ಕಲಿಯುಗ - ಕಲ್ಪತರು
ಅನುಬಂಧ
ಬೃಂದಾವನಪ್ರವೇಶಾನಂತರ ಮಹಿಮೆಗಳು
ಕಲಿಯುಗ - ಕಲ್ಪತರು
ಅನುಬಂಧ
ಶ್ರೀಗುರುರಾಜರ ಗ್ರಂಥಗಳು
ತತ್ತಶಾಸಪಪಂಚಕ್ಕೆ ಶ್ರೀಗುರುಸಾರ್ವಭೌಮರ ಕೊಡುಗೆ ಅನನ್ನಸಾಧಾರಣವಾದುದು. ಅವರ ಅಪಾರ್ವಕೊಡುಗೆಯಿಂದಲೇ ಇಂದು ದೈತಸಿದ್ಧಾಂತವು ಬೆಳಗುತ್ತಿದೆ. ಮಾತ್ರವಲ್ಲ; ಮಧ್ವಸಿದ್ಧಾಂತವು ಅತ್ಯಂತ ಪರಿಪುಷ್ಟವಾಗಿ, ಸಕಲಸಜ್ಜನರಪಾಠ ಪ್ರವಚನಗಳಿಗೆ ಸಹಾಯಕರಾಗಿ (ತತ್ವವಾದಮತವು ಆಚಂದ್ರಾರ್ಕಸ್ಥಾಯಿಯಾಗಿ ಬೆಳೆದುಬರಲು ಕಾರಣವಾಯಿತೆಂದು ಘಂಟಾಘೋಷವಾಗಿ ಹೇಳಬಹುದು.
ದ್ವಾಪರಯುಗದಲ್ಲಿ ಗೌತಮರ ಶಾಪ ಮತ್ತು ಕಾಲಬಲದಿಂದಲೂ ಜ್ಞಾನವು ನಷ್ಟವಾಗಿ ಸಾಧನಜೀವಿಗಳು ಪರಿತಪಿಸುತ್ತಿರುವಾಗ ಮುಮುಕ್ಷುಗಳಲ್ಲಿ ಕೃಪೆಯುಳ್ಳ ಬ್ರಹ್ಮರುದೇಂದ್ರಾದಿ ಬೃಂದಾರಕವೃಂದವು ಶ್ರೀಮನ್ನಾರಾಯಣನಿಗೆ ಶರಣು ಹೋದರು. ಆಗ ಕರುಣಾಸಾಗರನಾದ ಶ್ರೀಹರಿಯು ವೇದವ್ಯಾಸರೂಪದಿಂದವತರಿಸಿ, ವೇದವಿಭಾಗಪೂರ್ವಕವಾಗಿ ವೇದಾರ್ಥ ನಿರ್ಣಾಯಕಗಳಾದ ಬ್ರಹ್ಮಸೂತ್ರಗಳನ್ನು ರಚಿಸಿ ಅನಾದವಚ್ಛಿನ್ನ ಪರಂಪರೆಯಿಂದ ಬಂದ ವೈದಿಕ ಸವೈಷ್ಣವ ಸಿದ್ಧಾಂತವನ್ನು ಪ್ರತಿಷ್ಠಾಪಿಸಿ, ಬ್ರಹ್ಮರುದ್ರಾದಿ ಸಮಸ್ತ ಸುಜೀವಿಗಳಿಗೆ ಜ್ಞಾನವನ್ನು ಬೋಧಿಸಿ ಅನುಗ್ರಹಿಸಿದನು. ಶ್ರೀಹಂಸನಾಯಕಪರಮಾತ್ಮನಿಂದ ಪ್ರವೃತ್ತವಾಗಿ ಮತ್ತೊಮ್ಮೆ ಶ್ರೀವೇದವ್ಯಾಸರೂಪದಿಂದ ಸುಪ್ರತಿಷ್ಠಿತವಾದ ಜ್ಞಾನಪರಂಪರೆಯಿಂದ ಸಜ್ಜನರ ಉದ್ಧಾರವಾಯಿತು. ಈ ಜ್ಞಾನಪರಂಪರೆಯು ಬೆಳೆದು ಬಮದ ಕ್ರಮವನ್ನು ಶ್ರೀವಾದೀಂದ್ರತೀರ್ಥರು ಬಹುಹೃದಯಂಗಮವಾಗಿ ಹೀಗೆ ನಿರೂಪಿಸಿದ್ದಾರೆ
“ವ್ಯಾಸೇನವುಸ್ತಬೀಜಃ ಶ್ರುತಿಭುವಿ ಭಗವತ್ಪಾದಲಬ್ಬಾಂಕುರಃ |
ಪ್ರಶ್ನೆ ರೀಪಿತೃಭಿನ್ನೋSಜನಿ ಜಯಮುನಿನಾ ಸಮಗುದಿನ್ನ ಶಾಖಃ ||
ಮನೀಶ ವ್ಯಾಸರಾಜಾದುದಿತಕಿಸಲಯಃ ಪುಷ್ಟಿತೋಯಂ ಜಯೀಂದ್ರಾತ್ | ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ಧಾಂತಶಾಖೀ ||
ಶ್ರೀವೇದವ್ಯಾಸದೇವರು ಮುಕ್ತಿಯೋಗ ಸಜ್ಜನರ ಉದ್ಧಾರಕ್ಕಾಗಿ ವೇದಭೂಮಿಯಲ್ಲಿ ಬ್ರಹ್ಮಸೂತ್ರಗಳೆಂಬ ಬೀಜಗಳನ್ನು ಬಿತ್ತಿದರು. ಶ್ರೀಮಧ್ವಾಚಾರರಭಾಷ್ಯಾದಿ ಗ್ರಂಥರೂಪ ಅಮೃತಸೇಚನದಿಂದ ಅದು ಅಂಕುರಿಸಿತು. ಪ್ರಾಚೀನಾಚಾರ್ಯರಾದ ಪದ್ಮನಾಭ-ನರಹರಿತೀರ್ಥರ ಕೃತಿಗಳಿಂದ ಅದು ಠಸಿಲೊಡೆಯಿತು. ಇಂದ್ರಾವತಾರಿ ಶ್ರೀಜಯಮುನಿಗಳ ಟೀಕೆಗಳಿಂದ ಅದು ಶಾಖೋಪಶಾಖೆಗಳಿಂದ ಶೋಭಿಸಿತು. ಮೌನಿ ಗ್ರಂಥಗಳಿಂದ ಚಿಗುರಲೆಗಳಿಂದ ಅದು ರಾಜಿಸಿತು. ಮಹಾಮಹಿಮರಾದ ಶ್ರೀವಿಜಯೀಂದ್ರತೀರ್ಥರ ನೂರಾನಾಲ್ಕು ಗ್ರಂಥಗಳಿಂದದು ಪುಷ್ಟಿತವಾಯಿತು. ಈಗ ಆ ಮಧ್ವಸಿದ್ಧಾಂತವೆಂಬ ಕಲ್ಪವೃಕ್ಷವು ಪ್ರಹ್ಲಾದವತಾರಿಗಳಾದ ಶ್ರೀರಾಘಗುರುಸಾರ್ವಭೌಮರ ನಲವತ್ತೆಂಟು ಅಸದೃಶ ಗ್ರಂಥಗಳಿಂದ ಫಲಭರಿತವಾಗಿ ಕಂಗೊಳಿಸುತ್ತಿದೆ!
ಹೀಗೆ ವಿವಿಧ ಹಂತಗಳಿಂದ ಬೆಳೆದುಬಂದ ದೈತಸಿದ್ಧಾಂತ ಕಲ್ಪವೃಕ್ಷವು ಶ್ರೀಗುರುರಾಜರಿಂದಲೇ ಫಲಭರಿತವಾಗಿ ಅಂದಿನಿಂದ ಸಕಲಸಜ್ಜನರೂ ಶ್ರೀರಾಯರ ದಯದಿಂದ ಆ ಕಲ್ಪತರುವಿನ ಮಧುರ ಫಲವನ್ನು, ಆಸ್ವಾದಿಸಿ ಆನಂದಿಸುವಂತಾಯಿತು! ಇದರಿಂದ ಸಿದ್ಧಾಂತಕ್ಕೆ ಜ್ಞಾನಿಗಳಿಗೆ ಆಗಿರುವ ಮಹದುಪಕಾರವು ಸ್ಪಷ್ಟವಾಗುವುದು. ಇಂತು ಉಪಕರಿಸಿದ ಆ ಮಹನೀಯರಿಗೆ ವಿದ್ವತ್ಥಪಂಚವು ಚಿರಋಣಿಯಾಗಿದೆ.
ಶ್ರೀಬ್ರಹ್ಮ ಸೂತ್ರಗಳ ಹಾರ್ದ ತಿಳಿಯಲು ಶ್ರೀಮದಾಚಾರ್ಯರ ಭಾಷ್ಯಗಳಿಗೇ ಶರಣುಹೋಗಬೇಕು. ಇದರಂತೆ ಶ್ರೀಮಧ್ವ- ಜಯಮುನಿಗಳ ಭಾಷ್ಯ-ಟೀಕೆಗಳ ಅರ್ಥವಾಗಬೇಕಾದರೆ ಶ್ರೀವ್ಯಾಸರಾಜ-ಗುರುರಾಜ-ಗ್ರಂಥಗಳಿಗೆ ಶರಣುಹೋಗಬೇಕು. ಚಂದ್ರಿಕಾರಾಯರ ಹಾಗೂ ರಾಯರ ವಚನಗಳಂತೂ ತಮ್ಮ ಮಾತಿಗೆ ತಾವೇ ವಿವರಣೆ ನೀಡಿದಂತಿರುವುದೆಂದಮೇಲೆ ಕೇಳುವುದೇನಿದೆ ? ಆಚಾರರ, ಟೀಕಾರಾಯರ, ಚಂದ್ರಿಕಾರಾಯರ ಹೃದ್ಗತಾರ್ಥವನ್ನು ಹೊರಗೆಡಹಲು ಗುರುರಾಜರ ಗ್ರಂಥಗಳಿಂದ ಮಾತ್ರ ಸಾಧ್ಯ! ವ್ಯಾಸರಾಜರು ಮುನಿತ್ರಯರಲ್ಲಿ ಸೇರಿರುವಂತೆ ಅವರ ಅವತಾರರಾದ ರಾಯರೂ ಮುನಿತ್ರಯರಲ್ಲಿ ಸೇರಿದ್ದಾರೆಂಬುದರಲ್ಲಿ ಸಂದೇಹವಿಲ್ಲ.
ದೈತಶಾಸ್ತ್ರದಲ್ಲಿ ಏಕವಾಕೃತೆಯನ್ನು ಉಳಿಸಿಕೊಂಡು ಬಂದ ಅಸದೃಶ ಕೀರ್ತಿ ಗುರುರಾಜರೊಬ್ಬರಿಗೇ ಸಲ್ಲುವುದು. ಮಂತ್ರಾಲಯ ಮುನೀಂದ್ರರು ವೈದಿಕವಾಲ್ಮೀಯಕ್ಕೆ ಗ್ರಂಥರಚನೆಯ ಮೂಲಕ ಅಪಾರಸೇವೆಯನ್ನು ಸಲ್ಲಿಸಿದ್ದಾರೆ. ಅವರ ಈ ಮಹೋಪಕಾರವನ್ನು ಜ್ಞಾನಪ್ರಪಂಚ ಎಂದಿಗೂ ಮರೆಯುವಂತಿಲ್ಲ. ಶ್ರೀರಾಘವೇಂದ್ರಸ್ವಾಮಿಗಳು ೧) ಶ್ರುತಿಪ್ರಸ್ಥಾನ, ೨) ಉಪನಿಷತ್ ಪ್ರಸ್ಥಾನ, ೩) ಗೀತಾಪ್ರಸ್ಥಾನ ಹಾಗೂ ೪) ಸೂತ್ರಪ್ರಸ್ಥಾನ - ಹೀಗೆ ನಾಲ್ಕು ಪ್ರಸ್ಥಾನಗಳಲ್ಲಿಯೂ ಅಸಾಧಾರಣ ಟೀಕಾ-ಟಿಪ್ಪಣಿ, ಸ್ವತಂತ್ರಗ್ರಂಥಗಳನ್ನು ರಚಿಸಿ ವೈದಿಕವಾಹ್ಮಯಭಂಡಾರವನ್ನು ತುಂಬಿ ಅದಕ್ಕೆ ಕಳೆ ತಂದಿದ್ದಾರೆ. ಶ್ರೀಗುರುರಾಜರು ರಚಿಸಿದ ಗ್ರಂಥಗಳು ಹೀಗಿವೆ –
(೧) ಶ್ರುತಿಪ್ರಸ್ಥಾನ
1-3) ತಯಿ ಎಂದು ವಿಖ್ಯಾತವಾದ ಋಕ್, ಯಜಸ್ಸಾಮ ವೇದಗಳಿಗೆ ಭಾಷ್ಯಗಳು.
