|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೯. ವೇಂಕಟನಾಥರ ವಿವಾಹ

ರಾಮಚಂದ್ರಪುರದಲ್ಲಿ ಗುರುರಾಜಾಚಾರ್ಯರ ಮನೆಯಲ್ಲಿ ಇಂದು ವೆಂಕಟನಾಥರ ವಿವಾಹಾಂಗವಾಗಿ ಕುಲದೇವ ಶ್ರೀನಿವಾಸನ ಪ್ರೀತ್ಯರ್ಥವಾಗಿ ದೇವರಸಮಾರಾಧನೆಯು ವಿಜೃಂಭಣೆಯಿಂದ ನೆರವೇರುತ್ತಿದೆ. ಉತ್ಸವಕ್ಕಾಗಿ ಆತ್ಮೀಯ ಬಂಧು ಬಾಂಧವರೆಲ್ಲ ಬಂದು ಸೇರಿದ್ದಾರೆ. ಬಹು ಸಂಭ್ರಮದಿಂದ ಜರುಗುತ್ತಿದೆ ದೇವರ ಸಮಾರಾಧನೆ. ಬೆಳಿಗ್ಗೆ ಪುಣ್ಯಾಹ, ನಾಂದಿ ಕುಲದೇವತಾ, ನವಗ್ರಹಪೂಜೆ, ಹವನ ಹೋಮಾದಿಗಳೆಲ್ಲ ಸಾಂಗವಾಯಿತು. ಆನಂತರ ವೆಂಕಟನಾಥರು ದೀಕ್ಷಾವಸ್ತ್ರವನ್ನಿಟ್ಟು ಹಸೆಯಮೇಲೆ ಕುಳಿತು ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮಕ್ಕೆ ಬರುವ ಸೇತುವೆಯಂತಿರುವ ಸ್ನಾತಕ ಸಮಾವರ್ತನೆ, ಪ್ರಾಜಾಪತ್ಯ, ಸೌಮ್ಯಾದಿವ್ರತಚತುಷ್ಟವನ್ನು ವೇದೋಕ್ತ ಕ್ರಮವಾಗಿ ಸ್ವೀಕರಿಸಿದರು. ಸುಮಂಗಲೆಯರು ಆರತಿ ಮಾಡಿ ಬ್ರಾಹ್ಮಣಾಶೀರ್ವಾದವಾದ ಮೇಲೆ, ದೇವಪೂಜೆ, ಹೂವೀಳ್ಯಗಳು ಜರುಗಿ ಸರ್ವರಿಗೂ ಭೂರಿಭೋಜನ ಫಲತಾಂಬೂಲ ದಕ್ಷಿಣಾಪ್ರದಾನಾದಿಗಳು ನೆರವೇರಿದವು. ಮನೆಯವರೆಲ್ಲ ಭೋಜನ ಮಾಡಿದಮೇಲೆ ಬಂಧುಬಾಂಧವರಿಂದೊಡಗೂಡಿದ ವರನ ದಿಬ್ಬಣ ಕನ್ಯಾಗ್ರಾಮಕ್ಕೆ ಹೊರಟಿತು. 

ಅಂದು ರಾತ್ರಿ ಅಚ್ಚುತಪ್ಪನಾಯಕ ಅಗ್ರಹಾರದಲ್ಲಿ ಲಕ್ಷ್ಮೀನರಸಿಂಹಾಚಾರರ ಸೋದರಪುತ್ರರ ಮನೆಯಲ್ಲಿ ಬಿಡಾರಮಾಡಿ ಮರುದಿನ ಬೇಗ ಭೋಜನ ಪೂರೈಸಿ ಅಲ್ಲಿಂದ ದಿಬ್ಬಣ ಹೊರಟು ಕನೈಯ ಗ್ರಾಮಕ್ಕೆ ಸೂರಾಸವಾಗುವುದರೊಳಗೆ ಬಂದು ಸೇರಿತು. ಆ ಗ್ರಾಮದ ಜಾಗೀರದಾರರೂ ಶ್ರೀಮಂತರೂ ಆದ ವಾಸುದೇವಾಚಾರರು ತಮ್ಮ ಜೇಷ್ಠಪುತ್ರಿ ಸೌ || ಸರಸ್ವತಿಯ ವಿವಾಹಕ್ಕಾಗಿ ಸಕಲಸಿದ್ದತೆಗಳನ್ನು ಮಾಡಿಕೊಂಡು ವಾದ್ಯವೈಭವದೊಡನೆ-ಬಂಧು ಬಾಂಧವ ಸಹಿತರಾಗಿ ಹೊರಟು ಬೀಗರನ್ನು ಎದುರುಗೊಂಡರು.

ಗುರುರಾಜಾಚಾರ್ಯರು ಕಳಸಗಿತ್ತಿ ವೆಂಕಟಾಂಬೆಯನ್ನು ಮುಂದೆ ಮಾಡಿಕೊಂಡು ವೇಂಕಟನಾಥರ ಸಮೀಪದಲ್ಲಿ ನಿಂತರು. ವಾಸುದೇವಾಚಾರ್ಯ ದಂಪತಿಗಳು ರೂಪ-ಲಾವಣ್ಯ-ವಿದ್ಯಾ-ತೇಜಸ್ಸುಗಳಿಂದ ಕಂಗೊಳಿಸುವ ವೇಂಕಟನಾಥರನ್ನು ಕಂಡು ಪರಮ ಹರ್ಷಪುಳಕಿತರಾದರು. ಆಗ ನಮಸ್ಕರಿಸಿದ ಕಿರಿಯರಿಗೆ ಹಿರಿಯರು ಆಶೀರ್ವದಿಸಿದರು. ಸಮಾನ ವಯಸ್ಕರು ಪರಸ್ಪರ ಆಲಿಂಗಿಸಿದರು. ಹಿರಿಯರಿಗೆ ಕಿರಿಯರು ನಮಸ್ಕರಿಸಿದರು. ವೃದ್ಧರು ಬಂಧುಗಳೆಲ್ಲರಿಗೂ ಆಶೀರ್ವದಿಸಿ ಪರಸ್ಪರ ಕುಶಲಪ್ರಶ್ನೆ ಮಾಡಿದರು. 

ವಾಸುದೇವಾಚಾರ್ಯ ದಂಪತಿಗಳು ವರನಿಗೆ ಸೀಮಂತಪೂಜೆಯನ್ನೂ, ಹೆಣ್ಣುಮಕ್ಕಳು “ಗಡಿನೀರು” ಶಾಸ್ತ್ರವನ್ನೂ ಮಾಡಿ ವೇಂಕಟನಾಥರಿಗೆ ಕುಂಕುಮಹಚ್ಚಿ ಗಂಧ ಪೂಸಿ, ಹಾರ ಹಾಕಿ, ಕರದಲ್ಲಿ ಅರಿಶಿಣಲೇಪಿತ ಪೂರ್ಣಫಲವನ್ನು ಕೊಟ್ಟು, ಅಲಂಕೃತ ಜೋಡು ಕುದುರೆಯ ಸಾರೋಟಿನಲ್ಲಿ ಮಂಗಳವಾದ್ಯಘೋಷದೊಡನೆ ವೇಂಕಟನಾಥರನ್ನು ತಮ್ಮ ಪುರಕ್ಕೆ ಅಲಂಕೃತ ಭವ್ಯಭವನಕ್ಕೆ ಕರೆದುತಂದರು. ಮನೆಯ ಮುಂದೆ ವರ ಕಳಶಗಿತ್ತಿಯನ್ನು ಪೂರ್ವಾಭಿಮುಖವಾಗಿ ನಿಲ್ಲಿಸಿ ವೀಳ್ಯಕೊಟ್ಟು ಆರತಿ ಮಾಡಿ, ದೃಷ್ಟಿಪರಿಹಾರ್ಥವಾಗಿ ಇಡಿಗಾಯಿ ಒಡೆದು ಒಳಗೆ ಪ್ರವೇಶಮಾಡಿಸಿದರು. ಆಗ ವರಕನ್ಯಾ ಕಡೆಯವರು ಪರಸ್ಪರ ಎದುರಕ್ಕಿ, ಬುಕ್ಕಿಟ್ಟುಗಳಿಂದ ಸ್ವಾಗತಿಸಿದರು. ನಂತರ ಸಂತೋಷದಿಂದ ಗೃಹದೊಳಗೆ ಕರೆತಂದು ಉಚಿತಾಸನಗಳಲ್ಲಿ ಕೂಡಿಸಿ ಹಾಲು-ಹಣ್ಣುಗಳನ್ನಿತ್ತು ಸತ್ಕರಿಸಿ ಬೀಗರ ಅನುಮತಿ ಪಡೆದು ಸ್ವಗೃಹಕ್ಕೆ ತೆರಳಿದರು. 

