Kaliyugada Kalpataru Sri Baahika Rajaru End of the Avatar and Receiving Boons

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೮. ಅವತಾರ ಪರಿಸಮಾಪ್ತಿ-ವರಪ್ರಾಪ್ತಿ

ಪಾಂಡವರು ನೆರವೇರಿಸಿದ ರಾಜಸೂಯಯಾಗ, ಆ ವೈಭವ, ಇಂದ್ರಪ್ರಸ್ಥ ರಾಜಧಾನಿಯ ಅಪೂರ್ವ ಸೌಂದರ್ಯ-ಸೊಬಗು, ಆ ಅನಿತರ ಸಾಧಾರಣ ಸಿರಿಸಂಪತ್ತು. ರಾಜಸೂಯಯಾಗದಿಂದ ಅಖಂಡ ಭರತವರ್ಷದ ಸಮಸ್ತರಾಜಾಧಿರಾಜರು ಪಾಂಡವರಿಗೆ ನತಮಸ್ತಕರಾಗಿ ಧರ್ಮರಾಜನನ್ನು ಸಾರ್ವಭೌಮನೆಂದು ಗೌರವಿಸಿದ್ದು - ಇದೆಲ್ಲವ ದುಷ್ಟ, ದುರಹಂಕಾರಿ, ಮಾತ್ಸರ್ಯದ ಮಾತೃಸ್ಥಾನ, ಪಾಂಡವರ ಆಜನ್ಮವೈರಿ ಕಲಿಯ ಅಪರಾವತಾರನಾದ ದುರ್ಯೋಧನನಿಗೆ ನುಂಗಲಾರದ ತುತ್ತಾಗಿತ್ತು. ಪಾಂಡವರು ಈ ಅಭಿವೃದ್ಧಿ, ಸಂಪತ್ತು, ವೈಭವ, ಕೀರ್ತಿಗಳನ್ನು ಆತನು ಸಹಿಸದಾದ. ಏನಾದರೂ ಮಾಡಿ ಅವರ ಸಂಪತ್ತನ್ನು ಅಪಹರಿಸಿ ಪಾಂಡವರು ಬೀದಿಯ ಪಾಲಾಗುವಂತೆ ಮಾಡಬೇಕೆಂದು ಅಪೇಕ್ಷಿಸಿದ. ಇದಕ್ಕೆ 'ದುಷ್ಟ ಚತುಷ್ಟಯ'ರೆಂದು ಕುಖ್ಯಾತಿ ಗಳಿಸಿದ್ದ ದುರ್ಯೋಧನ, ದುಶ್ಯಾಸನ, ಶಕುನಿ ಮತ್ತು ಕರ್ಣರು ಮಂತ್ರಾಲೋಚನೆ ಮಾಡಿದರು. ಶಕುನಿಯ ಸಲಹೆ, ಕುತಂತ್ರಗಳಿಂದ ಪಾಂಡವರನ್ನು ಕಪಟ ದೂತದಲ್ಲಿ ಸೋಲಿಸಿ ಅವರ ಸರ್ವಸ್ವವನ್ನೂ ಅಪಹರಿಸಿ ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡಬೇಕೆಂಬ ನಿಬಂಧನೆಯಂತೆ ದುರ್ಯೋಧನನು ಪಾಂಡವರನ್ನು ಅರಣ್ಯಕ್ಕೆ ಅಟ್ಟಿದನು. ಧರ್ಮಾತ್ಮರಾದ ಪಾಂಡವರು ಶ್ರೀಕೃಷ್ಣನ ಅನುಗ್ರಹದಿಂದ ಸಿರಿಸಂಪತ್ತು, ವೈಭವ, ಬಡತನ, ರಾಜಧಾನಿ,

ಕಾಡು ಎಲ್ಲವನ್ನೂ ಒಂದೇ ರೀತಿಯಾಗಿ ಭಾವಿಸಿ ಎಲ್ಲವೂ ಶ್ರೀಹರಿಚಿತ್ತವೆಂದು ಧರ್ಮದಿಂದ ಕಾಲಯಾಪನೆ ಮಾಡಿ ವನವಾಸ ಅಜ್ಞಾತವಾಸವನ್ನು ಮುಗಿಸಿ ತಮಗೆ ಸೇರಿದ ರಾಜ್ಯವನ್ನು ಮತ್ತೆ ಪಡೆಯಲು ಶ್ರೀಕೃಷ್ಣರನ್ನು ತಮ್ಮ ಪರವಾಗಿ ಕೌರವ ಸಭೆಗೆ ರಾಯಭಾರಿಯಾಗಿ ಕಳಿಸಿದರು.

