
ಮೂರನೆಯ ಉಲ್ಲಾಸ
ಶ್ರೀಬಾಹ್ಲೀಕರಾಜರರು
೩. ಭಾಗವತಾಗ್ರೇಸರನ ಅವತಾರ
ಪ್ರತಿಪರಾಜರ ಧರ್ಮಪತ್ನಿಯು ನವಮಾಸಗಳು ತುಂಬಿದ ಮೇಲೆ ಒಂದು ಶುಭಮುಹೂರ್ತದಲ್ಲಿ ಸರ್ವಲಕ್ಷಣಸಂಪನ್ನನಾದ ಪುತ್ರನನ್ನು ಪ್ರಸವಿಸಿದಳು. ಕೃತಯುಗದಲ್ಲಿ ನೃಕುಠೀರವನನ್ನು ಒಲಿಸಿಕೊಂಡ ಶ್ರೀಪ್ರಹ್ಲಾಮಾಜ ಭಗವಂತನನ್ನು 'ದೇವ! ನಾನು ಇನ್ನು ಮೂರು ಜನ್ಮಗಳಲ್ಲಿಯೂ ನಿನ್ನ ಭಕ್ತನಾಗಿ, ದಾಸನಾಗಿ ಸೇವಿಸುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಿ ಅದರಂತೆ ಶ್ರೀನರಸಿಂಹದೇವರಿಂದ ವರ ಪಡೆದಿದ್ದರು. ಮುಂದೆ ಹರಿವರ್ಷಖಂಡದಲ್ಲಿ ಭಗವಾಧನಾ ನಿರತರಾಗಿದ್ದಾಗ ನಾರದ ಮಹರ್ಷಿಗಳ ಪ್ರೇರಣೆ, ಸಲಹೆಯಂತೆ ಭೂಭಾರವರಣಕ್ಕಾಗಿ ಅವತರಿಸುವ ಶ್ರೀಹರಿಯ ಸವೆ ಮಾಡಿ ಪುನೀತರಾಗಲು ಆಶಿಸಿದರು. ಆ ಭಗವದ್ಧಕ್ತರಾದ ಶ್ರೀಪ್ರಹ್ಲಾಮಾಜರೇ ಈಗ ಚಂದ್ರಮಶದ ಭರತ ಚಕ್ರವರ್ತಿಯ ಕುಲದಲ್ಲಿ ಪ್ರತೀಪರಾಜರಿಗೆ ಪತ್ರರಾಗಿ ಅವತರಿಸಿದರು. ಶ್ರೀಮನ್ನಾರಾಯಣನ ಅಂತರಂಗ ಭಕ್ತರೂ, ಭಾಗವತಾಗ್ರೇಸರ ಆದ ಶ್ರೀಪ್ರಹ್ಲಾದರಾಜರ ಪುನರಾವತಾರವಾಯಿತು! ಪುರು ಚಕ್ರವರ್ತಿಯ ವಿಖ್ಯಾತವಾದ ಈ ವಂಶದಲ್ಲಿ ಶ್ರೀವಾಯುದೇವನ ವಿಶೇಷಾವೇಶಯುಕ್ತರಾಗಿ, ಮಹಾಶಾಲಿಗಳಾಗಿ ಶ್ರೀಹರಿಯ ದುಷ್ಟಶಿಕ್ಷಣ-ಶಿಷ್ಯರಕ್ಷಣ-ಭೂಭಾರಹರಣರೂಪ ಬಲಕಾರ್ಯದ ಸೇವೆ ಸಲ್ಲಿಸಲೆಂದೇ ಮಹಾಬಲಶಾಲಿಗಳಾದ ಪ್ರಹ್ಲಾದರ ಮತ್ತೆ ಪ್ರತಿಪಾಜನಿಗೆ ಪುತ್ರರಾಗಿ ಜನಿಸಿದರು. ಆಗೊಂದು
ಅದ್ಭುತ ವ್ಯಾಪಾರ ನಡೆದು ಎಲ್ಲರನ್ನೂ ವಿಸ್ಮಯಗೊಳಿಸಿತು. ಮಗುವು ಜನಿಸಿದ ಕೂಡಲೇ ಭಯಂಕರ ಶಬ್ದವಾಗಿ ಭೂಮಿಯು ಸೀಳಿಹೋಯಿತು! ಮಗುವು ಜನಿಸಿದಕ್ಕೆ ಹೀಗೆ ಭೂಮಿಯು ಬಿರಿದುಹೋದುದು ಈ ಶಿಶುವು ಮಹಾಬಲಶಾಲಿಯೂ, ಶ್ರೀವಾಯುದೇವರ ಆವೇಶಯುಕ್ತವೂ ಎಂಬುದಕ್ಕೆ ಉತ್ತಮ ನಿದರ್ಶನ.