ತರುವಾಯ ವರನ ಕಡೆಯವರು ಕನ್ನೆಯ ನಿರೀಕ್ಷಣೆಗಾಗಿ ಸಕಲ ಮಂಗಳದ್ರವ ಉಡುಗೊರೆ-ಬಳುವಳಿಗಳೊಡನೆ ಮಂಗಳವಾದ್ಯ ಘೋಷಣೆ ಮಾಡಿಸುತ್ತಾ ಕನೈಯ ಗೃಹಕ್ಕೆ ತೆರಳಿ ಕನ್ಯಾ ನಿರೀಕ್ಷಣಾ ಶಾಸ್ತ್ರವನ್ನು ಮಾಡಿದರು. ಸುರಸುಂದರಿಯಾದ ಕನ್ನೆಯನ್ನು ನೋಡಿ ವರನ ಬಂಧುಗಳು ಅಚ್ಚರಿಗೊಂಡರು. ತಂದೆಯು ವಿದ್ಯಾಭಿಮಾನಿನಿಯಾದ ಸರಸ್ವತಿಯ ಹೆಸರನ್ನು ಮಗಳಿಗೆ ಇಟ್ಟಿದ್ದರು. ಅದು ಅನ್ವರ್ಥಕವಾಗಿತ್ತು. ಸಂಗೀತ-ಸಾಹಿತ್ಯಾದಿ ಕಲೆಗಳಲ್ಲಿ ನಿಪುಣಳಾದ ಕನೈಯು ಅಭಿನವ ಸರಸ್ವತಿಯೇ ಆಗಿದ್ದಳು. ಉತ್ತಮ ಸ್ತ್ರೀ ಲಕ್ಷಣದಂತೆ ಅವಳ ನಾಭಿಯು ಆಳವಾಗಿದ್ದುದರಿಂದ ಜನರು ಸರಸ್ವತೀ ಎಂದು ಕರೆದರು. ಸರಸ್ವತಿಯು ಹಿಂದೆ ನದೀ ರೂಪಳಾಗಿದ್ದಾಗ ಸಮುದ್ರ ಪತ್ನಿಯಾಗಿದ್ದಳು. ಈಗ ಅವಳು ಮಾನವಜನ್ಮದಲ್ಲಿ ಜನಿಸಿದಾಗಲೂ ಸಮುದ್ರ ಪತ್ನಿಯೇ, (ಸ=ಮುದ್ರ=ಮುದ್ರೆ ಧರಿಸುವ) ಅಂದರೆ ಚಕ್ರಶಂಖಾದಿ ಮುದ್ರೆಗಳನ್ನು ಧರಿಸುವ ಶ್ರೇಷ್ಠ ವೈಷ್ಣವನ ಪತ್ನಿಯಾಗಬೇಕೆಂದು ಬ್ರಹ್ಮದೇವರನ್ನು ಪ್ರಾರ್ಥಿಸಿ ವಾಸುದೇವಾಚಾರ್ಯರು ಮಗಳಾಗಿ ಪಡೆದಿದ್ದರಿಂದ ಪುತ್ರಿಗೆ ಸರಸ್ವತಿಯೆಂದೇ ನಾಮಕರಣ ಮಾಡಿದ್ದಾರೆಂದು ಜನರು ಭಾವಿಸಿದರು. 

ಯುಕ್ತಾಯುಕ್ತ ವಿವೇಚನೆ, ಕಾರ್ಯಕರಣ ಕುಶಲತೆ, ವಿನಯ, ದಾಕ್ಷಿಣ್ಯ ಪತಿಯಲ್ಲಿ ಭಗವಂತನನ್ನು ಕಾಣುವುದು, ಪತಿಯ ಭಾವವರಿತು ವರ್ತಿಸುವುದು ಇವು ಉತ್ತಮ ಸ್ತ್ರೀ ಲಕ್ಷಣ ಇವೆಲ್ಲವೂ ಸರಸ್ವತಿಯು ಹುಟ್ಟುವುದಕ್ಕೆ ಮೊದಲೇ ಜನಿಸಿದ್ದು ಅವಳನ್ನು ಆಶ್ರಯಿಸಿದ್ದವು. 

ಸರಸ್ವತಿಯ ಪಾದಗಳು ಚಿಗುರೆಲೆಯ ಲಾವಣ್ಯದಿಂದ, ಕಾಸ್ಟೆರಳುಗಳು ನಖಗಳು ಕಾಂತಿಯುಕ್ತವಾಗಿ, ಜಾನುಪ್ರದೇಶವು ಆಮೆಯ ಬೆನ್ನಿನಂತೆ, ಅವಳ ತೊಡೆಗಳು ಗಜರಾಜನ ಸೊಂಡಲುಗಳಂತಿದ್ದು ಮನೋಹರವಾಗಿದ್ದವು. ಕಟಿಯ ಮುಂಭಾಗವು ಎತ್ತರವಾಗಿಯೂ, ಕಟಿಮಧ್ಯಭಾಗವು ಸಿಂಹಕಟಿಯಂತೆ ಚಿಕ್ಕದಾಗಿಯೂ, ಕರಗಳು ಕಮಲಗಳಾಗಿಯೂ, ಹಸ್ತ-ಕಾಲುಗಳ ನಖಗಳು ಮಾಣಿಕ್ಯಗಳಾಗಿದ್ದವು. ತೋಳುಗಳು ಕಮಲನಾಳದಂತೆ ಮೃದುವೂ ಮನೋಹರವೂ ಆಗಿದ್ದವು. ಅವಳ ನಿಮ್ನನಾಭಿಯು ಸುಂದರವಾಗಿದ್ದು ಮೋಹಕವಾಗಿತ್ತು. 

ಸರಸ್ವತಿಯ ಕಂಠಕ್ಕೆ ಹೋಲಿಸಲು ಬೇರೊಂದು ಪದಾರ್ಥವೇ ಇರಲಿಲ್ಲ ! ತುಂಬಿದ ಕಪೋಲಗಳು ದುಂಡಾಗಿದ್ದವು, ಅವಳ ವದನವು ಚಂದ್ರನೊಡನೆ ಸ್ಪರ್ಧಿಸಲು ಕಾದಿರುವಂತಿದ್ದವು. ಅಂದರೆ ಚಂದ್ರನಲ್ಲಿರುವ ಸಕಲಗುಣಗಳಿಗಿಂತ ಆಧಿಕ್ಯ ಪಡೆದಿದ್ದ ಅವಳ ಮುಖವು ಚಂದ್ರಮನನ್ನು ಜಯಿಸಿದ್ದಿತು. ಅವಳ ದಂತಗಳು ಮಲ್ಲಿಗೆಯ ಮೊಗ್ಗುಗಳಂತಿದ್ದವು. ಅಧರವು ಅಮೃತಮಯವಾಗಿತ್ತು. ಎತ್ತರವಾದ ನಾಸಿಕವು ಇನ್ನೂ ಅರಳದ ಸಂಪಿಗೆಯ ಮೊಗ್ಗಿನಂತೆ ಮನೋಹರವಾಗಿತ್ತು.

ಸರಸ್ವತಿಯ ಫಾಲಪ್ರದೇಶವು ವಿಸ್ತಾರವಾಗಿದ್ದು ಮನ್ಮಥನ ತೊಟ್ಟಿಲಿನಂತೆ ಶೋಭಿಸುತ್ತಿತ್ತು. ಹಣೆಯಲ್ಲಿ ರಾಜಿಸುವ ತಿಲಕ (ಕುಂಕುಮದ ಬೊಟ್ಟು)ವು ಶಿಶು ರೂಪೀ ಮನ್ಮಥನಂತೆಯೂ, ಸರಸ್ವತಿಯು ಶೃಂಗಾರಕ್ಕಾಗಿ ಹೆಣೆದುಕೊಂಡಿದ್ದ ಅವಳ ಕಪ್ಪಾದ ನಾಲ್ಕು ಜಡೆಗಳು ತೊಟ್ಟಲಿನ ನಾಲ್ಕು ಸರಪಳಿಗಳಂತೆಯೂ, ಹಣೆಯ ಮೇಲಿನ ಮಧ್ಯಭಾಗದ ಬೈತಲೆಗೆ ಅಲಂಕಾರಕ್ಕಾಗಿ ಮುತ್ತಿನ ಸರಕ್ಕೆ ಕಟ್ಟಿದ್ದ ಚೂಡಾಮಣಿಯು ತೊಟ್ಟಿಲಿಗೆ ಕಟ್ಟಿದ್ದ, ಮಗುವು ಕ್ರೀಡಿಸುವ ಚೆಂಡಿನಂತೆಯೂ ರಾಜಿಸುತ್ತಿತ್ತು. 

ಇಂತು ರೂಪ-ಲಾವಣ್ಯ-ಸದ್ಗುಣ-ವಿದ್ಯಾದಿಗಳಿಂದ ರಾಜಿಸುವ ಸರಸ್ವತಿಯನ್ನು ನೋಡಿ ವರನ ಕಡೆಯ ಜನರೆಲ್ಲರೂ ಆಶ್ಚರ್ಯಾನಂದಭರಿತರಾಗಿ, ನವಮನ್ಮಥಾಕಾರನೂ, ಸದ್ಗುಣಸಾಗರನೂ ಆದ ನಮ್ಮ ವೇಂಕಟನಾಥನಿಗಾಗಿಯೇ ಬ್ರಹ್ಮದೇವರು ಈ ಕನ್ನೆಯನ್ನು ಸೃಷ್ಟಿಸಿದ್ದಾನೆ ! ಎಂದು ಉದ್ಧರಿಸಿದರು. 

ಆನಂತರ ಗೋಪಿಕಾಂಬಾದೇವಿಯರ ಆದೇಶದಂತೆ ವೆಂಕಟಾಂಬಾ-ಕಮಲಾದೇವಿಯರು ಸರಸ್ವತಿಯನ್ನು ರತ್ನಗಂಬಳಿಯ ಮೇಲೆ ಕೂಡಿಸಿ, ಅರಿಶಿನ ಕುಂಕುಮಗಳನ್ನಿತ್ತು, ಹೂ ಮುಡಿಸಿ, ಕಣ್ಣಿಗೆ ಕಾಡಿಗೆಯನ್ನು ಹಚ್ಚಿ ತಾವು ತಂದಿದ್ದ ಅಲಂಕಾರ ಸಾಧನಗಳು, ಪೀತಾಂಬರ, ಖಣ, ಬಳೆಗಳನ್ನು ನೀಡಿ ವಿವಿಧ ಫಲಗಳಿಂದ ಉಡಿತುಂಬಿ ಆರತಿಮಾಡಿ ಆಶೀರ್ವದಿಸಿ, ತಮ್ಮ ಬಿಡಾರಕ್ಕೆ ಮರಳಿದರು. 

