
ಮೂರನೆಯ ಉಲ್ಲಾಸ
ಶ್ರೀಬಾಹ್ಲೀಕರಾಜರರು
೬. ಬಾಹ್ಲೀಕರಾಜರರ ಭವ್ಯವ್ಯಕ್ತಿತ್ವ
ಕಥಾನಾಯಕರಾದ ಬಾಫೀಕರಾಜರು ಮಾತಮಹನ ರಾಜ್ಯಕ್ಕೆ ಅಧಿಪತಿಗಳಾಗಿ ಧರ್ಮದಿಂದ ರಾಜ್ಯಭಾರ ಮಾಡಹತ್ತಿದ್ದರು. ಭಾಗವತಾಗ್ರಣಿಗಳಾದ ಪ್ರಹ್ಲಾದರಾಜರ ಅವತಾರರಾದ ಅವರಲ್ಲಿ ಪ್ರಹ್ಲಾದರಾಜರ ಎಲ್ಲ ಗುಣಗಳೂ ವಿರಾಜಿಸಿದ್ದವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ? ಅಂತೆಯೇ ಅವರ ನಡೆ-ನುಡಿ, ಆಚಾರ, ಭಗವದ್ಭಕ್ತಿ, ಪ್ರಜಾಪರಿಪಾಲನೆ, ಸರ್ವಜನನ ಅಭ್ಯುದಯಾಕಾಂಕ್ಷೆಗಳೆಲ್ಲ ಜಗನ್ಮಾನ್ಯವಾಗಿದ್ದವು.
ಶ್ರೀಬಾಹ್ಲೀಕರಾಜರರು ಸತ್ಯ, ಧರ್ಮ, ತಪಸ್ಸು, ಸ್ವಾಧ್ಯಾಯ, ಯಜನ, ಶ್ರೀಹರಿಪಾಜಾ, ಸ್ತುತಿ, ಧ್ಯಾನಸಂಪನ್ನರಾಗಿದ್ದು, ಶಾಂತದಾರ್ಯಾದಿಗುಣಗಳು ಅವರಲ್ಲಿ ರಾರಾಜಿಸಿದ್ದವು. ಪ್ರಶಾಂತರೂ, ಸತ್ಯಸಂಧರೂ, ಶೀಲಸಂಪನ್ನರೂ, ಆದ ಅವರು ಸಂಸಾರವು ಬುಧಕವೆಂದು ಅರಿತಿದ್ದಾರ ಅದರಲ್ಲಿಯೇ ಮುಳುಗಿರದೆ, ಭಗವಂತನನ್ನು ಒಲಿಸಿಕೊಂಡು ಅವನ ಅನುಗ್ರಹ ಸಾವಾದಿಸುವತ್ತಲೇ ಅವು ಮುತ್ತಾ ಹರಿಯುತ್ತಿತ್ತು, ಅವರು ದೇವ-ದ-ಗುರು-ಹಿರಿಯರನ್ನು ಗೌರವದಿಂದ ಕಾಣುತ್ತ ಅವರು ಪಾಜಿಸುತ್ತಿದ್ದರು. ಪ್ರಜರನ್ನು ಸ್ವಂತ ಮಕ್ಕಳಂತೆ ಭಾವಿಸಿ ಅವರ ಕ್ಷೇಮಚಿಂತನೆಯಲ್ಲಿ ಮಗ್ನರಾಗಿ ಪ್ರಚಾರಂಜಕ ರಾಜನೆಂದು ಭಾಗವತಧರ್ಮಾಚರಣೆಯಿಂದ ಅವರು ಆದರ್ಶಸಾಧಕರಾಗಿದ್ದರು. ಶಾಸ್ತ್ರಗಳು ಭಾಗವತಧರ್ಮಗಳನ್ನು ಹೀಗೆ ವಿವರಿಸುವವು ಪರಮಾತ್ಮನೇ ಸರ್ವೋತ್ತಮನೆಂಬ ಬುದಿಯಿಂದ ತದಿತರ ವಿಷಯಗಳಲ್ಲಿ ರತವಾಗದೆ, ಸರ್ವಪ್ರಾಣಿಗಳಲ್ಲಿ ಕಾರ ತೋರುವುದು, ಭಗವಂತನ ಭಕ್ತರೊಡನೆ ಸಂತತ ಸಹವಾಸ, ಬಾಂತರ ಶೌಚಗಳನ್ನಾಚರಿಸುವುದು, ತಿತಿಕ್ಷಾ (ಮುಖ ಉದ್ದೇಗ ಸ) ತಸ್ಸು ಸಂತತ, ಭಗವಂತನ, ಸರ್ವರಗಳೂ ಪರಮ ಮುಖ್ಯವೃತ್ತಿಯಿಂದ ಪಮಾತ್ಮನನ್ನೇ ಬೋಧಿಸುತ್ತವೆಂದು ತಿಳಿಯುವುದು, ಆರ್ದವ, ಬ್ರಹ್ಮಚರ್ಯ, ಅಹಿಂಸಾ, ಸಮತ್ವ, ಭಗವಂತನ ಮಂಗಳರೂಪವನ್ನು ಮನಸಾ ಚಿಂತಿಸುವುದು, ಸತ್ಯ, ಅಭಯ, ಶಮದಮಾದಿಗಳು, ಶ್ರವಣಕೀರ್ತನ-ಸ್ಮರಣ-ಸೇವಾ-ಪೂಜಾ-ನಮನ-ಸ- ದಾಸ್ಯ-ಆತ್ಮ ಸಮರ್ಪಣೆಗಳು ನವವಿಧ ಭಕ್ತಿಸಾರ್ವಕವಾಗಿ ಭಗವಂತನನ್ನು ಸಂತೋಷಪಡಿಸುವುದು - ಇವೆ ಮೂತಾದವು ಶ್ರೀವರಿಗೆ ಅತ್ಯಂತ ಪ್ರಿಯವಾದ ಭಾಗವತಧರ್ಮಗಳೆನಿಸುವುವು. ಒಂದೇ ಮಾತಿನಲ್ಲಿ ಹೇಳುವುದಾದರೆ ನಾನು ಕರ್ತಾರ ಕರ್ತಾ ಎಲ್ಲವನ್ನೂ ಶ್ರೀಹರಿಯೇ ಮಾಡುವನು, ಮಾಡಿಸುವನು ಎಂಬ ದೃಢವಿಶ್ವಾಸದಿಂದ ಅವನ ಪ್ರೀತ್ಯರ್ಥವಾಗಿ ಆಚರಿಸುವ ಕರ್ಮಗಳ ಭಾಗವತ ಧರ್ಮಗಳಾಗಿವೆ.
ಇಂಥಾ ಭಾಗವತಧರ್ಮಾಚರಣೆಯಲ್ಲಿ ನಿಷ್ಠರಾದರಿಂದಲೇ ಭಾಗವತಧರ್ಮ ಪ್ರಸಾರಕರೆಂದು ಬಾಕರು ಜಗತ್ತಿನಲ್ಲಿ ಪ್ರಸಿದ್ಧರಾದರು.
ಹಿಂದೆ ನಿರೂಪಿಸಿದಂತೆ ಭಾಗವತಧರ್ಮ ಪ್ರವರ್ತಕ-ಪ್ರಸಾರಕರಲ್ಲಿ ರಮಾದೇವಿ, ಬ್ರಹ್ಮದೇವರು, ವಾಯುದೇವರು ಪ್ರಮುಖರು, ಭಗವಂತನೆಸಗುವ ಜಗತ್ತ್ವಷ್ಟಾದಿ ವ್ಯಾಪಾರಗಳ ಗುರಿ ಜೀವರ ಉದ್ದಾರ, ವೇದಗಳಲ್ಲಿ ಉಕ್ತವಾಗಿರುವ ಜ್ಞಾನಮಾರ್ಗವನ್ನು ಆಚರಣೆಯಲ್ಲಿ ತಂದು, ಧೈಯ ಸಾಧನೆಯ ಗುರಿಯತ್ತ ಮುಂದುವರೆಯುವುದು ಹೇಗೆಂಬ ಗಹನ ವಿಚಾರವನ್ನು ಜಗತ್ತಿಗೆ ಸಾರಿದವರೆ ಬ್ರಹ್ಮದೇವರು, ಅವರು ಯುಗಯುಗಗಳ ಹಿಂದೆ ಹಚ್ಚಿದ ಜ್ಞಾನದೀವಿಗೆಯು ವಿವಿಧ ಮಾರ್ಗಗಳಲ್ಲಿ ಬೆಳೆದು ನಂದದೆ ಇಂದಿನವರೆಗೂ ಬೆಳಗುತ್ತಲೇ ಬಂದಿದೆ! ಸನಕಾದಿಗಳಿಂದ ಹೊರಟ ಜ್ಞಾನಪರಂಪರೆ ಒ೦ದಾದರೆ, ನಾರದರಿಂದ ಹೊರಟಿದ್ದು ಮತ್ತೊಂದು! ಇವರೆಡಕ್ಕೂ ತಾತ್ವಿಕವಾಗಿ ಭೇದವಿಲ್ಲ. ಎರಡರ ಗುರಿಯೂ ಒಂದೇ! ಈ ಒಂದು ಜ್ಞಾನಪರಂಪರೆಯಲ್ಲಿ ಭಾಗವತಧರ್ಮಪರಂಪರೆಯಲ್ಲಿ ನಮಗೆ ಮೊದಲು ಎದ್ದು ಕಾಣುವ ಪಕ್ಷಿ ಶ್ರೀಪ್ರಹ್ಲಾಮಾಜರು, ಇವರು ನಾರದರ ಮಾರ್ಗದಲ್ಲಿ ಮುಂದುವರೆದವರು, ತುಂಬುರು, ಅರ್ಜುನ, ಉದವ, ಇಂದ್ರ, ಶುಕಾಚಾರ್ಯ ಮೊದಲಾದವರು ಈ ಗುಂಪಿಗೆ ಸೇರಿದವರು.
