|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೫೧. ಮಹಾಭಾಷ್ಯಾಚಾರ್ಯರು !

ಶ್ರೀಸುಧೀಂದ್ರತೀರ್ಥರು ಬಹುವರ್ಷಗಳಿಂದ ಸ್ಥಗಿತವಾಗಿದ್ದ ಮಹಾಸಂಸ್ಥಾನ ಪರಂಪರಾಪ್ರಾಪ್ತ ದಿಗ್ವಿಜಯಯಾತ್ರೆಯನ್ನು ಕೈಗೊಳ್ಳಲು ಆಶಿಸಿ ಆ ವಿಚಾರವನ್ನು ರಘುನಾಥಭೂಪಾಲನಿಗೆ ನಿರೂಪದ್ವಾರಾ ತಿಳಿಸಿದರು. ರಘುನಾಥಭೂಪಾಲನು ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಾಧಿಕಾರಿಗಳಿಗೂ 'ರಾಜಗುರು' ಶ್ರೀಸುಧೀಂದ್ರತೀರ್ಥರಿಗೆ ಸಮಸ್ತ ಸೌಕಯ್ಯಗಳನ್ನೇರ್ಪಡಿಸಿಕೊಟ್ಟು ಗೌರವಿಸಬೇಕೆಂದು ನಿರೂಪಹೊರಡಿಸಿದನು. 

ಶ್ರೀಪಾದಂಗಳವರು ಮಹಾಸಂಸ್ಥಾನದ ಸಕಲ ಪಂಡಿತ ಮಂಡಲಿ, ವಿದ್ಯಾರ್ಥಿಗಳು, ಆಡಳಿತಾಧಿಕಾರಿಗಳು, ಪರಿಜನರು ಹೀಗೆ ನೂರಾರು ಜನರೊಡನೆ “ದಿಗ್ವಿಜಯ ಯಾತ್ರೆಕೈಗೊಂಡು ಕುಂಭಕೋಣದಿಂದ ಹೊರಟರು. ಹೋದಹೋದಲ್ಲಿ ರಾಜಕೀಯ ಅಧಿಕಾರಿಗಳು ಅವರನ್ನು ಗೌರವದಿಂದ ಸ್ವಾಗತಿಸಿ ಸಕಲ ಸೌಕಯ್ಯಗಳನ್ನೇರ್ಪಡಿಸಿ ಕೊಡುತ್ತಿದ್ದರು. ಸಹಸ್ರಾರು ಜನ ಶಿಷ್ಯ-ಭಕ್ತ-ಧಾರ್ಮಿಕ ಜನರು ಶ್ರೀಯವರ ದರ್ಶನಮಾಡಿ, ಪಾಠಪ್ರವಚನ-ದೇವಪೂಜಾ, ವಿದ್ವಾಂಸರ ತಾತ್ವಿಕ-ಧಾರ್ಮಿಕೋಪನ್ಯಾಸ, ಶ್ರೀಗಳವರ ಉಪದೇಶಾದಿಗಳಿಂದ ಧನ್ಯರಾಗುತ್ತಿದ್ದರು. ಹೀಗೆ ಗುರುಗಳ ಸಂಚಾರ ಯಶಸ್ವಿಯಾಗಿ ಜರುಗುತ್ತಿತ್ತು, ಶ್ರೀಸುಧೀಂದ್ರರು ಮಹಾಸಂಸ್ಥಾನದೊಡನೆ ರಾಜಮನ್ನಾರುಗುಡಿಗೆ ಚಿತ್ತೆಸಿದರು. ಅಲ್ಲಿನ ರಾಜಪ್ರತಿನಿಧಿಯು “ರಾಜಗುರು” ಗಳನ್ನು ರಾಜವೈಭವದಿಂದ ಸ್ವಾಗತಿಸಿ ರಾಜಭವನದಲ್ಲಿ ಬಿಡಾರ ಮಾಡಿಸಿದನು. 