ಶ್ರೀಕೃಷ್ಣಪಾಂಡವ ರಾಯಭಾರಿಯಾಗಿ ಕುರುಸಭೆಗೆ ಹೋಗಿ ಭೀಷ್ಮ ದ್ರೋಣ-ಧೃತರಾಷ್ಟ್ರರಿಗೂ, ಸಮಸ್ತ ಸಭಾಸದರಿಗೂ, ದುರ್ಯೋಧನಾದಿಗಳಿಗೂ ತಾನು ಬಂದ ಉದ್ದೇಶವನ್ನು ವಿವರಿಸಿ, ಧರ್ಮಿಷರೂ, ಮಹಾಪರಾಕ್ರಮಿಗಳೂ ಆದ ಪಾಂಡವರ ದಕ್ಷಿನ ರಾಜ್ಯವನ್ನು ಅವರಿಗೆ ಒಪ್ಪಿಸಿಕೊಟ್ಟು, ಉಭಯರೂ ಸ್ನೇಹದಿಂದ ಬಾಳಬೇಕೆಂದು ಹಿತೊಚ್ಚಿಹೇಳಿ, ಹಾಗೆ ಮಾಡದಿದ್ದಲ್ಲಿ ಅನಿವಾರ್ಯವಾಗಿ ಯುವವು ಒದಗಿ ಬಂದು ಅಕಾರಣವಾಗಿ ರಕ್ತಪಾತವಾಗಬೇಕಾಗುವುದೆಂದೂ ಕೊನೆಗೆ ಕುರುವಂಶವೇ ನಾಶವಾಗಬೇಕಾದೀತೆಂದೂ ಎಚ್ಚರಿಸಿದನು. ಕೃಷ್ಣನ ಮಾತನ್ನು ಅನುಮೋದಿಸಿ ಅದರಂತೆ ನಡೆಯಬೇಕೆಂದು ಧೃತರಾಷ್ಟ್ರ, ದುರ್ಯೋಧನಾದಿಗಳಿಗೆ ಸಮಸ್ತ ಕುರು ಸಭಾಸದರೂ, ಭೀಷ್ಮ-ದ್ರೋಣ, ಕೃಪ, ಅಶ್ವತ್ಥಾಮಾದಿಗಳು ಮನ ಒಲಿಸಲು ಪ್ರಯತ್ನಿಸಿ ವಿಫಲರಾದ. ದುರ್ಯೋಧನನು ಪಾಂಡವರಿಗೆ ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲವೆಂದು ಹೇಳಿಬಿಟ್ಟನು. ಮಾತ್ರವಲ್ಲ, ರಾಯಭಾರಿಯಾಗಿ ಬಂದ ಶ್ರೀಕೃಷ್ಣನನ್ನೇ ಬಂಧಿಸಲು ಪ್ರಯತ್ನಿಸಿದನು. ಆಗ ಶ್ರೀಕೃಷ್ಣ ತನ್ನ ವಿಶ್ವರೂಪ ತೋರಿದನು. ದೊರ್ಯೋಧನಾದಿಗಳು ಅದನ್ನು ನೋಡಲೂ ಸಮರ್ಥರಾಗದೇ ಮೂರ್ಛಿತರಾದರು. ಶ್ರೀಕೃಷ್ಣನು ಪುನಃ ಬುದ್ಧಿವಾದ ಹೇಳಿದ ಫಲಕಾರಿಯಾಗಲಿಲ್ಲ. ಕೊನೆಗೆ ಶ್ರೀಕೃಷ್ಣನು 'ಪಾಂಡವರು ಅಸಹಾಯಶೂರರು, ಅವರು ತಮ್ಮ ರಾಜ್ಯವನ್ನು ಬಾಹುಬಲದಿಂದಲೇ ಸಾಧಿಸುವರು. ಯುದ್ಧವೇ ನೆರವೇರುವುದು' ಎಂದು ಹೇಳಿ ಧರ್ಮರಾಜಾದಿಗಳ ಬಳಿಗೆ ಬಂದು ಎಲ್ಲ ವಿಚಾರಗಳನ್ನೂ ನಿವೇದಿಸಿ, ಯುದ್ಧವು ಅನಿವಾರ್ಯವೆಂದೂ ಪಾಂಡವರು ಅದಕ್ಕೆ ಸಿದ್ಧರಾಗಬೇಕೆಂದೂ ಆಜ್ಞಾಪಿಸಿದನು.

ಮಹಾಭಾರತ ಯುದ್ಧದಲ್ಲಿ ನಮ್ಮ ಕಥಾನಾಯಕರಾದ ಶ್ರೀಬಾಹ್ಲೀಕರಾಜರರು ದುಷ್ಟರಾದ ಕೌರವರ ಪಕ್ಷವನ್ನು ವಹಿಸಿ ಯುವ ಮಾಡಬೇಕಾಗಿ ಬಂದಿತು.

ದುರ್ಯೋಧನಾದಿ ಧಾರ್ತರಾಷ್ಟ್ರರೂ ಧರ್ಮರಾಜ-ಭೀಮಾರ್ಜುನಾದಿ ಪಾಂಡವರೂ ಬಾರೀಕರಾಜರಿಗೆ ಬಂಧುಗಳೇ ಆಗಿದ್ದರು. ಆದರೂ ಭಗವದಕ್ತರೂ, ಧರ್ಮಿಷ್ಠರೂ, ಮುಖ್ಯವಾಗಿ ಶ್ರೀಕೃಷ್ಣಪ್ರಿಯರೂ ಆಗಿದ್ದ ಪಾಂಡವರಲ್ಲೇ ಅವರಿಗೆ ವಿಶೇಷ ಮಮತೆ, ಗೌರವ ಇದ್ದುದರಿಂದ ಅಂಥ ಪಾಂಡವರ ವಿರುದ್ಧ ಪಕ್ಷದಲ್ಲಿ ನಿಂತು ಹೋರಾಡಬೇಕಾಗಿ ಬಂದುದರಿಂದ ಅವರು ಮರುಗಿದರು. ಬಾಷಿಕರಾಜರು ಯುಕ್ತಾಯುಕ್ತ ವಿವೇಚನೆಯುಳ್ಳವರೂ, ಭಗವಂತನ ಏಕಾಂತಭಕ್ತರೂ, ಧರ್ಮಪ್ರಿಯರೂ ಆಗಿದ್ದುದರಿಂದ ಅವರಿಗೆ ಶ್ರೀಕೃಷ್ಣ-ಪಾರ್ಥರು (ಭೀಮ-ಅರ್ಜುನ) ಇರುವಲ್ಲಿಯೇ ಜಯವು ಸಿದ್ಧವೆಂಬ ವಿಚಾರ ಮನದಟ್ಟಾಗಿತ್ತು. ಆದ್ದರಿಂದಲೇ ಅವರು ಭಗಮಂತನ ವಿರುದ್ಧ ಪಕ್ಷದಲ್ಲಿದ್ದು ಹೋರಾಡಬೇಕಾಗಿ ಬಂದಿದ್ದಕ್ಕೆ ಬಹಳ ದುಃಖಿಸಿದರು. ಮಾಡುವುದೇನು ? ಭೀಷ್ಮ ದ್ರೋಣಾದಿಗಳೂ ಭಗವದ್ಭಕ್ತರೇ! ಆದರೂ ಅವರೂ ದುಷ್ಟನಾದ ದುರ್ಯೋಧನನ ಪರವಾಗಿ ಕಾದಾಡಬೇಕಾಗಿ ಬಂದಿತಲ್ಲವೇ ? ಕ್ಷತ್ರಿಯ ಧರ್ಮವನ್ನು ಅನುಸರಿಸಿ ನಡೆಯಲೇಬೇಕಲ್ಲ! ಇಲ್ಲಿ ಅವರ ಮನೀಷ ಪರಮಾತ್ಮನ ವಿರುದ್ಧವಾಗಿ ಹೋರಾಡುವುದನ್ನು ಅವನ ಸಂಕಲ್ಪದಂತೆ ಭೂಭಾರಹರಣಕಾರ್ಯದಲ್ಲಿ ಶ್ರೀಹರಿಗೆ ಸೇವೆ ಸಲ್ಲಿಸುವುದಷ್ಟೇ ಆಗಿತ್ತು. ಅದಕ್ಕಾಗಿ ಅವರು ಅವತರಿಸಿದ್ದರಿಂದ ಆ ಕಾರ್ಯ ಮಾಡಿ ಭಗವದನುಗ್ರಹಕ್ಕೆ ಪಾತ್ರರಾಗಲು ನಿರ್ಧರಿಸಿದರು.

ಕುರುಕ್ಷೇತ್ರದಲ್ಲಿ ಕೌರವ-ಪಾಂಡವರ ಯುದ್ಧಕ್ಕೆ ಸಕಲವಾ ಅಣಿಯಾಗಿದೆ. ಉಭಯ ಪಕ್ಷದವರೂ ಶಿಬಿರಗಳನ್ನು ಹಾಕಿ ಮರುದಿನ ಪ್ರಾರಂಭವಾಗಲಿರುವ ಯುದ್ಧಸಿದ್ಧತೆಯಲ್ಲಿದ್ದಾರೆ. ಎಲ್ಲಿ ನೋಡಿದರೂ ಗಂಭೀರ ವಾತಾವರಣ, ಸಾಯಂಕಾಲ ಸೂರ್ಯಾಸ್ತಮಯವಾಗಲು ಇನ್ನೂ ಸ್ವಲ್ಪ ಸಮಯವಿದೆ. ಕುರುಕ್ಷೇತ್ರ ಸಮೀಪದ ಒಂದು ನಿರ್ಜನ ಪ್ರಾಂತ್ಯ, ಅಲ್ಲಿ ಸುವರ್ಣರಥವೊಂದು ನಿಂತಿದೆ. ಸೂರ್ಯನ ಹೊಂಗಿರಣಗಳು ಕನಕರಥದ ಮೇಲೆ ಬಿದ್ದು ಮೊದಲೇ ಸುಂದರವಾದ ರಸ್ತೆ ಮತ್ತಷ್ಟು ತಳತಳಿಸುತ್ತಿದೆ. ರಥದ ಮೇಲ್ಬಾಗದಲ್ಲಿ ಗಡದ್ದು ಹಾರಾಡುತ್ತಿದೆ. ತೇಜೋಮೂರ್ತಿಗಳಾದ ಇಬ್ಬರು ರಥದಿಂದಿಳಿದು, ಹಚ್ಚಹಸುರಾದ ಆ ಮೈದಾನದಲ್ಲಿ ಮೆಲ್ಲಮೆಲ್ಲನೆ ಸಂಭಾಷಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದಾರೆ.

ಇಂದ್ರನೀಲ ದೇಹಕಾಂತಿದ ಪೀತಾಂಬರಧಾರಿಯಾಗಿ ಸರ್ವಾಭರಣ ಭೂಷಿತನಾಗಿ ಉಜ್ವಲ ಕಾಂತಿಯಿಂದ ಕಂಗೊಳಿಸುತ್ತಾ, ಮುಗುಳುನಗೆ ಮೊಗದಿಂದ ಎಲ್ಲರ ಮನಸ್ಸನ್ನೂ ಸೂರೆಗೊಳ್ಳುವ ಸೌಂದರ್ಯನಿಧಿಯ ಜಗನ್ನಾಟಕ ಸೂತ್ರಧಾರಿಯಾದ ಭಗವಾನ್ ಶ್ರೀಕೃಷ್ಣನು! ಅಜಾನುಬಾಹು, ತೇಜಃಪುಂಜಮೂರ್ತಿ, ಅಸಮಸಾಹಸಿಯಾದ, ಶ್ರೀಕೃಷ್ಣನ ಜೊತೆಯಲ್ಲಿರುವ ಮತ್ತೊಂದು ವಕ್ತಿಯೇ ಭಕಿವಿನಯಸಂಪನ್ನನೂ, ರಿಪುಕುಲಭಯಂಕರನೂ ಆದ ಪವನನದಾ ಭೀಮಸೇನದೇವ! ಕೃಷ್ಣ ವೃಕೋದರರು ಮರುದಿನ ಜರುಗಲಿರುವ ಯುದ್ಧದ ಬಗೆಗೆ ವಿಚಾರವಿನಿಮಯ ಮಾಡುತ್ತಿದ್ದಾರೆ.

ಅದೇ ಸಮಯದಲ್ಲಿ ಅನು ದೂರದಲ್ಲಿ ಅಶ್ವದ ಖರಪುಟ ಧ್ವನಿಯೊಂದು ಅಲ್ಲಿ ಕೇಳಿಸಿತು. ಅದು ಭೀಮಸೇನ ಮನಸೆಳೆಯಿತು. ಅಶ್ವಾರೋಹಿಯೋರ್ವನು ಶ್ರೀಕೃಷ್ಣ-ಭೀಮಸೇನದೇವರಿದ್ದ ಕಡೆಗೆ ಕುದುರೆಯನ್ನೋಡಿಸಿಕೊಂಡು ಬರುತ್ತಿದ್ದಾನೆ. ಅವರೆಂದು ಭೀಮಸೇನದೇವರು ನೋಡುತ್ತಿರುವಂತೆಯೇ ಕುದುರೆಯಿಂದಿಳಿದ ಅತ್ಯಂತ ತೇಜಸ್ವಿಯಾದ ವೃದ್ಧನಾದ ಮಹಾವೀರನೊಬ್ಬನು ಇವರಿರುವ ಕಡೆ ನಡೆದು ಬರಲಾರಭಿಸಿದನು. ಆ ವೀರನನ್ನು ನೋಡಿ ಭೀಮಸೇನದೇವನ ಮುಖವರಳಿತು. ಶ್ರೀಕೃಷ್ಣನನ್ನು ನೋಡಿ ನಗುತ್ತಾ ಭೀಮಸೇನದೇವರೆಂದರು `ಭಗವನ್, ವಾಸುದೇವ! ಇಕೋ ನೋಡು,

ಪ್ರಿಯಭಕ್ತ ಪ್ರಹ್ಲಾದರಾಜ ಬರುತ್ತಿರುವನು!”

