ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

ಉಪಸಂಹಾರ

ಶ್ರೀಸುಯಮೀಂದ್ರತೀರ್ಥರ ವರಕುಮಾರಕರಾದ ಪೂಜ್ಯ ಶ್ರೀಸುಜಯಿಂದ್ರತೀರ್ಥರು ೧೨-೧-೧೯೬೭ರಂದು ಮಹಾಸಂಸ್ಥಾನಾಧಿಪತಿಗಳಾದರು. ಶ್ರೀಯವರು ತಮ್ಮ ಗುರುಗಳ ಆದೇಶದಂತೆ ಅವರು ರೂಪಿಸಿದ್ದ ಎಲ್ಲಾ ಯೋಜನೆಗಳನ್ನೂ ಪೂರ್ಣಗೊಳಿಸಿ ಮಂತ್ರಾಲಯದ ಸರ್ವಾಂಗೀಣ ಅಭಿವೃದ್ಧಿಯನ್ನು ನೆರವೇರಿಸಿ “ಗುರುಗಳು ನಿರ್ಮಲಮನಸ್ಸಿನಿಂದ ಪ್ರಸನ್ನಚಿತ್ತರಾಗಿ ಆಶೀರ್ವದಿಸಿ ಅನುಗ್ರಹಿಸಿದರೆ, ಎಂಥಾ ಮಹತ್ಕಾರ್ಯವನ್ನೂ ಶಿಷ್ಯರು ಪೂರೈಸಲು ಸಮರ್ಥರಾಗುತ್ತಾರೆ!” ಎಂಬುದಕ್ಕೆ ಶ್ರೀಸುಜಯಿಂದ್ರತೀರ್ಥರು ದೃಷ್ಟಾಂತರಾಗಿದ್ದಾರೆ. 

ಶ್ರೀಮದಾಚಾರ್ಯರ ಮೂಲಮಹಾ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ 'ಗುರುರಾಜರ ಮಹಿಮಾ ಪತಾಕೆ'ಯೆನಿಸಿ ಖ್ಯಾತರಾದ, ಭಕ್ತಸಮೂಹದಿಂದ ನಡೆದಾಡುವ ರಾಯರು' ಎಂಬ ಕೀರ್ತಿಗೆ ಪಾತ್ರರಾದ, ಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರಕರಾದ ಪೂಾಜ್ಯ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಶೋಭಿಸುತ್ತಾ ಶ್ರೀಗುರುಸಾರ್ವಭೌಮರ ವಿಶೇಷಾನುಗ್ರಹಕ್ಕೆ ಪಾತ್ರರಾಗಿ ನಿರ್ಮಲಕೀರ್ತಿ-ಪ್ರತಿಷ್ಠೆಗಳನ್ನು ಸಂಪಾದಿಸಿ ಜಗನ್ಮಾನ್ಯರಾಗಿದ್ದಾರೆ. ಇಂದು ಸಕಲ ಶಿಷ್ಯ-ಭಕ್ತ-ವಿದ್ವಜ್ಜನರ ಭಕ್ತಿ-ಗೌರವಗಳಿಗೆ ಪಾತ್ರರಾಗಿ ಆಮಲಕೀರ್ತಿಯಿಂದ ವಿರಾಜಿಸುತ್ತಿದ್ದಾರೆ! 

ಪರಮಪೂಜ್ಯ ಶ್ರೀಸುಶಮೀಂದ್ರತೀರ್ಥರು ಶ್ರೀಮದಾಚಾರರ ಪೀಠದಲ್ಲಿ ಬಹುಕಾಲ ವಿರಾಜಿಸಿ, ಮೂಲಮಹಾಸಂಸ್ಥಾನ, ಮಂತ್ರಾಲಯಗಳ ಅಭಿವೃದ್ಧಿ, ಶಿಷ್ಯಭಕ್ತಜನೋದ್ಧಾರ, ಸಂಪ್ರದಾಯರಕ್ಷಕರಾಗಿ ವಿದ್ವಜ್ಜನ, ಆಶ್ರಿತಜನ ಪೋಷಣೆ ಮಾಡುತ್ತಾ ಸಮಸ್ತ ಆಸ್ತಿಕ ಜನತೆಯನ್ನು ಕಾಪಾಡಿಕೊಂಡು ಬರುವಂತೆ ಅನುಗ್ರಹಿಸಬೇಕೆಂದು ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ. 

ಬ್ರಹ್ಮಾಭ್ಯರ್ಚಿತ ಮೂಲರಾಮಮಖಿಲಪ್ರಜ್ಞಾರ್ಚಿತಂ ಸ್ವಶಿರಃ- ಪಾದೇ ನಸ್ತ ಸುದರ್ಶನಂ ಹರಿದಶಶ್ರೇಷ್ಠಾವತಾರಾಂಕಿತೇ | ಪೀಠ ವಿಸ್ತ್ರತ ದಿಗ್ವಯಂ ಚ ಜಯನಂ ರಾಮಂ ಜಯಾರಾರ್ಚಿತಂ ವಿಸ್ತೀರ್ಣಾಷ್ಟಭುಜದ್ವಿಜೇಂದ್ರಭುಜಗಂ ಲಕ್ಷ್ಮೀಶನಾರಾಯಣಮ್ | ಶ್ರೀಭೂದುರ್ಗಾಸಮೇತಂ ಮಣಿಮಯವಪುಷಂ ಶೇಷಶಯ್ಯಾ ವಿಲಾಸಂ ನೀಲಾರ್ಚ೦ ವಾಸುದೇವಂ ವರದಮಪಿ ಹರಿಂ ವೇಣುಗೋಪಾಲಕೃಷ್ಣಮ್ | 

ಶ್ರೀಕೃಷ್ಣಂ ರಾಘವೇಂದ್ರಾರ್ಚಿತಮಥ ಸುಮತೀಂದ್ರಾರ್ಚಿತಂ ವಾಜಿವಕ್ತಂ ರಾಮಾಂಕೇವ್ಯಾಸಮುಷ್ಠಿಯತಿವರಸುಶಮೀಂದ್ರೋಯಮರ್ಚತುದಾರಃ || 

|| ಜೀಯಾತ್ ಶ್ರೀಸುಶಮೀಂದ್ರದೇಶಿಕಮಣಿಃ ವೇದಾಂತರಾಜೇಚರಮ್ | 

ತಥಾಸ್ತು