ಮರುದಿನ ಗುರುಗಳಿಗೆ ಅರಮನೆಯಲ್ಲಿ ಭಿಕ್ಷೆ ಏರ್ಪಡಿಸಿ ವೈಭವದಿಂದ ಅವರನ್ನು ಅರಮನೆಗೆ ಕರೆತಂದು ಪಾದಪೂಜೆಮಾಡಿ ಕಾಣಿಕೆ ಅರ್ಪಿಸಿದನು. ಅಂದು ಮಧ್ಯಾನಶ್ರೀಸುಧೀಂದ್ರರು ಪಂಡಿತ-ವಿದ್ಯಾರ್ಥಿಗಳೊಡನೆ ಶ್ರೀರಾಜಗೋಪಾಲನ (ಶ್ರೀಕೃಷ್ಣ ದರ್ಶನಕ್ಕಾಗಿ ದೇವಾಲಯಕ್ಕೆ ದಯಮಾಡಿಸಿ ಶ್ರೀಕೃಷ್ಣದರ್ಶನದಿಂದ ಹರ್ಷಪುಳಕಿತರಾದರು. 

ವೆಂಕಟನಾಥಾಚಾರರು ಗೋಪಾಲನ ದರ್ಶನದಿಂದ ಪರವಶರಾಗಿ ವೇದಮಂತ್ರಗಳಿಂದ ಸ್ತುತಿಸುತ್ತಿರುವಾಗ ಶ್ರೀಕೃಷ್ಣನ ಕೊರಳಲ್ಲಿ ಶೋಭಿಸುತ್ತಿದ್ದ ಪುಷ್ಪಹಾರವು ಕಳಚಿಬಿದ್ದಿತು ! ಸುಧೀಂದ್ರರು ಮಂದಹಾಸಬೀರಿ “ವೆಂಕಟನಾಥರೇ, ಶ್ರೀಕೃಷ್ಣ ವರ ಕರುಣಿಸಿದ್ದಾನೆ, ಶೀಘ್ರದಲ್ಲಿಯೇ ಯಾವುದೋ ಒಂದು ವಿಜಯ ನಿಮಗೆ ದೊರಕಲಿದೆಯೆಂದು ನಮಗೆನ್ನಿಸುತ್ತಿದೆ !” ಎಂದು ಹೇಳಿ ಅರ್ಚಕರಿಂದ ಆ ಹಾರವನ್ನು ಆಚಾರರ ಕೊರಳಿಗೆ ಹಾಕಿಸಿ ಆಶೀರ್ವದಿಸಿ ಸರ್ವರೊಡನೆ ದೇವಾಲಯದ ಸಭಾಂಗಣಕ್ಕೆ ದಯಮಾಡಿಸಿ ಒಂದುಭಾಗದಲ್ಲಿ ಆಸನಾಸೀನರಾದರು. 

