ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಶ್ರೀಗುರುರಾಜರ ಎಲ್ಲಾ ಅವತಾರಗಳ ವಿವೇಚನೆ

ಮಂತ್ರಾಲಯ ಶ್ರೀಪಾದಂಗಳವರ ಅಮರ ಚರಿತೆಯು ಅಗಾಧ, ಅವರ ಬಹುಮುಖ ವ್ಯಕ್ತಿತ್ವ ಅನುಪಮ, ಮಹಿಮೆ ಅಪಾರ, ಅವರ ಜ್ಞಾನ-ಭಕ್ತಿ-ವೈರಾಗ್ಯ ಮತ್ತು ತಪಸ್ಸುಗಳ ಇತಿಮಿತಿ ಅಗಮ್ಯ ! ಅವರಲ್ಲಿ ಶ್ರೀಹರಿಯ ಸನ್ನಿಧಾನ ಮತ್ತು ಅನುಗ್ರಹ ಅಸದೃಶ, ಭಗವದತ್ತವಾದ ಅವರ ಅನುಗ್ರಹಶಕ್ತಿ ಅಪ್ರಹತಿತ! ಶ್ರೀಮನ್ನಾರಾಯಣನ ಅನುಗ್ರಹದಿಂದ ಲಬ್ಧವಾದ, ಅವರಲ್ಲಿ ಶೋಭಿಸುವ ಚತುರ್ವಿಧ ಪುರುಷಾರ್ಥಸಂಪತ್ತು ಅಕ್ಷಯವಾದುದು. ರಾಯರ ಭಕ್ತವಾತ್ಸಲ್ಯ, ಕಾರುಣ್ಯಾದಿ ಸದ್ಗುಣಗಳಂತೂ ಅಪಾರ ಮತ್ತು ಅಪೂರ್ವ ! ರಾಯರ ಲೋಕಕಲ್ಯಾಣ ದೀಕ್ಷೆ ಅವರ್ಣನೀಯ. ಇಂತು ಸದ್ಗುಣಗಳ ಗಣಿಗಳಾದ ಗುರುರಾಜರ ಸಮಗ್ರ ಚರಿತೆ ಮಹಿಮಾತಿಶಯಗಳನ್ನು ಸಾಕಿನ ತಿಳಿಯಲೂ ತಿಳಿಸಲೂ, ಯಾರೂ ಸಮರ್ಥರಲ್ಲ! 

ಶ್ರೀರಾಯರ ಶಿಷ್ಯರಾಗಿ, ಅವರಜೊತೆಗಿದ್ದು ದಿನದಿನವೂ ಅವರ ಅಮರಚರಿತೆ ಮಹಿಮೆಗಳನ್ನು ಕಂಡಾನಂದಿಸಿ ವಿಸ್ಮಿತರಾಗುತ್ತಿದ್ದ ಶ್ರೀಅಪ್ಪಣಾಚಾರರಂಥಜ್ಞಾನಿಗಳೇ “ಆಗಮ್ಯ ಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಾ” ಎಂದುದ್ದರಿಸಿರುವರೆಂದಮೇಲೆ ಉಳಿದವರ ಪಾಡೇನು ? ಶ್ರೀರಾಯರ “ಉಭಯವಂಶಾಬಿ ಚಂದ್ರಮ'ರೆಂದು ಜಗನ್ಮಾನ್ಯರಾದ ಶ್ರೀವಾದೀಂದ್ರತೀರ್ಥರು. - 

“ಏಷ ಶ್ರೀರಾಘವೇಂದ್ರ ಪ್ರತಿವರ ಚರಿತಾಂಭೋನಿಧಿಃ ಸ್ವಾತಿವೇಲಃ | ಕ್ಲಾಸ್ ಖದ್ಯೋತಪೋತ ಪ್ರಮುಷಿತ ವಿಭವದ್ಗೀತಸೋ ನಃ ಪ್ರಕಾಶಃ || ವಂತವಾತ ಪ್ರತಿಜ್ಞಾತದತುಲನಿಖಿಲಾಶ್ಚರ ಚಾಭಿಧಾನೇ | ಸ್ಥಾನೇಥಾಪಿ ಕಚಿತಾ ದಿಹ ಪುನರುದಧಿಸ್ನಾನ ಸಂಕಲ್ಪವಾ ” ಎಂದು ಉದ್ಧರಿಸಿದ್ದಾರೆ. 

ಶ್ರೀರಾಘವೇಂದ್ರಯತಿಪುಂಗವರ ಮಹಿಮಾಪೂರ್ಣಚರಿತೆಯು ಉತ್ತುಂಗ ತರಂಗಗಳಿಂದ ಮೇರೆ ಮೀರಿ ಹರಿಯುವ, ವಿಸ್ತಾರವೂ, ಆಗಾಧವೂ, ಗಂಭೀರವೂ, ಆದ ಸಮುದ್ರದಂತೆ ರಾಜಿಸುತ್ತಿದೆ, ನನ್ನ ಬುದ್ದಿಯಾದರೋ ಖದ್ಯೋತಪೋತ (ಮಿಣುಕು ಹುಳದ ಮರಿಯ) ಪ್ರಕಾಶದಂತೆ ಅತ್ಯಲ್ಪವಾದುದು. ಆದುದರಿಂದ ರಾಯರ ಅಪಾರ ಚರಿತ್ರೆಯನ್ನು ಪೂರ್ಣವಾಗಿ ನಿರೂಪಿಸಲು ನಾನು ಅಸಮರ್ಥನೇ! ನಿಜ, ಆದರೂ ಅವರ ಮಹಿಮಾಪೂರ್ಣ ಚರಿತ್ರೆಯನ್ನು ವರ್ಣಿಸುವೆನೆಂದು ನಾನು ಮಾಡಿದ ಪ್ರತಿಜ್ಞೆಯು “ಮಗನನ್ನು ಪ್ರಸವಿಸುವೆನು” ಎಂಬ ಬಂಜೆಯ ಪ್ರತಿಜ್ಞೆಯಂತೆ ವ್ಯರ್ಥವೇನೂ ಅಲ್ಲ! ಏಕೆಂದರೆ ಸಮುದ್ರದ ಏಕದೇಶದಲ್ಲಿ ನಿಂತು “ಸಮುದ್ರಸ್ನಾನ ಮಾಡುತ್ತೇನೆ” ಎಂದು ಸಂಕಲ್ಪಿಸಿ ಸ್ನಾನಮಾಡಿದರೂ ಅದೆಂತು ಸಮಗ್ರ ಸಮುದ್ರ ಸ್ನಾನ ಫಲಪ್ರದವಾಗಿ ಸಂಕಲ್ಪವು ಸಫಲವೆಂದೆನಿಸುವುದೋ ಅದರಂತೆ ಶ್ರೀರಾಯರ ಅಮರಚರಿತೆ-ಮಹಿಮೆಗಳ ಕೆಲವ೦ಶವನ್ನಾದರೂ ನಾನು ವರ್ಣಿಸಿದರೂ ಅದು ಅವರ ಸಮಗ್ರಚರಿತೆ-ಮಹಿಮೆಗಳ ವರ್ಣನ ಪುಣ್ಯಫಲವನ್ನು ಕೊಡಿಸುವುದರಿಂದ ನನ್ನ ಪ್ರತಿಜ್ಞೆಯು ಸಫಲವೆಂದೇ ಭಾವಿಸುತ್ತೇನೆ” ಎಂದು ನಿರೂಪಿಸಿದ್ದಾರೆ! ಜ್ಞಾನಿನಾಯಕರಾದ ಶ್ರೀವಾದೀಂದ್ರರೇ ಹೀಗೆ ಹೇಳಿರುವಾಗ ಅಜ್ಞಾನಿಯೂ, ಮಂದಮತಿಯೂ ಆದ ನನ್ನಂಥವರ ಪಾಡೇನು?

ಅಲ್ಪಶಕ್ತನೂ, ಮಂದಮತಿಯೂ ಆದ ನಾನು ಗುರುರಾಜರ ಮತ್ತು ಅವರ ಎಲ್ಲ ಅವತಾರಗಳ ಚರಿತೆಗಳನ್ನು ಯೋಗ್ಯತಾನುಸಾರ ಅಧ್ಯಯನಮಾಡಿ, ಆ ಮಹನೀಯರ ವ್ಯಕ್ತಿತ್ವಾದಿಗಳ ಚಿಂತನ-ಮಂಥನ ಮಾಡಿದಂತೆಲ್ಲಾ ನನ್ನ ಮನೋಭೂಮಿಕೆಯಲ್ಲಿ ನನ್ನ ಯೋಗ್ಯತಾನುಸಾರವಾಗಿ ಆ ಮಹಾತ್ಮರ ಹೊಸ ಹೊಸ ವ್ಯಕ್ತಿತ್ವದ, ವಿನೂತನ ಮಹಿಮೆಗಳ, ಅಮರಚರಿತೆಯ ಅಸದೃಶ್ಯವೈಶಿಷ್ಟಾದಿ ಅಮಲ ಸದ್ಗುಣಗಳ ಸಾಕಾರ ವಿರಾಟ್ ರೂಪದರ್ಶನದ ಅಭಿವ್ಯಕ್ತಿಯಾಗಿ ಪರಮಾನಂದದಿಂದ ರೋಮಾಂಚಿತನಾಗಿದ್ದೇನೆಂದಮೇಲೆ ಮಹಾತ್ಮಾರಾದ ಜ್ಞಾನಿಗಳಿಗೆ ಶ್ರೀಗುರುಸಾರ್ವಭೌಮರ ಬಗೆಗೆ ನಮ್ಮಂಥವರಿಗೆ ಅರಿವಾಗದ ಅದೆಷ್ಟೋ ಮಹತ್ವ ಪೂರ್ವವಿಚಾರಗಳು ಸ್ಪುರಿಸುವುದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ! ಅಂತೆಯೇ ಜ್ಞಾನಿಗಳು ಶ್ರೀರಾಯರ (ಮೂಲರೂಪ-ಆವತಾರಗಳ) ಮಹತ್ವವನ್ನು ಮುಕ್ತಕಂಠದಿಂದ ಹೊಗಳಿರುವ ಸಾಹಿತ್ಯ ನಮಗಿಂದು ದೊರಕಿರುವುದು ನಿಜವಾಗಿ ನಮ್ಮ ಸೌಭಾಗ್ಯ! 

ಗುರುರಾಜರ ಮೂಲರೂಪ ಮತ್ತು ಹಿಂದಿನ ಅವತಾರಗಳ ಮೇಲೆ ಬೆಳಕು ಚೆಲ್ಲುವ, ಲಭ್ಯವಾಗಿರುವ ಪುರಾಣಗಳು, ಚಾರಿತ್ರಿಕ ಕೃತಿಗಳು, ಜ್ಞಾನಿಗಳು ರಚಿಸಿರುವ ಚರಿತೆಗಳು, ಅಪರೋಕ್ಷಜ್ಞಾನಿಗಳ ಪದ ಪದ್ಯ ಸುಳಾದಿ ಮುಂತಾದ ಆಗಾಧ ಸಾಹಿತ್ಯವನ್ನು ಇಟ್ಟುಕೊಂಡು ನಮ್ಮ ಯೋಗ್ಯತಾನುಸಾರವಾಗಿ ವಿಮರ್ಶಿಸಿದಾಗ, ರಾಯರ ಆ ಎಲ್ಲ ಅವತಾರಗಳ, ಅಮರ ಚರಿತೆಗಳ, ವೈಶಿಷ್ಟ್ಯಾದಿಗಳನ್ನು ವಿವೇಚಿಸಿದಾಗ ಶ್ರೀಗುರುರಾಜರ ಎಲ್ಲ ಅವತಾರಗಳಲ್ಲಿ ಏಕರೂಪತೆ, ಒಂದೇ ಬಗೆಯ ವ್ಯಾಪಾರ, ನಡೆ-ನುಡಿ, ಉಪದೇಶ, ಆಚಾರ, ವ್ಯವಹಾರ-ಲೋಕಾನುಗ್ರಹ ಕಾರುಣ್ಯಾದಿ ಅಸಾಧಾರಣ ವಿಶಿಷ್ಟ ಗುಣಗಳನ್ನು ನಾವು ಮನಗಾಣಬಹುದಾಗಿದೆ. ಅಂತೆಯೇ ನಮ್ಮ ಬುದಿ-ಪ್ರತಿಭೆ-ಯೋಗ್ಯತಾನುಸಾರವಾಗಿ ನಾವು ನಡೆಸಿದ ತುಲನಾತ್ಮಕ ವಿವೇಚನೆಯಿಂದ ಹೊರಹೊಮ್ಮಿದ ಶ್ರೀರಾಯರ ಅಸಾಧಾರಣ ವ್ಯಕ್ತಿತ್ವ, ಆದರ್ಶ, ಮಹಿಮಾ ಸದ್ಗುಣಗಳ ಕೆಲವಂಶವನ್ನಾದರೂ ಶ್ರೀಗುರುರಾಜರ ಭಕ್ತರಿಗೆ ಪರಿಚಯ ಮಾಡಿಸಲು ಬಯಸಿ ಇಲ್ಲಿ ಈಗ ಪ್ರವೃತ್ತರಾಗಿದ್ದೇವೆ. 

ಸತ್ಯಲೋಕದಲ್ಲಿ ಬ್ರಹ್ಮದೇವರ ಪೂಜಾಕಾರ್ಯದಲ್ಲಿ ಸಹಾಯಕರಾಗಿದ್ದು ಬ್ರಹ್ಮ ಗೀರ್ವಾಣಿಯರಿಗೆ ಪುತ್ರವತ್ ಪ್ರೀತ್ಯಾಸ್ಪದ ಸೇವಕರಾಗಿದ್ದ ಕರ್ಮಜದೇವತೆ ಶಂಕುಕರ್ಣರು ಶ್ರೀಹರಿಯ ಸಂಕಲ್ಪದಂತೆ, ಪ್ರೇರಣೆಯಂತೆ, ಬ್ರಹ್ಮದೇವರ ಶಾಪರೂಪವರದಿಂದ ಶ್ರೀಹರಿಯ ದುಷ್ಟನಿಗ್ರಹಶಿಷ್ಟಪರಿಪಾಲನರೂಪ ಬಲಕಾರದಲ್ಲಿ, ಲೋಕ ಕಲ್ಯಾಣಕಾರದಲ್ಲಿ ಪ್ರಮುಖಪಾತ್ರವಹಿಸಲು ಶ್ರೀಹರಿಯ ವಿಶೇಷ ಸನ್ನಿಧಾನ, ವಾಯುದೇವರಪರಮಾವೇಶಯುಕ್ತರಾಗಿ ಪ್ರಹ್ಲಾದರಾಜರಾಗಿ ಅವತರಿಸಿದ ವಿಚಾರ ಅನೇಕ ಪುರಾಣಾದಿಗಳಿಂದ ವ್ಯಕ್ತವಾಗುತ್ತದೆ, ಅದೇ ಪ್ರಹ್ಲಾದರು ಮುಂದೆ ದ್ವಾಪರದಲ್ಲಿ ಬಾಹೀಕರಾಜರಾಗಿಯೂ, ಕಲಿಯುಗದಲ್ಲಿ ಶ್ರೀವ್ಯಾಸರಾಜ- ರಾಘವೇಂದ್ರರಾಗಿ ಅವತರಿಸಿದ ವಿಚಾರವೂ ಅನೇಕ ಪ್ರಮಾಣಗಳು, ಅಪರೋಕ್ಷಜ್ಞಾನಿಗಳ ವಚನಗಳಿಂದ ತಿಳಿದುಬರುತ್ತದೆ, ಹೀಗೆ ಶ್ರೀಶಂಕುಕರ್ಣರು ಪ್ರಹ್ಲಾದ, ಬಾಹೀಕ, ವ್ಯಾಸರಾಜ ಮತ್ತು ರಾಘವೇಂದ್ರರಾಗಿ ಅವತರಿಸಿ ಈ ನಾಲ್ಕು ಅವತಾರಗಳಲ್ಲಿ ಹರಿಯ ದುಷ್ಟಶಿಕ್ಷಣ, ಶಿಷ್ಟರಕ್ಷಣರೂಪ ಬಲಕಾರ್ಯದಲ್ಲಿ ಶ್ರೀಹರಿಗೆ ಸಹಾಯಕರಾಗಿದ್ದು ಸೇವೆ ಸಲ್ಲಿಸಲು ಮೊದಲ ಎರಡು ಅವತಾರಗಳಲ್ಲಿ ರಾಜಾಧಿರಾಜ ಚಕ್ರವರ್ತಿಯಾಗಿಯೂ, ಮುಂದೆ ಶ್ರೀಹರಿಪರಮಾತ್ಮನ ಜ್ಞಾನಕಾರದಲ್ಲಿ ಸೇವೆಸಲ್ಲಿಸಲು ವ್ಯಾಸರಾಜ ಹಾಗೂ ಕೊನೆಯ ರಾಘವೇಂದ್ರಾವತಾರಗಳಲ್ಲಿ ಪರಮಹಂಸ ಚಕ್ರವರ್ತಿಗಳಾಗಿಯೂ, ಅಪಾರ ಸೇವೆ ಮಾಡಿ, ಶ್ರೀಹರಿಭಕ್ತಾಗ್ರೇಸರೆಂದು ತ್ರಿಲೋಕದಲ್ಲಿಯೂ ಕೀರ್ತಿಗಳಿಸಿದರು. ಇವೆಲ್ಲನ್ನೂ ತುಲನಾತ್ಮಕವಾಗಿ ವಿವೇಚನೆ ಮಾಡಿದಾಗ ಎಲ್ಲ ಅವತಾರಗಳಲ್ಲಿಯೂ ಒಂದೇ ವಿಧವಾದ ನಡವಳಿಕೆ, ಭಗವದ್ಭಕ್ತಿ, ಆದರ್ಶಜೀವನ, ನಡೆ, ನುಡಿ, ಧೈಯ ಸಾಧನೆಯಲ್ಲಿ ಪರಮದೀಕ್ಷೆಗಳು ಎದ್ದು ತೋರುತ್ತವೆ. ಅವರ ಎಲ್ಲ ಅವತಾರಗಳಲ್ಲೂ ಶ್ರೀಹರಿ-ವಾಯು ಭಕ್ತಿಯು ಓತಪ್ರೋತವಾಗಿ ಹರಿಯುವುದನ್ನೂ, ಎಲ್ಲ ವಿಚಾರಗಳಲ್ಲೂ ಏಕಸೂತ್ರತೆಯನ್ನೂ ನಾವು ಕಾಣಬಹುದು. ಅದನ್ನು ಪ್ರಮಾಣ ಪೂರ್ವಕವಾಗಿ ವಿವೇಚಿಸುವ ಮೊದಲು ಹಿನ್ನೆಲೆಯಾಗಿ ಕೆಲವಿಚಾರಗಳನ್ನೂ ನಾವು ಗಮನಿಸುವುದು ಮುಖ್ಯವಾಗಿದೆ. 

ಜಗದೀಶನಿಂದ ನಿರ್ಮಿತವಾದ ಈ ಪ್ರಪಂಚದಲ್ಲಿ ನಾವು ಎರಡು ಬಗೆಯನ್ನು ಕಾಣಬಹುದು, ಒಳಿತು-ಕೆಡಕು, ಪಾಪ-ಪುಣ್ಯ, ಶತ್ರು-ಮಿತ್ರ, ಭಕ್ತ-ದ್ವೇಷಿ, ಉಪಕಾರಿ, ಅಪಕಾರಿ ಇತ್ಯಾದಿ, ಜಗತ್ತಿನ ಇತಿಹಾಸದ ಪರಿಶೀಲನೆಯಿಂದ ಇದು ಸ್ಪಷ್ಟವಾಗುವುದು. ಇದು ಕೇವಲ ಭೂಲೋಕದಲ್ಲಿ ಮಾತ್ರವಲ್ಲ, ಕಣ್ಣಿಗೆ ಕಾಣದ ಪರಲೋಕಗಳಲ್ಲಿಯೂ ಈ ಇಚ್ಛೆಗೆ ವ್ಯಕ್ತವಾಗುವುದು, ದೇವತೆಗಳು-ದೈತ್ಯರು, ಸ್ವರ್ಗ ನರಕ-ತಮಸ್ಸು, ಹರಿವಾಯುಭಕ್ತಿ, ದ್ವೇಷ, ದೈವಾಸುರ ಸಂಪತ್ತುಗಳು ಇತ್ಯಾದಿ. ಇವೆಲ್ಲವನ್ನೂ ಕೂಲಂಕುಷವಾಗಿ ವಿಚಾರಮಾಡಿದರೆ ಸಮಸ್ತ ಪ್ರಪಂಚವನ್ನೂ ಎರಡು ಭಾಗವಾಗಿ ವಿಂಗಡಿಸಬಹುದು. 