ತರುವಾಯ ಕನೈಯ ಮಾತಾ-ಪಿತೃ-ಬಾಂಧವರು ಓಲಗದೊಡನೆ ಬಂದು ವರಪೂಜೆಗೆ ಆಹ್ವಾನಿಸಿ ಮಂತ್ರಾಕ್ಷತೆ ನೀಡಿ ವರನ ಕಡೆಯವರೊಡನೆ ದೇವರ ಗುಡಿಗೆ ಬಂದರು. ಅಲ್ಲಿವರ-ಕನ್ಯಾ ಕಡೆಯವರು ಎದುರಕ್ಕಿ, ಬುಕ್ಕಿಟ್ಟುಗಳನ್ನು ಪರಸ್ಪರ ವರ್ಷಿಸಿದ ಮೇಲೆ ವರನಿಗೆ ಆರತಿಮಾಡಿ ದೃಷ್ಟಿನಿವಾಳಿಸಿ ಗುಡಿಗೆ ಕರೆತಂದು ದೇವರಿಗೆ ಮಂಗಳಾರತಿ ಮಾಡಿಸಿ ಪ್ರಸಾದ ಕೊಡಿಸಿ ವಿಸ್ತಾರವಾದ ರತ್ನಗಂಬಳಿಯ ಮೇಲೆ ವರನನ್ನೂ ಬೀಗರು ಕಳಶಗಿತ್ತಿಯವರನ್ನೂ ಕೂಡಿಸಿ ಪುರೋಹಿತರ ಮಾರ್ಗದರ್ಶನದಲ್ಲಿ ಸಂಕಲ್ಪಪೂರ್ವಕ ವರಪೂಜಾ ಪ್ರಾರಂಭವಾಯಿತು. ಕನ್ಯಾ ತಂದೆ-ತಾಯಿಗಳು ವರನ ಪಾದತೊಳೆದು ಪ್ರೋಕ್ಷಿಸಿಕೊಂಡರು. ನಂತರ ಪಾದಗಳಿಗೆ ಅರಿಶಿನ, ಕುಂಕುಮ, ಕಣ್ಣಿಗೆ ಕಾಡಿಗೆ ಹಚ್ಚಿ ದೃಷ್ಟಿಬೊಟ್ಟಿಟ್ಟು ಹಾರಹಾಕಿ ಮಧುಪರ್ಕ ಸಮರ್ಪಿಸಿ, ವರ, ಬೀಗರು, ಕಳಶಗಿತ್ತಿಯರಿಗೆ ಉಡುಗೊರೆ ನೀಡಿದರು. ನಂತರ ಬೀಗರು ಪರಸ್ಪರ ಕೊಬ್ಬರಿಬಟ್ಟಲುಗಳಲ್ಲಿ ರಜತಬಟ್ಟಲು-ಸಕ್ಕರೆಗಳನ್ನಿಟ್ಟು ವಿನಿಮಯಮಾಡಿಕೊಂಡರು. ಅದಾದಮೇಲೆ ಫಲ ಪೂಜಾಮಾಡಿ, ಶ್ರೀಮಠಕ್ಕೆ ಮರಾದಾರ್ಥವಾಗಿ ಹೂವುಗಂಧ, ಫಲತಾಂಬೂಲದಕ್ಷಿಣೆಗಳನ್ನು ಸಮರ್ಪಿಸಿದ ಮೇಲೆ ಸರ್ವರಿಗೂ ಅರಿಶಿನ-ಕುಂಕುಮ-ಫಲತಾಂಬೂಲ ದಕ್ಷಿಣೆಗಳನ್ನು ನೀಡಿದರು. ತರುವಾಯ ಬೀಗರನ್ನು ಅವರ ಬಿಡಾರಕ್ಕೆ ತಲುಪಿಸಿ ತಮ್ಮ ಮನೆಯಲ್ಲಿ ಬಿಸಿಯೂಟ ರುಕ್ಕೋತ ಅಥವಾ ಜಾನುವಾಸವೆಂದು ಖ್ಯಾತವಾದ ಬೀಗರ ಉಪಚಾರರೂಪ ಭೋಜನಕ್ಕೆ ಸಿದ್ಧಪಡಿಸಿ ಬೀಗರನ್ನು ಲಗ್ನಗೃಹಕ್ಕೆ ಕರೆತಂದು ವರನನ್ನು ವಿವಾಹಮಂದಿರದ ಮಗ್ಗುಲುಭವನದಲ್ಲಿ ಕುಳ್ಳಿರಿಸಿ ವಿವಿಧ ಭಕ್ಷ್ಯ ಭೋಜನಗಳಿಂದ ಸರ್ವರನ್ನೂ ತೃಪ್ತಿಪಡಿಸಿ ತಾಂಬೂಲ ಸಮರ್ಪಣೆ ಮಾಡಿ ಬೀಗರನ್ನು ಬಿಡಾರಕ್ಕೆ ಕರೆತಂದು ಬಿಟ್ಟು ಮನೆಗೆ ತೆರಳಿ ಭೋಜನಾದಿಗಳನ್ನು ಪೂರೈಸಿ ವಿಶ್ರಾಂತಿಪಡೆದರು. 

ಶ್ರೀಶಾಲಿವಾಹನಶಕೆ ೧೫೩೬ ನೇ ಆನಂದನಾಮ ಸಂವತ್ಸರದ ಚೈತ್ರ ಶುಕ್ಲ ಪಂಚಮೀ ದಿವಸ (ಕ್ರಿ.ಶ. ೧೬೧೪ ನೇ ಏಪ್ರಿಲ್) ವಧುವಿನ ಕಡೆಯವರು ಬಿಸಿನೀರನ್ನು ಬೆಳ್ಳಿಯ ಕೊಡ ತಂಬಿಗೆಗಳಲ್ಲಿ ತುಂಬಿ ವಾದ್ಯದೊಡನೆ ಬಂದು ಮುಖಮಾರ್ಜನೆಗಾಗಿ ಕೊಟ್ಟು ಉಪಚರಿಸಿಹೋದರು. ಅನಂತರ ವಧೂವರರ ಮನೆಯವರು ಎಣ್ಣೆಶಾಸ್ತ್ರಆರತಿ, ಸುರುಗೆಯೆರತ ಕದಲಾರತಿ ಸಂಪ್ರದಾಯಗಳಾದಮೇಲೆ ಪುಣ್ಯಾಹ ಕುಲದೇವತಾಪೂಜೆ, ಅಷ್ಟವರ್ಗಾದಿಗಳನ್ನು ನೆರವೇರಿಸಿದರು. ವಾಸುದೇವಾಚಾರರು ದೇವತಾಪೂಜೆ, ಅಷ್ಟವರ್ಗಾದಿಗಳನ್ನು ನೆರವೇರಿಸಿದರು. ವಾಸುದೇವಾಚಾರರು ವಾದಘೋಷದೊಡನೆ ಸೋಪಸ್ಕರಗಳನ್ನು ತಂದು ವರನಿಗೆ ಒಪ್ಪಿಸಿದರು. ಪುರೋಹಿತರು ಸೋಪಸ್ಕರವನ್ನು ಅಂದರೆ ಕನ್ನಡಿ, ಬಾಸಿಂಗ, ಪಾದರಕ್ಷೆ, ಛತ್ರಿ, ದಂಡ, ದೀಕ್ಷಾವಸ್ತಗಳನ್ನು ವೇಂಕಟನಾಥನಿಗೆ ಮಂತ್ರೋಚ್ಚಾರಣಪೂರ್ವಕವಾಗಿ ತೊಡಿಸಿ, ಶೃಂಗರಿಸಿ, ಪಿಷ್ಟಕೋಡಬಳೆಗಳನ್ನು ಕಿವಿಗಳಿಗೆ ಧಾರಣಮಾಡಿಸಿ ಕಾಶೀಯಾತ್ರೆಗೆ ಹೊರಡಿಸಿದರು. ವಧುವಿನ ತಂದೆ-ತಾಯಿಗಳು ಮಾರ್ಗದಲ್ಲಿ ವರನನ್ನು ಸಂಧಿಸಿ ಪಾದಪೂಜೆ ಮಾಡಿದರು. ವರ ಕಾಶೀಯಾತ್ರೆಗೆ ಅಪ್ಪಣೆ ಬೇಡಿದಾಗ ಕನೈಯ ತಂದೆಯು “ಸ್ವಧರ್ಮಣೀಂ ರೂಪವತೀಂ ತವ ಚಿತ್ತಾನುವರ್ತಿನೀಂ | ದಾಸ್ಯಾಮಿ ಮಮ ಕನ್ಯಾಂ ತೇ ಗ್ರಹೀಭೂತ್ವಾ ಸುಖೀಭವ' ಸ್ವಧರ್ಮನಿರತಳೂ, ರೂಪವತಿಯೂ ನಿನ್ನ ಚಿತ್ತಾನುಸಾರಿಣಿಯೂ ಆದ ನನ್ನ ಪತ್ರಿಯನ್ನು ನೀಡುತ್ತೇನೆ. ಗೃಹಸ್ಥನಾಗಿ ಬಾಳು-ಎಂದು ಹೇಳಿ ವರನನ್ನು ಬೀಗರನ್ನು ಲಗ್ನಮಂಟಪಕ್ಕೆ ಕರೆತಂದರು. 

ಆ ವೇಳೆಗೆ ತವರುಮನೆಯ ಪರವಾಗಿ ವಧುವಿನ ತಾಯಿಯು ಗೌರೀ-ಲಕ್ಷ್ಮೀ-ಸರಸ್ವತಿಯರ ಚಿತ್ರಗಳನ್ನು ಪೀಠದಲ್ಲಿಟ್ಟು ಅಲಂಕರಿಸಿ. ಸರಸ್ವತಿಯನ್ನು ಬಿಳಿಯ ರೇಷ್ಮೆ ಪತ್ತಲದಿಂದಲಂಕರಿಸಿ ಅವಳಿಂದ ಗೌರೀ ಪೂಜೆ ಮಾಡಿಸಿದರು. 

ವಾಸುದೇವಾಚಾರ್ಯರು ವರನಿಗೆ ಮಧುಪರ್ಕನೀಡಿದ ಮೇಲೆ ವರನು ಕನ್ಯಾನಿಶ್ಚಯಕ್ಕೆ ವರಣಕೊಟ್ಟು ಮಂತ್ರಜ್ಞರನ್ನು ವಧುವನ್ನು ಕರತರಲು ಕಳಿಸಿದನು. ಗೌರೀ ಪೂಜೆಯಲ್ಲಿದ್ದ ವಧುವನ್ನು ಕರತಂದು ಲಗ್ನಮಂಟಪದ ಬೇರೊಂದು ಭಾಗದಲ್ಲಿ ಕೂಡಿಸಿ, ನಿಶ್ಚಿತಾರ್ಥಕ್ಕಾಗಿ, ಬೃಹಸ್ಪತಿ, ಶಚೀಂದ್ರಾಣಿ ಮುಂತಾದ ನಿಶ್ಚಿತಾರ ದೇವತಾ ಪೂಜೆ ಮಾಡಿ ಕನ್ಯಾಕಡೆಯ ಕುಲವೃದ್ಧರು ಹೀಗೆ ಪ್ರವರೋಚ್ಚಾರಮಾಡಿದರು. 