ಆ ಸಭಾಂಗಣದ ಉತ್ತರ ಪಾರ್ಶ್ವದಲ್ಲಿ ಅದೈತ ಸನ್ಯಾಸಿಗಳೊಬ್ಬರು ಮಾಡುತ್ತಿದ್ದ ಉಪನ್ಯಾಸವನ್ನು ಕೇಳುತ್ತಾ ನೂರಾರು ಜನರು ಕುಳಿತಿದ್ದರು, ಅದೈತ ಸನ್ಯಾಸಿಗಳೊಬ್ಬರು ಮಾಡುತ್ತಿದ್ದ ಉಪನ್ಯಾಸವನ್ನು ಕೇಳುತ್ತಾ ನೂರಾರು ಜನರು ಕುಳಿತಿದ್ದರು, ಅದೈತ ಸನ್ಯಾಸಿಗಳು ಜೀವೇಶ್ವರೈಕ್ಯವನ್ನು ಉಪನ್ಯಾಸ ಮಾಡಹತ್ತಿದರು. ವೆಂಕಟನಾಥರು ಪ್ರಶ್ನಾರ್ಥಕವಾಗಿ ಗುರುಗಳತ್ತ ನೋಡಿದಾಗ ಸುಧೀಂದ್ರರು ಶಿರಃಕಂಪನ ಮಾಡಿದರು. ಉತ್ಸಾಹಿತರಾದ ವೇಂಕಟನಾಥರು ಮೆಲ್ಲನೆ ಮೇಲೆದ್ದು ಅದೈತ ಸನ್ಯಾಸಿಗಳ ಮುಂದೆ ಕುಳಿತರು, ರಾಮಚಂದ್ರಾಚಾರರೇ ಮುಂತಾಗಿ ಐದಾರು ಜನ ಪಂಡಿತರೂ ಅವರನ್ನು ಅನುಸರಿಸಿದರು, ವೇಂಕಟನಾಥಾಚಾರ್ಯರು ಅದೈತ ಸನ್ಯಾಸಿಗಳನ್ನು ನೋಡಿ “ಬ್ರಹ್ಮಾಭಿನ್ನೋ ಜೀವಸಂಘ ಕುತಃ ?” - ಸ್ವಾಮಿ ನೀವು ಅದೈತತತ್ವಗಳನ್ನು ಉಪದೇಶಿಸುತ್ತಿದ್ದೀರಿ. ನಿಮ್ಮ ಮತಪ್ರಕ್ರಿಯೆಯಂತೆ ಜೀವ-ಬ್ರಹ್ಮರಿಗೆ ಹೇಗೆ ಐಕ್ಯವನ್ನು ಸಾಧಿಸುವಿರಿ ?” ಎಂದು ಪ್ರಶ್ನಿಸಿದರು. ಅದೈತ ಸನ್ಯಾಸಿಗಳು ನಗುತ್ತಾ ಮಿಥ್ಯಾಯಸ್ಮಾದ್ವಿಶ್ವಮ್ - ಜಗತ್ತು ಮಿಥೈಯಾದ್ದರಿಂದ ಜೀವೇಶ್ವರರಿಗೆ ಅಭೇದ (ಐಕ್ಯವು) ಸಿದ್ಧವಾಗಿದೆ” ಎಂದರು. ಅವರ ಉತ್ತರ ಕೇಳಿ ಅಚ್ಚರಿಗೊಂಡ ವೇಂಕಟನಾಥರು “ಕಿಂಚಾತಃ ? ನಾತ್ರ ಮಾನು ತಯೋಕ್ತಮ್ !” ಏನು ಸ್ವಾಮಿ, ಇದರಿಂದ ಜೀವೇಶ್ವರರಿಗೆ ಐಕ್ಯಪ್ರತಿಪಾದಕಪ್ರಮಾಣವನ್ನು ಹೇಳಿದಂತಾಗಲಿಲ್ಲವಲ್ಲ !” ಎಂದರು.

ಆ ಸನ್ಯಾಸಿಗಳು : ಆಗಲೇ ಹೇಳಿದೆವಲ್ಲ, ಜಗತ್ತು ಸುಳ್ಳಾದ್ದರಿಂದ ಜೀವ ಪರಮಾತ್ಮರಿಗೆ ಐಕ್ಯವೆಂದು ! 

ವೇಂಕಟ : (ನಕ್ಕು) ನಿಮಗೆ ಜೀವಬ್ರಕೃಕ್ಕಿಂತಲೂ ಜಗನ್ಮಧ್ಯಾತ್ವ ಪ್ರತಿಪಾದನೆಯಲ್ಲೇ ಹೆಚ್ಚು ಪ್ರೇಮವೆಂದು ತೋರುತ್ತದೆ. ಆಗಲಿ, ಜಗತ್ತಿಗೆ ಮಿಥ್ಯಾತ್ವವನ್ನು ಹೇಗೆ ಸಾಧಿಸುವಿರಿ ? 

ಆಗ ಅದೈತ ಸನ್ಯಾಸಿಗಳು ಜೀವಬ್ರಕಕ್ಕಿಂತಲೂ ಜಗನ್ನಿಧ್ಯಾತಪ್ರತಿಪಾದನೆಯಲ್ಲೇ ಹೇಳಿದರು. ವೇಂಕಟನಾಥರು ಅದನ್ನು ಖಂಡಿಸಿದರು. ಹೀಗೆ ಅವರಿಬ್ಬರಲ್ಲಿ ವಾದವಾಗಿ ವೇಂಕಟನಾಥರ ವಾದವೈಖರಿಯ ಮುಂದೆ ನಿಲ್ಲಲಾಗದೆ ಅದೈತ ಸನ್ಯಾಸಿಗಳು ಮೌನವಹಿಸಿದರು. 

