ವಾಚಕೋಪಮೇಯಲುತ್ತೆಯು ಒಂದು ವಿಧವಾಗಿದೆ. “ವಾದಿ ಧರ್ಮೋಪಮಾನಾನಾಂ ಲೋಪೇಷಾ ಸಮಾಸಗಾ ” ಎಂದು ಮೂರು ಬಗೆಯಾದ ಲೋಪವಿದ್ದರೂ ವಾಚಕ-ಧರ್ಮ ಮತ್ತು ಉಪಮಾನ ಇವು ಸಮಾಸ-ವಾಕ್ಯ ಎಂಬ ಕ್ರಮದಲ್ಲಿ ಮೂರು ವಿಧವಾಗಿದ್ದು, ಒಂದೇ ಬಗೆಯಾಗಿದೆ. ಹೀಗೆ ಆರು ಬಗೆಯ ವಾಚಕ, ಧರ್ಮ, ಉಪಮೇಯವಾಚಕ, ಧಮಳ, ಉಪಮಾನ ಈ ಆರು ವಿಧ ಲಕ್ಷಣಕ್ಕೆ ಉದಾಹರಣೆ ಹೀಗಿದೆ - “ವೃಥಾ ಮಮ ಭ್ರಮತಹೋ ಮಹೇಶ್ವರೇ ಮನಸ್ಥಿತೇ | ಶ್ರುತೋಸ್ತಿ ತೇನ ಕಿಂಸಮಃ ಶ್ರುತೋಥವಾಸ್ತಿ ತತ್ತಮಃ ||” ಇಲ್ಲಿ ಕಿಂ ಸಮಃ' ಎಂಬಲ್ಲಿ ವಾಕ್ಯ, 'ತಮ' ಎಂಬಲ್ಲಿ ಸಮಾಸ. “ಷಡಂಪ್ರಿಯಧಸ್ಸದಾ ತದಂಫ್ರಿಪಂಕಜದ್ವಯೇ ಚಕೋರಕೀಯಸು ಸ್ಥಿತೇ ತದಾನನೇ ಶಶಿಪ್ರಭೆ ||
ಇಲ್ಲಿ ಎರಡನೆಯ ಪಾದದಲ್ಲಿ ವಾಕ್ಯ ಮತ್ತು ಸಮಾಸಗಳಲ್ಲಿ ಧರ್ಮೋಪಮಾನ ಲುಪೆಯು ಎರಡು ಪ್ರಕಾರವಾಗಿದೆ. ಮೂರನೆಯ ಪಾದದಲ್ಲಿ ಕ್ವಿಪ್-ಸಮಾಸಗಳಲ್ಲಿ ಧರ್ಮವಾಚಕಲುಪೆಯು ಎರಡು ಬಗೆಯಾಗಿದೆ. “ಚಕೋರಕೀಯಸು” ಎಂಬಲ್ಲಿ ವಾಚಕೋಪಮೇಯಲುಪ್ತಯುಮತ್ತು 'ಶಶಿಪ್ರಭೆ' ಎಂಬಲ್ಲಿ ಧರ್ಮೋಪಮಾನವಾಚಕ ಲುಪೆಯು ಕ್ರಮವಾಗಿ ಇದೆ ಎಂದು ತಿಳಿಯಬೇಕು. ಅಲ್ಲಿ 'ಣಿನಿ' ಪ್ರತ್ಯಯವತಿರಿಕ್ತವಾದ ಪಕ್ಷಗಳು “ಕಾವ್ಯಪ್ರಕಾಶಿಕಾ' ಕಾರನಿಂದ ತೋರಿಸಲ್ಪಟ್ಟಿದೆ. ಸಾರ್ವಭೌಮನ 'ಚಿಂತಾಮಣಿ' ಯಲ್ಲಾದರೋ 'ಣಿನಿ' ಪ್ರತ್ಯಯದಲ್ಲಿಯೂ ಕೂಡ ವಾಚಕ ಲುಪೈಯು ಪ್ರದರ್ಶಿತವಾಗಿದೆ, ಸ್ವಾಮಿ, ಭಟ್ಟಾಚಾರರೇ ! ಹೀಗೆ ನಾನಿದುವರೆಗೆ ಪ್ರದರ್ಶಿಸಿದ ಲುಪೋಪಮಾಲಂಕಾರಗಳಲ್ಲಿ ನೀವು ಹೇಳಿದ 'ಕಾಕತಾಳೀಯ' ವೆಂಬ ಪ್ರಯೋಗವೇ ಕಾಣಬರುವುದಿಲ್ಲವಲ್ಲ ! ಅಂದಮೇಲೆ ನೀವು ಅಂದಿನ ಸಮಾಗಮ, ವಿಜಯಗಳನ್ನು “ಕಾಕತಾಳೀಯ' ಕ್ಕೆ ಹೇಗೆ ಹೋಲಿಸುವಿರಿ?
ವಿಬುಧಾನಂದರಿಗೆ ಏನುತ್ತರಿಸಲೂ ತೋಚಲಿಲ್ಲ, ಅಸಮಾಧಾನದಿಂದ ಮುಖ ಸೊಟ್ಟಗೆ ಮಾಡಿ “ಆಚಾರರೇ, ನೀವು ಈವರೆಗೆ ಮಾಡಿದ ವಾದವೇ ಸರಿಯಲ್ಲವೆಂದು ಹೇಳುತ್ತೇನೆ !” ಎಂದಾಗ ಆಚಾರರು ನಕ್ಕು “ಭಟ್ಟಾಚಾರರೇ, ನನ್ನವಾದ ಸರಿಯಲ್ಲವೆಂದು ಸಪ್ರಮಾಣವಾಗಿ ನಿರೂಪಿಸಿರಿ !” ಎಂದರು.
ವಿಬುಧ : (ಗರ್ವದಿಂದ) ಓಹೋ ಹಾಗೇನು ? ಸರಿ, ಕೇಳಿ- ಇದುವರೆಗೆ ಲಕ್ಷ-ಲಕ್ಷಣಗಳ ಸಂಗತಿಯಲ್ಲಿ ನೀವು ಪ್ರದರ್ಶಿಸಿದ ಸಪ್ತವಿಧ, ಪಂಚವಿಧ ಮುಂತಾದವನ್ನು ನಾನೊಪ್ಪುವುದಿಲ್ಲ, ಏಕೆಂದರೆ ಅವು ಸಂಭಾವಿತ ಲಕ್ಷ-ಲಕ್ಷಣಗಳಲ್ಲ. ಆಲಂಕಾರಿಕರಾರೂ ಅದನ್ನು ಒಪ್ಪುವುದಿಲ್ಲ, ಈ ಬಗೆಯ ಭೇದಪ್ರದರ್ಶನದಿಂದ ಕೆಲವೆಡೆ ಚಮತ್ಕಾರವಿಶೇಷಗಳು ತೋರಬಹುದಾದರೂ ಅದು ಸರಿಯಲ್ಲ, ಏಕೆಂದರೆ ಶಬ್ದಶಾಸ್ತ್ರವುತ್ಪತಿ ಪ್ರದರ್ಶನೇನ ಸ್ವಪಾಂಡಿತ್ಯಮಾತ್ರಪ್ರದರ್ಶನಂ ಭವತಿ, ಸಂಭಾವಿತಾಃ ನ ಪ್ರದರ್ಶಿತಾಶ್ಚ ! ನಿಮ್ಮ ವ್ಯಾಕರಣಶಾಸ್ತ್ರಪಾಂಡಿತ್ಯ ತೋರಿದಂದಾಯಿತೇ ವಿನಃ, ಆಲಂಕಾರಿಕರ ಸಂಭಾವಿತ ಭೇದಗಳನ್ನು ಸಾಧಿಸಿದಂತಾಗಲಿಲ್ಲ, ಅಲ್ಲವೇ ?