“ಆಂಗಿರಸ ಭಾರ್ಹಸ್ಪತ್ಯ ಭಾರದ್ವಾಜ ತ್ರಯಾರ್ಷೇಯಪ್ರವರಾನ್ವಿತ ಭಾರದ್ವಾಜಸಗೋತ್ರೋದ್ಭವಸ್ಯ ಪುರುಷೋತ್ತಮಾಚಾರಶರ್ಮಣಃ ಪ್ರಪೌತ್ರೀಂ, ನಾರಾಯಣಾಚಾರ್ಯಶರ್ಮಣಃ ಪೌತ್ರೀಂ ವಾಸುದೇವಾಚಾರ್ಯಶರ್ಮಣಃ ಪುತ್ರೀಂ.... ಭಾರದ್ವಾಜ ಗೋತ್ರೋದ್ಭವಾಂ ಸರಸ್ವತೀನಾಂ ಶ್ರೀರೂಪಿಣೀಂ ಕನ್ಯಾಂ” ಎಂದುಚ್ಚರಿಸಿದ ಮೇಲೆ ವರನಕಡೆಯ ಕುಲವೃದ್ಧರು ಗಂಭೀರ ಧ್ವನಿಯಲ್ಲಿ ಆಂಗೀರಸ ಆಯಾಸ್ಕ ಗೌತಮ್ ತ್ರಯಾರ್ಷೇಯ ಪ್ರವರಾನ್ವಿತ ಗೌತಮ್‌ಸಗೋತ್ರೋದ್ಭವಸ್ಯ ಕೃಷ್ಣಾಚಾರಶರ್ಮಣಃ ಪ್ರಪೌತ್ರಾಯ, ಕನಕಾಚಲಾಚಾರ ಶರ್ಮಣಃ ಪೌತ್ರಾಯ.... ತಿಮ್ಮಣ್ಣಾಚಾರಶರ್ಮಣೇ ಲಕ್ಷ್ಮೀನಾರಾಯಣರೂಪಿಣೇ ವರಾಯ” ಎಂದುಚ್ಚರಿಸಿದ ಮೇಲೆ ವಧುವಿನ ತಂದೆ “ಪ್ರಜಾಸಹತಕರ್ಮಭ್ಯಃ ದಾಸ್ಯಾಮಿ ವೃಣೀದ್ದಂ” ಎನಲು ವರನಕಡೆಯವರು “ಭವದೀಯಾಂ ಕನ್ಯಾಂ ಪ್ರಜಾಸಹತಕರ್ಮಭಃ ವೃಣೀಮಹೇ” ಎಂದು ಗಟ್ಟಿಯಾಗಿ ಘೋಷಿಸಿದರು. ಹೀಗೆ ಮೂರುಬಾರಿ ಹೇಳಿದಮೇಲೆ ವರನ ಮನೆಯವರು ಕನ್ಯಗೆ ಆರತಿ ಮಾಡಿ ಕಳಿಸಿದರು. ಸರಸ್ವತಿಯು ಮತ್ತೆ ದೇವಗೃಹದಲ್ಲಿ ಗೌರೀಪೂಜಾಸಕ್ತಳಾದಳು. 

ಆನಂತರ ವೆಂಕಟನಾಥ, ಕಳಶಗಿತ್ತಿ, ಅಣ್ಣ-ಅತ್ತಿಗೆಯರು ಹಸೆಮಣೆಯ ಮೇಲೆ ಪೂರ್ವಾಭಿಮುಖಿಯಾಗಿ ನಿಂತಾಗ ಬಾಂಧವರು ಅಂತಃಪಟವನ್ನು ಹಿಡಿದರು. ಕನ್ನೆಯ ಸೋದರಮಾವ ವಧುವನ್ನು ಕರೆತಂದು ಪಶ್ಚಿಮಾಭಿಮುಖವಾಗಿ ನಿಲ್ಲಿಸಿದರು. ಪುರೋಹಿತರು ಕೊಟ್ಟ ಜೀರಿಗೆ ಬೆಲ್ಲವನ್ನು ವಧೂವರರು ಕರದಲ್ಲಿ ಹಿಡಿದು ನಿಂತರು. ಆಗ ವಿಪ್ರರು-ಪುರೋಹಿತರು “ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲಭೂಃ ಸೂನು” ಇತ್ಯಾದಿ ಮಂಗಳಾಷ್ಟಕ” ವನ್ನು ಸಂಪ್ರದಾಯದಂತೆ ಹೇಳಲಾರಂಭಿಸಿದರು. 

ಶ್ರೀಬ್ರಹ್ಮಾದಿ ಸಮಸ್ತನಿರ್ಝರಗಣೈಸಂವಂದಪಾದಾಂಬುಜಃ 

ಸೃಷ್ಟಾ ದೃಷ್ಟಕಮಾತನೋತಿ ಜಗತಾಂ ಯೋ ವೈ ಸದಾ ಶಾಶ್ವತಃ | ಭಕ್ತಾಭೀಷ್ಟ ಧುರಂಧರೋಯಮತು ದೈತ್ಯಭಪಂಚಾನನಃ ತಂ ವಂದೇ ಸಕಲೋರುಸದ್ಗುಣನಿಧಿಃ ಕುರಾನ್ಹದಾಮಂಗಲಮ್ || ಶ್ಲಾಘಃ ಶ್ರೀಕರಿಕೋಣಪತ್ತನವರೇ325 ಶ್ರೀಕೃಷ್ಣರಾಜ್ಯ ಸಭಾ- 

ಮಧ್ಯೆ ವ್ಯಾಸಮುನೀಶ್ವರೋ 

ಮುದಯುತಃ ಸಂಬಂಧಸಿಂಧ ಸತಾಮ್ | 

ಶ್ರೀಮತ್ಥಾಷಿಕದುಗ್ಧಸಿಂಧುಮಥನಂ ಕೃತ್ವಾತು ನಾಮಾನಸೌ 

ಗೋತ್ರಂ ವಿಸ್ಕೃತರ್ವಾ ಕ್ರಮೇಣ ಗುರುರಾಟ್ ಕುರ್ವಂತು ನೋಮಂಗಲಮ್ ||

ಶ್ರೀಮದೌತಮಗೋತ್ರಜಾಶ್ಚ ಬರಗೀ ಸರೀಗ ಮುದ್ರಾಭಿದಾ ವೇದಾಂತಪ್ರತಿಪಾದಿತಾಃ ಪ್ರನಗನಲ್ಲೂರುಸ್ಥ ಸಂಶೋಭಿತಾಃ | ಊದೀಬೊಕ್ಕಸಜಾನಶಾಲತಿರಡೀಧೀರಾಶ್ಚ ಕಂತೂರುಜಾಃ 

ಭಾಸ್ವಂತೋ ಜಮದಗ್ನಿ ಗೋತ್ರತಿಲಕಾಃ ಕುರ್ವಂತು ನೋ ಮಂಗಲಮ್ | 

ವಿಷರ್ಧಾನಪರಾಯಣಾಶುಭತಮಾ ಸಂಪ್ರಾಪ್ತ ಸಂಪದ್ಗಣಾಃ 

ಪ್ರಜ್ಞಾ ಶೀಲದಯಾದಿ ಧರ್ಮನಿಪುಣಾ ನಿತ್ಯಾನ್ನದಾನೋತ್ಸುಕಾಃ | ಭಾಸ್ವತೀರ್ತಿವಿಭೂಷಣಾಶುಭಗುಣಾ ನಿತ್ಯಾರ್ಥಿಸಂತೋಷಣಾಃ 

ಧೀರಾಃ ಪಾಷ್ಟಿಕವಂಶಪಾವನಕರಾಃ ಕುರ್ವಂತು ನೋ ಮಂಗಲಮ್ ” 

“ಸುಮೂಹರ್ತ ಸಾವಧಾನ, ಸುಲಗ್ನ ಸಾವಧಾನ, ಲಕ್ಷ್ಮೀನಾರಾಯಣ ಧ್ಯಾನೇ ಸಾವಧಾನ” ಎಂದು ಹೇಳಿದರು. ಆಗ ಮೌಹೂರ್ತಿಕರು ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದಬಲಂ ತದೇವ ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಂಘ್ರಯುಗಂ ಸ್ಮರಾಮಿ” ಎಂದು ಪ್ರಾರ್ಥಿಸುತ್ತಿರುವಾಗ ಅಂತಃಪಟವನ್ನು ಸರಿಸಿದರು. ವಧೂವರರು ಪರಸ್ಪರ ಶಿರಸ್ಸಿನ ಮೇಲೆ ಜೀರಿಗೆ ಬೆಲ್ಲಗಳನ್ನು ಹಾಕಿದರು. ಬ್ರಾಹ್ಮಣವೃಂದದವರು ವಧೂವರರಿಗೆ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ಆನಂತರ ವಧೂವರರು ಒಬ್ಬರನ್ನೊಬ್ಬರು ಅವಲೋಕಿಸಿದರು. 

ಹೀಗೆ ವೆಂಕಟನಾಥ-ಸರಸ್ವತಿಯರು ಪರಸ್ಪರ ಮುಖಾವಲೋಕನ ಮಾಡುತ್ತಿರುವಾಗ ವೇಂಕಟನಾಥರು, ತಮ್ಮ ವದನಚಂದ್ರನ ದರ್ಶನದಿಂದ ಸರಸ್ವತಿಯ ಮುಖಕಮಲವು ನಾಚಿಕೆಯಿಂದ ಸಂಕುಚಿತವಾದುದನ್ನು ಗಮನಿಸಿದರು, ಆಗ ಸರಸ್ವತಿಯು ಪತಿಮುಖ ಚಂದ್ರದರ್ಶನದಿಂದ ಅರಳಿ ನಗುತ್ತಿರುವ ತನ್ನ ನೈದಿಲೆಯಂತಹ ಎರಡು ನೇತ್ರಗಳಿಂದ ಪತಿಯ ಮುಖಚಂದ್ರನನ್ನು ಅವಲೋಕಿಸಿದಳು. ಆಗ ವೇಂಕಟನಾಥರು “ಅಭ್ರಾತೃಜ್ಞಂ” ಎಂಬ ಮಂತ್ರ, “ಅಘೋರಚಕ್ಷು” ಎಂಬ ಮಂತ್ರಗಳಿಂದ “ತಮ್ಮ ಪತ್ನಿಯು ಪತಿರಕ್ಷಕಳೂ, ಪುತ್ರರಕ್ಷಕಳೂ ಆಗಿ ಕಾಂತಿಯುಕ್ತಳಾಗಿ ಬೆಳಗಲಿ, ಶಾಂತಮನಸ್ಕಳೂ ಮಂಗಳಪ್ರದಳೂ ಆಗಿ ದೀರ್ಘಾಯುಗಳಾದ ಪುತ್ರರನ್ನು ಪಡೆದು ದೈವಭಕ್ತಿಯುಕ್ತಳಾಗಿ, ಮನೆಯ ಜನರಿಗೂ ಸಂಪತ್ತಿಗೂ ಮಂಗಳವನ್ನುಂಟುಮಾಡುತ್ತಾ ಅಭಿವೃದ್ಧಿಸಲಿ” ಎಂದು ಪ್ರಾರ್ಥಿಸಿದರು. 