ವೇಂ : ಆದ್ದರಿಂದ ನೀವು ಹೇಳುವ ಪ್ರಪಂಚಮಿಥ್ಯಾತ್ವವು ಯಾವ ವಿಧದಿಂದಲೂ ಸಿದ್ಧಿಸುವುದಿಲ್ಲವಾದುದುರಿಂದ ಜಗತ್ತು ಪಾರಮಾರ್ಥಿಕವಾಗಿ ಸತ್ಯವೆಂದು ಸಿದ್ಧವಾಯಿತು ! ಅಂದಮೇಲೆ “ವಿಶ್ವಂ ಮಿಥ್ಯಾ ಯಸ್ಮಾತ್ “ಎಂಬ ನಿಮ್ಮ ಮಾತು ಅಸಂಗತವಾಯಿತು. ಕಿಂಚಾತಃ ? ಜೀವಬ್ರ ಸಾಧಕ ಪ್ರಮಾಣವನ್ನೇನೂ ನೀವು ನಿರೂಪಿಸಿದಂತಾಗಲಿಲ್ಲ! 

ಗುರುಗಳು ಮೌನವಹಿಸಿದ್ದರಿಂದ ಅವರಿಗೆಲ್ಲಿ ಅಪಜಯವಾಗುವುದೋ ಎಂಬ ಭಯದಿಂದ ಅವರ ಶಿಷ್ಯರೊಬ್ಬರು ವಾಕ್ಯಾರ್ಥವನ್ನು ಬೇರೆ ದಿಕ್ಕಿಗೆ ತಿರುಗಿಸಲಾಶಿಸಿ ಹೀಗೆ ಗರ್ಜಿಸಿದರು - “ಆಚಾರರೇ ನೀವು ಕಿಂಚಾತಃ ಎಂದು ಅಪಶಬ್ದವನ್ನು ಪ್ರಯೋಗಿಸಿದ್ದೀರಿ ! ಅದು ಯಾವ ಶಾಸ್ತ್ರದಲ್ಲೂ ಉಕ್ತವಾಗಿಲ್ಲ. ಈವರೆಗೆ ಯಾರೂ ಕೇಳಿಲ್ಲ !” 

ಆಚಾರರು ನಕ್ಕು “ವ್ಯಾಕರಣಭಾಷ್ಯವನ್ನು ನೀವು ತಿಳಿದಿಲ್ಲವೆಂದು ಅರ್ಥವಾಯಿತು !” ಎಂದರು.” ಆಗ ಮತ್ತೊಬ್ಬ ಶಿಷ್ಯರು ಮಹಾಭಾಷ್ಯವೆಲ್ಲಿ, ನೀವೆಲ್ಲಿ ? ನಿಮಗೆಂತಹ ದುರಾಭಿಮಾನ ? ವ್ಯಾಕರಣ ಪ್ರತಿಕ್ರಿಯೆಗಳನ್ನು ಕೇಳಿದರೆ ಹೇಳಬಲ್ಲಿರಾ?' ಎಂದು ಕೇಳುತ್ತಿರುವಂತೆಯೇ ವೇಂಕಟನಾಥರು ಮಹಾಭಾಷ್ಯವನ್ನೇ ಅನುವಾದಮಾಡಲಾರಂಭಿಸಿದರು.345 ಆಗ ಇನ್ನೊಬ್ಬ ಶಿಷ್ಯರು ದಂಡ(ಕೋಲು)ದಿಂದ ಏಟು ತಿಂದ ಸರ್ಪದಂತೆ ಸಿಟ್ಟಿನಿಂದ ಪೂತ್ಕರಿಸುತ್ತಾ ಆಚಾರರೇ ! ಪ್ಲಾಧಾತುವಿನ `ಯಬ್‌ಲುಬಂತ'ದ ರೂಪವನ್ನೂ ಶತ್ರಂತದ ರೂಪವನ್ನೂ” ಎನ್ನುತ್ತಿರುವಂತೆಯೇ ಅರ್ಧಕ್ತಿಯಲ್ಲಿಯೇ ವೇಂಕಟನಾಥರು ಪಾಪ್ಪತ್‌” ಎಂದು ಅದರ ರೂಪವನ್ನು ಹೇಳಿ, ಆ ವಾದಿಯನ್ನು ಇದೇ 'ಪ್ಲಾ' ಧಾತುವಿನ 'ಗಂತ ರೂಪವೇನು? ಹೇಳಿರಿ” ಎಂದು ಪ್ರಶ್ನಿಸಿದರು. ವೇಂಕಟನಾಥರ ವ್ಯಾಕರಣಶಾಸ್ತ್ರಪ್ರೌಢಿಮೆ, ಅತಿಕ್ಲಿಷ್ಟವಾದ ಧಾತುರೂಪವನ್ನು ಲೀಲಾಜಾಲವಾಗಿ ಹೇಳಿದ ಅವರ ಪ್ರತಿಭೆಗಳನ್ನು ಕಂಡು ಆ ವಾದಿಗಳು ಆಚಾರರ ಪ್ರಶ್ನೆಗೆ ಉತ್ತರಿಸಲಾಗದೆ ತಲೆತಗ್ಗಿಸಿ ನಿಂತರು. 