ವೇಂಕಟ : (ನಸುನಗೆಬೀರಿ) ಭಟ್ಟಾಚಾರರೇ, ಶಬ್ದಶಾಸ್ತ್ರದಲ್ಲಿ ನನಗಿರುವ ಹಿರಿಮೆಯನ್ನು ತಾವು ಸಂತೋಷದಿಂದ ಶ್ಲಾಘಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ ! ನನ್ನ ಮೇಲೆ ಅಪಾದೆನೆಹೊರಿಸಿದ ನೀವೇ ಅಲಂಕಾರಿಕರಿಗೆ ಸಮ್ಮತವಾದ ಸಂಭಾವಿತ
ಪ್ರಕಾರಗಳನ್ನು ವಿವರಿಸಿರಿ, ನಾನೂ ಕೇಳಿ ಆನಂದಿಸುತ್ತೇನೆ !
ವಿಬುಧ : ನೀವು ಮೊದಲು ಲುಪೋಪಮಾಲಂಕಾರವು ಏಳು ವಿಧವೆಂದಿರಿ. ಅದು ತಪ್ಪು, ವಾಚಕ-ಉಪಮಾನ ಇವುಗಳಲ್ಲದೆ ಬೇರೆ ಲೋಪಗಳೂ ಸಂಭವಿಸುತ್ತವೆ. ಅದಕ್ಕೆ ಉದಾಹರಣವಿಲ್ಲಿದೆ-“ಯತ್ತಯಾ ಮೇಲನಂ ತತ್ರ ಲಾಭೋ ಮೇ ಯಚ್ಚ ತದ್ರತೇಃ | ತದೇತತ್ಕಾಕತಾಲೀಯಂ ಅವಿತರ್ಕಿತಸಂಭವಮ್ ||” ಇದು ಅಲಂಕಾರಿಕರು ಪ್ರದರ್ಶಿಸಿದ ಸಂಭಾವಿತ ಪ್ರಭೇದಗಳು, ಹೇಗೆಂದರೆ-ಇಲ್ಲಿ ಕಾಕ, ತಾಲ-ಎರಡು ಶಬ್ದಗಳು ವೃತ್ತಿವಿಷಯದಲ್ಲಿ ಕಾಕತಾಲಸಮವೇತಕ್ರಿಯಾವರ್ತಿತಗಳಾಗಿವೆ. ಅದರಿಂದ “ಕಾಕಾಗಮನಮಿವ ತಾಲಪತನಮಿವ ಕಾಕತಾಲು” ಎಂದು “ಇವಾರ್ಥ ಸಮಾಸಚ್ಚ ತದ್ವಿಷಯಾತ್” ಎಂಬ ಪಾಣಿನಿಯ ಸೂಚನೆಯಪ್ರಕಾರ ಸಮಾಸವಾಗುತ್ತದೆ, ಎರಡು ಕಡೆಯಲ್ಲೂ ತನ್ನ ಆಗಮನ, ಸುಂದರಿಯು ಏಕಾಂತದಲ್ಲಿರುವುದು, ಆದರಿಂದ ತಾನು ಅವಳೊಡನೆ ಸಮಾಗಮ ಪಡೆದುದು - ಕಾಕತಾಲ ಸಮಾಗಮಸದೃಶ ಎಂದು ಫಲಿಸುತ್ತದೆ. ಆನಂತರ “ಕಾಕತಾಲಮಿವ ಕಾಕತಾಲೀಯಂ” ಎಂದು ದ್ವಿತೀಯ “ಇವಾರ್ಥ ಸಮಾಸಾಚ್ಚ ತದ್ವಿಷಯತ್ವಾತ್” ಎಂಬುದರಿಂದ ಛ ಪ್ರತ್ಯಯ' ವು ವಿಹಿತವಾಗಿದೆ, ಆನಂತರ ಹೇಗೆ ಕಾಗೆಯು ಬೀಳುತ್ತಲಿರುವ ತಾಳಫಲವನ್ನು ತಿಂದಿತೋ ಹಾಗೆಯೇ ತಾನು ಏಕಾಂತದಲ್ಲಿದ್ದ ಸುಂದರಿಯನ್ನು ಉಪಯೋಗಿಸಿದುದು - ಎಂತಲೂ, ಆನಂತರ, ಕಾಕಾಗಮನತಾಲಪತನ ಸಮಾಗಮನರೂಪದ ಉಪಮಾನಲೋಪವೂ, ಸಮಾಸದಿಂದ ವಾಚಕಲೋಪವೂ ಆಗುವುದರಿಂದ ವಾಚಕೋಪಮಾನಲುಪ್ತಾಲಂಕಾರದ ಸಮನ್ವಯವಾಯಿತು !
ಆಚಾರರೇ, ನೀವು ಧರ್ಮಲುತ್ತೆಯು ಐದುವಿಧವೆಂದು ಹೇಳಿದ್ದು ಯುಕ್ತವಲ್ಲ, ಏಕೆಂದರೆ ದ್ವಿರ್ಭಾವದಲ್ಲಿ ಪಟುಃ ಪಟುಃ ದೇವದತ್ತಃ” ಇತ್ಯಾದಿ ಪ್ರಯೋಗಗಳು ಕಂಡುಬಂದಿವೆ, ಇಲ್ಲಿ ಪ್ರಕಾರೇ ಗುಣವಚನಸ್ಯ' ಎಂದು ಸಾದೃಶ್ಯಾರ್ಥದಲ್ಲಿ ದ್ವಿರ್ಭಾವವನ್ನು ವಿಧಾನಮಾಡಿರುವುದರಿಂದ ಪಟುಸದೃಶನು ದೇವದತ್ತನು ಎಂದು ಅದರ ಅರ್ಥ. ಯಾವನು ಶಾಸ್ತ್ರಾದಿಗಳಲ್ಲಿ ಪಟುವಲ್ಲವೇ ಅಲ್ಲ ಪಟುವಿನಂತೆ ಅಭಿನ್ನನಾಗಿದ್ದಾನೆ ಎಂದು “ಪಟುಃ ಪಟುಃ” ಎಂದೆರಡುಬಾರಿ ಹೇಳಲಾಗುತ್ತದೆ. ಆದುದರಿಂದ ದ್ವಿರ್ಭಾವಗುಣವಚನಾರ್ಥದಲ್ಲಿ ಸಮಾಸವೇ ಹೊರತು ಪಂಚವಿಧಲುಪೈಗೆ ಅನುಕೂಲಿಸುವುದಿಲ್ಲ. ಇನ್ನು ವಾಕ್ಯದಲ್ಲಿಯೂ, ಸಮಾಸದಲ್ಲಿಯೂ ಧರ್ಮ ಲುಪ್ತಯು ಆಗುವುದಿಲ್ಲವೆಂದು ಹೇಳವಂತಿಲ್ಲ. ಏಕೆಂದರೆ “ಕರ್ಮಧಾರಯವದುತ್ತರೇಷು” ಎಂದು ಸಮಾಸವದ್ಭಾವ ವಿಧಾನಮಾಡಲಾಗಿದೆ. ಅದರಿಂದ ಐಕಪದವು ಸಿದ್ಧಿಸುವುದರಿಂದ ಇದು ವಾಕ್ಯದಿಂದ ಬಹಿರ್ಭೂತವಾಯಿತು. ಹೀಗಾಗಿ ಸಮಾಸವದ್ಭಾವವಿಧಾನವು ವ್ಯರ್ಥವಾಗುವಪ್ರಸಂಗವಿರುವುದರಿಂದ ಸಮಾಸದಿಂದಲೂ ಬಹಿರ್ಭೂತವಾಗಿದೆ ಎಂದು ಅವಶ್ಯವಾಗಿ ಒಪ್ಪಲೇಬೇಕಲ್ಲವೇ ? ಇದರಿಂದ ಸಮಾಸ ಮತ್ತು ವಾಕ್ಯದಲ್ಲಿ ಎಂದು ನೀವು ನಿರೂಪಿಸಿದ ಕಲ್ಪಗಳು ಸಿದ್ಧಿಸಲಿಲ್ಲ.