ಕೃಷ್ಣ: (ಮಂದಹಾಸ ಬೀರುತ್ತಾ) ಓಹೋ, ಬಾಹ್ಲೀಕರಾಜರನೇನು? ಹೂಂ, ಕೌರವರೊಡನೆ ಸೇರಿ ಹೋರಾಡಲು ವಿಶ್ವಯಿಸಿದ ಆ ವೀರ ನಮ್ಮ ಹತ್ತಿರವೇಕೆ ಬರುತ್ತಿರುವನು?

ಭೀಮಸೇನ : ಕಟಪನಾಟಕಸೂತ್ರಧಾರಿಯಲ್ಲವೇ ನೀನ! ಕೃಷ್ಣನಿನ್ನ ಲೀಲೆಯನ್ನರಿತಮಾರು ? ಅಂದು ಯುಗಯುಗಗಳ ಹಿಂದೆ - ಇದೇ ಪ್ರಹ್ಲಾದನಿಗಾಗಿ ಜಗದ್ವಿಲಕ್ಷಣ ಭಯಂಕರರೂಪವೆತ್ತಿ ಕಂಬದಿಂದೊಡೆದು ಬಂದು, ಗುಡಿಗುಡಿಸುತ್ತಾ ಜಗತ್ತನ್ನೇ ವಿಭ್ರಮಗೊಳಿಸಿದೆ! ಇವನಿಗಾಗಿ ನಿನ್ನನ್ನೇ ಅರ್ಪಿಸಿಕೊಳ್ಳಲು ಸಿದ್ದನಾಗಿ ವಿಚಿತ್ರ ಭಕ್ತವಾತ್ಸಲ್ಯ ತೋರಿದೆ! ಇವನಿಗೆ ಅಸಾಧಾರಣ ಮಗಳತ್ತು ಲಾಲಿಸಿದೆ! “ವತ್ಥ, ವತ್ತ” ಎನ್ನುತ್ತಾ ತಾಯಿಯಂತೆ ಮಡಿಲಲ್ಲಿ ಕೂಡಿಸಿಕೊಂಡು ಆಗಿಸಿ ನಿನ್ನ ಅಲಭ್ಯ ವರದಹಸ್ತವನ್ನು ಶಿರದ ಮೇಲಿರಿಸಿ ಅನುಗ್ರಹಿಸಿದೆ! ಪ್ರಭು! ಅದೇ ನಿನ್ನ ಅಂತರಂಗಭಕ್ತನು ಈಗ ನಿನ್ನ ಬಲಕಾರ್ಯದಲ್ಲಿ ಸೇವೆ ಸಲ್ಲಿಸಲು ಬಾಸ್ತಿಕನಾಗಿ ಅವತರಿಸಿರುವಾಗ, ನಿನಗೆ ವಿರುವ ಪಕ್ಷದಲ್ಲಿ ನಿಂತು ಕಾದಾಡುವಂತ ಪರಿಸ್ಥಿತಿಯನ್ನು ತಂದೊಡ್ಡಿದ್ದೀಯ? ನಿನ್ನ ಈ ವಿಲಕ್ಷಣ ವ್ಯಾಪಾರಗಳನ್ನು ಕಂಡು ಮಾಧವ! ನಾನಂತೂ ಅತ್ಯಂತ ಮುಗ್ಧನಾಗಿದ್ದೇವೆ! ನಿನ್ನ ಈ ನಿತ್ಯನೂತನ, ಅಗಮ್ಯ, ಅಸದೃಶ ಲೀಲಾವಿಲಾಸವನ್ನು ಕಂಡು ನನ್ನ ಪಾಡೇ ಇಂತಾಗಿರುವಾಗ ಉಳಿದವರ ಪಾಡೇನು? ಗೋವಿಂದ, ಸಾಕು ಮಾಡಿ ನನ್ನ ನಟನೆಯನ್ನು, ನಿನ್ನ ಪ್ರಿಯಭಕ್ತನಲ್ಲಿ ಕೃಪೆದೋರು,

ಭೀಮಸೇಜ ವೇಷವ ಸರಸ ವಚನಗಳನ್ನಾಲಿಸಿ ಸರಳಹಾಕ್ತನಾದ ಶ್ರೀಕೃಷ್ಣನ ಮಂದಹಾಸಚರಿಕೆಯನ್ನು ಹೊರಸೂಸುತ್ತಾ ಇಂತೆಂದನು - “ವೃಕೋದರ! ನಿನ್ನ ಪೂರ್ಣಾನುಗ್ರಹಕ್ಕೆ ಪಾತ್ರನಾಗಿ, ನಿನ್ನ ವಿಶೇಷಧಾನಯುಕ್ತನಾದ, ನನ್ನ ಪ್ರಿಯ ಕಂಡ ಪ್ರಹ್ಲಾದ, ಅವನ ಕಮಾರನಾದ ಬಾಹ್ಲೀಕರಾಜರನಲ್ಲಿ ನನ್ನ ಅನುಗ್ರಹವು ಶಾಶ್ವತವಾಗಿರುವುದನ್ನು ನೀನರಿಯೆಯಾ? ಕುರಿಕುಮಾರ ಈಗ ಈ ಭಕ್ತರಾಜನಲ್ಲಿ ಕರುಣೆ ತೋರಬೇಕಾಗಿರುವವನು ನೀನು! ನಾನಲ್ಲ!”

