|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೫೨. ರಘುನಾಥಭೂಪಾಲ

ತಂಜಾಪುರಾಧೀಶನಾಗಿದ್ದ ಚವ್ವಪ್ಪನಾಯಕನ ಪೌತ್ರನಾದ ರಘುನಾಥ ಭೂಪಾಲನು ೧೫೯೪ ರ ಹಾಗೆ ಪಟ್ಟಕ್ಕೆ ಬಂದನು. ರಘುನಾಥನು ಬಾಲ್ಯದಿಂದಲೂ ಶ್ರೀಸುಧೀಂದ್ರಗುರುಗಳಲ್ಲಿ ಕಾವ್ಯ-ನಾಟಕಾಲಂಕಾರಾದಿ ಸಾಹಿತ್ಯ, ನ್ಯಾಯಶಾಸ್ತ್ರಗಳನ್ನು ಅಧ್ಯಯನಮಾಡಿ ಶ್ರೇಷ್ಠ ಸಾಹಿತಿಯೆನಿಸಿದ್ದನು. ಮತ್ತು ವೀಣಾ ತಿಮ್ಮಣ್ಣಾಚಾರರು, ಹಾಗೂ ಇತರ ವಿದ್ವಾಂಸರಿಂದ ಸಂಗೀತ-ವೀಣಾವಾದನ ಕಲೆಯನ್ನು ಅಭ್ಯಾಸಮಾಡಿ ಸಂಗೀತ ಸಾಹಿತ್ಯ ಪ್ರವೀಣನೆನಿಸಿದ್ದನು. ಶ್ರೀವಿಜಯೀಂದ್ರರು ಶ್ರೀಸುಧೀಂದ್ರರುಗಳಲ್ಲಿ ಅಪಾರಭಕ್ತಿಗೌರವಗಳಿಟ್ಟು ಅವರ ಉಪದೇಶ, ಸಲಹೆಗಳಂತೆ ನಡೆದು ಪ್ರಜಾರಂಜಕ ರಾಜನೆನಿಸಿ ಖ್ಯಾತಿಗಳಿಸಿದ್ದನು. ಕನ್ನಡ ಸಾಮ್ರಾಜ್ಯಕ್ಕೆ ವಿಧೇಯತೆಯಿಂದ ನಡೆದುಕೊಳ್ಳುತ್ತಿದ್ದ ರಘುನಾಥನು ವೆಂಕಟಪತಿ ಮಹಾರಾಜರ ನಂತರ ಪಟ್ಟಕ್ಕಾಗಿ ಜರುಗಿದ ಕದನದಲ್ಲಿ ಲಕ್ಷ್ಮಣನಾಯಕ (ಎಚ್ಚಮನಾಯಕ) ನಿಗೆ ಸಹಾಯಕನಾಗಿದ್ದು ನಿಜವಾದ ಹಕ್ಕುದಾರನಾದ ಇಮ್ಮಡಿ ಶ್ರೀರಂಗರಾಜನನ್ನು ತನ್ನ ರಾಜಧಾನಿಯಲ್ಲಿಟ್ಟುಕೊಂಡು ಕಾಪಾಡಿ ಜಗ್ಗರಾಯನೊಡನೆ ನಡೆದ ಹೋರಾಟದಲ್ಲಿ ಎಚ್ಚಮನಾಯಕನಿಗೆ ಬೆಂಬಲಿಗನಾಗಿ ಕಾದಾಡಿ ವಿಜಯಗಳಿಸಿ ಇಮ್ಮಡಿ ಶ್ರೀರಂಗರಾಜನನ್ನು ಕನ್ನಡಸಾಮ್ರಾಜ್ಯಾಧಿಪತಿ- ಯನ್ನಾಗಿಮಾಡಿ ಸರ್ವರ ಗೌರವಕ್ಕೆ ಪಾತ್ರನಾದನು. 