ಅದೂ ಅಲ್ಲದೆ, ವಾಚಕಲುಪೆಯು ಏಳುವಿಧವೆಂಬುದು ಅಂಗೀಕಾರಾರ್ಹವಲ್ಲ, ಏಕೆಂದರೆ 'ಕ್ವಿಪ್' ಪ್ರತ್ಯಯದಲ್ಲಿಯೂ, ತದ್ಧಿತದಲ್ಲಿಯೂ ಸಹ ವಾಚಕಲೋಪವು ಕಂಡುಬರುವುದು. ಅದಕ್ಕೆ ಇಲ್ಲಿದೆ ಉದಾಹರಣೆ- “ಯದ್ಭಕ್ತಾನಾಂ ಸುಖಮಯಃ ಸಂಸಾರೋಪಪವರ್ಗತಿ ! ತಂ ಶಂಭುಮಭಜನ್ ಮರ್ತಃ ಚಂಚಾಚಂದ್ರಕಲಾ ಧರಂ ” (ಪಾಠಾಂತರಃ-ಸೋಕಹಿತಾಕೃತೇಃ), ಇಲ್ಲಿ ಅಪವರ್ಗವತ್ ಆಚರತಿ ಎಂಬರ್ಥದಲ್ಲಿ ಕ್ರಿಪ್ ಪ್ರತ್ಯಯವು ಸಮಾಸದಲ್ಲಿ ಲೋಪವಾಗಿರುವುದರಿಂದ ವಾಚಕ ಲೋಪವಿದೆ ಮತ್ತು ಚಂಚಾ ಎಂಬಲ್ಲಿ ಚಂಚಾತೃಣಪುರುಷ ಇವ' ಎಂಬರ್ಥದಲ್ಲಿ “ಇವೇ ಪ್ರತಿಕೃತಿ” ಎಂಬುದರಿಂದ ವಿಹಿತವಾದ ತನ್ ಪ್ರತ್ಯಯಕ್ಕೆ “ತನೋರ್ಲುಕ್ ಮನುಷ್ಯ” ಎಂಬುದರಿಂದ ಲುಧಾನಮಾಡಲಾಗಿದೆ. ಅದರಿಂದಲೂ ವಾಚಕ ಲೋಪವು ಇದೆ. ಆದ್ದರಿಂದ ಇಲ್ಲಿ ಎರಡುಸ್ಥಳಗಳಲ್ಲಿಯೂ ಕ್ಲಿಪ್ ಪ್ರತ್ಯಯ ಮತ್ತು ತನುಪ್ರತ್ಯಯವು, ಲೋಪವು ಶಾಸ್ತ್ರವಿಹಿತವಾಗಿದೆ. ಇನ್ನು ವಾಕ್ಯ ಮತ್ತು ಸಮಾಸಗತವಾಗಿ ಉಪಮಾನುಷೆಯು ಎರಡುವಿಧವೆಂಬ ನಿಮ್ಮ ವಾದವೂ ಸರಿಯಲ್ಲ, ಅದು ತದ್ದಿತದಲ್ಲಿಯೂ ಸಂಭವಿಸುವುದಿಲ್ಲ. ಉದಾ :- “ನೃಣಾಂ ಯಂ ಸೇವಾ 'ಮಾನಾನಾಂ ಸಂಸಾರೋಪಪವರ್ಗತಿ' ! ತಂ ಶಂಭುಮಭಜನ್ ಮರ್ತೃಃ ಚಂಚಾಚಂದ್ರಕಲಾಧರಂ ||” ಇಲ್ಲಿ ಚಂಚಾತೃಣಪುರುಷಃ' ಎಂಬರ್ಥದಲ್ಲಿ 'ಕನೊರ್ಲುಕ್' ಎಂದು ಕನುಪ್ರತ್ಯಯಕ್ಕೆ ಲೋಪಬರುವುದರಿಂದ ಉಭಯಲೋಪವೂ ವಾಕ್ಯ-ಸಮಾಸಗಳಲ್ಲಿ ಬಂದರೂ ತದ್ದಿತದಲ್ಲಿ ಬರುವುದಿಲ್ಲ, ಇದೂ ಅಲ್ಲದೆ-ಧರ್ಮೋಪಮಾನಲುತ್ತೆಯು ಸಮಾಸಗತ-ವಾಕ್ಯಗತವೆಂದು ನೀವು ಎರಡುವಿಧವೆಂದು ಹೇಳಿದ್ದೂ ಸರಿಯಲ್ಲ, ಧರ್ಮೋಪಮಾನುಲುಸ್ತೆಯು ತದ್ದಿತದಲ್ಲಿಯೂ ಬರುತ್ತದೆ. “ತದೇತತ್ಕಾಲೀಯಮಾಯಾಂ” ಎಂಬಲ್ಲಿ ಪ್ರತ್ಯಯಾರ್ಥೋಪಯಾಮಾಂ” ಎಂತಲೂ, “ಅವಿತರ್ಕಿತ ಸಂಭವಂ” ಎಂಬುದನ್ನು ಹೇಳದಿರುವಾಗ ಧರ್ಮೋಪಮಾನ ಎರಡಕ್ಕೂ ಲೋಪ ಬರುತ್ತದೆ. ಇಂತು ಲುಪೋಪಮಾಲಂಕಾರದಲ್ಲಿ ಬೇರೆ ಬೇರೆ ಪ್ರಕಾರಗಳನ್ನು ಪ್ರಶ್ನಿಸಬಹುದಾದುದರಿಂದ ನೀವು ಪ್ರದರ್ಶಿಸಿದ ಪ್ರಕಾರಗಳು ಅಲಂಕಾರಸಮಯಕ್ಕೆ ಸಮ್ಮತವಲ್ಲ, ಮತ್ತು ಚಮತ್ಕಾರಜನಕವೂ ಅಲ್ಲ!