ಅನೇಕ ಋಷಿ-ಮುನಿಗಳೂ ಜ್ಞಾನಮಾರ್ಗದಲ್ಲಿ ಶ್ರಮಿಸಿ ಉತ್ಕೃತರಾಗಿದ್ದಾರೆ, ಆದರೆ ಅವೆಲ್ಲ ಆತ್ರೋದ್ಧಾರಕ್ಕೆ ಮಾತ್ರ ಸೀಮಿತ. ಜಗತ್ಕಲ್ಯಾಣಾಕಾಂಕ್ಷೆಯಿಂದ ಸ್ವಸುಖವನ್ನು ನಿರ್ಲಕ್ಷಿಸಿ - ನನ್ನೊಬ್ಬನ ಉದಾರವೇ ದೊಡ್ಡವು, ಜಗತ್ಕಲ್ಯಾಣವಾಗಬೇಕು. ಶಾಸ್ತ್ರಜ್ಞಾನವಿಲ್ಲದ, ಏನೂ ತಿಳಿಯದ, ಅಜ್ಞಜನರ ಉದ್ಧಾರವಾಗಬೇಕು. ದೀನದಲಿತ ಜನರ ಕಲ್ಯಾಣವಾಗಬೇಕು. ಈ ಮಾರ್ಗದಲ್ಲಿ ಶ್ರಮಿಸುವುದೇ ಆನಂದ, ಇದೇ ಪರಮಾತ್ಮನ ಸೇವೆ, ಇದೇ ಧ್ಯಾನ, ಇದೇ ತಪಸ್ಸು ಎಂಬ ವಿಶಾಲ ದೃಷ್ಟಿಯಿಂದ ತಮಗೆ ದೊರಕುತ್ತಿದ್ದ ಮೋಕ್ಷವನ್ನೂ ದೂರಮಾಡಿ ಆಶ್ರಿತ ಜನರಿಗಾಗಿ ಪ್ರಾರ್ಥಿಸಿದ ಮಹಾನುಭಾವರು ಪ್ರಹ್ಲಾದರು. ಅವರಲ್ಲಿ ಭಗವಂತನು ಮಾಡಿದ ಅನುಗ್ರಹವಾ ಅಷ್ಟೇ ಅಸಾಧಾರಣ! “ಮದ್ದಕ್ಕಾಾಮನುವ್ರತಾ?', 'ತಾಂ ಚ ಮಾಂ ಚ ಸ್ಮರನ್ ಕಾಲೇ ಕರ್ಮ ಬಂಧಾತ್ಮಮುಚ್ಯತೆ” “ಮಗು, ಪ್ರಹ್ಲಾದ! ನೀನು ನನ್ನವನಾ. ಯಾರು ನಿನ್ನನ್ನು ಅನುಸರಿಸುವರೋ ಅವರೇ ನನ್ನ ಭಕ್ತರಾಗಲು ಅರ್ಹರು! ನಿನ್ನನ್ನು ನಂತರ ನನ್ನನ್ನು ಯಾರು ನಿತ್ಯವಾ ಸ್ಮರಿಸುವರೋ, ಅವರು ಕರ್ಮಬಂಧನದಿಂದ ಬಿಡುಗಡೆ ಹೊಂದಿ ಉದ್ಧತವಾಗುತ್ತಾರೆ!' - ಎಂತಹ ಅಮೃತಸಂದಿಯಾದ, ಅಮೃತಪ್ರದವಾದ ಅಮರವಾಣಿ! ಸಾಕ್ಷಾತ್ ಭಗವಂತನ ಬಾಯಿಂದ ಇಂತಹ ಮಾತು ಬರಬೇಕಾದರೆ, ತನ್ನ ಜೊತೆಯಲ್ಲೇ ಪ್ರಹ್ಲಾದರನ್ನು ಸೇರಿಸಿಕೊಳ್ಳಬೇಕಾದರೆ, ಆ ನಮ್ಮ ಸ್ವಾಮಿಗೆ ಪ್ರಹ್ಲಾದದಲ್ಲಿ ಎಂತಹ ಪ್ರೇಮವಿರಬೇಕು ? ಆ ಕಾರುಣ್ಯವೆಂತಹದು? ಆದ್ದರಿಂದಲೇ ಅವರು ಹರಿಭಕ್ತಾಗ್ರಗಣ್ಯರು, ಭಾಗವತಧರ್ಮ ಪ್ರಸಾರಕರೆಂದು ತ್ರಿಲೋಕಗಳಲ್ಲಿ ಕೀರ್ತಿಯನ್ನು ಗಳಿಸಿದ್ದಾರೆ. ಇಂತು ವಿಖ್ಯಾತರಾದ ಪ್ರಹ್ಲಾದರಾಜರ ಅವತಾರರಾದ ಬಾಹ್ಲೀಕರಾಜರರು ಭಾಗವತಧರ್ಮಾನುಷಾನ ನಿಷ್ಠರಾಗಿ ಶ್ರೀಪರಮಾತ್ಮನನ್ನು ಭಕ್ತಿ-ಶ್ರದ್ಧೆಗಳಿಂದಾರಾಧಿಸುತ್ತಾ, ಶ್ರೀಹರಿಯ ಬಲಕಾರ್ಯದಲ್ಲಿ ಸೇವೆ ಸಲ್ಲಿಸಲು ಆ ಸಮಯವನ್ನು ಪ್ರತೀಕ್ಷಿಸುತ್ತಿದ್ದರು.
ಆದ್ದರಿಂದಲೇ ಬಾಹ್ನಕರಾಜರು ತಾವು ಮಹಾಬಲಶಾಲಿಗಳಾಗಿದ್ದರೂ, ತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಶತ್ರುದಿಗ್ವಿಜಯ, ರಾಜ್ಯವಿಸ್ತಾರಾದಿ ಕೀರ್ತಿಕಾಮನೆಯತ್ತ ಉಪಯೋಗಿಸಲು ಮನವೀಯಲಿಲ್ಲ. ತಮ್ಮ ಮಹಾಬಲವನ್ನು ರಾಜ್ಯದಾಹಕ್ಕಾಗಿ ಉಪಯೋಗಿಸಲಿಲ್ಲ. ಪ್ರಹ್ಲಾದರ ಗುಣವನ್ನಿಲ್ಲಿ ನಾವು ಗುರುತಿಸಬಹುದು.
ಬಾಹೀಕರಾಜನು ಕುಲವೃದ್ಧರ ಅಪೇಕ್ಷೆಯಂತೆ ಗಾರ್ಹಸ್ಥ್ಯ ಧರ್ಮವನ್ನು ಸ್ವೀಕರಿಸಿ ಧರ್ಮದಿಂದ ಕರ್ತವ್ಯಪರರಾಗಿ ಶ್ರೀಹರಿವಾಯುಗಳಲ್ಲಿ ಭಕ್ತಿಮಾಡಿ ಭಗವಂತನ ಏಕಾಂತಭಕ್ತರೆನಿಸಿ ರಾಜ್ಯಪರಿಪಾಲನೆ ಮಾಡಿಕೊಂಡಿದ್ದರು.
