ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೫೪. ನ್ಯಾಯಶಾಸ್ತ್ರವಿಶಾರದರು
ಶ್ರೀಸುಧೀಂದ್ರತೀರ್ಥರು ಶಿಷ್ಯ-ಭಕ್ತಜನರ ಪ್ರಾರ್ಥನೆಯಂತೆ ಗ್ರಾಮ-ಪಟ್ಟಣ-ಹಳ್ಳಿಗಳಿಗೆಲ್ಲಾ ಭೇಟಿಯಿತ್ತು ತಾತ್ವಿಕ-ಧಾರ್ಮಿಕ ಕಾರಕ್ರಮಗಳಿಂದ ಧರ್ಮಾಭಿಮಾನಿಗಳನ್ನು ಸಂತೋಷಪಡಿಸುತ್ತಾ ಶ್ರೀರಂಗಕ್ಷೇತ್ರಕ್ಕೆ ಚಿತ್ತೆಸಿದರು. ಬಹುವರ್ಷಗಳಾದಮೇಲೆ ಬಂದ ಶ್ರೀಗಳವರನ್ನು ಶ್ರೀರಂಗದ ಲೌಕಿಕ ವೈದಿಕವಿದ್ವಜ್ಜನರು, ಧರ್ಮಭಿಮಾನಿಗಳು ದೇವಾಲಯಾಧಿಕಾರಿಗಳು ಗೌರವದಿಂದ ಸ್ವಾಗತಿಸಿ ಶ್ರೀಮಠದಲ್ಲಿ ಬಿಡಾರಮಾಡಿಸಿದರು.
ಪ್ರತಿದಿನ ಶ್ರೀಮಠದ ಶಿಷ್ಯರು, ಭಕ್ತರು, ಧರ್ಮಾಭಿಮಾನಿಗಳು ಶ್ರೀಯವರಿಗೆ ಪಾದಪೂಜೆ, ಭಿಕ್ಷೆಗಳನ್ನೇರ್ಪಡಿಸಿ ಶ್ರೀಮೂಲರಾಮದೇವರ ಪೂಜಾ, ತೀರ್ಥ ಪ್ರಸಾದ ಮಂತ್ರಮುದ್ರಾಧಾರಣ, ಗುರೂಪದೇಶಾದಿಗಳಿಂದ ಕೃತಾರ್ಥರಾಗುತ್ತಿದ್ದರು. ಪ್ರತಿದಿನ ಮಠದಲ್ಲಿ ವಾಕ್ಯಾರ್ಥ, ಪಂಡಿತರಿಂದ ಗೀತಾ, ರಾಮಾಯಣ, ವೇದ, ಉಪನಿಷತ್ತು, ವೇದಾದಿ ಶಾಸ್ತ್ರಗಳ ಮೇಲೆ ಉಪನ್ಯಾಸಗಳಾಗುತ್ತಿದ್ದು ತ್ರಿಮತಸ್ಥ ಬ್ರಾಹ್ಮಣರು, ಚಾತುರ್ವಣ್ರದ ಇತರ ಧರ್ಮಾಭಿಮಾನಿಗಳು ಈ ಎಲ್ಲ ಕಾರಕ್ರಮಗಳಲ್ಲಿ ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದರು.
ಒಂದು ದಿನ ಸಂಜೆ ಶ್ರೀಸುಧೀಂದ್ರರು ವಿದ್ವಜ್ಜನರೊಡನೆ ಮಾತನಾಡುತ್ತಾ ಕುಳಿತಿರುವಾಗ ರಜತದಂಡಧಾರಿಯೊಬ್ಬನು ಬಂದು “ಮಹಾಸ್ವಾಮಿ, ಕಾಶಿಯ ಪಂಡಿತರೊಬ್ಬರು ಶಿಷ್ಯರೊಡನೆ ದರ್ಶನಕ್ಕಾಗಿ ಬಂದು ಹೊರಗೆ ಕಾದು ನಿಂತಿದ್ದಾರೆ? ಎಂದು ವಿಜ್ಞಾಪಿಸಿದನು. ಶ್ರೀಯವರು “ನರಸಿಂಹ, ಆ ಪಂಡಿತರನ್ನು ಗೌರವದಿಂದ ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದರು.
