Kaliyugada Kalpataru Sri Baahika Rajaru Without His Will, Not Even a Blade of Grass Moves!

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೫. ತೇನ ವಿನಾ ತೃಣಮಪಿ ನ ಚಲತಿ !

ಶ್ರೀಹರಿಯ ಸಂಕಲ್ಪವನ್ನರಿಯಲು ಯಾರಿಂದಲೂ ಸಾದ್ಯವಿಲ್ಲ. 'ತೇನ ವಿನಾ ತೃಣಮಪಿ ನ ಚಲತಿ' ಎಂಬ ಪ್ರಮಾಣದಂತೆ ಭಗವಂತನ ಇಚ್ಛೆಯಂತೆಯೇ ಎಲ್ಲವೂ ಜರುಗುವುದು. ಇದಕ್ಕೆ ಬಾಹ್ಲೀಕರಾಜರರು ಮತ್ತು ಶಂತನು ಚಕ್ರವರ್ತಿಯ ವಂಶೀಕರಾದ ಪಾಂಡವರು-ಕೌರವರು ಉತ್ತಮ ಉದಾಹರಣೆಯಾಗಿದ್ದಾರೆ.

ಪ್ರತೀಪರಾಜನ ಜೇಷುತ್ರ ದೇವಾಪಿಯು ಕುಷ್ಠರೋಗ ಪೀಡಿತನಾಗಿರದಿದ್ದರೆ ಅವನೇ ಬಾಕ ದೇಶಾಧಿಪತಿಗಳಾದ ಪ್ರತೀಪ ಮಹಾರಾಜರಿಗೆ ದತ್ತುಪತ್ರನಾಗಿ ಮಾತಾಮಹನ ರಾಜ್ಯಕ್ಕೆ ಅಧಿಪತಿಯಾಗುತ್ತಿದ್ದ! ಆಗ ಎರಡನೆಯವಾದ ಬಾಹ್ಲೀಕರಾಜರರೇ ಕುರುವಂಶದ ಚಕ್ರವರ್ತಿಗಳಾಗುತ್ತಿದ್ದರು! ವಿಧಿವಿಲಾಸವನ್ನಿಲ್ಲಿ ನಾವು ಕಾಣಬಹುದು. ಶ್ರೀಹರಿಯ ಸಂಕಲ್ಪದಂತೆ ದೇವಾಪಿಯು ಕುಷ್ಠರೋಗ ಪೀಡಿತನಾದ್ದರಿಂದ ಅವನು ಮಾತಾಮಹನ ರಾಜ್ಯಕ್ಕೆ ಅಧಿಪತಿಯಾಗಲಾಗದೆ, ವೈರಾಗ್ಯದಿಂದ ತಪಸ್ಸಿಗೆ ಅರಣ್ಯಕ್ಕೆ ತೆರಳಿದನು. ಎರಡನೆಯ ಪುತ್ರರಾದ ಬಾರೀಕರು ಮಾತಾಮಹನಿಗೆ 'ಪತ್ರಿಕಾಪುತ್ರನ್ಯಾಯ'ದಿಂದ ದತ್ತಕ ಹೋಗಿ ಬಾರೀಕ ದೇಶಾಧಿಪತಿಗಳಾಗಬೇಕಾಯಿತು. ಈ ಒಂದು ಸಂದರ್ಭ ಒದಗಿರದಿದ್ದರೆ ಬಾಹೀಕರೇ ಕುರುವಂಶ ಚಕ್ರವರ್ತಿಗಳಾಗಿ ಮುಂದೆ ಕುರು-ಪಾಂಡವರು ಜನಿಸಿ, ಅವರಲ್ಲಿ ಪರಸ್ಪರ ದ್ವೇಷ ಬೆಳೆದು ಕೊನೆಗೆ ಕುರುಕ್ಷೇತ್ರ ಯುದ್ಧವಾಗಿ ಭೂಭಾರಹರಣವಾಗಲು ಅವಕಾಶವೇ ಇರುತ್ತಿರಲಿಲ್ಲ! ಆದರೆ ಸತ್ಯಸಂಕಲ್ಪನಾದ ಶ್ರೀಹರಿಯು ಭೂಭಾರಹರಣಕ್ಕಾಗಿಯೇ ಅವತರಿಸಬೇಕಾಗಿದ್ದುದರಿಂದ ಆ ಕಾರ್ಯವು ಯಶಸ್ವಿಯಾಗಿ ಜರುಗಲೇಬೇಕಲ್ಲವೇ? ಅಂತೆಯೇ ಕಪಟನಾಟಕಸೂತ್ರಧಾರಿ- ಯಾದ ಆ ಪ್ರಭುವು ಈ ಎಲ್ಲ ಸಂಘಟನೆಗಳು ಘಟಿಸುವಂತೆ ಮಾಡಿ ತನ್ನ ಲೀಲಾವಿಲಾಸವನ್ನು ತೋರಿದನು ಮತ್ತು ಶ್ರೀಹರಿಯ ಸಂಕಲ್ಪದಂತೆಯೇ ಎಲ್ಲವಾ ಜರುಗಿ ಕುರುಕ್ಷೇತ್ರ ಯುದ್ಧದ ಮೂಲಕವಾಗಿ ಭೂಭಾರಹರಣವಾಗಿ, ಧರ್ಮಾತ್ಮರಾದ ಪಾಂಡವರು ಚಕ್ರವರ್ತಿಗಳಾಗಿ, ದುಷ್ಟಶಿಕ್ಷಣ, ಶಿಷ್ಟರಕ್ಷಣ, ಭಗವತ್ತತ್ತಧರ್ಮಪ್ರಸಾರ, ಲೋಕಕಲ್ಯಾಣಾದಿ ಕಾರ್ಯಗಳು ನೆರವೇರುವಂತಾಯಿತು. ಇದೆಲ್ಲಕ್ಕೂ ಶ್ರೀಪರಮಾತ್ಮನ ಸಂಕಲ್ಪವೇ ಕಾರಣವಾಗಿದ್ದು ಶ್ರೀಹರಿಯ ಲೀಲಾವಿಲಾಸಗಳಿಗೆ ದ್ಯೋತಕವಾಗಿದೆಯೆಂದು ತಿಳಿಯಬೇಕು.