ಒಂದನೆಯದು ಸತ್ಯಶೀಲರೂ, ಧರ್ಮನಿರತರೂ, ಸರ್ವಲೋಕಹಿತೇರತರೂ, ಶ್ರೀಹರಿಗುರುಭಕ್ತರೂ, ಸದಾಚಾರಿಗಳೂ ಸಾತ್ವಿಕರೂ ಆದವರ ಗುಂಪು. ಎರಡನೆಯದು ಇದಕ್ಕೆ ಸಂಪೂರ್ಣ ವಿರುದ್ಧವಾದ, ಲೋಕಕಂಟಕರಾದ ದುಷ್ಟರ ಗುಂಪು! ಈ ಎರಡನೆಯ ಗುಂಪಿನವರ ದಬ್ಬಾಳಿಕೆ-ಹಿಂಸೆಗಳು ಮೇರೆಮೀರಿದಾಗ ಜಗತ್ತಿಗೆ ಭಗವಂತನ ಅಸ್ತಿತ್ವದಲ್ಲಿ, ಪಾಪಪುಣ್ಯಗಳಲ್ಲಿ ಶ್ರದ್ಧೆಯನ್ನು ಹುಟ್ಟಿಸಿ, ಸಾತ್ವಿಕಶಕ್ತಿಯ ಪ್ರಭಾವವನ್ನು ತೋರಿಕೊಟ್ಟು ಸತ್ಯ-ಧರ್ಮ ಸಂಸ್ಥಾಪನೆ, ಲೋಕಕಲ್ಯಾಣಗಳಿಗಾಗಿ ಶ್ರೀಹರಿಯ ಸಂಕಲ್ಪ ಇಚ್ಛೆಗಳಿಗೆ ಅನುಸಾರವಾಗಿ ದೇವಾಂಶಸಂಭೂತರಾದ ಭಗವದ್ಭಕ್ತರ ಅವತಾರವಾಗುವುದು. ಇಂತಹ ಒಂದು ಸಂದರ್ಭದಲ್ಲೇ ಸತ್ಯಲೋಕದ ಶಂಕುರ್ಣನೆಂಬ ಕರ್ಮಜದೇವತೆಯು ಪ್ರಹ್ಲಾದರಾಜರಾಗಿ ಅವತರಿಸಬೇಕಾಯಿತು. ಭಗವದ್ಭಕ್ತಿ, ಭಾಗವತಧರ್ಮ, ಹರಿತ ಪ್ರಸಾರಗಳ ಪ್ರಪ್ರಥಮ ಪ್ರಚಾರಕರು ಶ್ರೀಪ್ರಹ್ಲಾದರಾಜರು! ಒಂದೇ ಮನೆಯಲ್ಲಿ ಎರಡು ಬಗೆ! ವೈವಿಧ್ಯ! ತಂದೆ ಮಕ್ಕಳಲ್ಲಿ ವಿಚಿತ್ರವ್ಯತ್ಯಾಸ! ಇದು ಪ್ರಹ್ಲಾದರ ಚರಿತ್ರೆಯಲ್ಲಿ ಮುಖ್ಯವಾಗಿ ಕಂಡು ಬರುವ ಅಂಶ. ದೈವೀಸಂಪತ್ತಿನ ಲಕ್ಷಣವಾದ ಪರಮಾತ್ಮನಲ್ಲಿ ನಿರ್ವ್ಯಾಜ ಪ್ರೇಮ-ಭಕ್ತಿ, ಸರ್ವಭೂತಗಳಲ್ಲಿಯೂ ಕಾರುಣ್ಯ, ಸ್ನೇಹ, ಪಶ್ಚಾತ್ತಾಪ, ಪರೋಪಕಾರ ಬುದ್ದಿ, ಸರ್ವರ ಕಲ್ಯಾಣದಲ್ಲಿ ದೀಕ್ಷೆ, ಸಮೀಚೀನ ನಡತೆ, ಪಶ್ಚಾತ್ತಾಪ, ಪರೋಪಕಾರ ಬುದ್ದಿ, ಸರ್ವರ ಕಲ್ಯಾಣದಲ್ಲಿ ದೀಕ್ಷೆ, ಸಮೀಚಿನ ನಡತೆ, ಸದಾಚಾರ, ಶೀಲ, ತತ್ವ ನಿಷ್ಠೆ - ಈ ಗುಣಗಳು ಪ್ರಹ್ಲಾದರಲ್ಲಿ ಸಾಕಾರತಾಳಿ ವಿರಾಜಿಸುತ್ತಿದ್ದರೆ, ಅಸುರೀ ಸಂಪತ್ತಿನ ಲಕ್ಷಣವಾದ ಆತ್ಮಪ್ರತಿಷ್ಠೆ, ಕೌರ್ಯ, ದಂಭ, ಸಜ್ಜನರಲ್ಲಿ, ಸತ್ತತ್ವಗಳಲ್ಲಿ ಅವಜ್ಞಾ, ಶ್ರೀಹರಿ ಮತ್ತು ಅವನ ಭಕ್ತರಲ್ಲಿ ದ್ವೇಷ, ವಂಚನೆ, ಸ್ವಾರ್ಥ, ಸಾತ್ವಿಕತೆಯನ್ನು ಮೆಟ್ಟಿ ಆಳಬೇಕೆಂಬ ಮಹತ್ವಾಕಾಂಕ್ಷೆ, ಆತ್ಮಸ್ತುತಿ, ಪರನಿಂದೆ, ಸಜ್ಜನರನ್ನು ಹಿಂಸಿಸಿ ಆನಂದಿಸುವುದು - ಇವೇ ಮುಂತಾದವು ಹಿರಣ್ಯಕಶ್ಯಪನಲ್ಲಿ ಎದ್ದು ಕಾಣುತ್ತಿತ್ತು! ಹೀಗೆ ಅಂದಿನಿಂದ ಇಂದಿನವರೆಗೂ ಈ ಇಬ್ಬಗೆಯ ಪ್ರಹ್ಲಾದ-ಹಿರಣ್ಯ ಶಿಪುಗಳ ಗುಂಪು ಅವ್ಯಾಹತವಾಗಿ ನಡೆದುಬಂದಿದೆಯೆಂದರೆ ಅಚ್ಚರಿಯಲ್ಲ! 

ಸಾತ್ವಿಕತನದ ಮೂರ್ತಿಮಂತ ಸ್ವರೂಪರಾದ ಶ್ರೀಪ್ರಹ್ಲಾದರ ವ್ಯಕ್ತಿತ್ವವೆಂತಹುದು ? ಅವರೆಂತಹ ಶ್ರೀಹರಿಯ ಭಕ್ತರು ? ಅವರಲ್ಲಿ ಏನೇನು ಸದ್ಗುಣಗಳು ಕಂಡುಬರುತ್ತಿದವು ? ಅವರಲ್ಲಿ ಶ್ರೀಪರಮಾತ್ಮನ ಅನುಗ್ರಹ ಹೇಗಿತ್ತು? ಅವರ ಅವತಾರದಿಂದ ಜಗತ್ತಿಗಾದ ಪ್ರಯೋಜನ-ಉಪಕಾರಗಳೇನು ? ಎಂದು ವಿಮರ್ಶಿಸಿದಾಗ ಪ್ರಹ್ಲಾದರಾಜರ ಸದ್ಗುಣಭರಿತ ಪರಮಪಾವನ ದಿವ್ಯವ್ಯಕ್ತಿತ್ವ ಕಣ್ಣಿಗೆ ಕಟ್ಟಿದಂತಾಗುವುದು! 

“ಪ್ರಹ್ಲಾದೋ ಜನ್ಮವೈಷ್ಣವಃ, ಪ್ರಹ್ಲಾದೋ ನಿತ್ಯಭಕ್ತಿಮಾನ್, ನಾರಾಯಣೇ ಭಗವತಿ ಯಸ್ಯ ನೈಸರ್ಗಿಕೀ ರತಿಃ, ಕೃಷ್ಣಗ್ರಹ ಗೃಹೀತಾತ್ಮಾ, ದೇವಸ್ತ್ರ ಭಾವಃ, ಶೀಲಸಂಪನ್ನಃ, ಅಪರೋಕ್ಷಿಕೃತ ಶ್ರೀಶಃ, ಭಾಗವತಾಗ್ರೇಸರಃ, ರಹಿತಾ ಸುರೋಸುರಃ, ನಿರ್ವೈರಃ, ಪ್ರಶಾಂತಃ, ಜೀತೇಂದ್ರಿಯಃ, ಸರ್ವಭೂತಹಿತೇರತಃ", ಇತ್ಯಾದಿ ವಿಶೇಷಣಗಳಿಂದ ಶ್ರೀಭಾಗವತಾಚಾರರು (ಮತ್ತು ಎಲ್ಲ ಪುರಾಣಾದಿಗಳಲ್ಲೂ ಪ್ರಹ್ಲಾದರನ್ನು ಮನಮುಟ್ಟುವಂತೆ ವರ್ಣಿಸಿರುವುದನ್ನು ಪರಿಶೀಲಿಸಿದಾಗ ಶ್ರೀಪ್ರಹ್ಲಾದರಾಜರ, ನಿಷ್ಕಳಂಕ, ಮಂಗಳಕರ, ಪ್ರೇಮಲಸ್ವಾಭಾವದ ಸಾತ್ವಿಕತೆಗಳ ಭವ್ಯಚಿತ್ರ ನಮ್ಮ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ ನೆಲೆನಿಂತು ಪರಮಾನಂದವನ್ನು ತಂದೀಯುವುದು! 

ಪ್ರಹ್ಲಾದರಾಜರು ಶ್ರೀಮನ್ನಾರಾಯಣಶಬೋಚ್ಚಾರ ಪೂರ್ವಕವೆ ತಾಯಿಯ ಗರ್ಭವನ್ನು ಸೇರಿದ್ದರಿಂದ ಅವರು ಆಜನ್ಮವೈಷ್ಣವರು. ಅವರು ಹರಿಯಲ್ಲಿ ನಿತ್ಯಭಕ್ತಿಮಾಡುವ ಮಹಾನುಭಾವರು. ಅವರಿಗೆ ನಾರಾಯಣನಲ್ಲಿ ಸ್ವಾಭಾವಿಕವಾದ ಪ್ರೇಮ, ಅನುರಾಗ, ಕೃಷ್ಣನೆಂಬ ಗ್ರಹದಿಂದ ಆವಿಷ್ಟರವರು, ದೇವತಾಸ್ವಭಾವರು, ಶೀಲಸಂಪನ್ನರು, ಶ್ರೀಹರಿಯ ಅಪರೋಕ್ಷ ಪಡೆದವರು, ಪರಮಭಾಗವತಾಗ್ರಣಿಗಳು, ಅಸುರಭಾವರಹಿತರು ಮತ್ತು ವಾಯುದೇವರಲ್ಲಿರಮಿಸುವವರು, ದ್ವೇಷವಿಲ್ಲದವರು, ಪ್ರಶಾಂತಮನಸ್ಸುಳ್ಳವರು, ಇಂದ್ರಿಯಗಳನ್ನು ಜಯಿಸಿದವರು ಸಕಲಭೂತಗಳ ಹಿತದಲ್ಲಿಯೇ ಆಸಕ್ತರಾದವರು, ಲೋಕದ ಸುಜನರ ಉದ್ಧಾರವನ್ನು ಬಯಸುವ ಮಹಾತ್ಮರೆಂದು ಮೇಲಿನ ವಿಶೇಷಣಗಳು ಅವರನ್ನು ಕೊಂಡಾಡುವುವು! 

ಮಾತೃಗರ್ಭದಲ್ಲಿರುವಾಗಲೇ ಸಾಕ್ಷಾತ್ ದೇವರ್ಷಿ ನಾರದರಿಂದ ಉಪದೇಶ ಪಡೆದ ಭಾಗ್ಯಶಾಲಿಗಳು ಪ್ರಹ್ಲಾದರು, ನಾರದರು, ಉಪದೇಶಿಸಿದ್ದು ಶ್ರೀಮನ್ನಾರಾಯಣನ ಸರ್ವೊತ್ತ ಮತ್ವಾದಿ ವೈದಿಕ ಸತ್ತತ್ವಗಳನ್ನು ಪ್ರಹ್ಲಾದರು ಕೈಕೊಂಡು ಜೀವನದಲ್ಲಿ ಆಚರಣೆಗೆ ತಂದು ಜನತೆಗೆ ಉಪದೇಶಿಸುತ್ತಿದ್ದುದು ಪಾವನ ಭಗವತ ಧರ್ಮಗಳನ್ನು! ಅಂದಮೇಲೆ ಅವರ ಆಚಾರವಿಚಾರ, ನಡೆ, ನುಡಿ, ಶೀಲಾದಿ ಸದ್ಗುಣಗಳು ಹೇಗಿರಬೇಕು? ಅವರು ತಮೊಬ್ಬರ ಉದ್ಧಾರವನ್ನು ಮಾತ್ರ ಬಯಸಿದವರಲ್ಲ ಸಮಸ್ತರ ಉದ್ಧಾರವಾಗಬೇಕೆಂದು ಶ್ರಮಿಸಿದ ಉದಾರಚರಿತರವರು. ಅವರು ಸ್ವಾರ್ಥಿಗಳಲ್ಲ! ಜಗತ್ಕಲ್ಯಾಣವೇ ಅವರ ಗುರಿ! ಅನಾದಿಕಾಲದಿಂದ ಅವಿಚ್ಛಿನ್ನವಾಗಿ ನಡೆದುಬಂದ ವೈಷ್ಣವಸಿದ್ಧಾಂತ, ಸತ್ತತ್ವಗಳು, ಸಂಪ್ರದಾಯಗಳನ್ನು ಪ್ರಸಾರ ಮಾಡಲೆಂದೇ ಅವರು ಹೆಣಗಿದರು. ಅದಕ್ಕಾಗಿ ಅವರೆದುರಿಸಬೇಕಾಗಿಬಂದ ಅಡ್ಡಿ-ವಿಡೂರಗಳು, ಹಿಂಸೆ, ಕಷ್ಟಗಳೆಂತಹುದು ? ದೇವಾಧಿ ದೇವತೆಗಳನ್ನು ಮೆಟ್ಟಿನಿಂತು ಜಗತ್ತಿನಲ್ಲಿ ತನ್ನ ವಿನಃ ಬೇರೊಬ್ಬ ಜಗದೀಶ್ವರನಿಲ್ಲವೆಂದು ಮದಾಂಧನಾದ, ತ್ರಿಲೋಕ ವಿಜಯಿಯಾದ ತಂದೆ-ಹಿರಣ್ಯಕಶ್ಯಪನನ್ನು ಕೇವಲ ಹಸಿಗೂಸಿನಂತಿದ್ದ ಪ್ರಹ್ಲಾದರು ಎದುರಿಸಿದ್ದೇನು ಸಾಮಾನ್ಯಕಾರ್ಯವೇ ? ಇದೊಂದನ್ನು ವಿವೇಚಿಸಿದಾಗಲೇ ಪ್ರಹ್ಲಾದರಿಗೆ ಶ್ರೀಹರಿತತ್ವಗಳಲ್ಲಿದ್ದ ದೀಕ್ಷೆ, ಸತ್ಯ-ಧರ್ಮ ಸಂಪ್ರದಾಯಗಳಲ್ಲಿನ ದೃಢ ವಿಶ್ವಾಸ, ಶ್ರೀಹರಿಯಲಿದ್ದ ಅಸಾಧಾರಣ ಭಕ್ತಿ-ಶ್ರದ್ಧೆಗಳು ವ್ಯಕ್ತವಾಗುವವು. 

ಜಗಜ್ಜನ್ಮಾದಿಕಾರಣನೂ, ಪರಬ್ರಹ್ಮ ಸ್ವರೂಪನೂ, ಅಘಟಿತಘಟನಾಪಟುವೂ, ಸರ್ವೋಮನೂ ಆದ ಶ್ರೀಹರಿಯು ಸರ್ವತ್ರವ್ಯಾಪ್ತಿ, ಸತತ್ತ್ವಗಳನ್ನು ಸಾಧಿಸಲು ಬಲಾಢನಾದ ತಂದೆಗೆ ವಿರುದ್ಧವಾಗಿ ಪ್ರಪ್ರಥಮವಾಗಿ ಅಹಿಂಸಾತ್ಮಕ ಸತ್ಯಾಗ್ರಹವನ್ನು ಪ್ರಾರಂಭಿಸಿ ಜಯಶೀಲರಾದ ಧೀರರವರು! 

ಅವರಿಗೆ ಅಧಿಕಾರ, ಸ್ಥಾನಮಾನ, ರಾಜ್ಯಕೋಶಾದಿ ಸಿರಿಸಂಪತ್ತುಗಳ ಮೋಹವಿರಲಿಲ್ಲ! ಅದೇ ಶಾಶ್ವತವೆಂಬ ಭಾವನೆ ಎಂದೂ ನಿರ್ಲಿಪ್ತರಾದ ಅವರತ್ತ ಸುಳಿಯುತ್ತಿರಲಿಲ್ಲ, ಕಾಮಕ್ರೋಧಾದಿಗಳನ್ನು ಜಯಿಸಿದ ಶಾಂತಮೂರ್ತಿಗಳವರು. ದುರ್ಮಾಗಗಾಮಿಯಾಗಿ ಅಧಃಪತನದತ್ತ ಸಾಗಿದ್ದ ತಂದೆಯನ್ನು ತಿದ್ದಿ, ಅವನ ಹಿತ ಮತ್ತು ಉದ್ದಾರಕ್ಕಾಗಿಯೇ ಶ್ರಮಿಸಿದ ಪುಣ್ಯಾತ್ಮರವರು, ಸಮಸ್ತ ಪ್ರಪಂಚದ ಕ್ಷೇಮ, ಸಜ್ಜನರ, ದೀನ-ದಲಿತರ ಉದ್ಧಾರವೇ ಅವರ ಗುರಿಯಾಗಿತ್ತು. ಅಂತೆಯೇ ಅತಾವೇದಕ ತತ್ವಗಳನ್ನು ನಂಬಿ ಹಾಳಾಗಬೇಡಿರಿ ಎಂದು ದೈತ್ಯಬಾಲಕರನ್ನು ನಿಮಿತ್ತಮಾಡಿಕೊಂಡು ಸಮಸ್ತ ಜಗತ್ತಿಗೂ ಉಪದೇಶಿಸಿದ ಕರುಣಾಮೂರ್ತಿಗಳು ಪ್ರಹ್ಲಾದರು! ಸುಜನರ ಅಭ್ಯುದಯವೆಂತಾದೀತೆಂದು ಪರಿತಪಿಸುತ್ತಿದ್ದ ಅವರು ಸಕಲರ ಕಲ್ಯಾಣಕ್ಕಾಗಿ, ಸತ್ಯ-ಸತ್ತತ್ವಗಳಿಗಾಗಿ, ಭಾಗವತಧರ್ಮ, ಶ್ರೀಹರಿ ಸರ್ವೋತ್ತಮತ್ವ ಸ್ಥಾಪನೆಗಾಗಿ ಹೋರಾಡಿದೆ ಧರ್ಮವೀರರು ಶ್ರೀಪ್ರಹ್ಲಾದರು. 

ಹಿರಣ್ಯಕಶ್ಯಪನೇ ಸ್ವತಂತ್ರನಾದ ಜಗದೀಶನೆಂದು ಬೋಧಿಸಿದ ಶಂಡಾಮರ್ಕರವಾದವನ್ನು ಖಂಡಿಸಿದ ಪ್ರಹ್ಲಾದರ ಸ್ವರ್ಯವೆಂತಹುದು ? ಗುರುಗಳು ಉಪದೇಶಿಸಿದ್ದೆಲ್ಲಾ ಗ್ರಾಹ್ಯವಲ್ಲ! “ಗುರೂಕ್ಕಮಪ್ತಿನ ಗ್ರಾಹ್ಯಂ ಯದನರ್ಥಥ್ರ ಕಲ್ಪನಮ್ || ಯದುಕ್ಕಾನ ಪ್ರಭುಧೇತ ಸುಪ್ತಸ್ಥಜ್ಞಾನನಿದ್ರಯಾ ||” ಯಾರ ಉಪದೇಶದಿಂದ ಅಜ್ಞಾನನಿದ್ರೆಯಲ್ಲಿ ಮಗ್ನರಾದ ಶಿಷ್ಯರು ಎಚ್ಚರಗೊಳ್ಳುವುದಿಲ್ಲವೊ ಅನರ್ಥಕಾರಕವಾದುವೇ ಅರ್ಥಕಾರಕತತ್ತವೆಂದು ಉಪದೇಶಿಸಿದ ಗುರುಗಳ ಮಾತು ಖಂಡಿತ ಸ್ವೀಕಾರಾರ್ಹವಲ್ಲ! ಸ್ವತಃ ಅಜ್ಞಾನಾದಿದೋಷದೂರರಾಗಿ, ನಿಶ್ಚಿತ ತತ್ವಜ್ಞಾನವುಳ್ಳವರಾಗಿ, ಶಿಷ್ಯರ ಅಜ್ಞಾನಾಂಧಕಾರವನ್ನು ಪರಿಹರಿಸಿ ಜ್ಞಾನದ ಬೆಳಕನ್ನು ನೀಡುವವರೇ ನಿಜವಾದ ಗುರುಗಳು! ಸರ್ವಸ್ವತಂತ್ರನೂ, ಸರ್ವೋತ್ತಮನೂ, ಜಗಜ್ಜನ್ಮಾದಿಕಾರಣನೂ ಆದ ಬೇರೊಬ್ಬ ಜಗದೀಶ್ವರನು ರಾಜಿಸುತ್ತಿರುವಾಗ ಹಿರಣ್ಯಕಶ್ಯಪನೇ ಜಗದೀಶನೆಂದು ಬೋಧಿಸಿದ ಶಂಡಾಮರ್ಕರೆಂತು ಗುರುಗಳಾಗಬಲ್ಲರು ? ಧರ್ಮೋಪದೇಶಕನಾದ ಗುರುವೇ ಅಧರ್ಮವನ್ನು ಬೋಧಿಸಿದರೆ ಅಂತಹ ಗುರುವಿನ ವಚನವನ್ನು ಕಡೆಗಣಿಸಿ ನಿಜವಾದ ಸತ್ತತ್ವಗಳನ್ನು ಎತ್ತಿಹಿಡಿದು ಸುಜನರನ್ನು ಸನ್ಮಾರ್ಗಗಾಮಿಗಳನ್ನಾಗಿ ಮಾಡಬೇಕೆಂಬ ಒಳ್ಳೆಯ ವಿಚಾರವನ್ನು ಜಗತ್ತಿಗೆ ತೋರಿಕೊಟ್ಟ ಮಹಾನುಭಾವರು ನಮ್ಮ ಪ್ರಹ್ಲಾದರು. 