ತರುವಾಯ ವಾಸುದೇವಾಚಾರ್ಯರು ಕನ್ಯಾದಾನ ಮಾಡಲು ಗುರುಹಿರಿಯರ ಅಪ್ಪಣೆ ಬೇಡಿ ಪುರೋಹಿತರಿಂದ ಮಹಾಸಂಕಲ್ಪ ಹೇಳಿಸಿ ಸಾಲಂಕೃತಳಾದ ಪುತ್ರಿಯನ್ನು ಪೂರ್ವಾಭಿಮುಖವಾಗಿಯೂ ವೇಂಕಟನಾಥನನ್ನು ಪಶ್ಚಿಮಾಭಿಮುಖ- ವಾಗಿಯೂ ನಿಲ್ಲಿಸಿ ವರನ ಕರದಲ್ಲಿ ವಧುವಿನ ಕರವಿಟ್ಟು ಪೂರ್ಣಫಲ ಶಾಲಿಗ್ರಾಮ ಸಂಪುಟ, ದಕ್ಷಿಣೆ ತುಳಸೀದಳಗಳನ್ನಿರಿಸಿ ವಧುವಿನ ತಾಯಿಯು ಉದ್ಧರಣೆಯಿಂದ ಪವಿತ್ರಜಲವನ್ನು ಹಾಕುತ್ತಿರುವಾಗ “ಕನ್ಯಾಂ ಕನಕಸಂಪನ್ನಾಂ” ಇತ್ಯಾದಿಯಾಗಿ ಹೇಳಿ ಪ್ರವರೋಚ್ಚಾರಪೂರ್ವಕವಾಗಿ ಸಾಲಂಕೃತ ಕನ್ಯಾದಾನ ಮಾಡಿದರು.327 

ಆಗ ವರನಿಗೆ “ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಿತಾತವೇಯಂ” ಅಂದರೆ ನೀವೆಸಗುವ ಧರ್ಮಕಾರಗಳಲ್ಲಿ, ಸಿರಿಸಂಪತ್ತುಗಳ ಉಪಯೋಗದಲ್ಲಿ, ಪ್ರೇಮ ಭೋಗಾದಿಗಳಲ್ಲಿ ನಿಮಗೆ ಸಮಭಾಗಿನಿಯಾಗಿರುವ ಇವಳನ್ನೂ ಮೀರಿ ನಡೆಯಬಾರದು. ಎಂದು ಹೇಳಿದರು. ವೆಂಕಟನಾಥರು ನಾತಿಚರಾಮಿ” ಎಂದು ಅದರಂತೆ ಪ್ರತಿಜ್ಞೆ ಮಾಡಿದರು. ಆಗ ವಾಸುದೇವಾಚಾರರು ಅಳಿಯನಿಗೆ ಹೆಚ್ಚಾಗಿ ಗೋವು, ಭೂಮಿ ಬೆಳ್ಳಿ ಬಂಗಾರಾದಿ ಆಭರಣಗಳು, ಧನ-ವಸ್ತ್ರ-ಭೂಷಣಾದಿಗಳನ್ನು ಕೊಟ್ಟರು. 

ಆನಂತರ ವೇಂಕಟನಾಥರು “ಉದ್ವಾಹಕರ್ಮ ಕರಿಷ್ಟೇ” ಎಂದು ಸಂಕಲ್ಪ ಮಾಡಿ ಯಾಜುಕ್ರಮದಂತೆ ಸರಸ್ವತಿಯ ಶಿರದಮೇಲೆ ದರ್ಭೆಯ ಸಿಂಬೆಯಿಟ್ಟು ಅದರಮೇಲೆ ಗಾಡಿಯ ನೊಗವನ್ನಿಟ್ಟು ನೊಗದ ರಂಧ್ರದಮೇಲೆ ಹಿರಣ್ಯವನ್ನಿಟ್ಟು ವೇದಮಂತ್ರಗಳಿಂದ ಪ್ರೋಕ್ಷಣಮಾಡಿ ನಂತರ “ಪರಿತ್ವಾ ಗಿರ್ವ ಗಿರಃ” ಎಂಬ ಮಂತ್ರ ಹೇಳಿ ಸರಸ್ವತಿಯ ಭುಜದ ಮೇಲೆ ಪೀತಾಂಬರವನ್ನು ಮೇಲುಹೊದ್ದಿಕೆಯಾಗಿ ಹೊದ್ದಿಸಿ ಸಂಬಂಧಮಾಲೆ ಹಾಕಿದರು. ತರುವಾಯ ಮಾಂಗಲ್ಯ ಕಂಕಣ ಆಭರಣಗಳನ್ನು ಪೂಜಿಸಿ, ವೃದಬ್ರಾಹ್ಮಣಸುವಾಸಿನಿಯರಿಂದ, ಬಾಂಧವರಿಂದ ಸ್ಪರ್ಶಮಾಡಿಸಿ ವಧೂವರರಿಗೆ “ಬ್ರಹಾಮಕ್ಷತ್ರ ನೃತ್‌” ಎಂಬ ಮಂತ್ರದಿಂದ ಕಂಕಣ ಬಂಧನವಾದ ಮೇಲೆ, ಮಂಗಳವಾದ್ಯಗಳು ಮೊಳಗುತ್ತಿರಲು ಪೂರ್ವಾಭಿಮುಖವಾಗಿ ಸರಸ್ವತಿಯನ್ನು ಕೂಡಿಸಿ, ತಾವು ಉತ್ತರಾಭಿಮುಖವಾಗಿ ಕುಳಿತು “ಮಾಂಗಲ್ಯಂ ತಂತುನಾನೇಕ ಮಮ ಜೀವನ ಹೇತುನಾ | ಕಂಠೇ ಬದ್ಲಾಮಿ ಸುಭಗೇ ತ್ವಂ ಜೀವ ಶರದಶತು” ಎಂದು ಹೇಳಿ ವೇಂಕಟನಾಥರು ಸರಸ್ವತಿಯ ಕೊರಳಿಗೆ ಮಂಗಲಸೂತ್ರವನ್ನು ಕಟ್ಟಿ ಅದಕ್ಕೆ ಅರಿಶಿನ-ಕುಂಕುಮ ಹಚ್ಚಿ ಪುಷ್ಪ ಮಂತ್ರಾಕ್ಷತೆಗಳನ್ನರ್ಪಿಸಿದರು. ಬ್ರಾಹ್ಮಣರು ಅಕ್ಷತೆ ಹಾಕಿದರು. ತರುವಾಯ ವರ-ವಧುವಿನ ಹಿರಿಯ ಸುಮಂಗಲೆಯರು-ವೆಂಕಟಾಂಬಾ-ಕಮಲಾದೇವಿ ಹೀಗೆ ಐದುಜನರು ಮಾಂಗಲ್ಯಕ್ಕೆ ಒಂದೊಂದು ಗಂಟುಗಳನ್ನು ಹಾಕಿ ಮಂಗಲದ್ರವ್ಯಹಚ್ಚಿ ಆಶೀರ್ವದಿಸಿದರು. ಆನಂತರ ವರನು ಮೌಂಜೀ ಬಂಧನ ಮಾಡಿದನು. 

ಆ ತರುವಾಯ ಹಿರಿಯ ಸುಮಂಗಲೆಯರು ಹದಿನಾರುವರ್ತಿಗಳ ಆರತಿ, ಕದಲಾರತಿಗಳನ್ನು ಮಾಡಿದರು. ಆನಂತರ ಫಲಪೂಜೆಮಾಡಿ, ಶ್ರೀಮಠಕ್ಕೆ ಗುರುಪೂಜಾ ಸಲ್ಲಿಸಿ ಗಂಧಪುಷ್ಪ-ಫಲತಾಂಬೂಲ ದಕ್ಷಿಣೆಗಳನ್ನರ್ಪಿಸಿದಮೇಲೆ ಸಭಾಪೂಜೆಯಾಗಿ ಸರ್ವರಿಗೂ ಫಲತಾಂಬೂಲ ದಕ್ಷಿಣೆಗಳನ್ನು ನೀಡಿದರು. ಆನಂತರ ಕನ್ಯಾಪಂಚಕ-ವರಪಂಚಕರನ್ನು ಬಿಟ್ಟು ಉಳಿದ ಬ್ರಾಹ್ಮಣ ಸುವಾಸಿನಿಯರು, ಬಂಧುಬಾಂಧವರಿಗೆ ಮೃಷ್ಟಾನ್ನ ಭೋಜನ ಮಾಡಿಸಿ ವಾಸುದೇವಾಚಾರರು ದಕ್ಷಿಣೆ ತಾಂಬೂಲಗಳನ್ನಿತ್ತು ಸಂತೋಷಪಡಿಸಿದರು. 

ಆ ತರುವಾಯ ಸಪ್ತಪದೀ, ವಿವಾಹಾಂಗ ಪ್ರಧಾನ ಹೋಮಗಳಾದ ಮೇಲೆ ವೇಂಕಟನಾಥರು ಪತ್ನಿಯೊಡನೆ ಕುಳಿತು ಲಾಜಾಹೋಮವನ್ನು ನೆರವೇರಿಸಿ ಭಾವಮೈದುನನಿಗೆ ಉಡುಗೊರೆಯನ್ನು ನೀಡಿದರು. ಅನಂತರ ವಾಸುದೇವಾಚಾರರು, ವರ-ವಧು, ಕನ್ಯಾ ವರಪಂಚಕದವರ ಫಲಹಾರವಾಯಿತು. 