4) ಮಂತ್ರಾರ್ಥಮಂಜರೀ.
5-9) ಪುರುಷಸೂಕ್ತಾದಿ ಪಂಚಸೂಕ್ತಗಳ ವ್ಯಾಖ್ಯಾನಗಳು
(೨) ಉಪನಿಷತ್ಪಸ್ಥಾನ
10-19) ದಶೋಪನಿಷತ್ ಖಂಡಾರ್ಥಗಳು.
(೩) ಗೀತಾಪ್ರಸ್ಥಾನ
೨೦) ಗೀತಾರ್ಥಸಂಗ್ರಹ: (ಗೀತಾವಿವೃತಿ)
21) ಗೀತಾಭಾಷ್ಯ-ಪ್ರಮೇಯದೀಪಿಕಾ ಟಿಪ್ಪಣಿ.
22) ಗೀತಾ ತಾತ್ಪರ್ಯಟೀಕಾ ಟಿಪ್ಪಣಿ.
(೪) ಸೂತ್ರಪ್ರಸ್ಥಾನ
೨೩) ತಂತ್ರದೀಪಿಕಾ.
೨೪) ನ್ಯಾಯಮುಕ್ತಾವಲಿಃ.
25) ಬ್ರಹ್ಮಸೂತ್ರಭಾಷ್ಯ-ತತ್ವಪ್ರಕಾಶಿಕಾಟಿಪ್ಪಣಿ ಭಾವಾದೀಪಃ,
೨೬) ಅಣುಭಾಷ್ಯಕ್ಕೆ ಟೀಕೆ-ತತ್ವಮಂಜರೀ,
27) ಅನುವಾಖ್ಯಾನಟೀಕಾ-ಶ್ರೀಮನ್ನಾಯಸುಧಾ ಟಿಪ್ಪಣಿ ಪರಿಮಳ.
28-37) ದಶಪ್ರಕರಣ ಟೀಕಾ-ಟಿಪ್ಪಣಿಗಳು.
38) ಚಂದ್ರಿಕಾ-ಪ್ರಕಾಶಃ.
೩೯) ತರ್ಕತಾಂಡವವ್ಯಾಖ್ಯಾ-ನ್ಯಾಯದೀಪಃ.
೪೦) ವಾದಾವಳೀ ಟಿಪ್ಪಣಿ.
೪೧) ಪ್ರಮಾಣಪದ್ಧತಿ ಟಿಪ್ಪಣಿ.
42) ಅಣುಮಧ್ವವಿಜಯವ್ಯಾಖ್ಯಾನ-ಗೂಢಭಾವಪ್ರಕಾಶಿಕಾ,
೪೩) ಪಾತ್ರಃಸಂಕಲ್ಪಗದ್ಯಮ್
೪೪) ಶ್ರೀರಾಮಚಾರಿತ್ರ ಮಂಜರೀ,
೪೫) ಶ್ರೀಕೃಷ್ಣಚಾರಿತ್ರ್ಯಮಂಜರೀ,
46) ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯ-ಭಾವಸಂಗ್ರಹಃ.
47) ಭಾಟ್ಟಸಂಗ್ರಹಃ.
48) ಪ್ರಮೇಯಸಂಗ್ರಹಃ.
ಹೀಗೆ ರಾಯರು ವೇದ, ಉಪನಿಷತ್, ಸೂಕ್ತಗಳು, ಗೀತಾ, ಬ್ರಹ್ಮಸೂತ್ರ ಶ್ರೀಮದ್ದಭಾಷ್ಯಗಳು ಹಾಗೂ ಟೀಕೆಗಳಿಗೂ ವ್ಯಾಖ್ಯಾನ ರಚಿಸಿರುವುದಲ್ಲದೆ ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾರೆ. ಇದರಂತೆ ಭಾಗವತ, ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿದಂತೆ ನಿತ್ಯೋಪಯೋಗಿಯಾದ ಸಂಗ್ರಹರಾಮಾಯಣ, ಭಾಗವತದ ದಶಮಸ್ಕಂದ, ಮಹಾಭಾರತತಾತ್ಪರನಿರ್ಣಯಗಳ ಮೇಲೆ ಶ್ರೀರಾಮ-ಶ್ರೀಕೃಷ್ಣಚಾರಿತ್ರ ಮಂಜರಿಗಳು. ಭಾವಸಂಗ್ರಹಗಳೆಂಬ ಗ್ರಂಥಗಳನ್ನು ರಚಿಸಿ, ಅವುಗಳ ಪಾರಾಯಣಫಲವು ಸುಜನರಿಗೆ ದೊರಕುವಂತೆ ಮಾಡಿ ಉಪಕರಿಸಿದ್ದಾರೆ, ಇದರಂತೆ ಪ್ರತಿದಿನ ಪಾರಾಯಣೋಪಯೋಗಿಯಾದ ನಾರಾಯಣ ಪಂಡಿತಾಚಾರ ವಿರಚಿತ ಪ್ರಮೇಯನವಮಾಲಿಕಾ (ಅಣುಮಧ್ವವಿಜಯ್) ಗ್ರಂಥಕ್ಕೆ ಪೂರ್ವಾಶ್ರಮದಲ್ಲಿಯೇ “ಗೂಢಾಭಾವ ಪ್ರಕಾಶಿಕಾ” ಎಂಬ ಉತ ಷ್ಟವ್ಯಾಖ್ಯಾನವನನ್ನು ರಚಿಸಿದ್ದಾರೆ. ಪ್ರಮೇಯ ವಿಚಾರಗಳನ್ನು ಸಂಗ್ರಹಿಸಿ “ಪ್ರಮೇಯಸಂಗ್ರಹ”ವೆಂಬ ಕೃತಿಯನ್ನು ರಚಿಸಿ ಸಜ್ಜನರಿಗೆ ಸರಿಯಾದ ಪ್ರಮೇಯಜ್ಞಾನವಾಗುವಂತೆ ಮಾಡಿದ್ದಾರೆ.
ಶ್ರೀಹರಿ-ವಾಯು ಮಹಾಮಹಿಮಾಬೋಧಕವೂ ಸಕಲಶಾಸ್ತ್ರರ್ಥಗರ್ಭಿತವೂ ಆದ “ಪ್ರಾತಸ್ತಂಕಲ್ಪಗದವನ್ನು ರಚಿಸಿ ರಾಯರು ಸಜ್ಜನರಲ್ಲಿ ಕೃಪೆದೋರಿದ್ದಾರೆ. ಮಿಮಾಂಸಾಶಾಸ್ತ್ರದ ಮೇಲೆ ಇವರು ರಚಿಸಿರುವ 'ಭಾಟ್ಟಸಂಗ್ರಹ'ವು ಆ ಶಾಸ್ತ್ರಕ್ಕೆ ರಾಯರು ನೀಡಿದ ಶ್ರೇಷ್ಠ ಕೊಡುಗೆಯಾಗಿದೆ.
ಆಚಾರ್ಯರಿಂದ ಪ್ರವರ್ತಿತವಾದ ದೈತಸಿದ್ಧಾಂತವು ಶ್ರೀಜಯತೀರ್ಥರಿಂದ ಬಲಗೊಂಡು ಶ್ರೀವ್ಯಾಸರಾಜರ “ವ್ಯಾಸತ್ರಯ"ದಿಂದ ಪರಿಪುಷವಾಯಿತು. ಅಜಯರೆಂದು ಕೀರ್ತಿಗಳಿಸಿದ ವಿಜಯಿಂದರ ನೂರಾನಾಲ್ಕು ಗ್ರಂಥಗಳಿಂದ ಸಿದ್ದಾಂತವು ಸುದೃಢವೂ ವಿಸ್ತ್ರತವೂ ಆಯಿತು, ದೈತಶಾಸ್ತ್ರದ ಒಂದೊಂದು ಪ್ರಮೇಯಗಳನ್ನು ವಿವರಿಸಲೂ ಅನೇಕ ಗ್ರಂಥಗಳೇ ಬೆಳದವು. ಅದಕ್ಕೆ ಅಂದಿನ ಜನರ ಪಾಂಡಿತವೂ ಉಚ್ಚಮಟ್ಟದಲ್ಲಿದ್ದುದೂ, ರಾಜಕೀಯ ಬೆಂಬಲವೂ ಸಹ ಬಹುಮಟ್ಟಿಗೆ ಕಾರಣವೆನ್ನಬಹುದು. ಆದರೆ ಮುಂದೆ ವಿಜಯಿಂದ್ರ-ಸುಧೀಂದ್ರರ ಕಾಲಾನಂತರ ತಂಜಾವೂರು, ಮಧುರೆ, ಮುಂತಾದ ರಾಜ್ಯಗಳು ಬಲಹೀನವಾದವು ವೆಲ್ಲೂರಿನಲ್ಲಿದ್ದ ಕನ್ನಡಸಾಮ್ರಾಜ್ಯದ ಅರಸರು ನಾಮಮಾತ್ರ ಅರಸರಾಗಿದ್ದರು. ಹೀಗಾಗಿ ಜತೆಯಲ್ಲಿ ಬಹುವಾದ ಅಶಾಂತಿಯು ತಲೆಯೆತ್ತಿತ್ತು. ಇದಕ್ಕೆ ಸರಿಯಾಗಿ ಬಿಜಾಪುರ, ಗೋಲ್ಗೊಂಡ, ಮುಂತಾದ ಯವನಸುಲ್ತಾನರ ಕಾಟವೂ ಹೆಚ್ಚಾಯಿತು. ಇಂತು ಇಪ್ಪತೈದು-ಮೂವತ್ತು ವರ್ಷಗಳು ಗತಿಸಿದ್ದರಿಂದ ಸಂಸ ತಿಯ ಅಮೂಲ್ಯವಾದ ಏಕಸೂತ್ರತೆಯು ನಾಶವಾಗುವ ಪರಿಸ್ಥಿತಿ- ಯುಂಟಾಯಿತು.
ಇದೂ ಅಲ್ಲದೆ, ಪಾಂಡಿತ್ಯಬಲದಿಂದ ಶಾಸ್ತ್ರಗಳು ಅತಿಯಾಗಿ ಬೆಳೆದಿದ್ದು, ಬರಬರುತ್ತಾ, ಮುಖ್ಯ ಪ್ರಮೇಯಗಳ ಸಾರಾರ್ಥವೇ ಮರೆತುಹೋಗಿ ಕೇವಲ ಅಲ್ಪ ಹಾಗೂ ಕ್ಷುಲ್ಲಕ ವಿಷಯಗಳಲ್ಲಿಯೇ ವಿದ್ವಾಂಸರು ತಮ್ಮ ಶುಷ್ಕಪಾಂಡಿತ್ಯ ಪ್ರದರ್ಶಿಸಲಾರಂಭಿಸಿದರು. ಇಂಥ ಸಂಕ್ರಾತಿ ಕಾಲದಲ್ಲಿ ಮಾಧ್ವಶಾಸ್ತ್ರ ಪ್ರಪಂಚದಲ್ಲಿ ಹಿಂದಿನ ಏಕಸೂತ್ರವನ್ನು ಎತ್ತಿಹಿಡಿದು ಸುಜನರಿಗೆ ಸನ್ಮಾರ್ಗ ಪ್ರದರ್ಶನಮಾಡುವ ಜ್ಞಾನಿಗಳ ಅವಶ್ಯಕತೆ ಬಹಳವಾಗಿತ್ತು. ಇದೂ ಅಲ್ಲದೆ, ವಿಸ್ತಾರವಾದ ವೈದಿಕವಾಹ್ಮಯದ ವಿಷಯಗಳನ್ನು ಜಿಜ್ಞಾಸುಗಳು ಬುದ್ಧಿಯ ಅಚ್ಚುಕಟ್ಟಿನಲ್ಲಿಡಲು ಶೌತ, ಗೃಹ್ಯ, ಧರ ಮತ್ತು ಮಿಮಾಂಸಾ ಸೂತ್ರಗಳೆಂತು ಸಹಾಯಕವೋ, ಹಾಗೆಯೇ ದೈತಶಾಸ್ತ್ರದಲ್ಲಿಯೂ ಅಂತಹ ಗ್ರಂಥರಚನೆಯು ಅವಶ್ಯವಾಗಿತ್ತು. ಈ ಮಹಾಕಾವ್ಯವನ್ನು ಯಶಸ್ವಿಯಾಗಿ ಪೂರ್ಣಮಾಡಿದ ಕೀರ್ತಿ ಗುರುಸಾರ್ವಭೌಮರಿಗೆ ಸಲ್ಲುವುದು.