ಪ್ರಹ್ಲಾದರು ತನ್ನವರು-ಬೇರೆಯವರೆಂಬ ಭೇದವಿಲ್ಲದೆ ಎಲ್ಲರಲ್ಲಿಯೂ ಒಂದೇ ರೀತಿ ಪ್ರೀತಿ-ಕಾರುಣ್ಯಗಳನ್ನು ತೋರಿ ಅನುಗ್ರಹಿಸುತ್ತಿದ್ದರು. ಅದೇ ರೀತಿಯಾಗಿ ಅಧರ್ಮ-ಅತಾತ್ವಿಕಕಾರಗಳಲ್ಲಿ ಪ್ರವೃತ್ತರಾಗಿದ್ದರೆ ತಂದೆಯಾಗಲಿ, ಮಗನಾಗಲಿ, ಆತ್ಮೀಯರಾಗಲಿ ಅಂಥವರನ್ನು ಪ್ರಹ್ಲಾದರು ತಿರಸ್ಕರಿಸಿದ್ದಾರೆ! “ಪ್ರಹ್ಲಾದೋ ವೈ ಕಾಯಾಧವಃ | ಸ್ವಪುತ್ರಂ ವಿರೋಚನಂ ಅಪನ್ಯಧತ್ತ” ಎಂಬ ಶ್ರುತಿಯು ಇದಕ್ಕೆ ಪ್ರಮಾಣವಾಗಿದೆ. ಸತ್ಯಮಾರ್ಗಬಿಟ್ಟು ಅಡ್ಡದಾರಿಗಿಳಿದ ತಮ್ಮ ಸ್ವಂತ ಮಗನಾದ ವಿರೋಚನನನ್ನೇ ತಿರಸ್ಕರಿಸಿ, ಸತ್ಯ-ನ್ಯಾಯಶಿಷ್ಠೆಗಳಿಗೆ ಅವರು ಉತ್ತಮ ದೃಷ್ಟಾಂತರಾದರು.482 ಇದರಿಂದ ಪ್ರಹ್ಲಾದರ ವೇದಪ್ರತಿಪಾದ್ಯ ಮಹಿಮರೆಂಬುದು ಸ್ಪಷ್ಟವಾಗುವುದಲ್ಲದೆ ಅವರು ಕೃತಯುಗದಲ್ಲಿ ಮಾತ್ರವಲ್ಲದೆ ಎಲ್ಲಾ ಯುಗಗಳಲ್ಲೂ ವಿಷ್ಣುಭಕ್ತರಾಗಿದ್ದು ಅನಾದಿಕಾಲದಿಂದ ಸತ್ಯಶೀಲರಾಗಿ, ವೇದಪ್ರತಿಪಾದ್ಯ ಸುಚರಿತರಾಗಿದ್ದ ಭಾಗವತಾಗ್ರಣಿಗಳೆಂದು ಇದರಿಂದ ಸಿದ್ಧವಾಗುವುದು! 

ಶ್ರೀಹರಿಯ ಅನುಗ್ರಹ, ವಾಯುದೇವರ ವಿಶೇಷ ಸನ್ನಿಧಾನಯುಕ್ತರಾದ್ದರಿಂದಲೇ ಪ್ರಹ್ಲಾದರು ವೇದಪ್ರತಿಪಾದ್ಯಮಹಿಮ- ರೆನಿಸಿದ್ದಾರೆ. ಅವರಲ್ಲಿ ಭಗವಂತನ ವಿಭೂತಿರೂಪವುಂಟೆದು “ಪ್ರಹ್ಲಾದಶಾಸ್ಮಿ ದೈತ್ಯಾನಾಂ” ಎಂದು ಶ್ರೀಕೃಷ್ಣಪರಮಾತ್ಮನೇ ಕಂಠರವೇಣ ಹೇಳಿದ್ದಾನೆ. ಆದ್ದರಿಂದ ಅವರು ವೇದಪ್ರತಿಪಾದ್ಯರಾಗಿದ್ದಾರೆ. ಶ್ರೀನರಹರಿಯು 'ವರವನ್ನು ಬೇಡು' ಎಂದಾಗ ಪ್ರಹ್ಲಾದರು “ಸ್ವಾಮಿ, ನಾನು ನಿನ್ನ ದಾಸನಾಗಿರುವಂತೆ ಅನುಗ್ರಹಿಸು” ಎಂದರು! ಆಗ ನರಹರಿಯು “ಅಹಂತವಾತ್ಮದಾನೇಚ್ಛು ತಂತು ನೃತೃತ್ವಮಿಚ್ಛಸಿ ” ನಿನ್ನ ಭಕ್ತಿಗೆ ಮೆಚ್ಚಿ ನಿನಗೆ ನನ್ನನ್ನೇ ಸಮರ್ಪಿಸಿಕೊಳ್ಳಬಯಸಿದರೆ ನೀನು ನನ್ನ ದಾಸನಾಗಬೇಕೆನ್ನುವೆಯಲ್ಲ! ಪ್ರಹ್ಲಾದ, ಇನ್ನೇನಾದರೂ ವರವನ್ನು ಕೇಳು” ಎನಲು “ಪ್ರಸೀದ ಸಾಸ್ತು ಮೇನಾಥ | ತದ್ಭಕ್ತಿಸಾಕೀ ಸ್ಥಿರಾ | ದಾಸಸ್ತವಾಹ ಭೂಯಾಸಂ ಗರುತ್ಮಾನಿವ ಭಕ್ತಿಮಾನ್ || ದಾಸಸ್ತವಾದ ಭೂಯಾಸಂ ದೇವ ಜನ್ಮಾಂತರೇಷ್ಠಪಿ ” - ಸ್ವಾಮಿ, ಗರುಡನಂತೆ ನಿನ್ನಲ್ಲಿ ಭಕ್ತಿಯುಳ್ಳವನಾಗಬೇಕು. ನಿನ್ನಲ್ಲಿ ಸಾತ್ವಿಕವೂ, ಸ್ಥಿರವೂ ಆದ ಭಕ್ತಿಯೊಂದನ್ನು ಕರುಣಿಸು. ದೇವ, ನನ್ನ ಮುಂದಿನ ಮೂರು ಜನ್ಮಗಳಲ್ಲಿಯೂ 'ಮೋಕ್ಷಕೊಡುತ್ತೇನೆ' ಎಂದಾಗ ಅದನ್ನು ಬಯಸದ ಅವರು “ಪ್ರಭು, ನನ್ನ ಆಶ್ರಿತರನ್ನು ಬಿಟ್ಟು ನಾನೊಬ್ಬನೇ ಮೋಕ್ಷಬಯಸುವುದಿಲ್ಲ! ನಿನ್ನ ಮಹಿಮಾಮೃತ ಗಾಯನ ಮತ್ತನಾಗಿದ್ದೇನೆ. ಆದ್ದರಿಂದ ನನಗೆ ಸಂಸಾರಚಕ್ರದ ಭಯವಿಲ್ಲ. ಆದರೆ ಉದ್ಘತರಾಗುವ ಮಾರ್ಗ ಕಾಣದೆ ಸಂಸಾರಚಕ್ರದಲ್ಲೇ ಸಿಲುಕಿ ಬಳಲುತ್ತಿರುವ ಈ ನನ್ನ ಆಶ್ರಿತರಾದ ದೈತ್ಯಬಾಲಕರ ಉದ್ಧಾರವಾಗಬೇಕು. ಅದಕ್ಕೆ ನಿನ್ನ ಅನುಗ್ರಹವೇ ಮುಖ್ಯ. ಆದ್ದರಿಂದ ಇವರೆಲ್ಲರೂ ಮೋಕ್ಷಯೋಗ್ಯರಾಗುವಂತೆ ಕರುಣಿಸು” ಎಂದು ಪ್ರಾರ್ಥಿಸಿದ ಪ್ರಹ್ಲಾದರೆಂಥ ತ್ಯಾಗಶೀಲರು, ಕರುಣಾಳುಗಳು!

482 ಈ ಗ್ರಂಥದ ಎರಡನೇ ಉಲ್ಲಾಸದಲ್ಲಿ ಪ್ರಹ್ಲಾದರ ನ್ಯಾಯನಿಷ್ಠೆ” ಎಂಬ ೨೪ನೇ ಅಧ್ಯಾಯ ಪುಟ ೧೩೦-೧೩೧ ರಲ್ಲಿ ನ್ಯಾಯನಿಷ್ಠೆಯನ್ನು ನಾವೊಂದು ಕ್ರಮದಲ್ಲಿ ನಿರೂಪಿಸಿದ್ದೇವೆ. “ಮಹಾಭಾರತ ಸಭಾಪರ್ವ'ದಲ್ಲಿ ಪ್ರಹ್ಲಾದರ ನ್ಯಾಯನಿಷ್ಠೆಯನ್ನು ಹೀಗೆ ನಿರೂಪಿಸಿದ್ದಾರೆ. ಪ್ರಹ್ಲಾದರು, ಎಂತಹ ಸಮಯದಲ್ಲೂ, ಸತ್ಯ-ಧರ್ಮ-ನ್ಯಾಯಗಳನ್ನೇ ಎತ್ತಿ ಹಿಡಿಯುವ ಮಹಾತ್ಮರಾಗಿದ್ದರು. ಒಮ್ಮೆ ಕೇಶನೀ ಎಂಬ ರಾಜಪುತ್ರಿಯ ಸ್ವಯಂವರಕ್ಕೆ ಮೊದಲೇ ಹೋಗಿದ್ದ ಅಂಗಿಕುಮಾರನಾದ ಸುಧನ್ವನು ಕೇಶಿನಿಯನ್ನು ಕಂಡು ದೇವಿ. ನಾನೂ ಸ್ವಯಂ ವರಾರ್ಥಿಯಾಗಿದ್ದೇನೆ. ಇಂದು ಅನಿವಾರ ಕಾರಣಕ್ಕಾಗಿ ನಾನು ಇರುವಂತಿಲ್ಲ. ಆದ್ದರಿಂದ ಸ್ವಯಂವರವು ನಾಳೆ ನಡೆಯಲಿ. ನಾನು ಬರುತ್ತೇನೆಂದು, ಹೇಳಿಹೋದನು. ಸುಧನ್ವನತ್ತ ತೆರಳಿಮೇಲೆ ಪ್ರಹ್ಲಾದರಪುತ್ರ ವಿರೋಚನ ಬಂದನು. ಮರುದಿನ ವಿರೋಚನನು ಸುಧನ್ವನು ಬರಲು ತಾನು ಕುಳಿತ ಆಸನದಲ್ಲಿ ಅರ್ಧಭಾಗ ತೋರಿಸಿ ಕೂಡಲು ಹೇಳಿದಾಗ ಸುಧನ್ವನು ಕ್ಷತ್ರಿಯರಿಬ್ಬರೂ ಏಕಾಸನದಲ್ಲಿ ಕೂಡಬಹುದು. ಬ್ರಾಹ್ಮಣರಿಬ್ಬರೂ ಕೂಡಬಹುದು. ನೀನು ಕ್ಷತ್ರಿಯ, ನಾನು ಬ್ರಾಹ್ಮಣ, ಇಬ್ಬರೂ ಏಕಾಸನದಲ್ಲಿ ಕೂಡಬಾರದು. ಆದ್ದರಿಂದ ಕೂಡುವುದಿಲ್ಲವೆಂದಾಗ ವಿರೋಚನ “ನಾನೂ ವೇದಾಧ್ಯಯನ ಮಾಡಿರುವೆ, ಸತ್ಕುಲಪ್ರಸೂತನಾಗಿದ್ದೇನೆ. ನನ್ನಗಿಂತ ನೀನೇನು ಹೆಚ್ಚು? “ಎಂದಾಗ ಇಬ್ಬರಿಗೂ ವಾದವಾಗಿ ಕೊನೆಗೆ ಸುಧನ್ವನೇ ಈ ನಮ್ಮ ವಾದಕ್ಕೆ ಪ್ರಹ್ಲಾದರೇ ತೀರ್ಪು ಹೇಳಲಿ, ಗೆದ್ದವರಿಗೆ ಸೋತವರು ತಲೆದಂಡ ಕೊಡಬೇಕು” ಎಂದು ಹೇಳಿದನು. ಅದರಂತೆ ಇಬ್ಬರೂ ಪ್ರಹ್ಲಾದರಲ್ಲಿ ಹೋಗಿ ವಿಷಯ ತಿಳಿಸಿ ನಿರ್ಣಯ ಕೊಡು ಎಂದು ಪ್ರಾರ್ಥಿಸಿದರು. ಆಗ ಪ್ರಹ್ಲಾದರು ಮಗನೆಂದು ಸುಳ್ಳು ಹೇಳದೆ “ಶ್ರೇಯಾನ್‌ಸುಧನ್ವಾತ್ತತೋ ವೈ | ಮತ್ತಃ ಶ್ರೇಯಾನ್ ತಥಾಂಗಿರಾಃ | ಮತಾ ಸುಧನ್ವನಶ್ಚಾಪಿ | ಮಾತೃತಃ ಶ್ರೇಯಸೀ ತವ || ವಿರೋಚನ ಸುಧನ್ವಾಯಂ | ಪ್ರಾಣಾನಾಮೀಶ್ವರಸ್ತವ ||' ಅಂದರೆ ನನಗಿಂತ ಅಂಗಿರರು ಶ್ರೇಷ್ಠರು. ಸುಧನ್ವನ ತಾಯಿ ನಿಮ್ಮ ಅಮ್ಮನಕಿಂತ ಶ್ರೇಷ್ಟಳು. ಸುಧನ್ವನು ನಿನಕಿಂತ ಶ್ರೇಷ್ಠನು. ಆದ್ದರಿಂದ ವಿರೋಚನ ! ಈಗ ನಿನ್ನ ಪ್ರಾಣವು ಸುಧನ್ವನ ಅಧೀನವಾಗಿವೆ' ಎಂದು ನ್ಯಾಯವನ್ನೇ ನುಡಿದು ತೀರ್ಮಾನವಿತ್ತರು. ಆಗ ಸುಧನ್ವನು “ರಾಜನ್, ನೀನು ಪುತ್ರಪ್ರೇಮವನ್ನೂ ಕಡೆಗಣಿಸಿ ಸತ್ಯವನ್ನೇ ನುಡಿದಿರುವೆ, ಇದರಿಂದಲೇ ನಾನು ಪ್ರೀತನಾಗಿದ್ದೇನೆ. ನಿನ್ನ ಮಗನ ತಲೆದಂಡ ನನಗೆ ಬೇಡ! ಅವನು ಬಹುಕಾಲ ಜೀವಿಸಲಿ ಕೇಶಿನಿಯನ್ನೂ ಅವನೇ ಲಗ್ನವಾಗಲಿ" ಎಂದು ಪ್ರಹ್ಲಾದರ ನ್ಯಾಯನಿಷ್ಠೆಯನ್ನು ಶ್ಲಾಘಿಸಿದನು. “ಪುತ್ರಸ್ನೇಹಂ ಪರಿತ್ಯಜ್ಯ ಯತ್ವಂ ಧರ್ಮ ವ್ಯವಸ್ಥಿತಃ ಅನುಜಾನಾಮಿ ತೇ ಪುತ್ರಮ್ | ಜೀವತೇಷಃ ಶತಂಸಮಾಃ ||” ಇದರಿಂದ ಪ್ರಹ್ಲಾದರ ಸತ್ಯನಿಷ್ಠೆ ಚೆನ್ನಾಗಿ ವ್ಯಕ್ತವಾಗುವುದು. – ಗ್ರಂಥಕಾರ

ಪ್ರಹ್ಲಾದರು ಏನೂ ಬೇಡವೆಂದರೂ ಶ್ರೀಹರಿಯು “ಮದ್ಭಕ್ತಾಾ ಮನುವ್ರತಾಃ”, ತ್ವಾಂಚ ಮಾಂಚ ಸ್ಮರನ್‌ ಕಾಲೇ ಕರ್ಮಬಂಧಾತ್ಮಮುಚ್ಯತೇ ||” ಅಂದರೆ ಪ್ರಹ್ಲಾದ, ತಾತ್ವಿಕದೇವತೆಗಳು ನಾರದಾದಿಗಳನ್ನು ಬಿಟ್ಟು ಉಳಿದೆಲ್ಲ ಜೀವರಿಗೆ ನೀನು ಬಿಂಬನಾದ್ದರಿಂದ ಎಲ್ಲರೂ ನಿನ್ನನ್ನು ಅನುಸರಿರುವರು. ಅಂಥವರೇ ನನ್ನ ಭಕ್ತರಾಗುವರು. ಇಷ್ಟೇ ಅಲ್ಲ, ಭಕ್ತಾಗ್ರಣಿ, ಯಾರು ಸದಾ ನಿನ್ನನ್ನು ನಂತರ ನನ್ನನ್ನು ಸ್ಮರಿಸುವರೋ ಅಂಥವರು ಬಂಧಕವಾದ ಕರ್ಮಪಾಶದಿಂದ ಬಿಡುಗಡೆ ಹೊಂದಿ ನನ್ನ ಅನುಗ್ರಹದಿಂದ ಮುಕ್ತರಾಗುವರು!” ಎಂದು ಅಸಾಧಾರಣ ವರಗಳನ್ನಿತ್ತು ಅನುಗ್ರಹಿಸಿದನು. ಶ್ರೀವಾಯುದೇವರನ್ನು ಬಿಟ್ಟು, ಶ್ರೀಹರಿಯು ಇನ್ನಾರಲ್ಲೂ ಇಂಥ ಅನುಗ್ರಹ ಮಾಡಿಲ್ಲವೆಂದು ಹೇಳಬಹುದು. ಇದು ಪ್ರಹ್ಲಾದರ ಅನುಪಮವ್ಯಕ್ತಿತ್ವ, ಭಗವದ್ಭಕ್ತಿ, ಯೋಗ್ಯತೆಗಳಿಗೆ ಸಾಕ್ಷಿಯಾಗಿದೆ. ಪ್ರಹ್ಲಾದರಂತಹ ಭಕ್ತರು ಜಗತ್ತಿನಲ್ಲಿ ಮತ್ತೊಬ್ಬರು ಕಾಣಸಿಗರು, ಅಂತೆಯೇ ಭಗವದ್ಭಕ್ತರನ್ನು ನಿರೂಪಿಸುವಾಗ ಎಲ್ಲ ಪುರಾಣದಿಗಳಲ್ಲೂ ಪ್ರಹ್ಲಾದರನ್ನೇ ಮೊಟ್ಟಮೊದಲು ಹೆಸರಿಸುವುದು ಅನುಭವ ಸಿದ್ಧವಾಗಿದೆ. 