ಇದರಂತೆ ಅಸಹಾಯಶೂರನಾದ ರಘುನಾಥಭೂಪಾಲನು ಪೋರ್ಚುಗೀಸರನ್ನು ಯುದ್ಧದಲ್ಲಿ ಸೋಲಿಸಿ, ಅವರು ಮತ್ತೆ ತಲೆಯೆತ್ತದಂತೆ ಮಾಡಿ “ಜಾಫ್ಲಾ” ದ್ವೀಪವನ್ನು ನೇಪಾಳದ ದೊರೆಗೆ ಬಿಡಿಸಿಕೊಟ್ಟು ಅವನನ್ನು ತನ್ನ ಅಧೀನರಾಜನನ್ನಾಗಿ ಮಾಡಿಕೊಂಡು “ವಿಜಯವಿಕ್ರಾಂತ” ಎಂಬ ಬಿರುದಿನಿಂದ ಶೋಭಿಸಿದನು.

ರಘುನಾಥಭೂಪಾಲನು ಸಂಸ ತ, ಕನ್ನಡ, ತೆಲುಗು, ತಮಿಳು, ಭಾಷೆಗಳಲ್ಲಿ ಪ್ರವೀಣನಾಗಿ, ಉತ್ತಮ ಕವಿಯಾಗಿ, ನ್ಯಾಯ-ವ್ಯಾಕರಣಗಳಲ್ಲಿನುರಿತವನಾಗಿ ಪಂಡಿತರು, ಕವಿಗಳು, ಸಾಹಿತಿಗಳು, ಸಂಗೀತಗಾರರು, ಇನ್ನಿತರ ಕಲೆಗಾರರಿಗೆ ಆಶ್ರಯವಿತ್ತು ವಿದ್ಯಾಪಕ್ಷಾಪಾತಿಯೆನಿಸಿದ್ದನು. ಬಾಲ್ಯದಲ್ಲಿಯೇ ಒಂದು ವಿದ್ವತ್ಸಭೆಯಲ್ಲಿ ಪಾರಿಜಾತಹರಣ” ಎಂಬ ಪುಟ್ಟಕಾವ್ಯವನ್ನು ರಚಿಸಿ ಶ್ರೀಸುಧೀಂದ್ರ ಗುರುಗಳ, ಇತರ ಪಂಡಿತರ ಪ್ರಶಂಸೆಗೆ ಪಾತ್ರನಾದನು. ಅವನು ಸಂಸ ತ-ಆಂಧ್ರ, ಕನ್ನಡಭಾಷೆಗಳಲ್ಲಿ ಅನೇಕ ಪ್ರಭಂಧಗಳನ್ನು ರಚಿಸಿ ಪ್ರಖ್ಯಾತನಾದನು.348 ಇದರಿಂದ ಗುರುಗಳಿಗೆ ತಕ್ಕ ಶಿಷ್ಯನೆಂಬ ಕೀರ್ತಿ ದಕ್ಷಿಣಭಾರತದಲೆಲ್ಲಾ ಹರಡಿತು. 

ರಘುನಾಥನಾಯಕನು ರಚಿಸಿದ ಆಂಧ್ರರಾಮಾಯಣವು ವಿಬುಧಪ್ರಪಂಚದಲ್ಲಿ ಹೆಸರಾಗಿದೆ. ಅದರ ಸ್ವಾರಸ್ಯವನ್ನು ಕಂಡು ಮಧುರವಾಣಿ ಎಂಬ ಕವಿಯತ್ರಿಯು ಅದನ್ನು ಸಂಸ ತಕ್ಕೆ ಭಾಷಾಂತರ ಮಾಡಿದಳು ! ನಾಯಕನ ಸದ್ಗುಣಗಳಿಂದ ಪ್ರಭಾವಿತಳಾದ ರಾಮಭದ್ರಾಂಬೆ ಎಂಬ ಸಂಸ್ಕೃತ ಕವಿಯಿತ್ರಿಯು "ರಘುನಾಥಾಭ್ಯುದಯ'ವೆಂಬ ಗ್ರಂಥವನ್ನು ರಚಿಸಿ ವಿದ್ವಾಂಸರ ಗೌರವಕ್ಕೆ ಪಾತ್ರಳಾದಳು. ಈ ಇಬ್ಬರು ಕವಿಯಿತ್ರಿಯರೂ ರಾಜನ ಆಸ್ಥಾನದಲ್ಲಿ ಶೋಭಿಸಿದ್ದರು.  