ಶ್ರೀರಾಯರು ಸಕಲ ಮೂಲ ಮತ್ತು ಟೀಕೆಗಳಿಗೆ ವ್ಯಾಖ್ಯಾನಗಳನ್ನು ರಚಿಸಿದರು. ಮಾತ್ರವಲ್ಲ; ಬ್ರಹ್ಮ ಸೂತ್ರ, ಗೀತೆ, ಉಪನಿಷತ್ತುಗಳ ಅರ್ಥವನ್ನು ಸುಲಭವಾಗಿ ತಿಳಿಸುವ ಬೇರೆ ಬೇರೆ ಗ್ರಂಥಗಳನ್ನು ವಿರಚಿಸಿದರು. ಚಂದ್ರಿಕೆಗೆ ಪ್ರಕಾಶವನ್ನು ರಚಿಸಲಾರಂಭಿಸಿದ ರಾಯರು ಸೂತ್ರದ ಹೃದ್ಗತವೇ ಜಿಜ್ಞಾಸುಗಳಿಗೆ ಸರಿಯಾಗಿ ಅರ್ಥವಾಗದಿದ್ದರೆ ಚಂದ್ರಿಕಾ ವ್ಯಾಖ್ಯಾನ ವ್ಯರ್ಥವಾದೀತೆಂದು ಚಿಂತಿಸಿ ಅದನ್ನು ಅರ್ಧಕ್ಕೇ ನಿಲ್ಲಿಸಿ 'ತಂತ್ರದೀಪಿಕಾ', 'ನ್ಯಾಯಮುಕ್ತಾವಳಿ' ಎಂಬೆರಡು ಕೃತಿಗಳನ್ನು ಬರೆದು ನಂತರ 'ಚಂದ್ರಿಕಾಪ್ರಕಾಶ'ವನ್ನು ಪೂರ್ತಿಗೊಳಿಸಿದರು.
ಮಂತ್ರಾಲಯಪ್ರಭುಗಳ ಪ್ರಬಂಧ ಪ್ರಣಯನ ಶೈಲಿಯು ಅನ್ಯಾದೃಶವಾದುದು. ಅದನ್ನು ಶ್ರೀವಾದೀಂದ್ರಗುರುಗಳು ಹೃದಯಂಗಮವಾಗಿ ನಿರೂಪಿಸಿದ್ದಾರೆ -
“ಚಿತೇನಾಯುಕ್ತಮರ್ಥಂ ಕಲಯತಿ ಸಹಸಾ ನಾಭಿದತ್ತೇ ನ ಸದ್ದಿಃ |
ಸಾಕಂಮಿಮಾಂಸತೇ ವಾ ನ ಲಿಖತಿ ವಚಸೋದ್ಘಾಟಯತ್ಯಾಶಯಂಸ್ವಮ್ || ಉಕ್ತಂ ನೋ ವಕ್ತಿಭೂಯಃ ಕ್ವಚಿದಪಿ ಲಿಖಿತಂ ನೈವನಿರ್ಮಾಪ್ಪಿ ತಸ್ಮಾ-
ದಸಾಭಿಃ ಸತ್ಪಬಂಧಪ್ರಣಯನ ವಿಷಯೇ ಸೂಯತೇ ರಾಘವೇಂದ್ರಃ ||
ಗುರುರಾಜರು ಅಯೋಗ್ಯವೂ, ಯುಕ್ತಿರಹಿತವೂ, ಅನುಪಪನ್ನವೂ ಆದ ಅರ್ಥವನ್ನು ಮನಸಿನಲ್ಲೂ ಚಿಂತಿಸುವವರಲ್ಲ. ದುಡುಕಿನಿಂದ ಅಥವಾ ಛಲದಿಂದ ಅಂಥ ಅಯುಕ್ತವಾದ ಅರ್ಥವನ್ನು ಹೇಳುವವರಲ್ಲ. ಜ್ಞಾನಿಗಳೊಡನೆ ಕಲೆತಾಗ “ಹೀಗೇಕಾಗಬಾರದು ? ಮುಂತಾಗಿ ಆಯುಕ್ತಾರ್ಥವನ್ನು ಸಾಧಿಸಹೋಗುವವರಲ್ಲ, ಚರ್ಚಿಸುವವರಲ್ಲ. ವಿತಂಡವಾದವಂತೂ ಅವರತ್ತಲೂ ಸುಳಿಯುತ್ತಿರಲಿಲ್ಲ. ತಮ್ಮ ಗ್ರಂಥಗಳಲ್ಲಿ ಎಲ್ಲಿಯೂ ಅಯುಕ್ತಾರ್ಥವನ್ನು ಬರೆಯುವವರಲ್ಲ. ಮಾತಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರಲ್ಲ. ಒಮ್ಮೆ ಒಂದು ಕಡೆ ಹೇಳಿದ್ದನ್ನು ಮತ್ತೊಮ್ಮೆ ಹೇಳುವವರಲ್ಲ. ತಾವು ಒಮ್ಮೆ ವಿಚಾರಮಾಡಿ ಬರೆದುದನ್ನು ಎಂದಿಗೂ ಅಳಿಸುವವರಲ್ಲ. ಇಂಥ ಅಸಾಧಾರಣಗುಣವಿರುವುದರಿಂದಲೇ ಅನನ್ಯ ಸಾಧಾರಣವಾದ ವೇದ, ಉಪನಿಷತ್ತು, ಗೀತಾ, ಪುರಾಣೇತಿಹಾಸ, ಸೂತ್ರಭಾಷ್ಯ ಟೀಕೆಗಳಿಗೆ ಸಮ್ಮತವಾದ ಅತ್ಯಂತ ಸಮಂಜಸವಾದ ಆ ಏಕಸೂತ್ರತೆಯನ್ನು ಎತ್ತಿ ಹಿಡಿಯುವ ಗ್ರಂಥರತ್ನಗಳನ್ನು ರಚಿಸುವುದರಲ್ಲಿ ಏಕಮೇವಾದ್ವಿತೀಯರಾದ ಜ್ಞಾನಿವರ್ಯರೆಂದವರು ಜ್ಞಾನಿಗಳಿಂದ ಸುತರಾಗಿದ್ದಾರೆ - ಎಂದು ಶ್ರೀವಾದೀಂದ್ರಗುರುಚರಣರು ಶ್ರೀರಾಯರ ಗ್ರಂಥವೈಶಿಷ್ಟ್ಯವನ್ನು 'ಗುರುಗುಣಸ್ತವನ'ದಲ್ಲಿ ಕೊಂಡಾಡಿದ್ದಾರೆ. ಈ ವಿಶಿಷ್ಟಗುಣಯುಕ್ತರಾದ್ದರಿಂದಲೇ ತತ್ವಶಾಸ್ತ್ರಪ್ರಪಂಚದಲ್ಲಿ ಗ್ರಂಥಕಾರರ ಗುಂಪಿನಲ್ಲಿ ಗುರುರಾಜರಿಗೆ ಅಗ್ರಮಾನ್ಯ ಸ್ಥಾನ ದೊರಕಿ ಜಗತ್ತಿನ ವಿದ್ವಜ್ಜನರು ಅವರನ್ನು “ಟಿಪ್ಪಣಾಚಾರ್ಯ ಚಕ್ರವರ್ತಿ'ಗಳೆಂದು ಗೌರವಸುತ್ತಿದ್ದಾರೆ.
ಮಂತ್ರಾಲಯಸ್ವಾಮಿಗಳ ಗ್ರಂಥಮಹಿಮೆಯು ಜ್ಞಾನಿಶ್ರೇಷ್ಠರಿಗೇ ತಿಳಿಯದೆಂದಮೇಲೆ ನಮ್ಮಂಥ ಪಾಮರರ ಪಾಡೇನು ? ಅದರ ಪರಿಚಯವಾದರೂ ನಮಗೆ ಎಂತಾದೀತು ? ಆದರೂ ಅವರ ಅನುಗ್ರಹಬಲದಿಂದ ಸ್ಕೂಲವಾಗಿ ಅವರ ಗ್ರಂಥಗಳನ್ನು ಪರಿಶೀಲಿಸಿದಾಗ ಒಂದು ಗುಣ ಅವರ ಎಲ್ಲಾ ಗ್ರಂಥಗಳಲ್ಲಿಯೂ ತಾನೇ ತಾನಾಗಿ ಎದ್ದು ಕಾಣುವುದು. ಅವರ ಸಂಗ್ರಹಣಶಕ್ತಿ ಅತ್ಯದ್ಭುತ. ದೊಡ್ಡದಾಗಿ ಹೇಳಿರುವ ವಿಷಯಗಳನ್ನು ಅತ್ಯಲ್ಪ ಶಬ್ದಗಳಿಂದ ನಿರ್ವಿವಾದವಾಗಿ ಹೇಳುವುದರಲ್ಲಿ ಅವರದು ಸರಿಗಟ್ಟದ ಕೈ. ಅದು ಅವರ ಸ್ವಭಾವವೆಂದು ತೋರುತ್ತದೆ. ಅಂತೆಯೇ ಅವರು ಪಾರ್ವಾಶ್ರಮದಲ್ಲಿ ಶ್ರೀನಾರಾಯಣಪಂಡಿತಾಚಾರರ “ಅಣುಮಧ್ವವಿಜಯ'ಕ್ಕೆ ಮೊದಲು ವ್ಯಾಖ್ಯಾನಮಾಡಿದರು. ಇದರಲ್ಲಿ ಮಧ್ವ ವಿಜಯದ ಅರ್ಥವೆಲ್ಲವನ್ನೂ ಹೃದಯಂಗಮವಾಗಿ ವಿವರಿಸಿದ್ದಾರೆ. ಇಂಥ ಕಾಲಕ್ಕೆ ಈ ಕ್ರಮದ ಗ್ರಂಥಗಳ ಅವಶ್ಯಕತೆ ಇದೆಯೆಂದು ರಾಯರು ಶ್ರೀಮಧ್ವರ ವಿದ್ಯಾಸಾಮ್ರಾಜ್ಯದ ಚಕ್ರವರ್ತಿಗಳಾಗಿದ್ದು ಮಧ್ವಶಾಸ್ತ್ರವನ್ನು ಬೆಳೆಸಿದರು. ರಾಯರು 'ಅಣುಮಧ್ವವಿಜಯ'ಕ್ಕೆ ಬರೆದ ವ್ಯಾಖ್ಯಾನದಿಂದ ಸುಪ್ರೀತರಾದ ಆಚಾರರು ಇವರನ್ನು ತಮ್ಮ ರಾಜ್ಯದಲ್ಲಿ ಅಭಿಷೇಕಮಾಡಿದರೆಂದು ವಾದೀಂದ್ರಗುರುಗಳು ವರ್ಣಿಸಿರುವುದು ಸಮಂಜಸವಾಗಿದೆ.