ಜನಿಸುವಾಗಲೇ ಇಂಥ ಅಪೂರ್ವ ಪರಾಕ್ರಮವನ್ನು ಪ್ರದರ್ಶಿಸಿದ ಸರ್ವಾಂಗ ಸುಂದರವಾದ ಶಿಶುವನ್ನು ಕಂಡು ಪ್ರತೀಪರಾಜ ದಂಪತಿಗಳು, ಮತ್ತಿತರ ರಾಜಬಂಧುಗಳಿಗಾದ ಸಂತೋಷ ಅವರ್ಣನೀಯ! ಮಂಗಳಸ್ನಾನವಾದ ಮೇಲೆ ಭರತವಂಶದ ಸಂಪ್ರದಾಯಾನುಸಾರವಾಗಿ ಪ್ರತೀಪರಾಜರು ಪುತ್ರನಿಗೆ ವಿಧ್ಯುಕ್ತ ರೀತಿಯಲ್ಲಿ ಜಾತಕರ್ಮ, ನಾಮಕರಣಗಳನ್ನು ವೈಭವದಿಂದ ನೆರವೇರಿಸಿ ಮೊದಲೇ ತೀರ್ಮಾನಿಸಿದಂತೆ ಕುಮಾರನಿಗೆ “ಬಾಹ್ಲೀಕರಾಜರ'ನೆಂದು ನಾಮಕರಣ ಮಾಡಿದರು.
ಹೀಗೆ ಪ್ರತೀಪರಾಜರು ಮಗಳಿಗೆ ಬಾಹ್ಲೀಕರಾಜರನೆಂದು ಹೆಸರಿಡಲೂ ಕಾರಣವಿತ್ತು, ಚಂದ್ರವಂಶದ ಪುರುಕುಲತಿಲಕವಾದ ಪ್ರತೀಪರಾಜರಿಗೆ ಬಾಕದೇಶದ ರಾಜರಾದ ಪ್ರತೀಪಮಹಾರಾಜರು ತಮ್ಮ ಪುತ್ರಿಯನ್ನು ಕೊಟ್ಟು ವಿವಾಹ ಮಾಡಿಸಿದರು. ಅವರಿಗೆ ಪುತ್ರಸಂತಾನವಿರಲಿಲ್ಲ, ಆದ್ದರಿಂದ ಭರತವಂಶದ ಈ ಪ್ರತೀಪರಾಜರಿಗೆ ಮಗಳನ್ನು ಧಾರೆಯೆರೆದು ಕೊಡುವಾಗ, ತಮ್ಮ ವಂಶೋದ್ಧಾರಕ್ಕಾಗಿ “ಪುತ್ರಿಕಾ ಪುತ್ರನ್ಯಾಯದಿಂದ ತಮ್ಮ ಮಗಳಲ್ಲಿ ಜನಿಸುವ ಪುತ್ರನ ದತ್ತಕಾರಾ ಮಾತಾಮಹರಾದ ತಮಗೆ ಪುತ್ರರಾಗಬೇಕೆಂದು ಬಯಸಿ, ಅದರಂತೆ ವಚನ ಪಡೆದು ಸಂಕಲ್ಪಪೂರ್ವಕ ವಾಗಿ ಕನ್ಯಾದಾನ ಮಾಡಿದ್ದರು.
ಆದರೆ ಪ್ರತೀಪರಾಜರಿಗೆ ಮೊದಲು ಜನಿಸಿದ ಪುತ್ರನಾದ ದೇವಾಪಿಯು ಕುಷರೋಗ ಪೀಡಿತವಾಗಿಯೇ ಜನಿಸಿದ್ದರಿಂದ ಅಂಥವನನ್ನು 'ಪತ್ರಿಕಾಪುತ್ರನ್ಯಾಯ'ದಿಂದ ದತ್ತಕ ತೆಗೆದುಕೊಳ್ಳಲು ಬರುವಂತಿಲ್ಲವಾದ್ದರಿಂದ ಬಾಹೀಕ ದೇಶಾಧಿಪತಿಗಳಾದ ಪ್ರತೀಪ ಮಹಾರಾಜರ ಆಶೆಯು ಫಲಿಸಿರಲಿಲ್ಲ.