ಹೀಗೆ ಕೃಷ್ಣ-ಭೀಮರು ಮಾತಾಡುತ್ತಿರುವಂತೆಯೇ ಬಾಹೀಕರಾಜರು ಹತ್ತಿರ ಬಂದು ಶ್ರೀಕೃಷ್ಣನನ್ನು ನೋಡಿದರು. ಸುಂದರಮೂರ್ತಿ, ನೀಲರವಕಾಂತಿವಿಲಸಿತಮನೋಹರಾಕಾರ, ಬ್ರಹ್ಮಾಂಡನಾಯಕ, ಅನಿಮಿತ್ತಬಂಧು, ಭಕ್ತವತ್ಸಲ, ತನ್ನ ಆರಾಧ್ಯದೈವ, ಮುಗುಳುನಗೆಯ ಮೊಗದಿಂದ ಪರಮಮಂಗಳಮೂರ್ತಿಯಾಗಿ ಕಂಗೊಳಿಸುವ ಮಾಧವನ್ನು ಅವಲೋಕಿಸಿ ಬಾಹ್ಲೀಕರಾಜರರಿಗೆ ಮೈ ಪುಳಕಿಸಿತು. ಭಕ್ತಿ-ಸಂತೋಷಗಳಿಂದ ಕಣ್ಣಾಲೆಗಳು ತೇವಗೊಂಡವು, ಹೃದಯ ತುಂಬಿ ಬಂದಿತು. ಗದ್ದದ ಕೊಠದಿಂದ “ಕೃಷ್ಣಾ, ಕೃಷ್ಣಾ' ಎಂದೆನ್ನುತ್ತಾಆ ಕೃಷ್ಣ ಗ್ರಹಗೃಹೀತಾತ್ಮರು ಓಡಿಬಂದು ಶ್ರೀಹರಿಪದತಲದಲ್ಲಿಶಿರವಿರಿಸಿ

ಭಗವಾನ್ ಶ್ರೀಕೃಷ್ಣ ಪ್ರೀತೃತಿಶಯದಿಂದ ಬಾಹ್ಲೀಕರಾಜರರನ್ನು ಹಿಡಿದೆತ್ತಿ ಆಲಂಗಿಸಿದ. ಆನಂದಪರವಶರಾದ ಬಾಕರು ಶ್ರೀಕೃಷ್ಣನ ಪಕ್ಕದಲ್ಲಿ ನಸುನಗುತ್ತಾ ನಿಂತಿರುವ ಭೀಮವಿಕ್ರಮ ವೃಕೋದರನನ್ನು ಕಂಡರು. ಕುರುವಂಶದ ಹಿರಿಯರೆಂದು ಲೌಕಿಕವನ್ನನುಸರಿಸಿ ಭೀಮಸೇನದೇವರು ಬಾಪ್ತಿಕರಿಗೆ ಶಿರಬಾಗಿದ್ದರು,

ಕೂಡಲೇ ಬಾರೀಕರು ಅದನ್ನು ವಿರೋಧಿಸಿ “ಛೇ, ಛೇ ಇದೇನು ಜಗತ್ಪಾಣ! ಸರ್ವಜೀವನಿಯಾಮಕ, ವಾಯುದೇವ! ನೀವು ನಿಮ್ಮ ಅನುಗ್ರಹೋಪಜೀವಿಯಾದ ನನಗೆ ನಮಿಸುವುದೇ?” ಎಂದರು. ಆಗ ಶ್ರೀಕೃಷ್ಣ “ಲೋಕಶಿಕ್ಷಣಾರ್ಥ! ಅಲ್ಲವೇ ಭಾರತೀರಮಣ! ಭೀಮಸೇನ, ಬಾಕರು ನಿನ್ನಲ್ಲಿ ಏನನ್ನೋ ಯಾಚಿಸಲು ಬಂದಂತಿದೆ. ಹೂಂ, ಅವರ ಮನೋರಥವನ್ನು ಪೂರ್ಣಮಾಡು" ಎಂದು ನಕ್ಕನು.

ಆಗ ಬಾಹ್ಲೀಕರಾಜರರು ಕಣ್ಣೀರು ಸುರಿಸುತ್ತಾ ಗದ್ಗದ ಕಂಠದಿಂದ “ಜಗನ್ನಾಥ! ನಿನಗೆ ತಿಳಿಯದ ವಿಷಯವೇನಿದೆ? ದೇವ, ನಿನ್ನ ಸೇವೆಗಾಗಿ ಜನಿಸಿದೆ. ಯೋಗ್ಯತಾನುಸಾರ ಸೇವಿಸಿದ್ದೇನೆ. ಸಾಕಿನ್ನು ಈ ಭವದ ಜಂಜಾಟ! ನಿನ್ನ ಹಸ್ತದಿಂದಲೇ ಮರಣವನ್ನಪ್ಪಬೇಕೆಂದೇನೋ ಆಶಿಸಿದೆ. ಆದರೆ ಆ ಭಾಗ್ಯವೂ ನನಗಿಲ್ಲವಾಯಿತು. ನೀನು ಶಸ್ತ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆಗೈದಿರುವೆ! ಮೇಲಾಗಿ ನಿನ್ನ ಅಮೃತಹಸ್ತದಿಂದ ಮೃತರಾದರೆ ಅಮೃತತ್ವವೆನಿಸಿದ ಮೋಕ್ಷವೇ ನಿಶ್ಚಿತ! ಆದರೆ ನನಗೆ ಈಗಾಗಲೇ ಮೋಕ್ಷವ ಬೇಡವಾಗಿದೆ, ಏಕೆಂದರೆ ಇನ್ನೂ ನಿನ್ನನ್ನು ವಿಶೇಷ ರೀತಿಯಿಂದ ಮುಂದಿನ ಜನ್ಮಗಳಲ್ಲಿ ಸೇವಿಸಬೇಕೆಂದು ಆಶಿಸಿದ್ದೇನೆ! ಕಲಿಯುಗದಲ್ಲಿ ರೂಪದ್ದಯದಿಂದ ಮತ್ತೆ ಮತ್ತೆ ಸೇವಿಸುವ ಹಿರಿಯಾಸೆ ನನಗಿದೆ. (ಭೀಮಸೇನನತ್ತ ತಿರುಗಿ) ಆದ್ದರಿಂದ ವಾಯುದೇವ! ನಿನ್ನ ವರದಹಸ್ತದಿಂದ ನನ್ನ ಮರಣವಾಗಬೇಕೆಂದು ನಾನು ಅಪೇಕ್ಷಿಸಿದ್ದೇನೆ. ಅದರಿಂದ ಧರ್ಮಸಾಧನೆಯಾಗುವುದು, ಕೀರ್ತಿಯೂ ಲಭಿಸುವುದು. ನನ್ನ ಇಚ್ಛೆಯೂ ಪೂರ್ಣವಾಗುವುದೆಂದು ನಂಬಿದ್ದೇನೆ. ಭಾರತೀಶ! ನಿನ್ನ ಗದಾಪ್ರಹಾರದಿಂದ ನನ್ನ ಇಹಲೋಕ ವ್ಯಾಪಾರವು ಮುಗಿಯುವಂತೆ ಅನುಗ್ರಹಿಸು!” ಎಂದು ಭೀಮಸೇನದೇವರನ್ನು ಪ್ರಾರ್ಥಿಸಿದರು. ಶ್ರೀಕೃಷ್ಣ ಭೀಮಸೇನದೇವರನ್ನು ನೋಡಿ ನಸುನಕ್ಕ