ನರಸಿಂಹಾಚಾರ್ಯರು ಕಾಶೀಪಂಡಿತರನ್ನು ಸ್ವಾಗತಿಸಿ ಶ್ರೀಗುರುಗಳ ಸನ್ನಿಧಿಗೆ ಕರೆತಂದರು. ಕಾಶೀಪಂಡಿತರು ಆಜಾನುಬಾಹುಗಳೂ ತೇಜಸ್ವಿಗಳೂ ಆಗಿದ್ದರು. ಶಿಷ್ಯರೊಡನೆ ಗುರುಗಳಿಗೆ ನಮಸ್ಕರಿಸಿ ಕುಳಿತು ಅವರು “ಮಹಾಸ್ವಾಮಿ, ತಮ್ಮ ಕೀರ್ತಿ ಬಹುವಾಗಿ ಕೇಳಿದ್ದೇನೆ. ಶ್ರೀವಿಜಯೀಂದ್ರತೀರ್ಥರು ಶ್ರೀವ್ಯಾಸರಾಜಗುರುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ತರುಣ ವಿದ್ಯಾರ್ಥಿಗಳಾಗಿದ್ದ ನಮ್ಮ ತಾತಂದಿರು ಶ್ರೀಪಕ್ಷಧರ ಮಿಶ್ರರೊಡನೆ ಕಂಡು ಆನಂದಿಸಿದ್ದರಂತೆ! ಅವರ ಶಿಷ್ಯರಾದ ನೀವು ಉತ್ತರಭಾರತ ಸಂಚಾರ ಹೊರಟು ಕಾಶಿಗೆ ಬಂದು ಅನೇಕ ಪಂಡಿತರನ್ನು ಜಯಿಸಿ ಕೀರ್ತಿ ಗಳಿಸಿದ್ದನ್ನು ನಾನು ಕಣ್ಣಾರೆ ಕಂಡು ಆನಂದಿಸಿದ್ದೆ. ಆಗ ನಾನಿನ್ನೂ ವಿದ್ಯಾರ್ಥಿಯಾಗಿದ್ದೆ. ಮತ್ತೊಮ್ಮೆ ತಮ್ಮ ದರ್ಶನ ಮಾಡುವ ಹಂಬಲವಿತ್ತು. ಅದಿಂದು ತಮ್ಮ ಶಿಷ್ಯರಾದ ವೇಂಕಟನಾಥಾಚಾರ್ಯರ ಕೀರ್ತಿಯೂ ಕಾಶಿಯವರೆಗೂ ಹರಡಿದೆ. ಅವರ ಭೇಟಿ ಮಾಡಬಯಸಿದ್ದೇನೆ.
ನಾನು ಶ್ರೀಪಕ್ಷಧರ ಮಿಶ್ರರ ಶಿಷ್ಯಪರಂಪರೆಗೆ ಸೇರಿದವನು. ನನ್ನ ಯೋಗ್ಯತಾನುಸಾರ ಕಾಶಿಯಲ್ಲಿ ಪಾಠ-ಪ್ರವಚನಮಾಡಿಕೊಂಡಿದ್ದೇನೆ. ನನ್ನ ಹೆಸರು ಕವಿರಾಜ ಮಿಶ್ರ” ಎಂದು ವಿಜ್ಞಾಪಿಸಿದರು.
ಶ್ರೀಗಳವರಿಗೆ ಪರಮಾನಂದವಾಯಿತು. “ಪಂಡಿತೋತ್ತಮರೇ ಶ್ರೀಪಕ್ಷಧರ ಮಿಶ್ರ ಪೂಜ್ಯ ವ್ಯಾಸರಾಜಗುರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಜಗನ್ಮಾನ್ಯ ಪಂಡಿತರಾದ ಅವರ ಶಿಷ್ಟಪರಂಪರೆಗೆ ಸೇರಿದ ನಿಮ್ಮನ್ನು ಕಂಡು ನಮಗೆ ತುಂಬಾ ಆನಂದವಾಗಿದೆ. ನಿಮ್ಮಂಥ ಪಂಡಿತರಿಂದಲೇ ನಮ್ಮ ಭಾರತೀಯ ವಿದ್ಯೆ, ಸಂಸ ತಿಗಳು ಇನ್ನೂ ಅಚ್ಚಳಿಯದೇ ಉಳಿದುಬಂದಿದೆ ನಿಮಗೆ ಸ್ವಾಗತ” ಎಂದು ಹೇಳಿದರು.