ಈ ವೇಳೆಗೆ ಶ್ರೀಹರಿಯು ಯದುವಂಶದ ದೇವಕೀ ವಸುದೇವರಿಗೆ ಪುತ್ರನಾಗಿ ದುಷ್ಟಶಿಕ್ಷಣ-ಶಿಷ್ಟಪರಿಪಾಲನ ಧರ್ಮಸಂಸ್ಥಾಪನೆಗಾಗಿ ಅವತರಿಸಿದ್ದನು. ವಾಯುದೇವರು ಪಾಂಡು-ಕುಂತೀದೇವಿಯರಿಗೆ ವರರೂಪವಾಗಿಯೂ, ಇತರ ದೇವತೆಗಳು ಬೇರೆ ಬೇರೆ ರೂಪದಲ್ಲಿ ಭಗವಂತನ ಬಲಕಾರ್ಯದಲ್ಲಿ ಸೇವೆ ಸಲ್ಲಿಸಲು ಶ್ರೀಹರಿಯ ಆಜ್ಞೆಯಂತೆ ಅವತರಿಸಿದ್ದರು. ಶ್ರೀಹರಿಯು ಕೃಷ್ಣರೂಪದಿಂದವತರಿಸಿ ತನ್ನ ವಿವಿಧ ಬಾಲಲೀಲೆ, ಲೀಲಾವಿಲಾಸ, ಅಸುರ ಸಂಹಾರ ಮಹಾಮಹಿಮಾ ಪ್ರದರ್ಶನ ಮಾಡುತ್ತಾ ಭಾರತಾವನಿಯ ಸಮಸ್ತ ಸಜ್ಜನವೃಂದದ ಕಣ್ಮಣಿಯಾಗಿ ರಾಜಿಸುತ್ತಿದ್ದನು. ಶ್ರೀಕೃಷ್ಣನ ಅದ್ಭುತ ಲೀಲಾವಿಲಾಸ-ಮಹಿಮೆಗಳನ್ನು ಕೇಳಿ ತಿಳಿದು ಬಾಹ್ಯಕರಾಜರು ಪರಮಸಂತುಷ್ಟರಾಗಿ ಆ ಶ್ರೀಕೃಷ್ಣನ ದಿವ್ಯರೂಪವನ್ನೇ ಚಿಂತಿಸುತ್ತಾ, ಧ್ಯಾನಿಸುತ್ತಾ ಕಾಲಕಳೆದರು.
ಇದೇ ಸಂದರ್ಭದಲ್ಲಿ ಬಾಹ್ಲೀಕರಾಜರರಿಗೆ ಭಗವಂತನ ಅನುಗ್ರಹದಿಂದ, 'ಪತ್ರತಾಪ' ಎಂಬ ಹೆಸರಿನ ಏಕಾದಶರುದ್ರರಲ್ಲೊಬ್ಬರಾದವರು ಪುತ್ರರಾಗಿ ಜನಿಸಿದರು. ಆ ಪುತ್ರನಿಗೆ ಬಾರೀಕರು 'ಸೋಮದತ್ತ' ಎಂಬ ನಾಮಕರಣ ಮಾಡಿದರು. ಸೋಮದತ್ತನಿಗೆ ಮುಂದೆ ಭೂರಿ, ಭೂರಿಶ್ರವ, ಶಲ ಎಂಬ ಮೂವರು ಪುತ್ರರಾದರು. ಸೋಮದತ್ತ ಮತ್ತು ಅವನ ಪುತ್ರರು ಮಹಾಬಲಾಡ್ಯರೂ, ಪ್ರತಾಪಿಗಳೂ, ಯಜನಾಧ್ಯಯನಶೀಲರೂ, ಬಲವೀರ್ಯ ಸದ್ಗುಣಯುಕ್ತರೂ ಆಗಿ ಬಾಹ್ಲೀಕರಾಜರರ ಆಜ್ಞಾನುವರ್ತಿಗಳಾಗಿ ಬಾಳಹತ್ತಿದರು.
ಇದೇ ಸಮಯದಲ್ಲಿ ವನವಾಸಿಯಾಗಿದ್ದ ಪಾಂಡುರಾಜನು ದೂರ್ವಾಸರಿಂದ ಸಂಪಾದಿಸಿದ್ದ ವರಪ್ರಭಾವದಿಂದ ಪುತ್ರಸಂತಾನವನ್ನು ದೇವತೆಗಳ ವರದಿಂದ ಪಡೆಯಬಹುದೆಂಬುದನ್ನು ಕುಂತೀದೇವಿಯಿಂದ ತಿಳಿದು ಆನಂದಿಸಿ, ದೇವತಾಮಂತ್ರಾಹ್ವಾನದಿಂದ ಪುತ್ರರನ್ನು ಪಡೆಯುವಂತೆ ಆಜ್ಞಾಪಿಸಿದನು. ಪತಿಯ ಅಪ್ಪಣೆಯಂತೆ ಕುಂತೀದೇವಿಯು, ಯಮಧರ್ಮ, ವಾಯುದೇವ, ಇಂದ್ರ ಇವರ ಅನುಗ್ರಹದಿಂದ ಕ್ರಮವಾಗಿ ಯುಧಿಷ್ಠಿರ (ಧರ್ಮರಾಜ), ಭೀಮಸೇನ, ಅರ್ಜುನ ಎಂಬ ಮೂವರು ದೇವತಾಪುತ್ರರನ್ನು ಪಡೆದಳು. ಪತಿಯ ಇಚ್ಛೆಯಂತೆ ಇನ್ನೊಂದು ಮಂತ್ರವನ್ನು ಕುಂತಿಯು ಮಾಡ್ತೀದೇವಿಗೆ ಉಪದೇಶಿಸಿದಳು. ಅವಳು ಅಶ್ವಿನೀ ದೇವತೆಗಳ ಅನುಗ್ರಹದಿಂದ ನಕುಲ-ಸಹದೇವರೆಂಬ ಅವಳಿ ಸಹೋದರರಾದ ಪುತ್ರರನ್ನು ಪಡೆದಳು. ಪಾಂಡುರಾಜನ ಐದೂ ಜನ ಪುತ್ರರು ತಂದೆ-ತಾಯಿಗಳಿಗೆ ಅನಂದಪ್ರದರಾಗಿ ಪ್ರವರ್ಧಿಸಿದರು. ಒಂದು ದಿನ ಮಾದ್ರಿಯೊಡನಿರುವಾಗ ಋಷಿಶಾಪದಿಂದ ಪಾಂಡುರಾಜನು ಮೃತನಾದನು. ಮಾದ್ರಿದೇವಿಯು ಪತಿಯೊಡನೆ ಸಹಗಮನ ಮಾಡಿದಳು.ಆಗ ಶ್ರೀವೇದವ್ಯಾಸರು ಪಂಚಪಾಂಡವರಿಗೂ ಕುಂತೀದೇವಿಗೂ ಆಶ್ರಯವಿತ್ತು, ಅವನ್ನು ರಕ್ಷಿಸಿ, ಅಭಿವೃದ್ಧರಾದ ಖಂಡವರನ್ನು ಕುಂತೀದೇವಿಯನ್ನೂ ಋಷಿಕುಮಾರರೊಡನೆ ಹಸ್ತಿನಾವತಿಗೆ ಕಳುಹಿಸಿಕೊಟ್ಟರು.
ಆಗ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನು ರಾಜ್ಯಭಾರ ಮಾಡುತ್ತಿದ್ದನು. ಅವನಿಗೆ ದುರ್ಯೋಧನಾದಿ ನೂರು ಜನ ಪುತ್ರರು ಜನಿಸಿದ್ದರು. ಅವರೆಲ್ಲರೂ ಹರಿದ್ದೇಷಿಗಳಾದ ದೈತ್ಯರ ಅವತಾರ ಆವೇಶಯುಕ್ತರಾಗಿದ್ದರು. ಪಾಂಡುರಾಜನು ಮೃತನಾಗಿ ಅವನಿಗೆ ಐವರು ಪುತ್ರರಾಗಿದ್ದು, ಅವರನ್ನು ವೇದವ್ಯಾಸರು ರಾಜಧಾನಿಗೆ ಕಳುಹಿಸಿರುವ ವಿಷಯವರಿತು ಬಾಹೀಕರಾಜರು ತಮ್ಮ ಪತ್ರ ಸೋಮದತ್ತನೊಡನೆ ಹಸ್ತಿನಾವತಿಗೆ ಬಂದು ಪಾಂಡವರನ್ನು ಕಂಡಾನಂದಿಸಿ, ಭೀಷ್ಮಾಚಾರ್ಯ ಮತ್ತು ವೇದವತಿಯರಿಗೆ “ಧೃತರಾಷ್ಟ್ರ ಮತ್ತು ಅವನ ಮಕ್ಕಳು ಹೇಗೆ ಕುರು ಸಾಮ್ರಾಜ್ಯಕ್ಕೆ ಅಧಿಕಾರಿಗಳೋ, ಅದರಂತೆಯೇ ಪಾಂಡುರಾಜನ ಮಕ್ಕಳಾದ ಪಾಂಡವರೂ ಅಧಿಕಾರಿಗಳಾಗಿದ್ದಾರೆ. ಆದ್ದರಿಂದ ಅವರನ್ನು ಆದರದಿಂದಸ್ವಾಗತಿಸಿ ಕುರು-ಪಾಂಡವರಲ್ಲಿ ಭೇದ ತೋರದೆ ಇಬ್ಬರನ್ನು ನ್ಯಾಯ-ಧರ್ಮಗಳಿಂದ ರಕ್ಷಿಸಿಕೊಂಡು ಬರಬೇಕು” ಎಂದು ಸಲಹೆ ನೀಡಿ, ಮಗನೊಡನೆ ಬಾಹೀಕದೇಶಕ್ಕೆ ಹಿಂದಿರುಗಿದರು. ತಮ್ಮ ತಮ್ಮನಾದ ಶಂತನುವಿನ ಪೌತ್ರನ ಪುತ್ರರೂ, ಧರ್ಮಿಷ್ಠರೂ ಶ್ರೀಹರಿಪಾರಾಯಣರೂ ಆದ ಪಾಂಡವರಲ್ಲಿ ಬಾಹ್ಲೀಕರಾಜರರಿಗಿದ್ದ ವಾತ್ಸಲ್ಯ-ಪ್ರೇಮಗಳು ಇದರಿಂದ ವ್ಯಕ್ತವಾದವು. ಸತ್ಯವತೀದೇವಿ, ಭೀಷ್ಮಾಚಾರ್ಯ, ಧೃತರಾಷ್ಟ್ರರು, ಆಕಾಶವಾಣಿ, ವೇದವ್ಯಾಸದೇವರ ಆಜ್ಞೆ ಮತ್ತು ತಮ್ಮ ವಂಶದ ಹಿರಿಯರಾದ ಬಾಹ್ಲೀಕರಾಜರರ ಸಲಹೆಯಂತೆ ಕುಂತಿದೇವಿ ಪಾಂಡುನಂದನರನ್ನು ಪ್ರೀತಿಯಿಂದ ಸ್ವಾಗತಿಸಿ ಅವರನ್ನು ಕಾಪಾಡುತ್ತಾ ಬಂದರು.