ಪ್ರಹ್ಲಾದರ ಈ ಅನುಪಮ ಸ್ಥಾನ-ಮಾನ, ವ್ಯಕ್ತಿತ್ವ, ಮತ್ತು ಗುಣಗಳೂ ಅವರ ಮುಂದಿನ ಅವತಾರಗಳಾದ ಬಾಹ್ಲಿಕ, ವ್ಯಾಸರಾಜ, ರಾಘವೇಂದ್ರರಲ್ಲಿಯೂ ಎದ್ದುಕಾಣಿಸುತ್ತವೆ. ಭಾಗವತ, ನರಸಿಂಹಪುರಾಣ, ವಿಷ್ಣುಪುರಾಣ, ಗರುಡಪುರಾಣ ಬ್ರಹ್ಮಕಾಂಡ - ಮುಂತಾದ ಅನೇಕ ಪುರಾಣಗಳಲ್ಲಿ ಪ್ರಹ್ಲಾದರ ಭಗವದ್ಭಕ್ತಿನಿಷ್ಠೆ, ಸದಾಚಾರ, ಶೀಲ, ಕಾರುಣ್ಯಾದಿಗುಣಗಳನ್ನು ವಿವಿಧ ವಿಶೇಷಣಗಳಿಂದ ಕೊಂಡಾಡಿದ್ದಾರೆ. ಶ್ರೀವ್ಯಾಸರಾಜ, ರಾಘವೇಂದ್ರಸ್ವಾಮಿಗಳವರನ್ನು ಕೊಂಡಾಡಿರುವ ವಿಜಯ್, ಸ್ತೋತ್ರ, ಅಪರೋಕ್ಷಜ್ಞಾನಿಗಳ ಕೃತಿಗಳನ್ನು ವಿವೇಚಿಸಿದಾಗ ಪ್ರಹ್ಲಾದರ ಸದ್ಗುಣಸೂಚಕ ವಿಶೇಷಣಗಳು ಶ್ರೀವ್ಯಾಸರಾಜ, ರಾಘವೇಂದ್ರರಲ್ಲಿಯೂ ಎದ್ದು ತೋರುವುದನ್ನು ನಾವು ಕಾಣಬಹುದಾಗಿದೆ. “ಉಪಕ್ರಮಾದುಪಸಂಹಾರಸ್ಯ ಪ್ರಾಬಲಂ” ಎಂಬ ಪ್ರಮಾಣದಂತೆ ಶ್ರೀಪ್ರಹ್ಲಾದ, ಬಾಕ, ವ್ಯಾಸ ರಾಜಾವತಾರಗಳಲ್ಲಿ ಪ್ರಕಟವಾದ ಅಪೂರ್ವ ಮಹಿಮಾತಿಶಯಗಳೆಲ್ಲವೂ ಏಕರೂಪ ತಾಳಿ ಕೊನೆಯ ಅವತಾರವಾದ ರಾಯರಲ್ಲಿ ವಿಶೇಷಾಕಾರವಾಗಿ ಅಭಿವ್ಯಕ್ತವಾಗಿ ಅವರಿಗೆ ವಿಶಿಷ್ಟ ಜಗನ್ಮಾನ್ಯತೆಯನ್ನು ತಂದುಕೊಟ್ಟಿದೆ ಎಂದು ಧೈರ್ಯವಾಗಿ ಹೇಳಬಹುದು. 

ಭಾಗವತಾದಿಪುರಾಣಗಳು, ವ್ಯಾಸಯೋಗಿಚರಿತಂ, ರಾಘವೇಂದ್ರವಿಜಯ್‌, ಗುರುಸ್ತೋತ್ರ, ಅಪರೋಕ್ಷಜ್ಞಾನಿಗಳ ವಚನಗಳಲ್ಲಿ ಕಂಡುಬರುವ ಗುಣವಾಚಕಗಳು ವಿಶೇಷಣಗಳನ್ನು ನಮ್ಮ ಯೋಗ್ಯತಾನುಸಾರ ತುಲನಾತ್ಮಕವಾಗಿ ವಿವೇಚಿಸಿ ಶ್ರೀ ಪ್ರಹ್ಲಾದರೇ ವ್ಯಾಸರಾಜ, ರಾಘವೇಂದ್ರಸ್ವಾಮಿಗಳಾಗಿ ಅವತರಿಸಿ ಲೋಕಕಲ್ಯಾಣ ಮಾಡಿದ ಮಹನೀಯರೆಂಬುದನ್ನು ಈಗ ಸಜ್ಜನರ ಮುಂದೆ ಮಂಡಿಸಲು ಪ್ರಯತ್ನಿಸುತ್ತೇವೆ. 

ಮಾತೃಗರ್ಭದಲ್ಲಿರುವಾಗಲೇ ಶ್ರೀನಾರದರಿಂದ ಉಪದೇಶಪಡೆದ ಪ್ರಹ್ಲಾದರು ಶ್ರೀಹರಿಸರ್ವೊತ್ತಮತ್ವ ಪ್ರತಿಪಾದಕ ಸದ್ದೆಷ್ಣವಸಿದ್ಧಾಂತವೆಂಬ ಶ್ರೀವಾಯುದೇವರ ಸನ್ಮತವನ್ನೇ ಉಪಾಸಿಸುತ್ತಿದ್ದು ಅವನ್ನೇ ಶಂಡಾಮರ್ಕರಿಗೆ, ತಂದೆ ಮತ್ತು ದೈತ್ಯಬಾಲಕರಿಗೆ ಉಪದೇಶಿಸಿ ಆ ತತ್ತೋಪಾಸನೆಯಿಂದಲೇ ಸರ್ವರ ಉದ್ದಾರವೆಂದು ಉಪದೇಶಿಸುತ್ತಿದ್ದರು. ಇದನ್ನು ಮೂರವತಾರ ಚರಿತೆಗಳಿಂದ ತಿಳಿಯಬಹುದಾಗಿದೆ. 

ಈಗ ಶ್ರೀಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು ಅನುಸರಿಸಿದ, ಉಪದೇಶಿಸಿದ ಸನ್ಮತವಾವುದೆಂದು ಅವರ ವಚನ- ಗಳಿಂದಲೇ ತಿಳಿಯೋಣ.

೧) ದೈತ್ಯಬಾಲಕರಿಗೆ ಪ್ರಹ್ಲಾದರ ಉಪದೇಶ.  

“ಸಂತ್ರದೇಯಂ ವಾಯುಮತಂ ಸದೈವ | ನ ಶ್ರದ್ಧೆಯಂ ಕುಮತಂ ಸರ್ವ ದೈವ” - ಬ್ರಹ್ಮಾಂಡಪುರಾಣ ಶ್ರೀಹರಿಸರ್ವೋತ್ತಮತ್ವಾದಿ ಪ್ರತಿಪಾದಕವಾದ ಸದೈಷ್ಣವ ಸಿದ್ಧಾಂತವನ್ನೇ ಯಾವಾಗಲೂ ಶ್ರದ್ಧೆಯಿಂದ ಉಪಾಸನೆ ಮಾಡಬೇಕು. ಅತತ್ವಾವೇದಕ ಕುಮತಗಳಲ್ಲಿ ಎಂದೂ ಶ್ರದ್ಧೆ ತೋರಬಾರದು. 

೨) ಶ್ರೀವ್ಯಾಸರಾಜರು ಶ್ರೀವಾಯುದೇವರ (ಹನುಮಂತ ದೇವರ ಅವತಾರರಾದ ಶ್ರೀಮಧ್ವಾಚಾರ್ಯರ) ಸನ್ಮತವನ್ನೇ ಎತ್ತಿ ಹಿಡಿದು ಚಂದ್ರಿಕಾದಿ ಗ್ರಂಥರಚನೆಯಿಂದ ಸಿದ್ಧಾಂತವನ್ನು ಬಲಪಡಿಸಿ ವಾಯುದೇವರ ಸನ್ನತವನ್ನೇ ಉಪದೇಶಿಸಿದ್ದಾರೆ. ಇದನ್ನು ಅವರು ತಮ್ಮ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ - 

“ದೂಷಣಂ ಚಾಪಿ ಹನುಮದ್ಭಾಷ್ಯಸೂಚಿತಮುಚ್ಯತೇ।।” - ಚಂದ್ರಿಕಾ 

ಶ್ರೀಹನುಮಂತ ದೇವರು (ಶ್ರೀಮಧ್ವಾಚಾರರು) ತಮ್ಮ ದೈತ ಭಾಷ್ಯದಲ್ಲಿ ದುರ್ಮತ ನಿರಾಕರಣಪೂರ್ವಕವಾಗಿ ವೈಷ್ಣವ ಸಿದ್ಧಾಂತವೇ ವೇದಾದಿ ಶಾಸ್ತ್ರಗಳಿಗೆ ಸಮ್ಮತವಾದ ಶ್ರೀವಾಯು ಮತವೆಂದು ಸೂಚಿಸಿರುವುದನ್ನೇ ನಾವಾ ಉಪದೇಶಿಸುತ್ತವೆ! 

೩) ಶ್ರೀರಾಯರಂತೂ ತಮ್ಮ ಗ್ರಂಥದಲ್ಲಿ ತಸ್ಯವಾಯೋತೀಯಾಂಶಂ ಆಶ್ರಯ” ಎಂದು ವಾಯವತಾರಿಗಳಾದ ಶ್ರೀಮಧ್ವಚಾರರನ್ನು ಸ್ತುತಿಸಿ ಶ್ರೀವಾಯ್ದುವತಾರರಾದ (ಶ್ರೀಹನುಮದವತಾರರಾದ ಶ್ರೀಮಧ್ವಾಚಾರರ ಸಿದ್ದಾಂತ ಗ್ರಂಥಗಳಾದ ಸೂತ್ರಭಾಷ್ಯ, ಅನುವ್ಯಾಖ್ಯಾನ, ದಶಪ್ರಕರಣಗಳು, ವೇದೋಪನಿಷದ್ಭಾಷ್ಯಗಳು, ಗೀತಾಭಾಷ್ಯ, ಅಣುಭಾಷಾದಿಗಳಿಗೆ ಅಸದೃಶ ಟೀಕೆ-ಟಿಪ್ಪಣಿಗಳನ್ನು ರಚಿಸಿ ವಾಯುದೇವರು ಉಪದೇಶಿಸಿದ ಉಪದೇಶಿಸಿದ್ದಾರೆ! ಇವೆಲ್ಲವೂ ಪ್ರಹ್ಲಾದ-ವ್ಯಾಸರಾಜ- ರಾಘವೇಂದ್ರರು ಒಂದೇ ಮೂಲರೂಪಿ ಶಂಕುರ್ಣನ ಅವತಾರವೆಂದು ಸ್ಪಷ್ಟಪಡಿಸುವುದು! 

೪) ಭಾಗವತಾದಿಗಳಲ್ಲಿ ಪ್ರಹ್ಲಾದರನ್ನು ಸತ್ಯಸಂಧರೆಂದು ಹೊಗಳಿದ್ದಾರೆ. 'ಸತ್ಯಂ' ಎಂದರೆ ಮಿಮಾಂಸಾಶಾಸ್ತ್ರ ಸತ್ಯಂ ಪೂರ್ವೋತ್ತರ ಮಿಮಾಂಸಾಶಾಸ್ತ್ರಂ (ದೈತಶಾಸ್ತ್ರಂ) ತಸ್ಮಿನ್‌ ಸಂಧಾ ದೃಢಪ್ರತಿಜ್ಞಾಯಸ್ಯ ಸಃ ಸತ್ಯಸಂಧ ಎಂಬ ವುತ್ಪತ್ತಿಯಿಂದ ವಾಯುದೇವರ ದೈತಸಿದ್ಧಾಂತವೇ ವೈದಿಕ ಸಿದ್ದಾಂತವೆಂದು ಸಾಧಿಸುವ ಪ್ರತಿಜ್ಞೆಯುಳ್ಳವರು ಸತ್ಯಸಂಧರು-ಶ್ರೀಪ್ರಹ್ಲಾದರಾಜರು! ವ್ಯಾಸರಾಜ-ರಾಘವೇಂದ್ರರೂ ಸತ್ಯಸಂಧರೆಂಬುದಕ್ಕೆ ಅವರ ಗ್ರಂಥಗಳೇ ಸಾಕ್ಷಿಯಾಗಿವೆ. ಇದೂ ಪ್ರಹ್ಲಾದರೇ ವ್ಯಾಸರಾಜ, ರಾಘವೇಂದ್ರರೆಂಬುದಕ್ಕೆ ಪ್ರಮಾಣವಾಗಿದೆ. 

೫) “ಅಶ್ರುತ ಪ್ರತಿಭಾ ಯಸ್ಯ ಶ್ರುತಿಸ್ಮೃತ್ಯವಿರೋಧಿನೀ! ವಿಸ್ತತು ನರ ಜಾತಂ ಚ ತಂ ವಿದ್ಯಾದೇವ ಸತ್ತಮಮ್ ||” ಎಂದು ಪ್ರಮಾಣವಿದೆ. ಅರ್ಥ ಶ್ರುತಿ-ಸ್ಮೃತಿಗಳಿಗೆ ವಿರುದ್ಧವಲ್ಲದಂತೆ ಈವರೆವಿಗೆ ಕೇಳಿ ಕಂಡರಿಯದ ರೀತಿಯಲ್ಲಿ ಮಹಾಪ್ರತಿಭೆಯನ್ನಾರು ತೋರುವರೋ ಮಾನವರಾಗಿ ಜನಿಸಿದ್ದರೂ ಅಂಥವರನ್ನು ಶ್ರೇಷ್ಠದೇವತೆಗಳೆಂದು ತಿಳಿಯಬೇಕು - ಎಂದು ಮೇಲಿನ ಪ್ರಮಾಣವು ಸಾರುವುದು. ಈ ಬಗೆಯಾದ ಅಶ್ರುತ ಪ್ರತಿಭೆಯು ಶ್ರೀಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರೂ ತೋರಿರುವುದರಿಂದ ಅವರು ಶ್ರೇಷ್ಠದೇವತೆಯಾದ ಶಂಕುಕರ್ಣನ ಅವತಾರವೆಂದು ಧೈರ್ಯವಾಗಿ ಹೇಳಬಹುದು. ಇದು ಪ್ರಹ್ಲಾದಾದಿ ಅವತಾರಗಳಲ್ಲಿ ಹೇಗೆ ವ್ಯಕ್ತವಾಗಿದೆ ಎಂದೀಗ ತಿಳಿಯೋಣ. 

ಕ) ಪ್ರಹ್ಲಾದರು ಐದಾರು ವರ್ಷದ ಬಾಲಕರಿರುವಾಗಲೇ ಹಿಂದೆಂದೂ ಕೇಳಿ-ಕಂಡರಿಯದಂತೆ ಶ್ರುತ್ಯಾದಿಗಳಿ- ಗನುಗುಣವಾಗಿ ಶ್ರೀಹರಿಸರ್ವೋತ್ತಮತ್ವಾದಿ ಪರಮಪ್ರಮೇಯಗಳನ್ನು ತಂದೆಗೆ, ಶಂಡಾಮರ್ಕರಿಗೆ ಮತ್ತು ದೈತ್ಯಬಾಲಕರಿಗೆ ಬೋಧಿಸಿ ಮಹಾಪ್ರತಿಭೆಯನ್ನು ತೋರಿದರು. 

ಖ) ವ್ಯಾಸರಾಜರು ಏಳೆಂಟು ವಯಸ್ಸಿನ ಬಾಲಸನ್ಯಾಸಿಗಳಾಗಿರುವಾಗಲೇ ಶ್ರೀಮಧ್ವಸಿದ್ಧಾಂತದ ಪ್ರಮುಖ ನವಪ್ರಮೇಯಗಳನ್ನು ಒಂದು ಅಪೂರ್ವ ಪದದ್ದಾರಾ ನಿರೂಪಿಸಿ ಆ ತತ್ವಗಳನ್ನು ವಾದಿಸಿ ಪರವಾದಿಗಳನ್ನು ತಾವು ಜಯಿಸುವುದಾಗಿ ಹೇಳಿ ಸರ್ವರನ್ನೂ ಬೆರಗುಗೊಳಿಸಿದರು. ಆ ಪದ್ಯವು ಹೀಗಿದೆ - ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ | ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚಭಾವಂಗತಾಃ | ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚತತ್ಥಾಧನಮ್ | ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮಾಯ್‌ಕ ವೇದ್ಯೋ ಹರಿಃ || 

ಗ) ಶ್ರೀಗುರುರಾಜರು ಪೂರ್ವಾಶ್ರಮದಲ್ಲಿ ಮೂರು ವರ್ಷದ ಬಾಲಕರಾಗಿದ್ದಾಗ ಅಕ್ಷರಾಭ್ಯಾಸ ಕಾಲದಲ್ಲಿ ತಂದೆ ತಿಮ್ಮಣ್ಣಾಚಾರ್ಯರು ಓಂಕಾರವನ್ನು ಬರೆದು ಇದನ್ನು ಓಂ ಎಂದು ಹೇಳುತ್ತಾ ಬರೆ ಎಂದು ಹೇಳಿದಾಗ ಬಾಲಕ ವೆಂಕಟನಾಥರು “ಅಲ್ವೇ ಕಥಂ ಸಾ ಗುಣಪೂರ್ಣ ಸಂಜ್ಞಾ?” ತಂದೆಯೇ, ಈ ಅಲ್ಪ ರೇಖೆಯು ಶ್ರೀಹರಿಯು ಅನಂತಕಲ್ಯಾಣಗುಣಪೂರ್ಣನೆಂದು ಹೇಗೆ ಬೋಧಿಸುವುದು ? ಎಂದು ಪ್ರಶ್ನಿಸಿ, ತಾವೇ ಅದನ್ನು ವಿವರಿಸಿ ಸಕಲವೇದಗಳಿಗೂ ಮೂಲವಾದ ಓಂಕಾರದ ಮಹತ್ವವನ್ನೂ, ಅದೆಂತು ನಾರಾಯಣನು ಗುಣಪೂರ್ಣನೆಂದು ಸಾರುವುದೆಂಬುದನ್ನೂ ವಿಶದೀಕರಿಸಿ ತಂದೆಯನ್ನೂ ಅಲ್ಲಿ ನೆರೆದಿದ್ದ ಪಂಡಿತಮಂಡಲಿಯನ್ನೂ, ತಮ್ಮ ಅಶ್ರುತಪೂರ್ವ ಪ್ರತಿಭೆಯಿಂದ ಬೆರಗುಗೊಳಿಸಿದರು. ಈ ಮೂರು ಉದಾಹರಣಗಳಿಂದ ಪ್ರಹ್ಲಾದರೇ ವ್ಯಾಸರಾಜ-ರಾಘವೇಂದ್ರರೆಂದು ತಿಳಿಯಬಹುದಾಗಿದೆ. 

೬) “ಯಸ್ಮಿನ್ ಮಹಾಗುಣಾ ರಾಜನ್ ಗೃಹಂತೇ ಕವಿಭಿಃ ಮುಹುಃ” - ಪ್ರಹ್ಲಾದರಲ್ಲಿರುವ ವೈಶಿಷ್ಟ್ಯಪೂರ್ಣ ಸದ್ಗುಣಗಳನ್ನು ಅಡಿಗಡಿಗೂ ಜ್ಞಾನಿಗಳು ಮಾತ್ರ ತಿಳಿಯಬಲ್ಲರು! ಎಂದು ನಾರದರು ಹೇಳಿದ್ದಾರೆ. ಶ್ರೀವ್ಯಾಸರಾಜರನ್ನು ಷಡರ್ಶನಾಚಾರ್ಯರೆನಿಸಿದ ಪಕ್ಷಧರಮಿಶ್ರರು “ಯದಧೀತಂ ತದಧೀತಂ ಯದನಧೀತಂ ತದಪ್ಪನಧೀತಂ | ಪಕ್ಷಧರ ವಿಪಕ್ಷ ನಾವೇಕ್ಷಿ ಏನಾ ನವೀನವ್ವಾಸೇನ! ” ಎಂದೂ ಇತರ ಜ್ಞಾನಿಗಳೂ ಸಹ ಅವರಲ್ಲಿರುವ ವೈಶಿಷ್ಟ ಪೂರ್ಣ ಸದ್ಗುಣಗಳನ್ನು ಕೊಂಡಾಡಿದ್ದಾರೆ. 

೭) ಭಾಗವತದಲ್ಲಿ ಪ್ರಹ್ಲಾದರನ್ನು “ಜಿತೇಂದ್ರಿಯ” ಅಂದರೆ ಇಂದ್ರಿಯ ನಿಗ್ರಹ ಉಳ್ಳವರೆಂದಿದ್ದಾರೆ. ವ್ಯಾಸರಾಜರೂ ಜಿತೇಂದ್ರಿಯರೆಂಬುದು ಸ್ಪಷ್ಟ, ಗುರುಸ್ತೋತ್ರದಲ್ಲಿ ರಾಯರನ್ನು ಸಮುಪೇಕ್ಷಿತಭಾವಜಃ” ಎಂದು ಅದೇ ಅರ್ಥದಿಂದ ಸ್ತುತಿಸಿದ್ದಾರೆ. 

೮) ಭಾಗವತದಲ್ಲಿ ಪ್ರಹ್ಲಾದರನ್ನು “ರಹಿತಾಸುರೋSಸುರಃ” ಎಂದಿದ್ದಾರೆ. ಗುರುಸ್ತೋತ್ರದಲ್ಲಿ ರಾಯರನ್ನು “ದೇವಸ್ವಭಾವ” ಎಂದು ಕೊಂಡಾಡಿದ್ದಾರೆ. 

೯) ಬ್ರಹ್ಮಾಂಡಪುರಾಣದಲ್ಲಿರುವ ಪ್ರಹ್ಲಾದರನ್ನು “ಶೀಲಸಂಪನ್ನಃ” ಎಂದಿದ್ದಾರೆ. ವ್ಯಾಸತೀರ್ಥರು ಶೀಲಾದಿ ಗುಣಮಂಡಿತರು. ಗುರುರಾಜರನ್ನು ಅದೇ ಅರ್ಥದ ಭವ್ಯಸ್ವರೂಪಃ ಎಂದು ಗುರುಸ್ತೋತ್ರದಲ್ಲಿ ವರ್ಣಿಸಿದ್ದಾರೆ. 