ಕವಿರಾಜ : ತಾವು ನಮ್ಮಂಥ ಪಂಡಿತರನ್ನ ಗೌರವಿಸುವುದು ಸ್ವಾಭಾವಿಕವೇ ಆಗಿದೆ. ಆದರೆ ಸ್ವಾಮಿ, ಷಡರ್ಶನಾಚಾರ್ಯರೂ ವಾದವಿದ್ಯಾಕೋವಿದರೂ ಆದ ತಮ್ಮಂಥ ಜ್ಞಾನಿಗಳಿಂದಲೇ ನಮ್ಮಿ ಭಾರತದಲ್ಲಿ ಸಕಲ ವೈದಿಕವಿದ್ಯೆಗಳು, ಶಾಸ್ತ್ರಗಳು ಸಂಸ 3. ಧರ್ಮ, ಸತ್ಪರಂಪರೆಗಳು ಇನ್ನೂ ಜೀವಂತವಾಗಿ ಉಳಿದು ಬೆಳೆಯುತ್ತಾ ಶೋಭಿಸುತ್ತಿದೆ ! ವಿದ್ಯಾಪಕ್ಷಪಾತಿಗಳು, ಪಂಡಿತ ಪೋಷಕರೆಂಬ ತಮ್ಮ ಬಿರುದ ಸತ್ಯವೆಂಬುದನ್ನಿಂದು ಮನಗಂಡೆ. ಅಂದಹಾಗೆ ವೆಂಕಟನಾಥಾಚಾರ್ಯರನ್ನು ನಾನು ಕಾಣಬಹುದೇ? ಎ೦ದು ಕೇಳಿದರು.
ಅದೇ ಹೊತ್ತಿಗೆ ಸಾಯಂಸಂಧ್ಯೆಗೆ ರಾಮಚಂದ್ರಾಚಾದ್ಯರು ಹಾಗೂ ವಿದ್ಯಾರ್ಥಿಗಳೊಡನೆ ಕಾವೇರಿ ನದಿಗೆ ಹೋಗಿದ್ದ ವೇಂಕಟನಾಥರು ಬಂದು ಶ್ರೀಗಳವರಿಗೆ ನಮಸ್ಕರಿಸಿ ಕುಳಿತರು. ಆಗ ಶ್ರೀಗಳವರು “ಕವಿರಾಜ ಮಿಶ್ರರೇ, ಇವರೇ ನಮ್ಮ ಪ್ರಿಯಶಿಷ್ಯರಾದ ವೇಂಕಟನಾಥಾಚಾರ್ಯರು” ಎಂದು ಹೇಳಿ ಇಬ್ಬರಿಗೂ ಪರಿಚಯ ಮಾಡಿಸಿದರು. ಅಪೂರ್ವ ತೇಜಸ್ಸಿನಿಂದ ಬೆಳಗುತ್ತಿರುವ ಭವ್ಯಾಕಾರದ ವೇಂಕಟನಾಥರನ್ನು ಕಂಡು ಕವಿರಾಜರು ಮೇಲೆದ್ದು ಬಂದು ಆಚಾರ್ಯರ ಕರಪಿಡಿದು “ಆಚಾರ್ಯರೇ ನಿಮ್ಮ ದರ್ಶನದಿಂದ ಸಂತೋಷವಾಯಿತು. ನಿಮ್ಮ ಸಕಲಕಲಾಚಾತುರ್ಯ, ಪಾಂಡಿತ್ಯ, ಪ್ರತಿಭೆಗಳನ್ನು ಕೇಳಿದ್ದೆ ಈಗ ಅದು ಸತ್ಯವೆಂದು ಮನಗಂಡೆ” ಎಂದರು. ಆಚಾರರೂ ಮಿಶ್ರರನ್ನು ಗೌರವಿಸಿದರು.
ಆಗ ಶ್ರೀಸುಧೀಂದ್ರರು ನಗುತ್ತಾ “ಕವಿರಾಜ ಮಿಶ್ರರೇ, ನಮ್ಮ ವೇಂಕಟನಾಥರ ಕೀರ್ತಿಯು ಸತ್ಯವೆಂದು ಕೇವಲ ದರ್ಶನದಿಂದಲೇ ಹೇಗೆ ತಿಳಿದಿರಿ ? ವಿಷಯವಿಚಾರ ಮಾಡಿದ ಮೇಲಲ್ಲವೇ ಅದರ ಪರಿಚಯವಾಗುವುದು ?” ಎಂದರು. ಮಿಶ್ರರೂ ಮಂದಹಾಸಬೀರಿ "ಗುರುಗಳ ಆಂತರ್ಯ ಅರಿವಾಯಿತು. ತಮ್ಮನ್ನು ಗುರುಸ್ಥಾನದಲ್ಲಿ ಪೂಜಿಸುತ್ತಿದ್ದೇನೆ. ನನ್ನ ಪಾಂಡಿತ್ಯ ಪ್ರದರ್ಶನಕ್ಕಾಗಿ ಬಂದಿಲ್ಲ. ಗುರುಸನ್ನಿಧಿಯಲ್ಲಿ ಅದು ಯುಕ್ತವಲ್ಲ ! ಅಂತೆಯೇ ಗುರುಗಳ ಶಿಷ್ಯರೊಡನೆ ಸ್ಪರ್ಧಿಸುವುದೂ ಸರಿಯಲ್ಲವೆಂದು ನಾನು ಭಾವಿಸಿದ್ದೇನೆ” ಎಂದರು. ಶ್ರೀಸುಧೀಂದ್ರರು ಆವರ ವಿನಯಾದಿಗಳಿಂದ ಸಂತುಷ್ಟರಾಗಿ, “ಪಂಡಿತರಿಬ್ಬರು ಸೇರಿರುವಾಗ ಸ್ನೇಹ, ಸೌಹಾರ್ದದಿಂದ ವಿನೋದಾರ್ಥವಾಗಿ ಯಾವುದಾದರೊಂದು ವಿಷಯದಲ್ಲಿ ವಿಚಾರ ವಿನಿಮಯ ಮಾಡುವುದು ತಪ್ಪಲ್ಲವಷ್ಟೆ ?” ಎಂದರು. ಮಿಶ್ರರೂ ನಗುತ್ತಾ “ಅಪ್ಪಣೆ ಶಿರೋಧಾರ್ಯ, ಆಚಾರ್ಯರೇ, ಯಾವ ಶಾಸ್ತ್ರದಲ್ಲಿ ವಿಚಾರ ಮಾಡುವುದು ?” ಎಂದು ಕೇಳಿದರು. ವೆಂಕಟನಾಥರು “ನಿಮಗೆ ಇಷ್ಟವಾದ ಯಾವ ಶಾಸ್ತ್ರದಲ್ಲಿ ಬೇಕಾದರೂ ಆಗಬಹುದು” ಎಂದರು. ಪ್ರಖ್ಯಾತ ಪಂಡಿತರಿಬ್ಬರು ವಾಕ್ಯಾರ್ಥ ಮಾಡುವುದನ್ನಾಲಿಸಲು, ಪಂಡಿತರು, ವಿದ್ಯಾರ್ಥಿಗಳು ಉತ್ಸಾಹದಿಂದ ಕುಳಿತರು.
ಕವಿರಾಜ ಮಿಶ್ರರು ನ್ಯಾಯಶಾಸ್ತ್ರದಲ್ಲಿ ಪ್ರಖ್ಯಾತವಾದ “ಸಾಮಾನ್ಯನಿರುಕ್ತಿ ಹೀಗೆ ಹೇಳಿದರು –
ಕವಿ : ಆಯಿ, ವಿಬುಧವರಾಃ ತೃತೀಯನಚೋಪರಿ ಕೋಟಿಮಾಟೀಕಿತು ಮುತ್ಸಹತೇಸ್ಮಚೇತಃ.
ವೇರಿ : ಭವತುನಾಮ.
ಕವಿ : ಸ್ವಾವಚ್ಛಿನ್ನ ವಿಷಯಕತ್ವಾವಚ್ಛಿನ್ನ ಪ್ರತಿಬಂಧಕತಾ ಸಾಮಾನ್ಯಾವಚ್ಛೇದಕೀಭೂತ ಯತ್ನಿಂಚಿದ್ದಿಷಯಿತಂ ಯಾದೃಶ ಯಾದೃಶ ಧರ್ಮಾವಚಿನ್ನಾ ನಿರೂಪಿತಂ. ತಾದೃಶತಾದೃಶ ಧರ್ಮಾವಚ್ಛಿನ್ನಾವಿಷಯಕ ಪ್ರತೀತಿವಿಷಯತಾವಚ್ಛೇದಕ ಧರ್ಮಾವಚ್ಛಿನ್ನತ್ವಮಿತಿ ಬಾಧೋಪರಿ ಬಾಧವಿಶಿಷ್ಟವ್ಯಭಿಚಾರೇತಿವ್ಯಾಪ್ತಿ !
ವೇಂ : ಬಾಧವಿಶಿಷ್ಟವ್ಯಭಿಚಾರೇ ಅತಿವ್ಯಾಪ್ತಿರ್ನ ಸಂಗಚ್ಛತೇ !
ಕವಿ : (ಸಾಶ್ಚರ್ಯ೦) ಕಥಂ ಭೋ ?
ವೇಂ : (ಸಸ್ಮಿತಂ) ಸತ್ಯಂ, ನ ಸಂಗಚ್ಛತೇ.
ಕವಿ : ಪ್ರತಿಪಾದ್ಯತಾಂ ತರ್ಹಿ !