ದರ್ಬಾರಿನ ಶ್ರೇಷ್ಠಪಂಡಿತರೂ ಕವಿಗಳೂ ಆದ ಕೃಷ್ಣಾದ್ದರೀ (ಕೃಷ್ಣಯಜ್ಜ ಕವಿಗಳು ಎಂಬುವರು ರಘುನಾಥನನ್ನು ನಾಯಕನನ್ನಾಗಿ ವರ್ಣಿಸಿ ರಘುನಾಥ ಭೂಪಾಲೀಯಮ್” ಎಂಬ ಅಸದೃಶ ಅಲಂಕಾರ ಗ್ರಂಥವನ್ನು ರಚಿಸಿದರು. ಮುಂದೆ ಅನೇಕ ಪಂಡಿತರ, ರಘುನಾಥಭೂಪಾಲನ ಪ್ರಾರ್ಥನೆಯಂತೆ 34 ಶ್ರೀವಿಜಯೀಂದ್ರಗುರುಗಳ ಆಜ್ಞೆಯಂತೆ ಶ್ರೀಸುಧೀಂದ್ರತೀರ್ಥರು “ರಘುನಾಥಭೂಪಾಲೀಯ” ಕ್ಕೆ ಅನಿತರಸಾಧಾರಣವಾದ, ಹೆಸರಿಗೆ ತಕ್ಕಂತೆ ವಿಸ್ತಾರವಾದ ಸಾಹಿತ್ಯ ಸಾಮ್ರಾಜ್ಯಮ್” ಎಂಬ ಪ್ರೌಢವ್ಯಾಖ್ಯಾನವನ್ನು ರಚಿಸಿ, ರಘುನಾಥಭೂಪಾಲೀಯ ಗ್ರಂಥವು ಸಾರಸ್ವತ ಪ್ರಪಂಚದಲ್ಲಿ ಕೀರ್ತಿಗಳಿಸುವಂತೆ ಮಾಡಿ ಅನುಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ರಘುನಾಥಭೂಪಾಲನು “ಸಂಗೀತಸುಧಾ” ಎಂಬ ಸಂಗೀತಶಾಸ್ತ್ರ ಗ್ರಂಥವನ್ನು ರಚಿಸಿದ್ದಾನೆ. “ಜಯಂತಸೇನ ಮುಂತಾದ ಹೊಸರಾಗಗಳನ್ನೂ, “ರಾಮಾನಂದ” ಮುಂತಾದ ನೂತನ ತಾಳಗಳನ್ನೂ ಕಂಡುಹಿಡಿದಿರುವುದಲ್ಲದೆ, ತನ್ನ ಹೆಸರಿನ ಒಂದು ಮೇಳ (ತಂತ್ರೀವಾದ) ವನ್ನು ಕಂಡುಹಿಡಿದು ಎಲ್ಲ ಪ್ರಸಿದ್ಧರಾಗಗಳನ್ನೂ ಆ ವಾದ್ಯದಲ್ಲಿ ನುಡಿಸಲು ಅನುಕೂಲಪಡಿಸಿಕೊಟ್ಟು, ಕರ್ನಾಟಕ ಸಂಗೀತಕ್ಕೆ ಅಪೂಾರ್ವಕೊಡುಗೆಗಳನ್ನರ್ಪಿಸಿದ್ದಾನೆ. ತನ್ನ ಈ ಎಲ್ಲ ಅಭ್ಯುದಯ-ಕೀರ್ತಿಗಳಿಗೆ ಗುರುಗಳಾದ ಶ್ರೀವಿಜಯೀಂದ್ರ- ಶ್ರೀಸುಧೀಂದ್ರಗುರುಗಳ ಅನುಗ್ರಹವೇ ಕಾರಣವೆಂದು ನಂಬಿ ಅವರನ್ನು 'ರಾಜಗುರು'ಗಳನ್ನಾಗಿ ಮಾಡಿಕೊಂಡು ಅವರ ಉಪದೇಶದಂತೆ ರಾಜ್ಯಭಾರ ಮಾಡುತ್ತಾ ದಕ್ಷಿಣಭಾರತದಲ್ಲಿ ಅತ್ಯಂತ ಸಮರ್ಥನಾದ ರಾಜನೆಂದು ಕೀರ್ತಿಗಳಿಸಿದನು.