ಭೀಮಸೇನ : “ಹಿರಿಯರೇ, ನನಗೆ ತೊಂದರೆಯಾಗದೆ ನಾನು ಯಾರನ್ನೂ ಸಂಹರಿಸುವುದಿಲ್ಲ! ಅಲ್ಲದೆ ಶ್ರೀಹರಿಭಕ್ತರ ತಂಟೆಗೆ ನಾನು ಹೋಗುವುದಿಲ್ಲ. ಆದರೂ ಭಗವಂತನ ಆಜ್ಞೆ ನಿಮ್ಮಲ್ಲಿ ನನಗಿರುವ ನಿರತಿಶಯ ಪ್ರೇಮಗಳಿಂದ ನಿಮ್ಮ ಪ್ರಾರ್ಥನೆಯನ್ನು ಅಂಗೀಕರಿಸಿದ್ದೇನೆ!" ಇಂತು ಅಭಯವಿತ್ತರು.

ಭೀಮಸೇನದೇವರ ವಚನವನ್ನಾಲಿಸಿ ಬಾಹ್ಲೀಕರಾಜರನಿಗೆ ಸಮಾಧಾನವಾಯಿತು. ಮನದಲ್ಲಿಯೇ ಮುದಿಸಿದರು. ಇನ್ನು ತಮ್ಮ ಉದಾರವಾಗುವುದೆಂದವರು ತಿಳಿದರು. ತಮ್ಮ ಹರಿಸೇವಾಕಾಂಕ್ಷೆ ಪೂರ್ಣವಾಗುವುದೆಂದು ಸಂತುಷ್ಟರಾಗಿ ಶ್ರೀಕೃಷ್ಣ - ಭೀಮಸೇನದೇವರ ಅಪ್ರಣೆಯನ್ನು ಪಡೆದು ತಮ್ಮ ಬಿಡಾರಕ್ಕೆ ತೆರಳಿದರು.

ಕುರುಕ್ಷೇತ್ರದ ತಮ್ಮ ಬಿಡಾರಕ್ಕೆ ತೆರಳಿದ ಬಾಹ್ಲೀಕರಾಜರರು ಶ್ರೀವಾಯುದೇವರು ಯಾವಾಗಲೂ ತಮ್ಮ ಬೆಂಗಾವಲಾಗಿರುವುದು ಪುಣ್ಯವಿಶೇಷವೆಂದು ಹಿರಿ ಹಿರಿ ಹಿಗ್ಗಿದರು. ಅವರು - ಬೇಗ ಯುದ್ಧವು ಪ್ರಾರಂಭವಾಗಬಾರದೇ! ಯುದ್ಧದಲ್ಲಿ ಹರಿಯ ಭೂಭಾರಹರಣಕಾರ್ಯದಲ್ಲಿ ನನ್ನ ಪರಾಕ್ರಮವನ್ನು ತೋರಿಸಿ ಶ್ರೀರಮಾಧವನ ಸೇವೆ ಮಾಡುವ ಅವಕಾಶ ಶೀಘ್ರವಾಗಿ ದೊರಕಬಾರದೇ, ಶ್ರೀಭೀಮಸೇನದೇವರ ಗದಾಪ್ರಹಾರದಿಂದ ತಮಗೆ ಯಾವಾಗ ಮರಣವಾದೀತು? ಆ ಆ ಭಾಗ್ಯ ನನಗಾವಾಗ ಲಭಿಸೀತು! ಎಂದು ಯೋಚಿಸುತ್ತಾ ಕುರುಕ್ಷೇತ್ರ ಯುದ್ಧ ಪ್ರಾರಂಭವಾಗುವ ಕ್ಷಣವನ್ನು ನಿರೀಕ್ಷಿಸಹತ್ತಿದರು,

ಇತಿಹಾಸ ಪ್ರಸಿದ್ಧವಾದ ಭಾರತ ಯುದ್ಧ ಪ್ರಾರಂಭವಾಯಿತು. ಆ ಯುದ್ಧದಲ್ಲಿ ಬಾಕ್ಷೀಕರಾಜರು ತಮ್ಮ ಬಲವನ್ನು ಸಂಪೂರ್ಣವಾಗಿ ತೋರಿ ಅದನ್ನು ಭಗವತ್ತೂಜೆಯೆಂದು ಆಚರಿಸಿದರು.