ವೇಂ : (ಸಸಂತೋಷಂ)-ಸ್ವಾವಚ್ಛಿನ್ನ ವಿಷಯಕತ್ವಾವಚ್ಛಿನ್ನ ಪ್ರತಿಬಂಧಕತಾ ಸಾಮಾನ್ಯಾವಚ್ಛೇದಕೀಭೂತಾಯಾಂ ವ್ಯಭಿಚಾರವಿಶಿಷ್ಟ ಬಾಧಾವಚ್ಛಿನ್ನ ನಿರೂಪಿತಾಯಾಂ ವಿಷಯಿತಾಯಾಂ ವಿಷಯಿತಾಯಾಂ ಬಾಧವಿಶಿಷ್ಟವ್ಯಭಿಚಾರಿತ್ವಾ ವಚ್ಛಿನ್ನಾ ನಿರೂಪಿತತ್ವ ಸತ್ವನ, ತದವಚ್ಛಿನ್ನಾವಿಷಯಕ ಪ್ರತೀತಿವಿಷಯತಾವಚ್ಛೇದಕತ್ವಸ್ಯ ಬಾಧವಿಶಿಷ್ಟ ವ್ಯಭಿಚಾರಷ್ಟೇ ಅಸತೇನ ನಾತಿವ್ಯಾಪ್ರೇರಿತಿ ಪೂರ್ವಪಕ್ಷಃ !
ಕವಿ : (ಸಶಿರಃಕಂಪಂ) ಸಾಧು ! ಆಚಾರ್ಯ, ತಥಾ ಪಿ ತತ್ರ ಅತಿವ್ಯಾಪ್ತಿ ಸಂಭವತಿ !
ವೇಂ : ಕಥಂ ? ಅನುವಾದಯಂತು ಭವಂತಃ
ಕವಿ : ಸನ್ನತಿಪಕ್ಷೇ ಅತಿವ್ಯಾಪ್ತಿನಿವಾರಣಾಯ ವಿಷಯಿತಾಯಾಮವ್ಯಾಪಕ ವಿಷಯತಾಶೂನ್ಯಜ್ಞಾನೀಯವ ನಿವೇಶನೀಯತಯಾ ತತ್ರ ಅತಿವ್ಯಾಪ್ತಿಃ ಸಂಭವವ !
ಕವಿರಾಜಮಿಶ್ರರು ಬಾಧವಿಶಿಷ್ಟ ವ್ಯಭಿಚಾರದಲ್ಲಿ ಅತಿವ್ಯಾಪ್ತಿ ಬರುತ್ತದೆ ಎಂದು ಹೇಳಿ ತಮ್ಮ ವಾದವನ್ನು ಬಲಪಡಿಸಿದರು. ವೇಂಕಟನಾಥರು ಅತಿವ್ಯಾಪ್ತಿಯು ಬರುವುದಿಲ್ಲವೆಂದು ತಮ್ಮ ವಾದವನ್ನು ಅನೇಕ ರೀತಿಯಿಂದ ಸಮರ್ಥಿಸಿದರು. ಇಬ್ಬರೂ ತರ್ಕಶಾಸ್ತ್ರದಲ್ಲಿ ಅಸಾಧಾರಣ ಪಂಡಿತರು. ತಮ್ಮ ತಮ್ಮ ವಾದಗಳನ್ನು ಅನೇಕ ಬಗೆಯಾಗಿ ಚಾತುರ್ಯದಿಂದ ಸಮರ್ಥಿಸಲಾರಂಭಿಸಿದ್ದರಿಂದ ಸುಮಾರು ಒಂದು ಘಂಟೆಯವರೆವಿಗೂ ವ್ಯಾಕ್ಯಾರ್ಥ ನಡೆದರೂ ಯಾವ ಪಕ್ಷ ಸರಿಯೆಂದು ತೀರ್ಮಾನವಾಗಲಿಲ್ಲ. ಅಭೂತಪೂರ್ವವಾದ ಆ ನ್ಯಾಯಶಾಸ್ತ್ರದಲ್ಲಿನ ವಾಕ್ಯಾರ್ಥವನ್ನಾಲಿಸುತ್ತಾ ಪಂಡಿತರು ಆನಂದಭರಿತರಾಗಿ ಹರ್ಷೋದ್ಗಾರ ಮಾಡುತ್ತಾ ವಾಕ್ಯಾರ್ಥವು ಹೇಗೆ ಕೊನೆಗಾಣುವುದೋ ಎಂಬ ಕುತೂಹಲದಿಂದ ಮಂತ್ರಮುಗ್ಧರಾದವರಂತೆ ಕುಳಿತಿದ್ದಾರೆ. ಶ್ರೀಸುಧೀಂದ್ರತೀರ್ಥರಂತೂ ಪ್ರತಿಭಾಶಾಲಿಗಳಾದ ಉಭಯ ಪಂಡಿತರ ವಾದವನ್ನಾಲಿಸಿ ಪರಮಾನಂದ ಪಡುತ್ತಿದ್ದಾರೆ.