ವೇಂಕಟ : ಸ್ವಾಮಿ, ನಿಮ್ಮ ಅನುವಾದವನ್ನು ಕೇಳಿ ನನಗಚ್ಚರಿಯಾಗಿದೆ ! ಏಕೆಂದರೆ ನೀವು ಈ ವಿಷಯದಲ್ಲಿ “ಕಶ್ಚಿತ್ಕಾಂತಾ” ವಾಕ್ಯಾರ್ಥವನ್ನು ಮಾಡಿಕೊಂಡಿದ್ದೀರಿ ! ನಾನು ನಿಮ್ಮ ಕೋರಿಕೆಯಂತೆ ಅಲಂಕಾರವೇತ್ತರು ನಿರೂಪಿಸಿದ ಪ್ರಕಾರವನ್ನು ಪ್ರದರ್ಶಿಸುತ್ತಾ ಹೋಗಿದ್ದೇನೆಯೇ ಹೊರತು ಅವುಗಳಿಗೆ ವಿರೋಧವನ್ನು ಪ್ರದರ್ಶಿಸಲಿಲ್ಲ. ನನ್ನ ಅನುವಾದವನ್ನು ಕೇಳಿದ ಸಕಲರಿಗೂ ಇದು ತಿಳಿದ ವಿಷಯ. (ಪಂಡಿತಮಂಡಲಿಯಕಡೆಯಿಂದ ಅಹುದು ಅಹುದು' ಎಂಬ ಉದ್ಧಾರಗಳು ಕೇಳಿಬಂದಿತು) ಹೋಗಲಿಬಿಡಿ, ನನ್ನ ಮುಂದಿನ ಅನುವಾದವನ್ನಾದರೂ ಗಮನವಿಟ್ಟು ಲಾಲಿಸಿರಿ. ಅಂದರೆ ಸಂದೇಹ ಪರಿಹಾರವಾಗುವುದು.
ವಿಬುಧ : (ನಸುಗೋಪದಿಂದ) ಅಲ್ಲಾ ಸ್ವಾಮಿ ! ಲುಪೋಪಮಾಲಂಕಾರವು ಎಂಟುವಿಧವೆಂದು ನೀವು ಎಲ್ಲಿಯೂ ಹೇಳಲೇ ಇಲ್ಲವಲ್ಲ ! ಅದನ್ನು ನೀವು ನುಂಗಿ ವಿವರಿಸುತ್ತಾ ಹೋದುದೇ ನನ್ನ ಸಂದೇಹಕ್ಕೆ ಆಸ್ಪದವಾಯಿತು !
ವೇಂಕಟ : (ನಗುತ್ತಾ) ನಾನು ಪ್ರಾಚೀನ ಆಲಂಕಾರಿಕರು ತೋರಿಸಿದ ಸಾಮಾನ್ಯ-ವಿಶೇಷ ವಿಭಾಗಗಳನ್ನು ಲುಪೋಪಮಾಲಂಕಾರದಲ್ಲಿ ಹೇಳುತ್ತಿರುವ ಮಧ್ಯದಲ್ಲೇ ನೀವು ಹಿಂದುಮುಂದಾಲೋಚಿಸದೆ ಅವುಗಳನ್ನು ನಿರಸನ ಮಾಡುತ್ತಾ ಹೋದುದು ನನ್ನ ತಪ್ಪೆ ? ನೀವಿಂತು ಪೂರ್ವಾಚಾರರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸುತ್ತಾ ಹೋದರೆ ನಿಮಗೆ ಸ್ವಸಿದ್ಧಾಂತ ವಿರೋಧವು ಬರುವುದಿಲ್ಲವೇ ? ಸ್ವವ್ಯಾಹತಿಯೂ ಆಗುವುದಷ್ಟೇ ? ಅದರಿಂದ ಸ್ವವಚನ ವಿರೋಧ, ಸ್ತನ್ಯಾಯ ವಿರೋಧ, ಸಕ್ರಿಯಾವಿರೋಧ-ಹೀಗೆ ಮೂರು ದೋಷಗಳು ನಿಮಗೆ ತಪ್ಪಿದ್ದಲ್ಲ ! (ಆಗ ದೀಕ್ಷಿತರು. ಮಹಾರಾಜರು. ಪಂಡಿತರು ಆಚಾರರ ಮಾತನ್ನು “ಸಾಧು, ಸಾಧು” ಎಂದು ಶ್ಲಾಘಿಸಹತ್ತಿದರು) ಬೇಕಾದರೆ ನಾವಿದಕ್ಕೆ ಉದಾಹರಣೆ ಕೊಡುತ್ತೇವೆ !
ಆಗ ಸಭೆಯಲ್ಲಿ ಎಲ್ಲ ಕಡೆಯಿಂದಲೂ ನಗೆಯು ಅಲೆಯಲೆಯಾಗಿ ತೇಲಿಬಂತು ! ವಿಬುಧಾನಂದರು ಪೆಚ್ಚಾದರು. ಮುಖ ಕಂಗೆಟ್ಟಿತು. ತಮ್ಮ ತಪ್ಪಿನ ಅರಿವಾಯಿತು. ಮನದ ತಳಮಳವನ್ನು ಹೇಗೋ ಹತ್ತಿಕ್ಕಿ ಏನೂ ನಡೆದೇ ಇಲ್ಲವೇನೋ ಎಂಬಂತೆ ಅಭಿನಯಿಸುತ್ತಾ “ಹೀಗೋ, ಸರಿ, ಅದೇನು ಹೇಳಿ ಕೇಳೋಣ” ಎಂದರು.
ವೇಂಕಟ : “ಮುಕೋSಹಂ” ನಾನು ಮೂಕ ! ಎಂಬಲ್ಲಿ ಸವಚನ ವಿರೋಧವು ಬರುತ್ತದೆ. “ಮೇ ಮಾತಾ ವಂಧ್ಯಾ ನನ್ನ ತಾಯಿಯು ಬಂಜೆ-ಎಂಬಲ್ಲಿ ಸಕ್ರಿಯಾ ವಿರೋಧವು ಬರುತ್ತದೆ. ಇದರಂತೆ......
ವಿಬುಧ : (ಆಚಾರರ ಅರ್ಧೋಕ್ತಿಯಲ್ಲಿಯೇ ಬಾಯಿಹಾಕಿ) ಪ್ಲಾ ಸಾಕು, ಸಾಕು ಸ್ವಾಮಿ, ಎಲ್ಲ ಅವಗತವಾಯಿತು.
ಈಗ ಮುಂದೇನು ಹೇಳುವಿರಿ ?
ವೇಂಕಟ : (ನಕ್ಕು) ಸರಿ ! ತಿಳಿದಿದ್ದರೆ ಸಂತೋಷ, ಈಗ ನಿಮ್ಮ ಮತೀಯರೂ ಅಲಂಕಾರಶಾಸ್ತ್ರದಲ್ಲಿ ಅಸಾಧಾರಣ ಪಂಡಿತರೂ ಆದ ಮಹನೀಯರೊಬ್ಬರು “ಶ್ರೀಮತ್ತುಧೀಂದ್ರಸಂಯಮಿಪುಂಗವಗುಣಕಥನ ಪುಂಖಿತಗರಿಕ್ಖಣಃ | ಲಲಿತಾನು ದಾಹರಾಮಿ ಶ್ಲೋಕಾನ್ ಕೃತಿಲೋಕವಿರಚಿತಶ್ಲಾಘಾಮ್ ” ಎಂದು ಪೂಜ್ಯ ಶ್ರೀಸುಧೀಂದ್ರತೀರ್ಥರನ್ನೇ ನಾಯಕರನ್ನಾಗಿ ಮಾಡಿ ರಚಿಸಿರುವ ಅಲಂಕಾರನಿಕಷ' ದಲ್ಲಿ ಲುಪೋಪಮಾಲಂಕಾರಕ್ಕೆ ವಿವರಣೆ ಕೊಟ್ಟಿರುವದನ್ನು ಈಗ ನಿರೂಪಿಸುತ್ತೇನೆ.