ರಾಯರ ಜೀವನವನ್ನು ವಿವೇಚಿಸಿದಾಗ ಸಾಮಾನ್ಯವಾಗಿ ಅವರು ಎಲ್ಲ ವಿಷಯಗಳಲ್ಲಿ ಶ್ರೀಮದಾಚಾರರನ್ನು (ವಾಯುದೇವರು) ಅನುಕರಿಸಿ ಅವರ ಮಾರ್ಗದಲ್ಲಿಯೇ ಮುಂದುವರೆದಿರುವುದನ್ನು ಕಾಣಬಹುದು. ಇದರಂತೆ ಗ್ರಂಥರಚನೆಯಲ್ಲಿಯೂ ಆಚಾರರನ್ನು ಅನುಸರಿಸಿರುವುದನ್ನು ನಾವು ಕಾಣುತ್ತೇವೆ. ಶ್ರೀಆಚಾರರಾಯರು ತಮ್ಮ ಭಾಷ್ಯಾದಿಗ್ರಂಥಗಳಲ್ಲಿ ಸೂತ್ರಾರ್ಥಗಳನ್ನು ವಿವರಿಸಿ, ತಾವು ಹೇಳಿದ ಅರ್ಥಕ್ಕೆ “ತದುಕ್ತಂ ಸ್ಕಾಂದೇ” ಮುಂತಾಗಿ ಶ್ರೀವೇದವ್ಯಾಸರ ಸಮ್ಮತಿಯನ್ನು ತೋರಿಸುವಂತೆ ರಾಯರೂ ಟೀಕಾದಿಗಳಿಗೆ ವ್ಯಾಖ್ಯಾನಮಾಡಿ ತಾವು ಹೇಳಿದ ಅರ್ಥಕ್ಕೆ ತದುಕ್ತಂ ಅನುವ್ಯಾಖ್ಯಾನೇ, ತದುಕ್ತಂ ಸುಧಯಾಂ, ಚಂದ್ರಿಕಾಯಾಂ” ಮುಂತಾಗಿ ಪ್ರಾಚೀನಾಚಾರರ ಸಮ್ಮತಿಯನ್ನು ತೋರಿಸುತ್ತಾರೆ. ಆದ್ದರಿಂದ ಅವರ ಗ್ರಂಥಗಳು ಇಂದಿಗೂ ಅದೂಷ್ಯವಾಗಿ ರಾಜಿಸುತ್ತಿವೆ. ಒಂದು ವೇಳೆ ಯಾರಾದರೂ ಪಂಡಿತರನ್ನರು ಅವರ ಗ್ರಂಥವನ್ನು ದೂಷಿಸಿದರೆ ಅಂಥವರಿಗೆ “ಮುನಿತ್ರಯ'ರ ವಾಕ್ಯವಿರೋಧವು ಬಂದೇ ಬರುವುದು. ರಾಯರ ವಾಕ್ಯವನ್ನು ದೂಷಿಸುವ ಗಂಡೆದೆಯ ಪಂಡಿತರಾರೂ ಇನ್ನೂ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ!
ಈಗ ರಾಯರ ಗ್ರಂಥವೈಶಿಷ್ಟ್ಯವನ್ನು ಸ್ವಲ್ಪ ವಿಚಾರಮಾಡೋಣ. ರಾಯರ ತಂತ್ರದೀಪಿಕೆಯನ್ನು ತೆಗೆದುಕೊಂಡರೆ ಅದರಲ್ಲಿ ಬ್ರಹ್ಮಸೂತ್ರಗಳೊಂದೊಂದನ್ನೂ ತೆಗೆದುಕೊಂಡು ಅದಕ್ಕೆ ಹಿಂದಿನ ಸೂತ್ರಗಳಿಂದ ಅನುವೃತ್ತಿಯೇನು? ಆ ಸೂತ್ರದಲ್ಲಿರುವ ಪ್ರತಿಯೊಂದು ಶಬ್ದಕ್ಕೂ ಸಾರ್ಥಕ್ಯವೇನು? ಆ ಶಬ್ದಗಳು ಅದೇ ಕ್ರಮದಲ್ಲೇಕಿರಬೇಕು ? ಸೂತ್ರದ ಅರ್ಥವೇನು ? ಎಂಬುದನ್ನೆಲ್ಲಾ ಸ್ಪಷ್ಟವಾಗಿ, ತಿಳಿಯಾಗಿ ಬಿಡಿಸಿಹೇಳುವುದುನ್ನು ನಾವು ಮನಗಾಣಬಹುದು. ಇದೇ ಅವರ ವೈಶಿಷ್ಟ್ಯ! ಹೀಗೆ ಸೂತ್ರಗಳ ಅರ್ಥವನ್ನು ಇಷ್ಟರಮಟ್ಟಿಗೆ ಬಿಡಿಸಿಹೇಳುವು ಗ್ರಂಥ ಬೇರೊಂದಿಲ್ಲ. ಜೊತೆಗೆ ಆಚಾರರ ಅಭಿಪ್ರಾಯ ಹೀಗೆ, ಸುಧಾಭಿಪ್ರಾಯ ಹೀಗೆ, ಚಂದ್ರಿಕೆಯಲ್ಲಿ ಹೀಗೆ ಉಕ್ತವಾಗಿದೆ-ಇಂತು ಪ್ರತಿಸೂತ್ರಕ್ಕೂ ಬೇರೆ ಬೇರೆ ಗ್ರಂಥಗಳಲ್ಲಿ ಹೇಳಿರುವ ವಿವರಣೆಯನ್ನು ಕೊಡುತ್ತಾರೆ ಶ್ರೀರಾಯರು. ಇದೊಂದು ಉದಾಹರಣೆಗಾಗಿ ಹೇಳಿದ್ದೇವೆ. ರಾಯರ ಗ್ರಂಥಗಳಲೆಲ್ಲಾ ಇದು ಓತಪ್ರೋತವಾಗಿ ಕಂಡುಬರುತ್ತದೆ.
ಶ್ರೀಗುರುರಾಜರು ಎಲ್ಲಾ ಪ್ರಸ್ಥಾನಗಳಲ್ಲೂ ಇಂತಹ ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ ಋಕ್ ಪ್ರಸ್ಥಾನದ, ನಿರ್ಣಯ ಮೊದಲಾದ ಇತರ ಗ್ರಂಥಗಳಿಗೂ ಈ ಬಗೆಯ ಗ್ರಂಥವನ್ನು ರಚಿಸಿಕೊಟ್ಟಿದ್ದಾರೆ. ಅಣುಭಾಷ್ಯದ ಟೀಕಾರೂಪವಾದ ತತ್ವ ಮಂಜರಿಯಲ್ಲಂತೂ ಸೂತ್ರಪ್ರಸ್ಥಾನದ ಅಂತರಾರ್ಥವೆಲ್ಲವೂ ಸಂಗ್ರಹೀತವಾಗಿದೆ. ಹೀಗೆ ಕಾಲಕ್ಕೆ ಅವಶ್ಯವಾಗಿ ಬೇಕಾಗುವ ಸಂಗ್ರಹಗ್ರಂಥಗಳನ್ನು ಯಶಸ್ವಿಯಾಗಿ ರಚಿಸಲು ಗುರುರಾಜರ ವಿನಃ ಬೇರಾರಿಗೂ ಸಾಧ್ಯವಾಗುತ್ತಿರಲಿಲ್ಲ. ಇದರಲ್ಲೂ ಆಚಾರರ ಅನುಕರಣೆ ಎದ್ದು ತೋರುವುದು. ಶ್ರೀಮದಾಚಾರ್ಯರ ವಾಕ್ಯಗಳೆಂತು ಸಾರಬೋಧಕಗಳಾಗಿ ಅತಿಸಂಗ್ರಹವಾಗಿವೆಯೋ ರಾಯರ ವಾಕ್ಯಗಳೂ ಅದರಂತೆ ಇರುತ್ತವೆ. ಆಚಾರರಂತೆ ರಾಯರೂ ಸಹ ಗೀತಾ, ಉಪನಿಷತ್, ಸೂತ್ರಗಳಿಗೆ ಬೇರೆ ಗ್ರಂಥಗಳನ್ನು ರಚಿಸಿರುವರು. ಇದರಿಂದಲೂ ನಾವು ರಾಯರಲ್ಲಿ ವಾಯುದೇವರ ವಿಶೇಷ ಸನ್ನಿಧಾನ ಮತ್ತು ಅನುಗ್ರಹವನ್ನು ಕಾಣಬಹುದು. ಶ್ರೀರಾಯರ ಈ ಬಗೆಯ ಕೃತಿರಚನೆಯಿಂದಾಗಿ ದೈತಶಾಸ್ತ್ರವು ಮತ್ತೊಮ್ಮೆ ಸರಿಯಾದ ಅಚ್ಚುಕಟ್ಟಿನಲ್ಲಿ ಸೇರಿದಂತಾಗಿ, ಜಿಜ್ಞಾಸುಗಳ ಧಾರಣಾಶಕ್ತಿಗೆ ಸರಿಯಾಗಿ ಒಳಪಡುವಂತಾಯಿತು.
ಶ್ರೀರಾಯರ ಟಿಪ್ಪಣಿಗಳಿಲ್ಲದೆ ಟೀಕಾ, ಭಾಷ್ಯಾದಿಗಳ ಅರ್ಥವಾಗುವುದಿಲ್ಲ. ಸಮಗ್ರಭಾಷ್ಯಟೀಕೆಗಳಿಗೆ ಪ್ರಪ್ರಥಮವಾಗಿ ಟಿಪ್ಪಣಿಗಳನ್ನು ರಚಿಸಿದ ಮಹನೀಯರಿವರು. ಟಿಪ್ಪಣಿಗಳೆಂದಮಾತ್ರಕ್ಕೆ ಅನವಶ್ಯವಾಗಿ ಬರೆಯುವುದು. ಪುಟಗಳನ್ನು ಪಾಂಡಿತ್ಯಪ್ರದರ್ಶನಕ್ಕೆ ಹೆಚ್ಚಿಸುವುದು, ಅವರ ಸ್ವಭಾವವಲ್ಲ. ಅವರ ಎಲ್ಲ ಟಿಪ್ಪಣಿಗಳನ್ನು ನೋಡಿದವರಿಗೆ ಮಾತ್ರ ಎಲ್ಲ ವಾಕ್ಯಗಳಿಗೂ ವಿವರಣೆ ದೊರೆಯುವುದು. ಒಂದು ಗ್ರಂಥದಲ್ಲಿ ಒಂದು ವಿಷಯವನ್ನು ನಿರೂಪಿಸಿದ್ದರೆ, ಇನ್ನೊಂದು ಗ್ರಂಥದಲ್ಲಿ ಅದರ ವಿಷಯವನ್ನು ಹೇಳುವುದೇ ಇಲ್ಲ! ಆದ್ದರಿಂದಲೇ ಅವರ ಮೊದಲ ಹಲಕೆಲ ಗ್ರಂಥಗಳು - ಪ್ರಕಾಶ, ಭಾವದೀಪ, ವಾದಾವಳೀ, ವ್ಯಾಖ್ಯಾ - ಇವು ಎಷ್ಟು ವಿಸ್ತಾರವಾಗಿವೆಯೋ, ಆನಂತರ ರಚಿಸಿದ ಗ್ರಂಥಗಳಷ್ಟು ವಿಸ್ತಾರವಾಗಿಲ್ಲ. ಹಿಂದಿನ ಗ್ರಂಥಗಳಲ್ಲಿ ಹೇಳಿರುವುದನ್ನು ಮತ್ತೆ ಹೇಳದಿರುವುದೇ ಇದಕ್ಕೆ ಕಾರಣವೆನ್ನಬಹುದು.
ಮಂತ್ರಾಲಯಸ್ವಾಮಿಗಳ ವೇದಭಾಷ್ಯಗಳಂತೂ ಮೇರುಕೃತಿಗಳಾಗಿವೆ. ಸಾಯಣಾಚಾರರು ರಚಿಸಿದ ವೇದಭಾಷ್ಯವು ಯಜ್ಞಯಾಗಾದಿಗಳಿಗೆ ಉಪಯುಕ್ತವಾದರೂ ವೇದಗಳ ನಿಜವಾದ ಅರ್ಥವೇ ಅದರಿಂದ ಮಲೀನವಾಗಿಹೋಯಿತು. ಭಾರತೀಯರು ಅನಾದಿಕಾಲದಿಂದ ಸ್ಥಾಪಿಸಿಕೊಂಡು ಬಂದ ವೇದರಹಸ್ಯವು ರಹಸ್ಯವಾಗಿಯೇ ಉಳಿದುಹೋಯಿತು. ಆರ್ಯಸಂಸ ತಿರುಳಿನಂತಿರುವ ಅರ್ಥವಾವುದೆಂದು ಜನರಿಗೆ ತಿಳಿಯದಂತಾಯಿತು. ಆ ವೇದರಹಸ್ಯವನ್ನು ಹೊರಗೆಡಹುವುದು ಅನಿವಾರವಾಯಿತು. ಶ್ರೀಮೂಲರಾಮ, ಶ್ರೀಮದಾಚಾರರು, ಶ್ರೀವಾಗ್ಗೇವಿಯರ ಮತ್ತು ಶ್ರೀಸುಧೀಂದ್ರತೀರ್ಥರ ಆಣತಿಯಂತೆ ಈ ಕಾರನಿರ್ವಹಣೆಗಾಗಿ ರಾಯರು ಪ್ರವೃತ್ತರಾದರು. ಗುರುಗಳು ವೇದಭಾಷ್ಯಗಳ ರಚನೆಮಾಡಿದರು. ಅವು ವೇದಗಳ ಹೃದ್ಗತವನ್ನು ಹೊರಹೊಮ್ಮಿಸಿದವು. ವೇದದ ಪ್ರತಿಶಬ್ದವೂ ಶ್ರೀವಿಷ್ಣುಸರ್ವೋತ್ತಮತ್ವವನ್ನೇ ಸಾರುವುದೆಂದು ರಾಯರು ತೋರಿಸಿಕೊಟ್ಟರು. ಇದು ಅವರಲ್ಲಿ ವಿಶೇಷ ಸನ್ನಿಧಾನವಿಟ್ಟ ವಾಯುದೇವರ ಅನುಗ್ರಹದಿಂದ ನಡೆದ ಕಾರ್ಯವೆಂದು ಹೇಳಬಹುದು.