ಆಗ ವೇಂಕಟನಾಥರು ವಾದವನ್ನು ಹೆಚ್ಚು ಮುಂದುವರಿಸಲಿಚ್ಚಿಸದೆ ಶ್ರೀಪಾದಂಗಳವರಿಗೆ ಕಣ್ಣಿನಿಂದಲೇ ನಮಸ್ಕರಿಸಿ ಸಾಮಾನ್ಯನಿರುಕ್ತಿ ಗ್ರಂಥದ ಮೇಲಿನ ಒಂದು ಅಪೂರ್ವ ಕ್ರೋಢಪತ್ರವನ್ನಾಧರಿ ತಮ್ಮ ವಾದವನ್ನು ಹೀಗೆ ಪ್ರಾರಂಭಿಸಿದರು.
ವೇಂ : ಅಸ್ಯ ಲಕ್ಷಣಸ್ಯ ಧರ್ಮವಿಶಿಷ್ಟಧರ್ಮವು ಮಿತ್ಯುನುಗಮಾನುಸಾರೇಣ ಅದೋಷಾತ್ | ವೈಶಿಷ್ಟ್ಯ ಚ, ತಾದಾತ್ಮ, ಸ್ವವಿಶಿಷ್ಟಪ್ರತೀತಿ ವಿಷಯತಾವಚ್ಛೇದಕತ್ತೋಭಯ ಸಂಬಂಧೇನ | ಪ್ರತೀತ್, ಸ್ವವೈಶಿಷ್ಟಂ ಚ, ಸ್ವವಿಶಿಷ್ಟ ಧರ್ಮಾವಚನ್ನ ವಿಷಯತಾಕತ್ವ ಸಂಬಂಧಾವಚ್ಛಿನ್ನ ಸ್ವನಿಷ್ಟಾವಚ್ಛೇದಕತಾಕ ಪ್ರತಿಯೋಗಿತಾಕ ಭೇದವತ್ವ ಸಂಬಂಧೇನ | ಧಮೇ ಸ್ವವೈಶಿಷ್ಟಂ ಚ, ಸಮಾನಾಧಿಕರಣ ಭೇದಪ್ರತಿಯೋಗಿತಾವಚ್ಛೇದಕತ್ವ ಸಂಬಂಧಾವಚ್ಛಿನ್ನ ಸ್ವನಿಷ್ಠಾವಚ್ಛೇದಕತಾಕ ಪ್ರತಿಯೋಗಿತಾಕಭೇದವತ್ತ ಸಂಬಂಧೇನ ಸ್ವಾಧಿಕರಣತ್ತಂ ಚ, ಸ್ವವಿಶಿಷ್ಟ ಪ್ರಕೃತಾನುಮಿತಿ ಪ್ರತಿಬಂಧಕತ್ವ ಸಂಬಂಧೇನ | ಭೇದಪ್ರತಿಯೋಗಿತಾವಚ್ಛೇದಕತ್ವಂ ಚ, ಆಧೇಯತಾ ಸಂಬಂಧೇನ | ಆಧೇಯತಾ ಚ, ಸ್ವವಿಷ್ಟ ವಿಷಯಿತಾವೃತ್ತಿತ್ತ ಸಂಬಂಧೇನ | ವಿಷಯಿತಾ ವೃತ್ತಿತ್ತಂ ಚ, ಸ್ವಾವಿಚ್ಛಿನ್ನ ನಿರೂಪಕತಾಕತ್ತ ಸಂಬಂಧಾವಚ್ಛಿನ್ನ ನಿಷ್ಟಾವಚ್ಛೇದಕತಾಕ ಪ್ರತಿಯೋಗಿತಾಕಭೇದವ ಸಂಬಂಧೇನ | ವಿಷಯಿತಾಯಾಂ ಸ್ವವೈಶಿಷ್ಟ೦ ಚ, ಸ್ವವಿಶಿಷ್ಟಧರ್ಮಾವಚ್ಛಿನ್ನ ನಿರೂಪಿತತ್ವ ಸಂಬಂಧೇನ | ಧರ್ಮ ವೈಶಿಷ್ಟ೦ ಚ, ಆಧೇಯತಾ ಸಂಬಂಧೇನ | ಆಧೇಯತಾ ಚ, ಸ್ವಸಮಾನಾಧಿಕರಣ ಭೇದಪ್ರತಿಯೋಗಿತಾವಚ್ಛೇದಕತ್ವ ಸಂಬಂಧಾವಚ್ಛಿನ್ನ ಸನಿಷ್ಠಾವಚ್ಛೇದಕತಾಕ ಪ್ರತಿಯೋಗಿತಾಕ ಭೇದವತ್ವ ಸಂಬಂಧೇನ | ಸ್ವಾಧಿಕರಣತ್ವ ಚ, ಸ್ವಾವಚ್ಛಿನ್ನ ವಿಷಯತಾಶಾಲ್ಯನಾಹಾರ್ಯಪ್ರಾಮಾಣ್ಯಜ್ಞಾನಾನಾಸ್ಕ೦ದಿತ ನಿಶ್ಚಯ ಸಂಬಂಧೇನ 1 ಭೇದ ಪರತಿಯೋಗಿತಾವಚ್ಛೇದಕತ್ವ ಸಂಬಂಧಾವಚ್ಛಿನ್ನ ಸ್ವನಿಷ್ಟಾವಚ್ಛೇದಕತಾಕ ಪ್ರತಿಯೋಗಿತಾಕ ಭೇದವತ್ವ ಸಂಬಂಧೇನ | ಸ್ವಾಧಿಕರಣತ್ವಂ ಚ, ಸ್ವಾವಚ್ಛಿನ್ನ ವಿಷಯತಾಶಾಲ್ಯನಾಹಾರ್ಯ ಪ್ರಾಮಾಣ್ಯಜ್ಞಾನಾನಾಸ್ಕಂದಿತ ನಿಶ್ಚಯ ಸಂಬಂಧನ | ಭೇದ ಪ್ರತಿಯೋಗಿತಾವಚ್ಛೇದಕತಾ ಚ, ಸ್ವರೂಪಸಂಬಂಧನ | ಇತ್ತಂ ಚ ಬಾಧವಿಶಿಷ್ಟ ವ್ಯಭಿಚಾರೇ ಅತಿವ್ಯಾಪ್ತಿರ್ನಸಂಭವವೇತಿ ಪೂರ್ವಪಕ್ಷಃ ದುರ್ಧರ ಏವ !!
ಆಚಾರ್ಯರ ಅದ್ಭುತ ಅನುವಾದವನ್ನಾರಸಿ ಸರ್ವರೂ ಸಾಧು, ಸಾಧು” ಎಂದು ಪ್ರಶಂಶಿಸಿದರು.
ಕವಿ : ಅಹೋ, ಅಶ್ರುತಪೂರ್ವೋಯಮನುಗಮಃ ! ಅಸ್ಮತ್ತೂಜ್ಯ ಆಚಾರ್ಯಾನ್ ಪಕ್ಷಧರಮಿಶ್ರಾನ್ 353 ಸ್ಮಾರಯತಿ ಸಾಮೇ ವೇಂಕಟನಾಥಾಚಾರ್ಯಾಃ !
ಕವಿರಾಜಮಿಶ್ರರು ವಿಸ್ಮಯದಿಂದ ಆಚಾರ್ಯರ ಪ್ರತಿಭೆಯನ್ನು ಹೊಗಳಿದಾಗ ಸಮಸ್ತ ಸಭಾಸದರೂ ಅತ್ಯಪೂರ್ವರೀತಿಯಿಂದ ಅನುವಾದಮಾಡಿ, ತಾವು ಹೇಳಿದ ಪಾರ್ವಪಕ್ಷವನ್ನೇ ಸಾಧಿಸಿದ ವೆಂಕಟನಾಥರ ನ್ಯಾಯಶಾಸ್ತ್ರಪ್ರಾವೀಣ್ಯತೆ, ಪ್ರತಿಭೆಗಳನ್ನು ಕಂಡು ಆನಂದಾಂಬುಧಿಯಲ್ಲಿ ಮುಳುಗೇಳಹತ್ತಿದರು.