ವಿಬುಧ : (ಅಚ್ಚರಿಯಿಂದ) ಏನು ! ನಮ್ಮವರು ನಿಮ್ಮ ಗುರುಗಳನ್ನು ನಾಯಕರನ್ನಾಗಿಸಿ ಅಲಂಕಾರ ಗ್ರಂಥವನ್ನು ರಚಿಸಿರುವರೇ ? ಎಲ್ಲಿ ಒಂದೆರಡು ಉದಾಹರಣೆಗಳನ್ನು ವಿವರಿಸಿರಿ, ಕೇಳೋಣ.
ವೇಂಕಟ : ಇಷ್ಟೇಕೆ ಆಶ್ಚರ ಪಡುತ್ತಿರುವಿರಿ ಭಟ್ಟಾಚಾರರೇ ? ವಿದ್ಯಾವಂತರು ಯಾವ ಮತದವರಾದರೇನು ? ಯೋಗ್ಯತೆ, ಅರ್ಹತೆ, ಜಗನ್ಮಾನ್ಯತೆ ಇದ್ದಲ್ಲಿ ಅದು ಸಹಜವೇ ಅಲ್ಲವೇ ? ಈಗ ನೋಡಿ ನಮ್ಮ ರಘುನಾಥಭೂಪಾಲರನ್ನು ನಾಯಕರನ್ನಾಗಿ ವರ್ಣಿಸಿ ಕೃಷ್ಣಯಜ್ಜ ಮಹಾಕವಿಗಳು “ರಘುನಾಥಭೂಪಾಲಿಯಮ್” ಎಂಬ ಅಲಂಕಾರ ಗ್ರಂಥರಚಿಸಿದ್ದಾರಷ್ಟೆ ? ಅದಕ್ಕೆ ಜಗನ್ಮಾನ್ಯತೆ ದೊರಕಬೇಕೆಂದು ಮಹಾ ಪ್ರಭುಗಳು ಮತ್ತು ಕೃಷ್ಣಯಜ್ವರೂ ಗುರುಪಾದರನ್ನು ಅದಕ್ಕೆ ವ್ಯಾಖ್ಯಾನ ರಚಿಸಬೇಕೆಂದು ಪ್ರಾರ್ಥಿಸಿದಾಗ ನಮ್ಮ ಶ್ರೀಸುಧೀಂದ್ರ ಗುರುಗಳು ಕವಿಗಳು ಪರಮತೀಯರೆಂದಾಗಲಿ, ತಾವು ಪರಮಹಂಸರಾದ್ದರಿಂದ ಗೃಹಸ್ಥಾಶ್ರಮಿಗಳ ಗ್ರಂಥಕ್ಕೆ ವ್ಯಾಖ್ಯಾನ ಮಾಡಬಾರದೆಂದಾಗಲೀ ಯೋಚಿಸದೆ ವಿಶಾಲ ಹೃದಯದಿಂದ ಅದಕ್ಕೆ ಸಾಹಿತ್ಯ ಸಾಮ್ರಾಜ್ಯಮ್” ಎಂಬ ಲೋಕವಿಖ್ಯಾತವಾದ, ವಿಸ್ತಾರವೂ ಪ್ರೌಢವೂ ಆದ ವ್ಯಾಖ್ಯಾನವನ್ನು ರಚಿಸಿ ಅನುಗ್ರಹಿಸಲಿಲ್ಲವೇ ? ಅಂತೆಯೇ ನಮ್ಮ ಗುರುಪಾದರ ಹಿರಿಮ-ಗರಿಮೆಗಳನ್ನರಿತ ನಿಮ್ಮ ಮತೀಯ ಪಂಡಿತರು ಗುರುಗಳನ್ನು ನಾಯಕರನ್ನಾಗಿ ವರ್ಣಿಸಿ “ಅಲಂಕಾರನಿಕಷ'ವನ್ನು ರಚಿಸಿದ್ದು ಆಶ್ಚರಕರವೇನಲ್ಲ!
ಆಚಾರರ ಮಾತನ್ನು ಕೇಳಿ ಸರ್ವರೂ ಹರ್ಷದಿಂದ ಕರತಾಡನಮಾಡಿದರು.
ವೇಂಕಟ : ಅದಿರಲಿ, ನಿಮ್ಮಿಷ್ಟದಂತೆ ಉದಾಹರಣೆಕೊಟ್ಟು ವಿವರಿಸುತ್ತೇನೆ. ಕೇಳಿರಿ -
“ಶ್ರೀಮತ್ಸುಧೀಂದ್ರವ್ರತಿಸಾರ್ವಭೌಮ ! ಗಾಂಭೀರ್ಯಮದಾರ್ಯಮುರ್ಗುಣೋಫ್ಟ್: | ತುಲ ಯಾ ನ ತ್ರಿಮು ವಿಷ್ಟಪೇಷು
ನಿಶಾಮ್ಯತೇ ಕೋಗಿಪಿ ನಿಶಮ್ಯತೇ ವಾ ||” ಅಲಂಕಾರನಿಕಷ -
“ಶ್ರೀಮತ್ತುಧೀಂದ್ರತೀರ್ಥ ಪ್ರತಿಸಾರ್ವಭೌಮರೇ. ನಿಮ್ಮ ಗಾಂಭಿರ್ಯ, ಔದಾರ ಮುಂತಾದ ಸದ್ಗುಣಗಳಿಗೆ ಮೂರು ಲೋಕಗಳಲ್ಲಿಯೂ ನಿಮಗೆ ಸಮರಾದವರನ್ನು ಕೇಳಿಯೂ ಇಲ್ಲ. ನೋಡಿಯೂ ಇಲ್ಲ !” - ಇಲ್ಲಿ ತುಲ್ಯಃ ಎಂಬ ಪದದಿಂದ ಸಾಮಾನ್ಯ ಉಪಮಾನವು ನಿರ್ದೇಶಿಸಲ್ಪಟ್ಟಿದೆ. ಶೃಂಗಿಗ್ರಾಹಿಕಯಾ ಉಪಮಾನ ವಿಶೇಷವು ಪ್ರದರ್ಶಿಸಲ್ಪಟ್ಟಿಲ್ಲ. “ಕೋಪಿ” ಎಂದು ಮಾತ್ರ ಹೇಳಲ್ಪಟ್ಟಿದೆ. ಯಾರೊಬ್ಬರ ಹೆಸರನ್ನೂ ಹೇಳಿಲ್ಲವಾದ್ದರಿಂದ ಉಪಮಾನಸಾಮ್ಯವೇ ಇಲ್ಲವೆಂದ ಮೇಲೆ ಉಪಮಾನ ವಿಶೇಷವೆಲ್ಲಿಂದ ಬಂತು ? ಆದುದರಿಂದ ಇಲ್ಲಿ ಉಪಮಾನ ಲುಪ್ತಯು ವಾಕ್ಯದಲ್ಲಿ ಬಂತು, ಇನ್ನು ತತ್ತಂತಿಭೋ ನ ತ್ರಿಷು ವಿಷ್ಟ ಪೇಷು” ಎಂದು ಪಾಠಾಂತರ ಮಾಡಿದರೆ “ತತಂತಿ” ಎಂಬಲ್ಲಿ ಸಮಾಸಗತವಾಗಿಯೂ ಉಪಮಾನಲುಪೆಯು ಬರುತ್ತದೆ. ಈ ಉದಾಹರಣೆಯನ್ನು ಈ ಹಿಂದೆ ನಾನು ನಿರೂಪಿಸಿದ ಅವಾಂತರ ವಿಭಾಗವನ್ನು ಸುಭದ್ರಗೊಳಿಸುತ್ತದೆ.