ಶ್ರೀಗುರುರಾಜರ ಗ್ರಂಥರಚನಾ ವೈಶಿಷ್ಟ್ಯವನ್ನು ಅನೇಕಬಗೆಯಿಂದ ನಾವು ತಿಳಿಯಬಹುದು. ಒಂದು ಮತದಲ್ಲಿ ಒಬ್ಬ ಭಾಷ್ಯಕಾರರು, ಒಬ್ಬ ಟೀಕಾಕಾರರು ಒಬ್ಬ ಟಿಪ್ಪಣಿಕಾರರಿರುವುದು ಕಂಡುಬಂದಿದೆ. ದೈತಮತದ್ದಲೂ ಅದರಂತೆ ಆಚಾರರು, ಜಯತೀರ್ಥರು, ವ್ಯಾಸಮುನಿಗಳು ಭಾಷ್ಯ-ಟೀಕಾ-ಟಿಪ್ಪಣೀಕಾರರಾಗಿದ್ದರೂ ಅವರು ಶ್ರೀಗುರುರಾಜರಲ್ಲಿ ಅಪಾರ ವಾತ್ಸಲ್ಯ ತೋರಿ ಅವರಿಗೆ ಅನನ್ಯ ಸಾಧಾರಣ ಕೀರ್ತಿಕೊಡಲು ಅವರಲ್ಲಿ ನಿಂತು ವೇದಭಾಷ್ಯಗಳನ್ನು ಬರೆಸಿ, ಅಣುಭಾಷ್ಯಕ್ಕೆ ಟೀಕೆಯನ್ನು ಬರೆಸಿ, ಸಮಗ್ರ ದೈತಶಾಸ್ತ್ರಕ್ಕೆ ಟಿಪ್ಪಣಿಗಳನ್ನು ಬರೆಸಿ ಶ್ರೀರಾಯರು ಭಾಷ್ಯಕಾರರು, ಟೀಕಾಕಾರರು, ಟಿಪ್ಪಣ್ಣಾಚಾರ ಚಕ್ರವರ್ತಿಗಳೆಂಬ ಪ್ರತಿಷ್ಠೆಗೆ ಪಾತ್ರರಾಗುವಂತೆ ಮಾಡಿದರು. ಬಹುಶಃ ತತ್ವಶಾಸ್ತ್ರಪ್ರಪಂಚದಲ್ಲಿ ಒಂದೇ ವ್ಯಕ್ತಿ ಭಾಷ್ಯ-ಟೀಕಾ-ಟಿಪ್ಪಣಿಕಾರರೆಂದು ಪ್ರಖ್ಯಾತರಾಗಿರುವುದು ನಮ್ಮ ಶ್ರೀಗುರುರಾಜರನ್ನು ಬಿಟ್ಟರೆ ಮತ್ತೊಬ್ಬರಿಲ್ಲವೆಂದು ಹೇಳಬಹುದು! ಶ್ರೀರಾಯರ ಗ್ರಂಥವೈಶಿಷ್ಟ್ಯಕ್ಕೆ ಇದೊಂದು ಉತ್ತಮ ನಿದರ್ಶನ! 478
478 ವೇದಭಾಷ್ಯ ರಚನೆ” ಎಂಬ ಅಧ್ಯಾಯ ಪರಿಶೀಲಿಸಿ.
ಶ್ರೀಟೀಕಾರಾಯರು ಶ್ರೀಭಾರತೀದೇವಿಯನ್ನು ಒಲಿಸಿಕೊಂಡು ಅವಳ ಅನುಗ್ರಹಾಶಿರ್ವಾದದಿಂದ ಕಂಠ-ಅಡಿಕೆಗಳನ್ನು ಪಡೆದು ಜಗನ್ಮಾನ್ಯ ಟೀಕೆಗಳನ್ನು ರಚಿಸಿ ವಿಖ್ಯಾತರಾದರು. ಅಂತೆಯೇ ಅವರ ಗ್ರಂಥಗಳು ಇತರರಿಂದ ದೂಷಿಸಲಸದಳವೆನಿಸಿದವು. ಶ್ರೀರಾಯರ ಪೂರ್ವಾವತಾರರಾದ ಶ್ರೀವ್ಯಾಸತೀರ್ಥರು ಶ್ರೀಭಾರತೀದೇವಿಯಿಂದ ಅಪೂರ್ವ ಸುವರ್ಣ ಲೆಕ್ಕಣಿಕೆಯನ್ನು ಪಡೆದು ಚಂದ್ರಿಕಾದಿ ಗ್ರಂಥಗಳನ್ನು ರಚಿಸಿ ಲೋಕಮಾನ್ಯರಾದರು. ಅಂತೆಯೇ ಅವರ ಗ್ರಂಥಗಳೂ ಅದೂಷ್ಯವಾದವು. ಶ್ರೀಪ್ರಹ್ಲಾದ ಶ್ರೀವ್ಯಾಸರಾಜಾವತಾರಿಗಳಾದ ಶ್ರೀಗುರುರಾಜರಿಗೆ ಸಾಕ್ಷಾತ್ ಭಾರತೀದೇವಿಯು ದರ್ಶನವಿತ್ತು. ವೈಷ್ಣವಸಿದ್ಧಾಂತರಕ್ಷಕಗಳಾದ ಗ್ರಂಥ ರಚನೆ ಮಾಡಲು ಆದೇಶವಿತ್ತು ತನ್ನ ಮಂತ್ರವನ್ನುಪದೇಶಿಸಿ ಆಶೀರ್ವದಿಸಿದಳು. ಶ್ರೀರಾಯರು ಭಾರತೀಯ ಅನುಗ್ರಹದಿಂದ ಭಾಷ್ಯ-ಟೀಕಾ-ಟಿಪ್ಪಣಿಗಳನ್ನು ರಚಿಸಿ ಜಗನ್ಮಾನ್ಯರಾದರು. ಆದ್ದರಿಂದಲೇ ಅವರ ಗ್ರಂಥಗಳನ್ನು ದೂಷಿಸಲೂ ಯಾರೂ ಸಮರ್ಥರಾಗಿಲ್ಲ. ಶ್ರೀಜಯತೀರ್ಥ-ಶ್ರೀವ್ಯಾಸರಾಜರಂತೆಯೇ ವಿದ್ಯಾದೇವಿಯ ದರ್ಶನ ಪಡೆದು ಆ ದೇವಿಯ ಅನುಗ್ರಹದಿಂದ ದೈತಸಿದ್ಧಾಂತ ರಕ್ಷಕಗಳಾದ ಗ್ರಂಥಗಳನ್ನು ಬರೆದು ಲೋಕಮಾನ್ಯರಾದ ಶ್ರೀರಾಯರಂಥವರು ತತ್ವಶಾಸ್ತ್ರ ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ. ಇದೂ ಶ್ರೀರಾಯರ ಒಂದು ವೈಶಿಷ್ಟ್ಯ! 479
479 ಕಲಿಯುಗ ಕಲ್ಪತರುವಿನ “ವಿದ್ಯಾದೇವಿಯ ದರ್ಶನ-ಉಪದೇಶ” ಎಂಬ ಅಧ್ಯಾಯ ನೋಡಿ.
ಶ್ರೀಜಯತೀರ್ಥರ ಗ್ರಂಥರತ್ನಗಳನ್ನು ಕಂಡು ನಿಬ್ಬೆರಗಾಗಿ ವಿದ್ಯಾರಣ್ಯರು ಆ ಗ್ರಂಥಗಳನ್ನು ಆನೆಯಮೇಲೆ ಮೆರೆಸಿದರು! ಮಧುರೆಯ ಮಹಾಮಂತ್ರಿ ನೀಲಕಂಠದೀಕ್ಷಿತರು ಶ್ರೀರಾಯರ ಭಾಟ್ಟಸಂಗ್ರಹದ ಪ್ರೌಢಿಮೆಯನ್ನು ಕಂಡು ಆಶ್ಚರ್ಯಾನಂದ ನಿರ್ಭರರಾಗಿ ಆ ಗ್ರಂಥವನ್ನು ರಾಜವೈಭವದೊಡನೆ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಮೆರೆಸಿದರು! ಈ ಬಗೆಯ ಗೌರವ ಸಲ್ಲಿರುವುದು ಶ್ರೀಜಯತೀರ್ಥರು ಹಾಗೂ ರಾಯರಿಗಲ್ಲದೆ ದೈತಮತದಲ್ಲಿ ಮತ್ತಾರಿಗೂ ದೊರಕಿರುವುದಿಲ್ಲ. ಇದೂ ಒಂದು ರಾಯರ ವೈಶಿಷ್ಟ್ಯ.480
480 “ಆನೆಯ ಮೇಲೆ ಅಂಬಾರಿಯಲ್ಲಿ ಮೆರೆದ ಅಮರಗ್ರಂಥ' ಎಂಬ ಅಧ್ಯಾಯ ಓದಿರಿ.
ಮತ್ತೊಂದು ಬಗೆಯಾಗಿಯೂ ನಾವು ರಾಯರ ಮತ್ತು ಅವರ ಗ್ರಂಥಗಳ ಮಹತ್ವವನ್ನರಿಬಹುದಾಗಿದೆ. ಶ್ರೀಮದಾಚಾರ್ಯರ ಗ್ರಂಥಗಳ ಮಹತ್ವವನ್ನು ನಿರೂಪಿಸುವಾಗ “ಸುಮಧ್ವವಿಜಯಕಾರರು - “ಬಾಲಸಂಘಮಪಿಬೋಧಯದೃಶಂ ದುರ್ನಿರೂಪವಚನ ಚ ಪಂಡಿತೈ” ಎಂದು ಕೊಂಡಾಡಿದ್ದಾರೆ. ಬಾಲರೆಂದರೆ ಅಧೀತನ್ಯಾಯಮಿಮಾಂಸಾದಿ ಶಾಸ್ತ್ರಜ್ಞರಾದ ಪಂಡಿತರೆಂದರ್ಥ. ಆಚಾರರ ಗ್ರಂಥವಾಕ್ಯಗಳು ಇಂಥ ಪಂಡಿತಸಮೂಹಕ್ಕೆ ಚೆನ್ನಾಗಿ ಅರ್ಥವಾಗುವವು. ಅದನ್ನೇ ವಿಚಾರಮಾಡುತ್ತಾ ಹೋದಾಗ ಸಕಲಶಾಸ್ತ್ರಕೋವಿದರಾದ ಪಂಡಿತರಿಗೂ ಅದನ್ನು ವಿವರಿಸಲು ಸಾಧ್ಯವಾಗದಷ್ಟು ಮಹತ್ವಪೂರ್ಣವೂ ಆಗಿವೆ - ಎಂದು ವರ್ಣಿಸಿದ್ದಾರೆ! ಶ್ರೀರಾಯರ ಗ್ರಂಥಗಳೂ ಅಷ್ಟೇ. ಅತ್ಯಂತ ಸರಳ, ಮತ್ತು ಪುಟ್ಟಪುಟ್ಟ ವಾಕ್ಯಗಳಿಂದ ಶೋಭಿಸಿ ಪಂಡಿತರಿಗೆ ಅರ್ಥಬೋಧಕವಾಗಿದ್ದರೂ ವಿಚಾರಮಾಡಿದಂತೆಲ್ಲಾ ದೊಡ್ಡದೊಡ್ಡ ಪಂಡಿತರಿಗೂ ನಿರೂಪಣೆಮಾಡಲು ಸಾಧ್ಯವಾಗದಷ್ಟು ಪ್ರೌಢವ ವಿಷಯಗುಂಭಿತವೂ ಆಗಿರುವುದು ಎಲ್ಲಾ ಪಂಡಿತರಿಗೆ ಅನುಭವಸಿದ್ಧವಾಗಿದೆ!