೧೦) ಭಾಗವತದಲ್ಲಿ ಪ್ರಹ್ಲಾದರನ್ನು “ಕೃಷ್ಣಗ್ರಹಗೃಹೀತಾತ್ಮಾ' ಅಂದರೆ ಕೃಷ್ಣನೆಂಬ ಗ್ರಹದಿಂದ ಆವಿಷ್ಟರಾದವರೆಂದು ವರ್ಣಿಸಿದ್ದಾರೆ. ಮೂಲಗೋಪಾಲ ಕೃಷ್ಣಾರಾಧಕರಾದ ಶ್ರೀವ್ಯಾಸರಾಜರೂ ಕೃಷ್ಣಗ್ರಹಗೃಹೀತಾತ್ಮರೇ ! ಶ್ರೀರಾಘವೇಂದ್ರ ಸ್ವಾಮಿಗಳೂ ಕೃಷ್ಣಗ್ರಹಗೃಹೀತಾತ್ಮರು ರಾಯರ ಪೂರ್ವಾಶ್ರಮದ ಕುಲದೇವರು ಶ್ರೀನಿವಾಸ, ಆಶ್ರಮವಾಗಿ ಪೀಠಾಧಿಪತಿಗಳಾದ ಮೇಲೆ ಅವರು ಆರಾಧಿಸುತ್ತಿದ್ದುದು ಶ್ರೀಮೂಲರಾಮನನ್ನು, ಆದರೂ ಅವರಿಗೆ ಕೃಷ್ಣರೂಪದಲ್ಲಿಯೇ ಹೆಚ್ಚಿನಭಕ್ತಿ! ಅವರ ಬಿಂಬಮೂರ್ತಿಯೂ ಶ್ರೀಕೃಷ್ಣನೇ. ಅಂತೆಯೇ ಅವರು 'ಕೃಷ್ಣಾಂಕಿತದಿಂದ' (ಧೀರವೇಣುಗೋಪಾಲ) ಪದ ರಚಿಸಿದ್ದಾರೆ ಮತ್ತು ಉಡುಪಿಯಲ್ಲಿ ತಮಗೊಲಿದ ಶ್ರೀಕೃಷ್ಣನ ಸುವರ್ಣಪ್ರತಿಮೆಯನ್ನು ನಿರ್ಮಿಸಿ ಪೂಜಿಸುತ್ತಿದ್ದರು! ಇದು ರಾಯರು ಕೃಷ್ಣಗ್ರಹಗೃಹೀತಾತ್ಮರೆನ್ನಲು  ನಿದರ್ಶನವಾಗಿದೆ. 

೧೧) ಇನ್ನು ಪ್ರಹ್ಲಾದ, ವ್ಯಾಸರಾಜ, ರಾಘವೇಂದ್ರ ಎಂಬ ಒಂದೇ ಅರ್ಥಬೋಧಕ ಹೆಸರುಗಳು ವಿವೇಚನೆಯಿಂದಲೂ ಈ ಮೂರು ಹೆಸರಿನವರೂ ಒಂದೇ ದೇವತೆಯ ಅವತಾರವೆಂದು ತಿಳಿಯಬಹುದಾಗಿದೆ. 

ಕ) ಪ್ರಹ್ಲಾದ - ಪ್ರಕರ್ಷಣ ಆಹ್ಲಾದಯತೀತಿ ಪ್ರಹ್ಲಾದ ಅಥವಾ ಪ್ರಕರ್ಷಃ ಆಹ್ಲಾದಃ ಯಸ್ಮಾತ್ ಸಃ ಪ್ರಲ್ಲಾದ ಅಂದರೆ ಪ್ರಕೃಷ್ಟ ಆಹ್ಲಾದ ಜನಕರು ಅರ್ಥಾತ್ ದುಃಖನಿವೃತ್ತಿಪೂರ್ವಕ ಶಾಶ್ವತಸುಖ ಸಂತೋಷಪ್ರದರೆಂದು ಅರ್ಥ.

ಖ) ವ್ಯಾಸರಾಜ - ಇಲ್ಲಿರುವ ರಾಜ ಎಂದರೆ ಚಂದ್ರ ಎಂದರ್ಥ, ಚಂದ್ರನು ಹೇಗೆ ತಾಪವನ್ನು ಪರಿಹರಿಸಿ ಸುಖಸಂತೋಷಪ್ರದನೋ ಹಾಗೆಯೇ ವ್ಯಾಸರೆಂಬ ಚಂದ್ರನು (ವ್ಯಾಸರಾಜರು) ಭಕ್ತರ ದುಃಖಪರಿಹಾರಮಾಡಿ ಆನಂದವನ್ನು ಕೊಡುವವರೆ೦ದು ಮೇಲಿನ ಅರ್ಥವನ್ನೇ ಬೋಧಿಸುವುದು. ವಾಸರಾಜ ಎಂಬಲ್ಲಿ “ನಾಮೈಕದೇಶೇ ನಾಮಗ್ರಹಣಂ” ಎಂಬ ನ್ಯಾಯದಿಂದ ರಾಜಶಬ್ದದಿಂದ ವ್ಯಾಖ್ಯಾನಮಾಡಿದರೂ ಸಹ ವ್ಯಾಸರಾಜ ಎಂಬ ಸಮಗ್ರನಾಮವೇ ವ್ಯಾಖ್ಯಾತವಾಗುವುದು ಅಥವಾ ವ್ಯಾಸ ಎಂದರೆ ವಿಭಾಗಗೊಳಿಸುವವರೆಂದು ಅರ್ಥ. ವಿಭಾಗವೆಂದರೆ ಅತತ್ವಾವೇದಕ ಶಾಸ್ತ್ರಗಳು ಮತ್ತು ಸತ್ತತ್ವಾವೇದಕ ಶ್ರುತಿ-ಸ್ಮೃತಿ-ಪುರಾಣಗಳೂ, ಇವುಗಳಲ್ಲಿ ಮೊದಲನೆಯದು ದುಃಖಮೂಲವಾದ ಬಂಧಕ್ಕೆ ಕಾರಣ. ಎರಡನೆಯದು ಬಂಧ ನಿವೃತ್ತಿಪೂರ್ವಕ ಸುಖಪ್ರದವಾದ ಮೋಕ್ಷಕ್ಕೆ ಕಾರಣವೆಂದು ವಿಭಾಗಗೊಳಿಸಿ ಉಪದೇಶಿಸಿದವರು ವ್ಯಾಸರಾಜರು. ಇದೂ ಪ್ರಹ್ಲಾದಾರ್ಥವನ್ನೇ ಕೊಡುವುದು. 

ಗ) ರಾಘವೇಂದ್ರ ಎಂಬ ಪದವೂ, ಮೇಲಿನ ಅರ್ಥವನ್ನೇ ಬೋಧಿಸುವುದು. ಅಘವೇಂ ಚ ಅಘವೇಂ, ಅಘವೇಂ ದ್ಧತಿ, ರಾತೀತಿ ಅಘವೇಂದ್ರ:, ರಾಜತೇ ಇತಿ ರಃ ರಾಸ್ ಅಘವೇಂದ್ರಶ್ಚ ರಾಘವೇಂದ್ರ: - ಈ ವತಿಯಿಂದ ರಾಘವೇಂದ್ರರು ಭಕ್ತರ, ಆಶ್ರಿತರ ದುಃಖನಿವೃತ್ತಿ ಪೂರ್ವಕವಾಗಿ ವಾಂಭೀತಾರ್ಥ (ಸುಖ)ವನ್ನು ಕರುಣಿಸುವರೆಂದು ಅರ್ಥವಾಗುವುದು, ಜ್ಞಾನಿಗಳು 'ಅಘಂ ದ್ರಾವಯತೇ ಯಸ್ಮಾದ್ದೇಂಕಾರೋ ವಾಂಛಿತಪ್ರದಃ|| ರಾಘವೇಂದ್ರಯತಿಸ್ತಸ್ಮಾತ್ ಲೋಕೇ ಖ್ಯಾತೋ ಭವಿಷ್ಯತಿ।। ಎಂದು ವರ್ಣಿಸಿದ್ದಾರೆ, ಇನ್ನು ವ್ಯಾಸವಿಜಯದಲ್ಲಿ ಬಾಹ್ಲಾದಕರ ದೈನಂ ಸಾದಸ್ಯಾಪಿಚಾಗ್ರಜಂ | ಪ್ರಹ್ಲಾದ ಇತಿಯಂ ಪ್ರಾಹುಃ ತತ್ಸತ್ಯಂ ನ ಹಿ ವೈಮೃಷಾ' ಎಂದು ಬಣ್ಣಿಸಿರುವುದು ವ್ಯಾಸರಾಜರು ಪ್ರಹ್ಲಾದರೆಂಬುದನ್ನೇ ಸೂಚಿಸುವುದು. ಆದುದರಿಂದ ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರಗುರುಗಳು ಭಕ್ತರ ಅನಿಷ್ಟ ಕಳೆದು ಸುಖನೀಡುವರೆಂದು ಮೇಲಿನ ವುತ್ಪತ್ತಿಗಳಿಂದ ಸ್ಪಷ್ಟವಾಗುವುದರಿಂದ ಶ್ರೀವ್ಯಾಸರಾಜರೇ ಶ್ರೀರಾಘವೇಂದ್ರರೆಂದು ಸಿದ್ಧವಾಗುವುದೆಂದು ತಿಳಿಸಲು ಹರ್ಷಿಸುತ್ತೇವೆ. 

ಈಗ ಗುರುಸ್ತೋತ್ರದಲ್ಲಿರುವ ವಿಶೇಷಣಗಳು, ಪುರಾಣಾದಿಗಳಲ್ಲಿ ಬರುವ ಗುಣವಾಚಕ ವಿಶೇಷಣಗಳು ಹೇಗೆ ಪ್ರಹ್ಲಾದ - ವ್ಯಾಸರಾಜ - ರಾಘವೇಂದ್ರರಿಗೂ ಸಮನ್ವಯವಾಗುವುದೆಂದು ವಿವೇಚಿಸೋಣ.

ಶ್ರೀಗುರುಸ್ತೋತ್ರ ವಿವೇಚನೆ

೧೨) “ಶ್ರೀರಾಘವೇಂದ್ರಃ ಸಕಲಪ್ರದಾತಾ ಸ್ವಪಾದಪಂಕಜದಯಭಕ್ತಿಮದ್ಧ ಶ್ರೀರಾಘವೇಂದ್ರ ಪ್ರಹ್ಲಾದ - ವ್ಯಾಸರಾಜ ರಾಘವೇಂದ್ರರು, ಸ್ವಪಾದಕಂಜದ್ವಯ ಭಕ್ತಿಮದ್ಭಃ ತಮ್ಮ ಪಾದಕಮಲಗಳಲ್ಲಿ ಭಕ್ತಿಯುಳ್ಳವರಿಗೆ-ಸಕಲಪ್ರದಾತಾ-ಸಕಲಂ-ಶ್ರೀಲಕ್ಷ್ಮೀ ಸಹಿತನಾದವನು ಸಕಲ-ಪರಬ್ರಹ್ಮ ಅಥವಾ ಶ್ರೀಹರಿಯನ್ನು, ಪ್ರದಾತಾ-ಉಪದೇಶದ್ವಾರ ನೀಡುವವರು. 

೧೩) ಅಘಾದ್ರಿ ಸಂಭೇದನದೃಷ್ಟಿವಜ್ರಃ ಪಾಪವೆಂಬ ಬೆಟ್ಟವನ್ನು ಸಂಪೂರ್ಣವಾಗಿ ಪುಡಿಪುಡಿಮಾಡಿನಾಶಪಡಿಸುವ ಕೃಪಾದೃಷ್ಟಿಯೆಂಬ ವಜ್ರಾಯುಧವುಳ್ಳವರು. ಶ್ರೀಪ್ರಹ್ಲಾದರು, ವ್ಯಾಸರಾಜರು, ರಾಯರು ಎಂದರ್ಥ. “ಯತ್ಪಾದ ಕಂಜರಜಸಾ' ಎಂಬ ಗುರುಸ್ತೋತ್ರದಲ್ಲಿ ಶ್ರೀರಾಯರ ಪಾದರಜಸ್ಸಿನಿಂದ ಅಲಂಕೃತಶರೀರವುಳ್ಳ, ರಾಯರ ಪಾದಪದ್ಮಗಳಲ್ಲಿ ದುಂಬಿಯಂತಿರುವ ಮನಸ್ಸುಳ್ಳ, ಅವರ ಮಹಿಮಾದಿಗಳ, ಸದ್ಗುಣಗಳನ್ನು ಕೀರ್ತಿಸುವುದರಿಂದ ಜೀರ್ಣವಾದ ವಾಕ್ಕುಳ್ಳವರಾರೋ ಅಂಥ ಭಕ್ತರ ದರ್ಶನವೇ ಪಾಪರಿಹಾರಕವೆಂದಮೇಲೆ ಇನ್ನು ಅಂಥ ಪ್ರಹ್ಲಾದ-ವ್ಯಾಸರಾಜರಾಯರ ಕೃಪಾದೃಷ್ಟಿಯು ಸರ್ವಪಾಪನಿವಾರಕ- ವೆಂಬುದರಲ್ಲಿ ಸಂದೇಹವುಂಟೆ ? ಇದಕ್ಕೆ ಭಾಗವತ ಏಳನೇ ಸ್ಕಂದದ “ಸಂಭಾಷಣೀಯೋಹಿ ಭಗವಾನ್ ! ಆತ್ಮನಃ ಮಿಚ್ಛತಾ ||” ಎಂಬ ಪದ್ಯವೂ ಪ್ರಮಾಣವಾಗಿದೆ. ಪದ್ಯಾರ್ಥ = ಪಾಪರಹಿತರಾಗಬಯಸುವವರು, ಪ್ರಹ್ಲಾದ! ನಿನ್ನೊಡನೆ ಸಂಭಾಷಣೆ ಮಾಡಬೇಕು. ಅಂದರೆ ಪವಿತ್ರರನ್ನು ಪವಿತ್ರಗೊಳಿಸುವ ಮಹಾನುಭಾವರು ಪ್ರಹ್ಲಾದರು, ಎಂದಮೇಲೆ ಮೂರವತಾರ ತಾಳಿದ ಈ ಮಹನೀಯರ ದರ್ಶನವು ಪಾಪನಿವಾರಕವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ?

೧೪) ಕ್ಷಮಾಸುರೇಂದ್ರೋವತು ಮಾಂ ಸದಾಯಮ್ ।।” 

ಕ್ಷಮಾಸುರೇಂದ್ರ-ಭೂಸುರೇಂದ್ರರು-ಬ್ರಾಹಣೋತ್ತಮರಲ್ಲಿ ಶ್ರೇಷ್ಠರು ಕ್ಷಮಾ ವಿಶಿಷರು ಶ್ರೀವ್ಯಾಸರಾಜರು ಮತ್ತು ರಾಯರು. ಅಥವಾ ಸುರೇಂದ್ರ:-ಸುರತಿ ಶೋಧಿಸುವವರಲ್ಲಿ ಇಂದ್ರಃ -ಶ್ರೇಷ್ಠರು-ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು. ಅಥವಾ ಕ್ಷಮಾಸುರೇಂದ್ರ:- ಅಸ್-ಮುಖ್ಯಪ್ರಾಣೇರಮತೇ ಇತಿ ಅಸುರಃ ಅಸುರೇಷು ಇಂದ್ರಃ ಅಸುರೇಂದ್ರಃ ಪ್ರಹ್ಲಾದಃ ಶ್ರೀಮುಖ್ಯಪ್ರಾಣದೇವರಲ್ಲಿ ರಮಿಸುವವರು (ವಾಯುದೇವರ ವಿಶೇಷಾವೇಶಯುಕ್ತರು) ಪ್ರಹ್ಲಾದರು ಅಥವಾ ಕ್ಷಮಾಸುರೇಂದ್ರ ಕ್ಷಮಾಗುಣವಿಶಿಷರಾದ ಅಸುರರು- ಅಸುರಸ್ವಭಾವರಹಿತರಾಗಿ ಅಸುರಯೋನಿ ಸಂಜಾತರು-ಪ್ರಹ್ಲಾದರು. ಇದಕ್ಕೆ ಪ್ರಮಾಣ “ರಹಿತಾಸುರೋಸುರಃ” ಭಾಗವತ. ಇಂಥ ಶ್ರೀಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು ಸರ್ವದಾ ನನ್ನನ್ನು ಕಾಪಾಡಲಿ ಎಂದು ಭಾವ. 

೧೫) 'ಶ್ರೀರಾಘವೇಂದ್ರೋ ಪರಿಪಾದಕನಿಷೇವಣಾಲ್ಲ ಸಮಸ್ತ ಸಂಪತ್ !' ಶ್ರೀರಾಘವೇಂದ್ರ ಪ್ರಹ್ಲಾದಃ, ವ್ಯಾಸರಾಜು, ರಾಘವೇಂದ್ರ, ಹರಿಪಾದಕಂಜ ನಿಷೇವಣಾಲ ಸಮಸ್ತ ಸಂಪತ್‌ ಶ್ರೀಮನ್ನಾರಾಯಣನ ಚರಣಕಮಲಾರಾಧನೆಯಿಂದ ಪಡೆದ ಧರ್ಮಾರ್ಥಕಾಮಮೋಕ್ಷರೂಪವಾದ ಸಮಸ್ತಪುರುಷಾರ್ಥಗಳ ಅಕ್ಷಯಸಂಪತ್ತುಳ್ಳವರು. ಇದರಿಂದ ಈ ಮೂವರೂ ತಮ್ಮನ್ನು ಆಶ್ರಯಿಸಿ ಸೇವಿಸಿದವರಿಗೆ ಸಕಲಾರ್ಥಗಳನ್ನು ಕರುಣಿಸಲು ಶಕ್ತರಾಗಿದ್ದಾರೆಂಬುದು ದೃಢಪಡುವುದು. 

೧೬) 'ದೇವಸ್ವಭಾವೋದಿವಜದ್ರುಮೋಯಮಿಷಪ್ರದೋ ಮೇ ಸತತಂ ಸ ಭೂಯಾತ್ ” ದೇವಸ್ತಭಾವಃ ದೇವತೆಗಳ ಸಾತ್ವಿಕಸ್ತಭಾವವುಳ್ಳವರು. ಆಸುರೀ ಭಾವವಿಲ್ಲದ ದೇವತೆಗಳೆಂದು ಭಾವ. ಪ್ರಮಾಣ “ರಹಿತಾಸುರೋಸುರಃ -ಭಾಗವತ. ಅಥವಾ ದೇವ ಏವ ವಿಷ್ಣುರೇವ ಸ್ವಃ-ಸ್ವತಂತ್ರ ಇತಿ ಭಾವೋ ಯಸ ಸಃ - ದೇವಸ್ವಭಾವಃ, ಅಂದರೆ ಶ್ರೀಹರಿಯೇ ಸ್ವತಂತ್ರಕರ್ತನಾದ ಸರ್ವೋತ್ತಮನೆಂಬ ದೃಢನಂಬಿಕೆಯುಳ್ಳವರು-ಪ್ರಹ್ಲಾದರು, ವ್ಯಾಸರಾಜರು, ರಾಯರು. 

೧೭) 'ದಿವಿಜದ್ರುಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್|' ಅಯಂ ದಿವಿಜದ್ರುಮಃ ಪ್ರಹ್ಲಾದ-ವ್ಯಾಸರಾಜ-ರಾಯರೆಂಬ ಕಲ್ಪವೃಕರಾದ ಮಹನೀಯರು ನನ್ನ ಇಷ್ಟಾರ್ಥ ಪ್ರದರಾಗಲಿ ಎಂದು ಭಾವ. 

೧೮) 'ಭವಸ್ತರೂಪಃ'- ಮಂಗಳರೂಪರು. ಶೀಲಸಂಪನ್ನ: (ಬ್ರಹ್ಮಾಂಡ ಪುರಾಣ) ಪ್ರಹ್ಲಾದರು. ಭಾಗವತದಲ್ಲಿ ಶ್ರೀಹರಿಯೇ ಪ್ರಹ್ಲಾದರನ್ನು 'ಪ್ರಹ್ಲಾದ ಭದ್ರ! ಭದ್ರ ತೇ' ಅಂದರೆ 'ಮಂಗಳಕರನಾದ ಪ್ರಹ್ಲಾದನೇ ! ನಿನಗೆ ಮಂಗಳವಾಗಲಿ' ಎಂದಿದ್ದಾನಾದ್ದರಿಂದ ಪ್ರಹ್ಲಾದರು ಮಂಗಳಸ್ವರೂಪರು. ಇದು ಶ್ರೀವ್ಯಾಸರಾಜ-ರಾಘವೇಂದ್ರರಿಗೂ ಅನ್ವಯಿಸುವುದು. 