ಅಷ್ಟುಹೊತ್ತಿಗೆ ಸಂಧ್ಯಾಕಾಲವಾಯಿತು. ವೇಂಕಟನಾಥರು ಸಾಯಂಸಂಧ್ಯೆಯನ್ನು ಮಾಡಿದಮೇಲೆ, ಅರುಂಧತೀವಸಿಷ್ಠಪೂಜಾ ಮಾಡಿ ಮರದ ಬಾಗಿನ ದಾನಕೊಡಿಸಿ, ವಧುವಿಗೆ ಅರುಂಧತೀ ದರ್ಶನ ಮಾಡಿಸಿ, ಪತ್ನಿಯೊಡನೆಕುಳಿತು ಔಪಾಸನ ಮಾಡಿದರು. 

ಅನಂತರ ವಧೂವರರ ಕಡೆಯ ಬಂಧು-ಬಾಂಧವ ಹೆಣ್ಣುಮಕ್ಕಳು ಬಂದು ಕುಳಿತ ಮೇಲೆ ವಧುವಿನ ಕಡೆಯ ಓರ್ವ ಸುಮಂಗಲೆಯು ಸರಸ್ವತಿಯಿಂದ ವೇಂಕಟನಾಥರಿಗೆ ಉರುಟಣಿ ಮಾಡಿಸಿದಳು. ನಾಚಿಕೆಯಿಂದ ಮುಖ ಕೆಂಪಾಗಿದ್ದ ಸರಸ್ವತಿಯು ನಾಚುತ್ತಾ, ಬಳುಕುತ್ತಾ ಪತಿಯೆದುರು ನಿಂತು ನಡುಗುವ ಕರಗಳಿಂದ ಅರಿಶಿನ-ಕುಂಕುಮವನ್ನು ಪತಿಯ ಹಣೆಗೆ ಹಚ್ಚಿ ಒಂದು ಒಗಟನ್ನು ಹೇಳಿದಳು. 

ವೇಂಕಟನಾಥರು ವಿದ್ಯೆ ಕಲೆಗಳ ಸಂಗಮ | 

ಬಿಂಕದಿ ಹಣೆಗೆ ಹಚ್ಚುವೆನು ಅರಿಶಿನ ಕುಂಕುಮ || 

ವಗಟನ್ನಾಲಿಸಿ ಎಲ್ಲರೂ ನಸುನಕ್ಕರು, ಹೆಂಗಸರ ನಗುವನ್ನು ಕೇಳಿ ಗಂಡಸರೂ ಬಂದು ಕುಳಿತರು. ಗೋಪಿಕಾಂಬಾದೇವಿ ಮಗಳನ್ನು ಕರೆದು ಹಾಡು ಹೇಳಿಸಿ ಉರುಟಣಿ ಮಾಡಿಸಬೇಕೆಂದು ಹೇಳಲು ಸರಸ್ವತಿಯು ಸಂತೋಷದಿಂದ ತನ್ನ ತುಂಬುಕಂಠದಿಂದ ಸುಸ್ತರವಾಗಿ ಹಾಡುತ್ತಾ ಪತಿಗೆ ಉರುಟಣಿ ಮಾಡಿದಳು.

ಆನಂತರ ವೇಂಕಟನಾಥರು ಸರಸ್ವತಿಯ ಗಲ್ಲಕ್ಕೆ ಅರಿಶಿನಹಚ್ಚಿ, ಹಣೆಗೆ ಕುಂಕುಮವಿಟ್ಟು ಕಂಠಕ್ಕೆ ಸುಗಂಧ ಲೇಪಿಸಿ, ಕೊರಳಿಗೆ ಹಾರಹಾಕಿ, ಸಿರಿಮುಡಿಗೆ ಹೂ ಮುಡಿಸಿ ಸುತ್ತುವೀಳ್ಯವನ್ನು ಕೊಟ್ಟರು. ನೂತನ ವಧೂವರರ ಈ ಉರಟಣಿಯನ್ನು ಎಲ್ಲರೂ ಉತ್ಸಾಹದಿಂದ ನೋಡುತ್ತಾ ಪರಿಹಾಸ್ಯಗೈಯುತ್ತಾ ಮಾತಿನ ಚಾಟಿಗಳಿಂದ ನಲಿಯುತ್ತಿರುವಾಗ ವೆಂಕಟನಾರಾಯಣನು ಚಿಕ್ಕಪ್ಪನ ಕೈಹಿಡಿದು “ಚಿಕ್ಕಪ್ಪಾ, ಚಿಕ್ಕಮ್ಮನ ಹೆಸರನ್ನು ಒಂದು ಪದ್ಯ ರಚಿಸಿ ಹೇಳು” ಎಂದು ಪೀಡಿಸಿದನು. ವೆಂಕಟನಾಥನು ಕೂಡಲೇ ಒಂದು ಪದ್ಯವನ್ನು ರಚಿಸಿ ಮಂದಹಾಸ ಬೀರುತ್ತಾ ಹೇಳಿದನು - 

ಸಂಗೀತ ಸಾಹಿತ್ಯಕಲಾ ಪ್ರಪೂರ್ಣಾ೦ 

ವಿದ್ಯಾವತೀಂ ಮಾನವತೀಂ ಗುಣಾಡ್ಯಾಮ್ | ಸೌಂದರ್ಯಲಾವಣ್ಯವಿಶೋಭಿತಾಂಗೀಂ ಸರಸ್ವತೀಂ ವಿದ್ದಿ ಸತೀಂ ಮದೀಯಾಮ್ | 

“ಸಂಗೀತ, ಸಾಹಿತ್ಯ ಇತರ ಲಲಿತಕಲೆಗಳಲ್ಲಿ ಪರಿಪೂರ್ಣ ಕುಶಲಳಾದ, ವಿದ್ಯಾವತಿಯೂ ಮಾನಮರ್ಯಾದೆಯುಳ್ಳವಳೂ, ಸದ್ಗುಣ ವಿರಾಜಿತಳೂ ಆದ, ರೂಪಲಾವಣ್ಯಗಳಿಂದ ಚೆನ್ನಾಗಿ ಶೋಭಿಸುತ್ತಿರುವ ಈ ಕುಮಾರಿಯನ್ನು ನನ್ನ ಪತ್ನಿಯಾದ ಸರಸ್ವತೀ ಎಂದು ತಿಳಿಸಿ. 

ವೇಂಕಟನಾಥರ ಆಶುಕವಿತೆ, ಸರಸ್ವತಿಯ ವರ್ಣನೆಯ ಬೆಡಗು, ಪದಲಾಲಿತ್ಯಗಳನ್ನು ಆಲಿಸಿ ಸಕಲರೂ ಆನಂದದಿಂದ “ಭಲೆ, ವೆಂಕಟನಾಥ” ಎಂದರು. ಆಗ ಕಮಲಾದೇವಿಯು ಮುಂದೆ ಬಂದು “ಈಗ ಸರಸ್ವತಿಯ ಸರದಿ” ಎಂದಳು. ಮೊದಲೇ ಲಜ್ಜೆಯಿಂದ ಕೆಂಪಾದ ಮುಖವುಳ್ಳ ಸರಸ್ವತಿಯು ಪತಿಯ ವರ್ಣನಾವಿಲಾಸದಿಂದ ರೋಮಾಂಚಿತಳಾಗಿ ತಲೆತಗ್ಗಿಸಿ ಪಾದಾಂಗುಷ್ಟದಿಂದ ನೆಲವನ್ನು ಸವರುತ್ತಾ ನಿಲ್ಲಲು ನಾರಾಯಣನು “ಅತ್ತೆ, ನೀವೂ ಒಂದು ಪದ್ಯರಚಿಸಿ ಹೇಳಿ” ಎಂದು ಹಟವನ್ನು ಮಾಡಿದನು. ವೆಂಕಟಾಂಬೆಯು ನಾದಿನಿಯನ್ನು ಕೆಣಕಲು “ಪಾಪ, ಅವಳನ್ನೇಕೆ ಪೀಡಿಸುವೆಯೋ ? ಪದ್ಯರಚಿಸಲು ಅವಳಿಗೆ ಬರುವುದೋ ಇಲ್ಲವೋ !” ಎನಲು ವಧುಬಂಧುವಾದ ತರುಣಿಯೋರ್ವಳು “ಅದೇಕಮ್ಮ ಬರಲ್ಲ ? ನಮ್ಮ ಸರಸ್ವತಿ ಸಾಕ್ಷಾತ್ ಸರಸ್ವತಿಯೇ ಆಗಿದ್ದಾಳೆ” ಎಂದಳು. ಆಗ ಗುರುರಾಜಾಚಾರರು ಹಸನ್ಮುಖದಿಂದ ನನ್ನ ತಮ್ಮ ಸರಸ್ವತಿಯ ಗಂಡ”! ಎನಲು ಎಲ್ಲರೂ ನಕ್ಕರು. ವೆಂಕಟನಾರಾಯಣ “ಹೋಗಲಿ. ನಮ್ಮ ಚಿಕ್ಕಪ್ಪನ ಹೆಸರು ಬರುವಂತೆ ಒಂದು ಹಾಡು ಹೇಳಿಸಿಬಿಡಿ ಸಾಕು” ಎಂದನು.

ಆಗ ಸರಸ್ವತಿಯ ಮುಗುಳುನಗೆಯಿಂದ ಪತಿಯಮುಖವನ್ನು ಓರೆಗಣ್ಣಿನಿಂದ ನೋಡುತ್ತಾ, ಸ್ವಲ್ಪ ಧೈರ್ಯವಹಿಸಿ ಹಿಂದೋಳರಾಗ ಆದಿತಾಳದಲ್ಲಿ ಒಂದು ಕೃತಿ ರಚಿಸಿ - 

ಷಾಷ್ಟಿಕಕುಲ ಭೂಷಣರೀ ಪೂಜ್ಯರು | 

ಷಟ್ ಶಾಸ್ತ್ರಗಳೊಳು ಪರಿಣತರು 

ಸೃಷ್ಟಿಶನಿವರಿಗೆ ಒಲಿದಿಹನಮ್ಮಾ | ಎಷ್ಟು ಬಣ್ಣಿಪೆ ಎನ್ನಿನಯರ ಗುಣಗಳ 

ಸಕಲಕಲಾವಲ್ಲಭರಿವರಮ್ಮಾ | ನಿಖಿಲಸುಧೀಜನಮಾನಿತರಮ್ || ವೆಂಕಟಾಚಲಪತಿ ವರಜಾತರಮ್ಮಾ | ವೆಂಕಟನಾಥರೆನ್ನ ಪ್ರಾಣವಲ್ಲಭರಮ್ಮ 

ಎಂದು ಹಾಡಿ ನಾಚಿಕೆಯಿಂದ ಕರಗಳಿಂದ ಮುಖಮುಚ್ಚಿ ನಿಂತಳು.