ವಿಬುಧ : ಭಲೇ, ಸ್ವಾರಸ್ಯವಾಗಿದೆ, ಇನ್ನೊಂದು ಉದಾಹರಣೆ ಕೊಡಿ ನೋಡೋಣ.
ವೆಂಕಟ : ಕೇಳಿ ಸ್ವಾಮಿ,
“ಶ್ಲಾಘಾಕಂಪೋತ್ತಮಾಂಗಾ ವಿಸರದಭಿನವಾನಂದ ಸಾಂದ್ರಾಂತರಂಗಾ ಬಾಪೌಘಸಾದಪಾಂಗಾ ಪ್ರಸಮರಪುಲಕಾಂಕೂರ ನೀರಂದ್ರಿತಾಂಗಾ | ಶ್ರುಂತಿ ಶ್ರೀಸುಧೀಂದ್ರವ್ರತಿಲಕ ! ಮಹುಸ್ತಾವಕೀ ಕೀರ್ತಿಮುಚ್ಚಿ ಗೋತ್ರಕ್ಷಾಭದ್ಗುಹಾಂತೇ ಹಯಮುಖಮಿಥುನೈ: ಯೋಗಿನೋ ಗೀಯಮಾನಾಮ್ ||”
“ಶ್ರೀಸುಧೀಂದ್ರವ್ರತಿವರತಿಲಕರೇ, ದೇವಪರ್ವತದ ಗುಹೆಯಲ್ಲಿ ತುರಗ ಮುಖದ ಗಂಧರ್ವದಂಪತಿಗಳು ನಿಮ್ಮ ಉನ್ನತವಾದ ಧವಳಕೀರ್ತಿಯನ್ನು ಗಾನಮಾಡುತ್ತಾ ಇದ್ದಾರೆ. ಅದನ್ನು ಯೋಗಿಗಳು ಕೇಳುತ್ತಾ ಇದ್ದಾರೆ. ಗಾನನಿಪುಣರಾದ ಆ ಗಂಧರ್ವರು ಶ್ಲಾಘನೆಯಿಂದ ಶಿರಃಕುಪನ ಮಾಡುವುದು. ಅವರ ಅಂತರಂಗದಲ್ಲಿ ಹೊಚ್ಚಹೊಸತಾದ ಅತುಲಾನಂದಪಡುವುದು. ಆನಂದಬಾಷ್ಪವನ್ನು ಸುರಿಸುವುದು, ಕಡೆಗಣ್ಣನೋಟ ಬೀರುವುದು, ಕಂಬಳಿ ಹೊದ್ದಂತೆ ರೋಮಾಂಚನಗೊಳ್ಳುವುದು, ಸ್ವದಜಲದಿಂದ ಸ್ನಿಗ್ಧರಾಗಿರುವುದು, ಇವೇ ಮುಂತಾದ ಅವಸ್ಥೆಗೊಳಗಾಗಿ ಭಾವಪೂರ್ಣವಾಗಿ ಗಾನಮಾಡುತ್ತಿರುವುದನ್ನು ಯೋಗಿಗಳು ಕೇಳುತ್ತಿದ್ದಾರೆ!”
ಇಲ್ಲಿ ಧರ್ಮವಾಚಕ ಉಪ್ತಾಲಂಕಾರವಿದೆ. ಹೇಗೆಂದರೆ - “ಹಯಮುಖ” ಎಂಬಲ್ಲಿ 'ಹಯಸ್ಯ ಮುಖಮಿವಮುಖಂ ಯಸ್ಯ' ಎಂಬ ಅರ್ಥದಲ್ಲಿ ಸಪ್ತಮ್ಯುಪಮಾನಪೂರ್ವಸ್ಯ ಉತ್ತರ ಪದಲೋಪಶ್ಚ” ಎಂಬ ಬಹುವೀಹಿಯಲ್ಲಿ ಉಪಮಾನವಾಚಕ ಮುಖಶಬ್ದವು ಲೋಪವಾಗಿರುವುದರಿಂದಲೂ, ಧರ್ಮವಾಚಕಗಳನ್ನು ಹೇಳುವುದರಿಂದ ಸಮಾಸಗತವಾಗಿ ಧರ್ಮ-ಉಪಮಾನ- ವಾಚಕ ಇವು ಮೂರು ಲೋಪಗೊಂಡಿವೆ. ಆದ್ದರಿಂದ ಈ ಮೂರರ ಲುಪೆಯು ಇಲ್ಲಿ ಸಮನ್ವಯವಾಗುತ್ತದೆ.
ವೇಂಕಟನಾಥರು ಮುಂದುವರೆದು, “ಭಟ್ಟಾಚಾರ್ಯರೇ, “ಸಾಹಿತ್ಯಚಿಂತಾಮಣಿ' ಕಾರನಾದರೋ “ನಮುಲಾದಿಷ್ಟಿವ” ನಮುಲಾದಿಗಳಲ್ಲಿದ್ದಂತೆಯೇ “ಣಿಣ್” ಪ್ರತ್ಯಯದಲ್ಲಿಯೂ ವಾಚಕಲೋಪವುಂಟು, ಏಳು ವಿಧವಾಗಿದೆ ಎಂದು ವಾಚಕಲುಪೆಯನ್ನು ಪ್ರದರ್ಶಿಸುತ್ತಾ ಇಪ್ಪತ್ತು ವಿಧವಾಗುವುದೆಂಬುದನ್ನು ಲುಪ್ತಾಲಂಕಾರದಲ್ಲಿ ಸ್ವೀಕರಿಸಲಾಗಿಲ್ಲ. “ಣಿನಿಗತೋ ವಾಚಕಲೋಪಶ್ಚ ವಲ್ಲ್ಯಾ ವೈಶಾಖೇತಿ” ಪೂರ್ವಶ್ಲೋಕದಲ್ಲಿ ನಾಗೇಂದ್ರಗಾಮಿ” ಎಂಬ ಉದಾಹರಣೆಯಲ್ಲಿ ನೋಡಬೇಕು ಎಂದು ಚಿಂತಾಮಣಿ” ಕಾರರ ಅಭಿಪ್ರಾಯ.