೧೯) 'ಭವದುಃಖತೂಲ ಸಂಘಾಗ್ನಿಚರ್ಯ !' ಸಂಸಾರ ದುಃಖವೆಂಬ ಹತ್ತಿಯ ರಾಶಿಗೆ ಬೆಂಕಿಯಂತಿರುವರು. ಅರ್ಥಾತ್ ಸಂಸಾರ ದುಃಖವನ್ನು ಪರಿಹರಿಸುವವರೆಂದು ಭಾವ. ಇದು ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರುಗಳಿಗೂ ಅನ್ವಯಿಸುವುದು. ಪ್ರಮಾಣ- 'ದೈತ್ಯಾತ್ಮಜಸ್ಯ ಚ ಸತಾಂಪ್ರವರಸ್ಯ ಪುಣ್ಯಂ | ಶ್ರುತ್ವಾನುಭಾವ ಕುತೋಭಯಮೇತಿ ಲೋಕ' - ಭಾಗವತ ಸಪ್ತಮಸ್ಕಂಧ. ಪ್ರಹ್ಲಾದರ ಪುಣ್ಯಚರಿತೆಯನ್ನು ಶ್ರವಣಮಾಡಿದವರು. ಸಂಸಾರಬಂಧದ ಭಯದಿಂದ ಮುಕ್ತರಾಗುವರು ಎಂದು ಭಾವ. 'ತ್ವಾಂ ಚ ಮಾಂ ಸ್ಮರನ್ ಕಾಲೇ ಕರ್ಮಬಂಧಾತ್ ಪ್ರಮುಚ್ಯತೇ||' ಎಂಬ ಶ್ರೀನರಹರಿಯ ವಚನವು ಇದನ್ನು ಪುಷ್ಟಿಕರಿಸುವುದು. 

೨೦) 'ಸಮಸ್ತ ದುಷ್ಟನಿಗ್ರಹನಿಗ್ರಹೇಶಃ|' ಸಮಸ್ತ-ಸಕಲ, ದುಷ್ಟಗ್ರಹ-ಭೂತಪ್ರೇತಪಿಶಾಚಾದಿ ದುಷ್ಟಶಕ್ತಿಗಳ, ನಿಗ್ರಹೇ, ನಿಗ್ರಹಿಸುವ ನೃಸಿಂಹದೇವರೇ, ಈಶಃ ಯಸ ಸಃ- ಪ್ರಭುವಾಗುಳ್ಳವರು-ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು ಅಥವಾ ಸಮಸ್ತ ದುಷಗ್ರಹರೇ ದೈತ್ಯರು. ಅವರನ್ನು ನಿಗ್ರಹಿಸಲೂ ಅನುಗ್ರಹಿಸಲೂ ಶಕ್ತನಾದವನು ದೈತ್ಯಸಾಮ್ರಾಟ್ ಹಿರಣ್ಯಕಶ್ಯಪನು. ಅವನನ್ನು ತಮ್ಮ ಸಾತ್ವಿಕ ಶಕ್ತಿಯಿಂದ ಜಯಿಸಿದ ಪ್ರಭುಗಳು ಶ್ರೀಪ್ರಹ್ಲಾದರು! ಅಥವಾ ಭೂತಪ್ರೇತಪಿಶಾಚಿಗಳು, ಅಭಿಚಾರಕಕೃತ್ತಿ ಮುಂತಾದ ದುಷ್ಟಶಕ್ತಿಗಳನ್ನು ನಿಗ್ರಹಿಸುವುದರಲ್ಲಿ ಪ್ರಭುಗಳು-ಪ್ರಹ್ಲಾದರು. ದೈತ್ಯೇಂದ್ರನ ಅಣತಿಯಂತೆ ದೈತ್ಯಪುರೋಹಿತರು ಪ್ರಹ್ಲಾದರ ನಾಶಕ್ಕಾಗಿ ಅಭಿಚಾರಿಕಕೃತ್ತಿಯನ್ನು ಸೃಷ್ಟಿಸಿ ಪ್ರಲಾದರ ಮೇಲೆ ಬಿಟ್ಟರು. (ಯದಸ್ಮದ್ವಚನಾಹಗ್ರಹು ನ ತಕ್ಷಸೇ ಭವಾನ್ | ತತಃ ಕೃತ್ಯಾಂ ವಿನಾಶಯ ತವ ಸೈಕಾಮ್ ದುರ್ಮತೇ।” - ವಿಷ್ಣು ಪುರಾಣ) ಆ ಕೃತಿಯು ತ್ರಿಶೂಲವೇ ತುಂಡಾಯಿತು! (“ಯಾನಪಾಯಿ ಭಗವಾನ್ ಹೃದ್ಯಾಸ್ತೇ ಹರಿರೀಶ್ವರಃ! ಛಂಗೋಭವತಿ ವಜ್ರಸ್ವ ತತ್ರಶೂಲ ಕಾ ಕಥಾ ?” " -ವಿಷ್ಣುಪುರಾಣ) ಈ ಕಥಾನಕವು ಪ್ರಲ್ಲಾದರು ದುಷ್ಟಶಕ್ತಿಗಳನ್ನು ನಿಗ್ರಹಿಸಲು ಸಮರ್ಥರೆಂದು ಸಾರುವುದು. 

೨೧) ದುರತ್ಯಯೋಪಪ್ಲವಸಿಂಧುಸೇತುಃ||” ಪಾಪಸಮುದ್ರವನ್ನು ದಾಟಿಸುವ ಸೇತುವೆಯಂತಿರುವವರ- ಪ್ರಹ್ಲಾದರು-ವ್ಯಾಸರಾಜರು-ರಾಯರು ! ಪ್ರಲ್ಲಾದರು ಮಹಾ ಪಾಪಸಮುದ್ರದಿಂದ ದೈತಬಾಲಕರು ಮತ್ತು ತಂದೆಯಾದ ಹಿರಣ್ಯ ಕಶ್ಯಪನನ್ನೂ ದಾಟಿಸಿ ಅವನಿಗೆ ಸದ್ಧತಿಕೊಡಿಸಿದ ಕರುಣಾಳುಗಳು ಪ್ರಹ್ಲಾದರೆಂಬುದು ಭಾಗವತದಿಂದ ಸ್ಪಷ್ಟವಾಗುವುದು. ಪ್ರಮಾಣ - “ಯದನಿಂದತಾ ಮೇ ತ್ವಾಂ ಅವಿದ್ವಾಂಸ್ತೇಜ ಐಶ್ವರ| ತಸ್ಮಾತ್ ಪಿತಾ ಮೇ ಪಾಯೇತ ದುರಂತಾದುಸ್ತರಾದಘಾತ್ ಭಾಗವತ. ಅಂದಮೇಲೆ ದಾಟಲಸದಳವಾದ ಉಪದ್ರವಗಳೆಂಬ ಸಮುದ್ರಕ್ಕೆ ಸೇತುವೆಯಂತಿರುವವರು ಪ್ರಹ್ಲಾದ-ವ್ಯಾಸರಾಜ ರಾಘವೇಂದ್ರರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ ? 

೨೨) “ನಿರಸ್ತದೋಷಃ” ಪಾಪ ಮತ್ತು ರಾಗದ್ವೇಷಾದಿ ದೋಷರಹಿತರು ಪ್ರಾದ-ವ್ಯಾಸರಾಜ-ರಾಘವೇಂದ್ರರು. ಪ್ರಮಾಣ-“ಯಃ ಸಾಧೋಗ್ಯ ಕುಲೇಜಾತಃ ಅಯಂ ನಿಮ್ಮಿಷ” -ಭಾಗವತ. ಶ್ರೀನರಹರಿಯು ಪ್ರಹ್ಲಾದರನ್ನು ಅನಫ್' ಎಂದು ಸಂಬೋಧಿಸಿರುವುದು ಇದನ್ನು ಪುಷ್ಟಿಕರಿಸುವುದು. 

೨೩) “ನಿರಸದೋಷ”- ಶ್ರೀಹರಿವಾಯುಗಳ ಪರಮಮಂಗಳಕರ ಸನ್ನಿಧಾನವುಳ್ಳ ಶರೀರರು ಪ್ರಹ್ಲಾದ-ವ್ಯಾಸರಾಜ ಗುರುರಾಜರು ನಿರವದ್ಮವೇಷರು! ಪ್ರಮಾಣ “ಪ್ರಹ್ಲಾದ ಭದ್ರ ಭದ್ರಂ ತೇ ।”, “ವಿದ್ಯಾರ್ಥರೂಪಜನ್ಮಾಧ್ಯ ” - ಭಾಗವತ. ೨೪) ಪ್ರತ್ಯರ್ಥಿಮೂಕತ್ವನಿದಾನಭಾಷಃ' ಶ್ರೀವೈಷ್ಣವ ಸಿದ್ಧಾಂತ ಪ್ರತಿ ಪಾದನೆಯಿಂದ ಶಂಡಾಮರ್ಕರು, ಹಿರಣ್ಯಕಶಪರನ್ನು ಮೂಕರನ್ನಾಗಿಸಿದವರು, ಪರವಾದಿಗಳನ್ನು ದೈತಸಿದ್ಧಾಂತ ತತ್ವಪ್ರತಿಪಾದನೆಯಿಂದ ನಿರುತ್ತರಗೊಳಿಸಿದವರು. ಪ್ರಲ್ಲಾದ-ವ್ಯಾಸರಾಜ-ರಾಘವೇಂದ್ರರು! 

೨೫) ವಿದ್ವತ್ಪರಿಜೇಯಮಹಾವಿಶೇಷಃ ।” ಈ ಹಿಂದೆಯೇ ಇದನ್ನು ನಿರೂಪಿಸಿದ್ದೇವೆ. 

೨೬) “ವಾಗೈಖರೀ ನಿರ್ಜಿತಭವ್ರಶೇಷಃ |” ತಮ್ಮ ಸತ್ಯಭೂತ ವಾಗೈಭವದಿಂದ ಶಂಡಾಮರ್ಕರ, ಹಿರಣ್ಯಕಶ್ಯಪನ, ಬಸವಾಭಟ್ಟ, ಪಕ್ಷಧರಮಿಶ್ರಾದಿ ಪರವಾದಿಗಳು ಶೇಷಮಹಾರಾಜರುಗಳನ್ನು ಜಯಿಸಿದವರು ಪ್ರಾದ-ವ್ಯಾಸರಾಜ-ರಾಘವೇಂದ್ರರು ಶ್ರೀವಿಜಯೀಂದ್ರರ ವಾಗೈಖರೀ ಗ್ರಂಥಾಧಾರದಿಂದ ಶೇಷಮಹಾರಾಜರನ್ನು ಪಂಢರಪುರದಲ್ಲಿ ರಾಯರು ಜಯಿಸಿದ್ದು ಸ್ಪಷ್ಟವಾಗಿದೆ. 

೨೭) ಸರ್ವತಂತ್ರ ಸ್ವತಂತ್ರೋಸ್” ಸಕಲಶಾಸ್ತ್ರಗಳಲ್ಲಿಯೂ ಸ್ವತಂತ್ರರಾದವರು, ಅಥವಾ ಸರ್ವತಂತ್ರ- ಶ್ರೀಹರಿಪಾರಮ್ಯಬೋಧಕ ವೇದಾಂತಶಾಸ್ತ್ರದಲ್ಲಿ ಸ್ವತಂತ್ರಃ - ಸ್ಥಾಪನಮಾಡುವುದು ಮತ್ತು ಗಾನಮಾಡುವುದರಲ್ಲಿ ಇನ್ನೊಬ್ಬರ ಅಪೇಕ್ಷೆ ಇಲ್ಲದ ಧೀಮಂತರು -ಪ್ರಹ್ಲಾದ-ವ್ಯಾಸರಾಜರು-ರಾಘವೇಂದ್ರರು. ಪ್ರಮಾಣ “ತರ ಗಾಯನಮಹಾಮೃತಮತ್ತಚಿತ್ತ || 

- ಭಾಗವತ. 

೨೮) “ಶ್ರೀಮಧ್ವಮತವರ್ಧನಃ।” -ಶ್ರೀಮಧ್ವಸ್ಯ ವಾಯೋ ಮತಂ ವರ್ಧಯತಿ ಸ್ಥಾಪನದ್ದಾರಾ ಅಭಿವರ್ಧತೀತಿ ಶ್ರೀಮಧ್ವಮತವರ್ಧನ-ಶ್ರೀಮದ್ದರ ಮೂಲರೂಪರಾದ ಶ್ರೀವಾಯುದೇವರ ಮತವನ್ನು ಸ್ಥಾಪಿಸುವುದು ಅಭಿವೃದ್ಧಿಗೊಳಿಸುವುದರಲ್ಲಿ ದಕ್ಷರಾದ ಶ್ರೀಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು ಶ್ರೀಮಧ್ವಮತವರ್ಧನರು! ಪ್ರಮಾಣ-ಪ್ರಲ್ಲಾದರ ಉಪದೇಶ -“ಸಂಶ್ರದ್ಧೆಯಂ ವಾಯು ಮತಂ ಸದೈವ' - ಗರುಡಪುರಾಣ, ಬ್ರಹ್ಮಕಾಂಡ.

೨೯) “ವಿಜಯೀಂದ್ರ ಕರಾಜ್ಯೋತ್ಸ ಸುಧೀಂದ್ರ ವರಪುತ್ರಕಃ | 

ಶ್ರೀರಾಘವೇಂದ್ರೋಯತಿರಾಟ್ ಗುರುರ್ಮೆಸಾದಯಾಪಹಃ |” 

ಶ್ರೀವಿಜಯೀಂದ್ರತೀರ್ಥರ ಕರಕಮಲೋತ್ಪನ್ನರಾದ ಶ್ರೀಸುಧೀಂದ್ರತೀರ್ಥರ ವರಕುಮಾರಕರಾದ ಶ್ರೀರಾಘವೇಂದ್ರ ಯತಿರಾಜರಾದ ಗುರುವರ್ಯರು ನನ್ನ ಸರ್ವವಿಧ ಭಯವನ್ನೂ ಪರಿಹರಿಸಲಿ ಎಂದು ಸಾಮಾನ್ಯವಾದ ಅರ್ಥ. ಇಲ್ಲಿ ಅಪ್ಪಣ್ಣಾಚಾರ್ಯರು ಶ್ರೀರಾಯರೇ ಪ್ರಲ್ಲಾದರೆಂದು ಭಾಗವತಕಥಾಭಾಗ ನಿರೂಪಣೆ ಮಾಡುವುದರ ಮೂಲಕ ಸೂಚಿಸಿದ್ದಾರೆ. ಇದನ್ನು ಕೆಳಗಿನ ವ್ಯುತ್ಪತ್ತಿಯಿಂದ ಅರಿಯಬಹುದಾಗಿದೆ. ವಿಜಯಿಚಾಸೌ ಇಂದ್ರಶ್ಚ ವಿಜಯೀಂದ್ರ ಇಂದ್ರಶ್ಚ ವಿಜಯೀಂದ್ರ ಕರ ಏವ ಅಬ್ಬು ಕರಾಂ, ವಿಜಯೀಂದ್ರ ಕರಾಬ್ದಂ, ವಿಜಯಿಂದ್ರಕರಾಂ, ಕರಾನ (ವಿಮೋಚನ ಪೂರ್ವಕಂ) ಉತ್ತ ವಿಜಯೀಂದ್ರಕರಾಬ್ಬೊತಃ, ಸುಧೀಷು ಜ್ಞಾನಿಷು ಇಂದ್ರಃ ಶ್ರೇಷ್ಠಃ ಸುಧೀಂದ್ರ-ಜ್ಞಾನಿಶ್ರೇಷ್ಟೋ ನಾರದಃ, ತಸ್ಯ ವರಪುತ್ರಕ (ಇಂದ್ರಕರ ಮೋಚಿತಾತ್), ಅಥವಾ ಸುಧೀಂದ್ರ-ನಾರದ ವರಪುತ್ರಕಃ-ಶ್ರೇಷ್ಠ ಶಿಷ್ಯಃ, ಏತಾದೃಶಃ ಶ್ರೀರಾಘವೇಂದ್ರ- ಶ್ರೀಪ್ರಹ್ಲಾದರಾಜ ಯತಿರಾಟ್ ಜಿತೇಂದ್ರಿಯೇಷಗ್ರಗಣ್ಯಃ, ಗುರುಃ, ಉಪದೇಶಕಃ, ಮೇ ಭಯಾಪಹಃ ಸಂಸಾರಭಯವನ್ನು ಪರಿಹರಿಸಲಿ. ಸಕಲವಿಧಛಯ ಪರಿಹಾರಕಃ ಸ್ಯಾತ್ -ಭವತು-ಈ ವುತ್ಪತ್ತಿಯಿಂದ ಶ್ರೀಪ್ರಹ್ಲಾದರ ಕಥೆ ಸೂಚಿತವಾಗಿದೆ. 

ಹಿರಣ್ಯಕಶ್ಯಪನು ತಪಸ್ಸಿನಲ್ಲಿದ್ದಾಗ ದೇವೇಂದ್ರನು ದೈತ್ಯರನ್ನು ಜಯಿಸಿ, ಶತ್ರುಶೇಷವನ್ನು ಉಳಿಸಬಾರದೆಂದು ಕಯಾಧುವಿನ ಗರ್ಭದಲ್ಲಿದದ ಶಿಶುವನ್ನು (ಪ್ರಲ್ಲಾದರನ್ನು) ನಾಶಪಡಿಸಲು ಉದ್ಯುಕ್ತನಾದಾಗ ನಾರದರು ಇಂದ್ರನಿಗೆ ಬುದ್ಧಿ ಹೇಳಿ ಕಯಾಧುವಿನ ಉದರದಲ್ಲಿರುವ ವಾಗ್ದಾವೇಶಯುಕ್ತನಾದ ಭಗವದ್ಭಕ್ತನಿಂದ ನಿಮ್ಮೆಲ್ಲರ ಮಂಗಳವಾಗುವುದೆಂದು ಹೇಳಿ ಗರ್ಭಸ್ಥ ಪ್ರಹ್ಲಾದರನ್ನು ಇಂದ್ರನ ಕರದಿಂದ ಬಿಡಿಸಿ ಕಾಪಾಡಿದರು ಎಂದು ಭಾವ. ಇಂಥ ನಾರದರಿಂದ ಪುನರ್ಜನ್ಮ ಪಡೆದ ಅಥವಾ ನಾರದರ ಶ್ರೇಷ್ಠ ಅಥವಾ ನಾರದರ ಶ್ರೇಷ್ಠ ಶಿಷ್ಯರಾದ ಜಿತೇಂದ್ರಿಯರೂ ಗುರುಗಳೂ ಆದ ಪ್ರಹ್ಲಾದರು ನಮ್ಮ ಎಲ್ಲ ವಿಧ ಭಯಗಳನ್ನೂ ಪರಿಹರಿಸಲಿ ಎಂಬ ಅರ್ಥವನ್ನು ಇಲ್ಲಿ ಅಪ್ಪಣ್ಣಾಚಾರೈರು ಸೂಚಿಸಿ ಪ್ರಹ್ಲಾದರೇ ರಾಯರೆಂದು ಉಪದೇಶಿಸಿದ್ದಾರೆ. 

೩೦) 'ಜ್ಞಾನಭಕ್ತಿ ಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ | ಪ್ರತಿವಾದಿಜಯಸ್ವಾಂತಭೇದಚಿನ್ನಾದರೋ ಗುರುಃ || ಇವು ಮೂರು ಅವತಾರಗಳಿಗೂ ಅನ್ವಯಿಸುವುದೂ, ಅನುಭವಿಸಿದ್ದ 'ಭೇದಚಿನ್ನಾದಯೋ ಗುರುಃ' ಜೀವೇಶ್ವರಭೇದ ಪ್ರತಿಪಾದಕರೂ, ಹರಿದಾಸತ್ವಸೂಚಕ ಊರ್ಧ್ವಪುಂಡ್ರ ದ್ವಾದಶನಾಮ ಶಂಖ ಚಕ್ರಾಂಕನ ಮಾಡಿಕೊಳ್ಳುವುದರಲ್ಲಿ ಆದರ ಉಳ್ಳವರೆಂಬುದು ಸ್ಪಷ್ಟವಾಗಿದೆ. 

೩೧) 'ಸರ್ವವಿದ್ಯಾಪ್ರವೀಣೋನ್ನೋ ರಾಘವೇಂದ್ರಾನ್ನ ವಿದ್ಯತೇ !' ಸಕಲ ವಿದ್ಯೆಗಳಲ್ಲಿಯೂ ಪಾರೀಣರಾದವರಲ್ಲಿ (ಹದಿನಾಲ್ಕು ವಿದ್ಯೆಗಳು, ಚತುಪಷ್ಠಿ ಕಲೆಗಳಲ್ಲಿ ಪ್ರವೀಣರು) ರಾಘವೇಂದ್ರರನ್ನು ಅಂದರೆ ಪ್ರಹ್ಲಾದ-ವ್ಯಾಸರಾಜ-ರಾಯರುಗಳನ್ನು ಬಿಟ್ಟರೆ ಬೇರೊಬ್ಬರಿಲ್ಲವೆಂದು ಭಾವ. 