ವ್ಯಾಕರಣಶಾಸ್ತ್ರದಲ್ಲಿ ರಾಯರ ಪಾಂಡಿತ್ಯ ಅಸಾಧಾರಣವಾದುದು. ದೈತಶಾಸ್ತ್ರವನ್ನು ಅಧ್ಯಯನ ಮಾಡುವ (ವ್ಯಾಕರಣ ಶಾಸ್ತ್ರವನ್ನು ಓದದಿರುವ) ಅಧಿಕಾರಿಗಳಿಗೆ ಅಲ್ಲಲ್ಲಿ ಮೂಲ-ಟೀಕಾದಿಗಳಲ್ಲಿ ವರ್ಣಿತವಾದ ವ್ಯಾಕರಣ ಪ್ರಕ್ರಿಯೆಗಳನ್ನು ವಿವರವಾಗಿ ಬರೆದು ಅ ಜ್ಞಾನವು ಸುಗಮವಾಗುವಂತೆ ಮಾಡಿರುವುದು ರಾಯರ ಮತ್ತೊಂದು ವೈಶಿಷ್ಟ್ಯ.
ಶ್ರೀರಾಯರು ಚಂದ್ರಿಕಾದಿ ಗ್ರಂಥಗಳಲ್ಲಿ ಉಪವರ್ಣಿತವಾದ ಮಿಮಾಂಸಾಧಿಕರಣಗಳನ್ನು, ಅಂದರೆ ವಿಷಯ, ಸಂಶಯ. ಪೂರ್ವಪಕ್ಷ ಸಿದ್ಧಾಂತಗಳನ್ನು ಆಯಾ ಶಾಸ್ತ್ರಗಳ ರೀತಿಯಿಂದ ನಿರೂಪಿಸುತ್ತಾರೆ. 'ತರ್ಕತಾಂಡವ' ವ್ಯಾಖ್ಯಾ “ನ್ಯಾಯದೀಪ'ದಲ್ಲಿ ನ್ಯಾಯಶಾಸ್ತ್ರ ಪ್ರಕ್ರಿಯಾವನ್ನು ಸ್ಪಷ್ಟಪಡಿಸುವುದಲ್ಲದೆ, ಅಲ್ಲಲ್ಲಿ ಅದೈತ, ವಿಶಿಷ್ಟಾದ್ ತಮತ ಪ್ರಕ್ರಿಯಾಗಳನ್ನು ಚೆನ್ನಾಗಿ ಪ್ರತಿಪಾದಿಸಿರುತ್ತಾರೆ. ಇದರಿಂದ ರಾಯರ ನ್ಯಾಯ-ವ್ಯಾಕರಣ-ಮಿಮಾಂಸಾ-ವೇದಾಂತಾದಿ ಸರ್ವಶಾಸ್ತ್ರಗಳಲ್ಲಿನ ಸ್ವಾತಂತ್ರವೆಂತಹುದೆಂಬುದು ವ್ಯಕ್ತವಾಗದಿರದು, ಇದೆಲ್ಲವನ್ನೂ ವಿಚಾರಮಾಡಿದಾಗ ಅವರ ಸಜ್ಞಾನಾನುಕ್ರೋಶದ ಅರಿವಾಗಿ ಅಮಂದಾನಂದವಾಗುವುದು. ಇಷ್ಟೆಲ್ಲಾ ವೈಶಿಷ್ಟ್ಯಪೂರ್ಣರಾದ್ದರಿಂದಲೇ “ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ಧಾಂತಶಾಖೀ” ಎಂದವರನ್ನು ಜ್ಞಾನಿಗಳು ಕೊಂಡಾಡಿದ್ದಾರೆಂಬುದು ಮನವರಿಕೆಯಾದಾಗ ಅದಾವ ಸಹೃದಯ ಸಜ್ಜನನಹೃದಯ ತುಂಬಿ ಬಂದು ಶ್ರೀಯವರ ಬಗ್ಗೆ ಅಸಾಧಾರಣ ಗೌರವಾದರಗಳುಂಟಾಗಿ ಆನಂದಬಾಷ್ಪ ಹರಿಯದಿದ್ದೀತು ?
ಈವರೆಗೆ ಶ್ರೀಗುರುಸಾರ್ವಭೌಮರ ಪ್ರಬಂಧ ಪ್ರಣಯನ ಪ್ರಾವಿಣ್ಯತೆಯನ್ನು ಯೋಗ್ಯತಾನುಸಾರ ವಾಚಕರ ಮುಂದಿಡಲು ಯತ್ನಿಸಿದ್ದೇವೆ. ಶ್ರೀರಾಯರ ಒಂದೊಂದು ಗ್ರಂಥಗಳೂ ಸಾಧನಜೀವಿಗಳ ಮಾರ್ಗಕ್ರಮಣದಲ್ಲಿ ದಾರಿದೀಪಗಳಾಗಿ ಕಂಗೊಳಿಸುವವು. ರಾಯರ ಸಮಸ್ತಗ್ರಂಥಗಳ ಪರಿಚಯ ಮಾಡಿಕೊಡುವ ಹಂಬಲ ಬಹುವಾಗಿದ್ದರೂ ಗ್ರಂಥಗೌರವ ಭಯದಿಂದ ಸಾಧ್ಯವಾಗದಂತಾಗಿದೆ. ಆದರೂ ಆ ಮಹನೀಯರ ಒಂದೆರಡು ಗ್ರಂಥಗಳ ಪರಿಚಯವನ್ನು ನಮ್ಮ ಯೋಗ್ಯತಾನುಸಾರ ಮಾಡಿಕೊಡಲು ಉದ್ಯುಕ್ತರಾಗಿದ್ದೇವೆ.481
481 ಶ್ರೀಮಂತ್ರಾಲಯಪ್ರಭುಗಳ ಎಲ್ಲಾ ಗ್ರಂಥಗಳನ್ನು ಪರಿಚಯಮಾಡಿಕೊಡಲೆಂದು ಅದಕ್ಕಾಗಿ ಬೇರೊಂದು ಗ್ರಂಥ ರಚಿಸಲು ಆಶಿಸಿದ್ದೇವೆ. ಶ್ರೀರಾಯರು ಅನುಗ್ರಹಿಸಿದರೆ ನಮ್ಮ ಪ್ರಯತ್ನ ಸಫಲವಾಗುವುದೆಂದು ನಂಬಿದ್ದೇವೆ
ತತ್ತ್ವಮಂಜರೀ
ಶ್ರೀಮದಾಚಾರರು ರಚಿಸಿದ ಸೂತ್ರಭಾಷ್ಯದ ಸಂಗ್ರಹವಾದ ಅಣುಭಾಷ್ಯ'ವು ಮೂವತ್ತಾರು ಶ್ಲೋಕಯುಕ್ತವಾಗಿದೆ. ಇದಕ್ಕೆ ರಾಯರು “ತತ್ವಮಂಜರೀ' ಎಂಬ ಟೀಕೆಯನ್ನು ರಚಿಸಿದ್ದಾರೆ. 'ಅಣುಭಾಷ್ಯವು ಅರ್ಥಗರ್ಭಿತವಾಗಿದೆ. ಅದೆಲ್ಲವನ್ನೂ ವಿಸ್ತಾರವಾಗಿ ನಿರೂಪಿಸಲು ನಾವು ಸಮರ್ಥರಲ್ಲ. ಆದರೂ ಲೇಶತಃ ವಿವರಿಸುತ್ತೇವೆ' ಎಂದು ಮಂಗಳಾಚರಣದಲ್ಲಿ ಹೇಳಿದ್ದಾರೆ. ಅಣುಭಾಷ್ಯದಲ್ಲಿ ಇಷ್ಟೊಂದು ಅರ್ಥವಡಗಿರುವುದು ರಾಯರ ಈ ಟೀಕೆಯ ಸಹಾಯವಿಲ್ಲದೆಮಹಾಪಂಡಿತರಿಂದಲೂ ತಿಳಿಯಲಳವಲ್ಲ. ಪರಿಮಳ, ತತ್ವಮಂಜರಿಗಳಿಂದ ವಿಸ್ತಾರವಾದ ಅರ್ಥವನ್ನು ಸಂಕೋಚಮಾಡುವುದು, ಸಂಕುಚಿತಾರ್ಥವನ್ನು ವಿಸ್ತರಿಸುವುದು ಈ ಸಾಮರ್ಥ್ಯ ರಾಯರಲ್ಲಿ ಇರುವುದು ಇದರಿಂದ ವ್ಯಕ್ತವಾಗುವುದು.
ರಾಯರು ಭಾಷ್ಯದಲ್ಲಿ ಒಂದೊಂದು ಪದಗಳಿಂದಲೂ ಅನೇಕ ಅಧಿಕರಣಗಳ ಅರ್ಥವನ್ನು ವ್ಯಕ್ತಪಡಿಸಿದ್ದಾರೆ. ಭಾಷ್ಯದಲ್ಲಿರುವ “ವಿಷ್ಣುರೇವ ವಿಜಿಜ್ಞಾಸ್ತ್ರ”, “ಉಚ್ಯತೇ ವಿಷ್ಣುರೇವೈಕಃ”, “ಸರ್ವೈಸ್ವರ್ವಗುಣತತಃ”, “ಲಿಂಗ್ರೆಸರ್ವೈಯುತೋ ಹಿ”, “ವಾಚ್ಯ ಏಕೋಶಮಿತಾತ್ಮಕಃ”, “ಜೀವಸ್ತದಶಗದಾ”, “ಸ ಏಕಃ ಪರಮೇಶ್ವರಃ” ಈ ಪ್ರತಿಯೊಂದು ಪದಗಳಿಂದಲೂ ಅನೇಕ ಅಧಿಕರಣಾರ್ಥಗಳನ್ನು ಸೂಚಿಸಿದ್ದಾರೆ. ಉದಾಹರಣೆಗಾಗಿ ಇಲ್ಲಿ ಒಂದೆರಡನ್ನು ನಿರೂಪಿಸುವೆವು.
'ಬ್ರಹ್ಮಜಿಜ್ಞಾಸಾ' ಎಂಬ ಸೂತ್ರದಂತೆ 'ವಿಷ್ಣು ಜಿಜ್ಞಾಸಾ ಕರ್ತವ್ಯಾ' ಎಂದು ಅರ್ಥಮಾಡುವುದು ಉಚಿತವಾಗಿದೆ. ಆದರೂ ಆಚಾರರು ಅಣುಭಾಷದಲ್ಲಿ ವಿಷ್ಣುದೇವ ವಿಜಿಜ್ಞಾಸ” ಎಂದು ವಿಷ್ಣುವನ್ನೇ ಮುಖ್ಯಪದಾರ್ಥವಾಗಿ ತೋರುವಂತೆ ವ್ಯಾಖ್ಯಾನ ಮಾಡಿದ್ದಾರೆ. ಸೂತ್ರದ ಪ್ರಕಾರ 'ವಿಷ್ಣುವಿನ ಜಿಜ್ಞಾಸಾ' ಎಂಬ ಅರ್ಥವನ್ನು ಬಿಟ್ಟು ವಿಷ್ಣುವೆ ವಿಜಿಜ್ಞಾಸನು' ಎಂದು ವಿಪರೀತ ಕ್ರಮದಿಂದ ಆಚಾರರು ವ್ಯಾಖ್ಯಾನ ಮಾಡಿದ ಕಾರಣವನ್ನು ರಾಯರು ಹೀಗೆ ವಿವರಿಸಿದ್ದಾರೆ - ಮೊದಲ ಸೂತ್ರಕ್ಕೆ ಬ್ರಹ್ಮಪದಾರ್ಥವನ್ನು (ವಿಷ್ಣು) ಮುಂದಿನ ಸೂತ್ರಗಳಲ್ಲಿಯೂ ಸೇರಿಸಿಕೊಂಡು ಅರ್ಥಮಾಡಬೇಕಾಗಿದೆ. ಹಿಂದಿನ ವಾಕ್ಯದಲ್ಲಿನ ಪ್ರಧಾನಾರ್ಥ ಬೋಧಕ ಪದವನ್ನೇ ಮುಂದಿನ ವಾಕ್ಯಗಳಲ್ಲಿ ಸೇರಿಸುವುದು ಶಾಬಿಕ ಸಂಪ್ರದಾಯ. ಬ್ರಹ್ಮಜಿಜ್ಞಾಸಾ ಎಂಬಲ್ಲಿ ಬ್ರಹ್ಮ ಎಂಬುದು ಸೂಕ್ತಕ್ರಮದಲ್ಲಿ ಪ್ರಧಾನಾರ್ಥವನ್ನು ಬೋಧಿಸುವುದಿಲ್ಲ. ಭಾಷ್ಯದಲ್ಲಿ ಹೇಳಿದಂತೆ ಕ್ರಮ ವ್ಯತ್ಯಾಸ ಮಾಡಿದರೆ ಬ್ರಹ್ಮಪದಾರ್ಥವಾದ ವಿಷ್ಣುವು ಪ್ರಾಧಾನದಿಂದ ಬೋಧಿತನಾಗುವನು. ಇದರಿಂದ ಬ್ರಹ್ಮಪದವನ್ನು ಮುಂದಿನ ಸೂತ್ರಗಳಲ್ಲಿ ಸೇರಿಸಿಕೊಂಡೇ ಅರ್ಥಮಾಡಲು ಅನುಕೂಲವಾಗುವುದು. ಹೀಗೆ ಕ್ರಮ ವ್ಯತ್ಯಾಸದಿಂದ ಆಚಾರರು ವ್ಯಾಖ್ಯಾನ ಮಾಡಿರುವುದಕ್ಕೆ ಮೇಲಿನಂತೆ ವಿಶೇಷ ಪ್ರಯೋಜನವನ್ನು ರಾಯರು ಸೂಚಿಸಿದ್ದಾರೆ.