ಭೀಕರವಾಗಿ ಯುದ್ಧವು ಜರುಗುತ್ತಿದ್ದ ಒಂದು ದಿನ, ಆದರೆ ಅಂದು ರಣರಂಗದಲ್ಲಿ ಯುದ್ಧವು ಅಷ್ಟು ರಭಸದಿಂದ ನಡೆಯುತ್ತಿರಲಿಲ್ಲ. ಯುದ್ಧದ ಚಟುವಟಿಕೆಗಳು ಭರದಿಂದ ಕಂಡುಬರುತ್ತಿರಲಿಲ್ಲ. ಆದರೂ ಪರಿಸ್ಥಿತಿಯು ಭಯಂಕರವಾಗಿತ್ತು,

ಯುದ್ಧವು ಪ್ರಾರಂಭವಾಯಿತು. ಶ್ರೀಬಾಹ್ಲೀಕರಾಜರರು ತಮ್ಮ ಶಿಬಿರದಲ್ಲಿ ಭಗವಂತನ ಧ್ಯಾನಪರರಾಗಿ ವಿಶೇಷ ಪ್ರಾರ್ಥನ ಸಲ್ಲಿಸಹತ್ತಿದರು. ಇಂದು ತಮ್ಮ ಅವತಾರ ಕಾರ್ಯ ಪರಿಸಮಾಪ್ತಿಯಾಗಬೇಕೆಂದು ಅವರು ನಿಶ್ಚಯಿಸಿದರು. ಶ್ರೀಹರಿವಾಯುಗಳನ್ನು ಸ್ಮರಿಸಿಕೊಂಡು ಯುದ್ಧಸನ್ನದ್ದರಾಗಿ ರಥವೇರಿ ರಣಭೂಮಿಗೆ ತೆರಳಿದರು.

ಮೊದಲು ಯುದ್ಧರಂಗದಲ್ಲಿ ಅವರಿಗೆ ಸಾತ್ಯಕಿಯು ಎದುರಾದ, ಅವನೊಡನೆ ಹೋರಾಟ ಪ್ರಾರಂಭಿಸಿದ ಬಾಹ್ಲೀಕರಾಜರರ ಅವನ ರಥವನ್ನು ಮುರಿದುಹಾಕಿದರು. ಅನಂತರ ಸಾತ್ಯಕಿಯನ್ನು ಸಂಹರಿಸಲು ಬಂದು ಬಾಣವನ್ನು ಪ್ರಯೋಗಿಸಿದರು.

ಅದೇ ಸಮಯಕ್ಕೆ ಎಲ್ಲಿಯೋ ಇದ್ದ ಭೀಮಸೇನದೇವರು ಭರದಿಂದ ಬಂದು ಆ ಬಾಣವನ್ನು ತುಂಡು ಮಾಡಿಬಿಟ್ಟರು. ಭೀಮಸೇನದೇವರು ಬಂದೊಡನೆ ಬಾಹ್ಲೀಕರಾಜರರಿಗೆ ಪರಮಾನಂದವಾಯಿತು.

ಭೀಮಸೇನದೇವರನ್ನು ನೋಯಿಸಬೇಕೆಂಬ ವಿಚಾರ ನೆನಪಾಯಿತು. ಕೂಡಲೇ ಬ್ರಹ್ಮದೇವರನ್ನು ಒಲಿಸಿ ಅವರಿಂದ ತಾವು ಪಡೆದಿದ್ದ “ಶತ” ಎಂಬ ಪ್ರಚಂಡ ಗದೆಯನ್ನು ಭೀಮಸೇನದೇವರ ಮೇಲೆ ಪ್ರಯೋಗಿಸಿದರು! ಬಾಹ್ಲೀಕರಾಜರರಿಗೆ ತಮ್ಮ ಶತಪ್ಪಿ ಗದೆಯಿಂದ ಭೀಮಸೇನದೇವರಿಗೆ ಯಾವ ತೊಂದರೆಯೂ ಆಗದೆಂದು ತಿಳಿದಿತ್ತು. ವಾಯುದೇವರಲ್ಲದೆ ಬೇರೊಬ್ಬರ ಮೇಲೆ ಆ ಗದೆಯ ಆಘಾತವಾಗಿದ್ದರೆ, ಕೂಡಲೇ ಅಸುನೀಗುತ್ತಿದ್ದರು! ಆದರೆ ಜೀವೋತ್ತಮರೂ ಜಗತ್ರಾಣರೂ ಆದ ವಾಯುದೇವರೇ ಭೀಮಸೇನರಾದ್ದರಿಂದ ಶತ ಪ್ರಹಾರದಿಂದ ಅವರ ಕೂದಲೂ ಕೊಂಕಲ್ಲ. ಆದರೂ ಭೀಮಸೇನವರು ಬ್ರಹ್ಮದೇವರ ಮೇಲಿನ ಗೌರವದಿಂದ ಶತಮ್ ಆಘಾತದಿಂದ ಒಮ್ಮೆ ಕಂಪಿಸಿದವರಂತೆ ನಟಿಸಿದರು! ಆಗ ಭೀಮಸೇನದೇವರಿಗೆ ಶ್ರೀಕೃಷ್ಣನ ಆಣತಿಯಂತೆ ತಾವು ಬಾಹ್ಲೀಕರಾಜರರಿಗಿತ್ತ ಅಭಯವಚನ ನೆನಪಾಯಿತು. ತಮ್ಮ ಅಭಯವಚನವನ್ನು ಪೂರ್ಣಗೊಳಿಸಲು ನಿಶ್ಚಯಿಸಿ, ಅವರು ಕೆರಳಿದವರಂತೆ ನಟಿಸುತ್ತಾ ಬಾಕರತ್ತ ತಿರುಗಿದರು.