೩೨) ಅಪರೋಕ್ಷಿಕೃತಶಃ ಸಮುಪೇಕ್ಷಿತ ಭಾವಜ 

ಅಪೇಕ್ಷಿತಪ್ರದಾತಾನ್ನೋ ರಾಘವೇಂದ್ರಾನ್ನವಿದ್ಯತೇ|| 

ಭಗವದಪರೋಕ್ಷವನ್ನು ಪಡೆದವರೂ, ಇಂದ್ರಿಯನಿಗ್ರಹವುಳ್ಳವರೂ (ಮನ್ಮಥನನ್ನು ಜಯಿಸಿದವರು) ಬೇಡಿದ ಮನೋರಥಗಳನ್ನು ನೀಡುವವರೂ ಅಂದರೆ ಮೋಕ್ಷಾದಿಪುರುಷಾರ್ಥಗಳನ್ನು ಹರಿವಾಯುಗಳಿಂದ ಕೊಡಿಸುವವರೂ ಪ್ರಲ್ಲಾದವ್ಯಾಸರಾಜ-ರಾಘವೇಂದ್ರರು, ಹೃದಯಕಮಲದಲ್ಲಿ ಶ್ರೀಹರಿಯನ್ನು ಪ್ರತಿಕ್ಷೀಕರಿಸಿಕೊಂಡವರು. ಅಂದರೆ ಬಿಂಬಮೂರ್ತಿ- ಯನ್ನು ಸಾಕ್ಷಾತ್ಕರಿಸಿಕೊಂಡವರು ಎಂಬುದು ಮೇಲಿನ ವಿವರಣೆಯಿಂದ ಸಿದ್ದವಾಗಿದೆ. ಇದು ಪ್ರಹ್ಲಾದರಾಜರಿಗೂ ಅನ್ವಯಿಸುವುದು. ಪ್ರಮಾಣಃ - ಅಪರೋಕ್ಷೀಕೃತಶಃ - 'ವ್ಯಕ್ತಸಯೋಗ್ಯ ದರ್ಶನ' - ಗರುಡಪುರಾಣ ಬ್ರಹ್ಮಕಾಂಡ. 'ಯಸ್ಯ ನಾರಯಣೋ ದೇವಃ ಭಗವಾನ್ ಹೃದ್ಧತಸ್ಸದಾ ।' - ಭಾಗವತ. 'ಕೃಷ್ಣಗ್ರಹಗೃಹೀತಾತ್ಮಾ' ಭಾಗವತ, 'ಗೋವಿಂದ ಪರಿರಂಭಿತಃ' - ಭಾಗವತ. ಇವೆಲ್ಲವೂ ಶ್ರೀಪ್ರಹ್ಲಾದರು ಅಪರೋಕ್ಷಿಕೃತಶ್ರೀಶರೆಂದು ಸಾರುವುದು. 'ಸಮುಪೇಕ್ಷಿತಭಾವಜಃ' ಪ್ರಮಾಣ - `ಜಿತೇಂದ್ರಿಯಃ - ಭಾಗವತ ಇಂದ್ರಿಯನಿಗ್ರಹವುಳ್ಳವರೆಂದು ಸಾರುವವು. 

೩೩) 'ದಯಾದಾಕ್ಷಿಣ್ಯ ವೈರಾಗ್ಯ ವಾಕ್ಸಾಟವ ಮುಖಾಂಕಿತಃ” ಇವು ರಾಯರ ಮೂರವತಾರಗಳಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದೆ. ಪ್ರಹ್ಲಾದರ ಬಗ್ಗೆ ಪ್ರಮಾಣ:- 'ಸರ್ವಭೂತದಯಃ' - ಭಾಗವತ. 

೩೪) 'ಶಾಪಾನುಗ್ರಹಶಕ್ಕೊನ್ನೊ ರಾಘವೇಂದ್ರಾನ್ನವಿದ್ಯತೇ' ಶಾಪಪ್ರದಾನ ಮತ್ತು ಅನುಗ್ರಹ ಮಾಡುವುದರಲ್ಲಿ ಶ್ರೀರಾಯರನ್ನು ಬಿಟ್ಟರೆ ಬೇರೊಬ್ಬರಿಲ್ಲವೆಂದು ಇದಕ್ಕೆ ಸಾಮಾನ್ಯವಾಗಿ ಅರ್ಥವಾಗುವುದು. ಇದಷ್ಟೇ ಅಪ್ಪಣಾಚಾರರ ಅಭಿಪ್ರಾಯವಾಗಿರದೆ ಇಲ್ಲಿ ವ್ಯಾಪಕವೂ ವೈಶಿಷ್ಟ್ಯಪೂರ್ಣವೂ ಆದ ಅರ್ಥವನ್ನು ಅವರು ಸೂಚಿಸಿದ್ದಾರೆ ಮತ್ತು ಭಾಗವತಾದಿಗಳಲ್ಲಿ ಕಂಡುಬರುವ ಪ್ರಹ್ಲಾದರಾಜರ ವ್ಯಾಸಯೋಗಿಚರಿತಾದಿಗಳಲ್ಲಿ ಹಾಗೂ ರಾಯರ ಚರಿತ್ರೆಯಲ್ಲಿ ಎದ್ದು ಕಾಣುವ ವ್ಯಾಸರಾಜ ರಾಘವೇಂದ್ರರ ಕಾರುಣ್ಯಾತಿಶಯವನ್ನು ಸೂಚಿಸಿದ್ದಾರೆ. ಅದನ್ನು ಹೀಗೆ ವಿವರಿಸಬಹುದು. 'ಶಾಪಾನುಗ್ರಹಶಕ್ಕೊನೋ ರಾಘವೇಂದ್ರಾನ್ನವಿದ್ಯತೇ || - ಶಾಪಯೋಗೋಪಿ ಅನುಗ್ರಹಶಕ್ತ ರಾಘವೇಂದ್ರಾತ್‌ -ಪ್ರಹ್ಲಾದಾತ್‌, ವ್ಯಾಸರಾಜಾತ್, ರಾಘವೇಂದ್ರಾತ್ ಅನ್ಯಃ ನ ವಿದ್ಯತೇ. ಅಂದರೆ ತಮಗೆ ಮತ್ತು ಶ್ರೀಹರಿವಾಯುಗಳಿಗೆ ಮಹಾಪರಾಧವನ್ನು ಮಾಡಿದವರನ್ನೂ, ಕರುಣೆಯಿಂದ ಕ್ಷಮಿಸಿ ಅನುಗ್ರಹಿಸುವ ಬೇರೊಬ್ಬ ದೊರೆಯು ಪ್ರಹ್ಲಾದರನ್ನು, ವ್ಯಾಸರಾಜರನ್ನು ರಾಯರನ್ನು ಬಿಟ್ಟರೆ ಬೇರೊಬ್ಬರಿಲ್ಲ! ಎಂದು ಘೋಷಿಸುವುದೇ ಅಪ್ಪಣಾಚಾರರ ಹೃದಯ. ಜಗತ್ತಿನಲ್ಲಿ ಶಾಪಕೊಡುವವರು, ವರವಿತ್ತು ಅನುಗ್ರಹಿಸುವ ಮಹಾತ್ಮರು ಅನೇಕರಿದ್ದಾರೆ! ಆದರೆ ಶಾಪಯೋಗ್ಯರನ್ನೂ ಕ್ಷಮಿಸಿ ಅನುಗ್ರಹಿಸುವ ಮಹಾತ್ಮರೆಂದರೆ ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರಗುರುಗಳೇ ಎಂದು ತಿಳಿಸುವುದೇ ಅಪ್ಪಣ್ಣಾಚಾರ್ಯರ ಪಾದ್ರ್ರ 

ಶ್ರೀಯೋಗೀಂದ್ರತೀರ್ಥರು ಶ್ರೀರಾಯರ ಮೇಲೆ ರಚಿಸಿರುವ ಚರಮಶ್ಲೋಕದಲ್ಲಿ ನಮೋ ತಂತದಯಾಲವೇ' ಎಂದು ರಾಯರನ್ನು ಸ್ತುತಿಸಿದ್ದಾರೆ. 'ಆಲುಚ್' ಪ್ರತ್ಯಯವೆ ದಯಾಲುತನದ ಪರಾಕಾಷ್ಠತೆಯನ್ನು ಸೂಚಿಸುವುದು! ಅಷ್ಟರಿಂದಲೇ ಶ್ರೀಯೋಗೀಂದ್ರರು ತೃಪ್ತರಾಗದೆ 'ಅತ್ಯಂತ ದಯಾಲವೇ' ಎಂದು ಹೊಗಳಿ 'ಅತ್ಯಂತ' ಎಂಬ ಒತ್ತುಕೊಟ್ಟು ಹೇಳಿದ್ದಾರೆ. ಇದರಿಂದ ಶ್ರೀರಾಯರಂತಹ ದಯಾಲುಗಳು ಬೇರೊಬ್ಬರಿಲ್ಲ ಎಂದು ಸಾರುವುದು ಅವರ ಅಭಿಪ್ರಾಯವಾಗಿದೆ. ಇದನ್ನು 

ಬಲ್ಲವರಾದ್ದರಿಂದಲೇ ಅಪ್ಪಣಾಚಾರರು ಶ್ರೀಯೋಗೀಂದ್ರರ ಮಾತನ್ನು ಎತ್ತಿಹಿಡಿಯಲು “ಶಾಪಾನುಗ್ರಹಶಕ್ಕೋಳನ್ನೋ ರಾಘವೇಂದ್ರಾನ್ನ ವಿದ್ಯತೇ ||” ಎಂದೂ ಕೊಂಡಾಡಿದ್ದಾರೆ! ಇಲ್ಲಿ ರಾಘವೇಂದ್ರ ಎಂದರೆ ಪ್ರಹ್ಲಾದ, ವ್ಯಾಸರಾಜ ಎಂದೂ ತಿಳಿಯಬೇಕು. ನಮ್ಮ ಈ ಮಾತನ್ನು ಸಮರ್ಥಿಸುವ ಪ್ರಹ್ಲಾದರ, ವ್ಯಾಸರಾಜರ, ರಾಯರ ಜೀವನದಲ್ಲಿ ಘಟಿಸಿದ ಮೂರು ಸಂದರ್ಭಗಳಲ್ಲಿ ನಿರೂಪಿಸಲು ಆಶಿಸುತ್ತೇವೆ. 

ಕ) ಹರಿಭಕ್ತಿಯನ್ನು ಬಿಡಲೊಪ್ಪಲಿಲ್ಲವೆಂದು ದೈತ್ಯೇಂದ್ರನ ಅಪ್ಪಣೆಯಂತೆ ಗುರುಗಳಾದ ಪುರೋಹಿತರು ಪ್ರಹ್ಲಾದನ ನಾಶಕ್ಕೆ ಅಭಿಚಾರಿಕ ಕೃತ್ತಿಯನ್ನು ಸೃಷ್ಟಿಸಿ ಪ್ರಹ್ಲಾದನಮೇಲೆ ಬಿಟ್ಟಾಗ ಅದು ಪ್ರಹ್ಲಾದನ ಕೂದಲನ್ನು ಕೊಂಕಿಸಲು ಅಸಮರ್ಥವಾಗಿ, ತನ್ನನ್ನು ಸೃಜಿಸಿದ ಪುರೋಹಿತರ ಮೇಲೆಯೇ ಎರಗಿ ಅವರನ್ನು ಅಗ್ನಿಜ್ವಾಲೆಯಿಂದ ನಾಶಪಡಿಸುತ್ತಿರುವಾಗ, ಕರುಣಾಳುಗಳಾದ ಪ್ರಹ್ಲಾದರು ಪುರೋಹಿತರ ಅಪರಾಧವನ್ನು ಕ್ಷಮಿಸಿ ಅವರನ್ನು ಕೃತಿಯ ಜ್ವಾಲೆಯಿಂದ ಕಾಪಾಡಿದರು. ಇದು 'ವಿಷ್ಣುಪುರಾಣದಲ್ಲಿ ವರ್ಣಿತವಾಗಿದೆ. ಇದರಂತೆ ಶ್ರೀಹರಿದ್ವೇಷಿಯಾಗಿ ಹರಿಯನ್ನು ನಿಂದಿಸುತ್ತಾ, ಹರಿಭಕ್ತನೆಂದು ತಮಗೆ ಅಪಾರ ಹಿಂಸೆನೀಡಿ, ಶ್ರೀಹರಿಯಲ್ಲಿ, ತಮ್ಮಲ್ಲಿ ಅಪರಾಧವೆಸಗಿ ಶಾಪಯೋಗ್ಯನಾಗಿದ್ದರೂ, ಪ್ರಹ್ಲಾದರು ತಮ್ಮ ತಂದೆಯೂ ಉದ್ಘತನಾಗಬೇಕೆಂಬ ಉದಾರಹೃದಯದಿಂದ ಭಗವಂತನಲ್ಲಿ ಯದನಿಂದತಾ ಮೇ ತ್ವಾಂ ಅವಿದ್ವಾಂಸ್ತೇಜ ಐಶ್ವರಂ | ತಸ್ಮಾತ್ ಪಿತಾ ಮೇ ಪೊಯೇತ ದುರಂತಾದುಸ್ತರಾದಘಾತ್ ||” (ಭಾಗವತ) ಸ್ವಾಮಿ, ನಿನ್ನ ತೇಜಸ್ಸು ಪರಮೆಶ್ವರಾದಿಗಳನ್ನು ಅಜ್ಜತನದಿಂದ ತಿಳಿಯಲಾಗದೆ ನಿನ್ನನ್ನು ನನ್ನ ತಂದೆಯು ನಿಂದಿಸಿ ಮಹಾಪಾಪ ಅಪರಾಧಮಾಡಿದ್ದಾನೆ. ಶಾಪಯೋಗ್ಯನಾಗಿದ್ದಾನೆ. ಆದರೂ ಪ್ರಭು! ಅವನು ಮಾಡಿದ ಮಹಾದುರಂತವೂ ದುಸ್ತರವೂ ಆದ ಪಾಪದಿಂದ ಉದ್ಧರಿಸಿ ಕಾಪಾಡಿ ಅನುಗ್ರಹಿಸು” ಎಂದು ಪ್ರಾರ್ಥಿಸಿ ಶಾಪಯೋಗ್ಯ ತಂದೆಯಲ್ಲಿ ಭಗವಂತನ ಅನುಗ್ರಹ ಮಾಡಿಸಿದ ಅತ್ಯಂತ ದಯಾಳುಗಳು ಶ್ರೀಪ್ರಲ್ಲಾದರು. ಈ ಕಥಾಭಾಗವೂ ಅವರ ದಯಾಳುತನಕ್ಕೆ ಉತ್ತಮ ಉದಾಹರಣೆಯಾಗಿದೆ! 

ಖ) ಶ್ರೀವ್ಯಾಸರಾಜರಲ್ಲೂ ಇದು ಕಂಡುಬಂದಿದೆ. ಶ್ರೀವ್ಯಾಸರಾಜರು ಕಂಚಿಯಲ್ಲಿ ಎಲ್ಲ ಪರವಾದಿಗಳನ್ನೂ ಜಯಿಸಿ ರೈತಸಿದ್ಧಾಂತದ ವಿಜಯದುಂದುಭಿಯನ್ನು ಮೊಳಗಿಸಿದಾಗ, ಅದರಿಂದ ದುಃಖಿತನಾದ ಬ್ರಾಹ್ಮಣಾಧಮನೊಬ್ಬನು ಅವರಿಗೆ ವಿಷಪ್ರಯೋಗ ಮಾಡಿಸಿದನು ! ವ್ಯಾಸರಾಜರು ಶ್ರೀಹರಿಯ ಅನುಗ್ರಹದಿಂದ ವಿಷಬಾಧೆಯಿಂದ ಪಾರಾದರು, ಮತ್ತು ತಮ್ಮ ನಾಶಕ್ಕೆ ಪ್ರಯತ್ನಿಸಿ ಶಾಪಯೋಗ್ಯನಾಗಿದ್ದ ಆ ಬ್ರಾಹ್ಮಣಾಧಮನಲ್ಲೂ ಅನುಗ್ರಹಮಾಡಿ ತಮ್ಮ ದಯಾಳುತನ ತೋರಿ “ಶಾಪಯೋಗೋsಪಿ” ಅನುಗ್ರಹಕರ್ತರು ತಾವು ಎಂಬುದನ್ನು ಪ್ರಕಟಗೊಳಿಸಿದರು. ಇದು "ಶ್ರೀವ್ಯಾಸಯೋಗಿಚರಿತೆ"ಯಿಂದ ಸ್ಪಷ್ಟವಾಗುವುದು! 

ಗ) ಶ್ರೀರಾಯರ ಚರಿತ್ರೆಯಿಂದಲೂ ಇದನ್ನು ನಾವು ತಿಳಿಯಬಹುದಾಗಿದೆ. ಸಾಸುವೆ ಪ್ರಕರಣದಿಂದ ಬಿದರಹಳ್ಳಿ ಶ್ರೀನಿವಾಸಾಚಾರರು, ಮುಂದೆ ಆದವಾನಿಯಲ್ಲಿ ನಿಷಿದ್ದ ಪದಾರ್ಥಗಳನ್ನು ದೇವರಿಗೆ-ಗುರುಗಳಿಗೆ ಅರ್ಪಿಸಿ ಸಿದೀಮಸೂದ್ ಖಾನನೂ, ಶ್ರೀಮೂಲರಾಮ-ವಾಯುದೇವರು ಹಾಗೂ ಶ್ರೀರಾಯರಿಗೆ ಮಹಾಪರಾಧ ಮಾಡಿ ಶಾಪಯೋಗ್ಯರೇ ಆಗಿದ್ದರೂ ಶ್ರೀರಾಯರು ಅವರನ್ನು ಕ್ಷಮಿಸಿ ದಯಾಳುಗಳೆಂಬುದನ್ನು ತೋರಿಸಿಕೊಟ್ಟಿದ್ದಾರೆ! 

೩೫) 'ಹಂತು ನಃ ಕಾಯಜಾನ್‌ ದೋಷಾನಾತ್ಮಾತ್ಮೀಯಸಮುದ್ಭವಾನ್! ಸರ್ವಾನಪಿ ಪುಮರ್ಥಾಂಶ್ಚ ದಧಾತು ಗುರುರಾತ್ಮವಿತ್ ||” ಅರ್ಥ ಸ್ಪಷ್ಟವಾಗಿದೆ. ಇಲ್ಲಿ ಹೇಳಿರುವ 'ಗುರುರಾತ್ಮವಿತ್' ಎಂಬ ವಿಶೇಷಣವು ಪ್ರಾದ-ವ್ಯಾಸರಾಜ-ರಾಘವೇಂದ್ರರಿಗೆ ಅನ್ವಯಿಸುವುದು. ಗುರುರಾತ್ಮಾವಿತ್-ಹೃದಯಕಮಲದಲ್ಲಿ ಪರಮಾತ್ಮನನ್ನು ಕಂಡ ಗುರುಗಳು. ಅಂದರೆ ಭಕ್ತರ ಅಜ್ಞಾನಾಂಧಕಾರ ನಿವಾರಕರಾದ ಗುರುಗಳು ಪ್ರಲ್ಲಾದ, (ಪ್ರಮಾಣ:- 'ವ್ಯಕ್ತಸಯೋಗ್ಯದರ್ಶನ ಗರುಡ ಪುರಾಣ, ಬ್ರಹ್ಮಕಾಂಡ) ವ್ಯಾಸರಾಜರು ಮತ್ತು ಗುರುರಾಜರೆಂದು ಸ್ಪಷ್ಟವಾಗುವುದು. 

೩೬) 'ಅಗಮಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಾ” ಈ ಜಗತ್ತಿನಲ್ಲಿ ತಿಳಿಯಲಸದಳವಲ್ಲದ ಮಹಿಮೆಯುಳ್ಳವರು, ಮತ್ತು ಮಹಾಯಶಾಃ - ತ್ರಿಲೋಕದಲ್ಲೂ ಗಾನಮಾಡಲ್ಪಡುವ ಕೀರ್ತಿಯುಳ್ಳವರು ಶ್ರೀರಾಘವೇಂದ್ರರು. ಅಂದರೆ ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರು ಎಂದು ತಾತ್ಪರ್ಯ. ಇಲ್ಲಿ ಪ್ರಹ್ಲಾದರಿಗೆ ಇದು ಅನ್ವಯಿಸುವುದೆನ್ನಲು ಪ್ರಮಾಣ-ಅಗಮ ಮಹಿಮಾ ಅಪ್ರಮೇಯಾನುಭಾವ” - ಭಾಗವತ. “ಗುರವಲ ಸಂಖ್ಯೆಯ್ಕೆ” – ಭಾಗವತ, “ಕೀರ್ತಿ೦ ವಿಶುದಾಂ ಸುರಲೋಕ ಗೀತಾಂ” - ಭಾಗವತ. 