ಹೀಗೆ ಕ್ರಮವೃತ್ಯಾಸಮಾಡಿ ವ್ಯಾಖ್ಯಾನಮಾಡಿರುವುದರಿಂದ ಇದೇ ಕ್ರಮದಿಂದ “ವಿಜಿಜ್ಞಾಸಿತಃ”, “ನಾರಾಯಣೋSಸೌ ಪರಮೋವಿಚಿಂತ್ರಃ” “ನಾರಾಯಣಂ ಮಹಾಜೇಯಂ”, “ಆತ್ಮಾವಾರೇ ದೃಷ್ಟವೋ ಶೋತವೋ ಮಂತವೋ ನಿಧಿಧ್ಯಾಸಿತವ” ಮುಂತಾದ ಸುಬಂತವಾಕ್ಯಗಳನ್ನೂ ಸಹ ಈ ಅಧಿಕರಣದ ವಿಷಯ ವಾಕ್ಯವಾಗಿ ಉದಾಹರಿಸಬಹುದೆಂದೂ ಸೂಚಿತವಾಗಿ ಸೂತ್ರದ ವಿಶ್ವತೋ ಮುಖತ್ವವೆಂಬ ಲಕ್ಷಣವು ವಿವರಿಸಿದಂತಾಗುವುದು. ಇಷ್ಟೇ ಅಲ್ಲ: ಬ್ರಹ್ಮಜಿಜ್ಞಾಸಾ ಎಂಬ ಸೂತ್ರಕ್ರಮವನ್ನೇ ಅನುಸರಿಸಿದರೆ ವಿಷ್ಣುವಿನ ಜಿಜ್ಞಾಸವೆಂದು ಅರ್ಥವನ್ನೂ ಹೇಳಬೇಕಾಗುವುದು. ಹಾಗೆ ಹೇಳಿದಲ್ಲಿ ವಿಷ್ಣುವು ಮುಖ್ಯ ಪದಾರ್ಥವಾಗದೆ ಜಿಜ್ಞಾಸೆಯೇ ಮುಖ್ಯ ಪದಾರ್ಥವಾಗಿ ವಿಷ್ಣುವು ಅಪ್ರಧಾನವಾಗಿ ತೋರುವನು. ಹೀಗಾದಲ್ಲಿ ಬ್ರಹ್ಮಮಿಮಾಂಸಾಶಾಸ್ತ್ರದಿಂದ ಮುಖ್ಯಪ್ರತಿಪಾದ್ಯನು ವಿಷ್ಣುವೆಂಬ ಪರಮಪ್ರಮೆಯವೇ ಮುಚ್ಚಿಹೋಗುವುದು! ಇದು ಶಾಸ್ತ್ರತತ್ವವಲ್ಲ. ಅಂತೆಯೇ ವಿಷ್ಣುವಿಗೆ ಪ್ರಾಧಾನ್ಯ ಬರುವಂತೆ ಕ್ರಮವ್ಯತ್ಯಾಸಮಾಡಿ ಪರಮಪ್ರಮೇಯವನ್ನೇ ಬೋಧಿಸಿರುವ ಆಚಾರರ ವ್ಯಾಖ್ಯಾನದ ಮಹತ್ವವನ್ನು ಶ್ರೀರಾಯರು ಎತ್ತಿಹಿಡಿದು ತೋರಿಕೊಟ್ಟಿದ್ದಾರೆ.
ಸೂತ್ರದಲ್ಲಿ ಜಿಜ್ಞಾಸಾ ಎಂದು ಹೇಳಿದ್ದರೂ 'ವಿಜಿಜ್ಞಾಸಿತವ' ಎಂದು 'ವಿ' ಎಂಬ ಉಪಸರ್ಗಸಹಿತವಾಗಿ ಭಾಷ್ಯಕಾರರು ವ್ಯಾಖ್ಯಾನಮಾಡಿರುವುದಕ್ಕೂ ವಿಶೇಷಾಭಿಪ್ರಾಯವಿದೆ. ಅಧ್ಯಯನ ಶಮದಮಾದಿಸಂಪತ್ತಿರೂಪವಾದ ಅಧಿಕಾರ, ಜ್ಞಾನಾದಿಮೂಲಕವಾಗಿ ಸಂಭವಿಸುವ ಮೋಕ್ಷಫಲ - ಇವುಗಳು ಈ ಜಿಜ್ಞಾಸೆಗೆ ಅಧಿಕೃಸಂಪಾದಕವೆಂಬ ಅಂಶವನ್ನೂ ಮತ್ತು ಈ ಜಿಜ್ಞಾಸೆಗೆ ಬಹುಶ್ರುತಿವಾಕ್ಯಗಳು ವಿಷಯವಾಗಿವೆಯೆಂಬಂಶವನ್ನೂ ಸೂಚಿಸಲು 'ಪಿ' ಎಂಬ ಉಪಸರ್ಗಸಹಿತವಾಗಿ ಆಚಾರರು ಅರ್ಥಹೇಳಿದ್ದಾರೆಂದು ನಿರೂಪಿಸಿದ್ದಾರೆ.
“ಸರ್ವಾವಸ್ಥಾ ಪ್ರೇರಕಶ್ಚ ಸರ್ವರೂಪೇಶ್ವಭೇದವಾನ್ | ಸರ್ವದೇಶೇಷು ಕಾಲೇಷು ಸ ಏಕಃ ಪರಮೇಶ್ವರಃ ||” ಎಂಬಲ್ಲಿ ದಕ್ಷಿಣಾಕ್ಷಾದಿ ಭಿನ್ನಸ್ಥಾನಗಳು ಜಾಗೃದಾದನೇಕಕಾಲಗಳು. ಇವುಗಳಲ್ಲಿ ನಿಯಾಮಕವಾಗಿರುವ ವಿಶ್ವ, ತೈಜಸಾದಿ ಭಗವದ್ರೂಪಗಳಿಗೆ ಸ್ಥಾನಭೇದದಿಂದಲೂ ಕಾಲಭೇದದಿಂದಲೂ ಯಾವವಿಧವಾದ ಭೇದವೂ ಇಲ್ಲ. ಎಲ್ಲವೂ ಪರಮಾತ್ಮನ ಪೂರ್ಣರೂಪಗಳು - ಎಂದು “ಓಂ ನ ಸ್ಥಾನತೋಪಿ” ಇತ್ಯಾದಿಮೂರುಸೂತ್ರಗಳಿಂದ ಸಿದ್ದಾಂತಮಾಡಿದ್ದಾರೆ. ಇದರ ಅರ್ಥವನ್ನು ಭಾಷ್ಯದಲ್ಲಿ ಸರ್ವಾವಸ್ಥಾ ಪ್ರೇರಕ ಸ ಏಕಃ ಪರಮೇಶ್ವರಃ” ಎಂಬ ವಾಕ್ಯದಿಂದ ಸಂಗ್ರಹಿಸಿದ್ದಾರೆ. ಇದರಲ್ಲಿ “ಸ ಏಕಃ ಪರಮೇಶ್ವರಃ” ಎಂಬಲ್ಲಿ ಅನೇಕಾರ್ಥಗಳಡಗಿವೆ ಎಂದು ತೋರಿಸಿ ರಾಯರು ವ್ಯಾಖ್ಯಾನಚಾತುರ್ಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಕೆಲವಂಶಗಳನ್ನು ನಿರೂಪಿಸಬಯಸುತ್ತೇವೆ.
ಭಗವದಂಶಭೂತವಾದ ಮತ್ತ್ವ- ಕೂರ್ಮಾದಿರೂಪಗಳಿಗೆ ಅತ್ಯಂತಾಭೇದವನ್ನು ಒಪ್ಪುವುದಾದರೆ ಜೀವನೂ ಸಹ ಪರಮಾತ್ಮನ ಅಂಶನಾದ್ದರಿಂದ ಜೀವಪರಮಾತ್ಮರಿಗೂ ಅಭೇದ ಬರಲಿ ಎಂಬ ಶಂಕೆಯು ಸಹಜವಾಗಿ ಬರುತ್ತದೆ. ಈ ಸಂಶಯವನ್ನು ನಿವಾರಿಸುವ ಓಂ ಆತ ಏವ ಚ ಉಪಮಾಸೂರಕಾದಿವತ್ ಓಂ” ಎಂಬ ಸೂತ್ರತಾತ್ಪರ್ಯವನ್ನು “ಸ ಏಕಃ ಪರಮೇಶ್ವರಃ” ಎಂಬುದರಿಂದ ನಿರೂಪಿಸಿರುವರು. ಮತ್ತೆ - ಕೂರ್ಮಾದಿಗಳೂ, ಜೀವ-ಇವು ಭಗವದಂಶವಾದರೂ ಒಂದೇ ವಿಧವಾದ ಅಂಶವಲ್ಲ, ಅಂಶವೆಂಬುದು ಸಾಮಾನ್ಯಶಬ್ದ, ಪ್ರಮಾಣಗಳಿಗೆ ಅನುಸಾರವಾಗಿ ಅದಕ್ಕೆ ವಿಶೇಷಾರ್ಥಗಳನ್ನು ಹೇಳಬೇಕು. ಅಂಶವು ಅಭಿನ್ನಾಂಶ ಭಿನ್ನಾಂಶ ಎಂದು ಎರಡು ವಿಧವಾಗಿ ಕಂಡಿದೆ. “ಯದೇವೇಹ ತದಮುತ್ರ, ಯದಮುತ್ರ ತದಹ” ಎಂಬ ಉಪನಿಷದ್ವಾಕ್ಯಗಳು ಮತ್ತಾದಿರೂಪಗಳಿಗೂ ಭಗವಂತನಿಗೂ ಭೇದವಿಲ್ಲವೆಂದು ಸಾರುತ್ತಿರುವುದರಿಂದ ಮತ್ತಾದಿಗಳೂ ಭಗವದಂಶವೆಂದರೆ ಅಭಿನ್ನಾಂಶವೆಂದು ತಿಳಿಯಬೇಕು. “ಓಂ ಪೃಥುಗುಪದೇಶಾತ್ ಓಂ”, “ದ್ವಾಸುಪರ್ಣಾ' ಮುಂತಾದ ಪ್ರಮಾಣಗಳಿಂದ ಜೀವೇಶ್ವರರಿಗೆ ಭೇದವು ಸ್ಪಷ್ಟವಾಗಿ ಸಿದ್ಧಿಸಿರುವುದರಿಂದ ಜೀವನು ಪರಮಾತ್ಮನ ಭಿನ್ನಾಂಶವೆಂದೇ ಅರ್ಥಮಾಡಬೇಕು. “ರೂಪಂ ರೂಪಂ ಪ್ರತಿರೂಪೋ ಬಭೂವ', 'ಬಹವಃ ಸೂರಕಾ ಯದ್ವತ್ ರಸ್ಯ ಸದೃಶಾಜಲೇ | ಏವಮೇವಾತ್ಮಕಾ ಲೋಕೇ ಪರಮಾತ್ಮ ಸದೃಶಾಮತಾಃ ||” ಮುಂತಾದ ಪ್ರಮಾಣವಾಕ್ಯಗಳಿಂದ ನೀರಿನಲ್ಲಿ ಪ್ರತಿಬಿಂಬತವಾದ ಸೂರನ ಛಾಯೆಯಂತೆ ಜೀವನು ಭಗವಂತನ ಪ್ರತಿಬಿಂಬನಾದ್ದರಿಂದ ಭಿನ್ನಾಂಶವೆಂದೇ ತಿಳಿಯಬೇಕು.