ವೇಂಕಟನಾಥರ ಪಾಂಡಿತ್ಯ-ಸದ್ಗುಣಗಳನ್ನು ಸುಂದರವಾಗಿ ನಿರೂಪಿಸಿ ಹಾಡಿದ ಸರಸ್ವತಿಯನ್ನು “ಭಲೇ, ಭೇಷ್” ಎಂದು ಎಲ್ಲರೂ ಶ್ಲಾಘಿಸಿದರು. ವೇಂಕಟನಾಥನ ಮುಖದಲ್ಲಿ ಮುಗುಳುನಗೆ ಪಲ್ಲವಿಸಿತು. 

ವಧುವಿನ ತಾಯಿಯು ಮುತ್ತಿನ ಚೆಂಡು, ಹೂವಿನ ಚೆಂಡುಗಳನ್ನು ಮಗಳಕೈಗೆ ಕೊಟ್ಟು “ಸರಸ, ಒಂದು ಹಾಡು ಕೇಳಿ ಚೆಂಡಾಟ ಆಡಮ್ಮ” ಎಂದು ಹೇಳಿದಾಗ ವಧೂವರರು ಎದುರುಬದರು ಕುಳಿತು ಚಂಡಾಟವಾಡಿದರು. ಆಗ ಕಮಲಾದೇವಿ “ಸರಸ್ವತಿ ಇನ್ನೊಂದು ಒಗಟು ಹೇಳಿಬಿಡಮ್ಮ ಸಾಕು” ಎಂದಳು. ಸರಸ್ವತಿಯು- 

“ಲೋಕದೊಳು ಇರಬಹುದು ಪಂಡಿತರು ಕೋಟಿ | 

ವೇಂಕಟನಾಥರಿಗೆ ಧರೆಯೊಳಾರಿಹರು ಸಾಟಿ? ” 

ಎಂದು ಹೇಳಲು ಲಕ್ಷ್ಮೀನರಸಿಂಹಾಚಾರರು “ನಿಜ, ತಾಯಿ, ನಮ್ಮ ವೆಂಕಟನಾಥನಿಗೆ ಯಾರೂ ಸಾಟಿಯಲ್ಲ” ಎಂದರು. ನಂತರ ಸರಸ್ವತಿಯು ಪತಿಗೆ ಆರತಿಮಾಡಿದಳು. ತರುವಾಯ ವಧೂವರರನ್ನು ಕೂಡಿಸಿ ಹಿರಿಯ ಮುತ್ತೈದೆಯರು ಆರತಿಮಾಡಿದರು. ಭೂಸುರರು ಆಶೀರ್ವಾದಮಾಡಿ ಮಂತ್ರಾಕ್ಷತೆ ಹಾಕಿದರು. 

ಅದಾದ ಮೇಲೆ ಅಲಂಕೃತ ಉಂಜಲಿನಲ್ಲಿ ವಧೂವರರನ್ನು ಕೂಡಿಸಿ ಪಾಕಿನೀ ಸಮಾರಂಭವಾಯಿತು. ಆಗ ವಿದ್ವಜ್ಜನರು, ವೇದವಿದ್ಯಾವಿಶಾರದರು. ಪ್ರೋತ್ರಿಯರು - 

“ಬಾಲಾವೇತಾವಾಪ್ಪುತಾಂ ದೀರ್ಘಮಾಯುಃ | 

ನಿತ್ಯಾಂ ಪ್ರೀತಿಂ ಚಾಪ್ಪಪುತ್ರಾನ್ ಗುಣಾಡ್ಯಾನ್ || ಶಸ್ತಂ ವಿತ್ತಂ ಸಂತತಿಂ ಶೋಭಮಾನಾಂ | ಸೌಖ್ಯಂ ಧನ ಧಾನ್ಯಭೂಗೋಸಮೃದ್ಧಿಮ್ || 

ಇಂದ್ರಾಣಿ ಬಲಿಪುವೈರಿಣೀವ, ವಾಣೀ 

ಲೋಕೇಶ, ಕಲಶಪಯೋಧಿ ಕನ್ಯಕೇವ | ಗೋವಿಂದೇ ಗರಲಗಲೇ ಗಿರೀಂದ್ರಕನ್ಯಾ ಕನ್ಯಾಸಾಯಿತಮನಪ್ರಹರ್ಷಣೀಯಮ್ 

“ತಾರುಣ್ಯದಲ್ಲಿ ಪದಾರ್ಪಣಮಾಡುತ್ತಿರುವ ಈ ವಧೂವರರು ದೀರ್ಘಾಯುಷ್ಯ, ಶಾಶ್ವತಪ್ರೀತಿ, ಗುಣವಂತರಾದ ಅಷ್ಟಪುತ್ರರು, ಶ್ರೇಷ್ಠಸಂಪತ್ತು, ಕಂಗೊಳಿಸುವ ಸಂತತಿ ಪರಂಪರೆ, ಸೌಖ್ಯ, ಭೂಮಿ, ಧ್ಯಾನ, ಗೋಸಮೃದ್ದಿಗಳನ್ನು ಧನ್ಯರಾದ ಇವರು ಪಡೆಯಲಿ ! ಗುಣವತಿಯಾದ ಈ ಸರಸ್ವತಿಯು ದೇವೇಂದ್ರನಲ್ಲಿ ಶಚೀದೇವಿಯೂ, ಬ್ರಹ್ಮದೇವರಲ್ಲಿ ಗೀರ್ವಾಣಿಯೂ, ಗೋವಿಂದನಲ್ಲಿ ಲಕ್ಷ್ಮೀದೇವಿಯೂ, ರುದ್ರದೇವರಲ್ಲಿ ಪಾರ್ವತಿದೇವಿಯೂ ಹೇಗೆ ಪತಿಯ ಮನಸ್ಸನ್ನು ಹರ್ಷಗೊಳಿಸುವರೋ ಅದರಂತೆ ಇವಳೂ ಪತಿಯ ಮನಸ್ಸಂತೋಷಪಡಿಸುತ್ತಾರಾಜಿಸಲಿ” ಎಂದು ಆಶೀರ್ವದಿಸಿದರು. 

ಅಂದು ರಾತ್ರಿ ಹರಿಭೂಮ ಪ್ರಯುಕ್ತ ವಧೂವರರು, ಬೀಗರು ಕೂಡುವ ಭೂಮ-ಎಲೆಗಳನ್ನು ರಂಗುರಂಗಿನ ರಂಗವಲ್ಲಿಯಿಂದ ಚಿತ್ತಾಕರ್ಷಕವಾಗಿ ಅಲಂಕರಿಸಿ. ಅನೇಕ ನಾಣ್ಯ ಭಂಗಿಯ ಕಲಾತ್ಮಕಗೊಂಬೆಯ ಮೇಲೆ ಊದುಬತ್ತಿಗಳನ್ನು ಹಚ್ಚಿಟ್ಟು ಸಿದ್ಧಪಡಿಸಿದರು. ದೇವರ ನೇವೇದ್ಯ ಮಂಗಳಾರತಿಗಳಾದ ಮೇಲೆ ಭೂಸುರರಿಗೆ ತೀರ್ಥವನ್ನಿತ್ತು ಭೋಜನಕ್ಕೆ ಕೂಡಿಸಿದಮೇಲೆ ವಾಸುದೇವಾಚಾರರು ಅಳಿಯ-ಬೀಗರ ಪಂಕ್ತಿಗೆ ಬಂದರು. ಆಗ ಬೀಗಿತ್ತಿ ಮತ್ತು ವೆಂಕಟಾಂಬೆಯರು ಭಕ್ಷಭೋಜ್ಯಗಳಿಂದ ತುಂಬಿದ ತಾಂಬಾಣವನ್ನು ತಂದು ವಧೂವರರ ಭೂಮದಲೆಯಮೇಲಿಟ್ಟರು. ವಾಸುದೇವಾಚಾರರು ಬೀಗರು, ಅಳಿಯ-ಮಗಳು ಎಲ್ಲರಿಗೂ ತೀರ್ಥವಿತ್ತು ಕೃಷ್ಣಾರ್ಪಣ ಹೇಳಿ, ಸಾವಕಾಶ ಹೇಳಿಹೋದರು. ವಧೂವರರು ಪರಸ್ಪರ ಭೋಜನಮಾಡಿಸುತ್ತಾ ವಿನೋದದಿಂದ ಎಲ್ಲರನ್ನೂ ಆನಂದಗೊಳಿಸಿದರು. ಆಗ ಪದ್ಧತಿಯಂತೆ ವಧೂವರರ ಕಡೆಯ ಹೆಣ್ಣುಮಕ್ಕಳು ಪೈಪೋಟಿಯಿಂದ ಬೀಗರ ಹಾಡುಗಳನ್ನು ಹೇಳುತ್ತಾ ಭೋಜನಮಾಡಿದರು. ಆ ಆನಂದ-ಸಂಭ್ರಮಗಳು ಅವರ್ಣನೀಯ ! ಹೀಗೆ ಹರಿಭೂಮವು ಯಶಸ್ವಿಯಾಗಿ ಜರುಗಿದಮೇಲೆ ಎಲ್ಲರಿಗೂ ತಾಂಬೂಲ ಪ್ರದಾನವಾಯಿತು. ತರುವಾಯ ವಾಸುದೇವಾಚಾರ ದಂಪತಿಗಳು ಬೀಗರನ್ನು ವಾದ್ಯವೈಭವದಿಂದ ಬಿಡಾರಕ್ಕೆ ಕಳಿಸಿ ಬಂದು ಭೋಜನಮಾಡಿ ವಿಶ್ರಾಂತಿ ಪಡೆದರು. 