೩೭) “ಶ್ರೀಮಧ್ವಮತದುಗಾಭಿಚಂದ್ರೋsವತು ಸದಾನಘಃ ||” ಇದು ಮೂರು ಅವತಾರಗಳಿಗೂ ಅನ್ವಯಿಸುವುದು. ಮಧ್ವಸ್ಯ ವಾಯೋಃ ಮತಂ ಮಧ್ವ ಮತು, ಅಂದರೆ ಮಧ್ಯಾವತಾರದ ಮೂಲರೂಪವಾದ ವಾಯುದೇವರ ಮತವೆಂಬ ಕ್ಷೀರಸಮುದ್ರವನ್ನು ಉಕ್ಕೇರಿಸುವ ಚಂದ್ರಮರಾದ ಪ್ರಾದರು-ವ್ಯಾಸರಾಜರು-ರಾಯರು. ಕಾಮಕ್ರೋಧಾದಿದೋಷರಹಿತರೂ, ಪಾಪದರೂರರು ಆದ ಮಹಾನುಭಾವರು. ಇವರು ನಮ್ಮನ್ನು ಕಾಪಾಡಲಿ ಎಂದು ಭಾವ. ಪ್ರಹ್ಲಾದರ ಬಗ್ಗೆ ಪ್ರಮಾಣ 'ಸಂಶ್ರದ್ಧೆಯಂ ವಾಯುಮತಂ ಸದೈವ', 'ಅನಘ', 'ಅಯಂ ನಿಷ್ಕಷಃ' - ಭಾಗವತ. 

೩೮) “ಯೋ ಭಾಗುರುರಾಘವೇಂದ್ರಚರಣದಂದಂ ಸ್ಮರನ್ ಯಃ ಪಠೇತ್ | 

ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ತಸ್ಯಾಸುಖಂ ಕಿಂಚನ ||

ಕಿಂತ್ತಿಷ್ಟಾರ್ಥ ಸಮೃದಿರೇವ ಕಮಲಾನಾಥ ಪ್ರಸಾದೋದಯಾತ್ | 

ಕೀರ್ತಿದಿ್ರಗ್ತಿದಿತಾ ವಿಭೂತಿರತುಲಾ ಸಾಕ್ಷೀ ಹಯಾಸ್ಕೋತ್ರಹಿ” 

ಅರ್ಥ:- ಯಃ - ಯಾವ ಭಕ್ತನು, ಭಕ್ತಾ-ಭಕ್ತಿಪೂರ್ವಕವಾಗಿ, ಗುರುರಾಘವೇಂದ್ರಚರಣದಂದು - ಅಜ್ಞಾನ ಪರಿಹಾರದ್ವಾರಾ ಜ್ಞಾನೋಪದೇಶ ಮಾಡಿ ಶಿಷ್ಯರ ಐಹಿಕಾಮುಷ್ಟಿಕ ಸಾಧನೆ ಮಾಡಿಸುವ ಉಪದೇಶಕ(ಗುರು)ರಾದ ಶ್ರೀರಾಘವೇಂದ್ರ (ಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರ ಸ್ವಾಮಿಗಳವರ ಪಾದದ್ವಯವನ್ನು ಸರಿಸುತ್ತಾ, ಯಾವ ಜ್ಞಾನಿಯಾದ ಶಿಷ್ಯನು-ಭಕ್ತನು ಸರ್ವದಾ ದಿವ್ಯವಾದ ಈ ಸ್ತೋತ್ರವನ್ನು ಅಂದರೆ ಪ್ರಹ್ಲಾದಚರಿತೆ. ವ್ಯಾಸರಾಜಚರಿತ, ರಾಘವೇಂದ್ರಚರಿತ ನಿರೂಪಣಪರವಾದ ಸ್ತೋತ್ರವನ್ನು ಪಠಿಸುವನೋ, ಅಂಥ ಶಿಷ್ಯನಿಗೆ, ಭಕ್ತನಿಗೆ ದುಃಖ-ತಮಸ್ಸುಗಳ-ಸಂಸಾರ ದುಃಖಾದಿಗಳು ಉಂಟಾಗುವುದಿಲ್ಲ. ಹೀಗೆ ಇವರ ಸ್ತುತಿಯನ್ನು ಪಠಿಸಿರುವುದರಿಂದ ಕಮಲಾನಾಥನಾದ ಶ್ರೀಹರಿಯ ಪ್ರಸಾದದಿಂದ ಸಕಲಮನೋರಥ (ಇಷ್ಟಾರ್ಥ ಸಂಪತ್ತು) ಸಿದ್ದಿ, ದಿಗಂತವ್ಯಾಪ್ತವಾದ ಕೀರ್ತಿ, ಐಶ್ವರ (ಪುರುಷಾರ್ಥ ಸಂಪತ್ತು ಮತ್ತು ಮೋಕ್ಷ (ಶಾಶ್ವತ ಸುಖ)ಗಳ ಸಮೃದಿಯೇ ಉಂಟಾಗುವುದು ಎಂದು ಅಪ್ಪಣಾಚಾರರು ಗುರುಸ್ತೋತ್ರದ ಫಲಶ್ರುತಿ (ಭರತವಾಕ್ಯ)ರೂಪವಾಗಿ ನಿರೂಪಿಸಿದ್ದಾರೆ. ಇದಕ್ಕೆ ಸಾಕ್ಷಾತ್ ಶ್ರೀಹಯಗ್ರೀವದೇವರೇ ಸಾಕ್ಷಿಯೆಂದು ಶ್ರೀಗುರುರಾಜರು ಅಪ್ಪಣೆಕೊಡಿಸಿ ಈ ಸ್ತೋತ್ರಕ್ಕೆ ತಮ್ಮ ಒಪ್ಪಿಗೆಯ ಮುದ್ರೆಯನ್ನೊತ್ತಿದ್ದಾರೆ! ಇದರಂತೆ ಶ್ರೀಪ್ರಹ್ಲಾದ-ವ್ಯಾಸರಾಜ-ರಾಘವೇಂದ್ರರ ಸ್ಮರಣೆ-ಸ್ತೋತ್ರಗಳು ಎಂತು ನಮ್ಮನ್ನು ದುಃಖಪರಿಹಾರದ್ವಾರಾ ಅಖಿಲಾರ್ಥಗಳನ್ನಿತ್ತು ಕಾಪಾಡುವುದೆಂಬುದು ಸುಸ್ಪಷ್ಟವಾಗುವುದು. 

ಶ್ರೀಗುರುಸ್ತೋತ್ರದಲ್ಲಿರುವ ವಿಶೇಷಣಗಳು (ಗುಣವಾಚಕಗಳು) ಭಾಗವತಾದಿಗಳಲ್ಲಿ ಪ್ರಹ್ಲಾದರ ವಿಚಾರವಾಗಿ ಹೇಳಿರುವ ಗುಣವಾಚಕಗಳನ್ನು (ವಿಶೇಷಣಗಳನ್ನು) ತುಲನಾತ್ಮಕವಾಗಿ ಈವರೆಗೆ ಮಾಡಿದ ವಿವೇಚನೆಯಿಂದ ಶ್ರೀರಾಘವೇಂದ್ರರ ಮೂಲರೂಪ ಶಂಕುಕರ್ಣ, ಅವನೇ ಪ್ರಹ್ಲಾದ-ಬಾಹ್ಲಿಕ-ವ್ಯಾಸರಾಜ-ರಾಘವೇಂದ್ರರಾಗಿ ಅವತರಿಸಿ ಲೋಕಕಲ್ಯಾಣಮಾಡಿದರೆಂಬುದು ಸರ್ವರಿಗೂ ಮನವರಿಕೆಯಾಗುವುದೆಂದು ನಾವು ನಂಬಿದ್ದೇವೆ. 

ಮೇಲಿನ ವಿಚಾರವನ್ನು ಅಪ್ಪಣಾಚಾರರು ಒಂದು ಪುಟ್ಟಶ್ಲೋಕದ ಒಂದು ಪಾದದಿಂದ ಸೂಚಿಸಿ ಗುರುಭಕ್ತರಲ್ಲಿ ಅನುಗ್ರಹಮಾಡಿದ್ದಾರೆ. ಅಪ್ಪಣಾಚಾರರು “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||” ಎಂಬ ಶ್ಲೋಕವನ್ನು ರಚಿಸಿದ್ದು, ಅದು ಇಂದು ಕೋಟ್ಯಂತರ ಶಿಷ್ಯ-ಭಕ್ತರ ಬಾಯಿಯಲ್ಲಿ ನಲಿದಾಡುತ್ತಿದೆ. ಈ ಪದ್ಯದಲ್ಲಿರುವ ಸತ್ಯ ಧರ್ಮ ರತಾಯ ಚ” ಎಂಬ ವಿಶೇಷಣದಿಂದ ಶ್ರೀರಾಯರ ಮೂಲರೂಪ ಶಂಕುಕರ್ಣ, ಅವನೇ ಪ್ರಹ್ಲಾದ-ಬಾಕ-ವ್ಯಾಸರಾಜ-ರಾಘವೇಂದ್ರರಾಗಿ ಅವತಾರಮಾಡಿ ಲೋಕಕಲ್ಯಾಣಮಾಡಿದನೆಂದು ಅವರು ಸೂಚಿಸಿದ್ದಾರೆ. 

ಆ) ಸತ್ಯಧರ್ಮರತಾಯ: 'ವಿಶ್ವಕೋಶ'ದಲ್ಲಿ ಸತಶಬ್ದಕ್ಕೆ ಸತ್ತಲೋಕ ಎಂದು ಅರ್ಥವಿದೆ. ಧರ್ಮ (ಧಾರಕಾದರ್ಮೊ ಹರಿಃ) ಶ್ರೀಹರತಃ ಧರ್ಮರತಃ, ಶಂಕುಕರ್ಣಃ, ತಸ್ಕೃ ಸತ್ಯಧರ್ಮರತಾಯ - ಎಂಬ ವುತ್ಪತ್ತಿ ಮಾಡಿದರೆ ಸತ್ಯಲೋಕ- ದಲ್ಲಿರುವವರೂ, ಶ್ರೀಹರಿಯಲ್ಲಿರತರಾದವರು ಎಂದರ್ಥವಾಗುತ್ತದೆ. ಇದು ಸತ್ಯಲೋಕವಾಸಿಗಳಾದ ಬ್ರಹ್ಮದೇವರ ಸೇವಕರಾದ ಕರ್ಮಜ ದೇವತೆ ಶಂಕುಕರ್ಣರೆಂದು ಸ್ಪಷ್ಟವಾಗುವುದು. ಸತ್ಯಧರ್ಮರತಾಯ ಎಂಬ ಈ ವಿಶೇಷಣವು ಶ್ರೀರಾಯರ ಮೂಲರೂಪ ಶ್ರೀಶಂಕುಕರ್ಣ ಎಂಬುದನ್ನು ಸೂಚಿಸುವುದು. 

ಅ) ಸತಶಬ್ದಕ್ಕೆ 'ಶತಪಥಬ್ರಾಹ್ಮಣ'ದಲ್ಲಿ 'ಕೃತಯುಗ ಎಂದು ಪ್ರಯೋಗವಿದೆ. ಸತೈ ಕೃತಯುಗೇ ಭವಃ ಸತ್ಯಃ, ಧಾರಕತ್ವಾತ್ ಧರ್ಮಶಬ್ದವಾಚ್ಯ ಶ್ರೀನರಸಿಂಹಃ, ಸತ್ಯಶ್ಚಾಸೌಧರ್ಮ ರತಶ್ಚ ಸತ್ಯಧರ್ಮರತಃ ಎಂಬ ವುತ್ಪತಿಯಿಂದ ಕೃತಯುಗದಲ್ಲಿದ್ದವರೂ, ಧರ್ಮರೂಪೀ ನೃಸಿಂಹೋಪಾಸಕರಾದವರು ಎಂಬುದರಿಂದ ಪ್ರಹ್ಲಾದರಾಜರೆಂದು ಅರ್ಥಸೂಚಿತ ವಾಗುತ್ತದೆ.

ಇ) ಸತ್ಯ ಎಂದರೆ ವೃಷ್ಟಿವಂಶ ಅರ್ಥಾತ್ ಯದುವಂಶ ಎಂದು ಕೋಶವಿದೆ. ಸತೈ ವೃಷ್ಟಿವಂಶೇ ಭವಃ ಸತ್ಯಃ ಧರ್ಮಸಂಸ್ಥಾಪಕತ್ವಾದರ್ಮಶಬ್ದವಾಚ್ಯಃ ಶ್ರೀಕೃಷ್ಣಃ, ಸತ್ಯಶ್ಚಾಸೌ ಧರ್ಮಶ್ಚ ಸತ್ಯಧರ್ಮಃ, ತಸ್ಮಿನ್ ರತಃ ಎಂಬ ವುತ್ಪತ್ತಿಮಾಡಿದಾಗ ಯದುವಂಶೋದ್ಭವನೂ, ಧರ್ಮಸಂಸ್ಥಾಪಕೂ ಆದ ಶ್ರೀಕೃಷ್ಣನಲ್ಲಿರತರಾದವರೆಂದು ಅರ್ಥಬರುವುದರಿಂದ ಸತ್ಯಧರ್ಮರತರೆಂದರೆ ಶ್ರೀಬಾಕರಾಜರೆಂದು ಸೂಚಿತವಾಗುವುದು. 

ಈ) ಸತ್ರ ಎಂದರೆ ಮೀಮಾಂಸಾಶಾಸ್ತ್ರವೆಂದು ಅರ್ಥ, ಸತೈ ಪೂರ್ವೋತ್ತರ ಮೀಮಾಂಸಾಶಾಸ್ತ್ರ. ಧರ್ಮ ಶ್ರೀಕೃಷ್ಣ ಚ ರತಃ ಎಂದು ವುತ್ಪತ್ತಿ ಮಾಡಿದಾಗ ಪೂರ್ವೋತ್ತರ ಮೀಮಾಂಸಾಶಾಸ್ತ್ರದಲ್ಲಿ ರತರಾದವರೂ (ಪಾರಂಗತರು) ಮೂಲಗೋಪಾಲಕೃಷ್ಣಾರಾಧಕರೂ ಆದ ಶ್ರೀವ್ಯಾಸರಾಜಗುರುಸಾರ್ವಭೌಮರು ಎಂದು ಸತ್ಯಧರ್ಮರತ; ಎಂಬುದರಿಂದ ಸೂಚಿತವಾಗುವುದು. 

ಉ) ಸತ್ಯಶಬ್ದಕ್ಕೆ ಕೋಶ (ನಾನಾರ್ಥಕೋಶ)ದಲ್ಲಿ ಶ್ರೀರಾಮ ಎಂದರ್ಥ ಮಾಡಿದ್ದಾರೆ. ಸತ್ಯ ಶ್ರೀಮೂಲರಾಮೇ, ಧರ್ಮೇ ಚ ಭಾಗವತಧರ್ಮ ಅಥವಾ ಧರ್ಮನಾಮಕ ಪರಮಾತ್ಮನಿ ಚ ರತಃ ಎಂಬ ಎಂಬ ವ್ಯುತ್ಪತ್ತಿಯಿಂದ ಶ್ರೀಭಾಗವತ ಧರ್ಮಪಾರಾಯಣರೂ ಶ್ರೀಮೂಲರಾಮಚಂದ್ರದೇವರನ್ನು ಪೂಜಿಸುವವರು ಎಂದರ್ಥವಾಗುವುದರಿಂದ ಸತ್ಯಧರ್ಮರತರೆಂದರೆ ಮೂಲರೂಪದ ಶಂಕುಕರ್ಣರ ಕೊನೆಯ ಅವತಾರರಾದ ರಾಘವೇಂದ್ರಸ್ವಾಮಿಗಳವರು ಎಂದು ಸೂಚಿತವಾಗುವುದು. 

ಊ) ಮೇಲಿನ ಅರ್ಥಕ್ಕೆ ಯುಧಸಮಾತ್ಮನೀನಮನಘ ಯಚ್ಚಾಂತಿ ಮೇಚಾಂತಿಯೇ ” - ಎಂಬ ವಾಮನ ಪುರಾಣವೂ ಪ್ರಮಾಣವಾಗಿದೆ. “ಪಾಪರಹಿತನಾದ ಪ್ರಲಾದ, ನನ್ನ ಸಂಬಂಧಿಯಾದ, ಬ್ರಹ್ಮಕರಾರ್ಚಿತವಾದ ಶ್ರೀಮೂಲರಾಮ ಪ್ರತಿಮೆಯನ್ನು ಕೊನೆಯ ಯುಗವಾದ ಕಲಿಯುಗದಲ್ಲಿ, ಕೊನೆಯ ಆಶ್ರಮವಾದ ಪರಮಹಂಸಾಶ್ರಮದಲ್ಲಿ ನಿನ್ನ ಕೊನೆಯ ಅವತಾರದಲ್ಲಿ ಪೂಜಿಸಿ ನನ್ನ ಸನ್ನಿಧಿಗೆ ಬರುವೆ” ಎಂದು ವಾಮನದೇವರು ಪ್ರಹ್ಲಾದರಿಗೆ ಹೇಳಿರುವುದರಿಂದ ಪ್ರಹ್ಲಾದರ ಕೊನೆಯ ಅವತಾರವಾದ ರಾಘವೇಂದ್ರವತಾರದಲ್ಲಿ ಅವರು ಶ್ರೀಮೂಲರಾಮಾರ್ಚಕರೆಂದು ಈ ಪ್ರಮಾಣ ತಿಳಿಸುವುದರಿಂದ ಇದೂ ಮೇಲಿನ ವಿಚಾರಕ್ಕೆ ಪ್ರಮಾಣವಾಗಿದೆ. 

ಈವರೆಗೆ ನಾವು ನಿರೂಪಿಸಿದ ರಾಯರ ಮೂಲರೂಪ ಮತ್ತು ಅವತಾರಗಳನ್ನು ಸತ್ಯಧರ್ಮರತರೆಂಬ ವಿಶೇಷಣವು ಸೂಚಿಸುವುದೆನ್ನಲು ಶ್ರೀನೃಸಿಂಹಪುರಾಣದ ಮುಂದಿನ ವಚನವು ಅತ್ಯಂತ ಪ್ರಬಲಪ್ರಮಾಣವಾಗಿದೆ.  

“ಶಂಕುಕರ್ಣಾದೇವಸ್ತು | ಬ್ರಹ್ಮಶಾಪಾಚ್ಯಭೂತಲೇ || 

ಪ್ರಹ್ಲಾದ ಇತಿ ವಿಖ್ಯಾತೋ | ಭೂ ಭಾರಕ್ಷಪಣೇ ರತಃ || 

ಸ ಏವ ರಾಘವೇಂದ್ರಾ | ಯತಿರೂಪೇಣ ಸರ್ವದಾ || 

ಕಲೌಯುಗೆ ರಾಮಸೇವಾಂ | ಕುರ್ವನ್ಮಂತ್ರಾಲಯೇಭವತ್ |' - ಶ್ರೀನೃಸಿಂಹಪುರಾಣ 

ಅರ್ಥ :- ಶಂಕುಕರ್ಣರೆಂಬ ಕರ್ಮಜದೇವತೆಗಳು ಶ್ರೀಹರಿಯ ಸಂಕಲ್ಪದಂತೆ ಬ್ರಹ್ಮದೇವರ ಶಾಪರೂಪವರದಿಂದ ಭೂಮಿಯಲ್ಲಿ ಜನಿಸಿ ಪ್ರಹ್ಲಾದರೆಂದು ಖ್ಯಾತರಾದರು. ಅವರು ಭೂಭಾರಹರಣರತನಾದ ನರಸಿಂಹದೇವರಲ್ಲಿರತರಾದರು. ಅವರೇ ದ್ವಾಪರದಲ್ಲಿ ಭೂಭಾರಹರಣಕ್ಕಾಗಿ ಅವತರಿಸಿದ ಶ್ರೀಕೃಷ್ಣನ ಸೇವೆಮಾಡಿ ಬಾಕರಾಜರೆಂದು ಖ್ಯಾತರಾದರು. ಮುಂದೆ ಕಲಿಯುಗದಲ್ಲಿ ಮತ್ತೆ ಶ್ರೀಮೂಲರಾಮದೇವರ ಪೂಜೆಗಾಗಿ ಶ್ರೀರಾಘವೇಂದ್ರ ಯತಿಗಳೆಂಬ ಅಭಿದಾನದಿಂದ ಅವತರಿಸಿ ಮಂತ್ರಾಲಯದಲ್ಲಿ ಶ್ರೀಮೂಲರಾಮ ಸೇವಾಸಕ್ತರಾಗಿ ವಿರಾಜಿಸಿದರು! ಇದರಿಂದ ಶ್ರೀಪ್ರಹ್ಲಾದ-ಬಾಹ್ಲಿಕ-ವ್ಯಾಸರಾಜ-ರಾಘವೇಂದ್ರರು ಒಂದೇ ಮೂಲರೂಪದ, ಶಂಕುಕರ್ಣದೇವತೆಯ ಅವತಾರರೆಂಬುದು ಸಿದ್ಧವಾಯಿತು.

ಮೇಲಿನ ನಮ್ಮ ವಿವೇಚನೆಗೆ ಅಪರೋಕ್ಷಜ್ಞಾನಿಗಳ ಹೇರಳ ವಚನಗಳು ಪ್ರಮಾಣಗಳಾಗಿವೆ.