ಕವಿರಾಜಮಿಶ್ರರು ಆಚಾರರ ಪ್ರೇಮಭರದಿಂದ ಆಲಿಂಗಿಸಿ, “ಆಚಾರರೇ ನಿಮ್ಮ ಪಾಂಡಿತ್ಯ, ಪ್ರತಿಭೆಗಳನ್ನು ಕಂಡು ಆನಂದಪರವಶನಾಗಿದ್ದೇನೆ. ನಿಮ್ಮ ಕೀರ್ತಿಯು ಸತ್ಯವೆಂಬುದೀಗ ನನಗೆ ಅನುಭವಕ್ಕೆ ತಂದುಕೊಟ್ಟಿದ್ದೀರಿ. ಆನಂದ ! ಪರಮಾನಂದ !” ಎಂದು ಮುಕ್ತಕಂಠದಿಂದ ಹೊಗಳಿದರು. ಆನಂತರ ಶ್ರೀಯವರಿಗೆ ನಮಿಸಿ “ಸ್ವಾಮಿ, ವೆಂಕಟನಾಥಚಾರ್ಯರಂತಹ ಅಪೂರ್ವ ಪ್ರತಿಭಾಶಾಲಿಗಳಾದ ವಿದ್ವಾಂಸರು ಕಾಶಿಯಲ್ಲಿ ಇದಿದ್ದರೆ, ಅಲ್ಲಿನ ವಿದ್ವಜ್ಜನರು ಇವರನ್ನು ಆನೆಯಮೇಲೆ ಮೆರೆಸಿ “ರಾಭಿಷೇಕ” ಮಾಡಿ ಗೌರವಿಸುತ್ತಿದರು !” ಎಂದು ವಿಜ್ಞಾಪಿಸಿದರು. ಮಿಶ್ರರ ಶ್ಲಾಘನೆಯಿಂದ ನಾಚಿದ ಆಚಾರರು ಶ್ರೀಯವರಿಗೆ ನಮಸ್ಕರಿಸಿ “ನಾನಿನ್ನೂ ವಿದ್ಯಾರ್ಥಿ, ಗುರುಗಳ ಶಿಷ್ಯಕೋಟಿಯಲ್ಲಿ ನಾನೊಬ್ಬ ಸಾಮಾನ್ಯ” ಎಂದರು. ಶ್ರೀಸುಧೀಂದ್ರರು ಆಚಾರ್ಯರನ್ನು ಆಶೀರ್ವದಿಸಿದರು.
ಆಗ ಆಚಾರರು “ಸ್ವಾಮಿ, ಮಿಶ್ರರೇ, ನನ್ನ ಗುರುಗಳ ಈವೊಂದು ಅನುಗ್ರಹ ಆಶೀರ್ವಾದದ ಮುಂದೆ ಆನೆಯ ಮೇಲೆ ಮೇಲೆ ಮೆರವಣಿಗೆ, ರಾಭಿಷೇಕಗಳು ಅತ್ಯಲ್ಪ !” ಎಂದು ಹೇಳಿದರು. ಆಗ ಗುರುಗಳು “ಮಿಶ್ರರೇ, ನೀವು ಮಹಾಪಂಡಿತರಾಗಿರುವಂತೆ ಉದಾರ ಹೃದಯರೂ, ಗುಣಗ್ರಾಹಿಗಳೂ ಆಗಿದ್ದೀರಿ. ನಿಮಗೆ ಭಗವಂತನು ಸನ್ಮಂಗಳಗಳವನ್ನು ಕರುಣಿಸಲಿ” ಎಂದು ಆಶೀರ್ವದಿಸಿ ಶಾಲುಜೋಡಿ, ರಜತ ತಂಬಿಗೆ ಪಂಚಪಾತ್ರೆ, ಸುವರ್ಣ ವರಹಗಳನ್ನಿತ್ತು ಸಂಭಾವಿಸಿದರು. ಮಿಶ್ರರ ಶಿಷ್ಯರಿಗೂ ಸರಿಯಾದ ರೀತಿಯಲ್ಲಿ ಸಂಭಾವನೆ ನೀಡಿ ಸಂತೋಷಪಡಿಸಿದರು. ವೇಂಕಟನಾಥರಿಗೂ ಶಾಲುಹೊದಿಸಿ ಗೌರವಿಸಿದರು. ತರುವಾಯ ಮಿಶ್ರರು ಗುರುಗಳ ಅಪ್ಪಣೆ ಪಡೆದು ತೆರಳಿದರು.
ಶ್ರೀಸುಧೀಂದ್ರ ಗುರುಗಳು ಒಂದು ತಿಂಗಳ ಕಾಲ ಹೀಗೆ ಶ್ರೀರಂಗದಲ್ಲಿ ಒಂದು ಜ್ಞಾನಸತ್ರವನ್ನೇ ನೆರವೇರಿಸಿ, ತತ್ವ-ಧರ್ಮೋಪದೇಶಗಳಿಂದ ಜನರನ್ನು ಅನುಗ್ರಹಿಸಿ ಸಂಚಾರಹೊರಟು ಅಲ್ಲಲ್ಲಿನ ಜನತೆಯನ್ನು ಉದ್ಧರಿಸುತ್ತಾರಾಮಚಂದ್ರ ಪುರಾಗ್ರಹಾರಕ್ಕೆ ದಯಮಾಡಿಸಿದರು.