ಈಗ ದೈವಾನುಗ್ರಹದಿಂದ ಸರ್ವಲಕ್ಷಣ ಸಂಪನ್ನನೂ, ಮಹಾಬಲಶಾಲಿಯೂ ಆದ ಪುತ್ರನು ಹುಟ್ಟಿದ್ದರಿಂದ ಅವನನ್ನು ವಚನವಿತ್ತಂತೆ ತಮಗೆ ದತ್ತಕ ಕೊಡಬೇಕೆಂದು ಮಾವನವರು ಕೋರಿದ್ದರಿಂದ ಅವರ ಆಶೆಯನ್ನು ಪೂರೈಸುವುದು ತಮ್ಮ ಧರ್ಮವೂ ಕರ್ತವ್ಯವೂ ಆಗಿದೆಯೆಂದು ಭಾವಿಸಿ ಪ್ರತೀಪ ಮಹಾರಾಜರು ಮಗನಿಗೆ ನಾಮಕರಣ ಮಾಡುವಾಗ ಮುಂದೆ ಅವನು ದತ್ತಕದ್ವಾರಾ ಪ್ರತೀಪ ಮಹಾರಾಜರ ಪುತ್ರನಾಗಿ ಬಾಯ್ತಿಕ ದೇಶಾಧಿಪತಿಯಾಗಲಿರುವುದರಿಂದ ಅದನ್ನು ಸೂಚಿಸಲೆಂದೇ ಕುಮಾರನಿಗೆ “ಬಾಹೀಕರಾಜ'ನೆಂದು ನಾಮಕರಣ ಮಾಡಿದರು! ಇದರಿಂದ ಪ್ರತೀಪ ಮಹಾರಾಜ ದಂಪತಿಗಳು, ಅವರ ಬಂಧುಗಳಿಗೆ ಅಪಾರ ಆನಂದವಾಯಿತು.
ಬಾಹ್ಲೀಕರಾಜರ ಶುಕ್ಲಪಕ್ಷದ ಚಂದ್ರನಂತೆ ಅಭಿವೃದಿಸುತ್ತಾ ತನ್ನ ಆಟ-ಪಾಠ, ವಿದ್ಯೆ, ಅಪೂರ್ವ ಶಕ್ತಿ-ಸಾಹಸ-ಪರಾಕ್ರಮಗಳಿಂದ ಉಭಯವಂಶ ಲಲಾಮನಾಗಿ ಸರ್ವರನ್ನೂ ಆನಂದಗೊಳಿಸಿದನು. ಪ್ರತೀಪ ಮಹಾರಾಜರು ಸಕಾಲದಲ್ಲಿ ಮಾತು ಕೊಟ್ಟಂತೆ ಬಾಹೀಕರಾಜರನ್ನು ವೈದಿಕ ವಿಧಿಪಾರ್ವಕವಾಗಿ ದತ್ತಕದ ಮೂಲಕ ಮಾತಾಮಹೂಂದಿರಾದ ಪ್ರತೀಪ ಮಹಾರಾಜರಿಗೆ ಒಪ್ಪಿಸಿಕೊಟ್ಟರು. ಅವರು ಪರಮಾನಂದಭರಿತರಾಗಿ ದಕಪುತ್ರ ಬಾಹ್ಲೀಕರಾಜರನಿಗೆ ಕ್ಷತ್ರಿಯೋಚಿತ ರೀತಿಯಲ್ಲಿ ವೈಭವದಿಂದ ಉಪನಯನಾದಿ ಸಂಸ್ಕಾರಗಳನ್ನು ನೆರವೇರಿಸಿದರು.
ಇದೇ ಸಮಯದಲ್ಲಿ ಶ್ರೀಭಗವಂತನ ಅನುಗ್ರಹದಿಂದ ಪ್ರತೀಪರಾಜ ದಂಪತಿಗಳಿಗೆ ಭರತಕುಲಭೂಷಣನೂ ಗುಣಜೇಷ ಆದ ಮತ್ತೊಬ್ಬ ಪುತ್ರನು ಜನಿಸಿದನು. ಹರ್ಷನಿರ್ಭರರಾದ ಪ್ರತೀಪರಾಜರು ಕುಮಾರನಿಗೆ ಶಂತನು” ಎಂದು ನಾಮಕರಣ ಮಾಡಿದರು. ಹೀಗೆ ಪ್ರತೀಪರಾಜರಿಗೆ ದೇವಾಪಿ, ಬಾಹ್ಲೀಕರಾಜರ, ಶಂತನು ಎಂಬ ಮೂವರು ಪುತ್ರರಾಗಿ, ಹಿರಿಯನಾದ ದೇವಾಪಿಯು ಕುಷ್ಠರೋಗ ಪೀಡಿತನಾದ್ದರಿಂದ ಜೀವನದಲ್ಲಿ ವೈರಾಗ್ಯವುಂಟಾಗಿ ಆತ್ರೋದ್ಧಾರ ಮಾಡಿಕೊಂಡು ಉತನಾಗಲು ಅವನು ತಪಸ್ಸಿಗಾಗಿ ವನಕ್ಕೆ ತೆರಳಿದನು. ಎರಡನೆಯ ಪತ್ರನಾದ ಬಾಹೀಕರಾಜನು ಬಾಕದೇಶದ ರಾಜನಾಗಿ ಬೆಳಗತೊಡಗಿದನು, ಮೂರನೆಯವನಾದ ಶಂತನು ಕುರುವಂಶಭೂಷಣನಾಗಿ ಭರತಕುಲದ ಚಕ್ರವರ್ತಿಯಾಗಿ ಭಾರತದಲ್ಲಿ ವಿಖ್ಯಾತನಾದನು.