ಇನ್ನು ಆನೇ-ಪಕ್ಷದವರಾದರೋ ವಾಕ್ಯ-ಸಮಾಸಾದಿಗತತೇನ ಅವಾಂತರ ವಿಭಾಗವು ; ಅವು ಚಮತ್ಕಾರಜನಕವಲ್ಲ. ಅಂತೂ ಈ ವಿಭಾಗವು ನ್ಯೂನವಾಯಿತು. ಅದು ಹೇಗೆಂದರೆ- “ಪಟುಃ ಪಟುಃ ದೇವದತ್ತ” ಎಂಬುದು ಉದಾಹರಣೆ. “ಪ್ರಕಾರೇಣುಣವಚನಸ್ಯ” ಎಂಬ ವಿಧಿಯಲ್ಲಿ ಸಾದೃಶ್ಯಾರ್ಥದಲ್ಲಿ ದ್ವಿರ್ಭಾವವು ಹೇಳಲ್ಪಟ್ಟಿದೆ. ಪಟುಸದೃಶನು ಎಂದು ಅದರ ಅರ್ಥ, ಹೀಗಿರುವಲ್ಲಿ ವಾಕ್ಯಗತವಾಗಿಯಾಗಲಿ, ಸಮಾಸಗತವಾಗಿಯಾಗಲಿ, ಲುಪ್ಪೆಯು ಸಂಭವಿಸುವುದಿಲ್ಲ. ಮತ್ತು “ಕರ್ಮಧಾರಯೇ ತದುತ್ತರೇಷು” ಎಂಬ ಸೂತ್ರದಿಂದ ಸಮಾಸ್ತದ್ಭಾವ ವಿಧಾನ ಮಾಡಿದ್ದರಿಂದಲೇ ಏಕಕಾಲದಲ್ಲಿಯೇ ಸಿದ್ಧಿಸುವುದರಿಂದ ವಾಚಕಲುಪೆಯು-ಕರ್ಮ, ಣಮುಲ್ ಇತ್ಯಾದಿಗಳಲ್ಲಿ ಏಳು ವಿಧಗಳಿರುವಂತೆ ಕೃತ್ತದಿತಳೆರಡರಲ್ಲಿಯೂ ಕೂಡ ಕಾಣುತ್ತದೆ. ಉದಾಹರಣೆ :-
“ಯದ್ಧಕ್ತಾನಾಂ ಸುಖಮಯಸ್ಸಂಸಾರೋಪವರ್ಗತಿ |
ತಂ ಶಂಭುಮಭರ್ಜ ಮರ್ತ್ಯಃ ಸ್ಪೋಕ್ತಹಿತಾಕೃತೇಃ ||”
-
ಯಾವ ಕಾರಣದಿಂದ ಭಕ್ತರಿಗೆ ಸಂಸಾರವೂ ಕೂಡ ಸುಖಮಯವಾಗಿ ಸ್ವರ್ಗದಂತಾಗುವುದೋ ಅಂಥ ಶಂಭುವನ್ನು ಭಜಿಸಿದ ಮಾನವನೂ ಕೂಡ ತನ್ನ ಹಿತವನ್ನು ಸಾಧಿಸುತ್ತಾನೆ. ಇಲ್ಲಿ “ಅಪರ್ವತಿ” ಎಂಬ ಕ್ಷಿಪ್ ಪ್ರಶ್ನೆಯದಲ್ಲೂ ಮತ್ತು “ಚಂಚಾತೃಣ ಪುರುಷ ಇವ” ಎಂಬರ್ಥದಲ್ಲಿ ಇವೇತಿ ಪ್ರಕೃತ' ಎಂಬುದರಿಂದ ವಿಹಿತವಾದುದಕ್ಕೆ “ಕನೋರ್ಲುಪ್ ಮನುಷ್ಯ” ಎಂಬುದರಿಂದ ಲೋಪವು ವಿಧಾನ ಮಾಡಲ್ಪಟ್ಟಿದೆ. “ಕತಿ ಚ” ಎಂಬ ತದ್ದಿತದಲ್ಲಿ ವಾಚಕಲೋಪವಿದೆ. ಉಭಯತ್ರ ಸುಖಮಯತ್ವ ಮುಂತಾದ ಸಾಧಾರಣ ಧರ್ಮವು ಹೇಳಲ್ಪಟ್ಟಿದೆ. ಧರ್ಮವಾಚಕ ಲುಪ್ತಯು ಕ್ಲಿಪ್ -ಸಮಾಸಗಳೆರಡರಲ್ಲಿ ಇರುವಂತೆ ತದ್ಧಿತದಲ್ಲಿಯೂ ಕೂಡ ಸಂಭವಿಸುತ್ತದೆ. ಹೇಗೆಂದರೆ – ಈ ಶ್ಲೋಕದಲ್ಲಿಯೇ “ಚಂಚಾಚುದ್ರಕಲಾಧರು” ಎಂದು ಪಾಠಾಂತರ ಮಾಡಿಕೊಂಡರೆ, ಉಪಮಾನಲುಷೆಯೂ, ಧರ್ಮೋಪಮಾನುಲುಪೆಯು ಕೂಡ ವಾಕ್ಯ-ಸಮಾಸಗತ ಇವುಗಳಂತೆ ತದ್ಧಿತದಲ್ಲಿಯೂ ಕೂಡ ಕಾಣುತ್ತದೆ. ಸ್ವರೂಪಃ ಇದನ್ನೇನೂ ಹೇಳಿಲ್ಲ. ಅದೂ ಸಹ ಸಮಾಸದಲ್ಲಿಯೂ ಕಾಣುತ್ತದೆ. ಹೀಗೆ ನಿಮ್ಮ ಪ್ರಾಚೀನಾಚಾರ್ಯರಕೃತಿಗಳಲ್ಲಿ ಪ್ರದರ್ಶಿಸಿದ ಲುಪೋಪಮೆಯ ಸಾಮಾನ್ಯ-ವಿಶೇಷ ಉದಾಹರಣೆಗಳನ್ನೂ ಅವುಗಳಲ್ಲಿಯ ಪ್ರಭೇದಗಳನ್ನೂ ನಿರೂಪಿಸಿದ್ದೇನೆ. ಇದರಿಂದ ನಿಮ್ಮ ಸಂದೇಹ, ಅಕ್ಷೇಪಗಳಿಗೆಲ್ಲಾ ಉತ್ತರ ದೊರಕಿದೆ ಎಂದೂ ಭಾವಿಸುತ್ತೇನೆ. ಇದರ ಮೇಲೆ ನಿಮಗೆ ಇನ್ನೂ ಕೋಟಿಕ್ರಮಗಳು ಸುರಿಸುತ್ತಿದ್ದ ಪಕ್ಷದಲ್ಲಿ ಅವುಗಳನ್ನು ಮಂಡಿಸಬಹುದು. ಉತ್ತರಿಸುತ್ತೇನೆ.
ವಿಬುಧ : ಆಚಾರ್ಯರೇ, ನನಗೆ ಈಗ ಸಂತೋಷವಾಗಿದೆ. ನಿಮ್ಮ ಅಭಿಪ್ರಾಯದಂತೆ ಉಪಮಾನಲುಪ್ತಾ, ಧರ್ಮೋಪಮಾನಲುಪ್ತಾ, ವಾಕ್ಯ, ತದ್ಧಿತ, ಸಮಾಸ- ಇವುಗಳನ್ನು ಒಂದೇ ಶ್ಲೋಕದಲ್ಲಿ ಉದಾಹರಣೆಯಾಗಿ ಕೊಟ್ಟು ಸಮರ್ಥಿಸಬಲ್ಲಿರಾ ? ನನ್ನಾಶೆಯನ್ನು ನೀವು ಪೂರ್ಣಮಾಡಿದಲ್ಲಿ ನೀವು ನಿಜವಾಗಿ ಅಲಂಕಾರಶಾಸ್ತ್ರದಲ್ಲಿ ಅದ್ವಿತೀಯ ಪಂಡಿತರೆಂದು ಒಪ್ಪುತ್ತೇನೆ !