ದಿನಗಳುರುಳಿದವು..... ಭೀಷ್ಮಾಚಾರ್ಯರ ಮೇಲ್ವಿಚಾರಣೆಯಲ್ಲಿ ಆಚಾರ್ಯ ದ್ರೋಣರಲ್ಲಿ ಕೌರವ-ಪಾಂಡವರು ಸಕಲ ಶಸ್ತ್ರಾಸ್ತ್ರ, ಧನುರ್ವಿದ್ಯೆಗಳಲ್ಲಿ ಪಾರಂಗತರಾದರು. ತಮ್ಮ ಸ್ವಭಾವಕ್ಕನುಸರಿಸಿ, ಪಾಂಡವರು ಸತ್ಯ, ಧರ್ಮನಿಷ್ಠರಾಗಿ, ಭಗವದ್ಭಕ್ತಿ, ಗುರುಹಿರಿಯರಲ್ಲಿ ಪೂಜ್ಯಭಾವನೆ, ಸರ್ವಜನರಲ್ಲಿ ವಿಶ್ವಾಸ - ಪ್ರಜಾರಂಜನೆ ಮುಂತಾದ ಸದ್ಗುಣಮಂಡಿತವಾಗಿ, ಮಹಾಪ್ರತಾಪಶಾಲಿಗಳಾಗಿ ಕೀರ್ತಿ ಗಳಿಸುತ್ತಿದ್ದರೆ; ತಮ್ಮ ಅಸುರ ಸ್ವಭಾವಕ್ಕನುಸರಿಸಿ ಅಹಕಾರ, ದಂಭ, ಸ್ವಪ್ರತಿಷ್ಠೆ, ಕ್ರೌರ್ಯ, ಆತ್ಮ ಪ್ರಶಂಸೆ, ವಂಚನೆ, ಉದ್ಧಟತನ, ಹರಿಭಕ್ತರಾದ ಪಾಂಡವರಲ್ಲಿದ್ದೇಷ ಮಾಡುತ್ತಾದುರ್ಯೋಧನಾದಿ ಕೌರವರ ಪ್ರಬಲಿಸಿದರು. ಮೊದಲಿನಿಂದಲೂ ಕಲಿಯ ಅವತಾರನಾದ ದುರ್ಯೋಧನನಿಗೆ ಪಾಂಡವರಲ್ಲಿ ಅದರಲ್ಲಿಯೂ ಮುಖ್ಯವಾಗಿ ವಾಯುದೇವರ ಅವತಾರರಾದ ಭೀಮಸೇನದೇವರಲ್ಲಿ ಅಸಾಧ್ಯ ದ್ವೇಷವಿತ್ತು. ಅವನು ಪಾಂಡವರ ಅಭ್ಯುದಯವನ್ನು ಸಹಿಸದೇ ಅವರಿಗೆ ಏನಾದರೊಂದು ಉಪಟಳ ಕೊಡುತ್ತಲೇ ಇದ್ದನು. ಅವನಿಗೆ ಶಕುನಿ, ದುಶ್ಯಾಸನ, ಕರ್ಣ ಇವರು ಬೆಂಬಲಿಗರಾಗಿದ್ದರು ಮತ್ತು ಇವರೆಲ್ಲ ಸೇರಿ ಧೃತರಾಷ್ಟ್ರನ ಬುದ್ದಿ ಕೆಡಿಸಿ ಪಾಂಡವರ ನಾಶಮಾಡಲು ಹವಣಿಸುತ್ತಿದ್ದರು. ಇದರ ಪರಿಣಾಮವಾಗಿ ಭೀಮಸೇನದೇವರಿಗೆ ಸರ್ಪದಶನ, ವಿಷಾನ್ನಭೋಜನಾದಿಗಳಾದವು. ಅದರಿಂದ ಜಗತ್ಪಾಣರಾದ ಭೀಮಸೇನದೇವರ ಕೂದಲೂ ಕೊಂಕಿಸಲಾಗಲಿಲ್ಲ. ನಂತರ ಅರಗಿನ ಮನೆಯ ಪ್ರಕರಣದಿಂದ ಪಾಂಡವರು-ಕುಂತಿದೇವಿಯರು ಭೀಮಸೇನದೇವರಿಂದ ಹೇಗೋ ಪಾರಾಗಿ ಅರಣ್ಯವಾಸಿಗಳಾಗಬೇಕಾಯಿತು.