ವೇಂಕಟನಾಥರು “ಸ್ವಾಮಿ, ನಿಮ್ಮ ಪ್ರಶ್ನೆಗೆ 'ಪ್ಲಾ' ಧಾತುವಿನ ಯಬ್‌ಲುಂತ ರೂಪವನ್ನು ಹೇಳಿದ್ದೇನೆ. ನಿಮ್ಮ ಶಿಷ್ಯರು ನಾನು ಪ್ರಶ್ನಿಸಿದ ಯಗಂತರೂಪವನ್ನು ಹೇಳಲು ಅಸಮರ್ಥರಾಗಿದ್ದಾರೆ, ನೀವಾದರೂ ಉತ್ತರ ಹೇಳಬಲ್ಲಿರಾ ?” ಎಂದು ಕೇಳಿದರು, ಅತಿಸನ್ಯಾಸಿಗಳು ಬಹುಕಾಲ ಯೋಚಿಸಿದರು. ರೂಪ ಹೇಳಲು ಬಹುವಿಧವಾಗಿ ಆಲೋಚಿಸಿದರೂ ಅವರಿಗೆ 'ಪ್ಲಾ' ಧಾತುವಿನ ಯಗಂತ ರೂಪವೇನೆಂದು ತಿಳಿಯಲಿಲ್ಲ ! ಉತ್ತರ ಹೇಳಲಾಗದೇ ಅವರು, ಅವರ ಶಿಷ್ಯರು ಮೌನವಹಿಸಿದರು. ಸಭಿಕರು ವೇಂಕಟನಾಥರ ವಾದಕಾತುರವನ್ನು ಶ್ಲಾಘಿಸಿ ಜಯಕಾರ ಮಾಡಿದರು. 

ಶ್ರೀಸುಧೀಂದ್ರರಿಗೆ ಶಿಷ್ಯರ ವಿಜಯದಿಂದ ಅಪಾರ ಸಂತೋಷವಾಯಿತು. “ಆಚಾರ, ಶ್ರೀಕೃಷ್ಣವರಪ್ರಸಾದ ನೋಡಿದಿರಾ? ಹೇಗೆ ಕ್ಷಿಪ್ರವಾಗಿ ನಿಮಗೆ ಜಯಪ್ರದವಾಯಿತು !” ಎಂದು ಆಚಾರರನ್ನು ಶ್ಲಾಘಿಸಿ ಎಲ್ಲರೊಡನೆ ಬಿಡಾರಕ್ಕೆ ದಯಮಾಡಿಸಿದರು.

ಅಂದು ಸಂಜೆ ರಾಜಭವನದಲ್ಲಿ ಶ್ರೀಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಒಂದು ದೊಡ್ಡ ಸಮಾರಂಭ ಜರುಗಿತು. ಗುರುಗಳ ಅಪ್ಪಣೆಯಂತೆ ಪಂಡಿತರು ಕೃಷ್ಣನ ಗುಡಿಯಲ್ಲಿ ವೇಂಕಟನಾಥರು ಅದೈತಿ ಸನ್ಯಾಸಿಗಳನ್ನು ವಾಕ್ಯಾರ್ಥದಲ್ಲಿ ಸೋಲಿಸಿ ವಿಜಯಗಳಿಸಿದನ್ನು ವರ್ಣಿಸಿ ಪ್ರಶಂಶಿಸಿ ಭಾಷಣಮಾಡಿದರು. 