ವೇಂಕಟ : (ಮುಗುಳುನಗೆ ಬೀರುತ್ತಾ) ಹಾಗಾದರೆ ಕೇಳಿ - ಏತತ್ವಯಮಪಿ ಯಥಾ -
“ಯರಾಣಾಮಸ್ಯ ಚ ಸಮಾಗಮೋ ಯಚ್ಚ ರ್ವಧೋಸ್ಯ ಕೃತಃ | ಉಪನತಮೇತದಕಸ್ಮಾದಾಸೀತ್ ಬತ ಕಾಕತಾಲೀಯಮ್ ”
ಇಲ್ಲಿ 'ಕಾಕತಾಲೀಯಂ' ಎಂಬ ಒಂದೇ ಪದದಿಂದ ಮೂರನ್ನೂ ಸಮನ್ವಯಗೊಳಿಸುತ್ತೇನೆ ! ಕಾಕತಾಲ ಶಬ್ದಗಳು ವೃತ್ತಿವಿಷಯದಲ್ಲಿ ಕಾಕತಾಲೀಯ ಕ್ರಿಯಾವರ್ತಿಗಳು, “ಮಾಸಾಚ್ಛ ತದ್ವಿಷಯಾತ್” ಎಂಬ ಜ್ಞಾಪಕದಂತೆ ಅವೆರಡಕ್ಕೂ ಸಮಾಸವು ಬರುತ್ತದೆ. ಆಮೇಲೆ ಕಾಕಾಗಮನಮಿವ ತಾಲಪತನಮಿವ” ಎಂಬುದು ಸಮಾಸದ ಅರ್ಥ. ಅದರಿಂದ ದೇವದತ್ತ, ಕಳ್ಳರು ಇವರ ಸಮಾಗಮವಾ, “ಕಾಕತಾಲಸಮಾಗಮಸದೃಶ” ಎಂಬುದು ತಾತ್ಪರ್ಯ, ಆನಂತರ “ಕಾಕತಾಲಮಿವ” ಎಂದು ಎರಡನೆಯ ಇವಾರ್ಥದಲ್ಲಿ ಸಮಾಸಾಚ್ಚ ತದ್ವಿಷಯಾತ್” ಎಂಬುವುದರಿಂದ ಛ ಪ್ರತ್ಯವು ಬರುತ್ತದೆ. ಕಳ್ಳರಿಂದ ದೇವದತ್ತನ ವಧೆಯೂ, ತಾಳಫಲದಿಂದ ನಡೆದ ಕಾಗೆಯ ವಧೆಯೂ - ಎಂಬುದು ಅದರ ಅರ್ಥ. ಇಲ್ಲಿ ಸಮಾಸಾರ್ಥದ ಉಪಮೆಯಲ್ಲಿ ಸಮಾಗಮರೂಪವಾದ ಉಪಮಾನಕ್ಕೆ ಇವ ಮುಂತಾದ ಪದಗಳನ್ನು ಹೇಳದಿರುವುದರಿಂದ ವಾಚಕ ಉಪಮಾನಲೋಪವಾಗಿದೆ. ಇನ್ನು ಪ್ರತ್ಯಯಾರ್ಥದ ಉಪಮೆಯಲ್ಲಿ ಕಾಕವಧರೂಪದ ಉಪಮಾನವು ಹೇಳಲ್ಪಡುವುದರಿಂದ ಉಪಮಾನಲೋಪವೂ ಆಗಿದೆ. ಮತ್ತು ಅಲ್ಲಿಯೇ “ಉಪನತಮೇತದಕಸ್ಮಾತ್” ಎಂಬ ಧರ್ಮವನ್ನು ಹೇಳದೇ ಇದ್ದಾಗ ಧರ್ಮೋಪಮಾನಲೋಪವಾ ಬರುತ್ತದೆ. ಹೀಗೆ ಮೂರನ್ನೂ ಸಮನ್ವಯಗೊಳಿಸಿದಂತಾಯಿತು !
ಸ್ವಾಮಿ ವಿಬುಧಾನಂದರೇ, ನೀವು ವಾದಪ್ರಾರಂಭದಲ್ಲಿ ಹಿಂದೆ ಬಂದಾಗ ನಾನು ರಾಜಾಸ್ಥಾನ ಪಂಡಿತರನ್ನು ಜಯಿಸಿದ್ದು ಕಾಕತಾಲೀಯದಂತೆ ಎಂದು ಆಕ್ಷೇಪಿಸಿದ್ದೀರಿ ! ನಾನು ಎರಡು ಬಾರಿ ಅದನ್ನು ಸಮರ್ಥಿಸಿರಿ ಎಂದು ಕೇಳಿದರೂ ನೀವು ಕಾಕತಾಲೀಯವೆಂಬುದನ್ನು ವಾದದಿಂದ ಸಮರ್ಥಿಸಲಿಲ್ಲ ! ಈಗ ಆ ವಿಚಾರವಾಗಿ ಏನು ಹೇಳುವಿರಿ ?
ವಿಬುಧ : ಕ್ಷಮಿಸಿ, ಆಚಾರರೇ, ನಿಮ್ಮ ವಿಜಯವು ಕಾಕತಾಳೀಯದಂತಾಯಿತೆಂದು ನಾನು ಹೇಳಿದ್ದು ನಿಜ. ಆದರೆ ಇಂದಿನ ಸಭೆಯಲ್ಲಿ ನಿಮ್ಮ ಪಾಂಡಿತ್ಯ, ವಾದ ಶೈಲಿ, ಪ್ರತಿಭಾಪುಂಜನಿರೂಪಣೆ, ಅಲಂಕಾರಶಾಸ್ತ್ರದಲ್ಲಿ ನಿಮಗಿರುವ ಅಸಾಧಾರಣ ಪ್ರೌಡಿಮೆ, ಇತ್ಯಾದಿ ಗುಣಗಳನ್ನು ಕಂಡು ನಾನು ಮುಗ್ಧನಾಗಿದ್ದೇನೆ. ಹಿಂದಿನ ನನ್ನ ಅಭಿಪ್ರಾಯ ತಪ್ಪೆಂದು ಮನಗಂಡಿದ್ದೇನೆ. ಆದ್ದರಿಂದ ನಾನು ಸಂತೋಷದಿಂದ ನನ್ನ ಈ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ನಿಮ್ಮಂಥ ಮಹಾಪಂಡಿತರ ಪರಿಚಯವಾದುದು ನನ್ನ ಭಾಗ್ಯ ! ಪೂಜ್ಯ ಯಜ್ಞನಾರಾಯಣದೀಕ್ಷಿತರು ನಿಮ್ಮನ್ನು ಏಕಿಷ್ಟು ಗೌರವಿಸುವರೆಂಬುದು ಈಗ ನನಗರಿವಾಯಿತು ! ನೀವು ನನ್ನನ್ನು ನಿಮ್ಮ ಆತ್ಮೀಯ ಗೋಷ್ಠಿಯಲ್ಲಿ ಸೇರಿಸಿಕೊಂಡು ಅಭಿಮಾನಮಾಡಬೇಕೆಂದು ಕೋರುತ್ತೇನೆ.
ವಿಬುಧಾನಂದ ಭಟ್ಟಾಚಾರರ ಮಾತು ಕೇಳಿ ಎಲ್ಲರೂ ಆನಂದದಿಂದ ಪ್ರಚಂಡ ಕರತಾಡನ ಮಾಡಿದರು.