ಮುಂದೆ ಪಾಂಡವರು ದೌಪದೀ ಸ್ವಯಂವರ ಕಾಲದಲ್ಲಿ ಮಾರುವೇಷ ತೊರೆದರು, ಅರ್ಜುನನು ಮತ್ಸ ಯಂತ್ರವನ್ನು ಭೇದಿಸಿ ಕೀರ್ತಿ ಗಳಿಸಿದ. ತಾಯಿಯಾದ ಕುಂತೀದೇವಿಯ ಆಣತಿಯಂತೆ ಮತ್ತು ವೇದವ್ಯಾಸದೇವರ ಸಕಾಲಿಕ ಧಾರ್ಮಿಕೋಪದೇಶದಿಂದ ಪಂಚರೂಪಳಾದ ದೌಪದಿಯನ್ನು ಪಂಚಪಾಂಡವರು ಲಗ್ನವಾದರು. ನಂತರ ವೈಭವದಿಂದ ಶ್ರೀಕೃಷ್ಣಪರಮಾತ್ಮನೊಡನೆ ಹಸ್ತಿನಾವತಿಗೆ ಬಂದು ಸೇರಿದರು. ಶ್ರೀಕೃಷ್ಣ-ವೇದವ್ಯಾಸರ ಸಲಹೆಯಂತೆ, ಕುರುಹಿರಿಯರ ಅಭಿಪ್ರಾಯದಂತೆ ಧೃತರಾಷ್ಟ್ರನು ತನ್ನ ಪುತ್ರರು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡಬೇಕೆಂದೂ, ಪಾಂಡವರು ಖಾಂಡವಪ್ರಸ್ತದಲ್ಲಿ ರಾಜ್ಯವಾಳಬೇಕೆಂದೂ ವ್ಯವಸ್ಥೆ ಮಾಡಿದನು. ಅದರಂತೆ ಪಾಂಡವರು ಶ್ರೀಕೃಷ್ಣನ ಸಹಾಯದಿಂದ ಕಾಡುಮೇಡಾಗಿದ್ದ ಖಾಂಡವಪ್ರಸ್ತವನ್ನು ಮಯನ ಸಹಾಯದಿಂದ ಸುಂದರ ರಾಜಧಾನಿಯನ್ನಾಗಿ ಮಾರ್ಪಡಿಸಿದರು. ಅದಕ್ಕೆ ಇಂದ್ರಪ್ರಸ್ಥವೆಂಬ ನಾಮಕರಣ ಮಾಡಲಾಯಿತು. ಧರ್ಮರಾಜನು ರಾಜನಾಗಿ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. ಭೀಮಾರ್ಜುನಾದಿ ಸಹೋದರರು ಧರ್ಮರಾಜನಿಗೆ ಸರ್ವವಿಧದಿಂದ ವಿಧೇಯರಾಗಿದ್ದು ಅನೇಕ ರಾಜಾಧಿರಾಜರು ಧರ್ಮರಾಜನ ಅಧಿಪತ್ಯಕ್ಕೆ ತಲೆಬಾಗಿ ಕಪ್ಪಕಾಣಿಗಳಿತ್ತು ವಿಧೇಯರಾಗಿ ನಡೆಯುವಂತೆ ಮಾಡಿದರು. ದಿನೇ ದಿನೇ ಪಾಂಡವರ ಕೀರ್ತಿ ಜಗತ್ತಿನಲ್ಲೆಲ್ಲಾ ಪ್ರಸರಿಸಿತು.