ಆನಂತರ ಶ್ರೀಸುಧೀಂದ್ರತೀರ್ಥರು “ಅಚಾರರು ತಮ್ಮಲ್ಲೇ ವ್ಯಾಕರಣ ಮಹಾ ಭಾಷ್ಯವನ್ನು ಆಧ್ಯಯನಮಾಡಿದರೂ ಅವರು ವ್ಯಾಕರಣಶಾಸ್ತ್ರದಲ್ಲಿ ಇಂದು ತೋರಿದ ಪ್ರೌಢಿಮೆಯನ್ನು ಹಿಂದೆಂದೂ ತಾವೂ ಕಂಡಿರಲಿಲ್ಲವೆಂದೂ ಪರವಾದಿಗಳನ್ನು ಜಯಿಸಿ ಆಚಾರ್ಯರಿಂದು ನಮಗೆ ಪರಮಾನಂದವನ್ನುಂಟುಮಾಡಿದ್ದಾರೆ” ಮುಂತಾಗಿ ಹೇಳಿ, ಆ ಮಹಾವಿದ್ದತ್ಸಭೆಯಲ್ಲಿ ಸಕಲ ಪಂಡಿತರು, ಧರ್ಮಾಭಿಮಾನಿಗಳ ಸಮಕ್ಷ ವೇಂಕಟನಾಥಾಚಾರ್ಯರಿಗೆ ಪಂಡಿತ ಪ್ರಪಂಚದಲ್ಲಿ ಅಸಾಧಾರಣವೆಂದು ಭಾವಿಸಲಾಗಿರುವ ಮತ್ತು ಪ್ರಾಚೀನ ವಿದ್ವಜ್ಜನಯೋಗ್ಯವಾದ ಮಹಾಭಾಷಾಚಾರ್ಯ” ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿದರು.347 ಸಮಸ್ತಸಭಿಕರೂ ಆನಂದದಿಂದ ಮಹಾಭಾಷ್ಯಾಚಾರ ವೆಂಕಟನಾಥಾಚಾರ್ಯರಿಗೆ ಜಯವಾಗಲಿ” ಎಂದು ಹರ್ಷಧ್ವನಿ ಮಾಡಿದರು. ಶ್ರೀಯವರ ಪರಮಾನುಗ್ರಹದಿಂದ ಮುದಿಸಿದ ವೇಂಕಟನಾಥರು ವಿನೀತರಾಗಿ ಶ್ರೀಯವರಿಗೆ ತಮ್ಮ ಭಕ್ತಿಪೂರ್ವಕ ನಮನಗಳನ್ನರ್ಪಿಸಿ, ಸೂಕ್ತರೀತಿಯಲ್ಲಿ ಭಾಷಣಮಾಡಿದರು. “ಸಕಲಕಲಾವಲ್ಲಭ, ವೈಣಿಕಚಕ್ರವರ್ತಿ'ಗಳು 'ಮಹಾಭಾಷ್ಯಾಚಾರ' ಬಿರುದಾಲಂಕೃತರಾಗಿ ಕಂಗೊಳಿಸಿದರು ! 

ಶ್ರೀಸುಧೀಂದ್ರರು ಸಂಚಾರಕ್ರಮದಲ್ಲಿ ತಂಜಾವೂರಿಗೆ ದಯಮಾಡಿಸಿದರು. ರಘುನಾಥಭೂಪಾಲನು ರಾಜಧಾನಿಯಲ್ಲಿರ- ಲಿಲ್ಲವಾದ್ದರಿಂದ ದರ್ಬಾರಿನ ಪ್ರಮುಖ ಪಂಡಿತರೂ, ಮಂತ್ರಿಗಳೂ ಆದ ಯಜ್ಞನಾರಾಯಣದೀಕ್ಷಿತರು “ರಾಜಗುರು'ಗಳನ್ನು ವೈಭವದಿಂದ ಸ್ವಾಗತಿಸಿ ಭವ್ಯಮಂದಿರದಲ್ಲಿ ಬಿಡಾರಮಾಡಿಸಿದನು.