ಆಗ ಬಾಕರಿಗಾದ ಆನಂದ ಅವರ್ಣನೀಯ! ಅವರ ಮುಖದಲ್ಲಿ ಭಯ, ದೈನ್ಯ, ಭಕ್ತಿಗಳು ಒಡಮೂಡಿದ್ದು. ಭೀಮಸೇನದೇವರು ಹತ್ತಿರ ಬರುತ್ತಿದಂತೆ ಬಾಸ್ಪೀಕರಾಜರು ರಥದಿಂದ ಕೆಳಗಿಳಿದು ಕರಮುಗಿದು “ಬಾ ದೇವ! ಪವಮಾನ! ತಂದೆ, ನಿನ್ನ ಪವಿತ್ರಗದೆಯಿಂದ ನಿನ್ನ ಭಕ್ತನಾದ ನನ್ನ ಇಹಲೋಕ ವ್ಯಾಪಾರವನ್ನು ಮುಗಿಸು ಸ್ವಾಮಿ” ಎಂದು ಪ್ರಾರ್ಥಿಸಿದರು.

ಭೀಮಸೇನದೇವರು ಮಂದಹಾಸ ಬೀರಿ ಬಾರೀಕರ ಮೇಲೆ ಗದಾಪ್ರಹಾರ ಮಾಡಿದರು. ಶ್ರೀಬಾಹ್ಲೀಕರಾಜರರು ಶ್ರೀಹರಿವಾಯುಗಳನ್ನು ಸ್ಮರಿಸುತ್ತಾ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಲನುವಾದರು. ಮರಣವು ಸ್ನೇಹಿತವಾಗುತ್ತಿದ್ದಂತೆ ಯಾತ್ರಿಕರಾಜ ದೀನರಾಗಿ ಭಕ್ತಿಯಿಂದ ದೇವ, ಮಾನ ನಿನ್ನದನ್ನ ಪ್ರಾರ್ಥನೆಯನ್ನು ಪಾರ್ಣಮಾಡು ತಂದೆ” ಎಂದು ಕೋರಿದರು. ಭೀಮಸೇನದೇವರು ಕಾರುಣ್ಯಪೂರ್ಣವಾಗಿ “ಅದೇನು ಕೊಳಿರಿ, ನಿಮ್ಮ ಮನೋರಥವನ್ನು ಪೂರ್ಣಮಾಡುತ್ತೇವೆ” ಎಂದರು.

ಬಾರೀಕರು ಕರಜೋಡಿಸಿ “ಸ್ವಾಮಿ, ಮುಂದೆ ನೀವು ಹರಿಯ ಸ್ನಾನಕಾರ್ಯಕ್ಕಾಗಿ ಅವತರಿಸಿದಾಗ ನಿಮ್ಮ ಮತಾನುಯಾಯಿಯಾಗಿ, ನಿಮ್ಮ ಭಕ್ತನಾಗಿ, ಭಗವಂತನ ಜ್ಞಾನಕಾರ್ಯದಲ್ಲಿಯೂ ನಾನು ವಿಶೇಷ ಸೇವೆ ಮಾಡಲು ಆತಿಸುತ್ತೇನೆ. ಅದರಂತೆ ನೀವು ನನ್ನಲ್ಲಿ ಅನುಗ್ರಹಿಸಿ ಸೇವೆ ಮಾಡಲು ವರವನ್ನು ಕರುಣಿಸಿರಿ' ಎಂದು ಪ್ರಾರ್ಥಿಸಿದರು.

ಭೀಮಸೇನವರು ನಸುನಕ್ಕು “ತಥಾಸ್ತು ಶ್ರೀಹರಿಗೆ ನಿಮ್ಮಿಂದ ವಿಶೇಷ ಸೇವೆಯು ನೆರವೇರುವಂತೆ ಅನುಗ್ರಹಿಸುತ್ತೇವೆ. ನಿಮಗೆ ಮಂಗಳವಾಗಲಿ" ಎಂದು ಸುಪ್ರೀತರಾಗಿ ರಾಷ್ಟ್ರೀಕರ ಶಿರದ ಮೇಲೆ ಕರವಿಟ್ಟು ಅನುಗ್ರಹಿಸಿ ಮರಪ್ರದಾನ ಮಾಡಿದರು.

ಕೂಡಲೇ ನಾಸ್ತಿಕರು ಆನಂದಭರಿತರಾಗಿ ಭಕ್ತಿಯಿಂದ “ಶ್ರೀಹರಿನಾರಾಯಣ, ದೇ ಕೃಷ್ಣ, ಗೋವಿಂದ, ಶ್ರೀವಾಯುದೇವ, ನಮೋ ನಮಃ ಈ ಭಕ್ತನಲ್ಲಿ ಅನುಗ್ರಹವು ಸ್ಥಿರವಾಗಿರಲಿ” ಎಂದು ವಿಜ್ಞಾಪಿಸಿ, ಶ್ರೀಹರಿವಾಯುಗಳ ನಾಮಸ್ಮರಣ ಮಾಡುತ್ತಾ ತಮ್ಮ ಇಹಲೋಕವ್ಯಾಪಾರ ಮತ್ತು ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿ ಅಮೆಯಾದರು!

ಯುದ್ಧರಂಗದಲ್ಲಿ ಇವೆಲ್ಲವನ್ನು ನೋಡುತ್ತಿದ್ದ ಸಕಲರೂ ಬಾಹ್ಲೀಕರಾಜರರ ಶ್ರೀಹರಿ-ವಾಯು ಭಕ್ತಿಯನ್ನು ಕಂಡು ಆಶ್ಚರ್ಯಾನಂದ ಚಕಿತರಾಗಿ “ಭಾಗವತಾಗ್ರಣಿ! ಶ್ರೀಮ-ವಾಯುಭಕ್ತಾಗ್ರಗಣ್ಯ! ಮಂಗಳಮೂರ್ತಿ, ಶ್ರೀಬಾವಾ, ನೀವೇ ಧನ್ಯರು, ನಿಮಗೆ ನಮೋ ನಮಃ” ಎಂದು ಅವರ ಗುಣಗಾನ ಮಾಡಿದರು.

ಕಲಿಯುಗ ಕಲ್ಲತುವಿನಲ್ಲಿ ಶ್ರೀ ನಾಸ್ತಿಕನಾತ ತೃತೀಯೋಲಾಗುವು ಮುಗಿದು