ಮರುದಿನ ಸೂರೋದಯವಾದ ಮೇಲೆ ವಧುವಿನ ಬಾಂಧವಸ್ತೀಯರು ಅಂಗಳದಲ್ಲಿ ಸುರಗಿಯೆರತಕ್ಕೆ ಸಿದ್ಧಪಡಿಸಿ ಕಳಶಗಿತ್ತಿಯರು, ವಧೂವರರಿಗೆ ಸುರುಗಿಸ್ನಾನವನ್ನು ಮಾಡಿಸಿ ಆರತಿ ಬೆಳಗಿದರು. ವಧೂವರರು ಪೀತಾಂಬರಧಾರಿಗಳಾಗಿ ಹಸೆಮಣೆಯಲ್ಲಿ ಕುಳಿತಾಗ ವೆಂಕಟನಾಥರು ಸಂಧ್ಯಾ, ಔಪಾಸನಗಳನ್ನು ನೆರವೇರಿಸಿದ ಮೇಲೆ ನಾಕಬಲಿಯ ಮಹೋತ್ಸವ ಜರುಗಿತು. 

ತರುವಾಯ ಹೆಣ್ಣು ಒಪ್ಪಿಸಿಕೊಡುವ ಕಾರ ಜರುಗಿತು. ವೆಂಕಟನಾಥರಿಗೆ ಸರಸ್ವತಿಯನ್ನು ಒಪ್ಪಿಸಿಕೊಡುವಾಗ ಎಲ್ಲರ ಕಣ್ಣಿನಲ್ಲಿಯೂ ನೀರುಹರಿಯಿತು. ಹೆತ್ತು ಸಾಕಿ, ಸಲಹಿ, ದೊಡ್ಡವಳನ್ನಾಗಿ ಮಾಡಿ ಕರುಳಿನ ಕುಡಿಯನ್ನು ಒಪ್ಪಿಸಿಕೊಡುವ ಕಾಲದಲ್ಲಾಗುವ ದುಃಖ, ಸಂಕಟಗಳು ಹೆಣ್ಣು ಹಡೆದವರುಮಾತ್ರ ಅರಿಯಬಲ್ಲರು. ಆ ದೃಶ್ಯ ಎಲ್ಲರನ್ನೂ ತಳವಳಗೊಳಿಸಿ ಕಣ್ಣೀರು ತರಿಸಿದ್ದು ಅಚ್ಚರಿಯೇನಲ್ಲ. 

ತರುವಾಯ, ಮಧ್ಯಾನ್ಹದೇವರನೇವೇದ್ಯ- ತೀರ್ಥಪ್ರಸಾದಗಳಾದಮೇಲೆ ಬ್ರಾಹ್ಮಣ ಸುವಾಸಿನಿಯರಿಗೆ ಮೃಷ್ಟಾನ್ನಭೋಜನ, ವಧೂವರರಿಗೆ ಭೂಮ, ಬೀಗರೂಟಗಳು ಯಶಸ್ವಿಯಾಗಿ ಜರುಗಿದವು. ಆನಂತರ ವಧೂವರರರಿಂದ ಐದು ಜನ ಬ್ರಾಹ್ಮಣ ಸುವಾಸಿನಿಯರಿಗೆ ತಾಂಬೂಲದಾನ ಮಾಡಿಸಿದ ಮೇಲೆ ಸರಸ್ವತಿಯಿಂದ ಪತಿಗೆ ತಾಂಬೂಲಚರ್ವಣ ಮಾಡಿಸಲಾಯಿತು. 

ಸಾಯಂಕಾಲ ವೇಂಕಟನಾಥರು ಸಂಧ್ಯಾ, ಔಪಾಸನಗಳನ್ನು ನೆರವೇರಿಸಿದಮೇಲೆ ವಾಸುದೇವಾಚಾರರ ವಿಶೇಷಕೋರಿಕೆಯಂತೆ ಗುರುರಾಜಾಚಾರರ ಪುತ್ರ ಚಿರಂಜೀವಿ ವೆಂಕಟನಾರಾಯಣನು ಅಮೋಘರೀತಿಯಲ್ಲಿ ಸುಮಾರು ಎರಡು ಘಂಟೆಗಳ ಕಾಲ ಸುಶ್ರಾವ್ಯವಾಗಿ ವೀಣಾವಾದನವನ್ನು ಮಾಡಿ ಸಮಸ್ತರನ್ನೂ ಆನಂದಪಡಿಸಿದನು. ಆ ತರುವಾಯ ಉರುಟಣಿ, ಆರತಕ್ಷತೆ, ಭೂಮ, ಬ್ರಾಹ್ಮಣ-ಸುವಾಸಿನಿಯರ ಭೋಜನಾದಿಗಳಾಗಿ ಸರ್ವರೂ ವಿಶ್ರಾಂತಿ ಪಡೆದರು. 

ಮರುದಿನ ಬೆಳಗಿನಝವ ವಾಸುದೇವಾಚಾರರು ಬೀಗರನ್ನು ವಾದಸಮೇತವಾಗಿ “ಶೇಷಹೋಮ” ಕ್ಕೆ ಅಹ್ವಾನಿಸಿ ಕರತಂದರು. ವೆಂಕಟನಾಥರು ಶೇಷಹೋಮ ಮಾಡಿ ಆನಂತರ ವಿವಾಹ ಹೋಮಗಳನ್ನು ಉಪಸಂಹಾರಮಾಡಿದರು. ಆಗ ವೃದ್ಧ ಸುಮಂಗಲೆಯರು ವಧೂವರರಿಗೆ ಆರತಿಮಾಡಿದರು. ವಿಪ್ರರು ಆಶೀರ್ವದಿಸಿದರು. 

ಅಷ್ಟು ಹೊತ್ತಿಗೆ ವಿವಾಹಗೃಹದ ಮುಂದಿನ ಚಪ್ಪರದಲ್ಲಿ ವಸಂತಮಾಧವಪೂಜೆ ಪ್ರಾರ್ಥನೆ ಮಾಡಿಸಿದ ಮೇಲೆ ಸಾಂಪ್ರದಾಯಿಕವಾಗಿ ವಧೂವರರು, ಕಳಶಗಿತ್ತಿಯರು. ಬೀಗರು, ಬಂಧುಗಳು ವಿನೋದದಿಂದ ಓಕಳಿಯಾಟವನ್ನು ಆಡಿದರು. ವಧೂವರರು ಹಸೆಮಣೆಯನ್ನಲಂಕರಿಸಿದಮೇಲೆ ಪುರೋಹಿತರು “ಕಂಕಣಂ ವಿಮೋಚಯಾಮದ” ಎಂಬ ಮಂತ್ರದಿಂದ ವಧೂವರರ ಕಂಕಣವಿಸರ್ಜನೆಮಾಡಿಸಿ, ಆವಾಹಿತನಾಂದಿ ದೇವತಾದಿ ವಿಸರ್ಜನೆಮಾಡಿಸಿದರು. 

ತರುವಾಯ ಔಪಚಾರಿಕವಾಗಿ ವರನ ಬಿಡಾರದಲ್ಲಿ ಮಂಗಳ ವಾದ್ಯದೊಡನೆ ವಧುವಿನ ಗೃಹಪ್ರವೇಶ, ಲಕ್ಷ್ಮೀಪೂಜಾಶಾಸ್ತ್ರವಾಗಿ ಫಲಪೂಜಾ, ಬ್ರಾಹ್ಮಣ-ಸುವಾಸಿನಿಯರಿಗೆ ಫಲತಾಂಬೂಲದಕ್ಷಿಣಾಪ್ರದಾನಾದಿಗಳಾದವು. ಅಂದು ವರನ ಪರವಾಗಿ ಅಣ್ಣ ಗುರುರಾಜಾಚಾರೈರು ಬೀಗರಿಗೆ “ಮಾವನಪ್ರಸ್ಥ' ಔತಣವನ್ನೇರ್ಪಸಿದರು. ವೇಂಕಟನಾಥರು ಹೀಗೆ ಮೂರುದಿನ ದೀಕ್ಷಾಬದ್ಧರಾಗಿದ್ದು ತಮ್ಮ ಸೌಜನ್ಯಾದಿಗುಣಗಳಿಂದ ಪಂಡಿತಮಂಡಲಿ, ವಿಪ್ರೋತ್ತಮರು, ಬೀಗರುಗಳಿಗೆ ವಿಶೇಷ ಯೋಗ್ಯತಾನುಸಾರ ಉಡುಗೊರೆ ಫಲತಾಂಬೂಲ-ದಕ್ಷಿಣಾದಿಗಳನ್ನಿತ್ತು ಆನಂದಪಡಿಸಿ ಸಕಲರ ಆಶೀರ್ವಾದ ಪಡೆದರು. 

ವೈಭವದಿಂದ ವಿವಾಹಮಹೋತ್ಸವವನ್ನು ನೆರವೇರಿಸಿದ ಮೇಲೆ ಮರುದಿನ ವಾಸುದೇವಾಚಾರರು ಬೀಗರಿಗೆ “ಕಟ'ವನ್ನೇರ್ಪಡಿಸಿ ವೈಭವದಿಂದ ಪರಮಾನಂದಭರಿತರಾಗಿ ವೇಂಕಟನಾಥರು, ಬೀಗರು ಅವರ ಬಂಧುಗಳು, ಹೀಗೆ ಸಮಸ್ತರಿಗೂ ವಿಶೇಷ ಉಡುಗೊರೆಯನ್ನಿತ್ತು, ಸಂತೋಷಪಡಿಸಿದರು. ಅಳಿಯನಿಗೆ ಚಕ್ಕುಲಿ ಗೂಡೆಯ ನಿಟ್ಟು, ಕ್ಷೇಮತುಂಡಲವನ್ನು ಕೊಟ್ಟಾದ ಮೇಲೆ ವಾಸುದೇವಾಚಾರ್ಯ ದಂಪತಿಗಳು ಬೀಗರೊಡನೆ ವರನಮನೆಯಲ್ಲಿ ಗೃಹಪ್ರವೇಶಸಮಾರಂಭವನ್ನು ಪೂರೈಸಿಕೊಂಡು ಬರಲು ತಾವೂ ಹೊರಟು ಎಲ್ಲರೊಡನೆ ವರನ ಊರಿಗೆ ಹೋಗುವ ಮಾರ್ಗದಲ್ಲಿ ಶ್ರೀವಿಜಯೀಂದ್ರ-ಶ್ರೀಸುಧೀಂದ್ರಗುರುಗಳ ದರ್ಶನಪಡೆಯಲು ಕುಂಭಕೋಣನಗರಿಗೆ ಬಂದರು.