ವೈಶೇಷಿಕಾಧಿಕರಣದಲ್ಲಿ ಸಮವಾಯವನ್ನು ನಿರಾಕರಣಮಾಡಿ, ಜ್ಞಾನಾನಂದಾದಿಗಳನ್ನು ವಸ್ತುಸ್ವರೂಪವೆಂದು ಅಂಗೀಕರಿಸಿರುವುದರಿಂದ “ಸತ್ಯಂ ಜ್ಞಾನಮನಂತು ಬ್ರಹ್ಮ” ಮುಂತಾದ ಶ್ರುತಿಗಳಿಂದ ಆನಂದಾದಿಗುಣಗಳಿಗೆ ಬ್ರಹ್ಮ ಸ್ವರೂಪತ್ವವನ್ನು ಅಂಗೀಕರಿಸಿರುವುದರಿಂದ ಪರಮಾತ್ಮನು ಜ್ಞಾನಾನಂದಿಗುಣವುಳ್ಳವನೆಂಬುದು ಕೂಡದೇಹೋಗಲಿ; ಒಬ್ಬನೇ ಆತ್ಮನಿಗೆ ಆನಂದಾದಿಸ್ವರೂಪತ್ವ, ಆನಂದಾದಿಗುಣಗಣಯುಕ್ತವು ಯುಕ್ತಿ ವಿರುದ್ಧವೆಂದು ಶಂಕೆಬಂದರೆ, ಈ ಶಂಕೆಯನ್ನು ನಿವಾರಿಸುವ “ಓಂ ಉಭಯವ್ಯಪದೇಶಾತಹಿಕುಂಡಲವತ್ ಓಂ” ಮುಂತಾದ ನಾಲ್ಕು ಸೂತ್ರಗಳ ತಾತ್ಪರ್ಯವನ್ನು “ಸ ಏಕಃ ಪರಮೇಶ್ವರಃ ಎಂಬುದರಿಂದ ನಿರೂಪಿಸಿದ್ದಾರೆ.
ಸಿದ್ಧಾಂತದಲ್ಲಿ ವಿಶೇಷವೆಂಬ ಪದಾರ್ಥವನ್ನು ಅಂಗೀಕಾರಮಾಡಿದ್ದಾರೆ. ಸಿದ್ಧಾಂತದಲ್ಲಿ ಮಾತ್ರ ಈ ವಿಶೇಷವನ್ನು ಅಂಗೀಕರಿಸಿದ್ದಾರೆಂದಲ್ಲ; ಇದನ್ನು ಎಲ್ಲರೂ ಒಪ್ಪಲೇಬೇಕು. ಏಕೆಂದರೆ - “ದೇಶಃ ಸರ್ವತ್ರಾಸ್ತಿ ಕಾಲಃ ಸದಾಸ್ತಿ” ಎಂಬ ಅಬಾಧಿತವಾದ ಪ್ರತೀತಿಯು ಎಲ್ಲರಿಗೂ ಉಂಟಾಗುತ್ತದೆ. ದೇಶವು ಎಲ್ಲಾ ಕಡೆಯಲ್ಲಿಯೂ ಇದೆ. ಕಾಲವು ಎಲ್ಲಾ ಕಡೆಯಲ್ಲಿಯೂ ಇದೆ ಎಂದು ಇದರ ಅರ್ಥ ಕಾಲದಲ್ಲಿ ಕಾಲ, ದೇಶದಲ್ಲಿ ದೇಶ ಎಂದರೆ ಒಂದಕ್ಕೆ ಆಧಾರಧೇಯಭಾವ ಹೇಗೆ ಕೂಡುತ್ತದೆ ಎಂಬ ಶಂಕೆಯನ್ನು ವಿಶೇಷಪದಾರ್ಥವನ್ನು ಅಂಗೀಕಾರಮಾಡಿಯೇ ನಿವಾರಿಸಬೇಕು. “ವಸ್ತುತಃ ಅಭೇದೇಪಿ ಭೇದಕಾರ್ಯಕಾರೀ ವಿಶೇಷಃ” ಅಭಿನ್ನವಾದ ವಸ್ತುವಿಗೆ ಭೇದವ್ಯವಹಾರಕ್ಕೆ ಕಾರಣವಾದುದು ವಿಶೇಷವೆಂದು ಲಕ್ಷಣ ಹೇಳಿದ್ದಾರೆ.
ಸರ್ಪವು ಕುಂಡಲರೂಪವಾಗಿಯೂ ಕುಂಡಲ ಉಳ್ಳದ್ದಾಗಿಯೂ ಇರುವಂತೆ ಸೂರ್ಯನು ಪ್ರಕಾಶರೂಪನೂ, ಪ್ರಕಾಶವುಳ್ಳವನೂ ಆಗಿರುವಂತೆ ಪರಮಾತ್ಮನು ಜ್ಞಾನಾನಂದಾದಿಗುಣಸ್ವರೂಪನೂ, ಗುಣವುಳ್ಳವನೂ ಆಗಿದ್ದಾನೆ, ವಿಶೇಷ ಬಲದಿಂದ ಪರಮಾತ್ಮನ ಜ್ಞಾನ, ಭಗವಂತನ ಆನಂದವೆಂಬ ಭೇದವ್ಯವಹಾರವೂ ಕೂಡುತ್ತದೆ. ಪರಮಾತ್ಮನಿಗೂ ಅವನಲ್ಲಿರುವ ಜ್ಞಾನಾನಂದಾದಿಗುಣಗಳಿಗೂ ಅತ್ಯಂತಾಭೇದವೇಸರಿ, ಭೇದವು ಕೂಡುವುದಿಲ್ಲ, “ನೇಹಾನಾನಾಸ್ತಿಕಿಂಚನ”, “ಏಕಾಮೇವಾ- ದ್ವಿತೀಯಂ” ಮುಂತಾದ ಶ್ರುತಿವಾಕ್ಯಗಳಿಂದ ಭೇದವನ್ನು ನಿರಾಕರಿಸಿದ್ದಾರೆ. ಆದುದರಿಂದ ಸರ್ವದೇಶ-ಕಾಲಗಳಲ್ಲಿರುವ ಭಗವಂತನ ಸಮಸ್ತರೂಪಗಳೂ ಸಮಾನವಾದವುಗಳು. ಅವಕ್ಕೆ ಯಾವ ವಿಧದಲ್ಲಿಯೂ ತಾರತಮ್ಯವಿಲ್ಲ. ಮತ್ತು ಪರಮಾತ್ಮನ ಮೂಲರೂಪ ಹಾಗೂ ಅವತಾರರೂಪಗಳು ಸಮಾನವಾದವು. ಅವುಗಳಿಗೂ ಯಾವ ವಿಧವಾದ ಭೇದವೂ ಇಲ್ಲ. ಇದರಂತೆ ಭಗವಂತನಿಗೂ ಅವನ ಅವಯವಗಳಿಗೂ ಅವನಲ್ಲಿರುವ ಜ್ಞಾನಾನಂದಿಗುಣಗಳಿಗೂ ಭೇದವಿಲ್ಲ. ಪರಮಾತ್ಮನು ಅಂಚಿತ್ಯಾದ್ಭುತ ಶಕ್ತಿಯುಳ್ಳವನೂ, ಅಘಟಿತಘಟನಾಪಟವೂ ಆದ್ದರಿಂದ ಈ ವಿಧವಾದ ಶಕ್ತಿಯು (ಅಭೇದವು) ಭಗವಂತನಿಗೆ ಕೊಡುತ್ತದೆ. ಹೀಗೆ ಅನೇಕ ಪ್ರಮೇಯಗಳನ್ನು “ಸ ಏಕ ಪರಮೇಶ್ವರಃ” ಎಂಬುದರಿಂದ ತಮ್ಮ ಪ್ರಜ್ಞಾತಾಂಡವ ಮತ್ತು ಪ್ರತಿಭಾದಿಗಳಿಂದ ಶ್ರೀಗುರುಸಾರ್ವಭೌಮರು ವ್ಯಾಖ್ಯಾನಮಾಡಿರುತ್ತಾರೆ. ಹೀಗೆಯೇ ರಾಯರು ಒಂದೊಂದು ಪದಗಳಿಗೂ ಅನೇಕ ಅರ್ಥಗಳನ್ನು ಸೂಚನೆಮಾಡಿ ಅಸದೃಶ ವ್ಯಾಖ್ಯಾನ ಕೌಶಲವನ್ನು ತೋರಿ ತತ್ವಜಿಜ್ಞಾಸುಗಳಿಗೆ ಮಹೋಪಕಾರಮಾಡಿದ್ದಾರೆ.
ಹೀಗೆ ಶ್ರೀಗುರುಸಾರ್ವಭೌಮರು ವೇದ, ಉಪನಿಷತ್, ಗೀತಾ, ಪುರಾಣಗಳು, ದೈತಭಾಷ್ಯ-ಟೀಕೆಗಳಿಗೆ ಅಸದೃಶ ಟಿಪ್ಪಣಿಗಳನ್ನು ರಚಿಸಿ ಸೂತ್ರಕಾರರ, ಭಾಷ್ಯ-ಟೀಕಾಕಾರರ ನೈಜಾಭಿಪ್ರಾಯಗಳನ್ನು ತಮ್ಮ ಗ್ರಂಥಗಳಿಂದ ಚೆನ್ನಾಗಿ ಪ್ರಕಟಪಡಿಸಿ ಮುಕ್ತಿಯೋಗ್ಯ ಸುಜೀವಿಗಳಿಗೆಲ್ಲ ಮಹದುಪಕಾರಮಾಡಿದ್ದಾರೆ. ಶ್ರೀಗುರುರಾಜರ ಎಲ್ಲ ಗ್ರಂಥಗಳ ಪರಿಚಯಮಾಡಿಕೊಡುವ ನಮ್ಮ ಆಶಯವನ್ನು ಅವರೇ ಬೇಗ ಪೂರ್ಣಮಾಡಿ ಅನುಗ್ರಹಿಸುವರೆಂದು ನಂಬಿದ್ದೇವೆ. ಹೀಗೆ ಹಂಸ ನಾಮಕ ಪರಮಾತ್ಮನಿಂದ ಪ್ರವೃತ್ತನಾಗಿ ಅವಿಚ್ಛಿನ್ನವಾಗಿ ನಡೆದುಬಂದ ಮುಂದೆ ಶ್ರೀವೇದವ್ಯಾಸರಿಂದ ಚೆನ್ನಾಗಿ ಪ್ರತಿಷ್ಠಾಪಿಸಲ್ಪಟ್ಟ ಜ್ಞಾನಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದು. ಆ ವೈದಿಕಸವೈಷ್ಣವಸಿದ್ಧಾಂತವು “ಅದ್ಯ ಶ್ರೀರಾಘವೇಂದ್ರಾದಿಲಸತಿಫಲಿತೋ ಮಧ್ವಸಿದ್ಧಾಂತ ಶಾಖೀ” ಎಂಬಂತೆ ಫಲಭರಿತವಾಗಿ ಆ ಫಲವನ್ನು ಸಮಸ್ತ ಸುಜೀವಿಗಳೂ ಆಸ್ವಾದಿಸಿ ಸುಖಿಸುವಂತೆ ಮಾಡಿದ ಶ್ರೀಗುರುಸಾರ್ವಭೌಮರ ಮಹೋಪಕಾರಕ್ಕೆ ವಿದ್ವಜ್ಜನರು, ಧಾರ್ಮಿಕರು ಸರ್ವದಾ ಕೃತಜ್ಞರಾಗಿದ್ದಾರೆ.
“ಶ್ರೀವಿದ್ಯಾದೇವಿಯು ಶ್ರೀಗುರುರಾಜರಿಗೆ ದರ್ಶನವಿತ್ತು ಈ ಬಗೆಯ ಗ್ರಂಥ ರಚನೆಮಾಡಲು ಸಮರ್ಥರು ಈಗ ಮಾತ್ರವಲ್ಲ: ಮುಂದೆಯೂ ಪಂಡಿತಪ್ರಪಂಚದಲ್ಲಿ ನಿನ್ನ ವಿನಃ ಬೇರಾರೋ ಶಕ್ತರಲ್ಲ ತದ್ವಾ ಖಾನೇ ಲಬ್ದರ್ವನ ಚಾಸ್ತ ವಿದ್ವತ್ತಂಘನೈವ ಭಾವೀ ತ್ವದನ್ಯ” ಎಂದು ಹೇಳಿ ಉಪದೇಶಿಸಿದ್ದರ ಫಲವನ್ನು ಇಂದು ಜಗತ್ತಿನ ಪಂಡಿತಮಂಡಲಿ ಸಜ್ಜನವೃಂದ ಆಸ್ವಾದಿಸುತ್ತಿರುವುದು ಪ್ರತ್ಯಕ್ಷವಾಗಿದೆ ಎಂದು ನಿರೂಪಿಸುತ್ತಾ ವಿರಮಿಸುತ್ತೇವೆ.